ಸಾರ್ವಜನಿಕರ ಗಮನಕ್ಕೆ: ಮೇ 9ರಂದು ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ – Kannada News | Disruption to bus services over 10 thousand Bus Book For yediyurappa utsava On May 9th

ಚಿತ್ರದುರ್ಗ, (ಮೇ 06): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (bs yediyurappa ) ಅವರ 50 ವರ್ಷದ ರಾಜಕೀಯ ಜೀವನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮೇ 9ರಂದು ಚಿತ್ರದುರ್ಗದಲ್ಲಿ ಭವ್ಯ “ಯಡಿಯೂರಪ್ಪ ಅಭಿಮಾನೋತ್ಸವ” (yediyurappa utsava) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಾದಾರ ಚನ್ನಯ್ಯ ಮಠದ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ 10 ಲಕ್ಷ ಜನ ಸೇರುವ ನಿರೀಕ್ಷೆಗಳಿವೆ. ಬೇರೆ ಬೇರೆ ಜಿಲ್ಲೆಗಳಿಂದ ಜನರನ್ನು ಕರೆತರಲು 10 ಸಾವಿರ ಬಸ್​​​ಗಳನ್ನ ಬುಕ್ ಮಾಡಲಾಗಿದೆ. ಹೀಗಾಗಿ ಸಾಮಾನ್ಯವಾಗಿ ಮೇ 9ರಂದು ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಸಾರ್ವಜನಿಕರು ಅಂದು ಪ್ರಯಾಣವನ್ನು ಮುಂದೂಡುವುದು ಒಳಿತು.

ಇದನ್ನೂ ನೋಡಿ: ಮೇ 9ರಂದು ಚಿತ್ರದುರ್ಗದಲ್ಲಿ ಯಡಿಯೂರಪ್ಪೋತ್ಸವ, ಅಮಿತ್‌ ಶಾ ಭಾಗಿ ಸಾಧ್ಯತೆ

Source link

Apply Now: ಸ್ಟ್ರೈಡ್ಸ್ ಫಾರ್ಮಾ ಸಂಸ್ಥೆಯಲ್ಲಿ ಕೆಲಸದ ಜೊತೆಗೆ ಉಚಿತ ಪದವಿ ಪಡೆಯುವ ಸುವರ್ಣಾವಕಾಶ! – Kannada News | Strides Pharma Science: Free B.Voc Student Trainee Jobs in Bengaluru via Mangaluru Interview

ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿನ ಉದ್ಯೋಗಕ್ಕಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಡಳಿತ ಭವನದಲ್ಲಿ ಈ ನೇಮಕಾತಿ ಪ್ರಕ್ರಿಯೆಯು ನಡೆಯಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಬೆಂಗಳೂರಿನ ‘ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಲಿಮಿಟೆಡ್’ ಸಂಸ್ಥೆಯು ಖಾಲಿ ಇರುವ ‘ಸ್ಟೂಡೆಂಟ್ ಟ್ರೈನಿ’ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಐಟಿಐ, ಪಿಯುಸಿ, ಡಿಪ್ಲೋಮಾ ಅಥವಾ ಯಾವುದೇ ಪದವಿ ಪೂರ್ಣಗೊಳಿಸಿರುವ 18 ರಿಂದ 25 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಕೆಲಸದ ಸ್ಥಳವನ್ನು ನಿಗದಿಪಡಿಸಲಾಗಿದೆ.

ಈ ನೇಮಕಾತಿಯ ವಿಶೇಷತೆಯೆಂದರೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯ ವತಿಯಿಂದ ಉಚಿತವಾಗಿ ಬಿ.ವಾಕ್ (B.Voc) ಪದವಿ ಕೋರ್ಸ್ ಕಲಿಯುವ ಅವಕಾಶವನ್ನು ಒದಗಿಸಲಾಗುತ್ತದೆ. ಇದರೊಂದಿಗೆ ಉಚಿತ ಊಟ, ವಸತಿ ಸೌಲಭ್ಯ ಹಾಗೂ ಆರೋಗ್ಯ ವಿಮೆಯ ಸವಲತ್ತುಗಳನ್ನು ಸಹ ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ಆಸಕ್ತ ಅಭ್ಯರ್ಥಿಗಳು ದಿನಾಂಕ 12-05-2026ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:30ರ ಒಳಗೆ ಮಂಗಳೂರಿನ ಪಡೀಲ್‌ನಲ್ಲಿರುವ ಪ್ರಜಾ ಸೌಧದ ನೆಲಮಹಡಿಯ ಕೊಠಡಿ ಸಂಖ್ಯೆ 04ಕ್ಕೆ ಭೇಟಿ ನೀಡಿ ಸಂದರ್ಶನದಲ್ಲಿ ಭಾಗವಹಿಸಬಹುದು. ಈ ಸಂದರ್ಶನ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು 0824-2457139 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ ‘ದಳಪತಿ’ ಸರ್ಕಾರಕ್ಕೆ ಕೈ ಬಲ: ಟಿವಿಕೆ ಕಚೇರಿಯಲ್ಲಿ ವಿಜಯ್ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು – Kannada News | Indian National Congress Extends Support to Tamilaga Vettri Kazhagam After Meeting Vijay in Chennai

ಚೆನ್ನೈ, ಮೇ 06: ತಮಿಳುನಾಡು ರಾಜಕೀಯದಲ್ಲಿ ಆಘಾತಕಾರಿ ಹಾಗೂ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದ್ದು, ನಟ-ರಾಜಕಾರಣಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಕಾಂಗ್ರೆಸ್ ತನ್ನ ಪೂರ್ಣ ಬೆಂಬಲವನ್ನು ಘೋಷಿಸಿದೆ. ಚೆನ್ನೈನಲ್ಲಿರುವ ಟಿವಿಕೆ ಪ್ರಧಾನ ಕಚೇರಿಯಲ್ಲಿ ನಡೆದ ಮಹತ್ವದ ಭೇಟಿಯಲ್ಲಿ ತಮಿಳುನಾಡು ಕಾಂಗ್ರೆಸ್ ಸಮಿತಿಯ ಮುಖಂಡರು ವಿಜಯ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ತಮಿಳುನಾಡು ಕಾಂಗ್ರೆಸ್ ಸಮಿತಿ (TNCC) ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷ (CLP) ಒಮ್ಮತದಿಂದ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಲು ನಿರ್ಧರಿಸಿವೆ. ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲು ಬೇಕಾದ ಅಗತ್ಯ ಸಂಖ್ಯಾಬಲವನ್ನು ಒದಗಿಸಲು ಕಾಂಗ್ರೆಸ್ ಸಿದ್ಧವಿದ್ದು, ಈ ಸಂಬಂಧ ಅಧಿಕೃತ ಮಾತುಕತೆಗಳು ಪೂರ್ಣಗೊಂಡಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Emergency Credit Line Guarantee Scheme- ಏರ್​ಲೈನ್ಸ್, ಎಂಎಸ್​ಎಂಇಗಳಿಗೆ ಬೆಂಬಲಿಸುವ ಇಸಿಎಲ್​ಜಿಎಸ್ 5.0 ಸ್ಕೀಮ್​ಗೆ ಅನುಮೋದನೆ – Kannada News | ECLGS 5.0 Approved: India Extends Vital Financial Support to MSMEs & Airlines Amidst Global Crisis

ಇಸಿಎಲ್​ಜಿಎಸ್ ಯೋಜನೆImage Credit source: AI/Mediaforge/TV9

ನವದೆಹಲಿ, ಮೇ 6: ಪಶ್ಚಿಮ ಏಷ್ಯಾ (West Asia) ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಮತ್ತು ದೇಶದ ಉದ್ಯಮಗಳಿಗೆ ಆಸರೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಕಷ್ಟದಲ್ಲಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು) ಹಾಗೂ ವಿಮಾನಯಾನ ಸಂಸ್ಥೆಗಳಿಗೆ (Airlines) ನೆರವಾಗಲು ‘ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್’ನ 5ನೇ ಹಂತಕ್ಕೆ (ECLGS 5.0) ಅನುಮೋದನೆ ನೀಡಿದೆ.

ಇಸಿಎಲ್​ಜಿಎಸ್ ಯೋಜನೆಯ ಪ್ರಮುಖ ಉದ್ದೇಶ

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಪೂರೈಕೆ ಸರಪಳಿ (Supply Chain) ಏರುಪೇರಾಗಿದೆ ಮತ್ತು ವಿಮಾನ ಇಂಧನ ದರ ಹೆಚ್ಚಳ ಸೇರಿದಂತೆ ಉದ್ಯಮಗಳ ನಿರ್ವಹಣಾ ವೆಚ್ಚ ಅಧಿಕವಾಗಿದೆ. ಇದರಿಂದ ಉಂಟಾಗಿರುವ ಅಲ್ಪಾವಧಿಯ ನಗದು ಕೊರತೆ (Liquidity mismatch) ಮತ್ತು ಆರ್ಥಿಕ ಒತ್ತಡವನ್ನು ನಿವಾರಿಸಲು, ಉದ್ಯೋಗ ನಷ್ಟವನ್ನು ತಡೆಯಲು ಹಾಗೂ ವ್ಯಾಪಾರ ಮುಂದುವರಿಕೆಗೆ ನೆರವಾಗಲು ಸರ್ಕಾರ ಈ ಯೋಜನೆಯನ್ನು ತಂದಿದೆ. ಇದರ ಪ್ರಮುಖಾಂಶಗಳು ಇಂತಿವೆ:

  • ಒಟ್ಟು ಸಾಲದ ಗುರಿ: ಈ ಯೋಜನೆಯ ಮೂಲಕ ಮಾರುಕಟ್ಟೆಯಲ್ಲಿ ಒಟ್ಟು 2,55,000 ಕೋಟಿ ರೂ ಹೆಚ್ಚುವರಿ ಸಾಲದ ಹರಿವನ್ನು ಸುಗಮಗೊಳಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ವಿಶೇಷವಾಗಿ 5,000 ಕೋಟಿ ರೂ ಅನ್ನು ವಿಮಾನಯಾನ ಕ್ಷೇತ್ರಕ್ಕೆ ಮೀಸಲಿಡಲಾಗಿದೆ.
  • ಶೇ. 100 ರಷ್ಟು ಗ್ಯಾರಂಟಿ: ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಲಿಮಿಟೆಡ್ (NCGTC) ಮೂಲಕ ಬ್ಯಾಂಕ್‌ಗಳು ನೀಡುವ ಹೆಚ್ಚುವರಿ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ ನೀಡಲಿದೆ. MSME ಉದ್ಯಮಗಳಿಗೆ ಶೇ. 100 ರಷ್ಟು ಮತ್ತು ಎಂಎಸ್ಮೇ ಅಲ್ಲದ ಇತರ ದೊಡ್ಡ ಸಂಸ್ಥೆಗಳು ಹಾಗೂ ವಿಮಾನಯಾನ ಸಂಸ್ಥೆಗಳಿಗೆ ಶೇ. 90 ರಷ್ಟು ಕ್ರೆಡಿಟ್ ಗ್ಯಾರಂಟಿ ಕವರೇಜ್ ಸಿಗಲಿದೆ.
  • ಯಾರು ಅರ್ಹರು?: ಮಾರ್ಚ್ 31, 2026 ರ ವೇಳೆಗೆ ಬ್ಯಾಂಕ್‌ಗಳಲ್ಲಿ ಚಾಲ್ತಿಯಲ್ಲಿರುವ ವರ್ಕಿಂಗ್ ಕ್ಯಾಪಿಟಲ್ (ದುಡಿಯುವ ಬಂಡವಾಳ) ಮಿತಿ ಹೊಂದಿರುವ MSMEಗಳು ಮತ್ತು ಯಾವುದೇ ಸಾಲದ ಸುಸ್ತಿದಾರರಲ್ಲದ (Standard Accounts) ಪರಿಶಿಷ್ಟ ಪ್ರಯಾಣಿಕರ ವಿಮಾನಯಾನ ಸಂಸ್ಥೆಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ.
  • ಸಾಲದ ಪ್ರಮಾಣ: ಸಾಮಾನ್ಯ ಉದ್ಯಮಗಳು 2025-26ರ ಕೊನೆಯ ತ್ರೈಮಾಸಿಕದಲ್ಲಿ ಬಳಸಿದ ಗರಿಷ್ಠ ವರ್ಕಿಂಗ್ ಕ್ಯಾಪಿಟಲ್‌ನ ಶೇ. 20 ರಷ್ಟು ಹೆಚ್ಚುವರಿ ಸಾಲವನ್ನು (ಗರಿಷ್ಠ 100 ಕೋಟಿ ರೂವರೆಗೆ) ಪಡೆಯಬಹುದು.

ಇದನ್ನೂ ಓದಿ: ಭಾರತೀಯರು ವಿಶ್ವದಲ್ಲೇ ಅತ್ಯುತ್ತಮ ಪ್ರತಿಭಾನ್ವಿತರು: ಬುರ್ಜ್ ಖಲೀಫಾ ನಿರ್ಮಾತೃವಿನ ಅಂತರಂಗದ ಅನಿಸಿಕೆ

ವಿಮಾನಯಾನ ಸಂಸ್ಥೆಗಳಿಗೆ ಕೆಲವು ಷರತ್ತುಗಳ ಅನ್ವಯದೊಂದಿಗೆ ಗರಿಷ್ಠ 1,500 ಕೋಟಿ ರೂವರೆಗೆ ಸಾಲದ ಮಿತಿಯನ್ನು ನಿಗದಿಪಡಿಸಲಾಗಿದೆ.

ಮರುಪಾವತಿ ಅವಧಿ (Tenor)

  • MSME ಮತ್ತು ಇತರ ಉದ್ಯಮಗಳಿಗೆ: 1 ವರ್ಷದ ಮೊರಟೋರಿಯಂ (ಅಸಲು ಪಾವತಿಗೆ ವಿನಾಯಿತಿ ಅವಧಿ) ಸೇರಿದಂತೆ ಒಟ್ಟು 5 ವರ್ಷಗಳ ಮರುಪಾವತಿ ಅವಧಿ ಇರುತ್ತದೆ.
  • ವಿಮಾನಯಾನ ಸಂಸ್ಥೆಗಳಿಗೆ: 2 ವರ್ಷಗಳ ಮೊರಟೋರಿಯಂ ಸೇರಿದಂತೆ ಒಟ್ಟು 7 ವರ್ಷಗಳ ದೀರ್ಘಾವಧಿ ಮರುಪಾವತಿ ಸೌಲಭ್ಯ ಸಿಗಲಿದೆ.

ಮಾರ್ಚ್ 31, 2027 ರವರೆಗೆ ಮಂಜೂರಾಗುವ ಎಲ್ಲಾ ಸಾಲಗಳಿಗೆ ಈ ಸೌಲಭ್ಯ ಅನ್ವಯವಾಗುತ್ತದೆ. ಇದಕ್ಕಾಗಿ ಗ್ರಾಹಕರಿಂದ ಯಾವುದೇ ಗ್ಯಾರಂಟಿ ಶುಲ್ಕವನ್ನು (Guarantee Fee) ವಸೂಲಿ ಮಾಡಲಾಗುವುದಿಲ್ಲ.

ಇದನ್ನೂ ಓದಿ: ಎಸ್​ಬಿಐ ನೌಕರರ ಎರಡು ದಿನ ಮುಷ್ಕರ; ಏನು ಕಾರಣ, ಅವರ 16 ಬೇಡಿಕೆಗಳೇನು? ಇಲ್ಲಿದೆ ಮಾಹಿತಿ

ಉದ್ಯಮಗಳ ಮೇಲಾಗುವ ಧನಾತ್ಮಕ ಪರಿಣಾಮ

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದಂತೆ, ಈ ತುರ್ತು ಸಾಲದ ಸೌಲಭ್ಯವು ಸಣ್ಣ ಕೈಗಾರಿಗಗಳಿಗೆ ಸಕಾಲದಲ್ಲಿ ಹಣಕಾಸಿನ ನೆರವು ನೀಡುವ ಮೂಲಕ ದೇಶೀಯ ಉತ್ಪಾದನೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ. ವಿಮಾನಯಾನ ಸಂಸ್ಥೆಗಳಿಗೆ ಕಾರ್ಯನಿರ್ವಹಣಾ ವೆಚ್ಚ ಸರಿದೂಗಿಸಲು ಮತ್ತು ನೌಕರರ ಸಂಬಳ, ಪಿಎಫ್ ಪಾವತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡಲು ಇದು ಅತ್ಯಂತ ಸಹಕಾರಿಯಾಗಲಿದ್ದು, ದೇಶದಲ್ಲಿ ದೊಡ್ಡ ಮಟ್ಟದ ಉದ್ಯೋಗ ನಷ್ಟವಾಗುವುದನ್ನು ತಪ್ಪಿಸಲಿದೆ.

(ಗಮನಿಸಿ: ಮೊದಲ ಬಾರಿಗೆ ECLGS ಯೋಜನೆಯನ್ನು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಉದ್ಯಮಗಳ ಉಳಿವಿಗಾಗಿ ಮೇ 2020 ರಲ್ಲಿ ಪ್ರಾರಂಭಿಸಲಾಗಿತ್ತು, ಈಗ ಅದರ 5ನೇ ಆವೃತ್ತಿಯನ್ನು ಜಾಗತಿಕ ಯುದ್ಧದ ಸನ್ನಿವೇಶದ ಹಿನ್ನೆಲೆಯಲ್ಲಿ ತರಲಾಗಿದೆ).

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೋಪದಲ್ಲಿ ಕೋರ್ಟ್ ಕಡತ ಎಸೆದ ವಕೀಲ, ಕೆಂಡಾಮಂಡಲವಾದ ನ್ಯಾಯಮೂರ್ತಿ – Kannada News | Andhra High Court: Lawyer Throws Files, Justice Orders Contempt Action

ಅಮರಾವತಿ, ಮೇ 06: ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಾಲಯ(Court)ದ ಕೊಠಡಿಯು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟ ಅಪರೂಪದ ಘಟನೆಯೊಂದು ಜರುಗಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಯುವ ವಕೀಲರೊಬ್ಬರು ವರ್ತಿಸಿದ ರೀತಿಯಿಂದ ನ್ಯಾಯಮೂರ್ತಿ ಟಿ. ರಾಜಶೇಖರ್ ರಾವ್  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ವಕೀಲರನ್ನು ನ್ಯಾಯಾಂಗ ನಿಂದನೆ ಆರೋಪದ ಮೇಲೆ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ.

ನ್ಯಾಯಮೂರ್ತಿ ಟಿ. ರಾಜಶೇಖರ್ ರಾವ್ ಅವರ ಪೀಠದ ಮುಂದೆ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದ್ದಾಗ, ಯುವ ವಕೀಲರು ತಮ್ಮ ವಾದದ ಭರದಲ್ಲಿ ನ್ಯಾಯಪೀಠದ ಮೇಲಿದ್ದ ಕಡತಗಳನ್ನು (Files) ಎಸೆದಿದ್ದಾರೆ. ವಕೀಲರ ಈ ಬೇಜವಾಬ್ದಾರಿ ಮತ್ತು ಉದ್ಧಟತನದ ವರ್ತನೆಯು ನ್ಯಾಯಮೂರ್ತಿಗಳನ್ನು ಕೆರಳಿಸಿತು.

ವಕೀಲರ ವರ್ತನೆಯಿಂದ ತೀವ್ರ ಅಸಮಾಧಾನಗೊಂಡ ನ್ಯಾಯಮೂರ್ತಿಗಳು, ಇದು ನ್ಯಾಯಾಲಯದ ಘನತೆಗೆ ಧಕ್ಕೆ ತರುವಂತಹ ವರ್ತನೆ ಎಂದು ಖಂಡಿಸಿದರು. ಅಲ್ಲದೆ, ತಕ್ಷಣವೇ ಆ ವಕೀಲರನ್ನು ನ್ಯಾಯಾಂಗ ನಿಂದನೆ ಆರೋಪದ ಮೇಲೆ ಪೊಲೀಸ್ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದರು.

ನ್ಯಾಯಮೂರ್ತಿಗಳ ಕಠಿಣ ನಿಲುವನ್ನು ಕಂಡ ಯುವ ವಕೀಲರು ಆತಂಕಕ್ಕೊಳಗಾದರು. ತಕ್ಷಣವೇ ನ್ಯಾಯಮೂರ್ತಿಗಳ ಮುಂದೆ ಕೈಮುಗಿಯುತ್ತಾ ಕಣ್ಣೀರು ಹಾಕುತ್ತಾ ಕ್ಷಮೆಯಾಚಿಸಿದರು. ತಾವು ಮಾಡಿದ ತಪ್ಪಿಗಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದರೂ, ನ್ಯಾಯಾಲಯದ ಒಳಗೆ ಶಿಸ್ತು ಕಾಪಾಡುವುದು ಮುಖ್ಯ ಎಂದು ನ್ಯಾಯಪೀಠವು ಗಂಭೀರವಾಗಿ ಪರಿಗಣಿಸಿತು.

ಮತ್ತಷ್ಟು ಓದಿ:  ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಲಂಕಾ ಸುಪ್ರೀಂ ಕೋರ್ಟ್ ಜಡ್ಜ್ ! ಗೂಗಲ್ ಸೇರಿ ಹಲವು ಟೆಕ್ ಕಂಪನಿಗಳಿಗೆ ನೋಟಿಸ್ ಜಾರಿ

ಈ ಘಟನೆಯು ಹೈಕೋರ್ಟ್ ಆವರಣದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಹಿರಿಯ ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿ ಈ ಆಘಾತಕಾರಿ ಬೆಳವಣಿಗೆಯನ್ನು ಗಮನಿಸಿದ್ದು, ವಕೀಲರು ನ್ಯಾಯಾಲಯದ ಶಿಷ್ಟಾಚಾರವನ್ನು (Court Etiquette) ಪಾಲಿಸುವುದು ಎಷ್ಟು ಅನಿವಾರ್ಯ ಎಂಬುದನ್ನು ಈ ಘಟನೆ ನೆನಪಿಸಿದೆ.

ಯುವ ವಕೀಲರ ಭವಿಷ್ಯ ಮತ್ತು ನ್ಯಾಯಾಲಯದ ಘನತೆಯ ನಡುವೆ ಈ ಪ್ರಕರಣವು ಸದ್ಯ ಕಾನೂನು ವಲಯದಲ್ಲಿ ಸಂಚಲನ ಮೂಡಿಸಿದೆ. ನ್ಯಾಯಮೂರ್ತಿಗಳು ಈ ಕ್ಷಮೆಯಾಚನೆಯನ್ನು ಸ್ವೀಕರಿಸಿ ವಿನಾಯಿತಿ ನೀಡುತ್ತಾರೆಯೇ ಅಥವಾ ಕಾನೂನು ಕ್ರಮ ಮುಂದುವರಿಸುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ತಮಿಳುನಾಡು ರಾಜಕೀಯವಾಗಿ ಜಾಗೃತಗೊಂಡಿಲ್ಲ’; ಜನಾದೇಶದ ಬಗ್ಗೆ ಪ್ರಕಾಶ್ ರಾಜ್ ಅಸಮಾಧಾನ

ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಸುನಾಮಿಯನ್ನೇ ಸೃಷ್ಟಿಸಿದೆ. ಈ ಜನಾದೇಶಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ . ಪ್ರಕಾಶ್ ರಾಜ್ ಈ ಬಗ್ಗೆ ಪೋಸ್ಟ್ ಮಾಡಿದ್ದು, ತಮಿಳುನಾಡು ರಾಜಕೀಯವಾಗಿ ಜಾಗೃತಗೊಂಡಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಮಸ್ಕಾರ ತಮಿಳುನಾಡು. ಈ ಹಿಂದೆ ಕಾಮರಾಜರ್ ಸೋತಿದ್ದರು, ಈಗ ಸ್ಟಾಲಿನ್ ಸೋತಿದ್ದಾರೆ. ಸಮಾಜವು ಕೇವಲ ಸಿನಿಮಾ ತಾರೆಯರ ಅಭಿಮಾನಕ್ಕೆ ಹೆಚ್ಚು ಮಾರು ಹೋಗುತ್ತಿದೆ ಹೊರತು ರಾಜಕೀಯವಾಗಿ ಯೋಚಿಸುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದವರು ರಾಜಕೀಯವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಿ ಎಂದು ಆಶಿಸಿರೋ ಅವರು, ‘ಚುನಾವಣೆಯಲ್ಲಿ ಗೆದ್ದವರ ಜನಸೇವೆ ಉತ್ತಮವಾಗಿರಲಿ’  ಎಂದು ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಪರಾಜಿಗಳ ಮೇಲೆ ರಣಬೀರ್ ಕಪೂರ್ ಕೆಂಡಾಮಂಡಲ; ವಿಡಿಯೋ ವೈರಲ್ – Kannada News | Ranbir Kapoor loses cool at Paparazzi with Alia Bhatt at Daadi Ki Shaadi screening

ಬಾಲಿವುಡ್‌ನ ಸ್ಟಾರ್ ದಂಪತಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಂಗಳವಾರ (ಮೇ 6) ಸಂಜೆ ಕುಟುಂಬದ ಜೊತೆ ಸಮಯ ಕಳೆಯಲು ಹೊರಬಂದಿದ್ದರು. ಆದರೆ, ಈ ವೇಳೆ ಪಾಪರಾಜಿಗಳ ವರ್ತನೆಯಿಂದ ರಣಬೀರ್ ಕಪೂರ್ (Ranbir Kapoor) ಅವರು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಈ ಮೊದಲು ಕೂಡ ರಣಬೀರ್ ಕಪೂರ್ ಅವರು ಇದೇ ರೀತಿ ಕೋಪ ಮಾಡಿಕೊಂಡಿದ್ದರು. ಆದರೂ ಕೂಡ ಪಾಪರಾಜಿಗಳ (Paparazzi) ವರ್ತನೆ ಸುಧಾರಿಸಿಲ್ಲ.

1. ಪಾಪರಾಜಿಗಳ ವರ್ತನೆ ಕಂಡು ತಾಳ್ಮೆ ಕಳೆದುಕೊಂಡ ರಣಬೀರ್ ಕಪೂರ್.

2. ‘ಹಿಂದಕ್ಕೆ ಸರಿಯಿರಿ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ ಬಾಲಿವುಡ್ ನಟ.

3. ಸೋಶಿಯಲ್ ಮೀಡಿಯಾದಲ್ಲಿ ರಣಬೀರ್ ಕಪೂರ್ ಅವರ ವಿಡಿಯೋ ವೈರಲ್.

ರಣಬೀರ್ ಅವರ ತಾಯಿ ನೀತು ಕಪೂರ್ ಮತ್ತು ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ ನಟಿಸಿರುವ ‘ದಾದಿ ಕಿ ಶಾದಿ’ ಸಿನಿಮಾದ ವಿಶೇಷ ಪ್ರದರ್ಶನಕ್ಕಾಗಿ ದಂಪತಿ ಆಗಮಿಸಿದ್ದರು. ರಣಬೀರ್ ಮತ್ತು ಆಲಿಯಾ ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ, ಪಾಪರಾಜಿಗಳು ಅಕ್ಷರಶಃ ಅವರನ್ನು ಸುತ್ತುವರಿದು ಫೋಟೋ ತೆಗೆಯಲು ಮುಗಿಬಿದ್ದರು.

ಕಾರಿನ ಬಾಗಿಲಿನವರೆಗೂ ಕ್ಯಾಮೆರಾಗಳು ಬಂದಿದ್ದರಿಂದ ರಣಬೀರ್ ಅವರು ಕ್ಷಣಕಾಲ ತಾಳ್ಮೆ ಕಳೆದುಕೊಂಡರು. ವಿಡಿಯೋದಲ್ಲಿ ಕಂಡುಬಂದಂತೆ, ರಣಬೀರ್ ಅವರು ಪಾಪರಾಜಿಗಳನ್ನು ಹಿಂದಕ್ಕೆ ಸರಿಯುವಂತೆ ಕೇಳಿಕೊಂಡರು. ಅವರು ಗರಂ ಆಗಿಯೇ ಈ ಮಾತು ಹೇಳಿದರು. ‘ನಿಮಗೆ ಫೋಟೋ ಬೇಕಲ್ವಾ? ಬನ್ನಿ’ ಎಂದು ಹೇಳುತ್ತಾ ಸ್ವಲ್ಪ ದೂರ ಹೋಗಿ ಪೋಸ್ ನೀಡಲು ಸ್ಥಳಾವಕಾಶ ಮಾಡಿಕೊಡುವಂತೆ ಕೇಳಿದರು. ನಂತರ ಪಾಪರಾಜಿಗಳು ಕೂಡ ಒಬ್ಬರಿಗೊಬ್ಬರು ‘ಹಿಂದಕ್ಕೆ ಸರಿಯಿರಿ’ ಎಂದು ಹೇಳುತ್ತಾ ದಾರಿ ಮಾಡಿಕೊಟ್ಟರು.

ರಣಬೀರ್ ಕಪೂರ್ ವೈರಲ್ ವಿಡಿಯೋ:

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕ ನೆಟ್ಟಿಗರು ರಣಬೀರ್ ಕಪೂರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಸೆಲೆಬ್ರಿಟಿಗಳ ಖಾಸಗಿತನಕ್ಕೆ ಗೌರವ ನೀಡಬೇಕು. ಫೋಟೋ ತೆಗೆಯುವ ನೆಪದಲ್ಲಿ ಮುಖದ ಹತ್ತಿರ ಕ್ಯಾಮೆರಾ ಹಿಡಿಯುವುದು ಸರಿಯಲ್ಲ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಈ ರೀತಿಯ ಸನ್ನಿವೇಶಗಳು ಈ ಮೊದಲು ಬೇರೆ ಸೆಲೆಬ್ರಿಟಿಗಳಿಗೂ ಎದುರಾಗಿತ್ತು.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ದ್ವಿಪಾತ್ರ: ಶ್ರೀರಾಮನ ಜೊತೆಗೆ ಪರಶುರಾಮನ ದರ್ಶನ

ಸಿನಿಮಾ ವಿಚಾರಕ್ಕೆ ಬರುವುದಾದರೆ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ಜೊತೆಯಾಗಿ ನಟಿಸುತ್ತಿದ್ದಾರೆ. ಅಲ್ಲದೇ, ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ನಟಿಸಿದ್ದು, ಆ ಸಿನಿಮಾದ ಬಿಡುಗಡೆಗೆ ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಂದೇ ವರ್ಷದಲ್ಲಿ 40 ಬಾಲಕಾರ್ಮಿಕರ ಪತ್ತೆ ಮಾಡಿದ ಮಂಡ್ಯ ಜಿಲ್ಲಾಡಳಿತ: 14 ಎಫ್​​ಐಆರ್​​ – Kannada News | Mandya Cracks Down on Child Labor: 40 Rescued, 14 FIRs in One Year

ಮಂಡ್ಯ, ಮೇ 06: ಸರ್ಕಾರದ ಸಾಕಷ್ಟು ಕಠಿಮ ನಿಯಮಗಳ ನಡುವೆಯೂ ಕಳೆದ ಒಂದು ವರ್ಷದಲ್ಲಿ ಮಂಡ್ಯ ಜಿಲ್ಲೆಯಲ್ಲಿ 40 ಬಾಲಕಾರ್ಮಿಕರನ್ನು ಗುರುತಿಸಲಾಗಿದ್ದು, ಈ ಸಂಬಂಧ 14 ಎಫ್‌ಐಆರ್‌ಗಳು ದಾಖಲಾಗಿವೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಹಾಗೂ ಬಾಲಕಾರ್ಮಿಕ ನಿರ್ಮೂಲನೆ ಕಾರ್ಯಪಡೆ ಸಭೆಯಲ್ಲಿ ಜಿಲ್ಲಾಧಿಕಾರಿ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಗ್ಯಾರೇಜ್, ಹೋಟೆಲ್ ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವುದನ್ನು ಗುರುತಿಸಿ, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಒದಗಿಸುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ.

  • ಬಾಲ ಕಾರ್ಮಿಕರ ನಿರ್ಮೂಲನೆಗೆ ಮಂಡ್ಯದಲ್ಲಿ ದಿಟ್ಟ ಹೆಜ್ಜೆ
  • ಒಂದೇ ವರ್ಷದಲ್ಲಿ 40 ಬಾಲಕಾರ್ಮಿಕರ ಪತ್ತೆ, 14 ಎಫ್​​ಐಆರ್​​
  • ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರಿಂದ ಈ ಬಗ್ಗೆ ಮಾಹಿತಿ

ಇದನ್ನೂ ಓದಿ: ಮಂಡ್ಯ ಜಿಲ್ಲೆಯಲ್ಲಿ 1,354 ಬಾಲಗರ್ಭಿಣಿಯರು ಪತ್ತೆ; ಲೋಕಾಯುಕ್ತ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು!

2025ರ ಏಪ್ರಿಲ್‌ನಿಂದ 2026ರ ಮಾರ್ಚ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 951 ತಪಾಸಣೆಗಳನ್ನು ನಡೆಸಲಾಗಿದ್ದು, ಈ ವೇಳೆ 40 ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಇವರಲ್ಲಿ 14 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿದ್ದು, ಉಳಿದ 26 ಪ್ರಕರಣಗಳು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ತಾಲೂಕು ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಬಾಲಕಾರ್ಮಿಕರಿಗೆ ಸಲಹೆ, ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ಸೂಚಿಸಿದ್ದಾರೆ. 2025-26ರಲ್ಲಿ ಜಿಲ್ಲೆಯಲ್ಲಿ ಬಾಲಕಾರ್ಮಿಕ ಹಾಗೂ ಬಾಲ್ಯವಿವಾಹ ನಿರ್ಮೂಲನೆ ಕುರಿತು 9 ಬೀದಿ ನಾಟಕಗಳು, 7,000 ಪಾಂಪ್ಲೆಟ್​​ಗಳ ವಿತರಣೆ, 22 ಗೋಡೆ ಬರಹಗಳು ಹಾಗೂ 6 ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಾಗಿ ಮಾಲೀಕರಿಗೆ ಶಿಕ್ಷೆ ಆಗಲಿದ್ದು, 6 ತಿಂಗಳಿಂದ 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದಾಗಿದೆ. 20,000 ದಿಂದ 50,000 ವರೆಗೆ ದಂಡ ಕೂಡ ಬೀಳಲಿದೆ. ಅಥವಾ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ಒಟ್ಟಿಗೆ ವಿಧಿಸುವ ಅಧಿಕಾರ ಹೊಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಅಭಾವ: ಬಂಕ್‌ಗಳ ಮುಂದೆ ವಾಹನ ಸವಾರರ ಸಾಲು, ತೀವ್ರಗೊಂಡ ಇಂಧನ ಆತಂಕ – Kannada News | Fuel Crisis in Bengaluru: Petrol and Diesel Shortage in HP and Bharat Petroleum Bunks Due to Supply Issues

ಸಾಂದರ್ಭಿಕ ಚಿತ್ರ (ಎಐ)Image Credit source: Google Gemini

ಬೆಂಗಳೂರು, ಮೇ 6: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಆಟೋ ಎಲ್‌ಪಿಜಿ (Auto LPG) ಬಿಕ್ಕಟ್ಟಿನ ಬೆನ್ನಲ್ಲೇ ಈಗ ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆಯಲ್ಲೂ ಭಾರೀ ವ್ಯತ್ಯಯ ಉಂಟಾಗಿದೆ. ನಗರದಲ್ಲಿ ತೈಲ ಪೂರೈಕೆ ಮಾಡುವ ಪ್ರಮುಖ ಕಂಪನಿಗಳಾದ ಎಚ್‌ಪಿ (HP) ಮತ್ತು ಭಾರತ್ ಪೆಟ್ರೋಲಿಯಂ (BP) ಬಂಕ್‌ಗಳಲ್ಲಿ ಕಳೆದ ಎರಡು ದಿನಗಳಿಂದ ಇಂಧನ ದಾಸ್ತಾನು ಖಾಲಿಯಾಗುತ್ತಿದ್ದು, ವಾಹನ ಸವಾರರಲ್ಲಿ ಆತಂಕ ಮನೆಮಾಡಿದೆ. ಖಾಸಗಿ ಬಂಕ್‌ಗಳಲ್ಲಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ಬಂಕ್‌ಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಪೂರೈಕೆ ಸರಪಳಿ ಕಡಿತಗೊಂಡಿದೆ.

ಪೆಟ್ರೋಲ್, ಡೀಸೆಲ್ ಅಭಾವದ ಮುಖ್ಯಾಂಶಗಳು

  • ಎಚ್‌ಪಿ ಮತ್ತು ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಸ್ಟಾಕ್ ಸಮಸ್ಯೆ ತೀವ್ರ.
  • ಶೆಲ್, ಜಿಯೋ ಮತ್ತು ನಯಾರಾ ಅಂತಹ ಖಾಸಗಿ ಬಂಕ್‌ಗಳಲ್ಲಿ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕ ಬಂಕ್‌ಗಳತ್ತ ಮುಖ ಮಾಡಿದ ಜನ.
  • ತೈಲ ವ್ಯಾಪಾರಿಗಳು ಲಕ್ಷಾಂತರ ರೂಪಾಯಿ ಮುಂಗಡ ಹಣ ಪಾವತಿಸಿದರೂ ಡಿಪೋಗಳಿಂದ ಪೂರೈಕೆಯಾಗದ ಇಂಧನ.

ಎಲ್‌ಪಿಜಿ ಬಿಕ್ಕಟ್ಟಿನ ನೆನಪು

ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಆಟೋ ಎಲ್‌ಪಿಜಿ ಮತ್ತು ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿ ದೊಡ್ಡ ಸಂಚಲನ ಮೂಡಿಸಿತ್ತು. ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಹೋಟೆಲ್ ದರ ಏರಿಕೆಯಾಗಿದ್ದರೆ, ಪಿಜಿ ಬಾಡಿಗೆಗಳು ಹೆಚ್ಚಾಗುವ ಭೀತಿಯೂ ಎದುರಾಗಿದೆ. ಅದರ ಬೆನ್ನಲ್ಲೇ ಈಗ ಪೆಟ್ರೋಲ್ ಮತ್ತು ಡೀಸೆಲ್ ಸಿಗದೆ ಜನರು ಬಂಕ್‌ಗಳ ಮುಂದೆ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಎಲ್‌ಪಿಜಿಗಾಗಿ ಸವಾರರು ಗಂಟೆಗಟ್ಟಲೆ ಕಾಯುತ್ತಿದ್ದ ದೃಶ್ಯಗಳು ಈಗ ಪೆಟ್ರೋಲ್ ಬಂಕ್‌ಗಳ ಮುಂದೆಯೂ ಮರುಕಳಿಸುವ ಆತಂಕ ಶುರುವಾಗಿದೆ.

ಡಿಪೋಗಳಿಂದ ಪೂರೈಕೆ ಸ್ಥಗಿತ

ತೈಲ ಮಾರಾಟಗಾರರು ಇಂಧನಕ್ಕಾಗಿ ಮುಂಗಡವಾಗಿ ಹಣ ಪಾವತಿಸಿದ್ದರೂ, ಡಿಪೋಗಳಿಂದ ಬಂಕ್‌ಗಳಿಗೆ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ. ಇಂಡಿಯನ್ ಆಯಿಲ್ (Indian Oil) ಬಂಕ್‌ಗಳಲ್ಲಿ ಸದ್ಯಕ್ಕೆ ಪೂರೈಕೆ ಸುಗಮವಾಗಿದ್ದರೂ, ಎಚ್‌ಪಿ ಮತ್ತು ಭಾರತ್ ಬಂಕ್‌ಗಳಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸಿದೆ.

ಇದನ್ನೂ ಓದಿ: ಹೋಟೆಲ್, ಆಟೋ ಬೆನ್ನಲ್ಲೇ ಈಗ ಪಿಜಿ ಸರದಿ: ಬೆಂಗಳೂರಿನಲ್ಲಿ ಶೇ 10ರಷ್ಟು ದುಬಾರಿಯಾಗಲಿದೆ ಪಿಜಿ ಬಾಡಿಗೆ

ಕೆಲವು ಬಂಕ್‌ಗಳಲ್ಲಿ ಇಂದು ದಾಸ್ತಾನು ಬಂದಿದೆ ಎಂದು ಮಾಲೀಕರು ಹೇಳುತ್ತಿದ್ದಾರಾದರೂ, ಬೇಡಿಕೆಗೆ ತಕ್ಕಷ್ಟು ಇಂಧನ ಸಿಗುತ್ತಿಲ್ಲ. ಈ ಪೂರೈಕೆ ಕೊರತೆಯ ಬಗ್ಗೆ ತೈಲ ಕಂಪನಿಗಳಿಂದ ಬಂಕ್ ಮಾಲೀಕರಿಗೆ ಇನ್ನು ಯಾವುದೇ ಸ್ಪಷ್ಟ ಮಾಹಿತಿ ದೊರೆತಿಲ್ಲ. ಇದು ವಾಹನ ಸವಾರರ ಆತಂಕವನ್ನು ಇಮ್ಮಡಿಗೊಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Agniveer 2026: ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ; ಪ್ರವೇಶ ಪತ್ರ ಮತ್ತು ಪರೀಕ್ಷಾ ವೇಳಾಪಟ್ಟಿ ಪ್ರಕಟ! – Kannada News | Agniveer 2026 Exam Dates and Admit Card Out: Indian Army CEE Schedule and Physical Test Info

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ 2026ನೇ ಸಾಲಿನ ಅಗ್ನಿವೀರ್ ನೇಮಕಾತಿಯ ಪರೀಕ್ಷಾ ವೇಳಾಪಟ್ಟಿ ಮತ್ತು ಪ್ರವೇಶ ಪತ್ರದ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಭಾರತೀಯ ಸೇನೆಯು ಅಗ್ನಿವೀರ್ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಮೇ 15 ರಿಂದ ಭಾರತೀಯ ಸೇನೆಯ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಪ್ರವೇಶ ಪತ್ರಗಳನ್ನು ಕೇವಲ ಆನ್‌ಲೈನ್ ಮೂಲಕ ಮಾತ್ರವೇ ವಿತರಿಸಲಾಗುವುದು ಎಂದು ಸೇನೆಯು ತಿಳಿಸಿದೆ.

ಹುದ್ದೆಗಳ ವಿವರ:

ಈ ಬಾರಿ ಅಗ್ನಿವೀರ್ ಜನರಲ್ ಡ್ಯೂಟಿ, ಟೆಕ್ನಿಕಲ್, ಸ್ಟೋರ್‌ಕೀಪರ್ ಕ್ಲರ್ಕ್ ಮತ್ತು ಟ್ರೇಡ್ಸ್‌ಮನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಅಷ್ಟೇ ಅಲ್ಲದೆ, ಧಾರ್ಮಿಕ ಶಿಕ್ಷಕ ಜೂನಿಯರ್ ಕಮಿಷನ್ಡ್ ಆಫೀಸರ್, ಹವಿಲ್ದಾರ್ ಶಿಕ್ಷಣ, ಸಿಪಾಯಿ ಫಾರ್ಮಾ ಮತ್ತು ಸೋಲ್ಜರ್ ಟೆಕ್ನಿಕಲ್ ಹುದ್ದೆಗಳಿಗೂ ಪ್ರವೇಶ ಪತ್ರಗಳು ಲಭ್ಯವಿರಲಿವೆ. ಅಗ್ನಿವೀರ್ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆಯು (CEE) ಜೂನ್ 1 ರಿಂದ ಜೂನ್ 15, 2026 ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದೆ. ಪರೀಕ್ಷೆಯನ್ನು ಅಭ್ಯರ್ಥಿಗಳು ಆರಿಸಿಕೊಂಡಿರುವ ಟ್ರೇಡ್‌ಗಳಿಗೆ ಅನುಗುಣವಾಗಿ ಪ್ರತ್ಯೇಕವಾಗಿ ನಡೆಸಲಾಗುತ್ತದೆ.

ದೈಹಿಕ ಪರೀಕ್ಷೆ:

ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ ಹಂತವಾದ ದೈಹಿಕ ಪರೀಕ್ಷೆಗೆ (Physical Test) ಅರ್ಹತೆ ಪಡೆಯಲಿದ್ದಾರೆ. ಈ ದೈಹಿಕ ಪರೀಕ್ಷೆಯನ್ನು ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆಸಲಾಗುವುದು. ಎಲ್ಲಾ ಅಭ್ಯರ್ಥಿಗಳಿಗೆ 9 ಅಡಿ ಉದ್ದದ ಜಿಗಿತ ಮತ್ತು ಜಿಗ್-ಜಾಗ್ ಸಮತೋಲನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುತ್ತದೆ. ದೈಹಿಕ ಪರೀಕ್ಷೆಯ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುವಾಗ ಓಟ ಮತ್ತು ಪುಲ್-ಅಪ್‌ಗಳಿಗೆ ವಿಶೇಷ ಅಂಕಗಳನ್ನು ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಇನ್ಫೋಸಿಸ್‌ನಿಂದ ಭರ್ಜರಿ ಉದ್ಯೋಗಾವಕಾಶ; 20,000 ಫ್ರೆಶರ್ಸ್‌ ನೇಮಕಾತಿ ಘೋಷಣೆ

ದೈಹಿಕ ಪರೀಕ್ಷೆಯ ಮೊದಲ ವಿಭಾಗದಲ್ಲಿ (Category 1) ಅಭ್ಯರ್ಥಿಗಳು 1.6 ಕಿ.ಮೀ ಓಟವನ್ನು 5:30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು, ಇದಕ್ಕೆ 60 ಅಂಕಗಳನ್ನು ನೀಡಲಾಗುತ್ತದೆ. ಜೊತೆಗೆ 10 ಪುಲ್-ಅಪ್‌ಗಳಿಗೆ 40 ಅಂಕಗಳು ಸೇರಿದಂತೆ ಒಟ್ಟು 100 ಅಂಕಗಳ ಮೆರಿಟ್ ಪಟ್ಟಿ ಇರುತ್ತದೆ. ಎರಡನೇ ವಿಭಾಗದಲ್ಲಿ (Category 2) 5:45 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದರೆ 48 ಅಂಕಗಳು ಮತ್ತು ಒಂಬತ್ತು ಪುಲ್-ಅಪ್‌ಗಳಿಗೆ 33 ಅಂಕಗಳು ಸಿಗಲಿವೆ. ಉಳಿದ ವಿಭಾಗಗಳಲ್ಲಿಯೂ ಸಮಯ ಮತ್ತು ಪುಲ್-ಅಪ್‌ಗಳ ಸಂಖ್ಯೆಗೆ ಅನುಗುಣವಾಗಿ ಅಂಕಗಳನ್ನು ಹಂಚಿಕೆ ಮಾಡಲಾಗುವುದು ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version