ಚೆನ್ನೈ, (ಮೇ 04): ತಮಿಳುನಾಡು ರಾಜಕೀಯದಲ್ಲಿ (Tamilnadu Politics) ದಳಪತಿ ಸಂಚಲನ ಮೂಡಿಸಿದ್ದಾರೆ. ದ್ರಾವಿಡ ಪಕ್ಷಗಳ ದಶಕಗಳ ಪ್ರಾಬಲ್ಯವನ್ನು ಮುರಿದ ದಳಪತಿ ವಿಜಯ್ (Vijay) ನೇತೃತ್ವದ ತಮಿಳಗಾ ವೆಟ್ರಿ ಕಲಗಂ (ಟಿವಿಕೆ) ತನ್ನ ಮೊದಲ ಚುನಾವಣೆಯಲ್ಲಿ (Election) ಭರ್ಜರಿ ಸಾಧನೆ ಮಾಡಿದೆ. ಇದರೊಂದಗೆ ತಮಿಳುನಾಡಿನಲ್ಲಿ ದಶಕಗಳಿಂದ ನಡೆಯುತ್ತಿರುವ ದ್ರಾವಿಡ ರಾಜಕೀಯದ ಲೆಕ್ಕಾಚಾರವನ್ನೇ ವಿಜಯ್ ಉಲ್ಟಾ ಮಾಡಿದ್ದಾರೆ. ಇನ್ನು ಟಿವಿಕೆ ಗಮನಾರ್ಹ ಸಾಧನೆ ಬಗ್ಗೆ ವಿಜಯ್ ತಂದೆ ಎಸ್.ಎ.ಚಂದ್ರಶೇಖರ್ ಫುಲ್ ಖುಷ್ ಆಗಿದ್ದು, ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್ಗೆ ಆಫರ್ ನೀಡಿದ್ದಾರೆ.
ಟಿವಿಕೆ ಗೆದ್ದಿರುವುದಕ್ಕೆ ಮಾಧ್ಯಮಗಳ ಜತೆ ಖುಷಿ ಹಂಚಿಕೊಂಡಿರುವ ವಿಜಯ್ ತಂದೆ ಎಸ್.ಎ.ಚಂದ್ರಶೇಖರ್,ಟಿವಿಕೆಗೆ ಬಹುಮತ ಬಂದಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ. ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಳ್ಳಲು ಸಿದ್ಧ ಎಂದು ಬಹಿರಂಗವಾಗಿಯೇ ಘೋಷಣೆ ಮಾಡಿದ್ದಾರೆ.
