Horoscope Today 06 March : ಇಂದು ಈ ರಾಶಿಯವರಿಂದ ನೂತನ ಉದ್ಯಮದ ಸೃಷ್ಟಿ

ಮೇಷ ರಾಶಿ:

ವೃತ್ತಿಜೀವನದಲ್ಲಿ ನೀವು ಯಶಸ್ಸಿನ ಏಣಿಯನ್ನು ಏರುತ್ತೀರಿ. ವ್ಯವಹಾರದಲ್ಲಿ ಆರ್ಥಿಕ ಲಾಭಕ್ಕಾಗಿ ನಿಮಗೆ ಹೊಸ ಅವಕಾಶಗಳು ಸಿಗುತ್ತವೆ. ವಿವಾಹದ ಕಾರ್ಯದಲ್ಲಿ ನೀವು ಮಗ್ನರಾಗಿ ಮುಖ್ಯ ಕೆಲಸಗಳನ್ನು ಮರೆಯಬೇಕಾಗುವುದು. ಎಷ್ಟೇ ತೊಂದರೆಯಾದರೂ ಇನ್ನೊಬ್ಬರಿಗೆ ನೋವನ್ನು ಕೊಡುವುದು ಇಷ್ಟವಾಗದು. ಕೇಳಿದವರಿಗೆ ನಿಮ್ಮ ಸಹಾಯವು ಸಿಗಲಿದೆ. ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು.

ವೃಷಭ ರಾಶಿ:

ನಿಮ್ಮ ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳಿ. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ. ಸತ್ಯವನ್ನೇ ಹೇಳುವುದಾದರೂ ನೋವಾಗದಂತೆ ಹೇಳಬೇಕು ಎನ್ನುವುದು ನಿಮ್ಮ ಕ್ರಮವಾಗಿರಲಿದೆ. ನೀವು ಇಂದು ಮಕ್ಕಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ವಿದ್ಯಾರ್ಥಿಗಳು ತಮಗೆ ಸಿಗಬೇಕಾದ ಲಾಭದಿಂದ ವಂಚಿತರಾಗುವರು. ಅನಪೇಕ್ಷಿತ ವಿಚಾರದಲ್ಲಿ ಹೆಚ್ಚು ಮನಸ್ಸು ಇರುವುದು. ಉದರಬಾಧೆಯಿಂದ ನಿಮಗೆ ಕಷ್ಟವಾದೀತು.

ಮಿಥುನ ರಾಶಿ:

ವ್ಯವಹಾರದಲ್ಲಿ ವಿಸ್ತರಣೆ ಇರುತ್ತದೆ, ಆದರೆ ಇಂದು ಹೂಡಿಕೆ ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಅಗ್ನಿಯ ಬಳಿಯಲ್ಲಿ ಎಚ್ಚರಿಕೆಯಿಂದ ಓಡಾಡಿ. ಸ್ತ್ರೀಯರು ವಿಶೇಷವಾದ ಗಮನಕೊಡುವುದು ಅಗತ್ಯ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ತಂತ್ರಜ್ಞರು ಇಂದು ಬಹಳ ಒತ್ತಡದಿಂದ ಇರುವರು. ನಿಮ್ಮ ಜಾಣ್ಮೆಯಿಂದ ನಿಮ್ಮ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಗಳಿಸಬಹುದು. ನಿಮ್ಮ ಆಲೋಚನೆಗಳೇ ನಿಮ್ಮನ್ನು ನಿರೂಪಿಸುತ್ತವೆ.

ಕರ್ಕಾಟಕ ರಾಶಿ:

ಇಷ್ಟವಾಗದ ಬಂಧುಗಳು ಮನೆಗೆ ಆಗಮಿಸಬಹುದು. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ರಾಜಕಾರಣದತ್ತ ನಿಮ್ಮ ಒಲವು ಹೆಚ್ಚಾಗುವುದು. ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಪರಿವರ್ತಿಸುವರು. ಆದಾಯದ ಮೂಲವು ಸರಿಯಾಗಿ ಇರಲಿದೆ. ನಿಮ್ಮ ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಬಹುದು.

ಸಿಂಹ ರಾಶಿ:

ನೀವಂದುಕೊಂಡಿದ್ದನ್ನೇ ಮಾಡುವ ಛಾತಿ ಇರುವುದು. ವಿದ್ಯಾರ್ಥಿಗಳು ಅಹಂಕಾರದ ವರ್ತನೆಯನ್ನು ತೋರಿಸಬಹುದು. ಇಂದಿನ ಓಡಾಟದ ದಣಿವು ನಿಮ್ಮ ಉತ್ಸಾಹವನ್ನು ಕುಗ್ಗಿಸೀತು. ನಿಮ್ಮ ಜೀವನ ಸಂಗಾತಿಯಿಂದ ನಿಮಗೆ ಅಚ್ಚರಿಯೊಂದು ಸಿಗಬಹುದು. ವ್ಯವಹಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಧೈರ್ಯದಿಂದ ಮುನ್ನಡೆದರೆ ಯಾವ ತೊಂದರೆಯೂ ತೊಂದರೆಯಾಗಿ ಉಳಿಯದು. ಬಾರದ ಭಾಗ್ಯವನ್ನು ಬಯಸುತ್ತ ಬಳಲುವುದು ಬದುಕಾಗದು. ಪ್ರಯಾಣದಲ್ಲಿ ಯಾವುದೇ ತೊಂದರೆಯು ಬಾರದಂತೆ ದೈವವನ್ನು ಪ್ರಾರ್ಥಿಸಿ.

ಕನ್ಯಾ ರಾಶಿ:

ದುಡುಕಿ ಏನನ್ನಾದರೂ ತಪ್ಪನ್ನು ಮಾಡಿಕೊಳ್ಳುವುದು ಬೇಡ. ಕಛೇರಿಯಲ್ಲಿ ನಿಮ್ಮ ಅನುಪಸ್ಥಿತಿಯಿಂದ ಗೊಂದಲವಾದೀತು. ನಿಮ್ಮ ಕೆಲಸದಲ್ಲಿ ಅಜಾಗರೂಕರಾಗಿರಬೇಡಿ. ಇದು ಸವಾಲುಗಳಿಗೆ ಕಾರಣವಾಗಬಹುದು. ಒಂದೇ ಬಾರಿಗೆ ಹಲವು ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ. ಅಪಾಯದ ಮನ್ಸೂಚನೆಯಿಂದ ಭಯ.

ತುಲಾ ರಾಶಿ:

ಮಂಗಲ ಕಾರ್ಯದಲ್ಲಿ ಇಂದು ನೀವು ಸಂತೋಷದಿಂದ ಪಾಲ್ಗೊಳ್ಳುವಿರಿ. ಇದರಿಂದ ನಿಮ್ಮ ನೆಮ್ಮದಿಯೂ ದೂರವಾದೀತು. ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ಜೀವನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಗಟ್ಟಿಯಾದ ತೀರ್ಮಾನವನ್ನು ಪಡೆಯುವುದು ಕಷ್ಟವಾಗುವುದು. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಭೀತಿಯು ಇರಲಿದೆ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ.

ವೃಶ್ಚಿಕ ರಾಶಿ:

ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ. ಕುಟುಂಬದಲ್ಲಿ ಎಲ್ಲರೂ ಸುಖದಿಂದ ಜೀವಿಸುವ ಕಾರಣ ನಿಮ್ಮಲ್ಲಿಯೂ ನೆಮ್ಮದಿಯು ಕಾಣಿಸುವುದು. ದಾಂಪತ್ಯದಲ್ಲಿ ಪರಸ್ಪರ ನೋವು ಹಂಚಿಕೊಂಡು ಸಮಾಧಾನವಾಗುವಿರಿ. ಮನೆಯ ನಿರ್ಮಾಣ ಕಾರ್ಯವು ಬಹಳ ವಿಳಂಬದಂತೆ ಅನ್ನಿಸುವುದು. ಮೂವರ ನಡುವೆ ಪರಸ್ಪರ ಗೊತ್ತಿಲ್ಲದ ವಿಚಾರವನ್ನು ಮಾತನಾಡಿಕೊಳ್ಳುವುದು ಬೇಡ. ಅನೇಕ ದಿನಗಳಿಂದ ಉದ್ಯೋಗ ನಿರ್ವಹಣೆಯಲ್ಲಿ ಬೇಸರ ಉಂಟಾಗಿದ್ದು ಹೊರಗೆ ಸುತ್ತಾಡುವಿರಿ.

ಧನು ರಾಶಿ:

ಜೀವನದಲ್ಲಿ ಹೊಸ ಅನುಭವಗಳನ್ನು ಆನಂದಿಸಲು ಸಿದ್ಧರಾಗಿರಿ. ಸಂಗಾತಿಯ ಬದಲಾವಣೆಯು ನಿಮಗೆ ಅನಿರೀಕ್ಷಿತ ಆದೀತು. ಇನ್ನೊಬ್ಬರ ಅನುಭವವು ನಿಮಗೆ ಪಾಠವಾಗಬಹುದು. ನಿಮ್ಮ ವಸ್ತುಗಳು ಕಾಣೆಯಾಗಿದ್ದು ಹಲವು ದಿನಗಳ ಅನಂತರ ತಿಳಿದೀತು. ಇಂದಿನ ಮನೆಯ ಕೆಲಸದಿಂದ ನಿಮಗೆ ಶ್ರಮವಾಗುವುದು. ಹಳೆಯ ಆಸೆಯನ್ನು ನೀವು ತೀರಿಸಿಕೊಳ್ಳುವ ಅವಕಾಶವಿರಲಿದೆ. ಮನಸ್ಸಿಗೆ ಸಹೋದರನ ಮಾತು ಘಾಸಿಮಾಡೀತು. ಇಂದು ನಿಮ್ಮ ಅನಗತ್ಯ ಮಾತುಗಳು ಕಲಹಕ್ಕೆ ಕಾರಣವಾಗಬಹುದು.

ಮಕರ ರಾಶಿ:

ಮನೋರಂಜನೆಯೇ ನಿಮಗೆ ಇಂದು ಮುಖ್ಯವಾದೀತು. ಆಪ್ತರಿಗಾಗಿ ಕೊಟ್ಟ ಸಮಯವೂ ವ್ಯರ್ಥವಾದೀತು. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಡುವಿರಿ. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡುವುದು ಅನಿವಾರ್ಯವಾದೀತು. ಉದ್ಯಮವು ಬೆಳೆಯುತ್ತಿರುವುದು ಸಂತೋಷ ಕೊಡುವುದು. ಚಾಲಕರಿಗೆ ಕರ್ತವ್ಯಕ್ಕೆ ಪ್ರಶಂಸೆ ಸಿಗುವುದು. ಅರಿವಿಲ್ಲದೆ ಇಂದಿನ ತುರ್ತು ಕಾರ್ಯವನ್ನು ಮರೆಯುವಿರಿ. ಅಸಹಜ ವರ್ತನೆಯಿಂದ ಸಂಗಾತಿಗೆ ಅನುಮಾನ ಬರುವುದು. ಮಕ್ಕಳ ಶಿಕ್ಷಣದ ಬಗ್ಗೆ ನಿಮಗೆ ತೃಪ್ತಿ ಇರದು.

ಕುಂಭ ರಾಶಿ:

ವೃತ್ತಿಪರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ಹೊಸ ಹೊಸ ಕಾರ್ಯ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಬಾಡಿಗೆ ಮನೆಯಲ್ಲಿ ಇರುವವರು ಹೊಸ ಮನೆಗೆ ಹೋಗುವಿರಿ. ಸರ್ಕಾರದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಅವಿವಾಹಿತರಿಗೆ ಅಭಾವದ ಕೊರಗು ಕಾಣಿಸಬಹುದು. ಆದಾಯವು ಕಡಿಮೆ ಆದಂತೆ ಅನ್ನಿಸುವುದು. ನಿಮ್ಮ ಸ್ವಭಾವಕ್ಕೆ ಹೊಂದಿಕೊಳ್ಳುವ ಸಂಗಾತಿಯು ಸಿಗುವುದು ಕಷ್ಟವಾದೀತು. ಇಂದಿನ ಪ್ರಯಾಣದಲ್ಲಿ ಅಪರಿಚಿತರ ಗೆಳೆತನವಾಗಬಹುದು.

ಮೀನ ರಾಶಿ:

ವೈವಾಹಿಕ ಸಮಸ್ಯೆಗಳು ಬಹಳ ಸಮಯದಿಂದ ಇದ್ದರೆ, ಹಿರಿಯರ ಸಹಾಯದಿಂದ ಪರಿಹರಿಸಲು ಸಾಧ್ಯವಾಗುತ್ತದೆ. ಇರುವ ಒಂದು ವ್ಯಾಪಾರವನ್ನು ಕ್ರಮಬದ್ಧವಾಗಿ ನೋಡಿಕೊಳ್ಳಲಾಗದು. ಸಹೋದ್ಯೋಗಿಗಳು ನಿಮ್ಮನ್ನು ಎಲ್ಲದಕ್ಕೂ ಬೊಟ್ಟು ಮಾಡಿ ತೋರಿಸಿಯಾರು‌. ಹಳೆಯ ಕೆಲಸದಲ್ಲಿ ಮಂದಗತಿ ಇರಲಿದೆ. ಸ್ನೇಹಿತರ ಜೊತೆ ನೋವನ್ನು ಹಂಚಿಕೊಂಡು ಸಮಾಧಾನ ತಂದುಕಳ್ಳುವಿರಿ. ತಂದೆಯ ಜೊತೆ ಅಪರೂಪದ ಸಮಾರಂಭಕ್ಕೆ ಹೋಗುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶುಕ್ರ ಪಕ್ಷ : ಕೃಷ್ಣ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಹಸ್ತಾ, ಯೋಗ : ಗಂಡ, ಕರಣ : ಭದ್ರ, ಸೂರ್ಯೋದಯ – 06 – 39 am, ಸೂರ್ಯಾಸ್ತ – 06 – 32 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:07 – 12:36, ಯಮಗಂಡ ಕಾಲ 15:34 – 17:03, ಗುಳಿಕ ಕಾಲ 08:08 – 09:37

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 6ರ ದಿನಭವಿಷ್ಯ

ನಿಮಗೆ ಕಿರಿಕಿರಿ ಮಾಡುವಂಥ ಶತ್ರುಗಳ ಹಿಂಸೆಯಿಂದ ಹೊರಬರುವುದಕ್ಕೆ ಪಾತಾಳ ವಾರಾಹಿ ದೇವಿಯ ಸ್ಮರಣೆ- ಆರಾಧನೆ ಮಾಡಿ. ಇದರಿಂದ ಶುಭ ಬೆಳವಣಿಗೆಗಳು ಆಗಲಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮದೆಷ್ಟೋ ಅಷ್ಟು ಕೆಲಸವನ್ನು ಮಾತ್ರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಿ. ಅತ್ಯುತ್ಸಾಹದಲ್ಲೋ ಅಥವಾ ಇನ್ನೊಬ್ಬರಿಗೆ ಸಹಾಯ ಆಗಲಿ ಅಂದುಕೊಂಡೋ ಏನಾದರೂ ಅಗತ್ಯಕ್ಕಿಂತ ಹೆಚ್ಚು ಮಾತನಾಡುವುದೋ ಅಥವಾ ಕೆಲಸಕ್ಕೆ ತೊಡಗುವುದೋ ಮಾಡಿದರೆ ಆ ನಂತರ ಪರಿತಪಿಸುವಂತೆ ಆಗಲಿದೆ. ವಸ್ತ್ರಾಭರಣಗಳ ಖರೀದಿಗೆ ಹೆಚ್ಚಿನ ಖರ್ಚಾಗುವಂಥ ಯೋಗ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಸಂಬಂಧಿಗಳೋ- ಸ್ನೇಹಿತರೋ ತಮ್ಮ ಶಾಪಿಂಗ್ ಗೆ ನೀವೂ ಬರಬೇಕು ಎಂದು ಒತ್ತಡ ಹಾಕಿ, ಕರೆದುಕೊಂಡು ಹೋಗಲಿದ್ದಾರೆ. ಮನೆಗೆ ಬೇಕಾದ ವಸ್ತುಗಳು ಕೆಲವನ್ನು ತರಲೇಬೇಕು ಎಂಬ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಬಳಸಲಿದ್ದೀರಿ. ಇಷ್ಟು ಕಾಲ ಅಷ್ಟೇನೂ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದಂಥ ವಸ್ತು- ವಿಷಯಗಳಿಗೆ ಸಿಕ್ಕಾಪಟ್ಟೆ ಪ್ರಾಶಸ್ತ್ಯ ಬಂದುಬಿಡುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಪ್ರಯಾಣದಿಂದ ಆಯಾಸ ಕಾಡಲಿದೆ. ಉದ್ಯೋಗ ಸ್ಥಳದಲ್ಲಿಯೂ ಕೆಲಸದ ಒತ್ತಡ ಇದ್ದು, ಅದರಿಂದ ಮಾನಸಿಕವಾದ ದಣಿವು ಕೂಡ ಜತೆಯಾಗುತ್ತದೆ. ಸಂಬಂಧಿಗಳು ಆಡಿದ ಮಾತುಗಳಿಂದ ಅಥವಾ ಈ ದಿನ ನಿಮಗೆ ಫೋನ್ ಮಾಡಿ, ಆಡುವಂಥ ಕೆಲವು ಮಾತುಗಳಿಂದ ವಿಪರೀತ ಸಿಟ್ಟು ಬರುವಂತೆ ಆಗಲಿದೆ. ವಿವಾಹಿತರಿಗೆ ಸಂಗಾತಿಯು ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ತೀರ್ಮಾನ ಸಿಟ್ಟು ತರಿಸುತ್ತದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 6ರ ದಿನಭವಿಷ್ಯ

ಇಂಟರ್ ವ್ಯೂಗಳಿಗೆ ತೆರಳುವಂತೆ ಇದ್ದರೆ, ಶೈಕ್ಷಣಿ ಪರೀಕ್ಷೆ ಬರೆಯುತ್ತಾ ಇರುವವರು ಮನೆಯಿಂದ ಹೊರಡುವ ಮುನ್ನ ಸ್ವಲ್ಪ ಮೊಸರು-ಸಕ್ಕರೆ ಸೇವಿಸಿ ಹೊರಡಿ. ಇದರ ಜೊತೆಗೆ ಹಯಗ್ರೀವ ಮಂತ್ರವನ್ನು ಸ್ಮರಣೆ ಮಾಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ವೈವಾಹಿಕ, ಪ್ರೀತಿ- ಪ್ರೇಮದ ವಿಚಾರ ಆದ್ಯತೆ ಪಡೆದುಕೊಳ್ಳುತ್ತವೆ. ಗ್ಯಾರೇಜ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ವಾಹನಗಳ ಬಿಡಿ ಭಾಗಗಳ ಹೋಲ್ ಸೇಲ್ ಮಾರಾಟ ಮಾಡುವಂಥವರಿಗೆ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ರಿಯಾಯಿತಿಯಲ್ಲಿ ಸಿಗುತ್ತಿದೆ ಎಂಬ ಕಾರಣಕ್ಕೋ ಅಥವಾ ಬೇರೆ ಯಾವುದೋ ಆಫರ್ ಗಳಿವೆ ಅಂತಲೋ ವಾಷಿಂಗ್ ಮಶೀನ್, ರೆಫ್ರಿಜರೇಟ್, ಟಿವಿ ಇಂಥವುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ತುಂಬ ಚೆನ್ನಾಗಿ ಗೊತ್ತಿರುವಂಥ- ಅನುಭವ ಇರುವಂಥ ವಿಷಯಗಳಲ್ಲಿಯೇ ನಿರೀಕ್ಷಿತ ಮಟ್ಟದ ಫಲಿತಾಂಶ ಪಡೆದುಕೊಳ್ಳಲು ಹರಸಾಹಸ ಪಡುವಂತೆ ಆಗಲಿದೆ. ನಿಮ್ಮ ಸುತ್ತಮುತ್ತ ಏನೋ ಬದಲಾವನೆ ಆಗುತ್ತಿದೆ ಎಂಬುದು ಬಲವಾಗಿ ಮನಸ್ಸಿನಲ್ಲಿ ಬೇರೂರಲಿದೆ. ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಕೆಲವು ಕೋರ್ಸ್ ಗಳಿಗೆ ಸೇರ್ಪಡೆ ಆಗುವುದಕ್ಕೆ ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕ್ಲಿಕ್ ಆಗಿಯೇ ಆಗುತ್ತದೆ ಎಂಬ ಲೆಕ್ಕಾಚಾರದಲ್ಲಿ ನೀವು ಆರಂಭಿಸಿದ ವೃತ್ತಿ- ವ್ಯಾಪಾರ ಅಂದುಕೊಂಡ ದಿಕ್ಕಿನಲ್ಲಿಯೇ ಸಾಗಲಿದೆ. ಹಣಕಾಸಿನ ಹೊಂದಾಣಿಕೆ ಮಾಡಬೇಕು ಎಂದಿದ್ದಲ್ಲಿ ಅದು ಕೂಡ ಸಲೀಸಾಗಿ ಆಗಲಿದೆ. ನೀವು ಮುಂಜಾಗ್ರತೆಯಿಂದ ಹಣ ಉಳಿತಾಯ ಮಾಡಿಕೊಂಡು ಬಂದಿದ್ದು ಅಂತೂ ಪ್ರಯೋಜನಕ್ಕೆ ಬಂತು ಎಂಬ ಸಮಾಧಾನ ಈ ದಿನ ನಿಮಗೆ ಸಿಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 6ರ ದಿನಭವಿಷ್ಯ

ದೊಡ್ಡ ಮೊತ್ತದ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವಂತೆ ಇದ್ದರೆ ಅಥವಾ ಆಸ್ತಿ ವ್ಯವಹಾರಗಳನ್ನು ಮಾಡುವಂತಿದ್ದಲ್ಲಿ ನಿಮ್ಮ ವ್ಯಾಲೆಟ್ ನಲ್ಲಿ ಒಂದು ಬೆಳ್ಳಿಯ ನಾಣ್ಯ ಇರಿಸಿಕೊಳ್ಳಿ. ಇದರಿಂದ ನಿಮ್ಮ ಪರವಾಗಿ ಬೆಳವಣಿಗೆ ಆಗುತ್ತದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಸಂಯಮ ಹಾಗೂ ತಾಳ್ಮೆ ನಿಮ್ಮ ಪಾಲಿಗೆ ಗಟ್ಟಿಯಾಗಿ ನಿಲ್ಲುವಂಥ ಸ್ವಭಾವ ಆಗಿರುತ್ತವೆ. ನಿಮ್ಮ ಜತೆಗೆ ಇರುವವರು ಇನ್ನು ಇದು ಆಗದು ಎಂದು ಕೆಲವು ಕೆಲಸಗಳಿಂದ ದೂರ ಸರಿದು ನಿಂತ ಮೇಲೂ ನೀವು ಗಟ್ಟಿಯಾಗಿ ನಿಂತು ಯಶಸ್ಸು ಕಾಣುವಂತೆ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡಿಕೊಂಡು ಇರುವವರು ಅದರಲ್ಲಿನ ರಹಸ್ಯಗಳನ್ನು ಯಾರ ಜೊತೆಗೆ ಹಂಚಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮಗೆ ಏನು ಸಿಗುತ್ತದೋ ಅಷ್ಟರಲ್ಲಿಯೇ ತೃಪ್ತಿ ಪಟ್ಟುಕೊಂಡು ಸುಮ್ಮನಿರಬೇಕು ಎಂದು ಎಚ್ಚರಿಕೆ ಧ್ವನಿಯಲ್ಲಿ ಕೆಲವು ವ್ಯಕ್ತಿಗಳು ಹೇಳಲಿದ್ದಾರೆ. ಭಾವನಾತ್ಮಕವಾಗಿ ನೀವು ಬಹಳ ಹತ್ತಿರವಾದ ವ್ಯಕ್ತಿಯ ಆರ್ಥಿಕ ವಿಚಾರಗಳು ಗಾಬರಿ ಹುಟ್ಟಿಸುತ್ತವೆ. ನೀವು ಊಹಿಸಲು ಕೂಡ ಸಾಧ್ಯವಿಲ್ಲದಂಥ ದೊಡ್ಡ ಸಮಸ್ಯೆ ಅವರ ಬದುಕಿನಲ್ಲಿ ಆಗಿರುವುದು ತಿಳಿದುಬಂದು, ಬೇಸರ ಮೂಡಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ನಿಮಗೆ ತುಂಬ ಇಷ್ಟವಾಗುವಂಥ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ಜೊತೆಗೆ ಸಂತೋಷವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಅಷ್ಟೇ ಅಲ್ಲ, ಕುಟುಂಬ ಸದಸ್ಯರ ಜೊತೆಗೆ ಹೋಟೆಲ್- ರೆಸ್ಟೋರೆಂಟ್ ನಲ್ಲಿ ಸ್ವಾದಿಷ್ಟವಾದ ಭೋಜನ- ಖಾದ್ಯಗಳನ್ನು ಸವಿಯುವಂಥ ಯೋಗ ಸಹ ಇದೆ. ಲೇವಾದೇವಿ ವ್ಯವಹಾರ ಮಾಡುತ್ತಿರುವವರು ವಿಧಾನದಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದಕ್ಕೆ ತೀರ್ಮಾನ ತೆಗೆದುಕೊಳ್ಳಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link

IND vs ENG: ಭಾರತದ 2 ಐತಿಹಾಸಿಕ ಗೆಲುವುಗಳನ್ನು ನೆನಪಿಸಿದ ಅಕ್ಷರ್ ಹಿಡದ 2 ಅದ್ಭುತ ಕ್ಯಾಚ್​ಗಳು..! – Kannada News | Axar Patel’s Stunning Catches Power India to 2026 T20 World Cup Final and Recall Legends

ಹಾಲಿ ಚಾಂಪಿಯನ್ ಹಾಗೂ ಆತಿಥೇಯ ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ತಂಡದ ಸಾಂಘಿಕ ಪ್ರದರ್ಶನ ಪ್ರಮುಖ ಪಾತ್ರವಹಿಸಿತು. ಮೊದಲು ಬ್ಯಾಟಿಂಗ್​ನಲ್ಲಿ ಬ್ಯಾಟ್ಸ್‌ಮನ್​ಗಳು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ, ಬೌಲರ್​ಗಳು ಕೊಂಚ ದುಬಾರಿಯಾದರೂ ಕೊನೆಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಈ ಎರಡು ವಿಭಾಗದ ಜೊತೆಗೆ ತಂಡದ ಫಿಲ್ಡಿಂಗ್ ವಿಭಾಗವೂ ಗೆಲುವಿಗೆ ಪ್ರಮುಖ ಕೊಡುಗೆ ನೀಡಿತು. ಅದರಲ್ಲೂ ಎರಡು ಅತ್ಯದ್ಭುತ ಕ್ಯಾಚ್​ಗಳನ್ನು ಹಿಡಿದ ಅಕ್ಷರ್ ಪಟೇಲ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರು.

ಅಕ್ಷರ್ ಪಟೇಲ್ ಹಿಡಿದ ಆ ಎರಡು ಕ್ಯಾಚ್​ಗಳು ಟೀಂ ಇಂಡಿಯಾ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಸಂದರ್ಭಗಳನ್ನು ನೆನಪಿಸಿತು. ಮೊದಲನೆಯದಾಗಿ ಈ ಪಂದ್ಯದಲ್ಲಿ ಅಕ್ಷರ್ ಹಿಡಿದ ಮೊದಲ ಕ್ಯಾಚ್ 1983 ರ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಅಂದಿನ ಭಾರತದ ನಾಯಕ ಕಪಿಲ್ ದೇವ್, ವಿಂಡೀಸ್ ದಿಗ್ಗಜ ವಿವ್ ರಿಚರ್ಡ್ಸ್ ನೀಡಿದ ಅತ್ಯಂತ ಕಷ್ಟಕರವಾದ ಕ್ಯಾಚ್​ ಅನ್ನು ಹಿಡಿದು ಭಾರತವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಮಿಡ್ ಆನ್​ನಲ್ಲಿ ನಿಂತಿದ್ದ ಕಪಿಲ್ ದೇವ್ ಮಿಡ್ ವಿಕೆಟ್​ ಕಡೆ ಓಡಿ ಅತ್ಯದ್ಭುತ ಕ್ಯಾಚ್ ಹಿಡಿದಿದ್ದರು. ರಿಚರ್ಡ್ಸ್ ಅವರ ಈ ವಿಕೆಟ್ ಭಾರತವನ್ನು ವಿಶ್ವ ಚಾಂಪಿಯನ್ ಮಾಡಿತ್ತು.

ಅದರಂತೆ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲೂ ಅಕ್ಷರ್ ಪಟೇಲ್ ಅಂತಹದ್ದೇ ಕ್ಯಾಚ್ ಹಿಡಿದರು. ಬುಮ್ರಾ ಎಸೆದ ಇನ್ನಿಂಗ್ಸ್​ನ ಐದನೇ ಓವರ್​ನ ಮೊದಲ ಎಸೆತವನ್ನು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ಕವರ್ಸ್​ ದಿಕ್ಕಿನಲ್ಲಿ ಆಡಿದರು. ಇದೇ ವೇಳೆ ಎಕ್ಸ್​ಟ್ರಾ ಕವರ್ಸ್​ನಲ್ಲಿ ನಿಂತಿದ್ದ ಅಕ್ಷರ್ ಪಟೇಲ್ ಬೌಂಡರಿ ಗೆರೆಯತ್ತ ಓಡಿ ಅತ್ಯದ್ಭುತ ಕ್ಯಾಚ್ ತೆಗೆದುಕೊಂಡರು. ಅಕ್ಷರ್ ಹಿಡಿದ ಈ ಕ್ಯಾಚ್ 1983 ವಿಶ್ವಕಪ್​ನಲ್ಲಿ ಕಪಿಲ್ ದೇವ್ ಹಿಡಿದಿದ್ದ ಕ್ಯಾಚ್ ನೆನಪಿಸಿತು.

ಹಾಗೆಯೇ ಅಕ್ಷರ್ ಹಿಡಿದ ಇನ್ನೊಂದು ಕ್ಯಾಚ್ 2024 ರ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದ 20ನೇ ಓವರ್​ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಹಿಡಿದಿದ್ದ ಡೇವಿಡ್ ಮಿಲ್ಲರ್ ಅವರ ಕ್ಯಾಚ್ ಅನ್ನು ನೆನಪಿಸಿತು. ಹಾರ್ದಿಕ್ ಪಾಂಡ್ಯ ಬೌಲ್ ಮಾಡಿದ 20 ನೇ ಓವರ್​ನ ಮೊದಲ ಎಸೆತವನ್ನು ಮಿಲ್ಲರ್ ಲಾಂಗ್ ಆನ್ ದಿಕ್ಕಿನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಅಲ್ಲಿಯೇ ಫಿಲ್ಡಿಂಗ್ ಮಾಡುತ್ತಿದ್ದ ಸೂರ್ಯ, ಅತ್ಯಂತ ಕಷ್ಟಕರವಾದ ಕ್ಯಾಚ್ ಅನ್ನು ಹಿಡಿದು ಭಾರತವನ್ನು ಚಾಂಪಿಯನ್ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

ಸೂರ್ಯಕುಮಾರ್ ಅವರಂತೆಯೇ ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ಎರಡನೇ ಅದ್ಭುತ ಕ್ಯಾಚ್ ಹಿಡಿದು ತಂಡವನ್ನು ಸೋಲಿನಿಂದ ಪಾರು ಮಾಡಿದರು. ಅರ್ಷದೀಪ್ ಸಿಂಗ್ ಬೌಲ್ ಮಾಡಿದ 14ನೇ ಓವರ್​ನ ಕೊನೆಯ ಎಸೆತವನ್ನು ವಿಲ್ ಜ್ಯಾಕ್ಸ್ ಡೀಪ್ ಎಕ್ಸ್​ಟ್ರಾ ಕವರ್​ನತ್ತ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಮತ್ತೊಮ್ಮೆ ಅದ್ಭುತ ಫಿಲ್ಡಿಂಗ್ ಮಾಡಿದ ಅಕ್ಷರ್ ಪಟೇಲ್ ವೇಗವಾಗಿ ಓಡಿ ಬಂದು ಚೆಂಡನ್ನು ಹಿಡಿದರು. ಆದರೆ ತಾನು ಬೌಂಡರಿ ಗೆರೆಯಿಂದ ಹೊರಹೋಗುತ್ತಿರುವುದನ್ನು ಗಮನಿಸಿದ ಅಕ್ಷರ್, ಚೆಂಡನ್ನು ಗಾಳಿಯಲ್ಲಿ ಎಸೆದರು. ಅಲ್ಲಿಯೇ ನಿಂತಿದ್ದ ದುಬೆ ಕ್ಯಾಚ್ ಅನ್ನು ಪೂರ್ಣಗೊಳಿಸುವ ಮೂಲಕ ಜ್ಯಾಕ್ಸ್ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಅಕ್ಷರ್ ಹಿಡಿದ ಈ ಎರಡು ಕ್ಯಾಚ್​ಗಳು ಪಂದ್ಯದ ದಿಕ್ಕನೇ ಬದಲಿಸಿದವು.

Published On – 11:50 pm, Thu, 5 March 26

Source link

IND vs ENG: ಜಾಕೋಬ್ ಬೆಥೆಲ್ ಶತಕ ವ್ಯರ್ಥವಾದರೂ ಆರ್​ಸಿಬಿ ಫ್ಯಾನ್ಸ್​ಗೆ ಖುಷಿಯೋ ಖುಷಿ

Source link

ಶಾರುಖ್ ನಟನೆಯ ‘ಕಿಂಗ್’ ಸಿನಿಮಾದಲ್ಲಿ ಚಿತ್ರರಂಗದ ಮುಕ್ಕಾಲು ಭಾಗ ಕಲಾವಿದರು – Kannada News | Saurabh Shukla talks about Shah Rukh Khan starrer King movie cast

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಕಿಂಗ್’ ಅದ್ದೂರಿಯಾಗಿ ನಿರ್ಮಾಣ ಆಗುತ್ತಿದೆ. ಈ ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುತ್ತಿದೆ. ಈ ಚಿತ್ರವು ಭಾರತೀಯ ಚಿತ್ರರಂಗದ ಅತಿದೊಡ್ಡ ತಾರಾಗಣವನ್ನು ಹೊಂದಿರುವ ಸಿನಿಮಾ ಆಗಲಿದೆ ಎಂಬ ಸುಳಿವನ್ನು ಹಿರಿಯ ನಟ ಸೌರಭ್ ಶುಕ್ಲಾ ನೀಡಿದ್ದಾರೆ. ‘ಕಿಂಗ್’ (King) ಸಿನಿಮಾದಲ್ಲಿ ನಟಿಸುತ್ತಿರುವ ಸೌರಭ್ ಶುಕ್ಲಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಸಿದ್ದಾರ್ಥ್ ಆನಂದ್ ಅವರು ಕಿಂಗ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಈ ಸಿನಿಮಾದಲ್ಲಿ ನಾನು ಮಾತ್ರವಲ್ಲ, ಇಡೀ ಚಿತ್ರೋದ್ಯಮದ ಶೇಕಡ 70ರಷ್ಟು ಕಲಾವಿದರಿದ್ದಾರೆ. ಬಾಲಿವುಡ್‌ನ ಪ್ರತಿಯೊಬ್ಬ ದೊಡ್ಡ ನಟನೂ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಹೇಳುವ ಮೂಲಕ ಚಿತ್ರದ ತಾರಾ ಬಳಗದ ಬಗ್ಗೆ ಸೌರಭ್ ಶುಕ್ಲಾ ಸುಳಿವು ನೀಡಿದ್ದಾರೆ.

ವರದಿಗಳ ಪ್ರಕಾರ, ‘ಕಿಂಗ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದೊಡ್ಡ ತಾರಾಗಣ ಇರಲಿದೆ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ತಿಳಿದಿರುವಂತೆ ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಜಾಕಿ ಶ್ರಾಫ್, ಅರ್ಷದ್ ವಾರ್ಸಿ, ಜೈದೀಪ್ ಅಹಲಾವತ್, ರಾಘವ್ ಜುಯಲ್, ಸೌರಭ್ ಶುಕ್ಲಾ ನಟಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಶಕ್ತಿಶಾಲಿ ಮತ್ತು ರಗಡ್ ಆಂತಹ ಡಾನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಪಾಯಕಾರಿ ಜಗತ್ತಿನಲ್ಲಿ ಮಗಳಿಗೆ ಎದುರಾಗುವ ಸವಾಲುಗಳನ್ನು ಎದುರಿಸಲು ಮಾರ್ಗದರ್ಶನ ನೀಡುವ ವ್ಯಕ್ತಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ‘ದಿ ಆರ್ಚೀಸ್’ ನಂತರ ಸುಹಾನಾ ಖಾನ್ ಅವರಿಗೆ ಇದು ದೊಡ್ಡ ಪರದೆಯ ಮೊದಲ ಸಿನಿಮಾವಾಗಲಿದೆ.

ಇದನ್ನೂ ಓದಿ: ಶಾರುಖ್ ಖಾನ್ ಮಗಳ ವರ್ಕೌಟ್ ವಿಡಿಯೋ ವೈರಲ್

ಅದ್ದೂರಿ ಆ್ಯಕ್ಷನ್ ಜೊತೆಗೆ ಭಾವನಾತ್ಮಕ ಕಥೆಯನ್ನು ಹೊಂದಿರುವ ‘ಕಿಂಗ್’ ಸಿನಿಮಾ 2026ರ ಡಿಸೆಂಬರ್ 24ರಂದು ಕ್ರಿಸ್ಮಸ್ ಪ್ರಯುಕ್ತ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸಿದ್ದಾರ್ಥ್ ಆನಂದ್ ಅವರ ಮೇಕಿಂಗ್ ಮತ್ತು ಶಾರುಖ್ ಖಾನ್ ಅವರ ಸ್ಟಾರ್ ಇಮೇಜ್​ ಕಾರಣದಿಂದ ಈ ಚಿತ್ರದ ಮೇಲಿನ ಹೈಪ್ ಹೆಚ್ಚಿದೆ. ಈಗ ತಾರಾಬಳಗದ ವಿವರದಿಂದ ಇನ್ನಷ್ಟು ನಿರೀಕ್ಷೆ ಮೂಡುವಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs ENG: ರಣರೋಚಕ ಪಂದ್ಯದಲ್ಲಿ ಇಂಗ್ಲೆಂಡ್‌ ಮಣಿಸಿ ಫೈನಲ್​ಗೇರಿದ ಟೀಂ ಇಂಡಿಯಾ – Kannada News | Team India’s Road to Final: Epic Win vs England in T20 WC 2026 Semifinal Mumbai

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2026 ರ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್‌ ಪಂದ್ಯವನ್ನು 7 ರನ್​ಗಳಿಂದ ಗೆದ್ದುಕೊಂಡ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಫೈನಲ್​ಗೇರಿದೆ. ರನ್​ಗಳ ಮಳೆಯೇ ಹರಿದ ಈ ಪಂದ್ಯ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಅದರ ಫಲವಾಗಿ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 253 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ಕೂಡ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿತು. ಗುರಿ ದೊಡ್ಡದಿದ್ದರಿಂದ ಇಂಗ್ಲೆಂಡ್‌, ಭಾರತಕ್ಕೆ ಸುಲಭ ತುತ್ತಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಆಂಗ್ಲರ ಪರ ಕೆಚ್ಚೆದೆಯ ಬ್ಯಾಟಿಂಗ್‌ ಪ್ರದರ್ಶಿಸಿದ ಜೆಕಬ್ ಬೆಥೆಲ್ ಸ್ಫೋಟಕ ಶತಕ ಸಿಡಿಸಿ ಇಂಗ್ಲೆಂಡ್​ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಕೊನೆಯ 4 ಓವರ್​ಗಳಲ್ಲಿ ಪಂದ್ಯದ ದಿಕ್ಕು ಬದಲಿಸಿದ ಭಾರತದ ಬೌಲರ್​ಗಳು ತಂಡವನ್ನು ರಣರೋಚಕ ಗೆಲುವಿನತ್ತ ಕೊಂಡೊಯ್ದರು.

Published On – 10:51 pm, Thu, 5 March 26

Source link

ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು? – Kannada News | SC internal reservation discussion incomplete In Karnataka Cabinet Meeting

ಬೆಂಗಳೂರು, ಮಾರ್ಚ್ 05): ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಒಳ ಮೀಸಲಾತಿ (internal reservation ) ಗೊಂದಲ ಜೋರಾಗಿದ್ದು, ಕಾಂಗ್ರೆಸ್ ನಾಯಕರುಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಈ ಸಂಬಂಧ ಇಂದು (ಮಾರ್ಚ್ 05) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪೂಟ ಸಭೆಯಲ್ಲೂ ಸಹ ಒಳ ಮೀಸಲಾತಿ ವಿಚಾರವಾಗಿ ಭಾರೀ ಚರ್ಚೆಯಾಗಿದೆ. ಆದ್ರೆ, ಸಂಪುಟದಲ್ಲಿ ಸಹಮತ ಮೂಡದ ಕಾರಣ ಚರ್ಚೆ ಅಪೂರ್ಣಗೊಂಡಿದ್ದು, ಮತ್ತೆ ಸಂಪುಟ ಸಭೆ ಸೇರಿ ತೀರ್ಮಾನಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಮತ್ತೊಂದು ಬೆಳವಣಿಗೆ: ಸಮುದಾಯದ ನಾಯಕರ ನಡುವೆ ಅಸಮಾಧಾನ ಸ್ಫೋಟ

 

Source link

ಲೋಕಾಯುಕ್ತ ಭರ್ಜರಿ ಬೇಟೆ: ಸರ್ಕಾರಿ ಅಧಿಕಾರಿಗಳ ಬಳಿ ಸಂಪತ್ತಿನ ಕೋಟೆ ಬಯಲು – Kannada News | Karnataka Lokayukta Raids 9 Officials: Disproportionate Assets Worth Crores Uncovered

ಬೆಂಗಳೂರು, ಮಾರ್ಚ್​ 05: ಇಂದು ಕರ್ನಾಟಕ ಲೋಕಾಯುಕ್ತ (Lokayukta raids) ಅಧಿಕಾರಿಗಳು ಕರ್ನಾಟಕದ 8 ಜಿಲ್ಲೆಯಲ್ಲಿ 9 ಅಧಿಕಾರಿಗಳ ಮನೆ ಸೇರಿದಂತೆ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಇಂದು ಬೆಳ್ಳಂಬೆಳಗ್ಗೆ 9 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ಶಾಕ್​ ಕೊಟ್ಟಿದ್ದಾರೆ. ಇನ್ನು ದಾಳಿ ವೇಳೆ ಸಂಪತ್ತಿನ ಕೋಟೆ ಬಯಲಾಗಿದೆ.

ಕರ್ನಾಟಕದಲ್ಲಿ ಇಂದು ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿರುವ ಲೋಕಾಯುಕ್ತ ಪೊಲೀಸರು ಬರೋಬ್ಬರಿ 9 ಅಧಿಕಾರಿಗಳ ಸಂಪತ್ತಿನ ಕೋಟೆ ಬಯಲು ಮಾಡಿದ್ದಾರೆ. ಹಾಗಾದರೆ ಇಂದು ಅಕ್ರಮ ಆಸ್ತಿ ಗಳಿಕೆ ಕೇಸ್​ನಲ್ಲಿ ದಾಳಿಗೆ ಒಳಗಾದ ಸರ್ಕಾರಿ ಅಧಿಕಾರಿಗಳು ಯಾರೆಲ್ಲಾ, ಏನು ಕೆಲಸ ಮಾಡುತ್ತಿದ್ದರು, ಅವರ ಮನೆಯಲ್ಲಿ ಏನೆಲ್ಲಾ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

ಯಾವೆಲ್ಲಾ ಅಧಿಕಾರಿಗಳು: ಏನೆಲ್ಲಾ ಸಿಕ್ತು

1) ಶಶಿಧರ್: ಸಿಇಒ, ಸಿಂಗನಾಯಕನಹಳ್ಳಿ ರೈತ ಸೇವ ಸಹಕಾರ ಸಂಘ ಯಲಹಂಕ, ಬೆಂಗಳೂರು.  5,15,86,000 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ ಆಗಿದೆ. ಅಸಮತೋಲನ ಆಸ್ತಿ 3,43,86,000 ರೂ.

2) ಹೆಚ್ ಸಿ ಇಂದರೇಶ್ ಗೌಡ: ಅಸಿಸ್ಟೆಂಟ್ ಪ್ರೊಫೆಸರ್, ವೆಟರ್ನರಿ ಕಾಲೇಜು ಹೆಬ್ಬಾಳ, ಬೆಂಗಳೂರು. 2,53,04,600 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ 1,88,04,600 ರೂ.

ಇದನ್ನೂ ಓದಿ: ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು!

3) ವಸಂತ್ ನಾಯ್ಕ್: ಚೀಫ್ ಇಂಜಿನಿಯರ್ ಕೆ ಆರ್ ಡಿ ಎಲ್, ಬೆಂಗಳೂರು.
6,40,49,680 ರೂ. ಮೌಲ್ಯದ ಚರ, ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ 4,41,00,212 ರೂ.

4) ವಿರೇಶ್ ಹಿರೇಮಠ್: ಡೆಪ್ಯೂಟಿ ಎಲೆಕ್ಟ್ರಿಕ್ ಇನ್ಸ್ಪೆಕ್ಟರ್, ಎಲೆಕ್ಟ್ರಿಕಲ್ ಡಿಪಾರ್ಟ್ಮೆಂಟ್, ಯಾದಗಿರಿ. 1,54,53,193 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 1,54,53,192 ರೂ.

5) ಎಸ್ ಸತೀಶ್, AEE, PWD ಇಲಾಖೆ, ಮಂಡ್ಯ.
4,46,58,976 ರೂ. ಮೌಲ್ಯದ ಚರ, ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 3,01,58,976 ರೂ.

6) ಎಂ ಕೆ ಸುರಕೋಡ: ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ, ಧಾರವಾಡ.
2,12,33,566 ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 1,82,33,566 ರೂ.

7) ಎಂ ಸಿ ಸತ್ಯನಾರಾಯಣ: ಎಇಇ , ಮಹಾನಗರ ಪಾಲಿಕೆ ಹಾಸನ.
7,45,08,390 .ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ಥಿ ಪತ್ತೆ, ಅಸಮತೋಲನ ಆಸ್ತಿ- 6,82,54,406 ರೂ.

8) ಆಶಿಫ್ ಇಕ್ಬಾಲ್: ಎಇಇ ಮತ್ತು ಇಇ ಜಲಮಂಡಳಿ. ಜಲಭವನ ಮೈಸೂರು. ‌
8,81,31,851 ರೂ. ಮೌಲ್ಯದ ಚರ, ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 6,89,44,806 ರೂ.

9) ಪ್ರಕಾಶ್ ಪಿ ಜಿ: ಜೂನಿಯರ್ ಇಂಜಿನಿಯರ್​​ ಕೃಷ್ಣ ಭಾಗ್ಯ ಜಲ ನಿಗಮ, ವಿಜಯಪುರ
4,60,97,500 ರೂ. ಮೌಲ್ಯದ ಚರ, ಸ್ಥಿರ ಆಸ್ತಿ ಪತ್ತೆ. ಅಸಮತೋಲನ ಆಸ್ತಿ- 4,60,97,500 ರೂ.

ಇದನ್ನೂ ಓದಿ: ಲೋಕಾಯುಕ್ತ ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿ ಮನೆ ಬಾಗಿಲು ತೆರೆದ ಹಾಸನ ಮಹಾನಗರಪಾಲಿಕೆ ಇಂಜಿನಿಯರ್!

ಸರ್ಕಾರಿ ಅಧಿಕಾರಿಗಳ ಬಳಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕ ನಗದು, ಚಿನ್ನ, ಐಶಾರಾಮಿ ಮನೆ, ಕಾರು, ಸೈಟ್​​ ದಾಖಲಗಳನ್ನು ಜಪ್ತಿ ಮಾಡಿದ್ದಾರೆ. ಅದರಲ್ಲೂ ಹಾಸನದ ಸತ್ಯನಾರಾಯಣ ಮನೆಯಲ್ಲಿ ಇನ್ನೂ ಪರಿಶೀಲನೆ ಮುಂದುವರಿದಿದ್ದು, ಅವರ ಆಸ್ತಿ ಬಗ್ಗೆ ನಾಳೆ ಸಂಪೂರ್ಣ ಮಾಹಿತಿ ಸಿಗಲಿದೆ. ಸದ್ಯ ಈ ಸರ್ಕಾರಿ ಅಧಿಕಾರಿಗಳ ಬಳಿ ಪತ್ತೆಯಾದ ಆಸ್ತಿಯಲ್ಲಿ ಕಂಡು ಬಂದ ಅಸಮತೋಲನ ಆಸ್ತಿ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ತನಿಖೆ ಮುಂದುವರಿಸಲಿದ್ದು, ಕಾನೂನಿ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version