ಅಮುಕು ಡುಮುಕು ನಿಜಕ್ಕೂ ಪೆಟ್ರೋಲ್ ಕುಡಿದರಾ? ಸಿನಿಮಾ ಪ್ರಚಾರಕ್ಕೆ ಚೀಪ್ ಗಿಮಿಕ್ – Kannada News | Is Amuku Dumuku Manju Really Drunk Petrol Here is The truth Behind it

ಅಮುಕು ಡುಮುಕು ಎಂಬ ವ್ಯಕ್ತಿಯ ಬಗ್ಗೆ ನಿಮಗೆ ಗೊತ್ತಿರಬದು. ಸೋಶಿಯಲ್ ಮೀಡಿಯಾದಲ್ಲಿ ಈ ವ್ಯಕ್ತಿಯು ಸಾಕಷ್ಟು ಜನಪ್ರಿಯತೆ ಪಡೆದರು. ಜೀ ಕನ್ನಡದ ರಿಯಾಲಿಟಿ ಶೋಗೆ ಅತಿಥಿಯಾಗೂ ತೆರಳಿದ್ದರು. ಈಗ ಆ ವ್ಯಕ್ತಿ ಮಾಡಿಕೊಂಡ ಒಂದು ಎಡವಟ್ಟು ಚರ್ಚೆಗೆ ಕಾರಣ ಆಗಿದೆ. ಸಿನಿಮಾ ಪ್ರಚಾರಕ್ಕಾಗಿ ಅವರು ಪೆಟ್ರೋಲ್ ಕುಡಿದರು ಮತ್ತು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂಬ ವಿಡಿಯೋ ವೈರಲ್ ಆಯಿತು. ಈ ವಿಡಿಯೋದ ಅಸಲಿಯತ್ತು ಹೊರ ಬಂದಿದೆ.

ಅಮುಕು ಡುಮುಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದ ಈ ವ್ಯಕ್ತಿ ಹೆಸರು ಮಂಜು. ಸೋಶಿಯಲ್ ಮೀಡಿಯಾದಲ್ಲಿ ವಿವಿಧ ವಿಡಿಯೋಗಳನ್ನು ಹಾಕಿಕೊಂಡು ವೈರಲ್ ಆಗುತ್ತಾ ಇರುತ್ತಾರೆ. ಈಗ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅವರು ಸೂರಿ ಅಣ್ಣ ಸಿನಿಮಾ ಗೆಲ್ಲಬೇಕು ಎಂದು ಪೆಟ್ರೋಲ್ ಕುಡಿದರು. ಆ ಬಳಿಕ ಅವರು ಒದ್ದಾಡಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಈ ವಿಡಿಯೋ ಸಾಕಷ್ಟು ಹರಿದಾಡಿತು. ಮಂಜುಗೆ ಪೂರ್ತಿಯಾಗಿ ಹುಚ್ಚು ಹಿಡಿದಿದೆ ಎಂದು ಹೇಳಲಾಯಿತು. ಸೋಶಿಯಲ್ ಮೀಡಿಯಾ ಜನಪ್ರಿಯತೆ ಹಾಗೂ ಸಿನಿಮಾ ಜನಪ್ರಿಯತೆಗೆ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದೆಲ್ಲ ಮಾತನಾಡಿಕೊಳ್ಳಲಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಜು ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಅಸಲಿಗೆ ಅದು ಪೆಟ್ರೋಲ್ ಆಗಿಯೇ ಇರಲಿಲ್ಲವಂತೆ.

‘ಅಣ್ಣ ನಿಂಗೆ ಯಾರು ಏನೇ ಅನ್ನಲ್ಲಿ, ನಿಮ್ಮ ಸಿನಿಮಾ ಗೆಲ್ಲಬೇಕು. ಸಲಗ ಸೂರಿ ಅಣ್ಣನ ಸಿನಿಮಾ ಗೆಲ್ಲಬೇಕು’ ಎನ್ನುತ್ತಾ ಪೆಟ್ರೋಲ್ ಕುಡಿದರು. ಸೂರಿ ಅಣ್ಣ ಅವರನ್ನು ಎತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದೃಶ್ಯ ಇತ್ತು.

ಇದನ್ನೂ ಓದಿ: ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಆಸೆ ಈಡೇರಿಸಿದ ವಿಜಯ್ ದೇವರಕೊಂಡ

ಇದಕ್ಕೂ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಬಿಂದು ಜೀರಾಗೆ ಜೇನು ತುಪ್ಪ ಬೆರೆಸಿದ್ದರು ಮಂಜು. ಆಗ ಪೆಟ್ರೋಲ್ ಕಲರ್​​ಗೆ ಅದು ತಿರುಗಿತ್ತು. ಈ ರೀತಿಯಲ್ಲಿ ಮಾಡಿ ಅವರು ಪೆಟ್ರೋಲ್ ಎಂದು ಕುಡಿದಿದ್ದರು. ಇದು ಸಿನಿಮಾ ಪ್ರಚಾರ ಅಲ್ಲ ಎಂದಿದ್ದರು.

ಮತ್ತಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮತ್ತೆ ಮದುವೆಯಾದ ಪತ್ನಿ; 23 ದಿನಗಳ ಬಳಿಕ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ! – Kannada News | Wife remarries short after Husband’s Death; Body Exhumed for Post Mortem After 23 Days

ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಮತ್ತೆ ಮದುವೆಯಾದ ಪತ್ನಿ; 23 ದಿನಗಳ ಬಳಿಕ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ!

ತುಮಕೂರು, ಫೆಬ್ರವರಿ 27: ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿರುವ ಹಿನ್ನೆಲೆ ಮೃತನ ಸಾವಿನ ಕುರಿತು ಸಂಶಯ ವ್ಯಕ್ತವಾಗಿದ್ದು, ವ್ಯಕ್ತಿ ಸತ್ತ 23 ದಿನಗಳ ಬಳಿಕ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮೃತನ ಸಹೋದರಿಯಿಂದ ಪೊಲೀಸ್ ಠಾಣೆಗೆ ದೂರು!

ದಾಸರಹಳ್ಳಿ ನಿವಾಸಿ ಪರಮೇಶ್ (50) ಜನವರಿ 31ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದೇ ದಿನ ಅಂತ್ಯಕ್ರಿಯೆ ನಡೆಸಿ ಮಣ್ಣಿನಲ್ಲಿ ಸಮಾಧಿ ಮಾಡಲಾಗಿತ್ತು. ಆದರೆ ಪರಮೇಶ್ ಮೃತಪಟ್ಟ ಕೆಲವೇ ದಿನಗಳಲ್ಲಿ, ಅಂದರೆ ಫೆಬ್ರುವರಿ 19ರಂದು ಅವರ ಪತ್ನಿ ಮತ್ತೊಂದು ಮದುವೆಯಾಗಿರುವುದು ಸಂಬಂಧಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಮೃತನ ಸಹೋದರಿ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಸಹೋದರನ ಸಾವು ಸಹಜವಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಪರಮೇಶ್ ಮೃತಪಟ್ಟ ಸಂದರ್ಭದಲ್ಲಿ ಅವರ ಮೂಗಿನ ಪಕ್ಕದಲ್ಲಿ ಗಾಯದ ಗುರುತು ಇದ್ದದ್ದು ಹಾಗೂ ಗುಪ್ತಾಂಗ ಊದಿಕೊಂಡಿದ್ದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರುವ ಅವರು ಅಣ್ಣನ ಸಾವು ಸಹಜವಲ್ಲವೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಅಂಶಗಳು ಸಾವಿನ ಕುರಿತು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿವೆ ಎಂದು ತಿಳಿಸಿದ್ದಾರೆ.

ಒಂದು ವಾರದ ಬಳಿಕ ಬಯಲಾಗುತ್ತೆ ರಹಸ್ಯ

ದೂರು ಹಿನ್ನೆಲೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಹಸೀಲ್ದಾರ್ ರಾಜೇಶ್ವರಿ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣವಾಗಿರುವುದರಿಂದ ವೈದ್ಯರು ಸಂಪೂರ್ಣ ಪರಿಶೀಲನೆ ನಡೆಸಲಿದ್ದು, ಮರಣೋತ್ತರ ಪರೀಕ್ಷೆಯ ವರದಿ ಒಂದು ವಾರದೊಳಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ವರದಿ ಆಧಾರವಾಗಿ ಪರಮೇಶ್ ಅವರ ಸಾವಿನ ನಿಜವಾದ ಕಾರಣ ಬಹಿರಂಗವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಹೈ-ಟೆನ್ಷನ್ ಲೈನ್ ಸ್ಪರ್ಶಿಸಿ ಕೆಳಗೆ ಬಿದ್ದ ವ್ಯಕ್ತಿ, ಸಿಪಿಆರ್ ಮೂಲಕ ಜೀವ ಉಳಿಸಿದ ಯುವಕ – Kannada News | Youth’s Swift CPR Revives Worker After High Voltage Shock

ಬುಲಂದ್​ಶಹರ್, ಫೆಬ್ರವರಿ 27: ಅಂಗಡಿಯೊಂದರೆ ಹೊರಗೆ ಟಿನ್ ಶೆಡ್ ಅಳವಡಿಸುತ್ತಿದ್ದ ಕೆಲಸಗಾರ ಆಕಸ್ಮಿಕವಾಗಿ ಹೈ-ಟೆನ್ಷನ್ ಲೈನ್ ಸ್ಪರ್ಶಿಸಿ ಕೆಳಗೆ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​ನಲ್ಲಿ ನಡೆದಿದೆ. ಬಳಿಕ ಅಲ್ಲಿದ್ದ ಯುವಕನೊಬ್ಬ ಕೂಡಲೇ ಬಂದು ಸಿಪಿಆರ್ ಮಾಡುವ ಮೂಲಕ ಅವರ ಪ್ರಾಣ ಉಳಿಸಿದ್ದಾರೆ. ಖುರ್ಜಾ ನಗರ ಕೊತ್ವಾಲಿ ಪೊಲೀಸ್ ವ್ಯಾಪ್ತಿಯ ಖುರ್ಜಾ ತಹಸಿಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ವಿದ್ಯುತ್ ಸ್ಪರ್ಶಿಸಿ ಅವರು ಸ್ಥಳದಲ್ಲೇ ಕುಸಿದು ಬಿದ್ದರು, ಮೈತುಂಬಾ ಸುಟ್ಟ ಗಾಯಗಳಾಗಿದ್ದವು. ಅವರ ಕಿರುಚಾಟ ಕೇಳಿ ಹತ್ತಿರದಲ್ಲಿದ್ದ ಯುವಕ ಕೂಡಲೇ ಓಡಿಬಂದಿದ್ದರು. ನಂತರ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Viral Video: ಮೇಕೆ ಮರಿಯನ್ನು ರಕ್ಷಿಸಲು ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿಸಿದ್ರು – Kannada News | Child Lowered Into Deep Well to Save Trapped Goat in Bihar Village

ಚಂಪಾರಣ್, ಫೆಬ್ರವರಿ 27: ಬಿಹಾರ(Bihar)ದ ಮೀತಿಹಾರಿ ಜಿಲ್ಲೆಯ ಪಹರ್​ಪುರ ಪ್ರದೇಶದ ಹಳ್ಳಿಯೊಂದರಲ್ಲಿ ಮೇಕೆಯ ಮರಿಯೊಂದು ಆಳವಾದ ಬಾವಿಗೆ ಬಿದ್ದಿತ್ತು. ಅದನ್ನು ರಕ್ಷಿಸಲು ಪುಟ್ಟ ಬಾಲಕನಿಗೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಆತನನ್ನು ಇಳಿಸಿರುವ ವಿಡಿಯೋ ವೈರಲ್ ಆಗಿದೆ.

ಮೇಕೆ ಮರಿಯನ್ನು ರಕ್ಷಿಸಲು ಬಾಲಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ. ಅದು ತೆರೆದ ಬಾವಿಯಾಗಿದ್ದು, ಬಾವಿ ಬಳಿ ಆಟವಾಡುತ್ತಿದ್ದ ಮೇಕೆ ಮರಿ ಹೇಗೋ ಬಾವಿಗೆ ಬಿದ್ದಿತ್ತು. ಅದರ ಕಿರುಚಾಟ ಕೇಳಿ ಗ್ರಾಮಸ್ಥರೆಲ್ಲರೂ ಅಲ್ಲಿಗೆ ಬಂದಿದ್ದರು. ಬಾವಿಯ ಆಳವು ರಕ್ಷಣಾ ಕಾರ್ಯಾಚರಣೆಯನ್ನು ಅತ್ಯಂತ ಕಷ್ಟಕರವಾಗಿಸಿತು. ಗ್ರಾಮಸ್ಥರು ಆರಂಭದಲ್ಲಿ ತಾತ್ಕಾಲಿಕ ಉಪಕರಣಗಳು ಮತ್ತು ಹಗ್ಗಗಳನ್ನು ಬಳಸಿ ಪ್ರಾಣಿಯನ್ನು ಹೊರತೆಗೆಯಲು ಪ್ರಯತ್ನಿಸಿದರು, ಆದರೆ ಅವರ ಪ್ರಯತ್ನಗಳು ವಿಫಲವಾದವು.

ಮತ್ತಷ್ಟು ಓದಿ: Viral News: ಶಾಲೆಯಲ್ಲಿ ಆಟವಾಡುತ್ತಿದ್ದಾಗಲೇ ಹೃದಯಾಘಾತದಿಂದ 9 ವರ್ಷದ ಬಾಲಕಿ ಸಾವು!

ತಕ್ಷಣ ಅದನ್ನು ಮೇಲಕ್ಕೆತ್ತಲು ಏನು ಮಾಡಬೇಕು ಎಂದು ಎಲ್ಲರೂ ಯೋಚನೆ ಮಾಡಲು ಶುರು ಮಾಡಿದ್ದರು, ಗ್ರಾಮದ ಒಬ್ಬ ಬಾಲಕ ಸ್ವಯಂಪ್ರೇರಿತನಾಗಿ ಬಾವಿಗೆ ಇಳಿದು ಮರಿಯ ಪ್ರಾಣ ಉಳಿಸಿದ್ದಾನೆ. ಅವನ ಸೊಂಟದ ಸುತ್ತಲೂ ಹಗ್ಗವನ್ನು ಬಿಗಿಯಾಗಿ ಕಟ್ಟಲಾಗಿತ್ತು, ಮತ್ತು ಹಲವಾರು ಜನರು ಅವನನ್ನು ಎಚ್ಚರಿಕೆಯಿಂದ ಕಿರಿದಾದ ಬಾವಿಗೆ ಇಳಿಸಿದರು, ಆದರೆ ಇತರರು ಹಗ್ಗವನ್ನು ಮೇಲಿನಿಂದ ಬಿಗಿಯಾಗಿ ಹಿಡಿದಿದ್ದರು.

ವಿಡಿಯೋ

ಅಪಾಯಕಾರಿ ಕಾರ್ಯಾಚರಣೆಯನ್ನು ನೋಡುತ್ತಿದ್ದ ಜನರಲ್ಲಿ ಆತಂಕ ಮನೆಮಾಡಿತ್ತು.
ಮೇಕೆಯನ್ನು ತಲುಪಿ ಅದನ್ನು ಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದ,ಗ್ರಾಮಸ್ಥರು ನಿಧಾನವಾಗಿ ಬಾಲಕ ಮತ್ತು ಮೇಕೆ ಮರಿಯನ್ನು ಸುರಕ್ಷಿತವಾಗಿ ಹಿಂದಕ್ಕೆ ಎಳೆದರು. ಅದೃಷ್ಟವಶಾತ್, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಹುಡುಗನಾಗಲಿ ಅಥವಾ ಮೇಕೆಯಾಗಲಿ ಯಾವುದೇ ಅಪಾಯವಾಗಿಲ್ಲ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಅವುಗಳಿಗೆ ಅನ್ನಕ್ಕಿಂತ ಹೆಚ್ಚಾಗಿ ನಿಮ್ಮ ಪ್ರೀತಿ ಬೇಕು’: ಬೆಂಗಳೂರಿನ ಜನರೇ ಬೀದಿ ನಾಯಿಗಳಿಗೆ ಕಲ್ಲು ಹೊಡೆಯಬೇಡಿ, ಸುಧಾ ಮೂರ್ತಿ ಮನವಿ – Kannada News | Sudha Murty Appeals: Bengaluru, Embrace Stray Dogs with Kindness, ABC

ಬೆಂಗಳೂರು, ಫೆ.27: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಅವುಗಳ ಮೇಲಿನ ದೌರ್ಜನ್ಯದ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ, ಇನ್ಫೋಸಿಸ್ ಫೌಂಡೇಶನ್‌ನ ಮಾರ್ಗದರ್ಶಕಿ ಸುಧಾ ಮೂರ್ತಿ (Sudha Murty) ಅವರು ಈ ಮೂಕ ಪ್ರಾಣಿಗಳ ಪರವಾಗಿ ಧ್ವನಿ ಎತ್ತಿದ್ದಾರೆ. ನಗರದ ಜನತೆ ಬೀದಿ ನಾಯಿಗಳ ಬಗ್ಗೆ ತೋರುತ್ತಿರುವ ಅಸಡ್ಡೆಯನ್ನು ಬಿಟ್ಟು, ಮಾನವೀಯತೆಯಿಂದ ನಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಧಾ ಮೂರ್ತಿಯವರು, “ನನ್ನ ಮನೆಯ ಬಳಿಯೂ ಹಲವು ಬೀದಿ ನಾಯಿಗಳಿವೆ. ಅವುಗಳಿಗೆ ನಾವು ನೀಡುವ ಒಂದು ತುತ್ತು ಅನ್ನಕ್ಕಿಂತ ಹೆಚ್ಚಾಗಿ, ನಾವು ತೋರುವ ಒಂದು ಸಣ್ಣ ಪ್ರೀತಿಯ ಸ್ಪರ್ಶ ಅಥವಾ ಕರುಣೆಯ ನೋಟ ಮುಖ್ಯ. ಪ್ರಾಣಿಗಳು ಭಾಷೆಯನ್ನು ಅರ್ಥ ಮಾಡಿಕೊಳ್ಳಲಾರವು, ಆದರೆ ಅವುಗಳಿಗೆ ಪ್ರೀತಿಯ ಭಾಷೆ ಚೆನ್ನಾಗಿ ಗೊತ್ತು,” ಎಂದು ಭಾವುಕರಾಗಿ ನುಡಿದರು. ಬೀದಿ ನಾಯಿಗಳನ್ನು ಕಂಡಾಗ ಕಲ್ಲು ಹೊಡೆಯುವುದು ಅಥವಾ ಓಡಿಸುವುದನ್ನು ಮಾಡಬೇಡಿ. ಅವುಗಳೂ ಈ ಸಮಾಜದ ಭಾಗ ಎಂಬುದನ್ನು ಮರೆಯಬೇಡಿ.

ಇದನ್ನೂ ಓದಿ: ವಿಶ್ವ ಎನ್‌ಜಿಒ ದಿನವನ್ನು ಆಚರಿಸುವುದೇಕೆ ಗೊತ್ತಾ? ಇದರ ಹಿನ್ನೆಲೆಯನ್ನು ತಿಳಿಯಿರಿ

ಇಲ್ಲಿದೆ ನೋಡಿ ವಿಡಿಯೋ:

ಮನುಷ್ಯರಿಗೆ ಬದುಕುವ ಹಕ್ಕಿರುವಂತೆ ಈ ಪ್ರಾಣಿಗಳಿಗೂ ಇದೆ. ನಗರದ ಬೆಳವಣಿಗೆಯ ನಡುವೆ ನಾವು ಅವುಗಳ ಆವಾಸಸ್ಥಾನಗಳನ್ನು ಕಿತ್ತುಕೊಂಡಿದ್ದೇವೆ, ಹೀಗಾಗಿ ಅವುಗಳಿಗೆ ಆಸರೆ ನೀಡುವುದು ನಮ್ಮ ಜವಾಬ್ದಾರಿ. ನಿಮ್ಮ ಮನೆಯ ಮುಂದೆ ಬರುವ ನಾಯಿಗಳಿಗೆ ಸ್ವಲ್ಪ ನೀರು ಅಥವಾ ಆಹಾರ ನೀಡಿ. ಅವು ನಮಗಿಂತ ಹೆಚ್ಚು ನಿಷ್ಠೆಯನ್ನು ತೋರಿಸುತ್ತವೆ. ಸುಧಾ ಮೂರ್ತಿಯವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅನೇಕ ಬೆಂಗಳೂರಿಗರು ತಮ್ಮ ಮನೆಯ ಬಳಿಯ ಬೀದಿ ನಾಯಿಗಳ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. “ಕೇವಲ ಆಹಾರ ನೀಡಿದರೆ ಸಾಲದು, ಅವುಗಳ ಸಂತಾನಹರಣ ಚಿಕಿತ್ಸೆ (ABC) ಮತ್ತು ಲಸಿಕೆ ಹಾಕಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾಗೋಣ” ಎಂದು ಜನ ಚರ್ಚಿಸುತ್ತಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World NGO Day 2026: ವಿಶ್ವ ಎನ್‌ಜಿಒ ದಿನವನ್ನು ಆಚರಿಸುವುದೇಕೆ ಗೊತ್ತಾ? ಇದರ ಹಿನ್ನೆಲೆಯನ್ನು ತಿಳಿಯಿರಿ – Kannada News | World NGO Day 2026: What is the reason behind celebrating World NGO Day?

ಎನ್‌ಜಿಒ (NGO) ಅಂದರೆ ಸರ್ಕಾರೇತರ ಸಂಸ್ಥೆಗಳು. ಇವು ಸಾಮಾಜಿಕ, ಮಾನವೀಯ, ಶೈಕ್ಷಣಿಕ ಪರಿಸರ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸುವ ಲಾಭರಹಿತ ನಾಗರಿಕ ಸಂಘಟನೆಗಳಾಗಿವೆ. ದೊಡ್ಡ ಪ್ರಮಾಣದಲ್ಲಿ ಅಥವಾ ಸ್ಥಳೀಯ ಮಟ್ಟದಲ್ಲಿ ಎನ್‌ಜಿಒಗಳು ಸಮಾಜಗಳನ್ನು ಅಭಿವೃದ್ಧಿಪಡಿಸುವಲ್ಲಿ, ಸಮುದಾಯಗಳನ್ನು ಸುಧಾರಿಸುವಲ್ಲಿ ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಲ್ಲದೆ ಇವು ಸರ್ಕಾರ ಮತ್ತು ಸಮಾಜದ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಪ್ರಪಂಚದಾದ್ಯಂತ ಇರುವ ಈ ಸರ್ಕಾರೇತರ ಸಂಸ್ಥೆಗಳ ಸಾಮಾಜಿಕ ಕಾರ್ಯಗಳನ್ನು ಗುರುತಿಸಲು, ಬೆಂಬಲಿಸಲು, ಗೌರವಿಸಲು ಪ್ರತಿವರ್ಷ ಫೆಬ್ರವರಿ 27 ರಂದು ವಿಶ್ವ ಎನ್‌ಜಿಒ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಎನ್‌ಜಿಒ ದಿನದ ಇತಿಹಾಸವೇನು?

ವಿಶ್ವ ಎನ್‌ಜಿಒ ದಿನವನ್ನು ಪ್ರತಿ ವರ್ಷ ಫೆಬ್ರವರಿ 27 ರಂದು ಆಚರಿಸಲಾಗುತ್ತದೆ. 2010 ರಲ್ಲಿ ಬಾಲ್ಟಿಕ್ ಪೂರ್ವ ರಾಜ್ಯಗಳಲ್ಲಿ ಬಾಲ್ಟಿಕ್ ಸೀ NGO ಫೋರಮ್‌ನ ಪ್ರತಿನಿಧಿಯಿಂದ NGO ದಿನವನ್ನು ಘೋಷಣೆ ಮಾಡಲಾಯಿತು. ನಂತರದಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಫೆಬ್ರವರಿ ಮೊದಲ ವಾರವನ್ನು ವಿಶ್ವ ಎನ್‌ಜಿಒ ವೀಕ್ ಎಂದು ಘೋಷಿಸಲಾಯಿತು. ಫೆಬ್ರವರಿ 27, 2014 ರಂದು ಮೊದಲ ಬಾರಿಗೆ ವಿಶ್ವ ಎನ್‌ಜಿಒ ದಿನವನ್ನು ಆಚರಣೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ, ಮಾನವ ಹಕ್ಕುಗಳಿಗಾಗಿ ಪ್ರತಿಪಾದಿಸುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಎನ್‌ಜಿಒಗಳು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸಿ ಗೌರವಿಸುವುದೇ ಈ ದಿನದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು

ವಿಶ್ವ ಎನ್‌ಜಿಒ ದಿನದ ಮಹತ್ವವೇನು?

  • ಸಾಮಾಜಿಕ, ಪರಿಸರ ಮತ್ತು ಮಾನವೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರೇತರ ಸಂಸ್ಥೆಗಳು ವಹಿಸುವ ಪ್ರಮುಖ ಪಾತ್ರವನ್ನು ಗುರುತಿಸಲು ಮತ್ತು ಆಚರಿಸಲು ವಿಶ್ವ ಸರ್ಕಾರೇತರ ಸಂಸ್ಥೆಗಳ ದಿನವನ್ನು ಆಚರಿಸಲಾಗುತ್ತದೆ.
  • ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ, ಮಾನವ ಹಕ್ಕುಗಳನ್ನು ರಕ್ಷಿಸುವಲ್ಲಿ, ಕೈಲಾಗದವರಿಗೆ ಸಹಾಯ ಮಾಡುವಲ್ಲಿ ಮತ್ತು ಪ್ರಪಂಚದಾದ್ಯಂತ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ NGOಗಳು ವಹಿಸುವ ನಿರ್ಣಾಯಕ ಪಾತ್ರವನ್ನು ಈ ದಿನ ಸ್ಮರಿಸುತ್ತದೆ.
  • ಈ ವಿಶೇಷ ದಿನದ ಆಚರಣೆಯ ಉದ್ದೇಶವು ಜನರು ಎನ್‌ಜಿಒಗಳಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು ಮತ್ತು ಎನ್‌ಜಿಒಗಳು ಮತ್ತು ಖಾಸಗಿ-ಸಾರ್ವಜನಿಕ ವಲಯಗಳ ನಡುವೆ ಹೆಚ್ಚಿನ ಸಹಜೀವನವನ್ನು ಪ್ರೋತ್ಸಾಹಿಸುವುದು.
  • ಒಟ್ಟಾರೆಯಾಗಿ ಸಾಮಾಜಿಕ ಸಮಸ್ಯೆಗಳನ್ನು ತಡೆಗಟ್ಟಲು ಮುಂದೆ ಬಂದು ಪ್ರಯತ್ನಿಸಿದ ಪ್ರತಿಯೊಂದು ಎನ್‌ಜಿಒವನ್ನು ಗೌರವಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧನ್ವೀರ್ ಸಿನಿಮಾಕ್ಕೆ ಆರಂಭದಲ್ಲೇ ವಿಘ್ನ, ರಾಜ್ಯದಾದ್ಯಂತ ಶೋಗಳು ರದ್ದು – Kannada News | Dhanveer Gowda starrer Hayagreeva movie release postponed

ದರ್ಶನ್ (Darshan) ಆಪ್ತ ಎಂದೇ ಹೆಚ್ಚು ಗುರುತಿಸಿಕೊಂಡಿರುವ ಧನ್ವೀರ್ ಗೌಡ ನಟನೆಯ ‘ಹಯಗ್ರೀವ’ ಸಿನಿಮಾ ಇಂದು (ಫೆಬರವರಿ 27) ಬಿಡುಗಡೆ ಆಗಬೇಕಿತ್ತು, ಸಿನಿಮಾಕ್ಕೆ ಸಾಕಷ್ಟು ಪ್ರಚಾರವನ್ನೂ ಸಹ ಧನ್ವೀರ್ ಮತ್ತು ತಂಡ ಮಾಡಿತ್ತು, ದರ್ಶನ್ ಖಾತೆಯಿಂದ ‘ಹಯಗ್ರೀವ’ ಸಿನಿಮಾದ ಬಗ್ಗೆ ಪೋಸ್ಟ್ ಸಹ ಶೇರ್ ಮಾಡಿ ಶುಭಾಶಯ ಕೋರಲಾಗಿತ್ತು. ಆದರೆ ಇದೀಗ ಸಿನಿಮಾಕ್ಕೆ ಮೊದಲ ಹೆಜ್ಜೆಯನ್ನೇ ವಿಘ್ನ ಎದುರಾಗಿದೆ. ಸಿನಿಮಾದ ಬೆಳಿಗ್ಗೆ ಮತ್ತು ಮಧ್ಯಾಹ್ನದ ಶೋಗಳು ರಾಜ್ಯದಾದ್ಯಂತ ಸಾಮೂಹಿಕವಾಗಿ ರದ್ದಾಗಿವೆ.

‘ಹಯಗ್ರೀವ’ ಸಿನಿಮಾ ಇಂದು (ಫೆಬ್ರವರಿ 27) ಬಿಡುಗಡೆ ಆಗಬೇಕಿತ್ತು, ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿಮಾದ ಮೊದಲ ಎರಡು ಶೋಗಳು ಅಂದರೆ ಬೆಳಿಗ್ಗೆ 10:30 ಮತ್ತು ಮಧ್ಯಾಹ್ನ 1:30ಗೆ ಪ್ರದರ್ಶನ ಆಗಬೇಕಿದ್ದ ಶೋಗಳು ರದ್ದಾಗಿವೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚಿತ್ರತಂಡ, ‘ಅನಿವಾರ್ಯ ಕಾರಣಗಳಿಂದ ನಮ್ಮ ಸಿನಿಮಾದ ದಿನದ ಮೊದಲ ಎರಡೂ ಶೋಗಳು ರದ್ದಾಗಿದ್ದು, ಸಂಜೆ 4:30ರ ಶೋನಿಂದ ರಾಜ್ಯದಾದ್ಯಂತ ಅದ್ಧೂರಿಯಾಗಿ ಪ್ರಾರಂಭ ಆಗುತ್ತವೆ, ನೋಡಿ ಹರಸಿ’ ಎಂದಿದ್ದಾರೆ ನಟ ಧನ್ವೀರ್.

ಧನ್ವೀರ್ ಗೌಡ ನಟಿಸಿರುವ ‘ಹಯಗ್ರೀವ’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿರುವ ಕಾರಣದಿಂದಾಗಿ ಸಿನಿಮಾದ ಬಿಡುಗಡೆ ತಡವಾಗುತ್ತಿದೆ. ‘ಹಯಗ್ರೀವ’ ಸಿನಿಮಾನಲ್ಲಿ ಹಿಂದೂ ದೇವತೆಗಳ ಉಲ್ಲೇಖ ಇದೆಯಂತೆ. ಕೆಲವು ದೃಶ್ಯಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಅಥವಾ ಮುಖವನ್ನು ತಿರುಚಿರುವ ದೃಶ್ಯಗಳು ಸಹ ಇವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಸಿನಿಮಾವನ್ನು ರಿವೈಸ್ ಕಮಿಟಿಗೆ ಕಳಿಸಿದ್ದು, ರಿವೈಸ್ ಕಮಿಟಿ ಸಿನಿಮಾ ನೋಡಿದ ಬಳಿಕವಷ್ಟೆ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಗಲಿದೆ. ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ವಿಳಂಬ ಆಗುತ್ತಿದೆ.

ಇದನ್ನೂ ಓದಿ:ದರ್ಶನ್ ಕೇಸ್: ಪೊಲೀಸರ ತನಿಖೆ ಬಗ್ಗೆ ಅನುಮಾನ; ಗೃಹ ಸಚಿವರ ಸ್ಪಷನೆ ಇಲ್ಲಿದೆ..

ನಿಯಮದ ಪ್ರಕಾರ ರಿವೈಸ್ ಕಮಿಟಿಯವರಿಗೆ ಸಿನಿಮಾವನ್ನು ನೋಡಿ ಕಟ್​​ಗಳನ್ನು ಸೂಚಿಸಲು ಅಥವಾ ಪ್ರಮಾಣ ಪತ್ರ ನೀಡಲು ಹದಿನೈದು ದಿನಗಳ ಕಾಲಾವಕಾಶ ಇರುತ್ತದೆ ಎನ್ನಲಾಗಿದೆ. ಆದರೆ ರಿವೈಸ್ ಕಮಿಟಿಯವರು ಇಂದೇ ಸೆನ್ಸಾರ್ ಪ್ರಮಾಣ ಪತ್ರ ನೀಡುವ ಭರವಸೆಯಲ್ಲಿರುವ ‘ಹಯಗ್ರೀವ’ ಚಿತ್ರತಂಡ ಇಂದು ಸಂಜೆಯಿಂದಲೇ ಪದರ್ಶನ ಆರಂಭಿಸುವುದಾಗಿ ಭರವಸೆ ನೀಡಿವೆ.

‘ಹಯಗ್ರೀವ’ ಸಿನಿಮಾನಲ್ಲಿ ಧನ್ವೀರ್ ಗೌಡ ಮತ್ತು ಸಂಜನಾ ಆನಂದ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರವುದು ರಘು ಕುಮಾರ್, ಸಿನಿಮಾನಲ್ಲಿ ಶರತ್ ಲೋಹಿತಾಶ್ವ, ಸಾಧುಕೋಕಿಲ, ಶೋಭರಾಜ್ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸಮೃದ್ಧಿ ಮಂಜುನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Rinku Singh’s father dies: ರಿಂಕು ಸಿಂಗ್ ತಂದೆ ನಿಧನ, ಟಿ20 ವಿಶ್ವಕಪ್ ಮಧ್ಯೆಯೇ ಟೀಂ ಇಂಡಿಯಾ ಆಟಗಾರನಿಗೆ ಆಘಾತ – Kannada News | Rinku Singh’s Father Passes Away Due to Liver Cancer; Team India Star Leaves T20 World Cup Camp Midway

ಟೀಂ ಇಂಡಿಯಾ (Team India) ಯುವ ಬ್ಯಾಟರ್ ರಿಂಕು ಸಿಂಗ್ (Rinku Singh) ತಂದೆ ಖಚೇಂದ್ರ ಸಿಂಗ್ ಶುಕ್ರವಾರ ನಿಧನರಾದರು. ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತಲ್ಲದೆ, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ನಿರಂತರ ಡಯಾಲಿಸಿಸ್‌ ಮಾಡಲಾಗುತ್ತಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ರಿಂಕು ಸಿಂಗ್ ಅವರು ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಟೀಂ ಇಂಡಿಯಾದ ಬಳಗದಲ್ಲಿರುವಾಗಲೇ ಈ ದುಃಖಕರ ಘಟನೆ ಸಂಭವಿಸಿದೆ.

ಕೆಲವು ದಿನಗಳ ಹಿಂದೆ ರಿಂಕು ಸಿಂಗ್ ತಂಡದಲ್ಲಿದ್ದಾಗ ತಂದೆಯ ಆರೋಗ್ಯ ಹದಗೆಟ್ಟ ಸುದ್ದಿ ತಲುಪಿತ್ತು. ಬಳಿಕ ಅವರು ತುರ್ತಾಗಿ ಮನೆಗೆ ತೆರಳಿ ಮತ್ತೆ ತಂಡಕ್ಕೆ ಮರಳಿದ್ದರು. ಇದೀಗ ತಂದೆಯ ನಿಧನದ ಸುದ್ದಿ ತಿಳಿದ ತಕ್ಷಣ ತಂಡವನ್ನು ತೊರೆದು ಸ್ವಗ್ರಾಮ ಅಲೀಗಢ್‌ಗೆ ಪ್ರಯಾಣ ಬೆಳೆಸಿದ್ದಾರೆ.

ತಂದೆ ಖಚೇಂದ್ರ ಸಿಂಗ್ ಜತೆ ರಿಂಕು ಸಿಂಗ್ (ಚಿತ್ರ ಕೃಪೆ; ಇನ್​ಸ್ಟಾಗ್ರಾಂ)

ಗುರುವಾರ ರಾತ್ರಿ ಚೆನ್ನೈಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪ್ರಮುಖ ಪಂದ್ಯದಲ್ಲಿ ರಿಂಕು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ. ತಂಡದ ಸಮತೋಲನದ ದೃಷ್ಟಿಯಿಂದ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ರಿಂಕು ತಂಡದೊಂದಿಗೇ ಇದ್ದು, ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದರು.

ಟಿ20 ವಿಶ್ವಕಪ್ ಮುಂದಿನ ಪಂದ್ಯಗಳಿಗೆ ಲಭ್ಯರಾಗುತ್ತಾರಾ ರಿಂಕು ಸಿಂಗ್?

ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಿಂಕು ಸಿಂಗ್ ಐದು ಪಂದ್ಯಗಳಲ್ಲಿ ಆಡಿದ್ದು 24 ರನ್ ಗಳಿಸಿದ್ದಾರೆ. ಫಿನಿಷರ್ ಪಾತ್ರದಲ್ಲಿ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಲಭ್ಯರಾಗುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಬಿಸಿಸಿಐ ಅಥವಾ ತಂಡದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆಯನ್ನು ಇನ್ನಷ್ಟೇ ಹೊರಡಿಸಬೇಕಿದೆ.

ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಗೆದ್ದ ಭಾರತದ ಸೆಮಿಫೈನಲ್ ಕನಸು ಜೀವಂತ

ಟೀಂ ಇಂಡಿಯಾ ಮುಂದಿನ ಪಂದ್ಯ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಇದು ಭಾರತದ ಪಾಲಿಗೆ ನಿರ್ಣಾಯಕ ಪಂದ್ಯ ಆಗಿರಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:21 am, Fri, 27 February 26

Source link

ಗೃಹಸಚಿವ ಅಮಿತ್ ಶಾ ಭೇಟಿ ಮಾಡಿದ ರಶ್ಮಿಕಾ-ವಿಜಯ್; ಕಾರಣವೇನು? – Kannada News | Rashmika Mandanna And Vijay Devarakonda Met Amith Shah to Invite Reception

ಗೃಹಸಚಿವ ಅಮಿತ್ ಶಾ ಭೇಟಿ ಮಾಡಿದ ರಶ್ಮಿಕಾ-ವಿಜಯ್

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿವಾಹ ಅದ್ಧೂರಿಯಾಗಿ ನಡೆಯಿತು. ಗುರುವಾರ (ಫೆಬ್ರವರಿ 27) ಉದಯಪುರದ ಹೋಟೆಲ್​ ಅಲ್ಲಿ ದಂಪತಿಗಳು ಸಪ್ತಪದಿ ತುಳಿದರು. ಎರಡು ಸಂಪ್ರದಾಯಗಳ ಪ್ರಕಾರ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ವಿವಾಹವಾದರು. ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರನ್ನು ತೆಲುಗು ಸ್ಟೈಲ್​​ನಲ್ಲಿ ವಿವಾಹ ಆದರು. ನಂತರ, ದಂಪತಿಗಳು ಕೊಡಗು ಸಂಪ್ರದಾಯದಂತೆ ಮತ್ತೆ ಮದುವೆ ಆದರು. ಈ ಮಧ್ಯೆ ಜೋಡಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಫೋಟೋ ಗಮನ ಸೆಳೆದಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ತಮ್ಮ ಮದುವೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡರು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ವಿಜಯ್ ಬಿಳಿ ಮತ್ತು ರಶ್ಮಿಕಾ ಹಳದಿ ಬಣ್ಣದ ಉಡುಗೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆದರು.

ಈ ಜೋಡಿ ವಿವಾಹದ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಲು ಅಮಿತ್ ಶಾ ಅವರನ್ನು ವಿಶೇಷವಾಗಿ ಆಹ್ವಾನಿಸಿತು. ಈ ಸಂದರ್ಭದಲ್ಲಿ, ಅಮಿತ್ ಶಾ ಅವರಿಗೆ ಗಣಪತಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಯಿತು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದು ವಿವಾಹಕ್ಕೂ ಮೊದಲು ತೆರಳಿದ ಫೋಟೋ ಎನ್ನಲಾಗಿದೆ.

ಇದನ್ನೂ ಓದಿ: ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಆಸೆ ಈಡೇರಿಸಿದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಆರತಕ್ಷತೆ ಹೈದರಾಬಾದ್‌ನಲ್ಲಿ ನಡೆಯಲಿದೆ. ಮಾರ್ಚ್ 4ರಂದು ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ವಿಜಯ್-ರಶ್ಮಿಕಾ ಅವರ ವಿವಾಹದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ. ಅವರನ್ನು ನೋಡಿದ ಅನೇಕ ಚಲನಚಿತ್ರ ತಾರೆಯರು, ಅಭಿಮಾನಿಗಳು ಮತ್ತು ನೆಟ್ಟಿಗರು ನವ ಜೋಡಿಗೆ ಅಭಿನಂದನೆ ಮತ್ತು ಶುಭಾಶಯ ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್-ರಶ್ಮಿಕಾ ಮದುವೆ ಉಡುಗೆ ವಿನ್ಯಾಸ ಮಾಡಿದ್ಯಾರು? ಉಡುಗೆಯ ಬೆಲೆ ಎಷ್ಟು? – Kannada News | Who is Anamika Khanna who designed Vijay Deverakonda and Rashmika’s wedding dress

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಮದುವೆ ಅದ್ಧೂರಿಯಾಗಿ ನಡೆದಿದೆ. ಇಬ್ಬರ ಮದುವೆಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಮದುವೆ ಸಮಯದಲ್ಲಿ ಇಬ್ಬರೂ ಧರಿಸಿದ್ದ ಉಡುಗೆಗಳ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಬ್ಬರ ಉಡುಗೆಗೆ ಡಿವೈನ್ ಲುಕ್ (ದೈವೀಕಳೆ) ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಈ ಇಬ್ಬರ ಮದುವೆ ಉಡುಗೆಗಳನ್ನು ವಿನ್ಯಾಸ ಮಾಡಿರುವ ವಿನ್ಯಾಸಕಿ ಒಬ್ಬರೇ ಅದುವೇ ಡಿಸೈನರ್​​ಗಳ ಡಿಸೈನರ್ ಎನಿಸಿಕೊಂಡಿರುವ ಅನಾಮಿಕಾ ಖನ್ನಾ.

ಅನಾಮಿಕಾ ಖನ್ನಾ, ಭಾರತದ ಮಾತ್ರವಲ್ಲದ ಹಾಲಿವುಡ್​​ನ ಸ್ಟಾರ್ ನಟ-ನಟಿಯರು ಮತ್ತು ಪಾಪ್ ತಾರೆಗಳೊಟ್ಟಿಗೆ ಕೆಲಸ ಮಾಡುತ್ತಾರೆ. ಅವರು ವಿನ್ಯಾಸ ಮಾಡಿರುವ ಉಡುಗೆಯನ್ನು ಶಕಿರಾ, ಜೆನಿಫರ್ ಲೋಪೆಜ್, ಓಪ್ರಾ ವಿನ್​​ಫ್ರೆ, ಕೆಲ್ಲಿ ರೋಲಂಡ್, ಬಿಯಾನ್ಸೆ, ಕರ್ದಾಶಿಯನ್ಸ್ ಇನ್ನೂ ಹಲವರು ಉಟ್ಟಿದ್ದಾರೆ. ಅಂಬಾನಿ ಮದುವೆಗೆ ಬಂದ ಬಹುತೇಕ ವಿದೇಶಿ ಸೆಲೆಬ್ರಿಟಿಗಳು ಅನಾಮಿಕಾ ವಿನ್ಯಾಸ ಮಾಡಿದ್ದ ಉಡುಗೆಯನ್ನೇ ತೊಟ್ಟಿದ್ದರು. ಮಾತ್ರವಲ್ಲದೆ, ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್, ಹಳದಿ ಶಾಸ್ತ್ರದ ಉಡುಗೆಯನ್ನು ವಿನ್ಯಾಸ ಮಾಡಿದ್ದು ಸಹ ಅನಾಮಿಕಾ ಅವರೇ. ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಅನಾಮಿಕಾ ವಿನ್ಯಾಸ ಮಾಡಿದ್ದ ಉಡುಗೆ ತೊಟ್ಟೇ ನಡೆದಿದ್ದರು.

ಅನಾಮಿಕಾ ಖನ್ನಾ, ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿಯರಲ್ಲಿ ಒಬ್ಬರು. ಪಶ್ಚಿಮ ಬಂಗಾಳ ಮೂಲಕ ಅನಾಮಿಕ ಮೂಲತಃ ಭರತನಾಟ್ಯ ಕಲಾವಿದೆ ಜೊತೆಗೆ ಚಿತ್ರಕಲಾ ನಿಪುಣೆ ಸಹ. ಅವರು ಫ್ಯಾಷನ್ ಡಿಸೈನ್ ಅನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಆದರೆ ಅವರು ಆಸಕ್ತಿಯಿಂದ ವಸ್ತ್ರವಿನ್ಯಾಸದ ಕಡೆಗೆ ಬಂದವರು. ವಿನ್ಯಾಸಗಳನ್ನು ಅಭ್ಯಾಸ ಮಾಡುತ್ತಾ, ಸ್ವಂತ ಕಲಿಕೆಯ ಮೂಲಕ ಫ್ಯಾಷನ್ ಡಿಸೈನರ್ ಆದವರು ಅನಾಮಿಕಾ ಖನ್ನಾ.

ಇದನ್ನೂ ಓದಿ:Photo Gallery: ಮದುವೆ ಫೋಟೋ ಜೊತೆ ರಶ್ಮಿಕಾ ಮಂದಣ್ಣ ಎಮೋಷನಲ್ ಮಾತು

1990ರಲ್ಲಿ ತಮ್ಮದೇ ಫ್ಯಾಷನ್ ಬ್ರ್ಯಾಂಡ್ ಪ್ರಾರಂಭಿಸಿದ ಅನಾಮಿಕಾ ಖನ್ನಾ, ಫ್ಯಾಷನ್ ವೀಕ್​​​ನಲ್ಲಿ ತಮ್ಮ ಕಲೆಕ್ಷನ್​​ಗಳನ್ನು ಪ್ರದರ್ಶನಕ್ಕೆ ಇರಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಡಿಸೈನರ್ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಬ್ಯುಸಿನೆಸ್ ಆಫ್ ಫ್ಯಾಷನ್ (ಬಿಒಎಫ್) 500 ನಲ್ಲಿ ಸಹ ಅನಾಮಿಕಾ ಖನ್ನಾ ಕಾಣಿಸಿಕೊಂಡಿದ್ದಾರೆ. ಇವರ ವಿನ್ಯಾಸಗಳು ಅಪರೂಪದ್ದಾಗಿದ್ದು, ಭಾರತೀಯ ವಿನ್ಯಾಸಗಳನ್ನು ವಿದೇಶಿ ಉಡುಗೆ ಮಾದರಿಗಳ ಜೊತೆಗೆ ಬ್ಲೆಂಡ್ ಮಾಡಿ ಪ್ರೆಸೆಂಟ್ ಮಾಡುವ ಅಪರೂಪದ ಸ್ಟೈಲ್ ಅನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರ ವಿನ್ಯಾಸಗಳು ಬಹಳ ಜನಪ್ರಿಯತೆ ಹೊಂದಿವೆ.

‘ವಾರಣಾಸಿ’ ಇವೆಂಟ್​​ನಲ್ಲಿ ಪ್ರಿಯಾಂಕಾ ಧರಿಸಿದ್ದ ಉಡುಗೆಯನ್ನು ಅನಾಮಿಕಾ ಅವರೇ ವಿನ್ಯಾಸ ಮಾಡಿದ್ದರು. ದೀಪಿಕಾ ಪಡುಕೋಣೆ, ಸೋನಂ ಕಪೂರ್, ಆಲಿಯಾ ಭಟ್, ಜಾನ್ಹವಿ ಕಪೂರ್ ಇನ್ನೂ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚಿನ ವಿನ್ಯಾಸಕಿ ಅನಾಮಿಕಾ ಖನ್ನಾ. ಖ್ಯಾತ ವಿದೇಶಿ ಫ್ಯಾಷನ್ ಬ್ರ್ಯಾಂಡ್ ಆಗಿರುವ ಎಚ್​​ ಆಂಡ್ ಎಂ (H n M) ಮತ್ತು ಸ್ಯಾಕ್ಸ್ ಫಿಫ್ತ್ ಅವೆನ್ಯೂ ಜೊತೆಗೆ ಅವರು ಪಾರ್ಟನ್ ಆಗಿದ್ದು, ತಮ್ಮ ವಿನ್ಯಾಸಗಳನ್ನು ಅವರೊಟ್ಟಿಗೆ ಹಂಚಿಕೊಳ್ಳುತ್ತಾರೆ.

ಅನಾಮಿಕಾ ಖನ್ನಾ ಭಾರತದ ದುಬಾರಿ ವಿನ್ಯಾಸಕಿ. ಅವರ ಸಾಮಾನ್ಯ ವಿನ್ಯಾಸಗಳು ಸಹ 1 ಲಕ್ಷದಿಂದ 3 ಲಕ್ಷದ ವರೆಗೆ ಮಾರಾಟ ಆಗುತ್ತವೆ. ಇನ್ನು ಅವರ ವಿಶೇಷ ವಿನ್ಯಾಸದ ಉಡುಗೆಗಳಿಗೆ 50 ಲಕ್ಷದವರೆಗೆ ಬೆಲೆ ಇದೆ. ಕೋಟಿ ಬೆಲೆಯ ಉಡುಗೆಗಳು ಸಹ ಅವರ ಕಲೆಕ್ಷನ್​​ನಲ್ಲಿವೆ ಎನ್ನಲಾಗುತ್ತದೆ. ಅನಾಮಿಕಾ ಅವರದ್ದು ಎಕೆ-ಒಕೆ ಹೆಸರಿನ ಬ್ರ್ಯಾಂಡ್ ಇದೆ. ಕೊಲ್ಕತ್ತ, ಹೈದರಾಬಾದ್, ಮುಂಬೈ, ದೆಹಲಿಗಳಲ್ಲಿ ತಮ್ಮ ಔಟ್​​ಲೆಟ್​​ಗಳನ್ನು ಅನಾಮಿಕಾ ಹೊಂದಿದ್ದಾರೆ. ಈಗ ವಿಜಯ್ ಮತ್ತು ರಶ್ಮಿಕಾ ಉಡುಗೆಯ ನಿಖರ ಬೆಲೆ ತಿಳಿದಿಲ್ಲವಾದರೂ ಆಭರಣಗಳನ್ನು ಹೊರತುಪಡಿಸಿ, ಕೇವಲ ಉಡುಗೆಗೆ ಸುಮಾರು 50 ಲಕ್ಷ ರೂಪಾಯಿ ಆಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version