25,000 ರೂನಷ್ಟು ಕಡಿಮೆ ಸಂಬಳ ಇದ್ದರೆ ಹಣದ ನಿರ್ವಹಣೆ ಹೇಗಿರಬೇಕು? ಇಲ್ಲಿದೆ ಟಿಪ್ಸ್ – Kannada News | How to live and save money from low salary, here are few tips

ಇವತ್ತಿನ ಉದ್ಯೋಗ ಕ್ಷೇತ್ರ ಬಹಳ ಅತಂತ್ರ ಪರಿಸ್ಥಿತಿಯಲ್ಲಿದೆ. ನಗರಕ್ಕೆ ಬಂದು ಬದುಕು ಕಟ್ಟಿಕೊಂಡು ಹೇರಳ ಹಣ ಸಂಪಾದಿಸುವ ಕನಸು ಹೊತ್ತ ಬಹಳಷ್ಟು ಯುವಕರು ತಮ್ಮ ನಿರೀಕ್ಷೆಗೆ ತಕ್ಕಂತಹ ಉದ್ಯೋಗವಾಗಲೀ, ಕೆಲಸವಾಗಲೀ ಸಿಗದೆ ಸೆಕ್ಯೂರಿಟಿ, ಡೆಲಿವರಿ ಬಾಯ್ ಇತ್ಯಾದಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇವುಗಳಲ್ಲಿ ಸರಾಸರಿಯಾಗಿ 15-25 ಸಾವಿರ ರೂ ಆದಾಯ ಪಡೆದು ಬದುಕು ನಿರ್ವಹಿಸಲು ಬವಣೆ ಪಡುತ್ತಿರುತ್ತಾರೆ.

ನಿಮಗೆ ಬಹಳ ಕಡಿಮೆ ಸಂಬಳ ಬರುತ್ತಿದ್ದರೆ ಹೇಗೆ ಬದುಕಬೇಕೆಂಬುದು ನಿಜಕ್ಕೂ ಒಂದು ಕಲೆ, ತಪಸ್ಸು. ಮನೆ ಬಾಡಿಗೆ, ಆಹಾರ, ಬಟ್ಟೆ, ಮೊಬೈಲ್ ರೀಚಾರ್ಜ್, ಪೆಟ್ರೋಲ್ ಅಥವಾ ಪ್ರಯಾಣ ಇವು ಬಹಳ ಅಗತ್ಯ ವೆಚ್ಚ. ಅಗತ್ಯ ಇದ್ದಲ್ಲಿ ಇಂಟರ್ನೆಟ್, ಸಿನಿಮಾ ಇತ್ಯಾದಿ ವೆಚ್ಚ. ಅವುಗಳ ಮಧ್ಯೆ ಉಳಿತಾಯಕ್ಕೆ ಒಂದಷ್ಟು ಹಣ… ಇದು ಕಡಿಮೆ ಸಂಬಳದಲ್ಲಿ ಸಾಧ್ಯವಾ? ಬಹಳ ಜನರು ಈ ರೀತಿ ಬದುಕಿ ತೋರಿಸಿದ್ದಾರೆ. ಮನಸ್ಸಿದ್ದರೆ ಮಾಡಬಹುದು.

ಇದನ್ನೂ ಓದಿ: ಪಿಎಂ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ತಿಂಗಳಿಗೆ 1,000 ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ರಿಟರ್ನ್? ಇಲ್ಲಿದೆ ಲೆಕ್ಕಾಚಾರ

  • ಕಡಿಮೆ ಬಾಡಿಗೆ ಇರುವ ಮನೆಯಲ್ಲಿ ವಾಸ ಇರಲು ಸಾಧ್ಯವಾ ನೋಡಿ.
  • ಬ್ಯಾಚಲರ್ ಆಗಿದ್ದರೆ ಸ್ನೇಹಿತರ ಜೊತೆ ಸೇರಿ ಒಟ್ಟಿಗೆ ವಾಸಿಸುವ ಅವಕಾಶ ಹುಡುಕಬಹುದು.
  • ಹೋಟೆಲ್​ನಲ್ಲಿ ಊಟ ಮಾಡುವ ಬದಲು ಮನೆಯಲ್ಲೇ ಅಡುಗೆ ಮಾಡಿಕೊಂಡು ತಿನ್ನುವುದು.
  • ತಿಂಗಳ ಪ್ರತೀ ವೆಚ್ಚದ ವಿವರ ದಾಖಲಿಸಿಕೊಂಡು, ಅನಗತ್ಯ ವೆಚ್ಚವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುತ್ತಾ ಹೋಗುವುದು.
  • ಪ್ರಯಾಣ ಮಾಡಲು ಸಾಧ್ಯವಾದಷ್ಟೂ ಬಸ್, ನಡಿಗೆಯನ್ನೇ ಉಪಯೋಗಿಸುವುದು.
  • ಅಪ್ಪಿತಪ್ಪಿಯೂ ಕ್ರೆಡಿಟ್ ಕಾರ್ಡ್ ಬಳಸುವ ಗೋಜಿಗೆ ಹೋಗದಿರುವುದು.

25,000 ರೂ ಸಂಬಳ ಇದ್ದರೆ ಹೇಗಿರಬೇಕು?

ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎನ್ನುವುದಕ್ಕೆ ತಜ್ಞರು 50-30-20 ಸೂತ್ರ ಮುಂದಿಡುತ್ತಾರೆ. ಇಲ್ಲಿ ಮನೆ ಬಾಡಿಗೆ, ದಿನಸಿ, ಇನ್ಷೂರೆನ್ಸ್ ಇತ್ಯಾದಿ ಅಗತ್ಯ ಖರ್ಚುಗಳು ಶೇ. 50ರೊಳಗೆಯೇ ಇರುವಂತೆ ನೋಡಿಕೊಳ್ಳಬೇಕು. ಮನರಂಜನೆ, ಐಷಾರಾಮಿ ಇತ್ಯಾದಿ ಖರ್ಚುಗಳು ಶೇ. 30 ಮೀರದಂತೆ ನೋಡಿಕೊಳ್ಳಬೇಕು. ಹಣದ ಉಳಿತಾಯ ಶೇ. 20ಕ್ಕಿಂತ ಕಡಿಮೆ ಇರದಂತೆ ಎಚ್ಚರ ವಹಿಸಬೇಕು.

ಇದನ್ನೂ ಓದಿ: ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

ಸಾಧ್ಯವಾದರೆ ಶೇ. 20 ಅನ್ನು ಹಿಗ್ಗಿಸಿ ಶೇ. 40 ಅಥವಾ 50ಕ್ಕೆ ತರಬಹುದಾ ಪ್ರಯತ್ನಿಸಬಹುದು. ಅದಕ್ಕಾಗಿ ಐಷಾರಾಮಿತನ ಬಯಸುವ ಮನಸ್ಸಿಗೆ ಕಡಿವಾಣ ಹಾಕಿ, ಸರಳ ಹಾಗೂ ಪರಿಶ್ರಮದ ಜೀವನಶೈಲಿ ರೂಢಿಸಿಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದಕ್ಕೆ; ಮತ್ತೊಬ್ಬ ಬಾಲಿವುಡ್ ಹೀರೋಗೆ ಚಿಂತೆ ಶುರು – Kannada News | Yash Toxic new release date clash Varun Dhawan Hai Jawani Toh Ishq Hona Hai

ಸ್ಯಾಂಡಲ್‌ವುಡ್‌ನಿಂದ ಪ್ಯಾನ್ ಇಂಡಿಯಾ ಮಟ್ಟಕ್ಕೆ ಬೆಳೆದಿರುವ ಯಶ್ (Yash) ಅವರ ‘ಟಾಕ್ಸಿಕ್’ ಚಿತ್ರದ ಮೇಲೆ ಇಡೀ ದೇಶದ ಕಣ್ಣಿದೆ. ಈ ಮೊದಲು ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾದೊಂದಿಗೆ ಈದ್ ಹಬ್ಬದ ಸಮಯದಲ್ಲಿ ಇದು ಬಿಡುಗಡೆ ಆಗಬೇಕಿತ್ತು. ಆದರೆ, ಈಗ ಆ ಪೈಪೋಟಿಯಿಂದ ಹಿಂದೆ ಸರಿದಿರುವ ‘ಟಾಕ್ಸಿಕ್’ (Toxic) ತಂಡ, ಹೊಸ ದಿನಾಂಕವನ್ನು ಘೋಷಿಸಿದೆ. ಹೊಸ ಘೋಷಣೆಯ ಪ್ರಕಾರ, ‘ಟಾಕ್ಸಿಕ್’ ಜೂನ್ 4ರಂದು ತೆರೆಗೆ ಬರಲಿದೆ. ಇದೇ ಸಮಯದಲ್ಲಿ ಅಂದರೆ ಜೂನ್ 5ರಂದು ವರುಣ್ ಧವನ್ ನಟನೆಯ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ (Hai Jawani Toh Ishq Hona Hai) ಬಿಡುಗಡೆಯಾಗುತ್ತಿದೆ. ಸರಿಯಾಗಿ ಒಂದು ದಿನದ ಅಂತರದಲ್ಲಿ ಈ ಎರಡು ಸಿನಿಮಾಗಳು ಮುಖಾಮುಖಿ ಆಗುತ್ತಿರುವುದು ಚಿಂತೆಗೆ ಕಾರಣ ಆಗಿದೆ.

ಈ ಬೆಳವಣಿಗೆಯಿಂದ ವರುಣ್ ಧವನ್ ಚಿತ್ರಕ್ಕೆ ಸಂಕಷ್ಟ ಶುರುವಾಗಿದೆ. ಡೇವಿಡ್ ಧವನ್ ನಿರ್ದೇಶನದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದ ಬಿಡುಗಡೆ ಈ ಮೊದಲು ಏಪ್ರಿಲ್ 10ಕ್ಕೆ ನಿಗದಿಯಾಗಿತ್ತು. ನಂತರ ಅದನ್ನು ಜೂನ್ 5ಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಯಶ್ ನಟನೆಯ ‘ಟಾಕ್ಸಿಕ್’ ಎದುರಾಗಿ ನಿಂತಿರುವುದು ಚಿತ್ರದ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ.

‘ಟಾಕ್ಸಿಕ್’ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ತಯಾರಾಗುತ್ತಿದ್ದು, ಹಿಂದಿ ಮಾರುಕಟ್ಟೆಯಲ್ಲೂ ಭಾರಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಅಂತಹ ದೊಡ್ಡ ನಟಿಯರ ಇರುವುದು ಉತ್ತರ ಭಾರತದ ಪ್ರೇಕ್ಷಕರನ್ನು ಸೆಳೆಯಲು ಪ್ಲಸ್ ಪಾಯಿಂಟ್ ಆಗಿದೆ. ಮಾಸ್ ಎಲಿಮೆಂಟ್‌ಗಳಿಂದ ಕೂಡಿರುವ ಯಶ್ ಸಿನಿಮಾ ಸಿಂಗಲ್ ಸ್ಕ್ರೀನ್‌ಗಳಲ್ಲಿ ಧೂಳೆಬ್ಬಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇದರಿಂದ ವರುಣ್ ಧವನ್ ಚಿತ್ರಕ್ಕೆ ಸಂಕಷ್ಟ ಆಗಲಿದೆ.

ದಿನಾಂಕ ಬದಲಿಸುತ್ತಾ ವರುಣ್ ತಂಡ?

‘ಧುರಂಧರ್ 2’ ಅಂತಹ ಬಿಗ್ ಬಜೆಟ್ ಸಿನಿಮಾದ ಕ್ಲ್ಯಾಶ್‌ನಿಂದ ತಪ್ಪಿಸಿಕೊಂಡ ಮೇಲೆ ‘ಟಾಕ್ಸಿಕ್’ ಸಿನಿಮಾಗೆ ಈಗ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗ ಸಿಗುವ ಹಾದಿ ಸುಗಮವಾಗಿದೆ. ಈ ಅಬ್ಬರದ ನಡುವೆ ವರುಣ್ ಧವನ್ ಅವರ ಸಿನಿಮಾ ಎಷ್ಟು ಪ್ರಭಾವ ಬೀರಲಿದೆ ಎಂಬುದು ಪ್ರಶ್ನೆಯಾಗಿದೆ. ಈ ಹಿನ್ನೆಲೆಯಲ್ಲಿ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರತಂಡ ಮತ್ತೊಮ್ಮೆ ಬಿಡುಗಡೆ ದಿನಾಂಕವನ್ನು ಬದಲಿಸುತ್ತದೆಯೇ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ:  ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

‘ಟಾಕ್ಸಿಕ್’ ಚಿತ್ರತಂಡದವರು ಏಕಾಏಕಿ ಬಿಡುಗಡೆ ದಿನಾಂಕ ಬದಲಾವಣೆ ಮಾಡಿಕೊಂಡರು. ವರದಿಗಳ ಪ್ರಕಾರ ಅವರು ಬೇರೆ ಯಾವುದೇ ಚಿತ್ರತಂಡದ ಜೊತೆ ಈ ಬಗ್ಗೆ ಚರ್ಚೆ ಮಾಡಿಲ್ಲ. ಸೋಶಿಯಲ್ ಮೀಡಿಯಾ ನೋಡಿದ ನಂತರವೇ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರತಂಡಕ್ಕೆ ಈ ಬೆಳವಣಿಗೆಯ ಬಗ್ಗೆ ಗೊತ್ತಾಯಿತು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತಮಿಳುನಾಡಿನಲ್ಲಿ ಕೊನೆಗೂ ಡಿಎಂಕೆ-ಕಾಂಗ್ರೆಸ್ ಸೀಟು ಹಂಚಿಕೆ ಅಂತ್ಯ; ಯಾವ ಪಕ್ಷಕ್ಕೆ ಎಷ್ಟು ಪಾಲು? – Kannada News | Sources said congress and dmk alliance finalised 28 seats and 1 rajya sabha seats for Congress

ಚೆನ್ನೈ, ಮಾರ್ಚ್ 4: ತಮಿಳುನಾಡು ವಿಧಾನಸಭಾ ಚುನಾವಣೆಗೆ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಸೀಟು ಹಂಚಿಕೆಯ ಮಾತುಕತೆಗಳು ಇಂದು ಪೂರ್ಣಗೊಂಡಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಬೆಳಿಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin) ಅವರೊಂದಿಗೆ ಫೋನ್​ನಲ್ಲಿ ಮಾತನಾಡುವ ಮೂಲಕ ಚುನಾವಣಾ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.

ಈ ಒಪ್ಪಂದದ ಪ್ರಕಾರ, ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ 28 ​​ವಿಧಾನಸಭಾ ಸ್ಥಾನಗಳನ್ನು ನೀಡಲಾಗಿದೆ. ಕಾಂಗ್ರೆಸ್ ಈ ಹಿಂದೆ 35 ಸ್ಥಾನಗಳಿಗೆ ಬೇಡಿಕೆ ಇಟ್ಟಿತ್ತು. ಇದೀಗ 25 ಸ್ಥಾನಗಳಿಗೆ ಎರಡೂ ಪಕ್ಷಗಳು ಒಪ್ಪಿಕೊಂಡಿದ್ದು, ಕಾಂಗ್ರೆಸ್‌ಗೆ ಒಂದು ರಾಜ್ಯಸಭಾ ಸ್ಥಾನವನ್ನು ಸಹ ನೀಡಲಾಗುತ್ತದೆ. ಆಯ್ಕೆ ಮತ್ತು ಸ್ಥಾನಗಳ ಸಂಖ್ಯೆಯ ಬಗ್ಗೆ ಎರಡೂ ಪಕ್ಷಗಳ ನಡುವೆ ಕಳೆದ ಕೆಲವು ದಿನಗಳಿಂದ ಚರ್ಚೆಗಳು ನಡೆಯುತ್ತಿತ್ತು.

ಇದನ್ನೂ ಓದಿ: ಮಾರ್ಚ್ 11ರಂದು ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ; ಬಿಜೆಪಿಯ ಅದ್ಧೂರಿ ಸಾರ್ವಜನಿಕ ಸಭೆಯಲ್ಲಿ ಭಾಗಿ

ಈ ಮೂಲಕ ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಸೀಟು ಹಂಚಿಕೆ ವಿವಾದ ಕೊನೆಗೊಂಡಿದೆ ಮತ್ತು ಮೈತ್ರಿ ದೃಢವಾಗಿದೆ ಎಂದು ವರದಿಯಾಗಿದೆ. ಅದರಂತೆ, ಡಿಎಂಕೆ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ 28 ​​ವಿಧಾನಸಭಾ ಸ್ಥಾನಗಳು ಮತ್ತು ಒಂದು ರಾಜ್ಯಸಭಾ ಸ್ಥಾನವನ್ನು ನೀಡಲಾಗಿದೆ. ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೆಲ್ವಪೆರುಂಧಕೈ ಅವರು ಕೂಡ ನಿನ್ನೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಮಾತುಕತೆ ಕುರಿತು ಚರ್ಚಿಸಿದ್ದರು.

ಇದನ್ನೂ ಓದಿ: ಚುನಾವಣೆಗೂ ಮುನ್ನ ಪುದುಚೇರಿಯಲ್ಲಿ ಪ್ರಧಾನಿ ಮೋದಿ ಘರ್ಜನೆ, ಕಾಂಗ್ರೆಸ್-ಡಿಎಂಕೆ ಮೇಲೆ ಭ್ರಷ್ಟಾಚಾರ ಆರೋಪ

ಆದ್ದರಿಂದ, ಡಿಎಂಕೆ ಮೈತ್ರಿಕೂಟದಲ್ಲಿ ಕಾಂಗ್ರೆಸ್ ದೃಢವಾಗಿ ಮುಂದುವರಿಯುವ ನಿರೀಕ್ಷೆಯಿದ್ದು, ಕಾಂಗ್ರೆಸ್ ಹಿರಿಯ ನಾಯಕ ಗಿರಿ ಶೋಲಂಕರ್ ಇಂದು ಸಂಜೆ ಚೆನ್ನೈಗೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಸೀಟು ಹಂಚಿಕೆ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 6:38 pm, Wed, 4 March 26

Source link

ಕೊಟ್ಟ ಭರವಸೆ ಈಡೇರಿಸಿದ ಡಿಕೆಶಿ: ರಾಮನಗರ ಜನರ ಬಹುದಿನಗಳ ಕನಸು ನನಸು – Kannada News | Ramalinga Reddy flag off BMTC vajra Buses Bengaluru to Ramanagara, here Is Route And Ticket Price details

ರಾಮನಗರ, (ಮಾರ್ಚ್ 04): ಸಿಲಿಕಾನ್‌ ಸಿಟಿ ಬೆಂಗಳೂರು (Bengaluru) ಸುತ್ತಲಿನ ಜಿಲ್ಲೆಗಳ ಉಪನಗರಗಳಿಗೂ ಈಗ ಬಿಎಂಟಿಸಿ (BMTC Bus) ಸೇವೆ ಆರಂಭಿಸಲಾಗಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಿಗಾಗಿ ಕಾದು ಸುಸ್ತಾಗಿದ್ದವರು ಬಿಎಂಟಿಸಿ ಮೂಲಕ ಸುಲಭವಾಗಿ ಬೆಂಗಳೂರಿಗೆ ಪ್ರಯಾಣಿಸಬಹುದು. ಈವರೆಗೂ ಕೇವಲ 40 ಕಿ.ಮೀ ದೂರದವರೆಗೂ ಸೇವೆ ಒದಗಿಸುತ್ತಿದ್ದ ಬಿಎಂಟಿಸಿ ಬಸ್‌ಗಳ ಸಂಚಾರ ವ್ಯಾಪ್ತಿಯನ್ನು ಈಗ 80ಕಿಮೀ.ಗೆ ವಿಸ್ತರಿಸಲಾಗಿದೆ. ಹೀಗಾಗಿ ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಗೂ ಬಿಎಂಟಿಸಿ ಸೇವೆ ಲಭ್ಯವಾಗಲಿದ್ದು, ಮೊದಲ ಹಂತದಲ್ಲಿ ರಾಜಧಾನಿಯಿಂದ ಕನಕಪುರ (Kanakapura), ರಾಮನಗರಕ್ಕೆ (Ramanagara) ಎಸಿ ಬಸ್‌ ಸೇವೆ ಆರಂಭಿಸಲಾಗಿದೆ. ಇದರಿಂದ ರಾಮನಗರ ಜನರ ಬಹುದಿನಗಳ ಕನಸು ನನಸಾಗಿದೆ. ಹಾಗಾದ್ರೆ, ಈ ಬಸ್‌ಗಳ ಮಾರ್ಗ? ಟಿಕೆಟ್‌, ಪಾಸ್‌ ದರ ಎಷ್ಟು? ಎಲ್ಲೆಲ್ಲಿ ನಿಲುಗಡೆಯಾಗಲಿದೆ? ಸಂಪೂರ್ಣ ವಿವರ ಈ ಕೆಳಗಿನಂತಿದೆ ನೋಡಿ.

ರಾಮನಗರ ಟು ಬೆಂಗಳೂರು ಬಸ್​​ಗೆ ಚಾಲನೆ

ರಾಮನಗರ ಟು ಬೆಂಗಳೂರು ಹವಾನಿಯಂತ್ರಿತ ವಜ್ರ ವಿಸ್ತಾರ ಬಸ್‌ಗಳಿಗೆ ಚಾಲನೆ ಸಿಕ್ಕಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಆರು ಹವಾನಿಯಂತ್ರಿತ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದರು. ಈ ಬಸ್​​ಗಳು ಪ್ರತಿನಿತ್ಯ ರಾಮನಗರದಿಂದ ಬೆಂಗಳೂರಿಗೆ ನಾನ್‌ಸ್ಟಾಪ್ ಸಂಚರಿಸಲಿದ್ದು, ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕಾಗಿ ಸಂಚರಿಸುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಇದರಿಂದ ಬೆಂಗಳೂರು ಸಂಪರ್ಕಕ್ಕಾಗಿ ಬಿಎಂಟಿಸಿ ಬಸ್ (BMTC Bus) ಬೇಡಿಕೆ ಇಟ್ಟಿದ್ದ ಸಾರ್ವಜನಿಕರ ಆಸೆಗೆ ಫಲ ಸಿಕ್ಕಿದ್ದು, ಫುಲ್ ಖುಷ್ ಆಗಿದ್ದಾರೆ.

ರಾಮನಗರದಿಂದ ಬೆಂಗಳೂರಿಗೆ, ಬನಶಂಕರಿಯಿಂದ ಕನಕಪುರದವರೆಗೆ ಈ ಸೇವೆ ಲಭ್ಯವಾಗಲಿದೆ. ವರ್ಷಗಳ ಕಾಲ ಬಿಎಂಟಿಸಿ ಬಸ್ ಸೇವೆಗಾಗಿ ಒತ್ತಾಯಿಸಿದ್ದ ಸಾರ್ವಜನಿಕರ ಬೇಡಿಕೆ ಇದೀಗ ಈಡೇರಿದ್ದು, ಜಿಲ್ಲೆಯ ಜನರಲ್ಲಿ ಹರ್ಷ ವ್ಯಕ್ತವಾಗಿದೆ. ಇನ್ನೂ ಈ ಒಂದು ಸೇವೆಯನ್ನ ಚನ್ನಪಟ್ಟಣವರೆಗೂ ವಿಸ್ತರಣೆ ಮಾಡಲು ಚಿಂತನೆ ನಡೆದಿದೆ ಎಂದು ತಿಳಿದಬಂದಿದೆ.

ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಭಾಗದ ಪ್ರಯಾಣಿಕರಿಗೂ ಬಿಎಂಟಿಸಿ ಗುಡ್ ನ್ಯೂಸ್: ಇನ್ಮುಂದೆ 80 ಕಿಮೀ ವ್ಯಾಪ್ತಿಯಲ್ಲಿ ಸಂಚಾರ!

 ಟಿಕೆಟ್ ದರ ಎಷ್ಟು?

ಕೆಬಿಎಸ್ (ಮೆಜೆಸ್ಟಿಕ್‌) ಟು ರಾಮನಗರ ನಡುವೆ ನಿತ್ಯ 6 ಬಸ್​ಗಳು ಸಂಚರಿಸಲಿದ್ದು, ಒಂದು ಕಡೆ ಟಿಕೆಟ್ ದರ 95 ರೂಪಾಯಿ. ಇನ್ನು ಬನಶಂಕರಿ ಟು ಕನಕಪುರಕ್ಕೆ 90.ರೂ ಟಿಕೆಟ್. ಇನ್ನು ದೈನಿಕ ಪಾಸ್-180 ರೂ., ಸಾಪ್ತಾಹಿಕ ಪಾಸ್-1000 ರೂ. ಹಾಗೂ ಮಾಸಿಕ ಪಾಸಿಗೆ 2700 ರೂ. ನಿಗದಿಪಡಿಸಲಾಗಿದೆ.

ಹಲವು ದಿನಗಳ ಬೇಡಿಕೆ

ಬೆಂಗಳೂರಿನಿಂದ ಬಿಡದಿಯವರೆಗೂ ಬಿಎಂಟಿಸಿ ಸೇವೆ ನೀಡುತ್ತಿತ್ತು. ಅಲ್ಲಿಂದ 12 ಕಿ.ಮೀ ದೂರದಲ್ಲಿರುವ ರಾಮನಗರದವರೆಗೂ ಬಿಎಂಟಿಸಿ ಸೇವೆ ವಿಸ್ತರಿಸಬೇಕು ಎಂದು ಸಾರ್ವಜನಿಕರು ಅನೇಕ ಬಾರಿ ಮನವಿ ಮಾಡಿದ್ದರು. ಆದರೆ, 40 ಕಿ.ಮೀ ವ್ಯಾಪ್ತಿಗಷ್ಟೇ ಸೀಮಿತಗೊಂಡಿದ್ದ ಬಿಎಂಟಿಸಿ ಸೇವೆಯಿಂದಾಗಿ ಈ ಸೌಲಭ್ಯ ದೊರೆತಿರಲಿಲ್ಲ. ಇದೇ ರೀತಿ ಬೆಂಗಳೂರಿನ ಸುತ್ತಲಿನ ಜಿಲ್ಲೆಗಳಿಂದ ನಿತ್ಯ ಸಾವಿರಾರು ಮಂದಿ ಕಾಲೇಜು, ಉದ್ಯೋಗಕ್ಕಾಗಿ ಬೆಂಗಳೂರಿಗೆ ಓಡಾಡುತ್ತಿದ್ದಾರೆ. ಇವರೆಲ್ಲರ ಪರವಾಗಿ ಬಿಎಂಟಿಸಿ ಬಸ್‌ ಸೇವೆಯನ್ನು ವಿಸ್ತರಿಸುವ ಬಗ್ಗೆ ಅನೇಕ ಬೇಡಿಕೆಗಳು ಸಲ್ಲಿಕೆಯಾಗಿದ್ದವು. ಇದಕ್ಕೆ ಬಿಎಂಟಿಸಿ ಸಮ್ಮತಿಸಿದ್ದು, ಮೊದಲ ಹಂತವಾಗಿ ಬೆಂಗಳೂರು ಟು ರಾಮನಗರಕ್ಕೆ ನಾನ್ ಸ್ಟಾಪ್ ವಜ್ರ ಬಸ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಬೆಂಗಳೂರು ದಕ್ಷಿಣ  ಹಿಂದಿನ ರಾಮನಗರ  ಜನರ ಬಹುದಿನಗಳ ಕನಸು ಅಂತೂ ನನಸಾಗಿದೆ.

ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಅವರು ಹಲವರ ವಿರೋಧದ ನಡುವೆಯೂ ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದು, ತುಮಕೂರಿನಂತೆ ಈಗ ರಾಮನಗರಕ್ಕೂ ಮೆಟ್ರೋ ವಿಸ್ತರಣೆಗೆ ಕಸರತ್ತು ನಡೆಸಿದ್ದಾರೆ.

ಒಟ್ಟಿನಲ್ಲಿ ಬಿಎಂಟಿಸಿ ಬಸ್ ಸೇವೆ ಆರಂಭವಾಗುವುದರಿಂದ ರಾಮನಗರ–ಬೆಂಗಳೂರು ನಡುವಿನ ಸಂಚಾರ ಇನ್ನಷ್ಟು ಸುಗಮವಾಗಲಿದ್ದು, ಬಹಳಷ್ಟು ಜನರಿಗೆ ಅನುಕೂಲವಾಗಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:23 pm, Wed, 4 March 26

Source link

ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ನೋಡಬಹುದಾದ ಸಿನಿಮಾಗಳಿವು – Kannada News | Movies, Web series and Documentary about Israel and Iran conflict

ಇರಾನ್ ಮತ್ತು ಇಸ್ರೇಲ್ ನಡುವೆ ಮತ್ತೊಮ್ಮೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ ಇಸ್ರೇಲ್​​ ನೆರವಿಗೆ ನಿಂತಿದ್ದು ಕಳೆದ ಕೆಲ ದಿನಗಳಿಂದಲೂ ಬಾಂಬ್ ದಾಳಿಗಳು ನಡೆಯುತ್ತಲೇ ಇವೆ. ಅಂದಹಾಗೆ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಇಂದು-ನಿನ್ನೆಯದ್ದಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ. ಇರಾನ್ ಮತ್ತು ಇಸ್ರೇಲ್ ಸಂಘರ್ಷದ ಬಗ್ಗೆ ಡಾಕ್ಯುಮೆಂಟರಿಗಳು ಕೆಲ ಸಿನಿಮಾಗಳು ಸಹ ನಿರ್ಮಾಣ ಆಗಿವೆ. ಇವುಗಳ ಮೂಲಕ ಪ್ರಸ್ತುತ ಪರಿಸ್ಥಿತಿಯನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಗೆಗೆ ನಿರ್ಮಾಣಗೊಂಡಿರುವ ಡಾಕ್ಯುಮೆಂಟರಿ ಮತ್ತು ಸಿನಿಮಾಗಳ ಪಟ್ಟಿ ಇಲ್ಲಿದೆ…

ಸಿನಿಮಾ ಮತ್ತು ವೆಬ್ ಸರಣಿ

ಹಿಂದಿ ಸಿನಿಮಾ ‘ಟೆಹ್ರಾನ್’ 2012 ರಲ್ಲಿ ನಡೆದ ಇಸ್ರೇಲಿ ಅಧಿಕಾರಿಗಳ ಮೇಲಿನ ದಾಳಿಯ ಕತೆಯನ್ನು ಹೊಂದಿದೆ. ಆದರೆ ಇದು ಸಂಪೂರ್ಣ ಸತ್ಯ ಘಟನೆ ಆಧರಿತ ಸಿನಿಮಾ ಅಲ್ಲ. ಸಿನಿಮಾನಲ್ಲಿ ಜಾನ್ ಅಬ್ರಹಾಂ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಜೀ5 ಮತ್ತು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

ಫೌಡಾ (Fauda) ವೆಬ್ ಸರಣಿ ಮುಖ್ಯವಾಗಿ ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಬಗ್ಗೆ ಇದ್ದರೂ, ನಂತರದ ಸೀಸನ್‌ಗಳಲ್ಲಿ ಇರಾನ್ ಹೇಗೆ ಈ ಸಂಘರ್ಷಕ್ಕೆ ಹಣಕಾಸು ಮತ್ತು ಬೆಂಬಲ ನೀಡುತ್ತದೆ ಎಂಬುದನ್ನು ತೋರಿಸಲಾಗಿದೆ. ಇದನ್ನು ನೆಟ್​​ಫ್ಲಿಕ್ಸ್​ನಲ್ಲಿ ವೀಕ್ಷಿಸಬಹುದಾಗಿದೆ.

ಆಪಲ್ ಟಿವಿಯಲ್ಲಿ ಸ್ಟ್ರೀಮ್ ಆಗುವ ‘ಟೆಹ್ರಾನ್’ ವೆಬ್ ಸರಣಿ ಇಸ್ರೇಲ್ ಮತ್ತು ಇರಾನ್ ಸಂಘರ್ಷದ ಬಗ್ಗೆ ಅತ್ಯಂತ ನೇರವಾದ ಚಿತ್ರಣ ನೀಡುವ ಸರಣಿ ಎನ್ನಲಾಗುತ್ತದೆ. ಇರಾನ್‌ನ ಪರಮಾಣು ರಿಯಾಕ್ಟರ್ ಅನ್ನು ನಿಷ್ಕ್ರಿಯಗೊಳಿಸಲು ಟೆಹ್ರಾನ್‌ಗೆ ಹೋಗುವ ಮೊಸಾದ್ (Mossad) ಹ್ಯಾಕರ್-ಏಜೆಂಟ್‌ನ ಕಥೆ ಇದು. 2025/2026 ರಲ್ಲಿ ಇದರ ಮೂರನೇ ಸೀಸನ್ ಬಿಡುಗಡೆ ಆಗಿದೆ.

ದಿ ಏಂಜೆಲ್ (The Angel) ಇದು ಇಸ್ರೇಲ್ ಅನ್ನು ಆಕಸ್ಮಿಕ ದಾಳಿಯಿಂದ ರಕ್ಷಿಸಿದ ಡಬಲ್ ಏಜೆಂಟ್ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ‘ರೆಡ್ ಸೀ ಡೈವಿಂಗ್ ರೆಸಾರ್ಟ್’ (Red Sea Diving Resort) ಶತ್ರು ರಾಷ್ಟ್ರಗಳ ಭೂಮಿಯಲ್ಲಿ ಇಸ್ರೇಲ್​​ನ ವಿಶೇಷ ಪಡೆ ಮೊಸಾದ್ ಹೇಗೆ ಸಾಹಸಮಯ ಕಾರ್ಯಾಚರಣೆ ನಡೆಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇವುಗಳು ಮಾತ್ರವಲ್ಲದೆ, ಆಸ್ಕರ್ ವಿಜೇತ ‘ಆರ್ಗೊ’, ‘ಮ್ಯೂನಿಚ್’ ಇನ್ನೂ ಕೆಲವು ಸಿನಿಮಾಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಇಸ್ರೇಲ್​​ನ ಮೋಸಾದ್ ಬಗ್ಗೆ, ಇರಾನಿನ ಆಂತರಿಕ ಸಂಘರ್ಷಗಳ ಬಗ್ಗೆ ಕತೆಗಳನ್ನು ಒಳಗೊಂಡಿವೆ.

ಇದನ್ನೂ ಓದಿ:ಇರಾನ್- ಇಸ್ರೇಲ್ ಯುದ್ಧದಿಂದ ತೈಲ ಬೆಲೆ ಏರಿಕೆ ಸುದ್ದಿ: ಭಟ್ಕಳದಲ್ಲಿ ಡೀಸೆಲ್, ಪೆಟ್ರೋಲ್​​ಗೆ ಮುಗಿಬಿದ್ದ ಜನ

ಡಾಕ್ಯುಮೆಂಟರಿ

ಇಸ್ರೇಲ್ ಅಂಡ್ ಇರಾನ್: ದಿ ಹಿಡನ್ ವಾರ್ (Israel and Iran: The Hidden War – 2022): ಇಸ್ರೇಲ್ ಮತ್ತು ಇರಾನ್ ನಡುವೆ ದಶಕಗಳಿಂದ ನಡೆಯುತ್ತಿರುವ ಗುಪ್ತ ಸಂಘರ್ಷವನ್ನು ಈ ಸಾಕ್ಷ್ಯಚಿತ್ರವು ಪರಿಶೋಧಿಸುತ್ತದೆ. ಇದರಲ್ಲಿ ಗುಪ್ತಚರ ಕಾರ್ಯಾಚರಣೆಗಳು, ಪರಮಾಣು ಉದ್ವಿಗ್ನತೆಗಳು ಮತ್ತು ಎರಡೂ ದೇಶಗಳ ನಡುವಿನ ಪ್ರತೀಕಾರದ ದಾಳಿಗಳ ಬಗ್ಗೆ ವಿವರಿಸಲಾಗಿದೆ.

ರಿಮೇಕಿಂಗ್ ದಿ ಮಿಡಲ್ ಈಸ್ಟ್: ಇಸ್ರೇಲ್ ವರ್ಸಸ್ ಇರಾನ್ (Remaking the Middle East: Israel vs. Iran): ಇದು ಸುಮಾರು 1 ಗಂಟೆ 54 ನಿಮಿಷಗಳ ವಿಶೇಷ ಸಾಕ್ಷ್ಯಚಿತ್ರ. ಇರಾನ್‌ನ ಪರಮಾಣು ಕಾರ್ಯಕ್ರಮ ಮತ್ತು ಪ್ರಾಕ್ಸಿ ಯುದ್ಧಗಳು ಹೇಗೆ ನೇರ ಸಂಘರ್ಷಕ್ಕೆ ಕಾರಣವಾದವು ಮತ್ತು ಈ ಪೈಪೋಟಿಯಲ್ಲಿ ಅಮೆರಿಕದ ಪಾತ್ರವೇನು ಎಂಬುದನ್ನು ಇದು ತೋರಿಸುತ್ತದೆ. ನಿಜ ದೃಶ್ಯಗಳು, ಸಂದರ್ಶನಗಳನ್ನು ಇದು ಒಳಗೊಂಡಿದೆ.

ದಿ ಬಿಗ್ ವಾರ್: ಇರಾನ್, ಲೆಬನಾನ್ ಅಂಡ್ ಇಸ್ರೇಲ್ (The Big War: Iran, Lebanon and Israel): ಲೆಬನಾನ್‌ನಲ್ಲಿ ಇರಾನ್‌ನ ಪ್ರಭಾವ ಮತ್ತು ಇಸ್ರೇಲ್‌ನೊಂದಿಗಿನ ಉದ್ವಿಗ್ನತೆಯಿಂದಾಗಿ ಬೆಳೆಯುತ್ತಿರುವ ಪ್ರಾದೇಶಿಕ ಸಂಘರ್ಷದ ಮೇಲೆ ಈ ಸಾಕ್ಷ್ಯಚಿತ್ರವು ಬೆಳಕು ಚೆಲ್ಲುತ್ತದೆ.

12 ಡೇಸ್ ದಟ್ ಶೂಕ್ ಇರಾನ್ (12 Days That Shook Iran): ಅಲ್ ಜಜೀರಾ ವಾಹಿನಿಯ ಈ ಸಾಕ್ಷ್ಯಚಿತ್ರವು 2025 ರ ಇಸ್ರೇಲ್-ಇರಾನ್ ಸಂಘರ್ಷದಿಂದ ಜನಸಾಮಾನ್ಯರ ಮೇಲೆ ಉಂಟಾದ ಪರಿಣಾಮದ ಬಗ್ಗೆ ವರದಿ ಇದೆ. ಇದು ಜನಪ್ರಿಯ ಸಾಕ್ಷ್ಯಚಿತ್ರ ಸಹ ಆಗಿದೆ.

ಇರಾನ್, ಇಸ್ರೇಲ್ ಅಂಡ್ ದಿ ಬಾಂಬ್ (Iran, Israel and the Bomb): ಈ ಎರಡು ರಾಷ್ಟ್ರಗಳ ನಡುವಿನ ಕಳೆದ ಮೂವತ್ತು ವರ್ಷಗಳ ಪರಮಾಣು ಮತ್ತು ವ್ಯೂಹಾತ್ಮಕ ಉದ್ವಿಗ್ನತೆಗಳ ಕುರಿತಾದ ಸಾಕ್ಷ್ಯಚಿತ್ರ ಇದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SA vs NZ, T20 Semi Final Live Score: ಸೆಮಿಫೈನಲ್​ ಕಾಳಗಕ್ಕೆ ಕ್ಷಣಗಣನೆ – Kannada News | South Africa vs New Zealand1st Semi Final Live Cricket Score ICC Men T20 World Cup 2026 SA vs NZ Today Match Latest News and Updates in Kannada

LIVE NEWS & UPDATES

  • 04 Mar 2026 06:19 PM (IST)

    SA vs NZ, T20 Semi Final Live: ಮೊದಲ ಸೆಮಿಫೈನಲ್ ಪಂದ್ಯ

    2026 ರ ಟಿ20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

2026 ರ ಟಿ20 ವಿಶ್ವಕಪ್​ನ ನಾಕೌಟ್ ಸುತ್ತು ಇಂದಿನಿಂದ ಆರಂಭವಾಗಿದೆ. ಅದರಂತೆ ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಎರಡೂ ತಂಡಗಳು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ದಕ್ಷಿಣ ಆಫ್ರಿಕಾವನ್ನು ಐಡೆನ್ ಮಾರ್ಕ್ರಾಮ್ ಮತ್ತು ನ್ಯೂಜಿಲೆಂಡ್ ತಂಡವನ್ನು ಮಿಚೆಲ್ ಸ್ಯಾಂಟ್ನರ್ ಮುನ್ನಡೆಸುತ್ತಿದ್ದಾರೆ. ಎರಡೂ ತಂಡಗಳು ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಹೀಗಾಗಿ ಉಭಯ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನೀಡುವ ಇರಾದೆಯಲ್ಲಿವೆ.

Published On – Mar 04,2026 6:19 PM

Source link

‘ಟಾಕ್ಸಿಕ್’ ರಿಲೀಸ್ ಮುಂದೂಡಿಕೆ: ಲಾಭ ಪಡೆಯಲು ಮುಂದಾದ ಪವನ್ ಕಲ್ಯಾಣ್ – Kannada News | Pawan Kalyan’s Ustad Bhagat Singh movie may release on March 19

ಯಶ್ (Yash) ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ ಬಿಡುಗಡೆ ಮುಂದೂಡಲ್ಪಟ್ಟಿದೆ. ಮಾರ್ಚ್ 19ಕ್ಕೆ ಬಿಡುಗಡೆ ಆಗಬೇಕಿದ್ದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ. ಆದರೆ ಇದೀಗ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿರುವುದರಿಂದ ಅದರ ಲಾಭ ಪಡೆಯಲು ಕೆಲ ಸಿನಿಮಾಗಳು ಮುಂದಾಗಿವೆ. ಈಗಾಗಲೇ ಡಾರ್ಲಿಂಗ್ ಕೃಷ್ಣ ಅವರು ತಮ್ಮ ‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಮಾರ್ಚ್ 19ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದೀಗ ತೆಲುಗು ಸಿನಿಮಾ ಒಂದು ಸಹ ಈಗಾಗಲೇ ಘೋಷಣೆಯಾಗಿದ್ದ ದಿನಾಂಕಕ್ಕಿಂತಲೂ ಮುಂಚಿತವಾಗಿ ಬಿಡುಗಡೆ ಮಾಡಲು ಯೋಜನೆ ಹಾಕಿದ್ದಾರೆ.

ಆಂಧ್ರ ಡಿಸಿಎಂ ಸಹ ಆಗಿರುವ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಹಲವು ಬಾರಿ ರಿಲೀಸ್ ಮುಂದೂಡಿಕೆಗಳ ಬಳಿಕ ಅಂತಿಮವಾಗಿ ಮಾರ್ಚ್ 26ರಂದು ಬಿಡುಗಡೆ ಆಗುವುದಾಗಿ ಘೋಷಿಸಲಾಗಿತ್ತು. ಮಾರ್ಚ್ 19 ರಂದು ‘ಟಾಕ್ಸಿಕ್’ ಬಿಡುಗಡೆ ಇದ್ದ ಕಾರಣಕ್ಕಾಗಿಯೇ ಒಂದು ವಾರ ತಡವಾಗಿ ಸಿನಿಮಾವನ್ನು ಬಿಡುಗಡೆ ಮಾಡುವ ನಿರ್ಧಾರ ಮಾಡಲಾಗಿತ್ತು. ಆದರೆ ಈಗ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿರುವ ಕಾರಣ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾವನ್ನು ಒಂದು ವಾರ ಮುಂಚಿತವಾಗಿ ಅಂದರೆ ಮಾರ್ಚ್ 19ರಂದೇ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಮಾರ್ಚ್ 19 ಹಿಂದೂಗಳ ಹೊಸ ವರ್ಷವಾದ ಯುಗಾದಿ ಹಬ್ಬವಿದ್ದು ಸತತ ರಜೆ ಸಹ ಇದೆ. ಹಾಗಾಗಿ ಚಿತ್ರತಂಡಗಳು ಆ ದಿನಾಂಕದ ಮೇಲೆ ಕಣ್ಣಿಟ್ಟಿವೆ. ಮೊದಲಿಗೆ ‘ಟಾಕ್ಸಿಕ್’ ಸಿನಿಮಾ ಸಹ ಇದೇ ಕಾರಣಕ್ಕೆ ಮಾರ್ಚ್ 19ನ್ನು ಬಿಡುಗಡೆಗೆ ಆಯ್ಕೆ ಮಾಡಿತ್ತು. ಆದರೆ ಈಗ ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಭೀತಿಯ ಕಾರಣಕ್ಕೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.

ಇದನ್ನೂ ಓದಿ:ಪವನ್ ಕಲ್ಯಾಣ್ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಅದೇ ದಿನ ಹಿಂದಿಯ ಬಹು ನಿರೀಕ್ಷಿತ ಸಿನಿಮಾ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ದಕ್ಷಿಣದಲ್ಲಿ ‘ಧುರಂಧರ್ 2’ ಸಿನಿಮಾಕ್ಕೆ ಹೆಚ್ಚಿನ ಹೈಪ್ ಸಾಮಾನ್ಯವಾಗಿ ಇರುವುದಿಲ್ಲವಾದ್ದರಿಂದ ಪವನ್ ಕಲ್ಯಾಣ್ ಅವರು ‘ಧುರಂಧರ್ 2’ ಎದುರು ತಮ್ಮ ಸಿನಿಮಾ ಬಿಡುಗಡೆಗೆ ಮುಂದಾಗಿದ್ದಾರೆ. ಅಲ್ಲದೆ, ‘ಟಾಕ್ಸಿಕ್’ ರೀತಿ ಅವರದ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಅವರ ಸಿನಿಮಾ ಮಾರುಕಟ್ಟೆ ದಕ್ಷಿಣ ಭಾರತ ಮಾತ್ರವೇ ಆಗಿರುವ ಕಾರಣ ಅವರಿಗೆ ‘ಧುರಂಧರ್ 2’ ಎದುರು ಸ್ಪರ್ಧೆ ಮಾಡುವುದು ಕಷ್ಟವೇನೂ ಅಲ್ಲ.

‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ, ಪವನ್ ಅವರು ಚುನಾವಣೆಗೆ ಮುಂಚೆ ಚಿತ್ರೀಕರಣ ಆರಂಭಿಸಿದ ಸಿನಿಮಾಗಳಲ್ಲಿ ಕೊನೆಯ ಸಿನಿಮಾ ಆಗಿದೆ. ಈ ಸಿನಿಮಾವನ್ನು ಅವರ ಆಪ್ತ ಹರೀಶ್ ಶಂಕರ್ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs ENG, T20 Semi Final Live Streaming: ಭಾರತ- ಇಂಗ್ಲೆಂಡ್ ಸೆಮೀಸ್ ಕಾಳಗ ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ? – Kannada News | India vs England Semi Final Live Streaming When and Where to Watch IND vs ENG T20 World Cup Cricket Match Today in Kannada

2026 ರ ಟಿ20 ವಿಶ್ವಕಪ್‌ನ ಸೆಮಿಫೈನಲ್ (T20 World Cup 2026 Semifinal) ಪಂದ್ಯಗಳು ಇಂದಿನಿಂದ ಆರಂಭವಾಗಲಿವೆ. ಇಂದು ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌ ತಂಡವನ್ನು ಎದುರಿಸಲಿದೆ. ನಾಳೆ ಆತಿಥೇಯ ಭಾರತ ತಂಡವನ್ನು ಇಂಗ್ಲೆಂಡ್‌ (India vs England) ಎದುರಿಸಲಿದೆ. ಒಂದೆಡೆ ಭಾರತ ತಂಡ ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿತ್ತು. ಇತ್ತ ಇಂಗ್ಲೆಂಡ್‌ ಒಂದು ಪಂದ್ಯದಲ್ಲಿ ಸೋತಿತ್ತಾದರೂ ಸೂಪರ್ 8 ಸುತ್ತಿಗೆ ಎಂಟ್ರಿಕೊಟ್ಟಿತ್ತು. ಸೂಪರ್ 8 ಸುತ್ತಿನಲ್ಲಿ ಭಾರತ 1 ಪಂದ್ಯವನ್ನು ಸೋತು, 2 ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಟಿಕೆಟ್ ಪಡೆದರೆ, ಇತ್ತ ಇಂಗ್ಲೆಂಡ್‌ ಆಡಿದ ಮೂರು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ಹೀಗಾಗಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿದೆ. ಹೀಗಾಗಿ ಈ ಹೈವೋಲ್ಟೇಜ್ ಕದನದ ಪೂರ್ಣ ವಿವರ ಇಲ್ಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಯಾವಾಗ ನಡೆಯಲಿದೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಫೆಬ್ರವರಿ 5 ರಂದು ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಎಲ್ಲಿ ನಡೆಯಲಿದೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಎಷ್ಟು ಗಂಟೆಗೆ ಆರಂಭ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುವುದು ಹೇಗೆ?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಸೆಮಿಫೈನಲ್‌ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್​ನ ವಿವಿಧ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಹಾಟ್ ಸ್ಟಾರ್​ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

IND vs SA: ಟಿ20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ

ಉಭಯ ತಂಡಗಳು

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.

ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ವಯಸ್ಸು 90 ದಾಟಿದ್ರೂ ರಸ್ತೆಯಲ್ಲಿ ಬಿಂದಾಸ್ ಆಗಿ ಕಾರು ಓಡಿಸುವ ಅಜ್ಜಿ – Kannada News | An elderly woman who drives a car with confidence on the road despite being over 90 years old

ವಯಸ್ಸು ಆಗುತ್ತಿದ್ದಂತೆ ದೇಹದಲ್ಲಿ ಶಕ್ತಿ ಇರಲ್ಲ. ದಿನನಿತ್ಯದ ಕೆಲಸಗಳಿಗೂ ಇನ್ನೊಬ್ಬರ ಅವಲಂಬಿಸಬೇಕಾದ ಪರಿಸ್ಥಿತಿ. ಆದರೆ ಈ ವೃದ್ಧೆ ಮಹಿಳೆ (old woman) ಮಾತ್ರ ಈ ಮಾತಿಗೆ ತದ್ವಿರುದ್ಧವಾಗಿದ್ದಾರೆ. ವಯಸ್ಸು 90 ಆದ್ರೂ ಈ ಅಜ್ಜಿಯ ಉತ್ಸಾಹಕ್ಕೇನು ಕಮ್ಮಿ ಇಲ್ಲ. ತಮ್ಮ ಇಳಿವಯಸ್ಸಿನಲ್ಲಿಯೂ ಜಮ್ಮುಕಾಶ್ಮೀರದ (Jammu Kashmir) ರಸ್ತೆಗಳಲ್ಲಿ ಆಲ್ಟೋ ಕಾರನ್ನು ಬಿಂದಾಸ್ ಆಗಿ ಓಡಿಸುತ್ತಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೃದ್ಧೆಯ ಉತ್ಸಾಹ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ಟೈಮ್ಸ್‌ ನೌ (Times Now) ಹೆಸರಿನ ಎಕ್ಸ್ ಖಾತೆಯಲ್ಲಿ 90 ರ ವೃದ್ಧೆ ಮಹಿಳೆಯೊಬ್ಬರು ಕಾರು ಓಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬ್ಲಾಗರ್ ವಿಶಾಲ್ ಅವರು ಅಜ್ಜಿ ಕಾರು ಓಡಿಸುವ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೃದ್ಧೆಯನ್ನು ಮಾತನಾಡಿಸಿದ ವೇಳೆ ಅವರ 90ಕ್ಕಿಂತ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ರಸ್ತೆಗಳಲ್ಲಿ ಸಲೀಸಾಗಿ ಕಾರು ಓಡಿಸುವುದನ್ನು ನೋಡಿ ಬ್ಲಾಗರ್ ಶಾಕ್ ಆಗಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ

ಮಾರ್ಚ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋವು ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಅವರು ಮಿನಿ ಹಾರ್ಟ್ ಅಟ್ಯಾಕ್ ಮಾಡಿ ಎಲ್ಲರ ಹೃದಯ ಗೆದ್ದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಕಣ್ಣಿನಿಂದಲೇ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಎಕ್ಸ್ಪರ್ಟ್ ಗಳಿಗೂ ಸೆಡ್ಡು ಹೊಡೆಯುವಂತಿದ್ದಾರೆ ಈ ಅಜ್ಜಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾರ್ಚ್ 11ರಂದು ತಮಿಳುನಾಡಿಗೆ ಪ್ರಧಾನಿ ಮೋದಿ ಭೇಟಿ; ಬಿಜೆಪಿಯ ಅದ್ಧೂರಿ ಸಾರ್ವಜನಿಕ ಸಭೆಯಲ್ಲಿ ಭಾಗಿ – Kannada News | PM Narendra Modi to visit Tamil Nadu on March 11

ತಿರುಚ್ಚಿ, ಮಾರ್ಚ್ 4: ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾರ್ಚ್ 11ರಂದು ತಿರುಚ್ಚಿಯಲ್ಲಿ ನಡೆಯಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಭವ್ಯ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ತಮಿಳುನಾಡಿನಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಅವರು ತಮಿಳುನಾಡಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ.

ಮುಂದಿನ ವಾರ ತಮಿಳುನಾಡು ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ತಮಿಳುನಾಡು ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವುದರಿಂದ ವಿವಿಧ ರಾಜಕೀಯ ಪಕ್ಷಗಳು ತೀವ್ರ ಚುನಾವಣಾ ಕೆಲಸದಲ್ಲಿ ತೊಡಗಿವೆ. ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವುದರಿಂದ ತಮಿಳುನಾಡಿನ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಲೆಕ್ಕಾಚಾರದಲ್ಲಿ ನಿರತವಾಗಿವೆ. ಕಳೆದ ಚುನಾವಣೆಯಂತೆ, ಡಿಎಂಕೆ ಇಂಡಿಯ ಮೈತ್ರಿಕೂಟದೊಂದಿಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದೆ.

ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು; ಭಾರತೀಯರಿಗಾಗಿ ನಿಯಂತ್ರಣ ಕೊಠಡಿ ಸ್ಥಾಪಿಸಿದ ಮೋದಿ ಸರ್ಕಾರ

ಮತ್ತೊಂದೆಡೆ, ಎಐಎಡಿಎಂಕೆ ಬಿಜೆಪಿ, ಪಿಎಂಕೆ, ಎಎಂಎಂಕೆ, ಟಿಎಂಸಿ, ಇಂಡಿಯನ್ ಡೆಮಾಕ್ರಟಿಕ್ ಪಾರ್ಟಿ, ನ್ಯೂ ಜಸ್ಟೀಸ್ ಪಾರ್ಟಿ ಮತ್ತು ಪೆರುಂತಲೈವರ್ ಮಕ್ಕಳ್ ಕಚ್ಚಿ ಜೊತೆ ಬಲವಾದ ಮೈತ್ರಿಯನ್ನು ದೃಢಪಡಿಸಿದೆ. ಎರಡೂ ಪಕ್ಷಗಳು ಮೈತ್ರಿಯನ್ನು ದೃಢಪಡಿಸಿದ್ದರೂ ಅವರು ಇನ್ನೂ ಸೀಟು ಹಂಚಿಕೆಯನ್ನು ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಮಾರ್ಚ್ 2ರಂದು ದೆಹಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ವೇಳೆಯೇ ಇರಾನ್ ಮೇಲೆ ದಾಳಿಗೆ ನಡೆದಿತ್ತಾ ಪ್ಲಾನ್? ಸೀಕ್ರೆಟ್ ಬಯಲು ಮಾಡಿದ ಇಸ್ರೇಲ್

ಮಾರ್ಚ್ 1ರಂದು ತಮಿಳುನಾಡಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 11ರಂದು ಮತ್ತೆ ತಮಿಳುನಾಡಿಗೆ ತೆರಳಲಿದ್ದಾರೆ. ತಿರುಚ್ಚಿಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಪರವಾಗಿ ನಡೆಯಲಿರುವ ಭವ್ಯ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಸೇರಿದಂತೆ ಮೈತ್ರಿ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version