ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡಿದ ಮಾಜಿ ಪ್ರಿಯಕರ, ಆತನ ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿದ ಮಹಿಳೆ – Kannada News | Ballia Blackmail Murder: Woman Kills Ex Lover Over Private Videos, Disfigures Face

ಬಲ್ಲಿಯಾ, ಮಾರ್ಚ್​ 02: ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಹಿಳೆಯೊಬ್ಬರು ಕೊಂದು, ಮುಖಕ್ಕೆ ಆ್ಯಸಿಡ್ ಹಾಕಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದಿದೆ. ವಿವಾಹಿತ ಮಹಿಳೆಯೊಬ್ಬರು, ಸಂಬಂಧ ಕೊನೆಗೊಳಿಸಲು ಪ್ರಯತ್ನಿಸಿದಾಗ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ್ದ, ಹಾಗಾಗಿ ಆಕೆ ತನ್ನ ಸಹೋದರ ಮತ್ತು ಅತ್ತಿಗೆಯ ಸಹಾಯದಿಂದ ಆತನನ್ನು ಕೊಲೆ(Murder) ಮಾಡಿದ್ದಾಳೆ.

ತಮ್ಮ ಗ್ರಾಮಕ್ಕೆ ಬರುವಂತೆ ಕರೆದು, ಕತ್ತು ಹಿಸುಕಿ ಕೊಂದು, ನಂತರ ಗುರುತನ್ನು ಮರೆಮಾಚಲು ಆಸಿಡ್‌ನಿಂದ ಮುಖವನ್ನು ವಿರೂಪಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 10 ರಂದು ಮುಖ ವಿರೂಪಗೊಂಡಿದ್ದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿತ್ತು, ಅದಾದ ನಂತರ ಈ ಅಪರಾಧ ಬೆಳಕಿಗೆ ಬಂದಿದೆ. ನಂತರ ಪೊಲೀಸ್ ತನಿಖೆಯಲ್ಲಿ ಕೊಲೆಯ ವಿವರಗಳು ಬೆಳಕಿಗೆ ಬಂದಿತ್ತು.

ಪೊಲೀಸರ ಪ್ರಕಾರ, ಮೃತ ವ್ಯಕ್ತಿ ಪಂಕಜ್ ಗುಪ್ತಾ, ಅಜಮ್‌ಗಢ ನಿವಾಸಿಯಾಗಿದ್ದು, ಪಕ್ಕದ ಹಳ್ಳಿಯ ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ತನಿಖಾಧಿಕಾರಿಗಳು ಹೇಳುವಂತೆ ಮಹಿಳೆ ಸಂಬಂಧವನ್ನು ಕೊನೆಗೊಳಿಸಲು ಪ್ರಯತ್ನಿಸಿದ್ದಳು, ಆದರೆ ಗುಪ್ತಾ ಅಶ್ಲೀಲ ವೀಡಿಯೊಗಳನ್ನು ಬಳಸಿ ಆಕೆಗೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿ, ಪದೇ ಪದೇ ಕಿರುಕುಳ ನೀಡುತ್ತಿದ್ದ.

ಮತ್ತಷ್ಟು ಓದಿ: ಅಮ್ಮಾ ಅವ್ನು ನನ್ನ ಬಳಿ ಕೆಟ್ಟದಾಗಿ ನಡೆದುಕೊಂಡ ಎಂದು ದೂರು ಕೊಟ್ಟಿದ್ದಕ್ಕೆ, ಬಾಲಕಿಯನ್ನೇ ಕತ್ತು ಸೀಳಿ ಕೊಂದ ಅಪ್ರಾಪ್ತ

ಬೆದರಿಕೆಗಳನ್ನು ತಾಳಲಾರದೆ ಮಹಿಳೆ ತನ್ನ ಸಹೋದರ ಮತ್ತು ಅತ್ತಿಗೆಯ ಬಳಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಫೆಬ್ರವರಿ 5 ರಂದು ನಡೆದ ವಿವಾಹ ಸಮಾರಂಭದಲ್ಲಿ ಮೂವರು ಮತ್ತು ಇತರರೊಂದಿಗೆ ಗುಪ್ತಾ ಅವರನ್ನು ಕೊಲ್ಲಲು ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 7 ರಂದು, ಗುಪ್ತಾ ಅವರನ್ನು ಒಂದು ನೆಪ ಹೇಳಿ ಗ್ರಾಮಕ್ಕೆ ಕರೆತಂದು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನಂತರ ಆರೋಪಿಯು ಮೃತದೇಹವನ್ನು ಎಸೆಯುವ ಮೊದಲು ಮುಖವನ್ನು ವಿರೂಪಗೊಳಿಸುವ ಮೂಲಕ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಸೇರಿದಂತೆ ಮೂವರು ಬಂಧಿತ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ, ಉಳಿದ ಶಂಕಿತರನ್ನು ಬಂಧಿಸಲು ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕನ್ನಡಿಗರಷ್ಟೇ ಅಲ್ಲ ಯಾರೂ ಆತಂಕ ಪಡಬೇಕಿಲ್ಲ, ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಪ್ರಲ್ಹಾದ್ ಜೋಶಿ ಅಭಯ – Kannada News | No Need to Panic, All Indians Will Be Brought Back Safely from Iran Israel War Zone: Pralhad Joshi Assures

ನವದೆಹಲಿ, ಮಾರ್ಚ್ 2: ಇರಾನ್-ಇಸ್ರೇಲ್ ಯುದ್ಧ ಸನ್ನಿವೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಎಲ್ಲಾ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ. ಅಲ್ಲಿನ ರಾಯಭಾರಿ ಕಚೇರಿ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಸೋಮವಾರ ತಿಳಿಸಿದ್ದಾರೆ. ಜಗತ್ತಿನ ಎಲ್ಲೇ ಆಗಲಿ ಕನ್ನಡಿಗರು ಸೇರಿದಂತೆ ಭಾರತೀಯರು ಸಂಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಸರ್ಕಾರ ಸುರಕ್ಷಿತವಾಗಿ ಕರೆ ತಂದಿದೆ. ಹಿಂದೆ ಉಕ್ರೇನ್ ಅಲ್ಲಿ ಸಿಲುಕಿದ್ದವರನ್ನು ಮರಳಿ ಕರೆ ತಂದಿದ್ದೇವೆ. ಭಾರತೀಯರು ಎಲ್ಲೇ ಇದ್ದರೂ ಅವರ ಸುರಕ್ಷತೆಗೆ ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ನೀಡುತ್ತದೆ ಎಂದು ಜೋಶಿ ಹೇಳಿದ್ದಾರೆ.

ಇರಾನ್-ಇಸ್ರೇಲ್ ಯುದ್ಧದ ಭೀಕರತೆಯಿಂದಾಗಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಈ ಸಂಬಂಧ ಹಿರಿಯ ಸಚಿವರೊಂದಿಗೆ ತುರ್ತು ಚರ್ಚೆ ನಡೆಸಿದ್ದು, ಎಲ್ಲಾ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕನ್ನಡಿಗರಷ್ಟೇ ಅಲ್ಲ, ಯಾರೂ ಆತಂಕ ಪಡಬೇಕಿಲ್ಲ: ಪ್ರಲ್ಹಾದ್ ಜೋಶಿ

ಕನ್ನಡಿಗರು ಮಾತ್ರವಲ್ಲ ಭಾರತೀಯರನ್ನೆಲ್ಲ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸರ್ವ ಸನ್ನದ್ಧವಾಗಿದೆ. ಈಗಾಗಲೇ ರಾಯಭಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ. ಯಾರೊಬ್ಬರೂ ಆತಂಕ ಪಡಬೇಕಿಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ, ಆತಂಕಿತ ಕುಟುಂಬಸ್ಥರಿಗೆ ಸ್ಥೈರ್ಯ ಹೇಳಿದ್ದಾರೆ.

ಯುದ್ಧಪೀಡಿತ ಪ್ರದೇಶಗಳಲ್ಲಿ ವಿಮಾನ ಸಂಚಾರ ಅಪಾಯಕಾರಿ ಆಗಿದ್ದು, ತಜ್ಞರ ಸಲಹೆ ಪಡೆಯಲಾಗುತ್ತಿದೆ. ಭಾರತೀಯರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದಿರುವ ಸಚಿವರು, ವಿಧಾನಪರಿಷತ್ ಸದಸ್ಯ ಭೋಜೇಗೌಡರು ಸೇರಿದಂತೆ ಸಂಕಷ್ಟದಲ್ಲಿರುವ ಎಲ್ಲಾ ಕನ್ನಡಿಗರ ರಕ್ಷಣೆಗೆ ಶ್ರಮಿಸುತ್ತೇವೆಂದು ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: ತಾಯ್ನಾಡಿನಲ್ಲಿ ಯುದ್ಧದ ಕಾರ್ಮೋಡ: ಕುಸ್ತಿ ಕಾಳಗದಲ್ಲಿ ದಾವಣಗೆರೆ ಜನರ ಗಮನ ಸೆಳೆದ ಇರಾನ್ ಪೈಲ್ವಾನ್ ಮಿರ್ಜಾ

ದುಬೈನಲ್ಲಿ ಸಿಲುಕಿದ ಕನ್ನಡಿಗರನ್ನು ಕರೆತರುತ್ತೇವೆ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ವೇಳೆ ದುಬೈನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ನಮ್ಮ ಆದ್ಯತೆಯಾಗಿದೆ. ಯಾರೂ ಆತಂಕಪಡಬೇಕಿಲ್ಲ. ಸದ್ಯ ದುಬೈನಿಂದ ಯಾವುದೇ ವಿಮಾನ ಹಾರಾಟ ನಡೆಯುತ್ತಿಲ್ಲ. ಅಲ್ಲಿರುವವರನ್ನು ವಾಪಸ್ ಕರೆತರುವ ಬಗ್ಗೆ ಗಂಭೀರವಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಜೋಶಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಂಜು ಸ್ಯಾಮ್ಸನ್ ಅಲ್ಲ, ಗೆಲುವಿಗೆ ಈತ ಕಾರಣ: ಗಂಭೀರ್ ಅಚ್ಚರಿಯ ಹೇಳಿಕೆ – Kannada News | Gautam Gambhir acknowledges Shivam Dube’s contribution

T20 World Cup 2026: ಟಿ20 ವಿಶ್ವಕಪ್ 2026ರ ಸೆಮಿಫೈನಲ್​ಗೆ ಟೀಮ್ ಇಂಡಿಯಾ ಲಗ್ಗೆಯಿಟ್ಟಿದೆ. ಅದು ಸಹ ಬಲಿಷ್ಠ ವೆಸ್ಟ್ ಇಂಡೀಸ್ ಪಡೆಯನ್ನು ಬಗ್ಗು ಬಡಿಯುವ ಮೂಲಕ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಸೂಪರ್-8 ಸುತ್ತಿನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು 20 ಓವರ್​ಗಳಲ್ಲಿ 195 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಆರಂಭಿಕ ದಾಂಡಿಗ ಸಂಜು ಸ್ಯಾಮ್ಸನ್ ಅಜೇಯ 97 ರನ್ ಬಾರಿಸಿದರು. ಈ ಮೂಲಕ 19.2 ಓವರ್​ಗಳಲ್ಲಿ ಭಾರತ ತಂಡವನ್ನು ಗುರಿ ಮುಟ್ಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಭಾರತ ತಂಡವು ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರಿದೆ.

ಇನ್ನು ಈ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಭಾರತದ ಗೆಲುವಿಗೆ ಸಂಜು ಸ್ಯಾಮ್ಸನ್ ಮಾತ್ರ ಕಾರಣರಲ್ಲ. ಇತರೆ ಆಟಗಾರರ ಕೊಡುಗೆ ಕೂಡ ಅತ್ಯಮೂಲ್ಯವಾಗಿತ್ತು ಎಂದಿದ್ದಾರೆ.

ಅದರಲ್ಲೂ 19 ನೇ ಓವರ್‌ನಲ್ಲಿ ಶಿವಂ ದುಬೆ ಬಾರಿಸಿದ ಎರಡು ಫೋರ್​ಗಳು ಸಂಜು ಸ್ಯಾಮ್ಸನ್ ಮೇಲಿನ ಅಗಾಧ ಒತ್ತಡವನ್ನು ನಿವಾರಿಸುವಲ್ಲಿ ನಿರ್ಣಾಯಕವಾಗಿದ್ದವು.  ಹಾರ್ದಿಕ್ ಪಾಂಡ್ಯ ಡಾಟ್ ಬಾಲ್‌ಗೆ ಔಟಾದ ನಂತರ 10 ಎಸೆತಗಳಲ್ಲಿ 17 ರನ್‌ಗಳು ಬೇಕಾಗಿದ್ದಾಗ, ದುಬೆ ಅವರ ತಕ್ಷಣದ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದರು.

ಶಿವಂ ದುಬೆ ಅವರ ಈ ನಿರ್ಣಾಯಕ ಪಾತ್ರವು ಪಂದ್ಯವು ಸಂಪೂರ್ಣವಾಗಿ ಭಾರತದ ಪರ ವಾಲುವಂತೆ ಮಾಡಿತು. ಹೀಗಾಗಿ ಟೀಮ್ ಇಂಡಿಯಾದ ಗೆಲುವಿನ ಶ್ರೇಯಸ್ಸು ದುಬೆ ಅವರಿಗೂ ಸಲ್ಲಬೇಕು ಎಂದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.

ಸಾಮಾನ್ಯವಾಗಿ ಪಂದ್ಯ ಮುಗಿದಾಗ ನಾವು ಕೆಲವು ಕೊಡುಗೆಗಳ ಬಗ್ಗೆ ಮಾತ್ರ ಮಾಡುತ್ತೇವೆ. ನನ್ನ ಪ್ರಕಾರ, ಶಿವಂ ಅವರ ಆ ಎರಡು ಫೋರ್​ಗಳು ಸಂಜು ಅವರ 97 ರನ್​​ ಗಳಷ್ಟೇ ಮುಖ್ಯ. ಇದು ತಂಡದ ಆಟ.  ಅಲ್ಲದೆ ಯಾವಾಗಲೂ ತಂಡದ ಆಟವಾಗಿಯೇ ಉಳಿಯುತ್ತದೆ.

ಹೀಗಾಗಿಯೇ ಶಿವಂ ದುಬೆ ಬಾರಿಸಿದ 2 ಫೋರ್​ಗಳು ಸಂಜು ಅವರ ಇನ್ನಿಂಗ್ಸ್‌ನಷ್ಟೇ ಮುಖ್ಯ ದುಬೆ ನಿರ್ಣಾಯಕ ಹಂತದಲ್ಲಿ ಎರಡು ಬೌಂಡರಿಗಳನ್ನು ಬಾರಿಸದೇ ಇದ್ದಿದ್ದರೆ. ನಾವು ಇಂದು ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡುತ್ತಿರಲಿಲ್ಲ. ಅವರು ವಿಶೇಷ ಇನಿಂಗ್ಸ್ ಆಡಿದ್ದಾರೆ, ಆ ಸಣ್ಣ ಕೊಡುಗೆಗಳು ಪಂದ್ಯಗಳನ್ನು ಗೆಲ್ಲಲು ನಿಮಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ: ಅಂದು ಲೇವಡಿ ಮಾಡಿ, ಇಂದು ತಲೆಬಾಗಿ ನಿಂತ ಸೂರ್ಯ..!

ಇದಾಗ್ಯೂ ದೊಡ್ಡ ಕೊಡುಗೆಗಳು ಸುದ್ದಿಯಾಗುತ್ತವೆ. ಆದರೆ ಸಣ್ಣ ಕೊಡುಗೆಗಳು ತಂಡವನ್ನು ಪಂದ್ಯ ಗೆಲ್ಲಿಸಿಕೊಡುವಲ್ಲಿ ಸಹಾಯ ಮಾಡುತ್ತವೆ. ಹೀಗಾಗಿ ಇಂತಹ ಕೊಡುಗೆಗಳು ಬಹಳ ಮುಖ್ಯ. ಹೀಗಾಗಿಯೇ ಟೀಮ್ ಇಂಡಿಯಾ ಗೆಲುವಿಗೆ ಶಿವಂ ದುಬೆ ಕೂಡ ಕಾರಣಕರ್ತರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

Source link

ಬಬಲಾದಿ ಕಾಲಜ್ಞಾನ ನಿಜವಾಯಿತೇ?: ಯುದ್ಧ ಆಯಿತು, ಮುಂದೆ ಪ್ರವಾಹ, ಭಾರತಕ್ಕೆ ಗಡಿ ಆತಂಕ! – Kannada News | Kala Jnana Realized: Babaladi Mutt’s Warnings on Middle East War and Disasters

ವಿಜಯಪುರ, ಮಾ.2: ಉತ್ತರ ಕರ್ನಾಟಕದ ಅತಿ ಹೆಚ್ಚು ನಂಬಿಕಸ್ತ ಕಾಲಜ್ಞಾನ ಕೇಂದ್ರಗಳಲ್ಲೊಂದಾದ ಬಬಲಾದಿ ಶ್ರೀ ಸದಾಶಿವ ಮುತ್ಯಾರ ಮಠದ ಭವಿಷ್ಯವಾಣಿ ಮತ್ತೊಮ್ಮೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ಮಠದ ಜಾತ್ರೆಯಲ್ಲಿ ನುಡಿಯಲಾಗಿದ್ದ ಅಶುಭ ಮುನ್ಸೂಚನೆಗಳು ಈಗ ಅಕ್ಷರಶಃ ನಿಜವಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. “ಗಡಿಯಲ್ಲಿ ಭೀತಿ ಎದುರಾಗಲಿದೆ, ಯುದ್ಧದ ಕಾರ್ಮೋಡ ಕವಿಯಲಿದೆ” ಎಂದು ಪೀಠಾಧಿಪತಿಗಳು ಸ್ಪಷ್ಟವಾಗಿ ಹೇಳಿದ್ದರು. ಇದು ಪ್ರಸ್ತುತ ಅಮೇರಿಕಾ-ಇರಾನ್-ಇಸ್ರೇಲ್ ನಡುವಿನ ಸಂಘರ್ಷಕ್ಕೆ ನೇರ ಸಾಕ್ಷಿಯಂತಿದೆ. “ಜಾಗತಿಕ ಮಟ್ಟದಲ್ಲಿ ದೊಡ್ಡ ಕೆಡಕಾಗಲಿದೆ, ದೊಡ್ಡ ದುಃಖದ ಸುದ್ದಿಯೊಂದು ಬಂದೀತು” ಎಂದು ನುಡಿಯಲಾಗಿತ್ತು. ಇರಾನ್‌ನ ಪ್ರಮುಖ ನಾಯಕರ ಹತ್ಯೆ ಮತ್ತು ಮಧ್ಯಪ್ರಾಚ್ಯದಲ್ಲಿ ಸರಣಿ ಬಾಂಬ್ ದಾಳಿಗಳು ಈ ಭವಿಷ್ಯವನ್ನು ಪುಷ್ಟೀಕರಿಸುತ್ತಿವೆ. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಮತ್ತು ಪ್ರತಿಯಾಗಿ ದುಬೈ, ಕತಾರ್, ಬಹ್ರೇನ್ ಮೇಲೆ ಇರಾನ್ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಭವಿಷ್ಯದಲ್ಲಿ ಸುಳಿವು ನೀಡಲಾಗಿತ್ತು. ಯುದ್ಧದ ಜೊತೆಗೆ “ಮಳೆ-ಬೆಳೆ ವ್ಯತ್ಯಯ, ಪ್ರವಾಹ ಮತ್ತು ಗಡಿಯಲ್ಲಿ ಆತಂಕದ ಛಾಯೆ” ಇರಲಿದೆ ಎಂದು ಕಾಲಜ್ಞಾನ ಹೇಳಿತ್ತು. ಬಬಲಾದಿ ಮಠದಲ್ಲಿ ಪ್ರತಿ ವರ್ಷ ಶಿವರಾತ್ರಿಯ ಅಮಾವಾಸ್ಯೆಯ ನಂತರ ನಡೆಯುವ ಜಾತ್ರೆಯಲ್ಲಿ ಓಲೆಗರಿಯ ಕಾಲಜ್ಞಾನವನ್ನು ಓದಲಾಗುತ್ತದೆ. ಈ ವರ್ಷದ ಕಾಲಜ್ಞಾನವು ಶುಭಕ್ಕಿಂತ ಅಶುಭ ಫಲಗಳನ್ನೇ ಹೆಚ್ಚು ಸೂಚಿಸಿತ್ತು. ಗಡಿಯಲ್ಲಿ ಯುದ್ಧದ ಭೀತಿ ಮತ್ತು ದೇಶದ ಆರ್ಥಿಕತೆಗೆ ಪೆಟ್ಟು ಬೀಳುವ ಮುನ್ಸೂಚನೆಗಳನ್ನು ಸಿದ್ರಾಮಪ್ಪ ಹೋಳಿಮಠ ಅವರು ನೀಡಿದ್ದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ-ವಿಜಯ್ ಫ್ಯಾನ್ಸ್​​ಗೆ ಕೊಟ್ಟ ಸ್ವೀಟ್ ಬಾಕ್ಸ್ ಅಲ್ಲಿ ಏನೆಲ್ಲ ಇದೆ?

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಮದುವೆ ಆದರು. ಅವರ ವಿವಾಹ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತು. ವಿವಾಹ ಆದ ಬಳಿಕ ರಶ್ಮಿಕಾ ಹಾಗೂ ವಿಜಯ್ ಒಟ್ಟಾಗಿ ತಿರುಪತಿ ತೆರಳಿದ್ದರು. ಈ ವೇಳೆ ಅಭಿಮಾನಿಗಳಿಗೆ ಸಿಹಿ ವಿತರಣೆ ಮಾಡಿದ್ದರು. ಸ್ವೀಟ್ ಬಾಕ್ಸ್ ಸಿಕ್ಕ ಫ್ಯಾನ್ಸ್ ಇದನ್ನು ಶೇರ್ ಮಾಡಿಕೊಂಡಿದ್ದಾರೆ.  ರಸಗುಲ್ಲಾ, ಲಾಡು ಸೇರಿ ಮೂರು ವಿಧದ ಸ್ವೀಟ್ ಇವೆ. ಈ ವಿಡಿಯೋ ನೋಡಿದ ಅನೇಕರು, ‘ಸ್ವೀಟ್​​ಗಿಂತ ಬಾಕ್ಸ್​​ಗೆ ಹೆಚ್ಚು ಖರ್ಚಾಗಿದೆ’ ಎಂದು ಅಣಕಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೈಗಾ ಅಣು ವಿದ್ಯುತ್ ಯೋಜನೆಗೆ ಮೇಕ್​​ ಇನ್​ ಇಂಡಿಯಾ ಬಲ: 5 ಮತ್ತು 6ನೇ ಘಟಕಗಳಿಗೆ ಸ್ವದೇಶಿ ತಂತ್ರಜ್ಞಾನದ ರಿಯಾಕ್ಟರ್‌ಗಳ ಬಳಕೆ – Kannada News | Kaiga Nuclear Project Expansion: Indigenous Tech Boosts Karnataka’s Energy Security

ಬೆಂಗಳೂರು, ಮಾರ್ಚ್​​ 2: ರಕ್ಷಣಾ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿದ್ದ ಮೇಕ್​​ ಇನ್​ ಇಂಡಿಯಾ ಯೋಜನೆ ಈಗ ಅಣುಶಕ್ತಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾಮಗಾರಿಗೆ ಅಧಿಕೃತ ಚಾಲನೆ ನೀಡಲಾಗಿದ್ದು, ಈ ಘಟಕಗಳಲ್ಲಿ ಸ್ಥಾಪನೆಯಾಗುವ ರಿಯಾಕ್ಟರ್‌ಗಳು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತವಾಗಿವೆ ಎನ್ನುವುದು ವಿಶೇಷ.

ಈ ಬಗ್ಗೆ ಮಾಹಿತಿ ನೀಡಿರುವ ಕೈಗಾ ಘಟಕದ ಸೈಟ್ ನಿರ್ದೇಶಕ ಬಿ. ವಿನೋದ್ ಕುಮಾರ್ , 700 ಮೆಗಾವಾಟ್ ಸಾಮರ್ಥ್ಯದ ಪ್ರೆಷರೈಸ್ಡ್ ಹೆವಿ ವಾಟರ್ ರಿಯಾಕ್ಟರ್‌ಗಳನ್ನು ಮೇಕ್​​ ಇನ್​ ಇಂಡಿಯಾ ಯೋಜನೆಯಡಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಫ್ಲೀಟ್ ಮೋಡ್‌ನಲ್ಲಿ 10 ಅಣು ವಿದ್ಯುತ್ ಯೋಜನೆಗಳಿಗೆ ಅನುಮೋದನೆ ನೀಡಿದ್ದು, 700 ಮೆಗಾವಾಟ್ ರಿಯಾಕ್ಟರ್‌ಗಳನ್ನು ಗುಜರಾತ್, ರಾಜಸ್ಥಾನ ಹಾಗೂ ಕರ್ನಾಟಕ ರಾಜ್ಯಗಳಿಗೆಂದು ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ಮೊದಲ ಬಾರಿಗೆ ಸ್ವದೇಶೀ ರಿಯಾಕ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಹಳೆಯ ಒಪ್ಪಂದದ ಪ್ರಕಾರ ರಾಜ್ಯಕ್ಕೆ ಉತ್ಪಾದಿತ ವಿದ್ಯುತ್‌ನ ಶೇ.20ರಷ್ಟು ಪಾಲು ಸಿಗುತ್ತಿತ್ತು. ಆದರೆ ಹೊಸ ಯೋಜನೆಯಡಿ ರಾಜ್ಯಕ್ಕೆ ಶೇ.50ರಷ್ಟು ಪಾಲು ದೊರೆಯಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಶಿರಸಿ ಮಾರಿಕಾಂಬಾ ಜಾತ್ರೆಗೆ ಹೋಗುವ ಭಕ್ತರಿಗೆ ಡಬಲ್ ಗುಡ್​​​ ನ್ಯೂಸ್​​ ನೀಡಿದ ರೈಲ್ವೆ ಇಲಾಖೆ

ಪ್ರಸ್ತುತ ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಾಪಿತ ಸಾಮರ್ಥ್ಯ 880 ಮೆಗಾವಾಟ್ ಆಗಿದ್ದು, 5 ಮತ್ತು 6ನೇ ಘಟಕಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಬಳಿಕ ಇದು 2,280 ಮೆಗಾವಾಟ್‌ಗೆ ಹೆಚ್ಚಲಿದೆ. ಕರ್ನಾಟಕದಲ್ಲಿ ಇನ್ನೂ 7,000 ಮೆಗಾವಾಟ್ ಸಾಮರ್ಥ್ಯ ಹೆಚ್ಚಿಸಲು ಸಿದ್ಧತೆ ನಡೆದಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಕರ್ನಾಟಕಕ್ಕೆ ಮತ್ತೊಂದು ಮಹತ್ವದ ಅಣು ವಿದ್ಯುತ್ ಯೋಜನೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.

ನೂತನ ಘಟಕಗಳ ಕಾಮಗಾರಿಗೆ ಅಣುಶಕ್ತಿ ಆಯೋಗದ ಅಧ್ಯಕ್ಷ ಅಜಿತ್​​ ಕುಮಅರ್​ ಮೊಹಾಂತಿ ಹಾಗೂ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ Nuclear Power Corporation of India Limited (NPCIL) ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್ ಉಪಸ್ಥಿತರಿದ್ದರು. ಈ ಘಟಕಗಳು ಮುಂದಿನ 5 ವರ್ಷಗಳಲ್ಲಿ ಪೂರ್ಣ ಪ್ರಮಾಣದ ಕಾರ್ಯನಿರ್ವಹಣೆಯ ಗುರಿ ಹೊಂದಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 11:40 am, Mon, 2 March 26

Source link

ಪತ್ನಿಗೆ ವಿಮೆ ಹಣ ಸಿಗಲಿ ಎಂದು ಸತ್ತಂತೆ ನಾಟಕವಾಡಿದ ಪತಿ, ಅಗಲುವಿಕೆಯ ನೋವು ತಾಳಲಾರದೆ ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ಪತ್ನಿ – Kannada News | Insurance Fraud Triggers China Family Tragedy: Husband Fakes Death, Wife Kills Kids and Self

ಬೀಜಿಂಗ್, ಮಾರ್ಚ್​ 02: ಎಂಥಾ ವಿಪರ್ಯಾಸ ನೋಡಿ, ಹೆಂಡತಿ ಮಕ್ಕಳು ಸುಖವಾಗಿರಬೇಕು ಎಂದು ಪತಿ ಸತ್ತಂತೆ ನಾಟವಾಡಿದರೆ, ಅದೇ ನಿಜವೆಂದು ನಂಬಿ ಮನನೊಂದು ಪತ್ನಿ ಹಾಗೂ ಮಕ್ಕಳು ನಿಜವಾಗಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ಆಗ್ನೇಯ ಚೀನಾದ ಹುನಾನ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತುಂಬಾ ಸಾಲ ಮಾಡಿಕೊಂಡಿದ್ದ, ಅದರಿಂದ ತಪ್ಪಿಸಿಕೊಳ್ಳಲು ಸತ್ತಂತೆ ನಾಟಕವಾಡಿದ್ದ.

ತನ್ನ ಪತಿಯ ಹಠಾತ್ ಸಾವಿನ ಸುದ್ದಿಯಿಂದ ಆ ವ್ಯಕ್ತಿಯ ಪತ್ನಿ ದಂಗಾಗಿದ್ದಳು. ಆಕೆಯ ಪತಿಯ ಕಾರು ನದಿಯಲ್ಲಿ ಪತ್ತೆಯಾಗಿತ್ತು. ಆದರೂ ಶವ ಸಿಕ್ಕಿರಲಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ನಂಬಿದ್ದರು. ಆದರೆ ಸತ್ಯ ಬೇರೆಯದೇ ಆಗಿತ್ತು. ಆ ವ್ಯಕ್ತಿಗೆ 100,000 ಯುವಾನ್ ಅಥವಾ ಸುಮಾರು 1.2 ಮಿಲಿಯನ್ ರೂಪಾಯಿಗಳ ಸಾಲವಿತ್ತು, ಇದನ್ನು ಅವರು ತಮ್ಮ ಮೂರು ವರ್ಷದ ಮಗಳ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ಆನ್‌ಲೈನ್‌ನಲ್ಲಿ ವಿವಿಧ ಜನರಿಂದ ಸಾಲ ಪಡೆದಿದ್ದರು.

ಆ ವ್ಯಕ್ತಿಯ ಸಾವಿನ ಬಗ್ಗೆ ಅವರ ಪತ್ನಿಗೆ ತಿಳಿದಾಗ, ಅವರು ಚಿಂತಿತರಾಗಿದ್ದರು, ಏಕೆಂದರೆ ಅವರ ಅನಾರೋಗ್ಯ ಪೀಡಿತ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಸಂಪೂರ್ಣವಾಗಿ ಅವರ ಮೇಲೆ ಬಿದ್ದಿತ್ತು.
ಆತ ಪತ್ನಿಗೆ ತಿಳಿಯದಂತೆ 1 ಮಿಲಿಯನ್ ಯುವಾನ್ ವಿಮಾ ಯೋಜನೆ ಮಾಡಿದ್ದರು, ಆ ಹಣವು ಆಕೆಯ ಕೈ ಸೇರಿತ್ತು, ಅದರಿಂದ ಆಕೆ ಸಾಲ ತೀರಿಸಬಹುದು ಎಂಬುದು ವ್ಯಕ್ತಿಯ ಆಸೆ ಕೂಡ ಆಗಿತ್ತು.

ಮತ್ತಷ್ಟು ಓದಿ: ಕುವೈತ್​​ನಲ್ಲಿರುವ ತಾಯಿಗೆ ‘ಐ ಲವ್ ಯೂ ಸೋ ಮಚ್’ ಎಂದು ಸಂದೇಶ ಕಳುಹಿಸಿ ನೇಣಿನ ಕುಣಿಕೆಗೆ ಕೊರಳೊಡ್ಡಿದ ವಿದ್ಯಾರ್ಥಿನಿ

ಆದರೆ ಪತಿ ಇಲ್ಲ ಎಂಬ ಕೊರಗು ತಪ್ಪು ಹೆಜ್ಜೆಯನ್ನು ಇಡುವಂತೆ ಮಾಡಿತ್ತು, ಆಕೆ ನಾಲ್ಕು ವರ್ಷದ ಮಗ ಹಾಗೂ ಮಗಳನ್ನು ಕೊಂದು ತಾನೂ ಕೂಡ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಮೊದಲು ಮಗನನ್ನು ಮುಳುಗಿಸಿ ಕೊನೆಗೆ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚೀನಾದ ಸಾಮಾಜಿಕ ಮಾಧ್ಯಮ ತಾಣವಾದ ವಿಚಾಟ್​​ನಲ್ಲಿ ಆತ್ಮಹತ್ಯೆ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ನಾನು ಒಬ್ಬಂಟಿಯಾಗಿ ಹೋಗಲು ಬಯಸಿದ್ದೆ, ಆದರೆ ನನ್ನ ಹೆತ್ತವರಿಲ್ಲದಿದ್ದರೆ, ನನ್ನ ಮಗ ಮತ್ತು ಮಗಳು ನನ್ನಂತೆಯೇ ಬಳಲುತ್ತಾರೆ ಮತ್ತು ಕಿರುಕುಳಕ್ಕೊಳಗಾಗುತ್ತಾರೆ ಹಾಗಾಗಿ ಅವರನ್ನು ಕೊಲ್ಲುವುದಾಗಿ ಬರೆದಿದ್ದಾರೆ.

ಈ ಪೋಸ್ಟ್ ಚೀನಾದಲ್ಲಿ ಬೇಗನೆ ವೈರಲ್ ಆಗಿ, ಪ್ರಕರಣವನ್ನು ರಾಷ್ಟ್ರೀಯ ಸಂಚಲನವನ್ನಾಗಿ ಮಾಡಿತು. ಮಹಿಳೆಯ ಪತಿ ಪೊಲೀಸರಿಗೆ ಶರಣಾದರು ಸಾಲದಿಂದ ತಪ್ಪಿಸಿಕೊಳ್ಳಲು ತಾನು ನಾಟಕವಾಡಿದ್ದಾಗಿ ಹೇಳಿದ್ದಾರೆ.ವಿಮಾ ಪಾಲಿಸಿಯು ತನ್ನ ಮಗಳ ವೈದ್ಯಕೀಯ ಚಿಕಿತ್ಸೆಗೆ ಹಣ ನೀಡಲು ಸಹಾಯ ಮಾಡುತ್ತದೆ ಎಂದು ನಂಬಿದ್ದರು. ನಾನು ನನ್ನ ಪ್ಲ್ಯಾನ್ ಅನ್ನು ಆಕೆಗೆ ಹೇಳಿರಲಿಲ್ಲ ಅದೇ ತನ್ನ ದೊಡ್ಡ ತಪ್ಪು ಎಂದು ಕಣ್ಣೀರಿಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಅಂದು ಲೇವಡಿ ಮಾಡಿ, ಇಂದು ತಲೆಬಾಗಿ ನಿಂತ ಸೂರ್ಯ..! – Kannada News | SuryaKumar Yadav bowing down to Sanju Sanson after his match winning innings

T20 World Cup 2026: ಟಿ20 ವಿಶ್ವಕಪ್​ನ 52ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ. ಈ ಇನಿಂಗ್ಸ್​ನೊಂದಿಗೆ ಸ್ಯಾಮ್ಸನ್ ಭಾರತ ತಂಡಕ್ಕೆ ಭರ್ಜರಿ ಗೆಲುವನ್ನೂ ಸಹ ತಂದು ಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸೆಮಿಫೈನಲ್​ಗೆ ಲಗ್ಗೆಯಿಟ್ಟಿದೆ.

ಇಂಟ್ರೆಸ್ಟಿಂಗ್ ವಿಷಯ ಎಂದರೆ ಈ ಬಾರಿಯ ವಿಶ್ವಕಪ್​ನ ಆರಂಭಿಕ ಪಂದ್ಯಗಳಲ್ಲಿ ಸ್ಯಾಮ್ಸನ್​ಗೆ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ನಮೀಬಿಯ ವಿರುದ್ಧದ ಪಂದ್ಯದಿಂದ ಅಭಿಷೇಕ್ ಶರ್ಮಾ ಹೊರಗುಳಿದಿದ್ದ ಕಾರಣ ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಲಾಗಿತ್ತು.

ಆದರೆ ಪಾಕಿಸ್ತಾನ್ ಮತ್ತು ನೆದರ್​ಲೆಂಡ್ಸ್ ವಿರುದ್ಧದ ಪಂದ್ಯದ ವೇಳೆ ಅವರನ್ನು ಕೈ ಬಿಡಲಾಯಿತು. ಈ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತುವ ಮೂಲಕ ಅಭಿಷೇಕ್ ಶರ್ಮಾ ನಿರಾಸೆ ಮೂಡಿಸಿದ್ದರು. ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಸಂಜು ಸ್ಯಾಮ್ಸನ್​ಗೆ ಈ ಬಾರಿಯಾದರೂ ಅವಕಾಶ ನೀಡುತ್ತೀರಾ ಎಂದು ಸೂರ್ಯಕುಮಾರ್ ಯಾದವ್​ ಅವರನ್ನು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಯನ್ನು ಲೇವಡಿ ಮಾಡಿದಂತೆ ಅಂದು ಸೂರ್ಯಕುಮಾರ್ ಯಾದವ್ ಉತ್ತರ ನೀಡಿದ್ದರು.

ವರದಿಗಾರರು ಸಂಜು ಸ್ಯಾಮ್ಸನ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಪ್ರಸ್ತಾಪಿಸಿದಾಗ, ಸೂರ್ಯಕುಮಾರ್ ತಮ್ಮದೇ ಶೈಲಿಯಲ್ಲಿ ನಗುತ್ತಾ ಮರುಪ್ರಶ್ನೆ ಹಾಕಿದ್ದರು. “ಹಾಗಾದರೆ ನಾನು ಸಂಜು ಅವರನ್ನು ಅಭಿಷೇಕ್ ಬದಲಿಗೆ ಆಡಿಸಬೇಕು ಎಂದು ನೀವು ಹೇಳುತ್ತಿದ್ದೀರಾ?” ಎಂದು ಕೇಳಿದರು.

ವರದಿಗಾರರು ಹೌದು ಎಂದಾಗ, ಸೂರ್ಯ ನಗುತ್ತಾ, “ಅಂದರೆ 3ನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು ತೆಗೆದು ಸಂಜು ಅವರನ್ನು ಆಡಿಸಬೇಕೇ?” ಎಂದು ಮರುಪ್ರಶ್ನಿಸಿ ಲೇವಡಿ ಮಾಡಿದ್ದರು. ಇದೀಗ ಅದೇ ಸೂರ್ಯಕುಮಾರ್ ಯಾದವ್ ಸಂಜು ಸ್ಯಾಮ್ಸನ್ ಮುಂದೆ ತಲೆಬಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವಿಫಲರಾದರೂ ಒಂದೆಡೆ ನಿಂತು ಜವಾಬ್ದಾರಿಯುತ ಇನಿಂಗ್ಸ್ ಆಡುವ ಮೂಲಕ ಸಂಜು ಸ್ಯಾಮ್ಸನ್ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್​ನ ಸೆಮಿಫೈನಲ್​ಗೇರಿದೆ.

ಇತ್ತ ಟೀಮ್ ಇಂಡಿಯಾ ಗೆದ್ದ ಬೆನ್ನಲ್ಲೇ ಮೈದಾನಕ್ಕೆ ಆಗಮಿಸಿದ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್​ಗೆ ತಲೆಬಾಗುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಕೆಲ ದಿನಗಳ ಹಿಂದೆ ಸೂರ್ಯಕುಮಾರ್ ಯಾದವ್ ಆಡಿದ್ದ ಮಾತುಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದರೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ಯಾಕೆ ಆಡಿಸಬಾರದು ಎಂಬ ಪತ್ರಕರ್ತನ ಪ್ರಶ್ನೆಗೆ ಲೇವಡಿಯೊಂದಿಗೆ ಮರು ಪ್ರಶ್ನಿಸಿದ್ದ ಅದೇ ಸೂರ್ಯಕುಮಾರ್ ಯಾದವ್ ಇದೀಗ ತಲೆಬಾಗಿ ನಿಂತಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

Source link

ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಸದ್ದು ಮಾಡುತ್ತಿದೆ ಅಮೆರಿಕ ಮೂಲದ ಎಐ ಸ್ಟಾರ್ಟ್ಅಪ್ ಕಂಪನಿ – Kannada News | Why This AI Startup Is Making Headlines for Banning Shoes at Work

ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಇದು ಅಮೆರಿಕ ಮೂಲದ ಸ್ಟಾರ್ಟ್​​ಅಪ್ ಕಂಪನಿ(Company) ಕರ್ಸರ್​ನ ನಿಯಮ. ಸಾಮಾನ್ಯವಾಗಿ ವಿದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನಕೊಡುತ್ತಾರೆ. ಆದರೂ ಕಚೇರಿಯೊಳಗೆ ಶೂ ಧರಿಸದೆ ಬರುವ ನಿಯಮವನ್ನು ಯಾಕೆ ಜಾರಿಗೆ ತಂದಿದ್ದಾರೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಅದಕ್ಕೆ ಇಲ್ಲಿದೆ ಉತ್ತರ.

ಕಂಪನಿಯ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಅತಿಥಿಗಳು ಯಾರೇ ಅಗಿರಲಿ, ಶೂ ಧರಿಸಿ ಒಳಗೆ ಹೋಗುವಂತಿಲ್ಲ, ಕಚೇರಿ ಹೊರಗೆ ಶೂ ತೆಗೆದಿಡಬೇಕು. ಕಚೇರಿಯ ಒಳಗೆ ಸಾಕ್ಸ್ ಅಥವಾ ಒಳಗೆ ಇಟ್ಟಿರುವ ಚಪ್ಪಲಿಗಳನ್ನು ಧರಿಸಿಯೇ ನಡೆಯಬೇಕು. ಈ ನೀತಿಯು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಗಮನ ಸೆಳೆದ ಕಾರಣ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸಿಬ್ಬಂದಿಗೆ ಇದು ಆಫೀಸ್ ಅಲ್ಲ ಮನೆಯ ವಾತಾವರಣ ಸೃಷ್ಟಿಸಬೇಕೆಂಬುದು ಉದ್ದೇಶ.

ಕರ್ಸರ್‌ನ ಬೆನ್ ಲ್ಯಾಂಗ್ ಎಂಬ ಉದ್ಯೋಗಿ ಕೂಡ ಚಿತ್ರಗಳನ್ನು ಹಂಚಿಕೊಂಡಿದ್ದು, ತಾನು ಅಲ್ಲಿ ಕೆಲಸ ಮಾಡಿರುವುದಾಗಿ, ಅಲ್ಲಿ ಉದ್ಯೋಗಿಗಳು ಕಚೇರಿ ಆವರಣದೊಳಗೆ ನಿಜವಾಗಿಯೂ ಶೂಗಳನ್ನು ಧರಿಸುತ್ತಿರಲಿಲ್ಲ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಅಂತಹ ಅಭ್ಯಾಸಗಳು ಉದ್ಯೋಗಿಗಳಿಗೆ ಆರಾಮದಾಯಕ ವಾತಾವರಣವನ್ನು ಒದಗಿಸುವ ಮೂಲಕ ಅವರ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಕಂಪನಿಯ ವಾದ.
ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದು, ಇದು ನನಗೆ ಎಂದಿಗೂ ವಿಚಿತ್ರವೆಂದು ಅನಿಸುತ್ತಿಲ್ಲ, ಇನ್ನೊಬ್ಬರು ಕಮೆಂಟ್ ಮಾಡಿ, ಪಾದರಕ್ಷೆಗಳನ್ನು ಹೊರಗೆ ಬಿಡುವ ನಿಯಮದ ಬಗ್ಗೆ ಅಭ್ಯಂತರವಿಲ್ಲ. ಆದರೆ ಚಿತ್ರದಲ್ಲಿ ತೋರಿಸಿರುವಂತೆ ಇಡಬಾರದು ಎಂದಿದ್ದಾರೆ.

ಮತ್ತಷ್ಟು ಓದಿ: ಅಮ್ಮನಿಗೆ ಭಯ, ಆದ್ರೆ ಅದು ನನ್ನ ಕನಸು: ಕೊನೆಗೂ ತಾಯಿಯನ್ನು ಆಕಾಶದಲ್ಲಿ ಹಾರಾಡಿಸಿದ ಮಗ

ಶೂ ಧರಿಸದಿರುವ ನೀತಿಯು ಉದ್ಯೋಗಿಗಳು, ಸಿಬ್ಬಂದಿ ಸದಸ್ಯರು ಮತ್ತು ಅತಿಥಿಗಳಿಗೆ ಮಾತ್ರ ಅನುಕೂಲಕರವಾಗಿಲ್ಲ, ಆದರೆ ಇದು ಸಾಕಷ್ಟು ಪ್ರಾಯೋಗಿಕವೂ ಆಗಿದೆ. AI ಸ್ಟಾರ್ಟ್ಅಪ್‌ನ ಸಂಸ್ಥಾಪಕ ಕೋವಲ್ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್‌ಗೆ ನೀಡಿದ ಸಂದರ್ಶನದಲ್ಲಿ, ಹವಾಮಾನ ಬದಲಾಗುತ್ತಿರುತ್ತದೆ. ಹಾಗೆಯೇ ಕೊಳಕನ್ನು ಮೆಟ್ಟಿಕೊಂಡು ಬರುತ್ತಾರೆ, ಹಾಗಾಗಿ ಕಚೇರಿಯ ಒಳಗಿನ ಸ್ವಚ್ಛತೆಯೂ ಕೂಡ ಪ್ರಮುಖವಾದದ್ದು ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ 

Source link

ಅಡುಗೆಯವನ ಕೆಲಸವೇ ಹೋಯ್ತು! ಬೆಂಗಳೂರು ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ ಗೊತ್ತೇ! – Kannada News | Bengaluru Techie’s AI Roommate Catches Cook Stealing Fruits, Sparks Debate on AI Surveillance at Home

ಟೆಕ್ಕಿಗೆ ಎಐ ರೂಮ್​ಮೇಟ್ ನೆರವಾಗಿದ್ಹೇಗೆ?Image Credit source: X/@the2ndfloorguy

ಬೆಂಗಳೂರು, ಮಾರ್ಚ್​ 2: ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿರುವುದನ್ನು ಎಐ ರೂಮ್​ಮೇಟ್ (AI Roommate) ಪತ್ತೆಹಚ್ಚಿ ತಿಳಿಸಿದ್ದು, ಟೆಕ್ಕಿಯೊಬ್ಬರು ಆತನನ್ನು ಕೆಲಸದಿಂದಲೇ ತೆಗೆದುಹಾಕಿದ ಅಪರೂಪದ ಘಟನೆ ಬೆಂಗಳೂರಿನಲ್ಲಿ (Bangalore) ನಡೆದಿದೆ ಎಂದು ವರದಿಯಾಗಿದೆ. ನಗರದ ಟೆಕ್ಕಿ ಪಂಕಜ್ (ಸಾಮಾಜಿಕ ಜಾಲತಾಣ ಪೋಸ್ಟ್​ನಲ್ಲಿರುವಂತೆ) ಮನೆಯ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸಲು ‘AI ರೂಮ್​ಮೇಟ್’ ಎನ್ನುವ ವ್ಯವಸ್ಥೆಯನ್ನು ಬಳಸುತ್ತಿದ್ದರು. ಅಡುಗೆಯಾತ ಫ್ರಿಡ್ಜ್‌ನಿಂದ ಸೇಬು, ಬಾಳೆಹಣ್ಣು ಮತ್ತು ಬೆರಿಹಣ್ಣುಗಳನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ಅನುಮಾನ ಅವರಲ್ಲಿ ಮೂಡಿತ್ತು. ಕನಿಷ್ಠ ಮೂರು ವಿಭಿನ್ನ ಸಂದರ್ಭಗಳಲ್ಲಿ ಹಣ್ಣುಗಳನ್ನು ಕದಿಯುತ್ತಿರುವುದನ್ನು AI ರೂಮ್​ಮೇಟ್ ಪತ್ತೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಪಂಕಜ್, ‘ಅಡುಗೆಯಾತ ಫ್ರಿಡ್ಜ್‌ನಿಂದ ಹಣ್ಣುಗಳನ್ನು ಕದಿಯುತ್ತಿದ್ದ. ಹೀಗಾಗಿ ಅಡುಗೆ ಮನೆಯಲ್ಲಿ AI ರೂಮ್‌ಮೇಟ್ ನಿಯೋಜಿಸಿದ್ದೆ. ಅದು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈ ವಾರ ಎರಡು ಬಾರಿ ಹಿಡಿದಿದ್ದೇನೆ. ಹೀಗಾಗಿ ಕೆಲಸದಿಂದ ತೆಗೆದುಹಾಕಿದೆ ಎಂದು ಬರೆದಿದ್ದಾರೆ.

ಪಂಕಜ್ ಎಕ್ಸ್ ಪೋಸ್ಟ್

AI ರೂಮ್‌ಮೇಟ್ ಎಂದರೇನು?

ಪಂಕಜ್ ಉಲ್ಲೇಖಿಸಿರುವ AI ರೂಮ್‌ಮೇಟ್ ಎಂದರೆ AI ಚಾಟ್‌ಬಾಟ್ ಹೊಂದಿರುವ ಕಣ್ಗಾವಲು ಕ್ಯಾಮರಾ ವ್ಯವಸ್ಥೆ. ಅಡುಗೆಯಾತ ಕೆಲಸದಲ್ಲಿರುವ ಸಮಯದಲ್ಲಿ ಈ ವ್ಯವಸ್ಥೆ ಅಡುಗೆಮನೆಯ ಚಟುವಟಿಕೆಗಳನ್ನು ಗಮನಿಸುತ್ತದೆ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಲೀಕರಿಗೆ ಎಚ್ಚರಿಕೆ ಸಂದೇಶ ಕಳುಹಿಸುತ್ತದೆ.

AI ಚಾಟ್‌ಬಾಟ್‌ನೊಂದಿಗೆ ಪಂಕಜ್ ನಡೆಸಿದ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ಅಡುಗೆಯಾತ ಯಾವ ಸಮಯಕ್ಕೆ ಮನೆಗೆ ಬಂದ, ಎಷ್ಟು ಬಾರಿ ಫ್ರಿಡ್ಜ್ ತೆರೆದ, ಏನು ತೆಗೆದುಕೊಂಡ ಎಂಬುದರ ಜೊತೆಗೆ ಅಡುಗೆ ಮಾಡುವ ಮೊದಲು ಎಷ್ಟು ಬಾರಿ ಕೈ ತೊಳೆದ, ಅಡುಗೆಮನೆಯನ್ನು ಎಷ್ಟು ಸ್ವಚ್ಛಗೊಳಿಸಿದ ಎಂಬುದನ್ನೂ ಟ್ರ್ಯಾಕ್ ಮಾಡಲಾಗಿದೆ.

AI ರೂಮ್‌ಮೇಟ್ ಹೇಳಿದ್ದೇನು?

ಒಂದು ಸಂದರ್ಭದಲ್ಲಂತೂ AI ರೂಮ್‌ಮೇಟ್, ಆತ ಸಂಜೆ 7:12ಕ್ಕೆ ಬಂದ. ಮೊದಲಿಗೆ ಫ್ರಿಡ್ಜ್ ತೆರೆದು ಎರಡು ಸೇಬುಗಳನ್ನು ತೆಗೆದು ತನ್ನ ಚೀಲದಲ್ಲಿ ಇಟ್ಟ. ಬಳಿಕ ಅಡುಗೆ ಪ್ರಾರಂಭಿಸಿದ ಎಂದು ಸಂದೇಶ ಕಳುಹಿಸಿರುವುದನ್ನು ಪಂಕಜ್ ಹಂಚಿಕೊಂಡಿದ್ದಾರೆ.

ಇನ್ನೊಂದು ಬಾರಿ, ಈ ವಾರ ಅಡುಗೆ ಮಾಡುವ ಮೊದಲು ನಾಲ್ಕು ಬಾರಿ ಫ್ರಿಡ್ಜ್ ತೆರೆಯಲಾಗಿದೆ. ಮೂರು ಸೇಬುಗಳು ಕಾಣೆಯಾಗಿವೆ. ಮಂಗಳವಾರದ ಬಾಳೆಹಣ್ಣು ಇಲ್ಲ. ಗುರುವಾರ ಬ್ಲೂಬೆರ್ರಿ ತಿನ್ನುತ್ತಿರುವುದು ಕಂಡುಬಂದಿದೆ ಎಂದು ಉಲ್ಲೇಖಿಸಲಾಗಿದೆ.

ಖಾಸಗಿತನ ಕಾಪಾಡುತ್ತಾ AI ರೂಮ್‌ಮೇಟ್?

AI ರೂಮ್‌ಮೇಟ್ ಸಿಸಿಟಿವಿ ಕ್ಯಾಮರಾ ಮೂಲಕ ಕೊಠಡಿಯನ್ನು ನಿರಂತರವಾಗಿ ಗಮನಿಸುತ್ತದೆ. ಬಳಕೆದಾರರ ಗೌಪ್ಯತೆಯನ್ನು ಕೂಡ ರಕ್ಷಿಸುತ್ತದೆ. ಅಂದರೆ, ಮೊದಲು ಮುಖಗಳನ್ನು ರೆಕಾರ್ಡ್ ಮಾಡಿಕೊಂಡು ನಂತರ ಬ್ಲರ್ ಮಾಡುತ್ತದೆ. ಬಳಿಕ ಮಸುಕಾದ ವೀಡಿಯೊವನ್ನು ವಿಶ್ಲೇಷಣೆಗಾಗಿ ವಿಷನ್ AI ಮಾದರಿಗೆ ಕಳುಹಿಸುತ್ತದೆ. ಆ ವಿಶ್ಲೇಷಣೆಯ ಆಧಾರದ ಮೇಲೆ ಟೆಕ್ಷ್ಟ್ ರೂಪದಲ್ಲಿ ಸಂದೇಶ ಕಳುಹಿಸುತ್ತದೆ.

ಇದನ್ನೂ ಓದಿ: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ

ಸದ್ಯ ಬೆಂಗಳೂರು ಟೆಕ್ಕಿಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ತಂತ್ರಜ್ಞಾನ ಬಳಕೆ ಮೂಲಕ ಕಳ್ಳತನ ಪತ್ತೆಹಚ್ಚಿದುದನ್ನು ಸಮರ್ಥಿಸುತ್ತಿದ್ದರೆ, ಇನ್ನು ಕೆಲವರು ಮನೆ ಕೆಲಸಗಾರರ ಮೇಲಿನ ಇಂತಹ AI ಕಣ್ಗಾವಲು ಗೌಪ್ಯತೆ ಮತ್ತು ನೈತಿಕತೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version