ರಾಹುಲ್ ಗಾಂಧಿ ಆಪ್ತನೆಂದು ಹೇಳಿಕೊಂಡು ರಾಜಕಾರಣಿಗಳಿಗೆ ಗಾಳ, ಲಕ್ಷ ಲಕ್ಷ ರೂ. ಲೂಟಿ ಮಾಡಿ ಸಿಕ್ಕಿಬಿದ್ದ – Kannada News | Rahul Gandhi Aide Impersonator Arrested in Multi State Political Scam, Dehradun Police Busts Fraud Ring
ಡೆಹ್ರಾಡೂನ್, ಮೇ 06: ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi)ಯ ಹೆಸರನ್ನು ಬಳಸಿಕೊಂಡು ಟಿಕೆಟ್ ಆಕಾಂಕ್ಷಿಗಳು ಹಾಗೂ ರಾಜಕೀಯ ನಾಯಕರಿಗೆ ವಂಚಿಸುತ್ತಿದ್ದ ಬೃಹತ್ ಅಂತಾರಾಜ್ಯ ಜಾಲವೊಂದನ್ನು ಡೆಹ್ರಾಡೂನ್ ಪೊಲೀಸರು ಪತ್ತೆಹಚ್ಚಿದ್ದಾರೆ. ಆಪರೇಷನ್ ಪ್ರಹಾರ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಂಜಾಬ್‌ನ ಅಮೃತಸರ ಮೂಲದ ಗೌರವ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರಾಖಂಡದ ಕಾಂಗ್ರೆಸ್ ನಾಯಕಿ ಭಾವನಾ ಪಾಂಡೆ ಅವರು ಮೇ 3 ರಂದು ನೀಡಿದ ದೂರು ಈ ಹಗರಣದ ಮೂಲವನ್ನು ಪತ್ತೆಹಚ್ಚಲು ನೆರವಾಯಿತು. ರಾಹುಲ್ ಗಾಂಧಿಯವರ ಸಹಾಯಕ…