‘ದೇಶ ಇಂತಹ ಪ್ರಧಾನಿಯನ್ನು ಎಂದೂ ನೋಡಿಲ್ಲ!’: ಪಿಎಂ ಮೋದಿ ಬಗ್ಗೆ ಸ್ಮೃತಿ ಇರಾನಿ ಹೇಳಿದ ಆ ಒಂದು ಮಾತು ಸಖತ್​ ವೈರಲ್

ದೆಹಲಿ, ಮೇ.23: ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಗುಣ ಹಾಗೂ ದೇಶಕ್ಕಾಗಿ ಅವರು ಹಗಲಿರುಳು ಶ್ರಮಿಸುವ ಬದ್ಧತೆಯನ್ನು ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸ್ಮೃತಿ ಇರಾನಿ ಅವರು ಅತ್ಯಂತ ಹೆಮ್ಮೆಯಿಂದ ಮತ್ತು ಭಾವುಕರಾಗಿ ಕೊಂಡಾಡಿದ್ದಾರೆ. “ಭಾರತ ದೇಶವು ತನ್ನ ಇತಿಹಾಸದಲ್ಲೇ ಇಷ್ಟು ಸಮರ್ಪಣಾ ಭಾವದಿಂದ ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುವ ಇಂತಹ ಮತ್ತೊಬ್ಬ ಪ್ರಧಾನಿಯನ್ನು ನೋಡಿಲ್ಲ” ಎಂದು ಸ್ಮೃತಿ ಇರಾನಿ ಹೇಳಿರುವ ಮಾತುಗಳು ಸದ್ಯ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಮೋಟಾ ಭಾಯ್’ ಎಂದು ಸಂಬೋಧಿಸಿರುವ ಸ್ಮೃತಿ ಇರಾನಿ, ದೇಶದ 140 ಕೋಟಿ ಜನರ ಆಶೀರ್ವಾದ ಮತ್ತು ಬೆಂಬಲದೊಂದಿಗೆ ಪ್ರಧಾನಿಯವರು ಯಾವುದೇ ಸ್ವಾರ್ಥವಿಲ್ಲದೆ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ. “ಪ್ರಧಾನಿ ಮೋದಿ ಅವರ ಹೃದಯ ಮತ್ತು ಮನಸ್ಸಿನಲ್ಲಿ ಸದಾ ದೇಶದ ಹಿತಚಿಂತನೆ ಮಾತ್ರ ಇರುತ್ತದೆ. ಅವರು ಸದಾ ಭಾರತದ ಪ್ರಗತಿಗಾಗಿ ಮಾತ್ರ ಯೋಚಿಸುತ್ತಾರೆ” ಎಂದು ಅವರು ತಮ್ಮ ಅಭಿಮಾನದ ನುಡಿಗಳನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

TV9 ಬಿಗ್ ಇಂಪ್ಯಾಕ್ಟ್: ಮುಚ್ಚಿದ್ದ ಕಾಳಜಿ ಕೇಂದ್ರ 24 ಗಂಟೆಯಲ್ಲೇ ರೀ-ಓಪನ್! – Kannada News | Gadag Flood Victims Get Aid as Admin Reopens Care Center After TV9 News Report

ಗದಗ, ಮೇ.23: ಗದಗ ನಗರದ ಗಂಗಿಮಡಿ ಭಾಗದ ಸಂತ್ರಸ್ತರ ಪರವಾಗಿ ಟಿವಿ೯ (TV9) ಸುದ್ದಿ ಸಂಸ್ಥೆ ಬಿತ್ತರಿಸಿದ ವಿಸ್ತೃತ ವರದಿಗೆ ಕೊನೆಗೂ ಭರ್ಜರಿ ಜಯ ಸಿಕ್ಕಿದೆ. ನಿನ್ನೆ ಮಧ್ಯಾಹ್ನ ಸಂತ್ರಸ್ತರನ್ನು ಹೊರಹಾಕಿ ದಿಢೀರನೆ ಬಂದ್ ಮಾಡಲಾಗಿದ್ದ ಕಾಳಜಿ ಕೇಂದ್ರವನ್ನು, ವರದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತವು ಇಂದು ಮಧ್ಯಾಹ್ನವೇ ಪುನರಾರಂಭಿಸಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಸಂತ್ರಸ್ತರು, “ಟಿವಿ9 ವರದಿಯಿಂದಲೇ ಇಂದು ನಮ್ಮ ಹೊಟ್ಟೆಗೆ ಅನ್ನ ಮತ್ತು ತಲೆಗೊಂದು ಆಸರೆ ಸಿಕ್ಕಿದೆ” ಎಂದು ಭಾವುಕರಾಗಿ ಧನ್ಯವಾದ ತಿಳಿಸಿದ್ದಾರೆ.

ಮಾಧ್ಯಮಗಳ ವರದಿ ಬೆನ್ನಲ್ಲೇ ಅಲರ್ಟ್ ಆದ ಗದಗ ಉಪವಿಭಾಗಾಧಿಕಾರಿ (AC) ಗಂಗಪ್ಪ ಹಾಗೂ ನಗರಸಭೆ ಆಯುಕ್ತ ರಾಜಾರಾಮ್ ಪವಾರ್ ಅವರು ಗಂಗಿಮಡಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಅಧಿಕಾರಿಗಳನ್ನು ಮುತ್ತಿಗೆ ಹಾಕಿದ ಸಂತ್ರಸ್ತರು, ತಮಗಾದ ಅನ್ಯಾಯವನ್ನು ನೆನೆದು ಕಣ್ಣೀರು ಹಾಕಿ ಗೋಳು ತೋಡಿಕೊಂಡರು. “ನಿನ್ನೆ ಕಾಳಜಿ ಕೇಂದ್ರ ಬಂದ್ ಮಾಡಿರುವ ಕುರಿತು ನಮಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ” ಎಂದು ಸ್ಪಷ್ಟನೆ ನೀಡಿದ ಎಸಿ ಗಂಗಪ್ಪ ಅವರು, ಈ ಬೇಜವಾಬ್ದಾರಿತನಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸದ್ಯ ಸಂತ್ರಸ್ತರಿಗೆ ಸರ್ಕಾರಿ ಶಾಲೆಯಲ್ಲೇ ವಾಸ್ತವ್ಯ ಹಾಗೂ ಊಟದ ಅಧಿಕೃತ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಭೀತಿ?!: ಬಸ್ ನಿಲ್ದಾಣದಿಂದ 20ಕ್ಕೂ ಹೆಚ್ಚು ಜನರನ್ನ ಠಾಣೆಗೆ ತಂದ ಪೊಲೀಸರು

ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಎಂಎಲ್‌ಸಿ (MLC) ಎಸ್.ವಿ. ಸಂಕನೂರ್ ಅವರು ನಿಯೋಗದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತದ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಅವರು ತಕ್ಷಣ ಮಧ್ಯಪ್ರವೇಶಿಸಿ ಈ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಸಂತ್ರಸ್ತರಿಗೆ ಮಧ್ಯಾಹ್ನದ ಅವಧಿಗೆ ಬಿಜೆಪಿಯಿಂದಲೇ ವಿಶೇಷ ಪುಲಾವ್ ಮತ್ತು ಸಿರಾ ಊಟದ ವ್ಯವಸ್ಥೆ ಮಾಡಲಾಗಿತ್ತು. ಗಂಗಿಮಡಿ ನಿವಾಸಿಗಳ ತಗಡಿನ ಶೆಡ್‌ಗಳು ಸಂಪೂರ್ಣವಾಗಿ ದುರಸ್ತಿಯಾಗುವವರೆಗೂ ಈ ಕಾಳಜಿ ಕೇಂದ್ರ ಮುಂದುವರಿಯಲಿದ್ದು, ಸಾರ್ವಜನಿಕ ವಲಯದಲ್ಲಿ ಟಿವಿ೯ ವರದಿಗಾರಿಕೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಸಿಕ್ಸರ್‌ಗಳ ಶತಕ; ಐಪಿಎಲ್‌ನಲ್ಲಿ ಇತಿಹಾಸ ಬರೆದ ಆರ್​ಸಿಬಿ ನಾಯಕ

Source link

IPL 2026: ಪಂಜಾಬ್​ಗೆ ಸುವರ್ಣಾವಕಾಶ; ಇಬ್ಬರು ಸ್ಟಾರ್ ಆಟಗಾರರಿಲ್ಲದೆ ಕಣಕ್ಕಿಳಿಯಲಿದೆ ಲಕ್ನೋ – Kannada News | LSG vs PBKS IPL 2026: Playoff Race Heats Up! Marsh and Markram Absent – PBKS Must Win

ಐಪಿಎಲ್ 2026 ರ 68 ನೇ ಲೀಗ್ ಪಂದ್ಯವು ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಪ್ಲೇಆಫ್ ದೃಷ್ಟಿಯಿಂದ ಪಂಜಾಬ್ ಕಿಂಗ್ಸ್‌ಗೆ ಈ ಪಂದ್ಯ ನಿರ್ಣಾಯಕವಾಗಿದೆ. ಈ ಪಂದ್ಯವನ್ನು ಪಂಜಾಬ್ ಕಿಂಗ್ಸ್ ಗೆಲ್ಲದಿದ್ದರೆ, ಪ್ಲೇಆಫ್ ರೇಸ್‌ನಿಂದ ಹೊರಗುಳಿಯಲಿದೆ. ಹೀಗಾಗಿ ಪಂಜಾಬ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ ಮತ್ತೊಂದೆಡೆ, ಲಕ್ನೋ ತಂಡ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಗುಳಿದಿರುವುದರಿಂದ ಈ ಪಂದ್ಯ ಕೇವಲ ಔಪಚಾರಿಕವಾಗಿದೆ. ಈ ಪಂದ್ಯಕ್ಕೂ ಮುನ್ನ ಪಂಜಾಬ್​ಗೆ ನಿರಾಳಕರ ಸುದ್ದಿ ಸಿಕ್ಕಿದ್ದು, ಈ ಪಂದ್ಯದಲ್ಲಿ ಲಕ್ನೋ ತಂಡದ ಇಬ್ಬರು ಸ್ಟಾರ್ ಬ್ಯಾಟ್ಸ್‌ಮನ್​ಗಳಾದ ಮಿಚೆಲ್ ಮಾರ್ಷ್​ ಹಾಗೂ ಏಡೆನ್ ಮಾರ್ಕ್ರಾಮ್ ಆಡುವುದಿಲ್ಲ ಎಂದು ವರದಿಯಾಗಿದೆ.

ಇಎಸ್‌ಪಿಎನ್‌ಕ್ರಿನ್‌ಫೋ ವರದಿಯ ಪ್ರಕಾರ, ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಲಕ್ನೋ ತಂಡವನ್ನು ತೊರೆದಿದ್ದು ಅವರು ಈ ಪಂದ್ಯವನ್ನು ಆಡುವುದಿಲ್ಲ. ಮಾರ್ಷ್​ ಅಲಭ್ಯತೆ ಪಂಜಾಬ್ ತಂಡಕ್ಕೆ ಕೊಂಚ ನಿರಾಳತೆ ತಂದಿದೆ. ಏಕೆಂದರೆ ಮಾರ್ಷ್​ ಪ್ರಸ್ತತ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಸೀಸನ್​ನಲ್ಲಿ ಆಡಿದ 13 ಇನ್ನಿಂಗ್ಸ್‌ಗಳಲ್ಲಿ 563 ರನ್ ಗಳಿಸಿದ್ದಾರೆ. ಅಲ್ಲದೆ ಮಾರ್ಷ್​ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶತಕ ಬಾರಿಸಿದ್ದರು. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 90 ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ 96 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.

ಮಾರ್ಷ್​ ಜೊತೆಗೆ ದಕ್ಷಿಣ ಆಪ್ರಿಕಾದ ಸ್ಟಾರ್ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಕೂಡ ಕೊನೆಯ ಲೀಗ್ ಪಂದ್ಯದಲ್ಲಿ ಆಡುತ್ತಿಲ್ಲ. ವಾಸ್ತವವಾಗಿ ಮಾರ್ಕ್ರಾಮ್ ರಾಜಸ್ಥಾನ್ ವಿರುದ್ಧದ ಪಂದ್ಯಕ್ಕೂ ಲಭ್ಯರಿರಲಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಅವರು ಈಗಾಗಲೇ ತಂಡವನ್ನು ತೊರೆದು ದಕ್ಷಿಣ ಆಫ್ರಿಕಾಗೆ ವಾಪಸ್ಸಾಗಿದ್ದಾರೆ. ಈ ಸೀಸನ್​ನಲ್ಲಿ ಮಾರ್ಕ್ರಾಮ್ ಅವರ ಪ್ರದರ್ಶನವೂ ಅಷ್ಟೇನೂ ಹೇಳಿಕೊಳ್ಳುವಂತಿರಲಿಲ್ಲ. ಹೀಗಾಗಿ ಮಾರ್ಕ್ರಾಮ್ ಅಲಭ್ಯತೆ ಲಕ್ನೀ ತಂಡಕ್ಕೆ ಹೆಚ್ಚು ತೊಂದರೆ ನೀಡದಿದ್ದರೂ, ಮಾರ್ಷ್​ ಅವರ ಅಲಭ್ಯತೆ ಲಕ್ನೋ ತಂಡಕ್ಕೆ ದೊಡ್ಡ ಹೊಡೆತವಾಗಿದೆ.

ಮಾರ್ಷ್ ಬದಲಿಗೆ ಯಾರು?

ಅರ್ಶಿನ್ ಕುಲಕರ್ಣಿ ಪಂಜಾಬ್ ಕಿಂಗ್ಸ್ ವಿರುದ್ಧ ಮಿಚೆಲ್ ಮಾರ್ಷ್ ಬದಲಿಗೆ ಜೋಶ್ ಇಂಗ್ಲಿಸ್ ಜೊತೆ ಆರಂಭಿಕರಾಗಿ ಆಡಬಹುದು. ಈ ಆವೃತ್ತಿಯಲ್ಲಿ ಅರ್ಶಿನ್ ಕುಲಕರ್ಣಿ ಆರ್‌ಸಿಬಿ ವಿರುದ್ಧ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು. ಇದೀಗ ಅವರು ಇಂಗ್ಲಿಸ್ ಜೊತೆಗೆ ಇನ್ನಿಂಗ್ಸ್ ಆರಂಭಿಸಬಹುದು.

ಸಂಭಾವ್ಯ ಪ್ಲೇಯಿಂಗ್ 11

ಲಕ್ನೋ ಸೂಪರ್ ಜೈಂಟ್ಸ್: ಅರ್ಶಿನ್ ಕುಲಕರ್ಣಿ, ಜೋಶ್ ಇಂಗ್ಲಿಸ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಅಬ್ದುಲ್ ಸಮದ್, ಆಯುಷ್ ಬಡೋನಿ, ಶಹಬಾಜ್ ಅಹ್ಮದ್, ಮೊಹ್ಸಿನ್ ಖಾನ್, ಮಾಯಾಂಕ್ ಯಾದವ್, ಆಕಾಶ್ ಸಿಂಗ್, ಪ್ರಿನ್ಸ್ ಯಾದವ್.

ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಸೂರ್ಯಾಂಶ್ ಶೆಡ್ಜ್, ಮಾರ್ಕಸ್ ಸ್ಟೊಯಿನಿಸ್, ಶಶಾಂಕ್ ಸಿಂಗ್, ಅಜ್ಮತುಲ್ಲಾ ಉಮರ್ಜಾಯ್, ಹರ್ಪ್ರೀತ್ ಬ್ರಾರ್, ಲಾಕಿ ಫರ್ಗುಸನ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್.

Source link

Success Story: ತಂದೆಯ ಶೂ ಅಂಗಡಿಯಿಂದ IAS ಅಧಿಕಾರಿವರೆಗೆ; 6ನೇ ರ‍್ಯಾಂಕ್ ಪಡೆದು ಇತಿಹಾಸ ನಿರ್ಮಿಸಿದ ಶುಭಮ್ ಗುಪ್ತಾ ಯಶೋಗಾಥೆ – Kannada News | Shubham Gupta IAS: From Shoe Shop to UPSC AIR 6 Topper | An Inspiring Success Story

ಹೆತ್ತವರ ಮುಖದಲ್ಲಿ ಹೆಮ್ಮೆಯ ನಗು ಮೂಡಿಸುವುದು ಪ್ರತೀ ಮಕ್ಕಳ ಕನಸು. ಅದೇ ರೀತಿ ತನ್ನ ತಂದೆಯ ಕನಸನ್ನು ನನಸಾಗಿಸಿ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 6ನೇ ರ‍್ಯಾಂಕ್ ಪಡೆದು IAS ಅಧಿಕಾರಿಯಾದ ಶುಭಮ್ ಗುಪ್ತಾ ಅವರ ಜೀವನಗಾಥೆ ಇಂದು ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ, ನಿರಂತರ ಹೋರಾಟ ಮತ್ತು ಎಂದಿಗೂ ಕೈಬಿಡದ ಮನೋಭಾವ ಇದ್ದರೆ ಯಾವುದೇ ಗುರಿಯನ್ನೂ ಸಾಧಿಸಬಹುದು ಎಂಬುದಕ್ಕೆ ಶುಭಮ್ ಜೀವಂತ ಉದಾಹರಣೆ.

ಶುಭಮ್ ಅವರ ಕುಟುಂಬ ಮೂಲತಃ ರಾಜಸ್ಥಾನದ ಸಿಕಾರ್ ಜಿಲ್ಲೆಯದ್ದು. ಬಳಿಕ ಕುಟುಂಬ ಜೈಪುರದಲ್ಲಿ ನೆಲೆಸಿದ್ದರೂ, 2007ರಲ್ಲಿ ತಂದೆಯ ವ್ಯವಹಾರದಲ್ಲಿ ಭಾರೀ ನಷ್ಟ ಉಂಟಾದ ಕಾರಣ ಜೀವನ ಸಂಪೂರ್ಣ ತಲೆಕೆಳಗಾಯಿತು. ಕುಟುಂಬ ಜೀವನೋಪಾಯಕ್ಕಾಗಿ ಗುಜರಾತ್‌ನ ದಹನು ಪ್ರದೇಶಕ್ಕೆ ವಲಸೆ ಹೋಗಬೇಕಾಯಿತು. ಅಲ್ಲಿಂದ ಆರಂಭವಾದ ಕಷ್ಟದ ದಿನಗಳು ಶುಭಮ್ ಅವರನ್ನು ಮತ್ತಷ್ಟು ಗಟ್ಟಿಗೊಳಿಸಿತು.

ದಹನುವಿನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಲ್ಲದ ಕಾರಣ, ಶುಭಮ್ ಮತ್ತು ಅವರ ಸಹೋದರಿಯನ್ನು 80 ಕಿಲೋಮೀಟರ್ ದೂರದ ಶಾಲೆಗೆ ಸೇರಿಸಲಾಗಿತ್ತು. ಪ್ರತಿದಿನ ರೈಲಿನಲ್ಲಿ ದೂರ ಪ್ರಯಾಣ ಮಾಡಿ ಓದಿದರೂ, ಶಿಕ್ಷಣದ ಮೇಲಿನ ಅವರ ಆಸಕ್ತಿ ಎಂದಿಗೂ ಕಡಿಮೆಯಾಗಲಿಲ್ಲ. 10ನೇ ತರಗತಿಯಲ್ಲಿ 10 CGPA ಪಡೆದು ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ ಅವರು, ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪದವಿ ಪಡೆದರು.

UPSC ಕನಸನ್ನು ಬೆನ್ನಟ್ಟಲು ಅವರು ‘ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ಮಾಡುತ್ತಿದ್ದ ಸ್ನಾತಕೋತ್ತರ ಪದವಿಯನ್ನು ಅರ್ಧಕ್ಕೆ ಕೈಬಿಟ್ಟರು. ದೆಹಲಿಯಿಂದ ಮರಳಿದ ಬಳಿಕ ತಂದೆಯ ಶೂ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ UPSC ಸಿದ್ಧತೆ ಆರಂಭಿಸಿದರು. ಅಂಗಡಿಯಲ್ಲಿ ಸರಕುಗಳ ಮೂಟೆ ಹೊರುವುದು, ಗ್ರಾಹಕರಿಗೆ ಸೇವೆ ನೀಡುವುದು ಸೇರಿದಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಾ, ರಾತ್ರಿ ಹೊತ್ತು ಓದುತ್ತಿದ್ದರು.

ಇದನ್ನೂ ಓದಿ: ನಟ ವಿಜಯ್ ಪುತ್ರಿ ದಿವ್ಯಾ ಸಾಶಾ ಬಗ್ಗೆ ನಿಮಗೆಷ್ಟು ಗೊತ್ತು? ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

“ನನ್ನ ಮಗ ಅಧಿಕಾರಿಯಾಗಬೇಕು” ಎಂಬುದು ತಂದೆಯ ದೊಡ್ಡ ಕನಸಾಗಿತ್ತು. ಆ ಕನಸೇ ಶುಭಮ್ ಅವರಿಗೆ ಪ್ರೇರಣೆಯಾಯಿತು. ಆದರೆ UPSC ಪಯಣ ಸುಲಭವಾಗಿರಲಿಲ್ಲ. ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್‌ನಲ್ಲೇ ಸೋಲು ಕಂಡ ಅವರು, ಎರಡನೇ ಪ್ರಯತ್ನದಲ್ಲಿ AIR 360 ಪಡೆದು ಇಂಡಿಯನ್ ಆಡಿಟ್ ಅಂಡ್ ಅಕೌಂಟ್ಸ್ ಸರ್ವೀಸ್‌ಗೆ ಆಯ್ಕೆಯಾದರು. ಆದರೂ IAS ಗುರಿ ಕೈಬಿಡಲಿಲ್ಲ. ಮೂರನೇ ಪ್ರಯತ್ನದಲ್ಲಿ ಮತ್ತೆ ವಿಫಲರಾದಾಗ ಸಂಪೂರ್ಣ ನಿರಾಶರಾಗಿದ್ದರು. ಆದರೆ ಕುಟುಂಬದ ಬೆಂಬಲ ಮತ್ತು ಆತ್ಮವಿಶ್ವಾಸದಿಂದ ಮತ್ತೊಮ್ಮೆ ಹೋರಾಡಿದ ಅವರು, 2018ರಲ್ಲಿ ನಾಲ್ಕನೇ ಪ್ರಯತ್ನದಲ್ಲಿ AIR 6 ಪಡೆದು ದೇಶದ ಗಮನ ಸೆಳೆದರು.

ಇಂದು IAS ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶುಭಮ್ ಗುಪ್ತಾ, “ಯಶಸ್ಸಿಗೆ ಶಾರ್ಟ್‌ಕಟ್ ಇಲ್ಲ. ಹಿನ್ನೆಲೆ ಎಷ್ಟೇ ಸಾಮಾನ್ಯವಾಗಿದ್ದರೂ, ಕಷ್ಟಗಳು ಎಷ್ಟೇ ದೊಡ್ಡದಾಗಿದ್ದರೂ ಗುರಿಯ ಮೇಲಿನ ನಂಬಿಕೆ ಮತ್ತು ಕಠಿಣ ಪರಿಶ್ರಮ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ” ಎಂದು ಯುವಕರಿಗೆ ಸಂದೇಶ ನೀಡಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಾ ರಾಜ್​ಕುಮಾರ್ ಹಾಡಿದ ರಾಯರ ಹಾಡುಗಳ ನೆನೆದ ನಟಿ ತಾರಾ

ರಾಯರ (Rayaru) ಕುರಿತಾಗಿ ಹಲವಾರು ಖ್ಯಾತ ಗಾಯಕರ ಹಾಡುಗಳು ಇದ್ದಾವೆ. ಈಗಲೂ ರಾಜ್ಯದ ಹಲವಾರು ದೇವಾಲಯಗಳಲ್ಲಿ ಗುರುವಾರಗಳಂದು ರಾಯರ ಹಾಡುಗಳನ್ನು ಹಾಕಲಾಗುತ್ತದೆ. ಅವುಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವುದು ಪಿಬಿ ಶ್ರೀನಿವಾಸ್ ಹಾಡಿರುವ ಹಾಡುಗಳು ಮತ್ತು ಡಾ ರಾಜ್​ಕುಮಾರ್ ಅವರು ಹಾಡಿದ ಹಾಡುಗಳು. ಇದೀಗ ಅಜನೀಶ್ ಲೋಕನಾಥ್ ಅವರು ರಾಯರ ಹಾಡುಗಳ ಆಲ್ಬಂ ಒಂದನ್ನು ಮಾಡಿದ್ದಾರೆ. ಆಲ್ಬಂ ಅನ್ನು ನಟಿ ತಾರಾ ಹಾಗೂ ಇತರ ಗಣ್ಯರು ಬಿಡುಗಡೆ ಮಾಡಿದ್ದು, ನಟಿ ತಾರಾ ಅವರು ಅಣ್ಣಾವ್ರು ಹಾಡಿದ್ದ ರಾಯರ ಹಾಡುಗಳ ನೆನಪು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಶಾರಾಮಿ ಕಾರು ಖರೀದಿಸಿದ ನಟಿ ರಾಧಿಕಾ, ಬೆಲೆ ಎಷ್ಟು ಲಕ್ಷ ಗೊತ್ತೆ? – Kannada News | Radhika Narayan purchased new Volvo Ex30 car see details

ಸಿನಿಮಾ (Cinema) ನಟ-ನಟಿಯರು ಐಶಾರಾಮಿ ಕಾರುಗಳು ಖರೀದಿಸುವುದು ಹೊಸದೇನೂ ಅಲ್ಲ. ಆದರೆ ಅವರ ಕಾರುಗಳ ಆಯ್ಕೆ ಅವರ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಇದೀಗ ನಟಿ ರಾಧಿಕಾ ನಾರಾಯಣ್ ಅವರು ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ಇದು ಸಾಮಾನ್ಯವಾದ ಕಾರಲ್ಲ, ವಿಶ್ವದಲ್ಲೇ ಸುರಕ್ಷತೆಗೆ ಹೆಸರಾದ ಕಾರು ಬ್ರ್ಯಾಂಡ್ ಒಂದು ಬಿಡುಗಡೆ ಮಾಡಿರುವ ಐಶಾರಾಮಿ ಮತ್ತು ಸುರಕ್ಷಿತ ಇವಿ ಕಾರು. ಅದುವೇ ವೋಲ್ವೋ ಇಎಕ್ಸ್ 30. ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಹೊಸ ಕಾರನ್ನು ನಟಿ ರಾಧಿಕಾ ಖರೀದಿ ಮಾಡಿದ್ದಾರೆ.

‘ರಂಗಿತರಂ’, ‘ಯೂ ಟರ್ನ್’, ‘ಡಿಟೆಕ್ಟಿವ್ ಶಿವಾಜಿ’ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ, ಈಗಲೂ ನಟಿಸುತ್ತಿರುವ ನಟಿ ರಾಧಿಕಾ ನಾರಾಯಣ್ ಅವರು ‘ವೋಲ್ವೋ ಇಕ್ಸ್ 30’ ಕಾರನ್ನು ಇತ್ತೀಚೆಗಷ್ಟೆ ಖರೀದಿ ಮಾಡಿದ್ದು, ಕಾರಿನೊಟ್ಟಿಗೆ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಮತ್ತೊಂದು ಸುಂದರ ವಸ್ತು, ನನ್ನ ಮೆಚ್ಚಿನ ವಸ್ತುಗಳ ಪಟ್ಟಿಗೆ ಸೇರಿದೆ’ ಎಂದು ನಟಿ ರಾಧಿಕಾ ನಾರಾಯಣ್ ತಮ್ಮ ಹೊಸ ಕಾರಿನ ಬಗ್ಗೆ ಬರೆದುಕೊಂಡಿದ್ದಾರೆ.

ರಾಧಿಕಾ ಖರೀದಿ ಮಾಡಿರುವ ‘ವೋಲ್ವೋ ಇಕ್ಸ್ 30’ ಇವಿ ಕಾರಾಗಿದ್ದು ಇದರ ಬೆಲೆ ಬೆಂಗಳೂರಿನಲ್ಲಿ 42 ಲಕ್ಷದಿಂದ 50 ಲಕ್ಷ ರೂಪಾಯಿಗಳ ವರೆಗೆ ಇದೆ. ಕಾರಿನಲ್ಲಿ ಸಾಕಷ್ಟು ವೈಶಿಷ್ಟ್ಯಗಳಿದ್ದು, ಈ ಕಾರು ಸಿಂಗಲ್ ಚಾರ್ಜ್​ಗೆ 400 ರಿಂದ 450 ಕಿ.ಮೀ ರೇಂಜ್ ನೀಡುತ್ತದೆಯಂತೆ. ಜೊತೆಗೆ ಅತ್ಯಂತ ವೇಗವಾದ ಕಾರು ಸಹ ಇದಾಗಿದ್ದು ನಾಲ್ಕು ಸೆಕೆಂಡುಗಳ ಒಳಗಾಗಿಯೇ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಶಕ್ತಿವಂತ ಕಾರು ಇದಾಗಿದ್ದು ವೋಲ್ವೊ ಇಕ್ಸ್ 30ಯ ಟ್ವಿನ್ ಮೋಟಾರ್ ಕಾರು 422 ಬಿಎಚ್​​ಪಿ ಮತ್ತು 543 ನೂಟಮ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದನ್ನೂ ಓದಿ:ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

ಹಲವಾರು ಸುರಕ್ಷತಾ ಆಯ್ಕೆಗಳನ್ನು ಹೊಂದಿರುವ ಈ ಕಾರು ಅತ್ಯುತ್ತಮ ಇಂಟೀರಿಯರ್, ಅತ್ಯುತ್ತಮ ಸೌಂಡ್ ಸಿಸ್ಟಮ್, ಅತ್ಯುತ್ತಮ ಡ್ಯಾಶ್ ಬೋರ್ಡ್ ವಿನ್ಯಾಸ ಮತ್ತು ಡ್ರೈವಿಂಗ್ ಆಯ್ಕೆಗಳನ್ನು ಒಳಗೊಂಡಿದೆ. ಹೀಟೆಡ್-ವೆಂಟಿಲೇಟೆಡ್ ಸೀಟುಗಳ ಜೊತೆಗೆ ಹಲವು ಐಶಾರಾಮಿ ಆಯ್ಕೆಗಳನ್ನು ಸಹ ಈ ಕಾರು ಒಳಗೊಂಡಿದೆ. ಇದೇ ಕಾರಣಕ್ಕೆ ಈ ಕಾರು ಇಷ್ಟು ದುಬಾರಿ.

ಅಂದಹಾಗೆ ರಾಧಿಕಾ ಅವರು ವೋಲ್ವೋ ಕಂಪೆನಿಯ ಅಭಿಮಾನಿ ಆಗಿದ್ದು, ಅವರ ಬಳಿ ವೋಲ್ವೋ ಇಎಕ್ಸ್ 30 ಜೊತೆಗೆ ವೋಲ್ವೋದ ಶಕ್ತಿಶಾಲಿ ಇಂಧನ ಕಾರಾ ವೋಲ್ವೊ ಎಕ್ಸ್​ಸಿ 90 ಕಾರು ಸಹ ಇದೆ. ಇದು ಸಹ ಐಶಾರಾಮಿ ಮತ್ತು ಪವರ್​​ಫುಲ್ ಕಾರಾಗಿದ್ದು, ಈ ಕಾರಿನ ಬೆಲೆ ಬೆಂಗಳೂರಿನಲ್ಲಿ 1.20 ಕೋಟಿ ರೂಪಾಯಿಗಳಿವೆ. ವೋಲ್ವೊ ಎಕ್ಸ್​ಸಿ 90 ಕಾರು ವಿಶ್ವದ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದ್ದು, ಆ ಕಾರಿನ ಜೊತೆಗೆ ಈಗ ವೋಲ್ವೋದ ಇವಿ ಕಾರನ್ನೂ ಸಹ ನಟಿ ರಾಧಿಕಾ ನಾರಾಯಣ್ ಖರೀದಿ ಮಾಡಿದ್ದಾರೆ.

ರಾಧಿಕಾ ನಾರಾಯಣ್ ಅವರು ಪ್ರಸ್ತುತ ‘ವೀರ ಕಂಬಳ’ ಮತ್ತು ‘ಡೈಜಿ’ ಸಿನಿಮಾಗಳಲ್ಲಿ ನಟಿಸಿದ್ದು, ಎರಡೂ ಸಿನಿಮಾಗಳು ಆದಷ್ಟು ಭೇಗ ಬಿಡುಗಡೆ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ: ಹಾಕಿಕೊಂಡು ಬಂದ್ರೆ ಕಾನೂನು ಕ್ರಮ; ಮಧು ಬಂಗಾರಪ್ಪ – Kannada News | Saffron Shawls Not Allowed in Schools; Legal Action Will Be Taken, Says Madhu Bangarappa

ಮೈಸೂರು, ಮೇ 23: ಹಿಜಾಬ್ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ. ಹಿಜಾಬ್ ಬಗ್ಗೆ ನಾವು ನಮ್ಮ ಪ್ರಣಾಳಿಕೆಯಲ್ಲೇ ಹೇಳಿದ್ದೇವು. ಜನರು ಮತ ಕೊಟ್ಟಿದ್ದಾರೆ, ಅದಕ್ಕಾಗಿ ಅವರ ಋಣ ತೀರಿಸಿದ್ದೇವೆ‌. ಬಿಜೆಪಿಯವರಿಗೆ ಅದು ಹಿಜಾಬ್, ನಮಗೆ ಸಮಾನತೆ ಸಂಕೇತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶ ಇಲ್ಲ, ಯಾರಾದರೂ ಹಾಕಿಕೊಂಡು ಬಂದರೆ ಕಾನೂನಿನ ಪ್ರಕಾರ ಕ್ರಮ ಎಂದಿದ್ದಾರೆ. ಕೇಂದ್ರೀಯ ವಿದ್ಯಾಲಯದಲ್ಲಿ ಯಾವ ರೂಲ್ಸ್​ ಇದೆ ಎಂಬುದನ್ನು ಬಿಜೆಪಿಯವರು ಮೊದಲು ನೋಡಿಕೊಂಡು ಬರಲಿ ಎಂದು ಕಿಡಿಕಾರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಮೇ,23: ಆನೇಕಲ್‌ನಲ್ಲಿ ದೇಶದ 2ನೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭ ವಿಜೃಂಭಣೆಯಿಂದ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಸಿದ್ದರಾಮಯ್ಯ ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಜನರು ನೆರೆದಿದ್ದರು. ಈ ಹೊಸ ಕ್ರಿಕೆಟ್ ಸ್ಟೇಡಿಯಂ ಬೆಂಗಳೂರಿನ ಕ್ರೀಡಾ ಲೋಕಕ್ಕೆ ಒಂದು ದೊಡ್ಡ ಮೈಲಿಗಲ್ಲು ಆಗಲಿದೆ. ಇದು ಚಿನ್ನಸ್ವಾಮಿ ಸ್ಟೇಡಿಯಂ ನಂತರ ಮತ್ತೊಂದು ಪ್ರಮುಖ ಕ್ರಿಕೆಟ್ ಅಖಾಡವಾಗಿ ಹೊರಹೊಮ್ಮಲಿದೆ. ಕಾರ್ಯಕ್ರಮದ ನಿಮಿತ್ತ ನೆರೆದಿದ್ದ ಜನಸಮೂಹದಲ್ಲಿ ಸಂಭ್ರಮ ಮನೆ ಮಾಡಿತ್ತು. ಜನರು ಪರಸ್ಪರ ಶುಭ ಕೋರಿ ಸಂಭ್ರಮ ವ್ಯಕ್ತಪಡಿಸುತ್ತಿದ್ದರು. ಚೆಲ್ಲಾ ಚೆಲ್ಲಾನೆ ಉದುರವ್ವ ಎಂಬಂತಹ ಹಾಡುಗಳ ಮೂಲಕ ಸಂಭ್ರಮ ಹೆಚ್ಚಾಗಿತ್ತು. ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಜಮೀರ್ ಅಹಮದ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು. ಹೊಸ ಕ್ರಿಕೆಟ್ ಸ್ಟೇಡಿಯಂ ಬೆಂಗಳೂರಿನ ಕ್ರೀಡಾ ಮೂಲಸೌಕರ್ಯವನ್ನು ಗಣನೀಯವಾಗಿ ಹೆಚ್ಚಿಸಲಿದೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಆರತಿ ಮಾಡಿ ಸ್ವಾಗತಿಸಲಾಗಿತ್ತು. ಆರತಿ ಮಾಡಿದ ಮಹಿಳೆಯರಿಗೆ ಗರಿಗರಿ ನೋಟನ್ನು ಸಿಎಂ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಲ್ಲಿ ಉಬರ್ ಕ್ಯಾಬ್ ಚಾಲಕನ ಮೇಲೆ ಗ್ಯಾಂಗ್​ನಿಂದ ಡೆಡ್ಲಿ ಅಟ್ಯಾಕ್​​! ಯುವತಿ ಎದುರೇ ಹಿಗ್ಗಾಮುಗ್ಗಾ ಥಳಿತ – Kannada News | Bengaluru: Gang Attacks Uber Cab Driver in Front of girl

ಬೆಂಗಳೂರು, ಮೇ 23: ಸಿಲಿಕಾನ್ ಸಿಟಿಯಲ್ಲಿ (Bangaluru) ಪುಂಡರ ಹಾವಳಿ ಮಿತಿಮೀರಿದ್ದು, ಮಧ್ಯರಾತ್ರಿ ರಸ್ತೆಯಲ್ಲೇ ಉಬರ್ ಕ್ಯಾಬ್ ಚಾಲಕನೊಬ್ಬನ (Uber driver) ಮೇಲೆ ಮತ್ತೊಬ್ಬ ಚಾಲಕ ಮತ್ತು ಗ್ಯಾಂಗ್​​ನಿಂದ ಕಾರು ಅಡ್ಡ ಹಾಕಿ ಮನ ಬಂದಂತೆ ಥಳಿಸಿದ್ದಾರೆ. ನಗರದ ಡಬಲ್ ರೋಡ್​ನಲ್ಲಿ ಮೇ 22 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೆ ಕಾರಣವೇನು ಎಂದು ತಿಳಿದುಬಂದಿಲ್ಲ. ವಿಲ್ಸನ್ ಗಾರ್ಡನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮುಖ್ಯಾಂಶಗಳು

  • ರಸ್ತೆಯಲ್ಲೇ ಉಬರ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ
  • ಡೆಡ್ಲಿ ಅಟ್ಯಾಕ್​​ ವಿಡಿಯೋ ವೈರಲ್​​
  • ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ

ಯುವತಿ ಮುಂದೆ ಹಿಗ್ಗಾಮುಗ್ಗಾ ಹಲ್ಲೆ

ಮತ್ತೊಬ್ಬ ಚಾಲಕ ಹಾಗೂ ಆತನ ಗ್ಯಾಂಗ್ ಸೇರಿ ಉಬರ್ ಕ್ಯಾಬ್ ಅನ್ನು ಮಧ್ಯರಸ್ತೆಯಲ್ಲೇ ಅಡ್ಡಗಟ್ಟಿದ್ದಾರೆ. ಬಳಿಕ ಉಬರ್ ಡ್ರೈವರ್‌ನನ್ನು ಬಲವಂತವಾಗಿ ಕಾರಿನಿಂದ ಕೆಳಗೆ ಇಳಿಸಿ, ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ನಡೆಸುವಾಗ ಪಕ್ಕದಲ್ಲೇ ಯುವತಿಯೊಬ್ಬರು ನಿಂತಿದ್ದರೂ ಲೆಕ್ಕಿಸದ ಪುಂಡರು, ಚಾಲಕನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದಾರೆ. ಸದ್ಯ ಎದೆ ನಡುಗಿಸುವ ಹಲ್ಲೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಇದನ್ನೂ ಓದಿ: ಶಿರಸಿಯಲ್ಲಿ ನಡುರಸ್ತೆಯಲ್ಲೇ ನಡುಕ ಹುಟ್ಟಿಸಿದ ಗ್ಯಾಂಗ್‌ವಾರ್!: 6 ಯುವಕರ ವಿರುದ್ಧ ಪ್ರಕರಣ ದಾಖಲು

ಇನ್ನು ಈ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ವಿಲ್ಸನ್ ಗಾರ್ಡನ್ ಪೊಲೀಸರು ಅಲರ್ಟ್ ಆಗಿದ್ದಾರೆ. ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೇ 22ರಂದೇ ಈ ಘಟನೆ ನಡೆದಿದ್ದು, ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

ಸಿಸಿಟಿವಿ ತಲಾಷ್; ಪುಂಡರಿಗಾಗಿ ಹುಡುಕಾಟ

ದೂರು ದಾಖಲಾಗದಿದ್ದರೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೆ.ಹೆಚ್. ರಸ್ತೆಯ ಸುತ್ತಮುತ್ತಲಿರುವ ವಿವಿಧ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ದಾಳಿಗೆ ಒಳಗಾದ ಉಬರ್ ಕ್ಯಾಬ್ ಹಾಗೂ ಅಟ್ಯಾಕ್ ಮಾಡಿದ ಗ್ಯಾಂಗ್‌ನ ಕಾರಿನ ನೋಂದಣಿ ಸಂಖ್ಯೆಗಳನ್ನು ಪತ್ತೆ ಹಚ್ಚಲಾಗುತ್ತಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version