ಮಕ್ಕಳು ಪದೇಪದೇ ಬೀಳುವುದರಿಂದ ಮೆದುಳಿಗೆ ಅಪಾಯವಾಗುತ್ತದೆಯೇ? ವೈದ್ಯರನ್ನು ಯಾವಾಗ ಸಂಪರ್ಕ ಮಾಡಬೇಕು? – Kannada News | When Is Frequent Falling in Kids a Medical Concern? Doctor’s Guide

ಮಕ್ಕಳು ಆಟವಾಡುವಾಗ ಬೀಳುವುದು ಸಾಮಾನ್ಯ ಸಂಗತಿಯೇ ಸರಿ. ಅವರು ಹೊಸ ಕೌಶಲ್ಯಗಳನ್ನು ಕಲಿಯುವ ಹಂತದಲ್ಲಿರುವುದರಿಂದ ಈ ರೀತಿ ಆಗುವುದು ಸಹಜ. ಆದರೆ ಮಗು ಪದೇಪದೇ ಬೀಳುತ್ತಿರುವುದನ್ನು ಪೋಷಕರು ಗಮನಿಸಿದರೆ, ಅದು ಕೇವಲ ಆಟದ ಭಾಗವೇ ಅಥವಾ ಆರೋಗ್ಯ ಸಮಸ್ಯೆಯ ಸೂಚನೆಯೇ ಎಂಬುದನ್ನು ಅರಿಯುವುದು ಅಗತ್ಯವಾಗಿದೆ. ಹೌದು, ತಜ್ಞರು ಹೇಳುವ ಪ್ರಕಾರ, ಸಾಮಾನ್ಯವಾಗಿ ಬಿದ್ದಾಗ ಸಣ್ಣಪುಟ್ಟ ಗಾಯವಾಗುವುದರಿಂದ ಯಾವುದೇ ತೊಂದರೆಯಿಲ್ಲ ಇದರಿಂದ ಗಂಭೀರ ಸಮಸ್ಯೆ ಉಂಟಾಗುವುದಿಲ್ಲ. ಆದರೆ ಮಗು ತಲೆ ಭಾಗಕ್ಕೆ ಆಗಾಗ ಹೊಡೆತ ಬೀಳುತ್ತಿದ್ದರೆ ಅಥವಾ ಬಿದ್ದಾಗ ತಲೆಯ ಭಾಗಕ್ಕೆ ಹೆಚ್ಚು ಪೆಟ್ಟಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ಪದೇ ಪದೇ ತಲೆಯ ಭಾಗದಲ್ಲಿ ಗಾಯ ಅಥವಾ ನೋವು ಕಂಡುಬಂದರೆ ಅದು ಮೆದುಳಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಂದು ಘಟನೆಯನ್ನು ಗಮನದಿಂದ ಪರಿಗಣಿಸುವುದು ಮುಖ್ಯವಾಗಿದೆ. ಹಾಗಾದರೆ ಪದೇಪದೇ ಬೀಳುವುದರಿಂದ ಮೆದುಳಿಗೆ (Brain Health) ಯಾವ ರೀತಿಯ ಸಮಸ್ಯೆಯಾಗುತ್ತದೆ, ಈ ರೀತಿಯಾದಾಗ ವೈದ್ಯರ ಸಂಪರ್ಕ ಮಾಡಬೇಕಾಗುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಎಚ್ಚರಿಕೆ ಸೂಚನೆಗಳು ಯಾವುವು?

ಮಗು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಪದೇಪದೇ ಬೀಳುತ್ತಿದ್ದರೆ ಅದು ಗಮನಿಸಬೇಕಾದ ವಿಷಯ. ಜೊತೆಗೆ ತಲೆಸುತ್ತು, ದೌರ್ಬಲ್ಯ, ನಡೆಯುವಲ್ಲಿ ಅಸ್ಥಿರತೆ ಅಥವಾ ಸಮತೋಲನ ಕಳೆದುಕೊಳ್ಳುವ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಬಿದ್ದ ನಂತರ ಮಗು ಅಸಹಜವಾಗಿ ಮೌನವಾಗುವುದು, ಹೆಚ್ಚು ಅಳುವುದು ಅಥವಾ ವರ್ತನೆಯಲ್ಲಿ ಬದಲಾವಣೆ ಕಾಣಿಸುವುದೂ ಕೂಡ ಎಚ್ಚರಿಕೆ ಸೂಚನೆಗಳಾಗಬಹುದು.

ಇದನ್ನೂ ಓದಿ: ಈ ಅಭ್ಯಾಸಗಳು ನಿಮ್ಮ ಮೆದುಳಿಗೆ ಹಾನಿ ಮಾಡಬಹುದು!

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಮಗು ಪದೇಪದೇ ಬೀಳುತ್ತಿದ್ದು ಪ್ರತೀ ಸಲ ತಲೆಗೆ ಗಾಯವಾಗುತ್ತಿದ್ದರೆ ಅಥವಾ ಬಿದ್ದ ಬಳಿಕ ವಾಂತಿ, ತೀವ್ರ ತಲೆನೋವು ಮುಂತಾದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಸಹಾಯ ಅಗತ್ಯ. ಜೊತೆಗೆ ಮಗು ನಡೆಯುವ ರೀತಿಯಲ್ಲಿ ಬದಲಾವಣೆ ಕಂಡುಬಂದರೂ ತಜ್ಞರ ಸಲಹೆ ಪಡೆಯಬೇಕು. ಮಕ್ಕಳು ಬೀಳುವುದು ಸಾಮಾನ್ಯವಾದರೂ, ಪದೇಪದೇ ಬೀಳುವುದು ಅಥವಾ ತಲೆಗಾಯಗಳಾಗುವುದು ಗಂಭೀರ ಸಮಸ್ಯೆಯಾಗಿರಬಹುದು. ಪೋಷಕರು ಎಚ್ಚರಿಕೆಯಿಂದ ಗಮನಿಸಿ, ಅಗತ್ಯವಿದ್ದರೆ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸುವುದು ಮಗುವಿನ ಆರೋಗ್ಯ ಕಾಪಾಡಲು ಸಹಕಾರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಮತಾ ಬ್ಯಾನರ್ಜಿ ನಿವಾಸದ ಹೊರಗೆ ಬಿಜೆಪಿ ಬೆಂಬಲಿಗರಿಂದ ಜೈ ಶ್ರೀ ರಾಮ್ ಘೋಷಣೆ – Kannada News | BJP workers raised Jai Shree Ram Slogans Outside West Bengal CM Mamata Banerjee Residence in Kolkata

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Election Results) ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ. 15 ವರ್ಷಗಳ ಕಾಲ ಬಂಗಾಳದ ಮುಖ್ಯಮಂತ್ರಿಯಾಗಿ ಮೆರೆದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಈ ಬಾರಿಯ ಚುನಾವಣೆಯಲ್ಲಿ ನೆಲ ಕಚ್ಚಿದೆ. ಈ ನಡುವೆ ಬಿಜೆಪಿಯ ಗೆಲುವನ್ನು ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದು, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮನೆಯ ಹೊರಗೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದಾರೆ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸುತ್ತಿರುವುದರಿಂದ ಕಾರ್ಯಕರ್ತರು ಕೊಲ್ಕತ್ತಾದಾದ್ಯಂತ ವಿಜಯೋತ್ಸವ ಆಚರಿಸುತ್ತಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗಿದ ಕಾರ್ಯಕರ್ತರನ್ನು ಪೊಲೀಸರು ಮಮತಾ ಬ್ಯಾನರ್ಜಿ ಮನೆಯ ಎದುರಿನಿಂದ ಹೊರಹೋಗುವಂತೆ ಸೂಚಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಮನೂರ ಮನೆತನದ 3ನೇ‌ ಪೀಳಿಗೆ ವಿಧಾನಸಭೆಗೆ:ತಂದೆ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಸಮರ್ಥ ಶಾಸಕ – Kannada News | Davanagere South Assembly By Poll Result: No more Shamanur Family Member Entered to vidhana soudha

ದಾವಣಗೆರೆ, (ಮೇ 04): ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ (Davanagere South Assembly By Poll Result) ಕಾಂಗ್ರೆಸ್​ ಅಭ್ಯರ್ಥಿ ಸಮರ್ಥ್ ಶಾಮನೂರು (Samarth Shamanur) ಗೆಲುವು ಸಾಧಿಸಿದ್ದಾರೆ. ತೀವ್ರ ಪೈಪೋಟಿ ನಡುವೆಯೂ ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ದಾಸಕರಿಯಪ್ಪ ಅವರ ವಿರುದ್ಧ 5,708 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈ ಮೂಲಕ ಅಜ್ಜ ಶಾಮನೂರು ಶಿವಶಂಕರಪ್ಪನವರ ಗೆಲುವಿನ ಹಾದಿಯನ್ನು ಮೊಮ್ಮಗ ಸಮರ್ಥ ಮುಂದುವರಿಸಿದ್ದು, ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದಂತಾಗಿದೆ. ಈ ನಡುವೆ ಅಚ್ಚರಿಯ ಬೆಳವಣಿಗೆಯಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದಾಖಲೆಯ ಮತಗಳಿಸಿದೆ. ಈ ಮೂಲಕ ಕಾಂಗ್ರೆಸ್ ಭರ್ಜರಿ ಸಂದೇಶವನ್ನು ಮುಸ್ಲಿಂ ಸಮುದಾಯ ನೀಡಿದೆ.

ತಂದೆ ರೀತಿ ಮಗ ಚಿಕ್ಕ ವಯಸ್ಸಿನಲ್ಲೇ ಶಾಸಕ

ಅಜ್ಜ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾಸಭೆಗೆ ನಡೆದ ಉಪಚುನಾವಣೆಯಲ್ಲಿ ಮೊಮ್ಮಗ ಸಮರ್ಥ ಶಾಮನೂರು ಗೆದ್ದು ಬೀಗಿದ್ದು, ಇದರೊಂದಿಗೆ ಶಾಮನೂರು ಮನೆತನದ ಮೂರನೇ ಪೀಳಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಇನ್ನು ತಂದೆ ಮಲ್ಲಿಕಾರ್ಜುನ ರೀತಿ ಪುತ್ರ ಸಮರ್ಥ ಸಹ ಚಿಕ್ಕ ವಯಸ್ಸಿನಲ್ಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಸಚಿವರಾಗಿರುವ ಶಾಮನೂರು ಶಿವಶಂಕರಪ್ಪನವರ ಪುತ್ರ ಎಸ್​​ಎಸ್​​ ಮಲ್ಲಿಕಾರ್ಜುನ ಅವರು 28ನೇ ವಯಸ್ಸಿನಲ್ಲಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಅದರಂತೆ ಇದೀಗ ಪುತ್ರ ಸಮರ್ಥ ಸಹ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ತಂದೆ ರೀತಿಯಲ್ಲೇ ಚಿಕ್ಕ ವಯಸ್ಸಿನಲ್ಲೇ ಅಂದರೆ 27ನೇ ವಯಸ್ಸಿಗೆ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: ಬಂಡಾಯ ಮಣಿಸಿ ದಾವಣಗೆರೆ ಬೈ ಎಲೆಕ್ಷನ್​ ಗೆದ್ದ ಸಮರ್ಥ್ ಶಾಮನೂರು

ಕಾಂಗ್ರೆಸ್ ಎಚ್ಚರಿಕೆ ಸಂದೇಶ

ಕಾಂಗ್ರೆಸ್‌ ಅಭ್ಯರ್ಥಿ ಸಮರ್ಥ್‌ ಶಾಮನೂರು 68619 ಮತಗಳೊಂದಿಗೆ ಕೇವಲ 5 ಸಾವಿರ ಮತಗಳ ಅಂತರದಿಂದ ಪ್ರಯಾಸದ ಗೆಲುವು ಸಾಧಿಸಿದ್ದಾರೆ.  ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ 63746 ಮತಗಳನ್ನು ಪಡೆದುಕೊಂಡರೆ, ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್‌ ಕೊಡ್ಲಿಪೇಟೆ 18,485 ಮತಗಳನ್ನು ಪಡೆದಿದ್ದಾರೆ. ಈ ಮೂಲಕ 3ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಾರೆ.  ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರು ಎಸ್‌ಡಿಪಿಐ ಬೆಂಬಲಿಸಿದ್ದು, ಆ ಪಕ್ಷ 18 ಸಾವಿರ ಮತಗಳನ್ನು ಪಡೆದು ಅಚ್ಚರಿ ಮೂಡಿಸಿದೆ. ಮುಸ್ಲಿಂ ಮತಗಳ ಈ ವಿಭಜನೆ ಕಾಂಗ್ರೆಸ್‌ಗೆ ಆತಂಕ ತಂದಿದೆ. ಈ ಮೂಲಕ  ಮುಸ್ಲಿಂ ಸಮುದಾಯ  ಕಾಂಗ್ರೆಸ್ ಎಚ್ಚರಿಗೆ ಸಂದೇಶ ರವಾನಿಸಿದೆ.

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಮುಸ್ಲಿಮರು ಎಸ್‌ಡಿಪಿಐ ಬೆಂಬಲಿಸಿರುವುದು ಸ್ಪಷ್ಟವಾಗಿದೆ. ಈ ಅಂಶವೇ ಕಾಂಗ್ರೆಸ್‌ಗೆ ಮತಗಳ ಸಂಖ್ಯೆ ತಗ್ಗಿಸಿ ಪ್ರಭಲ ಪೈಪೋಟಿಗೆ ಕಾರಣವಾಯಿತು. ತಂದೆ ಸಚಿವ, ತಾಯಿ ಸಂಸದೆ ಹಾಗೂ ತಾತ ಮುತ್ಸದ್ದಿ ರಾಜಕಾರಣಿಯಾದರೂ ಸಮರ್ಥ್ ಶಾಮನೂರು ಜಸ್ಟ್‌ ಪಾಸ್‌ ಎಂಬಂತೆ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಉಪಚುನಾವಣೆ ಫಲಿತಾಂಶವು ಸಾಂಪ್ರದಾಯಿಕ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದೆ. ಕೇವಲ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿ ಎಂದು ಭಾವಿಸಲಾಗಿದ್ದ ಕಣದಲ್ಲಿ, ಎಸ್‌ಡಿಪಿಐ ಸುಮಾರು ದಾಖಲೆಯ ಮತಗಳನ್ನು ಪಡೆಯುವ ಮೂಲಕ ಪ್ರಬಲ ಪೈಪೋಟಿ ನೀಡಿದೆ. ಈ ಬೆಳವಣಿಗೆ ಇದೀಗ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

MI vs LSG IPL 2026 Live Score: ಟಾಸ್ ಗೆದ್ದ ಸೂರ್ಯ ಬೌಲಿಂಗ್ ಆಯ್ಕೆ – Kannada News | Mumbai Indians vs Lucknow Super Giants IPL 2026 Live Cricket Score MI vs LSG Match on 4th May latest news in Kannada

ಐಪಿಎಲ್ 2026 ರ 47 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ಮುಂಬೈಗೆ 10 ನೇ ಪಂದ್ಯವಾಗಿದ್ದರೆ, ಲಕ್ನೋಗೆ ಒಂಬತ್ತನೇ ಪಂದ್ಯವಾಗಿದೆ. ಎರಡೂ ತಂಡಗಳು ಈ ಆವೃತ್ತಿಯಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿವೆ. ಮುಂಬೈ 9 ಪಂದ್ಯಗಳಲ್ಲಿ 7 ರಲ್ಲಿ ಸೋತಿದ್ದರೆ, ಲಕ್ನೋ ಕೂಡ ಇದೇ ರೀತಿಯ ಪರಿಸ್ಥಿತಿಯಲ್ಲಿದೆ.

Source link

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಅರಳಿದ ಕಮಲ; ಬಿಜೆಪಿಯ ಗೆಲುವಿಗೆ ಟೊಂಕ ಕಟ್ಟಿ ನಿಂತ ಮೋದಿ-ಅಮಿತ್ ಶಾ ಜೋಡಿ – Kannada News | PM Modis Guarantee and Amit Shahs political strategy changed the game in West Bengal Assembly Elections

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ (West Bengal Assembly Elections) ಬಿಜೆಪಿ ಜಯಭೇರಿ ಬಾರಿಸಿದೆ. ಪ್ರಧಾನಿ ಮೋದಿಯವರ (PM Modi) ಗ್ಯಾರಂಟಿ ಮತ್ತು ಅಮಿತ್ ಶಾ (Amit Shah) ಅವರ ಚುನಾವಣಾ ತಂತ್ರದಿಂದಾಗಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಪಕ್ಷವು ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತವನ್ನು ಉರುಳಿಸಿ ರಾಜ್ಯದಲ್ಲಿ ತನ್ನ ಮೊದಲ ಸರ್ಕಾರವನ್ನು ಸ್ಥಾಪಿಸಿದೆ. ಸಾರ್ವಜನಿಕ ಕಲ್ಯಾಣ ಯೋಜನೆಗಳು, ಒಳನುಸುಳುವಿಕೆ ವಿರೋಧಿ ನಿಲುವು ಮತ್ತು ಬಲವಾದ ಬೂತ್ ನಿರ್ವಹಣೆಯು ಮತದಾರರ ವಿಶ್ವಾಸವನ್ನು ಗಳಿಸಿತು. ಇದು ಬಿಜೆಪಿಯ ನಿರ್ಣಾಯಕ ಗೆಲುವಿಗೆ ಕಾರಣವಾಯಿತು ಎನ್ನಬಹುದು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಪಷ್ಟ ಬಹುಮತದ ಸರ್ಕಾರವನ್ನು ರಚಿಸಲು ಸಜ್ಜಾಗಿದೆ. ಇದು ರಾಜ್ಯದಲ್ಲಿ ಬಿಜೆಪಿಯ ಮೊದಲ ಸರ್ಕಾರವಾಗಿದೆ. ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವುದು ಇದೇ ಮೊದಲು. ಇದು ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಸರ್ಕಾರದ ಅಂತ್ಯವನ್ನು ಸೂಚಿಸುತ್ತದೆ.

ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಜೆಪಿಯನ್ನು ಗೆಲ್ಲಿಸಲೇಬೇಕೆಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಖುದ್ದಾಗಿ ಅಖಾಡಕ್ಕೆ ಇಳಿದಿದ್ದರು. ಕಳೆದ 2 ತಿಂಗಳಲ್ಲಿ ಅನೇಕ ಬಾರಿ ನರೇಂದ್ರ ಮೋದಿ ಬಂಗಾಳಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಅಮಿತ್ ಶಾ ಬಂಗಾಳದಲ್ಲೇ ಬೀಡುಬಿಟ್ಟು ರಾಜ್ಯದ ಬಿಜೆಪಿ ನಾಯಕರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಾ ಬಂಗಾಳದಲ್ಲಿ ಬಿಜೆಪಿ ಪರ ಅಲೆ ಮೂಡಲು ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ, ಈ ಗೆಲುವು ಸಿಗಲು ಪಶ್ಚಿಮ ಬಂಗಾಳ ರಾಜ್ಯದ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಹೈಕಮಾಂಡ್ ನಾಯಕರ ಪರಿಶ್ರಮವೇ ಕಾರಣ ಎನ್ನಬಹುದು. ಹೀಗಾಗಿ, ಬಂಗಾಳದಲ್ಲಿ ಕೂಡ ಬಿಜೆಪಿ ಪ್ರಧಾನಿ ಮೋದಿಯ ಹೆಸರು ಮತ್ತು ಖ್ಯಾತಿಯನ್ನು ಬಳಸಿಕೊಂಡು ಚುನಾವಣೆ ಗೆದ್ದಿದೆ.

ಇದನ್ನೂ ಓದಿ: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ! ಕೊನೆಗೂ ಮಮತಾರನ್ನು ಸೋಲಿಸಿದ್ಹೇಗೆ ಬಿಜೆಪಿ? ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಮಾಹಿತಿ

ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ಮೋದಿ ಹಲವಾರು ಸಾರ್ವಜನಿಕ ರ್ಯಾಲಿಗಳನ್ನು ನಡೆಸಿ ರಾಜ್ಯದಲ್ಲಿ ಬದಲಾವಣೆಗೆ ಕರೆ ನೀಡಿದರು. ಬಂಗಾಳದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದರು. ಹಾಗೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಮಾರು 15 ದಿನಗಳ ಕಾಲ ಬಂಗಾಳದಲ್ಲಿಯೇ ಇದ್ದು, ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಭೆಗಳನ್ನು ನಡೆಸಿ, ಪ್ರತಿ ವಿಧಾನಸಭಾ ಸ್ಥಾನಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಿದರು. ಈ ಕಾರ್ಯತಂತ್ರವು ಈಗ ಚುನಾವಣಾ ಫಲಿತಾಂಶಗಳಲ್ಲಿ ಗೋಚರಿಸುತ್ತಿದೆ.

ಬಿಜೆಪಿ 82,000 ಬೂತ್‌ಗಳಲ್ಲಿ 71,000 ಬೂತ್‌ಗಳ ಮೇಲೆ ನಿಯಂತ್ರಣ ಸಾಧಿಸಿದೆ. ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳನ್ನು ಹೊರತುಪಡಿಸಿ, ಪ್ರತಿಯೊಂದು ಬೂತ್‌ನಲ್ಲಿ ಸಂಘಟನೆಯನ್ನು ಬಲಪಡಿಸಲಾಗಿದೆ. ಹಿಂಸಾಚಾರಕ್ಕೆ ಬಲಿಯಾದ ಕಾರ್ಯಕರ್ತರನ್ನು ಪುನಃ ಸಕ್ರಿಯಗೊಳಿಸುವ ಮೂಲಕ ಬಿಜೆಪಿ ತುಳಿತಕ್ಕೆ ಒಳಗಾದವರನ್ನು ತನ್ನ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಂಡಿತು. ಅಮಿತ್ ಶಾ ಅವರ ಮೇಲ್ವಿಚಾರಣೆಯಲ್ಲಿ ಕೇಂದ್ರ ನಾಯಕರಿಗೆ ಸ್ಥಾನವಾರು ಜವಾಬ್ದಾರಿಗಳನ್ನು ವಹಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​) ಡ್ರಾಯಿಂಗ್ ರೂಮ್ ಸಭೆಗಳು ಮನೆ ಮನೆಗೆ ಬಿಜೆಪಿ ತಲುಪಲು ಕಾರಣವಾಯಿತು. ಇದಕ್ಕೆ ಆರ್​ಎಸ್​ಎಸ್​ ಕಾರ್ಯಕರ್ತರು ಕೈಜೋಡಿಸಿದ್ದರಿಂದ ಬಿಜೆಪಿಗೆ ಬಹಳ ಸಹಾಯವಾಯಿತು. ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಟಾಲಿವುಡ್ ತಾರೆಯರು ಮತ್ತು ಕಳಂಕಿತ ರಾಜಕಾರಣಿಗಳನ್ನು ದೂರವಿಡಲಾಯಿತು.

ಇದನ್ನೂ ಓದಿ: Election Commission of India Results 2026: ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿವೆ ಸಿಂಪಲ್ ಸ್ಟೆಪ್ಸ್!

ಪೂರ್ವಾಂಚಲಿ, ಮಾರ್ವಾರಿ ಸಮುದಾಯ ಮತ್ತು ಸ್ಥಳೀಯ ಫುಟ್ಬಾಲ್ ಕ್ಲಬ್‌ಗಳನ್ನು ತಲುಪುವ ಮೂಲಕ ಹೊಸ ಮತ ಬ್ಯಾಂಕ್ ಅನ್ನು ರಚಿಸಲಾಯಿತು. ಜೈ ಶ್ರೀ ರಾಮ್, ಒಳನುಸುಳುವಿಕೆ, ಮಹಿಳಾ ಸುರಕ್ಷತೆ – ಇವುಗಳನ್ನು ಒಟ್ಟುಗೂಡಿಸಿ ಬಲವಾದ ಸೈದ್ಧಾಂತಿಕ ಚೌಕಟ್ಟನ್ನು ರಚಿಸಲಾಯಿತು. ಇದು ಬಿಜೆಪಿಯತ್ತ ಜನರು ಒಲವು ತೋರಲು ಕಾರಣವಾಯಿತು.

ಮಮತಾ ಬ್ಯಾನರ್ಜಿ ಅವರ ಪ್ರಣಾಳಿಕೆ ವರ್ಸರ್ ಪ್ರಧಾನಿ ಮೋದಿ ಅವರ ಭರವಸೆ:

  • 3,000 ರೂ. ವರ್ಸಸ್ 1,500 ರೂ. ಆಫರ್: ಟಿಎಂಸಿ 1,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಿದರೆ, ಬಿಜೆಪಿ ಅದನ್ನು 3,000 ರೂ.ಗೆ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿತು.
  • ಮಹಿಳೆಯರಿಗೆ ಡಬಲ್ ಡೋಸ್: ಮಮತಾ ಬ್ಯಾನರ್ಜಿಯವರ ಲಕ್ಷ್ಮಿ ಭಂಡಾರ್ 1,500 ರೂ.ಗೆ ಹೋಲಿಸಿದರೆ, ಬಿಜೆಪಿ ಪ್ರತಿ ಮಹಿಳೆಗೆ ತಿಂಗಳಿಗೆ 3,000 ರೂ. ನೀಡುವುದಾಗಿ ಭರವಸೆ ನೀಡಿತು. ಇದು ಮಹಿಳೆಯರನ್ನು ತನ್ನತ್ತ ಸೆಳೆಯಲು ಬಿಜೆಪಿಗೆ ಸಹಾಯವಾಯಿತು.
  • ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ: ಟಿಎಂಸಿ ವಿರುದ್ಧ ಡಿಎ ಮತ್ತು ವೇತನ ವ್ಯತ್ಯಾಸದ ಆರೋಪ ಮಾಡಿತು. ಅಧಿಕಾರಕ್ಕೆ ಬಂದ 45 ದಿನಗಳಲ್ಲಿ 7ನೇ ವೇತನ ಆಯೋಗವನ್ನು ಜಾರಿಗೆ ತರುವುದಾಗಿ ಬಿಜೆಪಿ ಭರವಸೆ ನೀಡಿದೆ.
  • ಸರ್ಕಾರಿ ಉದ್ಯೋಗಗಳಲ್ಲಿ 33% ಮಹಿಳಾ ಮೀಸಲಾತಿಯ ಭರವಸೆ: ಹಣಕಾಸಿನ ನೆರವು ಮಾತ್ರವಲ್ಲದೆ, ಉದ್ಯೋಗದಲ್ಲಿ ಕೂಡ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯ ಭರವಸೆಯನ್ನು ಬಿಜೆಪಿ ನೀಡಿದೆ.
  • ಏಕರೂಪ ನಾಗರಿಕ ಸಂಹಿತೆಯ ಭರವಸೆ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಬಿಜೆಪಿ ಇದನ್ನು ಎಲ್ಲರಿಗೂ ಒಂದೇ ಕಾನೂನು ಎಂದು ಪ್ರಸ್ತುತಪಡಿಸಿತು. ಇದು ಟಿಎಂಸಿ ನಿರೂಪಣೆಗಿಂತ ಭಿನ್ನವಾಗಿದೆ.
  • ಒಳನುಸುಳುವಿಕೆಗೆ ಶೂನ್ಯ ಸಹಿಷ್ಣುತೆ: ಪಶ್ಚಿಮ ಬಂಗಾಳದಲ್ಲಿ ಒಳನುಸುಳುವವರನ್ನು ಹೊರಹಾಕಲಾಗುವುದು ಎಂದು ಬಿಜೆಪಿ ಸ್ಪಷ್ಟವಾಗಿ ಹೇಳಿದೆ.
  • ಕೈಗಾರಿಕೆ ಮತ್ತು ಸಿಂಗೂರ್ ಪುನರುಜ್ಜೀವನ: ಸಿಂಗೂರ್ ಅನ್ನು ಮತ್ತೆ ಕೈಗಾರಿಕಾ ಕೇಂದ್ರವನ್ನಾಗಿ ಮಾಡುವ ಭರವಸೆಯನ್ನು ಬಿಜೆಪಿ ನೀಡಿದೆ. ಇದು ಉದ್ಯೋಗ ಮತ್ತು ಹೂಡಿಕೆಗೆ ಅನುಕೂಲ ನೀಡುತ್ತದೆ.
  • ಕೇಂದ್ರ ಯೋಜನೆಗಳ ಸಂಪೂರ್ಣ ಲಾಭ: ಬಂಗಾಳದಲ್ಲಿ ಆಯುಷ್ಮಾನ್ ಭಾರತ್ ನಂತಹ ಯೋಜನೆಗಳನ್ನು ಸಂಪೂರ್ಣವಾಗಿ ಜಾರಿಗೆ ತರುವ ಭರವಸೆ ನೀಡಲಾಗಿದೆ.

ಈ ಬಾರಿ ಪಶ್ಚಿಮ ಬಂಗಾಳವು ಸ್ವಾತಂತ್ರ್ಯದ ನಂತರ ಅತಿ ಹೆಚ್ಚು ಮತದಾನವನ್ನು ದಾಖಲಿಸಿದೆ. ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಶೇ. 91.66ರಷ್ಟು ಮತದಾನವಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಶೇ.93.19ರಷ್ಟು ಜನರು ಮತದಾನದಲ್ಲಿ ಭಾಗವಹಿಸಿದ್ದು, ಒಟ್ಟಾರೆ ಮತದಾನದ ಪ್ರಮಾಣ ಶೇ.92.47ಕ್ಕೆ ತಲುಪಿದೆ.

2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು 294 ಸ್ಥಾನಗಳಲ್ಲಿ 213 ಸ್ಥಾನಗಳನ್ನು ಗೆದ್ದು ಸುಮಾರು ಶೇ.48ರಷ್ಟು ಮತಗಳನ್ನು ಗಳಿಸಿ ನಿರ್ಣಾಯಕ ಬಹುಮತ ಗಳಿಸಿತು. ಆದರೆ ಬಿಜೆಪಿ 77 ಸ್ಥಾನಗಳನ್ನು ಅಂದರೆ ಸರಿಸುಮಾರು ಶೇ.38ರಷ್ಟು ಮತಗಳನ್ನು ಗಳಿಸಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಈ ಬಾರಿ ಬಿಜೆಪಿ ನಿರೀಕ್ಷೆಗೂ ಮೀರಿ ಗೆಲುವು ಸಾಧಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:51 pm, Mon, 4 May 26

Source link

ಚಿಕ್ಕಮಗಳೂರಲ್ಲಿ ಘೋರ ದುರಂತ: ನಾಲ್ಕು ಮಕ್ಕಳು ಜಲಸಮಾಧಿ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಚಿಕ್ಕಮಗಳೂರು, ಮೇ 04: ಕೆರೆಯಲ್ಲಿ ಮುಳುಗಿ ನಾಲ್ವರು ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರಿನ ಅರಳುಗುಪ್ಪೆ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ರೆಹಮಾನ್ (9), ನಯಾಜ್(12), ಮದಿನಾ ಬಾನು(9), ಆರುನ್​​​(8) ಮೃತರು. ಕೆರೆಯಲ್ಲಿ ಆಟವಾಡಲು ತೆರಳಿದ್ದಾಗ ದುರಂತ ಸಂಭವಿಸಿದೆ. ಅರ್ಮನ್​​ ಎಂಬಾ  ಬದುಕುಳಿದಿದ್ದು, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Source link

ಪಾತ್ರೆ ತೊಳೆಯುವ ಸ್ಪಾಂಜ್‌ಗಳ ಸ್ವಚ್ಛತೆಯ ಬಗ್ಗೆ ಇರಲಿ ತುಸು ಹೆಚ್ಚು ಕಾಳಜಿ – Kannada News | Do you know what happens if you don’t clean kitchen sponges often?

ಅಡುಗೆ ಮನೆಯನ್ನು (kitchen) ಪ್ರತಿಯೊಬ್ಬರೂ ಸಹ ಕ್ಲೀನ್‌ ಆಗಿ ಇಟ್ಟುಕೊಳ್ಳುತ್ತಾರೆ. ಅದರಲ್ಲೂ ಆರೋಗ್ಯದ ದೃಷ್ಟಿಯಿಂದ ಸಿಂಕ್‌, ಪಾತ್ರೆಗಳ ಸ್ವಚ್ಛತೆಯ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುತ್ತಾರೆ, ಆದರೆ ಪಾತ್ರೆ ತೊಳೆಯುವ ಸ್ಪಾಂಜ್, ಸ್ಕ್ರಬ್ಬರ್‌ಗಳ ಸ್ವಚ್ಛತೆಯ ಬಗ್ಗೆ ಹೆಚ್ಚಿನವರು ಗಮನ ಹರಿಸುವುದೇ ಇಲ್ಲ. ಕೊಳಕಾದ ಸ್ಪಾಂಜ್‌ಗಳನ್ನೇ ವರ್ಷಗಟ್ಟಲೇ ಬಳಸುತ್ತಿರುತ್ತಾರೆ. ಸ್ಪಾಂಜ್‌ ಅನ್ನೋ ಅಡುಗೆ ಮನೆಯಲ್ಲಿರುವ ಸೈಲೆಂಟ್‌ ಕಿಲ್ಲರ್‌ ಹಾನಿಕಾರಕ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿದ್ದು, ಇದು ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಆರೋಗ್ಯದ ದೃಷ್ಟಿಯಿಂದ ಪಾತ್ರೆ ತೊಳೆಯುವ ಸ್ಪಾಂಜ್‌ನ  ಶುಚಿಗೊಳಿಸುವಿಕೆ ಮತ್ತು ಅದರ ಮುಕ್ತಾಯ ದಿನಾಂಕದ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

ಪಾತ್ರೆ ತೊಳೆಯುವ ಸ್ಪಾಂಜ್‌ಗಳಲ್ಲಿ ಬ್ಯಾಕ್ಟೀರಿಯಾ ಏಕೆ ಬೆಳೆಯುತ್ತದೆ?

ಅಡುಗೆಮನೆಯ ಸ್ಪಂಜುಗಳು ಯಾವಾಗಲೂ ಒದ್ದೆಯಾಗಿರುತ್ತವೆ ಮತ್ತು ಆಹಾರ ತ್ಯಾಜ್ಯದೊಂದಿಗೆ ಸಂಪರ್ಕಕ್ಕೆ ಬರುತ್ತವೆ. ಕೆಲವೊಮ್ಮೆ, ಅವು ಶೌಚಾಲಯದ ಸೀಟಿಗಿಂತ ಹೆಚ್ಚಿನ ಕೊಳೆಯನ್ನು ಹೊಂದಿರಬಹುದು. ಈ ತೇವಾಂಶ, ಕೊಳೆ ಇ. ಕೋಲಿ ಮತ್ತು ಇತರ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯಲು ಸೂಕ್ತವಾದ ಸ್ಥಳವಾಗಿದೆ.  ಈ ಬ್ಯಾಕ್ಟೀರಿಯಾಗಳು ಸ್ಪಂಜಿನಿಂದ ಪಾತ್ರೆಗಳು ಮತ್ತು ಇತರ ಅಡುಗೆಮನೆಯ ಮೇಲ್ಮೈಗಳಿಗೆ ಹರಡುತ್ತವೆ, ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಮತ್ತು ಈ ಬ್ಯಾಕ್ಟೀರಿಯಾ ದೇಹವನ್ನು ಪ್ರವೇಶಿಸಿದರೆ ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವಿನಂತಹ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಮುಖ್ಯವಾಗಿ ವೃದ್ಧರು ಮತ್ತು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗಲು ಕಾರಣವಾಗುತ್ತದೆ.

ಅಡುಗೆಮನೆಯ ಸ್ಪಾಂಜ್‌ಗಳನ್ನು ಎಷ್ಟು ಬಾರಿ ಬದಲಾಯಿಸಬೇಕು?

ನಿಮ್ಮ ಅಡುಗೆಮನೆಯ ಸ್ಪಂಜುಗಳು ಮತ್ತು ಸ್ಕ್ರಬ್ಬರ್‌ಗಳನ್ನು  ನಿಯಮಿತವಾಗಿ ಬದಲಾಯಿಸುವುದು ಮುಖ್ಯ. ಸ್ಪಂಜುಗಳನ್ನು ಪ್ರತಿ 1 ರಿಂದ 2 ವಾರಗಳಿಗೊಮ್ಮೆ ಬದಲಾಯಿಸಬೇಕು,  ಬ್ರಷ್‌ಗಳನ್ನು ಪ್ರತಿ 1 ರಿಂದ 2 ತಿಂಗಳಿಗೊಮ್ಮೆ ಬದಲಾಯಿಸಬೇಕು.

ಇದನ್ನೂ ಓದಿ: ಕಲೆ, ಪಾಚಿ ಕಟ್ಟಿದ ಪ್ಲಾಸ್ಟಿಕ್‌ ಬಕೆಟ್‌ಗಳನ್ನು ನಿಮಿಷದಲ್ಲೇ ಕ್ಲೀನ್‌ ಮಾಡುತ್ತೆ ಮನೆಮದ್ದು

ಸ್ವಾಂಜ್‌ಗಳನ್ನು ಸ್ವಚ್ಛವಾಗಿಡುವ ಸರಳ ಮಾರ್ಗಗಳು:

  • ಪ್ರತಿ ಬಳಕೆಯ ನಂತರ ಸ್ಪಂಜುಗಳು ಮತ್ತು ಬ್ರಷ್‌ಗಳನ್ನು ಚೆನ್ನಾಗಿ ತೊಳೆಯಿರಿ.
  • ಬೆಚ್ಚಗಿನ ನೀರು ಮತ್ತು ಸಾಬೂನಿನಿಂದ ಪ್ರತಿದಿನ ಅವುಗಳನ್ನು ಸ್ವಚ್ಛಗೊಳಿಸಿ.
  • ಒದ್ದೆಯಾದ ಸ್ಪಾಂಜ್ ಅನ್ನು ಒಂದು ನಿಮಿಷ ಮೈಕ್ರೋವೇವ್ ಮಾಡಿ ಅಥವಾ ಕುದಿಯುವ ನೀರಿನಲ್ಲಿ ಮುಳುಗಿಸಿ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಯಾವಾಗಲೂ ಸ್ಪಾಂಜ್‌ಗಳನ್ನು ಒಣ ಸ್ಥಳದಲ್ಲಿ ಸಂಗ್ರಹಿಸಿ.
  • ಬ್ಯಾಕ್ಟೀರಿಯಾ ಮತ್ತು ವಾಸನೆಯನ್ನು ತೆಗೆದುಹಾಕಲು ಅಡಿಗೆ ಸೋಡಾ ಉತ್ತಮ ಮನೆಮದ್ದಾಗಿದೆ. ಇದನ್ನು ಸ್ಪಂಜಿನ ಮೇಲೆ ಸಿಂಪಡಿಸಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ನಂತರ ಚೆನ್ನಾಗಿ ತೊಳೆಯಿರಿ. ಇದು ಸ್ಪಾಂಜ್‌ಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

18 ವರ್ಷಗಳಿಂದ ಆರ್​ಸಿಬಿ ತಂಡದಲ್ಲಿದ್ದ ಫಿಸಿಯೋಗೆ ಭಾವುಕ ವಿದಾಯ – Kannada News | RCB’s Emotional Farewell to Long Serving Physio Evan Speechly After 18 Years, Kohli Pays Tribute

ಹಾಲಿ ಚಾಂಪಿಯನ್ ಆರ್​ಸಿಬಿ ತನ್ನ ಮುಂದಿನ ಪಂದ್ಯವನ್ನು ಮೇ 7 ರಂದು ಲಕ್ನೋ ಸೂಪರ್​ಜೈಂಟ್ಸ್ ವಿರುದ್ಧ ಏಕನಾ ಕ್ರೀಡಾಂಗಣದಲ್ಲಿ ಆಡಲಿದೆ. ಈ ಪಂದ್ಯಕ್ಕಾಗಿ ತಂಡ ಕೂಡ ತಯಾರಿ ನಡೆಸುತ್ತಿದೆ. ಏಕೆಂದರೆ ಪ್ಲೇ ಆಫ್ ದೃಷ್ಟಿಯಿಂದ ಆರ್​ಸಿಬಿ ತಂಡಕ್ಕೆ ಉಳಿದ ಪಂದ್ಯಗಳ ಗೆಲುವು ಅತ್ಯಗತ್ಯವಾಗಿದೆ. ಈ ನಡುವೆ ಆರ್​ಸಿಬಿ ಫ್ರಾಂಚೈಸಿ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಸತತ 18 ವರ್ಷಗಳ ಕಾಲ ಆರ್​ಸಿಬಿ ತಂಡದ ಫಿಸಿಯೋ ಆಗಿ ಕೆಲಸ ಮಾಡಿದ್ದ ಇವಾನ್ ಸ್ಪೀಚ್ಲಿ ಅವರಿಗೆ ಭಾವುಕ ವಿದಾಯವನ್ನು ಹೇಳಿದೆ.

ವಾಸ್ತವವಾಗಿ 2008 ರಲ್ಲಿ ಆರ್​ಸಿಬಿ ತಂಡದ ಫಿಸಿಯೋ ಆಗಿ ನೇಮಕಗೊಂಡಿದ್ದ ಇವಾನ್ ಸ್ಪೀಚ್ಲಿ ಮೂಲತಃ ದಕ್ಷಿಣ ಆಫ್ರಿಕಾದವರು. ಸತತ 18 ವರ್ಷಗಳ ಕಾಲ ಅಂದರೆ 2008 ರಿಂದ 2025 ರ ವರೆಗೆ ಆರ್​ಸಿಬಿ ತಂಡದಲ್ಲಿದ್ದ ಫಿಸಿಯೋ ಇವಾನ್ ಸ್ಪೀಚ್ಲಿ ಕಳೆದ ವರ್ಷವಷ್ಟೇ ತಮ್ಮ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು. ಅಂದರೆ ಆರ್​ಸಿಬಿ ತಂಡವನ್ನು ಮೊಟ್ಟ ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಮಾಡಿದ್ದ ಬಳಿಕ ಇವಾನ್ ಸ್ಪೀಚ್ಲಿ ತಂಡವನ್ನು ತೊರೆದಿದ್ದರು.

18 ವರ್ಷಗಳ ಕಾಲ ಆಟಗಾರರನ್ನು ಫಿಟ್ ಆಗಿಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಸ್ಪೀಚ್ಲಿ ಅವರನ್ನು ಸನ್ಮಾನಿಸಲು ಆರ್‌ಸಿಬಿ ನಿರ್ಧರಿಸಿತ್ತು. ಈ ಕಾರಣಕ್ಕಾಗಿ, ಅವರನ್ನು ವಿಶೇಷವಾಗಿ ಆಹ್ವಾನಿಸಿ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ವಿಶೇಷ ಕೈಗಡಿಯಾರವನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ, ಕೊಹ್ಲಿ ಸ್ಪೀಚ್ಲಿ ಬಗ್ಗೆ ತಮ್ಮ ಗೌರವ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು, ಆ 18 ವರ್ಷಗಳಲ್ಲಿ, ಆರ್‌ಸಿಬಿಯಲ್ಲಿ ಬೇರೆಯವರಿಗಿಂತ ಸ್ಪೀಚ್ಲಿ, ಬಸು ಮತ್ತು ಮೇನಕಾ ಅವರೊಂದಿಗೆ ಹೆಚ್ಚು ಸಮಯ ಕಳೆದಿದ್ದೇನೆ ಎಂದು ಹೇಳಿದರು.

Source link

PM Modi Speech Live ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಗೆದ್ದ ಬಿಜೆಪಿ, ಮೋದಿ ಭಾಷಣದ ನೇರಪ್ರಸಾರ – Kannada News | PM Narendra Modi Speech on BJP Victory in West Bengal, Assam, Puducherry Assembly Election Latest News in Kannada

ನವದೆಹಲಿ, (ಮೇ 04): ಪಂಚ ರಾಜ್ಯ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಭರ್ಜರಿ ಬಹುತಮದತ್ತ ಪಡೆದುಕೊಂಡಿದೆ. ಇನ್ನು ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಭರ್ಜರಿ ಗೆಲುವಿನತ್ತ ಸಾಗುತ್ತಿದ್ದರೆ, ಕೇರಳದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮುಖ್ಯವಾಗಿ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಬಹುಮತ ಪಡೆದಕೊಂಡಿದ್ದು, ಇದರೊಂದಿಗೆ 15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಆಡಳಿತಕ್ಕೆ ಬಿಜೆಪಿ ಬ್ರೇಕ್ ಹಾಕಿದೆ. ಇನ್ನು ಈ ಅಭೂತ ಪೂರ್ವ ಗೆಲುವನ್ನು ಕಾರ್ಯಕರ್ತರೊಂದಿಗೆ ಆಚರಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೆಹಲಿಯ ಬಿಜೆಪಿ ಕಚೇರಿಎ ಆಗಮಿಸಿದ್ದು, ಇದೇ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದು, ಏನೆಲ್ಲಾ ಹೇಳುತ್ತಿದ್ದಾರೆ ಎನ್ನುವ ನೇರಪ್ರಸಾರ ಇಲ್ಲಿದೆ ನೋಡಿ.

Source link

ಜನನಾಯಗನ್ ‘ಸೇಡು’?; ಬಿಜೆಪಿ ಕಾರಣಕ್ಕೆ ಎಐಎಡಿಎಂಕೆ ಬೇಡ ಅಂತಾರಾ ವಿಜಯ್?; ದಳಪತಿ ಮುಂದಿರುವ ಆಯ್ಕೆಗಳೇನು? – Kannada News | Thalapathi Vijay’s TVK might be few seats short of majority, here are few options for power alliance

ಚೆನ್ನೈ, ಮೇ 4: ವಿಜಯ್ ಅವರ ಟಿವಿಕೆ ಪಕ್ಷ ತನ್ನ ಚೊಚ್ಚಲ ಸ್ಪರ್ಧೆಯಲ್ಲಿ ಬಹುಮತದ ಸಮೀಪಕ್ಕೆ ಹೋಗಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ತಮಿಳಗ ವೆಟ್ರಿ ಕಳಗಂ (TVK) 107-108 ಸ್ಥಾನಗಳಲ್ಲಿ ಗೆಲುವು ಮತ್ತು ಮುನ್ನಡೆ ಹೊಂದಿದೆ. ಬಹುಮತಕ್ಕೆ ಅಗತ್ಯ ಇರುವುದು 118 ಸ್ಥಾನಗಳಿಗೆ ಸುಮಾರು 10-11 ಸ್ಥಾನಗಳ ಕೊರತೆ ಎದುರಾಗಬಹುದು. ವಿಜಯ್ ಅವರು ಈ ಕೊರತೆ ತುಂಬಿಕೊಂಡರೆ ಕಿಂಗ್ ಮೇಕರ್ ಬದಲು ಕಿಂಗ್ ಆಗುವ ಅವಕಾಶ ಇದೆ.

ವಿಜಯ್ ಯಾರೊಂದಿಗೆ ಮೈತ್ರಿ?

ದಳಪತಿ ವಿಜಯ್ ಅವರು ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಬಹುದು. ಆದರೆ, ಚುನಾವಣಾ ಪೂರ್ವದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಟಿವಿಕೆ ಈಗ ಯಾರೊಂದಿಗೆ ಸ್ನೇಹ ಬೆಳೆಸಬಹುದು?

ಇದನ್ನೂ ಓದಿ: ವಿಜಯ್​ಗೆ ಇದು ಅನಾಯಾಸವಾಗಿ ಸಿಕ್ಕ ಗೆಲುವಲ್ಲ; 17 ವರ್ಷದ ಹಿಂದೆ ನೆಟ್ಟ ಬೀಜದ ಫಲ

ಚುನಾವಣೆಗೆ ಮುನ್ನ ವಿಜಯ್ ತಮ್ಮ ರಾಜಕೀಯ ನಿಲುವನ್ನು ಬಹಳ ಸ್ಪಷ್ಟವಾಗಿ ಬಹಿರಂಗಪಡಿಸಿದ್ದರು. ಡಿಎಂಕೆ ಪಕ್ಷ ತನ್ನ ರಾಜಕೀಯ ವಿರೋಧಿ, ಬಿಜೆಪಿ ತನ್ನ ಸೈದ್ಧಾಂತಿಕ ವಿರೋಧಿ ಎಂದು ವಿಜಯ್ ಹೇಳಿದ್ದರು. ಬಿಜೆಪಿಯ ಹಲವು ವಿಚಾರಗಳನ್ನು ಅವರು ವಿರೋಧಿಸಿದ್ದಿದೆ. ಅವರ ಕೊನೆಯ ಸಿನಿಮಾ ಜನನಾಯಗನ್ ಬಿಡುಗಡೆಗೆ ಕೇಂದ್ರದ ಬಿಜೆಪಿ ತಡೆಗಲ್ಲು ಹಾಕಲು ಯತ್ನಿಸಿತು ಎನ್ನುವ ಅಸಮಾಧಾನವೂ ಅವರಿಗಿದೆ. ಹೀಗಾಗಿ, ಬಿಜೆಪಿ ಜೊತೆ ಅವರು ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ.

ಹಾಗಾದರೆ, ವಿಜಯ್ ಅವರ ಟಿವಿಕೆ ಪಕ್ಷದ ಮುಂದಿರುವ ಆಯ್ಕೆಗಳೇನು? ಟಿವಿಕೆಗೆ ಬೆಂಬಲ ಕೊಡಬಹುದಾದ ಇತರ ಪಕ್ಷಗಳ್ಯಾವುವು? ಡಿಎಂಕೆ ಜೊತೆ ಮೈತ್ರಿ ಹೊಂದಿರುವ ಇತರ ಪಕ್ಷಗಳು, ಹಾಗೂ ಬಿಜೆಪಿ ಹೊರತಾದ ಎನ್​ಡಿಎ ಮಿತ್ರ ಪಕ್ಷಗಳು ಈಗ ವಿಜಯ್ ಅವರಿಗಿರುವ ಆಯ್ಕೆಗಳಾಗಿವೆ.

ಡಿಎಂಕೆ ಎರಡನೇ ಅತಿದೊಡ್ಡ ಪಕ್ಷವಾಗಿದೆ. ಅದರೊಂದಿಗೆ ಟಿವಿಕೆ ಮೈತ್ರಿ ಸಾಧ್ಯತೆ ಕಡಿಮೆ. ಎಐಎಡಿಎಂಕೆ ಪಕ್ಷ 47 ಸ್ಥಾನಗಳನ್ನು ಪಡೆದಿದೆ. ಆದರೆ, ಬಿಜೆಪಿ ಜೊತೆಗಿದ್ದ ಕಾರಣಕ್ಕೆ ಎಐಎಡಿಎಂಕೆಯನ್ನು ವಿಜಯ್ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಾರಾ ಗೊತ್ತಿಲ್ಲ.

ಇದನ್ನೂ ಓದಿ: ಟಿವಿಕೆ ಭರವಸೆಗಳು: ಗೃಹಿಣಿಯರಿಗೆ 2,500 ರೂ, ವೃದ್ಧರಿಗೆ 3,000 ರೂ, ಉಚಿತ ಗ್ಯಾಸ್, ವಧುವಿಗೆ ಚಿನ್ನ ಇತ್ಯಾದಿ ಕೊಡುಗೆ

ಕೆಲ ವರದಿಗಳ ಪ್ರಕಾರ ಕಾಂಗ್ರೆಸ್ ಪಕ್ಷದ ಬೆಂಬಲವನ್ನು ವಿಜಯ್ ಪಡೆಯಲು ಯತ್ನಿಸಬಹುದು. ಕಾಂಗ್ರೆಸ್ ಪಕ್ಷ 5 ಸ್ಥಾನಗಳನ್ನು ಹೊಂದಿದೆ. ಟಿಎಂಕೆ ಬಹುಮತ ಪಡೆಯಲು ಇರುವ 10-11 ಸ್ಥಾನಗಳ ಕೊರತೆ ನೀಗಲು ಕಾಂಗ್ರೆಸ್ ಬಲ ಸಾಕಾಗುವುದಿಲ್ಲ. ಪಿಎಂಕೆ 5 ಸ್ಥಾನ, ಎಡಪಕ್ಷಗಳು 4 ಸ್ಥಾನ, ಐಯುಎಂಎಲ್, ಡಿಎಂಡಿಕೆ ಇತ್ಯಾದಿ ಪಕ್ಷಗಳ ನೆರವನ್ನು ಪಡೆದುಕೊಂಡರೆ ಟಿಎಂಕೆ ಸರ್ಕಾರ ರಚಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 6:09 pm, Mon, 4 May 26

Source link

Exit mobile version