ಟಿವಿಕೆ ಭರವಸೆಗಳು: ಗೃಹಿಣಿಯರಿಗೆ 2,500 ರೂ, ವೃದ್ಧರಿಗೆ 3,000 ರೂ, ಉಚಿತ ಗ್ಯಾಸ್, ವಧುವಿಗೆ ಚಿನ್ನ ಇತ್ಯಾದಿ ಕೊಡುಗೆ – Kannada News | Vijay’s TVK Tamilaga Vettri Kazhagam Tamil Nadu election manifesto, poll promises highlights

ಟಿವಿಕೆ ಗೆಲುವನ್ನು ಸಂಭ್ರಮಿಸುತ್ತಿರುವ ಮಹಿಳೆImage Credit source: PTI

ಚೆನ್ನೈ, ಮೇ 4: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ಸಿನಿಮಾ ಸ್ಟಾರ್ ದಳಪತಿ ವಿಜಯ್ (Thalapathi Vijay) ನೇತೃತ್ವದ ಟಿವಿಕೆ ಪಕ್ಷ ಅಚ್ಚರಿ ಗೆಲುವು ದಾಖಲಿಸಿದೆ. ಇತ್ತೀಚೆಗಷ್ಟೇ ಆರಂಭಗೊಂಡ ಟಿವಿಕೆ ಪಕ್ಷ ಈ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಯುವಕರಿಗೆ ಹೊಸ ಆಡಳಿತದ ಭರವಸೆ ಮೂಡಿಸಿದ ಜೊತೆಗೆ ಪ್ರಣಾಳಿಕೆ ಮೂಲಕ ಹಲವು ಭರವಸೆಗಳನ್ನೂ ಟಿವಿಕೆ ನೀಡಿತ್ತು. ಮನೆಯ ಯಜಮಾನ್ತಿಗೆ ಮಾಸಿಕ 2,500 ರೂ ಸೇರಿದಂತೆ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ, ರೈತರಿಗೆ ಭರ್ಜರಿ ಕೊಡುಗೆಗಳನ್ನು ನೀಡುವ ಭರವಸೆಯನ್ನು ನೀಡಲಾಗಿತ್ತು.

ಟಿವಿಕೆ ಚುನಾವಣಾ ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು

ಮನೆ ಮತ್ತು ಮಹಿಳೆಯರಿಗೆ ಕೊಡುಗೆಗಳು

  • ಮನೆಯ ಯಜಮಾನ್ತಿಗೆ ತಿಂಗಳಿಗೆ 2,500 ರೂ ಸಹಾಯಧನ
  • ಅನ್ನಪೂರ್ಣಿ ಸೂಪರ್ ಸಿಕ್ಸ್ ಸ್ಕೀಮ್ ಮೂಲಕ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ಆರು ಉಚಿತ ಎಲ್​ಪಿಜಿ ಸಿಲಿಂಡರ್
  • ವಾರ್ಷಿಕ 5 ಲಕ್ಷ ರೂಗಿಂತ ಕಡಿಮೆ ಆದಾಯವಿರುವ ಕುಟುಂಬದ ಹೆಣ್ಮಗಳ ಮದುವೆಗೆ 8 ಗ್ರಾಮ್ ಚಿನ್ನ ಮತ್ತು ರೇಷ್ಮೆ ಸೀರೆ ಕೊಡುಗೆ.
  • ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂವರೆಗೆ ಬಡ್ಡಿರಹಿತ ಸಾಲ.
  • ವೆಟ್ರಿ ಪ್ರಯಾಣಂ ಸ್ಕೀಮ್ ಮೂಲಕ ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ.
  • ಕಾಮರಾಜರ್ ಕಲಿವಿ ಉರುದಿ ತಿಟ್ಟಂ ಸ್ಕೀಮ್ ಮೂಲಕ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ನೆರವಾಗಲು ಪೋಷಕರಿಗೆ ವರ್ಷಕ್ಕೆ 15,000 ರೂ ಸಹಾಯಧನ.
  • ಪ್ರತೀ ನವಜಾತ ಶಿಶುವಿಗೆ ಚಿನ್ನದ ಉಂಗುರ ಮತ್ತು ವೆಲ್ಕಮ್ ಕಿಟ್.
  • ರೇಷನ್ ಅಂಗಡಿಗಳು, ಶಾಲೆ ಮತ್ತು ಕಾಲೇಜುಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಯ ವ್ಯವಸ್ಥೆ.

ಇದನ್ನೂ ಓದಿ: ವಿಜಯ್ vs ಎನ್‌ಟಿಆರ್: ಇಬ್ಬರು ಸೂಪರ್‌ಸ್ಟಾರ್‌ಗಳು, ಎರಡು ಭಿನ್ನ ದಾರಿಗಳು; ಹೀಗೊಂದು ಹೋಲಿಕೆ

ವಿದ್ಯುತ್ ಮತ್ತು ಅವಶ್ಯತೆಗಳು

  • ಪ್ರತೀ ಮನೆಗೆ 200 ಯುನಿಟ್​ಗಳಷ್ಟು ಉಚಿತ ವಿದ್ಯುತ್
  • ಎಲ್ಲಾ ಮನೆಗಳಿಗೂ ಉಚಿತ ಕುಡಿಯುವ ನೀರಿನ ಸಂಪರ್ಕ.
  • ಕೃಷಿ ಮತ್ತು ರೈತರಿಗೆ ಬೆಂಬಲ
  • ಕೃಷಿ ಸಹಕಾರಿ ಬೆಳೆ ಸಾಲಗಳು ಶೇ. 50ರಷ್ಟು ಮನ್ನಾ
  • ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆ ಮತ್ತು ಕೃಷಿ ಬೆಂಬಲ.

ಯುವಜನರು, ವಿದ್ಯಾರ್ಥಿಗಳಿಗೆ ನೆರವು

  • ನಿರುದ್ಯೋಗಿಗಳಿಗೆ ಧನಸಹಾಯ ನೀಡಲಾಗುತ್ತದೆ. ಪದವೀಧರರಿಗೆ ತಿಂಗಳಿಗೆ 4,000 ರೂ, ಹಾಗು ಡಿಪ್ಲೊಮಾ ಆದವರಿಗೆ ತಿಂಗಳಿಗೆ 2,000-2,500 ರೂ ನೆರವು.
  • 5 ಲಕ್ಷ ಯುವಕರಿಗೆ ಸ್ಟೈಪೆಂಡ್ ಜೊತೆಗೆ ಇಂಟರ್ನ್​ಶಿಪ್.
  • 5 ಲಕ್ಷ ಹೊಸ ಸರ್ಕಾರಿ ನೌಕರಿಗಳು
  • 20 ಲಕ್ಷ ರೂವರೆಗೆ ಅಡಮಾನರಹಿತ ಶಿಕ್ಷಣ ಸಾಲ
  • ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತವಾದ ಎಐ ಶಕ್ತ ಕೋಚಿಂಗ್ ಸೌಲಭ್ಯ
  • ನೂರು ಕಾಮರಾಜರ್ ಶಾಲೆಗಳು

ಇದನ್ನೂ ಓದಿ: ದಳಪತಿ ಕಿಂಗ್ ಮೇಕರ್ ಅಲ್ಲ, ಕಿಂಗ್; ತಮಿಳುನಾಡಿಗೆ ವಿಜಯ್ ಮುಂದಿನ ಸಿಎಂ?

ಸಾಮಾಜಿಕ ಭದ್ರತೆ ಮತ್ತು ಆರೋಗ್ಯ

  • ವೃದ್ಧರಿಗೆ ಮತ್ತು ವಿಶೇಷ ಚೇತನರಿಗೆ ಮಾಸಿಕ 3,000 ರೂ ಪಿಂಚಣಿ
  • ಪ್ರತೀ ಕುಟುಂಬಕ್ಕೆ 25 ಲಕ್ಷ ರೂ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ. ಆಧುನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ, ಉಚಿತ ಆರೋಗ್ಯ ತಪಾಸಣೆ ಇತ್ಯಾದಿ ಸೌಲಭ್ಯ.
  • ತಮಿಳುನಾಡನ್ನು ಮಾದಕವಸ್ತು ಮುಕ್ತ ಮಾಡಲು ವಿವಿಧ ಕ್ರಮಗಳು

ಮೀನುಗಾರರಿಗೆ ಕೊಡುಗೆಗಳು

  • ಮೀನುಗಾರಿಕೆ ಕಡಿಮೆ ಇರುವ ಸೀಸನ್​ನಲ್ಲಿ ಮೀನುಗಾರರಿಗೆ 27,000 ರೂ ಸಹಾಯಧನ
  • ಮೀನುಗಾರಿಕೆ ದೋಣಿಗೆ ಬಳಸುವ ಡೀಸಲ್​ಗೆ ಸಬ್ಸಿಡಿ, 25 ಲಕ್ಷ ರೂ ಅಪಘಾತ ವಿಮೆ
  • ಮೀನುಗಾರರಿಗೆ ಖಾಯಂ ವಸತಿ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದಲ್ಲಿ ದೀದಿ ಸಾಮ್ರಾಜ್ಯ ಪತನ! ಕೊನೆಗೂ ಮಮತಾರನ್ನು ಸೋಲಿಸಿದ್ಹೇಗೆ ಬಿಜೆಪಿ? ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಮಾಹಿತಿ – Kannada News | West Bengal Election Result 2026: How BJP Defeated Mamata Banerjee; Analysis of Muslim and Women Vote Shifts

ಕೈಬಿಟ್ಟ ಮಹಿಳಾ ಮತದಾರರು: ಮಮತಾ ಬ್ಯಾನರ್ಜಿ ಅವರ ‘ಲಕ್ಷ್ಮಿ ಭಂಡಾರ್’ ಯೋಜನೆಗೆ ಪ್ರತಿಯಾಗಿ ಬಿಜೆಪಿ ಘೋಷಿಸಿದ ಮಹಿಳೆಯರಿಗೆ ಮಾಸಿಕ 3,000 ರೂ. ಮತ್ತು ಉಚಿತ ಬಸ್ ಪ್ರಯಾಣದ ಭರವಸೆ ಮಹಿಳಾ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ, ದೀದಿಯ ಸಾಂಪ್ರದಾಯಿಕ ಮಹಿಳಾ ಮತಬ್ಯಾಂಕ್ ಈ ಬಾರಿ ಚದುರಿರುವುದು ಸ್ಪಷ್ಟವಾಗಿದೆ.

Source link

Thalapathy Vijay: ದಳಪತಿ ವಿಜಯ್ ಓದಿದ್ದು ಎಷ್ಟು ಗೊತ್ತಾ? ಬಾಲ್ಯದಿಂದ ರಾಜಕೀಯದವರೆಗಿನ ಆಸಕ್ತಿದಾಯಕ ಮಾಹಿತಿ ಇಲ್ಲಿದೆ – Kannada News | Thalapathy Vijay’s Political Debut: TVK’s 2026 Election Strategy and Journey from Actor to Leader

ದಳಪತಿ ವಿಜಯ್ ಓದಿದ್ದು ಎಷ್ಟು ಗೊತ್ತಾ

ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದ ತಾರೆಯರು ಆಡಳಿತದ ಚುಕ್ಕಾಣಿ ಹಿಡಿದ ಉದಾಹರಣೆಗಳು ಸಾಕಷ್ಟಿವೆ. ಈಗ ಅದೇ ಹಾದಿಯಲ್ಲಿ ಸಾಗಿರುವ ‘ದಳಪತಿ‘ ವಿಜಯ್, ತಮ್ಮ ‘ತಮಿಳಗ ವೆಟ್ಟಿ ಕಳಗಂ’ (TVK) ಪಕ್ಷದ ಮೂಲಕ 2026ರ ವಿಧಾನಸಭಾ ಚುನಾವಣಾ ಕಣದಲ್ಲಿ ಅಚ್ಚರಿಯ ಮುನ್ನಡೆ ಸಾಧಿಸುವ ಸೂಚನೆ ನೀಡಿದ್ದಾರೆ. ನಟನೆಯಿಂದ ರಾಜಕೀಯದವರೆಗೆ ಅವರ ಈ ಸುದೀರ್ಘ ಪಯಣ ಮತ್ತು ಅವರ ಶೈಕ್ಷಣಿಕ ಹಿನ್ನೆಲೆಯ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಜೋಸೆಫ್ ವಿಜಯ್ ‘ದಳಪತಿ’ಯಾದ ಕಥೆ:

ಜೂನ್ 22, 1974 ರಂದು ಜನಿಸಿದ ಇವರ ಪೂರ್ಣ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್. ಇವರು ಮೂಲತಃ ಸಿನಿಮಾ ಕುಟುಂಬದಿಂದ ಬಂದವರು. ತಂದೆ ಎಸ್.ಎ. ಚಂದ್ರಶೇಖರ್ ಖ್ಯಾತ ನಿರ್ದೇಶಕರಾದರೆ, ತಾಯಿ ಶೋಭಾ ಚಂದ್ರಶೇಖರ್ ಪ್ರತಿಭಾವಂತ ಹಿನ್ನೆಲೆ ಗಾಯಕಿ. ಮನೆಯಲ್ಲಿದ್ದ ಕಲಾತ್ಮಕ ವಾತಾವರಣವು ವಿಜಯ್ ಅವರನ್ನು ಬಾಲ್ಯದಲ್ಲೇ ಬಣ್ಣದ ಲೋಕದತ್ತ ಸೆಳೆಯಿತು.

ಶಿಕ್ಷಣ ಮತ್ತು ನಟನೆಯ ನಡುವಿನ ಸಮತೋಲನ:

ವಿಜಯ್ ತಮ್ಮ ಶಾಲಾ ಶಿಕ್ಷಣವನ್ನು ಚೆನ್ನೈನ ಫಾತಿಮಾ ಮತ್ತು ಬಾಲಲೋಕ್ ಶಾಲೆಯಲ್ಲಿ ಪೂರ್ಣಗೊಳಿಸಿದರು. ಓದಿನಲ್ಲಿ ಸಾಧಾರಣ ಆಸಕ್ತಿ ಹೊಂದಿದ್ದರೂ, ನಟನೆಯಲ್ಲಿ ಅವರಿಗಿದ್ದ ಉತ್ಸಾಹ ಅಪಾರವಾಗಿತ್ತು. ನಂತರ ಅವರು ಚೆನ್ನೈನ ಪ್ರತಿಷ್ಠಿತ ಲೊಯೊಲಾ ಕಾಲೇಜಿನಲ್ಲಿ ‘ವಿಶುವಲ್ ಕಮ್ಯುನಿಕೇಶನ್’ (Visual Communication) ಕೋರ್ಸ್‌ಗೆ ಸೇರಿದರು. ಆದರೆ, ಆ ಹೊತ್ತಿಗಾಗಲೇ ಅವರ ಮನಸ್ಸು ಸಂಪೂರ್ಣವಾಗಿ ಬೆಳ್ಳಿಪರದೆಯ ಮೇಲೆ ನೆಟ್ಟಿತ್ತು.

ಪದವಿ ಅರ್ಧಕ್ಕೆ ನಿಲ್ಲಲು ಕಾರಣವೇನು?

ಕಾಲೇಜು ದಿನಗಳಲ್ಲಿದ್ದಾಗಲೇ ವಿಜಯ್‌ಗೆ ಸಿನಿಮಾಗಳಲ್ಲಿ ನಟಿಸಲು ಸಾಲು ಸಾಲು ಅವಕಾಶಗಳು ಬರಲಾರಂಭಿಸಿದವು. ಒಂದೆಡೆ ಚಿತ್ರೀಕರಣದ ಒತ್ತಡ, ಮತ್ತೊಂದೆಡೆ ಅಭ್ಯಾಸ; ಈ ಎರಡನ್ನೂ ನಿಭಾಯಿಸುವುದು ಕಷ್ಟವಾಯಿತು. ಆಗ ವಿಜಯ್ ಒಂದು ದಿಟ್ಟ ನಿರ್ಧಾರ ತೆಗೆದುಕೊಂಡರು. ಓದಿಗಿಂತ ನಟನೆಯೇ ತಮ್ಮ ಜೀವನದ ಗುರಿ ಎಂದು ನಿರ್ಧರಿಸಿ, ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಪೂರ್ಣಪ್ರಮಾಣದಲ್ಲಿ ಚಿತ್ರರಂಗಕ್ಕೆ ಧುಮುಕಿದರು.

ಇದನ್ನೂ ಓದಿ: ವಿಜಯದ ಬೆನ್ನಲ್ಲೇ ವಿಜಯ್​ ನಿವಾಸಕ್ಕೆ ನಟಿ ತ್ರಿಷಾ ಆಗಮನ

ಚಿತ್ರರಂಗದ ಯಶಸ್ಸು ಮತ್ತು ಗೌರವ:

ತಮ್ಮ 18ನೇ ವಯಸ್ಸಿನಲ್ಲಿ ‘ನಾಳಯ ತೀರ್ಪು’ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದ ವಿಜಯ್, ಇದುವರೆಗೆ 69 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಂದು ಅವರು ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಮತ್ತು ಜನಪ್ರಿಯ ನಟರಲ್ಲಿ ಒಬ್ಬರು. ಅಂದು ಪದವಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೂ, ಚಿತ್ರರಂಗಕ್ಕೆ ಅವರು ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ 2007ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಯಿತು.

ರಾಜಕೀಯ ಪ್ರವೇಶ ಮತ್ತು 2026ರ ಸವಾಲು:

2009ರಲ್ಲಿ ‘ವಿಜಯ್ ಮಕ್ಕಳ್ ಅಯ್ಯಕಂ’ ಎಂಬ ಅಭಿಮಾನಿ ಸಂಘಟನೆಯ ಮೂಲಕ ಸಮಾಜ ಸೇವೆ ಆರಂಭಿಸಿದ ವಿಜಯ್, ಇಂದು ‘ಟಿವಿಕೆ’ ಪಕ್ಷದ ಮೂಲಕ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಆರಂಭಿಕ ಪ್ರವೃತ್ತಿಗಳ ಪ್ರಕಾರ, ವಿಜಯ್ ಅವರ ಸಿನಿಮಾ ವರ್ಚಸ್ಸು ಈಗ ಮತಗಳಾಗಿ ಪರಿವರ್ತನೆಯಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದು ತಮಿಳುನಾಡು ರಾಜಕೀಯದಲ್ಲಿ ಹೊಸ ಬದಲಾವಣೆಯ ಮುನ್ಸೂಚನೆಯಾಗಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:37 pm, Mon, 4 May 26

Source link

Tamil Nadu Election Result: ತಮಿಳುನಾಡಲ್ಲಿ ದಳಪತಿ ಕೀರ್ತಿ ಪತಾಕೆ, ಕಾಂಗ್ರೆಸ್​​​ಗೆ ಬಿಗ್ ಆಫರ್ – Kannada News | Tamil Nadu Assembly Election Result: TVK Invites Congress For Alliance In Tamil Nadu As Party Falls Short Of Majority

ಚೆನ್ನೈ, (ಮೇ 04): ತಮಿಳುನಾಡು  ರಾಜಕೀಯದಲ್ಲಿ (Tamilnadu Politics) ದಳಪತಿ ಸಂಚಲನ ಮೂಡಿಸಿದ್ದಾರೆ. ದ್ರಾವಿಡ ಪಕ್ಷಗಳ ದಶಕಗಳ ಪ್ರಾಬಲ್ಯವನ್ನು ಮುರಿದ ದಳಪತಿ ವಿಜಯ್ (Vijay) ನೇತೃತ್ವದ ತಮಿಳಗಾ ವೆಟ್ರಿ ಕಲಗಂ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ (Election) ಭರ್ಜರಿ ಸಾಧನೆ ಮಾಡಿದೆ. ಇದರೊಂದಗೆ ತಮಿಳುನಾಡಿನಲ್ಲಿ ದಶಕಗಳಿಂದ ನಡೆಯುತ್ತಿರುವ ದ್ರಾವಿಡ ರಾಜಕೀಯದ ಲೆಕ್ಕಾಚಾರವನ್ನೇ ವಿಜಯ್ ಉಲ್ಟಾ ಮಾಡಿದ್ದಾರೆ. ಇನ್ನು ಟಿವಿಕೆ ಗಮನಾರ್ಹ ಸಾಧನೆ ಬಗ್ಗೆ ವಿಜಯ್ ತಂದೆ ಎಸ್​.ಎ.ಚಂದ್ರಶೇಖರ್ ಫುಲ್ ಖುಷ್ ಆಗಿದ್ದು, ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್​ಗೆ ಆಫರ್ ನೀಡಿದ್ದಾರೆ.

ಟಿವಿಕೆ ಗೆದ್ದಿರುವುದಕ್ಕೆ ಮಾಧ್ಯಮಗಳ ಜತೆ ಖುಷಿ ಹಂಚಿಕೊಂಡಿರುವ ವಿಜಯ್ ತಂದೆ ಎಸ್​.ಎ.ಚಂದ್ರಶೇಖರ್,ಟಿವಿಕೆಗೆ ಬಹುಮತ ಬಂದಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಳ್ಳಲು ಸಿದ್ಧ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ರಾಹುಲ್​​ ಮಾತು ಕೇಳದೆ ತಮಿಳುನಾಡಲ್ಲಿ ಕೆಟ್ಟಿತಾ ಕಾಂಗ್ರೆಸ್​​? ಅಸಲಿಗೆ ಆಗಿದ್ದೇನು?

Source link

ಚುನಾವಣಾ ವ್ಯವಸ್ಥೆಯಲ್ಲಿ ‘SIR’ ಮಾಸ್ಟರ್ ಸ್ಟ್ರೋಕ್: ನಕಲಿ ಮತಗಳಿಗೆ ಬ್ರೇಕ್, ನೈಜ ಜನಾದೇಶಕ್ಕೆ ದಾರಿ – Kannada News | ECI’s SIR: Masterstroke Against Fake Votes, Ensuring India’s True Mandate

ನವದೆಹಲಿ, ಮೇ 04: ಭಾರತೀಯ ಚುನಾವಣಾ ಆಯೋಗವು ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಜಾರಿಗೊಳಿಸಿದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR) ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ, ಅದು ರಾಜಕೀಯ ಸಮೀಕರಣಗಳನ್ನೇ ಬದಲಿಸಬಲ್ಲ ಶಕ್ತಿಯಾಗಿ ಹೊರಹೊಮ್ಮಿದೆ. ಈ ಪ್ರಕ್ರಿಯೆಯು ಕೇವಲ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶ ಹೊಂದಿದ್ದರೂ, ಇದು ರಾಜಕೀಯವಾಗಿ ಭಿನ್ನ ರಾಜ್ಯಗಳಲ್ಲಿ ಭಿನ್ನ ರೀತಿಯ ಪ್ರಭಾವ ಬೀರಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ತಮಿಳುನಾಡು: ಬಿಜೆಪಿ ಅಧಿಕಾರ ಹಿಡಿಯದಿದ್ದರೂ ಪ್ರಭಾವ ಹೆಚ್ಚಿಸಿದ್ದೇಗೆ?
ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬರದೇ ಇರಲು ಅಲ್ಲಿನ ದಶಕಗಳ ಕಾಲದ ದ್ವಿಪಕ್ಷೀಯ (DMK-AIADMK) ರಾಜಕೀಯ ವ್ಯವಸ್ಥೆ ಮತ್ತು ಹೊಸದಾಗಿ ಉದಯಿಸಿರುವ ಟಿವಿಕೆ (ತಮಿಳಗ ವೆಟ್ರಿ ಕಳಗಂ) ಫ್ಯಾಕ್ಟರ್ ಕಾರಣ ಎನ್ನಲಾಗುತ್ತಿದೆ.

ಎಸ್​ಐಆರ್ ಪ್ರಭಾವ: ತಮಿಳುನಾಡಿನಲ್ಲಿ ಎಸ್​ಐಆರ್ ಪ್ರಕ್ರಿಯೆಯಡಿ ಸುಮಾರು ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿದ್ದವು, ಇದು ಕೆಲವು ನಗರ ಪ್ರದೇಶಗಳಲ್ಲಿ ಮತದಾನದ ಮೇಲೆ ಪರಿಣಾಮ ಬೀರಿದೆ.

ಬಿಜೆಪಿ ಅಧಿಕಾರಕ್ಕೆ ಬರದಿದ್ದರೂ, ತಮಿಳುನಾಡಿನಂತಹ ರಾಜ್ಯಗಳಲ್ಲಿ ಅಲ್ಪ ಮತದಾನದ ಏರಿಕೆ ಮತ್ತು ಮತದಾರರ ಪಟ್ಟಿಯ ಶುದ್ಧೀಕರಣವು ಅವರಿಗೆ ಭವಿಷ್ಯದ ಅಡಿಪಾಯ ಹಾಕಲು ಸಹಾಯ ಮಾಡಿರಬಹುದು.

ಮತ್ತಷ್ಟು ಓದಿ: ಎಸ್​ಐಆರ್ ಒತ್ತಡದಿಂದ ಬಂಗಾಳದಲ್ಲಿ 150 ಜನ ಸಾವು; ಸುಪ್ರೀಂ ಕೋರ್ಟ್​ನಲ್ಲಿ ಮಮತಾ ಬ್ಯಾನರ್ಜಿ ವಾದ

ಕೇರಳ: ಕಾಂಗ್ರೆಸ್ (UDF) ಮುನ್ನಡೆಗೆ ಕಾರಣವೇನು?
ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಲವಾದ ಪೈಪೋಟಿ ನೀಡುತ್ತಿದ್ದು, ಆರಂಭಿಕ ಪ್ರವೃತ್ತಿಗಳಲ್ಲಿ ಮುನ್ನಡೆ ಸಾಧಿಸಿದೆ.

ಮತದಾರರ ಪಟ್ಟಿಯ ಶುದ್ಧೀಕರಣ: ಕೇರಳದಲ್ಲಿ ಎಸ್​ಐಆರ್ ಪ್ರಕ್ರಿಯೆಯಿಂದಾಗಿ ಮತದಾರರ ಸಂಖ್ಯೆ 2.78 ಕೋಟಿಯಿಂದ 2.71 ಕೋಟಿಗೆ ಇಳಿಕೆಯಾಗಿದೆ.

ಸುಮಾರು 7 ಲಕ್ಷ ನಕಲಿ ಅಥವಾ ಮೃತ ಮತದಾರರ ಹೆಸರುಗಳನ್ನು ತೆಗೆದುಹಾಕಿದ್ದು ಕಾಂಗ್ರೆಸ್ ನಂತಹ ವಿರೋಧ ಪಕ್ಷಗಳಿಗೆ ‘ಲೆವೆಲ್ ಪ್ಲೇಯಿಂಗ್ ಫೀಲ್ಡ್’ಒದಗಿಸಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯ. ಆಡಳಿತಾರೂಢ ಎಲ್​ಡಿಎಫ್​ ವಿರುದ್ಧದ ಆಡಳಿತ ವಿರೋಧಿ ಅಲೆ ಮತ್ತು ಅಲ್ಪಸಂಖ್ಯಾತ ಮತಗಳ ಧ್ರುವೀಕರಣವು ಕಾಂಗ್ರೆಸ್‌ನ ಈ ಮುನ್ನಡೆಗೆ ಶಕ್ತಿ ತುಂಬಿದೆ.

ಕಲ್ಲು ಹುಡುಕುವವರಿಗೆ ಹಿನ್ನಡೆ: ಎಸ್​ಐಅರ್ ವಿಶ್ಲೇಷಣೆ
ಚುನಾವಣಾ ಆಯೋಗದ ಈ SIR ಪ್ರಕ್ರಿಯೆಯಲ್ಲಿ “ಕಲ್ಲು ಹುಡುಕುವವರು” ಅಥವಾ ದೋಷ ಹುಡುಕುವವರು ಅಂದರೆ ರಾಜಕೀಯ ಲಾಭಕ್ಕಾಗಿ ನಕಲಿ ಮತದಾರರನ್ನು ಬಳಸಿಕೊಳ್ಳುತ್ತಿದ್ದವರಿಗೆ ಈ ಬಾರಿ ದೊಡ್ಡ ಹಿನ್ನಡೆಯಾಗಿದೆ.

ನೈಜ ಮತದಾರರ ಶಕ್ತಿ: ಅಹಮದಾಬಾದ್ ಮತ್ತು ಇತರ ಸ್ಥಳಗಳಲ್ಲಿ ನಡೆದಂತೆ, ಮತದಾರರ ಪಟ್ಟಿಯ ಗಾತ್ರ ಕುಗ್ಗಿದರೂ, ಮತದಾನದ ಪ್ರಮಾಣ (Turnout) ಏರಿಕೆಯಾಗಿರುವುದು ನೈಜ ಮತದಾರರು ಪ್ರಕ್ರಿಯೆಯಲ್ಲಿ ಸಕ್ರಿಯರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಈ ಪರಿಷ್ಕೃತ ಪಟ್ಟಿಯ ಲಾಭ ಪಡೆದು ನುಸುಳುಕೋರರ ಮತಗಳನ್ನು ತಡೆದಿದೆ ಎಂದು ವಾದಿಸಿದರೆ, ಕೇರಳದಲ್ಲಿ ಇದೇ ಪ್ರಕ್ರಿಯೆಯು ಕಾಂಗ್ರೆಸ್‌ಗೆ ಆಡಳಿತ ಪಕ್ಷದ ‘ಮತಬ್ಯಾಂಕ್’ ಅಕ್ರಮಗಳನ್ನು ತಡೆಯಲು ನೆರವಾಗಿದೆ.

ಎಸ್​ಐಆರ್ ಪ್ರಕ್ರಿಯೆಯು ಯಾವುದೇ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾದ ‘ವರ’ವಲ್ಲ. ಇದು ಎಲ್ಲೆಲ್ಲಿ ಆಡಳಿತಾರೂಢ ಪಕ್ಷಗಳು ಮತದಾರರ ಪಟ್ಟಿಯಲ್ಲಿ ಗೊಂದಲ ಸೃಷ್ಟಿಸಿವೆಯೋ, ಅಲ್ಲಿ ವಿರೋಧ ಪಕ್ಷಗಳಿಗೆ (ಕೇರಳದಲ್ಲಿ ಕಾಂಗ್ರೆಸ್, ಬಂಗಾಳದಲ್ಲಿ ಬಿಜೆಪಿ) ಲಾಭ ತಂದುಕೊಟ್ಟಿದೆ. ಹಾಗಾಗಿ, ಕೇವಲ ವ್ಯವಸ್ಥೆಯಲ್ಲಿ ದೋಷ ಹುಡುಕುವ ಬದಲು, ಪಾರದರ್ಶಕ ವ್ಯವಸ್ಥೆಯನ್ನು ಒಪ್ಪಿಕೊಂಡವರು ಗೆಲುವಿನ ಹಾದಿಯಲ್ಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜಕೀಯಕ್ಕೆ ಎಂಟ್ರಿ ಕೊಡಲು ಸಿನಿಮಾ ರಂಗವನ್ನೇ ವೇದಿಕೆ ಮಾಡಿಕೊಂಡ ವಿಜಯ್ – Kannada News | Thalapathy Vijay’s Political Rise: How Cinema Paved His Path to Power and Public Voice

ದಳಪತಿ ವಿಜಯ್ ಅವರು ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಹಲವು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಅವರು ಸಂಪಾದಿಸಿದ ಅಭಿಮಾನ ಈಗ ಮತವಾಗಿ ಬದಲಾಗಿದೆ. ಅವರು ತಮಗೆ ಸಿಕ್ಕ ಬಣ್ಣದ ಲೋಕದ ವೇದಿಕೆಯನ್ನು ಸರಿಯಾದ ರೂಪದಲ್ಲಿ ಬಳಸಿಕೊಂಡರು. ಜನರ ನೋವು-ನಲಿವುಗಳಿಗೆ ಸ್ಪಂದಿಸುವ ಒಂದು ದೊಡ್ಡ ವೇದಿಕೆಯಾಗಿ ಬೆಳೆದಿದೆ. ಆರಂಭದಲ್ಲಿ ಕಮರ್ಷಿಯಲ್ ಮತ್ತು ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡ ವಿಜಯ್, ನಂತರದ ವರ್ಷಗಳಲ್ಲಿ ತಮಿಳುನಾಡಿನ ಪ್ರಬಲ ರಾಜಕೀಯ ಧ್ವನಿಯಾಗಿ ರೂಪಾಂತರಗೊಂಡರು. ಅವರ ಈ ಪಯಣದಲ್ಲಿ ರಾಜಕೀಯ ಕಥಾಹಂದರ ಹೊಂದಿರುವ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ.

ವಿಜಯ್ ಸಿನಿಮಾಗಳಲ್ಲಿ ರಾಜಕೀಯದ ಕಿಚ್ಚು:

ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದು ಅವರ ಸಿನಿಮಾಗಳಲ್ಲಿನ ಹರಿತವಾದ ಸಂಭಾಷಣೆಗಳು ಮತ್ತು ಸಾಮಾಜಿಕ ಕಳಕಳಿ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಸಿನಿಮಾಗಳ ವಿವರ ಇಲ್ಲಿದೆ.

ಮೆರ್ಸಲ್: ಅಟ್ಲಿ ನಿರ್ದೇಶನದ ‘ಮೆರ್ಸೆಲ್’ ಸಿನಿಮಾ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿತು. ಇದು ರಾಜಕೀಯ ಹಿನ್ನೆಲೆ ಹೊಂದಿತ್ತು. ಅವರ ರಾಜಕೀಯ ಕನಸಿಗೆ ಈ ಸಿನಿಮಾ ಸಾಕಷ್ಟು ವೇಗ ನೀಡಿತು. ದೇಶದ ಆರೋಗ್ಯ ವ್ಯವಸ್ಥೆ ಮತ್ತು ಜಿಎಸ್‌ಟಿ ವಿಷಯಗಳ ಕುರಿತು ಈ ಸಿನಿಮಾ ಬೆಳಕು ಚೆಲ್ಲಿತ್ತು. ಸಾಮಾನ್ಯ ಜನರ ಪರವಾಗಿ ಧ್ವನಿ ಎತ್ತುವ ನಾಯಕನಾಗಿ ವಿಜಯ್ ಇಲ್ಲಿ ಮಿಂಚಿದ್ದರು.

ಸರ್ಕಾರ್: ರಾಜಕೀಯ ವ್ಯವಸ್ಥೆಯ ಭ್ರಷ್ಟಾಚಾರ ಹಾಗೂ ಒಂದು ಮತದ ಪ್ರಾಮುಖ್ಯತೆಯನ್ನು ಹೇಳುವ ಕಥೆಯನ್ನು ‘ಸರ್ಕಾರ್’ ಹೊಂದಿತ್ತು. ಈ ಸಿನಿಮಾ ರಿಲೀಸ್ ಬಳಿಕ ವಿಜಯ್ ರಾಜಕೀಯಕ್ಕೆ ಬರೋದು ಪಕ್ಕಾ ಎಂಬ ಮಾತುಗಳು ಕೇಳಿ ಬಂದವು. ಕಳ್ಳಮತದಾನದ ವಿರುದ್ಧ ಹೋರಾಡುವ ಎನ್‌ಆರ್​ಐ ಉದ್ಯಮಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಕತ್ತಿ : ರೈತರ ಆತ್ಮಹತ್ಯೆ ಮತ್ತು ಕಾರ್ಪೊರೇಟ್ ಕಂಪನಿಗಳ ದಬ್ಬಾಳಿಕೆಯ ವಿರುದ್ಧದ ಹೋರಾಟದ ಕಥೆಯೇ ‘ಕತ್ತಿ’. ಈ ಸಿನಿಮಾ ವಿಜಯ್ ಅವರನ್ನು ಕೇವಲ ನಟನನ್ನಾಗಿ ಅಲ್ಲದೆ, ಒಬ್ಬ ಹೋರಾಟಗಾರನನ್ನಾಗಿ ಬಿಂಬಿಸಿತು.

ತುಪ್ಪಾಕಿ: ದೇಶಪ್ರೇಮ ಮತ್ತು ಭಯೋತ್ಪಾದನೆಯ ವಿರುದ್ಧದ ಕಥೆಯನ್ನು ‘ತುಪ್ಪಾಕಿ’ ಹೊಂದಿತ್ತು. ಇದು ನಮ್ಮ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಇದು ಎತ್ತಿ ತೋರಿಸಿತ್ತು.

ಇದನ್ನೂ ಓದಿ:

ಜನ ನಾಯಗನ್: ರಾಜಕೀಯಕ್ಕೆ ಕಾಲಿಡೋದಕ್ಕೂ ಮೊದಲು ಒಂದೊಳ್ಳೆಯ ರಾಜಕೀಯ ಕಥೆ ಹೇಳುವ ಆಲೋಚನೆ ವಿಜಯ್​ಗೆ ಇತ್ತು. ಇದಕ್ಕಾಗಿ ಅವರು ‘ಜನ ನಾಯಗನ್’ ಚಿತ್ರ ಆಯ್ಕೆ ಮಾಡಿಕೊಂಡರು. ಇದು ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷಕ್ಕೆ ಸೈದ್ಧಾಂತಿಕ ಶಕ್ತಿ ತುಂಬುವಂತಿತ್ತು. ಆದರೆ, ಈ ಸಿನಿಮಾ ಅಂದುಕೊಂಡಂತೆ ತೆರೆಗೆ ಬಂದಿಲ್ಲ. ವಿಜಯ್ ಸಿಎಂ ಆದ ಬಳಿಕ ಚಿತ್ರ ತೆರೆಗೆ ಬರೋ ನಿರೀಕ್ಷೆ ಇದೆ. ಸಿನಿಮಾ ರಂಗಕ್ಕೆ ಅವರು ವಿದಾಯ ಹೇಳುವ ಸೂಚನೆ ನೀಡಿದ್ದರೂ, ಅವರು ಕಟ್ಟಿಕೊಟ್ಟ ‘ಮಾಸ್’ ಮತ್ತು ‘ಸೋಶಿಯಲ್’ ಪಾತ್ರಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿಯಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಸೋತಿದ್ದಕ್ಕೆ ವಿಜಯೇಂದ್ರ ಶಾಕ್ – Kannada News | BY Vijayendra shocked by BJP’s defeat in Bagalkot by election

ಬಾಗಲಕೋಟೆ, ಮೇ 04: ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಉಮೇಶ್​ ಮೇಟಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಸೋತಿದ್ದಾರೆ. ಈ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಬಾಗಲಕೋಟೆಯಲ್ಲಿ ಆಗಿರುವ ಹಿನ್ನಡೆಯನ್ನು ಒಪ್ಪಿಕೊಳ್ಳುತ್ತೇವೆ. ಮತದಾರರು ಕೈಹಿಡಿಯುವ ವಿಶ್ವಾಸವಿತ್ತು. ಉಪಚುನಾವಣೆಯಲ್ಲಿ ಆದ ಹಿನ್ನಡೆ ಬಗ್ಗೆ ಪರಾಮರ್ಶೆ ಮಾಡುತ್ತೇವೆ ಎಂದಿದ್ದಾರೆ. ಬಾಗಲಕೋಟೆಯಲ್ಲಿ ಮುಖ್ಯಮಂತ್ರಿಗಳು 15 ದಿನ ಬೀಡುಬಿಟ್ಟಿದ್ದರು. ಇಡೀ ಸಚಿವ ಸಂಪುಟವೇ ಬಾಗಲಕೋಟೆಯಲ್ಲಿ ಬೀಡು ಬಿಟ್ಟಿತ್ತು. ಉಪಚುನಾವಣೆಗಳ ಇತಿಹಾಸ ನಮ್ಮ ಕಣ್ಮುಂದೆ ಇದೆ. ಯಾವ ರೀತಿ ಸಂಘಟನೆ ಮಾಡಿ ಬಲ ತುಂಬಬೇಕು ಅಂತ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

ದರ್ಶನ್ ಜಾಮೀನು ಅರ್ಜಿ ವಿಚಾರಣೆ: 1 ವಾರದಲ್ಲಿ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚನೆ – Kannada News | Darshan Bail Application Hearing Supreme Court Directs Submission of Report Within 1 Week

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು (Bail) ಅರ್ಜಿ ವಿಚಾರಣೆ ಇಂದು (ಮೇ 4) ಸುಪ್ರೀಂ ಕೋರ್ಟ್​​ನಲ್ಲಿ ನಡೆದಿದೆ. ನ್ಯಾ. ಪರ್ದಿವಾಲಾ ಮತ್ತು ನ್ಯಾ. ವಿಜಯ್ ಬಿಷ್ಣೋಯಿ ಅವರ ಪೀಠದಲ್ಲಿ ವಿಚಾರಣೆ ಮಾಡಲಾಗಿದೆ. A2 ದರ್ಶನ್ (Darshan) ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡಿದ್ದಾರೆ.

‘ಆರೋಪಿ ದರ್ಶನ್​ಗೆ 5 ಸ್ಟಾರ್ ಟ್ರೀಟ್ಮೆಂಟ್ ಕೊಡಬೇಡಿ ಎಂದಿದ್ದೀರಿ. ಆದರೆ ಜೈಲು ಅಧಿಕಾರಿಗಳು ಮೂಲಭೂತ ಸವಲತ್ತನ್ನೂ ನೀಡುತ್ತಿಲ್ಲ’ ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ. ದರ್ಶನ್ ಕೇಸ್ ಪ್ರಗತಿ ಬಗ್ಗೆ 57ನೇ ಸಿಸಿಹೆಚ್ ಕೋರ್ಟ್​ನಿಂದ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ವರದಿ ಸಲ್ಲಿಸಲು ಒಂದು ವಾರದ ಗಡುವು ನೀಡಲಾಗಿದೆ.

ಜೈಲಿನಲ್ಲಿ ದರ್ಶನ್​ಗೆ ಮೂಲ ಸೌಕರ್ಯ ಒದಗಿಸಲಾಗಿದೆಯೇ ಇಲ್ಲವೇ? ಇಲ್ಲಿಯವರೆಗೂ ಎಷ್ಟು ಸಾಕ್ಷಿಗಳ ವಿಚಾರಣೆ ನಡೆದಿದೆ? ಎಷ್ಟು ಸಾಕ್ಷಿಗಳ ವಿಚಾರಣೆ ಬಾಕಿ ಇದೆ? ಸಾಕ್ಷ್ಯ ವಿಚಾರಣೆ ಮುಗಿಯಲು ಎಷ್ಟು ಸಮಯ ಬೇಕು ಎಂಬ ಬಗ್ಗೆ ವರದಿ ನೀಡಿ ಎಂದು 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ವರದಿ ಬಂದ ಬಳಿಕ ಮುಂದಿನ ವಿಚಾರಣೆ ನಡೆಯಲಿದೆ.

ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ನಿಯಮ ಮೀರಿ ಕ್ವಾರಂಟೈನ್ ಸೆಲ್​ನಲ್ಲಿ ಇಡಲಾಗಿದೆ. ಆದ್ದರಿಂದ ಮಾನಸಿಕವಾಗಿ, ದೈಹಿಕವಾಗಿ ಹಾನಿಕಾರಕ ಪರಿಣಾಮ ಆಗುತ್ತಿದೆ. ಜೈಲಿನಲ್ಲಿ ಸಹ-ಕೈದಿಗಳು ನಿಂದನೆ, ಮೂದಲಿಸುವುದು ಸೇರಿ ಹಲವು ರೀತಿ ಪ್ರಚೋದನೆ ನೀಡುತ್ತಿದ್ದಾರೆ. ಮಾಧ್ಯಮದಲ್ಲಿ ನೆಗೆಟಿವ್ ಪ್ರಚಾರದಿಂದ ಸಮಸ್ಯೆ ಬಿಗಡಾಯಿಸಿದೆ ಎಂದು ಜಾಮೀನು ಅರ್ಜಿಯಲ್ಲಿ ದರ್ಶನ್ ಅವರು ಕಷ್ಟ ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಸಾಕ್ಷ್ಯ ವಿಚಾರಣೆ ವಿಳಂಬ ಆಗುತ್ತಿದೆ, ಜಾಮೀನು ಕೊಡಿ’; ಸುಪ್ರೀಂಕೋರ್ಟ್ ಮೊರೆ ಹೋದ ದರ್ಶನ್

ಜೈಲಿನಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಕುಟುಂಬದವರನ್ನು ಭೇಟಿ ಮಾಡಲು ಸಮಾನ ಸಮಯ ನೀಡುತ್ತಿಲ್ಲ. ಸೆಲ್​ನ ಕಾರಿಡಾರ್​​ನಲ್ಲಿ ಮಾತ್ರ ವಾಕ್ ಮಾಡಲು ಅವಕಾಶ ನೀಡಿದ್ದಾರೆ. ಬೆನ್ನು ನೋವಿದ್ದರೂ ಸರಿಯಾಗಿ ಫಿಸಿಯೋಥೆರಪಿ ಮಾಡಿಲ್ಲ. ಸುದೀರ್ಘ ಜೈಲುವಾಸದಿಂದ ಜೀವನೋಪಾಯಕ್ಕೂ ಸಮಸ್ಯೆ ಆಗಿದೆ. ವೃತ್ತಿ ನಡೆಸುವ ಮೂಲಭೂತ ಹಕ್ಕಿನ ಹರಣವಾಗಲಿದೆ ಎಂದು ಜಾಮೀನು ಅರ್ಜಿಯಲ್ಲಿ ದರ್ಶನ್ ತಿಳಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್ vs ಎನ್‌ಟಿಆರ್: ಇಬ್ಬರು ಸೂಪರ್‌ಸ್ಟಾರ್‌ಗಳು, ಎರಡು ಭಿನ್ನ ದಾರಿಗಳು; ಹೀಗೊಂದು ಹೋಲಿಕೆ – Kannada News | Thalapathi Vijay vs NTR, comparison of different generation leaders in South India

ದಳಪತಿ ವಿಜಯ್, ಎನ್​ಟಿಆರ್Image Credit source: AI/Mediaforge/TV9

ಚೆನ್ನೈ, ಮೇ 4: ದಕ್ಷಿಣ ಭಾರತದ ರಾಜಕಾರಣದಲ್ಲಿ ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧವಿದೆ. ಎಂಜಿಆರ್, ಕರುಣಾನಿಧಿ, ಎನ್​ಟಿಆರ್, ಚಿರಂಜೀವಿ, ಪವನ್ ಕಲ್ಯಾಣ್, ವಿಜಯಕಾಂತ್, ಹೀಗೆ ಪಟ್ಟಿ ಉದ್ದವಿದೆ. ಈಗ ದಳಪತಿ ವಿಜಯ್ ಹೊಸ ರಾಜಕೀಯ ಸ್ಟಾರ್ ಆಗಿ ಮೇಳೈಸಿದ್ದಾರೆ. ಎನ್.ಟಿ. ರಾಮರಾವ್ ಅವರು 1980ರ ದಶಕದಲ್ಲಿ ಆಂಧ್ರಪ್ರದೇಶದಲ್ಲಿ ಸೃಷ್ಟಿಸಿದ ಕ್ರಾಂತಿ ಇಂದಿಗೂ ಒಂದು ಮಾದರಿ. ಈಗ ತಮಿಳುನಾಡಿನಲ್ಲಿ (Tamil Nadu Assembly Elections) ದಳಪತಿ ವಿಜಯ್ ಅವರು ಅದೇ ರೀತಿಯ ಪರ್ವವನ್ನು ಆರಂಭಿಸಲು ಹೊರಟಿದ್ದಾರೆ. ಆದರೆ ಇವರಿಬ್ಬರ ಹಾದಿ ಮತ್ತು ಅಪ್ರೋಚ್‌ಗಳಲ್ಲಿ ಕೆಲವು ಕುತೂಹಲಕಾರಿ ಸಾಮ್ಯತೆ ಹಾಗೂ ವ್ಯತ್ಯಾಸಗಳಿವೆ.

ಪ್ರಾದೇಶಿಕ ಅಸ್ಮಿತೆ ಮತ್ತು ‘ಆತ್ಮಗೌರವ’

1982ರಲ್ಲಿ ಎನ್‌ಟಿಆರ್ ಅವರು ತೆಲುಗು ದೇಶಂ ಪಾರ್ಟಿ (TDP) ಸ್ಥಾಪಿಸಿದಾಗ, ಅವರು ಪ್ರಮುಖವಾಗಿ ಮುನ್ನೆಲೆಗೆ ತಂದಿದ್ದು ‘ತೆಲುಗು ಆತ್ಮಗೌರವ’ (Telugu Vari Atma Gauravam). ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ನಾಯಕರು ಆಂಧ್ರದ ಮುಖ್ಯಮಂತ್ರಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಎನ್‌ಟಿಆರ್ ವಿರೋಧಿಸಿದ್ದರು.

ವಿಜಯ್ ಅವರು ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಮೂಲಕ ‘ತಮಿಳು ಅಸ್ಮಿತೆ’ ಮತ್ತು ಭಾಷಾ ಪ್ರೇಮವನ್ನು ಎತ್ತಿ ಹಿಡಿಯುತ್ತಿದ್ದಾರೆ. ದ್ರಾವಿಡ ಸಿದ್ಧಾಂತ ಮತ್ತು ತಮಿಳು ರಾಷ್ಟ್ರೀಯತೆಯನ್ನು ಸಮನ್ವಯಗೊಳಿಸುವ ಪ್ರಯತ್ನ ಅವರಲ್ಲಿ ಕಾಣುತ್ತಿದೆ.

ಇದನ್ನೂ ಓದಿ: ದಳಪತಿ ಕಿಂಗ್ ಮೇಕರ್ ಅಲ್ಲ, ಕಿಂಗ್; ತಮಿಳುನಾಡಿಗೆ ವಿಜಯ್ ಮುಂದಿನ ಸಿಎಂ?

ಔಟ್‌ಸೈಡರ್ ವರ್ಸಸ್ ಎಸ್ಟಾಬ್ಲಿಷ್‌ಮೆಂಟ್

ಎನ್‌ಟಿಆರ್ ಮತ್ತು ವಿಜಯ್ ಇಬ್ಬರೂ ರಾಜಕೀಯಕ್ಕೆ ಬರುವಾಗ ಆಯಾ ರಾಜ್ಯಗಳಲ್ಲಿ ಪ್ರಬಲವಾದ ರಾಜಕೀಯ ಶಕ್ತಿಗಳಿದ್ದವು. ಆಂಧ್ರದಲ್ಲಿ ಕಾಂಗ್ರೆಸ್ ಸುಭದ್ರವಾಗಿತ್ತು, ಈಗ ತಮಿಳುನಾಡಿನಲ್ಲಿ ಡಿಎಂಕೆಯಂತಹ ಬಲಿಷ್ಠ ಕುಟುಂಬ ರಾಜಕಾರಣವಿದೆ. ಇಬ್ಬರೂ ಕೂಡ “ವ್ಯವಸ್ಥೆಯ ಹೊರಗಿನವರು” (Outsiders) ಎಂಬ ಹಣೆಪಟ್ಟಿಯೊಂದಿಗೆ ಬದಲಾವಣೆಯ ಭರವಸೆ ನೀಡಿದವರು.

ಸಂಘಟನಾ ಶಕ್ತಿ: ಅಭಿಮಾನಿ ಬಳಗವೇ ಸೈನ್ಯ

ಸಿನಿಮಾ ಮೂಲಕ ಗಳಿಸಿದ್ದ ‘ದೈವತ್ವ’ದ ಮತ್ತು ಆಧ್ಯಾತ್ಮದ ಇಮೇಜ್ ಎನ್‌ಟಿಆರ್‌ಗೆ ದೊಡ್ಡ ಬಲವಾಗಿತ್ತು. ಅವರ ಅಭಿಮಾನಿ ಸಂಘಗಳು ರಾತ್ರೋರಾತ್ರಿ ರಾಜಕೀಯ ಕಾರ್ಯಕರ್ತರಾಗಿ ಬದಲಾದವು.

ವಿಜಯ್ ಅವರಿಗೆ ತಮಿಳುನಾಡಿನ ಪ್ರತಿ ಹಳ್ಳಿಯಲ್ಲೂ ಇರುವ ‘ವಿಜಯ್ ಮಕ್ಕಳ್ ಇಯಕ್ಕಂ’ (VMI) ಎಂಬ ಸಂಘಟನೆಯೇ ದೊಡ್ಡ ಶಕ್ತಿ. ಇದು ಕೇವಲ ಅಭಿಮಾನಿ ಸಂಘವಾಗಿರದೆ, ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ರಾಜಕೀಯಕ್ಕೆ ಅಡಿಪಾಯ ಸಿದ್ಧಪಡಿಸಿದೆ.

ಎರಡು ಭಿನ್ನ ಕಾರ್ಯತಂತ್ರಗಳು

ಎನ್‌ಟಿಆರ್ ಪಕ್ಷ ಸ್ಥಾಪಿಸಿದ ಕೇವಲ 9 ತಿಂಗಳಲ್ಲಿ ಅಧಿಕಾರ ಹಿಡಿದರು. ಅದು ಚಂಡಮಾರುತದಂತಿದ್ದ ವೇಗ. ಅವರು ಇಡೀ ರಾಜ್ಯವನ್ನು ‘ಚೈತನ್ಯ ರಥ’ದ ಮೂಲಕ ಸುತ್ತಿದ್ದರು.

ಇದಕ್ಕೆ ತದ್ವಿರುದ್ಧವಾಗಿ ವಿಜಯ್ ಅವರು ಬಹಳ ನಿಧಾನವಾಗಿ ಮತ್ತು ಯೋಜಿತವಾಗಿ ಹೆಜ್ಜೆ ಇಟ್ಟಿದ್ದಾರೆ. ಸುಮಾರು 5-6 ವರ್ಷಗಳಿಂದ ಸಿನಿಮಾ ಮೂಲಕ ರಾಜಕೀಯ ಸಂದೇಶಗಳನ್ನು ನೀಡುತ್ತಾ, ಈಗ ಪೂರ್ಣಪ್ರಮಾಣದಲ್ಲಿ ಧುಮುಕಿದ್ದಾರೆ. ಇದು ದೀರ್ಘಾವಧಿಯ ಗೇಮ್ ಪ್ಲಾನ್ ಎಂಬುದು ಹಲವರ ವಿಶ್ಲೇಷಣೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಅಧಿಕಾರ ಸ್ಥಾಪನೆಯತ್ತ ಬಿಜೆಪಿ; ನಿಚ್ಚಳ ಬಹುಮತ ಬಹುತೇಕ ನಿಶ್ಚಿತ

ವಿಜಯ್ ಎದುರಿರುವ ಸವಾಲುಗಳು

ಎನ್‌ಟಿಆರ್ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಿರಲಿಲ್ಲ, ಕೇವಲ ಭಾವನಾತ್ಮಕ ಅಲೆ ಕೆಲಸ ಮಾಡುತ್ತಿತ್ತು. ಈಟಿವಿ ಮಾಧ್ಯಮದ ಬೆಂಬಲ ಮಾತ್ರವೇ ಎನ್​ಟಿಆರ್​ಗೆ ಇದ್ದದ್ದು. ಎನ್​ಟಿಆರ್ ಅವರ ರಾಜಕೀಯ ಹೋರಾಟವೆಲ್ಲವೂ ಅವಿರತವಾಗಿ ಈ ಮಾಧ್ಯಮದಲ್ಲಿ ಪ್ರಚಾರ ಪಡೆಯುತ್ತಿತ್ತು. ಆದರೆ, ವಿಜಯ್ ಅವರಿಗೆ ಮೈನ್​ಸ್ಟ್ರೀಮ್ ಮಾಧ್ಯಮದ ನಿರಂತರ ಬೆಂಬಲವೇನೂ ಇಲ್ಲ. ಅವರ ಕೈಹಿಡಿದಿದ್ದು ಸಾಮಾಜಿಕ ಜಾಲತಾಣಗಳು.

ಒಟ್ಟಾರೆಯಾಗಿ ಹೇಳುವುದಾದರೆ, ಎನ್‌ಟಿಆರ್ ಅವರದ್ದು ‘ಅಸ್ಮಿತೆ’ ಮತ್ತು ‘ವೇಗ’ದ ರಾಜಕಾರಣವಾಗಿದ್ದರೆ, ವಿಜಯ್ ಅವರದ್ದು ‘ಸಂಘಟನೆ’ ಮತ್ತು ‘ಯುವಶಕ್ತಿ’ಯನ್ನು ನಂಬಿದ ರಾಜಕಾರಣ. ಆಂಧ್ರದಲ್ಲಿ ಜನರು ಎನ್​ಟಿಆರ್ ಅವರನ್ನು ಭರ್ಜರಿಯಾಗಿ ಅಪ್ಪಿಕೊಂಡಂತೆ, ತಮಿಳುನಾಡಿನ ಮತದಾರರು ವಿಜಯ್ ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸಿಲ್ಲ. ಆದರೆ, ಅಧಿಕಾರದ ಗದ್ದುಗೆ ಏರುವಷ್ಟು ಬೆಂಬಲ ಕೊಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಬೈ ಎಲೆಕ್ಷನ್ ರಿಸಲ್ಟ್: ಸಹೋದರನ ಗೆಲುವಿಗೆ ಬಾಯಕ್ಕ ಖುಷಿ ಓಕೆ, ದುಃಖ ಏಕೆ? – Kannada News | Sister Bayakka Talks after Brother Umesh Meti Won In Bagalkot By Election

ಬಾಗಲಕೋಟೆ, (ಮೇ 04): ಹೆಚ್​​ ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್​ ಮೇಟಿ ಗೆಲುವು ಸಾಧಿಸಿದ್ದಾರೆ. ಕಳೆದ 2023ರ ಚುನಾವಣೆಯಲ್ಲೂ ಸಹ ಕಾಂಗ್ರೆಸ್​​​ನ ಹೆಚ್​ ವೈ ಮೇಟಿ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಗೆದ್ದು ಬೀಗಿದ್ದರು. ಇದೀಗ ಉಪಚುನಾವಣೆಯಲ್ಲೂ ಪುತ್ರ ಉಮೇಶ್​ ಮೇಟಿ ಸಹ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನ 22,332 ಮತಗಳಿಂದ ಸೋಲಿಸಿದ್ದಾರೆ. ಫಲಿತಾಂಶದ ಬಗ್ಗೆ ಹೆಚ್​ ವೈ ಮೇಟಿ ಪುತ್ರಿ ಬಾಯಕ್ಕೆ ಪ್ರತಿಕ್ರಿಯಿಸಿದ್ದು, ತಮ್ಮನ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Assembly Election 2026 LIVE Counting and Results: ಪಶ್ಚಿಮ ಬಂಗಾಳದಲ್ಲಿ ಮೋದಿ ಮ್ಯಾಜಿಕ್, ಬಿಜೆಪಿಗೆ ಮುನ್ನಡೆ

Source link

Exit mobile version