Video: ಸೂಪರ್ ಮಾರ್ಕೆಟ್ ಲೂಟಿ ಮಾಡಲು ಬಂದ ಕಳ್ಳರಿಗೆ ಸಿಬ್ಬಂದಿ ಕಲಿಸಿದ ಪಾಠ ನೋಡಿ – Kannada News | Robbery Attempt in Brazil Foiled as Staff Fight Back, Suspects Arrested
ಬ್ರೆಜಿಲ್‌ನಲ್ಲಿ ನಡೆದ ಈ ದರೋಡೆ ಯತ್ನವು ಕಳ್ಳರ ಪಾಲಿಗೆ ಅಕ್ಷರಶಃ ದುಸ್ವಪ್ನವಾಗಿ ಪರಿಣಮಿಸಿತ್ತು. ಶಸ್ತ್ರಸಜ್ಜಿತರಾಗಿ ಬಂದ ದರೋಡೆಕೋರರಿಗೆ ಸೂಪರ್ ಮಾರ್ಕೆಟ್ನ ಸಿಬ್ಬಂದಿ ನೀಡಿರುವ ತಿರುಗೇಟು ಎಲ್ಲೆಡೆ ಚರ್ಚೆಯಾಗುತ್ತಿದೆ. ಬ್ರೆಜಿಲ್‌ನ ಮಳಿಗೆಯೊಂದಕ್ಕೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು, ಸಿಬ್ಬಂದಿಯನ್ನು ಬೆದರಿಸಿ ನಗದು ರಿಜಿಸ್ಟರ್‌ನಲ್ಲಿದ್ದ ಹಣವನ್ನು ಲೂಟಿ ಮಾಡಲು ಯತ್ನಿಸಿದ್ದಾರೆ. ದರೋಡೆಕೋರರಲ್ಲೊಬ್ಬ ಹಣವನ್ನು ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದಾಗ, ಅಲ್ಲಿನ ಸಿಬ್ಬಂದಿ ಧೈರ್ಯ ಪ್ರದರ್ಶಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.ದರೋಡೆಕೋರರಲ್ಲಿ ಒಬ್ಬನನ್ನು ಬಂಧಿಸಿ ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಉದ್ಯೋಗಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ…