Video: ಮರಿಗಳನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ಎತ್ತರದ ಗೋಡೆ ಏರಿದ ತಾಯಿ ಬೆಕ್ಕು – Kannada News | China: Mother cat rescues kittens trapped in a high wall in China

ತಾಯಿ ಪ್ರೀತಿಗೆ (mother love) ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳ ಹಿತಕ್ಕಾಗಿ ಎಂತಹ ಕಷ್ಟವನ್ನಾದರೂ ಹೆತ್ತಮ್ಮ ಸಹಿಸಿಕೊಳ್ಳುತ್ತಾಳೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ತಾಯಿ ಬೆಕ್ಕೊಂದು ಅಪಾಯದಲ್ಲಿ ಸಿಲುಕಿದ್ದ ತನ್ನ ಮರಿಗಳನ್ನು ಕಾಪಾಡಲು ಪ್ರಾಣವನ್ನೇ ಪಣಕ್ಕಿಟ್ಟಿದೆ. ಹೌದು, ತನ್ನ ಕಂದಮ್ಮನನ್ನು ರಕ್ಷಿಸಲು ಎತ್ತರದ ಗೋಡೆ ಏರಿದ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಚೀನಾದಲ್ಲಿ ನಡೆದಿದೆ ಎನ್ನಲಾಗಿದೆ. ವೈರಲ್ ಆದ ವಿಡಿಯೋಗೆ ನೆಟ್ಟಿಗರು ಕಾಮೆಂಟ್‌ ತಾಯಿ ಪ್ರೀತಿ, ಕಾಳಜಿಯನ್ನು ಹಾಡಿ ಹೊಗಳಿದ್ದಾರೆ.

ಬುಫ್ಲಿಲೆಕ್ಸ್ (Bufflylex) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಎತ್ತರದ ಗೋಡೆಯೊಂದರ ಸಣ್ಣ ರಂಧ್ರದಲ್ಲಿ ಬೆಕ್ಕಿನ ಮರಿಗಳು ಸಿಲುಕಿಕೊಂಡಿದ್ದು ಕೂಗುತ್ತಿವೆ. ತನ್ನ ಕಂದಮ್ಮಗಳ ಕೂಗು ಕೇಳುತ್ತಿದ್ದಂತೆ ತಾಯಿ ಬೆಕ್ಕು ಪ್ರಾಣ ಲೆಕ್ಕಿಸದೇ ಎತ್ತರದ ಗೋಡೆ ಏರಲು ಮುಂದಾಗಿದೆ. ತನ್ನ ಉಗುರುಗಳ ಸಹಾಯದಿಂದ ಹಿಡಿದು  ಗೋಡೆ ಹಿಡಿದು ಮೇಲಕ್ಕೆ ಮೆಲ್ಲನೆ  ಹತ್ತಿ ತನ್ನ ಮರಿಗಳಿರುವ ಜಾಗವನ್ನು ಸೇರಿದೆ. ಈ ದೃಶ್ಯವನ್ನು ನೋಡುತ್ತಾ ನಿಂತವರು ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರೈಲು ಹಳಿ ದಾಟಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಸಾಥ್‌, ವೈರಲ್‌ ಆಯ್ತು ದೃಶ್ಯ

ಈ ವಿಡಿಯೋ ನಲ್ವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿ ಪ್ರೀತಿ ಅಂದ್ರೆ ಹಾಗೆಯೇ ಎಂದಿದ್ದಾರೆ. ಇನ್ನೊಬ್ಬರು, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕರುಳ ಬಳ್ಳಿಗೆ ತೊಂದರೆ ತಾಯಿ ಹೃದಯ ಎಷ್ಟು ಚಡಪಡಿಸುತ್ತದೆ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:24 am, Sun, 9 August 26

Source link

ಶಿವಗಂಗೆ ಬೆಟ್ಟದಲ್ಲಿ ಕಾಣೆಯಾದ ಟೆಕ್ಕಿ; ಅದ್ವೈತ್ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆ! – Kannada News | Missing Techie in Bengaluru: High Tech Search Ops with Drones for Missing Software Engineer at Shivagange Hills

ನೆಲಮಂಗಲ, ಆಗಸ್ಟ್ 09: ಟ್ರಕ್ಕಿಂಗ್‌ಗಾಗಿ ಶಿವಗಂಗೆ ಬೆಟ್ಟಕ್ಕೆ ತೆರಳಿದ್ದ ಬೆಂಗಳೂರಿನ ಕಾಡುಗೋಡಿಯ ಸಾಫ್ಟ್‌ವೇರ್ ಎಂಜಿನಿಯರ್ ಅದ್ವೈತ್ ಉಪಾಧ್ಯಾಯ (ಮಧ್ಯಪ್ರದೇಶ ಮೂಲದವರು) ಕಳೆದ ಎರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇವರ ಪತ್ನಿ ಪ್ರಾಪ್ತಿ ಚೌಹಾಣ್ ನೀಡಿದ ದೂರಿನನ್ವಯ ಡಾಬಸ್‌ಪೇಟೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಅದ್ವೈತ್ ಬೆಟ್ಟ ಏರುತ್ತಿರುವ ಸಿಸಿಟಿವಿ ದೃಶ್ಯಾವಳಿ ಪತ್ತೆಯಾಗಿದ್ದು, ಅವರು ಬಾಡಿಗೆಗೆ ಪಡೆದಿದ್ದ ಬುಲೆಟ್ ಬೈಕ್ ಪಾರ್ಕಿಂಗ್‌ನಲ್ಲಿ ಪತ್ತೆಯಾಗಿದೆ. ಶನಿವಾರ ಸಂಜೆ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಜಂಟಿ ಕಾರ್ಯಾಚರಣೆ ಇಂದು (ಆ. 9) ಮತ್ತೆ ಮುಂದುವರಿದಿದೆ. ನಾಪತ್ತೆಯಾಗಿರುವ ಟೆಕ್ಕಿಯ ಪತ್ತೆಗಾಗಿ ಪೊಲೀಸರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಬಾಡಿ ಫೌಂಡ್ ಮೆಟಲ್ ಡಿಟೆಕ್ಟರ್ ಹಾಗೂ ಹೈ-ರೆಸಲ್ಯೂಷನ್ ಡ್ರೋನ್ ಕ್ಯಾಮೆರಾಗಳನ್ನು ತರಿಸುತ್ತಿದ್ದು, ತೀವ್ರ ಶೋಧ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಿಯಾರಾ ಅಡ್ವಾಣಿ, ಹುಮಾ ಖುರೇಷಿಗೆ ವಿಶೇಷ ಸಂದೇಶ ಕೊಟ್ಟ ಯಶ್ – Kannada News | Yash special message to Kiara Advani and Huma Qureshi

ಟಾಕ್ಸಿಕ್’ (Toxic) ಟ್ರೈಲರ್ ರಿಲೀಸ್ ನಿನ್ನೆ (ಆಗಸ್ಟ್ 08) ನಡೆದಿದ್ದು, ಟ್ರೈಲರ್​​ಗೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ನಾಲ್ಕು ನಿಮಿಷದ ಟ್ರೈಲರ್​​ನಲ್ಲಿ ಆಕ್ಷನ್, ರೊಮೊನ್ಯಾಸ್, ಸೆಂಟಿಮೆಂಟ್, ದ್ರೋಹ, ಅಪ್ಪ-ಮಗನ ಸೆಂಟಿಮೆಂಟ್, ದ್ವೇಷ, ಮಾನವೀಯತೆ ಇನ್ನೂ ಹಲವು ಅಂಶಗಳು ಇವೆ. ನಿನ್ನೆ ಎಎಂಬಿ ಮಾಲ್​​ನಲ್ಲಿ ನಡೆದ ‘ಟಾಕ್ಸಿಕ್’ ಟ್ರೈಲರ್ ಇವೆಂಟ್​​ನಲ್ಲಿ ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಇನ್ನೂ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಎಲ್ಲರಿಗೂ ಧನ್ಯವಾದ ಹೇಳಿದರು. ಆದರೆ ಕಿಯಾರಾ ಅಡ್ವಾಣಿ ಮತ್ತು ಹುಮಾ ಖುರೇಷಿ ಅವರುಗಳಿಗೆ ವಿಶೇಷ ಸಂದೇಶ ನೀಡಿದರು.

ನಯನತಾರಾ ಅವರ ಸ್ಟಾರ್​​ಡಮ್, ಅವರಿಗಿರುವ ಮಾರುಕಟ್ಟೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಯಶ್, ರುಕ್ಮಿಣಿ ಅವರು ಲಂಡನ್​​ನಲ್ಲಿ ಕಲಿತಿರುವುದು, ಅವರು ಮಾಡುತ್ತಿರುವ ಸಾಧನೆ, ಕನ್ನಡಿಗನಾಗಿ ಹೆಮ್ಮೆ ಎನಿಸಿದೆ ಎಂದರು. ತಾರಾ ಸುತಾರಿಯಾ ಅವರ ಸೌಂದರ್ಯ ಮತ್ತು ಪ್ರತಿಭೆಯನ್ನು ಕೊಂಡಾಡಿದರು. ಕಿಯಾರಾ ಮತ್ತು ಹುಮಾ ಅವರಿಗೆ ತುಸು ಭಿನ್ನವಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಅವರು ಅನುಭವಿಸಿದ ಕಷ್ಟಕ್ಕೆ ಮರುಕವನ್ನು, ಸಾಂತ್ವನವನ್ನೂ ಹೇಳಿದರು.

‘ತಬಾಹಿ’ ಹಾಡಿನ ಬಿಡುಗಡೆ ಬಳಿಕ ಕಿಯಾರಾ ಅಡ್ವಾಣಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿ ಆಗಿದ್ದಾರೆ. ಕಿಯಾರಾ ಅವರನ್ನು ಅಶ್ಲೀಲವಾಗಿ ಟ್ರೋಲ್ ಮಾಡಲಾಗುತ್ತಿದೆ. ತೀರ ನೀಚವಾಗಿ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಕಮೆಂಟ್​​ಗಳನ್ನು ಹಾಕಲಾಗುತ್ತಿದೆ. ಕಿಯಾರಾ, ವೃತ್ತಿಜೀವನದಲ್ಲಿಯೇ ಕೆಟ್ಟದಾಗಿ ಟೀಕೆಗೆ ಒಳಗಾಗಿದ್ದರು.

ಇದನ್ನೂ ಓದಿ:ಒಳ್ಳೆಯ ಸಿನಿಮಾಕ್ಕಾಗಿ ನನ್ನ ಬಳಿ ಸಾಕಷ್ಟು ಹಣ ಇದೆ: ನಿರ್ಮಾಪಕ ವೆಂಕಟ್

ನಿನ್ನೆಯ ಕಾರ್ಯಕ್ರಮದಲ್ಲಿ ಕಿಯಾರಾ ಬಗ್ಗೆ ಮಾತನಾಡಿದ ಯಶ್, ‘ನೀವು ಅದೆಷ್ಟು ಶ್ರಮಹಾಕಿ ಕೆಲಸ ಮಾಡುತ್ತೀರಿ ಎಂಬುದನ್ನು ನೋಡಿ ಆಶ್ಚರ್ಯವಾಗುತ್ತದೆ. ಸಾಕಷ್ಟು ಸ್ಟಾರ್​​ಗಳನ್ನು ನಾವು ಒಟ್ಟಿಗೆ ಸೇರಿಸಿದ್ದೇವೆ, ಇದರಿಂದ ಸೆಟ್​​ನಲ್ಲಿ ಸಮಸ್ಯೆ ಆಗಬಹುದು ಎಂದುಕೊಂಡಿದ್ದೆವು. ಆದರೆ ಕಿಯಾರಾ ಅದೆಷ್ಟು ಸರಳವಾದ ವ್ಯಕ್ತಿ ಎಂದರೆ ನಮಗೆ ಅವರೊಟ್ಟಿಗೆ ಎಂದಿಗೂ ಸಮಸ್ಯೆ ಆಗಲಿಲ್ಲ. ಅವರು ನೀಡಿರುವ ನಟನೆ ಅತ್ಯದ್ಬುತ. ಆದರೆ ಒಬ್ಬ ನಟಿಯಾಗಿ ಅವರು ಅನಿವಾರ್ಯವಾಗಿ ಅನುಭವಿಸ ಬೇಕಾದ ಮಾನಸಿಕ ಹಿಂಸೆಯ ಬಗ್ಗೆ ನನಗೆ ಬಹಳ ನೋವಿದೆ, ಆದರೆ ಅದನ್ನೆಲ್ಲ ಕೇರ್ ಮಾಡುವುದು ಬೇಡ, ಮುನ್ನುಗ್ಗುತ್ತಲೇ ಇರಿ’ ಎಂದಿದ್ದಾರೆ ಯಶ್.

ಇನ್ನು ನಟಿ ಹುಮಾ ಖುರೇಷಿ ಸಹ ಇತ್ತೀಚೆಗೆ ‘ಟಾಕ್ಸಿಕ್’ ಕಾರಣಕ್ಕೆ ತುಸು ಸಮಸ್ಯೆ ಎದುರಿಸಿದ್ದರು. ಹುಮಾ ಅವರು ಸ್ವತಃ ನಿರ್ಮಾಣ ಮಾಡಿ ನಟಿಸಿದ್ದ ‘ಬೇಬಿ ಡೂ ಡೈ ಡು’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿತ್ತು. ಆ ಸಿನಿಮಾದ ಪ್ರಚಾರದ ವೇಳೆ ಅವರಿಗೆ ಪದೇ ಪದೇ ‘ಟಾಕ್ಸಿಕ್’ ಸಿನಿಮಾದ ಪ್ರಶ್ನೆಗಳೇ ಎದುರಾಗಿದ್ದವು. ಸಾಕಷ್ಟು ಕಷ್ಟಪಟ್ಟು ಅವರು ಸಿನಿಮಾದ ಪ್ರಚಾರ ಮಾಡಿದರು. ಈ ಬಗ್ಗೆಯೂ ಮಾತನಾಡಿದ ಯಶ್, ‘ಹುಮಾ ದಿಟ್ಟ ಮಹಿಳೆ, ಟ್ರೈಲರ್​​ನಲ್ಲಿ ಅವರು ಕಡಿಮೆ ಕಾಣಿಸಿದ್ದಾರೆ ಆದರೆ ಸಿನಿಮಾನಲ್ಲಿ ಅವರು ಗಮನ ಸೆಳೆಯಲಿದ್ದಾರೆ. ಹುಮಾ ಒಬ್ಬ ಅದ್ಭುತ ನಟಿ, ಅವರು ಇತ್ತೀಚೆಗೆ ನಿರ್ಮಾಣ ಸಹ ಮಾಡಿದ್ದಾರೆ. ಜೊತೆಗೆ ಇಂಡಿಪೆಂಡೆಂಟ್ ಸಿನಿಮಾಗಳನ್ನು ಸಹ ಮಾಡುತ್ತಿದ್ದಾರೆ. ನಿರ್ಮಾಪಕರಾಗಿ ಸಿನಿಮಾದ ಕಷ್ಟ ಸುಖಗಳನ್ನು ಅವರು ಕಲಿಯುತ್ತಿದ್ದಾರೆ, ಅವರು ಇದನ್ನು ಹೀಗೆಯ ಮುಂದುವರೆಸಲಿ, ಒಳ್ಳೆಯ ಸಿನಿಮಾಗಳನ್ನು ಮಾಡಲಿ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Nag Panchami 2026: ನಾಗರ ಪಂಚಮಿ; ಈ 8 ಪವಿತ್ರ ಸರ್ಪಗಳನ್ನು ಪೂಜಿಸುವುದರ ಮಹತ್ವವೇನು ಗೊತ್ತಾ? – Kannada News | Nag Panchami: The 8 Sacred Serpents Worshipped and Kalsarpa Dosha Remedies

ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿ ಹಬ್ಬವನ್ನು ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಶುಭ ದಿನದಂದು ಮಹಾದೇವನ ಜೊತೆಗೆ ಸರ್ಪ ದೇವರನ್ನು ಪೂಜಿಸುವುದು ಅನಾದಿ ಕಾಲದಿಂದಲೂ ಬಂದ ವಾಡಿಕೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗ ಪಂಚಮಿಯಂದು ನಾಗ ದೇವತೆಗಳನ್ನು ಆರಾಧಿಸುವುದರಿಂದ ಜಾತಕದಲ್ಲಿರುವ ಕಾಳಸರ್ಪ ದೋಷ ನಿವಾರಣೆಯಾಗಿ, ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ.

ಈ ಪವಿತ್ರ ಸಂದರ್ಭದಲ್ಲಿ ಸರ್ಪ ದೇವರಿಗೆ ಹಾಗೂ ಪರಮಶಿವನಿಗೆ ಹಾಲು, ನೀರು, ಹೂವುಗಳು ಮತ್ತು ಧಾನ್ಯಗಳನ್ನು ಅರ್ಪಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ನಾಗ ಪಂಚಮಿಯಂದು ಮುಖ್ಯವಾಗಿ ಅಷ್ಟ ನಾಗಗಳನ್ನು (8 ಪವಿತ್ರ ಸರ್ಪಗಳು) ಪೂಜಿಸಲಾಗುತ್ತದೆ. ಆ ಎಂಟು ನಾಗಗಳು ಯಾರು ಮತ್ತು ಅವುಗಳ ಮಹತ್ವವೇನು ಎಂಬುದನ್ನು ವಿವರವಾಗಿ ತಿಳಿಯೋಣ.

ನಾಗ ಪಂಚಮಿಯಂದು ಪೂಜಿಸಲ್ಪಡುವ 8 ಪ್ರಮುಖ ನಾಗಗಳು:

ಶೇಷನಾಗ (ಆದಿಶೇಷ):

ಹಿಂದೂ ಧರ್ಮದಲ್ಲಿ ಶೇಷನಾಗನಿಗೆ ಅತ್ಯುನ್ನತ ಸ್ಥಾನವಿದೆ. ಇವರನ್ನು ‘ಅನಂತ’ ಅಥವಾ ‘ಆದಿಶೇಷ’ ಎಂದೂ ಕರೆಯಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶೇಷನಾಗನನ್ನು ಎಲ್ಲಾ ಸರ್ಪಗಳ ರಾಜ ಎಂದು ಪರಿಗಣಿಸಲಾಗುತ್ತದೆ. ಶ್ರೀಮನ್ನಾರಾಯಣನು (ವಿಷ್ಣು) ಶೇಷನಾಗನ ಮೇಲೆಯೇ ಶಯನ ಭಂಗಿಯಲ್ಲಿ ವಿರಾಜಮಾನನಾಗಿರುತ್ತಾನೆ.

ವಾಸುಕಿ:

ವಾಸುಕಿಯು ಶಿವನ ಪರಮ ಭಕ್ತ. ಶಿವನು ವಾಸುಕಿಯನ್ನು ತನ್ನ ಕುತ್ತಿಗೆಯಲ್ಲಿ ಆಭರಣವಾಗಿ ಧರಿಸಿದ್ದಾನೆ. ಪುರಾಣಗಳ ಪ್ರಕಾರ, ಪ್ರಸಿದ್ಧ ‘ಸಮುದ್ರ ಮಂಥನ’ದ ಸಮಯದಲ್ಲಿ ಮಂದಾರ ಪರ್ವತವನ್ನು ಮಥಿಸಲು ವಾಸುಕಿ ನಾಗನನ್ನೇ ಹಗ್ಗವನ್ನಾಗಿ ಬಳಸಲಾಗಿತ್ತು.

ಪದ್ಮ ನಾಗ ಮತ್ತು ಮಹಾಪದ್ಮ ನಾಗ:

ಪದ್ಮ ನಾಗನು ಶಾಂತಿ ಮತ್ತು ಸಮೃದ್ಧಿಯ ಸಂಕೇತ. ಧಾರ್ಮಿಕ ನಂಬಿಕೆಗಳ ಪ್ರಕಾರ, ಗೋಮತಿ ನದಿಯ ಬಳಿಯ ನೇಮಿಶಾರಣ್ಯ ಪ್ರದೇಶವನ್ನು ಪದ್ಮ ನಾಗರು ಆಳುತ್ತಿದ್ದರು ಎಂದು ಹೇಳಲಾಗುತ್ತದೆ. ಇವು ಭವ್ಯವಾದ ಹಾಗೂ ಶ್ವೇತ (ಬಿಳಿ) ವರ್ಣದ ಸರ್ಪಗಳಾಗಿವೆ. ವಿಷ್ಣು ಪುರಾಣದಲ್ಲಿ ಸರ್ಪಗಳ ವಿವಿಧ ಕುಲಗಳ ಬಗ್ಗೆ ವಿವರಿಸುವಾಗ ಮಹಾಪದ್ಮ ನಾಗನ ಉಲ್ಲೇಖ ಹಾಗೂ ಮಹತ್ವವನ್ನು ಎತ್ತಿಹಿಡಿಯಲಾಗಿದೆ.

ತಕ್ಷಕ ನಾಗ:

ಮಹಾಭಾರತದ ಪ್ರಸಂಗಗಳಲ್ಲಿ ತಕ್ಷಕ ಸರ್ಪದ ಬಗ್ಗೆ ವಿಶೇಷ ಉಲ್ಲೇಖವಿದೆ. ಕದ್ರು ಮತ್ತು ಕಶ್ಯಪ ಮಹರ್ಷಿಗಳ ಗರ್ಭದಿಂದ ಜನಿಸಿದ ತಕ್ಷಕನು ಎಂಟು ಪ್ರಮುಖ ಸರ್ಪ ಕುಲಗಳಲ್ಲಿ ಒಂದಾಗಿದ್ದಾನೆ.

ಕುಲಿಕ್ ನಾಗ:

ಈ ಹಾವು ಬ್ರಾಹ್ಮಣ ಕುಲಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಕುಲಿಕ್ ನಾಗನು ಸೃಷ್ಟಿಕರ್ತನಾದ ಬ್ರಹ್ಮ ದೇವನೊಂದಿಗೆ ಆಳವಾದ ಧಾರ್ಮಿಕ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ

ಕರ್ಕೋಟಕ ನಾಗ:

ಕರ್ಕೋಟಕ ನಾಗನನ್ನು ಸಾಕ್ಷಾತ್ ಶಿವನ ಗಣವೆಂದು ಪರಿಗಣಿಸಲಾಗುತ್ತದೆ. ಪೌರಾಣಿಕ ಕಥೆಗಳ ಪ್ರಕಾರ, ಈ ನಾಗರಹಾವು ಎಲ್ಲಾ ನಾಗಗಳಲ್ಲಿಯೇ ಅತ್ಯಂತ ಬುದ್ಧಿವಂತ ಮತ್ತು ಜ್ಞಾನಿ ಎಂದು ಹೆಸರುವಾಸಿಯಾಗಿದೆ.

ಶಂಖಪಾಲ / ಶಂಖ ನಾಗ:

ಅಷ್ಟ ನಾಗಗಳಲ್ಲಿ ಶಂಖಪಾಲ ಕೂಡ ಪ್ರಮುಖವಾದದ್ದು. ಶಂಖದಂತೆ ಬಿಳಿಯ ಬಣ್ಣ ಹಾಗೂ ಪವಿತ್ರತೆಯನ್ನು ಹೊಂದಿರುವ ಈ ನಾಗನನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚುತ್ತದೆ ಎಂದು ನಂಬಲಾಗಿದೆ.

ಕಾಳಸರ್ಪ ದೋಷ ನಿವಾರಣೆಗೆ ನಾಗ ಪಂಚಮಿ ಏಕೈಕ ಪರಿಹಾರ:

ಶಿವಪುರಾಣದಲ್ಲಿ ನಾಗಗಳ ಉಗಮ ಮತ್ತು ಮಹತ್ವವನ್ನು ವಿಸ್ತಾರವಾಗಿ ವಿವರಿಸಲಾಗಿದೆ. ನಾಗ ಪಂಚಮಿಯಂದು ಸರ್ಪ ದೇವರಿಗೆ ಹಾಲು ಮತ್ತು ನೈವೇದ್ಯ ಅರ್ಪಿಸಿ ಪೂಜಿಸುವುದರಿಂದ ಕಾಳಸರ್ಪ ದೋಷದ ಋಣಾತ್ಮಕ ಪರಿಣಾಮಗಳು ಶಮನಗೊಳ್ಳುತ್ತವೆ. ಜಾತಕದಲ್ಲಿ ಕಾಳಸರ್ಪ ದೋಷವಿದ್ದರೆ ಜೀವನದಲ್ಲಿ ಪದೇ ಪದೇ ತಡೆಗೋಡೆಗಳು, ಮನಸ್ಸಿನ ಅಶಾಂತಿ ಹಾಗೂ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ನಾಗ ಪಂಚಮಿಯ ದಿನದಂದು ಭಕ್ತಿಯಿಂದ ಅಷ್ಟ ನಾಗಗಳನ್ನು ಪೂಜಿಸಿ, ಶಿವನಿಗೆ ಜಲಾಭಿಷೇಕ ಮಾಡುವುದರಿಂದ ಕಾಳಸರ್ಪ ದೋಷದ ನಕಾರಾತ್ಮಕ ಪ್ರಭಾವ ಕಡಿಮೆಯಾಗಿ ಸಾಧಕರ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿಗನ ಜೊತೆ ಸಂಪರ್ಕ: ರಾಯಚೂರಲ್ಲಿ ಯುವಕನ ಬಂಧನ – Kannada News | Plot to Incite Riots in India: Raichur Youth Arrested for Contacting Foreigner; Pistol & Money Offered

ರಾಯಚೂರಲ್ಲಿ ಯುವಕನ ಬಂಧನImage Credit source: Tv9 Kannada

ರಾಯಚೂರು, ಆಗಸ್ಟ್​​ 09: ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿಗನ ಜೊತೆ ಸಂಪರ್ಕ ಹಿನ್ನೆಲೆ ರಾಯಚೂರಿನ ವ್ಯಕ್ತಿಯೋರ್ವನನ್ನು ಸದರಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಾಹಿಲ್(24) ಬಂಧಿತ ಆರೋಪಿಯಾಗಿದ್ದು, ಈತ ಟೀ ಸ್ಟಾಲ್ ಇಟ್ಟಿಕೊಂಡಿದ್ದ. ಭಾರತದಲ್ಲಿ ಗಲಭೆ ಎಬ್ಬಿಸಲು ಸ್ಕೆಚ್ ಹಾಕಿದ್ದ ಅರಬ್ ಮೂಲದ ವ್ಯಕ್ತಿ ಈ ಸಂಬಂಧ ಶಾಹಿಲ್​ಗೆ ಮೈಂಡ್​​ವಾಷ್ ಮಾಡಿದ್ದ ಎಂಬುದು ಗೊತ್ತಾಗಿದೆ.

ಮೆಸೇಜ್ ಮೂಲಕ ಪಿಸ್ತೂಲ್ ಕೇಳಿದ್ದ ಆರೋಪಿ

ಇನ್​​ಸ್ಟಾಗ್ರಾಂನಲ್ಲಿ ರಾಣಾ ಭಾಯ್ ಹೆಸರಲ್ಲಿ ವಿದೇಶಿ ವ್ಯಕ್ತಿಯ ಜೊತೆಗೆ ಮೊಹಮ್ಮದ್ ಶಾಹಿಲ್ ಚಾಟಿಂಗ್​​ ಮಾಡುತ್ತಿದ್ದ. ಅಲ್ಲದೆ ರಾಣಾ ಭಾಯ್ ಅಕೌಂಟ್​ನ ಪೋಸ್ಟ್​ಗಳಿಗೆ ಲೈಕ್ ಮಾಡ್ತಿದ್ದ. ಕಮೆಂಟ್, ಶೇರ್ ಮಾಡುತ್ತ ಆತನ ಜೊತೆ ಸಂಪರ್ಕ ಸಾಧಿಸಿದ್ದ. ಅನಾಮಧೇಯ ವ್ಯಕ್ತಿಯ ಪೋಸ್ಟ್​ ನೋಡಿ ಪ್ರಭಾವಿತನಾಗಿದ್ದ ಶಾಹಿಲ್, ರಾಣಾ ಭಾಯ್​ಗೆ ಮೆಸೇಜ್ ಮೂಲಕ ಪಿಸ್ತೂಲ್ ಕೂಡ ಕೇಳಿದ್ದ. ಭಾಯ್ ಮುಝೇ ಏಕ್ ಪಿಸ್ತೂಲ್ ಚಾಹಿಯೇ ಥೀ, ಮಿಲೇಗಿ ಕ್ಯಾ ಎಂದು ಪ್ರಶ್ನಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ

ಗಲಭೆ ಎಬ್ಬಿಸಿದರೆ ಹಣ, ಪಿಸ್ತೂಲ್​​ ಆಮಿಷ

ಆ ಬಳಿಕ ಅರಬ್ ಮೂಲದ ವ್ಯಕ್ತಿ ಮೊಹಮ್ಮದ್ ಶಾಹಿಲ್ ವಾಟ್ಸಾಪ್ ನಂಬರ್ ಪಡೆದಿದ್ದ. ಜುಲೈ 14ರಿಂದ ಇಬ್ಬರ ನಡುವೆ ಹತ್ತಾರು ವಿಚಾರಗಳ ಕುರಿತು ಚರ್ಚೆಯಾಗಿದ್ದು, ಈ ವೇಳೆ ಗಲಭೆ ಎಬ್ಬಿಸಲು ರಾಣಾ ಭಾಯ್ ಎಂಬಾತ ಪ್ರಚೋದನೆ ನೀಡಿದ್ದ. ಗಲಭೆ ಎಬ್ಬಿಸಲು ಎಷ್ಟು ಬೇಕಾದರೂ ಹಣ ಕೊಡುವುದಾಗಿ ಹಾಗೂ ಶಾಹಿಲ್ ಕೇಳಿದಂತೆ ಪಿಸ್ತೂಲ್ ಕೊಡೋದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಮೊಹಮ್ಮದ್ ಶಾಹಿಲ್ ವಿರುದ್ಧ ರಾಯಚೂರಿನ ಸದರ್​ಬಜಾರ್ ಪೊಲೀಸ್ ‌ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಗಲಭೆ ಎಬ್ಬಿಸಲು ಸಂಚಿನ ಸಂಬಂಧ ಆರೋಪಿ ಬೇರೆ ಯಾರನ್ನಾದರೂ ಸಂಪರ್ಕಿಸಿದ್ದನಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:43 am, Sun, 9 August 26

Source link

ಗೃಹಲಕ್ಷ್ಮಿ ಯೋಜನೆಯಲ್ಲಿ ‘ಗೋಲ್‌ಮಾಲ್’; ಗ್ಯಾರಂಟಿ ಸಮಿತಿ ಅಧ್ಯಕ್ಷರ ವಿಡಿಯೋ ವೈರಲ್! – Kannada News | Gruha Lakshmi Scheme Scam: Koppal Guarantee Committee Chairman Admits Money Transferred to Deceased Accounts

ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ

ಕೊಪ್ಪಳ, ಆಗಸ್ಟ್ 09: ಜಿಲ್ಲೆಯಲ್ಲಿ ಮೃತಪಟ್ಟ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿರುವ ಮತ್ತು ಅದನ್ನು ರಿಕವರಿ ಮಾಡುತ್ತಿರುವ ವಿಚಾರ ದೊಡ್ಡ ವಿವಾದ ಸೃಷ್ಟಿಸುತ್ತಿದ್ದಂತೆಯೇ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ ಬಿಡುಗಡೆ ಮಾಡಿರುವ ಮತ್ತೊಂದು ವಿಡಿಯೋ ಭಾರಿ ಸಂಚಲನ ಮೂಡಿಸಿದೆ.

ಶ್ರೀನಿವಾಸ್ ರೆಡ್ಡಿ ವೀಡಿಯೋ ಇಲ್ಲಿದೆ

ಮೊದಲಿಗೆ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ನಡೆದಿಲ್ಲ ಎಂದು ವಾದಿಸಿದ್ದ ರೆಡ್ಡಿ ಶ್ರೀನಿವಾಸ್, ಇದೀಗ ಮೃತಪಟ್ಟವರ ಖಾತೆಯಿಂದ ಹಣ ಡ್ರಾ ಆಗುತ್ತಿರುವುದು ಗೋಲ್‌ಮಾಲ್ ಹೌದು ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವ ಅವರು, “ಸರ್ಕಾರ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹಾಕುವುದರಿಂದ ಇಲಾಖೆಯ ಮಟ್ಟದಲ್ಲಿ ಯಾವುದೇ ಗೋಲ್‌ಮಾಲ್ ಸಾಧ್ಯವಿಲ್ಲ. ಆದರೆ, ಫಲಾನುಭವಿಗಳು ಮೃತಪಟ್ಟ ನಂತರವೂ ಅವರ ಖಾತೆಯಲ್ಲಿರುವ ಹಣವನ್ನು ಯಾರೋ ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಹಣ ಡ್ರಾ ಮಾಡಿದರೆ ಜೈಲು ಫಿಕ್ಸ್; ಅಕೌಂಟ್ ಸೀಜ್ ಮಾಡಲು ಸೂಚನೆ

“ಸತ್ತವರ ಬ್ಯಾಂಕ್ ಖಾತೆಗಳನ್ನು ಯಾರು ಬಳಸುತ್ತಿದ್ದಾರೆ ಮತ್ತು ಅದರಿಂದ ಯಾರು ಹಣ ಡ್ರಾ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ನಾವು ಅಕೌಂಟ್‌ಗಳ ಪರಿಶೀಲನೆ ನಡೆಸುತ್ತಿದ್ದೇವೆ. ಅಕ್ರಮವಾಗಿ ಹಣ ಡ್ರಾ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ, ಕೇಸ್ ದಾಖಲಿಸಿ ಜೈಲಿಗೆ ಅಟ್ಟಲಾಗುವುದು. ಅಂತಹ ದುರಪಯೋಗವಾಗಿರುವ ಖಾತೆಗಳನ್ನು ತಕ್ಷಣವೇ ಸೀಜ್ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದು ರೆಡ್ಡಿ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಪಾರದರ್ಶಕತೆ ಇದ್ದರೂ, ತಳಮಟ್ಟದಲ್ಲಿ ಸತ್ತವರ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿರುವ ಜಾಲದ ವಿರುದ್ಧ ತನಿಖೆ ಚುರುಕುಗೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:32 am, Sun, 9 August 26

Source link

ಮೂರು ಬಲಿಷ್ಠ ತಂಡಗಳ ಮಹಾಸಮರಕ್ಕೆ ಇಸಿಬಿ ಗ್ರೀನ್ ಸಿಗ್ನಲ್! – Kannada News | ODIs Get a Boost: Tri Series Set for Epic Comeback

ಕ್ರಿಕೆಟ್ ಜಗತ್ತಿನಲ್ಲಿ ಒಂದು ಕಾಲದಲ್ಲಿ ಅತಿ ಹೆಚ್ಚು ರೋಮಾಂಚನ ಮೂಡಿಸುತ್ತಿದ್ದ ‘ತ್ರಿಕೋನ ಏಕದಿನ ಸರಣಿ‘ ಮಾದರಿಯು ಶೀಘ್ರದಲ್ಲೇ ಮರಳಿ ಬರಲಿದೆ. ಮುಂದಿನ 12 ರಿಂದ 18 ತಿಂಗಳುಗಳ ಅವಧಿಯಲ್ಲಿ ಬಹು-ರಾಷ್ಟ್ರಗಳ ತ್ರಿಕೋನ ಸರಣಿಗಳನ್ನು ಆಯೋಜಿಸಲು ವೇಳಾಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ರಿಚರ್ಡ್ ಗೌಲ್ಡ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಭಾರತ ಏಕದಿನ ತಂಡದ ನಾಯಕ ಶುಭ್‌ಮನ್ ಗಿಲ್ ಇತ್ತೀಚೆಗೆ ತ್ರಿಕೋನ ಸರಣಿಗಳನ್ನು ಮತ್ತೆ ಆರಂಭಿಸಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. ಇದಕ್ಕೆ ಪೂರಕವಾಗಿ ಇಸಿಬಿ ಮುಖ್ಯಸ್ಥರಿಂದ ಈ ಮಹತ್ವದ ಪ್ರಕಟಣೆ ಹೊರಬಿದ್ದಿದೆ.

ಮುಂದಿನ ಒಂದೂವರೆ ವರ್ಷದ ಅಂತರರಾಷ್ಟ್ರೀಯ ಕ್ರಿಕೆಟ್ ವಿಂಡೋದಲ್ಲಿ ಒಂದಕ್ಕಿಂತ ಹೆಚ್ಚು ತ್ರಿಕೋನ ಸರಣಿಗಳನ್ನು ಈಗಾಗಲೇ ಸೇರಿಸಲು ಪ್ಲ್ಯಾನ್ ರೂಪಿಸಲಾಗಿದೆ. ಕಳೆದ ಒಂದು ದಶಕದಿಂದ ದ್ವಿಪಕ್ಷೀಯ ಸರಣಿಗಳು ಮತ್ತು ಟಿ20 ಲೀಗ್‌ಗಳ ಅಬ್ಬರದಲ್ಲಿ ಮರೆಯಾಗಿದ್ದ ಈ ಜನಪ್ರಿಯ ಮಾದರಿಯನ್ನು, ಒನ್-ಡೇ ಕ್ರಿಕೆಟ್‌ಗೆ ಮತ್ತೆ ಮಾರುಕಟ್ಟೆ ಮೌಲ್ಯ ಹಾಗೂ ರೋಮಾಂಚನ ತರಲು ಮರುಪರಿಚಯಿಸಲಾಗುತ್ತಿದೆ.

ಸ್ಟಾರ್ ತಂಡಗಳ ಭಾಗವಹಿಸುವಿಕೆ:

ಆರಂಭಿಕ ಯೋಜನೆಗಳ ಪ್ರಕಾರ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾದಂತಹ ಪ್ರಮುಖ ತಂಡಗಳು ಈ ಸರಣಿಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಅದರಲ್ಲೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ತ್ರಿಕೋನ ಸರಣಿಯಲ್ಲಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಇಂಗ್ಲೆಂಡ್‌ನ ಸತತ ವೇಳಾಪಟ್ಟಿಯ ಕಾರಣದಿಂದಾಗಿ ದ್ವಿಪಕ್ಷೀಯ ಸರಣಿಗಳೇ ನಮಗೆ ಸುಲಭ. ಆದರೂ, ಕ್ರಿಕೆಟ್‌ನ ಒಟ್ಟಾರೆ ಬೆಳವಣಿಗೆಗಾಗಿ ನಾವು ಈ ಹೊಸ ಬದಲಾವಣೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ಗೌಲ್ಡ್ ಹೇಳಿದ್ದಾರೆ. ಈ ಮೂಲಕ ಇಂಗ್ಲೆಂಡ್ ಮೂರು ರಾಷ್ಟ್ರಗಳ ಏಕದಿನ ಸರಣಿ ಆಯೋಜಿಸಲು ರೆಡಿಯಾಗಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

ಬಿಸಿಸಿಐ ಜೊತೆ ದೀರ್ಘಕಾಲೀನ ಒಪ್ಪಂದ:

ಇದೇ ಸಂದರ್ಭದಲ್ಲಿ ಮಾತನಾಡಿದ ರಿಚರ್ಡ್ ಗೌಲ್ಡ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜೊತೆಗಿನ ದೃಢವಾದ ಬಾಂಧವ್ಯವನ್ನು ಶ್ಲಾಘಿಸಿದರು. ಮುಂದಿನ 10 ರಿಂದ 15 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ಕ್ರಿಕೆಟ್ ಯೋಜನೆಗಳಿಗಾಗಿ ಉಭಯ ಮಂಡಳಿಗಳು ಒಟ್ಟಾಗಿ ಕೆಲಸ ಮಾಡುತ್ತಿವೆ ಎಂದರು.

ಇದನ್ನೂ ಓದಿ: ಬರೋಬ್ಬರಿ 8 ವಿಕೆಟ್​… ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ!

ಒಟ್ಟಾರೆಯಾಗಿ, ಇತ್ತೀಚಿನ ವರ್ಷಗಳಲ್ಲಿ ಕೇವಲ ದ್ವಿಪಕ್ಷೀಯ ಸರಣಿಗಳನ್ನು ನೋಡಿ ಬೇಸತ್ತಿದ್ದ ಜಾಗತಿಕ ಕ್ರಿಕೆಟ್ ಅಭಿಮಾನಿಗಳಿಗೆ ಈ ‘ತ್ರಿಕೋನ ಸರಣಿ’ಗಳ ಪುನರಾಗಮನವು ಹೊಸ ಕಳೆ ತರಲಿದೆ. ಮೂರು ಬಲಿಷ್ಠ ತಂಡಗಳು ಕಪ್‌ಗಾಗಿ ಪರಸ್ಪರ ಸೆಣಸಾಡುವುದನ್ನು ನೋಡುವುದೇ ಒಂದು ರೋಮಾಂಚನ. ಇಸಿಬಿ ಸಿಇಒ ರಿಚರ್ಡ್ ಗೌಲ್ಡ್ ಅವರ ಈ ಮಹತ್ವದ ನಿರ್ಧಾರವು ಏಕದಿನ ಕ್ರಿಕೆಟ್‌ಗೆ ಕಳೆದುಹೋಗಿದ್ದ ಗತವೈಭವ ಹಾಗೂ ರೋಚಕತೆಯನ್ನು ಮರಳಿ ತರುವುದರಲ್ಲಿ ಯಾವುದೇ ಸಂಶಯವಿಲ್ಲ.

Published On – 10:34 am, Sun, 9 August 26

Source link

ರಕ್ತದೊತ್ತಡ ಹೆಚ್ಚಾಗದಿರಲು ಉಪ್ಪಿನ ಪ್ರಮಾಣ ಎಷ್ಟಿರಬೇಕು? ಇಲ್ಲಿದೆ ತಜ್ಞರ ಸಲಹೆ – Kannada News | Want to Control High BP? Know How Much Salt You Should Eat

ಹೈ ಬಿಪಿ ಅಥವಾ ಅಧಿಕ ರಕ್ತದೊತ್ತಡ ಇರುವವರು ಆಹಾರದಲ್ಲಿ ಉಪ್ಪಿನ ಪ್ರಮಾಣದ ಬಗ್ಗೆ ವಿಶೇಷ ಗಮನಹರಿಸುವುದು ಬಹಳ ಮುಖ್ಯ. ನಾವು ಅಡುಗೆಯಲ್ಲಿ ಬಳಸುವ ಉಪ್ಪು ಮಾತ್ರವಲ್ಲದೆ, ಪ್ಯಾಕೇಜ್ಡ್ ಫುಡ್ಸ್, ಚಿಪ್ಸ್, ಉಪ್ಪಿನಕಾಯಿ, ಸಾಸ್, ಇನ್‌ಸ್ಟಂಟ್ ನೂಡಲ್ಸ್ ಸೇರಿದಂತೆ ಹಲವು ಆಹಾರಗಳಲ್ಲಿ ಸೋಡಿಯಂ ಅಡಗಿರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ರಕ್ತದೊತ್ತಡವನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಹಾಗಾದರೆ ಹೈ ಬಿಪಿ ಇರುವವರು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಉಪ್ಪನ್ನು ಸೇವಿಸಬೇಕು ಮತ್ತು ಯಾವ ಆಹಾರಗಳಲ್ಲಿ ಹೆಚ್ಚು ಸೋಡಿಯಂ ಇರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೈ ಬಿಪಿ ಇರುವವರು ಎಷ್ಟು ಪ್ರಮಾಣದಲ್ಲಿ ಉಪ್ಪನ್ನು ಸೇವಿಸಬೇಕು?

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ, ಹೈ ಬಿಪಿ ಇರುವ ಬಹುತೇಕ ವಯಸ್ಕರು ದಿನಕ್ಕೆ 1,500 ಮಿಲಿಗ್ರಾಂನಷ್ಟು ಸೋಡಿಯಂ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ಸೇವನೆ ಮಾಡಬೇಕು. ಇದು ಸರಿಸುಮಾರು 3.8 ಗ್ರಾಂ ಉಪ್ಪಿಗೆ ಸಮಾನವಾಗಿದೆ. ದಿನದ ಒಟ್ಟು ಸೋಡಿಯಂ ಪ್ರಮಾಣದಲ್ಲಿ ಅಡುಗೆಯಲ್ಲಿ ಬಳಸುವ ಉಪ್ಪಿನ ಜೊತೆಗೆ ನಾವು ಸೇವಿಸುವ ಎಲ್ಲಾ ಆಹಾರಗಳಿಂದ ಸಿಗುವ ಸೋಡಿಯಂ ಕೂಡ ಸೇರಿರುತ್ತದೆ. ಆದರೆ ಪ್ರತಿಯೊಬ್ಬರ ಆರೋಗ್ಯ ಸ್ಥಿತಿ ಒಂದೇ ರೀತಿ ಇರುವುದಿಲ್ಲ. ವಯಸ್ಸು, ಕಿಡ್ನಿ ಆರೋಗ್ಯ, ಹೃದಯದ ಸಮಸ್ಯೆಗಳು ಮತ್ತು ಇತರ ಆರೋಗ್ಯ ಪರಿಸ್ಥಿತಿಗಳನ್ನು ಗಮನಿಸಿ ವೈದ್ಯರು ಸೂಕ್ತ ಪ್ರಮಾಣವನ್ನು ಸೂಚಿಸಬಹುದು.

ಹೆಚ್ಚು ಉಪ್ಪು ತಿಂದರೆ ಏನಾಗಬಹುದು?

ಉಪ್ಪಿನಲ್ಲಿ ಇರುವ ಸೋಡಿಯಂ ದೇಹದಲ್ಲಿ ನೀರು ಉಳಿಯುವಂತೆ ಮಾಡಬಹುದು. ಇದರಿಂದ ರಕ್ತದ ಪ್ರಮಾಣ ಹೆಚ್ಚಾಗಿ ರಕ್ತದೊತ್ತಡದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ದೀರ್ಘಕಾಲ ಹೆಚ್ಚು ಸೋಡಿಯಂ ಸೇವಿಸುವ ಅಭ್ಯಾಸವನ್ನು ಮುಂದುವರಿಸಿದರೆ ಹೈ ಬಿಪಿಯನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ಜೊತೆಗೆ ಹೃದಯ ಮತ್ತು ಕಿಡ್ನಿಗಳ ಆರೋಗ್ಯದ ಮೇಲೂ ಹೆಚ್ಚುವರಿ ಒತ್ತಡ ಉಂಟಾಗಬಹುದು. ಆದ್ದರಿಂದ ಹೈ ಬಿಪಿ ಇರುವವರು ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದರ ಜೊತೆಗೆ, ಆಹಾರದಲ್ಲಿ ಅಡಗಿರುವ ಸೋಡಿಯಂ ಪ್ರಮಾಣದ ಮೇಲೂ ಗಮನಹರಿಸಬೇಕು.

ಇದನ್ನೂ ಓದಿ: ಅಯೋಡಿನ್ ಕೊರತೆಯನ್ನು ನಿರ್ಲಕ್ಷಿಸಬೇಡಿ! ದೇಹದಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಎಚ್ಚರಿಕೆ ಲಕ್ಷಣಗಳು

ಈ ಆಹಾರಗಳಲ್ಲಿ ಅಡಗಿರುತ್ತದೆ ಹೆಚ್ಚು ಸೋಡಿಯಂ

ಅನೇಕ ಬಾರಿ ಮನೆಯಲ್ಲಿ ಬಳಸುವ ಉಪ್ಪಿಗಿಂತಲೂ ಪ್ಯಾಕೇಜ್ಡ್ ಮತ್ತು ಪ್ರೊಸೆಸ್ಡ್ ಆಹಾರಗಳಿಂದ ಹೆಚ್ಚಿನ ಸೋಡಿಯಂ ದೇಹಕ್ಕೆ ಸೇರುತ್ತದೆ. ಹೆಚ್ಚು ಸೋಡಿಯಂ ಇರಬಹುದಾದ ಆಹಾರಗಳು ಚಿಪ್ಸ್ ಮತ್ತು ನಮ್ಕೀನ್, ಇನ್‌ಸ್ಟಂಟ್ ನೂಡಲ್ಸ್, ಪ್ಯಾಕೇಜ್ಡ್ ಸೂಪ್, ಸಾಸ್ ಮತ್ತು ಕೆಚಪ್, ಉಪ್ಪಿನಕಾಯಿ, ಪ್ರೊಸೆಸ್ಡ್ ಮೀಟ್, ಪ್ಯಾಕೇಜ್ಡ್ ಸ್ನ್ಯಾಕ್ಸ್, ಕೆಲವು ರೆಡಿ-ಟು-ಈಟ್ ಆಹಾರಗಳು, ಹೊರಗಡೆ ಸಿಗುವ ಫಾಸ್ಟ್ ಫುಡ್. ಹೀಗಾಗಿ ಪ್ಯಾಕೆಟ್ ಆಹಾರ ಖರೀದಿಸುವಾಗ ಅದರ Nutrition Facts ಅಥವಾ Sodium ಪ್ರಮಾಣವನ್ನು ಪರಿಶೀಲಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ಹೈ ಬಿಪಿ ಇದ್ದವರು ಉಪ್ಪು ಕಡಿಮೆ ಮಾಡುವುದು ಹೇಗೆ?

ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ನಿಧಾನವಾಗಿ ಕಡಿಮೆ ಮಾಡುವುದು ಉತ್ತಮ. ರುಚಿಗಾಗಿ ಉಪ್ಪಿನ ಬದಲು ನಿಂಬೆ, ಕೊತ್ತಂಬರಿ, ಕರಿಬೇವು ಮತ್ತು ವಿವಿಧ ಮಸಾಲೆಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಬಹುದು. ತಾಜಾ ಹಣ್ಣು, ತರಕಾರಿ, ಬೇಳೆಕಾಳುಗಳು ಮತ್ತು ಕಡಿಮೆ ಸಂಸ್ಕರಿಸಿದ ಆಹಾರಗಳಿಗೆ ಆದ್ಯತೆ ನೀಡುವುದು ಸಹಾಯಕವಾಗಬಹುದು. ಹೊರಗಿನ ಆಹಾರ ಮತ್ತು ಹೆಚ್ಚು ಉಪ್ಪು ಇರುವ ಸ್ನ್ಯಾಕ್ಸ್ ಸೇವನೆಯನ್ನು ಕಡಿಮೆ ಮಾಡುವುದು ಕೂಡ ಮುಖ್ಯ. ‘ಉಪ್ಪು ಕಡಿಮೆ’ ಎಂದರೆ ರುಚಿಯಿಲ್ಲದ ಆಹಾರ ಎಂದಲ್ಲ! ಅನೇಕರು ಉಪ್ಪು ಕಡಿಮೆ ಮಾಡಿದರೆ ಆಹಾರ ರುಚಿಯಿಲ್ಲ ಎಂದು ಭಾವಿಸುತ್ತಾರೆ. ಆದರೆ ನಾಲಿಗೆ ಕಡಿಮೆ ಉಪ್ಪಿನ ರುಚಿಗೆ ನಿಧಾನವಾಗಿ ಹೊಂದಿಕೊಳ್ಳುತ್ತದೆ. ಆದ್ದರಿಂದ ಒಂದೇ ಬಾರಿಗೆ ಸಂಪೂರ್ಣ ಉಪ್ಪು ಬಿಡುವ ಬದಲು ಕ್ರಮೇಣ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಡುಗೆ ಮಾಡಿದ ನಂತರ ಹೆಚ್ಚುವರಿ ಉಪ್ಪು ಸೇರಿಸುವ ಅಭ್ಯಾಸವಿದ್ದರೆ ಅದನ್ನು ಮೊದಲು ನಿಲ್ಲಿಸುವುದು ಕೂಡ ಉಪಯುಕ್ತ ಹೆಜ್ಜೆಯಾಗಿದೆ.

ಹೈ ಬಿಪಿ ಇರುವವರು ಏನು ನೆನಪಿಟ್ಟುಕೊಳ್ಳಬೇಕು?

ಸಾಮಾನ್ಯವಾಗಿ ಹೈ ಬಿಪಿಯನ್ನು ನಿಯಂತ್ರಿಸಲು ಉಪ್ಪು ಕಡಿಮೆ ಮಾಡುವುದು ಮಾತ್ರ ಸಾಕಾಗುವುದಿಲ್ಲ. ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ತೂಕ, ಸಮತೋಲಿತ ಆಹಾರ, ಧೂಮಪಾನದಿಂದ ದೂರವಿರುವುದು ಮತ್ತು ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳುವುದು ಕೂಡ ಮುಖ್ಯ. ರಕ್ತದೊತ್ತಡ ನಿರಂತರವಾಗಿ ಹೆಚ್ಚಾಗಿದ್ದರೆ ಅಥವಾ ಔಷಧಿ ತೆಗೆದುಕೊಂಡರೂ ನಿಯಂತ್ರಣಕ್ಕೆ ಬರುತ್ತಿಲ್ಲದಿದ್ದರೆ ವೈದ್ಯರನ್ನು ಸಂಪರ್ಕಿಸಿ. ಸ್ವಯಂಪ್ರೇರಿತವಾಗಿ ಬಿಪಿ ಔಷಧಿ ನಿಲ್ಲಿಸುವುದು ಅಥವಾ ಬದಲಿಸುವುದು ಬೇಡ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ – Kannada News | Bengaluru Shocked: Techies Asked ‘Are You Terrorists?’, Brutally Assaulted with Baseball Bat in AECS Layout

ಬೆಂಗಳೂರು, ಆಗಸ್ಟ್​​ 09: ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿ ಇಬ್ಬರು ಟೆಕ್ಕಿಗಳ ಮೇಲೆ ದುಷ್ಕರ್ಮಿಯೋರ್ವ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಹೆಚ್ಎಎಲ್ ಬಳಿಯ ಎಇಸಿಎಸ್ ಲೇಔಟ್‌ನಲ್ಲಿ ನಡೆದಿದೆ. ಸಾಫ್ಟ್‌ವೇರ್ ಉದ್ಯೋಗಿಗಳಾದ ಸಂದೀಪ್ ಕುಮಾರ್ ಗೋಂಡ್ ಹಾಗೂ ರೋಹಿತ್ ಕುಮಾರ್ ಮೇಲೆ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಆಗಸ್ಟ್ 6ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಘಟನೆ ನಡೆದಿರುವ ಬಗ್ಗೆ ಪೊಲೀಸ್​​ ದೂರು ದಾಖಲಾಗಿದೆ.

ಘಟನೆ ಏನು?

ಸಂದೀಪ್ ಕುಮಾರ್ ಗೋಂಡ್ ಮತ್ತು ರೋಹಿತ್ ಕುಮಾರ್ ಬೆಳಗ್ಗೆ 4 ಗಂಟೆ ಸುಮಾರಿಗೆ ಸ್ನೇಹಿತನಿಗಾಗಿ ಕಾಯುತ್ತ ನಿಂತಿದ್ದರು. ಈ ವೇಳೆ ಮಹೀಂದ್ರಾ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಟೆಕ್ಕಿಗಳನ್ನು ನೀವು ಭಯೋತ್ಪಾದಕರಾ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ತಾವು ಭಾರತೀಯ ನಾಗರಿಕರು ಎಂದು ಟೆಕ್ಕಿಗಳು ಉತ್ತರಿಸಿದ್ದರೂ, ಇಬ್ಬರ ಬಳಿಯೂ ಗುರುತಿನ ಚೀಟಿ ತೋರಿಸುವಂತೆ ಆತ ಬೆದರಿಕೆ ಹಾಕಿದ್ದಾನೆ. ಐಡಿ ಕೇಳಲು ನಿನಗೆ ಯಾವ ಅಧಿಕಾರವಿದೆ ಎಂದು ಟೆಕ್ಕಿಗಳು ಪ್ರಶ್ನಿಸಿದ ಕಾರಣ ಕೋಪಗೊಂಡ ಆತ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಬೇಸ್‌ಬಾಲ್ ಬ್ಯಾಟ್‌ನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ದೃಶ್ಯವನ್ನು ಮೊಬೈಲ್​ನಲ್ಲಿ ಓರ್ವ ಟೆಕ್ಕಿ ಚಿತ್ರೀಕರಿಸಿದ್ದು, ಘಟನೆ ಸಮೀಪದ ಬ್ಯಾಂಕ್​ವೊಂದರ ಸಿಸಿಟಿವಿಯಲ್ಲೂ ಸೆರೆಯಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಂದಿ ಮಾತನಾಡದ್ದಕ್ಕೆ ಡೆಲಿವರಿ ಬಾಯ್ ಮೇಲೆ ಹಲ್ಲೆ!

ಮದ್ಯದ ಅಮಲಿನಲ್ಲಿದ್ದನಾ ಆರೋಪಿ?

ಇನ್ನು ಟೆಕ್ಕಿಗಳ ಮೇಲೆ ಹಲ್ಲೆ ನಡೆಸಿರುವ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದ್ದ. ಘಟನೆಯಲ್ಲಿ ಟೆಕ್ಕಿಗಳ ತೊಡೆಯ ಭಾಗ ಮತ್ತು ಮುಖದ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಘಟನೆ ಸಂಬಂಧ ಹೆಚ್ಎಎಲ್ ಪೊಲೀಸ್ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದು, ಹಲ್ಲೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಯಾರು ಮತ್ತು ಯಾವ ಕಾರಣಕ್ಕೆ ಆತ ಈ ರೀತಿ ನಡೆದುಕೊಂಡ ಎಂಬುದು ಆತನ ಪತ್ತೆ ಬಳಿಕವೇ ಗೊತ್ತಾಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಸೆಂಟರ್ ಆಫ್ ಎಕ್ಸಲೆನ್ಸ್’ನಲ್ಲಿ ತುರ್ತು ಸಭೆ ಕರೆದ ಬಿಸಿಸಿಐ – Kannada News | BCCI Chief Saikia Meets Laxman At CoE Amid Injury Crisis

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಇಂದು (ಭಾನುವಾರ) ಬೆಂಗಳೂರಿನ ‘ಸೆಂಟರ್ ಆಫ್ ಎಕ್ಸಲೆನ್ಸ್’ (CoE) ಕ್ರೀಡಾ ಸಂಕೀರ್ಣದಲ್ಲಿ ಹೆಡ್ ಆಫ್ ಕ್ರಿಕೆಟ್ ವಿವಿಎಸ್ ಲಕ್ಷ್ಮಣ್ ಅವರನ್ನು ಭೇಟಿಯಾಗಿ ಮಹತ್ವದ ಸಭೆ ನಡೆಸಲಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಸರಣಿ ಗಾಯದ ಸಮಸ್ಯೆಗೆ ತುತ್ತಾಗುತ್ತಿರುವುದು ಮತ್ತು ಚೇತರಿಕೆ ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲಗಳ ಹಿನ್ನೆಲೆಯಲ್ಲಿ ಈ ಹಠಾತ್ ಸಭೆಯನ್ನು ಕರೆಯಲಾಗಿದೆ.

ಮಿನಿ ಆಸ್ಪತ್ರೆ’ಯಾದ ಕ್ರೀಡಾ ಸಂಕೀರ್ಣ:

ಪ್ರಸ್ತುತ ಬೆಂಗಳೂರಿನ CoE ನಲ್ಲಿ ಜಸ್​ಪ್ರೀತ್ ಬುಮ್ರಾ ಸೇರಿದಂತೆ ಭಾರತ ತಂಡದ 10 ಕ್ಕೂ ಹೆಚ್ಚು ಮುಂಚೂಣಿಯ ಆಟಗಾರರು ಗಾಯಾಳುಗಳಾಗಿ ರಿಹ್ಯಾಬ್ ಶಿಬಿರದಲ್ಲಿದ್ದಾರೆ. ತಂಡದ ಪ್ರಮುಖ ಆಸ್ತಿಯಾಗಿರುವ ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳು ಒಂದಾದ ಮೇಲೊಂದರಂತೆ ಗಾಯದ ಸಮಸ್ಯೆಗೆ ಸಿಲುಕುತ್ತಿರುವುದು ಬಿಸಿಸಿಐ ಮಂಡಳಿಯನ್ನು ತೀವ್ರ ಚಿಂತೆಗೀಡು ಮಾಡಿದೆ. ಹೀಗಾಗಿಯೇ ಇದೀಗ ಇದೀಗ ‘ಸೆಂಟರ್ ಆಫ್ ಎಕ್ಸಲೆನ್ಸ್’ ನಲ್ಲಿ ತುರ್ತು ಸಭೆ ಕರೆದಿದೆ.

ಆಯ್ಕೆ ಸಮಿತಿ ಮತ್ತು CoE ನಡುವೆ ಸಮನ್ವಯದ ಕೊರತೆ?

ಇತ್ತೀಚಿನ ವರದಿಗಳ ಪ್ರಕಾರ, ಆಟಗಾರರ ಫಿಟ್‌ನೆಸ್ ಮತ್ತು ಲಭ್ಯತೆಯ ವಿಚಾರದಲ್ಲಿ ಆಯ್ಕೆ ಸಮಿತಿ ಹಾಗೂ ಸಿಒಇ ನಡುವೆ ಸರಿಯಾದ ಸಂವಹನ ನಡೆದಿಲ್ಲ ಎಂಬ ಆರೋಪ ಕೇಳಿಬಂದಿದೆ. ಜಸ್​ಪ್ರೀತ್ ಬುಮ್ರಾ ಮತ್ತು ಸಾಯಿ ಸುದರ್ಶನ್ ಅವರು ಮುಂಬರುವ ಸರಣಿಗೆ ಲಭ್ಯರಿರುತ್ತಾರೆ ಎಂದು ಆಯ್ಕೆಗಾರರು ಭಾವಿಸಿದ್ದರು.  ಆದರೆ, ಅವರ ಚೇತರಿಕೆಯ ಅವಧಿ ಮತ್ತಷ್ಟು ವಿಸ್ತರಣೆಯಾಗಿರುವುದು ಆಯ್ಕೆ ಸಮಿತಿಗೆ ದೊಡ್ಡ ಹಿನ್ನಡೆಯಾಗಿದೆ. ಅಲ್ಲದೆ, ಸ್ಪೋರ್ಟ್ಸ್ ಸೈನ್ಸ್​  ವಿಭಾಗದ ಮುಖ್ಯಸ್ಥರ ಹುದ್ದೆ ಖಾಲಿ ಇರುವುದು ಕೂಡ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಗಾಯಾಳುಗಳ ಪಟ್ಟಿಯಲ್ಲಿರುವ ಪ್ರಮುಖ ಆಟಗಾರರು:

  • ಜಸ್​ಪ್ರೀತ್  ಬುಮ್ರಾ: ಮೊಣಕಾಲು ನೋವಿನ ಸಮಸ್ಯೆ.
  • ಸಾಯಿ ಸುದರ್ಶನ್: ಕಾಲಿನ ಹೆಬ್ಬೆರಳಿನ ತೀವ್ರ ನೋವು.
  • ಹರ್ಷಿತ್ ರಾಣಾ: ಹ್ಯಾಮ್‌ಸ್ಟ್ರಿಂಗ್ ಸಮಸ್ಯೆ ಮತ್ತು ಫಿಟ್‌ನೆಸ್ ಏರುಪೇರು.
  • ನಿತೀಶ್ ಕುಮಾರ್ ರೆಡ್ಡಿ: ಹ್ಯಾಮ್‌ಸ್ಟ್ರಿಂಗ್ ಮತ್ತು ಕ್ವಾಡ್ರಿಸೆಪ್ಸ್ ನೋವು.
  • ವಾಷಿಂಗ್ಟನ್ ಸುಂದರ್ ಹಾಗೂ ಆಕಾಶ್ ದೀಪ್: ಸ್ನಾಯು ಸೆಳೆತ ಮತ್ತು ಬೆನ್ನುನೋವಿನ ಚಿಕಿತ್ಸೆ.
  • ಹಾರ್ದಿಕ್ ಪಾಂಡ್ಯ ಮತ್ತು ವರುಣ್ ಚಕ್ರವರ್ತಿ: ಫಿಟ್​ನೆಸ್ ಮತ್ತು ಗಾಯದ ಸಮಸ್ಯೆ.

ಗಂಭೀರ್ ಮತ್ತು ಅಗರ್ಕರ್ ಭಾಗಿ ಸಾಧ್ಯತೆ:

ಈ ಮಹತ್ವದ ಪರಾಮರ್ಶನಾ ಸಭೆಯಲ್ಲಿ ಟೀಮ್ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ವರ್ಚುವಲ್ (ಆನ್‌ಲೈನ್) ಮೂಲಕ ಭಾಗವಹಿಸುವ ಸಾಧ್ಯತೆಯಿದೆ. ಆಟಗಾರರು ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುವುದನ್ನು ತಡೆಯಲು ಹೊಸದೊಂದು ಕಟ್ಟುನಿಟ್ಟಿನ ನಿಯಮಾವಳಿಯನ್ನು ರೂಪಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಬರೋಬ್ಬರಿ 8 ವಿಕೆಟ್​… ಆಸ್ಟ್ರೇಲಿಯಾದ ಯುವ ವೇಗಿಯ ಮಿಂಚಿನ ದಾಳಿ!

ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ  ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ವಿವಿಎಸ್ ಲಕ್ಷ್ಮಣ್ ನಡುವೆ ನಡೆಯಲಿರುವ ಈ ತುರ್ತು ಸಭೆಯು ಕೇವಲ ಒಂದು ಸಾಮಾನ್ಯ ಪರಾಮರ್ಶೆಯಲ್ಲ. ಇದು ಭಾರತೀಯ ಕ್ರಿಕೆಟ್‌ನ ಆಟಗಾರರ ಫಿಟ್‌ನೆಸ್ ನಿರ್ವಹಣೆಯಲ್ಲಿ ಎದುರಾಗಿರುವ ಗಂಭೀರ ಬಿಕ್ಕಟ್ಟನ್ನು ನಿವಾರಿಸಲು ಕೈಗೊಂಡಿರುವ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ.

Published On – 9:57 am, Sun, 9 August 26

Source link

Exit mobile version