ಮೊಜ್ತಬಾ ಖಮೇನಿ ಆರೋಗ್ಯ ಸ್ಥಿತಿ ತೀವ್ರ ಗಂಭೀರ; ಇರಾನ್‌ನಲ್ಲಿ ಹರಡುತ್ತಿದೆ ಸುಪ್ರೀಂ ನಾಯಕನ ಸಾವಿನ ವದಂತಿ – Kannada News | Iran supreme leader Mojtaba Khamenei in critical condition rushed to hospital says Iranian Reports
ಟೆಹ್ರಾನ್, ಆಗಸ್ಟ್ 8: ಇರಾನ್‌ನ ಸುಪ್ರೀಂ ನಾಯಕ (Supreme Leader) ಮೊಜ್ತಬಾ ಖಮೇನಿ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ನ ಒಳಗಿನ ಮೂಲಗಳನ್ನು ಉಲ್ಲೇಖಿಸಿ ಜೆರುಸಲೇಮ್ ಪೋಸ್ಟ್ ಮಾಡಿದ ವರದಿಗಳ ಪ್ರಕಾರ, ಖಮೇನಿ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ. “ಸದ್ಯದಲ್ಲೇ ಅವರ ಸಾವಿನ ಸುದ್ದಿ ಕೇಳಿಬಂದರೂ ಆಶ್ಚರ್ಯವಿಲ್ಲ” ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಝೇಶ್ಕಿಯನ್ ಅವರ ಆಡಳಿತದ ಮೂಲವೊಂದು ತಿಳಿಸಿದೆ. ಇರಾನ್‌ನ ಸುಪ್ರೀಂ ನಾಯಕನಾಗಿ…