ಬೆಂಗಳೂರು, ಆ.8: ಕರ್ನಾಟಕದ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಕೆ.ಎಸ್. ಬಸವಂತಪ್ಪ ಅವರು ಮೊದಲ ಬಾರಿಗೆ ಸಚಿವರಾದ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಕ್ಷೇತ್ರದ ಜನರ ಆಶೀರ್ವಾದದಿಂದ ಈ ಸ್ಥಾನ ಲಭಿಸಿದೆ ಎಂದು ಹೇಳಿರುವ ಅವರು, ಮಾಯಕೊಂಡ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಪ್ರಮುಖವಾಗಿ, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಬೆಳೆ ಹಾನಿ ಪರಿಶೀಲಿಸಿ ಪರಿಹಾರ ಒದಗಿಸಲು ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅಲ್ಲದೆ, ತಮ್ಮ ಕ್ಷೇತ್ರದ ಬಹುದಿನಗಳ ಬೇಡಿಕೆಯಾದ 22 ಕೆರೆಗಳ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧರಾಗಿದ್ದಾರೆ. ಹಿಂದೆ ವಿಫಲವಾಗಿದ್ದ ಈ ಯೋಜನೆಯನ್ನು ಪುನಶ್ಚೇತನಗೊಳಿಸಲು 400 ಕೋಟಿ ರೂ. ಅನುದಾನವನ್ನು ತರಿಸಿದ್ದು, ನೀರಿಗಾಗಿ ಹೋರಾಟ ನಡೆಸಿದ್ದ ತಮ್ಮ ಕನಸು ನನಸಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪೌರಕಾರ್ಮಿಕರ ಪುತ್ರನಾಗಿ ಸಚಿವ ಸ್ಥಾನಕ್ಕೇರಿದ್ದು, ರಾಹುಲ್ ಗಾಂಧಿಯವರ ಸಾಮಾಜಿಕ ನ್ಯಾಯ ಮತ್ತು ಯುವಕರಿಗೆ ಆದ್ಯತೆ ನೀಡುವ ಕನಸು ನನಸಾಗಿದೆ ಎಂದು ಬಸವಂತಪ್ಪ ತಿಳಿಸಿದ್ದಾರೆ. ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸಿ ರಾಜ್ಯದ ಜನತೆಗೆ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ, (ಆಗಸ್ಟ್ 08): ಸಚಿವ ಸ್ಥಾನ ಸಿಕ್ಕ ಬಳಿಕ ಎಚ್ಸಿ ಬಾಲಕೃಷ್ಣ ಅವರು ಮೊದಲ ಬಾರಿಗೆ ಸ್ವಕ್ಷೇತ್ರ ಮಾಗಡಿಗೆ ಆಗಮಿಸಿದ್ದು, ಈ ವೇಳೆ ಅವರ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಕೋರಿದ್ದಾರೆ. ಈ ವೇಳೆ ಕಾಂಗ್ರೆಸ್ ಮುಖಂಡರೊಬ್ಬರು H.M.ರೇವಣ್ಣ ಅನ್ನೋ ಬದಲು H.D.ರೇವಣ್ಣ ಎಂದು ಕರೆದಿದ್ದಾರೆ. ಇದರಿಂದ ಸಿಡಿಮಿಡಿಗೊಂಡ ಹೆಚ್ಎಂ ರೇವಣ್ಣ, ಅವನ ಹೆಸರು ಯಾಕೆ ಹೇಳುತ್ತೀಯಾ? ನಾನು ಮಾಗಡಿಯ ರೇವಣ್ಣ, ಹಾಗೆ ಇರುತ್ತೇನೆ ಎಂದಿದ್ದಾರೆ. ರೇವಣ್ಣನವರ ಮಾತಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ನಗೆಗಡಲಲ್ಲಿ ತೇಲಾಡಿದರು.
ನವದೆಹಲಿ, ಆಗಸ್ಟ್ 8: ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಇತ್ತೀಚಿನ ಹೇಳಿಕೆಗಳನ್ನು ಪ್ರಸ್ತಾಪಿಸಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವ್ಯಂಗ್ಯವಾಡಿದ್ದರು. ಇದರಿಂದ ರಾಹುಲ್ ಗಾಂಧಿ ಮತ್ತು ಕಿರಣ್ ರಿಜಿಜು ನಡುವೆ ತೀವ್ರ ವಾಗ್ದಾಳಿ ನಡೆದಿದೆ. ಮಹಿಳಾ ಸ್ವಾತಂತ್ರ್ಯದ ಬಗ್ಗೆ ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು “ಪಾಸಿಟಿವ್ ಸಂದೇಶ” ಎಂದು ಬಣ್ಣಿಸಿದ ಕಿರಣ್ ರಿಜಿಜು, “ಮಹಿಳೆಯರ ವಿಷಯದಲ್ಲಿ ರಾಹುಲ್ ಗಾಂಧಿಯ ಮನಸ್ಸಿನಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತಿದೆ” ಎಂದು ಕಾಲೆಳೆದರು. ಇದಕ್ಕೆ ರಾಹುಲ್ ಗಾಂಧಿಯೂ ತಿರುಗೇಟು ನೀಡಿದ್ದಾರೆ.
ಕಿರಣ್ ರಿಜಿಜು ಅವರ ಕಾಮೆಂಟ್ಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ, ಈ ಮಸೂದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಗೆ ಏಕೆ ಜೋಡಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು.
“The energy of India’s women is trapped. It is not allowed to express itself. It is not allowed to imagine. For me, no country can be successful if its women are not expressing themselves.
And I think a lot of my politics, and a lot of what politics should be in this country, is… pic.twitter.com/qo3P42kurY
ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನವು ಬಹುತೇಕ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸುವ ಕುರಿತು ಕಿರಣ್ ರಿಜಿಜು ಕಳೆದ ವಾರದಲ್ಲಿ ರಾಹುಲ್ ಗಾಂಧಿ ಅವರನ್ನು ಹಲವು ಬಾರಿ ಸಂಪರ್ಕಿಸಿದ್ದಾರೆ. ಇದು ಸಂವಿಧಾನ ತಿದ್ದುಪಡಿ ವಿಧೇಯಕವಾಗಿರುವುದರಿಂದ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಆದರೆ, ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಂತವಾಗಿ ಈ ಸಂಖ್ಯಾಬಲವಿಲ್ಲ. ಹೀಗಾಗಿ ಈ ಸಂಪರ್ಕ ಸಭೆಗಳು ನಡೆದಿವೆ.
ಕಿರಣ್ ರಿಜಿಜು ಮತ್ತು ರಾಹುಲ್ ಗಾಂಧಿ ನಡುವಿನ ವಾಗ್ದಾಳಿ:
ಇಂದು ಕೂಡ ಈ ಮಸೂದೆಗೆ ಬೆಂಬಲ ನೀಡುವಂತೆ ಸಚಿವ ಕಿರಣ್ ರಿಜಿಜು ಮತ್ತೆ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದರು. ಸೂಕ್ತ ಸಮಯ ನೋಡಿದ ಸಚಿವರು, ಮಹಿಳೆಯರಿಗೆ ಹೆಚ್ಚಿನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಬೇಕೆಂದು ರಾಹುಲ್ ಗಾಂಧಿ ಕರೆ ನೀಡಿದ್ದ ವಿಡಿಯೋವನ್ನು ಹಂಚಿಕೊಂಡು, ವಿರೋಧ ಪಕ್ಷದ ನಾಯಕರಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತಿದೆ ಎಂದಿದ್ದಾರೆ.
ರಾಹುಲ್ ಗಾಂಧಿಯ ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ಇದು ಕಾಂಗ್ರೆಸ್ ಕಡೆಯಿಂದ ಪಾಸಿಟಿವ್ ಸಂದೇಶವೆಂದು ತೋರುತ್ತದೆ. ಮಹಿಳೆಯರ ಕುರಿತು ರಾಹುಲ್ ಗಾಂಧಿ ಅವರ ಮನಸ್ಸಿನಲ್ಲಿ ಸ್ಪಷ್ಟವಾದ ಬದಲಾವಣೆ ಕಂಡುಬರುತ್ತಿದೆ” ಎಂದು ಹೇಳಿದರು. ಅಲ್ಲದೆ, ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿಧೇಯಕವನ್ನು ಬೇಷರತ್ತಾಗಿ ಬೆಂಬಲಿಸಬೇಕೆಂದು ಅವರು ಕೋರಿದರು.
This seems to be a positive message from the Congress Party. There’s a visible change of heart in Shri Rahul Gandhi Ji about the Women. Now, I hope Congress Party will support the Women’s Reservation Bill unconditionally. https://t.co/nSzH2C6Orf
ಈ ಪ್ರತಿಕ್ರಿಯೆಗೆ 2 ಗಂಟೆಗಳ ಒಳಗಾಗಿ ರಾಹುಲ್ ಗಾಂಧಿ ಅವರಿಂದ ತಿರುಗೇಟು ಬಂದಿದೆ. ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ 2023ರಲ್ಲೇ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರಗೊಂಡಿದೆ ಎಂಬುದನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕಿರಣ್ ರಿಜಿಜು ಅವರಿಗೆ ನೆನಪಿಸಿದರು. “ಕಾಂಗ್ರೆಸ್ ಸಂಪೂರ್ಣ ಬೆಂಬಲದೊಂದಿಗೆ ವಿಧೇಯಕವನ್ನು ಈಗಾಗಲೇ ಸರ್ವಾನುಮತದಿಂದ ಅಂಗೀಕರಿಸಲಾಗಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
“ಪ್ರಶ್ನೆ ಏನೆಂದರೆ, 3 ವರ್ಷಗಳ ನಂತರವೂ ಇದನ್ನು ಏಕೆ ಜಾರಿಗೆ ತಂದಿಲ್ಲ ಮತ್ತು ಈಗ ನೀವು ಅದನ್ನು ಅನಗತ್ಯವಾಗಿ ಕ್ಷೇತ್ರ ಪುನರ್ ವಿಂಗಡಣೆಗೆ ಏಕೆ ಜೋಡಿಸಲು ಬಯಸುತ್ತೀರಿ?” ಎಂದು ರಾಹುಲ್ ಗಾಂಧಿ ಮತ್ತಷ್ಟು ಪ್ರಶ್ನಿಸಿದರು. ಕೇಂದ್ರ ಸರ್ಕಾರವು 2023ರ ಕಾಯ್ದೆಯನ್ನು ಯಾವುದೇ ಷರತ್ತುಗಳಿಲ್ಲದೆ ಜಾರಿಗೆ ತರಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಮಹಿಳಾ ಮೀಸಲಾತಿ ವಿಧೇಯಕ ಅಥವಾ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು 2023ರಲ್ಲಿ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದವು. ಇದು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಉದ್ದೇಶ ಹೊಂದಿದೆ. ಆದರೆ, 2023ರ ಕಾಯ್ದೆಯು ಅದರ ಜಾರಿಯನ್ನು ಭವಿಷ್ಯದ ಜನಗಣತಿಗೆ ಜೋಡಿಸಿತ್ತು. ಇದರಿಂದಾಗಿ ಇದರ ಅನುಷ್ಠಾನವು 2034ರ ನಂತರಕ್ಕೆ ತಳ್ಳಲ್ಪಡುತ್ತಿತ್ತು. ಹೊಸ ವಿಧೇಯಕವು 2029ರ ಲೋಕಸಭಾ ಚುನಾವಣೆಗೆ ಮೊದಲು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು 2011ರ ಜನಗಣತಿಯನ್ನು ಬಳಸಿಕೊಳ್ಳಲು ಬಯಸುತ್ತದೆ. ಆದರೆ ಸಂಸದೀಯ ಕ್ಷೇತ್ರಗಳನ್ನು ಮರುರಚಿಸಲು ವಿಧೇಯಕವನ್ನು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಜೋಡಿಸುವ ಸರ್ಕಾರದ ನಡೆ ಬಿಕ್ಕಟ್ಟಿಗೆ ಕಾರಣವಾಗಿದೆ.
रिजिजू जी, संसदीय कार्य मंत्री होने के नाते आपसे बेहतर यह कौन जानता होगा – महिला आरक्षण विधेयक 2023 में ही सर्वसम्मति से पारित हो चुका है, कांग्रेस के पूर्ण समर्थन के साथ।
सवाल यह है कि तीन साल बाद भी वह लागू क्यों नहीं हुआ और अब आप उसे परिसीमन से बेवजह क्यों जोड़ना चाहते हैं?… https://t.co/1HeBna8v8L
ಈ ಪ್ರಕ್ರಿಯೆಯಿಂದ ಲೋಕಸಭಾ ಒಟ್ಟು ಸೀಟುಗಳ ಸಂಖ್ಯೆ 543ರಿಂದ 850ಕ್ಕೆ ಏರಿಕೆಯಾಗಲಿದೆ. ಅವುಗಳಲ್ಲಿ ಶೇ. 33 ಅಂದರೆ 273 ಸೀಟುಗಳು ಮಹಿಳೆಯರಿಗೆ ಕಾಯ್ದಿರಿಸಲ್ಪಡುತ್ತವೆ. 2011ರ ಜನಗಣತಿಯ ಆಧಾರದ ಮೇಲೆ ಜನಸಂಖ್ಯೆ-ಆಧಾರಿತ ಕ್ಷೇತ್ರ ಪುನರ್ವಿಂಗಡಣೆ ನಡೆಸಿದರೆ, ದಕ್ಷಿಣದ ರಾಜ್ಯಗಳಿಗಿಂತ ಜನಸಂಖ್ಯೆ ಬೆಳವಣಿಗೆ ಹೆಚ್ಚಾಗಿರುವ ಉತ್ತರ ಭಾರತಕ್ಕೆ ಅನ್ಯಾಯವಾಗಿ ಹೆಚ್ಚಿನ ಲಾಭ ಸಿಗುತ್ತದೆ ಎಂದು ವಿರೋಧ ಪಕ್ಷಗಳು ವಾದಿಸಿವೆ. ಕಳೆದ ಏಪ್ರಿಲ್‌ನಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ 131ನೇ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸುವ ಪ್ರಯತ್ನ ವಿಫಲವಾಗಿತ್ತು. ಈಗ ಸರ್ಕಾರ ಮುಂಗಾರು ಅಧಿವೇಶನದಲ್ಲೇ ಈ ಮಸೂದೆಯನ್ನು ಅಂಗೀಕರಿಸಲು ತನ್ನ ಪ್ರಯತ್ನವನ್ನು ಪುನರಾರಂಭಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಯಶ್ (Yash) ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಟ್ರೈಲರ್ ಇಂದು (ಆಗಸ್ಟ್ 08) ಬಿಡುಗಡೆ ಆಗಲಿದೆ. ಬೆಂಗಳೂರಿನ ಎಎಂಬಿ ಮಾಲ್ನಲ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಚಿತ್ರತಂಡ ಹಮ್ಮಿಕೊಂಡಿದೆ. ಈಗಾಗಲೇ ಬಾಲಿವುಡ್ ತಾರೆಯರು, ಚಿತ್ರತಂಡದ ಹಲವರು ಬೆಂಗಳೂರು ಸೇರಿದ್ದಾಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ತಯಾರಿ ಹೇಗಿದೆ? ಅಲ್ಲಿನ ವಾತಾವರಣ ಹೇಗಿದೆ? ಇನ್ನಿತರೆ ದೃಶ್ಯ ಸಹಿತ ವರದಿ ಇಲ್ಲಿದೆ. ವಿಡಿಯೋ ನೋಡಿ….
ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡ ತೆಲುಗು ಸಿನಿಮಾ ‘ಲೆನಿನ್’ ಈ ವಾರ ಒಟಿಟಿಗೆ ಬಂದಿದೆ. ಅಕ್ಕಿನೇನಿ ನಾಗಾರ್ಜುನ ಎರಡನೇ ಪುತ್ರ ಅಕ್ಕಿನೇನಿ ಅಖಿಲ್ ಹಾಗೂ ಭಾಗ್ಯಶ್ರೀ ಬೋರ್ಸೆ ನಟಿಸಿರುವ ಈ ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.
ನೆಲಮಂಗಲ, ಆಗಸ್ಟ್ 08: ಪ್ರಸಿದ್ಧ ಪ್ರವಾಸಿ ಹಾಗೂ ಧಾರ್ಮಿಕ ತಾಣವಾದ ಬೆಂಗಳೂರು ಗ್ರಾಮಾಂತರ (bengaluru rural) ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ 31 ವರ್ಷದ ಉದ್ಯಮಿಯ ಮಗ ಅನುಮಾನಾಸ್ಪದವಾಗಿ ನಾಪತ್ತೆ (missing) ಆಗಿರುವ ಘಟನೆ ನಡೆದಿದೆ. ಪ್ರತೀಕ್ ಉಪಾಧ್ಯಾಯ ನಾಪತ್ತೆಯಾಗಿರುವ ಉದ್ಯಮಿಯ ಮಗ. ನಿನ್ನೆ ಬೆಳಿಗ್ಗೆಯಿಂದ ಕಾಣೆಯಾಗಿದ್ದು, ಆತನ ಮೊಬೈಲ್ ಫೋನ್ ಬೇರೊಂದು ಕಡೆ ಸ್ವಿಚ್ ಆಫ್ ಆಗಿರುವುದರಿಂದ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?
ಪ್ರತೀಕ್ ಉಪಾಧ್ಯಾಯ ಐದು ದಿನಗಳ ಹಿಂದೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಬಾಡಿಗೆಗೆ ಪಡೆದು ಶಿವಗಂಗೆಗೆ ಬಂದಿದ್ದ. ಬೆಟ್ಟದ ಕೆಳಭಾಗದಲ್ಲಿ ಬೈಕ್ ಪಾರ್ಕ್ ಮಾಡಿ, ನಿನ್ನೆ ಬೆಳಿಗ್ಗೆ ಬೆಟ್ಟ ಹತ್ತಿದ್ದ. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ, ಆತ ಬೆಟ್ಟ ಹತ್ತಿದ ನಂತರ ವಾಪಸ್ ಬಂದಿದ್ದಾನೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಶಾಂತಲಾ ಡ್ರಾಪ್ ಬಳಿ ಪೊಲೀಸರ ಶೋಧ
ಸಮುದ್ರ ಮಟ್ಟದಿಂದ ಸುಮಾರು 4,800 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಟ್ಟವು ಮರಗಿಡಗಳು ಹಾಗೂ ಕಲ್ಲು ಬಂಡೆಗಳಿಂದ ಕೂಡಿದ್ದು ಅತ್ಯಂತ ಕಡಿದಾಗಿದೆ. ಬೆಟ್ಟದ ಮೇಲಿರುವ ಅತ್ಯಂತ ಅಪಾಯಕಾರಿ ತಾಣವಾದ ಶಾಂತಲಾ ಡ್ರಾಪ್ ಬಳಿ ಯುವಕ ಜಾರಿ ಬಿದ್ದಿರಬಹುದು ಅಥವಾ ಅಲ್ಲಿಯೇ ಎಲ್ಲಾದರೂ ಸಿಲುಕಿಕೊಂಡಿರಬಹುದು ಎಂಬ ಶಂಕೆಯ ಮೇಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಇನ್ನು ನೆಲಮಂಗಲ ಹಾಗೂ ದಾಬಸ್‌ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಕಡಿದಾದ ಶಾಂತಲಾ ಡ್ರಾಪ್ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾಗಳನ್ನು ಬಳಸಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಯುವಕನ ಮೊಬೈಲ್ ಲೋಕೇಶನ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಮುಂದುವರಿದಿದೆ.
ನವದೆಹಲಿ: ಸಾಮಾನ್ಯವಾಗಿ 12ನೇ ವಯಸ್ಸಿನಲ್ಲಿ ಮಕ್ಕಳು ಶಾಲೆಗೆ ಹೋಗುವುದು, ಸ್ನೇಹಿತರೊಂದಿಗೆ ಆಟವಾಡುವುದು, ಟಿವಿ ನೋಡುವುದು ಸೇರಿದಂತೆ ತಮ್ಮದೇ ಆದ ಪ್ರಪಂಚದಲ್ಲಿ ತೊಡಗಿರುತ್ತಾರೆ. ಆದರೆ ಮನ ಜಂಪಲ್(Mana Jampal) ಎಂಬ ಬಾಲಕಿ ಮಾತ್ರ ಈ ವಯಸ್ಸಿನಲ್ಲೇ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾಳೆ. ಕೇವಲ 12ನೇ ವಯಸ್ಸಿನಲ್ಲೇ AI ಆಧಾರಿತ ಸ್ಟಾರ್ಟ್ಅಪ್ ಒಂದನ್ನು ಸ್ಥಾಪಿಸಿರುವ ಆಕೆ, ತಂತ್ರಜ್ಞಾನ ಲೋಕದಲ್ಲಿ ಅನೇಕರ ಗಮನ ಸೆಳೆದಿದ್ದಾಳೆ.
9ನೇ ವಯಸ್ಸಿನಲ್ಲೇ Python ಕಲಿಕೆ:
ಮನ ಜಂಪಲ್ನ ತಂತ್ರಜ್ಞಾನದ ಪ್ರಯಾಣ ಬಹಳ ಚಿಕ್ಕ ವಯಸ್ಸಿನಲ್ಲೇ ಆರಂಭವಾಯಿತು. ಆಕೆ ಕೇವಲ 9ನೇ ವಯಸ್ಸಿನಲ್ಲೇ Python ಕೋಡಿಂಗ್ ಕಲಿಯಲು ಆರಂಭಿಸಿದಳು. 10ನೇ ವಯಸ್ಸಿಗೆ ತಂತ್ರಜ್ಞಾನದ ಹಲವು ವಿಷಯಗಳಲ್ಲಿ ಪರಿಣತಿ ಪಡೆಯಲು ಮುಂದಾದಳು. 11ನೇ ವಯಸ್ಸಿನಲ್ಲಿ AI ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿ, ಇದೀಗ ತಮ್ಮದೇ ಆದ ‘Voxa’ ಎಂಬ AI ಸ್ಟಾರ್ಟ್ಅಪ್ ಅನ್ನು ಸ್ಥಾಪಿಸಿದ್ದಾಳೆ.
ತಂದೆಯ ಕಚೇರಿಯಿಂದ ಹುಟ್ಟಿದ AI ಕಂಪನಿ:
ಮನ AI ಕಂಪನಿಯ ಹಿಂದಿನ ಕಲ್ಪನೆಯೂ ಕುತೂಹಲಕಾರಿಯಾಗಿದೆ. ತಮ್ಮ ತಂದೆಯ ಕಚೇರಿಗೆ ಭೇಟಿ ನೀಡುತ್ತಿದ್ದ ವೇಳೆ, ಅಲ್ಲಿನ ಉದ್ಯೋಗಿಗಳು ಗ್ರಾಹಕರ ಕರೆಗಳಿಗೆ ಉತ್ತರಿಸುವುದು, ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದು ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವುದನ್ನು ಅವರು ಗಮನಿಸಿದರು. ಕೆಲಸದ ಒತ್ತಡದಿಂದಾಗಿ ಸಿಬ್ಬಂದಿಗೆ ಪ್ರತಿಯೊಂದು ಫೋನ್ ಕರೆಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕೆಲವು ಗ್ರಾಹಕರು ಸರಿಯಾದ ಸಮಯದಲ್ಲಿ ಸೇವೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಈ ಹುಡುಗಿ ಯೋಚಿಸಿದಳು. ಈ ಆಲೋಚನೆಯಿಂದಲೇ Voxa ಹುಟ್ಟಿಕೊಂಡಿತು.
24 ಗಂಟೆಯೂ ಕೆಲಸ ಮಾಡುವ AI ಸ್ವಾಗತಕಾರ:
Voxa ಒಂದು AI ಆಧಾರಿತ ವರ್ಚುವಲ್ ರಿಸೆಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರ ಫೋನ್ ಕರೆಗಳಿಗೆ ದಿನದ 24 ಗಂಟೆಯೂ ಉತ್ತರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದು ಕೇವಲ ಕರೆ ಸ್ವೀಕರಿಸುವುದಷ್ಟೇ ಅಲ್ಲ. ಗ್ರಾಹಕರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡುವುದು, ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡುವುದು, ರೆಸ್ಟೋರೆಂಟ್‌ಗಳಲ್ಲಿ ಆರ್ಡರ್‌ಗಳನ್ನು ಸ್ವೀಕರಿಸುವುದು ಹಾಗೂ ಗ್ರಾಹಕರೊಂದಿಗೆ ಫಾಲೋ-ಅಪ್ ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸಬಹುದು. ಇದರಿಂದ ಉದ್ಯಮಗಳಿಗೆ ಗ್ರಾಹಕರ ಸೇವೆಯನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗುತ್ತದೆ.
ಕೆನಡಾ, ಭಾರತ, ಕಾಂಬೋಡಿಯಾದಲ್ಲೂ ಸೇವೆ:
ಈ AI ಸ್ಟಾರ್ಟ್ಅಪ್ ಈಗಾಗಲೇ ಹಲವು ದೇಶಗಳ ವ್ಯವಹಾರಗಳ ಗಮನ ಸೆಳೆದಿದೆ. ಕೆನಡಾ, ಭಾರತ ಮತ್ತು ಕಾಂಬೋಡಿಯಾ ಸೇರಿದಂತೆ ವಿವಿಧ ದೇಶಗಳಲ್ಲಿನ ಕೆಲವು ವ್ಯವಹಾರಗಳು Voxa ಸೇವೆಗಳನ್ನು ಬಳಸುತ್ತಿವೆ ಎಂದು ತಿಳಿದುಬಂದಿದೆ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯವಹಾರಗಳಿಗೆ ಗ್ರಾಹಕರ ಕರೆಗಳನ್ನು ನಿರ್ವಹಿಸುವುದು ಮತ್ತು ದೈನಂದಿನ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವಲ್ಲಿ ಈ ತಂತ್ರಜ್ಞಾನ ನೆರವಾಗುತ್ತಿದೆ.
ChatGPT, Claude ಬಳಸಿ ಕೋಡಿಂಗ್ ಕಲಿಕೆ:
ತನ್ನ AI ಉತ್ಪನ್ನವನ್ನು ಅಭಿವೃದ್ಧಿಪಡಿಸುವಾಗ ಮನ ಯಾರನ್ನೂ ಸಂಪೂರ್ಣವಾಗಿ ಅವಲಂಬಿಸಿರಲಿಲ್ಲ. ChatGPT ಮತ್ತು Claude ಸೇರಿದಂತೆ AI ಪರಿಕರಗಳ ಸಹಾಯದಿಂದ ಸಣ್ಣ ಸಣ್ಣ ಕೋಡ್‌ಗಳನ್ನು ಬರೆಯುತ್ತಿದ್ದಳು. ಬಳಿಕ ಅವುಗಳನ್ನು ಸ್ವತಃ ಪರೀಕ್ಷಿಸಿ, ಕಂಡುಬಂದ ದೋಷಗಳನ್ನು ಸರಿಪಡಿಸುತ್ತಿದ್ದಳು. ಸಾಫ್ಟ್‌ವೇರ್ ಅಭಿವೃದ್ಧಿಯ ವಿವಿಧ ಹಂತಗಳನ್ನು ಸ್ವತಃ ಕಲಿಯುವ ಮೂಲಕ ತಮ್ಮ ತಾಂತ್ರಿಕ ಜ್ಞಾನವನ್ನು ವಿಸ್ತರಿಸಿಕೊಂಡಿದ್ದಾಳೆ. ಇದರಿಂದ AI ಪರಿಕರಗಳನ್ನು ಕೇವಲ ಬಳಸುವುದಕ್ಕಿಂತ, ಅವುಗಳ ಸಹಾಯದಿಂದ ಹೊಸ ಉತ್ಪನ್ನಗಳನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ಆಕೆ ಕಲಿತಿದ್ದಾಳೆ.
ಮನ ಇದೀಗ ‘Voxa Agents’ ಎಂಬ ಮತ್ತೊಂದು AI ವೈಶಿಷ್ಟ್ಯದ ಅಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದ್ದಾಳೆ. ಇದರ ಉದ್ದೇಶ ಕೋಡಿಂಗ್ ಜ್ಞಾನವಿಲ್ಲದವರಿಗೂ AI ಏಜೆಂಟ್‌ಗಳನ್ನು ರಚಿಸಲು ಅವಕಾಶ ನೀಡುವುದು. ಸರಳ ಇಂಗ್ಲಿಷ್‌ನಲ್ಲಿ ತಮಗೆ ಬೇಕಾದ ಕೆಲಸವನ್ನು ವಿವರಿಸಿದರೆ, ಆ ಕಾರ್ಯವನ್ನು ನಿರ್ವಹಿಸುವ ಸ್ವಾಯತ್ತ AI ಏಜೆಂಟ್‌ಗಳನ್ನು ಸುಲಭವಾಗಿ ರಚಿಸಲು ಸಾಧ್ಯವಾಗುವಂತೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ವಯಸ್ಸು ಸಾಧನೆಗೆ ಅಡ್ಡಿಯಲ್ಲ:
ಈ ಹುಡುಗಿಯ ಕಥೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪೀಳಿಗೆಯ ಸಾಧ್ಯತೆಗಳನ್ನು ತೋರಿಸುತ್ತದೆ. AI ಕ್ರಾಂತಿ ಕೇವಲ ಅನುಭವಿ ತಂತ್ರಜ್ಞಾನ ತಜ್ಞರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಅವರ ಪ್ರಯತ್ನಗಳು ತೋರಿಸಿವೆ. ಕುತೂಹಲ, ಕಲಿಯುವ ಆಸಕ್ತಿ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ಇದ್ದರೆ ವಯಸ್ಸು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಬಾಲಕಿಯ ಪ್ರಯಾಣ ಸಾರುತ್ತದೆ. ಚಿಕ್ಕ ವಯಸ್ಸಿನಲ್ಲೇ ಹೊಸ ಆಲೋಚನೆಯೊಂದಿಗೆ ಮುನ್ನಡೆದು AI ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಈಕೆಯ ಕಥೆ, ತಂತ್ರಜ್ಞಾನ ಕಲಿಯಲು ಬಯಸುವ ಯುವಜನರಿಗೆ ಸ್ಫೂರ್ತಿಯಾಗಿದೆ.
ಬೆಂಗಳೂರು ದಕ್ಷಿಣ, (ಆಗಸ್ಟ್ 07): ಕರ್ನಾಟಕ ಸಚಿವ ಸಂಪುಟ ರಚನೆಯಾದಾಗಿನಿಂದಲೂ (New Cabinet) ಕೆಲವು ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಮಂತ್ರಿಗಿರಿ (Minister Post) ಕೈತಪ್ಪಿದ್ದಕ್ಕೆ ಕೆಲವರು ಬೇಸರಗೊಂಡಿದ್ದು, ನಾಯಕರ ಭೇಟಿಗೆ ಮುಂದಾಗಿದ್ದಾರೆ. ಇನ್ನು ಸಂಪುಟದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಶಾಸಕರ ವಿಚಾರದ ಬಗ್ಗೆ ಮಾತನಾಡಿದ ಸಚಿವ ಬಾಲಕೃಷ್ಣ (HC Balakrishna) 30 ಸಚಿವರು ತ್ಯಾಗಕ್ಕೆ ಸಿದ್ಧವಿರಬೇಕು ಎಂದಿದ್ದಾರೆ. ಯಾವ ಸಂದರ್ಭದಲ್ಲಿ ಏನಾಗಿತ್ತೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ನೂತನ ಸಚಿವ ಬಾಲಕೃಷ್ಣ ಕೊಟ್ಟಿರುವ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಕೈವ್, ಆಗಸ್ಟ್ 8: ಉಕ್ರೇನ್ ರಾಜಧಾನಿ ಕೈವ್ (Kyiv) ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ಡ್ರೋನ್ ಹಾಗೂ ಕ್ಷಿಪಣಿ ದಾಳಿಯಲ್ಲಿ 3 ವರ್ಷದ ಮಗು ಸೇರಿದಂತೆ 4 ಜನರು ಸಾವನ್ನಪ್ಪಿದ್ದಾರೆ. ಕೈವ್ ಪ್ರದೇಶದ ಬ್ರೋವರಿ ಜಿಲ್ಲೆಯಲ್ಲಿ ರಷ್ಯಾದ ಹಲವಾರು ಡ್ರೋನ್‌ಗಳು ಮನೆಯೊಂದನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿವೆ. ಈ ದಾಳಿಯಲ್ಲಿ ಅಜ್ಜ, ಅಜ್ಜಿ ಮತ್ತು ಅವರ 3 ವರ್ಷದ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಕುಟುಂಬದ ಇನ್ನಿಬ್ಬರು ಸದಸ್ಯರು ಹಾಗೂ ನೆರವಿಗೆ ಬಂದ ನೆರೆಹೊರೆಯವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಕ್ರೇನ್‌ನ ಉತ್ತರ ಭಾಗದ ಚೆರ್ನಿಹಿವ್ ಪ್ರದೇಶದ ಮೇಲೆಯೂ ರಷ್ಯಾ ಡ್ರೋನ್ ದಾಳಿ ನಡೆಸಿದ್ದು, ಪ್ರಿಲುಕಿ ಜಿಲ್ಲೆಯ ಗೋದಾಮೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಇಲ್ಲಿ ಇಲ್ಲಿಯವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೆರ್ಬಿಯಾಗೆ ಭೇಟಿ ನೀಡಿದ್ದು, ಸೆರ್ಬಿಯಾ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಮತ್ತು ಪ್ರಧಾನ ಮಂತ್ರಿ ಜುರೊ ಮಕುಟ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಇದಕ್ಕೂ ಮೊದಲು ಶುಕ್ರವಾರ ಅಮೆರಿಕದ ಸೆನೆಟ್, ರಷ್ಯಾದ ಮೇಲೆ ಹೊಸ ಹಾಗೂ ಕಠಿಣ ನಿರ್ಬಂಧಗಳನ್ನು ವಿಧಿಸುವ ಮಸೂದೆಯನ್ನು ಅಂಗೀಕರಿಸಿದೆ. ದಿವಂಗತ ಲಿಂಡ್ಸೆ ಗ್ರಹಾಂ ಅವರ ತೀವ್ರ ಪ್ರಯತ್ನದಿಂದ ರೂಪುಗೊಂಡಿದ್ದ ಈ ಮಸೂದೆಯು, ಮಾಸ್ಕೋ ಹಾಗೂ ರಷ್ಯಾದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲವನ್ನು ಖರೀದಿಸುವ ದೇಶಗಳಿಗೆ ಶಿಕ್ಷೆ ವಿಧಿಸುವ ಉದ್ದೇಶವನ್ನು ಹೊಂದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹೀಗಾಗಿ ಅದ್ಭುತ ಫಾರ್ಮ್ನಲ್ಲಿದ್ದ ಸುದರ್ಶನ್ ಸರಣಿಯಿಂದ ಹೊರಗುಳಿದಿರುವುದು ತಂಡವನ್ನು ಸಂಕಷ್ಟಕ್ಕೆ ತಳ್ಳಿದೆ. ಸಾಯಿ ಸುದರ್ಶನ್ಗೂ ಮೊದಲು, ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಗಿದ್ದಾರೆ. ಹಾಗೆಯೇ ನಾಯಕ ಶುಭ್ಮನ್ ಗಿಲ್ ಕೂಡ ಗಾಯಗೊಂಡಿರುವುದು ತಂಡಕ್ಕೆ ಕಳವಳಕಾರಿಯಾಗಿದೆ. ಆದಾಗ್ಯೂ ಗಿಲ್ ಮೊದಲ ಟೆಸ್ಟ್ ವೇಳೇಗೆ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ(PC-PTI).