ಬಿಕ್ಕಟ್ಟಿನ ನಡುವೆಯೂ ಹಾರ್ಮುಜ್ ಜಲಸಂಧಿ ದಾಟಿ ಬಂದ 45,000 ಟನ್ ಎಲ್​ಪಿಜಿ ಹೊತ್ತ ಟ್ಯಾಂಕರ್ – Kannada News | Indian 45,000 tonne LPG tanker Sarv Shakti crosses Strait of Hormuz

ನವದೆಹಲಿ, ಮೇ 2: ಪಶ್ಚಿಮ ಏಷ್ಯಾ ಇನ್ನೂ ಯುದ್ಧದ ಬಿಸಿಯಿಂದ ಸಂಪೂರ್ಣವಾಗಿ ತಣ್ಣಗಾಗಿಲ್ಲ. ಅಮೆರಿಕ-ಇರಾನ್ ಸಂಘರ್ಷದಿಂದ ಸಮುದ್ರಗಳು ಸ್ತಬ್ಧಗೊಂಡಿರುವಂತೆಯೇ ಭಾರತ ತನ್ನ ರಾಜತಾಂತ್ರಿಕ ಪರಾಕ್ರಮವನ್ನು ಪ್ರದರ್ಶಿಸಿದೆ. ಹಾರ್ಮುಜ್ ಜಲಸಂಧಿಯ (Strait of Hormuz) ಬಿಕ್ಕಟ್ಟಿನ ನಡುವೆ 45,000 ಟನ್ ಎಲ್‌ಪಿಜಿಯನ್ನು ಹೊತ್ತ ಬೃಹತ್ ಸೂಪರ್‌ಟ್ಯಾಂಕರ್ “ಸರ್ವ ಶಕ್ತಿ” ಹಾರ್ಮುಜ್ ಜಲಸಂಧಿಯಲ್ಲಿನ ದಿಗ್ಬಂಧನವನ್ನು ದಾಟಿ ಹೋಗಲು ಪ್ರಯತ್ನಿಸುತ್ತಿದೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು LPGಯ ಎರಡನೇ ಅತಿದೊಡ್ಡ ಬಳಕೆದಾರ ರಾಷ್ಟ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಿಂದ ಪೂರೈಕೆ ಸರಪಳಿಯಲ್ಲಿನ ಅಡಚಣೆಯಿಂದಾಗಿ ದೇಶವು ಅಡುಗೆ ಅನಿಲದ ತೀವ್ರ ಕೊರತೆಯನ್ನು ಅನುಭವಿಸಿದೆ. ಈ ಸಮಯದಲ್ಲಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಈ ಬೃಹತ್ ಸರಕುಗಳನ್ನು ಖರೀದಿಸಿದೆ. ‘ಸರ್ವ ಶಕ್ತಿ’ ಸುರಕ್ಷಿತವಾಗಿ ಭಾರತದ ತೀರವನ್ನು ತಲುಪಿದರೆ ಮಾರುಕಟ್ಟೆಯಲ್ಲಿನ ಎಲ್​ಪಿಜಿ ಕೊರತೆಯನ್ನು ನಿವಾರಿಸಲು ಇದು ಸಹಾಯಕವಾಗಲಿದೆ.

ಇದನ್ನೂ ಓದಿ: ಮೊಜ್ತಬಾ ಖಮೇನಿ ವಿರುದ್ಧ ಶತ್ರುಗಳು ವದಂತಿ ಹರಡುತ್ತಿದ್ದಾರೆ; ಇರಾನ್​ನಿಂದ ಸುಪ್ರೀಂ ನಾಯಕನ ಆರೋಗ್ಯದ ಬಗ್ಗೆ ಸ್ಪಷ್ಟನೆ

18 ಭಾರತೀಯ ಪ್ರಜೆಗಳು ಸೇರಿದಂತೆ 20 ಸಿಬ್ಬಂದಿಗಳನ್ನು ಹೊಂದಿರುವ ಈ ಹಡಗು ಈಗ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದು, ಮೇ 13ರಂದು ಆಗಮಿಸುವ ನಿರೀಕ್ಷೆಯಿದೆ. ಈ ಹಿಂದೆ ಸೂಪರ್‌ಟ್ಯಾಂಕರ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಪ್ರಯತ್ನಿಸುತ್ತಿದೆ ಎಂದು ಹಡಗು ಟ್ರ್ಯಾಕಿಂಗ್ ಡೇಟಾವನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ಮಾಡಿತ್ತು.

ಇದನ್ನೂ ಓದಿ: ಅಮೆರಿಕ ನಂಬಿಕೆಗೆ ಯೋಗ್ಯವಲ್ಲ, ಮತ್ತೆ ಯುದ್ಧ ಆರಂಭವಾಗಬಹುದು; ಇರಾನ್ ಸ್ಫೋಟಕ ಹೇಳಿಕೆ

ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದ ನಂತರ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಣೆ ಬಹುತೇಕ ಸ್ಥಗಿತಗೊಂಡಿದೆ. ಇರಾನಿನ ಸಾಗಣೆಯ ಮೇಲೆ ಅಮೆರಿಕ ಕಠಿಣ ದಿಗ್ಬಂಧನ ವಿಧಿಸಿದೆ. ಕಳೆದ ತಿಂಗಳು ಇರಾನ್​ನ ಜಲಸಂಧಿಯನ್ನು ದಾಟಲು ಪ್ರಯತ್ನಿಸುತ್ತಿರುವ ಹಡಗುಗಳ ಮೇಲೆ ಗುಂಡು ಹಾರಿಸಲಾಗಿತ್ತು. ಇದರಿಂದಾಗಿ ಹಲವಾರು ಹಡಗುಗಳು ಹಿಂತಿರುಗಬೇಕಾಯಿತು. ಅದರಲ್ಲಿ ಭಾರತದ ಹಡಗೂ ಸೇರಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಖಲ್ ಜಾಕ್ಸನ್ ಅಪಹರಣಕ್ಕೆ ನಡೆದಿತ್ತು ಸಂಚು: ಯತ್ನಿಸಿದವರು ಯಾರು ಗೊತ್ತೆ? – Kannada News | Pablo Escobar wanted to Kidnap Michael Jackson

ಮೈಖಲ್ ಜಾಕ್ಸನ್ (Michael Jackson), ವಿಶ್ವದ ಅತ್ಯುತ್ತಮ ಎಂಟರ್ಟೈನರ್​. ಇಂದಿನ ಹಾಲಿವುಡ್​ ಪಾಪ್ ಸ್ಟಾರ್​​ಗಳಾದ ಟೈಲರ್ ಸ್ವಿಫ್ಟ್, ಕಾನ್ಯೆ, ಜಸ್ಟಿನ್ ಬೀಬರ್ ಇನ್ನೂ ಹಲವರ ಒಟ್ಟು ಅಭಿಮಾನಿಗಳು, ಜನಪ್ರಿಯತೆಯನ್ನು ಒಟ್ಟು ಮಾಡಿದರೂ ಸಹ ಮೈಖಲ್ ಜಾಕ್ಸನ್ ಅವರ ಜನಪ್ರಿಯತೆ ಹೆಚ್ಚು ತೂಗುತ್ತದೆ. ಮೈಖಲ್ ಯಾವುದಾದರೂ ನಗರಕ್ಕೆ ಹೋದರೆಂದರೆ ಆ ನಗರವೇ ಬಂದ್ ಆಗಿಬಿಡುತ್ತಿತ್ತು. ಮೈಖಲ್ ಅನ್ನು ನೊಡಲು ಜನ ಊಟ, ನಿದ್ದೆ ಬಿಟ್ಟು ಕಾಯುತ್ತಿದ್ದರು. ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ ಆಗಿದ್ದರು ಮೈಖಲ್. ಇಂಥಹಾ ಮೈಖಲ್ ಜಾಕ್ಸನ್ ಅನ್ನು ಅಪಹರಣ ಮಾಡಲು ಪ್ರಯತ್ನವೊಂದು ನಡೆದಿತ್ತು.

ಪಾಬ್ಲೊ ಎಸ್ಕೊಬಾರ್, ವಿಶ್ವದ ಕುಖ್ಯಾತ ಪಾತಕಿ. ಕೊಲಂಬಿಯಾದ ಈ ಪಾತಕಿ, ವಿಶ್ವದಾದ್ಯಂತ ಮಾದಕ ವಸ್ತು ಜಾಲವನ್ನು ಹೊಂದಿದ್ದ. ಮಾದಕ ವಸ್ತು ಮಾರಾಟ ಮಾಡಿ ಲಕ್ಷಾಂತರ ಕೋಟಿ ಹಣ ಗಳಿಸಿದ್ದ. ಅದು ಮಾತ್ರವೆಂಬಂತೆ ಹಲವಾರು ಕೊಲೆ, ಸುಲಿಗೆಗಳನ್ನು ಸಹ ಮಾಡಿದ್ದ. ಕೊಲಂಬಿಯಾದ ಸರ್ಕಾರವನ್ನೇ ಖರೀದಿ ಮಾಡಲು ಸಹ ಮುಂದಾಗಿದ್ದ. ಇಂಥಹಾ ನಟೋರಿಯಸ್ ವ್ಯಕ್ತಿಗೆ ಮೈಖಲ್ ಜಾಕ್ಸನ್ ಅನ್ನು ಅಪಹರಿಸುವ ಐಡಿಯಾ ಬಂದಿತ್ತು.

ಪಾಬ್ಲೊ ಎಸ್ಕೋಬಾರ್​​ಗೆ ಐಶಾರಾಮಿ ಜೀವನದ ಗೀಳಿತ್ತು. ಕೊಲಂಬಿಯಾನಲ್ಲಿ ನೂರಾರು ಎಕರೆ ಭೂಪ್ರದೇಶದಲ್ಲಿ ಅತ್ಯಂತ ಐಶಾರಾಮಿ ಮನೆ ಹೊಂದಿದ್ದ. ತನ್ನದೇ ಖಾಸಗಿ ಮೃಗಾಲಯ ಸಹ ಹೊಂದಿದ್ದ. ಹಾಲಿವುಡ್​​ನಿಂದ ಸ್ಟಾರ್​​ಗಳನ್ನು ಕರೆಸಿ ಪಾರ್ಟಿಗಳನ್ನು ಮಾಡುತ್ತಿದ್ದ. ಪಾಬ್ಲೊ ಎಸ್ಕೋಬಾರ್ ಮಗ, ಮೈಖಲ್ ಜಾಕ್ಸನ್​​ನ ದೊಡ್ಡ ಅಭಿಮಾನಿ ಆಗಿದ್ದ. ಒಮ್ಮೆ ತಂದೆ ಪಾಬ್ಲೊ ಬಳಿ ನನ್ನ ಹುಟ್ಟುಹಬ್ಬಕ್ಕೆ ಮೈಖಲ್ ಜಾಕ್ಸನ್ ಅನ್ನು ಕರೆಸುವಂತೆ ಕೇಳಿದ್ದ.

ಇದನ್ನೂ ಓದಿ:ಹೊಸ ಸಿನಿಮಾ ಘೋಷಿಸಿದ ವಿಜಯ್ ದೇವರಕೊಂಡ; ಇದರಲ್ಲಿದ್ದಾರೆ ಹಾಲಿವುಡ್ ತಂತ್ರಜ್ಞರು

ಅದಕ್ಕೆ ಪಾಬ್ಲೊ, ಇದು ಒಳ್ಳೆಯ ಐಡಿಯಾ, ಕಾನ್ಸರ್ಟ್​ ಮಾಡಲೆಂದು ಮೈಖಲ್ ಅನ್ನು ಕರೆಯುತ್ತೇನೆ. ಆತ ಕಾನ್ಸರ್ಟ್ ಮಾಡಲು ಬಂದಾಗ ಆತನನ್ನು ಅಪಹರಣ ಮಾಡಿ, ಅಮೆರಿಕದಿಂದ ಒಂದು ಬಿಲಿಯನ್ ಡಾಲರ್ (ಈಗಿನ ಒಂದು ಲಕ್ಷ ಕೋಟಿಗೆ ಸಮ) ಹಣ ಕೇಳುತ್ತೇನೆ’ ಎಂದಿದ್ದನಂತೆ. ಈ ವಿಷಯವನ್ನು ಸ್ವತಃ ಪಾಬ್ಲೊ ಎಸ್ಕೋಬಾರ್ ಪುತ್ರನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ತಂದೆಯ ಮಾತು ನನಗೆ ಇಷ್ಟ ಆಗಲಿಲ್ಲ. ನನಗೆ ಮೈಖಲ್ ಜಾಕ್ಸನ್ ಎಂದರೆ ಅಚ್ಚು ಮೆಚ್ಚು, ನಾನು ಆತನನ್ನು ಆರಾಧಿಸುತ್ತಿದ್ದೆ, ಆತನಿಗೆ ನೋವು ಮಾಡುವ ಮಾತುಗಳನ್ನು ನನ್ನ ತಂದೆ ಆಡಿದಾಗ ನನಗೆ ಆಘಾತವಾಗಿತ್ತು. ಮತ್ತೆಂದೂ ನಾನು ತಂದೆಯ ಬಳಿ ಮೈಖಲ್ ಅನ್ನು ಕರೆಸುವ ಬಗ್ಗೆ ಮಾತನಾಡಲಿಲ್ಲ ಎಂದಿದ್ದಾರೆ.

ಇದೀಗ ಮೈಖಲ್ ಜಾಕ್ಸನ್ ಜೀವನ ಕುರಿತ ‘ಮೈಖಲ್’ ಸಿನಿಮಾ ಬಿಡುಗಡೆ ಆಗಿದೆ. ಮೈಖಲ್ ಜಾಕ್ಸನ್ ಅವರ ಸಹೋದರ ಪುತ್ರ ಜಫಾರ್ ಜಾಕ್ಸನ್ ಅವರೇ ಮೈಖಲ್ ಜಾಕ್ಸನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಒಂದು ವಾರವಾಗಿತ್ತು. ಈಗಲೇ ಸುಮಾರು 2600 ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದೆ. ಭಾರತದಲ್ಲಿ ಒಂದು ವಾರಕ್ಕೆ 32 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

CSK vs DC: ಸತತ 8ನೇ ಪಂದ್ಯದಲ್ಲೂ ಫೇಲ್; ಸೂರ್ಯನಿಗೆ ಗ್ರಹಣ – Kannada News | IPL 2026: Suryakumar Yadav’s Form Woes Continue; Debutant Ghosh Shines for CSK vs MI

ಐಪಿಎಲ್ 2026 (IPL 2026) ರ 44ನೇ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (CSK vs MI) ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡಕ್ಕೆ ಮತ್ತೆ ಬ್ಯಾಟಿಂಗ್‌ ವಿಭಾಗ ಕೈಕೊಟ್ಟಿತು. ನಮನ್ ಧೀರ್ ಅವರನ್ನು ಹೊರತುಪಡಿಸಿ ತಂಡದ ಯಾವೊಬ್ಬ ಆಟಗಾರನಿಗೂ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅದರಲ್ಲೂ ಈ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಅನುಭವಿ ಸೂರ್ಯಕುಮಾರ್ ಯಾದವ್ (Suryakumar Yadav) ಸತತ 8ನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಸಿಎಸ್​ಕೆ ಪರ ಮೊದಲ ಪಂದ್ಯವನ್ನಾಡಿದ ರಾಮಕೃಷ್ಣ ಘೋಷ್ ಅವರ ಬೌಲಿಂಗ್​ನಲ್ಲಿ ಸೂರ್ಯ ಕ್ಯಾಚಿತ್ತು ನಿರ್ಗಮಿಸಿದರು.

ಚೊಚ್ಚಲ ಪಂದ್ಯದಲ್ಲೇ ವಿಕೆಟ್

ಮುಂಬೈ ಇನ್ನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದ ರಾಮಕೃಷ್ಣ ತಮ್ಮ ಮೊದಲ ಓವರ್‌ನಲ್ಲಿ ಬೌಂಡರಿ ಸೇರಿದಂತೆ ಕೇವಲ ಏಳು ರನ್‌ಗಳನ್ನು ಬಿಟ್ಟುಕೊಟ್ಟರು. ಮೊದಲ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ರಾಮಕೃಷ್ಣ ಘೋಷ್ ಮುಂದಿನ ಓವರ್​ನಲ್ಲಿ ತಮ್ಮ ಚೊಚ್ಚಲ ಐಪಿಎಲ್ ವಿಕೆಟ್ ಪಡೆಯುವಲ್ಲೂ ಯಶಸ್ವಿಯಾದರು.

ರಾಮಕೃಷ್ಣ ಘೋಷ್ ತಮ್ಮ ಎರಡನೇ ಓವರ್‌ನ (ಇನಿಂಗ್ಸ್‌ನ 11ನೇ) ಮೊದಲ ಎರಡು ಎಸೆತಗಳಲ್ಲಿ ಬೌಂಡರಿಗಳನ್ನು ಬಿಟ್ಟುಕೊಟ್ಟರು, ಆದರೆ ನಾಲ್ಕನೇ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ಸೂರ್ಯ ಬಿಗ್ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ನಿಂತಿದ್ದ ಡೆವಾಲ್ಡ್ ಬ್ರೆವಿಸ್ ಸುಲಭ ಕ್ಯಾಚ್ ಹಿಡಿದು ಸೂರ್ಯ ಇನ್ನಿಂಗ್ಸ್​ಗೆ ಅಂತ್ಯ ಹಾಡಿದರು. ಸೂರ್ಯ 12 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು.

ಸೂರ್ಯನಿಗೆ ಗ್ರಹಣ

ಸೂರ್ಯಕುಮಾರ್ ಈ ರೀತಿಯ ಬೇಗನೇ ವಿಕೆಟ್ ಒಪ್ಪಿಸುತ್ತಿರುವುದು ಇದು 8ನೇ ಪಂದ್ಯ. ಈ ಬಾರಿಯ ಐಪಿಎಲ್‌ನಲ್ಲಿ ಸೂರ್ಯನಿಗೆ ಒಂದೇ ಒಂದು ಅರ್ಧಶತಕ ಬಾರಿಸಲು ಸಾಧ್ಯವಾಗಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮುಂಬೈ ತಂಡಕ್ಕೆ ಆಸರೆಯಾಗಬೇಕಿದ್ದ ಸೂರ್ಯ, ತಮ್ಮ ಕಳಪೆ ಪ್ರದರ್ಶನದಿಂದಾಗಿ ತಂಡಕ್ಕೆ ಹೊರೆಯಾಗಿದ್ದಾರೆ. ಸೂರ್ಯ ಅವರ ಸಪ್ಪೆ ಆಡ ಮುಂಬೈ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಸೂರ್ಯ ಅವರ ಫಾರ್ಮ್​ ಇದೇ ರೀತಿ ಮುಂದುವರೆದರೆ ಅವರನ್ನು ತಂಡದಿಂದ ಹೊರಗಿಡುವ ಸಾಧ್ಯತೆಗಳು ಹೆಚ್ಚಿವೆ.

CSK vs MI IPL 2026 Live Score: ಚೆನ್ನೈ ಮೊದಲ ವಿಕೆಟ್ ಪತನ

ರಾಮಕೃಷ್ಣ ಘೋಷ್ ಯಾರು?

ಸೂರ್ಯ ಅವರ ವಿಕೆಟ್ ಪಡೆದ 28 ವರ್ಷದ ರಾಮಕೃಷ್ಣ ಘೋಷ್​ಗೆ ಇದು ಎರಡನೇ ಐಪಿಎಲ್‌ ಸೀಸನ್ ಆಗಿದೆ. ಕಳೆದ ಸೀಸನ್‌ನಲ್ಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 50 ಲಕ್ಷ ರೂ.ಗೆ ಖರೀದಿಸಿತ್ತು ಆದರೆ ಇಡೀ ಸೀಸನ್‌ನಲ್ಲಿ ಆಡುವ ಅವಕಾಶ ಸಿಗಲಿಲ್ಲ. ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ಪರ ಆಡುವ ರಾಮಕೃಷ್ಣ 2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಯ ಪ್ರದರ್ಶನ ನೀಡಿದ್ದರು. ಹಿಮಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ, ಘೋಷ್ 9.4 ಓವರ್‌ಗಳಲ್ಲಿ 42 ರನ್‌ಗಳಿಗೆ 7 ವಿಕೆಟ್‌ಗಳನ್ನು ಪಡೆದಿದ್ದರು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಮಹಾರಾಷ್ಟ್ರದ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ. ಘೋಷ್ 13 ಪ್ರಥಮ ದರ್ಜೆ ಪಂದ್ಯಗಳಲ್ಲಿ 28 ವಿಕೆಟ್‌ಗಳು, 11 ಲಿಸ್ಟ್ ಎ ಪಂದ್ಯಗಳಲ್ಲಿ 21 ವಿಕೆಟ್‌ಗಳು ಮತ್ತು 9 ಟಿ20 ಪಂದ್ಯಗಳಲ್ಲಿ ಕೇವಲ 2 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬುಮ್ರಾಗೆ 8 ಪಂದ್ಯಗಳಲ್ಲಿ ಮಾಡಲಾಗದ್ದನ್ನು ಒಂದೇ ಪಂದ್ಯದಲ್ಲಿ ಮಾಡಿದ ಮಿಚೆಲ್ ಸ್ಟಾರ್ಕ್

Source link

ಫೆಮಿನಾ ಮಿಸ್ ಇಂಡಿಯಾ ಗೆದ್ದ ಶಾಸಕ ಸತೀಶ್ ಸೈಲ್ ಪುತ್ರಿಗೆ ಭರ್ಜರಿ ಸ್ವಾಗತ – Kannada News | Femina Miss India 2026 winner Sadhvi Satish Sail gets grand well come in Karavar

ಕಾರವಾರ ಶಾಸಕ ಸತೀಶ್ ಸೈಲ್ (Satish Sail) ಪುತ್ರಿ ಸಾಧ್ವಿ ಸತೀಶ್ ಸೈಲ್ ಅವರು ಫೆಮಿನಾ ಮಿಸ್ ಇಂಡಿಯಾ 2026 ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಏಪ್ರಿಲ್ 18ರಂದು ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ಫಿನಾಲೆ ನಡೆದಿತ್ತು. ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಮೊದಲ ಬಾರಿ ಕಾರವಾರಕ್ಕೆ ಬಂದ ಸಾಧ್ವಿ ಅವರಿಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಗಿದ್ದು, ಸಾಧ್ವಿ ಅವರು ಸ್ಪರ್ಧೆಯಲ್ಲಿ ತಮಗೆ ತೊಡಿಸಲಾದ ಕಿರೀಟವನ್ನು ದೇವರ ಮುಂದಿರಿಸಿ ಆಶೀರ್ವಾದ ಸಹ ಪಡೆದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:46 pm, Sat, 2 May 26

Source link

ಕೋಲಾರದಲ್ಲಿ ಬಿಸಿಲ ತಾಪಕ್ಕೆ ತತ್ತರಿಸಿದ ವಾನರ ಸೈನ್ಯ: ಅನ್ನ, ನೀರಿಲ್ಲದೇ ನರಳಾಟ; ನಾಲ್ಕೈದು ಕೋತಿಗಳು ಸಾವು – Kannada News | Antaragange Heatwave Crisis: Monkeys Dying Amid Water, Food Scarcity and Negligence

ನೀರಿಗಾಗಿ ಹುಡುಕಾಟ ನಡೆಸಿರುವ ಕೋತಿImage Credit source: tv9 kannada

ಕೋಲಾರ, ಮೇ 02: ಅಲ್ಲಿ ವರ್ಷದ 365 ದಿನಗಳು ಗಂಗೆ ನಿರಂತರವಾಗಿ ಹರಿಯುತ್ತಾಳೆ. ಹಾಗಾಗಿ ಆ ಜಾಗವನ್ನ ಅಂತರಗಂಗೆ ಎಂದೆ ಕರೆಯಲಾಗುತ್ತದೆ. ಆದರೆ ಈ ಬಾರಿಯ ಬಿಸಿಲ (Heatwave) ಬೇಗೆ ಅಂತರಗಂಗೆಗೂ ತಟ್ಟಿದ್ದು, ಪ್ರಾಣಿ-ಪಕ್ಷಿಗಳು ಆಹಾರ, ನೀರಿಲ್ಲದೆ ಪ್ರಾಣ ಕಳೆದುಕೊಳ್ಳುತ್ತಿವೆ. ಕಳೆದ ಒಂದು ವಾರದಲ್ಲಿ ನಾಲ್ಕರಿಂದ ಐದು ಕೋತಿಗಳು (Monkeys) ಸಾವನ್ನಪ್ಪಿರುವ ಘಟನೆ ನಡೆದಿದೆ.

ಈ ವರ್ಷ ಕೋಲಾರದಲ್ಲಿ ಬಿಸಿಲ ಬೇಗೆಯಿಂದ ತಾಪಮಾನ ಹೆಚ್ಚಾಗಿದೆ. ಕಾಶಿವಿಶ್ವೇಶ್ವರ ಸ್ವಾಮಿಯ ಸನ್ನಿಧಿ ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಅಂತರಗಂಗೆಯಲ್ಲಿ, ಹಲವು ವರ್ಷಗಳಿಂದ ಸಾವಿರಾರು ಕೋತಿಗಳು, ನವಿಲುಗಳು ಮತ್ತು ಮೊಲಗಳು ವಾಸಿಸುತ್ತಿವೆ. ಆದರೆ, ಈ ವರ್ಷದ ಬಿಸಿಲ ತಾಪ ತಾರಕಕ್ಕೇರಿದ್ದು, ಪ್ರಾಣಿಗಳು ತೀವ್ರ ನಿತ್ರಾಣ ಸ್ಥಿತಿಗೆ ತಲುಪಿವೆ. ಈ ಪ್ರದೇಶವು ಅರಣ್ಯ ಇಲಾಖೆ, ಮುಜರಾಯಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಮತ್ತು ಕೊಂಡರಾಜನಹಳ್ಳಿ ಗ್ರಾಮ ಪಂಚಾಯ್ತಿಯ ವ್ಯಾಪ್ತಿಗೆ ಬರುತ್ತದೆ. ಇಷ್ಟು ಜವಾಬ್ದಾರಿಯುತ ಇಲಾಖೆಗಳಿದ್ದರೂ, ಬೆಟ್ಟದ ಮೇಲೆ ವಾಸಿಸುವ ಮೂಕ ಪ್ರಾಣಿಗಳಿಗೆ ಕನಿಷ್ಠ ಕುಡಿಯುವ ನೀರು ಅಥವಾ ಆಹಾರದ ವ್ಯವಸ್ಥೆ ಮಾಡದಿರುವುದು ದುರ್ದೈವದ ಸಂಗತಿಯಾಗಿದೆ.

ಇದನ್ನೂ ಓದಿ: ತುಮಕೂರಿನಲ್ಲಿ ಹಕ್ಕಿ ಜ್ವರದ ಆತಂಕ: ನವಿಲುಗಳ ಸಾವಿಗೆ ‘H5N1’ ಸೋಂಕು ಕಾರಣ!

ಇನ್ನು ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ಅಂತರಗಂಗೆಯಲ್ಲಿ ಸಾವಿರಾರು ಕೋತಿಗಳು, ನವಿಲುಗಳು, ಮೊಲ ಸೇರಿದಂತೆ ಹಲವು ಪ್ರಾಣಿಗಳನ್ನು ಬೆಟ್ಟದಲ್ಲಿ ಕಾಣಬಹುದು. ಪ್ರತಿ ವರ್ಷ ಬೇಸಿಗೆ ಬಂದರೆ ಸಾಕು ಇಲ್ಲಿರುವ ವಾನರ ಸೈನ್ಯಕ್ಕೆ ನೀರು, ಆಹಾರದ ಸಮಸ್ಯೆ ತಲೆದೂರುತ್ತೆ. ಕೆಲ ಕೋತಿಗಳು ಪ್ರವಾಸಿಗರ ಕೈಕಾಲು ಹಿಡಿದು ಕೊಟ್ಟ ತಿಂಡಿ ತಿಂದು ಬದುಕುತ್ತಿವೆ.

ಕೆಲವು ದಾನಿಗಳು ವಾರದಲ್ಲಿ ಎರಡ್ಮೂರು ದಿನ ಮಾರುಕಟ್ಟೆಯಿಂದ ಹಣ್ಣು, ತರಕಾರಿಗಳನ್ನ ತಂದುಕೊಡುತ್ತಾರೆ. ಇನ್ನು ಅರಣ್ಯ ಇಲಾಖೆಯು ಕಾಡು ಪ್ರಾಣಿಗಳಿಗಾಗಿ ರೂಪಿಸಿದ ಕೋಟ್ಯಂತರ ರೂ ಯೋಜನೆ ಕೇವಲ ಪುಸ್ತಕದಲ್ಲಿ ಮಾತ್ರ ಇದೆ. ಇಲ್ಲಿನ ಕೆಲವು ಪ್ರಾಣಿ ಪ್ರಿಯರು ಈ ಕೋತಿಗಳ ಪರಿಸ್ಥಿತಿಯನ್ನು ನೋಡಲಾಗದೆ ಆಗಾಗ ಮುದ್ದೆ, ತರಕಾರಿ, ಹಣ್ಣುಗಳನ್ನು ನೀಡುತ್ತಾರೆ. ಅದನ್ನು ಹೊರತು ಪಡಿಸಿದರೆ ಕೋತಿಗಳಿಗೆ ಹೊಟ್ಟೆಗೆ ತಣ್ಣೀರು ಬಟ್ಟೆನೆ ಗತಿ ಎನ್ನುವಂತ್ತಾಗಿದೆ.

ಸ್ಥಳೀಯರು ಹೇಳುವುದೇನು?

ಅರಣ್ಯ ಇಲಾಖೆ ಬೆಟ್ಟದಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗುವ ಮರ-ಗಿಡಗಳನ್ನು ಬೆಳೆಸಿಲ್ಲ. ಹಣ್ಣು ಸಿಗುವ ಗಿಡಮರಗಳನ್ನ ಬೆಳೆಸಬೇಕು ಹಾಗೂ ಅವುಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸ್ಥಳೀಯರಾದ ಮುನಿರಾಜು ಅವರ ಮಾತು.

ಇದನ್ನೂ ಓದಿ: ತುಮಕೂರಿನಲ್ಲಿ ಹಕ್ಕಿ ಜ್ವರದ ಭೀತಿ: ನವಿಲುಗಳ ಸಾವಿನ ಬೆನ್ನಲ್ಲೇ ಈಗ 30 ಕೋಳಿಗಳ ಸಾವು! ಜಿಲ್ಲೆಯಲ್ಲಿ ಹೈ ಅಲರ್ಟ್​

ಪ್ರವಾಸೋದ್ಯಮದ ಹೆಸರಿನಲ್ಲಿ ನಿತ್ಯ ಸಾವಿರಾರು ಜನರು ಭೇಟಿ ನೀಡುವ ಈ ಸ್ಥಳದಲ್ಲಿ, ಮೂಕ ಪ್ರಾಣಿಗಳು ಹಸಿವಿನಿಂದ ಸಾಯುತ್ತಿರುವುದು ಇಲಾಖೆಗಳ ವೈಫಲ್ಯವನ್ನು ಎತ್ತಿ ತೋರಿಸುವಂತಿದೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಈ ವಾನರ ಸೈನ್ಯವನ್ನು ರಕ್ಷಿಸುವತ್ತ ಗಮನ ಹರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:32 pm, Sat, 2 May 26

Source link

ದೆಹಲಿಯ ಮನೆಯಲ್ಲಿ 30 ವರ್ಷದ ನ್ಯಾಯಾಧೀಶ ಆತ್ಮಹತ್ಯೆ – Kannada News | Delhi judge Aman Kumar Sharma found dead by Suicide at Safdarjung home

ನವದೆಹಲಿ, ಮೇ 2: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನ್ಯಾಯಾಧೀಶರೊಬ್ಬರು ಇಂದು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ದೆಹಲಿಯ ಸಫ್ದರ್ಜಂಗ್ ಪ್ರದೇಶದಲ್ಲಿ ವಾಸಿಸುತ್ತಿದ್ದ ನ್ಯಾಯಾಧೀಶರು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ನ್ಯಾಯಾಧೀಶರ ಈ ನಿರ್ಧಾರಕ್ಕೆ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಕಂಡುಬಂದಿಲ್ಲ. ಪೊಲೀಸರು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತ ನ್ಯಾಯಾಧೀಶರ ಹೆಸರು ಅಮನ್ ಕುಮಾರ್ ಶರ್ಮಾ. ಇವರಿಗೆ 30 ವರ್ಷವಾಗಿತ್ತು.

30 ವರ್ಷದ ಅಮನ್ ಕುಮಾರ್ ಶರ್ಮಾ ಅವರನ್ನು ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (DLSA) ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ಆತ್ಮಹತ್ಯೆಯ ಬಗ್ಗೆ ಇಂದು ಮಧ್ಯಾಹ್ನ 1.45ರ ಸುಮಾರಿಗೆ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಇದಾದ ನಂತರ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಐಇಡಿ ನಿಷ್ಕ್ರಿಯಗೊಳಿಸುವಾಗ ಸ್ಫೋಟ; ನಾಲ್ವರು ಭದ್ರತಾ ಸಿಬ್ಬಂದಿ ಸಾವು

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿದವು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಮನ್ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದೆಹಲಿ ಪೊಲೀಸರು ಅವರ ಸಾವನ್ನು ದೃಢಪಡಿಸಿ, ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಂಡಿದ್ದಾರೆ. ನ್ಯಾಯಾಧೀಶ ಅಮನ್ ಕುಮಾರ್ ಶರ್ಮಾ ಅವರ ಹಠಾತ್ ಸಾವು ನಗರದ ಕಾನೂನು ಸಮುದಾಯದಲ್ಲಿ ಆಘಾತ ಉಂಟುಮಾಡಿದೆ. ಅವರ ಮನೆ ಗ್ರೀನ್ ಪಾರ್ಕ್ ಪ್ರದೇಶದಲ್ಲಿದೆ.

ಅಮನ್ ಕುಮಾರ್ ಶರ್ಮಾ ಜೂನ್ 19, 2021ರಂದು ದೆಹಲಿ ನ್ಯಾಯಾಂಗ ಸೇವೆಗೆ ಸೇರಿದರು. ಅವರು 2018ರಲ್ಲಿ ಪುಣೆಯ ಸಿಂಬಿಯೋಸಿಸ್ ಕಾನೂನು ಶಾಲೆಯಿಂದ ಕಾನೂನು ಅಧ್ಯಯನವನ್ನು ಪೂರ್ಣಗೊಳಿಸಿದರು. ಅವರ ಅಧಿಕಾರಾವಧಿಯಲ್ಲಿ ಅವರು ಹಲವಾರು ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಆಲಿಸಿದ್ದರು. ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಅಕ್ಟೋಬರ್ 2025ರಿಂದ ಅವರನ್ನು ಕಾರ್ಕಾರ್ಡೂಮಾ ನ್ಯಾಯಾಲಯದಲ್ಲಿ ಈಶಾನ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ (DLSA) ಪೂರ್ಣ ಸಮಯದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟಿ ಸಾರಾ ಅಲಿ ಖಾನ್ ಡೈಲಿ ವ್ಯಾಯಾಮ ಹೀಗಿರುತ್ತೆ: ವಿಡಿಯೋ

ಸಿನಿಮಾ (Cinema) ನಟ, ನಟಿಯರು ಏನು ತಪ್ಪಿಸಿದರೂ ಜಿಮ್ ಅಥವಾ ವ್ಯಾಯಾಮ ತಪ್ಪಿಸುವುದಿಲ್ಲ. ನಟಿ ಸಾರಾ ಅಲಿ ಖಾನ್, ನಟಿಯಾಗುವ ಮುಂಚೆ 100 ಕೆಜಿಗೂ ಹೆಚ್ಚು ತೂಕ ಹೊಂದಿದ್ದರು. ಯಾವ ಕೋನದಿಂದಲೂ ನಾಯಕ ನಟಿಯಾಗಲು ಸಾಧ್ಯವೇ ಇಲ್ಲದಂತಿದ್ದರು. ಆದರೆ ಸಾರಾ ತಮ್ಮ ದೇಹಸ್ಥಿತಿಗೆ ಸವಾಲು ಎಸೆದು 50ಕೆಜಿಗೂ ಹೆಚ್ಚು ತೂಕ ಇಳಿಸಿಕೊಂಡರು. ಈಗ ಬಾಲಿವುಡ್​ನ ಸ್ಟಾರ್ ನಟಿ. ಅವರ ದಿನವಹಿ ವ್ಯಾಮಾದ ವಿಡಿಯೋ ಒಂದನ್ನು ನಟಿ ಸಾರಾ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಲಾರ್ಡ್ಸ್​ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ – Kannada News | India Women’s Test Squad for England Clash at Lord’s: Harmanpreet Kaur to Lead

ಟಿ20 ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ್ದ ಭಾರತ ವನಿತಾ ಪಡೆ (India Women’s Cricket), ಸರಣಿಯನ್ನು ಹೀನಾಯವಾಗಿ ಸೋತಿತ್ತು. ಇದೀಗ ಜೂನ್ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ಗೆ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಪಡೆ ಭರ್ಜರಿ ತಯಾರಿ ನಡೆಸುತ್ತಿದೆ. ಈ ಚುಟುಕು ವಿಶ್ವಸಮರ ಜೂನ್ 12 ರಿಂದ ಆರಂಭವಾಗಲಿದೆ. ಈ ಪಂದ್ಯಾವಳಿಗೆ ಬಿಸಿಸಿಐ ಇಂದು 15 ಸದಸ್ಯರ ಭಾರತ ಮಹಿಳಾ ತಂಡವನ್ನು ಪ್ರಕಟಿಸಿದೆ. ಇದರ ಜೊತೆಗೆ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದ್ದು, ಈ ಪಂದ್ಯಕ್ಕೂ ಬಿಸಿಸಿಐ 15 ಸದಸ್ಯರ ಭಾರತೀಯ ಮಹಿಳಾ ತಂಡವನ್ನು ಪ್ರಕಟಿಸಿದೆ.

ಈ ಟೆಸ್ಟ್ ಜುಲೈ 10 ರಿಂದ 13 ರವರೆಗೆ ಲಂಡನ್‌ನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ವೇಗದ ಬೌಲರ್ ನಂದಿನಿ ಶರ್ಮಾ ಮತ್ತು ಎಡಗೈ ಸ್ಪಿನ್ನರ್ ಶ್ರೀ ಚರಣಿ ಸೇರಿದಂತೆ ಕೆಲವು ಹೊಸ ಮತ್ತು ಯುವ ಆಟಗಾರ್ತಿಯರಿಗೆ ಈ ತಂಡದಲ್ಲಿ ಅವಕಾಶ ನೀಡಲಾಗಿದೆ. ನಂದಿನಿ ಇನ್ನೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ. ಹಾಗೆಯೇ ಈ ಟೆಸ್ಟ್ ಶ್ರೀ ಚರಣಿಗೆ ಹೊಸ ಅವಕಾಶವಾಗಿದೆ.

ಅನುಭವಿ ಆಟಗಾರ್ತಿಯರ ಕಂಬ್ಯಾಕ್

ಅನುಭವಿ ಆಟಗಾರ್ತಿಯರಲ್ಲಿ, ಸ್ನೇಹ್ ರಾಣಾ, ಹರ್ಲೀನ್ ಡಿಯೋಲ್ ಮತ್ತು ಪ್ರತಿಕಾ ರಾವಲ್ ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂವರು ಆಟಗಾರ್ತಿಯರನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲಾಗಿದೆ. ಆದರೆ ಈಗ ಅವರು ಮತ್ತೊಂದು ಅವಕಾಶ ಸಿಕ್ಕಂತೆ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ವಿಕೆಟ್ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಅವರ ಉಪಸ್ಥಿತಿಯು ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಸಮತೋಲನವನ್ನು ತರುತ್ತದೆ.

ಟೆಸ್ಟ್ ತಂಡದಲ್ಲಿ ಮೂರು ಬದಲಾವಣೆ

ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಟೆಸ್ಟ್ ತಂಡಕ್ಕೆ ಹೋಲಿಸಿದರೆ ಈ ಬಾರಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ವೈಷ್ಣವಿ ಶರ್ಮಾ, ಉಮಾ ಛೆಟ್ರಿ ಮತ್ತು ಅಮನ್‌ಜೋತ್ ಕೌರ್ ಅವರನ್ನು ನಂದಿನಿ ಶರ್ಮಾ, ಯಸ್ತಿಕಾ ಭಾಟಿಯಾ ಮತ್ತು ಶ್ರೀ ಚರಣಿ ಬದಲಾಯಿಸಿದ್ದಾರೆ. ತಂಡದ ಸಂಯೋಜನೆಯನ್ನು ಬಲಪಡಿಸಲು ಈ ಬದಲಾವಣೆಗಳನ್ನು ಮಾಡಲಾಗಿದೆ.

ಹೆಡ್-ಟು-ಹೆಡ್ ದಾಖಲೆ

ಭಾರತ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಇದುವರೆಗೆ ಒಟ್ಟು 15 ಟೆಸ್ಟ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದ 11 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ, ಇದು ಎರಡೂ ತಂಡಗಳ ನಡುವಿನ ಸ್ಪರ್ಧೆಯ ಸಮತೋಲನವನ್ನು ತೋರಿಸುತ್ತದೆ. ಈಗ ಲಾರ್ಡ್ಸ್‌ನಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಗೆಲುವಿನ ದಾಖಲೆಯನ್ನು ಬಲಪಡಿಸಲು ಉತ್ಸುಕವಾಗಿದೆ.

Women’s T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗಾಗಿ ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಪ್ರತೀಕಾ ರಾವಲ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಂದಿನಿ ಶರ್ಮಾ, ಹರ್ಲೀನ್ ಡಿಯೋಲ್, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಸಯಾಲಿ ಸತ್ಘರೆ, ಸ್ನೇಹ ರಾಣಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Prasar Bharati: ಪ್ರಸಾರ ಭಾರತಿ ಅಧ್ಯಕ್ಷರಾಗಿ ಖ್ಯಾತ ಲೇಖಕ, ಗೀತರಚನೆಕಾರ ಪ್ರಸೂನ್ ಜೋಶಿ ನೇಮಕ – Kannada News | Writer and lyricist Prasoon Joshi appointed as Prasar Bharati chairman

ನವದೆಹಲಿ, ಮೇ 2: ಖ್ಯಾತ ಗೀತರಚನೆಕಾರ, ಬರಹಗಾರ ಮತ್ತು ಸಂವಹನ ತಜ್ಞ ಪ್ರಸೂನ್ ಜೋಶಿ (Prasoon Joshi) ಅವರನ್ನು ಇಂದು ಭಾರತದ ಸಾರ್ವಜನಿಕ ಸೇವಾ ಪ್ರಸಾರಕವಾದ ಪ್ರಸಾರ ಭಾರತಿಯ (Prasar Bharati) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪ್ರಸೂನ್ ಜೋಶಿ ಅವರನ್ನು ಈ ಪ್ರಮುಖ ಹುದ್ದೆಗೆ ನೇಮಿಸಿದೆ. ಸಾಹಿತ್ಯ, ಜಾಹೀರಾತು, ಸಿನಿಮಾ ಮತ್ತು ಸಾರ್ವಜನಿಕ ಸಂವಹನಕ್ಕೆ ಗಮನಾರ್ಹ ಕೊಡುಗೆಗಳನ್ನು ಹೊಂದಿರುವ ಪ್ರಸಿದ್ಧ ಸೃಜನಶೀಲರಾದ ಪ್ರಸೂನ್ ಜೋಶಿ ತಮ್ಮ ಪ್ರಬಲ ಬರವಣಿಗೆ ಮತ್ತು ಸಾಂಸ್ಕೃತಿಕ ಒಳನೋಟದಿಂದ ಗುರುತಿಸಿಕೊಂಡಿದ್ದಾರೆ. 54 ವರ್ಷ ವಯಸ್ಸಿನ ಅವರು ಭಾರತದಲ್ಲಿ ಸಮಕಾಲೀನ ಮಾಧ್ಯಮ ನಿರೂಪಣೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಸೂನ್ ಜೋಶಿ ಅವರ ನೇಮಕಾತಿಗೆ ಅಭಿನಂದನೆ ಸಲ್ಲಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಪ್ರಸೂನ್ ಜೋಶಿ ಅವರದ್ದು ಅಪರೂಪದ ಸೃಜನಶೀಲ ಮನೋಭಾವ. ಅವರ ಉಸ್ತುವಾರಿ ಅಡಿಯಲ್ಲಿ ಪ್ರಸಾರ ಭಾರತಿ ಹೊಸ ಸೃಜನಶೀಲ ಧ್ವನಿಯನ್ನು ಕಂಡುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ: ಆರ್​ಬಿಐ ಉಪ ಗವರ್ನರ್ ಆಗಿ ರೋಹಿತ್ ಜೈನ್ ನೇಮಕ

ಈ ಮೊದಲು ಪ್ರಸೂನ್ ಜೋಶಿ 2017ರವರೆಗೆ ಮುಂಬೈನಲ್ಲಿ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೆಕ್‌ಕ್ಯಾನ್ ವರ್ಲ್ಡ್ ಗ್ರೂಪ್ ಇಂಡಿಯಾದ ಸಿಇಒ ಮತ್ತು ಮೆಕ್‌ಕ್ಯಾನ್ ವರ್ಲ್ಡ್ ಗ್ರೂಪ್ ಏಷ್ಯಾ ಪೆಸಿಫಿಕ್‌ನ ಅಧ್ಯಕ್ಷ ಸ್ಥಾನ ಸೇರಿದಂತೆ ಜಾಹೀರಾತು ಉದ್ಯಮದಲ್ಲಿ ಅವರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದಲ್ಲದೆ, ಅವರು 2016ರಿಂದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಟ್ರಸ್ಟಿಯಾಗಿದ್ದಾರೆ.

ಇದನ್ನೂ ಓದಿ: World Television Day 2025: ದೂರದರ್ಶನ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಗೊತ್ತಾ?

1997ರಿಂದ ಕಾರ್ಯನಿರ್ವಹಿಸುತ್ತಿರುವ ಪ್ರಸಾರ ಭಾರತಿ ಭಾರತದ ಸ್ವಾಯತ್ತ ಸಾರ್ವಜನಿಕ ಸೇವಾ ಪ್ರಸಾರಕವಾಗಿದೆ. ಇದು ಎರಡು ಪ್ರಮುಖ ವಿಭಾಗಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಆಲ್ ಇಂಡಿಯಾ ರೇಡಿಯೋ (AIR) ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಜನರನ್ನು ಬಹು ಭಾಷೆಗಳಲ್ಲಿ ತಲುಪುವ ವಿಶ್ವದ ಅತಿದೊಡ್ಡ ರೇಡಿಯೋ ಜಾಲಗಳಲ್ಲಿ ಒಂದಾಗಿದೆ. ಇನ್ನೊಂದು ಸುದ್ದಿ, ಶೈಕ್ಷಣಿಕ, ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ರಾಷ್ಟ್ರೀಯ ಚಾನೆಲ್ ಆದ ದೂರದರ್ಶನ (DD).

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:24 pm, Sat, 2 May 26

Source link

Exit mobile version