MI vs LSG: ಅಪರೂಪಕ್ಕೆ ಸಿಕ್ಕಿತ್ತು ವಿಕೆಟ್; ಬುಮ್ರಾ ಮಾಡಿದ್ರ ಎಡವಟ್ಟು..! ವಿಡಿಯೋ ನೋಡಿ – Kannada News | IPL 2026: Jasprit Bumrah’s Poor Form & No Balls Cost Mumbai Indians Dearly
2026 ರ ಐಪಿಎಲ್ನಲ್ಲಿ (IPL 2026) ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್ ವಿಭಾಗದ ಪಾತ್ರ ಎಷ್ಟಿದೆಯೋ, ಬೌಲಿಂಗ್ ವಿಭಾಗದ್ದು ಅಷ್ಟೇ ಕೊಡುಗೆ ಇದೆ. ಅದರಲ್ಲೂ ಮುಂಬೈ ತಂಡದ ಬೌಲಿಂಗ್ ವಿಭಾಗದ ಜೀವಾಳ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಈ ಆವೃತ್ತಿಯಲ್ಲಿ ವಿಕೆಟ್ ಬರ ಎದುರಿಸುತ್ತಿದ್ದಾರೆ. ಇದು ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎನ್ನಬಹುದು. ಇದುವರೆಗೆ ಬುಮ್ರಾ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದಾರೆ. ಈ 10 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್ಗಳನ್ನು ಪಡೆದಿದ್ದಾರೆ….