Headlines

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗರ್ಭಿಣಿ ಹೆಂಡತಿ ಬೀದಿಗೆ! ಗಂಡನ ಮೊಬೈಲ್‌ನಲ್ಲಿತ್ತು ಅಸಹ್ಯ ಚಿತ್ರಗಳು – Kannada News | Dasarahalli Illicit Affair: Pregnant Wife Harassed, Left Homeless by BMTC Officer

ಬೆಂಗಳೂರು, ಮೇ.3: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗರ್ಭಿಣಿ ಹೆಂಡತಿಯನ್ನೇ ಮನೆಯಿಂದ ಆಚೆ ಹಾಕಿರುವ ಅಮಾನವೀಯ ಘಟನೆ ದಾಸರಹಳ್ಳಿಯ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಟಿಸಿ ಸೆಕ್ಯೂರಿಟಿ ಇನ್‌ಚಾರ್ಜ್ ಆಗಿರುವ ಜಗದೀಪ್ (42) ತನ್ನ ಪತ್ನಿ ಶ್ವೇತಾ (32)ಗೆ ದ್ರೋಹ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಶ್ವೇತಾ ಮತ್ತು ಜಗದೀಪ್ 14 ವರ್ಷಗಳ ಹಿಂದೆ ವಿವಾಹವಾಗಿದ್ದರು. ಜಯನಗರದ ಸರ್ಕಾರಿ ಕ್ವಾರ್ಟರ್ಸ್‌ನಲ್ಲಿ ಇಬ್ಬರೂ ವಾಸವಿದ್ದರು. ಪತಿ ಜಗದೀಪ್‌ನ ವರ್ತನೆಯಲ್ಲೂ ತುಂಬಾ ಬದಲಾವಣೆಗಳು ಆಗಿತ್ತು. ಇದರಿಂದ ಅನುಮಾನಗೊಂಡು ವಾಟ್ಸಾಪ್ ಸಂದೇಶಗಳನ್ನು ಪರಿಶೀಲಿಸಿದಾಗ…

Read More

Video: ರೈಲಿನ ಸೀಟುಗಳ ಹರಿದು ಯುವಕರ ಪುಂಡಾಟ – Kannada News | Vandalism on Train Caught on Camera, Sparks Calls for Strict Action

ಯುವಕರು ರೈಲಿನ ಸೀಟುಗಳನ್ನು ಹರಿದು ಹಾಕಿರುವ ವಿಡಿಯೋ ವೈರಲ್ ಆಗಿದೆ. ರೈಲ್ವೆ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಒದಗಿಸಿರುವ ಸೌಲಭ್ಯಗಳನ್ನು ಈ ಕಿಡಿಗೇಡಿಗಳು ತಮ್ಮ ವೈಯಕ್ತಿಕ ಮೋಜಿನ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ರೈಲಿನ ಸೀಟುಗಳನ್ನು ಹರಿದು ಹಾಕುವುದು ಮತ್ತು ಅವುಗಳನ್ನು ಕಿತ್ತು ಎಸೆಯುವ ಮೂಲಕ ವಿಕೃತ ಆನಂದ ಪಡೆಯುತ್ತಾ, ಈ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರೈಲ್ವೆಯು ದೇಶದ ಜೀವನಾಡಿ ಹಾಗೂ ಸಾಮಾನ್ಯ ಜನರ ಆಸ್ತಿಯಾಗಿದೆ. ಇಂತಹ ಗೂಂಡಾವರ್ತನೆಯಿಂದ ಕೇವಲ ಆರ್ಥಿಕ ನಷ್ಟವಾಗುವುದು…

Read More

Gold Rates: ಚಿನ್ನದ ಬೆಲೆ 3 ವಾರಗಳಿಂದ 500 ರೂನಷ್ಟು ಇಳಿಕೆ – Kannada News | Gold Price Today on 3rd May 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಮೇ 3: ಚಿನ್ನದ ಬೆಲೆ ಸಾಕಷ್ಟು ಏರಿಳಿತಗಳ ನಡುವೆಯೂ ಬಹಳಷ್ಟು ಕುಸಿದಿದೆ. ಈ ವಾರದ ಆರಂಭದಲ್ಲಿ 14,120 ರೂ ಇದ್ದ ಚಿನ್ನದ ಬೆಲೆ (Gold Rates) 13,835 ರೂಗೆ ಇಳಿದಿದೆ. ಕಳೆದ 10 ದಿನದಲ್ಲಿ ಸುಮಾರು 350 ರೂನಷ್ಟು ಬೆಲೆ ಕುಸಿತವಾಗಿದೆ. ಕಳೆದ ಮೂರು ವಾರಗಳಲ್ಲಿ 400 ರೂಗೂ ಮೇಲ್ಪಟ್ಟು ಬೆಲೆ ಇಳಿದಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ಇಳಿದಿದೆ. ಇದಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆ ಹೆಚ್ಚು ಸ್ಥಿರವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್…

Read More

IPL 2026: ನಿರ್ಣಾಯಕ ಹಂತಕ್ಕೂ ಮುನ್ನ ವಿದೇಶಕ್ಕೆ ಹಾರಿದ RCB ಪಡೆ! – Kannada News | IPL 2026: RCB take mid season Maldives trip

IPL 2026: ಐಪಿಎಲ್ 2026ರ ಸೀಸನ್ ಅತ್ಯಂತ ರೋಚಕ ಘಟ್ಟವನ್ನು ತಲುಪಿದೆ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಮುಂದಿನ ಪಂದ್ಯಗಳಿಗೂ ಮುನ್ನ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಜ್ಜಾಗಲು ಒಂದು ಪುಟ್ಟ ವಿರಾಮ ಪಡೆದುಕೊಂಢಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ನಂತರ ಸಿಕ್ಕ ಒಂದು ವಾರದ ಬಿಡುವನ್ನು ಬಳಸಿಕೊಂಡಿರುವ ತಂಡ, ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದೆ. ವಿಶ್ರಾಂತಿ ಮತ್ತು ರಿಫ್ರೆಶ್: ಟೂರ್ನಿಯ ಸತತ ಪ್ರಯಾಣ ಮತ್ತು ಒತ್ತಡದಿಂದ ಹೊರಬರಲು ಮ್ಯಾನೇಜ್‌ಮೆಂಟ್ ಈ ಪ್ರವಾಸವನ್ನು ಆಯೋಜಿಸಿದೆ….

Read More

ಶೃಂಗೇರಿ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ: ವಿಜಯೇಂದ್ರ ಹರ್ಷ, ಜೀವರಾಜ್‌ಗೆ ಅಭಿನಂದನೆ! – Kannada News | Shringeri Recount Results: BY Vijayendra Hails Victory of Truth; Congratulates DN Jeevaraj on Legal Triumph

ಶೃಂಗೇರಿ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ: ವಿಜಯೇಂದ್ರ ಹರ್ಷ ಬೆಂಗಳೂರು , ಮೇ 03: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯ (postal ballot recount)  ಫಲಿತಾಂಶ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ. ಹೈಕೋರ್ಟ್ ಆದೇಶದಂತೆ ನಡೆದ ಈ ಮರು ಎಣಿಕೆ ಪ್ರಕ್ರಿಯೆಯ ನಂತರ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶೃಂಗೇರಿಯ ಧರ್ಮಭೂಮಿಯಲ್ಲಿ ಅಂತಿಮವಾಗಿ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರ…

Read More

ಒಂದೇ ಮದುವೆ ಸಮಾರಂಭದಲ್ಲಿ ಸಮಂತಾ-ನಾಗ ಚೈತನ್ಯ; ಮಾಜಿ ಜೋಡಿಯ ಫೋಟೋ ವೈರಲ್ – Kannada News | Samantha Naga Chaitanya attend same wedding reception with Raj Nidimoru Sobhita Dhulipala

ಟಾಲಿವುಡ್‌ನ ಖ್ಯಾತ ವಿತರಕ ಮತ್ತು ನಿರ್ಮಾಪಕ ಸುನಿಲ್ ನಾರಂಗ್ ಅವರ ಪುತ್ರಿ ಸಿಮ್ರಾನ್ ನಾರಂಗ್ ಅವರ ವಿವಾಹ ಆರತಕ್ಷತೆ ಶನಿವಾರ (ಮೇ 2) ರಾತ್ರಿ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಸಮಾರಂಭದಲ್ಲಿ ತೆಲುಗು (Tollywood) ಚಿತ್ರರಂಗದ ದಿಗ್ಗಜರಾದ ಚಿರಂಜೀವಿ, ನಾಗಾರ್ಜುನ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಆದರೆ, ಎಲ್ಲರ ಕಣ್ಣು ನೆಟ್ಟಿದ್ದು ಮಾತ್ರ ಮಾಜಿ ದಂಪತಿಗಳಾದ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ ಅವರ ಮೇಲೆ. ಆ ಸಂದರ್ಭದ ಕೆಲವು ಫೋಟೋ ಮತ್ತು…

Read More

IPL 2026: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಮರುಪರಿಶೀಲನೆ! – Kannada News | IPL 2026: BCCI plans to review Impact Player rule

ಐಪಿಎಲ್ 2026ರ ನಂತರ ‘ಇಂಪ್ಯಾಕ್ಟ್ ಪ್ಲೇಯರ್’ ನಿಯಮಕ್ಕೆ ಕೊನೆ ಹಾಡಲಾಗುತ್ತದೆಯೇ? ಈ ಪ್ರಶ್ನೆಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉತ್ತರ ನೀಡಿದ್ದಾರೆ. ಸದ್ಯದ ಕ್ರಿಕೆಟ್ ವೇಗಕ್ಕೆ ಹೊಸ ಆಯಾಮ ನೀಡಿರುವ ಈ ನಿಯಮದ ಪರ-ವಿರೋಧ ಚರ್ಚೆಗಳ ನಡುವೆ, ಮಂಡಳಿಯ ಮುಂದಿನ ನಡೆಯೇನು ಎಂಬುದು ಈಗ ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಈ ನಿಯಮವನ್ನು ಮರುಪರಿಶೀಲಿಸುವುದಾಗಿ ಬಿಸಿಸಿಐ ಕಡೆಯಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ. ಈ ಕುರಿತು ಬಿಸಿಸಿಐನಿಂದ ಸಿಕ್ಕಿರುವ ಮಾಹಿತಿ ಈ ಕೆಳಗಿನಂತಿದೆ… ತಕ್ಷಣದ ಬದಲಾವಣೆ ಇಲ್ಲ: ಪ್ರಸಕ್ತ…

Read More

ಜಬಲ್ಪುರ ದೋಣಿ ದುರಂತ, 13ಕ್ಕೇರಿದ ಸಾವಿನ ಸಂಖ್ಯೆ, ಚಿಕ್ಕಪ್ಪ-ಮಗುವಿನ ಶವ ಪತ್ತೆ – Kannada News | Final Body Recovered in Jabalpur Boat Incident, Toll Reaches 13

ಜಬಲ್ಪುರ, ಮೇ 03: ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಸಂಭವಿಸಿದ ಕ್ರೂಸ್ ದೋಣಿ ದುರಂತದ ಕರಾಳತೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಈಗ 13ಕ್ಕೆ ಏರಿಕೆಯಾಗಿದೆ. ಬಾರ್ಗಿ ಅಣೆಕಟ್ಟಿನ ನರ್ಮದಾ ನದಿಯಲ್ಲಿ ನಡೆದ ಈ ಭೀಕರ ಘಟನೆಯಲ್ಲಿ ನಾಪತ್ತೆಯಾಗಿದ್ದವರ ಪತ್ತೆಗಾಗಿ ನಡೆಯುತ್ತಿದ್ದ ಕಾರ್ಯಾಚರಣೆ ವೇಳೆ ಎರಡು ಶವ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮೃತರನ್ನು ಖಮರಿಯಾದ ಆರ್ಡನೆನ್ಸ್ ಫ್ಯಾಕ್ಟರಿಯ ಉದ್ಯೋಗಿಯ ಮಗ ಮಯೂರಾಮ್ ಮತ್ತು ಆತನ ಚಿಕ್ಕಪ್ಪ 50 ವರ್ಷದ ಕಾಮರಾಜ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಇವರಿಗಾಗಿ…

Read More

Gajalakshmi Rajayoga: ಗಜಲಕ್ಷ್ಮಿ ರಾಜಯೋಗ; ಗುರು-ಶುಕ್ರರ ಅಪರೂಪದ ಸಂಯೋಗ, ಈ 5 ರಾಶಿಯವರ ಬದುಕು ಬಂಗಾರ! – Kannada News | June 10th Gajalakshmi Rajayoga: Jupiter and Venus Conjunction Brings Wealth

ಜೂನ್ 10 ರಂದು ಒಂದು ಅದ್ಭುತ ವಿದ್ಯಮಾನ ಘಟಿಸಲಿದೆ. ದೃಕ್ ಪಂಚಾಂಗದ ಪ್ರಕಾರ, ಅಂದು ಜ್ಞಾನದ ಕಾರಕ ಗುರು ಮತ್ತು ಐಶ್ವರ್ಯದ ಕಾರಕ ಶುಕ್ರ ಒಂದೇ ಮಟ್ಟದಲ್ಲಿ ಸಂಧಿಸಲಿದ್ದಾರೆ. ಈ ಇಬ್ಬರು ಶುಭ ಗ್ರಹಗಳ ನಿಕಟ ಸಂಯೋಗದಿಂದಾಗಿ ಅತ್ಯಂತ ಶಕ್ತಿಶಾಲಿ ‘ಗಜಲಕ್ಷ್ಮಿ ರಾಜಯೋಗ’ ನಿರ್ಮಾಣವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರುವು ವಿಸ್ತರಣೆ ಮತ್ತು ಜ್ಞಾನವನ್ನು ಪ್ರತಿನಿಧಿಸಿದರೆ, ಶುಕ್ರನು ಸುಖ-ಸಂತೋಷ ಮತ್ತು ಆಕರ್ಷಣೆಯನ್ನು ನೀಡುತ್ತಾನೆ. ಈ ಇಬ್ಬರ ಮಿಲನವು ವೃತ್ತಿ, ವ್ಯವಹಾರ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು…

Read More

ಬೀಗ ಹಾಕಿದ ಮನೆಯೊಳಗೆ ನಾಲ್ವರು ಮಕ್ಕಳ ಭೀಕರ ಹತ್ಯೆ, ತಾಯಿ ನಾಪತ್ತೆ – Kannada News | Four Children Found Dead Inside Locked Home in Uttar Pradesh, Probe Underway

ಲಕ್ನೋ, ಮೇ 03: ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಕ್ರೌರ್ಯದ ಪರಾಕಾಷ್ಠೆ ಮೆರೆದಿರುವ ಹಂತಕರು, ನಾಲ್ವರು ಅಪ್ರಾಪ್ತ ಒಡಹುಟ್ಟಿದವರನ್ನು ಇಟ್ಟಿಗೆಯಿಂದ ಜಜ್ಜಿ,ಚೂಪಾದ ಆಯುಧಗಳಿಂದ ಇರಿದು ಹತ್ಯೆ(Murder) ಮಾಡಿದ್ದಾರೆ. ಮಧ್ಯಾಹ್ನದ ವೇಳೆ ಬೀಗ ಹಾಕಿದ ಮನೆಯೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವಗಳನ್ನು ಕಂಡು ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಕೊಲೆಯಾದವರು 8,10,12 ಮತ್ತು 14 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಹೆಣ್ಣು ಮಗಳು. ಈ ನಾಲ್ವರೂ ಒಡಹುಟ್ಟಿದವರಾಗಿದ್ದು, ಮನೆಯೊಳಗಿನ ರಣರಂಗದಂತಹ ದೃಶ್ಯ ಕಂಡು ತನಿಖಾಧಿಕಾರಿಗಳೇ…

Read More