SBI Recruitment 2026: ಎಸ್‌ಬಿಐನಲ್ಲಿ 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರಿಗೆ ಸುವರ್ಣಾವಕಾಶ – Kannada News | SBI Apprentice Recruitment 2026: Apply for 7150 Bank Jobs – Degree Holders Eligible

ಎಸ್‌ಬಿಐನಲ್ಲಿ 7,150 ಅಪ್ರೆಂಟಿಸ್ ಅರ್ಜಿ ಆಹ್ವಾನImage Credit source: Pinterest

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗದ ಕನಸು ಕಾಣುತ್ತಿರುವ ಯುವಜನತೆಗೆ ಭಾರತದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಸುವರ್ಣಾವಕಾಶವನ್ನು ನೀಡಿದೆ. ದೇಶಾದ್ಯಂತ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್ (Apprentice) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಸಂಪೂರ್ಣ ವಿವರಗಳು, ಅರ್ಹತೆಗಳು, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಕೆಳಗಿನಂತಿದೆ.

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ:

SBI ಈ ಅಧಿಸೂಚನೆಯ ಮೂಲಕ ದೇಶಾದ್ಯಂತ ಒಟ್ಟು 7,150 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಬ್ಯಾಂಕಿಂಗ್ ಕಾರ್ಯಾಚರಣೆಗಳ ಈ ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯಲ್ಲಿ (Degree) ಉತ್ತೀರ್ಣರಾಗಿದ್ದರೆ ಸಾಕು. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ಅಧಿಕೃತ ಸ್ಥಳೀಯ ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಕಡ್ಡಾಯವಾಗಿ ಪ್ರವೀಣರಾಗಿರಬೇಕು.

ವಯೋಮಿತಿ ಮತ್ತು ಸಡಿಲಿಕೆ:

ಏಪ್ರಿಲ್ 1, 2026 ರ ಅನ್ವಯ ಅಭ್ಯರ್ಥಿಗಳ ವಯಸ್ಸು 20 ರಿಂದ 28 ವರ್ಷಗಳ ನಡುವೆ ಇರಬೇಕು. ಅಂದರೆ, ಅಭ್ಯರ್ಥಿಗಳು ಏಪ್ರಿಲ್ 2, 1998 ಮತ್ತು ಏಪ್ರಿಲ್ 1, 2006 ರ ನಡುವೆ ಜನಿಸಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಎಸ್‌ಸಿ (SC), ಎಸ್‌ಟಿ (ST), ಒಬಿಸಿ (OBC) ಮತ್ತು ದಿವ್ಯಾಂಗ (PwBD) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:

ಅಂತಿಮ ಆಯ್ಕೆಯನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸ್ಥಳೀಯ ಭಾಷಾ ಪರೀಕ್ಷೆಯ ಆಧಾರದ ಮೇಲೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಜುಲೈ 2026 ರಲ್ಲಿ ನಡೆಯಲಿದೆ. ಆನ್‌ಲೈನ್ ಲಿಖಿತ ಪರೀಕ್ಷೆಯು ಒಟ್ಟು 100 ಪ್ರಶ್ನೆಗಳನ್ನು ಒಳಗೊಂಡಿದ್ದು 100 ಅಂಕಗಳಿಗೆ ನಡೆಯುತ್ತದೆ. ಜನರಲ್/ಫೈನಾನ್ಷಿಯಲ್ ಅವೇರ್ನೆಸ್, ಜನರಲ್ ಇಂಗ್ಲಿಷ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್. ಪ್ರತಿ ವಿಭಾಗದಿಂದ ತಲಾ 25 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಜನರಲ್ ಇಂಗ್ಲಿಷ್ ವಿಭಾಗವನ್ನು ಹೊರತುಪಡಿಸಿ, ಉಳಿದ ವಿಭಾಗಗಳನ್ನು ಇಂಗ್ಲಿಷ್, ಹಿಂದಿ ಮತ್ತು ಅಭ್ಯರ್ಥಿಯು ಆಯ್ಕೆ ಮಾಡಿದ ರಾಜ್ಯದ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದು. ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು ಅಂದರೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ: ರೈಲ್ವೆಯಲ್ಲಿ 11,127 ಹುದ್ದೆಗಳಿಗೆ ನೇಮಕಾತಿ; ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭ

ಸ್ಥಳೀಯ ಭಾಷಾ ಪರೀಕ್ಷೆಯಿಂದ ವಿನಾಯಿತಿ:

ಲಿಖಿತ ಪರೀಕ್ಷೆಯ ಮೆರಿಟ್ ಆಧಾರದಲ್ಲಿ ಆಯ್ಕೆಯಾದವರಿಗೆ ಸ್ಥಳೀಯ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ ಇರುತ್ತದೆ. ಆದರೆ, ಅಭ್ಯರ್ಥಿಗಳು ತಮ್ಮ 10 ಅಥವಾ 12 ನೇ ತರಗತಿಯ ಅಂಕ ಪಟ್ಟಿಯಲ್ಲಿ ಈ ಸ್ಥಳೀಯ ಭಾಷೆಯನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರುವ ಪುರಾವೆಗಳನ್ನು ತೋರಿಸಿದರೆ ಈ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.

ತರಬೇತಿ ಅವಧಿ, ಸ್ಟೈಫಂಡ್ ಮತ್ತು ಭವಿಷ್ಯದ ಪ್ರಯೋಜನಗಳು:

ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದವರೆಗೆ ಅಪ್ರೆಂಟಿಸ್‌ಗಳಾಗಿ ತರಬೇತಿ ಪಡೆಯಲು ಅವಕಾಶವಿರುತ್ತದೆ. ಈ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ. 15,000 ಸ್ಟೈಫಂಡ್ ನೀಡಲಾಗುತ್ತದೆ. ಇಲ್ಲಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದವರಿಗೆ, ಭವಿಷ್ಯದಲ್ಲಿ ನಡೆಯುವ ಎಸ್‌ಬಿಐ ಜೂನಿಯರ್ ಅಸೋಸಿಯೇಟ್ (ಕ್ಲರ್ಕ್ – SBI Junior Associate) ನೇಮಕಾತಿಗಳಲ್ಲಿ ವಿಶೇಷ ಆದ್ಯತೆ (Weightage/Preference) ನೀಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಪ್ರಮುಖ ಲಿಂಕ್‌ಗಳು:

  • ಪ್ರಮುಖ ದಿನಾಂಕ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜೂನ್ 8, 2026 ಕೊನೆಯ ದಿನವಾಗಿದೆ.
  • ಅಭ್ಯರ್ಥಿಗಳು ಮೊದಲು ಸರ್ಕಾರದ ಅಧಿಕೃತ NAPS ಪೋರ್ಟಲ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
  • ನಂತರ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ನೇರ ಅರ್ಜಿ ಲಿಂಕ್‌ಗಳು:

SBI Careers – Current Openings

SBI Official Web Portal

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ ಬಿ ಶೆಟ್ಟಿಯ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆ – Kannada News | Raj B Shetty starrer first Hindi movie’s trailer released

ರಾಜ್ ಬಿ ಶೆಟ್ಟಿ (Raj B Shetty) ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ. ಕೆಲವು ಅದ್ಭುತ ಸಿನಿಮಾಗಳನ್ನು ಈಗಾಗಲೇ ಅವರು ನೀಡಿದ್ದಾರೆ. ಒಳ್ಳೆಯ ನಟರೂ ಆಗಿರುವ ರಾಜ್ ಬಿ ಶೆಟ್ಟಿಗೆ ನೆರೆಯ ಚಿತ್ರರಂಗಗಳಿಂದಲೂ ಆಫರ್​​ಗಳು ಬರುತ್ತಲೇ ಇವೆ. ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ನಟಿಸಿ ಬಂದಿದ್ದಾರೆ. ಇದೀಗ ರಾಜ್ ಬಿ ಶೆಟ್ಟಿ, ಬಾಲಿವುಡ್​​ಗೆ ಸಹ ಕಾಲಿಟ್ಟಿದ್ದು, ಅವರು ನಟಿಸಿರುವ ಮೊದಲ ಹಿಂದಿ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

‘ಬಂದರ್’ ಹೆಸರಿನ ಹಿಂದಿ ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಿದ್ದು, ಸಿನಿಮಾದ ಟ್ರೈಲರ್ ಇಂದು (ಮೇ 21) ಬಿಡುಗಡೆ ಆಗಿದೆ. ‘ಅನಿಮಲ್’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುವ ಮೂಲಕ ಭಾರಿ ದೊಡ್ಡ ಹೆಸರು ಗಳಿಸಿರುವ ಬಾಲಿವುಡ್​​ನ ಜನಪ್ರಿಯ ನಾಯಕ ಬಾಬಿ ಡಿಯೋಲ್ ‘ಬಂದರ್’ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಈ ಸಿನಿಮಾ ಭಿನ್ನವಾದ ಸಸ್ಪೆನ್ಸ್ ಕತೆಯನ್ನು ಒಳಗೊಂಡಿದೆ.

ಇಂದು ಬಿಡುಗಡೆ ಆಗಿರುವ ಸಿನಿಮಾದ ಟ್ರೈಲರ್​​ನಲ್ಲಿ ಕತೆಯ ಮುಖ್ಯ ಎಳೆಯನ್ನು ಬಿಟ್ಟುಕೊಡಲಾಗಿದೆ. ಜೊತೆಗೆ ರಾಜ್ ಬಿ ಶೆಟ್ಟಿ ಸಹ ಟ್ರೈಲರ್​​ನಲ್ಲಿ ಹೀಗೆ ಕಂಡು ಹಾಗೆ ಕಣ್ಮರೆ ಆಗುತ್ತಾರೆ. ಟ್ರೈಲರ್​​ ಸೂಚಿಸುತ್ತಿರುವಂತೆ, ಸಿನಿಮಾನಲ್ಲಿ ಬಾಬಿ ಡಿಯೋಲ್ ಸೆಲೆಬ್ರಿಟಿ, ಆತನಿಗೆ ವಯಸ್ಸಾಗಿದೆ ಆದರೆ ಯುವತಿಯರ ಮೇಲೆ ಆಸೆ ಇದೆ. ಬಾಬಿ, ಪ್ರೀತಿಯಲ್ಲಿ ಬೀಳುವ ಒಬ್ಬ ಯುವತಿ ಬಾಬಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುತ್ತಾಳೆ. ಇದರಿಂದ ಬಾಬಿ ಡಿಯೋಲ್ ಜೈಲಿಗೆ ಹೋಗುತ್ತಾರೆ. ಮುಂದೆ ಏನಾಗುತ್ತದೆ ಎಂಬುದು ಕತೆ.

ಇದನ್ನೂ ಓದಿ:ಭಾರತೀಯ ಸಿನಿಮಾ ಇತಿಹಾಸದಲ್ಲೇ ಅತ್ಯಂತ ದುಬಾರಿ ವಿಲನ್ ಈ ನಟ

ಅಂದಹಾಗೆ ಟ್ರೈಲರ್​​ನಲ್ಲಿ ತೋರಿಸಿರುವಂತೆ ರಾಜ್ ಬಿ ಶೆಟ್ಟಿ ಕೈದಿಯ ಪಾತ್ರದಲ್ಲಿ ನಟಿಸಿದ್ದು, ಜೈಲಿನಲ್ಲಿ ಬಾಬಿ ಡಿಯೋಲ್ ಹಾಗೂ ರಾಜ್ ಬಿ ಶೆಟ್ಟಿ ಭೇಟಿ ಆಗುತ್ತಾರೆ. ಈಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ರಾಜ್ ಬಿ ಶೆಟ್ಟಿ ವಿಲಕ್ಷಣವಾಗಿ ನಗುತ್ತಿರುವ ದೃಶ್ಯವಿದೆ. ಕಳೆದ ವಾರ ಬಿಡುಗಡೆ ಆಗಿದ್ದ ಟೀಸರ್​​ನಲ್ಲಿ ರಾಜ್ ಬಿ ಶೆಟ್ಟಿ ಜೈಲಿನಲ್ಲಿ ಸಹಕೈದಿಯೊಟ್ಟಿಗೆ ಡ್ಯಾನ್ಸ್ ಮಾಡುತ್ತಿರುವ ದೃಶ್ಯವಿತ್ತು.

‘ಬಂದರ್’ ಸಿನಿಮಾವನ್ನು ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದಾರೆ. ‘ಗ್ಯಾಂಗ್ಸ್ ಆಫ್ ವಸೇಪುರ್’, ‘ದೇವ್ ಡಿ’, ‘ನೋ ಸ್ಮೋಕಿಂಗ್’ ಇನ್ನೂ ಕೆಲವು ಕಲ್ಟ್ ಸಿನಿಮಾಗಳನ್ನು ನಿರ್ದೇಶಿಸಿರುವ ಅನುರಾಗ್ ಇದೀಗ ‘ಬಂದರ್’ ಸಿನಿಮಾ ನಿರ್ದೇಶಿಸಿದ್ದಾರೆ. ಸಿನಿಮಾ ಜೂನ್ 5 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಮಾಣವಚನದ ವೇಳೆ ರಾಹುಲ್ ಗಾಂಧಿ ಹೆಸರು ಹೇಳಿ ವಿವಾದಕ್ಕೀಡಾದ ತಮಿಳುನಾಡು ಕಾಂಗ್ರೆಸ್ ಶಾಸಕ – Kannada News | Tamil Nadu Congress MLA Rajesh Kumar Raised Slogan praising Rahul Gandhi Rajiv Gandhi During Oath Ceremony Governor Objects

ಚೆನ್ನೈ, ಮೇ 21: ಇಂದು ತಮಿಳುನಾಡಿನಲ್ಲಿ ಸಚಿವ ಸಂಪುಟ (Tamil Nadu Cabinet) ವಿಸ್ತರಣೆ ನಡೆಯಿತು. ಇದರಲ್ಲಿ ತಮಿಳುನಾಡು ವಿಕ್ಟರಿ ಪಕ್ಷದ ಶಾಸಕರು ಮತ್ತು ಕಾಂಗ್ರೆಸ್ ಶಾಸಕರು ಸೇರಿದಂತೆ ಸುಮಾರು 23 ಶಾಸಕರು ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಧಿಕಾರ ವಹಿಸಿಕೊಂಡಾಗ ಸಚಿವರಾಗಿ ಅಧಿಕಾರ ವಹಿಸಿಕೊಂಡವರು ಸೇರಿದಂತೆ ಒಟ್ಟು 33 ಸಚಿವರು ತಮಿಳುನಾಡು ವಿಕ್ಟರಿ ಪಕ್ಷದ ಮೈತ್ರಿಕೂಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರ ನಡುವೆ, ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ರಾಹುಲ್ ಗಾಂಧಿಯ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ಆ ಬಗ್ಗೆ ಮಾಹಿತಿ ಇಲ್ಲಿದೆ.

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಶಾಸಕರೊಬ್ಬರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇತ್ತೀಚೆಗೆ ರಾಜಭವನದಲ್ಲಿ ನಡೆದಿತ್ತು. ಈ ವೇಳೆ ಕಾಂಗ್ರೆಸ್ ಶಾಸಕರು ಸಂವಿಧಾನಬದ್ಧವಾಗಿ ನಿಗದಿಪಡಿಸಿದ ಪ್ರಮಾಣ ವಚನದ ಪಠ್ಯವನ್ನು ಓದುವಾಗ, ಮಧ್ಯದಲ್ಲಿ ತಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಹೆಸರನ್ನು ಸೇರಿಸಿ ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೆ ತಮಿಳುನಾಡು ರಾಜ್ಯಪಾಲರು ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಇದನ್ನೂ ಓದಿ: Tamil Nadu Cabinet Expansion: ತಮಿಳುನಾಡು ಸರ್ಕಾರದ ಸಂಪುಟ ವಿಸ್ತರಣೆ, ವಿಜಯ್ ಸಂಪುಟ ಸೇರಿದ 23 ಶಾಸಕರು, ಕಾಂಗ್ರೆಸ್ ಶಾಸಕರಿಗೂ ಸಚಿವ ಸ್ಥಾನ

ಸಚಿವರಾಗಿ ಪ್ರಮಾಣವಚನದ ಪಠ್ಯವನ್ನು ಓದುತ್ತಿದ್ದಾಗ ಕಾಂಗ್ರೆಸ್ ಶಾಸಕ ರಾಜೇಶ್ ಕುಮಾರ್ ಅವರು ತಮ್ಮ ಪ್ರಮಾಣವಚನವನ್ನು ಪೂರ್ಣಗೊಳಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರಾದ ಕಾಮರಾಜ್, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿಯವರನ್ನು ಶ್ಲಾಘಿಸಿದರು. ತಕ್ಷಣ ಪ್ರತಿಕ್ರಿಯಿಸಿದ ರಾಜ್ಯಪಾಲರು, “ಅದು ನಿಮ್ಮ ಪ್ರಮಾಣವಚನದ ಭಾಗವಲ್ಲ” ಎಂದರು. ಅದಕ್ಕೆ ಶಾಸಕ ರಾಜೇಶ್ ಕುಮಾರ್ ಮುಗುಳ್ನಕ್ಕು ತಮ್ಮ ಪ್ರಮಾಣವಚನದ ದಾಖಲೆಗೆ ಸಹಿ ಹಾಕಲು ಹೋದರು.

ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ಶಾಸಕ ಅಥವಾ ಸಂಸದರು ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನದಲ್ಲಿ ನಿಗದಿಪಡಿಸಿದ ಅಧಿಕೃತ ಪಠ್ಯವನ್ನು ಮಾತ್ರ ಓದಬೇಕು. ಅದರಲ್ಲಿ ಯಾವುದೇ ವ್ಯಕ್ತಿ ಅಥವಾ ರಾಜಕೀಯ ನಾಯಕರ ಹೆಸರನ್ನು ಸೇರಿಸುವಂತಿಲ್ಲ. ಹೀಗಾಗಿ, ರಾಜ್ಯಪಾಲರು ರಾಜೇಶ್ ಕುಮಾರ್ ಅವರಿಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಘಟನೆಯು ತಮಿಳುನಾಡು ರಾಜಕೀಯದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪೆಟ್ರೋಲ್ ಬಂಕ್​ಗಳಲ್ಲಿ ಒಬ್ಬ ವ್ಯಕ್ತಿ ಅಥವಾ ವಾಹನಕ್ಕೆ ಎಷ್ಟು ಪೆಟ್ರೋಲ್, ಡೀಸಲ್ ನೀಡಲಾಗುತ್ತದೆ? ಇಲ್ಲಿದೆ ಡೀಟೇಲ್ಸ್ – Kannada News | Know how much petrol and diesel one can get at fuel outlets

ನವದೆಹಲಿ, ಮೇ 21: ಮಧ್ಯಪ್ರಾಚ್ಯದಲ್ಲಿ ಯುದ್ಧದಿಂದಾಗಿ ಕಳೆದ ಎರಡ್ಮೂರು ತಿಂಗಳಿಂದಲೂ ಜಾಗತಿಕ ಇಂಧನ ಬಿಕ್ಕಟ್ಟು ಉದ್ಭವವಾಗಿದೆ. ತೈಲ ಪೂರೈಕೆಯಲ್ಲಿ ಗಣನೀಯವಾಗಿ ವ್ಯತ್ಯಯ ಆಗಿದೆ. ಭಾರತಕ್ಕೆ ಎಲ್​ಪಿಜಿ ಸಮಸ್ಯೆ ಅಧಿಕಗೊಂಡಿದೆ. ಪೆಟ್ರೋಲ್ ಮತ್ತು ಡೀಸಲ್ ಹೊಂದಿಸಲೂ ಕೂಡ ಶ್ರಮ ಹಾಕಲಾಗುತ್ತಿದೆ. ಬೇರೆ ಹಲವು ರಾಷ್ಟ್ರಗಳಲ್ಲಿ ಇಂಧನ ಪರಿಸ್ಥಿತಿ ಭಾರತದಕ್ಕಿಂತಲೂ ತೀವ್ರ ಮಟ್ಟದಲ್ಲಿದೆ. ಅನೇಕ ಕಡೆ ಇಂಧನ ಖರೀದಿ ಮಿತಿ (ಫುಯಲ್ ರೇಶನಿಂಗ್) ಹಾಕಲಾಗಿದೆ. ಭಾರತದಲ್ಲೂ ಫುಯಲ್ ರೇಶನಿಂಗ್ ವ್ಯವಸ್ಥೆ ಹಲವೆಡೆ ತರಲಾಗಿದೆ ಎನ್ನುವ ವದಂತಿ ಹಬ್ಬಿತ್ತು. ಆದರೆ, ಅದು ನಿಜವಲ್ಲ ಎಂದು ಸರ್ಕಾರ ಹೇಳಿದೆ. ಆದರೂ ಕೂಡ ರೀಟೇಲ್ ಔಟ್​ಲೆಟ್​ಗಳಲ್ಲಿ ಪೆಟ್ರೋಲ್ ಮತ್ತು ಡೀಸಲ್ ವಿತರಣೆಗೆ ನಿರ್ಬಂಧ ತರುವ ನಿಯಮಗಳಂತೂ ಇವೆ. ಇಷ್ಟಬಂದಷ್ಟು ಪೆಟ್ರೋಲ್, ಡೀಸಲ್ ಕೊಡೋದಿಲ್ಲ.

ಜಾಗತಿಕ ತೈಲ ಬಿಕ್ಕಟ್ಟು ಶಮನವಾಗದೇ ಇರುವುದು ಮತ್ತು ತೈಲ ಕಂಪನಿಗಳು ಪೆಟ್ರೋಲ್, ಡೀಸಲ್ ಬೆಲೆ ಸಾಕಷ್ಟು ಏರಿಸಲೇಬೇಕಾದ ಅನಿವಾರ್ಯತೆ ಇದೆ ಎನ್ನಲಾಗುತ್ತಿರುವುದು, ಈ ಅಂಶಗಳು ಜನರಲ್ಲಿ ಆತಂಕ ತಂದಿರಬಹುದು. ಹೀಗಾಗಿ, ದೇಶದ ಹಲವು ಪ್ರದೇಶಗಳಲ್ಲಿ ಜನರು ದೊಡ್ಡ ದೊಡ್ಡ ಕ್ಯಾನ್​ಗಳನ್ನು ಹಿಡಿದು ಪೆಟ್ರೋಲ್ ಬಂಕ್​ಗಳಲ್ಲಿ ಸರದಿ ನಿಂತಿರುವ ದೃಶ್ಯ ಕಾಣಸಿಗುತ್ತದೆ. ಈಗಾಗಲೇ ಇಂಧನ ಪರಿಸ್ಥಿತಿ ಸೂಕ್ಷ್ಮವಿರುವುದರಿಂದ, ಜನರು ಹೆಚ್ಚಿನ ಪೆಟ್ರೋಲ್, ಡೀಸಲ್ ದಾಸ್ತಾನು ಮಾಡಿಕೊಳ್ಳಲು ಮುಂದಾಗಿರುವುದರಿಂದ ಇಲ್ಲದ ಸಮಸ್ಯೆ ಸೃಷ್ಟಿಯಾಗುತ್ತದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್, ಗ್ಯಾಸ್ ಬಗ್ಗೆ ಎದ್ದಿರುವ ಅಂತೆ ಕಂತೆಗಳಿಗೆ ತೆರೆ

ಪೆಟ್ರೋಲ್, ಡೀಸಲ್ ಖರೀದಿಗೆ ನಿರ್ಬಂಧ ಏನಿದೆ?

2002ರ ಮಾರ್ಗಸೂಚಿ ಪ್ರಕಾರ, ಪೆಟ್ರೋಲ್ ಬಂಕ್​ಗಳಲ್ಲಿ ಒಬ್ಬರಿಗೆ 200 ಲೀಟರ್​ಗಿಂತ ಹೆಚ್ಚಿನ ಪೆಟ್ರೋಲ್ ಅಥವಾ ಡೀಸಲ್ ಹಾಕುವಂತಿಲ್ಲ. ಅದೂ ವಾಹನದ ಫುಯಲ್ ಟ್ಯಾಂಕ್ ಮತ್ತು ಮಾನ್ಯ ಕಂಟೇನರ್​ಗೆ ಮಾತ್ರ ಇಂಧನ ತುಂಬಿಸಬಹುದು.

ಬಾಟಲ್​ಗಳಲ್ಲಿ, ಪ್ಲಾಸ್ಟಿಕ್ ಕ್ಯಾನ್​ಗಳಲ್ಲಿ ಅಥವಾ ಅನಧಿಕೃತ ಕಂಟೇನರ್​ಗಳಿಗೆ ಪೆಟ್ರೋಲ್ ಅಥವಾ ಡೀಸಲ್ ತುಂಬಿಸಬಾರದು. ಹಾಗೊಂದು ವೇಳೆ, ಇಂಧನ ತುಂಬಿಸಿದರೆ ಪೆಟ್ರೋಲ್ ಬಂಕ್​ನ ಲೈಸೆನ್ಸ್ ಅನ್ನೇ ರದ್ದು ಮಾಡುವ ಸಾಧ್ಯತೆ ಇರುತ್ತದೆ.

ಕರ್ನಾಟಕದ ಕೆಲವೆಡೆ ವಾಹನಗಳ ಫುಯಲ್ ಟ್ಯಾಂಕ್​ಗಳಿಗೂ ಪೆಟ್ರೋಲ್ ತುಂಬಿಸಲು ಮಿತಿ ಹಾಕಲಾಗಿದೆ ಎನ್ನುವ ಸುದ್ದಿ ಇದೆ. ಹುಬ್ಬಳ್ಳಿಯ ಕೆಲ ಬಂಕ್​ಗಳಲ್ಲಿ ಒಂದು ಕಾರಿಗೆ 25 ಲೀಟರ್​ಗಿಂತ ಹೆಚ್ಚು ಪೆಟ್ರೋಲ್ ಕೊಡಲ್ಲ, ಟ್ರಕ್​ಗಳಿಗೆ 150 ಲೀಟರ್ ಮಿತಿ ಇದೆ ಎನ್ನಲಾಗಿದೆ. ಆದರೆ, ಸರ್ಕಾರ ಅದನ್ನು ಅಲ್ಲಗಳೆದಿದೆ. ನಿಯಮಗಳ ಪ್ರಕಾರ 200 ಲೀಟರ್​ವರೆಗೂ ಪೆಟ್ರೋಲ್ ಅಥವಾ ಡೀಸಲ್ ಅನ್ನು ಪಡೆಯಬಹುದು. ಅದೂ ಫುಯಲ್ ಟ್ಯಾಂಕ್​ಗಳಲ್ಲಿ ಹಿಡಿಸಿದರೆ ಮಾತ್ರ.

ಇದನ್ನೂ ಓದಿ: ಮೋದಿ ಅವರ ಪಂಚ ರಾಷ್ಟ್ರ ಪ್ರವಾಸದ ಪರಿಣಾಮ ಭಾರತಕ್ಕೆ ಹರಿದುಬರಲಿರುವ ಹೂಡಿಕೆ ಎಷ್ಟು ಗೊತ್ತಾ?

ಅನುಮತಿ ಪಡೆದು ಪೆಟ್ರೋಲ್, ಡೀಸಲ್ ಎಷ್ಟು ಖರೀದಿಸಬಹುದು?

ವಾಹನದ ಫುಯಲ್ ಟ್ಯಾಂಕ್ ಬಿಟ್ಟು ಬೇರೆ ಕಂಟೇನರ್​ಗಳಲ್ಲಿ ಪೆಟ್ರೋಲ್ ತುಂಬಿಸಲು ನಿರ್ಬಂಧಗಳಿವೆ. ಕ್ಯಾನ್​ಗಳಲ್ಲಿ 200 ಲೀಟರ್​ವರೆಗೂ ಪೆಟ್ರೋಲ್, ಡೀಸಲ್ ತುಂಬಿಸಿಕೊಳ್ಳಬಹುದು. ಆದರೆ, ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿ ಪೆಟ್ರೋಲ್ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ.

ಯಾವುದೇ ಅನುಮತಿ ಇಲ್ಲದೇ 5 ಲೀಟರ್​ವರೆಗೂ ಪೆಟ್ರೋಲ್ ಪಡೆಯಬಹುದು. ಕೆಲ ಬಂಕ್​ಗಳು 5-10 ಲೀಟರ್​ಗಳಷ್ಟು ಪೆಟ್ರೋಲ್ ನೀಡಲು ಒಪ್ಪುತ್ತವೆ. ಆದರೆ, ಸಾಮಾನ್ಯ ಪ್ಲಾಸ್ಟಿಕ್ ಬಾಟಲ್​ನಲ್ಲಿ ನೀಡುವುದಿಲ್ಲ. ಸ್ಟೀಲ್ ಅಥವಾ ಹೆವಿ ಪ್ಲಾಸ್ಟಿಕ್ ಬಾಟಲ್​ಗಳಲ್ಲಿ ಅದನ್ನು ತುಂಬಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಮುಂಬೈ ನಾಯಕ ಹಾರ್ದಿಕ್ ಪಾಂಡ್ಯಗೆ ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್ – Kannada News | Hardik Pandya Fined by BCCI After MI’s Loss to KKR in IPL 2026 Match 65

ಐಪಿಎಲ್ 2026 (IPL 2026) ರ 65 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ (MI vs KKR) ಭರ್ಜರಿ ಗೆಲುವು ಸಾಧಿಸಿತು. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಕೋಲ್ಕತ್ತಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿ 4 ವಿಕೆಟ್‌ಗಳಿಂದ ಗೆದ್ದು ಪ್ಲೇಆಫ್ ರೇಸ್‌ನಲ್ಲಿ ತಮ್ಮ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಕೇವಲ 147 ರನ್ ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೆಕೆಆರ್ 6 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ಈ ಸೋಲಿನ ಆಘಾತದಲ್ಲಿರುವ ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ (Hardik Pandya) ಬಿಸಿಸಿಐ ದಂಡದ ಬರೆ ಎಳೆದಿದೆ. ಇದರ ಜೊತೆಗೆ 1 ಡಿಮೆರಿಟ್ ಅಂಕವನ್ನು ಸಹ ನೀಡಿದೆ.

ಹಾರ್ದಿಕ್​ಗೆ ದಂಡ ವಿಧಿಸಿದ್ದು ಏಕೆ?

ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್‌ನ 10 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ತಮ್ಮ ರನ್-ಅಪ್‌ಗೆ ಹಿಂತಿರುಗುವಾಗ, ಹಾರ್ದಿಕ್ ಪಾಂಡ್ಯ ಹತಾಶೆಯಿಂದಾಗಿ ನಾನ್ ಸ್ಟ್ರೈಕ್​ ವಿಕೆಟ್​ನ ಬೇಲ್ಸ್‌ಗಳನ್ನು ನೆಲಕ್ಕೆ ಉರುಳಿಸಿದರು. ಇದು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಉಲ್ಲಂಘನೆಯಾಗಿದ್ದು, ಈ ನಿಯಮ ಉಲ್ಲಂಘಸಿದ ಹಾರ್ದಿಕ್ ಪಾಂಡ್ಯಗೆ ಪಂದ್ಯ ಶುಲ್ಕ ಶೇ. 10 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಿದೆ. ಇದರ ಜೊತೆಗೆ 1 ಡಿಮೆರಿಟ್ ಅಂಕವನ್ನು ಸಹ ನೀಡಿದೆ. ಹಾರ್ದಿಕ್ ತಮ್ಮ ತಪ್ಪನ್ನು ಪಂದ್ಯದ ರೆಫರಿ ರಾಜೀವ್ ಸೇಠ್ ಅವರ ಮುಂದೆ ಒಪ್ಪಿಕೊಂಡಿರುವ ಕಾರಣ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಕೆಕೆಆರ್ ವಿರುದ್ಧ ಹಾರ್ದಿಕ್ಪ್ರದರ್ಶನ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟಿಂಗ್‌ ಕಳಪೆಯಾಗಿತ್ತು. ಆದಾಗ್ಯೂ ನಾಯಕನ ಇನ್ನಿಂಗ್ಸ್ ಆಡಿದ ಹಾರ್ದಿಕ್ ಪಾಂಡ್ಯ 27 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿದಂತೆ 26 ರನ್​ಗಳ ಇನ್ನಿಂಗ್ಸ್ ಅಡಿದರು. ಇನ್ನು ಬೌಲಿಂಗ್​ನಲ್ಲಿ ಪಾಂಡ್ಯ ಎರಡು ಓವರ್‌ಗಳಲ್ಲಿ 13 ರನ್ ಬಿಟ್ಟುಕೊಟ್ಟರಾದರೂ ಯಾವುದೇ ವಿಕೆಟ್ ಪಡೆಯಲಿಲ್ಲ.

ಐಪಿಎಲ್ ನಡುವೆ 2ನೇ ಮದುವೆಗೆ ರೆಡಿಯಾದ ಹಾರ್ದಿಕ್ ಪಾಂಡ್ಯ

ಈ ಐಪಿಎಲ್‌ನಲ್ಲಿ ಹಾರ್ದಿಕ್ ಪ್ರದರ್ಶನ

ಐಪಿಎಲ್ 2026 ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ಒಂಬತ್ತು ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ, ಮುಂಬೈ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಈ ಒಂಬತ್ತು ಪಂದ್ಯಗಳಲ್ಲಿ ಪಾಂಡ್ಯ 172 ರನ್​ಗಳ ಜೊತೆಗೆ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:25 pm, Thu, 21 May 26

Source link

ಆಸ್ಪತ್ರೆ ಎದುರು ಗಲಾಟೆ; ಮರುದಿನವೇ ಸಲ್ಮಾನ್ ಖಾನ್ ಬಳಿ ಕ್ಷಮೆ ಕೇಳಿ ರಾಜಿ ಮಾಡಿಕೊಂಡ ಪಾಪರಾಜಿಗಳು – Kannada News | Salman Khan accepts paparazzi apology for hospital incident at Raja Shivaji event in Mumbai

ಮುಂಬೈನ ಆಸ್ಪತ್ರೆಯೊಂದರ ಹೊರಗಡೆ ತಮ್ಮ ಖಾಸಗಿತನಕ್ಕೆ ಧಕ್ಕೆ ತಂದ ಪಾಪರಾಜಿಗಳ ಮೇಲೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ತೀವ್ರ ಆಕ್ರೋಶ ಹೊರಹಾಕಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಘಟನೆ ನಡೆದ ಕೇವಲ ಒಂದೇ ದಿನದಲ್ಲಿ ಸಲ್ಲು ಭಾಯ್ ಹಳೆಯ ಮುನಿಸನ್ನು ಮರೆತು ಫೋಟೋಗ್ರಾಫರ್‌ಗಳ ಕ್ಷಮೆಯನ್ನು ಸ್ವೀಕರಿಸುವ ಮೂಲಕ ದೊಡ್ಡ ಗುಣ ಪ್ರದರ್ಶಿಸಿದ್ದಾರೆ. ಬುಧವಾರ (ಮೇ 20) ನಡೆದ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಮತ್ತು ಪಾಪರಾಜಿಗಳ (Paparazzi) ನಡುವೆ ಸೌಹಾರ್ದಯುತ ಮಾತುಕತೆ ನಡೆದಿದೆ.

ಬುಧವಾರ ರಾತ್ರಿ ಸಲ್ಮಾನ್ ಖಾನ್ ಅವರು ಮುಂಬೈನಲ್ಲಿ ನಡೆದ ‘ರಾಜಾ ಶಿವಾಜಿ’ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಚಿತ್ರದಲ್ಲಿ ಸಲ್ಮಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಾಯಕ ಮತ್ತು ನಿರ್ದೇಶಕ ರಿತೇಶ್ ದೇಶ್‌ಮುಖ್ ಅವರೊಂದಿಗೆ ಸಲ್ಮಾನ್ ಅವರು ಕ್ಯಾಮೆರಾಗಳಿಗೆ ಪೋಸ್ ನೀಡಲು ಹೊರಬಂದಾಗ, ಅಲ್ಲಿ ನೆರೆದಿದ್ದ ಫೋಟೋಗ್ರಾಫರ್‌ಗಳೆಲ್ಲರೂ ಒಟ್ಟಾಗಿ ಸೂಪರ್‌ಸ್ಟಾರ್ ಬಳಿ ಕ್ಷಮೆ ಕೇಳಲು ಮುಂದಾಗಿದ್ದಾರೆ.

ಸಲ್ಮಾನ್ ಬರುತ್ತಿದ್ದಂತೆ ಸುತ್ತುವರಿದ ಪಾಪರಾಜಿಗಳು, ‘ನಮ್ಮನ್ನು ಕ್ಷಮಿಸಿ ಭಾಯ್’ ಎನ್ನುತ್ತಾ ಗದ್ದಲ ಸೃಷ್ಟಿಸಿದರು. ಇದನ್ನು ಗಮನಿಸಿದ ಸಲ್ಮಾನ್, ಫೋಟೋಗ್ರಾಫರ್ ಒಬ್ಬರನ್ನು ಹತ್ತಿರ ಬರಲು ಬಿಡುವಂತೆ ತಮ್ಮ ಸೆಕ್ಯೂರಿಟಿ ತಂಡಕ್ಕೆ ಸೂಚಿಸಿದರು. ಬಳಿಕ ಏನಾಗುತ್ತಿದೆ ಎಂದು ವಿಚಾರಿಸಿದಾಗ, ಅವರೆಲ್ಲರೂ ಕ್ಷಮೆ ಕೇಳುತ್ತಿರುವುದು ಸಲ್ಮಾನ್‌ಗೆ ಮನವರಿಕೆಯಾಗಿದೆ. ತಕ್ಷಣವೇ ಸಲ್ಮಾನ್ ಸನ್ನೆ ಮಾಡುತ್ತಾ, ‘ಎಲ್ಲವೂ ಸರಿ ಹೋಗಿದೆ’ ಎಂದು ಸಿಗ್ನಲ್ ನೀಡಿದ್ದಾರೆ.

ಈ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಫೋಟೋಗ್ರಾಫರ್ ಒಬ್ಬರು ‘ಇವತ್ತು ಯಾರೂ ಕಿರುಚಬೇಡಿ, ಲವ್ ಯೂ ಭಾಯ್’ ಎನ್ನುವುದು ಕೇಳಿಸುತ್ತದೆ. ಅದಕ್ಕೆ ಸಲ್ಮಾನ್ ನಗುತ್ತಾ, ‘ಹಾ, ಈ ಜಾಗ ಕಿರುಚಾಡಲು ಸರಿಯಾಗಿದೆ’ ಎಂದು ಉತ್ತರಿಸಿದ್ದಾರೆ. ನಂತರ ಪಾಪರಾಜಿಗಳು ಮಂಗಳವಾರ ರಾತ್ರಿಯ ತಮ್ಮ ನಡವಳಿಕೆಗೆ ಮತ್ತೊಮ್ಮೆ ಕ್ಷಮೆಯಾಚಿಸಿದಾಗ, ಸಲ್ಮಾನ್ ತಮಾಷೆಯಾಗಿ, ‘ಸ್ವಲ್ಪ ಜೋರಾಗಿ ಹೇಳಿ, ನಿಮ್ಮ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ’ ಎಂದು ಕಾಲೆಳೆದಿದ್ದಾರೆ. ಸಲ್ಮಾನ್ ಅವರ ಈ ಹಾಸ್ಯ ಪ್ರಜ್ಞೆ ಕಂಡು ಪಕ್ಕದಲ್ಲೇ ಇದ್ದ ರಿತೇಶ್ ದೇಶ್‌ಮುಖ್ ಕೂಡ ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ: ತಮ್ಮ ನೋವನ್ನು ಆನಂದಿಸಿದವರಿಗೆ ಎಚ್ಚರಿಸಿದ ಸಲ್ಮಾನ್ ಖಾನ್

ಸಲ್ಮಾನ್ ಕೋಪಕ್ಕೆ ಕಾರಣವೇನು?
ಮಂಗಳವಾರ ರಾತ್ರಿ ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಆಪ್ತರನ್ನು ನೋಡಲು ಸಲ್ಮಾನ್ ಖಾನ್ ಹೋಗಿದ್ದರು. ಈ ವೇಳೆ ಪಾಪರಾಜಿಗಳು ಅವರನ್ನು ಬೆನ್ನಟ್ಟಿ, ಆಸ್ಪತ್ರೆಯ ಆವರಣದಲ್ಲೇ ಸಲ್ಮಾನ್ ಅವರ ಮುಂಬರುವ ‘ಮಾತೃಭೂಮಿ’ ಚಿತ್ರದ ಹೆಸರನ್ನು ಜೋರಾಗಿ ಕೂಗುತ್ತಾ ಗಲಾಟೆ ಮಾಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಸಲ್ಮಾನ್, ‘ನಿಮಗೆ ಹುಚ್ಚು ಹಿಡಿದಿದೆಯೇ?’ ಎಂದು ತಲೆಗೆ ಕೈ ಮುಟ್ಟಿ ಕೋಪದಿಂದ ಪ್ರಶ್ನಿಸಿದ್ದರು. ಅಷ್ಟೇ ಅಲ್ಲದೆ, ‘ನಿಮ್ಮ ಕುಟುಂಬದವರು ಯಾರಾದರೂ ಆಸ್ಪತ್ರೆಗೆ ದಾಖಲಾಗಿದ್ದಾಗ ಬೇರೆಯವರು ಹೀಗೆ ಮಾಡಿದರೆ ನಿಮಗೆ ಹೇಗನಿಸುತ್ತದೆ?’ ಎಂದು ಖಾರವಾಗಿ ಕ್ಲಾಸ್ ತಗೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರವಾಸಿಗರಿಗೆ ನಿರಾಸೆ: ತೆರೆದ ಜೀಪ್ ಸಫಾರಿಗೆ ಬ್ರೇಕ್; ಪನ್ಸೋಲಿ ಆನೆ ಬಿಡಾರಕ್ಕೆ ಪ್ರವೇಶ ನಿರ್ಬಂಧ – Kannada News | Tourists Disappointed as Open Jeep Safari Suspended; Entry Limited to Pansoli Elephant Camp

ಪನ್ಸೋಲಿ ಆನೆ ಬಿಡಾರಕ್ಕೆ ನಿರ್ಬಂಧ, ತೆರೆದ ಜೀಪ್ ಸಫಾರಿಗೆ ಬ್ರೇಕ್ Image Credit source: tv9 kannada

ಕಾರವಾರ, ಮೇ 21: ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp Tragedy) ಮೊನ್ನೆ ಅಂದರೆ ಮೇ 18ರಂದು ನಡೆದಿದ್ದ ಘೋರ ದುರಂತದಲ್ಲಿ ಮಹಿಳೆ ಬಲಿ ಬೆನ್ನಲ್ಲೇ ಇತ್ತ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರದಲ್ಲಿ (Phansoli Elephant Camp) ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮುಂದಿನ ಆದೇಶದವರೆಗೆ ಸಾರ್ವಜನಿಕರಿಗೆ ಆನೆ ವೀಕ್ಷಣೆಗೆ ನಿರ್ಬಂಧ ಹೇರಿ ಅರಣ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಮುಖ್ಯಾಂಶಗಳು

  • ದುಬಾರೆ ದುರಂತದ ನಂತರ ಪನ್ಸೋಲಿ ಆನೆ ಬಿಡಾರದಲ್ಲಿ ಅಲರ್ಟ್​​
  • ಪನ್ಸೋಲಿ ಆನೆ ಬಿಡಾರಕ್ಕೆ ಪ್ರವೇಶ ನಿರ್ಬಂಧಿಸಿದ ಅರಣ್ಯ ಇಲಾಖೆ
  • ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಬೇಸರ

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪನ್ಸೋಲಿ ಆನೆ ಬಿಡಾರ ಪ್ರವಾಸಿಗರ ಮೆಚ್ಚಿನ ತಾಣವಾಗಿದೆ. ಇಲ್ಲಿ ಒಟ್ಟು ಐದು ಆನೆಗಳಿವೆ. ನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ಆನೆ ವೀಕ್ಷಣೆಗೆ ಅವಕಾಶವಿತ್ತು. ಆನೆ ಚಿಕಿತ್ಸಾ ಕೇಂದ್ರ ಮತ್ತು ತರಬೇತಿ ಕೇಂದ್ರವಾಗಿ ಅರಣ್ಯ ಇಲಾಖೆ ಮಾರ್ಪಡಿಸಿದೆ. ದುಬಾರೆ ಆನೆ ಬಿಡಾರದಲ್ಲಿ ದುರ್ಘಟನೆ ಬೆನ್ನಲ್ಲೇ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಘಟನೆ ಹಿನ್ನೆಲೆ

ಕೊಡಗು ಜಿಲ್ಲೆಯ ದುಬಾರೆ ಸಾಕಾನೆ ಶಿಬಿರದಲ್ಲಿ ನೂರಾರು ಪ್ರವಾಸಿಗರ ಎದುರಲ್ಲೇ ಮೇ 18ರಂದು ಘೋರ ದುರಂತ ನಡೆದು ಹೋಗಿತ್ತು. ಮದವೇರಿ ಬಂದಿದ್ದ ಕಂಜನ್ ಆನೆ ನೇರವಾಗಿ ಮಾರ್ತಾಂಡ ಆನೆ ಮೇಲೆ ದಾಳಿ ಮಾಡಿತ್ತು. ತಕ್ಷಣ ಮಾರ್ತಾಂಡ ಪ್ರವಾಸಿಗರ ಮೇಲೆಯೇ ಉರುಳಿ ಬಿದ್ದಿತ್ತು. ಆನೆ ಅಡಿ ಸಿಲುಕಿ ಚೆನ್ನೈ ಮೂಲದ ತುಳಸಿ ಅಲ್ಲೇ ಪ್ರಾಣ ಬಿಟ್ಟರೆ, ಪತಿ ಜೋಯೆಲ್‌ ಹಾಗೂ ಪುತ್ರಿ ಬಚಾವ್ ಆಗಿದ್ದರು.

ಇದನ್ನೂ ಓದಿ: ದುಬಾರೆ ದುರಂತದ ಬೆನ್ನಲ್ಲೇ ಅಲರ್ಟ್: ಅರಣ್ಯ ಇಲಾಖೆ ಕೈಗೊಂಡ ಕ್ರಮಗಳೇನು?

ಈ ಘೋರ ಕಾಳಗದಲ್ಲಿ ಮಾರ್ತಾಂಡ ಆನೆಗೂ ಗಂಭೀರ ಗಾಯಗಳಾಗಿದ್ದರು. ದಾಳಿ ಬಳಿಕ ನೀರಿನಿಂದ ಮೇಲೆ ಬಂದಿದ್ದ ಮಾರ್ತಾಂಡ 100 ಮೀಟರ್‌ವರೆಗೂ ನಡೆದುಕೊಂಡು ಹೋಗಿ, ನದಿ ತೀರದಲ್ಲೇ ನಿಂತಿತ್ತು. ಬಳಿಕ ಕುಸಿದು ಬಿದ್ದು ಉಸಿರು ನಿಲ್ಲಿಸಿತ್ತು. ಕಂಜನ್ ತನ್ನ ಚೂಪಾದ ಉದ್ದನೆಯ ಕೋರೆಯಿಂದ ಮಾರ್ತಾಂಡನ ಬೆನ್ನು, ಹೊಟ್ಟೆ, ಕಿವಿಯ ಕೆಳಭಾಗ ಎದೆ ಹೀಗೆ ಬಹಳಷ್ಟು ಕಡೆಗಳಲ್ಲಿ ತಿವಿದಿತ್ತು. ಇದರಿಂದ ದೇಹದ ಆಳಕ್ಕೆ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗೆ ಸ್ಪಂದಿಸಿದ ಮಾರ್ತಾಂಡ ಉಸಿರು ನಿಲ್ಲಿಸಿದ್ದಾನೆ.

ಮುಕ್ತ ಜೀಪ್ ಸಫಾರಿಗೆ ಬ್ರೇಕ್: ಇನ್ಮುಂದೆ ಬಸ್ ಸಫಾರಿಗೆ ಮಾತ್ರ ಅವಕಾಶ

ವನ್ಯಜೀವಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ತೆರೆದ ಜೀಪ್ ಸಫಾರಿಗೆ ಸಂಪೂರ್ಣ ನಿಷೇಧ ಹೇರಿದೆ. ಇನ್ಮುಂದೆ ಪ್ರವಾಸಿಗರಿಗೆ ಕೇವಲ ಬಸ್ ಸಫಾರಿಗೆ ಮಾತ್ರ ಅವಕಾಶ ನೀಡಲಾಗುವುದು. ಇತ್ತೀಚೆಗೆ ನಡೆದ ಎರಡು ಚಿರತೆ ದಾಳಿ ಪ್ರಕರಣಗಳು ಮತ್ತು ಕಳೆದ ನವೆಂಬರ್ ತಿಂಗಳಿನಲ್ಲಿ ಬಂಡೀಪುರ-ನಾಗರಹೊಳೆ ಭಾಗದಲ್ಲಿ ನಡೆದ ಮೂರು ಭೀಕರ ಹುಲಿ ದಾಳಿಗಳ ಬೆನ್ನಲ್ಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ.

ಇದ್ನೂ ಓದಿ: ಪ್ರವಾಸಿಗರಿಗೆ ಗುಡ್​ನ್ಯೂಸ್​​: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳ ನಿಷೇಧ ತೆರವು

ನಾಗಮಲೆ ಬಳಿ 10 ವರ್ಷದ ಬಾಲಕನನ್ನು ಚಿರತೆ ಬಲಿ ಪಡೆದ ಘಟನೆ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ಅರಣ್ಯ ಇಲಾಖೆ ಹೊಸ ಮಾರ್ಗಸೂಚಿ ಪ್ರಕಾರ, ಸದ್ಯ ಚಾಲ್ತಿಯಲ್ಲಿರುವ ಓಪನ್ ಜೀಪ್‌ಗಳಲ್ಲಿ ಪ್ರವಾಸ ಕೈಗೊಳ್ಳುವುದಿದ್ದರೆ ಕಡ್ಡಾಯವಾಗಿ ಒಡೆಯದ ಗ್ಲಾಸ್ ಅಥವಾ ಕಬ್ಬಿಣದ ಮೆಶ್ ಅಳವಡಿಸಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಇವರಿಲ್ಲದೆ ಕಥೆಯೇ ಇಲ್ಲ’; ಸುದೀಪ್ ಧ್ವನಿಯಲ್ಲಿ ಬಂತು ‘ಮ್ಯಾಂಗೋ ಪಚ್ಚ’ ಟೀಸರ್ – Kannada News | Mango Pachcha Teaser: Kichcha Sudeep’s Voice Introduces Sanchith Sanjeev’s Film

ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 5ರಂದು ತೆರೆಗೆ ಬರುತ್ತಿದೆ. ಈಗ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್​​​ನಲ್ಲಿ ‘ಮ್ಯಾಂಗೋ ಪಚ್ಚ’ದ ಪಾತ್ರಗಳನ್ನು ಪರಿಚಯಿಸಲಾಗಿದೆ. ಕಿಚ್ಚ ಸುದೀಪ್ ಧ್ವನಿಯಲ್ಲಿ ಟೀಸರ್ ಬಂದಿದೆ ಎಂಬುದು ವಿಶೇಷ. ಸಿನಿಮಾದ ಟ್ರೇಲರ್​ಗಾಗಿ ಅಭಿಮಾನಿಗಳು ಕಾದಿದ್ದಾರೆ.

‘ಮ್ಯಾಂಗೋ ಪಚ್ಚ’ ಚಿತ್ರದ ಕಥೆ ಸಾಗೋದು ಮೈಸೂರಿನಲ್ಲಿ. ಹಾಗಂತ ಪ್ರೆಸೆಂಟ್​​​ನಲ್ಲಿ ನಡೆಯೋ ಕಥೆಯಲ್ಲ. 2002ರ ಕಾಲಘಟ್ಟದ ಕಥೆ ‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಇದೆ. ಈ ಸಿನಿಮಾದ ಟೀಸರ್​​​ನಲ್ಲಿ ಹಲವು ಪಾತ್ರಗಳನ್ನು ಪರಿಚಯಿಸಲಾಗಿದೆ. ಮೈಸೂರು ಕೂಡ ಸಿನಿಮಾದ ಒಂದು ಪಾತ್ರದ ರೀತಿ ವರ್ತಿಸುವ ಸೂಚನೆಯನ್ನು ಟೀಸರ್​​ನಲ್ಲಿ ನೀಡಲಾಗಿದೆ. ಸಿನಿಮಾದಲ್ಲಿ ಬರುವ ಪಾತ್ರ ಹಾಗೂ ಮೈಸೂರು ಇಲ್ಲದೆ ಚಿತ್ರದ ಕಥೆಯೇ ಇಲ್ಲ ಎನ್ನುತ್ತಾರೆ ಕಿಚ್ಚ.

ಯುವ ಹೀರೋಗಳು ಬಂದು, ಚಿತ್ರರಂಗದಲ್ಲಿ ಮಿಂಚಿ ಸ್ಟಾರ್ ಹೀರೋಗಳಾಗಿ ಬೆಳೆದ ಅದೆಷ್ಟೋ ಉದಾಹರಣೆ ಇದೆ. ಸುದೀಪ್​ ಅವರಿಂದ ಆರಂಭಿಸಿ ಯಶ್​​ವರೆಗೆ ಎಲ್ಲರೂ ಯಂಗ್ ಹೀರೋ ಆಗಿ ಗುರುತಿಸಿಕೊಂಡು, ನಂತರ ತಮ್ಮನ್ನು ತಾವು ಸಾಬೀತು ಮಾಡಿ ಈಗ ಸ್ಟಾರ್ ಹೀರೋಗಳಾಗಿ ಬೆಳೆದಿದ್ದಾರೆ. ಸಂಚಿತ್ ಕೂಡ ಇದೇ ಸಾಲಿಗೆ ಸೇರುತ್ತಾರಾ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ‘ದೃಶ್ಯಂ 3’ ಹೇಗಿದೆ? ನೆಟ್ಟಿಗರು ಕೊಟ್ಟ ಪಾರದರ್ಶಕ ವಿಮರ್ಶೆ ಇಲ್ಲಿದೆ

‘ಸುಪ್ರುಯಾನ್ವಿ ಪಿಕ್ಚರ್ಸ್ ಸ್ಟುಡಿಯೋ’ ಹಾಗೂ ಕೆಆರ್​​ಜಿ ಒಟ್ಟಾಗಿ ‘ಮ್ಯಾಂಗೋ ಪಚ್ಚ’ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದೆ. ಸಂಚಿತ್ ಸಂಜೀವ್ ಜೊತೆ ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ್​, ಮಯೂರ್ ಪಟೇಲ್, ಹರಿಣಿ ಶ್ರೀಕಾಂತ್, ಹಂಸ ನಾರಾಯಣಸ್ವಾಮಿ, ಉಗ್ರಂ ಮಂಜು ಸಿನಿಮಾದಲ್ಲಿ ನಟಿಸಿದ್ದಾರೆ. ವಿವೇಕ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪೋಷಕರ ವಿರುದ್ಧ ಮೊದಲ ಬಾರಿಗೆ ಕ್ರಮ, ಸಿಬಿಐ ವಶಕ್ಕೆ ಪಡೆದಿರುವ ಡಾ. ಮನೋಜ್ ಶಿರೂರೆ ಯಾರು? – Kannada News | Latur Doctor Becomes First Parent Arrested in NEET UG 2026 Leak Probe

ಪುಣೆ, ಮೇ 21: ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಯಾವುದೇ ಹಂತಕ್ಕಾದರೂ ಹೋಗಲು ಸಿದ್ಧರಾಗುತ್ತಾರೆ. ಆದರೆ, ಇಲ್ಲೊಬ್ಬರು ಹೆಸರಾಂತ ವೈದ್ಯರು ತಮ್ಮ ಮಗನಿಗಾಗಿ ನೀಟ್(NEET) ಪರೀಕ್ಷೆಯ ಅಕ್ರಮದ ದಾರಿ ಹಿಡಿದು, ಕೊನೆಗೆ ಕಂಬಿ ಎಣಿಸುವಂತಾಗಿದೆ. ಸಿಬಿಐ ಕೈಗೆ ಸಿಕ್ಕಿಬಿದ್ದಿರುವ ಆ ವೈದ್ಯ ಪೋಷಕನೇ ಡಾ.ಮನೋಜ್ ಶಿರೂರೆ.

ಯಾರಿದು ಡಾ. ಮನೋಜ್ ಶಿರೂರೆ?
ಡಾ. ಮನೋಜ್ ಶಿರೂರೆ ಅವರು ಮಹಾರಾಷ್ಟ್ರದ ಲಾತೂರ್ ಮೂಲದ ಪ್ರಖ್ಯಾತ ಮಕ್ಕಳ ತಜ್ಞರು (Pediatrician). ಲಾತೂರಿನ ಓಲ್ಡ್ ಔಸಾ ರಸ್ತೆ ವಿಭಾಗದಲ್ಲಿ ಇವರಿಗೆ ಸೇರಿದ ‘ಸಿದ್ಧಿವಿನಾಯಕ ಮಕ್ಕಳ ಆಸ್ಪತ್ರೆ’ ಇದ್ದು, ಇದು ಅತ್ಯಂತ ಜನಪ್ರಿಯ ಆಸ್ಪತ್ರೆಯಾಗಿದೆ. ಸಮಾಜದಲ್ಲಿ ಉತ್ತಮ ಗೌರವ ಹೊಂದಿದ್ದ ವೈದ್ಯರೇ ಈಗ ಪೇಪರ್ ಲೀಕ್ ಹಗರಣದಲ್ಲಿ ಸಿಕ್ಕಿಬಿದ್ದಿರುವುದು ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.

ನಾಲ್ಕೂವರೆ ಗಂಟೆಗಳ ತೀವ್ರ ವಿಚಾರಣೆ ಮತ್ತು ಅರೆಸ್ಟ್
ನೀಟ್ ಹಗರಣದ ಬೆನ್ನುಬಿದ್ದಿರುವ ಸಿಬಿಐ ಅಧಿಕಾರಿಗಳು ಕಳೆದ ಎಂಟು ದಿನಗಳಿಂದ ಲಾತೂರ್‌ನಲ್ಲೇ ಬೀಡುಬಿಟ್ಟಿದ್ದಾರೆ. ಈ ಹಗರಣದ ಪ್ರಮುಖ ಆರೋಪಿ ಶಿವರಾಜ್ ಮೋಟೆಗಾಂವ್ಕರ್‌ನನ್ನು ಮೊದಲು ತೀವ್ರ ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದ ಸಿಬಿಐಗೆ, ಆತನಿಂದ ಮಹತ್ವದ ಸುಳಿವು ಸಿಕ್ಕಿತ್ತು. ಮೋಟೆಗಾಂವ್ಕರ್ ನೀಡಿದ ಸಂಪರ್ಕಗಳ ಆಧಾರದ ಮೇಲೆ ಸಿಬಿಐ ಅಧಿಕಾರಿಗಳು ಬುಧವಾರ ಸಂಜೆ ನೇರವಾಗಿ ಡಾ. ಮನೋಜ್ ಶಿರೂರೆ ಅವರ ಆಸ್ಪತ್ರೆಯ ಮೇಲೆ ದಾಳಿ ಮಾಡಿದರು.

ಆಸ್ಪತ್ರೆಯಲ್ಲೇ ವೈದ್ಯರನ್ನು ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ತೀವ್ರವಾಗಿ ತನಿಖೆ ನಡೆಸಲಾಯಿತು. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಕೊನೆಗೆ ವೈದ್ಯರು ತಾವು ಮಾಡಿದ ಅಪರಾಧವನ್ನು ಒಪ್ಪಿಕೊಂಡರು. ತಕ್ಷಣವೇ ಸಿಬಿಐ ಅಧಿಕಾರಿಗಳು ಅವರ ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿ ಬಂಧಿಸಿ ಕರೆದೊಯ್ದಿದ್ದಾರೆ.

ಮತ್ತಷ್ಟು ಓದಿ: ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ NTAನಲ್ಲಿ ಮಹತ್ವದ ಬದಲಾವಣೆ

ಆರೋಪವೇನು?
ಡಾ. ಮನೋಜ್ ಶಿರೂರೆ ಅವರು ತಮ್ಮ ಮಗನಿಗೆ ನೀಟ್ ಪರೀಕ್ಷೆಯಲ್ಲಿ ಅಕ್ರಮವಾಗಿ ಸಹಾಯ ಮಾಡಲು ಪ್ರಮುಖ ಆರೋಪಿ ಶಿವರಾಜ್ ಮೋಟೆಗಾಂವ್ಕರ್‌ನೊಂದಿಗೆ ಕೈಜೋಡಿಸಿದ್ದರು. ಮಗನಿಗಾಗಿ ಪ್ರಶ್ನೆಪತ್ರಿಕೆ ಮತ್ತು ಅಗತ್ಯ ದಾಖಲೆಗಳನ್ನು ಮೋಟೆಗಾಂವ್ಕರ್‌ನಿಂದ ಪಡೆದ ಗಂಭೀರ ಆರೋಪ ಇವರ ಮೇಲಿದೆ.

ಮೊಬೈಲ್ ವಶ, ಬ್ಯಾಂಕ್ ಖಾತೆಗಳ ಮೇಲೆ ಕಣ್ಣು
ಬಂಧನದ ವೇಳೆ ಸಿಬಿಐ ಅಧಿಕಾರಿಗಳು ಡಾ. ಶಿರೂರೆ ಅವರ ಮೊಬೈಲ್ ಫೋನ್ ಮತ್ತು ಆಸ್ಪತ್ರೆಯಲ್ಲಿದ್ದ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೊಬೈಲ್ ಮೂಲಕ ಅವರು ಮೋಟೆಗಾಂವ್ಕರ್ ಜೊತೆ ಎಷ್ಟು ದಿನಗಳಿಂದ ಸಂಪರ್ಕದಲ್ಲಿದ್ದರು? ನೀಟ್ ಪೇಪರ್ ಅನ್ನು ತಮ್ಮ ಮಗನಿಗೆ ಮಾತ್ರ ಬಳಸಿದ್ದರೇ ಅಥವಾ ಬೇರೆ ಯಾರಿಗಾದರೂ ಮಾರಾಟ ಮಾಡಿ ವೈರಲ್ ಮಾಡಿದ್ದರೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಅಲ್ಲದೆ, ಪೇಪರ್ ಪಡೆಯಲು ಇವರಿಬ್ಬರ ಮಧ್ಯೆ ಎಷ್ಟು ಕೋಟಿ ರೂಪಾಯಿಗಳ ಡೀಲ್ ನಡೆದಿತ್ತು ಎಂಬುದನ್ನು ಪತ್ತೆಹಚ್ಚಲು ಸಿಬಿಐ ಅಧಿಕಾರಿಗಳು ವೈದ್ಯರ ಬ್ಯಾಂಕ್ ಖಾತೆಗಳನ್ನು ಜಾಲಾಡುತ್ತಿದ್ದಾರೆ. ಹಗರಣದಲ್ಲಿ ಪೋಷಕರ ವಿರುದ್ಧ ಸಿಬಿಐ ಕೈಗೊಂಡ ಮೊದಲ ಕ್ರಮ ಇದಾಗಿದ್ದು, ಅಡ್ಡದಾರಿ ಹಿಡಿಯುವ ಇತರೆ ಪೋಷಕರಿಗೂ ಇದೊಂದು ಬಲವಾದ ಎಚ್ಚರಿಕೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ, ವಿಡಿಯೋ ನೋಡಿ

ಬೆಂಗಳೂರು, (ಮೇ 21): ಸೋಷಿಯಲ್​ ಮೀಡಿಯಾದಲ್ಲಿ ಈಗ ಒಂದೇ ಸದ್ದು ಅದೇ ಕಾಕ್ರೋಚ್​​ ಜನತಾ ಪಾರ್ಟಿ(cockroach janata party). ರಾತ್ರೋರಾತ್ರಿ ಜನ್ಮತಾಳಿದ ಕಾಕ್ರೋಚ್ ಪಾರ್ಟಿ, ಭಾರಿ ಸಂಚಲನ ಮೂಡಿಸಿದೆ. ಮಜಾ ಅಂದ್ರೆ, ಬರೀ ಸಾಮಾನ್ಯ ಯುವಕರಷ್ಟೇ ಅಲ್ಲ, ಈಗ ಗ್ಲಾಮರ್ ದುನಿಯಾದ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮತ್ತು ಬಾಲಿವುಡ್ ಮಂದಿ ಕೂಡ ಈ ಜಿರಳೆ ಪಕ್ಷಕ್ಕೆ ಜೈ ಎನ್ನುತ್ತಾ ಸಾಲಾಗಿ ಬಂದು ಸೇರಿಕೊಳ್ಳುತ್ತಿದ್ದಾರೆ. ಇನ್ನು ಇತ್ತ ಬೆಂಗಳೂರಿನ ಫ್ರೀಡಂಪಾರ್ಕ್​​ ನಲ್ಲಿ ನಡೆದ ಯುವ ಕಾಂಗ್ರೆಸ್​ ಪ್ರತಿಭಟನೆ ವೇಳೆ ಕೈ ನಾಯಕರು ಕಾಕ್ರೋಚ್ ಟಿಶರ್ಟ್ ಬಿಡುಗಡೆ ಮಾಡಿದರು.

ಇದನ್ನೂ ಓದಿ: Cockroach Janta Party: ಏನಿದು ಕಾಕ್ರೋಚ್ ಜನತಾ ಪಾರ್ಟಿ, ಹುಟ್ಟಿಕೊಂಡಿದ್ಹೇಗೆ? ಯಾರ್ಯಾರ ಬೆಂಬಲವಿದೆ?

Source link

Exit mobile version