ತಾಯಿ ಪ್ರೀತಿಗೆ (mother love) ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳ ಹಿತಕ್ಕಾಗಿ ಎಂತಹ ಕಷ್ಟವನ್ನಾದರೂ ಹೆತ್ತಮ್ಮ ಸಹಿಸಿಕೊಳ್ಳುತ್ತಾಳೆ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ತಾಯಿ ಬೆಕ್ಕೊಂದು ಅಪಾಯದಲ್ಲಿ ಸಿಲುಕಿದ್ದ ತನ್ನ ಮರಿಗಳನ್ನು ಕಾಪಾಡಲು ಪ್ರಾಣವನ್ನೇ ಪಣಕ್ಕಿಟ್ಟಿದೆ. ಹೌದು, ತನ್ನ ಕಂದಮ್ಮನನ್ನು ರಕ್ಷಿಸಲು ಎತ್ತರದ ಗೋಡೆ ಏರಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಚೀನಾದಲ್ಲಿ ನಡೆದಿದೆ ಎನ್ನಲಾಗಿದೆ. ವೈರಲ್ ಆದ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ತಾಯಿ ಪ್ರೀತಿ, ಕಾಳಜಿಯನ್ನು ಹಾಡಿ ಹೊಗಳಿದ್ದಾರೆ.
ಬುಫ್ಲಿಲೆಕ್ಸ್ (Bufflylex) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಎತ್ತರದ ಗೋಡೆಯೊಂದರ ಸಣ್ಣ ರಂಧ್ರದಲ್ಲಿ ಬೆಕ್ಕಿನ ಮರಿಗಳು ಸಿಲುಕಿಕೊಂಡಿದ್ದು ಕೂಗುತ್ತಿವೆ. ತನ್ನ ಕಂದಮ್ಮಗಳ ಕೂಗು ಕೇಳುತ್ತಿದ್ದಂತೆ ತಾಯಿ ಬೆಕ್ಕು ಪ್ರಾಣ ಲೆಕ್ಕಿಸದೇ ಎತ್ತರದ ಗೋಡೆ ಏರಲು ಮುಂದಾಗಿದೆ. ತನ್ನ ಉಗುರುಗಳ ಸಹಾಯದಿಂದ ಹಿಡಿದು ಗೋಡೆ ಹಿಡಿದು ಮೇಲಕ್ಕೆ ಮೆಲ್ಲನೆ ಹತ್ತಿ ತನ್ನ ಮರಿಗಳಿರುವ ಜಾಗವನ್ನು ಸೇರಿದೆ. ಈ ದೃಶ್ಯವನ್ನು ನೋಡುತ್ತಾ ನಿಂತವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ರೈಲು ಹಳಿ ದಾಟಲು ಕಷ್ಟ ಪಡುತ್ತಿದ್ದ ಮರಿಯಾನೆಗೆ ತಾಯಾನೆ ಸಾಥ್, ವೈರಲ್ ಆಯ್ತು ದೃಶ್ಯ
ಈ ವಿಡಿಯೋ ನಲ್ವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿ ಪ್ರೀತಿ ಅಂದ್ರೆ ಹಾಗೆಯೇ ಎಂದಿದ್ದಾರೆ. ಇನ್ನೊಬ್ಬರು, ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕರುಳ ಬಳ್ಳಿಗೆ ತೊಂದರೆ ತಾಯಿ ಹೃದಯ ಎಷ್ಟು ಚಡಪಡಿಸುತ್ತದೆ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 11:24 am, Sun, 9 August 26
