ಜಾರ್ಖಂಡ್, ಫೆಬ್ರವರಿ 27: ಆತನೇ ಎಲ್ಲಾ ಎಂದು ಪೋಷಕರನ್ನು ಬಿಟ್ಟು ಬಂದಿದ್ದ ಮಹಿಳೆಯನ್ನು ಆಕೆಯ ಪ್ರಿಯಕರನೇ ಹತ್ಯೆ(Murder)ಗೆ ಯತ್ನಿಸಿರುವ ಅಮಾನವೀಯ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಗೋಲ್ಗಪ್ಪದಲ್ಲಿ ವಿಷ ಬೆರೆಸಿ ಗರ್ಭಿಣಿ ಪ್ರೇಯಸಿಯನ್ನು ಕೊಲೆ ಮಾಡಲು ವ್ಯಕ್ತಿ ಯತ್ನಿಸಿರುವ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಮಹಿಳೆಗೆ ಆರೋಗ್ಯ ತೋರಾ ಹದಗೆಟ್ಟಿದ್ದು, ರಕ್ತವಾಂತಿ ಮಾಡಿಕೊಂಡಿದ್ದಾಳೆ. ತನ್ನ ಮನೆಗೆ ತಲುಪುವ ಮೊದಲು ರಾತ್ರಿಯಿಡೀ ಕಾಡಿನಲ್ಲಿ ಅಡಗಿಕೊಂಡಿದ್ದಳು. ಈ ಘಟನೆಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸುವಲ್ಲಿ ಆಕೆ ಕೊನೆಗೂ ಯಶಸ್ವಿಯಾಗಿದ್ದಾಳೆ.
26 ವರ್ಷದ ಸಾಕೇತ್ ಕೇಸರಿ ಮತ್ತು 23 ವರ್ಷದ ಮಹಿಳೆ ಆರು ವರ್ಷಗಳಿಂದ ಸಂಬಂಧದಲ್ಲಿದ್ದರು. ಒಂದು ವರ್ಷದ ಹಿಂದೆ ಅವರ ಮೊದಲ ಮಗು ಜನಿಸಿತ್ತು. ಗರ್ವಾ ಜಿಲ್ಲೆಯ ಸಮುದಾಯವು ಮಧ್ಯಪ್ರವೇಶಿಸಿ ಅವರನ್ನು ಬೇರೆ ಬೇರೆ ಮಾಡಿತ್ತು.
ಆದಾಗ್ಯೂ, ಕೇಸರಿ ಕೆಲವು ತಿಂಗಳ ನಂತರ ಆ ಮಹಿಳೆಯನ್ನು ಸಂಪರ್ಕಿಸಿದ್ದ. ಮತ್ತು ರಾಜಿ ಮಾಡಿಕೊಂಡಿದ್ದರು.ಮದುವೆ ಭರವಸೆ ನೀಡಿದ್ದ, ನಂತರ ಮತ್ತೆ ಆಕೆ ಗರ್ಭಿಣಿಯಾಗಿದ್ದಾಳೆ.ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಫೆಬ್ರವರಿ 21 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ, ಕೇಶರಿ ಮಹಿಳೆಗೆ ಕರೆ ಮಾಡಿ ಏನಾದರೂ ತಿನ್ನಬೇಕು ಅನ್ನಸ್ತಿದೆಯಾ ಎಂದು ಕೇಳಿದ್ದಾನೆ. ಗೋಲ್ಗಪ್ಪ ತಿನ್ನುವ ಬಯಕೆಯನ್ನು ಆಕೆ ವ್ಯಕ್ತಪಡಿಸಿದ್ದಾಳೆ.
ಹಾಗೆಯೇ ಗೋಲ್ಗಪ್ಪ ತಿಂದ ಬಳಿಕ ಆಕೆಗೆ ವಾಂತಿ ಶುರುವಾಗಿತ್ತು, ರಕ್ತವಾಂತಿ ಕೂಡ ಮಾಡಿಕೊಂಡಿದ್ದಾಳೆ. ನಂತರ, ಸಂಜೆ 4 ಗಂಟೆಗೆ, ಆರೋಪಿ ತನ್ನ ಗೆಳತಿಯ ವೈದ್ಯರ ಬಳಿಗೆ ಕರೆದೊಯ್ಯಲು ಮುಂದಾದ.ಆದರೆ, ಅವಳನ್ನು ವೈದ್ಯರ ಬಳಿಗೆ ಕರೆದೊಯ್ಯುವ ಬದಲು, ಅವನು ಆಕೆಯನ್ನು ತನ್ನ ಬೈಕ್‌ನಲ್ಲಿ ಕಾಡಿಗೆ ಕರೆದೊಯ್ದಿದ್ದ.
ಆಕೆಯನ್ನು ಸುಮಾರು 100 ಮೀಟರ್ ಕಾಡಿನೊಳಗೆ ಕರೆದೊಯ್ದು ಹಲ್ಲೆ ಮಾಡಿ, ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ, ದರಿಂದಾಗಿ ಮಹಿಳೆಯ ಕಣ್ಣಿಗೆ ಗಂಭೀರ ಗಾಯವಾಯಿತು ಮತ್ತು ಅವಳು ಪ್ರಜ್ಞೆ ತಪ್ಪಿದ್ದಳು. ಪ್ರಜ್ಞೆ ಮರಳಿದ ನಂತರ, ಅವಳು ಕಾಡಿನ ಇನ್ನೊಂದು ತುದಿಗೆ ದಾಟಲು ಯಶಸ್ವಿಯಾದಳು ಮತ್ತು ಅಪಾರ ಭಯದಿಂದ ಇಡೀ ರಾತ್ರಿ ಅಲ್ಲಿ ಅಡಗಿಕೊಂಡಳು. ಮರುದಿನ ಬೆಳಗ್ಗೆ, ಅವಳು ಹೇಗೋ ತನ್ನ ಮನೆಗೆ ತಲುಪಿ ತನ್ನ ಕುಟುಂಬಕ್ಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಮಹಿಳೆಯ ದೂರಿನ ಆಧಾರದ ಮೇಲೆ ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಕೇಸರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪೊಲೀಸರು ಪ್ರಸ್ತುತ ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸುತ್ತಿದ್ದಾರೆ.
ಡಿಕೆಶಿ ಬೆಂಬಲಿಗ 40ಕ್ಕೂ ಹೆಚ್ಚು ಶಾಸಕರ ಸಭೆ!Image Credit source: tv9
ಬೆಂಗಳೂರು, ಫೆಬ್ರವರಿ 27: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಆಗಾಗ ತೀವ್ರಗೊಂಡು ಮತ್ತೆ ತಣ್ಣಗಾಗುತ್ತಿದ್ದ ನಾಯಕತ್ವ ಬದಲಾವಣೆ ಗೊಂದಲ ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿದೆಯಾ ಎಂಬ ಅನುಮಾನ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬಣಗಳ ನಡುವಿನ ಶೀತಲ ಸಮರಕ್ಕೆ ಹೊಸ ತಿರುವು ಸಿಕ್ಕಿದ್ದು, ಡಿಕೆಶಿ ಬೆಂಬಲಿಗ ಶಾಸಕರು ಶಕ್ತಿಪ್ರದರ್ಶನ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಮಾಗಡಿ ಶಾಸಕ ಎಚ್ಸಿ ಬಾಲಕೃಷ್ಣ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ನಡೆದ ಔತಣಕೂಟದಲ್ಲಿ ಡಿಕೆಶಿ ಬೆಂಬಲಿಗರೆಂದು ಗುರುತಿಸಲ್ಪಟ್ಟ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದಾರೆ. ಈ ಮೂಲಕ ತಮ್ಮ ಒಗ್ಗಟ್ಟನ್ನು ತೋರಿಸುವ ಪ್ರಯತ್ನ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶಾಸಕರ ಶಕ್ತಿ ಪ್ರದರ್ಶನದ ಫೋಟೋ ವೈರಲ್
ಸಭೆಯಲ್ಲಿ ಸಚಿವರಾದ ಡಿ ಸುಧಾಕರ್, ಮಂಕಾಳ ವೈದ್ಯ, ಸಿಪಿ ಯೋಗೇಶ್ವರ್, ಟಿಬಿ ಜಯಚಂದ್ರ, ಎನ್‌ಎ ಹ್ಯಾರಿಸ್, ಗಣೇಶ್ ಹುಕ್ಕೇರಿ, ಕುಣಿಗಲ್ ರಂಗನಾಥ್, ಪ್ರಕಾಶ್ ಕೋಳಿವಾಡ ಸೇರಿದಂತೆ ಹಲವರು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಶಾಸಕರು ಒಟ್ಟಾಗಿ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್ ಮಾತನಾಡಿ, ‘ಸುಮಾರು 35ರಿಂದ 40 ಜನ ಶಾಸಕರು ಸೇರಿದ್ದೇವೆ’ ಎಂದು ತಿಳಿಸಿದ್ದಾರೆ.
ನಾಯಕತ್ವ ಗೊಂದಲಕ್ಕೆ ಅಂತಿಮ ತೆರೆ ಎಳೆಯಬೇಕು: ಬಾಲಕೃಷ್ಣ
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಚ್.ಸಿ. ಬಾಲಕೃಷ್ಣ, ‘ನಾಯಕತ್ವ ಬದಲಾವಣೆ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಬೇಕು. ಸಿಎಂ ಬದಲಾಯಿಸುತ್ತಾರೋ, ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುತ್ತಾರೋ ಅದು ವರಿಷ್ಠರ ನಿರ್ಧಾರ. ಆದರೆ, ಈ ಗೊಂದಲಕ್ಕೆ ತೆರೆ ಎಳೆಯಬೇಕು. ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಸರ್ಕಾರ ರಚಿಸುವುದು ಕಷ್ಟವಾಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದು ಯಾವ ಬಣದ ಸಭೆಯೂ ಅಲ್ಲ. ನನ್ನ ಹುಟ್ಟುಹಬ್ಬದ ನಿಮಿತ್ತ ಎಲ್ಲರನ್ನು ಊಟಕ್ಕೆ ಆಹ್ವಾನಿಸಿದ್ದೆ. ನಾವು ಎಲ್ಲರೂ ಕಾಂಗ್ರೆಸ್ ಶಾಸಕರೇ ಹೊರತು ಯಾರಾದರೂ ಪರ–ವಿರೋಧ ಎನ್ನುವ ಪ್ರಶ್ನೆಯೇ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ನಾಯಕತ್ವ ಬದಲಾವಣೆ ಚರ್ಚೆಯಾಗಿದೆ: ಶಿವಗಂಗಾ ಬಸವರಾಜ್
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಸುಳ್ಳು ಹೇಳಲು ಕಾರಣವಿಲ್ಲ. ಸುಮಾರು 40 ಜನ ಶಾಸಕರು ಸೇರಿದ್ದೇವೆ. ನಾಯಕತ್ವ ಬದಲಾವಣೆ ಕುರಿತ ಚರ್ಚೆಯಾಗಿದೆ. ಅಧಿಕಾರ ಹಂಚಿಕೆ ಹಾಗೂ ಗೊಂದಲಗಳಿಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇದು ಕೇವಲ ಭೋಜನ ಕೂಟ: ರವಿ ಗಣಿಗ ಸ್ಪಷ್ಟನೆ
ಖಾಸಗಿ ಹೋಟೆಲ್ ಬಳಿ ಪ್ರತಿಕ್ರಿಯಿಸಿದ ಶಾಸಕ ರವಿ ಗಣಿಗ, ಇದು ಯಾವುದೇ ಅಧಿಕೃತ ಸಭೆಯಲ್ಲ. ಬಾಲಕೃಷ್ಣ ಅವರ ಹುಟ್ಟುಹಬ್ಬದ ಊಟ ಮಾತ್ರ. ನಾವು ಎಲ್ಲರೂ ಸ್ನೇಹಪೂರ್ವಕವಾಗಿ ಸೇರಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮತ್ತೆ ಚರ್ಚೆಗೆ
ಇತ್ತೀಚೆಗೆ ಸಿದ್ದರಾಮಯ್ಯ ಬಣದ ನಾಯಕರು ಪ್ರತ್ಯೇಕವಾಗಿ ಸಭೆ, ಔತಣಕೂಟಗಳನ್ನು ನಡೆಸುತ್ತಿರುವ ಹಿನ್ನೆಲೆ, ಡಿಕೆಶಿ ಬಣವೂ ತಮ್ಮ ಒಗ್ಗಟ್ಟು ಪ್ರದರ್ಶಿಸಿರುವುದು ವಿಶೇಷವಾಗಿದೆ. ಶಾಸಕರ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಾರೆ, ರಾಜ್ಯ ಕಾಂಗ್ರೆಸ್‌ನಲ್ಲಿ ‘ಸಿದ್ದು ವರ್ಸಸ್ ಡಿಕೆಶಿ’ ಬಣಗಳ ರಾಜಕೀಯ ಮತ್ತೆ ಮುನ್ನೆಲೆಗೆ ಬಂದಂತಾಗಿದ್ದು, ನಾಯಕತ್ವ ಗೊಂದಲಕ್ಕೆ ಹೈಕಮಾಂಡ್ ಯಾವಾಗ ಅಂತಿಮ ತೆರೆ ಎಳೆಯಲಿದೆ ಎಂಬುದು ಪ್ರಶ್ನೆಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನಿಮ್ಮ ಮೇಲಿಟ್ಟ ನಂಬಿಕೆಯನ್ನು ಕಷ್ಟಪಟ್ಟು ಉಳಿಸಿಕೊಳ್ಳಬೇಕಾದೀತು. ದಿನದ ಆರಂಭವು ಬಹಳ ಪ್ರಶಾಂತವಾಗಿ ಇರಲಿದೆ. ಆತ್ಮಗೌರವವನ್ನು ಬಿಟ್ಟು ನೀವು ಬದಲಾಗುವುದಿಲ್ಲ. ಗಂಭೀರವಾದ ಚರ್ಚೆಯನ್ನು ನೀವು ಹಾಸ್ಯ ಮಾಡಿ ಮುಗಿಸುವಿರಿ. ಕ್ಷಣಕ್ಷಣದ ಚಿತ್ತಚಾಂಚಲ್ಯಕ್ಕೆ ಧ್ಯಾನವೊಂದೇ ಸದ್ಯದ ಪರಿಹಾರ. ಕೆಲಸಕ್ಕಾಗಿ ನೀವು ಹಾಕಿಕೊಂಡ ಸಮಯವು ವ್ಯತ್ಯಸವಾಗುವುದು. ಒಂಟಿಯಾಗಿ ಎಲ್ಲಿಗಾದರೂ ಹೋಗುವ ಮನಸ್ಸಾಗುವುದು. ಅಧಿಕಾರದ ವಿಚಾರದಲ್ಲಿ ನೀವು ಮೋಸ ಹೋಗಬಹುದು.
ವೃಷಭ ರಾಶಿ:
ಮಕ್ಕಳ ಮನಸೋ ಇಚ್ಛೆ ವ್ಯವಹಾರಕ್ಕೆ ಕಡಿವಾಣ ಹಾಕುವುದು ಸೂಕ್ತ. ನಿಮ್ಮ ನೋವಿಗೆ ಸ್ಪಂದನೆ ಸಿಗುವುದು. ಅನಾರೋಗ್ಯದ ಭೀತಿಯು ಇರಲಿದೆ. ಮನಸ್ಸು ನಕಾರಾತ್ಮಕವಾಗಿ ಹರಡಬಹುದು. ನಿಮ್ಮ ಕ್ರಿಯಾಶೀಲ ಕಾರ್ಯಕ್ಕೆ ಪ್ರಶಂಸೆ ಸಿಗಲಿದೆ. ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ಬರಬಹುದು. ವಿದ್ಯಾರ್ಥಿಗಳು ಕೌಶಲಕ್ಕೆ ಪ್ರಶಂಸೆ ಲಭ್ಯವಾಗುವುದು.
ಮಿಥುನ ರಾಶಿ:
ಕೆಲವು ವಿಚಾರಗಳಲ್ಲಿ ಕುತೂಹಲವು ಇರಲಿದೆ. ಪ್ರತಿಸ್ಪರ್ಧಿ ಇಲ್ಲದೇ ಗೆಲವು ನಿಮ್ಮದಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯ ಕೊರತೆ ತಲೆದೋರಬಹುದು. ಹಿರಿಯರಿಂದ ಸಮಾಧಾನ ಸಿಗಲಿದೆ. ಬೇಡದ ವ್ಯಕ್ತಿಗಳ ಮಾತುಗಳನ್ನು ಕೇಳಲು ನಿಮಗೆ ಇಷ್ಟವಾಗದು. ಧಾರ್ಮಿಕ ಕಾರ್ಯವನ್ನು ನಿರ್ಮಲ ಮನಸ್ಸಿನಿಂದ ಮಾಡುವಿರಿ. ಯಾರ ಜೊತೆಯೂ ಮಿತಿಮೀರಿದ ಸಲುಗೆ ಬೇಡ. ಆಪ್ತರು ನಿಮ್ಮನ್ನು ಬಿಡಬಹುದು.
ಕರ್ಕಾಟಕ ರಾಶಿ:
ತಂದೆಯ ಕಡೆಯಿಂದ ಸಂಪತ್ತು ಬರಬಹುದು ಎಂಬ ನಿರೀಕ್ಷೆಯಲ್ಲಿ ಇರುವಿರಿ ಮಕ್ಕಳ ಆಸೆಗಳನ್ನು ಪೂರೈಸುವತ್ತ ನಿಮ್ಮ ಗಮನ ಇರಲಿದೆ. ಆಗಂತುಕರು ಮನೆಯ ಕಡೆ ದೃಷ್ಟಿ ಇಡಬಹುದು. ಯಾರದೋ ಮಾತನ್ನು ಕೇಳಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ನಿಮ್ಮ ಅನುಕರಣೆಯಿಂದ ಸಿಟ್ಟಾಗುವಿರಿ. ರಾಜಕೀಯ ವ್ಯಕ್ತಿಗಳು ಜನಮನ್ನಣೆಯನ್ನು ಅಧಿಕ ಗಳಿಸುವರು. ಅಲ್ಪ ಪ್ರಯಾಣದಿಂದಲೂ ನಿಮಗೆ ಆಯಾಸವಾಗಬಹುದು.
ಸಿಂಹ ರಾಶಿ:
ಇಂದು ಎಲ್ಲವನ್ನೂ ಕಳೆಕೊಂಡಂತಹ ಸ್ಥಿತಿಯ ರೀತಿ ಇರುವುದು ಬೇಡ. ಹೊಸ ವಾಹನದ ಖರೀದಿಯಿಂದ ಸಂತೋಷವಾಗುವುದು. ನಿಮ್ಮ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳಬಹುದು. ನಿರಂತರ ಕಾರ್ಯದಿಂದ ದೇಹಕ್ಕೆ ಆಯಾಸವಾಗಬಹುದು. ನಿಮಗೆ ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದ್ದು, ಅದಕ್ಕೆ ಹೆಚ್ಚಿನ ಮೌಲ್ಯವು ಸಿಗದೇಹೋಗಬಹುದು. ಸುಖಜೀವನದ ನಿರೀಕ್ಷೆಯಲ್ಲಿ ಇರುವಿರಿ. ಸಮಾರಂಭಗಳಿಗೆ ಆಹ್ವಾನವಿದ್ದರೂ ಹೋಗುವ ಮನಸ್ಸಾಗದು.
ಕನ್ಯಾ ರಾಶಿ:
ಸತ್ಯವನ್ನು ಹೇಳಲು ಹಿಂಜರಿಕೆಯಾಗಬಹುದು. ನಿಮ್ಮ ಪ್ರಯತ್ನಕ್ಕೆ ಇಂದೇ ಫಲವು ಸಿಗಬೇಕೆಂಬ ಆತುರ ಬೇಡ. ನಿಮಗಿಂತ ಬಲವುಳ್ಳವರ ಮೇಲೆ ದ್ವೇಷವನ್ನು ಸಾಧಿಸುವಿರಿ. ಪರೋಪಕಾರದಿಂದ ಕೆಲವೊಮ್ಮೆ ನೀವೇ ಸಂಕಷ್ಟಕ್ಕೆ ಈಡಾಗುವಿರಿ. ಕಹಿ ಘಟನೆಯನ್ನು ಮರೆಯಲು ಬಹಳ ಶ್ರಮ ಪಡುವಿರಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಾಣಲಿದ್ದು ಕುಟುಂಬದಲ್ಲಿ ಅಸಮಾಧನ ಇರಲಿದೆ. ಎಲ್ಲವನ್ನೂ ನೀವು ನಿಮ್ಮ ಊಹೆಯ ಆಧಾರದ ಮೇಲೆ ನಿರ್ಣಯಿಸುವಿರಿ.
ತುಲಾ ರಾಶಿ:
ವ್ಯವಹಾರಿಕ ಮನಃಸ್ಥಿತಿಯಿಂದ ಎಲ್ಲವನ್ನೂ ಅಳೆಯುವುದು ಬೇಡ. ಆಶಾವಾದಕ್ಕಿಂತ ವಾಸ್ತವವನ್ನು ರೂಢಿಸಿಕೊಳ್ಳಿ. ನಿಮ್ಮ ಅಸಹಜ ನಡೆಯನ್ನು ನಿಮ್ಮವರು ಒಪ್ಪಿಕೊಳ್ಳಲಾರರು. ಯಾರ ಜೊತೆಗೂ ವೈರವನ್ನು ಕಟ್ಟಿಕೊಳ್ಳದೇ ಹೊಂದಾಣಿಕೆಯಿಂದ ವ್ಯವಹರಿಸಿ. ಸುಲಭದ ಕೆಲಸವನ್ನು ಆದಷ್ಟು ಇಂದು ಮಾಡಿಮುಗಿಸಿಕೊಳ್ಳಿ. ಆಕಸ್ಮಿಕವಾಗಿ ಪ್ರೇಮದಲ್ಲಿ ಬೀಳುವಿರಿ. ವ್ಯಕ್ತಿಯ ಬಗ್ಗೆ ನಿಮಗೆ ಪೂರ್ಣ ವಿಶ್ವಾಸವಿರದು. ಎಲ್ಲ ಬಂಧನದಿಂದ ಬಿಡುಗಡೆ ಸಿಕ್ಕಿದಂತಹ ನೆಮ್ಮದಿ ಇರಲಿದೆ.
ವೃಶ್ಚಿಕ ರಾಶಿ:
ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಪೂರಕವಾದ ಜನರ ಗೆಳೆತನನ್ನು ಮಾಡಿಕೊಳ್ಳುವುದು ಉತ್ತಮ. ನಿಮ್ಮವರಿಗೆ ನಿಮ್ಮ ನಡತೆಯಲ್ಲಿ ಬದಲಾವಣೆ ಕಂಡೀತು. ಪಾಲುದಾರಿಕೆಯಲ್ಲಿ ನಿಮ್ಮ ಶ್ರಮವೇ ಹೆಚ್ಚಿರಲಿದೆ. ನಿಮಗೆ ಇಷ್ಟವಾಗದ ಜವಾಬ್ದಾರಿಗಳು ಹೇಗಾದರೂ ಮಾಡಿ ತಪ್ಪಿಸಿಕೊಳ್ಳುವಿರಿ. ಸ್ನೇಹಿತರ ಜೊತೆ ಪ್ರವಾಸ ಹೋಗುವಿರಿ. ಅಪರೂಪದ ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಇಂದು ನೀವು ಗಟ್ಟಿ ಮನಸ್ಸಿನಿಂದ ಹೋದರೂ ಕಛೇರಿಯಿಂದ ನಿಮಗೆ ಕೆಲವು ಕಹಿ ಅನುಭವವನ್ನು ಕೊಟ್ಟೀತು.
ಧನು ರಾಶಿ:
ಸಾಲವು ನಿಮ್ಮನ್ನು ಹಿಂದೇಟು ಹಾಕುವಂತೆ ಮಾಡುತ್ತದೆ. ಯಾರ ಮಾತನ್ನೂ ಸಾವಧಾನವಾಗಿ ಕೇಳುವ ಮನಸ್ಸು ಇರದು. ನಿರೀಕ್ಷಿತ ಆದಾಯವನ್ನು ಪಡೆಯಲು ವಂಚಿತರಾಗುವಿರಿ. ಶುಭ ಸಮಾಚಾರದಿಂದ ಮನಸ್ಸು ಅರಳುವುದು. ಪ್ರೀತಿಯನ್ನು ಹೇಳಿಕೊಳ್ಳಲು ನಿಮಗೆ ಮುಜುಗರವಾಗಬಹುದು. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯು ಬಂದರೂ ಸಮಯೋಚಿತವಾಗಿರಲಿ. ಕಛೇರಿಯ ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವಿರಿ.
ಮಕರ ರಾಶಿ:
ಕಛೇರಿಯಲ್ಲಿ ನಿಮಗೆ ವಹಿಸಿದ ಕೆಲಸವನ್ನು ಮಾಡದೇ ಮೇಲಧಿಕಾರಿಗಳು ಸಿಟ್ಟುಗೊಂಡಾರು. ಹಂಚಿಕೊಳ್ಳುವಿಕೆಯನ್ನು ರೂಢಿಸಿಕೊಳ್ಳಬೇಕಾಗುವುದು. ನಿಮ್ಮ ಊಹೆಗಳು ಎಲ್ಲವೂ ವಾಸ್ತವಕ್ಕೆ ದೂರವಾದುದಾಗಿದೆ. ಉತ್ತಮ ಭೂಮಿಯನ್ನು ಖರೀದಿಸಲು ನಿಮಗೆ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ಕೌಟುಂಬಿಕ ಮನಸ್ತಾಪದಿಂದ ಲಾಭದಾಯಕ ಯೋಜನೆ ಕೈತಪ್ಪಬಹುದು. ನಿಮ್ಮವರ ಅನಾರೋಗ್ಯದ ಕಾರಣ ಓಡಾಟ ಮಾಡಬೇಕಾದೀತು.
ಕುಂಭ ರಾಶಿ:
ತಪ್ಪಾದರೂ ಕೆಲಸವನ್ನು ಮಾಡುವುದು ಅನಿವಾರ್ಯ. ಜೀವನ ನಿರ್ವಹಣೆಗೆ ಎಲ್ಲದರಿಂದ ದೂರವಿರಬೇಕಾಗುವುದು. ನಿಮ್ಮವರನ್ನು ಕಳೆದುಕೊಳ್ಳುವ ಭೀತಿಯು ಬರಬಹುದು. ರಾಜಕೀಯದ ಒತ್ತಡವು ಅಧಿಕಾರದಲ್ಲಿ ಇದ್ದವರಿಗೆ ಬರಲಿದೆ. ಎಲ್ಲದರಲ್ಲಿಯೂ ತಪ್ಪನ್ನು ಹುಡುಕುತ್ತ ಕಾಲಹರಣ ಮಾಡುವುದು ಬೇಡ. ಮನೆ ಹುಡುಕಾಟಕ್ಕೆ ತಿರುಗಾಟ ಮಾಡಲಿದ್ದೀರಿ. ವಿದ್ಯಾರ್ಥಿಗಳು ಗಂಭೀರವಾಗಿ ಅಧ್ಯಯನದ ಕಡೆ ಗಮನಕೊಡಬೇಕಾದೀತು.
ಮೀನ ರಾಶಿ:
ನಿಮ್ಮ ಬಳಿ ಸಂಘರ್ಷದ ಪರಿಹಾರಕ್ಕೆ ಬರಬಹುದು. ಜಾಣ್ಮೆಯಿಂದ ಅದನ್ನು ಬಗೆಹರಿಸಬೇಕಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಳವನ್ನು ಬದಲಿಸುವಿರಿ. ಭೂಮಿಯ ಮಾರಾಟದಿಂದ ಕಲಹವಾಗುವುದು. ಸಂಸಾರದ ಕಲಹಕ್ಕೆ ಮನಸ್ಸು ಕೊಡದೇ ಪ್ರಸನ್ನ ಮನಸ್ಸಿನಿಂದ ಇರುವಿರಿ. ಸಹೋದರರ ಜೊತೆ ಮನೆಯ ಆಸ್ತಿಯ ಬಗ್ಗೆ ಮಾತನಾಡುವಿರಿ. ನಿಮ್ಮ ದಿನಚರಿಯನ್ನು ವ್ಯವಸ್ಥಿತವಾಗಿಸಿಕೊಳ್ಳಿ. ಆಪ್ತರ ಜೊತೆ ಮಾತನಾಡಿ ನಿಮ್ಮ ಮನಸ್ಸಿನ ಭಾರವನ್ನೆಲ್ಲ ದೂರ ಮಾಡಿಕೊಳ್ಳುವಿರಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಶತಭಿಷಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಆಯುಷ್ಮಾನ್, ಕರಣ : ವಣಿಜ, ಸೂರ್ಯೋದಯ – 06 – 43 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭ ಕಾಲ : ರಾಹು 11:09 – 12:37, ಯಮಗಂಡ ಕಾಲ 15:34 – 17:03, ಗುಳಿಕ ಕಾಲ 08:12 – 09:40
ಲಕ್ಷ್ಮೀದೇವಿಗೆ ಸಿಹಿಪದಾರ್ಥದ ನೈವೇದ್ಯವನ್ನು ಮಾಡಿ. ಅದು ಸಕ್ಕರೆ ಆಗಿರಲಿ, ದ್ರಾಕ್ಷಿಯೇ ಆಗಿರಲಿ. ಹೀಗೆ ಮಾಡುವುದರಿಂದ ಆದಾಯದಲ್ಲಿ ಸ್ಥಿರತೆ ಬರುತ್ತದೆ. ಅದರಲ್ಲೂ ಸ್ವಂತ ವ್ಯವಹಾರ, ವ್ಯಾಪಾರ ಮಾಡುವವರು, ಫ್ರೀಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸುವರಿಗೆ ಅನಕೂಲ ಆಗುತ್ತದೆ.
ಒಂದು ಕೆಲಸ ಮುಗಿಸುವುದಕ್ಕೆ ನಾಲ್ಕಾರು ಸಲ ಓಡಾಡಬೇಕು ಎಂಬ ಪರಿಸ್ಥಿತಿ ಎದುರಿಸುತ್ತೀರಿ. ನೀವು ಈ ದಿನ ಮನೆಗೆ ಬೇಕಾದಂಥ ದಿನಸಿ ಪದಾರ್ಥಗಳನ್ನು ಖರೀದಿ ಮಾಡುವಂತೆ ಇದ್ದಲ್ಲಿ ಗುಣಮಟ್ಟದ ಬಗ್ಗೆ ಹೆಚ್ಚು ನಿಗಾ ವಹಿಸಿ. ನಿಮ್ಮ ವೈಯಕ್ತಿಕ ನಿರ್ಧಾರಗಳಲ್ಲಿ ಇತರರು ವಿಪರೀತ ಮೂಗು ತೂರಿಸುತ್ತಿದ್ದಾರೆ, ಇದು ಒಂದು ಬಗೆಯಲ್ಲಿ ಮಾನಸಿಕ ಕಿರಿಕಿರಿ ಆಗುತ್ತಿದೆ ಎಂಬುದನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಯಾವ ಮುಲಾಜು ಸಹ ನೋಡದೆ ಹೇಳುತ್ತೀರಿ.
ಬೆಳಗ್ಗೆ ಹಾಸಿಗೆಯಿಂದ ಎದ್ದ ಕ್ಷಣದಿಂದಲೇ ಒಂದು ಬಗೆಯ ಉತ್ಸಾಹ ನಿಮ್ಮಲ್ಲಿ ಇರುತ್ತದೆ. ಕುಟುಂಬ ಸದಸ್ಯರೊಬ್ಬರ ಆರೋಗ್ಯದ ಸ್ಥಿತಿ ಸ್ವಲ್ಪ ಮಟ್ಟಿಗೆ ಚಿಂತೆಗೆ ಕಾರಣ ಆಗಲಿದೆ. ಮಕ್ಕಳ ಒತ್ತಾಯದ ಮೇರೆಗೆ ನೀವು ತೆರಳುವಂಥ ಸ್ಥಳದಲ್ಲಿ ವಿಪರೀತ ಜನರು ಸೇರಿರುವುದು ನಿಮಗೆ ದಣಿವು, ಮುಜುಗರ ಉಂಟು ಮಾಡುತ್ತದೆ. ವಾಹನ ಪಾರ್ಕಿಂಗ್ ಬಗ್ಗೆ ಮುಂಚಿತವಾಗಿಯೇ ಪ್ಲಾನಿಂಗ್ ಮಾಡಿಕೊಳ್ಳುವುದು ಒಳ್ಳೆಯದು.
ನಿಮಗೆ ಗೊತ್ತಿರುವ ವಿಷಯ- ವಿಚಾರವನ್ನು ಎಷ್ಟೇ ಹತ್ತಿರದ ಸ್ನೇಹಿತರಾದರೂ ಉಚಿತವಾಗಿ ಹಂಚಿಕೊಳ್ಳಬಾರದು ಎಂಬ ಬಗ್ಗೆ ಗಟ್ಟಿ ನಿರ್ಧಾರ ಮಾಡಲಿದ್ದೀರಿ. ಡೇರಿ ಉತ್ಪನ್ನಗಳ ಮಾರಾಟಗಾರರಿಗೆ ಆದಾಯ ಹಾಗೂ ಲಾಭದಲ್ಲಿ ಏರಿಕೆ ಆಗುವ ಸಾಧ್ಯತೆಗಳಿವೆ. ಸಣ್ಣ ಅಳತೆಯ ಫಾರ್ಮ್ ಹೌಸ್ ವೊಂದು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಾ ಇರುವವರಿಗೆ ಮನಸ್ಸಿಗೆ ಹಿಡಿಸುವ ಆಸ್ತಿಯೊಂದು ದೊರೆಯಲಿದೆ.
ಬಿಳಿಯ ಬಟ್ಟೆಯಲ್ಲಿ ಅವರೇ ಕಾಳನ್ನು ಕಟ್ಟಿ, ವೀಳ್ಯದೆಲೆ- ಅಡಿಕೆ, ದಕ್ಷಿಣೆ ಸಹಿತವಾಗಿ ದಾನ ಮಾಡಿ. ನಿಮಗೆ ಬರಬೇಕಾದ ಹಣಕ್ಕೆ ನಾನಾ ಅಡೆತಡೆ ಎದುರಾಗುತ್ತಾ ಇದ್ದಲ್ಲಿ ಅದರ ನಿವಾರಣೆ ಆಗುತ್ತದೆ ಹಾಗೂ ಮಾನಸಿಕವಾಗಿ ಧೈರ್ಯ ಹೆಚ್ಚಾಗುತ್ತದೆ.
ವಿವಾಹ ವಯಸ್ಕರಾಗಿದ್ದು, ವಧು ಅಥವಾ ವರ ಅನ್ವೇಷಣೆಯಲ್ಲಿ ತೊಡಗಿರುವಂಥವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧಗಳ ರೆಫರೆನ್ಸ್ ದೊರೆಯಲಿದೆ. ಸ್ವಂತ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಇರುವವರು ಹೊಸದಾಗಿ ಹೂಡಿಕೆ ಬೇಕು ಎಂಬ ಕಾರಣಕ್ಕೆ ಪಾಲುದಾರರನ್ನು ಹುಡುಕಿಕೊಳ್ಳಲಿದ್ದೀರಿ. ಕೆಲವರು ತಾವಾಗಿಯೇ ಈ ಬಗ್ಗೆ ನಿಮ್ಮ ಬಳಿ ಪ್ರಸ್ತಾವ ತರುವ ಸಾಧ್ಯತೆ ಕೂಡ ಇದೆ.
ಸಾವಯವ ಕೃಷಿ ಮಾಡುವಂಥ ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗೋಪಾಯಗಳು ಕಾಣಿಸಿಕೊಳ್ಳಲಿವೆ. ಇಷ್ಟು ಸಮಯ ಒತ್ತಡ ಎನಿಸಿದ್ದ ಪ್ರಾಜೆಕ್ಟ್ ನಿಮ್ಮ ಕೈ ಹಿಡಿಯಲಿದೆ. ನಿಮ್ಮಲ್ಲಿ ಯಾರು ಮನೆ ನಿರ್ಮಾಣ ಅಥವಾ ನವೀಕರಣ ಮಾಡಬೇಕು ಎಂದಿದ್ದೀರಿ, ಆಗ ಆರ್ಥಿಕ ಅಗತ್ಯಗಳು ಇದೆ ಎಂದಾದರೂ ಹೊಸದಾಗಿ ನಿಮಗೆ ಸ್ನೇಹಿತರಾದವರ ಮೇಲೆ ಹಣಕಾಸು ವಿಚಾರಕ್ಕೆ ಅವಲಂಬಿತರಾಗುವುದಕ್ಕೆ ಹೋಗಬೇಡಿ.
ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಜೊತೆಗೆ ಉತ್ತಮವಾದ ಸಮಯವನ್ನು ಕಳೆಯುವ ಯೋಗ ಇದೆ. ಹೆಣ್ಣುಮಕ್ಕಳು ಇರುವಂಥವರು ಅವರ ಶಿಕ್ಷಣ, ಮದುವೆಗಾಗಿ ಹೂಡಿಕೆ ಮಾಡುವುದಕ್ಕೆ ಸಂಗಾತಿ ಜೊತೆಗೂಡಿ ಚರ್ಚೆ ಮಾಡಲಿದ್ದೀರಿ. ನೀವು ಬಹಳ ಇಷ್ಟಪಡುವಂಥ- ರುಚಿಕಟ್ಟಾದ ಊಟ- ತಿಂಡಿಗಳನ್ನು ಈ ದಿನ ಸವಿಯಲಿದ್ದೀರಿ. ಕುಟುಂಬ ಸದಸ್ಯರನ್ನು ಜೊತೆಗೆ ಕರೆದುಕೊಂಡು ಹೋಗಲಿದ್ದೀರಿ.
ದುರ್ಗಾ ಸಪ್ತಶತಿಯನ್ನು ಶ್ರವಣ ಮಾಡಿ. ಕೌಟುಂಬಿಕ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಅದರಿಂದ ಹೊರಬರುವಂಥ ಮಾರ್ಗೋಪಾಯ ಗೋಚರ ಆಗಲಿವೆ. ಇನ್ನು ವ್ಯವಹಾರದಲ್ಲಿ ಹಿನ್ನಡೆ ಕಾಣುತ್ತಿದ್ದರೆ ಲಾಭದಾಯಕ ಆಗುವಂಥ ಮಾರ್ಗದರ್ಶನ, ಸಲಹೆ ದೊರೆಯುತ್ತವೆ.
ಬಹಳ ದಿನಗಳ ನಂತರ ನಿಮ್ಮ ಮನಸ್ಸಿಗೆ ಹತ್ತಿರ ಆದವರನ್ನು ಭೇಟಿ ಆಗುವ ಯೋಗ ಈ ದಿನ ಇದೆ. ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಡಯಟ್ ಅಂದರೆ ಆಹಾರ ಪಥ್ಯದ ವಿಚಾರಕ್ಕೆ ಆದ್ಯತೆಯನ್ನು ನೀಡಲಿದ್ದೀರಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ತಜ್ಞರನ್ನೇ ಭೇಟಿ ಆಗಿ, ಅವರಿಂದ ಸಲಹೆ ಪಡೆಯುವ ಬಗ್ಗೆ ಕೂಡ ಚಿಂತನೆ ನಡೆಸಲಿದ್ದೀರಿ.
ವಿಜ್ಞಾನಿಗಳು, ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾಗುತ್ತದೆ. ಸರ್ಕಾರದ ಪ್ರಾಜೆಕ್ಟ್ ವೊಂದರ ಭಾಗವಾಗಿ ಅಥವಾ ಮುನ್ನಡೆಸುವಂತೆ ಕೇಳಿಕೊಳ್ಳಬಹುದು. ಚಾಲನೆಯನ್ನು ವೃತ್ತಿಯಾಗಿ ಮಾಡುತ್ತಾ ಇರುವವರು ವಾಹನ ಚಾಲನೆ ಮಾಡುವಾಗ ಸಾಮಾನ್ಯವಾಗಿ ತೆಗೆದುಕೊಳ್ಳುವ ಎಚ್ಚರಿಕೆಗಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಿ.
ನಿಮ್ಮ ಬೆನ್ನು ಬಿದ್ದ ವ್ಯಕ್ತಿಯೊಬ್ಬರು ಇಡೀ ದಿನ ಮಾನಸಿಕವಾಗಿ ಕಿರಿಕಿರಿ ಮಾಡಲಿದ್ದಾರೆ. ಅದರಲ್ಲೂ ವಯಸ್ಸಿನಲ್ಲಿ ಹಿರಿಯರು ಅಂತಲೋ ಅಥವಾ ಸಮಸ್ಯೆಯಲ್ಲಿ ಇರುವವರು ಎಂಬ ಅನುಕಂಪ ತೋರಿಸಿ, ಸಹಾಯದ ಭರವಸೆ ನೀಡುವ ಮಾತುಗಳನ್ನು ಆಡುವುದೇ ಸಮಸ್ಯೆಯಾಗಿ ನಿಮ್ಮನ್ನು ಕಾಡಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಬೆಳ್ಳಿಯಿಂದ ತಯಾರಿಸಿದ ಒಡವೆ, ತಟ್ಟೆ- ಲೋಟಗಳನ್ನು ಖರೀದಿ ಮಾಡುವ ಯೋಗ ಈ ದಿನ ಇದೆ.
ಬೆಂಗಳೂರು, (ಫೆಬ್ರವರಿ 26): ಉದ್ಯೋಗಕ್ಕಾಗಿ (Job) ಧಾರವಾಡದಲ್ಲಿ (Dharwad) ಯುವಶಕ್ತಿ ನಡೆಸಿದ ಉಗ್ರ ಹೋರಾಟಕ್ಕೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಮೊದಲ ಹಂತದಲ್ಲಿ 56,432 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲು ಕ್ಯಾಬಿನೆಟ್ (Cabinet) ತೀರ್ಮಾನಿಸಿದೆ. ಅಲ್ಲದೆ, ಸರ್ಕಾರಿ ಹೊಸ ನೇಮಕಾತಿಗಳಲ್ಲಿ ಸದ್ಯಕ್ಕೆ ಒಳಮೀಸಲಾತಿ ಜಾರಿ ಅಸಾಧ್ಯ ಎಂದು ಕ್ಯಾಬಿನೆಟ್ ತೀರ್ಮಾನಿಸಿದೆ. ಹಳೇ ಮೀಸಲಾತಿಯಲ್ಲೇ ನೇಮಕಾತಿಗೆ ತೀರ್ಮಾನಿಸಿದೆ.
ಸಚಿವ ಸಂಪುಟ ಬಳಿಕ ಕಾನೂನು ಸಚಿವ ಎಚ್ಕೆ ಪಾಟೀಲ್ ಮಾತನಾಡಿ, ನೇಮಕಾತಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಮುಂದಿನ 30 ದಿನಗಳಲ್ಲಿ 56,432 ಹುದ್ದೆ ಭರ್ತಿಯಾಗಲಿದೆ. ಪರಿಶಿಷ್ಟ ಜಾತಿ ಒಳಮೀಸಲಾತಿಯ ವಿಚಾರ ಹೈಕೋರ್ಟ್ನಲ್ಲಿದೆ. ಹೆಚ್ಚುವರಿ ಮೀಸಲಾತಿ ವಿಚಾರವಾಗಿ ಹೈಕೋರ್ಟ್ ತಡೆ ನೀಡಿರುತ್ತದೆ. ಹೀಗಾಗಿ ಮೀಸಲಾತಿ 50% ಮೀರದಂತೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತೆ. ಸದ್ಯ ಎಸ್ಸಿ 15% ಮೀಸಲಾತಿ ಅನ್ವಯವೇ ನೇಮಕಾತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
2026 ರ ಟಿ20 ವಿಶ್ವಕಪ್‌ನ ಸೂಪರ್ 8 ಸುತ್ತಿನಲ್ಲಿ ಭಾರತ ಮತ್ತು ಜಿಂಬಾಬ್ವೆ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು 72 ರನ್ಗಳಿಂದ ಗೆದ್ದುಕೊಂಡ ಆತಿಥೇಯ ಭಾರತ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇತ್ತ ಸತತ ಎರಡನೇ ಪಂದ್ಯದಲ್ಲಿ ಸೋತ ಜಿಂಬಾಬ್ವೆ ಸೆಮಿಫೈನಲ್ ರೇಸ್ನಿಂದ ಹೊರಬಿದ್ದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್‌ಗಳ ನಷ್ಟಕ್ಕೆ 256 ರನ್ ಗಳಿಸಿತು. ಗೆಲುವಿಗೆ 257 ರನ್‌ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಭಾರತ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದ್ದು, ತನ್ನ ಕೊನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಕ್ಕಿತು. ಸಂಜು ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 48 ರನ್ ಸೇರಿಸಿದರು. ಸಂಜು 24 ರನ್ ಗಳಿಸಿ ಔಟಾದರು. ಇಲ್ಲಿಂದ ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಎರಡನೇ ವಿಕೆಟ್‌ಗೆ 72 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ವೇಳೆ ಅಭಿಷೇಕ್ 26 ಎಸೆತಗಳಲ್ಲಿ ತಮ್ಮ ಮೊದಲ ಟಿ20 ವಿಶ್ವಕಪ್ ಅರ್ಧಶತಕವನ್ನು ಪೂರೈಸಿದರು. ಮಾತ್ರವಲ್ಲದೆ ಪ್ರಸ್ತುತ ವಿಶ್ವಕಪ್‌ನಲ್ಲಿ ಅಭಿಷೇಕ್ 50ರ ಗಡಿ ದಾಟಿದ್ದು ಇದೇ ಮೊದಲು.
ಭಾರತದ ಎರಡನೇ ವಿಕೆಟ್ ಇಶಾನ್ ಕಿಶನ್ (38 ರನ್) ರೂಪದಲ್ಲಿ ಪತನವಾಯಿತು. ಇಶಾನ್ ಔಟಾದ ಸ್ವಲ್ಪ ಸಮಯದ ನಂತರ, ಅಭಿಷೇಕ್ ಶರ್ಮಾ ಕೂಡ ಔಟಾದರು. ಅಭಿಷೇಕ್ 30 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳು ಸೇರಿದಂತೆ 55 ರನ್ ಗಳಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 13 ಎಸೆತಗಳಲ್ಲಿ ಮೂರು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದಂತೆ 33 ರನ್ ಗಳಿಸಿ ಅಮೋಘ ಪ್ರದರ್ಶನ ನೀಡಿದರು.
ಆ ಬಳಿಕ ಜೊತೆಯಾದ ಹಾರ್ದಿಕ್ ಪಾಂಡ್ಯ ಮತ್ತು ತಿಲಕ್ ವರ್ಮಾ ಅಜೇಯ 84 ರನ್ ಗಳಿಸಿ ಭಾರತವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಹಾರ್ದಿಕ್ 23 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ ಅಜೇಯ 50 ರನ್ ಗಳಿಸಿದರೆ, ತಿಲಕ್ ವರ್ಮಾ 16 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಸೇರಿದಂತೆ ಅಜೇಯ 44 ರನ್ ಬಾರಿಸಿದರು.
256 ರನ್ ಬೆನ್ನಟ್ಟಿದ ಜಿಂಬಾಬ್ವೆ ತಂಡವು ನಿಧಾನಗತಿಯ ಆರಂಭವನ್ನು ಪಡೆಯಿತು. ಬ್ರಿಯಾನ್ ಬೆನೆಟ್ ಮತ್ತು ತಡಿವಾನಾಶೆ ಮರುಮಾನಿ 6.2 ಓವರ್‌ಗಳಲ್ಲಿ 44 ರನ್‌ಗಳನ್ನು ಸೇರಿಸಿದರು. ಅಕ್ಷರ್ ಪಟೇಲ್ ಮರುಮಾನಿ (20) ಅವರನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು. ನಂತರ ವರುಣ್ ಚಕ್ರವರ್ತಿ ಕೇವಲ 6 ರನ್‌ಗಳಿಗೆ ಡಿಯೋನ್ ಮೈಯರ್ಸ್ ಅವರನ್ನು ಔಟ್ ಮಾಡಿದರು. ಅಲ್ಲಿಂದ ನಾಯಕ ಸಿಕಂದರ್ ರಜಾ ಮತ್ತು ಬ್ರಿಯಾನ್ ಬೆನೆಟ್ ಮೂರನೇ ವಿಕೆಟ್‌ಗೆ 72 ರನ್‌ಗಳನ್ನು ಸೇರಿಸಿದರು. ರಜಾ 21 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಒಳಗೊಂಡಂತೆ 31 ರನ್‌ಗಳ ಕೊಡುಗೆ ನೀಡಿದರು.
ಜಿಂಬಾಬ್ವೆ ತಂಡದ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಸಿಕಂದರ್ ರಜಾ ಮತ್ತು ರಿಯಾನ್ ಬರ್ಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಶಿವಂ ದುಬೆ ಬೌಲಿಂಗ್‌ನಲ್ಲಿ ಮುಷೆಕಿವಾ 7 ರನ್ ಗಳಿಸಿ ಔಟಾದರು. ವಿಕೆಟ್ ಪತನದ ನಡುವೆಯೂ, ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ ಕೊನೆಯವರೆಗೂ ಕ್ರೀಸ್‌ನಲ್ಲಿಯೇ ಉಳಿದು 59 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 97 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ರಾಜಸ್ಥಾನದ ಉದಯಪುರದಲ್ಲಿ ಇರುವ ಖಾಸಗಿ ಹೋಟೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ನಡೆದಿದೆ. ಫೆಬ್ರವರಿ 26ರಂದು ನಡೆದ ಈ ವಿವಾಹ ಸಮಾರಂಭದ ಫೋಟೋಗಳು ವೈರಲ್ ಆಗಿವೆ.
ಬೆಂಗಳೂರು, ಫೆಬ್ರವರಿ 26: ನಗರದಲ್ಲಿ ವಿದೇಶಿಗರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾದ ಹಿನ್ನಲೆ ಪೊಲೀಸರು (police) ಅಲರ್ಟ್ ಆಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ನೆಲೆಸಿರುವ ಅಕ್ರಮ ವಿದೇಶಿಗರ (Illegal Foreigners) ಪತ್ತೆಗೆ ಖಾಕಿ ಪಡೆ ಮುಂದಾಗಿದೆ. ಕಮಿಷನರ್ ಸೂಚನೆ ಬೆನ್ನಲ್ಲೇ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಒಂದು ವೇಳೆ ಅಕ್ರಮ ವಲಸಿಗರಿಗೆ ಜಾಗ ಕೊಟ್ಟರೆ ಮನೆ ಮಾಲಿಕರಿಗೂ ಸಂಕಷ್ಟ ತಪ್ಪಿದ್ದಲ್ಲ.
ಬೆಂಗಳೂರಲ್ಲಿ ಪೊಲೀಸರ ತಲಾಶ್
ಬೆಂಗಳೂರಿನ ಆಯಾ ವಿಭಾಗದಲ್ಲಿ ಅನುಮಾನಿತ ಸ್ಥಳಗಳಲ್ಲಿ ಪೊಲೀಸರು ತಲಾಶ್ ನಡೆಸಿದ್ದಾರೆ. ತಲಾಶ್ ನಡೆಸಿ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ. ನಿನ್ನೆ ಒಂದು ದಿನವೇ ಸುಮಾರು 2000ಕ್ಕೂ ಹೆಚ್ಚು ವಿದೇಶಿಗರ ವಿಚಾರಣೆ ಮಾಡಲಾಗಿದೆ. ಇದರಲ್ಲಿ ಬಹುತೇಕ ವಿದೇಶಿಕರು ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಗಿದೆ. ಅಕ್ರಮವಾಗಿ ನೈಜೀರಿಯನ್ಸ್ ಹಾಗೂ ಬಾಂಗ್ಲಾ ವಲಸಿಗರು ನೆಲೆಸಿರುವುದು ಪತ್ತೆಯಾಗಿದೆ. ಸದ್ಯ ಅಕ್ರಮವಾಗಿ ನೆಲೆಸಿರುವ ಎಲ್ಲರ ವಿಚಾರಣೆ ನಡೆದಿದೆ. ಎಲ್ಲಿಂದ? ಯಾವಾಗ? ಯಾರು ಕರೆತಂದರು ಎಂದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ವೀಸಾ ವೆರಿಫಿಕೇಶನ್ ಜೊತೆಗೆ ಫಾರ್ಮ್ ಸಿ ಮತ್ತು ಇತರೆ ಬೇರೆ ದಾಖಲಾತಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಯಾವುದೇ ಸಮಸ್ಯೆ ಆಗದಂತೆ ಲೈವ್ ಕ್ಯಾಮೆರಾ ಬಳಸಿ ಆಯಾ ನಗರಗಳ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ.
ಇನ್ನು ಮನೆಯ ಮಾಲೀಕರು ಮತ್ತು ವಿದೇಶೀಯರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಮಾಲೀಕರು ಫಾರ್ಮ್ ಸಿ ಮಾಹಿತಿಯನ್ನು ಸ್ಥಳೀಯ ಠಾಣೆಗೆ ನೀಡಬೇಕು. ಇಲ್ಲವಾದಲ್ಲಿ ಅವರನ್ನು ಡಿಪೋಟೇಷನ್ (ಪ್ರತಿನಿಧಿತ್ವ) ಮಾಡುವ ಕೆಲಸ ಪೊಲೀಸರು ಇನ್ಮುಂದೆ ಮಾಡಲಿದ್ದಾರೆ.