ಮಕ್ಕಳು ಅತಿಯಾಗಿ ಮೊಬೈಲ್ ನೋಡುವುದರಿಂದ ಆಟಿಸಂ ಅಪಾಯ ಹೆಚ್ಚಾಗಬಹುದೇ? ಇಲ್ಲಿದೆ ಡಾ. ಶೆಫಾಲಿ ನೀಡಿರುವ ಸಲಹೆ – Kannada News | Virtual Autism Warning: AIIMS Flags Infant Screen Time Dangers

ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳಿಗೂ ಮೊಬೈಲ್ ಫೋನ್ ನೀಡುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಆರೋಗ್ಯ ತಜ್ಞರು ಇದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಹಿಂದಿನಿಂದಲೂ ಎಚ್ಚರಿಸುತ್ತಿದ್ದಾರೆ. ಎಐಐಎಂಎಸ್ ನಡೆಸಿದ ಸಂಶೋಧನೆಯ ಪ್ರಕಾರ, ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಹೆಚ್ಚು ಸ್ಕ್ರೀನ್ ಟೈಮ್ (Screen Time) ನೀಡುವುದರಿಂದ “ವರ್ಚುವಲ್ ಆಟಿಸಂ” ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಹೌದು, ಡಾ. ಶೆಫಾಲಿ ಗುಲಾಟಿ ಹೇಳುವ ಪ್ರಕಾರ, 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮೊಬೈಲ್ ಬಳಕೆ ಹೆಚ್ಚಾಗಿ ಮಾಡುವುದರಿಂದ ಅವರ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಸಂಶೋಧನೆಯಲ್ಲಿ ಕಂಡುಬಂದಂತೆ, 18 ತಿಂಗಳೊಳಗೆ ಸ್ಕ್ರೀನ್ ಬಳಕೆಗೆ ಒಳಗಾದ ಮಕ್ಕಳಲ್ಲಿ ಆಟಿಸಂ ಲಕ್ಷಣಗಳು ಹೆಚ್ಚಾಗಿ ಕಂಡುಬಂದಿವೆ.

ಆಟಿಸಂ ಎಂದರೇನು?

ಆಟಿಸಂ ಒಂದು ನರಸಂಬಂಧಿತ ವ್ಯಾಧಿಯಾಗಿದ್ದು, ಇದು ಮಕ್ಕಳ ಸಂವಹನ ಮತ್ತು ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಮಕ್ಕಳು ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಮಾತನಾಡುವಲ್ಲಿ ಅಥವಾ ಸಾಮಾಜಿಕ ಸಂಪರ್ಕದಲ್ಲಿ ತೊಂದರೆ ಅನುಭವಿಸುತ್ತಾರೆ. ಸಂಶೋಧನೆಯ ಪ್ರಕಾರ, ಹೆಚ್ಚು ಸಮಯ ಮೊಬೈಲ್ ಅಥವಾ ಟಿವಿ ನೋಡುವ ಮಕ್ಕಳಲ್ಲಿ ಆಟಿಸಂ ಲಕ್ಷಣಗಳು ಹೆಚ್ಚಾಗಿರುವುದು ಕಂಡುಬಂದಿದೆ. ವಿಶೇಷವಾಗಿ ಬಾಲಕರಲ್ಲಿ ಈ ಲಕ್ಷಣಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ. ದೀರ್ಘಕಾಲ ಸ್ಕ್ರೀನ್ ಬಳಕೆ ಮಕ್ಕಳಲ್ಲಿ ಸಂವಹನ ಕೌಶಲ್ಯವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಮಕ್ಕಳಲ್ಲಿ ಆಟಿಸಂ ಇರುವುದನ್ನು ಕಂಡುಹಿಡಿಯುವುದು ಹೇಗೆ? ಲಕ್ಷಣಗಳು ಹೇಗಿರುತ್ತವೆ?

ಪೋಷಕರಿಗೆ ತಜ್ಞರ ಸಲಹೆ

ತಜ್ಞರು ಪೋಷಕರಿಗೆ ಮಕ್ಕಳೊಂದಿಗೆ ನೇರವಾಗಿ ಹೆಚ್ಚು ಮಾತನಾಡುವಂತೆ ಸಲಹೆ ನೀಡುತ್ತಾರೆ. ಮಕ್ಕಳನ್ನು ಶಾಂತವಾಗಿಡಲು ಮೊಬೈಲ್ ನೀಡುವುದನ್ನು ಕಡಿಮೆ ಮಾಡಬೇಕು. ಸ್ಕ್ರೀನ್ ಟೈಮ್ ಅನ್ನು ಹಂತ ಹಂತವಾಗಿ ಕಡಿಮೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗಬಹುದು. ಜೊತೆಗೆ ಮಕ್ಕಳಲ್ಲಿ ಆಟಿಸಂ ಲಕ್ಷಣಗಳು ಕಂಡುಬಂದರೆ ತಕ್ಷಣ ತಜ್ಞರನ್ನು ಸಂಪರ್ಕಿಸುವುದು ಮುಖ್ಯ. ಅದಲ್ಲದೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸ್ಕ್ರೀನ್ ಬಳಕೆಯನ್ನು ನಿಯಂತ್ರಿಸುವುದು ಅತ್ಯಗತ್ಯ. ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದು ಮತ್ತು ಸಂವಹನ ಹೆಚ್ಚಿಸುವುದು ಉತ್ತಮ ಭವಿಷ್ಯಕ್ಕೆ ಸಹಾಯಕವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಡಾಯ ಮಣಿಸಿ ದಾವಣಗೆರೆ ಬೈ ಎಲೆಕ್ಷನ್​ ಗೆದ್ದ ಸಮರ್ಥ್ ಶಾಮನೂರು – Kannada News | Davanagere South Bypoll: Congress’ Samarth Shamanur Defeats BJP’s Srinivas Das Kariyappa

ದಾವಣಗೆರೆ, ಮೇ 04: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರ ಮೊಮ್ಮಗ, ಕಾಂಗ್ರೆಸ್​​ ಅಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದು ಬೀಗಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪಗೆ ಸೋಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ನಡೆದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪರಾಭಯಗೊಂಡಿದೆ. ತನ್ನದೇ ಹಿಡಿತದಲ್ಲಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರವನ್ನು ಆಡಳಿತಾರೂಢ ಕಾಂಗ್ರೆಸ್​​ ಮರಳಿ ತೆಕ್ಕೆಗೆ ಪಡೆದಿದೆ.

ಯಾರಿಗೆ ಎಷ್ಟು ಮತ?

ಕಾಂಗ್ರೆಸ್​ನ ಸಮರ್ಥ್ ಶಾಮನೂರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪ ವಿರುದ್ಧ  5,708 ಮತಗಳ ಅಂತರಿಂದ ಜಯ ಸಾಧಿಸಿದ್ದಾರೆ. ಕಾಂಗ್ರೆಸ್​​ನ ಸಮರ್ಥ್ ಶಾಮನೂರುಗೆ 69,578 ಮತಗಳು ಬಿದ್ದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸ ಕರಿಯಪ್ಪಗೆ 63,870 ಮತಗಳನ್ನು ಪಡೆದಿದ್ದಾರೆ. ಇನ್ನು ಎಸ್​ಡಿಪಿಐನ ಅಫ್ಸರ್ ಕೊಡ್ಲಿಪೇಟೆಗೆ 18975 ಮತಗಳು ಮತ್ತು ನೋಟಾಗೆ 511 ಮತಗಳು ಚಲಾವಣೆಯಾಗಿವೆ.

ಕಾರ್ಯಕರ್ತರ ವಿಜಯೋತ್ಸವ

ಸಮರ್ಥ್ ಶಾಮನೂರು ಗೆಲುವಿನ ಹಿನ್ನೆಲೆ ಕಾಂಗ್ರೆಸ್​​ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದಾರೆ. ಕೆಲವರು ಮುಸ್ಲಿಂ ಮತಗಳು ವಿಭಜನೆ ಆಗುವಂತೆ ಮಾಡಿದ್ದು, ಕಾಂಗ್ರೆಸ್​​ನ 22 ಸಾವಿರ ಮತಗಳು ಬೇರೆಯವರ ಪಾಲಾಗಿವೆ. ಹೀಗಾಗಿಯೇ ಇದಕ್ಕೆ ಕಾರಣರಾದ ಮುಖಂಡರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಮುಸ್ಲಿಂ‌‌ ಮುಖಂಡ ಅಮಾನತ್ತನ್ನು ಕಾರ್ಯಕರ್ತರು ಸಮರ್ಥಿಸಿಕೊಂಡಿದ್ದಾರೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ.)

Published On – 3:05 pm, Mon, 4 May 26

Source link

ಹಸೆಮಣೆ ಏರಲು ಸಜ್ಜಾದ ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ; ಹುಡುಗ ಯಾರು? – Kannada News | Toxic movie actress Huma Qureshi Rachit Singh to wed in Mumbai this year

ಬಾಲಿವುಡ್‌ನ ಖ್ಯಾತ ನಟಿ ಹುಮಾ ಖುರೇಷಿ (Huma Qureshi) ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನಟನಾ ತರಬೇತುದಾರ ರಚಿತ್ ಸಿಂಗ್ (Rachit Singh) ಅವರೊಂದಿಗೆ ಪ್ರೀತಿಯಲ್ಲಿದ್ದ ಹುಮಾ, ಈ ವರ್ಷದ ಅಂತ್ಯಕ್ಕೆ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳಲ್ಲಿ ವರದಿ ಆಗಿರುವ ಪ್ರಕಾರ, ಈ ಜೋಡಿಯು ಅಕ್ಟೋಬರ್ ಅಂತ್ಯ ಅಥವಾ ನವೆಂಬರ್‌ನಲ್ಲಿ ಮದುವೆಯಾಗಲು ಪ್ಲ್ಯಾನ್ ಮಾಡಿದೆ. ಹುಮಾ ಖುರೇಷಿ ಅವರು ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ನಟಿಸಿದ್ದು, ಆ ಚಿತ್ರದ ಮೇಲೆ ಸಖತ್ ಭರವಸೆ ಇದೆ.

ಹುಮಾ ಖುರೇಷಿ ಮತ್ತು ರಚಿತ್ ಸಿಂಗ್ ಅವರ ವಿವಾಹ ಮಹೋತ್ಸವವು ಅತ್ಯಂತ ಆಪ್ತವಾಗಿ ನಡೆಯಲಿದ್ದು, ಕೇವಲ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಮದುವೆಯ ನಂತರ ಮುಂಬೈನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ರಿಸೆಪ್ಷನ್ ಹಮ್ಮಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಹುಮಾ ಖುರೇಷಿ ಮತ್ತು ರಚಿತ್ ಸಿಂಗ್ ಅವರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಅವರ ವಿವಾಹ ಸೇರಿದಂತೆ ಹಲವು ಸಿನಿಮಾ ಪ್ರದರ್ಶನಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಕಳೆದ ವರ್ಷವೇ ಅಮೆರಿಕದಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ ಎಂಬ ವದಂತಿಗಳೂ ಇವೆ.

ಇದಕ್ಕೂ ಮುನ್ನ ಹುಮಾ ಖುರೇಷಿ ಅವರು ನಿರ್ದೇಶಕ ಮುದಸ್ಸರ್ ಅಜೀಜ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು. ಆದರೆ 2022ರಲ್ಲಿ ಇವರು ಪರಸ್ಪರ ದೂರವಾಗಿದ್ದರು. ಆ ಬಳಿಕ ರಚಿತ್ ಸಿಂಗ್ ಜೊತೆ ಅವರಿಗೆ ಪ್ರೀತಿ ಚಿಗುರಿತು. ಈಗ ಅವರು ಮದುವೆ ಆಗಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಇದನ್ನೂ ಓದಿ: ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿ ಆಸಿಫ್ ಹತ್ಯೆ

ಸದ್ಯ ಹುಮಾ ಖುರೇಷಿ ವೃತ್ತಿಜೀವನದಲ್ಲೂ ಬ್ಯುಸಿಯಾಗಿದ್ದಾರೆ. ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಹುಮಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗೀತು ಮೋಹನ್​ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಅವರು ಎಲಿಜಬೆತ್ ಎಂಬ ಕುತೂಹಲಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಈ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

West Bengal Results: ಗೆಲುವಿನ ರಹಸ್ಯ; ಬಂಗಾಳದ ಯುವಕರು, ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟು ಗೆದ್ದ ಬಿಜೆಪಿ – Kannada News | UCC in 6 months, free bus and Rs 3000 for women Employment for Youth BJP West Bengal manifesto

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದ (West Bengal Elections) 294 ಕ್ಷೇತ್ರಗಳಲ್ಲಿ 197 ಕ್ಷೇತ್ರಗಳಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದೆ. ಟಿಎಂಸಿ 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತ ಪಡೆದು ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ಆದ 148 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಅಧಿಕಾರಕ್ಕೇರುವುದು ಖಚಿತವಾಗಿದೆ. ಈ ಬಾರಿಯ ಚುನಾವಣೆಗೂ ಮುನ್ನ ಬಿಜೆಪಿ ಪಶ್ಚಿಮ ಬಂಗಾಳಕ್ಕೆ ಯಾವೆಲ್ಲ ಭರವಸೆಗಳನ್ನು ನೀಡಿತ್ತು? ಬಿಜೆಪಿ ಸರ್ಕಾರ ರಚನೆಯಾದರೆ ಯಾವ ಸಮುದಾಯಕ್ಕೆ ಹೆಚ್ಚು ಲಾಭವಾಗಲಿದೆ ಎಂಬುದರ ವಿವರ ಇಲ್ಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯಾದ ‘ಸಂಕಲ್ಪ ಪತ್ರ’ವನ್ನು ಬಿಡುಗಡೆ ಮಾಡಿದ್ದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ 7ನೇ ವೇತನ ಆಯೋಗ ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವ ಭರವಸೆಯನ್ನು ಬಿಜೆಪಿ ನೀಡಿತ್ತು. ಬಿಜೆಪಿ ನೀಡಿದ ಭರವಸೆಗಳಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಹೀಗಾಗಿ, ಮಹಿಳೆಯರು ಬಿಜೆಪಿಗೆ ಹೆಚ್ಚು ಮತ ಹಾಕಿರುವ ಸಾಧ್ಯತೆಯಿದೆ. ಪಶ್ಚಿಮ ಬಂಗಾಳಕ್ಕೆ ಬಿಜೆಪಿ ನೀಡಿರುವ ಭರವಸೆಗಳ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ! ಕೊನೆಗೂ ಮಮತಾರನ್ನು ಸೋಲಿಸಿದ್ಹೇಗೆ ಬಿಜೆಪಿ? ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಮಾಹಿತಿ

  1. ಎಲ್ಲಾ ಸರ್ಕಾರಿ ನೌಕರರು ಮತ್ತು ಸಂಬಳ ಪಡೆಯುವ ಕಾರ್ಮಿಕರಿಗೆ ತುಟ್ಟಿ ಭತ್ಯೆ (ಡಿಎ) ನೀಡಲಾಗುವುದು.
  2. ಹೊಸ ಬಿಜೆಪಿ ಸರ್ಕಾರದ ಅಡಿಯಲ್ಲಿ ಪ್ರತಿಯೊಬ್ಬ ಉದ್ಯೋಗಿಯ ಘನತೆಯನ್ನು ಎತ್ತಿಹಿಡಿಯಲು 7ನೇ ವೇತನ ಆಯೋಗವನ್ನು ಜಾರಿಗೆ ತರಲಾಗುವುದು.
  3. ಪ್ರತಿಯೊಬ್ಬ ಮಹಿಳೆಯ ಬ್ಯಾಂಕ್ ಖಾತೆಗಳಲ್ಲಿ 3,000 ರೂ.ಗಳನ್ನು ಹಾಕಲಾಗುವುದು.
  4. ಪೊಲೀಸ್ ಪಡೆ ಸೇರಿದಂತೆ ಪಶ್ಚಿಮ ಬಂಗಾಳದ ಎಲ್ಲ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲಾಗುವುದು.
  5. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು.
  6. ನಿರುದ್ಯೋಗಿ ಯುವಕರಿಗೆ 3,000 ಆರ್ಥಿಕ ನೆರವು ನೀಡಲಾಗುವುದು.
  7. ಎಲ್ಲಾ ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.
  8. ಬಡ ಕುಟುಂಬದ ಗರ್ಭಿಣಿಯರಿಗೆ 6 ಪೌಷ್ಟಿಕಾಂಶಗಳ ಕಿಟ್ ಮತ್ತು 21 ಸಾವಿರ ರೂ. ಹಣ ಸಹಾಯ.
  9. ಮಹಿಳೆಯರ ಉನ್ನತ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಲು ಸ್ನಾತಕೋತ್ತರ ಪದವಿಗಳಿಗೆ ಸೇರುವ ಹೆಣ್ಣುಮಕ್ಕಳಿಗೆ 50,000 ರೂ. ಹಣ.
  10. ಮೀನುಗಾರರಿಗೆ ತಿಂಗಳಿಗೆ 9,000 ರೂ. ಧನ ಸಹಾಯ
  11. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವವರನ್ನು ಉತ್ತೇಜಿಸಲು 15,000 ರೂ. ಧನ ಸಹಾಯ.
  12. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.
  13. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರದಿಂದಾಗಿ ಅರ್ಹತಾ ವಯಸ್ಸಿನ ಮಿತಿಯನ್ನು ದಾಟಿದ ಯುವಕರಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಮಾಡಲಾಗುವುದು.
  14. ಬಂಗಾಳದಲ್ಲಿ 5 ವರ್ಷಗಳಲ್ಲಿ 1 ಕೋಟಿ ಹೊಸ ಉದ್ಯೋಗಾವಕಾಶ ಸೃಷ್ಟಿಸಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ನೋಡುವವರಿಲ್ಲ, ಟಿಆರ್​ಪಿಯೂ ಇಲ್ಲ..! ಕಳೆಗುಂದಿದ ಐಪಿಎಲ್ ಜನಪ್ರಿಯತೆ – Kannada News | IPL 2026 Popularity Decline: TRP and Viewership Drop, Advertisers Lose Interest

2026 ರ ಐಪಿಎಲ್‌ನಲ್ಲಿ (IPL 2026) ಈಗಾಗಲೇ 47 ಪಂದ್ಯಗಳು ಮುಗಿದಿವೆ. ಅಂದರೆ ಐಪಿಎಲ್​ನ ಅರ್ಧ ಪ್ರಯಾಣ ಮುಗಿದಂತ್ತಾಗಿದೆ. ಆರಂಭದಲ್ಲಿ ಐಪಿಎಲ್​ಗೆ ಸಿಕ್ಕ ಬೆಂಬಲ ಪಂದ್ಯಗಳು ಮುಂದುವರೆದಂತೆ ಕಳೆಗುಂದಿದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಕಳೆದ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಬರಿ ಬ್ಯಾಟರ್​ಗಳ ಪಾರುಪತ್ಯವೇ ಹೆಚ್ಚಾಗಿರುವುದು. ಇದರ ಜೊತೆಗೆ ಇನ್ನು ಅನೇಕ ಕಾರಣಗಳು ಐಪಿಎಲ್​ ಮೇಲೆ ಅಭಿಮಾನಿಗಳು ಉತ್ಸಾಹ ಕಳೆದುಕೊಳ್ಳುವಂತೆ ಮಾಡುತ್ತಿವೆ. ಇದೀಗ ಅದಕ್ಕೆ ಪೂರಕವೆಂಬಂತೆ ಹೊರಬಿದ್ದಿರುವ ವರದಿಯೊಂದು ಐಪಿಎಲ್ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ. ವರದಿಯ ಪ್ರಕಾರ, 2026 ರ ಐಪಿಎಲ್​ನ ಟಿಆರ್​ಪಿಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಮಾತ್ರವಲ್ಲದೆ ಐಪಿಎಲ್ ವೀಕ್ಷಿಸುವವರ ಸಂಖ್ಯೆಯಲ್ಲೂ ಇಳಿಮುಖ ಕಂಡುಬಂದಿದೆ. ಇದರ ಪರಿಣಾಮವೆಂಬಂತೆ ಜಾಹೀರಾತುದಾರರ ಸಂಖ್ಯೆಯೂ ಕಡಿಮೆಯಾಗಿದೆ.

ಟಿಆರ್​ಪಿಯಲ್ಲಿ ಕುಸಿತ

ಮೊದಲಿಗೆ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ ಬಗ್ಗೆ ಹೇಳುವುದಾದರೆ.. TAM ಸ್ಪೋರ್ಟ್ಸ್ ಮತ್ತು BARC ಇಂಡಿಯಾ ನೀಡಿರುವ ವರದಿ ಪ್ರಕಾರ, ಐಪಿಎಲ್ 2026 ರ ಟಿಆರ್​ಪಿ ಶೇಕಡಾ 18.8 ರಷ್ಟು ಕಡಿಮೆಯಾಗಿದೆ. ಅಂದರೆ ಐಪಿಎಲ್ 2026 ರ ಟಿಆರ್​ಪಿ 4.57 ರಿಂದ 3.71 ಕ್ಕೆ ಇಳಿದಿದೆ. ಇದರ ಜೊತೆಗೆ ಈ ಬಾರಿಯ ಐಪಿಎಲ್ ವೀಕ್ಷಕರ ಸಂಖ್ಯೆಯೂ ಶೇ.26 ರಷ್ಟು ಕಡಿಮೆಯಾಗಿದೆ. ಅಂದರೆ ಐಪಿಎಲ್ ವೀಕ್ಷಕರ ಸಂಖ್ಯೆ 124 ಮಿಲಿಯನ್‌ನಿಂದ 113.6 ಮಿಲಿಯನ್‌ಗೆ ಕುಸಿದಿದೆ.

ಜಾಹೀರಾತುದಾರರ ನಿರಾಸಕ್ತಿ

ಐಪಿಎಲ್ 2026 ರಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾದ್ದರ ಪರಿಣಾಮವಾಗಿ ಜಾಹೀರಾತುದಾರರು ಸಹ ಆಸಕ್ತಿ ಕಳೆದುಕೊಳ್ಳುತ್ತಿರುವಂತೆ ತೋರುತ್ತಿದೆ. ಐಪಿಎಲ್ 2026 ಜಾಹೀರಾತುದಾರರು ಶೇಕಡಾ 31 ರಷ್ಟು ಕುಸಿತ ಕಂಡಿದ್ದಾರೆ. ಹಿಂದೆ, ಜಾಹೀರಾತುದಾರರ ಸಂಖ್ಯೆ 65 ಮೀರಿತ್ತು, ಆದರೆ ಈಗ ಅದು 45 ಕ್ಕೆ ಕುಸಿದಿದೆ.

ಇಂತಹ ಪರಿಸ್ಥಿತಿಗೆ ಕಾರಣವೇನು?

ಈಗ ಪ್ರಶ್ನೆ ಏನೆಂದರೆ, ಟಿಆರ್‌ಪಿ, ವೀಕ್ಷಕರ ಸಂಖ್ಯೆ ಮತ್ತು ಜಾಹೀರಾತುದಾರರ ಸಂಖ್ಯೆಯಲ್ಲಿನ ಕುಸಿತಕ್ಕೆ ಕಾರಣವೇನು? ಎಂಬುದು. ಇದಕ್ಕೆ ಕಾರಣ, ಲೀಗ್‌ನ ಸ್ವರೂಪದ ದೀರ್ಘೀಕರಣ, ಪಂದ್ಯಗಳನ್ನು ಫ್ಲಾಟ್ ಪಿಚ್‌ಗಳಲ್ಲಿ ಆಡಿಸುತ್ತಿರುವುದು ಮತ್ತು ಫ್ಯಾಂಟಸಿ ಅಪ್ಲಿಕೇಶನ್‌ಗಳ ಮೇಲಿನ ನಿಷೇಧ ಸೇರಿದಂತೆ ಹಲವಾರು ಕಾರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಫ್ಲಾಟ್ ಪಿಚ್‌ಗಳಲ್ಲಿ ಪಂದ್ಯಗಳನ್ನು ಆಯೋಜನೆ ಮಾಡುತ್ತಿರುವುದರಿಂದ ಕೇವಲ ಬ್ಯಾಟರ್​ಗಳ ಅಬ್ಬರವೇ ಹೆಚ್ಚಿದೆ. ಇದರಿಂದ ಆಟದಲ್ಲಿನ ಸಮತೋಲನೆ ಮಾಯಾವಾಗಿರುವುದು ಅಭಿಮಾನಿಗಳ ನಿರಾಸಕ್ತಿಗೆ ಕಾರಣವಾಗಿದೆ.

SRH vs KKR: ಸುನಿಲ್ ನರೈನ್ ‘ಡಬಲ್ ಸೆಂಚುರಿ’; ಐಪಿಎಲ್​ನಲ್ಲಿ ಈ ಸಾಧನೆ ಮಾಡಿದ ಮೊದಲ ವಿದೇಶಿಗ

ಹಾಗೆಯೇ ಫ್ಯಾಂಟಸಿ ಅಪ್ಲಿಕೇಶನ್‌ಗಳ ಮೇಲಿನ ನಿಷೇಧವು ಐಪಿಎಲ್‌ನಲ್ಲಿ ಆಸಕ್ತಿಯನ್ನು ಕಡಿಮೆ ಮಾಡಿದೆ. ಇದಲ್ಲದೆ, ವೀಕ್ಷಕರ ಅಭ್ಯಾಸದಲ್ಲಿನ ಇತ್ತೀಚಿನ ಬದಲಾವಣೆಗಳು ಟಿಆರ್‌ಪಿಗಳಲ್ಲಿನ ಕುಸಿತಕ್ಕೆ ಪ್ರಮುಖ ಕಾರಣ. ಹೆಚ್ಚಿನ ವೀಕ್ಷಕರು ಈಗ ತಾವು ಬೆಂಬಲಿಸುವ ತಂಡಗಳನ್ನು ಒಳಗೊಂಡ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ತಮ್ಮ ನೆಚ್ಚಿನ ತಂಡದ ಪಂದ್ಯಗಳನ್ನು ಹೊರತುಪಡಿಸಿ ಉಳಿದ ಪಂದ್ಯಗಳನ್ನು ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಐಪಿಎಲ್​ನ​ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎಂಬುದರಲ್ಲಿ ಅನುಮಾನವಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:27 pm, Mon, 4 May 26

Source link

Free Online Courses: 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಎನ್‌ಸಿಇಆರ್‌ಟಿಯಿಂದ ಉಚಿತ ಆನ್‌ಲೈನ್ ಕೋರ್ಸ್ ಆರಂಭ! – Kannada News | NCERT SWAYAM Free Online Courses for 11th and 12th Graders: Boost Exam Prep

11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸುಲಭ ಹಾಗೂ ಸರಳಗೊಳಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (NCERT) ಈಗ ಮಹತ್ವದ ಉಪಕ್ರಮವನ್ನು ಕೈಗೊಂಡಿದೆ. ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ‘ಸ್ವಯಂ’ (SWAYAM) ಪೋರ್ಟಲ್ ಮೂಲಕ ಉಚಿತ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. ಈ ಉಪಕ್ರಮವು ವಿದ್ಯಾರ್ಥಿಗಳಿಗೆ ವಿಷಯಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡುವುದಲ್ಲದೆ, ಮನೆಯಿಂದಲೇ ತಮ್ಮ ಪರೀಕ್ಷಾ ಸಿದ್ಧತೆಯನ್ನು ಬಲಪಡಿಸಲು ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗಲು ಉತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಈ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ಒಟ್ಟು 11 ಪ್ರಮುಖ ವಿಷಯಗಳಲ್ಲಿ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಲೆಕ್ಕಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಭೌತಶಾಸ್ತ್ರ, ಗಣಿತ, ಮನೋವಿಜ್ಞಾನ, ಸಮಾಜಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಇಂಗ್ಲಿಷ್ ವಿಷಯಗಳು ಒಳಗೊಂಡಿವೆ. ಪ್ರತಿಯೊಂದು ಕೋರ್ಸ್ ಅನ್ನು 21 ವಾರಗಳ ಅವಧಿಗೆ ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಹೆಚ್ಚಿನ ಮಾನಸಿಕ ಒತ್ತಡವಿಲ್ಲದೆ ತಮ್ಮದೇ ಆದ ವೇಗದಲ್ಲಿ ಅಧ್ಯಯನ ಮಾಡಲು ಇಲ್ಲಿ ಅವಕಾಶವಿದೆ. ಇದು ವಿದ್ಯಾರ್ಥಿಗಳಿಗೆ ಪಠ್ಯದ ಪ್ರತಿಯೊಂದು ಅಂಶವನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ನೆರವಾಗಲಿದೆ.

ಈ ಆನ್‌ಲೈನ್ ಕಲಿಕಾ ವಿಧಾನದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದ ಮಾಹಿತಿಯಷ್ಟೇ ಅಲ್ಲದೆ, ಪರಿಣಿತರಿಂದ ವೀಡಿಯೊ ಉಪನ್ಯಾಸಗಳು, ಚರ್ಚಾ ವೇದಿಕೆಗಳು ಮತ್ತು ತಜ್ಞರ ನೇರ ಮಾರ್ಗದರ್ಶನದಂತಹ ಆಧುನಿಕ ಸೌಲಭ್ಯಗಳು ಲಭ್ಯವಿವೆ. ವಿದ್ಯಾರ್ಥಿಗಳು ತಮ್ಮ ಕಲಿಕಾ ಮಟ್ಟವನ್ನು ಪರೀಕ್ಷಿಸಿಕೊಳ್ಳಲು ಕಾಲಕಾಲಕ್ಕೆ ರಸಪ್ರಶ್ನೆಗಳು ಮತ್ತು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಕೋರ್ಸ್ ಪೂರ್ಣಗೊಳಿಸಿದ ನಂತರ ನಡೆಯುವ ಅಂತಿಮ ಪರೀಕ್ಷೆಯಲ್ಲಿ ಯಶಸ್ವಿಯಾದವರಿಗೆ ಅಧಿಕೃತ ಪ್ರಮಾಣಪತ್ರವನ್ನು ಸಹ ನೀಡಲಾಗುತ್ತದೆ, ಇದು ಅವರ ಶೈಕ್ಷಣಿಕ ವೃತ್ತಿಜೀವನಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡಲಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಈ ಯೋಜನೆಯ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಅದರ ನಮ್ಯತೆ. ವಿದ್ಯಾರ್ಥಿಗಳು ಹಗಲು ಅಥವಾ ರಾತ್ರಿ ಎನ್ನದೆ ತಮಗೆ ಅನುಕೂಲಕರವಾದ ಸಮಯದಲ್ಲಿ ಮತ್ತು ಎಲ್ಲಿಂದಲಾದರೂ ಈ ಕೋರ್ಸ್‌ಗಳನ್ನು ಪ್ರವೇಶಿಸಬಹುದು. ಈ ವ್ಯವಸ್ಥೆಯು ಅವರ ಶಾಲಾ ಶಿಕ್ಷಣದ ಜೊತೆಗೆ ಹೆಚ್ಚಿನ ಅಭ್ಯಾಸ ಮಾಡಲು ಪೂರಕವಾಗಿದೆ. ಆಸಕ್ತ ವಿದ್ಯಾರ್ಥಿಗಳು ಸೆಪ್ಟೆಂಬರ್ ೧ರ ಒಳಗಾಗಿ ಸ್ವಯಂ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಮೌಲ್ಯಮಾಪನ ಪ್ರಕ್ರಿಯೆಯು ಸೆಪ್ಟೆಂಬರ್ 7 ರಿಂದ ಆರಂಭವಾಗಿ, ಸೆಪ್ಟೆಂಬರ್ 15 ರಂದು ಅಂತಿಮ ಪರೀಕ್ಷೆಗಳೊಂದಿಗೆ ಈ ಕೋರ್ಸ್ ಮುಕ್ತಾಯಗೊಳ್ಳಲಿದೆ.

ಅರ್ಜಿ ಸಲ್ಲಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳು ಮೊದಲು ಸ್ವಯಂ (SWAYAM) ಪೋರ್ಟಲ್‌ಗೆ ಭೇಟಿ ನೀಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಲ್ಲಿ ತಮಗೆ ಇಷ್ಟವಾದ ವಿಷಯವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಸಾಮಗ್ರಿಗಳನ್ನು ಉಚಿತವಾಗಿ ಪಡೆಯಬಹುದು. ನಿಗದಿತ ಕಾರ್ಯಯೋಜನೆಗಳು ಮತ್ತು ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಉನ್ನತ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಎನ್‌ಸಿಇಆರ್‌ಟಿಯ ಈ ಯೋಜನೆಯು ಅತ್ಯುತ್ತಮ ವೇದಿಕೆಯಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಎಂಕೆಗೆ ಭರ್ಜರಿ ಶಾಕ್: ಭದ್ರಕೋಟೆಯಲ್ಲೇ ಹಾಲಿ ಸಿಎಂ ಸ್ಟಾಲಿನ್​​ ಮಣಿಸಿದ ಟಿವಿಕೆ

ಚೆನ್ನೈ, ಮೇ 04: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಮುಖ್ಯಮಂತ್ರಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಭ್ಯರ್ಥಿ ಎಂ.ಕೆ. ಸ್ಟಾಲಿನ್ ಉತ್ತರ ಚೆನ್ನೈನ ಕೊಳತ್ತೂರು ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ವಿ.ಎಸ್​.ಬಾಬು ವಿರುದ್ಧ ಸೋಲುಂಡಿದ್ದು, ಆಡಳಿತಾರೂಢ ಪಕ್ಷಕ್ಕೆ ನಟ ದಳಪತಿ ವಿಜಯ್​​ ಶಾಕ್​​ ಮೇಲೆ ಶಾಕ್​​ ನೀಡಿದ್ದಾರೆ. ಉಭಯ ಅಭ್ಯರ್ಥಿಗಳ ನಡುವೆ ಆರಂಭದಿಂದಲೂ ಭಾರಿ ಪೈಪೋಟಿ ಇತ್ತಾದರೂ ಅಂತಿಮವಾಗಿ ಎಂ.ಕೆ. ಸ್ಟಾಲಿನ್ ಟಿವಿಕೆ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ.

ಭಧ್ರ ಕೋಟೆಯಲ್ಲಿಯೇ ಡಿಎಂಕೆಗೆ ಮುಖಭಂಗ

ಕಳೆದ ಕೆಲವು ವರ್ಷಗಳಿಂದ ಕೊಳತ್ತೂರು ಕ್ಷೇತ್ರ ಡಿಎಂಕೆಯ ಭದ್ರ ಕೋಟೆಯಾಗಿದ್ದು, ಎಂ.ಕೆ. ಸ್ಟಾಲಿನ್ 2011ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2021ರ ಚುನಾವಣೆಯಲ್ಲಿ ಅವರು ಎಐಎಡಿಎಂಕೆ ಅಭ್ಯರ್ಥಿ ಆದಿ ರಾಜಾರಾಮ್ ವಿರುದ್ಧ 70,000ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಆದರೆ ಈ ಬಾರಿಯ ಚುನಾವಣಾ ಫಲಿತಾಂಶ ಡಿಎಂಗೆ ಮರ್ಮಾಘಾತ ಉಂಟುಮಾಡಿದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

ಭಾರತದ ‘ಪ್ಯಾಡ್‌ಮ್ಯಾನ್’ಗೆ ನೋಬೆಲ್ ಗೌರವ: 2026ರ ಶಾಂತಿ ಪ್ರಶಸ್ತಿಗೆ ಅರುಣಾಚಲಂ ಮುರುಗಾನಂದಂ ನಾಮನಿರ್ದೇಶನ! – Kannada News | Arunachalam Muruganantham: India’s Padman Eyes 2026 Nobel Peace Prize for Hygiene Work

ದೆಹಲಿ, ಮೇ.4: ಕೊಯಮತ್ತೂರಿನ ಸಾಮಾಜಿಕ ಉದ್ಯಮಿ ಹಾಗೂ ‘ಪ್ಯಾಡ್‌ಮ್ಯಾನ್’ ಖ್ಯಾತಿಯ ಅರುಣಾಚಲಂ ಮುರುಗಾನಂದಂ ಅವರು 2026ರ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ನಾಮನಿರ್ದೇಶನದ ಸುದ್ದಿ ಕೇಳಿ ತಮಗೆ ಮೊದಲು ನಂಬಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ನೋಬೆಲ್ ಪ್ರಶಸ್ತಿಗೆ ನಾವಾಗಿಯೇ ಹೆಸರು ಸಲ್ಲಿಸಲು ಅಥವಾ ಕುಟುಂಬದವರು ಶಿಫಾರಸು ಮಾಡಲು ಸಾಧ್ಯವಿಲ್ಲ, ಇದನ್ನು ಮೂರನೇ ವ್ಯಕ್ತಿಗಳೇ ಮಾಡಬೇಕು ಎಂದು ಹೇಳಿದ್ದಾರೆ. ಪಾಂಡಿಚೇರಿಯ ಅರವಿಂದ್ ಕಣ್ಣಿನ ಆಸ್ಪತ್ರೆಯ ಡೀನ್ ಮತ್ತು ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ತಂಡಗಳು ಮುರುಗಾನಂದಂ ಅವರ ಹೆಸರನ್ನು ನಾಮನಿರ್ದೇಶನಕ್ಕಾಗಿ ಸಲ್ಲಿಸಿದ್ದವು. ಇವರು ಸಲ್ಲಿಸಿದ ನಾಮನಿರ್ದೇಶನವು ಕೇವಲ 24 ಗಂಟೆಗಳ ಒಳಗಾಗಿ ಅಂಗೀಕರಿಸಲ್ಪಟ್ಟಿದೆ.

ಯಾರು ಈ ಅರುಣಾಚಲಂ ಮುರುಗಾನಂದಂ?

ಅರುಣಾಚಲಂ ಮುರುಗಾನಂದಂ ಅವರು ಗ್ರಾಮೀಣ ಮಹಿಳೆಯರ ಋತುಸ್ರಾವದ ನೈರ್ಮಲ್ಯಕ್ಕಾಗಿ ಕಡಿಮೆ ವೆಚ್ಚದ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರವನ್ನು ಸಂಶೋಧಿಸಿದವರು. ಶಾಲೆಯಿಂದ ಅರ್ಧಕ್ಕೇ ಹೊರಬಂದಿದ್ದ ಇವರು, ತಮ್ಮ ಪತ್ನಿ ಅನುಭವಿಸುತ್ತಿದ್ದ ತೊಂದರೆಯನ್ನು ಕಂಡು ಈ ಯಂತ್ರವನ್ನು ತಯಾರಿಸಲು ನಿರ್ಧರಿಸಿದರು. ಇವರನ್ನು 2026ರ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಈ ನಾಮನಿರ್ದೇಶನವನ್ನು ಪಾಂಡಿಚೇರಿಯ ಅರವಿಂದ್ ಕಣ್ಣಿನ ಆಸ್ಪತ್ರೆಯ ಡೀನ್ ಮತ್ತು ಅಮೆರಿಕದ ತಂಡಗಳು ಸಲ್ಲಿಸಿದ್ದು, ಕೇವಲ 24 ಗಂಟೆಗಳಲ್ಲಿ ಇದನ್ನು ಅಂಗೀಕರಿಸಲಾಗಿದೆ.

ಇಲ್ಲಿದೆ ನೋಡಿ ಸ್ಟೋರಿ:

ಪ್ರಮುಖ ಸಾಧನೆಗಳು

ಮಾರುಕಟ್ಟೆಯಲ್ಲಿ ದೊರೆಯುವ ಪ್ಯಾಡ್‌ಗಳಿಗಿಂತ ಹತ್ತನೇ ಒಂದು ಭಾಗದಷ್ಟು ಕಡಿಮೆ ಬೆಲೆಯಲ್ಲಿ ಪ್ಯಾಡ್ ತಯಾರಿಸುವ ಯಂತ್ರವನ್ನು ಕಂಡುಹಿಡಿದರು. ಜಯಶ್ರೀ ಇಂಡಸ್ಟ್ರೀಸ್ ಎಂಬ ಕಂಪನಿಯನ್ನು ಸ್ಥಾಪಿಸಿ. ಇವರ ಈ ಸಂಸ್ಥೆಯ ಮೂಲಕ ಭಾರತದಾದ್ಯಂತ ಮತ್ತು 11ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸಾವಿರಾರು ಯಂತ್ರಗಳನ್ನು ಅಳವಡಿಸಲಾಗಿದೆ. ಈ ಯಂತ್ರಗಳ ಮೂಲಕ ಸಾವಿರಾರು ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ‘R’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ಸ್ವಭಾವ ಹೇಗಿರುತ್ತೆ ಗೊತ್ತಾ?

ಇವರಿಗೆ ಸಿಕ್ಕ ಗೌರವಗಳು:

ಭಾರತ ಸರ್ಕಾರವು 2016ರಲ್ಲಿ ಇವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ. 2014ರಲ್ಲಿ ಟೈಮ್ಸ್ ನಿಯತಕಾಲಿಕೆಯು ಇವರನ್ನು ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸೇರಿಸಿತ್ತು. ಇವರ ಜೀವನದ ಹೋರಾಟವನ್ನು ಆಧರಿಸಿ ಅಕ್ಷಯ್ ಕುಮಾರ್ ಅಭಿನಯದ ‘ಪ್ಯಾಡ್ ಮ್ಯಾನ್’ ಸಿನಿಮಾ ನಿರ್ಮಿಸಲಾಗಿದೆ. ಇವರ ಕಥೆಯನ್ನು ಹೇಳುವ ‘ಪೀರಿಯಡ್. ಎಂಡ್ ಆಫ್ ಸೆಂಟೆನ್ಸ್’ ಎಂಬ ಸಾಕ್ಷ್ಯಚಿತ್ರವು ಆಸ್ಕರ್ ಪ್ರಶಸ್ತಿಯನ್ನೂ ಪಡೆದಿದೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆಯಲ್ಲಿ ಯತ್ನಾಳ್​​ ಪ್ರಚಾರ ಮಾಡಿದ್ರೂ ಬಿಜಿಪಿ ಏಕೆ ಗೆಲ್ಲಲಿಲ್ಲ: ಸಚಿವ ತಿಮ್ಮಾಪುರ್ ಹೇಳಿದ್ದಿಷ್ಟು – Kannada News | Minister Timmapur on Bagalkote By election Victory: Congresss Collective Effort and Development Wins

ಬಾಗಲಕೋಟೆ, ಮೇ 04: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗಳಿಸಿದ್ದಾರೆ. ಈ ಮಾಧ್ಯಮದವರೊಂದಿಗೆ ಮಾತನಾಡಿದ ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ್, ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಎಲ್ಲ ಮತದಾರರಿಗೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ. ಮಾಜಿ ಸಚಿವರು, ಮಾಜಿ ಶಾಸಕರು ನಿರಂತರವಾಗಿ ಪ್ರಚಾರ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರ  ಶ್ರಮದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದರು. ಬಿಜೆಪಿಯು ಹಿಂದುತ್ವದ ಟ್ರಂಪ್ ಕಾರ್ಡ್ ಬಳಸಿ, ಯತ್ನಾಳ್​​​ರನ್ನ ಕರೆತಂದಿದ್ದರು ಎಂಬ ಪ್ರಶ್ನಗೆ ಉತ್ತರಿಸಿ ಅವರು, ಪದೇ ಪದೇ ಹಿಂದುತ್ವ, ಹಿಂದೂ ಎಂದು ಭಾಷಣ ಮಾಡುತ್ತಿದ್ದರು. ನಾವು, ಉಮೇಶ್ ಮೇಟಿ ಹಿಂದೂ ಅಲ್ಲವಾ ಎಂದು ಪ್ರಚಾರ ಮಾಡಿದ್ದೇವು. ಎಲ್ಲರ ಶ್ರಮದಿಂದ ಕಾಂಗ್ರೆಸ್ ಗೆದ್ದಿದೆ. ನಮ್ಮ ಸರಕಾರದ ಅಭಿವೃದ್ಧಿ ಕಾರ್ಯ ಗ್ಯಾರಂಟಿಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಬಿಜೆಪಿಯವರನ್ನು ಜನ ತಿರಸ್ಕಾರ ಮಾಡಿದ್ದಾರೆ ಎಂಬುದಕ್ಕೆ ಈ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

West Bengal Election Results: ಮಧ್ಯಾಹ್ನದೊಳಗೆ ದೀದಿ ಟಾಟಾ ಬೈ-ಬೈ ಹೇಳ್ತಾರೆ; ಚುನಾವಣೆಗೂ ಮೊದಲೇ ಭವಿಷ್ಯ ನುಡಿದಿದ್ದರು ಅಮಿತ್ ಶಾ – Kannada News | By 1 o clock Didi Tata Bye Bye Amit Shah Prediction Old Video on West Bengal Election results goes Viral

ನವದೆಹಲಿ, ಮೇ 4: ಪಶ್ಚಿಮ ಬಂಗಾಳದ (West Bengal Assembly Elections Results) ಮಹಾರಾಣಿಯಾಗಿ ಮೆರೆದ ಮಮತಾ ಬ್ಯಾನರ್ಜಿ (Mamata Banerjee) ಅವರ ಯುಗಾಂತ್ಯವಾಗಿದೆ. 15 ವರ್ಷಗಳಿಂದ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಈ ಬಾರಿ ತೀವ್ರ ಮುಖಭಂಗ ಅನುಭವಿಸಿದೆ. ಬದಲಾವಣೆ ಬಯಸಿರುವ ಜನರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೇಸರಿ ಧ್ವಜ ಹಾರಿಸಲೇಬೇಕೆಂದು ಹಠ ತೊಟ್ಟಿದ್ದ ಬಿಜೆಪಿ ಈ ಬಾರಿ ಭಾರೀ ಪ್ರಚಾರ ಕಾರ್ಯ ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಕೇಂದ್ರ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪಶ್ಚಿಮ ಬಂಗಾಳದ ಮೂಲೆ-ಮೂಲೆಯಲ್ಲೂ ಸಾಲು-ಸಾಲು ಪ್ರಚಾರದ ರ್ಯಾಲಿ ನಡೆಸಿದ್ದರು. ಅದರ ಪರಿಣಾಮವಾಗಿ ದೀದಿ ತೆರೆಮರೆಗೆ ಸರಿದಿದ್ದಾರೆ. ಇಂದಿನ ಫಲಿತಾಂಶದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಚುನಾವಣಾ ಪ್ರಚಾರದ ವೇಳೆಯೇ ಭವಿಷ್ಯ ನುಡಿದಿರುವ ವಿಡಿಯೋವೊಂದು ಮತ್ತೆ ಟ್ರೆಂಡಿಂಗ್​​ನಲ್ಲಿದೆ.

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಗಡಿ ದಾಟಿದ್ದು, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸತತ ನಾಲ್ಕನೇ ಅವಧಿಗೆ ಮುಖ್ಯಮಂತ್ರಿಯಾಗುವ ಕನಸು ನುಚ್ಚುನೂರಾಗಿದೆ. ಇದರ ನಡುವೆ ಕೇಂದ್ರ ಸಚಿವ ಅಮಿತ್ ಶಾ ಅವರು ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತದ ಅಂತ್ಯದ ಭವಿಷ್ಯ ನುಡಿದಿರುವ ಹಳೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ 148 ಸ್ಥಾನಗಳ ಬಹುಮತದ ಗಡಿಯನ್ನು ಬಿಜೆಪಿ ದಾಟಿದೆ. ಹೀಗಾಗಿ, ಬಿಜೆಪಿ ಸರ್ಕಾರ ರಚನೆಯಾಗುವುದು ಖಚಿತವಾಗಿದೆ.

ಇದನ್ನೂ ಓದಿ: Election Commission of India Results 2026: ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ ಫಲಿತಾಂಶ ಆನ್‌ಲೈನ್‌ನಲ್ಲಿ ನೋಡುವುದು ಹೇಗೆ? ಇಲ್ಲಿವೆ ಸಿಂಪಲ್ ಸ್ಟೆಪ್ಸ್!

ಪಶ್ಚಿಮ ಮೇದಿನಿಪುರದ ಚಾಂಡಿಪುರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಅಮಿತ್ ಶಾ, “ಮೇ 4ರಂದು ಬೆಳಗ್ಗೆ ಮತ ಎಣಿಕೆ ಶುರುವಾಗುತ್ತದೆ. 8 ಗಂಟೆಗೆ ಬ್ಯಾಲೆಟ್ ಬಾಕ್ಸ್​ಗಳನ್ನು ತೆರೆಯಲಾಗುತ್ತದೆ. 9 ಗಂಟೆಗೆ ಮೊದಲ ಸುತ್ತಿನ ಮತ ಎಣಿಕೆ ಮುಗಿಯುತ್ತದೆ. 10 ಗಂಟೆಗೆ 2ನೇ ಸುತ್ತಿನ ಮತ ಎಣಿಕೆ ಮುಗಿಯುತ್ತದೆ. ಮಧ್ಯಾಹ್ನ 1 ಗಂಟೆಯೊಳಗೆ ದೀದಿ ಟಾಟಾ, ಬೈ-ಬೈ ಹೇಳಿ ಮನೆಗೆ ಹೊರಡುತ್ತಾರೆ. ಸಂಜೆ ಫಲಿತಾಂಶ ಪ್ರಕಟವಾಗುವ ಅಗತ್ಯವೂ ಇರುವುದಿಲ್ಲ. ಅವರ ಸಮಯ ಮುಗಿದಿದೆ” ಎಂದು ಲೇವಡಿ ಮಾಡಿದ್ದರು. ಆ ಮಾತು ಇದೀಗ ನಿಜವಾಗಿದೆ. ಮಧ್ಯಾಹ್ನದೊಳಗೇ ಬಿಜೆಪಿ ಬಹುಮತ ದಾಟಿದ್ದು, ಟಿಎಂಸಿಗೆ ಭಾರೀ ಮುಖಭಂಗವಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ

ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿಯ ಪ್ರಕಾರ, ಬಿಜೆಪಿ 193 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಕೇವಲ 93 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. ಇದರೊಂದಿಗೆ, ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಸರ್ಕಾರ ರಚಿಸಲು ಬಿಜೆಪಿ ಸಜ್ಜಾಗಿದೆ. ತೃಣಮೂಲ ಕಾಂಗ್ರೆಸ್‌ನ 15 ವರ್ಷಗಳ ಆಡಳಿತ ಮತ್ತು ಅದಕ್ಕೂ ಮೊದಲು 34 ವರ್ಷಗಳ ಕಾಲ ಕಮ್ಯುನಿಸ್ಟರ ಆಳ್ವಿಕೆಯನ್ನು ಕಂಡ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಏರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version