Headlines

‘ಟಾಕ್ಸಿಕ್’ ರನ್​​​ಟೈಮ್: ಒಂದು ಕಲ್ಲಿಗೆ ‘ಎರಡು’ ಹಕ್ಕಿ ಹೊಡೆದರೇ ಯಶ್? – Kannada News | Yash starrer Toxic Runtime leak, movie may release in sequel

ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಮೂರು ವಾರಗಳಷ್ಟೆ ಬಾಕಿ ಇದೆ. ಸಿನಿಮಾದ ಪ್ರೀ ರಿಲೀಸ್ ಸೇಲ್ಸ್ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪಾತ್ರಗಳ ಪೋಸ್ಟರ್, ಅದ್ಧೂರಿ ಟೀಸರ್ ಎಲ್ಲವೂ ಬಿಡುಗಡೆ ಆಗಿವೆ. ಇದೀಗ ಯಶ್ ಮತ್ತು ಇತರೆ ತಾರಾಗಣ ಪ್ರಚಾರಕ್ಕೆ ಅಖಾಡಕ್ಕೆ ಇಳಿಯಬೇಕಿದೆ. ಚಿತ್ರತಂಡ, ಸಿನಿಮಾದ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಮಾಹಿತಿಗಳನ್ನು ಬಿಟ್ಟುಕೊಡುತ್ತಿಲ್ಲ ಇದೇ ಕಾರಣಕ್ಕೆ ಸಿನಿಮಾದ ಬಗ್ಗೆ ಹಲವು ರೀತಿಯ ಊಹಾಪೋಹಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಸಿನಿಮಾದ ರನ್​​ಟೈಮ್ ಜೊತೆಗೆ ಮತ್ತೊಂದು ಸುದ್ದಿಯೂ…

Read More

ಹಿಂಡು ಹಿಂಡಾಗಿ ನಾಡಿಗೆ ಲಗ್ಗೆ ಇಟ್ಟ ‘ಬೀಟಮ್ಮ’ ಗ್ಯಾಂಗ್! ಚಿಕ್ಕಮಗಳೂರು–ಬೇಲೂರು ಗಡಿ ಭಾಗದಲ್ಲಿ ಹೆಚ್ಚಾಯ್ತು ಕಾಡಾನೆಗಳ ಆತಂಕ – Kannada News | Elephant Herd Led by Beetamma Enters Chikkamagaluru from Belur: Forest Department Issues High Alert

ಹಿಂಡು ಹಿಂಡಾಗಿ ನಾಡಿಗೆ ಲಗ್ಗೆ ಇಟ್ಟ ‘ಬೀಟಮ್ಮ’ ಗ್ಯಾಂಗ್Image Credit source: tv9 ಚಿಕ್ಕಮಗಳೂರು, ಫೆಬ್ರವರಿ 26: ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಭಾಗದಿಂದ ಕಾಫಿನಾಡು ಚಿಕ್ಕಮಗಳೂರು (Chikkamagaluru) ಜಿಲ್ಲೆಗೆ ಕಾಡಾನೆಗಳ ದೊಡ್ಡ ಗುಂಪು ಎಂಟ್ರಿ ನೀಡಿದ್ದು, ಜನರಲ್ಲಿ ಭೀತಿ ಮೂಡಿಸಿದೆ. ‘ಬೀಟಮ್ಮ’ ಮತ್ತು ‘ಭುವನೇಶ್ವರಿ’ ಗ್ಯಾಂಗ್‌ಗಳಾಗಿ ಗುರುತಿಸಲ್ಪಟ್ಟಿರುವ ಈ ಹಿಂಡುಗಳು ಬೇಲೂರು ಮಾರ್ಗವಾಗಿ ಜಿಲ್ಲೆಗೆ ಪ್ರವೇಶಿಸಿವೆ. ಭೀಮಾ ನೇತೃತ್ವದಲ್ಲಿ ಸುಮಾರು 25 ಕಾಡಾನೆಗಳ ಗುಂಪು ಚಿಕ್ಕಮಗಳೂರು ಕಡೆಗೆ ಬಂದಿದ್ದು, ಒಟ್ಟಾರೆ 45 ಕಾಡಾನೆಗಳೊಂದಿಗೆ ಬಂದಿದ್ದ…

Read More

Paras Dogra vs KV Aneesh: ಡಿಚ್ಚಿಗೆ ಇದುವೇ ಅಸಲಿ ಕಾರಣ..! – Kannada News | Why Paras Dogra headbutted Aneesh?

ಹುಬ್ಬಳ್ಳಿಯ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಆಟಗಾರರ ನಡುವೆ ಅಹಿತಕರ ಘಟನೆ ನಡೆದಿದೆ. ಕರ್ನಾಟಕ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಜಮ್ಮು-ಕಾಶ್ಮೀರ ಪರ ನಾಯಕ ಪರಸ್ ಡೋಗ್ರ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಅದರಂತೆ 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರೆಸಿದ್ದ ಪರಸ್ ಹಾಗೂ ಕರ್ನಾಟಕ ಆಟಗಾರ ಕೆವಿ ಅನೀಶ್ ನಡುವೆ ವಾಗ್ವಾದ ನಡೆದಿದೆ. ಈ ವಾಗ್ವಾದವು ತಾರಕ್ಕೇರುತ್ತಿದ್ದಂತೆ ಪರಸ್ ಡೋಗ್ರಾ ಕೆವಿ ಅನೀಶ್​ ತಲೆಗೆ ಹೆಲ್ಮೆಟ್​ನಿಂದ ಡಿಚ್ಚಿ ಹೊಡೆದಿದ್ದಾರೆ….

Read More

ರಘು ಅವಕಾಶವಾದಿನಾ? ಇನ್​​ಸ್ಟಾ ಅನ್​ಫಾಲೋ ಮಾಡಿದ ಹಿಂದಿನ ಕಾರಣ ಹೇಳಿದ ಗಿಲ್ಲಿ ನಟ – Kannada News | Gilli Nata Clarifies To Why Raghu unfollow On Instagram

ನಟ ರಘು ಹಾಗೂ ಗಿಲ್ಲಿ ನಟ ಅವರು ಬಿಗ್ ಬಾಸ್ ಅಲ್ಲಿ ಸಾಕಷ್ಟು ಸುದ್ದಿ ಆದವರು. ಇಬ್ಬರೂ ಕೆಲವು ದಿನ ಒಟ್ಟಿಗೆ ಇದ್ದರು. ಇನ್ನೂ ಕೆಲವು ದಿನ ಕಿತ್ತಾಡಿಕೊಳ್ಳುತ್ತಿದ್ದನ್ನು ನೋಡಬಹುದು. ರಘು ಅವರು ಎಷ್ಟೇ ದ್ವೇಷ ತೋರಿಸಿದರೂ ಗಿಲ್ಲಿ ನಟ ಪ್ರೀತಿಯನ್ನೇ ಕೊಡುತ್ತಿದ್ದರು. ಬಿಗ್ ಬಾಸ್​ನಿಂದ ಹೊರ ಬಂದ ಬಳಿಕವೂ ಗಿಲ್ಲಿ ಹಾಗೂ ರಘು ಒಟ್ಟಾಗಿಯೇ ಇದ್ದರು. ರಘು ಅವರು ಈಗ ಗಿಲ್ಲಿಯನ್ನು ಅನ್​ಫಾಲೋ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ನಡೆದಿದ್ದು ಗೊತ್ತೇ ಇದೆ. ಈ ವಿಷಯದ…

Read More

Video: ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು ಟಿಕೆಟ್ ಕೊಡದೆ ಕಳಿಸಿದ ರೈಲ್ವೆ ಬುಕಿಂಗ್ ಸಿಬ್ಬಂದಿ – Kannada News | Woman Claims Overcharging and Denial of Ticket at Delhi Railway Counter in Anand Vihar

ನವದೆಹಲಿ, ಫೆಬ್ರವರಿ 26: ರೈಲ್ವೆ ಟಿಕೆಟ್​ ಕೌಂಟರ್​​ನಲ್ಲಿರುವ  ಸಿಬ್ಬಂದಿ​ ಮಹಿಳೆಯಿಂದ ಹೆಚ್ಚುವರಿ ಹಣ ಪಡೆದು, ಟಿಕೆಟ್ ಕೂಡ ಕೊಡದೆ ಕಳುಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ. ಬಡ ಮಹಿಳೆಯೊಬ್ಬರು ರೈಲ್ವೆ ಟಿಕೆಟ್​ಗಾಗಿ ಬುಕಿಂಗ್ ಕ್ಲರ್ಕ್​​ಗೆ ಸಾವಿರ ರೂ. ನೀಡಿದ್ದರು. ಅವರಿಗೆ ಯಾವುದೇ ಟಿಕೆಟ್ ಕೊಡದೆ, 200 ರೂ. ಅವರಿಟ್ಟುಕೊಂಡು 800 ರೂ.ವಾಪಸ್ ಕೊಟ್ಟಿದ್ದಾರೆ. ರೈಲ್ವೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಕೌಂಟರ್​​ನಲ್ಲಿ ಟಿಕೆಟ್ ಕೇಳಿದರೂ ಕೊಡದೆ ವಾಪಸ್ ಕಳುಹಿಸಿದ್ದಾರೆ ಎಂದು…

Read More

ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ: ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್! – Kannada News | Karnataka PUC Paper Leak Fear: Students and Parents Warned Against Online Scams

ಬೆಂಗಳೂರು, ಫೆ.26: ಫೆಬ್ರವರಿ 28ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು (PUC exam 2026) ಆರಂಭವಾಗಲಿವೆ. ಆದರೆ, ಪರೀಕ್ಷೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟದ ಬಗ್ಗೆ ಪೋಸ್ಟ್ ಒಂದು ಹರಿದಾಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ‘ಡಾ. ಕನ್ನಡಿಗ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವುದಾಗಿ ಪೋಸ್ಟ್ ಮಾಡಿದ್ದಾನೆ. “ಯಾವುದಾದರೂ ಪ್ರಶ್ನೆ ಪತ್ರಿಕೆ ಬೇಕು ಅಂದ್ರೆ ಮೆಸೇಜ್ ಮಾಡಿ. ಅಮೌಂಟ್…

Read More

ಹೊರೆಯಾಗುತ್ತಿದ್ದರೂ ಗ್ಯಾರಂಟಿ ಕೊಡುತ್ತಿದ್ದೇವೆ, ಕೊಡುತ್ತೇವೆ: ಡಿಕೆಶಿ, ಸಿದ್ದರಾಮಯ್ಯ ಮಾತಿನ ಮರ್ಮ ಏನು? – Kannada News | Are Karnataka’s Guarantee Schemes a Financial Burden? DK Shivakumar and Siddaramaiah Clarify Amid Budget Debate

ಬೆಂಗಳೂರು, ಫೆಬ್ರವರಿ 26: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಆರ್ಥಿಕ ಹೊರೆಯಾಗಿದೆ ಎಂಬುದನ್ನು ಕೊನೆಗೂ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡರೇ? ಇಬ್ಬರೂ ಆಡಿರುವ ಮಾತುಗಳು ಇದಕ್ಕೆ ಪುಷ್ಟಿ ನೀಡಿವೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದ್ದರೂ, ಅವು ಜನರಿಗೆ ಆರ್ಥಿಕ ಬಲವನ್ನು ನೀಡಿವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಗ್ಯಾರಂಟಿಗಳಿಗಾಗಿ ಕೊಡಲಾಗುತ್ತಿದೆ, ಅದು ಬರ್ಡನ್ ಎಂದು ಅವರು ಹೇಳಿರಬಹುದು…

Read More

‘ಧುರಂಧರ್ 2’ ಚಿತ್ರಕ್ಕೆ ‘UA’ ಸರ್ಟಿಫಿಕೇಟ್? ಇಲ್ಲಿದೆ ಅಸಲಿಯತ್ತು – Kannada News | Is Really Ravnveer Singh Dhurandhar 2 Movie Got UA Certificate here is the truth

ರಣವೀರ್ ಸಿಂಗ್ ಅವರ ‘ಧುರಂಧರ್’ ಚಿತ್ರದ ಭಾರಿ ಯಶಸ್ಸಿನ ನಂತರ, ಅವರ ಚಿತ್ರದ ಮುಂದುವರಿದ ಭಾಗದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಡಿಸೆಂಬರ್ 2025ರಲ್ಲಿ ಬಿಡುಗಡೆಯಾದ ‘ಧುರಂಧರ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿತು. ಇದರಿಂದಾಗಿ, ‘ಧುರಂಧರ್ 2’ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಈ ಚಿತ್ರದ ಎರಡನೇ ಭಾಗಕ್ಕೆ ಸೆನ್ಸಾರ್ ಆಗಿದೆ ಮತ್ತು ಕೆಲವು ದೃಶ್ಯಗಳನ್ನು ಕತ್ತರಿಸಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿತ್ತು. ಈ ಸುದ್ದಿ ಅಭಿಮಾನಿಗಳಲ್ಲಿ ಗೊಂದಲ…

Read More

45 ಎಸೆತಗಳಲ್ಲಿ ಪಾಕಿಸ್ತಾನ್ ತಂಡದ ಸೆಮಿಫೈನಲ್ ಭವಿಷ್ಯ – Kannada News | Pakistan semi final qualification scenario

T20 World Cup 2025: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಗ್ರೂಪ್-2 ರಿಂದ ಇಂಗ್ಲೆಂಡ್ ತಂಡವು ಸೆಮಿಫೈನಲ್​ಗೆ ಪ್ರವೇಶಿಸಿದರೆ, ಶ್ರೀಲಂಕಾ ತಂಡವು ಎಲಿಮಿನೇಟ್ ಆಗಿದೆ. ಇದೀಗ ದ್ವಿತೀಯ ತಂಡವಾಗಿ ಸೆಮಿಫೈನಲ್​ಗೇರಲು ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪೈಪೋಟಿಯಲ್ಲಿ ನಿರ್ಣಾಯಕ ಪಾತ್ರವಹಿಸುವುದು ಇಂಗ್ಲೆಂಡ್ ಎಂಬುದು ವಿಶೇಷ. ಅಂದರೆ ಇಂಗ್ಲೆಂಡ್ ತಂಡವು ನ್ಯೂಝಿಲೆಂಡ್ ಅನ್ನು ಮಣಿಸಿದರೆ ಮಾತ್ರ ಪಾಕಿಸ್ತಾನ್ ತಂಡಕ್ಕೆ ಸೆಮಿಫೈನಲ್​ಗೇರಲು ಅವಕಾಶ ದೊರೆಯಲಿದೆ. ಹೀಗಾಗಿ ಪಾಕ್ ತಂಡವು ಇಂಗ್ಲೆಂಡ್ ತಂಡದ ಗೆಲುವನ್ನು ಎದುರು ನೋಡಲಿದೆ….

Read More

ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಸುಂದರ ಚಿತ್ರಗಳು ಇಲ್ಲಿವೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದ ಐಶಾರಾಮಿ ರೆಸಾರ್ಟ್​​ನಲ್ಲಿ ಅದ್ಧೂರಿಯಾಗಿ ವಿವಾಹ ಆಗುತ್ತಿದ್ದು, ನಿನ್ನೆ ಅರಿಶಿಣ ಶಾಸ್ತ್ರ ಅಥವಾ ಹಳದಿ ಶಾಸ್ತ್ರ ಬಲು ಅದ್ಧೂರಿಯಾಗಿ ನೆರವೇರಿದೆ. ಹಳದಿ ಶಾಸ್ತ್ರಕ್ಕಾಗಿ ವಿಶೇಷ ಥೀಮ್​​ಗಳೊಂದಿಗೆ ವೇದಿಕೆ ಸಿದ್ಧಪಡಿಸಲಾಗಿತ್ತು. ‘ವಿಜಯ್’, ‘ರಶಿ’ ಎಂದು ಬರೆದ ಕೃತಕ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಮಣ್ಣಿನ ಮಡಿಕೆಗಳಿಂದ ಮಾಡಿದ ಮಾದರಿ ಗಮನ ಸೆಳೆಯುತ್ತಿತ್ತು. ವಧು-ವರರಿಗೆ, ಬಂದ ಅತಿಥಿಗಳು, ಸಂಬಂಧಿಗಳು ಹಳದಿ ಬಳಿದರು, ಮಾತ್ರವಲ್ಲದೆ ತಾವೂ ಸಹ ಮನಸೋಇಚ್ಛೆ ಹಳದಿಯನ್ನು ಬಳದಿಕೊಂಡರು. ವಧು-ವರರೊಟ್ಟಿಗೆ ಚಿತ್ರಗಳನ್ನು ತೆಗೆಸಿಕೊಂಡರು….

Read More