Headlines

‘ಅಭಿಮಾನಿಗಳಿಗಾಗಿ ಸುಳ್ಳು ಬಾಕ್ಸ್​ ಆಫೀಸ್​ ಲೆಕ್ಕ ಕೊಡ್ತೀವಿ’; ಕೊನೆಗೂ ಒಪ್ಪಿಕೊಂಡ ನಿರ್ಮಾಪಕ – Kannada News | Producer Naga Vamsi Admits Telugu Film Box Office Numbers are Inflated on Posters

ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ನಾಗವಂಶಿ ಬಾಕ್ಸ್ ಆಫೀಸ್ ಗಳಿಕೆಯ ಸತ್ಯಾಸತ್ಯತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಿನಿಮಾಗಳ ಪೋಸ್ಟರ್‌ಗಳಲ್ಲಿ ಪ್ರಕಟಿಸುವ ಕಲೆಕ್ಷನ್ ಲೆಕ್ಕಗಳನ್ನು ಹೆಚ್ಚಿಸಿ ತೋರಿಸಲಾಗುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ನೈಜ ಅಂಕಿಅಂಶಗಳನ್ನು ಪ್ರಕಟಿಸುವ ಅಗತ್ಯವಾದರೂ ಏನಿದೆ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ. ಅಭಿಮಾನಿಗಳ ಖುಷಿಗಾಗಿ ಕಲೆಕ್ಷನ್ ಹೆಚ್ಚಳ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯ ನಿರ್ಮಾಪಕ ನಾಗವಂಶಿ ಅವರು ಸಂದರ್ಶನವೊಂದರಲ್ಲಿ ಈ ಕುರಿತು ವಿಸ್ತಾರವಾಗಿ ಮಾತನಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಪೋಸ್ಟರ್ ಕೂಡ ನೈಜ ಲೆಕ್ಕವನ್ನು ನೀಡುವುದಿಲ್ಲ…

Read More

ದುಷ್ಮನ್ ಕಿದರ ಹೈ ಅಂದ್ರೆ ಬಗಲ್ ಮೇ ಹೈ: ಅಕ್ಕಪಕ್ಕದವರ ಮನೆಯವರ ವಾಹನಗಳ ವಿರುದ್ಧ ದೂರು – Kannada News | New Weapon to Settle Scores: Neighbors File Complaints Over ‘Abandoned’ Vehicles

ಬೆಂಗಳೂರು, ಆಗಸ್ಟ್​​ 08: ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ಅನಾಥವಾಗಿ ನಿಲ್ಲಿಸಲಾಗಿರುವ ಬಿಡಾಡಿ ವಾಹನಗಳನ್ನು (abandoned vehicles) ತೆರವುಗೊಳಿಸಲು ನಗರ ಪೊಲೀಸರು ಕೈಗೊಂಡ ಕಾರ್ಯಾಚರಣೆ ವೇಳೆ ಅಚ್ಚರಿ ಹಾಗೂ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಸಾರ್ವಜನಿಕರು ಆ್ಯಪ್‌ಗಳ ಮೂಲಕ ನೀಡಿದ ದೂರುಗಳನ್ನಾಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ವೈಯಕ್ತಿಕ ದ್ವೇಷ ಹಿನ್ನಲೆ ಅಕ್ಕ-ಪಕ್ಕದ ಮನೆಯವರ ವಾಹನಗಳ ಫೋಟೋವನ್ನು ಅಪ್‌ಲೋಡ್​ ಮಾಡಿರುವುದು​ ಪತ್ತೆಯಾಗಿದೆ. ನಡೆದಿದ್ದೇನು? ಪಬ್ಲಿಕ್ ಐ ಆ್ಯಪ್ ಮೂಲಕ ಸಾರ್ವಜನಿಕರು ಬಿಡಾಡಿ ವಾಹನಗಳ ಬಗ್ಗೆ ಮಾಹಿತಿ ನೀಡಲು…

Read More

KEA Recruitment 2026: 750 ಭೂಮಾಪಕ ಹುದ್ದೆಗಳಿಗೆ ಅರ್ಜಿ; ಆಗಸ್ಟ್ 20ರವರೆಗೆ ಅವಕಾಶ, 76,100 ರೂ. ವರೆಗೆ ವೇತನ – Kannada News | KEA Recruitment 2026: Apply for 750 Land Surveyor Posts; Last Date Extended to August 20

750 ಭೂಮಾಪಕ ಹುದ್ದೆಗಳಿಗೆ ಅರ್ಜಿImage Credit source: Getty Images ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಉತ್ತಮ ಅವಕಾಶ ನೀಡಿದೆ. ಕರ್ನಾಟಕ ಸರ್ಕಾರದ ಭೂ ದಾಖಲೆಗಳು, ಸರ್ವೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕ (Land Surveyor/Surveyor) ಹುದ್ದೆಗಳ ಭರ್ತಿಗೆ KEA ಅರ್ಜಿ ಆಹ್ವಾನಿಸಿದೆ. ಒಟ್ಟು 750 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆರಂಭಿಕ ಅಧಿಸೂಚನೆಯ ಪ್ರಕಾರ…

Read More

IND vs SL: ಭರ್ಜರಿ ಶತಕ ಸಿಡಿಸಿದ ಕನ್ನಡಿಗ ದೇವದತ್ ಪಡಿಕ್ಕಲ್; 3ನೇ ಕ್ರಮಾಂಕ ಫಿಕ್ಸ್ – Kannada News | Devdutt Padikkal Hits Ton in India vs Sri Lanka Practice Game, Eyes No. 3 Slot for Galle Test

ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ (India vs Sri Lanka ) ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಶ್ರೀಲಂಕಾ ತಂಡ ಮೊದಲ ದಿನದಾಟದಲ್ಲಿ ಪೂರ್ಣ 90 ಓವರ್​ಗಳನ್ನು ಆಡಿ 8 ವಿಕೆಟ್‌ಗಳನ್ನು ಕಳೆದುಕೊಂಡು 363 ರನ್ ಕಲೆಹಾಕಿತು. ಎರಡನೇ ದಿನದಂದು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡದ ಪರ ಕನ್ನಡಿಗ ದೇವದತ್ ಪಡಿಕ್ಕಲ್ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ…

Read More

ಪಂಚತಾರಾ ಹೋಟೆಲ್ ಸ್ಥಿತಿ ಬಯಲು ಮಾಡಿದ್ದೇವೆ: ತಿನ್ನೋದು ಬಿಡೋದು ಜನರಿಗೆ ಬಿಟ್ಟಿದ್ದು ಎಂದ ಸಚಿವ – Kannada News | Health Minister UT Khader talks about Star Hotels Violating Food Safety Rules

ಬೆಂಗಳೂರು, (ಆಗಸ್ಟ್ 08): ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಾಳಿ ಇಂದು ಕೂಡ ಮುಂದುವರಿದಿದೆ. ನಗರದಲ್ಲಿರುವ ಫೈವ್ ಹಾಗೂ 3 ಸ್ಟಾರ್​​​​​​​ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ಹೋಟೆಲ್‌ಗಳ ಆಹಾರ ಸುರಕ್ಷತೆ ಮತ್ತು ಗುಣಮಟ್ಟ, ಅಡುಗೆಮನೆ, ಆಹಾರ ಸಂಗ್ರಹಣೆ ಮತ್ತು ನೈರ್ಮಲ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ…

Read More

ಜ್ಞಾನಭಾರತಿ ವಿವಿ ಆವರಣದಲ್ಲಿ ಹೆಚ್ಚಿದ ಅಪಘಾತ; ಗಾಂಧಿಭವನ ರಸ್ತೆ ಶೀಘ್ರ ಬಂದ್? – Kannada News | Bengaluru University Campus Accidents Rise: Gandhi Bhavan Road Likely to Be Closed

ವಿವಿ ಕುಲಪತಿ ಸಿ. ಶಿವರಾಜು ನೇತೃತ್ವದಲ್ಲಿ ಸಭೆImage Credit source: tv9 ಬೆಂಗಳೂರು, ಆಗಸ್ಟ್ 8: ಬೆಂಗಳೂರು (Bengaluru) ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಕುರಿತು ಚರ್ಚೆ ನಡೆದಿದೆ. ಇತ್ತೀಚೆಗೆ ವಿವಿ ವಿದ್ಯಾರ್ಥಿನಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಡ ಹೆಚ್ಚಾಗಿದೆ. ಜ್ಞಾನಭಾರತಿ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಿಂತ ಸಾರ್ವಜನಿಕರ ಓಡಾಟವೇ ಹೆಚ್ಚಾಗಿದ್ದು, ವಾಹನಗಳ ಸಂಚಾರವೂ ಮಿತಿಮೀರಿದೆ…

Read More

ಬೆಂಗಳೂರಿನ ಫೈವ್, ತ್ರಿ ಸ್ಟಾರ್​​​​ ಹೋಟೆಲ್​​​​ಗಳ ಬಂಡವಾಳ ಬಯಲು: ಕೊಳೆತ ತರಕಾರಿ, ಅವಧಿ ಮೀರಿದ ಎಣ್ಣೆ-ಹಾಲು ಪತ್ತೆ – Kannada News | Bengaluru Many Star Hotels Violating Food Safety Rules

ಬೆಂಗಳೂರು, (ಆಗಸ್ಟ್ 08): ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಾಳಿ ಇಂದು ಕೂಡ ಮುಂದುವರಿದಿದೆ. ನಗರದಲ್ಲಿರುವ ಫೈವ್ ಹಾಗೂ 3 ಸ್ಟಾರ್​​​​​​​ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ಹೋಟೆಲ್‌ಗಳ ಆಹಾರ ಸುರಕ್ಷತೆ ಮತ್ತು ಗುಣಮಟ್ಟ, ಅಡುಗೆಮನೆ, ಆಹಾರ ಸಂಗ್ರಹಣೆ ಮತ್ತು ನೈರ್ಮಲ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 70 ಕೆ.ಜಿ. ಸೋಯಾ ಸಾಸ್ ,…

Read More

‘ಟಾಕ್ಸಿಕ್’ ಟ್ರೈಲರ್ ರಿಲೀಸ್, ಹೇಳಿದ್ದನ್ನು ಮಾಡಿ ತೋರಿಸಿದ ಯಶ್ – Kannada News | Yash once promised to brin Bollywood to Bengaluru, now he achieved it

ಯಶ್ (Yash), ಅದ್ಭುತ ನಟ, ಕನಸುಗಾರ, ರಿಸ್ಕ್ ತೆಗೆದುಕೊಳ್ಳುವ ನಟ ಮತ್ತು ನಿರ್ಮಾಪಕ. ಇದೆಲ್ಲದರ ಜೊತೆಗೆ ಅಪರೂಪದ ಛಲಗಾರ. ಅಂದುಕೊಂಡಿದ್ದನ್ನು ಮಾಡಿತೋರಿಸುವ ಹಠವಾದಿ. ಎತ್ತರಕ್ಕೇರಿದರೂ ತಮ್ಮತನವನ್ನು ಮರೆಯದ ವ್ಯಕ್ತಿತ್ವ ಅವರದ್ದು. ಇದೀಗ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 08) ಬಿಡುಗಡೆ ಆಗುತ್ತಿದೆ. ಹಲವಾರು ಬಾಲಿವುಡ್ ತಾರೆಯರು, ಮಾಧ್ಯಮದವರು ಬೆಂಗಳೂರಿಗೆ ಬಂದಿದ್ದಾರೆ. ಈ ಸಮಯದಲ್ಲಿ ನಟ ಯಶ್ ಅವರು ಹಿಂದೊಮ್ಮೆ ಆಡಿದ್ದ ಮಾತನ್ನು ಕೆಲ ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ. ಕೋವಿಡ್​​ಗೆ…

Read More

‘ಸೋಷಿಯಲ್ ಮೀಡಿಯಾ ವಿಜಿಲಾಂಟಿಸಂ ಸಹಿಸಲ್ಲ’: ಅಕ್ರಮ ವಲಸಿಗರ ವೀಡಿಯೊ ವೈರಲ್ ಮಾಡುವವರಿಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್ – Kannada News | Karnataka Cracks Down on Illegal Migrants; Kharge Warns Against Social Media Policing.

ಬೆಂಗಳೂರು, ಆ.8: ರಾಜ್ಯ ರಾಜಧಾನಿಯಲ್ಲಿ ವಲಸಿಗರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ತನಿಖೆ ನಡೆಸಿ ವೀಡಿಯೊಗಳನ್ನು ಪೋಸ್ಟ್ ಮಾಡುವುದು ಮತ್ತು ಸರ್ಕಾರದ ಬಗ್ಗೆ ಟೀಕಿಸುವುದು ನಿಲ್ಲಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂತಹ “ವಿಜಿಲಾಂಟಿಸಂ” ಅಥವಾ “ಮಾರಲ್ ಪೋಲಿಸಿಂಗ್” ಅನ್ನು ಸರ್ಕಾರ ಸಹಿಸುವುದಿಲ್ಲ ಎಂದಿದ್ದಾರೆ. ಮಾಹಿತಿ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಅಂತರರಾಷ್ಟ್ರೀಯ ಜಾಲಗಳು ಎಚ್ಚೆತ್ತುಕೊಳ್ಳುತ್ತವೆ ಮತ್ತು ಸರ್ಕಾರದ ರಹಸ್ಯ ಕಾರ್ಯಾಚರಣೆಗಳಿಗೆ ಅಡ್ಡಿಯಾಗುತ್ತದೆ ಎಂದು ಖರ್ಗೆ ತಿಳಿಸಿದರು. ನಿಜವಾದ ದೇಶಭಕ್ತರು…

Read More

ಆಕರ್ಷಕ ಅರ್ಧಶತಕ ಬಾರಿಸಿದ ದೇವದತ್ ಪಡಿಕ್ಕಲ್ – Kannada News | Devdutt Paddikal smashed a brilliant fifty in warmup match for India

ಭಾರತ ಹಾಗೂ ಶ್ರೀಲಂಕಾ ನಡುವಿನ ಮುಂಬರುವ ಟೆಸ್ಟ್ ಸರಣಿಗೆ ಸಿದ್ಧತೆಯಾಗಿ ಕೊಲಂಬೋದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಪ್ರೆಸಿಡೆಂಟ್ಸ್ ಇಲೆವೆನ್ (SLC XI) ವಿರುದ್ಧದ ಈ ಪಂದ್ಯದ ಎರಡನೇ ದಿನದಾಟದಲ್ಲಿ ಪಡಿಕ್ಕಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕ ಆಘಾತಕ್ಕೆ ಪಡಿಕ್ಕಲ್ ಆಸರೆ: ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಖಾತೆ ತೆರೆಯುವ…

Read More