Video: ಕೇರಳದ ಉತ್ಸವದಲ್ಲಿ ನಡುಕ ಹುಟ್ಟಿಸಿದ ಆನೆ ದಾಳಿ, ಇಬ್ಬರು ಸಾವು, ವಿಡಿಯೋದಲ್ಲಿ ಸೆರೆಯಾಯ್ತು ಭೀಕರ ಕ್ಷಣ – Kannada News | Festival Tragedy: Elephant Incident Leaves Two Dead in Kerala

ತಿರುವನಂತಪುರಂ, ಮೇ 03: ಕೇರಳದ ದೇವಾಲಯ ಉತ್ಸವಗಳಲ್ಲಿ ಗಜಪಡೆಗಳ ಅಟ್ಟಹಾಸ ಮುಂದುವರೆದಿದ್ದು, ಶುಕ್ರವಾರ (ಮೇ 1) ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಭೀಕರ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಎರ್ನಾಕುಲಂ ಜಿಲ್ಲೆಯ ಕಿಡಂಗೂರ್ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಬೆಳಗ್ಗೆ 9.15 ರ ಸುಮಾರಿಗೆ ‘ಮಯ್ಯನಾಡ್ ಪಾರ್ಥಸಾರಥಿ’ ಎಂಬ ಆನೆ ದಾಳಿ ನಡೆಸಿತ್ತು. ಆನೆಗೆ ನೀರು ಕುಡಿಸಲು ಕರೆದೊಯ್ಯುತ್ತಿದ್ದಾಗ, ಅದು ಇದ್ದಕ್ಕಿದ್ದಂತೆ ವಿಷ್ಣು ಎಂಬುವವರ ಮೇಲೆ ದಾಳಿ ಮಾಡಿದೆ. ಆನೆ ತನ್ನ ಸೊಂಡಿಲಿನಿಂದ ವಿಷ್ಣು ಅವರನ್ನು ಎತ್ತಿ ಬಿಸಾಡಿ, ತುಳಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಉದ್ರೇಕಗೊಂಡ ಆನೆಯು ದೇವಾಲಯದ ಆವರಣದಲ್ಲಿದ್ದ ಕಾರನ್ನು ಉರುಳಿಸುತ್ತಿರುವುದು ಮತ್ತು ದ್ವಿಚಕ್ರ ವಾಹನಗಳ ಮೇಲೆ ದಾಳಿ ನಡೆಸುತ್ತಿರುವುದು ಸೆರೆಯಾಗಿದೆ. ಆನೆಯ ರೌದ್ರಾವತಾರ ಕಂಡು ಭಕ್ತರು ಹಾಗೂ ದೇವಸ್ಥಾನದ ಸಿಬ್ಬಂದಿ ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ತ್ರಿಶೂರ್ ಜಿಲ್ಲೆಯಲ್ಲೂ ಇಂತಹದ್ದೇ ಘಟನೆ ನಡೆದಿದ್ದು, ಆನೆ ದಾಳಿಗೆ ಮಾವುತ ಬಲಿಯಾಗಿದ್ದಾರೆ. ಈ ಘಟನೆಗಳು ಧಾರ್ಮಿಕ ಆಚರಣೆಗಳಲ್ಲಿ ಆನೆಗಳ ಬಳಕೆ ಮತ್ತು ಸುರಕ್ಷತೆಯ ಬಗ್ಗೆ ಮತ್ತೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿಂದು ಗುಡುಗು ಸಹಿತ ಮಳೆಯ ಸಾಧ್ಯತೆ! – Kannada News | Bengaluru temperature: thundershowers in Bengaluru, dry weather elsewhere

ಬೆಂಗಳೂರಿನಲ್ಲಿಂದು ಗುಡುಗು ಸಹಿತ ಮಳೆಯ ಸಾಧ್ಯತೆ!
Image Credit source: google Gemini

ಬೆಂಗಳೂರು, ಮೇ 03: ರಾಜ್ಯದಲ್ಲಿ ಮೂರು ದಿನಗಳಿಂದ ಆಲಿಕಲ್ಲು ಮಳೆಯಾರ್ಭಟ (Karnataka Weather) ಕಾಣಸಿಗುತ್ತಿದೆ. ಇಂದೂ ಸಹ ಬೆಂಗಳೂರು ಸೇರಿ ಹಲವೆಡೆ ಗಾಳಿ ಮಳೆಯಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಲಬುರಗಿ, ರಾಯಚೂರು ಸೇರಿದಂತೆ ಹಲವೆಡೆ ಇಂದು ಗರಿಷ್ಠ 42-42 ಡಿಗ್ರಿ ಸೆಲ್ಸಿಯಸ್​ನಷ್ಟು ತಾಪಮಾನವಿರಲಿದ್ದು, ಇನ್ನೂ 3 ದಿನ ಇದೇ ವಾತಾವರಣ ಇರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ರಾಜಧಾನಿಯಲ್ಲಿ ಮಳೆಯ ಅಲರ್ಟ್​!

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಕಲ್ಬುರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಂಭವವಿದ್ದು, ಉಳಿದೆಡೆ ಶುಷ್ಕ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ರಾಮನಗರ, ಮಂಡ್ಯ, ಮೈಸೂರು, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30-40 ಕಿ. ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಮಳೆಯ ಅವಾಂತರ!

ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಮಳೆ ಹಲವರನ್ನು ಬಲಿ ಪಡೆದಿದೆ. ಜೆ.ಪಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿತದಿಂದ 7 ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:41 am, Sun, 3 May 26

Source link

ಮುಚ್ಕೊಂಡು ನಿಲ್ಲಬೇಕು.. ಗೂಂಡಾ MLA ಅಂದಿದ್ಯಾರು?: ನಾನು ಮಾಜಿ ಎಂಎಲ್ಸಿ ಎಂದು ಪೊಲೀಸರಿಗೆ ಆವಾಜ್

ಚಿಕ್ಕಮಗಳೂರು, ಮೇ.3: ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಭಾರೀ ಗೊಂದಲುಗಳು ಉಂಟಾಗಿದೆ. ಮಧ್ಯರಾತ್ರಿಯವರಿಗೆ ಮತ ಎಣಿಕೆ ನಡೆದಿದೆ. ಈ ಮಸಯದಲ್ಲಿ ಮತ ಎಣಿಕೆ ಕೇಂದ್ರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮತ ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಕಾರ್ಯಕರ್ತರು ಒಳನುಗ್ಗಲು ಯತ್ನಿಸಿದರು, ಅಧಿಕಾರಿಗಳು ಮಾಹಿತಿ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಎಂಎಲ್ಸಿ ಒಬ್ಬರು ಪೊಲೀಸರೊಂದಿಗೆ ತೀವ್ರ ವಾಗ್ವಾದಕ್ಕಿಳಿದರು. ಗೂಂಡಾ ಎಂಎಲ್ಎ ಎಂದು ಹೇಳಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ, ತಮ್ಮನ್ನು ತಳ್ಳಿ ಹೊರಹಾಕಿದ್ದರಿಂದ ಕಾರ್ಯಕರ್ತರ ಗತಿ ಏನು ಎಂದು ಪ್ರಶ್ನಿಸಿದರು. 100 ಮೀಟರ್ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲಿಸದಿರುವ ಬಗ್ಗೆಯೂ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಪೊಲೀಸರು ಎರಡೂ ಕಡೆ ಸಮಾನವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಆಗ್ರಹಿಸಿದರು. ಪೊಲೀಸರು ರಾಜಕೀಯ ವ್ಯಕ್ತಿಗಳನ್ನು ಕೆರಳಿಸುವ ಕೆಲಸ ಮಾಡಬಾರದು ಮತ್ತು ಎರಡೂ ಕಡೆಯವರಿಗೂ ಸಮಾನವಾಗಿ ಆದೇಶಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. “ನಿಮ್ಮ ಪೊಲೀಸ್ ಬಟ್ಟೆ ಹಾಕಿಕೊಂಡು ಬಿಟ್ಟಿದ್ದೀರಿ ಅಂತ ಮೊನ್ನೆ ಸಿಎಂ ಇದ್ರೂ ಹೀಗೆ ಮಾಡಿದ್ರಿ, ಇಲ್ಲೂ ಹಾಗೆ ಮಾಡುತ್ತಿದ್ದೀರಾ. ಆ ತರ ಮಾಡಬಾರದು. ಯಾರನ್ನೂಕೆರಳಿಸುವ ಕೆಲಸ ಮಾಡಬಾರದು” ಎಂದು ಖಾರವಾಗಿ ಹೇಳಿದ್ದಾರೆ. ನಾನು ಕಾನೂನು ತಿಳಿದಿರುವ ಮಾಜಿ ಎಂಎಲ್ಸಿ ಆಗಿ ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು ಎಂದು ತಿಳಿದಿದೆ ಎಂದು ಸ್ಪಷ್ಟಪಡಿಸಿದರು. “ಗೂಂಡಾ ಎಂಎಲ್ಎ” ಎಂದು ಕರೆದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಮತ್ತು ಅವರ ಬಾಯಿಗೆ ಬೀಗ ಹಾಕಲು ನಿಮಗೆ ಬರಲ್ವಾ ಎಂದು ತೀವ್ರ ಸ್ವರದಲ್ಲಿ ಪ್ರಶ್ನಿಸಿದರು. ಬೆಳಗ್ಗೆಯಿಂದಲೂ ಪೊಲೀಸರ ಮೇಲೆ ಆರೋಪ ಮಾಡಲಾಗುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಶಾಸಕ ರಾಜೇಗೌಡರಿಗೆ ಬಿಗ್ ಶಾಕ್; ಅಂಚೆ ಮತಗಳ ಮರು ಎಣಿಕೆಯಲ್ಲಿ ತಿರುವು! – Kannada News | Chikkamagaluru: Sringeri Recount Fuels Row as Double Ticks Invalidate Rajegowda Votes

ಚಿಕ್ಕಮಗಳೂರು, ಏ.3: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಗೆ ಸಂಬಂಧಿಸಿದಂತೆ ಮತ್ತೊಂದು ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ (Postal Ballots) ಮರು ಎಣಿಕೆಯಲ್ಲಿ ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಭಾರಿ ಹಿನ್ನಡೆಯಾಗಿದೆ. ನೆನ್ನೆ (ಮೇ.2) ಅವರು ಅಂಚೆ ಮತಗಳ ಮರು ಮತ‌ಎಣಿಕೆ ವಿಜಯ ಸಾಧಿಸಿದರು ಎಂದು ಹೇಳಲಾಗಿತ್ತು. ಈ ಮತ ಏಣಿಕೆಯಲ್ಲಿ ಭಾರೀ ಗೊಂದಲಗಳು ಉಂಟಾಗಿತ್ತು. ಶನಿವಾರ ಏಳು ಗಂಟೆಗೆ ಶುರವಾದ ಈ ಮತ ಎಣಿಕೆ ಮಧ್ಯರಾತ್ರಿಯವರಿಗೆ ನಡೆದಿದೆ. ಇದೀಗ ಈ ಎಲ್ಲ ಗೊಂದಲು ಮಹಾತಿರುವು ಪಡೆದುಕೊಂಡಿದೆ. 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆ ವೇಳೆ ಸಿಂಧು (Valid) ಎಂದು ಪರಿಗಣಿಸಲಾಗಿದ್ದ ಮತಗಳು, ಈಗಿನ ಮರು ಎಣಿಕೆ ವೇಳೆ ತಿರಸ್ಕೃತಗೊಂಡಿವೆ.

ಅಂಚೆ ಮತಗಳ ಪತ್ರದಲ್ಲಿ ರಾಜೇಗೌಡ ಮತ್ತು ಮತ್ತೊಬ್ಬ ಅಭ್ಯರ್ಥಿ ಇಬ್ಬರಿಗೂ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ 258 ಮತಗಳನ್ನು ತಿರಸ್ಕರಿಸಲಾಗಿದೆ. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಈಗ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡಿವೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ.

ಈಗಿನ ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿರುವುದರಿಂದ, ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣವು ಬದಲಾಗುವ ಸಾಧ್ಯತೆ ದಟ್ಟವಾಗಿದೆ. ತನಗೆ ಬಹುಮತ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಈಗಾಗಲೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮರು ಎಣಿಕೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕ ರಾಜೇಗೌಡ ಅವರು ಮಧ್ಯರಾತ್ರಿ 4 ಗಂಟೆಯವರೆಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿದ್ದರು.

ಇದನ್ನೂ ಓದಿ: ರಾತ್ರಿ 8 ಗಂಟೆಯಾದರೂ ಶೃಂಗೇರಿ ವಿಧಾನಸಭಾ ಕ್ಷೇತ್ರ ಮರು ಮತ ಎಣಿಕೆಯ ಅಧಿಕೃತ ಮಾಹಿತಿ ನೀಡದ ಅಧಿಕಾರಿಗಳು: ಹೈಡ್ರಾಮಾ

ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮುರೋಳಿ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಮತ್ತು ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಮತಗಳ ‘ಟ್ಯಾಂಪರಿಂಗ್’ (ಮತಗಳ ತಿದ್ದುಪಡಿ) ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ರಾಜೇಗೌಡರ ಮತಪತ್ರಗಳಲ್ಲಿ ‘ಡಬ್ಬಲ್ ಟಿಕ್’ ಮಾಡಿ ಉದ್ದೇಶಪೂರ್ವಕವಾಗಿ ಅವುಗಳನ್ನು ತಿರಸ್ಕೃತಗೊಳಿಸಲಾಗಿದೆ ಎಂಬುದು ಕಾಂಗ್ರೆಸ್ ಆರೋಪ. ಇನ್ನು “ನಾವು ಸಂಪೂರ್ಣವಾಗಿ ಹೈಕೋರ್ಟ್ ಆದೇಶದಂತೆ ಮರು ಎಣಿಕೆ ಮಾಡಿದ್ದೇವೆ. ಹ್ಯಾಂಡ್ ಬುಕ್ ನಿಯಮಗಳ ಪ್ರಕಾರವೇ ಸಿಂಧು ಮತ್ತು ಅಸಿಂಧು ಮತಗಳನ್ನು ನಿರ್ಧರಿಸಲಾಗಿದೆ. ವರದಿಯನ್ನು ಈಗ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ,” ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 03 May: ಈ ರಾಶಿಯವರು ಇಂದು ನೊಂದವರಿಗೆ ಸಾಂತ್ವನ ಹೇಳುವರು – Kannada News | Horoscope Today, May 3: This Zodiac Sign Will Comfort the Grieving

ದಿನ ಭವಿಷ್ಯ (ಎಐ ಚಿತ್ರ)Image Credit source: tv9 kannada

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಭಾನು, ಪಕ್ಷ : ಕೃಷ್ಣ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಅನುರಾಧಾ, ಯೋಗ : ವರಿಯಾನ್, ಕರಣ : ಗರಜ, ಸೂರ್ಯೋದಯ – 06 – 02 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:05 – 18:40, ಯಮಗಂಡ ಕಾಲ 12:21 – 13:56, ಗುಳಿಕ ಕಾಲ 15:31 – 17:05.

ಮೇಷ ರಾಶಿ: ಸೌಂದರ್ಯ ವರ್ಧನೆಗೆ ಸಮಯವನ್ನು ಇಡುವಿರಿ‌. ಸಂಬಂಧಿಕರ ಸಹವಾಸ, ಸಹಾಯಗಳು ಸಿಗಲಿವೆ. ನಿಮ್ಮ ಅಂತಸ್ಸತ್ತ್ವ ಗಟ್ಟಿ ಇರುವುರಿಂದ ಯಾರ ಮಾತಿಗೂ ಕಿವಿಗೊಡದೆ ನೀವು ನಿರ್ಧರಿಸಿದ ಕೆಲಸದಲ್ಲಿ ಮುಂದುವರಿಯುತ್ತೀರಿ. ನೀವು ಮನೋರಂಜನೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳ ಒತ್ತಡಕ್ಕೆ ಕೊನೆಗೂ ಶರಣಾಗಬೇಕಾಗುವುದು. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ಕಳೆದುಕೊಂಡ ವಸ್ತುವನ್ನು ಮರಳಿ ಪಡೆಯಬೇಕಾದ ಸ್ಥಿತಿ ಬರಬಹುದು.

ವೃಷಭ ರಾಶಿ: ಇಂದು ಯಾವುದೇ ಕಾರಣಕ್ಕೆ ಪ್ರಯಾಣವನ್ನು ಅತಿಯಾಗಿ ಮಾಡಬೇಡಿ.‌ ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ಪರರ ಆಕರ್ಷಣೆಯಿಂದ ಮನಸ್ಸು ಅರಳುವುದು. ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹೋಗಬೇಡಿ.‌ ಸಮಯ ವ್ಯರ್ಥವಾಗುತ್ತಿದೆ ಎಂದು ತಿಳಿದಿದ್ದರೂ ಅನ್ಯ ಮಾರ್ಗವಿಲ್ಲದೇ ಇರಬೇಕಾದೀತು. ಮಕ್ಕಳಲ್ಲಿ ಸ್ಪರ್ಧಾಮನೋಭಾವವನ್ನು ಹೆಚ್ಚಿಸುವಿರಿ. ಕುಮಾರ್ಗದಿಂದ ಆದಾಯವನ್ನು ಪಡೆಯುವಿರಿ. ಭೂಮಿಯ ಖರೀದಿಗೆ ಮನಸ್ಸಾಗುವುದು.

ಮಿಥುನ ರಾಶಿ: ನಿಮ್ಮ ವಿವಾಹದ ಮಾತುಕತೆಗಳಿಂದ ಬಹಳ ನೆಮ್ಮದಿ ನೀಡುವುದು. ವಿವಾಹದ ಬಹು ನಿರೀಕ್ಷೆ ಹುಸಿಯಾಗಲಿದೆ. ಅಪರೂಪದ ಸ್ನೇಹಿತನ‌ ಜೊತೆ ಸುತ್ತಾಟ. ವ್ಯರ್ಥವೆನಿಸಿದರೂ ನಿಮಗೆ ಬೇಕಾದ ಅಂಶಗಳು ಅವನಿಂದ ಸಿಗಲಿದೆ. ನಿಮ್ಮ ಗೊಂದಲಗಳಿಗೆ ತೆರೆ ಬೀಳಲಿದೆ. ವೈದ್ಯರಿಗೆ ಇಂದು ಉತ್ತಮದಿನವಾಗಿಲ್ಲ. ನೀವೂ ದೈವಕ್ಕೆ ಶರಣಾಗಲೇ ಬೇಕು. ಸದಾಕಾಲ ಸಂತೋಷದಿಂದ ಇರಲು ನೀವೇ ಏನಾದರೂ ಕ್ರಮವನ್ನು ಅನುಸರಿಸುವಿರಿ.

ಕರ್ಕಾಟಕ ರಾಶಿ: ನಿಮ್ಮ ಮಾತುಗಳನ್ನು ಸರಿಯಾಗಿ ಆಡಿ. ಇಲ್ಲವಾದರೆ ಅನೇಕ ಶುಭಕಾರ್ಯಗಳಿಂದ, ಉತ್ತಮ ಕಾರ್ಯಗಳಿಂದ ವಂಚಿತರಾಗುವಿರಿ. ಮಕ್ಕಳ ವಿಚಾರವಾಗಿ ದಂಪತಿಗಳ ಮಧ್ಯದಲ್ಲಿ ವೈಮನಸ್ಯವು ಉಂಟಾಗಬಹುದು. ಸಹೋದರರಿಗೆ ಆರ್ಥಿಕ ಸಹಾಯ ಮಾಡುವಿರಿ. ನಿಮ್ಮಿಬ್ಬರ ಮಾತಿನ‌ ಚಕಮಕಿಯಲ್ಲಿ ಕೂಸು ಬಡವಾದೀತು. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳುವಿರಿ.

ಸಿಂಹ ರಾಶಿ: ಇಂದು ದಿನವಿಡೀ ದೇಹದ ಆಲಸ್ಯ, ಮನಸ್ಸಿನಲ್ಲಿ ಇರುವ ಜಾಡ್ಯದಿಂದ ಯಾವ ಕಾರ್ಯಗಳೂ ಆಗದು. ನಿಮ್ಮ ವೇಗವನ್ನು ನಿಯಂತ್ರಿಸಲು ಅನ್ಯರ ಹಸ್ತಕ್ಷೇಪ ಹೆಚ್ಚಾಗುವುದು. ದಿವಸ ಚಟುವಟಿಕೆಗಳಿಗಿಂತ ಭಿನ್ನವಾದ ಯಾವುದಾದರೂ ಆಸಕ್ತಿಯಿರುವ ಕೆಲಸಗಳ ಬಗ್ಗೆ ಗಮನಹರಿಸಿ. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನಿಮ್ಮನ್ನು ನಿಂದಿಸುವವರನ್ನು ನೀವು ದೂರವಿರಿಸುವಿರಿ.

ಕನ್ಯಾ ರಾಶಿ: ನಿಮ್ಮ ಯೋಜನೆಗೆ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಸಿಗದು. ಕೂಡಲೇ ವಿರುದ್ಧದ ಆಲೋಚನೆ ಬೇಡ, ಯಥಾಸ್ಥಿತಿ ಇರಲಿ. ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ಪಿತ್ತರೋಗದಿಂದ ಬಳಲುವ ಸಾಧ್ಯತಯಿದೆ. ಮನೆಯಲ್ಲಿಯೇ ಉಂಟಾದ ಜಗಳವನ್ನು ಅಲ್ಲಿಯೇ ಪರಿಹರಿಸಿಕೊಳ್ಳಿ. ವಿದೇಶೀಯ ವ್ಯಾಪಾರವು ಹೆಸರಿಗಷ್ಟೇ ಇರುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ನಿಮ್ಮನ್ನು ಪರೋಕ್ಷವಾಗಿ ಯಾರದರೂ ನಿಂದಿಸಬಹುದು. ಮನಸ್ಸಿನಲ್ಲಿ ಸಾವಧಾನತೆ ಇರದು.

ತುಲಾ ರಾಶಿ: ಪ್ರೀತಿಯನ್ನು ಮನೆಯವರ ಮೇಲೂ ತೋರಿಸಬಹುದು. ಕೇವಲ ಅನ್ಯಲಿಂಗಿಯರ ಮೇಲೆ ಮಾತ್ರವಲ್ಲ. ನಿಮ್ಮಿಂದ ನಿಮ್ಮ ತಂದೆ, ತಾಯಿಯರು ಸಂಕಟಪಡಬಹುದು. ವಿವಾಹಯೋಗವು ನಿಮಗಿದೆ. ಯಾವುದಾದರೂ ಉಪಯೋಗಕ್ಕೆ ಬರುವ ಕೆಲಸಕ್ಕೆ ಕೈ ಹಾಕಿ.‌‌ ರಾಜಕೀಯದಲ್ಲಿ ವಿವಾದಸ್ಪದ ಮಾತುಗಳು ಆಡಿ ಎಲ್ಲರ ಕೆಂಗಣ್ಣಿಗೆ ಸಿಲುಕುವಿರಿ. ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಅಮೂಲ್ಯವಾದ ವಸ್ತುಗಳು ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ: ಸಣ್ಣ ಆದಾಯದಿಂದ ಆರ್ಥಿಕವಾಗಿ ಇಂದು ಸಬಲರಾಗುವಿರಿ.‌ ಪ್ರೀತಿಪಾತ್ರರಾದವರ ಭೇಟಿಯು ಸಂತೋಷವನ್ನು ಹೆಚ್ಚಿಸೀತು. ಹಿರಿಯರ ಮಾತುಗಳು ನಿಮ್ಮ ಮನಸ್ಸಿಗೆ ನಾಟಿ ಇಲ್ಲಿಯವರೆಗಿನ ಕಾರ್ಯಕ್ಕೆ ಪಾಶ್ಚಾತ್ತಾಪವನ್ನು ಅನುಭವಿಸುವಿರಿ. ಮಕ್ಕಳ‌ ಜೊತೆ ಅನ್ಯೋನ್ಯ ಸಂಬಂಧವು ಕಾಣಿಸಿಕೊಂಡೀತು. ನಿಮ್ಮ ಕಷ್ಟವನ್ನು ಕುಟುಂಬಕ್ಕೆ ದಾಟಿಸಲಾರಿರಿ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ.

ಧನು ರಾಶಿ: ನಿಮ್ಮನ್ನು ಕಂಡು ಅಸೂಯೆ ಪಡುವ ಜನರಿರುತ್ತಾರೆ ನಿಮ್ಮ ಸುತ್ತ. ನಿಮ್ಮ ಚಿಂತನೆಯ ಜಗತ್ತು ಎಲ್ಲದಕ್ಕಿಂತ ಭಿನ್ನವಾಗಿರಲಿದೆ. ಅವರನ್ನು ನಗಣ್ಯ ಮಾಡಬೇಡಿ. ನಿಮ್ಮ ಮೇಲೆ ಸಲ್ಲದ ಪಿತೂರಿಗಳನ್ನು ಮಾಡಿಯಾರು.‌ಅವರ ಮೇಲೆ ಒಂದು ಕಣ್ಣಿರಲಿ. ಸ್ನೇಹಿತರ ಜೊತೆ ಮನಸ್ಸು ಬಿಚ್ಚಿ ಮಾತನಾಡಿ. ಶುಭಸಮಾಚಾರ ನಿಮಗೆ ಗೊತ್ತಾಗಲಿದೆ. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು. ಆರೋಗ್ಯವು ಬಡವಾದಂತೆ ತೋರುವುದು.

ಮಕರ ರಾಶಿ: ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುವುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಹಣವೊಂದು ನೆಮ್ಮದಿಗೆ ಕಾರಣವಾಗದು. ಒಳ್ಳೆಯ ಸ್ವಭಾವವೇ ಮುಖ್ಯವಾಗಿ ಇರುವುದು. ಭವಿಷ್ಯದ ಯೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮ ವ್ಯವಹಾರವನ್ನು ಯಾರೋ ನಿಯಂತ್ರಿಸಿದಂತೆ ಅನ್ನಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ನಿಮ್ಮ ಗುಟ್ಟನ್ನು ಬಿಟ್ಟಕೊಡುವುದು ಬೇಡ. ಮಕ್ಕಳಲ್ಲಿ ಪ್ರೀತಿ ಅಧಿಕವಾಗುವುದು.

ಕುಂಭ ರಾಶಿ: ಯಾರೊಂದಿಗೂ ಸಂಪೂರ್ಣ ನಿಜವನ್ನು ಹೇಳಿಬಿಡಬೇಡಿ. ಅಪರೂಪದ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆ ಇದೆ. ನೀವೇ ಆರಂಭಿಸಿದ ಕಾರ್ಯದ ಯಶಸ್ಸನ್ನು ಪರರಿಗೆ ಕೊಡಬೇಕಾಗುವುದು. ಜಯವೃತ್ತಿಗೆ ಸಂಬಂಧಿಸಿದಂತೆ ಶುಭದಿನವಾಗಿದೆ. ಸಾಮಾಜಿಕವಾದ ಸ್ಥಾನಮಾನ ಹೆಚತಚಾಗುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಕೆಲವು ಗೊಂದಲವು ಪರಿಹಾರವಾಗದೇ ಹಾಗೆಯೇ ಇರುವುದು.

ಮೀನ ರಾಶಿ: ಆಲೋಚಿಸದೇ ಯಾವುದೇ ಸಾಹಸದ ಕಾರ್ಯವನ್ನು, ಕೆಲಸವನ್ನು ಮಾಡಬೇಡಿ. ಬಯಸದೇ ಬಂದಿದ್ದನ್ನು ಉಳಿಸಿಕೊಳ್ಳುವುದು ಕಷ್ಟ. ಅನಾರೋಗ್ಯವು ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಭೂಮಿಯ ವ್ಯವಹಾರದಲ್ಲಿ ದ್ವೇಷ ಸಾಧಿಸಿ ಪ್ರಯೋಜನವಾಗದು. ನಿಮ್ಮನ್ನು ನೌಕರರು ಹೋಗಳುವರು. ಎದರುರಾಗು ಅಡ್ಡಿ, ಆತಂಕಗಳನ್ನು ನೀವು ಅನಾಯಾಸವಾಗಿ ದೂರ ಸರಿಸುವಿರಿ. ಸಹನೆಯ ಪರೀಕ್ಷೆಯಲ್ಲಿ ನೀವು ಗೆಲ್ಲುವಿರಿ.

ಲೋಹಿತ ಹೆಬ್ಬಾರ್ – 8762924271 (what’s app only)

Source link

ಮದುಮಗನ ಬದಲು ಲವರ್ ಕೊರಳಿಗೆ ಮಾಲೆ ಹಾಕಿದ ವಧು! ವಿಡಿಯೋ ವೈರಲ್ – Kannada News | Shocking Video Madhya Pradesh Bride Garlands her Lover Instead Of Groom during Wedding

ಛಿಂದ್ವಾರಾ, ಮೇ 2: ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಡೆದ ವಿವಾಹವೊಂದು ಆನ್‌ಲೈನ್‌ನಲ್ಲಿ ಭಾರೀ ವೈರಲ್ (Viral Video) ಆಗಿದೆ. ಮದುವೆ ಸಮಾರಂಭದಲ್ಲಿ ವಧು ತನ್ನ ವರನ ಕೊರಳಿಗೆ ಹಾರ ಹಾಕುವ ಬದಲು ಮಂಟಪದಿಂದ ಕೆಳಗೆ ಹಾರಿ ಹೋಗಿ, ಕುರ್ಚಿಯಲ್ಲಿ ಕುಳಿತಿದ್ದ ತನ್ನ ಪ್ರಿಯಕರನ ಕೊರಳಿಗೆ ಮಾಲೆ ಹಾಕಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಲ್ಲಿದ್ದವರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಆಕೆ ಓಡಿಹೋಗಿ ಲವರ್ ಕೊರಳಿಗೆ ಮಾಲೆ ಹಾಕಿದ್ದಾಳೆ. ಇದರಿಂದ ವರ ಕಕ್ಕಾಬಿಕ್ಕಿಯಾಗಿ ನೋಡುತ್ತಾ ನಿಂತಿರುವ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

CSK vs DC: ಸಿಎಸ್​​ಕೆ ವಿರುದ್ಧ ಸೋತ ಮುಂಬೈ ಐಪಿಎಲ್​ನಿಂದ ಭಾಗಶಃ ಔಟ್ – Kannada News | IPL 2026: CSK Dominates MI in Match 44, Mumbai’s Playoff Hopes Dim

ಐಪಿಎಲ್ 2026 ರ 44ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಆವೃತ್ತಿಯಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಮುಂಬೈ ವಿರುದ್ಧ ಸಿಎಸ್​ಕೆ ಭರ್ಜರಿ ಜಯ ಸಾಧಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿಯಲ್ಲಿ ಮುಂಬೈ ಸೇಡು ತೀರಿಸಿಕೊಳ್ಳಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಯಿತು. ಸಿಎಸ್​ಕೆ ವಿರುದ್ಧದ ಈ ಪಂದ್ಯದಲ್ಲಿ ಹೀನಾಯವಾಗಿ ಸೋತ ಮುಂಬೈ ಈ ಆವೃತ್ತಿಯಲ್ಲಿ 7ನೇ ಸೋಲಿಗೆ ಕೊರಳೊಡ್ಡಬೇಕಾಯಿತು. ಇತ್ತ ಈ ಆವೃತ್ತಿಯಲ್ಲಿ 4ನೇ ಗೆಲುವು ದಾಖಲಿಸಿದ ಸಿಎಸ್​ಕೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು. ಈ ಸೋಲಿನೊಂದಿಗೆ ಮುಂಬೈ ತಂಡ ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸುವುದು ಭಾಗಶಃ ಖಚಿತವಾದ್ದಂತ್ತಾಗಿದೆ.

Source link

ನಿಂತು ಹೋಯ್ತೆ ‘ದೇವರ 2’, ಜೂ ಎನ್​​ಟಿಆರ್​​ಗೆ ಕೈ ಕೊಟ್ಟರೇ ಕೊರಟಾಲ ಶಿವ – Kannada News | Koratala Shiva announce movie with Nandamuri Balakrishna what about Devara 2

ಜೂ ಎನ್​ಟಿಆರ್ (Jr NTR) ಪ್ರಸ್ತುತ ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಸಿನಿಮಾನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾದ ಚಿತ್ರೀಕರಣ ಶುರುವಾಗಿ ಈಗಾಗಲೇ ಒಂದು ವರ್ಷ ಆಗಿದ್ದು, ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿಯುವ ಹಂತದಲ್ಲಿದೆ ಎನ್ನಲಾಗುತ್ತಿದೆ. ಜೂ ಎನ್​​ಟಿಆರ್ ಅವರ ಈ ಹಿಂದಿನ ಸಿನಿಮಾ ‘ದೇವರ’. ಆ ಸಿನಿಮಾದ ಬಗ್ಗೆ ಆರಂಭದಲ್ಲಿ ನೆಗೆಟಿವ್ ವಿಮರ್ಶೆಗಳು ಬಂದರೂ ಸಹ ಜೂ ಎನ್​​ಟಿಆರ್ ಅಭಿಮಾನಿಗಳು ಸಿನಿಮಾವನ್ನು ಹಿಟ್ ಮಾಡಿಸುವಲ್ಲಿ ಸಫಲರಾಗಿದ್ದರು. ಸಿನಿಮಾದ ಎರಡನೇ ಭಾಗಕ್ಕಾಗಿ ಜೂ ಎನ್​​ಟಿಆರ್ ಅಭಿಮಾನಿಗಳು ಎದುರು ನೋಡುತ್ತಿದ್ದರು. ಆದರೆ ಆ ಸಿನಿಮಾ ನಿರ್ದೇಶಿಸಿದ್ದ ಕೊರಟಾಲ ಶಿವ ಇದೀಗ ಹೊಸ ಪ್ರಾಜೆಕ್ಟ್​​ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ದೇವರ’ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದ ಕಾರಣ, ‘ದೇವರ 2’ ಬರುವುದಿಲ್ಲವೇನೋ ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ಈ ಹಿಂದೆ ಜೂ ಎನ್​ಟಿಆರ್ ಮತ್ತು ಅವರ ಸಹೋದರ ಹಾಗೂ ‘ದೇವರ’ ಸಿನಿಮಾದ ಸಹ ನಿರ್ಮಾಪಕರೂ ಆಗಿರುವ ಕಲ್ಯಾಣ್ ರಾಮ್, ‘ದೇವರ 2’ ಖಂಡಿತ ಬರುತ್ತದೆ ಎಂದಿದ್ದರು. ಆದರೆ ಈಗ ಕೊರಟಾಲ ಶಿವ ಬೇರೆ ಸಿನಿಮಾನಲ್ಲಿ ತೊಡಗಿಕೊಂಡಿರುವುದು ಗಮನಿಸಿದರೆ ‘ದೇವರ 2’ ಬರುವುದು ಅನುಮಾನ ಎಂಬಂತಾಗಿದೆ.

ಕೊರಟಾಲ ಶಿವ, ಜೂ ಎನ್​​ಟಿಆರ್ ಅವರ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಜೊತೆಗೆ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾಕ್ಕೆ ಯಾವುದೇ ಹೆಸರಿಟ್ಟಿಲ್ಲವಾದರೂ, ಬಾಲಕೃಷ್ಣ ಮತ್ತು ಕೊರಟಾಲ ಶಿವ ಒಟ್ಟಿಗೆ ಇರುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಪೋಸ್ಟರ್​​ನಲ್ಲಿ ‘ಪವರ್ ಮೀಟ್ಸ್ ಪರ್ಪಸ್’ ಮತ್ತು ‘ಮಾಸ್ ಬಿಕೇಮ್ ಮೂಮೆಂಟ್’ ಎಂಬ ಪವರ್​​ಫುಲ್ ಸಾಲುಗಳನ್ನು ಬರೆಯಲಾಗಿದೆ. ಇದು ನಂದಮೂರಿ ಬಾಲಕೃಷ್ಣ ಅವರ 112 ನೇ ಸಿನಿಮಾ ಆಗಿರಲಿದೆ.

ಇದನ್ನೂ ಓದಿ:ಜೂ ಎನ್​​ಟಿಆರ್ ಸಿನಿಮಾಕ್ಕೆ ಬಾಲಿವುಡ್ ನಟನಿಗೆ ಗಾಳ ಹಾಕಿದ ಪ್ರಶಾಂತ್ ನೀಲ್

ಬಾಲಕೃಷ್ಣ ಪ್ರಸ್ತುತ ಗೋಪಿಚಂದ್ ಮಲಿನೇನಿ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಚಿತ್ರೀಕರಣ ಪೂರ್ಣವಾಗುವ ಮುಂಚೆಯೇ ಹೊಸ ಸಿನಿಮಾವನ್ನು ಬಾಲಯ್ಯ ಘೋಷಣೆ ಮಾಡಿದ್ದಾರೆ. ಕೊರಟಾಲ ಶಿವ ಅವರು, ಬಾಲಯ್ಯನ ಮಾಸ್ ಅಪೀಲಿಗೆ ಹೊಂದಿಕೆ ಆಗುವ ಕತೆಯನ್ನು ರೆಡಿ ಮಾಡಿಕೊಂಡಿದ್ದು, ಈ ಸಿನಿಮಾವು ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಕತೆಯನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ಬಾಲಯ್ಯ ಬಹು ಬೇಗನೆ ಸಿನಿಮಾಗಳನ್ನು ಮುಗಿಸುತ್ತಾರೆ. ಜೂ ಎನ್​ಟಿಆರ್ ಮತ್ತು ಪ್ರಶಾಂತ್ ನೀಲ್ ಸಿನಿಮಾ ಬಿಡುಗಡೆ ಆಗಲು ಇನ್ನೂ ಆರೇಳು ತಿಂಗಳು ಹಿಡಿಲಿದೆ ಎನ್ನಲಾಗುತ್ತಿದೆ. ಒಂದೊಮ್ಮೆ ಅಷ್ಟರಲ್ಲಿ ಬಾಲಯ್ಯ ಹಾಗೂ ಕೊರಟಾಲ ಶಿವ ಸಿನಿಮಾ ಸಹ ಮುಗಿದರೆ ‘ದೇವರ 2’ ಸಿನಿಮಾವನ್ನು ಜೂ ಎನ್​ಟಿಆರ್ ಶುರು ಮಾಡುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Assembly Elections 2026 Result Live Streaming: ತಮಿಳುನಾಡು, ಬಂಗಾಳ ಸೇರಿ 5 ರಾಜ್ಯಗಳ ಚುನಾವಣೆ ಮತ ಎಣಿಕೆ ಯಾವಾಗ? ಫಲಿತಾಂಶ ನೋಡುವುದು ಹೇಗೆ? – Kannada News | When Where and How to Watch 5 State Assembly Election 2026 Counting and Results Live Streaming Online in Kannada

ನವದೆಹಲಿ, ಮೇ 2: ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು (Assembly Elections Results 2026) ಚುನಾವಣಾ ಆಯೋಗವು ಮೇ 4ರಂದು ಪ್ರಕಟಿಸಲಿದೆ. ಮೊದಲು ಅಂಚೆ ಮತಪತ್ರಗಳನ್ನು ಎಣಿಸಿ ನಂತರ ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಎಣಿಸುವ ಪ್ರಕ್ರಿಯೆ ನಡೆಯಲಿದೆ. ಸೋಮವಾರ ಸಂಜೆಯೊಳಗೆ ಫಲಿತಾಂಶ ಬರುವ ನಿರೀಕ್ಷೆಯಿದೆ.

ಈ ಬಾರಿಯ ಚುನಾವಣೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಹಳ ನಿರ್ಣಾಯಕವಾಗಿದೆ. ಏಕೆಂದರೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಈ ಬಾರಿ ಬಿಜೆಪಿ ನೇರ ಪೈಪೋಟಿಗೆ ಇಳಿದಿದೆ. ಎಕ್ಸಿಟ್ ಪೋಲ್ ವರದಿ ಪ್ರಕಾರ ಈ ಬಾರಿ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹೀಗಾಗಿ, ಮಮತಾ ಬ್ಯಾನರ್ಜಿ ತನ್ನ ಖುರ್ಚಿ ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: Tamil Nadu Election Exit Poll Results 2026: ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ 

ತಮಿಳುನಾಡಿನಲ್ಲಿ, ಆಡಳಿತಾರೂಢ ಡಿಎಂಕೆ ತನ್ನ ಹಿಡಿತವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಆದರೆ ಬಿಜೆಪಿ ಬೆಂಬಲಿತ ಎಐಎಡಿಎಂಕೆ ಕೂಡ ಸಾಕಷ್ಟು ಪೈಪೋಟಿ ನೀಡಿದೆ. ಸದ್ಯದ ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಡಿಎಂಕೆ ಮತ್ತೆ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ. ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ.

ಅಸ್ಸಾಂನಲ್ಲಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ತನ್ನ ಭದ್ರಕೋಟೆಯನ್ನು ರಕ್ಷಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: 5 State Assembly Election Exit Poll Results 2026: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಜಯ, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು; ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ

ಚುನಾವಣಾ ಫಲಿತಾಂಶಗಳ ದಿನಾಂಕ ಮತ್ತು ಸಮಯ:

ದಿನಾಂಕ: ಮೇ 4ರ ಸೋಮವಾರ

ಮತ ಎಣಿಕೆ: ಬೆಳಿಗ್ಗೆ 8 ಗಂಟೆಗೆ ಆರಂಭ

ಫಲಿತಾಂಶವನ್ನು ಎಲ್ಲಿ ನೋಡಬಹುದು?:

ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ (eci.gov.in) ವೀಕ್ಷಿಸಬಹುದು. ಫಲಿತಾಂಶದ ವಿವರವಾದ ವರದಿ ಮತ್ತು ಅಪ್ಡೇಟ್​​ಗಾಗಿ ಟಿವಿ9 ವಾಹಿನಿ ಮತ್ತು ವೆಬ್​ಸೈಟ್​ ವೀಕ್ಷಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ: 20 ಲಕ್ಷ ಮೌಲ್ಯದ ಚಿನ್ನ ಹಿಂದಿರುಗಿಸಿದ ಅಂಗಡಿ ಮಾಲೀಕ; ರುದ್ರೇಶ್ ಪ್ರಾಮಾಣಿಕತೆಗೆ ಪೊಲೀಸರ ಮೆಚ್ಚುಗೆ – Kannada News | Davangere Shop Owner Returns 20 Lakh Gold, Praised for Honesty

ದಾವಣಗೆರೆ, ಮೇ 02: ಗ್ರಾಹಕರೊಬ್ಬರು ಅಂಗಡಿಯಲ್ಲಿ ಬಿಟ್ಟುಹೋಗಿದ್ದ 20 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಮಾಲೀಕ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವಂತಹ ಘಟನೆ ದಾವಣಗೆರೆ ನಗರ ಗಡಿಯಾರ ಕಂಬದ ವಿಜಯಲಕ್ಷ್ಮಿ ರಸ್ತೆಯಲ್ಲಿರುವ ಎ ಟು ಝಡ್ ಡ್ರೈ ಫುಡ್ಸ್ ಅಂಗಡಿಯಲ್ಲಿ ನಿನ್ನೆ ನಡೆದಿದೆ. ರುದೇಶ್​ ನಾಯ್ಕ್ ಅವರ ಅಂಗಡಿಗೆ ಬಂದಿದ್ದ ಮಹಿಳಾ ಗ್ರಾಹಕಿಯೊಬ್ಬರು ಚಿನ್ನಾಭರಣದ ಬ್ಯಾಗ್ ಮರೆತು ಹೋಗಿದ್ದರು. ಇಂದು ಬಂದು ತೆಗೆದುಕೊಂಡು ಹೋಗಬಹುದು ಎಂದು ಬ್ಯಾಗ್ ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಆದರೆ ಯಾರು ಬಾರದ ಹಿನ್ನಲೆ ಬಸವನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಇಷ್ಟರಲ್ಲಿ ಚಿನ್ನಾಭರಣ ಬಿಟ್ಟುಹೋಗಿದ್ದ ಮಾಲೀಕರು ಸಹ ಪತ್ತೆ ಆಗಿದ್ದು, ಪೊಲೀಸರ ಸಮ್ಮುಖದಲ್ಲೇ ಚಿನ್ನಾಭರಣ ಹಿಂದಿರುಗಿಸಲಾಗಿದೆ. ಸದ್ಯ ರುದ್ರೇಶ್ ನಾಯ್ಕ್ ಪ್ರಾಮಾಣಿಕತೆ ಬಗ್ಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version