ಮದುವೆ ಬಳಿಕ ರಶ್ಮಿಕಾಗೆ ಕನ್ನಡ ಹಾಡಿನ ಮೇಲೆ ಪ್ರೀತಿ – Kannada News | Rashmika Mandanna used Elamma Tulasi song for her wedding reception video

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26ರಂದು ಬಲು ಅದ್ಧೂರಿಯಾಗಿ ರಾಜಸ್ಥಾನದಲ್ಲಿ ನೆರವೇರಿದೆ. ಅವರ ಮದುವೆಯ ಚಿತ್ರಗಳೂ ಈಗಲೂ ವೈರಲ್ ಪಟ್ಟಿಯಲ್ಲಿ ಟಾಪ್​​ನಲ್ಲಿವೆ. ಮದುವೆಗೆ ರಶ್ಮಿಕಾ ಮತ್ತು ವಿಜಯ್ ಅವರು ಧರಿಸಿದ್ದ ಉಡುಪು, ಆಭರಣಗಳು ಸಖತ್ ಟ್ರೆಂಡ್ ಆಗುತ್ತಿವೆ. ಅದಾದ ಬಳಿಕ ಮಾರ್ಚ್ 04ರಂದು ಈ ಇಬ್ಬರೂ ಅದ್ಧೂರಿಯಾಗಿ ಆರತಕ್ಷತೆ ಸಹ ಮಾಡಿಕೊಂಡರು. ಆದರೆ ಈ ವೇಳೆ ರಶ್ಮಿಕಾರ ಉಡುಪಿನ ಆಯ್ಕೆ ಸಖತ್ ಗಮನ ಸೆಳೆಯಿತು.

ರಶ್ಮಿಕಾ, ತೆಲಂಗಾಣಕ್ಕೆ ಸೊಸೆಯಾಗಿ ಹೋಗಿದ್ದು, ಆದರೆ ಮದುವೆ ಸಂದರ್ಭದಲ್ಲಿ ತಮ್ಮ ಕನ್ನಡತನವನ್ನು ಬಿಟ್ಟುಕೊಡಲಿಲ್ಲ. ಆರತಕ್ಷತೆಗೆ ರಶ್ಮಿಕಾ, ಮೈಸೂರು ರೇಷ್ಮೆ ಧರಿಸಿದ್ದರು, ಮಾತ್ರವಲ್ಲದೆ ಕರ್ನಾಟಕದ ಲಾಂಛನವಾದ ಗಂಡಭೇರುಂಡ ಎಂಬ್ರಾಯ್ಡಿರಿ ಆ ಸೀರೆಯ ಮೇಲಿತ್ತು. ಮಾತ್ರವಲ್ಲದೆ ರಶ್ಮಿಕಾ ಧರಿಸಿದ್ದ ರವಿಕೆಯ ಹಿಂಬಧಿಯಲ್ಲಿ ಕೊಡವರ ಕತ್ತಿ, ಬಂದೂಕಿನ ಲಾಂಛನವೂ ಇತ್ತು. ಇದೀಗ ಆರತಕ್ಷತೆಯ ಬಳಿಕ ವಿಡಿಯೋ ಒಂದಕ್ಕೆ ರಶ್ಮಿಕಾ ಹಂಚಿಕೊಂಡಿದ್ದು, ವಿಡಿಯೋದ ಹಿನ್ನೆಲೆಯಲ್ಲಿ ಕನ್ನಡದ ಹಾಡನ್ನೇ ಬಳಕೆ ಮಾಡಿದ್ದಾರೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ಮದುವೆ ಆರತಕ್ಷತೆಯ ಕ್ಯೂಟ್ ವಿಡಿಯೋ ಅನ್ನು ರಶ್ಮಿಕಾ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಿಡಿಯೋದ ಹಿನ್ನೆಲೆ ಹಾಡಾಗಿ ಕನ್ನಡದ ‘ಏಳಮ್ಮ ತುಳಸಿ’ ಹಾಡನ್ನು ಬಳಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಈ ಹಾಡು ಸಖತ್ ವೈರಲ್ ಆಗಿದೆ. ಯುವ ಸಂಗೀತ ನಿರ್ದೇಶಕ ಸುಮೇಧ್ ಸಂಗೀತ ನಿರ್ದೇಶಿಸಿರುವ ‘ಏಳಮ್ಮ ತುಳಸಿ’ ಹಾಡು ಯೂಟ್ಯೂಬ್​​ನಲ್ಲಿ ಸಖತ್ ಟ್ರೆಂಡ್ ಆಗುತ್ತಿದ್ದು, ಅದೇ ಹಾಡನ್ನು ಇದೀಗ ರಶ್ಮಿಕಾ ತಮ್ಮ ಮದುವೆ ಆರತಕ್ಷತೆಯ ವಿಡಿಯೋಕ್ಕೆ ಹಿನ್ನೆಲೆಯಾಗಿ ಬಳಸಿಕೊಂಡಿದ್ದಾರೆ. ರಶ್ಮಿಕಾರನ್ನು ಕಳೆದ ಕೆಲ ವರ್ಷಗಳಿಂದ ಕನ್ನಡ ವಿರೋಧಿ ಎಂಬಂತೆ ಚಿತ್ರಿಸಲಾಗಿತ್ತು, ಆದರೆ ಮದುವೆಯಂಥಹಾ ಮಹತ್ವದ ಸನ್ನಿವೇಶದಲ್ಲಿ ರಶ್ಮಿಕಾ ತಮ್ಮ ಕನ್ನಡತನವನ್ನು ಪ್ರದರ್ಶಿಸಿದ್ದಾರೆ. ಮಾತ್ರವಲ್ಲದೆ ತಮ್ಮ ಸಮುದಾಯದ ಪ್ರತಿನಿಧಿತ್ವವನ್ನು ಸಹ ಪ್ರದರ್ಶಿಸಿದ್ದಾರೆ.

ರಶ್ಮಿಕಾ ಬಳಸಿರುವ ‘ಏಳಮ್ಮ ತುಳಸಿ’ ಹಾಡು ಪುರಂದರ ದಾಸರ ರಚನೆಯಾಗಿದೆ. ಹಾಡಿಗೆ ಅದ್ಭುತವಾಗಿ ರಾಗ ಸಂಯೋಜನೆ ಮಾಡಿದ್ದಾರೆ ಸಂಗೀತ ನಿರ್ದೇಶಕ ಕೆ ಸುಮೇಧ್. ಅದ್ಭುತ ಹಾಡಿಗೆ ಅಷ್ಟೇ ಅದ್ಭುತವಾದ ದೃಶ್ಯಗಳನ್ನು ಸಹ ಸಂಯೋಜಿಸಲಾಗಿದೆ. ಒಂದು ತಿಂಗಳಲ್ಲಿ ಈ ಹಾಡು 70 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಸಿನಿಮಾದ ಹಾಡು ರಾಜ್ಯದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲಿಯೂ ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುಕ್ಕೆ ಹಾಗೂ ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಗುಡ್​​​ ನ್ಯೂಸ್ ನೀಡಿದ ಸಿದ್ದರಾಮಯ್ಯ – Kannada News | Karnataka Budget Boost: Kukke and Kollur Temples Get Development Authorities

ಬೆಂಗಳೂರು: ಇಂದು (ಮಾ.6) 17ನೇ ಬಜೆಟ್​​​ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರಾವಳಿಗೆ ಹೆಚ್ಚು ಮಹತ್ವದ ನೀಡಿದ್ದಾರೆ. ಬಜೆಟ್​​​ ಆರಂಭದಲ್ಲಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯದ ಅತಿ ಹೆಚ್ಚು ಆದಾಯ ತರುವ ಹಾಗೂ ಲಕ್ಷಾಂತರ ಭಕ್ತರು ಭೇಟಿ ನೀಡುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳ ಮೂಲಸೌಕರ್ಯ ವೃದ್ಧಿಗೆ ಸರ್ಕಾರ ಮುಂದಾಗಿದೆ. ಬಜೆಟ್‌ನಲ್ಲಿ ಘೋಷಿಸಲಾದ ಈ ಪ್ರಾಧಿಕಾರಗಳು ದೇವಾಲಯಗಳ ಆಡಳಿತ ಮತ್ತು ಭಕ್ತರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಿವೆ.

ಪ್ರಾಧಿಕಾರ ರಚನೆಯ ಪ್ರಮುಖ ಉದ್ದೇಶಗಳು:

ಸಮಗ್ರ ಅಭಿವೃದ್ಧಿ: ದೇವಾಲಯದ ಸುತ್ತಮುತ್ತಲಿನ ರಸ್ತೆಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು.

ಭಕ್ತರ ಸೌಲಭ್ಯ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳು, ಸರತಿ ಸಾಲಿನ ವ್ಯವಸ್ಥೆ ಮತ್ತು ದಾಸೋಹ ಭವನಗಳ ಆಧುನೀಕರಣ.

ಪರಿಸರ ಸಂರಕ್ಷಣೆ: ಕುಕ್ಕೆ ಸುಬ್ರಹ್ಮಣ್ಯವು ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿದೆ. ಪ್ರಾಧಿಕಾರ ರಚನೆಯಿಂದ ಇಲ್ಲಿನ ಪರಿಸರ ಸಮತೋಲನ ಕಾಪಾಡುತ್ತಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.

ಆಡಳಿತಾತ್ಮಕ ಪಾರದರ್ಶಕತೆ: ದೇವಾಲಯದ ಆದಾಯವನ್ನು ಸಮರ್ಪಕವಾಗಿ ಆಯಾ ಕ್ಷೇತ್ರಗಳ ಅಭಿವೃದ್ಧಿಗೇ ಬಳಸಲು ಈ ಸ್ವಾಯತ್ತ ಪ್ರಾಧಿಕಾರಗಳು ನೆರವಾಗಲಿವೆ.

ಇದನ್ನೂ ಓದಿ: Karnataka Budget 2026 LIVE: 18 ವರ್ಷದವರೆಗಿನ ಮಧುಮೇಹ ರೋಗಿಗಳಿಗೆ ಉಚಿತ ಇನ್ಸುಲಿನ್ ಪೆನ್: ಸಿದ್ದರಾಮಯ್ಯ

ಈ ಘೋಷಣೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಧಾರ್ಮಿಕ ಪ್ರವಾಸೋದ್ಯಮಕ್ಕೆ ದೊಡ್ಡ ಬಲ ನೀಡಲಿದೆ. ಹಂಪಿ ಅಥವಾ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರಗಳ ಮಾದರಿಯಲ್ಲಿಯೇ ಇವು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಬಜೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೃಹಲಕ್ಷ್ಮಿ ಯೋಜನೆಗೆ ಭರ್ಜರಿ ಅನುದಾನ: ಗೃಹಿಣಿಯರಿಗೆ ಬಜೆಟ್​ನಲ್ಲಿ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ – Kannada News | Karnataka Budget 2026: CM Siddaramaiah Allocates Rs 28608 Crore for Gruha Lakshmi Scheme, Big Relief for Women

ಬಜೆಟ್​ನಲ್ಲಿ ಗೃಹಿಣಿಯರಿಗೆ ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ (Siddaramaiah) 2026-27ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ದಾಖಲೆಯ 17ನೇ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ರಾಜ್ಯದ ಅಭಿವೃದ್ಧಿ ಹಾಗೂ ಜನಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಬಜೆಟ್‌ನಲ್ಲಿ ವಿಶೇಷವಾಗಿ ಕಾಂಗ್ರೆಸ್ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದರು. ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೂ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಬೆಂಗಳೂರಿನಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರ

ಆರೋಗ್ಯ ಕ್ಷೇತ್ರದಲ್ಲೂ ಹಲವು ಘೋಷಣೆಗಳನ್ನು ಮಾಡಲಾಗಿದೆ. ಬೆಂಗಳೂರಿನಲ್ಲಿ ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್ ಲಸಿಕಾ ಕೇಂದ್ರವನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಇದೇ ವೇಳೆ ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್, ಕೊಪ್ಪಳ, ಚಿತ್ರದುರ್ಗ, ಮಂಡ್ಯ, ಭದ್ರಾವತಿ ಮತ್ತು ಕೆಜಿಎಫ್ ಪ್ರದೇಶಗಳಲ್ಲಿನ ESI ಆಸ್ಪತ್ರೆಗಳನ್ನು ಉನ್ನತೀಕರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನೂ ವಿಜಯಪುರದಲ್ಲಿ 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಶೀತಲ ಗೃಹ ನಿರ್ಮಾಣ ಘಟಕ ಸ್ಥಾಪಿಸುವ ಯೋಜನೆಯನ್ನೂ ಘೋಷಿಸಲಾಗಿದೆ.

ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಸಿಎಂ, ಕರ್ನಾಟಕ ಆರ್ಥಿಕ ಅಭಿವೃದ್ಧಿಯಲ್ಲಿ ದೇಶದ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಹೇಳಿದರು. ಜೊತೆಗೆ ಒಕ್ಕೂಟ ಸರ್ಕಾರವು ರಾಜ್ಯಗಳತ್ತ ಇನ್ನಷ್ಟು ಸಂವೇದನಾಶೀಲವಾಗಿ ವರ್ತಿಸಬೇಕು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: 10.15ಕ್ಕೇ ಸಿದ್ದರಾಮಯ್ಯ ಬಜೆಟ್ ಮಂಡನೆ ಏಕೆ? ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೊಟ್ಟರು ಅಚ್ಚರಿಯ ಕಾರಣ! ನಿಜವಿರಬಹುದೇ?

ಒಟ್ಟಾರೆ, 2026-27ರ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳು, ಆರೋಗ್ಯ, ಮೂಲಸೌಕರ್ಯ ಹಾಗೂ ಕೃಷಿ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿರುವುದು ಗಮನಾರ್ಹವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೈಲೆಂಟ್ ಮಾಡಲು ಬಂದು, ಸೈಲೆಂಟ್ ಆಗಿ ‘ಸೋಲಿಸಿದ’ ಸ್ಯಾಮ್ ಕರನ್..! – Kannada News | Sam Curran came to silence the crowd, but left in silence

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಇಂಗ್ಲೆಂಡ್ ಆಲ್​ರೌಂಡರ್, ಸ್ಯಾಮ್ ಕರನ್ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡುತ್ತೇವೆ ಎಂದು ಸವಾಲು ಹಾಕಿದ್ದರು. ಈ ಸವಾಲಿನ ಮುಕ್ತಾಯದಲ್ಲಿ ಸೈಲೆಂಟ್ ಆಗಿದ್ದ ಸ್ಯಾಮ್ ಕರನ್. ಅದು ಸಹ ಸೈಲೆಂಟ್ ಆಗಿ ತನ್ನದೇ ತಂಡವನ್ನು ಸೋಲಿಸುವ ಮೂಲಕ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಬರೋಬ್ಬರಿ 253 ರನ್​ ಕಲೆಹಾಕಿದ್ದರು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು ಟಾಮ್ ಬ್ಯಾಂಟನ್, ವಿಲ್ ಜ್ಯಾಕ್ಸ್​ ಕೂಡ ಅಲ್ಪ ಮೊತ್ತದ ಕಾಣಿಕೆ ನೀಡಿದ್ದರು.

ಈ ಮೂಲಕ ಇಂಗ್ಲೆಂಡ್ ತಂಡವು 14 ಓವರ್​ಗಳ ಮುಕ್ತಾಯದ ವೇಳೆ ಬರೋಬ್ಬರಿ 172 ರನ್ ಕಲೆಹಾಕಿದ್ದರು. ಆದರೆ ಈ ರನ್ ಗತಿ ಕುಂಠಿತವಾಗಿದ್ದೇ ಸ್ಯಾಮ್ ಕರನ್ ಎಂಟ್ರಿಯೊಂದಿಗೆ. ನಿರ್ಣಾಯಕವಾಗಿದ್ದ ಕೊನೆಯ 6 ಓವರ್​ಗಳ ವೇಳೆ ಬ್ಯಾಟಿಂಗ್​ಗೆ ಆಗಮಿಸಿದ ಸ್ಯಾಮ್ ಕರನ್ 14 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 18 ರನ್​ಗಳು ಮಾತ್ರ.

ಅಂದರೆ ನಿರ್ಣಾಯಕ ಹಂತದಲ್ಲಿ ಸ್ಯಾಮ್ ಕರನ್ ಕೇವಲ 128ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದರು. ಅಂದರೆ ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿಯ ಓವರ್​ಗಳಲ್ಲಿ ಹೆಚ್ಚಿನ ಬಾಲ್ ಎದುರಿಸಿದ್ದ ಕರನ್ ಸಿಂಗಲ್ ಹಾಗೂ ಡಬಲ್​ ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ನಿಧಾನಗತಿಯ ಬ್ಯಾಟಿಂಗ್ ಇಂಗ್ಲೆಂಡ್​ನ ಚೇಸಿಂಗ್ ಮೇಲೆ ಪರಿಣಾಮ ಬೀರಿತು ಎಂದರೆ ತಪ್ಪಾಗಲಾರದು.

ಇದಕ್ಕೂ ಮುನ್ನ ಬೌಲಿಂಗ್​ನಲ್ಲಿ 4 ಓವರ್​ಗಳಲ್ಲಿ ಬರೋಬ್ಬರಿ 53 ರನ್ ಚಚ್ಚಿಸಿಕೊಂಡಿದ್ದರು. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಅಂದರೆ ಬೌಲಿಂಗ್​ನಲ್ಲಿ 13.20ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟ ಸ್ಯಾಮ್ ಕರನ್ ಬ್ಯಾಟಿಂಗ್​ನಲ್ಲಿ ಕಲೆಹಾಕಿದ್ದು ಕೇವಲ 18 ರನ್​ಗಳು ಮಾತ್ರ.

ಇದನ್ನೂ ಓದಿ: ಯಾರಿಂದಲೂ ಸಹ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಜೇಕಬ್ ಬೆಥೆಲ್

ಸ್ಯಾಮ್ ಕರನ್​ನ ಈ ಕಳಪೆ ಪ್ರದರ್ಶನವು ಇಂಗ್ಲೆಂಡ್ ತಂಡದ ಸೋಲಿಗೆ ಕಾರಣವಾಗಿದ್ದು ಮಾತ್ರ ವಿಪರ್ಯಾಸ. ಅಂದರೆ ಭಾರತೀಯ ಪ್ರೇಕ್ಷಕರನ್ನು ಸೈಲೆಂಟ್ ಮಾಡಲು ಬಂದು, ಸ್ಯಾಮ್ ಕರನ್ ಸೈಲೆಂಟ್ ಆಗಿಯೇ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿದ್ದರು ಎಂಬುದಕ್ಕೆ ಈ ಪ್ರದರ್ಶನದ ಅಂಕಿ ಅಂಶಗಳೇ ಸಾಕ್ಷಿ.

Source link

ಮಾರ್ಚ್​​9ರಿಂದ ಕಲರ್ಸ್ ಕನ್ನಡದಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ರಾಣಿ’ – Kannada News | Colors Kannada Unveils ‘Rani’: A Heartfelt Tale of Mother Daughter Love and Jail

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣುತ್ತಾ ಇವೆ. ಎಲ್ಲ ಧಾರಾವಾಹಿಗಳು ಭಿನ್ನ ಕಥೆಗಳನ್ನು ಹೊಂದಿರುತ್ತವೆ. ಈಗ ಕಲರ್ಸ್‌ ಕನ್ನಡ ವಾಹಿನಿ ‘ರಾಣಿ’ ಹೆಸರಿನ ಧಾರಾವಾಹಿ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದೆ. ಅಮ್ಮ-ಮಗಳ ನಿಷ್ಕಲ್ಮಶ ಪ್ರೀತಿಯನ್ನು ಹೇಳಲಾಗುತ್ತಿದೆ. ಮಾರ್ಚ್ 9ರಿಂದ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ.

ʻರಾಣಿʼ ಕಥೆ ಜೈಲಿನಿಂದ ಆರಂಭ ಆಗುತ್ತದೆ. ಅಮ್ಮ ಹಾಗೂ ಮಗಳ ಜೈಲಿನಲ್ಲಿರುತ್ತಾರೆ. ನಿಯಮದ ಪ್ರಕಾರ ಮಗಳು ಹೊರ ಹೋಗುತ್ತಾಳೆ. ಇಷ್ಟು ದಿನ ಹೊರಗಿನ ಜಗತ್ತನ್ನೇ ಕಾಣದ ಮುಗ್ಧ ಮಗು ರಾಣಿ ಹೊರಗೆ ಏನೆಲ್ಲ ಸಮಸ್ಯೆ ಎದುರಿಸುತ್ತಾಳೆ ಎಂಬುದನ್ನು ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ. ಇನ್ನು ಮಗಳು ಇದ್ದೂ ಇಲ್ಲದಂತೆ ತಾಯಿ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತದೆ. , ಕಾನೂನು ಮತ್ತು ವಿಧಿ ಇಬ್ಬರನ್ನೂ ಬೇರ್ಪಡಿಸುತ್ತದೆ.

‘ರಾಣಿ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಕನ್ನಡದಲ್ಲಿ ಕೃಷ್ಣ ಸುಂದರಿ, ‘ಮುದ್ದು ಮಣಿಗಳು’ ಧಾರಾವಾಹಿಯಲ್ಲಿ ನಟಿಸಿರೋ ಅನುಭವ ಇರುವ ಐಶ್ವರ್ಯಾ ಅವರ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧನ್ವಿ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ತಾಂತ್ರಿಕವಾಗಿ ಮತ್ತು ಕಲಾತ್ಮಕವಾಗಿ ‘ರಾಣಿ’ ಬಹಳ ಶ್ರೀಮಂತವಾಗಿದೆ. ಸ್ವಪ್ನ ಕೃಷ್ಣ ಅವರು ಈ ಧಾರಾವಾಹಿಯನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ರಾಣಿಯಾಗಿ ಬಾಲ ನಟಿ ಧನ್ವಿ ತನ್ನ ಮುಗ್ಧ ಅಭಿನಯದ ಮೂಲಕ ಈಗಾಗಲೇ ಪ್ರೋಮೋಗಳ ಮೂಲಕ ಮನೆಮಾತಾಗಿದ್ದಾಳೆ. ನಾಯಕನಾಗಿ ಆರವ್ ಸೂರ್ಯ ಇದ್ದಾರೆ.

ಇದನ್ನೂ ಓದಿ: ‘ಯಜಮಾನ’ ಧಾರಾವಾಹಿಗೆ ಯಮುನಾ ಶ್ರೀನಿಧಿ ಎಂಟ್ರಿ

ಸಮಾಜವು ಜೈಲನ್ನು ಮತ್ತು ಅಲ್ಲಿನವರನ್ನು ನೋಡುವ ದೃಷ್ಟಿಕೋನಕ್ಕೂ, ರಾಣಿಯ ಮುಗ್ಧ ಕಣ್ಣುಗಳು ಕಾಣುವ ಪ್ರಪಂಚಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜೈಲಿನ ಕಂಬಿಗಳಿಗಿಂತಲೂ ಪ್ರೀತಿಯೇ ಶಕ್ತಿಶಾಲಿ ಎಂಬುದನ್ನು ಈ ಧಾರಾವಾಹಿ ಸಾರುತ್ತದೆ. ಮಾರ್ಚ್ 9ರಿಂದ ಸಂಜೆ 6 ಗಂಟೆಗೆ ಪ್ರಾರಂಭವಾಗಲಿರುವ ಈ ಧಾರಾವಾಹಿ ಮೊದಲೇ ನಿರೀಕ್ಷೆ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ತೀವ್ರ ವಿರೋಧ; ಯುವತಿಯರಿಗೆ ಬಂತು ಬೆದರಿಕೆ ಕರೆ! – Kannada News | Puttur’s “Kerala Story 2” Free Screening Sparks Controversy and Threat calls

ಪುತ್ತೂರಿನಲ್ಲಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ತೀವ್ರ ವಿರೋಧ; ಯುವತಿಯರಿಗೆ ಬಂತು ಬೆದರಿಕೆ ಕರೆ!

ಮಂಗಳೂರು, ಮಾರ್ಚ್ 06:​ ‘ದಿ ಕೇರಳ ಸ್ಟೋರಿ 2′ (The Kerala Story 2) ಚಿತ್ರವು ಬಿಡುಗಡೆಗೂ ಮುನ್ನವೇ ಹಲವಾರು ಕಾನೂನು ಮತ್ತು ರಾಜಕೀಯ ವಿವಾದಗಳಿಗೆ ಗುರಿಯಾಗಿತ್ತು. ಪ್ರಮುಖವಾಗಿ ಚಿತ್ರದಲ್ಲಿನ ಲವ್ ಜಿಹಾದ್ ಮತ್ತು ಬಲವಂತದ ಮತಾಂತರದ ಚಿತ್ರಣಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂಬ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ದಿ ಕೇರಳ ಸ್ಟೋರಿ 2 ಚಿತ್ರದ ಉಚಿತ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ಇದರ ಸುತ್ತ ಹಲವು ವಿವಾದಗಳು ಹುಟ್ಟಿಕೊಂಡಿವೆ.

ಮಾಲ್​ ಬಹಿಷ್ಕರಿಸುವಂತೆ ಕರೆ!

ಪುತ್ತೂರಿನ ಜಿಎಲ್ ಒನ್ ಮಾಲ್‌ನಲ್ಲಿ ಸೀತಾ ಪರಿವಾರ ಸಂಘಟನೆಯಿಂದ ಈ ಕೆಲಸ ನಡೆದಿದೆ. 16 ರಿಂದ 22 ವರ್ಷದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಿನಿಮಾ ಪ್ರದರ್ಶನ ನೀಡುವ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ ಸಂಜೆ ಮೂರು ಪ್ರದರ್ಶನಗಳನ್ನು ಆಯೋಜಿಸಲಾಗಿದ್ದು, ಇದಕ್ಕೆ ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಮುಖಂಡರು ಸಹ ಬೆಂಬಲ ವ್ಯಕ್ತಪಡಿಸಿದ್ದರು.

ಆದರೆ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಸಂದೇಶಗಳು ವೈರಲ್ ಆಗಿವೆ. ಜಿಎಲ್ ಒನ್ ಮಾಲ್‌ಗೆ ಮುಸ್ಲಿಂ ಸಮುದಾಯದವರು ಹೋಗಬಾರದು ಎಂಬ ರೀತಿಯ ಸಂದೇಶಗಳು ಹರಿದಾಡುತ್ತಿದ್ದು, ಮಾಲ್‌ನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇನ್ನು ಮುಂದೆ ಜಿಎಲ್ ಮಾಲ್‌ಗೆ ಹೋಗುವ ಮುಸ್ಲಿಂ ಯುವತಿಯರು ಎಚ್ಚರಿಕೆಯಿಂದಿರಿ ಎಂಬಂತಹ ಸಂದೇಶಗಳೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ

ಸಿನೆಮಾ ನೋಡಿ ವಿದ್ಯಾರ್ಥಿನಿಯರಿಗೆ ಬೆದರಿಕೆ!

ಇದೇ ವೇಳೆ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಬೆದರಿಕೆ ಕರೆಗಳ ಆರೋಪವೂ ಕೇಳಿಬಂದಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೋಸ್ಟರ್‌ನಲ್ಲಿ ಬುಕ್ಕಿಂಗ್‌ಗಾಗಿ ಮಹಿಳೆಯರ ಮೊಬೈಲ್ ಸಂಖ್ಯೆಯನ್ನು ನೀಡಲಾಗಿತ್ತು. ಆ ಸಂಖ್ಯೆಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದ್ದು, ಮಹಿಳೆಯರಿಗೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಕೆಲ ಕರೆಗಳು ವಿದೇಶಗಳಿಂದ ಬಂದಿರುವ ಸಾಧ್ಯತೆಯೂ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಬಗ್ಗೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯಿಸಿ, ಸ್ಥಳೀಯ ಮತಾಂಧ ಶಕ್ತಿಗಳು ಹಾಗೂ ಕೆಲವರು ವಿದೇಶದಿಂದ ಕರೆ ಮಾಡಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ. ಮುಂದೆಯೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮುಂದುವರಿಸುತ್ತೇವೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿದುಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನಾನು ತಪ್ಪು ಮಾಡ್ಬಿಟ್ಟೆ: ಹ್ಯಾರಿ ಬ್ರೂಕ್ ಪಶ್ಚಾತ್ತಾಪ – Kannada News | I made a big mistake dropping Sanju Samson: Harry Brook

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಈ ಹೋರಾಟಕ್ಕೆ ಆಂಗ್ಲರಿಗೆ ಸೋಲುಣಿಸಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿತು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 253 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 20 ಓವರ್​ಗಳಲ್ಲಿ 246 ರನ್​ಗಳಿಸಿ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

ಈ ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್, ನಮ್ಮ ಸೋಲಿಗೆ ನಾನೇ ಕಾರಣ ಎಂದರು. ಏಕೆಂದರೆ ಈ ಪಂದ್ಯದಲ್ಲಿ ನಾನು ಕೈ ಬಿಟ್ಟ ಕ್ಯಾಚ್ ಇಡೀ ಪಂದ್ಯದ ಚಿತ್ರಣ ಬದಲಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಪಂದ್ಯದ ಮೊದಲ ಇನಿಂಗ್ಸ್​ನ 3ನೇ ಓವರ್​ನಲ್ಲಿ ಸಂಜು ಸ್ಯಾಮ್ಸನ್ ಸುಲಭ ಕ್ಯಾಚ್ ನೀಡಿದ್ದರು. ಆದರೆ ಮಿಡ್ ವಿಕೆಟ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಹ್ಯಾರಿ ಬ್ರೂಕ್ ಈ ಸುಲಭ ಕ್ಯಾಚ್ ಅನ್ನು ಕೈ ಚೆಲ್ಲಿದ್ದರು.

ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 89 ರನ್ ಚಚ್ಚಿದ್ದರು. ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಟೀಮ್ ಇಂಡಿಯಾ 253 ರನ್​ ಕಲೆಹಾಕಲು ಸಾಧ್ಯವಾಯಿತು.

ಈ ಒಂದು ಕ್ಯಾಚ್ ಕೈ ಬಿಟ್ಟಿರುವ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಹ್ಯಾರಿ ಬ್ರೂಕ್, ನಾನು ಸಂಜು ಸ್ಯಾಮ್ಸನ್ ಅವರ ಕ್ಯಾಚ್ ಬಿಟ್ಟು ದೊಡ್ಡ ತಪ್ಪು ಮಾಡಿದೆ. ಎಂದಿನಂತೆ ಕ್ಯಾಚ್‌ಗಳು ಪಂದ್ಯಗಳನ್ನು ಗೆಲ್ಲಿಸುತ್ತದೆ. ದುರದೃಷ್ಟವಶಾತ್ ನನ್ನಿಂದಾಗಿ ತಂಡ ನಷ್ಟ ಅನುಭವಿಸಿತು.

ಒಂದು ವೇಳೆ ನಾನು ಆ ಕ್ಯಾಚ್ ಹಿಡಿದಿದ್ದರೆ ಪಂದ್ಯದ ಮೇಲೆ ಆರಂಭದಲ್ಲೇ ನಾವು ಹಿಡಿತ ಸಾಧಿಸಬಹುದಿತ್ತು. ಆದರೆ ನಾನು ಕೈ ಮೇಲೆಕ್ಕೆತ್ತಿ ಮಾಡಿದ ತಪ್ಪು ಭಾರೀ ನಷ್ಟವನ್ನುಂಟು ಮಾಡಿತು ಎಂದು ಹ್ಯಾರಿ ಬ್ರೂಕ್ ಹೇಳಿದ್ದಾರೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ ವೇಳೆ ಪಿಚ್​ನಲ್ಲಿ ಸ್ವಲ್ಪ ಹೆಚ್ಚು ಸ್ಪಿನ್ ನಿರೀಕ್ಷಿಸಿದ್ದೆವು. ಆದರೆ ನಾವಂದುಕೊಂಡಂತೆ ಆಗಲಿಲ್ಲ. ಅತ್ತ ಭಾರತೀಯ ಬ್ಯಾಟರ್​ಗಳು ಅದ್ಭುತವಾಗಿ ಬ್ಯಾಟಿಂಗ್​ ಮಾಡಿದರು. ಇದಾಗ್ಯೂ ನಮ್ಮ ಪ್ರಯತ್ನದ ಬಗ್ಗೆ ನಿಜಕ್ಕೂ ನನಗೆ ಹೆಮ್ಮೆಯಿದೆ.

ನಾವು ಭಾರತೀಯ ಬ್ಯಾಟರ್​ಗಳ ವಿರುದ್ಧ ಆಡುವಾಗ ನೆನಪಲ್ಲಿಟುಕೊಳ್ಳಬೇಕಾದ ಮುಖ್ಯ ಅಂಶವೆಂದರೆ,  ಅವರು ವಿಶ್ವದ ಅತ್ಯುತ್ತಮರು ಎಂಬುದು. ನೀವು ಅವರ ವಿರುದ್ಧ ತಪ್ಪು ಮಾಡಿದರೆ, ಚೆಂಡು ಪಾರ್ಕ್‌ನಿಂದ ಹೊರಗೆ ಹೋಗುತ್ತದೆ. ಬೌಲಿಂಗ್​ನಲ್ಲಿ ನಾವು ಉತ್ತಮ ಪ್ರದರ್ಶನ ನೀಡಿಲ್ಲ ನಿಜ.

ಇದನ್ನೂ ಓದಿ: VIDEO: ಅದು ಔಟ್ ಅಲ್ಲಮ್ಮ… ಹೆಂಡ್ತಿ ಕುಣಿಯುವುದನ್ನು ತಡೆದ ಧೋನಿ

ಇದಾಗ್ಯೂ ಚೇಸಿಂಗ್​ನಲ್ಲಿ ಜೇಕಬ್ ಬೆಥೆಲ್ ಪ್ರದರ್ಶಿಸಿದ ದಿಟ್ಟ ಆಟ ನಂಬಲಾಸಾಧ್ಯ. ಈ ಸೋಲಿನ ಹೊರತಾಗಿಯೂ ನಾವು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ನಾನು ಮೊದಲೇ ಹೇಳಿದಂತೆ, ನಾವು ಆಡಿದ ರೀತಿಗೆ ನಾವು ತುಂಬಾ ಹೆಮ್ಮೆಪಡಬೇಕು. ನಾವು ಎಂದಿಗೂ ಪಂದ್ಯಗಳಿಂದ ಹೊರಗುಳಿದಿರಲಿಲ್ಲ. 250 ರನ್‌ಗಳನ್ನು ಬೆನ್ನಟ್ಟುವಾಗ, ಇತರ ತಂಡಗಳು ಮುಗ್ಗರಿಸಿರಬಹುದು ಅಥವಾ ಕುಸಿದಿರಬಹುದು. ಆದರೆ ನಾವು ಇಡೀ ಪಂದ್ಯವನ್ನು ಅಂತಿಮ ಘಟ್ಟದತ್ತ ಕೊಂಡೊಯ್ದಿದ್ದೇವೆ ಎಂದು ಹ್ಯಾರಿ ಬ್ರೂಕ್ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.

Source link

10.15ಕ್ಕೇ ಸಿದ್ದರಾಮಯ್ಯ ಬಜೆಟ್ ಮಂಡನೆ ಏಕೆ? ಬಿಜೆಪಿ ಶಾಸಕ ಸುರೇಶ್ ಕುಮಾರ್ ಕೊಟ್ಟರು ಅಚ್ಚರಿಯ ಕಾರಣ! – Kannada News | Karnataka Budget 2026: Why Siddaramaiah Presenting Budget at 10:15 AM? BJP MLA Suresh Kumar’s Rahu Kala Remark Sparks Debate

ಜೆಪಿ ಶಾಸಕ ಸುರೇಶ್ ಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯImage Credit source: tv9

ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ (Siddaramaiah) 2026-27ನೇ ಸಾಲಿನ ಕರ್ನಾಟಕ ಬಜೆಟ್ (Karnataka Budget) ಅನ್ನು ಮಾರ್ಚ್ 6 ರ ಬೆಳಗ್ಗೆ 10.15 ಗಂಟೆಗೇ ವಿಧಾನಸಭೆಯಲ್ಲಿ ಮಂಡಿಸುತ್ತಿರುವುದೇಕೆ ಎಂಬ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ. ಈ ವಿಚಾರವಾಗಿ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಚ್ಚರಿಯ ಕಾರಣವೊಂದನ್ನು ಉಲ್ಲೇಖಿಸಿ ಫೇಸ್​​ಬುಕ್​ನಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯವಾಗಿ ಬಜೆಟ್ ಮಂಡನೆ 10 ಗಂಟೆ ಅಥವಾ 11 ಗಂಟೆಗೆ ಮಾಡುವುದು ಸಾಮಾನ್ಯ. ಆದರೆ ಈ ಬಾರಿ 10.15ಕ್ಕೆ ಬಜೆಟ್ ಮಂಡನೆ ನಿಗದಿಯಾಗಿದೆ. ಇದಕ್ಕೆ ಕಾರಣವೇನು ಎಂಬ ಕುತೂಹಲ ರಾಜಕೀಯ ವಲಯದಲ್ಲೂ ಮೂಡಿದೆ.

ಸುರೇಶ್​​ ಕುಮಾರ್ ಫೇಸ್​ಬುಕ್ ಪೋಸ್ಟ್​​ನಲ್ಲೇನಿದೆ?

ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಶುಕ್ರವಾರ ಬೆಳಗ್ಗೆ 10.15 ಗಂಟೆಗೆ ವಿಧಾನಸಭೆಯಲ್ಲಿ ಈ ವರ್ಷದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. 10.00 ಗಂಟೆ ಅಲ್ಲ, 10.30 ಗಂಟೆ ಅಲ್ಲ, 11.00 ಗಂಟೆ ಅಲ್ಲ. ಏಕೆ 10.15 ಗಂಟೆಗೆ ಎಂದು ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು ಈ ವಿಚಾರ. ಏಕೆಂದರೆ ಶುಕ್ರವಾರ, ಬೆಳಗ್ಗೆ 10. 30 ಗಂಟೆಯಿಂದ ರಾಹುಕಾಲ! ಬೆಳಗ್ಗೆ 7.30 ಗಂಟೆ ಯಿಂದ 9 ಗಂಟೆಯವರೆಗೂ ಗುಳಿಕಾಲ. #ಮೂಢನಂಬಿಕೆ ಎಂಬ ಹ್ಯಾಷ್​ಟ್ಯಾಗ್​ನೊಂದಿಗೆ ಸುರೇಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.

ಸುರೇಶ್​​ ಕುಮಾರ್ ಫೇಸ್​ಬುಕ್ ಪೋಸ್ಟ್

ರಾಹುಕಾಲ ಆರಂಭಕ್ಕೂ ಮೊದಲು ಬಜೆಟ್ ಮಂಡನೆ ಆರಂಭಿಸಬೇಕೆಂಬ ಕಾರಣಕ್ಕೆ 10.15 ಗಂಟೆಯನ್ನು ಆಯ್ಕೆ ಮಾಡಿರಬಹುದೇ ಎಂಬ ಅನುಮಾನವನ್ನು ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.

ಸುರೇಶ್ ಕುಮಾರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು ಇದರಲ್ಲಿ ರಾಜಕೀಯ ಟೀಕೆ ಅಡಗಿದೆ ಎಂದು ಹೇಳಿದ್ದಾರೆ.

ಆದರೆ ಸರ್ಕಾರ ಈ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಸಾಮಾನ್ಯವಾಗಿ ವಿಧಾನಸಭೆಯ ಕಾರ್ಯಚಟುವಟಿಕೆಗಳ ವೇಳಾಪಟ್ಟಿ, ವಿಧಾನಮಂಡಲದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ಕಾರಣಗಳ ಆಧಾರದ ಮೇಲೆ ಸಮಯ ನಿಗದಿಯಾಗುವುದು ರೂಢಿಯಾಗಿದೆ.

ಒಟ್ಟಿನಲ್ಲಿ, 10.15 ಗಂಟೆಯ ಸಮಯದ ಹಿಂದೆ ನಿಜವಾಗಿಯೂ ಜ್ಯೋತಿಷ್ಯ ಕಾರಣವಿದೆಯೇ ಅಥವಾ ಇದು ಕೇವಲ ರಾಜಕೀಯ ವ್ಯಂಗ್ಯವೇ? ಎಂಬ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Temple Rituals: ದೇವಾಲಯಗಳಲ್ಲಿ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Circumambulation in Temples: How Many Pradakshinas for Which Deity?

ದೇವಾಲಯಗಳಲ್ಲಿ, ಪೂರ್ವಿಕರ ಸಮಾಧಿಗಳ ಬಳಿ ಅಥವಾ ಅಶ್ವತ್ಥ ವೃಕ್ಷಗಳ ಸುತ್ತಲೂ ಪ್ರದಕ್ಷಿಣೆಗಳನ್ನು ಮಾಡುವುದು ಭಾರತೀಯ ಸಂಸ್ಕೃತಿಯಲ್ಲಿ ಅಸ್ತಿತ್ವದಲ್ಲಿದೆ. ಸಾಮಾನ್ಯವಾಗಿ, ಜನರು ಮೂರು ಪ್ರದಕ್ಷಿಣೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಆದರೆ, ಕೆಲವೊಂದು ದೇವರುಗಳಿಗೆ ನಿರ್ದಿಷ್ಟ ಸಂಖ್ಯೆಯ ಪ್ರದಕ್ಷಿಣೆಗಳು ಪರಿಪೂರ್ಣ ಫಲವನ್ನು ನೀಡುತ್ತವೆ ಎಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿ ಹೇಳುವಂತೆ, ಪ್ರದಕ್ಷಿಣೆ ಎಂದರೆ ಗೌರವವನ್ನು ಸಲ್ಲಿಸುವುದು, ಭಗವಂತನನ್ನು ನೆನಪಿಸಿಕೊಳ್ಳುವುದು ಮತ್ತು ನಮ್ಮ ಭಾವನೆಗಳನ್ನು ನಿವೇದಿಸುವುದು. ದೇವಾಲಯ ಅಥವಾ ಸಮಾಧಿಗಳಲ್ಲಿ ಮೂರು ಪ್ರದಕ್ಷಿಣೆಗಳನ್ನು ಹಾಕುವುದು ವೈಜ್ಞಾನಿಕವಾಗಿ ಮತ್ತು ಧಾರ್ಮಿಕವಾಗಿ ವಿಶೇಷ ಮಹತ್ವವನ್ನು ಹೊಂದಿದೆ. ಈ ಮೂರು ಸಂಖ್ಯೆಯು ಈ ಪ್ರಪಂಚದ ತ್ರಿಗುಣಗಳಾದ ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಸಂಕೇತವಾಗಿದೆ. ಹಾಗೆಯೇ, ಇದು ಮೂರು ಲೋಕಗಳಾದ ಮತ್ಸ್ಯಲೋಕ, ಸ್ವರ್ಗಲೋಕ ಮತ್ತು ಪಾತಾಳಲೋಕಗಳ ಪ್ರತೀಕವೂ ಆಗಿದೆ. ಪ್ರದಕ್ಷಿಣೆ ಹಾಕುವಾಗ, ಈ ಮೂರು ಲೋಕಗಳಲ್ಲಿರುವ ಭಗವಂತನ ಪ್ರಭಾವವನ್ನು ನೆನಪಿಸಿಕೊಳ್ಳುತ್ತೇವೆ ಮತ್ತು ಆತನು ನಮ್ಮ ಕಷ್ಟಗಳನ್ನು ಆಲಿಸಿ ವಿಮುಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.


ಗದ್ದುಗೆಗಳಲ್ಲಿ ಪ್ರದಕ್ಷಿಣೆ ಮಾಡುವಾಗ, ನಾವು ನಮ್ಮ ತ್ರಿಗುಣಗಳನ್ನು ಸಮತೋಲನದಲ್ಲಿ ಇಡಲು ಆಶೀರ್ವಾದವನ್ನು ಕೋರುತ್ತೇವೆ. ಸತ್ವಗುಣ, ರಜೋಗುಣ ಮತ್ತು ತಮೋಗುಣಗಳ ಸಮತೋಲನವು ಮನಸ್ಸಿನ ಶಾಂತಿಗೆ ಮತ್ತು ಸರಿಯಾದ ನಿರ್ಧಾರಗಳಿಗೆ ಕಾರಣವಾಗುತ್ತದೆ. ಕೋಪ, ತಾಪಗಳಿಂದ ಜೀವನದಲ್ಲಿ ಉಂಟಾಗುವ ಕಷ್ಟಗಳನ್ನು ನಿವಾರಿಸಲು ಈ ತ್ರಿಗುಣಗಳ ಸಮತೋಲನ ಅತ್ಯಗತ್ಯ. ಕಾಯ (ದೇಹ), ವಾಚ (ಮಾತು) ಮತ್ತು ಮನಸ (ಮನಸ್ಸು) ಈ ಮೂರು ರೀತಿಯಲ್ಲಿ ಸಂಪೂರ್ಣವಾಗಿ ಶರಣಾಗತಿಯಾಗುವುದರ ಸಂಕೇತವಾಗಿ ಪ್ರದಕ್ಷಿಣೆಗಳನ್ನು ಮಾಡಲಾಗುತ್ತದೆ.

ಹಿಂದೂ ಸನಾತನ ಸಂಸ್ಕೃತಿಯಲ್ಲಿ ಕೆಲವು ದೇವರುಗಳಿಗೆ ಪ್ರದಕ್ಷಿಣೆಯ ಸಂಖ್ಯೆಯು ಭಿನ್ನವಾಗಿದೆ:

  • ಗಣಪತಿಗೆ (ವಿನಾಯಕನಿಗೆ): ಒಂದು ಪೂರ್ಣ ಪ್ರದಕ್ಷಿಣೆ ಸಾಕು ಎಂದು ಹೇಳಲಾಗುತ್ತದೆ. ಹೆಜ್ಜೆಗಳನ್ನು ಅಕ್ಕಪಕ್ಕದಲ್ಲಿ ಇಟ್ಟು ನಿಧಾನವಾಗಿ ಸುತ್ತುವುದು ಹೆಚ್ಚು ಶ್ರೇಷ್ಠವೆಂದು ಹಿರಿಯರು ಹೇಳುತ್ತಾರೆ.
  • ಶಿವನಿಗೆ: ಪರಿಪೂರ್ಣ ಪ್ರದಕ್ಷಿಣೆ ಬೇಕಾಗಿಲ್ಲ. ಅರ್ಧ ಪ್ರದಕ್ಷಿಣೆ (ಸೋಮಸೂತ್ರ ಪ್ರದಕ್ಷಿಣೆ) ಸಾಕು.
  • ದೇವಿಯ ದೇವಸ್ಥಾನಗಳಲ್ಲಿ: ನಾಲ್ಕು ಪ್ರದಕ್ಷಿಣೆಗಳನ್ನು ಮಾಡಬೇಕು. ಇದು ನಾಲ್ಕು ದಿಕ್ಕುಗಳ ಪ್ರತೀಕವಾಗಿದೆ.
  • ಸೂರ್ಯ ಭಗವಾನರಿಗೆ: ಆತ್ಮ ನಮಸ್ಕಾರದ ರೂಪದಲ್ಲಿ ನಾವು ಇರುವ ಜಾಗದಲ್ಲೇ ಏಳು ಸುತ್ತು ಸುತ್ತಿದರೆ ಸೂರ್ಯನ ಪರಿಪೂರ್ಣ ಅನುಗ್ರಹ ದೊರೆಯುತ್ತದೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಸಾಮಾನ್ಯವಾಗಿ, ಮೂರು ಪ್ರದಕ್ಷಿಣೆಗಳು ಶುಭ ಫಲಗಳನ್ನು ನೀಡುತ್ತವೆ. ಕೆಲವರು ಹರಕೆಗಳನ್ನು ಹೊತ್ತುಕೊಂಡು ನೂರು ಅಥವಾ ಹನ್ನೊಂದು ಪ್ರದಕ್ಷಿಣೆಗಳನ್ನು ಮಾಡುತ್ತಾರೆ. ಇದು ಅವರ ವೈಯಕ್ತಿಕ ಭಕ್ತಿ ಮತ್ತು ಸಂತೃಪ್ತಿಗೆ ಸಂಬಂಧಿಸಿದೆ. “ಯದ್ಭಾವಂ ತದ್ಭವತಿ” ಎಂಬಂತೆ, ಭಕ್ತಿಯಿಂದ ಮಾಡಿದ ಪ್ರದಕ್ಷಿಣೆಗಳು ಫಲಕಾರಿಯಾಗುತ್ತವೆ. ದೇವಾಲಯಗಳಲ್ಲಿ ಗರ್ಭಗುಡಿಯ ಪ್ರದಕ್ಷಿಣೆ, ಪ್ರಾಕಾರದ ಪ್ರದಕ್ಷಿಣೆ ಮತ್ತು ಸಂಪೂರ್ಣ ದೇವಸ್ಥಾನದ ಪ್ರದಕ್ಷಿಣೆ ಹೀಗೆ ಹಲವು ರೀತಿಯ ಪ್ರದಕ್ಷಿಣೆಗಳು ಅಸ್ತಿತ್ವದಲ್ಲಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Budget 2026 LIVE Video: ದಾಖಲೆಯ 17ನೇ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ – Kannada News | Karnataka Budget 2026 LIVE: CM Siddaramaiah Presents Historic 17th Budget Live and Highlights

ಬೆಂಗಳೂರು, ಮಾ.6: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 17ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಮಾರ್ಚ್ 06ರಿಂದ ಮಾರ್ಚ್ 27ರವರೆಗೆ ಕರ್ನಾಟಕ ಬಜೆಟ್ ಅಧಿವೇಶನ ನಡೆಯಲಿದೆ. ಇಂದು(March 6) ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ 17ನೇ ಐತಿಹಾಸಿಕ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಬಗ್ಗೆ ಲೈವ್​​ ವಿಡಿಯೋ ಇಲ್ಲಿದೆ ನೋಡಿ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:17 am, Fri, 6 March 26

Source link

Exit mobile version