‘ಅಭಿಮಾನಿಗಳಿಗಾಗಿ ಸುಳ್ಳು ಬಾಕ್ಸ್​ ಆಫೀಸ್​ ಲೆಕ್ಕ ಕೊಡ್ತೀವಿ’; ಕೊನೆಗೂ ಒಪ್ಪಿಕೊಂಡ ನಿರ್ಮಾಪಕ – Kannada News | Producer Naga Vamsi Admits Telugu Film Box Office Numbers are Inflated on Posters

ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ನಾಗವಂಶಿ ಬಾಕ್ಸ್ ಆಫೀಸ್ ಗಳಿಕೆಯ ಸತ್ಯಾಸತ್ಯತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸಿನಿಮಾಗಳ ಪೋಸ್ಟರ್‌ಗಳಲ್ಲಿ ಪ್ರಕಟಿಸುವ ಕಲೆಕ್ಷನ್ ಲೆಕ್ಕಗಳನ್ನು ಹೆಚ್ಚಿಸಿ ತೋರಿಸಲಾಗುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ನೈಜ ಅಂಕಿಅಂಶಗಳನ್ನು ಪ್ರಕಟಿಸುವ ಅಗತ್ಯವಾದರೂ ಏನಿದೆ ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ.

ಅಭಿಮಾನಿಗಳ ಖುಷಿಗಾಗಿ ಕಲೆಕ್ಷನ್ ಹೆಚ್ಚಳ

ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯ ನಿರ್ಮಾಪಕ ನಾಗವಂಶಿ ಅವರು ಸಂದರ್ಶನವೊಂದರಲ್ಲಿ ಈ ಕುರಿತು ವಿಸ್ತಾರವಾಗಿ ಮಾತನಾಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಪೋಸ್ಟರ್ ಕೂಡ ನೈಜ ಲೆಕ್ಕವನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ‘ಸಿನಿಮಾ ಗಳಿಕೆ ಎಷ್ಟು ಎಂಬುದು ಮುಖ್ಯವಲ್ಲ. ಅಭಿಮಾನಿಗಳಿಗೆ ಖುಷಿ ಕೊಡುವುದಕ್ಕಾಗಿ ಈ ರೀತಿ ಮಾಡಲಾಗುತ್ತದೆ. ದೊಡ್ಡ ನಾಯಕರ ಸಿನಿಮಾಗಳು ಯಶಸ್ವಿಯಾದಾಗ ಅಭಿಮಾನಿಗಳು ಸಂಭ್ರಮಿಸುತ್ತಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ವಾರ್ 2’ ಸಿನಿಮಾದಿಂದ ಆದ ನಷ್ಟ ಎಷ್ಟು ಕೋಟಿ? ವಿವರಿಸಿದ ವಿತರಕ

ಆದಾಗ್ಯೂ ಅವರು ಈ ಲೆಕ್ಕಾಚಾರಕ್ಕೆ ಒಂದು ಗಡಿಯನ್ನೂ ನಿರ್ಧರಿಸಿದ್ದಾರೆ. ‘100 ಕೋಟಿ ಗಳಿಸಿದ ಸಿನಿಮಾವನ್ನು 110 ಕೋಟಿ ಎಂದು ಹೇಳಬಹುದು. ಆದರೆ ನೇರವಾಗಿ 200 ಕೋಟಿ ಎಂದು ದೊಡ್ಡ ಮಟ್ಟದಲ್ಲಿ ಸುಳ್ಳು ಹೇಳುವುದಿಲ್ಲ. ಈ ವ್ಯತ್ಯಾಸ ಸಣ್ಣ ಮಟ್ಟದಲ್ಲಿ ಮಾತ್ರ ಇರುತ್ತದೆ’ ಎಂಬುದು ಅವರ ಅಭಿಪ್ರಾಯವಾಗಿದೆ.

ಪೋಸ್ಟರ್ ಹಾಗೂ ನೈಜ ಲೆಕ್ಕಕ್ಕೆ ವ್ಯತ್ಯಾಸ

ಇತ್ತೀಚಿನ ದಿನಗಳಲ್ಲಿ ನಿರ್ಮಾಣ ಸಂಸ್ಥೆ ಪ್ರಕಟಿಸುವ ಲೆಕ್ಕಕ್ಕೂ ಹಾಗೂ ಸ್ವತಂತ್ರ ಟ್ರ್ಯಾಕಿಂಗ್ ವೆಬ್‌ಸೈಟ್‌ಗಳ ಲೆಕ್ಕಕ್ಕೂ ದೊಡ್ಡ ವ್ಯತ್ಯಾಸ ಕಂಡುಬರುತ್ತಿದೆ. ನಾಗವಂಶಿ ನಿರ್ಮಾಣದ ‘ಡಾಕು ಮಹಾರಾಜ್’ ಚಿತ್ರದ ಮೊದಲ ದಿನದ ಗಳಿಕೆಯನ್ನು ಸಂಸ್ಥೆ 56 ಕೋಟಿ ಎಂದು ಹೇಳಿತ್ತು. ಆದರೆ ಸ್ಯಾಕ್ನಿಲ್ಕ್ ವರದಿ ಪ್ರಕಾರ ಅದು 41.24 ಕೋಟಿ ರೂಪಾಯಿ ಮಾತ್ರವಾಗಿತ್ತು. ಐದನೇ ದಿನಕ್ಕೆ ಚಿತ್ರ 114 ಕೋಟಿ ಗಳಿಸಿದೆ ಎಂದು ಪೋಸ್ಟರ್ ಬಿಡಲಾಗಿತ್ತು. ಆದರೆ ಸ್ಯಾಕ್ನಿಲ್ಕ್ ಪ್ರಕಾರ ಗಳಿಕೆ 94.18 ಕೋಟಿ ಆಗಿತ್ತು.

ಇದೇ ರೀತಿ ‘ಕಿಂಗ್‌ಡಮ್’ ಸಿನಿಮಾದ ಗಳಿಕೆಯಲ್ಲೂ ದೊಡ್ಡ ವ್ಯತ್ಯಾಸವಿತ್ತು. ನಿರ್ಮಾಣ ಸಂಸ್ಥೆ 82 ಕೋಟಿ ಎಂದು ಪ್ರಕಟಿಸಿದರೆ, ಟ್ರ್ಯಾಕರ್ಸ್ 65.76 ಕೋಟಿ ಎಂದು ಅಂದಾಜಿಸಿದ್ದರು. ಇಂತಹ ವ್ಯತ್ಯಾಸಗಳು ಚಿತ್ರರಂಗದಲ್ಲಿ ಸಾಮಾನ್ಯ ಸಂಗತಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದುಷ್ಮನ್ ಕಿದರ ಹೈ ಅಂದ್ರೆ ಬಗಲ್ ಮೇ ಹೈ: ಅಕ್ಕಪಕ್ಕದವರ ಮನೆಯವರ ವಾಹನಗಳ ವಿರುದ್ಧ ದೂರು – Kannada News | New Weapon to Settle Scores: Neighbors File Complaints Over ‘Abandoned’ Vehicles

ಬೆಂಗಳೂರು, ಆಗಸ್ಟ್​​ 08: ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ಅನಾಥವಾಗಿ ನಿಲ್ಲಿಸಲಾಗಿರುವ ಬಿಡಾಡಿ ವಾಹನಗಳನ್ನು (abandoned vehicles) ತೆರವುಗೊಳಿಸಲು ನಗರ ಪೊಲೀಸರು ಕೈಗೊಂಡ ಕಾರ್ಯಾಚರಣೆ ವೇಳೆ ಅಚ್ಚರಿ ಹಾಗೂ ಆಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಸಾರ್ವಜನಿಕರು ಆ್ಯಪ್‌ಗಳ ಮೂಲಕ ನೀಡಿದ ದೂರುಗಳನ್ನಾಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ವೈಯಕ್ತಿಕ ದ್ವೇಷ ಹಿನ್ನಲೆ ಅಕ್ಕ-ಪಕ್ಕದ ಮನೆಯವರ ವಾಹನಗಳ ಫೋಟೋವನ್ನು ಅಪ್‌ಲೋಡ್​ ಮಾಡಿರುವುದು​ ಪತ್ತೆಯಾಗಿದೆ.

ನಡೆದಿದ್ದೇನು?

ಪಬ್ಲಿಕ್ ಐ ಆ್ಯಪ್ ಮೂಲಕ ಸಾರ್ವಜನಿಕರು ಬಿಡಾಡಿ ವಾಹನಗಳ ಬಗ್ಗೆ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕೆಲವರು ತಮ್ಮ ಅಕ್ಕಪಕ್ಕದ ಮನೆಯವರ ಮೇಲಿನ ವೈಯಕ್ತಿಕ ದ್ವೇಷದಿಂದಾಗಿ, ಅವರು ಸಾಧಾರಣವಾಗಿ ಪಾರ್ಕ್ ಮಾಡಿದ್ದ ಕಾರುಗಳ ಫೋಟೋ ತೆಗೆದು ಬಿಡಾಡಿ ವಾಹನಗಳು ಎಂದು ಅಪ್‌ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳ ಹರಾಜಿಗೆ ಸಿದ್ಧತೆ: GBA ಮತ್ತು ಪೊಲೀಸರಿಂದ ಭರ್ಜರಿ ಜಂಟಿ ಕಾರ್ಯಾಚರಣೆ!

ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಅವು ನೆರೆಹೊರೆಯವರ ಸಕ್ರಿಯ ವಾಹನಗಳು ಎಂಬುದು ತಿಳಿದುಬಂದಿದೆ. ಇದೇ ರೀತಿ ವ್ಯಾಪಾರಿಗಳು ಹಾಗೂ ಹೋಟೆಲ್ ಮಾಲೀಕರು ಸಹ ತಮ್ಮ ಎದುರಾಳಿ ಅಂಗಡಿ ಅಥವಾ ಹೋಟೆಲ್‌ಗಳಿಗೆ ಬರುವ ಗ್ರಾಹಕರ ವಾಹನಗಳ ಫೋಟೋ ತೆಗೆದು ಆ್ಯಪ್‌ನಲ್ಲಿ ಹಾಕಿರುವುದು ಕಂಡುಬಂದಿದೆ.

ಇಲ್ಲಿಯವರೆಗೆ ಒಟ್ಟು 6,544 ವಾಹನಗಳ ಬಗ್ಗೆ ದೂರುಗಳು ದಾಖಲಾಗಿವೆ. ಇದರಲ್ಲಿ ಸಾರ್ವಜನಿಕರು ಪಬ್ಲಿಕ್ ಐ ಆ್ಯಪ್ ಮೂಲಕ 4,108 ವಾಹನಗಳ ವಿವರ ನೀಡಿದ್ದರೆ, ಕರ್ತವ್ಯನಿರತ ಪೊಲೀಸರು ಸ್ವತಃ 2,436 ವಾಹನಗಳನ್ನು ಗುರುತಿಸಿ ರಿಪೋರ್ಟ್ ಮಾಡಿದ್ದಾರೆ. ಈ ಎಲ್ಲಾ ವರದಿಗಳನ್ನು ಪೊಲೀಸರು ಮತ್ತು ಜಿಬಿಎ  ಅಧಿಕಾರಿಗಳು ಕೂಲಂಕುಷವಾಗಿ ತನಿಖೆ ಹಾಗೂ ಪರಿಶೀಲನೆ ನಡೆಸಿದ ನಂತರ, 3,100 ವಾಹನಗಳನ್ನು ಅಂತಿಮವಾಗಿ ಬಿಡಾಡಿ ವಾಹನಗಳು ಎಂದು ಗುರುತಿಸಲಾಗಿದೆ.

352 ವಾಹನಗಳ ಟೋಯಿಂಗ್

ಇನ್ನು ಗುರುತಿಸಲಾದ ವಾಹನಗಳ ಪೈಕಿ 1,780 ವಾಹನಗಳಿಗೆ ಜಿಬಿಎ ಅಧಿಕಾರಿಗಳು ಅನುಮೋದನೆ ನೀಡಿ, ಸೂಚನಾ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದಾರೆ. ಪೊಲೀಸರು ದಿನವೊಂದಕ್ಕೆ 50 ರಿಂದ 100 ಬಿಡಾಡಿ ಹಾಗೂ ನೋ-ಪಾರ್ಕಿಂಗ್ ವಾಹನಗಳಿಗೆ ಸ್ಟಿಕ್ಕರಿಂಗ್ ಮಾಡುತ್ತಿದ್ದಾರೆ. ನೋಟಿಸ್ ಸ್ಟಿಕ್ಕರ್ ಅಂಟಿಸಿದ 7 ದಿನಗಳ ನಂತರವೂ ಮಾಲೀಕರು ಬರದಿದ್ದರೆ ಆ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ಈಗಾಗಲೇ 352 ವಾಹನಗಳ ಟೋಯಿಂಗ್ ಕಾರ್ಯ ಪೂರ್ಣಗೊಂಡಿದ್ದು, 600 ವಾಹನಗಳ ಮಾಲೀಕರು ನೋ-ಪಾರ್ಕಿಂಗ್ ದಂಡ ಪಾವತಿಸಿ ತಮ್ಮ ವಾಹನಗಳನ್ನು ಬಿಡಿಸಿಕೊಳ್ಳುತ್ತಿದ್ದಾರೆ.

ಯಾವ ವಾಹನಕ್ಕೆ ಎಷ್ಟು ದಂಡ?

ಟೋಯಿಂಗ್ ಮಾಡಿದ ವಾಹನಗಳಿಗೆ ವೀಲ್ ಕ್ಯಾಪ್ ಅಳವಡಿಸಿ, ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ವಾಹನ ಮಾಲೀಕರಿಗೆ ದಂಡ ಪಾವತಿಸಲು 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ದ್ವಿಚಕ್ರ ವಾಹನಗಳಿಗೆ 500 ನೋ-ಪಾರ್ಕಿಂಗ್ ದಂಡದ ಜೊತೆಗೆ 650 ಟೋಯಿಂಗ್ ಶುಲ್ಕ, ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1,000 ನೋ-ಪಾರ್ಕಿಂಗ್ ದಂಡದ ಜೊತೆಗೆ ನಿಗದಿತ ಟೋಯಿಂಗ್ ಶುಲ್ಕ ವಿಧಿಸಲಾಗುತ್ತಿದೆ.

ಇದನ್ನೂ ಓದಿ: ಬೀದಿ ಬದಿ ವ್ಯಾಪಾರಿಗಳ ಎತ್ತಂಗಡಿಯಾದರೂ ಪಾದಚಾರಿಗಳಿಗೆ ಜಾಗವಿಲ್ಲ! ಗಾಂಧಿ ಬಜಾರ್‌ನಲ್ಲಿ ಅಕ್ರಮ ಪಾರ್ಕಿಂಗ್ ಕಾಟ

ಒಂದು ವೇಳೆ ಕೊಟ್ಟಿರುವ 15 ದಿನಗಳ ಗಡುವು ಮುಗಿದರೂ ವಾಹನ ಮಾಲೀಕರು ಬಂದು ವಾಹನಗಳನ್ನು ವಶಕ್ಕೆ ಪಡೆಯದಿದ್ದರೆ, ಜಿಬಿಎ ಅಧಿಕಾರಿಗಳು ಅಂತಹ ವಾಹನಗಳನ್ನು ಹರಾಜು ಹಾಕುವುದು ಸೇರಿದಂತೆ ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

KEA Recruitment 2026: 750 ಭೂಮಾಪಕ ಹುದ್ದೆಗಳಿಗೆ ಅರ್ಜಿ; ಆಗಸ್ಟ್ 20ರವರೆಗೆ ಅವಕಾಶ, 76,100 ರೂ. ವರೆಗೆ ವೇತನ – Kannada News | KEA Recruitment 2026: Apply for 750 Land Surveyor Posts; Last Date Extended to August 20

750 ಭೂಮಾಪಕ ಹುದ್ದೆಗಳಿಗೆ ಅರ್ಜಿImage Credit source: Getty Images

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಉತ್ತಮ ಅವಕಾಶ ನೀಡಿದೆ. ಕರ್ನಾಟಕ ಸರ್ಕಾರದ ಭೂ ದಾಖಲೆಗಳು, ಸರ್ವೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕ (Land Surveyor/Surveyor) ಹುದ್ದೆಗಳ ಭರ್ತಿಗೆ KEA ಅರ್ಜಿ ಆಹ್ವಾನಿಸಿದೆ. ಒಟ್ಟು 750 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆರಂಭಿಕ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆಯ ದಿನವಾಗಿತ್ತು. ಇದೀಗ ಅಭ್ಯರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ಅರ್ಜಿ ಸಲ್ಲಿಕೆ ಗಡುವನ್ನು ಆಗಸ್ಟ್ 20 ರವರೆಗೆ ವಿಸ್ತರಿಸಲಾಗಿದೆ.

ಒಟ್ಟು 750 ಭೂಮಾಪಕ ಹುದ್ದೆಗಳು:

KEA ನೇಮಕಾತಿಯಲ್ಲಿ ಒಟ್ಟು 750 ಭೂಮಾಪಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳನ್ನು ಕರ್ನಾಟಕದ ಉಳಿದ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK) ವೃಂದಗಳಾಗಿ ವಿಂಗಡಿಸಲಾಗಿದೆ. RPC ವಿಭಾಗದಲ್ಲಿ 560 ಹುದ್ದೆಗಳು ಹಾಗೂ KK ವಿಭಾಗದಲ್ಲಿ 190 ಹುದ್ದೆಗಳು ಖಾಲಿ ಇವೆ. ಒಟ್ಟಾರೆಯಾಗಿ 750 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ತಿಂಗಳಿಗೆ 37,500ರಿಂದ 76,100 ರೂ. ವರೆಗೆ ವೇತನ:

ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಭೂಮಾಪಕರಿಗೆ ಹುದ್ದೆಯ ವೇತನ ಶ್ರೇಣಿಯಂತೆ ತಿಂಗಳಿಗೆ 37,500ರಿಂದ 76,100 ರೂ. ವರೆಗೆ ವೇತನ ದೊರೆಯಲಿದೆ. ಕರ್ನಾಟಕ ಸರ್ಕಾರದ ಭೂ ದಾಖಲೆ ಮತ್ತು ಸರ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಶೈಕ್ಷಣಿಕ ಅರ್ಹತೆ ಏನು?

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಅಧಿಸೂಚನೆಯಲ್ಲಿ ಸೂಚಿಸಿರುವ ಸಂಬಂಧಿತ ವಿದ್ಯಾರ್ಹತೆಯನ್ನು ಹೊಂದಿರಬೇಕು. ಲಭ್ಯವಿರುವ ನೇಮಕಾತಿ ವಿವರಗಳ ಪ್ರಕಾರ ಎಂಜಿನಿಯರಿಂಗ್/ತಂತ್ರಜ್ಞಾನ ಪದವಿ ಅಥವಾ ಡಿಪ್ಲೊಮಾ, ಹಾಗೆಯೇ ಗಣಿತ, ಭೌತಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಮಾಹಿತಿ ತಂತ್ರಜ್ಞಾನ, ಇನ್‌ಸ್ಟ್ರುಮೆಂಟೇಶನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಕೃಷಿ ವಿಜ್ಞಾನ ಸೇರಿದಂತೆ ನಿರ್ದಿಷ್ಟ ವಿದ್ಯಾರ್ಹತೆಗಳು ಅರ್ಹತೆ ಪಟ್ಟಿಯಲ್ಲಿ ಸೇರಿವೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ತಮ್ಮ ವಿದ್ಯಾರ್ಹತೆ ನಿರ್ದಿಷ್ಟ ಹುದ್ದೆಗೆ ಅನ್ವಯಿಸುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು.

ವಯೋಮಿತಿ ಎಷ್ಟು?

ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು. ಗರಿಷ್ಠ ವಯೋಮಿತಿ ಸಾಮಾನ್ಯವಾಗಿ 40 ವರ್ಷಗಳು ಎಂದು ನೇಮಕಾತಿ ವಿವರಗಳಲ್ಲಿ ನೀಡಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಸಾಮಾನ್ಯ ಹಾಗೂ ಸಂಬಂಧಿತ OBC ವರ್ಗದ ಅಭ್ಯರ್ಥಿಗಳಿಗೆ ₹750, SC/ST/ಪ್ರವರ್ಗ-1 ಸೇರಿದಂತೆ ಅನ್ವಯಿಸುವ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ₹500 ಶುಲ್ಕವಿದೆ. ಪಾವತಿಯನ್ನು ಆನ್‌ಲೈನ್ ಮೂಲಕ ಮಾಡಬೇಕು. ಅರ್ಜಿ ಶುಲ್ಕಕ್ಕೆ ಸಂಬಂಧಿಸಿದ ಅಂತಿಮ ವಿವರಗಳನ್ನು ಅಭ್ಯರ್ಥಿಗಳು KEA ಅಧಿಸೂಚನೆಯಲ್ಲಿ ಪರಿಶೀಲಿಸುವುದು ಸೂಕ್ತ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಭೂಮಾಪಕ ಹುದ್ದೆಗಳ ಆಯ್ಕೆಗೆ ಆಫ್‌ಲೈನ್ OMR ಮಾದರಿಯ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ನಡೆಯಲಿದೆ. ಲಭ್ಯವಿರುವ ನೇಮಕಾತಿ ಮಾಹಿತಿಯ ಪ್ರಕಾರ ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿಯ ಪ್ರಶ್ನೆಗಳಿದ್ದು, ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳ ವ್ಯವಸ್ಥೆಯೂ ಇದೆ. ಆರಂಭಿಕ ನೇಮಕಾತಿ ವಿವರಗಳ ಪ್ರಕಾರ ಲಿಖಿತ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಪರೀಕ್ಷಾ ದಿನಾಂಕ ಮತ್ತು ವಿಷಯವಾರು ವಿವರಗಳನ್ನು KEA ಅಧಿಕೃತ ಅಧಿಸೂಚನೆಯಂತೆ ಅಭ್ಯರ್ಥಿಗಳು ಪರಿಶೀಲಿಸಬೇಕು.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು KEA ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಭೂಮಾಪಕ ನೇಮಕಾತಿಯ ಅರ್ಜಿ ಲಿಂಕ್ ತೆರೆಯಬೇಕು. ನಂತರ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆ ಮತ್ತು ಇತರ ಅಗತ್ಯ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಅಗತ್ಯ ದಾಖಲೆಗಳು, ಛಾಯಾಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಪಾವತಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿ ಹಾಗೂ ಅರ್ಜಿ ಸಂಖ್ಯೆಯನ್ನು ಭವಿಷ್ಯದ ಬಳಕೆಗಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಮುಖ್ಯ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ:

ಆರಂಭಿಕ ಅಧಿಸೂಚನೆಯ ಪ್ರಕಾರ ಆನ್‌ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 7 ಕೊನೆಯ ದಿನವಾಗಿತ್ತು. ಆದರೆ KEA ಇದೀಗ ಅರ್ಜಿ ಸಲ್ಲಿಕೆ ಗಡುವನ್ನು ಆಗಸ್ಟ್ 20 ರವರೆಗೆ ವಿಸ್ತರಿಸಿದೆ. ಈ ಗಡುವು ವಿಸ್ತರಣೆಯು ನೇಮಕಾತಿಯ ಅರ್ಹತಾ ಮಾನದಂಡಗಳಲ್ಲಿ ಮಾಡಲಾದ ಬದಲಾವಣೆಗಳ ಹಿನ್ನೆಲೆಯಲ್ಲಿ ನೀಡಲಾಗಿದೆ ಎಂದು ವರದಿಯಾಗಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಕೊನೆಯ ದಿನದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್​ಸೈಟ್​ cetonline.karnataka.gov.in ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On – 2:54 pm, Sat, 8 August 26

Source link

IND vs SL: ಭರ್ಜರಿ ಶತಕ ಸಿಡಿಸಿದ ಕನ್ನಡಿಗ ದೇವದತ್ ಪಡಿಕ್ಕಲ್; 3ನೇ ಕ್ರಮಾಂಕ ಫಿಕ್ಸ್ – Kannada News | Devdutt Padikkal Hits Ton in India vs Sri Lanka Practice Game, Eyes No. 3 Slot for Galle Test

ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ಇಲೆವೆನ್ (India vs Sri Lanka ) ನಡುವಿನ ಮೂರು ಪಂದ್ಯಗಳ ಅಭ್ಯಾಸ ಪಂದ್ಯ ಕೊಲಂಬೊದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಶ್ರೀಲಂಕಾ ತಂಡ ಮೊದಲ ದಿನದಾಟದಲ್ಲಿ ಪೂರ್ಣ 90 ಓವರ್​ಗಳನ್ನು ಆಡಿ 8 ವಿಕೆಟ್‌ಗಳನ್ನು ಕಳೆದುಕೊಂಡು 363 ರನ್ ಕಲೆಹಾಕಿತು. ಎರಡನೇ ದಿನದಂದು ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡದ ಪರ ಕನ್ನಡಿಗ ದೇವದತ್ ಪಡಿಕ್ಕಲ್ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪಡಿಕ್ಕಲ್ 121 ಎಸೆತಗಳಲ್ಲಿ 14 ಬೌಂಡರಿಗಳ ಸಹಿತ 103 ರನ್ ಬಾರಿಸಿ ರಿಟೈರ್ಡ್​ ಹರ್ಟ್​ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಭಾರತಕ್ಕೆ ಕಳಪೆ ಆರಂಭ

ಎರಡನೇ ದಿನದಂದು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್ ಖಾತೆಯನ್ನು ತೆರೆಯದೆ ಕೇವಲ 2 ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಬಹುಬೇಗನೇ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್, ನಾಯಕ ರಾಹುಲ್ ಜೊತೆಗೆ ಎರಡನೇ ವಿಕೆಟ್​ಗೆ 92 ರನ್​ಗಳ ಜೊತೆಯಾಟ ನಡೆಸಿದರು. ಇದೇ ವೇಳೆ ತಮ್ಮ ಅರ್ಧಶತಕವನ್ನು ಪೂರೈಸಿದರು. ಆದರೆ ನಾಯಕ ರಾಹುಲ್ 40 ರನ್​ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಇವರಿಬ್ಬರ ಜೊತೆಯಾಟ ಮುರಿದುಬಿತ್ತು.

ಶತಕ ಬಾರಿಸಿದ ಪಡಿಕ್ಕಲ್

ರಾಹುಲ್ ವಿಕೆಟ್ ಪತನದ ಬಳಿಕ ತಂಡದ ಇನ್ನಿಂಗ್ಸ್ ನಿಭಾಯಿಸಿದ ಪಡಿಕ್ಕಲ್ ತಮ್ಮ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿದರು. ಮೂರನೇ ಕ್ರಮಾಂಕದಲ್ಲಿ ಶತಕದ ಇನ್ನಿಂಗ್ಸ್ ಆಡುವ ಮೂಲಕ ಪಡಿಕ್ಕಲ್ ಆಗಸ್ಟ್ 15 ರಿಂದ ಆರಂಭವಾಗಲಿರುವ ಗಾಲೆ ಟೆಸ್ಟ್​ಗೆ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಏಕೆಂದರೆ ಮೂರನೇ ಕ್ರಮಾಂಕದಲ್ಲಿ ಆಡಬೇಕಿದ್ದ ಸಾಯಿ ಸುದರ್ಶನ್ ಗಾಯದ ಕಾರಣದಿಂದಾಗಿ ಇನ್ನೂ ಶ್ರೀಲಂಕಾಕ್ಕೆ ಬಂದಿಲ್ಲ. ಅವರು ಇನ್ನೂ ಕಾಲ್ಬೆರಳಿನ ನೋವಿನಿಂದ ಬಳಲುತ್ತಿದ್ದಾರೆ. ಪರಿಣಾಮವಾಗಿ, ಆಗಸ್ಟ್ 15 ರಂದು ಗಾಲೆಯಲ್ಲಿ ನಡೆಯುವ ಮೊದಲ ಟೆಸ್ಟ್‌ನಲ್ಲಿ ನಂಬರ್-3 ಸ್ಥಾನದಲ್ಲಿ ಯಾರು ಬ್ಯಾಟಿಂಗ್ ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು.

3ನೇ ಕ್ರಮಾಂಕ ಫಿಕ್ಸ್

ಆದರೀಗ ಅಭ್ಯಾಸ ಪಂದ್ಯದಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಪಡಿಕ್ಕಲ್ ಶತಕ ಬಾರಿಸಿದ್ದಾರೆ. ಅಲ್ಲದೆ ಪಡಿಕ್ಕಲ್ ಈ ಹಿಂದೆ ಭಾರತದ ಪರ ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಆದ್ದರಿಂದ, ಮೊದಲ ಟೆಸ್ಟ್‌ಗೆ ಸಾಯಿ ಸುದರ್ಶನ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ದೇವದತ್ ಪಡಿಕ್ಕಲ್​ಗೆ 3ನೇ ಕ್ರಮಾಂಕ ಸಿಗುವುದು ಖಚಿತ.

ದೇವದತ್ ಪಡಿಕ್ಕಲ್ ಇದುವರೆಗೆ ಆಡಿರುವ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ 90 ರನ್ ಗಳಿಸಿದ್ದಾರೆ, ಇದರಲ್ಲಿ ಇಂಗ್ಲೆಂಡ್ ವಿರುದ್ಧದ ಒಂದು ಅರ್ಧಶತಕವೂ ಸೇರಿದೆ. ಆದಾಗ್ಯೂ, ಅವರು 2024 ರಲ್ಲಿ ಈ ಎರಡೂ ಪಂದ್ಯಗಳನ್ನು ಆಡಿದ್ದರು. ಆದ್ದರಿಂದ, ಬಹಳ ಸಮಯದ ನಂತರ, ದೇವದತ್ ಪಡಿಕ್ಕಲ್ ಮತ್ತೆ ಆಡುವ XI ನಲ್ಲಿ ಅವಕಾಶ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಂಚತಾರಾ ಹೋಟೆಲ್ ಸ್ಥಿತಿ ಬಯಲು ಮಾಡಿದ್ದೇವೆ: ತಿನ್ನೋದು ಬಿಡೋದು ಜನರಿಗೆ ಬಿಟ್ಟಿದ್ದು ಎಂದ ಸಚಿವ – Kannada News | Health Minister UT Khader talks about Star Hotels Violating Food Safety Rules

ಬೆಂಗಳೂರು, (ಆಗಸ್ಟ್ 08): ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಾಳಿ ಇಂದು ಕೂಡ ಮುಂದುವರಿದಿದೆ. ನಗರದಲ್ಲಿರುವ ಫೈವ್ ಹಾಗೂ 3 ಸ್ಟಾರ್​​​​​​​ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ಹೋಟೆಲ್‌ಗಳ ಆಹಾರ ಸುರಕ್ಷತೆ ಮತ್ತು ಗುಣಮಟ್ಟ, ಅಡುಗೆಮನೆ, ಆಹಾರ ಸಂಗ್ರಹಣೆ ಮತ್ತು ನೈರ್ಮಲ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ಪಂಚತಾರಾ ಹೋಟೆಲ್ ಗಳ ಅಧ್ವಾನಕ್ಕೆ ಆಕ್ರೋಶಗೊಂಡಿದ್ದಾರೆ. ಸ್ಟಾರ್ ಹೋಟೆಲ್​​​​ಗಳಿ ಸ್ಥಿತಿಯನ್ನು ಜನರಿಗೆ ತಿಳಿಸಿಕೊಟ್ಟಿದ್ದೇವೆ. ಇನ್ನು ತಿನ್ನೋದು ಬಿಡೋದು ಜನರಿಗೆ ಬಿಟ್ಟ ವಿಚಾರ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜ್ಞಾನಭಾರತಿ ವಿವಿ ಆವರಣದಲ್ಲಿ ಹೆಚ್ಚಿದ ಅಪಘಾತ; ಗಾಂಧಿಭವನ ರಸ್ತೆ ಶೀಘ್ರ ಬಂದ್? – Kannada News | Bengaluru University Campus Accidents Rise: Gandhi Bhavan Road Likely to Be Closed

ವಿವಿ ಕುಲಪತಿ ಸಿ. ಶಿವರಾಜು ನೇತೃತ್ವದಲ್ಲಿ ಸಭೆImage Credit source: tv9

ಬೆಂಗಳೂರು, ಆಗಸ್ಟ್ 8: ಬೆಂಗಳೂರು (Bengaluru) ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವ ಕುರಿತು ಚರ್ಚೆ ನಡೆದಿದೆ. ಇತ್ತೀಚೆಗೆ ವಿವಿ ವಿದ್ಯಾರ್ಥಿನಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಡ ಹೆಚ್ಚಾಗಿದೆ. ಜ್ಞಾನಭಾರತಿ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಿಂತ ಸಾರ್ವಜನಿಕರ ಓಡಾಟವೇ ಹೆಚ್ಚಾಗಿದ್ದು, ವಾಹನಗಳ ಸಂಚಾರವೂ ಮಿತಿಮೀರಿದೆ ಎನ್ನಲಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿವಿ ಕುಲಪತಿ ಸಿ. ಶಿವರಾಜು ನೇತೃತ್ವದಲ್ಲಿ ಸಭೆ ನಡೆಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಚರ್ಚಿಸಲಾಗಿದೆ.

ಕ್ಯಾಂಪಸ್‌ನಲ್ಲಿ ವಾಹನಗಳ ವೇಗಕ್ಕೆ ಇನ್ನಷ್ಟು ಮಿತಿ

ಕ್ಯಾಂಪಸ್‌ನಲ್ಲಿ ವಾಹನಗಳ ವೇಗವನ್ನು ಗಂಟೆಗೆ 20 ಕಿಲೋಮೀಟರ್‌ಗೆ ಮಿತಿಗೊಳಿಸುವುದು, ಟ್ರಾಫಿಕ್ ಪೊಲೀಸರ ನಿಯೋಜನೆ ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಸಭೆಯಲ್ಲಿ ವಿವಿ ಕುಲಸಚಿವೆ ಕೆ.ಟಿ. ಶಾಂತಲಾ, ಉಪ ಪೊಲೀಸ್ ಆಯುಕ್ತೆ ಅನಿತಾ ಹದ್ದಣ್ಣನವರ್ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಗಾಂಧಿಭವನ ರಸ್ತೆ ಶೀಘ್ರ ಬಂದ್?

ನಾಗರಬಾವಿಗೆ ಸಂಪರ್ಕ ಕಲ್ಪಿಸುವ ಗಾಂಧಿಭವನ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ಹೆಚ್ಚಿರುವ ಹಿನ್ನೆಲೆಯಲ್ಲಿ, ಈ ರಸ್ತೆಯನ್ನು ಶೀಘ್ರವೇ ಬಂದ್ ಮಾಡುವುದಾಗಿ ಕುಲಪತಿ ಸಿ. ಶಿವರಾಜು ಭರವಸೆ ನೀಡಿದ್ದಾರೆ. ಅಪಘಾತ ನಿಯಂತ್ರಣ ಹಾಗೂ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ವಾತಾವರಣ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಭರ್ಜರಿ ಕಾರ್ಯಾಚರಣೆ, 40 ಮಂದಿ ವಶಕ್ಕೆ

ಇನ್ನು ಜ್ಞಾನಭಾರತಿ ಆವರಣದಲ್ಲಿ ಶೈಕ್ಷಣಿಕ ವಾತಾವರಣವೇ ಕ್ಷೀಣಿಸುತ್ತಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಕ್ಯಾಂಪಸ್‌ನಲ್ಲಿ ಫ್ಲೈಓವರ್ ನಿರ್ಮಾಣದ ಪ್ರಸ್ತಾವನೆಯೂ ಇದ್ದು, ಸಂಚಾರ ದಟ್ಟಣೆ ಹಾಗೂ ಅಪಘಾತಗಳಿಗೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಫೈವ್, ತ್ರಿ ಸ್ಟಾರ್​​​​ ಹೋಟೆಲ್​​​​ಗಳ ಬಂಡವಾಳ ಬಯಲು: ಕೊಳೆತ ತರಕಾರಿ, ಅವಧಿ ಮೀರಿದ ಎಣ್ಣೆ-ಹಾಲು ಪತ್ತೆ – Kannada News | Bengaluru Many Star Hotels Violating Food Safety Rules

ಬೆಂಗಳೂರು, (ಆಗಸ್ಟ್ 08): ಬೆಂಗಳೂರು ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ದಾಳಿ ಇಂದು ಕೂಡ ಮುಂದುವರಿದಿದೆ. ನಗರದಲ್ಲಿರುವ ಫೈವ್ ಹಾಗೂ 3 ಸ್ಟಾರ್​​​​​​​ ಹೋಟೆಲ್‌ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯಿಂದ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿದ್ದು, ಹೋಟೆಲ್‌ಗಳ ಆಹಾರ ಸುರಕ್ಷತೆ ಮತ್ತು ಗುಣಮಟ್ಟ, ಅಡುಗೆಮನೆ, ಆಹಾರ ಸಂಗ್ರಹಣೆ ಮತ್ತು ನೈರ್ಮಲ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 70 ಕೆ.ಜಿ. ಸೋಯಾ ಸಾಸ್ , ಅವಧಿ ಮೀರಿದ ಮೊಸರು, ವಿವಿಧ ಬಗೆಯ ಹಾಳಾದ ತರಕಾರಿಗಳು, 10 ಲೀಟರ್ ಅವಧಿ ಮೀರಿದ ಪಾನೀಯಗಳು ಪತ್ತೆಯಾಗಿದೆ. ಇನ್ನು 5 ಮಾಂಸದ ಮಾದರಿ ಹಾಗೂ 13 ಇತರೆ ಆಹಾರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಕೆಲವು ಮಳಿಗೆಗಳಲ್ಲಿ ಆಹಾರವನ್ನು –18°Cಕ್ಕಿಂತ ಕಡಿಮೆ ತಾಪಮಾನದಲ್ಲಿ ಡೀಪ್ ಫ್ರೀಜಿಂಗ್ ಮಾಡಿರುವುದು ಕಂಡುಬಂದಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ನಿಯಮಗಳು, 2011ರ ಅನ್ವಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಟಾಕ್ಸಿಕ್’ ಟ್ರೈಲರ್ ರಿಲೀಸ್, ಹೇಳಿದ್ದನ್ನು ಮಾಡಿ ತೋರಿಸಿದ ಯಶ್ – Kannada News | Yash once promised to brin Bollywood to Bengaluru, now he achieved it

ಯಶ್ (Yash), ಅದ್ಭುತ ನಟ, ಕನಸುಗಾರ, ರಿಸ್ಕ್ ತೆಗೆದುಕೊಳ್ಳುವ ನಟ ಮತ್ತು ನಿರ್ಮಾಪಕ. ಇದೆಲ್ಲದರ ಜೊತೆಗೆ ಅಪರೂಪದ ಛಲಗಾರ. ಅಂದುಕೊಂಡಿದ್ದನ್ನು ಮಾಡಿತೋರಿಸುವ ಹಠವಾದಿ. ಎತ್ತರಕ್ಕೇರಿದರೂ ತಮ್ಮತನವನ್ನು ಮರೆಯದ ವ್ಯಕ್ತಿತ್ವ ಅವರದ್ದು. ಇದೀಗ ಯಶ್ ನಟಿಸಿ, ಸಹ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 08) ಬಿಡುಗಡೆ ಆಗುತ್ತಿದೆ. ಹಲವಾರು ಬಾಲಿವುಡ್ ತಾರೆಯರು, ಮಾಧ್ಯಮದವರು ಬೆಂಗಳೂರಿಗೆ ಬಂದಿದ್ದಾರೆ. ಈ ಸಮಯದಲ್ಲಿ ನಟ ಯಶ್ ಅವರು ಹಿಂದೊಮ್ಮೆ ಆಡಿದ್ದ ಮಾತನ್ನು ಕೆಲ ಅಭಿಮಾನಿಗಳು ನೆನಪು ಮಾಡಿಕೊಂಡಿದ್ದಾರೆ.

ಕೋವಿಡ್​​ಗೆ ಮುಂಚೆ, ಐಫಾ, ಫಿಲಂಫೇರ್ ಅವಾರ್ಡ್​​ ಕಾರ್ಯಕ್ರಮದ ವಿಷಯವಾಗಿ ತುಸು ಗೊಂದಲ ಉಂಟಾಗಿದ್ದು, ಈ ಕಾರ್ಯಕ್ರಮಗಳಲ್ಲಿ ಕನ್ನಡಿಗರಿಗೆ ಪ್ರಾಧಾನ್ಯತೆ ನೀಡಲಾಗುವುದಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಆಗ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ಬೆಂಗಳೂರಿನಲ್ಲೇ ನಡೆಯುವಂತಾಗಬೇಕು ಎಂದು ನಟ ಯಶ್ ಸೇರಿದಂತೆ ಇನ್ನಿತರರು ಪ್ರಯತ್ನ ಪಟ್ಟಿದ್ದರು. ಆಗ ಯಶ್, ‘ಬಾಲಿವುಡ್​​ ಅನ್ನು ಇಲ್ಲಿದೆ (ಬೆಂಗಳೂರಿಗೆ) ಕರೆಸಿಕೊಳ್ಳಬೇಕು’ ಎಂದಿದ್ದರು. ಈಗ ‘ಟಾಕ್ಸಿಕ್’ ಟ್ರೈಲರ್​​ಗೆ ನಿಜಕ್ಕೂ ಬಾಲಿವುಡ್​​ ಅನ್ನು ಬೆಂಗಳೂರಿಗೆ ಕರೆಸಿದ್ದಾರೆ.

ಬಾಲಿವುಡ್​ನ ತಾರೆಯರು ಮಾತ್ರವೇ ಅಲ್ಲದೆ, ದೇಶದಾದ್ಯಂತ ಮಾಧ್ಯಮದವರು, ಸಿನಿಮಾ ಪ್ರೇಮಿಗಳು ಇಂದು ಬೆಂಗಳೂರಿಗೆ ಬಂದಿದ್ದಾರೆ. ನಟ ಯಶ್ ‘ಟಾಕ್ಸಿಕ್’ ಮೂಲಕ ಎಲ್ಲರನ್ನೂ ಬೆಂಗಳೂರಿಗೆ ಬರುವಂತೆ ಮಾಡಿದ್ದಾರೆ. ಆ ಮೂಲಕ ಹಿಂದೊಮ್ಮೆ ಹೇಳಿದ್ದ ಮಾತನ್ನು ಯಶ್ ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: ಗೂಗ್ಲಿಯಲ್ಲಿ ಯಶ್​​ಗೆ ಬರೆದ ಡೈಲಾಗ್ ನಿಜವಾಯ್ತು; ಜಾಗತಿಕ ಮಟ್ಟದಲ್ಲಿ ಟಾಕ್ಸಿಕ್ ಹವಾ

‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ಬಾಲಿವುಡ್​​ ನಟಿಯರಾದ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ. ದಕ್ಷಿಣದ ಸ್ಟಾರ್ ನಟಿ ನಯನತಾರಾ, ಕನ್ನಡದ ನಟಿ ರುಕ್ಮಿಣಿ ವಸಂತ್ ಅವರುಗಳು ಈಗಾಗಲೇ ಬೆಂಗಳೂರಿಗೆ ಬಂದಿದ್ದು, ಸಂಜೆಯ ಅದ್ಧೂರಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ನಟಿಯರು ಮಾತ್ರವೇ ಅಲ್ಲದೆ, ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿರುವ ಹಲವಾರು ಖ್ಯಾತನಾಮರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 8) ಸಂಜೆ ಏಳು ಗಂಟೆಗೆ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಮುಖ ನಟ-ನಟಿಯರು, ತಂತ್ರಜ್ಞರು, ನಿರ್ಮಾಪಕರು ಇನ್ನೂ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:34 pm, Sat, 8 August 26

Source link

‘ಸೋಷಿಯಲ್ ಮೀಡಿಯಾ ವಿಜಿಲಾಂಟಿಸಂ ಸಹಿಸಲ್ಲ’: ಅಕ್ರಮ ವಲಸಿಗರ ವೀಡಿಯೊ ವೈರಲ್ ಮಾಡುವವರಿಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್ – Kannada News | Karnataka Cracks Down on Illegal Migrants; Kharge Warns Against Social Media Policing.

ಬೆಂಗಳೂರು, ಆ.8: ರಾಜ್ಯ ರಾಜಧಾನಿಯಲ್ಲಿ ವಲಸಿಗರ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂಘೋಷಿತ ತನಿಖೆ ನಡೆಸಿ ವೀಡಿಯೊಗಳನ್ನು ಪೋಸ್ಟ್ ಮಾಡುವುದು ಮತ್ತು ಸರ್ಕಾರದ ಬಗ್ಗೆ ಟೀಕಿಸುವುದು ನಿಲ್ಲಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂತಹ “ವಿಜಿಲಾಂಟಿಸಂ” ಅಥವಾ “ಮಾರಲ್ ಪೋಲಿಸಿಂಗ್” ಅನ್ನು ಸರ್ಕಾರ ಸಹಿಸುವುದಿಲ್ಲ ಎಂದಿದ್ದಾರೆ. ಮಾಹಿತಿ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರಿಂದ ಅಂತರರಾಷ್ಟ್ರೀಯ ಜಾಲಗಳು ಎಚ್ಚೆತ್ತುಕೊಳ್ಳುತ್ತವೆ ಮತ್ತು ಸರ್ಕಾರದ ರಹಸ್ಯ ಕಾರ್ಯಾಚರಣೆಗಳಿಗೆ ಅಡ್ಡಿಯಾಗುತ್ತದೆ ಎಂದು ಖರ್ಗೆ ತಿಳಿಸಿದರು. ನಿಜವಾದ ದೇಶಭಕ್ತರು ಮತ್ತು ರಾಜ್ಯದ ಹಿತಾಸಕ್ತಿ ಬಯಸುವವರು ಮಾಹಿತಿ ಇದ್ದರೆ ಅದನ್ನು ನೇರವಾಗಿ ಪೊಲೀಸರಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು. ಸರ್ಕಾರವು ಈಗಾಗಲೇ ಬಾಂಗ್ಲಾದೇಶ ಮತ್ತು ಆಫ್ರಿಕಾ ಸೇರಿದಂತೆ ವಿವಿಧ ಕಡೆಯಿಂದ ಬಂದಿರುವ ಸುಮಾರು 1000 ವಲಸಿಗರನ್ನು ಕಳೆದ ಮೂರು ತಿಂಗಳಲ್ಲಿ ಪತ್ತೆ ಹಚ್ಚಿ ಎಫ್‌ಆರ್‌ಒಗೆ ಹಸ್ತಾಂತರಿಸಿದೆ. ಬಿಎಸ್‌ಎಫ್ ಮತ್ತು ಎಫ್‌ಆರ್‌ಒ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸರ್ಕಾರ ಈ ವಿಚಾರದಲ್ಲಿ ಶೇ.100ರಷ್ಟು ಕಠಿಣ ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದು ಖರ್ಗೆ ಹೇಳಿದ್ದಾರೆ. ಇಂತಹ ಪ್ರಚಾರದ ಕೃತ್ಯಗಳಿಂದ ಭದ್ರತೆಗೆ ಧಕ್ಕೆ ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಕರ್ಷಕ ಅರ್ಧಶತಕ ಬಾರಿಸಿದ ದೇವದತ್ ಪಡಿಕ್ಕಲ್ – Kannada News | Devdutt Paddikal smashed a brilliant fifty in warmup match for India

ಭಾರತ ಹಾಗೂ ಶ್ರೀಲಂಕಾ ನಡುವಿನ ಮುಂಬರುವ ಟೆಸ್ಟ್ ಸರಣಿಗೆ ಸಿದ್ಧತೆಯಾಗಿ ಕೊಲಂಬೋದ ಎನ್‌ಸಿಸಿ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಪ್ರೆಸಿಡೆಂಟ್ಸ್ ಇಲೆವೆನ್ (SLC XI) ವಿರುದ್ಧದ ಈ ಪಂದ್ಯದ ಎರಡನೇ ದಿನದಾಟದಲ್ಲಿ ಪಡಿಕ್ಕಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭಿಕ ಆಘಾತಕ್ಕೆ ಪಡಿಕ್ಕಲ್ ಆಸರೆ:

ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಖಾತೆ ತೆರೆಯುವ ಮುನ್ನವೇ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ ಸೇರಿದರು. ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ದೇವದತ್ ಪಡಿಕ್ಕಲ್, ಮತ್ತೊಬ್ಬ ಕನ್ನಡಿಗ ಕೆ.ಎಲ್. ರಾಹುಲ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದರು.

ಎದುರಾಳಿ ಬೌಲರ್‌ಗಳನ್ನು ಅತ್ಯಂತ ನಿರಾಳವಾಗಿ ಎದುರಿಸಿದ ಪಡಿಕ್ಕಲ್, ಕೇವಲ 61 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ತಮಗೆ ಸಿಕ್ಕ ಅವಕಾಶವನ್ನು ಭರ್ಜರಿ ಅರ್ಧಶತಕವನ್ನಾಗಿ ಪರಿವರ್ತಿಸಿದರು.

ಇದೀಗ ಆಕರ್ಷಕ ಅರ್ಧಶತಕದೊಂದಿಗೆ ಬ್ಯಾಟಿಂಗ್ ಮುಂದುವರೆಸಿರುವ ದೇವದತ್ ಪಡಿಕ್ಕಲ್ ಮೊದಲ ಟೆಸ್ಟ್​ನಲ್ಲಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ಈ ಹಿಂದೆ ಟೀಮ್ ಇಂಡಿಯಾ ಪರ ಸಾಯಿ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದರು.

ಬೆರಳಿನ ಗಾಯದ ಕಾರಣ ಸಾಯಿ ಸುದರ್ಶನ್ ಅಭ್ಯಾಸ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇತ್ತ ಸಿಕ್ಕ ಅವಕಾಶವನ್ನು ಬಳಿಸಿಕೊಂಡಿರುವ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಹೀಗಾಗಿ ಆಗಸ್ಟ್ 15 ರಿಂದ ಶುರುವಾಗಲಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಕೂಡ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಮೊದಲ ಇನಿಂಗ್ಸ್​:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ XI ತಂಡವು ಮೊದಲ ಇನಿಂಗ್ಸ್​ನಲ್ಲಿ 8 ವಿಕೆಟ್ ಕಳೆದುಕೊಂಡು 363 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ. ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿರುವ ಟೀಮ್ ಇಂಡಿಯಾ 32 ಓವರ್​ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 127 ರನ್​ಗಳಿಸಿದೆ.

ಶ್ರೀಲಂಕಾ  XI ತಂಡ (SLC XI): ಸೋನಾಲ್ ದಿನುಷಾ (ನಾಯಕ), ನಿಶಾನ್ ಮದುಷ್ಕ, ಅಂಜಲಾ ಬಂಡಾರ (ವಿಕೆಟ್ ಕೀಪರ್), ರವಿಂದು ರಶಾಂಥ, ಪಸಿಂದು ಸೂರಿಯಬಂಡಾರ, ಪವನ್ ರತ್ನಾಯಕೆ, ಅಹಾನ್ ವಿಕ್ರಮಸಿಂಘೆ, ನಿಪುನ್ ಧನಂಜಯ, ಲಹೀರು ಕುಮಾರ, ವಿಶ್ವ ಫೆರ್ನಾಂಡೋ, ಅಸಂಕ ಮನೋಜ್, ಇಸಿತ ವಿಜೇಸುಂದರ, ರಮೇಶ್ ಮೆಂಡಿಸ್, ಕೇಸರ ನುವಂತ ಮತ್ತು ದಿಲುಮ್ ಸುದೀರ.

ಇದನ್ನೂ ಓದಿ: 5000 ಏಕದಿನ ಪಂದ್ಯಗಳು: ಒಡಿಐ ಕ್ರಿಕೆಟ್​ನಲ್ಲಿ ಭಾರತೀಯದ್ದೇ ಅಧಿಪತ್ಯ!

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಆಖಿಬ್ ನಬಿ.

Published On – 1:56 pm, Sat, 8 August 26

Source link

Exit mobile version