ರಾಹುಲ್​​ ಮಾತು ಕೇಳದೆ ತಮಿಳುನಾಡಲ್ಲಿ ಕೆಟ್ಟಿತಾ ಕಾಂಗ್ರೆಸ್​​? ಅಸಲಿಗೆ ಆಗಿದ್ದೇನು? – Kannada News | Did Congress Suffer in Tamil Nadu for Ignoring Rahul Gandhi’s Advice on Alliance?

ಚೆನ್ನೈ, ಮೇ 04: ಪಂಚರಾಜ್ಯ ಚುನಾವಣೆಯಲ್ಲಿ ಕೇರಳ ಒಂದನ್ನು ಹೊರತುಪಡಿಸಿದರೆ ಉಳಿದೆಡೆ ಕಾಂಗ್ರೆಸ್​ ಸಾಧನೆ ಹೇಳಿಕೊಳ್ಳುವ ಮಟ್ಟಿಗೆ ಏನೂ ಆಗಿಲ್ಲ. ಈ ನಡುವೆ ತಮಿಳುನಾಡು ಚುನಾವಣೆ ಸಂಬಂಧ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದ್ದು, ರಾಹುಲ್​​ ಗಾಂಧಿ ಹೇಳಿದ್ದ ಮಾತು ಕೇಳದೆ ಹೋಗಿದ್ದೇ ತಮಿಳುನಾಡಲ್ಲಿ ಕಾಂಗ್ರೆಸ್​​ನ ಕಳಪೆ ಸಾಧನೆಗೆ ಕಾರಣವಾ? ಎಂಬ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಹಿರಿಯರ ಸಲಹೆ ಎಂದು ರಾಹುಲ್​​ ಸುಮ್ಮನಾಗಿದ್ದೇ ತಮಿಳುನಾಡಲ್ಲಿ ಕಾಂಗ್ರೆಸ್​​ ಪಾಲಿಗೆ ಮುಳುವಾಯ್ತಾ ಎಂಬ ಪ್ರಶ್ನೆ ಎದ್ದಿದೆ.

ರಾಹುಲ್​​ ಏನು ಹೇಳಿದ್ದರು?

ತಮಿಳುನಾಡು ವಿಧಾನಸಭೆ ಚುನಾವಣೆಗೆ ನಟ ದಳಪತಿ ವಿಜಯ್​​ ನೇತೃತತ್ವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ರಾಹುಲ್​​ ಗಾಂಧಿ ಸೂಚಿಸಿದ್ದರು. ಆದರೆ ಟಿವಿಕೆ ಜತೆ ಮೈತ್ರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಿ.ಚಿದಂಬರಂ ಒಪ್ಪಿರಲಿಲ್ಲ. ಬದಲಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಜೊತೆಗೆ ಹೋಗೋಣ ಎಂದು ಅವರು ಸೂಚಿಸಿದ್ದರು. ಈ ವೇಳೆ ಹಿರಿಯರ ಮಾತಿಗೆ ಬೆಲೆ ಕೊಟ್ಟು ರಾಹುಲ್ ಗಾಂಧಿ ಕೂಡ ಸುಮ್ಮನಾಗಿದ್ದರು. ಹೀಗಾಗಿ ಖರ್ಗೆ, ಚಿದಂಬರಂ ನಿರ್ಧಾರದಿಂದ ಕಾಂಗ್ರೆಸ್​ಗೆ ಸೋಲು ಎಂಬ ಚರ್ಚೆ ಪಕ್ಷದಲ್ಲಿಯೇ ಶುರುವಾಗಿದೆ ಎಂದು ಎಐಸಿಸಿ ಮೂಲದ ನಾಯಕರಿಂದಲೇ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ದಳಪತಿ ಕಿಂಗ್ ಮೇಕರ್ ಅಲ್ಲ, ಕಿಂಗ್; ತಮಿಳುನಾಡಿಗೆ ವಿಜಯ್ ಮುಂದಿನ ಸಿಎಂ?

ಟಿವಿಕೆ-ಕಾಂಗ್ರೆಸ್​​ ಮೈತ್ರಿಗೆ ವಿಜಯ್​​ ತಂದೆಯ ಬೆಂಬಲ

234 ಸದಸ್ಯರ ಬಲವನ್ನು ಹೊಂದಿರುವ ತಮಿಳುನಾಡು ವಿಧಾನಸಭೆಯ ಅಧಿಕಾರ ಹಿಡಿಯಲು 118 ಸ್ಥಾನಗಳ ಅಗತ್ಯವಿದೆ. ನಟ ದಳಪತಿ ವಿಜಯ್​​ ನೇತೃತತ್ವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಬಹುಮತಕ್ಕೆ ಬೆರಳೆಣಿಕೆಯ ಸೀಟ್​​ಗಳು ಕೊರತೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಚುನಾವಣಾ ಫಲಿತಾಂಶ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ಸರ್ಕಾರ ರಚಿಸಲು ಅನ್ಯರ ಬೆಂಬಲ ಅನಿವಾರ್ಯವಾದರೆ ವಿಜಯ್​​ ಯಾರ ಜೊತೆ ಕೈಜೋಡಿಸಲಿದ್ದಾರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಈ ನಡುವೆ ಮೈತ್ರಿ ಸಂಬಂಧ ಕಾಂಗ್ರೆಸ್​​ ಟಿವಿಕೆ ಜೊತೆ ಮಾತುಕತೆ ನಡೆಸಿದೆ ಎನ್ನಲಾಗಿದ್ದು, ವಿಜಯ್​​ ತಂದೆಯೂ ಇದಕ್ಕೆ ಬೆಂಬಲ ಸೂಚಿಸಿದ್ದಾರೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On – 2:47 pm, Mon, 4 May 26

Source link

ಹಿಮಂತ ಬಿಸ್ವಾ ಶರ್ಮಾ ಆಡಳಿತಕ್ಕೆ ಅಸ್ಸಾಂ ಜನತೆಯ ಮೊಹರು, ವಿರೋಧ ಪಕ್ಷಗಳ ಕೋಟೆ ಧ್ವಂಸ, ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಕಾರಣಗಳೇನು? – Kannada News | Assam BJP’s Historic Win: Himanta’s Magic Secures Third Term, Why Anti Incumbency Failed Here

ಗುವಾಹಟಿ, ಮೇ 04: ದೇಶದ ಇತರ ಮೂರು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ (Anti-incumbency) ಸರ್ಕಾರಗಳನ್ನು ಬುಡಮೇಲು ಮಾಡುತ್ತಿದ್ದರೆ, ಅಸ್ಸಾಂನಲ್ಲಿ ಮಾತ್ರ ಬಿಜೆಪಿ ಈ ಪ್ರವೃತ್ತಿಯನ್ನು ತಲೆಕೆಳಗಾಗಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ಅವರ ನೇತೃತ್ವದ ತಂಡವು ಅಸ್ಸಾಂನಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರಿದೆ. ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಫಲಿತಾಂಶಗಳು ಹೊರಬೀಳುತ್ತಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಳ್ಳುವತ್ತ ದಾಪುಗಾಲು ಹಾಕುತ್ತಿದೆ.

ಮೋದಿಯ ಮಾರ್ಗದರ್ಶನ ಮತ್ತು ಹಿಮಂತ ಮ್ಯಾಜಿಕ್

ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರ ಮತ್ತು ರಾಷ್ಟ್ರೀಯ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಅಸ್ಸಾಂ ಬಿಜೆಪಿ ತಂಡವು ಈ ಮೈಲಿಗಲ್ಲನ್ನು ತಲುಪಿದೆ. ಇತರ ರಾಜ್ಯಗಳಲ್ಲಿ ಸರ್ಕಾರಗಳು ಪತನಗೊಳ್ಳುತ್ತಿರುವಾಗ, ಅಸ್ಸಾಂನಲ್ಲಿ ಬಿಜೆಪಿ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿರುವುದು ರಾಜಕೀಯ ವಿಶ್ಲೇಷಕರನ್ನು ಆಶ್ಚರ್ಯಚಕಿತಗೊಳಿಸಿದೆ.

ಹ್ಯಾಟ್ರಿಕ್ ಗೆಲುವಿನ ಹಿಂದಿನ ಗುಟ್ಟು

ಅಭಿವೃದ್ಧಿ ಕಾರ್ಡ್: ಸಾರಿಗೆ ಮತ್ತು ಮೂಲಸೌಕರ್ಯಗಳಲ್ಲಿ ಹಿಮಂತ ಬಿಸ್ವ ಶರ್ಮಾ ತಂದ ಬದಲಾವಣೆಗಳು ಗ್ರಾಮೀಣ ಮತದಾರರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಸುಸ್ಥಿರ ಆಡಳಿತ: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿರುವುದರಿಂದ ಅಭಿವೃದ್ಧಿ ಯೋಜನೆಗಳು ಕುಂಠಿತವಾಗುವುದಿಲ್ಲ ಎಂಬ ಜನರ ನಂಬಿಕೆ ಬಿಜೆಪಿಗೆ ವರದಾನವಾಗಿದೆ.
ಹೋರಾಟ: ಅಸ್ಸಾಂನ ಸಾಂಸ್ಕೃತಿಕ ಅಸ್ಮಿತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಸಂಯೋಜಿಸಿ ಚುನಾವಣೆ ಎದುರಿಸಿದ ಶರ್ಮಾ ಅವರ ಕಾರ್ಯತಂತ್ರ ಜಯ ತಂದಿದೆ.

ಮತ್ತಷ್ಟು ಓದಿ: ಸೂರ್ಯ ಮುಳುಗಿದ ಮೇಲೆ ನಾವೇ ಗೆಲ್ಲುತ್ತೇವೆ! ಬೆಂಬಲಿಗರಿಗೆ ಮಮತಾ ಬ್ಯಾನರ್ಜಿ ‘ಅರ್ಜೆಂಟ್’ ಕರೆ

ರಾಷ್ಟ್ರಮಟ್ಟದಲ್ಲಿ ಅಸ್ಸಾಂ ಗೆಲುವಿನ ಪ್ರಾಮುಖ್ಯತೆ

ಈ ಗೆಲುವನ್ನು ಬಿಜೆಪಿಯು ರಾಷ್ಟ್ರೀಯ ಮಟ್ಟದಲ್ಲಿ ತನ್ನ ರಾಜಕೀಯ ಶಕ್ತಿಯ ಅಗ್ನಿಪರೀಕ್ಷೆಯ ಯಶಸ್ಸು ಎಂದು ಪರಿಗಣಿಸಿದೆ. ಐದು ರಾಜ್ಯಗಳ ಚುನಾವಣಾ ಕದನದಲ್ಲಿ ಅಸ್ಸಾಂನ ಈ ಫಲಿತಾಂಶವು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

ನಿಕಟ ಕಾರ್ಯತಂತ್ರ: ವಿವಿಧ ಜನಾಂಗೀಯ ಸಮುದಾಯಗಳ ಆತಂಕಗಳನ್ನು ಆಲಿಸಿ, ಅವುಗಳನ್ನು ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ವಿಶ್ಲೇಷಿಸಿದ ರೀತಿ ಬಿಜೆಪಿಗೆ ಎಲ್ಲ ವರ್ಗದ ಜನರ ಬೆಂಬಲ ತಂದುಕೊಟ್ಟಿದೆ.

ಶಕ್ತ ಸಂಘಟನೆ ಮತ್ತು ವಿರೋಧ ಪಕ್ಷಗಳ ದೌರ್ಬಲ್ಯ

ಬಿಜೆಪಿಯ ತಳಮಟ್ಟದ ಸಂಘಟನಾ ಶಕ್ತಿಯ ಮುಂದೆ ವಿರೋಧ ಪಕ್ಷಗಳ ಮೈತ್ರಿಕೂಟವು ಮಂಕಾಗಿದೆ.ಹಿಮಂತ ಬಿಸ್ವಾ ಶರ್ಮಾ ಅವರ ಆಕ್ರಮಣಕಾರಿ ನಾಯಕತ್ವ ಮತ್ತು ಮೋದಿ-ನಿತೀನ್ ನಬಿನ್ ಅವರ ಮಾರ್ಗದರ್ಶನ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ.

ಮತದಾರರ ಪಟ್ಟಿಯ ಪರಿಷ್ಕರಣೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ನಕಲಿ ಮತದಾರರನ್ನು ತೆಗೆದುಹಾಕಿದ್ದು ಸಹ ಪರೋಕ್ಷವಾಗಿ ಬಿಜೆಪಿಗೆ ಸಹಕಾರಿಯಾಗಿದೆ. ನುಸುಳುಕೋರರ ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದು, ನೈಜ ಮತದಾರರ ಶಕ್ತಿಯನ್ನು ಹೆಚ್ಚಿಸಿತು, ಇದು ಬಿಜೆಪಿಯಂತಹ ಪಕ್ಷಗಳಿಗೆ ಕಾರ್ಯತಂತ್ರ ರೂಪಿಸಲು ನೆರವಾಯಿತು.

ಡಬಲ್ ಇಂಜಿನ್ ಸರ್ಕಾರದ ಲಾಭ: ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿದ್ದರೆ ರಾಜ್ಯದ ಅಭಿವೃದ್ಧಿಗೆ ಹೆಚ್ಚು ವೇಗ ಸಿಗುತ್ತದೆ ಎಂಬ ನಂಬಿಕೆ ಬಿಜೆಪಿಗೆ ವರದಾನವಾಗಿದೆ.

ಸಂಘಟನಾ ಶಕ್ತಿ ಮತ್ತು ವಿರೋಧ ಪಕ್ಷಗಳ ವೈಫಲ್ಯ

ಬಿಜೆಪಿಯ ಬಲಿಷ್ಠ ಸಂಘಟನೆ ಮತ್ತು ಬೂತ್ ಮಟ್ಟದ ಕಾರ್ಯತಂತ್ರಕ್ಕೆ ಸೂಕ್ತ ಪೈಪೋಟಿ ನೀಡಲು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ವಿಫಲವಾದವು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಚುರುಮುರಿ ತಿಂದ ಮೋದಿ, ಗುಂಡಿಗೆ ಬಿದ್ದ ದೀದಿ’! ಮಂಗಳೂರಿನಲ್ಲಿ ಬಿಜೆಪಿಗರ ಘೋಷಣೆ, ಚುರುಮುರಿ ತಯಾರಿಸಿ ಹಂಚಿದ ಶಾಸಕ ಕಾಮತ್ – Kannada News | BJP Victory Celebration in Mangaluru: MLA Vedavyas Kamath Prepares and Distributes Churumuri as Party Wins Big

ಮಂಗಳೂರು, ಮೇ 4: ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಮತ್ತು ಬಹುಮತದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಅದ್ಧೂರಿ ಸಂಭ್ರಮಾಚರಣೆ ನಡೆಸಲಾಯಿತು. ನಗರದ ಪಿವಿಎಸ್ ಬಳಿ ಇರುವ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ, ಲಡ್ಡು ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂಭ್ರಮಾಚರಣೆಯ ವಿಶೇಷ ಆಕರ್ಷಣೆಯೆಂದರೆ, ಶಾಸಕ ವೇದವ್ಯಾಸ್ ಕಾಮತ್ ಅವರು ಸ್ವತಃ ಚುರುಮುರಿ ತಯಾರಿಸಿ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಹಂಚಿದ್ದು. ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಚುರುಮುರಿ ಸವಿದಿದ್ದನ್ನು ಸ್ಮರಿಸುತ್ತಾ ಶಾಸಕರು ಈ ವಿಭಿನ್ನ ರೀತಿಯ ಸಂಭ್ರಮಾಚರಣೆ ಮಾಡಿದರು. ಇದೇ ವೇಳೆ, ‘ಚುರುಮುರಿ ತಿಂದ ಮೋದಿ, ಗುಂಡಿಗೆ ಬಿದ್ದ ದೀದಿ’ ಎಂಬ ಘೋಷಣೆಗಳು ಮಾರ್ದನಿಸಿದವು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಮಹಿಳಾ ಕಾರ್ಯಕರ್ತರು ಜಯಘೋಷಗಳನ್ನು ಕೂಗುತ್ತಾ ಹೆಜ್ಜೆ ಹಾಕುವ ಮೂಲಕ ಸಂಭ್ರಮ ಹಂಚಿಕೊಂಡರು.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಕೀಯದಲ್ಲಿ ರಾಹುಲ್ ಗಾಂಧಿ ಹೊಸ ದಾಖಲೆ: 99 ಸೋಲುಗಳ ‘ಅನ್-ಟಚಬಲ್’ ರೆಕಾರ್ಡ್! ಶತಕದತ್ತ ದಾಪುಗಾಲು ಹಾಕುತ್ತಿದೆಯೇ ಕಾಂಗ್ರೆಸ್? – Kannada News | Tamil Nadu Election Debacle: Did Congress Ignore Rahul Gandhi’s TVK Alliance Advice?

ದೆಹಲಿ, ಮೇ.4: ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ರಾಜಕಾರಣದ ಕೇಂದ್ರ ಬಿಂದುವಾಗಿರುವ ರಾಹುಲ್ ಗಾಂಧಿ ಅವರ ಚುನಾವಣಾ ಹಾದಿಯ ಬಗ್ಗೆ ವಿರೋಧ ಪಕ್ಷಗಳು ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರು ಹೊಸ ದಾಳಿ ಆರಂಭಿಸಿದ್ದಾರೆ. ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಒಟ್ಟು 99 ಚುನಾವಣಾ ಸೋಲುಗಳನ್ನು ಕಂಡಿದೆ ಎಂದು ಬಿಜೆಪಿ ಎಕ್ಸ್​​​​​​​​ನಲ್ಲಿ ಟ್ವೀಟ್​ ಮಾಡಿದೆ.

ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಒಳಗೊಂಡಂತೆ ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರ ಅವಧಿಯಲ್ಲಿ 99 ಬಾರಿ ಹಿನ್ನಡೆ ಅನುಭವಿಸಿದೆ ಎಂದು ವರದಿಯಾಗಿದೆ. ಸದ್ಯದ ಫಲಿತಾಂಶಗಳ ಪ್ರಕಾರ, ಈ ಸಂಖ್ಯೆ 100ಕ್ಕೆ ಹತ್ತಿರವಾಗುತ್ತಿದ್ದು, ಇದನ್ನು “ಸೋಲಿನ ಶತಕ” ಎಂದು ಭಾರತೀಯ ಜನತಾ ಪಕ್ಷ ಟೀಕಿಸಿದೆ.

ಬಿಜೆಪಿ ಪೋಸ್ಟ್​​ ಇಲ್ಲಿದೆ ನೋಡಿ:

ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಸೇರಿದಂತೆ ಇತ್ತೀಚಿನ 2026ರ ಚುನಾವಣಾ ಫಲಿತಾಂಶಗಳು ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿವೆ. ಪದೇ ಪದೇ ಬ್ರ್ಯಾಂಡಿಂಗ್ ಮತ್ತು ಹೊಸ ಘೋಷಣೆಗಳೊಂದಿಗೆ ಕಣಕ್ಕಿಳಿದರೂ ಮತದಾರರು ರಾಹುಲ್ ಗಾಂಧಿ ಅವರ ನಾಯಕತ್ವವನ್ನು ನಿರಾಕರಿಸುತ್ತಿದ್ದಾರೆಯೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ‘ಬೇವಕೂಫ್ ಮತ್ ಬನಾಓ, ಲಂಚದ ರಾಣಿ’! ಬಂಗಾಳದ ರಣಕಣದಲ್ಲಿ ಮೋದಿ, ಶಾ, ದೀದಿ ನಡುವೆ ನಡೆದಿದ್ದ ವಾಕ್ಸಮರದ ಹಿನ್ನೋಟ

ರಾಹುಲ್ ಗಾಂಧಿ ಸಲಹೆ ಮೀರಿದ್ದೇ ಸೋಲಿಗೆ ಕಾರಣ? ಎಐಸಿಸಿ ಮೂಲಗಳಿಂದ ಸ್ಫೋಟಕ ಮಾಹಿತಿ!

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಬಿರುಗಾಳಿ ಎಬ್ಬಿಸಿದೆ. ಈ ಸೋಲಿಗೆ ಪಕ್ಷದ ಹಿರಿಯ ನಾಯಕರ ತಪ್ಪು ನಿರ್ಧಾರವೇ ಕಾರಣ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ನಟ ವಿಜಯ್ ಅವರ TVK (ತಮಿಳಗ ವೆಟ್ರಿ ಕಳಗಂ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ರಾಹುಲ್ ಗಾಂಧಿ ನೀಡಿದ್ದ ಸಲಹೆಯನ್ನು ಹಿರಿಯ ನಾಯಕರು ತಿರಸ್ಕರಿಸಿದ್ದೇ ಇಂದಿನ ಈ ದುಸ್ಥಿತಿಗೆ ಕಾರಣ ಎನ್ನಲಾಗಿದೆ. ತಮಿಳುನಾಡಿನಲ್ಲಿ ಬದಲಾಗುತ್ತಿರುವ ರಾಜಕೀಯ ಗಾಳಿಯನ್ನು ಅರಿತಿದ್ದ ರಾಹುಲ್ ಗಾಂಧಿ, ಉದಯೋನ್ಮುಖ ಶಕ್ತಿಯಾಗಿರುವ ವಿಜಯ್ ಅವರ TVK ಜೊತೆ ಕೈಜೋಡಿಸುವುದು ಒಳಿತು ಎಂದು ಸಲಹೆ ನೀಡಿದ್ದರು.

ರಾಹುಲ್ ಗಾಂಧಿ ಅವರ ಪ್ರಸ್ತಾಪಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ಪಿ. ಚಿದಂಬರಂ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. TVK ಜೊತೆ ಗುರುತಿಸಿಕೊಳ್ಳುವುದಕ್ಕಿಂತ ಹಳೆಯ ಮಿತ್ರ ಪಕ್ಷ DMK ಜೊತೆಗೇ ಇರುವುದು ಸೇಫ್ ಎಂದು ಅವರು ವಾದಿಸಿದ್ದರು. ಹಿರಿಯ ನಾಯಕರ ಮಾತಿಗೆ ಬೆಲೆ ಕೊಟ್ಟು ರಾಹುಲ್ ಗಾಂಧಿ ಅವರು ಸುಮ್ಮನಾಗಿದ್ದರು. ಆದರೆ, DMK ವಿರುದ್ಧ ಜನಾಭಿಪ್ರಾಯ ವ್ಯಕ್ತವಾದಾಗ ಕಾಂಗ್ರೆಸ್ ಕೂಡ ಸೋಲಿನ ಸುಳಿಗೆ ಸಿಲುಕಿತು. ಒಂದು ವೇಳೆ TVK ಜೊತೆ ಮೈತ್ರಿ ಮಾಡಿಕೊಂಡಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು ಎಂಬುದು ಎಐಸಿಸಿ ಮೂಲಗಳ ವಿಶ್ಲೇಷಣೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ತಮಿಳುನಾಡಿನಲ್ಲಿ ಟಿವಿಕೆ ಸುನಾಮಿ; ತಿರುಪತಿಯಿಂದ ನೇರವಾಗಿ ವಿಜಯ್ ಮನೆಗೆ ಬಂದ ತ್ರಿಷಾ – Kannada News | Actress Trisha Enter Vijay House After TVK hilarious victory

ದಳಪತಿ ವಿಜಯ್ ಅವರ ‘ಟಿವಿಕೆ’ ಪಕ್ಷ ತಮಿಳುನಾಡು ರಾಜಕೀಯದಲ್ಲಿ ಸುನಾಮಿಯನ್ನೇ ಎಬ್ಬಿಸಿದೆ. ಈ ಪಕ್ಷ ಮಧ್ಯಾಹ್ನದ 2 ಗಂಟೆ ಟ್ರೆಂಡ್ ಅಲ್ಲಿ 112 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ. ಇದು ವಿಜಯ್ ಪಕ್ಷ ಮಾಡಿದ ಸಾಧನೆ. ವಿಜಯ್ ಪಕ್ಷದ ಗೆಲುವಿನ ಬೆನ್ನಲ್ಲೇ ತ್ರಿಷಾ ಅವರು ಚೆನ್ನೈನಲ್ಲಿರುವ ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಮುಂಜಾನೆ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದರು. ಆ ಬಳಿಕ ಅವರು ನೇರವಾಗಿ ವಿಜಯ್ ಮನೆಗೆ ಬಂದಿದ್ದಾರೆ. ವಿಶೇಷ ಎಂದರೆ, ಇಂದು ತ್ರಿಷಾ ಅವರ ಜನ್ಮದಿನ ಕೂಡ ಹೌದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೈ ತಪ್ಪಿದ ರಾಜಸ್ಥಾನ್ ರಾಯಲ್ಸ್​: ಕಾನೂನು ಸಮರಕ್ಕೆ ಸಜ್ಜು! – Kannada News | Rajasthan Royals Sale Hits Legal Roadblock!

ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವದ ಬದಲಾವಣೆ ಈಗ ಕೇವಲ ವ್ಯಾಪಾರವಾಗಿ ಉಳಿದಿಲ್ಲ, ಅದೊಂದು ದೊಡ್ಡ ಮಟ್ಟದ ಕಾನೂನು ಕದನವಾಗಿ ಮಾರ್ಪಡುವಂತಿದೆ! $1.65 ಬಿಲಿಯನ್ ಮೊತ್ತಕ್ಕೆ ಮಿತ್ತಲ್-ಪೂನಾವಾಲಾ ಪಾಲಾಗಿದ್ದ ರಾಯಲ್ಸ್ ಸಾಮ್ರಾಜ್ಯಕ್ಕೆ, ಈಗ ಹಳೆಯ ಬಿಡ್ಡರ್ ಕಲ್ ಸೋಮಾನಿ ಒಕ್ಕೂಟ ಅಡ್ಡಗಾಲು ಹಾಕಿದೆ. 1.63 ಬಿಲಿಯನ್ ಡಾಲರ್ ಮೊತ್ತದ ಈ ಕಾನೂನು ಸಮರ ಐಪಿಎಲ್ ಇತಿಹಾಸದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ.

ಏನಿದು ವಿವಾದ?

ವರದಿಗಳ ಪ್ರಕಾರ, ವಾಲ್‌ಮಾರ್ಟ್ ವಾರಸುದಾರ ರಾಬ್ ವಾಲ್ಟನ್ ಮತ್ತು ಡೆಟ್ರಾಯಿಟ್ ಲಯನ್ಸ್ ಮಾಲೀಕರನ್ನು ಒಳಗೊಂಡ ಕಲ್ ಸೋಮಾನಿ ಒಕ್ಕೂಟವು ಮೊದಲು ರಾಜಸ್ಥಾನ್ ರಾಯಲ್ಸ್ ಖರೀದಿಸಲು $1.63 ಬಿಲಿಯನ್ (ಸುಮಾರು ₹13,500 ಕೋಟಿಗೂ ಹೆಚ್ಚು) ಮೊತ್ತದ ಆಫರ್ ನೀಡಿತ್ತು.

ಆದರೆ, ಅಂತಿಮ ಹಂತದಲ್ಲಿ ಈ ಒಪ್ಪಂದ ಮುರಿದುಬಿದ್ದು, ರಾಜಸ್ಥಾನ್ ರಾಯಲ್ಸ್ ಆಡಳಿತ ಮಂಡಳಿಯು ಲಕ್ಷ್ಮಿ ಮಿತ್ತಲ್ ಮತ್ತು ಆದರ್ ಪೂನಾವಾಲಾ ಅವರೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವೇ ಈಗ ಕಾನೂನು ಸಮರಕ್ಕೆ ಎಡೆ ಮಾಡಿಕೊಟ್ಟಿದೆ.

ಸೋಮಾನಿ ಗ್ರೂಪ್ ಆರೋಪಗಳೇನು?

  • ಒಪ್ಪಂದ ವಿಳಂಬ:  ರಾಜಸ್ಥಾನ್ ರಾಯಲ್ಸ್ ತಂಡದ ಆಡಳಿತ ಮಂಡಳಿಯು ಬೇಕೆಂದೇ ದಾಖಲೆಗಳ ಹಸ್ತಾಂತರದಲ್ಲಿ ವಿಳಂಬ ಮಾಡಿತು ಮತ್ತು ಶೇ. 90ರಷ್ಟು ದಾಖಲಾತಿಗಳು ಬಾಕಿ ಇರುವಾಗಲೇ ಮಾತುಕತೆಯಿಂದ ಹಿಂದೆ ಸರಿಯಿತು ಎಂಬುದು ಸೋಮಾನಿ ಗ್ರೂಪ್ ಆರೋಪ.
  • ನೋಟಿಸ್: ಈ ಅನ್ಯಾಯದ ವಿರುದ್ಧ ಸೋಮಾನಿ ಒಕ್ಕೂಟವು ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಮತ್ತು ಬಿಸಿಸಿಐಗೆ (BCCI) ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದೆ.

ಒಪ್ಪಂದ ಮುರಿದು ಬೀಳಲು ಕಾರಣಗಳೇನು?

ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರಾದ ಮನೋಜ್ ಬಡಾಲೆ ಅವರು ಮಾರಾಟದ ನಂತರವೂ ತಮ್ಮ ಶೇ. 7ರಷ್ಟು ಪಾಲನ್ನು ಉಳಿಸಿಕೊಳ್ಳಲು ಬಯಸಿದ್ದರು. ಆದರೆ ಸೋಮಾನಿ ಗ್ರೂಪ್ ಸಂಪೂರ್ಣ ಮಾಲೀಕತ್ವವನ್ನು ಪಡೆಯಲು ಆಸಕ್ತಿ ಹೊಂದಿತ್ತು. ಅಲ್ಲದೆ ಬಡಾಲೆ ಅವರ ಪಾಲುದಾರಿಕೆಯನ್ನು ಮುಂದುವರಿಸಲು ಒಪ್ಪಿರಲಿಲ್ಲ.

ಇದಲ್ಲದೆ ಸೋಮಾನಿ ಗ್ರೂಪ್ ಒಪ್ಪಂದದ ನಿಯಮದಂತೆ ನಿಗದಿತ ಒಂದು ತಿಂಗಳ ಎಕ್ಸ್‌ಕ್ಲೂಸಿವಿಟಿ ಅವಧಿಯೊಳಗೆ ಹಣ ಪಾವತಿಸಲು ವಿಫಲರಾಗಿದ್ದರು ಎಂದು ಹೇಳಲಾಗಿದೆ.

ಸೋಮಾನಿ ಗ್ರೂಪ್ ಹೇಳುವುದೇನು?

ಸೋಮಾನಿ ಗ್ರೂಪ್ ವಾದದ ಪ್ರಕಾರ, ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಉದ್ದೇಶಪೂರ್ವಕವಾಗಿ ದಾಖಲಾತಿ ಪ್ರಕ್ರಿಯೆಯನ್ನು ವಿಳಂಬ ಮಾಡಿತು. ಶೇ. 90ರಷ್ಟು ದಾಖಲೆಗಳು ಇನ್ನೂ ಬಾಕಿ ಇರುವಾಗಲೇ ಮಾತುಕತೆ ಸ್ಥಗಿತಗೊಳಿಸಲಾಯಿತು ಎಂಬುದು ಎಂದು ಆರೋಪಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್​ ತಂಡದ ಆರ್ಥಿಕ ಮತ್ತು ಕಾನೂನು ಸ್ಥಿತಿಗತಿಯ ಬಗ್ಗೆ ಸೋಮಾನಿ ಗ್ರೂಪ್ ಕೇಳಿದ್ದ ನೂರಾರು ಪ್ರಶ್ನೆಗಳಿಗೆ ಮ್ಯಾನೇಜ್‌ಮೆಂಟ್ ಉತ್ತರ ನೀಡಿಲ್ಲ. ಮುಖ್ಯವಾಗಿ ಬಿಸಿಸಿಐಗೆ ನೀಡಬೇಕಾದ ಬಾಕಿ ಹಣ ಮತ್ತು ತಂಡದ ಮೇಲಿರುವ ಕಾನೂನು ಪ್ರಕರಣಗಳ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ.

ಹೀಗಾಗಿ ಈ ಮಾಹಿತಿಗಾಗಿ ನಾವು ಕಾಯುತ್ತಿದ್ದೆವು. ಆದರೆ ತಮ್ಮೊಂದಿಗೆ ಮಾತುಕತೆ ನಡೆಸುತ್ತಿರುವಾಗಲೇ, ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್ ಗುಟ್ಟಾಗಿ ಲಕ್ಷ್ಮಿ ಮಿತ್ತಲ್ ಅವರ ಒಕ್ಕೂಟದೊಂದಿಗೆ ‘ಸೈಡ್ ಡೀಲಿಂಗ್’ ನಡೆಸಿದೆ  ಎಂದು ಸೋಮಾನಿ ಗ್ರೂಪ್ ಗಂಭೀರ ಆರೋಪ ಮಾಡಿದ್ದಾರೆ.

ಹೊಸ ಒಪ್ಪಂದ ಹೇಗಿದೆ?

ಪ್ರಸ್ತುತ ಆಗಿರುವ ಹೊಸ ಒಪ್ಪಂದದ ಪ್ರಕಾರ, ಸುಮಾರು $1.65 ಬಿಲಿಯನ್ (₹15,660 ಕೋಟಿ) ಮೊತ್ತಕ್ಕೆ ತಂಡದ ಬಹುಪಾಲು ಷೇರುಗಳನ್ನು ಮಾರಾಟ ಮಾಡಲಾಗಿದೆ. ಇಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪಾಲು ಖರೀದಿಸಿರುವವರು…

  • ಲಕ್ಷ್ಮಿ ಮಿತ್ತಲ್ ಫ್ಯಾಮಿಲಿ: ಶೇ. 75ರಷ್ಟು ಪಾಲು.
  •  ಆದಾರ್ ಪೂನಾವಾಲಾ: ಶೇ. 18ರಷ್ಟು ಪಾಲು.
  • ಮನೋಜ್ ಬಡಾಲೆ ಮತ್ತು ಇತರರು:  ಶೇ. 7ರಷ್ಟು ಪಾಲು

ಈ ಒಪ್ಪಂದವು ಕೇವಲ ಐಪಿಎಲ್ ತಂಡ ಮಾತ್ರವಲ್ಲದೆ, ಸೌತ್ ಆಫ್ರಿಕಾ ಟಿ20 ಲೀಗ್​ನ ಪಾರ್ಲ್ ರಾಯಲ್ಸ್ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಬಾರ್ಬಡೋಸ್ ರಾಯಲ್ಸ್ ತಂಡಗಳನ್ನೂ ಒಳಗೊಂಡಿದೆ. ಅಂದರೆ ಒಂದೇ ಡೀಲ್​ ಮೂಲಕ ಮೂರು ತಂಡಗಳನ್ನು ಖರೀದಿಸಲಾಗಿದೆ.

ಸೋಮಾನಿ ಗ್ರೂಪ್​ನ ಮುಂದಿನ ನಡೆಯೇನು?

ಕಾಲ್ ಸೋಮಾನಿ ಒಕ್ಕೂಟವು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜಸ್ಥಾನ್ ರಾಯಲ್ಸ್ ಮತ್ತು ಮಿತ್ತಲ್-ಪೂನಾವಾಲಾ ನಡುವಿನ ಒಪ್ಪಂದಕ್ಕೆ ಅಡ್ಡಿಯಾಗುವಂತಹ ಪ್ರಬಲ ಕಾನೂನು ಹೆಜ್ಜೆಗಳನ್ನು ಇಡಲು ನಿರ್ಧರಿಸಿದೆ. ಅವರ ಮುಂದಿನ ಪ್ರಮುಖ ನಡೆಗಳು ಹೀಗಿರಲಿವೆ…

  • ನ್ಯಾಯಾಲಯದಲ್ಲಿ ದಾವೆ: ಸೋಮಾನಿ ಗ್ರೂಪ್ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ವಿರುದ್ಧ ಬೃಹತ್ ಮೊತ್ತದ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮೊರೆ ಹೋಗಲು ಸಿದ್ಧತೆ ನಡೆಸಿದೆ. ಸುಮಾರು $1.63 ಬಿಲಿಯನ್ ಮೌಲ್ಯದ ಈ ಕಾನೂನು ಹೋರಾಟವು ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡದಾಗುವ ಸಾಧ್ಯತೆಯಿದೆ.
  • ಬಿಸಿಸಿಐಗೆ ಅಧಿಕೃತ ದೂರು: ಈ ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿರುವ ಬಗ್ಗೆ ಮತ್ತು ನಿಯಮಗಳ ಉಲ್ಲಂಘನೆಯ ಬಗ್ಗೆ ಬಿಸಿಸಿಐ ಗೆ ಸುದೀರ್ಘ ಪತ್ರ ಬರೆಯಲು ಒಕ್ಕೂಟ ನಿರ್ಧರಿಸಿದೆ. ಬಿಸಿಸಿಐ ಈ ಒಪ್ಪಂದಕ್ಕೆ ಅಂತಿಮ ಮುದ್ರೆ ಒತ್ತದಂತೆ ತಡೆಯುವುದು ಅವರ ಮುಖ್ಯ ಉದ್ದೇಶವಾಗಿದೆ.
  • ತಡೆಯಾಜ್ಞೆಗಾಗಿ ಪ್ರಯತ್ನ: ಮಿತ್ತಲ್ ಮತ್ತು ಪೂನಾವಾಲಾ ಅವರೊಂದಿಗೆ ಮಾಡಿಕೊಂಡಿರುವ ಹೊಸ ಒಪ್ಪಂದದ ಅನುಷ್ಠಾನಕ್ಕೆ ತಡೆಯಾಜ್ಞೆ ತರಲು ಸೋಮಾನಿ ಗ್ರೂಪ್ ಕಾನೂನು ತಜ್ಞರ ಸಲಹೆ ಪಡೆಯುತ್ತಿದೆ. ಒಂದು ವೇಳೆ ತಡೆಯಾಜ್ಞೆ ಸಿಕ್ಕರೆ, 2026ರ ಮೂರನೇ ತ್ರೈಮಾಸಿಕದಲ್ಲಿ ನಡೆಯಬೇಕಿರುವ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಳ್ಳಬಹುದು.
  • ಹಣಕಾಸು ನಷ್ಟದ ಪರಿಹಾರ: ಒಪ್ಪಂದದ ಮಾತುಕತೆಗಾಗಿ ತಾವು ವ್ಯಯಿಸಿದ ಸಮಯ, ಸಂಪನ್ಮೂಲ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತಂದಿದ್ದಕ್ಕಾಗಿ ಭಾರೀ ಪ್ರಮಾಣದ ದಂಡ ಪಾವತಿಸಬೇಕೆಂದು ಅವರು ಒತ್ತಾಯಿಸಲಿದ್ದಾರೆ.

ಇದನ್ನೂ ಓದಿ: RCB ತಂಡಕ್ಕೆ ಬಿಗ್ ಶಾಕ್: ಇಂಗ್ಲೆಂಡ್​ಗೆ ತೆರಳಿದ ಫಿಲ್ ಸಾಲ್ಟ್!

ಒಟ್ಟಿನಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವದ ಈ ಹಗ್ಗಜಗ್ಗಾಟ ಈಗ ರೋಚಕ ತಿರುವು ಪಡೆದುಕೊಂಡಿದೆ. ಮಿತ್ತಲ್-ಪೂನಾವಾಲಾ ಅವರಂತಹ ದಿಗ್ಗಜರ ಪ್ರವೇಶ ಒಂದೆಡೆಯಾದರೆ, ಕಲ್ ಸೋಮಾನಿ ಒಕ್ಕೂಟದ ಕಾನೂನು ಸಮರದ ಎಚ್ಚರಿಕೆ ಮತ್ತೊಂದೆಡೆ ಫ್ರಾಂಚೈಸಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಬಿಲಿಯನ್ ಡಾಲರ್ ಸಮರದಲ್ಲಿ ಅಂತಿಮವಾಗಿ ಜಯ ಯಾರಿಗೆ ಸಿಗಲಿದೆ? ಎಂಬುದನ್ನು ಕಾದು ನೋಡಬೇಕಿದೆ.

Published On – 2:08 pm, Mon, 4 May 26

Source link

IPL 2026: ಮೊಹಮ್ಮದ್ ಸಿರಾಜ್ ‘ಡಾಟ್ ಬಾಲ್’ ಶತಕ..! – Kannada News | Mohammed Siraj has bowled 109 dot balls in IPL 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಮಾರಕ ಬೌಲಿಂಗ್ ಮೂಲಕ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಈ ಬಾರಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿದಿರುವ ಸಿರಾಜ್, ಎದುರಾಳಿ ಬ್ಯಾಟರ್‌ಗಳಿಗೆ ರನ್ ಬಿಟ್ಟುಕೊಡಲು ಹಿಂದೇಟು ಹಾಕುವ ಮೂಲಕ ‘ಡಾಟ್ ಬಾಲ್’ಗಳ ರಾಜನಾಗಿ ಹೊರಹೊಮ್ಮಿದ್ದಾರೆ.

ಡಾಟ್ ಬಾಲ್‌ ಶತಕ:

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಸಿರಾಜ್ ಇದುವರೆಗೆ ಒಟ್ಟು 109 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ ಅತಿ ಹೆಚ್ಚು ಡಾಟ್ ಬಾಲ್ ಎಸೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಎಸೆದ ಒಟ್ಟು 222 ಎಸೆತಗಳಲ್ಲಿ ಅರ್ಧದಷ್ಟು ಎಸೆತಗಳಲ್ಲಿ ಎದುರಾಳಿ ಬ್ಯಾಟರ್‌ಗಳು ರನ್ ಗಳಿಸಲು ಸಾಧ್ಯವಾಗಿಲ್ಲ ಎಂಬುದು ಅವರ ನಿಖರತೆಗೆ ಸಾಕ್ಷಿ.

ಸಿರಾಜ್ ಪ್ರಪ್ರದರ್ಶನದ ಮುಖ್ಯಾಂಶಗಳು:

  • ಪವರ್‌ಪ್ಲೇ ಪ್ರಭಾವ: ಸಿರಾಜ್ ಪವರ್‌ಪ್ಲೇ ಓವರ್‌ಗಳಲ್ಲಿ ಅತ್ಯುತ್ತಮ ದಾಳಿ ಸಂಘಟಿಸುತ್ತಿದ್ದಾರೆ. ಅಲ್ಲದೆ ಈವರೆಗೆ ಪವರ್​ಪ್ಲೇನಲ್ಲಿ ಆಡಿದ ಓವರ್​ನಲ್ಲಿ ಅವರು ಕೇವಲ 6.00 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
  • ಸ್ಥಿರತೆ: ಕಳೆದ 2025ರ ಸೀಸನ್‌ನಲ್ಲೂ 151 ಡಾಟ್ ಬಾಲ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದ ಸಿರಾಜ್, ಈ ಬಾರಿಯೂ ಅದೇ ಫಾರ್ಮ್ ಮುಂದುವರಿಸಿರುವುದು ವಿಶೇಷ.
  •  ಇತ್ತೀಚಿನ ಪಂದ್ಯ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 28 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದು ಮಿಂಚಿದ್ದರು. ಈ ವೇಳೆ ಬರೋಬ್ಬರಿ 11 ಡಾಟ್​ ಬಾಲ್​ಗಳನ್ನು ಎಸೆದಿದ್ದಾರೆ.

ಈ 11 ಡಾಟ್ ಬಾಲ್​ಗಳೊಂದಿಗೆ ಮೊಹಮ್ಮದ್ ಸಿರಾಜ್ ಐಪಿಎಲ್ 2026 ರಲ್ಲಿ ಡಾಟ್​ ಬಾಲ್​ ಶತಕ ಪೂರೈಸಿದ್ದಾರೆ. ಅಲ್ಲದೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ರಾಜಸ್ಥಾನ್ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್ ಹಾಗೂ ಗುಜರಾತ್ ಟೈಟಾನ್ಸ್ ವೇಗಿ ಕಗಿಸೊ ರಬಾಡ ಅವರನ್ನು ಹಿಂದಿಕ್ಕಿದ್ದಾರೆ.

ಡಾಟ್ ಬಾಲ್​ ಬೌಲರ್‌ಗಳ ಪಟ್ಟಿ (ಮೇ 4, 2026 ರ ವೇಳೆಗೆ):

  1. ಮೊಹಮ್ಮದ್ ಸಿರಾಜ್ (ಗುಜರಾತ್ ಟೈಟಾನ್ಸ್): 109 ಡಾಟ್ ಬಾಲ್‌ಗಳು
  2. ಜೋಫ್ರಾ ಆರ್ಚರ್ (ರಾಜಸ್ಥಾನ್ ರಾಯಲ್ಸ್): 107 ಡಾಟ್ ಬಾಲ್‌ಗಳು
  3. ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್): 105 ಡಾಟ್ ಬಾಲ್‌ಗಳು

ಇದನ್ನೂ ಓದಿ: RCB ತಂಡಕ್ಕೆ ಬಿಗ್ ಶಾಕ್: ಇಂಗ್ಲೆಂಡ್​ಗೆ ತೆರಳಿದ ಫಿಲ್ ಸಾಲ್ಟ್!

ಸಿರಾಜ್ ಪಡೆದಿರುವ ವಿಕೆಟ್ ಎಷ್ಟು?

ಈ ಬಾರಿಯ ಐಪಿಎಲ್​ನಲ್ಲಿ ಮೊಹಮ್ಮದ್ ಸಿರಾಜ್ ಈವರೆಗೆ 10 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 37 ಓವರ್​ಗಳನ್ನು ಎಸೆದಿರುವ ಅವರು ಒಟ್ಟು 11 ವಿಕೆಟ್​ಗಳನ್ನು ಸಹ ಕಬಳಿಸಿದ್ದಾರೆ. ಇಲ್ಲಿ ವಿಕೆಟ್ ಕಬಳಿಕೆ ಕಡಿಮೆ ಎನಿಸಿದರೂ ಸಿರಾಜ್ 222 ಎಸೆತಗಳಲ್ಲಿ 109 ಡಾಟ್ ಬಾಲ್ ಮಾಡಿರುವುದು ವಿಶೇಷ.

Source link

ಬೆಂಗಳೂರಿನಲ್ಲಿ ತಲೆಯೆತ್ತಲಿದೆ ದೇಶದ ಮೊದಲ ‘ಮೆದುಳು ಮತ್ತು ಮನಸ್ಸಿನ ಮ್ಯೂಸಿಯಂ’! – Kannada News | India’s First Immersive Neuroscience Museum: NIMHANS to Launch Rs 35 Cr ‘Museum of Brain and Mind’ in Bengaluru

ಬೆಂಗಳೂರು, ಮೇ 04: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅದ್ಭುತ ಲೋಕ ತೆರೆದುಕೊಳ್ಳಲಿದೆ. ನಗರದ ಪ್ರತಿಷ್ಠಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS), ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೊದಲ ನರವಿಜ್ಞಾನ ಆಧಾರಿತ ಇಮ್ಮರ್ಸಿವ್ (Immersive) ಮ್ಯೂಸಿಯಂ ಅನ್ನು ಅಭಿವೃದ್ಧಿಪಡಿಸುತ್ತಿದೆ.

‘ಮ್ಯೂಸಿಯಂ ಆಫ್ ಬ್ರೈನ್ ಅಂಡ್ ಮೈಂಡ್’ (Museum of Brain and Mind) ಎಂಬ ಹೆಸರಿನ ಈ ವಸ್ತುಸಂಗ್ರಹಾಲಯವು “ನೀವು ಹೇಗಿದ್ದೀರೋ, ಹಾಗೆ ಇರಲು ಕಾರಣವೇನು ತಿಳಿಯಿರಿ” ಎಂಬ ಸರಳ ಉದ್ದೇಶದೊಂದಿಗೆ ನಿರ್ಮಾಣವಾಗುತ್ತಿದೆ. ದೈಹಿಕ ಅಂಗವಾದ ಮೆದುಳು ಮತ್ತು ಭಾವನೆಗಳ ಕೇಂದ್ರವಾದ ಮನಸ್ಸಿನ ನಡುವಿನ ಅಂತರವನ್ನು ಹೋಗಲಾಡಿಸುವುದು ಇದರ ಮುಖ್ಯ ಗುರಿಯಾಗಿದೆ.

ಏನೆಲ್ಲಾ ಇರಲಿದೆ ಈ ಮ್ಯೂಸಿಯಂನಲ್ಲಿ?

  • ಇಮ್ಮರ್ಸಿವ್ ಅನುಭವ: ಇದು ಕೇವಲ ಪ್ರದರ್ಶನ ಕೇಂದ್ರವಲ್ಲ, ಬದಲಿಗೆ ಮೆದುಳಿನ ರಚನೆ, ನೆನಪಿನ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಮತ್ತು ಮನುಷ್ಯನ ವಿಕಾಸದ ಬಗ್ಗೆ ಡಿಜಿಟಲ್ ಲೋಕದ ಮೂಲಕ ಮಾಹಿತಿ ನೀಡಲಿದೆ.
  • 50ಕ್ಕೂ ಹೆಚ್ಚು ಸಂವಾದಾತ್ಮಕ ಸ್ಥಾಪನೆಗಳು: ಇದರಲ್ಲಿ 50ಕ್ಕೂ ಹೆಚ್ಚು ಇಂಟರಾಕ್ಟಿವ್ ಇನ್‌ಸ್ಟಾಲೇಶನ್‌ಗಳಿದ್ದು, ಸೆನ್ಸಾರ್ ಆಧಾರಿತ ಇಂಟರ್ಫೇಸ್, ಆಡಿಯೋ-ವಿಸುವಲ್ ಕಥೆ ಹೇಳುವಿಕೆ ಮತ್ತು ಗೇಮಿಂಗ್ ಮೂಲಕ ವಿಜ್ಞಾನವನ್ನು ಸರಳವಾಗಿ ವಿವರಿಸಲಾಗುತ್ತದೆ.
  • ಮೆದುಳಿನ ಬೃಹತ್ ಸಂಗ್ರಹ: ಇಲ್ಲಿ ಸಂರಕ್ಷಿಸಲಾದ ಮೆದುಳುಗಳ ಸಂಗ್ರಹವಿರಲಿದ್ದು, ಇದು ಸಂಶೋಧಕರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಲಿದೆ.
  • ಚಿಕಿತ್ಸಾ ಪದ್ಧತಿಗಳ ಪರಿಚಯ: ನರರೋಗ ಮತ್ತು ಮಾನಸಿಕ ಅಸ್ವಸ್ಥತೆಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸಂಗೀತ ಮತ್ತು ಕಲರ್ ಥೆರಪಿಯಂತಹ (Music and Colour Therapy) ಆಧುನಿಕ ವಿಧಾನಗಳನ್ನು ಪರಿಚಯಿಸಲಾಗುತ್ತದೆ.

ಮುಖ್ಯ ಉದ್ದೇಶಗಳು

ಟ್ಯಾಗ್‌ಬಿನ್ (Tagbin) ಎಂಬ ಖಾಸಗಿ ಸಂಸ್ಥೆಯು ಇದರ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮತ್ತು ಸಾಮಾಜಿಕ ಕಳಂಕವನ್ನು ಹೋಗಲಾಡಿಸುವುದು ಈ ಯೋಜನೆಯ ಪ್ರಮುಖ ಆಶಯವಾಗಿದೆ. ಜನರಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ರೋಗಿಗಳ ಬಗ್ಗೆ ಸಹಾನುಭೂತಿ ಬೆಳೆಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ಬೆಂಗಳೂರಿನ ನಿಮ್ಹಾನ್ಸ್ ಆವರಣದಲ್ಲಿ ಸಿದ್ಧಗೊಳ್ಳುತ್ತಿರುವ ಈ ಅತ್ಯಾಧುನಿಕ ಮ್ಯೂಸಿಯಂ ಇನ್ನೆರಡು ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:52 am, Mon, 4 May 26

Source link

ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆದ್ದ ಬೆನ್ನಲ್ಲೇ ಎಫ್​ಐಆರ್! ಬಿಜೆಪಿಯ ಜೀವರಾಜ್​ ಹೇಳಿದ್ದೇನು? – Kannada News | Sringeri MLA DN Jeevaraj Reacts to FIR After Winning Post Recount: Claims Victory for Truth and Constitution

ಚಿಕ್ಕಮಗಳೂರು, ಮೇ 4: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಂತಿಮವಾಗಿ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಅವರು ಇಂದು (ಮೇ 4) ಅಧಿಕೃತವಾಗಿ ಶಾಸಕ ಸ್ಥಾನದ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಕಳೆದ ಮೂರು ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ಲಭಿಸಿದ ಈ ಜಯವನ್ನು ಅವರು ‘ಸತ್ಯಕ್ಕೆ ಸಿಕ್ಕ ಜಯ’ ಎಂದು ಬಣ್ಣಿಸಿದ್ದಾರೆ. ತಮ್ಮ ಗೆಲುವಿನ ಬೆನ್ನಲ್ಲೇ ದಾಖಲಾಗಿರುವ ಎಫ್‌ಐಆರ್ (FIR) ಕುರಿತು ಟಿವಿ9 ಗೆ ಪ್ರತಿಕ್ರಿಯಿಸಿದ ಜೀವರಾಜ್, ‘ಸೋತ ಮೇಲೆ ಟ್ಯಾಂಪರಿಂಗ್ ಆರೋಪ ಮಾಡುವುದು ಸರಿಯಲ್ಲ. ಈ ಹಿಂದೆ ಗೆದ್ದಾಗ ಅದು ಸಾಂವಿಧಾನಿಕ ಗೆಲುವು, ನಾವು ಗೆದ್ದರೆ ಟ್ಯಾಂಪರಿಂಗ್ ಎನ್ನುತ್ತಾರೆ. ನನ್ನ ಮೇಲೆ ಎಫ್‌ಐಆರ್ ದಾಖಲಿಸಲು ಅವಕಾಶವೇ ಇಲ್ಲದಿದ್ದರೂ ಅಕ್ರಮವಾಗಿ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ’ ಎಂದು ಗುಡುಗಿದ್ದಾರೆ.

ಮರು ಎಣಿಕೆಯಲ್ಲಿ ಆಗಿದ್ದೇನು?

2023ರ ಚುನಾವಣೆ ನಂತರ ಮತ ಎಣಿಕೆ ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಜೀವರಾಜ್, ಮರು ಎಣಿಕೆ ವೇಳೆ ಈ ಹಿಂದೆ ತಿರಸ್ಕೃತಗೊಂಡಿದ್ದ ಮತಗಳಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ ಎಂದು ತಿಳಿಸಿದ್ದಾರೆ. ಮರು ಎಣಿಕೆ ವೇಳೆ 25 ಮತಗಳಿರುವ ಬಂಡಲ್‌ಗಳು ತಿರಸ್ಕೃತವಾಗಿವೆ. ಈ ಹಿಂದೆ ಅಕ್ರಮವಾಗಿ ಮತಗಳನ್ನು ಸೇರಿಸಿ ಗೆಲ್ಲುವಂತೆ ಮಾಡಲಾಗಿತ್ತು. ನಾವು ಮೊದಲೇ ಮತಪತ್ರಗಳಿಗೆ ಭದ್ರತೆ ನೀಡಿ ಎಂದು ಕೇಳಿಕೊಂಡಿದ್ದೆವು ಎಂದು ಅವರು ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಸದ್ಯ ಹೈಕೋರ್ಟ್ ಆದೇಶದಂತೆ ಅಂಚೆ ಮತಗಳ ಮರು ಎಣಿಕೆಯಲ್ಲಿ ರಾಜೇಗೌಡ ವಿರುದ್ಧ ಜೀವರಾಜ್ ಜಯ ಸಾಧಿಸಿದ್ದು, ಶೃಂಗೇರಿಯ ನೂತನ ಶಾಸಕರಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಗಲಕೋಟೆ ಉಪಚುನಾವಣೆ: ಗೆಲುವನ್ನು ತಂದೆಗೆ ಅರ್ಪಿಸಿ ಉಮೇಶ್​​ ಮೇಟಿ ಭಾವುಕ – Kannada News | Umesh Meti Secures Resounding Victory in Bagalkot By Election, Dedicates Win to Late Father

ಬಾಗಲಕೋಟೆ, ಮೇ 04: ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿದ್ದಾರೆ. 21,866 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದಾರೆ. ಉಮೇಶ್ ಮೇಟಿ 97,941 ಮತಗಳನ್ನು ಪಡೆದರೆ, ವೀರಣ್ಣ ಚರಂತಿಮಠ 76,075 ಮತಗಳನ್ನು ಗಳಿಸಿದ್ದಾರೆ. ಗೆಲುವಿನ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಉಮೇಶ್ ಮೇಟಿ, ತಮ್ಮ ವಿಜಯವನ್ನು ತಂದೆ ಹೆಚ್​​.ವೈ. ಮೇಟಿ ಅವರಿಗೆ ಅರ್ಪಿಸಿ ಭಾವುಕರಾದರು. ಅಲ್ಲದೆ, ಇದು ತಮ್ಮ ಗೆಲುವಲ್ಲ, ಕಾರ್ಯಕರ್ತರ ಗೆಲುವು ಎಂದು ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಲೈವ್​ ಅಪ್​​ಡೇಟ್​​ಗಾಗಿ ಇಲ್ಲಿ ಕ್ಲಿಕ್ ಮಾಡಿ.

Source link

Exit mobile version