ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ರಫೀಕುಲ್ ಇಸ್ಲಾಂ ಪ್ರತಿಕ್ರಿಯೆ – Kannada News | AIUDF leader Rafiqul Islam says Congress needs to make a sacrifice to wipe out BJP
ಗುವಾಹಟಿ, ಫೆಬ್ರವರಿ 23: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಇಂದು ರಾಹುಲ್ ಗಾಂಧಿ ಇಂಡಿಯ ಬ್ಲಾಕ್ ನಾಯಕನ ಸ್ಥಾನದಿಂದ ಕೆಳಗೆ ಇಳಿಯಬೇಕೆಂದು ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ AIUDF ನಾಯಕ ರಫೀಕುಲ್ ಇಸ್ಲಾಂ, “ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗಳನ್ನು ರಾಹುಲ್ ಗಾಂಧಿ ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆಂದು ನನಗೆ ತಿಳಿದಿಲ್ಲ. ಅವರು ತುಂಬಾ ಪ್ರಬುದ್ಧರಾಗಿದ್ದಾರೆ. ರಾಹುಲ್ ಗಾಂಧಿ ಇಂಡಿಯ ಬ್ಲಾಕ್‌ನ ಅಧ್ಯಕ್ಷರಾಗಿದ್ದರೆ…