Headlines

ಧುರಂಧರ್ ಗೆಲುವಿನ ಎಫೆಕ್ಟ್: ನೋರಾ ಫತೇಹಿ ಜೊತೆ ಡ್ಯಾನ್ಸ್ ಮಾಡಿದ ರಾಕೇಶ್ ಬೇಡಿ – Kannada News | Dhurandhar actor Rakesh Bedi dances with Nora Fatehi and shares video

ಆದಿತ್ಯ ಧರ್ ನಿರ್ದೇಶನದ ಸ್ಪೈ ಥ್ರಿಲ್ಲರ್ ‘ಧುರಂಧರ್’ (Dhurandhar) ಚಿತ್ರದಲ್ಲಿ ಜಮೀಲ್ ಜಮಾಲಿ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಹಿರಿಯ ನಟ ರಾಕೇಶ್ ಬೇಡಿ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಅವರು ತಮ್ಮ ನೃತ್ಯದ ಮೂಲಕ ಕಮಾಲ್ ಮಾಡಲು ಸಜ್ಜಾಗಿದ್ದಾರೆ. ಬಾಲಿವುಡ್‌ನ ಡ್ಯಾನ್ಸಿಂಗ್ ಸೆನ್ಸೇಷನ್ ನೋರಾ ಫತೇಹಿ (Nora Fatehi) ಜೊತೆ ರಾಕೇಶ್ ಬೇಡಿ ಹೆಜ್ಜೆ ಹಾಕುತ್ತಿದ್ದಾರೆ. ‘ಧುರಂಧರ್’ ಗೆಲುವಿನ ಬಳಿಕ ರಾಕೇಶ್ ಬೇಡಿ (Rakesh Bedi) ಅವರಿಗೆ ಇಂಥ ಹಲವು ಆಫರ್​ಗಳು ಬರುತ್ತಿವೆ….

Read More

TV9 Kannada News Live: ವಚನಾನಂದ ಶ್ರೀಗೆ ಜಾಮೀನು ಮಂಜೂರು; ಕಾಂಗ್ರೆಸ್​​ ಕೇರಳದಲ್ಲಿ ಗದ್ದುಗೆ, ತಮಿಳುನಾಡಿನಲ್ಲಿ ವಿಜಯ್ ಜೊತೆ ಮೈತ್ರಿ! – Kannada News | TV9 Kannada News Live: Dog Bite Epidemic, Swamiji Bail and Key Political Shifts

ಬೆಂಗಳೂರು, ಮೇ.6; ದೇಶದ ರಾಜಕಾರಣದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಕಂಡು ಬಂದಿದೆ. ಪಂಚ ರಾಜ್ಯಗಳ ಚುನಾವಣೆಯ ನಂತರ ರಾಜಕೀಯದಲ್ಲಿ ಭಾರೀ ಸಂಚಲ ಮೂಡಿಸಿದೆ. ಇನ್ನು ಬೆಂಗಳೂರಿನಲ್ಲಿ ಇಂದು ಮಳೆಯಾಗುವ ಸಾಧ್ಯ ಇದೆ ಎಂದು ಹೇಳಲಾಗಿದೆ. ಮಠದ ಹಾಸ್ಟೆಲ್ ಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರಿಗೆ ದಾವಣಗೆರೆ ವಿಶೇಷ ಜಿಲ್ಲಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಿಲಿಕಾನ್ ಸಿಟಿ ಸೇರಿದಂತೆ ಕರ್ನಾಟಕದಾದ್ಯಂತ ಬೇಸಿಗೆಯ ತಾಪಮಾನ ಏರುತ್ತಿದ್ದಂತೆ ನಾಯಿಗಳ ವರ್ತನೆಯಲ್ಲಿ ಆಕ್ರಮಣಶೀಲತೆ…

Read More

ಇಸ್ರೋ ಕ್ಯಾಂಪಸ್ ಮೇಲೆ ಹಾರಾಡಿತು ಡ್ರೋನ್: ಭದ್ರತೆಗೆ ಭಾರೀ ಆತಂಕ – Kannada News | Security Breach at ISRO ISITE Campus: Drone Spotted in No Drone Zone, FIR Filed in Bengaluru

ಸಾಂದರ್ಭಿಕ ಚಿತ್ರ (AI)Image Credit source: MediaForge AI ಬೆಂಗಳೂರು, ಮೇ 6: ದೇಶದ ಅತ್ಯಂತ ಸಂವೇದನಾಶೀಲ ಪ್ರದೇಶಗಳಲ್ಲಿ ಒಂದಾದ ಬೆಂಗಳೂರಿನ (Bengaluru) ಇಸ್ರೋ ಐಸೈಟ್ (ISRO ISITE) ಕ್ಯಾಂಪಸ್ ಬಳಿ ಡ್ರೋನ್ ಹಾರಾಟ ನಡೆಸಿರುವುದು ಈಗ ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ. ನಿಷೇಧಿತ ‘ನೋ ಡ್ರೋನ್ ಝೋನ್’ನಲ್ಲಿ ಅಪರಿಚಿತರು ಡ್ರೋನ್ ಹಾರಾಟ ನಡೆಸಿದ್ದು, ಈ ಸಂಬಂಧ ಎಚ್‌ಎಎಲ್ (HAL) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಖ್ಯಾಂಶಗಳು ಮೇ 2ರಂದು ಬೆಳಿಗ್ಗೆ ಇಸ್ರೋ ಐಸೈಟ್ ಕ್ಯಾಂಪಸ್ ಮೇಲೆ…

Read More

ರಾಹುಲ್ ಗಾಂಧಿ ಆಪ್ತನೆಂದು ಹೇಳಿಕೊಂಡು ರಾಜಕಾರಣಿಗಳಿಗೆ ಗಾಳ, ಲಕ್ಷ ಲಕ್ಷ ರೂ. ಲೂಟಿ ಮಾಡಿ ಸಿಕ್ಕಿಬಿದ್ದ – Kannada News | Rahul Gandhi Aide Impersonator Arrested in Multi State Political Scam, Dehradun Police Busts Fraud Ring

ಡೆಹ್ರಾಡೂನ್, ಮೇ 06: ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi)ಯ ಹೆಸರನ್ನು ಬಳಸಿಕೊಂಡು ಟಿಕೆಟ್ ಆಕಾಂಕ್ಷಿಗಳು ಹಾಗೂ ರಾಜಕೀಯ ನಾಯಕರಿಗೆ ವಂಚಿಸುತ್ತಿದ್ದ ಬೃಹತ್ ಅಂತಾರಾಜ್ಯ ಜಾಲವೊಂದನ್ನು ಡೆಹ್ರಾಡೂನ್ ಪೊಲೀಸರು ಪತ್ತೆಹಚ್ಚಿದ್ದಾರೆ. ಆಪರೇಷನ್ ಪ್ರಹಾರ್ ಅಡಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಪಂಜಾಬ್‌ನ ಅಮೃತಸರ ಮೂಲದ ಗೌರವ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಉತ್ತರಾಖಂಡದ ಕಾಂಗ್ರೆಸ್ ನಾಯಕಿ ಭಾವನಾ ಪಾಂಡೆ ಅವರು ಮೇ 3 ರಂದು ನೀಡಿದ ದೂರು ಈ ಹಗರಣದ ಮೂಲವನ್ನು ಪತ್ತೆಹಚ್ಚಲು ನೆರವಾಯಿತು. ರಾಹುಲ್ ಗಾಂಧಿಯವರ ಸಹಾಯಕ…

Read More

ಮೇ 10ಕ್ಕೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್​ಗೆ ಪ್ರಧಾನಿ ಮೋದಿ ಭೇಟಿ, ಹಲವು ಯೋಜನೆಗಳಿಗೆ ಚಾಲನೆ – Kannada News | PM Narendra Modi to visit Bengaluru Art of Living International Centre on May 10th Sri Sri Ravi Shankar

ಬೆಂಗಳೂರು, ಮೇ 5: ಮೇ ತಿಂಗಳಲ್ಲಿ ಆರ್ಟ್ ಆಫ್ ಲಿವಿಂಗ್ (Art Of Living) ತನ್ನ 45ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ಸಂಸ್ಥೆಯ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಆಚರಣೆಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಮೇ 10ರಂದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಗುರುದೇವ ರವಿಶಂಕರ್ ಅವರೊಂದಿಗೆ ಪ್ರಧಾನಿ ಮೋದಿ ಉತ್ತಮ…

Read More

ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಫಾರಿಗೆ ತೆರಳಿದ್ದವರಿಗೆ ದರ್ಶನ ಕೊಟ್ಟ ಬೃಹತ್ ವ್ಯಾಘ್ರ: ಹೆಬ್ಬುಲಿ ವಿಡಿಯೋ ಇಲ್ಲಿದೆ ನೋಡಿ – Kannada News | Tiger Sighting at BRT Wildlife Sanctuary: Majestic Tiger Spotted During Safari at K.Gudi, Chamarajanagar

ಚಾಮರಾಜನಗರ, ಮೇ 6: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಹುಲಿ ಸಂರಕ್ಷಿತ ಪ್ರದೇಶವಾದ ಬಿಳಿಗಿರಿರಂಗನ ಬೆಟ್ಟದಲ್ಲಿ (BRT) ಪ್ರವಾಸಿಗರಿಗೆ ಅದೃಷ್ಟವೋ ಎಂಬಂತೆ ಬೃಹತ್ ಗಾತ್ರದ ಹೆಬ್ಬುಲಿಯೊಂದು ದರ್ಶನ ನೀಡಿದೆ. ಯಳಂದೂರು ತಾಲೂಕಿನ ಕೆ.ಗುಡಿ ಅರಣ್ಯ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ಸಫಾರಿ ವಾಹನ ತೆರಳುತ್ತಿದ್ದಾಗ, ಪೊದೆಗಳ ನಡುವಿನಿಂದ ಬಂದ ಹುಲಿ ರಸ್ತೆಯಲ್ಲೇ ಕೆಲಕಾಲ ವಿಹರಿಸಿದೆ. ಪ್ರವಾಸಿಗರು ಅತಿ ಸಮೀಪದಿಂದ ಹುಲಿಯನ್ನು ಕಂಡು ಬೆರಗಾಗಿದ್ದಾರೆ. ಸಾಮಾನ್ಯವಾಗಿ ಹುಲಿಗಳು ಮನುಷ್ಯರ ವಾಹನ ಕಂಡ ತಕ್ಷಣ ಕಾಡಿನೊಳಗೆ ಓಡಿಹೋಗುತ್ತವೆ, ಆದರೆ ಈ ಹುಲಿ…

Read More

Nitish Rana Out: ಒಂದೇ ಚೆಂಡಿನಲ್ಲಿ ಎರಡು ಬಾರಿ ಔಟಾದ ನಿತೀಶ್ ರಾಣ: ಕ್ರಿಕೆಟ್‌ನಲ್ಲಿ ಅಪರೂಪದ ಘಟನೆ – Kannada News | Nitish Rana was dismissed twice in the same ball in DC vs CSK IPL 2026 Match Watch Video

ಬೆಂಗಳೂರು (ಮೇ. 06): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 48ನೇ ಪಂದ್ಯ ಮೇ 5 ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಚೆನ್ನೈ ತಂಡವು ದೆಹಲಿಯನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸಿಎಸ್‌ಕೆಗೆ 156 ರನ್‌ಗಳ ಗುರಿಯನ್ನು ನೀಡಿತ್ತು, ಇದನ್ನು ರುತುರಾಜ್ ಪಡೆ 17.3 ಓವರ್‌ಗಳಲ್ಲಿ ಬೆನ್ನಟ್ಟಿತು. ಈ ಪಂದ್ಯದಲ್ಲಿ ಡೆಲ್ಲಿ ಬ್ಯಾಟರ್ ನಿತೀಶ್ ರಾಣ…

Read More

ಭೀಕರ ಅಪಘಾತ: ಪ್ರಭಾಸ್ ನಟನೆಯ ‘ಫೌಜಿ’ ಚಿತ್ರತಂಡದ ಸದಸ್ಯ ಸಾವು; ಶೂಟಿಂಗ್ ಸ್ಥಗಿತ – Kannada News | Prabhas starrer Fauzi shooting halted after crew member dies in road accident

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಅಭಿನಯದ ಬಹುನಿರೀಕ್ಷಿತ ‘ಫೌಜಿ’ ಚಿತ್ರತಂಡದಲ್ಲಿ ಭಾರಿ ದುರಂತ ಸಂಭವಿಸಿದೆ. ಚಿತ್ರೀಕರಣಕ್ಕಾಗಿ ತೆರಳುತ್ತಿದ್ದ ಚಿತ್ರತಂಡದ ವಾಹನ ಅಪಘಾತಕ್ಕೀಡಾಗಿದ್ದು, ಓರ್ವ ಸದಸ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದಾಗಿ ಚಿತ್ರತಂಡಕ್ಕೆ ವಿಘ್ನ ಎದುರಾದಂತೆ ಆಗಿದೆ. ವ್ಯಕ್ತಿ ಮೃತಪಟ್ಟ ಕಾರಣದಿಂದ ‘ಫೌಜಿ’ (Fauzi) ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಹೈದರಾಬಾದ್‌ನ ಹೊರವಲಯದಲ್ಲಿರುವ ರಾಮೋಜಿ ಫಿಲ್ಮ್ ಸಿಟಿಗೆ ಚಿತ್ರೀಕರಣಕ್ಕಾಗಿ ತಂಡವು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಬ್ದುಲ್ಲಾಪುರಮೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ವಾಹನವು…

Read More

IPL 2026: ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು? ಇಲ್ಲಿದೆ ಮಾಹಿತಿ – Kannada News | IPL 2026 playoff qualification scenarios of All 10 teams

IPL 2026: ಐಪಿಎಲ್ 2026ರ ಕಾದಾಟ ಈಗ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ! ಹತ್ತು ತಂಡಗಳ ನಡುವಿನ ಈ ಬಲಿಷ್ಠ ಪೈಪೋಟಿಯಲ್ಲಿ ಪ್ಲೇ-ಆಫ್‌ಗೆ ಲಗ್ಗೆ ಇಡುವ ನಾಲ್ಕು ಅದೃಷ್ಟವಂತ ತಂಡಗಳು ಯಾವುವು ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ. ಕೆಲ ತಂಡಗಳು ಗೆಲುವಿನ ನಾಗಾಲೋಟದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಇನ್ನು ಕೆಲವು ತಂಡಗಳು ಪ್ರತಿ ಪಂದ್ಯವನ್ನೂ ‘ಮಾಡು ಇಲ್ಲವೇ ಮಡಿ’ ಎಂಬಂತೆ ಆಡಬೇಕಾದ ಅನಿವಾರ್ಯತೆಯಲ್ಲಿವೆ. ಅದರಂತೆ ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯಗಳನ್ನು ಗೆಲ್ಲಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ……

Read More

ಬೆಂಗಳೂರು: ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಣ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆತಂಕದಲ್ಲಿ ಟೆಕ್ಕಿ! – Kannada News | Bengaluru Privacy Breach: Engineer’s Bath Videoed in Mahadevapura, Police Investigate.

ಬೆಂಗಳೂರು, ಮೇ.6 : ಸಿಲಿಕಾನ್ ಸಿಟಿಯ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಬಾಡಿಗೆ ಮನೆಯಲ್ಲಿ ಸ್ನಾನ ಮಾಡುತ್ತಿದ್ದ 23 ವರ್ಷದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಅವರ ವಿಡಿಯೋವನ್ನು ಅಪರಿಚಿತ ವ್ಯಕ್ತಿಯೊಬ್ಬ ಚಿತ್ರೀಕರಿಸಿರುವ ಬಗ್ಗೆ ದೂರು ದಾಖಲಾಗಿದೆ. ಇದೀಗ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಯುವತಿಯು ಕಳೆದ ಒಂಬತ್ತು ತಿಂಗಳ ಹಿಂದೆ ಗರುಡಾಚಾರ್ ಪಾಳ್ಯಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಬುಧವಾರ ಬೆಳಿಗ್ಗೆ ಸುಮಾರು 9.30ರ ಸುಮಾರಿಗೆ ಅವರು ಸ್ನಾನ…

Read More