ವಿದೇಶಿ ಉದ್ಯೋಗದ ಆಮಿಷ; ಪೋರ್ಚುಗಲ್‌ನಲ್ಲಿ ಭಾರತೀಯ ಯುವತಿಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಿದ ಏಜೆನ್ಸಿ! – Kannada News | Indian Woman offered job in Portugal Sold To Beer Shop Owner how she is escaped

ನವದೆಹಲಿ, ಆಗಸ್ಟ್ 8: ಕೆಲವೊಮ್ಮೆ ಹಣದ ಬಗ್ಗೆ ನಮಗಿರುವ ಅತಿಯಾದ ವ್ಯಾಮೋಹ, ದುರಾಸೆ ನಮ್ಮ ಪ್ರಾಣಕ್ಕೇ ಸಂಚಕಾರ ತಂದುಬಿಡುತ್ತದೆ. ಹೆಚ್ಚಿನ ಸಂಬಳ ಸಿಗುತ್ತದೆ, ಇನ್ನೂ ಚೆನ್ನಾಗಿ ಬದುಕು ಕಟ್ಟಿಕೊಳ್ಳಬಹುದು ಎಂಬ ಆಸೆ, ಕನಸುಗಳಿಂದ ಪೋರ್ಚುಗಲ್​ಗೆ ಹೋಗಿದ್ದ ಭಾರತೀಯ ಯುವತಿಗೆ ದೊಡ್ಡ ಆಘಾತ ಕಾದಿತ್ತು. ಪೋರ್ಚುಗಲ್​ಗೆ ಹೋಗುತ್ತಿದ್ದಂತೆ ಆಕೆಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿದ್ದ ಏಜೆನ್ಸಿ ಆಕೆಯನ್ನು ಅಲ್ಲಿನ ಬಿಯರ್ ಶಾಪ್ ಮಾಲೀಕರಿಗೆ ಮಾರಾಟ ಮಾಡಿದೆ. ಅಷ್ಟೇ ಅಲ್ಲದೆ, ವೀಸಾ ಮತ್ತು ಇತರೆ ದಾಖಲೆಗಳ ಕೆಲಸದ ಹೆಸರಿನಲ್ಲಿ ವಂಚಕರು ಆ ಯುವತಿಯಿಂದ ಹಂತ ಹಂತವಾಗಿ ಒಟ್ಟು 11 ಲಕ್ಷ ರೂ. ಹಣ ಕಿತ್ತುಕೊಂಡಿದೆ.

ಹೊಸ ಉದ್ಯೋಗಕ್ಕೆ ಸೇರುವ ಆಸೆಯಲ್ಲಿ ಆ ಯುವತಿ ಪೋರ್ಚುಗಲ್‌ಗೆ ತಲುಪಿದ ತಕ್ಷಣ, ಅಲ್ಲಿದ್ದ ಏಜೆಂಟ್‌ಗಳು ಆಕೆಯ ಪಾಸ್‌ಪೋರ್ಟ್‌ ಅನ್ನು ಕಸಿದುಕೊಂಡು, ಕೊಠಡಿಯೊಂದರಲ್ಲಿ 2 ದಿನಗಳ ಕಾಲ ಬಂಧನದಲ್ಲಿಟ್ಟಿದ್ದರು. ನಂತರ ಆಕೆಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಾಟ ಮಾಡಲಾಗಿದ್ದು, ಅಲ್ಲಿ ಆಕೆಯಿಂದ ಬಲವಂತವಾಗಿ ಕೆಲಸ ಮಾಡಿಸಿಕೊಂಡು, ತೀವ್ರ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ. ಆ ಯುವತಿ ತನ್ನ ಪಾಸ್‌ಪೋರ್ಟ್‌ ಅನ್ನು ಹಿಂತಿರುಗಿಸುವಂತೆ ವಂಚಕರನ್ನು ಕೇಳಿದಾಗ, ಅವರು ಮತ್ತಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್ ಗೆಳೆಯನಿಂದ ಪಿಯುಸಿ ಬಾಲಕಿ ಮೇಲೆ ಅತ್ಯಾಚಾರ; ಆನ್‌ಲೈನ್ ಫುಡ್ ಆರ್ಡರ್​ನಿಂದ ಸಿಕ್ಕಿಬಿದ್ದ ಆರೋಪಿ

ಯುವತಿ ಬಚಾವಾಗಿದ್ದು ಹೇಗೆ?:

ಬಿಯರ್ ಶಾಪ್ ಮಾಲೀಕರ ಬಳಿ ಸುಮಾರು 1 ತಿಂಗಳ ಕಾಲ ತೀವ್ರ ಕಿರುಕುಳ ಅನುಭವಿಸಿದ ನಂತರ, ಆ ಯುವತಿ ಅಲ್ಲಿಂದ ತಪ್ಪಿಸಿಕೊಳ್ಳಲು ಉಪಾಯ ಹೂಡಿದ್ದಾರೆ. ಮೊದಲು ಬಸ್ ಮೂಲಕ ಲಿಸ್ಬನ್‌ಗೆ ಓಡಿಹೋದ ಆಕೆ, ನಂತರ ಮ್ಯಾಡ್ರಿಡ್‌ಗೆ ತಲುಪಿದ್ದಾರೆ. ಅಲ್ಲಿಂದ ದೋಹಾ ಮಾರ್ಗವಾಗಿ ಭಾರತಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಆಕೆ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಮಾಲ್ಟಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅದೇ ವಂಚಕರು ಮತ್ತೆ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಆ ಯುವತಿ ಹಣ ನೀಡಲು ನಿರಾಕರಿಸಿದಾಗ, ಆಕೆಯ ಗಂಡನನ್ನು ಕೊಲೆ ಮಾಡುವುದಾಗಿ ಮತ್ತು ಆಕೆಯ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾರೆ. ಇದರಿಂದ ರೋಸಿಹೋದ ಮಹಿಳೆ ಪುಣೆ ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: ‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚಿಸಿದ್ದ ಖತರ್ನಾಕ್ ದಂಪತಿ ಪೊಲೀಸರ ವಶ!

ಮಾನವ ಕಳ್ಳಸಾಗಣೆ, ವಂಚನೆ ಮತ್ತು ಸುಲಿಗೆ ಆರೋಪದಡಿ ‘ವಿ ಮೈಗ್ರೇಟ್’ ಸಂಸ್ಥೆಯ ನಿರ್ವಾಹಕರು ಸೇರಿದಂತೆ 8 ಮಂದಿ ಆರೋಪಿಗಳ ವಿರುದ್ಧ ಈ ವಾರದ ಆರಂಭದಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆ ನಾಗಪುರದ ಕಾಲೇಜೊಂದರಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿದ್ದು, ಆಯುರ್ವೇದ ಔಷಧ ಮಾರಾಟ ಮಾಡುವ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಉತ್ತಮ ಭವಿಷ್ಯ ಮತ್ತು ವಿದೇಶದಲ್ಲಿ ಉದ್ಯೋಗದ ಆಸೆಯಲ್ಲಿದ್ದ ಯುವತಿಗೆ ಪುಣೆ ಮೂಲದ ಜಾಬ್ ಏಜೆನ್ಸಿ ಈ ರೀತಿ ವಂಚನೆ ಮಾಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಪೈ ಸಿನಿಮಾಗಳಿಂದ ಸುಸ್ತಾಗಿ ಹಾರರ್ ಸಿನಿಮಾಕ್ಕೆ ಹಾರಿದ ‘ಯಶ್ ರಾಜ್’ – Kannada News | Yash Raj Films to produce its first Horror movie Varun Dhawan will be main lead

ಸಿನಿಮಾ (Cinema) ರಂಗದಲ್ಲಿ ಕಾಲ-ಕಾಲಕ್ಕೆ ಜಾನರ್​​ಗಳು ಬದಲಾಗುತ್ತಲೇ ಇರುತ್ತವೆ. ಪ್ರೇಮಕತೆಯೊಂದು ದೊಡ್ಡ ಹಿಟ್ ಆದರೆ ಎಲ್ಲರೂ ಪ್ರೇಮಕತೆಯ ಹಿಂದೆ ಬೀಳುತ್ತಾರೆ. ಅದೇ ಹಾಸ್ಯ ಪ್ರಧಾನ ಸಿನಿಮಾ ಸೂಪರ್ ಹಿಟ್ ಆದರೆ ಎಲ್ಲರೂ ಹಾಸ್ಯಪ್ರಧಾನ ಸಿನಿಮಾಗಳನ್ನೇ ಮಾಡುತ್ತಾರೆ. ಕೆಲ ವರ್ಷಗಳ ಹಿಂದೆ ಬಾಲಿವುಡ್​​ನಲ್ಲಿ‘ಬಯೋಪಿಕ್’ ಜಾನರ್ ಬಲು ಓಡಿತ್ತು. ಒಂದರ ಹಿಂದೊಂದರಂತೆ ಕ್ರೀಡಾಪಟುಗಳ, ರಾಜಕಾರಣಿಗಳ ಬಯೋಪಿಕ್​​ಗಳು ನಿರ್ಮಾಣ ಆದವು. ಆದರೆ ಈಗ ಹಾರರ್ ಸಿನಿಮಾಗಳ ಕಾಲ. ಬಾಲಿವುಡ್​​ನ ಟಾಪ್ ನಿರ್ಮಾಣ ಸಂಸ್ಥೆ ಯಶ್​​ ರಾಜ್ ಫಿಲಮ್ಸ್ ಸಹ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ನಿರ್ಮಿಸಲು ಮುಂದಾಗಿದೆ.

ದಶಕಗಳಿಂದ ವಿವಿಧ ಪ್ರಕಾರದ ಸಿನಿಮಾಗಳಲ್ಲಿ ಪ್ರಯೋಗ ಮಾಡಿದ ಯಶ್ ರಾಜ್ ಫಿಲ್ಮ್ಸ್, ಇತ್ತೀಚೆಗೆ ಕೇವಲ ಮಾಸ್ ಮಸಾಲ, ಆಕ್ಷನ್ ಸಿನಿಮಾಗಳನ್ನು ಮಾತ್ರ ನೆಚ್ಚಿಕೊಂಡಿತ್ತು. ಅದರಲ್ಲೂ ತನ್ನದೇ ಆದ ‘ಸ್ಪೈ’ ಸಿನಿಮಾ ಯೂನಿವರ್ಸ್ ಅನ್ನು ಸೃಷ್ಟಿಸಿತು. ‘ಟೈಗರ್’ ಸರಣಿ, ‘ಪಠಾಣ್’, ‘ವಾರ್’ ಸರಣಿ, ‘ಆಲ್ಫಾ’ ಸಿನಿಮಾಗಳನ್ನು ನಿರ್ಮಾಣ ಮಾಡಿತ್ತು. ಆದರೆ ಇದೀಗ ಯಶ್ ರಾಜ್ ಫಿಲಮ್ಸ್ ಸ್ಪೈ ಯೂನಿವರ್ಸ್ ಬದಲಿಗೆ ಹಾರರ್ ಸಿನಿಮಾದ ಕಡೆಗೆ ಹೊರಳಿದೆ. ವರದಿಗಳ ಪ್ರಕಾರ, ಈ ನಿರ್ಮಾಣ ಸಂಸ್ಥೆಯು ಇದೇ ಮೊದಲ ಬಾರಿಗೆ ಹಾರರ್ ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಯಶ್ ರಾಜ್ ಅವರ ಮೊದಲ ಹಾರರ್ ಸಿನಿಮಾನಲ್ಲಿ ನಾಯಕನಾಗಿ ವರುಣ್ ಧವನ್ ನಟಿಸಲಿದ್ದಾರೆ.

‘ರಾಕೆಟ್ ಬಾಯ್ಸ್’ ಹೆಸರಿನ ಒಳ್ಳೆಯ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಅಭಯ್ ಪನ್ನು, ಯಶ್ ರಾಜ್ ಅವರ ಮೊದಲ ಹಾರರ್ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ ಮತ್ತು ಸಂಭಾಷಣೆ ಸಹ ಅವರದ್ದೆ. ವರುಣ್ ಧವನ್ ಅವರು ನಾಯಕನಾಗಿ ನಟಿಸಲಿದ್ದು, ಈ ಸಿನಿಮಾ ಹಾರರ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಅಂಶ ಹಾಗೂ ಆಕ್ಷನ್ ಅನ್ನು ಸಹ ಒಳಗೊಂಡಿರಲಿದೆಯಂತೆ. ಇದು ವರುಣ್ ಧವನ್ ಅವರಿಗೆ ಯಶ್ ರಾಜ್ ಫಿಲಮ್ಸ್ ಜೊತೆಗೆ ಎರಡನೇ ಸಿನಿಮಾ ಆಗಿರಲಿದೆ.

ಇದನ್ನೂ ಓದಿ:ರಜನೀಕಾಂತ್ ಸಿನಿಮಾನಲ್ಲಿ ನಾಯಕಿ ಆಗಲಿರುವ ಕನ್ನಡತಿ ಶ್ರೀಲೀಲಾ

ವರುಣ್ ಧವನ್ ಈಗಾಗಲೇ ಹಾರರ್ ಸಿನಿಮಾಗಳಾದ ‘ಭೇಡಿಯಾ’, ‘ಸ್ತ್ರೀ 2’, ‘ಥಾಮ’, ‘ಮುಂಜಿಯಾ’ಗಳಲ್ಲಿ ನಟಿಸಿದ್ದಾರೆ. ಯಶ್ ರಾಜ್ ಫಿಲಮ್ಸ್ ಅವರಿಗೆ ಈ ಹಿಂದೆ ಭಾರಿ ಲಾಭ ಮಾಡಿಕೊಟ್ಟಿದ್ದ ಸ್ಪೈ ಸಿನಿಮಾಗಳು ಇತ್ತೀಚೆಗೆ ಅವರಿಗೆ ತುಸು ನಷ್ಟವನ್ನೇ ಉಂಟು ಮಾಡಿವೆ ಎನ್ನಲಾಗುತ್ತಿದೆ. ಅಲ್ಲದೆ, ಯಶ್ ರಾಜ್ ಅವರ ಸಿದ್ಧ ಸೂತ್ರದ ಸ್ಪೈ ಸಿನಿಮಾಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ಟ್ರೋಲಿಂಗ್ ಸಹ ನಡೆಯುತ್ತಿದೆ. ಇದೇ ಕಾರಣಕ್ಕೆ ಯಶ್ ರಾಜ್ ಫಿಲಮ್ಸ್ ಹೊಸ ಜಾನರ್​​ಗೆ ಎಂಟ್ರಿ ನೀಡಿದೆ.

ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ. ಚಿತ್ರೀಕರಣ ಕೆಲವೇ ತಿಂಗಳುಗಳಲ್ಲಿ ಪ್ರಾರಂಭ ಆಗಲಿದ್ದು, 2027ರ ಆರಂಭದಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Benefits Of House Cleaning: ಮನೆ ಕ್ಲೀನ್‌ ಮಾಡೋದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಖತ್‌ ಪ್ರಯೋಜನಕಾರಿಯಂತೆ – Kannada News | Cleaning the house can help you stay fit and healthy; do you know how?

ಆರೋಗ್ಯದ ದೃಷ್ಟಿಯಿಂದ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಅಷ್ಟೇ ಅಲ್ಲದೆ ಮನೆ ಸ್ವಚ್ಛ (house Cleaning) ಮತ್ತು ಅಚ್ಚುಕಟ್ಟಾಗಿದ್ದಾಗ ಮನೆಯ ವಾತಾವರಣ ಸಕಾರಾತ್ಮಕವಾಗಿರುತ್ತದೆ, ಮನಸ್ಥಿತಿಯೂ ಉತ್ತಮವಾಗಿರುತ್ತದೆ. ಆದರೆ ಹೆಚ್ಚಿನವರು ಮನೆ ಗುಡಿಸಬೇಕು, ಒರೆಸಬೇಕು, ಪಾತ್ರೆ ತೊಳಿಬೇಕು ಅಂದ್ರೆ ಸಖತ್‌ ಬೇಜಾರು ಮಾಡಿಕೊಳ್ಳುತ್ತಾರೆ ಮತ್ತು ಮನೆ ಕೆಲಸ ಮಾಡಲು ಹೋಗೋದಿಲ್ಲ, ಇನ್ನೂ ಕೆಲವರು ಮನೆ ಕೆಲಸವನ್ನು ಮಾಡಲು ಕೆಲಸದವರನ್ನೇ ಇಟ್ಟುಕೊಂಡಿರುತ್ತಾರೆ. ಆದರೆ ನಮ್ಮ ಕೈಯಾರೇ ನಾವು ನಮ್ಮ ಮನೆಯನ್ನು ಸ್ವಚ್ಛಗೊಳಿಸಿದರೆ ಹೆಚ್ಚಿನ ಲಾಭವಿದೆಯಂತೆ. ಹೌದು ಮನೆ ಸ್ವಚ್ಛಗೊಳಿಸುವುದರಿಂದ ವಾತಾವರಣ ಸಕಾರಾತ್ಮಕವಾಗಿರುವುದು ಮಾತ್ರವಲ್ಲ ನಮ್ಮ ಆರೋಗ್ಯ ಮನಸ್ಥಿತಿಯೂ ಸುಧಾರಿಸುತ್ತದಂತೆ. ಹಾಗಿದ್ರೆ ಮನೆ ಕ್ಲೀನ್‌ ಮಾಡೋದ್ರಿಂದ ಲಭಿಸುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ಮನೆ ಸ್ವಚ್ಛಗೊಳಿಸುವುದರಿಂದ ಲಭಿಸುವ ಪ್ರಯೋಜನಗಳೇನು?

ಮನಸ್ಸಿಗೆ ಶಾಂತಿ ಸಿಗುತ್ತದೆ: ಮನೆ ಶುಚಿಗೊಳಿಸುವಿಕೆಯ ದೊಡ್ಡ ಪ್ರಯೋಜನವೆಂದರೆ, ಇದು ತ್ವರಿತ ತೃಪ್ತಿ ಮತ್ತು ಶಾಂತಿಯ ಭಾವನೆಯನ್ನು ನೀಡುತ್ತದೆ. ಇದಲ್ಲದೆ, ಶುಚಿಗೊಳಿಸುವಿಕೆಯು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಅಲ್ಲದೆ  ಅದು ನಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಸಕಾರಾತ್ಮಕತೆ ಹೆಚ್ಚಾಗುತ್ತದೆ: ಮನೆಯನ್ನು ಶುಚಿಗೊಳಿಸುವುದರಿಂದ ಮನೆ ಹೆಚ್ಚು ಸುಂದರವಾಗಿ ಕಾಣುತ್ತದೆ. ಅಲ್ಲದೆ ಸ್ವಚ್ಛವಾದ ಮನೆ ಸಕಾರಾತ್ಮಕ ಶಕ್ತಿ ಮತ್ತು ಒಳ್ಳೆಯ ಭಾವನೆಗಳನ್ನು ಆಕರ್ಷಿಸುತ್ತದೆ.

ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ: ಗುಡಿಸುವುದು, ನೆಲ ಒರೆಸುವುದು, ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವುದು ಮತ್ತು ವಸ್ತುಗಳನ್ನು ಜೋಡಿಸುವಂತಹ ಚಟುವಟಿಕೆಗಳು ದೇಹದ ಅನೇಕ ಸ್ನಾಯುಗಳನ್ನು ಸಕ್ರಿಯಗೊಳಿಸುತ್ತವೆ. ಇದು ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ. ಇದರ ಜೊತೆಗೆ, ಈ ಚಟುವಟಿಕೆಗಳು ಸ್ಟ್ರೆಚಿಂಗ್‌ನಂತೆಯೇ ಪ್ರಯೋಜನಗಳನ್ನು ನೀಡುತ್ತವೆ.

ಉತ್ತಮ ದೈಹಿಕ ವ್ಯಾಯಾಮ: ಮನೆ ಕ್ಲೀನಿಂಗ್‌ ಮಾಡುವಾಗ  ಬಾಗುವುದು, ನಿಲ್ಲುವುದು, ನಡೆಯುವುದು ಮತ್ತು ನಿರಂತರ ಕೈ ಚಲನೆಯು ಇಡೀ ದೇಹವನ್ನು ಸಕ್ರಿಯವಾಗಿರಿಸುತ್ತದೆ, ಕಾಲುಗಳು, ಬೆನ್ನು, ಭುಜಗಳು ಮತ್ತು ತೋಳುಗಳ ಸ್ನಾಯುಗಳಿಗೆ ಸೌಮ್ಯವಾದ ಆದರೆ ಪರಿಣಾಮಕಾರಿ ವ್ಯಾಯಾಮವನ್ನು ಒದಗಿಸುತ್ತದೆ.

ಒತ್ತಡ ಕಡಿಮೆಯಾಗಿದೆ: ನಮ್ಮ ಸುತ್ತಲಿನ ವಸ್ತುಗಳು ಅಸ್ತವ್ಯಸ್ತಗೊಂಡಾಗ, ನಮ್ಮ ಮನಸ್ಸು ಕೂಡ ಮತ್ತಷ್ಟು ಒತ್ತಡಕ್ಕೆ ಒಳಗಾಗುತ್ತದೆ. ಅನಗತ್ಯ ವಸ್ತುಗಳನ್ನು ತೆಗೆದುಹಾಕುವುದರಿಂದ, ಮನೆಯನ್ನು ಸ್ವಚ್ಛಗೊಳಿಸುವುದರಿಂದ ಮನೆ ಕ್ಲೀನ್‌ ಆಗಿ ಕಾಣುತ್ತದೆ, ಅಲ್ಲದೆ ಈ ವಾತಾವರಣ  ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಮಗೆ ಹೆಚ್ಚು ಶಾಂತತೆಯನ್ನು ನೀಡುತ್ತದೆ.

ಇದನ್ನೂ ಓದಿ:  ಮನೆಯಲ್ಲಿ ಬೆಕ್ಕು ಸಾಕುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಹೃದಯವನ್ನು ಆರೋಗ್ಯಕರವಾಗಿಡುತ್ತದೆ: ಮನೆ ಶುಚಿಗೊಳಿಸುವಿಕೆಯನ್ನು ಮಧ್ಯಮ ತೀವ್ರತೆಯ ದೈಹಿಕ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಮನೆ ಕೆಲಸಗಳನ್ನು ಮಾಡುವುದರಿಂದ ನಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ. ಪ್ರತಿದಿನ ಈ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೃದಯವು ಆರೋಗ್ಯಕರವಾಗಿರುತ್ತದೆ.

ಸೋಂಕಿನ ಅಪಾಯ ಕಡಿಮೆಯಾಗುತ್ತದೆ: ದೈನಂದಿನ ಶುಚಿಗೊಳಿಸುವಿಕೆಯು ಮನೆಯಲ್ಲಿ ಕೊಳಕು ಸಂಗ್ರಹವಾಗುವುದನ್ನು ತಡೆಯುತ್ತದೆ, ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SL: ಸಾಯಿ ಸುದರ್ಶನ್ ಬದಲಿಗೆ ಯಾರಿಗೆ ಸಿಗಲಿದೆ ಅವಕಾಶ? ರೇಸ್​ನಲ್ಲಿ ಇಬ್ಬರು

Source link

ಸಚಿವರನ್ನು ಬರಮಾಡಿಕೊಳ್ಳುವ ಭರದಲ್ಲಿ 1 ಲಕ್ಷ ರೂ. ಕಳೆದುಕೊಂಡ ಅಭಿಮಾನಿ – Kannada News | A Man Lost his Rs 1 Lakh during New Minister KS Basavanthappa Welcome in mayakonda

ದಾವಣಗೆರೆ, (ಆಗಸ್ಟ್ 08): ನೂತನ ಸಚಿವರಾಗಿ ಕೆಎಸ್ ಬಸವಂತಪ್ಪ ಅವರು ಇಂದು (ಆಗಸ್ಟ್ 08) ಮೊದಲ ಬಾರಿಗೆ ಸ್ವಕ್ಷೇತ್ರ ಮಾಯಕೊಂಡಕ್ಕೆ ಆಗಮಿಸಿದ್ದು, ಅವರ ಅಭಿಮಾನಿಗಳು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ನೂತನ ಮಂತ್ರಿಗೆ ಹೂಗುಚ್ಚ ನೀಡಿ ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದ್ದಾರೆ. ಆದ್ರೆ, ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಹೌದು….ಬಸವಂತಪ್ಪನವರನ್ನು ಬರಮಾಡಿಕೊಳ್ಳುವ ಬರದಲ್ಲಿದ್ದ ಅಭಿಮಾನಿಯೊಬ್ಬರ ಜೇಬಿಗೆ ಕತ್ತರಿ ಹಾಕಿ ಒಂದು ಲಕ್ಷ ರೂಪಾಯಿ ದೋಚಿಕೊಂಡು ಹೋಗಿದ್ದಾರೆ. ಹೌದು….ನೀರ್ಥಡಿ ಗ್ರಾಮದ ಸಂತೋಷ ಎನ್ನುವಾತ ಸಚಿವರ ಸ್ವಾಗತಕ್ಕೆ ಬಂದು 1 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

“ಚಿಪ್‌ನಿಂದ ಶಿಪ್‌ವರೆಗೆ ಎಲ್ಲವೂ ನಿಮ್ಮ ಕೈಗಳಲ್ಲೇ ತಯಾರಾಗಲಿದೆ”: ಭಾರತದಲ್ಲಿ ಸ್ವಾವಲಂಬನೆಯ ನವ ಯುಗ ಆರಂಭ ಎಂದ ಪ್ರಧಾನಿ ಮೋದಿ – Kannada News | Modi Lauds Youth Innovation: From Chips to Ships, India’s Tech Future is Bright

ದೆಹಲಿ, ಆ.8: “ಚಿಪ್‌ನಿಂದ ಹಿಡಿದು ಶಿಪ್‌ವರೆಗೆ (Chip to Ship) ಎಲ್ಲವೂ ಇಲ್ಲೇ, ನಿಮ್ಮದೇ ಕೈಗಳಿಂದ ತಯಾರಾಗಲಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಯುವಶಕ್ತಿ ಹಾಗೂ ತಂತ್ರಜ್ಞರನ್ನು ಉದ್ದೇಶಿಸಿ ಅತ್ಯಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ. ಐಐಟಿ ನವದೆಹಲಿಯ ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದಲ್ಲಿ ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಯುವಜನತೆ ಮಾಡುತ್ತಿರುವ ಅಭೂತಪೂರ್ವ ಆವಿಷ್ಕಾರಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸಣ್ಣ ಕಂಪ್ಯೂಟರ್ ಚಿಪ್‌ನಿಂದ ಹಿಡಿದು ಬೃಹತ್ ಹಡಗುಗಳು ಮತ್ತು ಯುದ್ಧನೌಕೆಗಳವರೆಗೆ ಪ್ರತಿಯೊಂದನ್ನೂ ಭಾರತೀಯ ಯುವಕರೇ ಸ್ವತಃ ತಯಾರಿಸುವ ದಿನಗಳು ಬಂದಿವೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದರು. ದೇಶದ ಯುವ ಪೀಳಿಗೆ ಸಂಪೂರ್ಣ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದು ಪ್ರಧಾನಿ ಉಲ್ಲೇಖಿಸಿದರು. ತಂತ್ರಜ್ಞಾನ ಹಾಗೂ ಸೆಮಿಕಂಡಕ್ಟರ್ ರಂಗದಲ್ಲಿ ದೇಶವು ಸ್ವಾವಲಂಬನೆಯತ್ತ ಧಾವಿಸುತ್ತಿದ್ದು, ಯುವ ಆವಿಷ್ಕಾರಕರು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಎತ್ತಿಹಿಡಿಯುತ್ತಿದ್ದಾರೆ ಎಂದು ಪ್ರಶಂಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಉಡುಪಿಯಲ್ಲಿ ಕೈ ಮುಖಂಡ ಶೂಟೌಟ್: ಯುಪಿ ಮೂಲದ ಶೂಟರ್ಸ್​ ಖಾಕಿ ಬಲೆಗೆ ಬಿದ್ದಿದ್ಹೇಗೆ? – Kannada News | Congress Leader Shot in Udupi: How Police Nabbed UP Based Shooters

ಡೇವಿಡ್ ಡಿಸೋಜಾ, ಬಂಧಿತರುImage Credit source: tv9 kannada

ಉಡುಪಿ, ಆಗಸ್ಟ್​​ 08: ಕರಾವಳಿ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಒಂದು ವಾರದ ಅಂತರದಲ್ಲಿ ಎರಡು ಶೂಟೌಟ್ (Shootout) ನಡೆದಿದೆ. ನಿನ್ನೆ ಉಡುಪಿಯಲ್ಲಿ (udupi) ಹಾಡಹಗಲೇ ನಡು ರಸ್ತೆಯಲ್ಲಿ ಊರಿನ ಜನಪ್ರಿಯ ವ್ಯಕ್ತಿ ಗುಂಡೇಟಿಗೆ ಬಲಿಯಾಗಿದ್ದಾರೆ. ಅದು ಬೇರೆ ಯಾರೂ ಅಲ್ಲ, ಅದೇ ಗ್ರಾಮದ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ, ನಟೋರಿಯಸ್ ವ್ಯಕ್ತಿತ್ವದ ಡೇವಿಡ್ ಡಿಸೋಜ. ಈತನ ಕೊಲೆಯ ಕಥೆ ಎಷ್ಟು ರೋಚಕವಾಗಿದೆಯೋ ಆರೋಪಿಗಳ ಪತ್ತೆಯೂ ಅಷ್ಟೇ ಸಿನಿಮೀಯವಾಗಿದೆ. ಕಂಡಕಂಡವರಿಗೆ ಪಿಸ್ತೂಲ್ ತೋರಿಸಿ ಬೆದರಿಸುತ್ತಿದ್ದವ, ಆನೆ ಗುಂಡೇಟಿಗೆ ಬಲಿಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಆ ದಿನ ನಡೆದದ್ದೇನು?

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದರಂಗಡಿ, ಜನನಿಬಿಡ ಮತ್ತು ನಿರಂತರ ಚಟುವಟಿಕೆಯ ಪೇಟೆ. ಜಿಲ್ಲೆಯ ಇಂಡಸ್ಟ್ರಿಯಲ್ ಹಬ್, ಪಡುಬಿದ್ರೆಯಿಂದ ಸ್ವಲ್ಪವೇ ದೂರದಲ್ಲಿರುವ ಗ್ರಾಮ. ಪಡುಬಿದ್ರೆ ಪೇಟೆಯಲ್ಲಿ ಡೇವಿಡ್ ಡಿಸೋಜಾ ತನ್ನ ಕಚೇರಿ ಹೊಂದಿದ್ದ. ಅದು ತುಂಬಾ ಚಟುವಟಿಕೆಯ ಹೊತ್ತು, ಮಧ್ಯಾಹ್ನ 3:45ರ ವೇಳೆಗೆ, ಶಾಲೆ ಬಿಟ್ಟು ಮಕ್ಕಳು ಮನೆಗಳಿಗೆ ತೆರಳುವ ಸಮಯ. ಅಂಗಡಿ ಮುಂಗಟ್ಟುಗಳಲ್ಲಿ ಜನವೋಜನ. ಪಕ್ಕದಲ್ಲಿರುವ ಚರ್ಚ್ ಆವರಣವಂತೂ ತುಂಬಿ ತುಳುಕುವ ಹೊತ್ತು, ಅದೇ ವೇಳೆಗೆ ಅಲ್ಲಿ ಟೈಯರ್ ಸ್ಪೋಟಗೊಂಡಂತೆ ಶಬ್ದ ಕೇಳಿದೆ. ಅತ್ತ ತಿರುಗಿ ನೋಡಿದರೆ, ಅದೇ ಊರಿನಲ್ಲಿ ರಾಜನಂತೆ ಮೆರೆದಾಡಿದ ಡೇವಿಡ್ ಡಿಸೋಜಾ, ಚರ್ಚ್ ಗೇಟ್ ಆವರಣದಲ್ಲಿ ಶವವಾಗಿ ಬಿದ್ದಿದ್ದ.

ಒಂದೇ ಗುಂಡೇಟಿಗೆ ಬಲಿ

ಡೇವಿಡ್ ಡಿಸೋಜಗೆ ಗುಂಡು ಹೊಡೆದ ರೀತಿ ಸಿನಿಮಾ ದೃಶ್ಯದ ಪಡಿ ಅಚ್ಚಿನಂತಿತ್ತು. ಚರ್ಚ್ ಗೇಟ್​ನ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿದೆ. ಡೇವಿಡ್ ಡಿಸೋಜ ತನ್ನ ಕಚೇರಿಯಿಂದ ಹೊರ ಬರುತ್ತಾನೆ. ಆತನ ಜೊತೆಗೆ ಸಹಾಯಕ ಕೂಡ ಇರುತ್ತಾನೆ. ಹೊಚ್ಚ ಹೊಸ ಬಿಳಿ ಬಣ್ಣದ ಥಾರ್ ಕಾರು ಹತ್ತಬೇಕೆನ್ನುವಷ್ಟರಲ್ಲಿ ಹಿಂಬಾಲಿಸಿ ಕೊಂಡು ಬಂದ ದುಷ್ಕರ್ಮಿ ಕಣ್ಣಲ್ಲಿ ಕಣ್ಣಿಟ್ಟು ಗುಂಡು ಹೊಡೆದಿದ್ದಾನೆ. ಮೊದಲ ಗುಂಡು ನೇರ ಹಣೆಗೆ, ಒಂದೇ ಏಟಿಗೆ ಡೇವಿಡ್ ಡಿಸೋಜ ಕುಸಿದು ಬಿದ್ದಿದ್ದಾನೆ. ಬಿದ್ದವನ ಮೇಲೆ ಮತ್ತೆರಡು ಗುಂಡು ಹಾರಿಸಲಾಗಿದೆ. ಒಟ್ಟು ಐದು ಗುಂಡುಗಳಲ್ಲಿ ಮೂರು ಮಿಸ್ ಫೈರ್ ಆದರೆ, ಎರಡು ಡೇವಿಡ್​ನ ಜೀವ ಪಡೆದಿದೆ.

ಇದನ್ನೂ ಓದಿ: ಉಡುಪಿಯಲ್ಲಿ ಮತ್ತೊಂದು ಶೂಟೌಟ್‌; ಗುಂಡಿಕ್ಕಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ

ಸುತ್ತಮುತ್ತ ಸಂಚರಿಸುತ್ತಿದ್ದ ಜನ ಅಂಗಡಿ ಮಂಗಟುಗಳಲ್ಲಿ ನಿಂತಿದ್ದ ಗ್ರಾಹಕರು ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಮಕ್ಕಳು, ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಜೊತೆಗಿದ್ದ ಸಹಾಯಕ ಕಿರುಚಾಡಿಗಾದ ಆತನಿಗೂ ಗನ್ ತೋರಿಸಿ ಬೆದರಿಸಿದ್ದಾರೆ. ಬಳಿಕ ಮೊದಲೇ ಕಾಯುತ್ತಿದ್ದ ಇನ್ನೊಬ್ಬ ದುಷ್ಕರ್ಮಿ ಜೊತೆ ಬೈಕ್ ಏರಿ ಪರಾರಿಯಾಗಿದ್ದಾನೆ. ಇವರಿಬ್ಬರ ಈ ಕೃತ್ಯಕ್ಕೆ ಮೂರನೇ ವ್ಯಕ್ತಿ ಒಬ್ಬ ಪರೋಕ್ಷವಾಗಿ ಸಾಥ್​ ನೀಡಿದ್ದಾನೆ.

ಆಸ್ಪತ್ರೆಗೆ ಕಾಂಗ್ರೆಸ್ ನಾಯಕರು ದೌಡು

ಘಟನೆ ನಡೆದ ತಕ್ಷಣ, ಅಲ್ಲಿದ್ದವರು ತಮ್ಮ ಗ್ರಾಮದ ಮಾಜಿ ಅಧ್ಯಕ್ಷನ ಜೀವ ಉಳಿಸಲು ಧಾವಿಸಿ ಬಂದಿದ್ದಾರೆ. ತಕ್ಷಣವೇ ಆತನನ್ನು ಸ್ಥಳಿಯ ಶಿರ್ವ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಗುಂಡೇಟಿನಿಂದ ಸತ್ತಿರಬಹುದು ಎಂದು ಭಾವಿಸಿದರು ಕೂಡ ಜೀವ ಉಳಿಸುವ ಕೊನೆಯ ಪ್ರಯತ್ನವಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೂ ಕೊಂಡೊಯ್ಯದಿದ್ದಾರೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಡೇವಿಡ್ ಕೊನೆ ಉಸಿರೆಳೆದಿದ್ದ. ಶಿರ್ವ ನಿವಾಸಿಗಳಾಗಿರುವ ಆತನ ಪತ್ನಿ ಮಕ್ಕಳು ಆಸ್ಪತ್ರೆಗೆ ಧಾವಿಸಿದ್ದರು. ಸ್ಥಳೀಯ ಕಾಂಗ್ರೆಸ್ ಮುಖಂಡರೆಲ್ಲರೂ ಆಸ್ಪತ್ರೆಗೆ ಬಂದಿದ್ದಾರೆ. ಮಾಜಿ ಸಚಿವ ಮತ್ತು ಅದೇ ಮುದರಂಗಡಿ ಗ್ರಾಮ ಇರುವ ಕಾಪು ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡ ವಿನಯಕುಮಾರ ಸೊರಕೆ ಕುಟುಂಬದ ಜೊತೆಗಿದ್ದು ಆಸ್ಪತ್ರೆಯ ಉಸ್ತುವಾರಿಗಳನ್ನು ನೋಡಿಕೊಂಡರು. ಆರೋಪಿಗಳನ್ನು ಶೀಘ್ರ ಪತ್ತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಬಳಿಕ ಇದೊಂದು ಗಂಭೀರ ಪ್ರಕರಣವಾದ ಕಾರಣ ಶವವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಡೇವಿಡ್ ಡಿಸೋಜ ಯಾರು?

ಡೇವಿಡ್ ಡಿಸೋಜ ಒಬ್ಬ ಸಕ್ರಿಯ ರಾಜಕಾರಣಿ. ಕಾಪು ತಾಲೂಕಿನ ಗ್ರಾಮಾಂತರ ಕಾಂಗ್ರೆಸ್​ನಲ್ಲಿ ಪದಾಧಿಕಾರಿ. ಮುದರಂಗಡಿ ಪಂಚಾಯತ್​ನಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಾಗ ಅಧ್ಯಕ್ಷ. ಅಪಾರ ಸಂಪತ್ತು ಹೊಂದಿದ್ದ ಈತ, ಪಕ್ಷದ ಚಟುವಟಿಕೆಗಳಿಗೆ ನಿರಂತರ ಸಂಪನ್ಮೂಲ ಒದಗಿಸುತ್ತಿದ್ದ ಪ್ರಭಾವಿ ನಾಯಕ. ಕ್ರಿಶ್ಚಿಯನ್ ಸಮುದಾಯದಲ್ಲಿ ಮುಂಚೂಣಿಯಲಿದ್ದ ಕಾರಣ, ಸಮುದಾಯದ ಜನರ ರಾಜಕೀಯ ಧ್ವನಿಯಾಗಿಯೂ ಡೇವಿಡ್ ಗುರುತಿಸಿಕೊಂಡಿದ್ದ. ಗ್ರಾಮ ಪಂಚಾಯತ್ ಅಧ್ಯಕ್ಷನಾಗಿದ್ದಾಗ, ಅಪಾರ ಪ್ರಮಾಣದ ಸಂಪನ್ಮೂಲವನ್ನು ವಿನಿಯೋಗಿಸಿ ಗ್ರಾಮದ ಅಭಿವೃದ್ಧಿಗೆ ಟೊಂಕ ಕಟ್ಟಿ ಕೆಲಸ ಮಾಡಿದ್ದ. ಇಷ್ಟೆಲ್ಲಾ ಇದ್ದರೂ, ಡೇವಿಡ್ ಡಿಸೋಜಾ ಓರ್ವ ನಟೋರಿಯಸ್ ಕ್ರಿಮಿನಲ್​​ನಂತೆ ಸತ್ತಿರುವುದಕ್ಕೂ ಬಲವಾದ ಕಾರಣಗಳಿವೆ.

ಡೇವಿಡ್ ಡಿಸೋಜ ಮೇಲಿತ್ತು 21 ಕೇಸುಗಳು

ಡೇವಿಡ್ ಡಿಸೋಜಾ ಓರ್ವ ಅಭಿವೃದ್ಧಿ ಪರ ರಾಜಕಾರಣಿ. ಆದರೆ ಕ್ರಿಮಿನಲ್ ಹಿನ್ನೆಲೆಯಿಂದ ಹೆಸರು ಕೆಡಿಸಿಕೊಂಡಿದ್ದ. ವಿವಾದಗಳಿಗೂ ಈತನಿಗೂ ಅವಿನಾಭಾವ ಸಂಬಂಧ. ಪಡುಬಿದ್ರೆ ಭಾಗದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿದ್ದ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟದಲ್ಲಿ ಡೇವಿಡ್ ಪರಿಸರ ಪ್ರಿಯರೊಂದಿಗೆ ಗುರುತಿಸಿಕೊಂಡಿದ್ದ. ನಂತರ ಇದೇ ಹೋರಾಟಗಾರರಿಗೆ ಮಣ್ಣುಮುಕ್ಕಿಸಿ, ನಾಗಾರ್ಜುನ ಕಂಪನಿಯೊಂದಿಗೆ ಸೇರಿಕೊಂಡು ಗುತ್ತಿಗೆ ಪಡೆದಿದ್ದ. ಸಾಯುವವರೆಗೂ ಈ ಉಷ್ಣ ವಿದ್ಯುತ್ ಸ್ಥಾವರದ ಪ್ರಧಾನ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಸಾವಿರಾರು ಕೋಟಿ ರೂ ವ್ಯವಹಾರ ನಡೆಸುತ್ತಿದ್ದ. ಇದೇ ವ್ಯವಹಾರ ಡೇವಿಡ್​ಗೆ ಮುಳುವಾಗಿದ್ದು, ಕ್ರಿಮಿನಲ್​ನಂತೆ ಬೀದಿ ಹೆಣವಾಗಿದ್ದಾನೆ.

ಇಷ್ಟಕ್ಕೂ ಡೇವಿಡ್​ನ ಚರಿತ್ರೆ ಖತರ್ನಾಕ್ ಆಗಿದೆ. ಪರಿಸರ ಹೋರಾಟ ಮಾಡುತ್ತಿದ್ದ ಸ್ಥಳೀಯ ಬಡಪಾಯಿ ಗ್ರಾಮಸ್ಥರನ್ನು, ಭೂ ವತ್ತುವರಿ ಮಾಡುವಾಗ ಗನ್ ತೋರಿಸಿ ಬೆದರಿಕೆ ಹಾಕುತ್ತಿದ್ದ. ಸಮಾಜದಲ್ಲಿ ಅತ್ಯಂತ ಹಿಂದುಳಿದ ಕೆಲ ಸಮುದಾಯದ ವ್ಯಕ್ತಿಗಳನ್ನು, ಬಲಿಪಶು ಮಾಡಿಕೊಂಡು ತನ್ನೊಂದಿಗೆ ಇರಿಸಿ ತಾನು ನಡೆಸುವ ದೋ ನಂಬರ್ ಕೆಲಸಗಳಿಗೆ ಗುರಾಣಿಯಾಗಿ ಬಳಸುತ್ತಿದ್ದ. ಇದೇ ಕಾರಣಕ್ಕೆ ಮೈತುಂಬ ಕೇಸು ಹಾಕಿಸಿಕೊಂಡಿದ್ದ. ಈತನ ಮೇಲಿದ್ದ 21 ಕೇಸುಗಳ ಪೈಕಿ, 16 ಪ್ರಕರಣ ಪಡುಬಿದ್ರೆ ಠಾಣೆ ಒಂದರಲ್ಲಿ ದಾಖಲಾಗಿದೆ. ಇವೆಲ್ಲವೂ ಹೋರಾಟದ ಕಾಲದ ಬೆದರಿಕೆ ಪ್ರಕರಣಗಳು. ಐದು ಪ್ರಕರಣ ಈತ ವಾಸ ಮಾಡುತ್ತಿದ್ದ ಶಿರ್ವ ಠಾಣ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ಪೈಕಿ ಆ ಒಂದು ಪ್ರಕರಣದಲ್ಲಿ ಈತ ಆರೋಪಿಯಾಗಿ ಜೈಲು ಸೇರಿದ್ದು ಇದೆ.

ಚರ್ಚಿನ ಧರ್ಮ ಗುರುಗೆ ಬೆದರಿಕೆ: ಆತ್ಮಹತ್ಯೆಗೆ ಪ್ರಚೋದನೆ

2019 ಅಕ್ಟೋಬರ್ 11ರಂದು ಮಂಚಕಲ್ ಭಾಗದ ಜನಪ್ರಿಯ ಧರ್ಮ ಗುರು ಮಹೇಶ್ ಡಿಸೋಜ ತಾನು ಕೆಲಸ ಮಾಡುತ್ತಿದ್ದ ಚರ್ಚಿನ ಡಾನ್ ಬಾಸ್ಕೋ ಕಾಲೇಜಿನ, ಪ್ರಾಂಶುಪಾಲರ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಧರ್ಮ ಗುರು ಒಬ್ಬರ ಈ ಆಕಸ್ಮಿಕ ಸಾವು ಇಡೀ ಊರಿನ ಕ್ರಿಶ್ಚಿಯನ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಜನಾನುರಾಗಿ ಆಗಿದ್ದ ಧರ್ಮಗುರುಗಳ ಸಾವಿಗೆ ಡೇವಿಡ್ ಡಿಸೋಜಾ ಕಾರಣ ಅನ್ನೋದು ನಂತರ ಬಯಲಾಯಿತು. ಅವರು ಸಾಯುವ ಕೆಲ ಸಮಯದ ಮುಂಚೆ, ಇದೇ ಡೇವಿಡ್ ಡಿಸೋಜ ಅವರಿಗೆ ಬೆದರಿಕೆ ಹಾಕಿದ್ದ. ತನ್ನ ಪತ್ನಿಗೆ ನೀವು ನಿರಂತರ ಕರೆ ಮಾಡುತ್ತೀರಿ ಎಂದು ಬೆದರಿಸಿದ್ದ. ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿದೆ ಎಂದು ಪ್ರಕರಣ ದಾಖಲಿಸಿ, ಡೇವಿಡ್​​ನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು. ಬಳಿಕ ಡೇವಿಡ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.

ಶೋಕಿಲಾಲ ಡೇವಿಡ್: ದುಬಾರಿ ಮನೆ, ಊರೆಲ್ಲಾ ಹೆಸರು ಮಾಡುವ ಚಟ

ದಶಕಗಳ ಹಿಂದೆ ಡೇವಿಡ್​ಗೆ ಲಾಟರಿ ಹೊಡೆದು ಲಕ್ಷಾಂತರ ರೂ. ಬಂದಿತ್ತು ಎಂದು ಜನ ಗುಸು-ಗುಸು ಮಾತನಾಡಿಕೊಳ್ಳುತ್ತಿದ್ದರು. ತನ್ನ ಸಂಪಾದನೆಯ ಶೋಕಿ ತೋರಿಸಿಕೊಳ್ಳುವ ಚಟವು ಅವನಿಗಿತ್ತು. ಲಾಟರಿ ಹಣ ಬಂದಿರೋದು ವದಂತಿಯಾದರೂ ಅವನ ಬಳಿ ಸಂಪತ್ತಿಗೆ ಕೊರತೆ ಇರಲಿಲ್ಲ. ವಿದೇಶದಲ್ಲಿ ದುಡಿದು ಸಾಕಷ್ಟು ಸಂಪಾದಿಸಿ ಊರಿಗೆ ಬಂದು, ಈ ಭಾಗದಲ್ಲಿ ಶೋಭಾಜಿ ಮಾಡಿಕೊಂಡಿದ್ದ. ತನ್ನನ್ನು ಪ್ರಿನ್ಸ್ ಎಂದು ಕರೆಸಿಕೊಳ್ಳಲು ಹವಣಿಸುತ್ತಿದ್ದ. ಇದೇ ಹೆಸರಲ್ಲಿ ಬ್ರಾಂಡ್ ಕ್ರಿಯೇಟ್ ಮಾಡಿಕೊಂಡಿದ್ದ. ಪ್ರಿನ್ಸ್ ಹೆಸರಲ್ಲಿ ಬ್ರಾಂಡ್ ಕ್ರಿಯೇಟ್ ಮಾಡುವ ಹಠಕ್ಕೆ ಬಿದ್ದಿದ್ದ. ಪ್ರಿನ್ಸ್ ಹೆಸರಿನಲ್ಲಿ ಬಂಗಲೆ ಕಟ್ಟಿಸಿದ್ದ. ಬಸ್ ಉದ್ಯಮ ನಡೆಸಿದ್ದ. ಊರಿನ ಯಾವುದೇ ಆಟೋ ಚಾಲಕರು ಪ್ರಿನ್ಸ್ ಹೆಸರು ಹಾಕಿಕೊಂಡರೆ ಅವರಿಗೆ ಹಣ ಕೊಟ್ಟು ಶೋಕಿ ಮಾಡುತ್ತಿದ್ದ. ಒಟ್ಟಾರೆ ರಾಜಕಾರಣಿಯಾಗಿ ಜನಾನುರಾಗಿ ಆಗಿದ್ದ ಡೇವಿಡ್, ತನ್ನ ದುರ್ಬುದ್ಧಿಯಿಂದ ಅಷ್ಟೇ ಪ್ರಮಾಣದಲ್ಲಿ ಹೆಸರು ಕೆಡಿಸಿಕೊಂಡಿದ್ದ.

ಅದಾನಿ ಉಷ್ಣ ವಿದ್ಯುತ್ ಸ್ಥಾವರ ಸೇರಿದ ಬಳಿಕ ಕುಲಾಯಿಸಿದ ಅದೃಷ್ಟ 

ಊರಿನ ಹೋರಾಟಗಾರರನ್ನೇ ದಾಳ ಮಾಡಿಕೊಂಡು, ಬಳಿಕ ಅವರಿಗೆ ತಿರುಗಿಬಿದ್ದು, ಜನವಿರೋಧಿ ಕಂಪನಿಗೆ ಬೇಕಾದ ಭೂಮಿ ಒದಗಿಸಿ ಕೊಡುವಲ್ಲಿ ಡೇವಿಡ್ ಪ್ರಮುಖ ಪಾತ್ರವಹಿಸಿದ್ದ. ತನ್ನ ಗ್ರಾಮದ ಎಕರೆಗಟ್ಟಲೆ ಭೂಮಿಯನ್ನು ಜನವಿರೋಧಿ ಕಂಪನಿಗೆ ಮೂರು ಕಾಸಿನ ಹಣಕ್ಕೆ ಮಾರಾಟ ಮಾಡಿಸುವಲ್ಲಿ ಡೇವಿಡ್ ಪಾತ್ರ ಇತ್ತು. ಇದೇ ಕಾರಣಕ್ಕೆ ಪರಿಸರಪ್ರಿಯರು, ಹೋರಾಟಗಾರರು ಆತನಿಗೆ ಹಿಡಿಶಾಪ ಹಾಕಿದ್ದರು.

ಬೀದಿ ಹೆಣವಾಗಿದ್ದು ಏಕೆ?

ಇಷ್ಟಕ್ಕೂ ಸ್ವತಃ ರೌಡಿ ಅಂತಿದ್ದ, ಡೇವಿಡ್ ಪುಡಿ ರೌಡಿಗಳಿಂದ ಹತ್ಯೆಯಾಗಿದ್ದನ್ನು ಊರಿನವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎದುರು ಸಿಕ್ಕವರಿಗೆಲ್ಲ ಪಿಸ್ತೂಲ್ ತೋರಿಸಿ ಬೆದರಿಸುತ್ತಿದ್ದವ, ತಾನೇ ಗುಂಡೇಟಿಗೆ ಬಲಿಯಾಗಿರುವುದರ ಹಿಂದೆ ರೋಚಕ ಕಥೆ ಇದೆ. ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಕಂಪನಿಯ ಗುತ್ತಿಗೆದಾರನಾಗಿ ಸೇರಿಕೊಂಡ ನಂತರ ಈತನ ವಹಿವಾಟುಗಳು ಬಲು ಜೋರಾಗಿ ನಡೆದಿತ್ತು. ಕಂಪನಿಯ ಸಿಎಸ್ಆರ್ ಫಂಡ್ ವಿನಿಯೋಗ ಸೇರಿದಂತೆ ಹಲವು ಮಹತ್ವದ ಚಟುವಟಿಕೆಗಳಲ್ಲಿ ಈತ ಭಾಗಿಯಾಗಿದ್ದ. ಕಂಪನಿ ಪ್ರಮುಖರಿಗೆ ಸ್ಥಳೀಯ ಪ್ರಭಾವಿ ವ್ಯಕ್ತಿಯಾಗಿ ಸಹಕರಿಸುತ್ತಿದ್ದ. ಸಾವಿರಾರು ಕೋಟಿಯ ಕಾಮಗಾರಿಗಳು ಕಂಪನಿ ಆವರಣದಲ್ಲಿ ನಡೆಯುತ್ತಿದ್ದು. ಅದನ್ನು ವಹಿಸಿಕೊಂಡು ಕೇರಳ ಸಂಪತ್ತು ಮಾಡಿಕೊಂಡಿದ್ದ.

ಹಣದ ವಿಚಾರಕ್ಕೆ ನಡೆಯಿತಾ ಶೂಟೌಟ್​?

ಉತ್ತರ ಭಾರತದ ಉದ್ಯಮಿಯೊಬ್ಬರಿಗೆ, ಯುಪಿಸಿಎಲ್ ಕಂಪನಿಯ ಬಹುದೊಡ್ಡ ಗುತ್ತಿಗೆ ಸಿಕ್ಕಿತ್ತು. ಹತ್ತಾರು ಕೋಟಿ ಮೌಲ್ಯದ ಈ ಗುತ್ತಿಗೆ ಕೆಲಸವನ್ನು ಡೇವಿಡ್ ಅವರಿಂದ ವಹಿಸಿಕೊಂಡಿದ್ದ. ಕಾಮಗಾರಿ ಪೂರ್ಣಗೊಳಿಸಿದ್ದ. ಕೆಲಸ ಪೂರ್ಣಗೊಂಡರು ಆ ಉದ್ಯಮಿ ತಕರಾರು ತೆಗೆದು ಇವನಿಗೆ ಹಣ ಪಾವತಿಸಿರಲಿಲ್ಲ. ಇದು ಕೋಟ್ಯಂತರ ರೂ ವ್ಯವಹಾರ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕೆ ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು. ಪದೇ ಪದೇ ಗಲಾಟೆ ಕೂಡ ನಡೆದಿತ್ತು. ಇವರಿಬ್ಬರ ನಡುವಿನ ದ್ವೇಷ ತಾರಕಕ್ಕೆ ಹೋಗಿ ಡೇವಿಡ್ ಉದ್ಯಮಿಗೆ ಸಂಬಂಧಿಸಿದ ಎರಡು ಮೂರು ಕೋಟಿ ರೂ ಸ್ವತ್ತುಗಳನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡು ಇರಿಸಿಕೊಂಡಿದ್ದ. ಇದು ಆ ಉದ್ಯಮಿಯನ್ನು ಕೆರಳಿಸಿತ್ತು. ನಿನಗೆ ಏನು ಮಾಡಬೇಕೆಂದು ನನಗೆ ಗೊತ್ತು ಎಂದು ಡೇವಿಡ್ ಬೆದರಿಕೆ ಹಾಕಿದ್ದ. ಇದೇ ಬೆದರಿಕೆಗೆ ರಿವೆಂಜ್ ತೀರಿಸಿಕೊಳ್ಳಲು ಆ ಉದ್ಯಮಿ ಸುಪಾರಿ ಕಿಲ್ಲರ್​​ಗಳನ್ನ ನಿಯೋಜಿಸಿರುವ ಶಂಕೆ ಆಧಾರದಲ್ಲಿ ತನಿಖೆ ಶುರುವಾಗಿದೆ.

ಗುಂಡು ಹೊಡೆದವರು ಯಾರು?

ಇಷ್ಟಕ್ಕೂ ಘಟನೆಯ ಸಿಸಿಟಿವಿ ದೃಶ್ಯ ಗಮನಿಸಿದವರಿಗೆ ಇದು ಸ್ಥಳೀಯರ ಕೃತ್ಯ ಅಲ್ಲ ಅನ್ನೋದು ಮೊದಲೇ ಗೊತ್ತಾಗಿತ್ತು. ಯಾವುದೇ ಮಾಸ್ಕ ಧರಿಸದೆ ರಾಜಾರೋಷವಾಗಿ ಬಂದು ಗುಂಡು ಹೊಡೆದು ಜನರ ಎದುರಲ್ಲೇ ದ್ವಿಚಕ್ರ ವಾಹನದಲ್ಲಿ ಪರಾರಿಯಾದ ರೀತಿ ಅಪ್ಪಟ ಉತ್ತರ ಭಾರತೀಯ ಶೈಲಿಯದ್ದಾಗಿತ್ತು. ಕೊನೆಗೂ ಆರೋಪಿಗಳು ಪತ್ತೆಯಾಗಿದ್ದಾರೆ. ಈ ಕೃತ್ಯದಲ್ಲಿ ನೇರವಾಗಿ ಮೂರು ಜನ ಭಾಗಿಯಾಗಿದ್ದಾರೆ. ಮೂವರು ಆರೋಪಿಗಳು ಬಸ್‌ನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಬೈಂದೂರಿನ ಒತ್ತಿನೆಣೆ ಬಳಿ ಬಸ್‌ ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿಗಳು ಬಸ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದರು. ಆರೋಪಿಗಳನ್ನು ಬೆನ್ನಟ್ಟಿದ ವೇಳೆ ರಾಜು (42), ಉತ್ತರ ಪ್ರದೇಶದ ಥಾಣಾ ಪಿಲ್ವ ನಿವಾಸಿ, ಕಾಪು ಠಾಣೆಯ ಪಿಎಸ್‌ಐ ತೇಜಸ್ವಿ ಅವರನ್ನು ದೂಡಿ, ಪಿಸ್ತೂಲ್‌ನಿಂದ ಪೊಲೀಸರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಆತನ ಬಳಿಯಿದ್ದ ಪಿಸ್ತೂಲ್‌ನ್ನೂ ವಶಪಡಿಸಿಕೊಳ್ಳಲಾಗಿದೆ.

ಗುಂಡಿನ ದಾಳಿಯಲ್ಲಿ ಪಿಎಸ್‌ಐ ತೇಜಸ್ವಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರಾಜು ಕೂಡ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಉತ್ತರಾಖಂಡದ ಅಜಯ್‌ ರಸ್ತೋಗಿ ಅಲಿಯಾಸ್‌ ಅನ್ಮೋಲ್‌ (23) ಅವರನ್ನು ಕುಮಟಾ ಪೊಲೀಸರ ಸಹಕಾರದಿಂದ ಕುಮಟಾದಲ್ಲಿ ಹಾಗೂ ಬಿಹಾರದ ಜಿಯಾಹುಲ್‌ ವಜೂಲ್‌ ಶೇಖ್‌ ಅಲಿಯಾಸ್‌ ದೀಪಕ್‌ (38) ಅವರನ್ನು ಭಟ್ಕಳ ಪೊಲೀಸರ ಸಹಕಾರದಿಂದ ಭಟ್ಕಳದಲ್ಲಿ ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.

ಸುಪಾರಿ ಕೊಟ್ಟದ್ದು ಯಾರು?

ಸುಪಾರಿ ಕೊಟ್ಟವ ನಾಲ್ಕು ತಿಂಗಳ ಮುಂಚೆಯೇ ಅವರನ್ನು ಉಡುಪಿಯಲ್ಲಿ ಬಿಟ್ಟಿದ್ದ. ಮೂವರಿಗೂ ಪರಸ್ಪರ ಭೇಟಿ ಇಲ್ಲ, ಪರಿಚಯ ಇಲ್ಲ. ಎರಡು ದಿನಗಳ ಹಿಂದೆ ಡೇವಿಡ್​ನನ್ನು ಕೊಲ್ಲುವ ಟಾಸ್ಕ್ ಕೊಟ್ಟು, ಫೋಟೋ ಕಳುಹಿಸಿದ್ದಾರೆ. ಬಳಿಕ ಮೂವರು ಜೊತೆಯಾಗಿ ಹೊಂಚು ಹಾಕಿ ಕುಳಿತು ಕೊಲೆ ಮಾಡಿದ್ದಾರೆ.

ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಪ್ರಿನ್ಸ್ ಡೇವಿಡ್

ಪ್ರಿನ್ಸ್ ಡೇವಿಡ್​ ಕಷ್ಟಗಳಿಗೆ ಸ್ಪಂದಿಸುತ್ತಿದ್ದ. ನಡುರಾತ್ರಿ ಸಹಾಯಕ್ಕೆ ಕರೆದರೂ ಧಾವಿಸಿ ಹೋಗುತ್ತಿದ್ದ ವ್ಯಕ್ತಿ. ಅನೇಕ ಬಡ ಹೆಣ್ಣು ಮಕ್ಕಳ ಮದುವೆಗೆ ಸಹಕಾರ ನೀಡುವುದರ ಜೊತೆಗೆ, ರಿಕ್ಷಾ ಚಾಲಕರಿಗೆ ನಿಲ್ದಾಣ ಕಟ್ಟಿಸಿ ಕೊಡುವುದರ ಜೊತೆಗೆ ಪ್ರತಿಯೊಂದು ಕಷ್ಟ ನಷ್ಟಗಳಲ್ಲಿ ಭಾಗಿಯಾಗುತ್ತಿದ್ದ. ಊರಿನಲ್ಲಿ ಸೌಹಾರ್ದತೆಯ ವಿಚಾರ ಬಂದಾಗ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ. ಊರಿನಲ್ಲಿ ಗಣೇಶ ಚತುರ್ಥಿ ಸಾರ್ವಜನಿಕ ಆಚರಣೆ ಆರಂಭಿಸಿದ್ದೆ ಡೇವಿಡ್.

ಡೇವಿಡ್ ಪತ್ನಿ ಪ್ರಿಯಾ ಡೇವಿಡ್ ಹೇಳಿದ್ದಿಷ್ಟು 

‘ಪತಿಯ ಸಾವು ಆಕಸ್ಮಿಕ. ನಮ್ಮ ಬಳಿ ಉದ್ಯಮದ ಯಾವುದೇ ವಿಚಾರ ಹೇಳಿಕೊಂಡಿರಲಿಲ್ಲ. ಪ್ರತಿದಿನ ಅವರ ದಿನಚರಿಯಂತೆ, ಊಟ ಮುಗಿಸಿ ಕಚೇರಿಗೆ ತೆರಳಿದ್ದರು. ದುರ್ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿಗೆ ಧಾವಿಸಿ ಆಸ್ಪತ್ರೆಗೆ ಸೇರಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪತಿ, ಕುಟುಂಬಕ್ಕೆ ಯಾವುದೇ ಕೊರತೆ ಮಾಡಿರಲಿಲ್ಲ. ಪತಿಗೆ ಗುಂಡು ಹಾರಿಸಿ ರಕ್ತ ಚೆಲ್ಲಿದವರ ರಕ್ತ ಅದೇ ರೀತಿ ಬೀಳಬೇಕು. ಪೊಲೀಸರು ನಡೆಸಿರುವ ಶೀಘ್ರ ಕಾರ್ಯಾಚರಣೆಯಿಂದ ನೆಮ್ಮದಿಯಾಗಿದೆ. ಆರೋಪಿಗಳಿಗೆ ಮತ್ತು ಈ ಸಂಚಿನಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು. ನನ್ನ ಪತಿ ಉದ್ಯಮಿಯಾಗಿ, ರಾಜಕಾರಣಿಯಾಗಿ ಊರಿನ ಅಭಿವೃದ್ಧಿಗೆ ಅಪಾರ ಶ್ರಮಿಸಿದ್ದಾರೆ. ಅವರ ಸಾವಿನಿಂದ ಆಘಾತವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ಉಡುಪಿಯಲ್ಲಿ ಶೂಟೌಟ್: ಕಾಂಗ್ರೆಸ್ ಮುಖಂಡನ ಮೇಲೆ ಗುಂಡಿನ ದಾಳಿ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುದರಂಗಡಿಯಲ್ಲಿ ಪ್ರಿನ್ಸ್ ಅಂದರೆ ರಾಜಕುಮಾರನಂತೆ ಮೆರೆದಾಡಿದ್ದ ಡೇವಿಡ್ ಡಿಸೋಜ, ತನ್ನದೇ ಊರಿನ ಜನರ ನಡುವೆ ಹೆಣವಾಗಿ ಬಿದ್ದಿದ್ದಾನೆ. ಎಷ್ಟೇ ಒಳ್ಳೆ ಕೆಲಸ ಮಾಡಿದರೂ, ದುಷ್ಟತನಕ್ಕೆ ಬೆಲೆ ತೆರಲೇಬೇಕು ಅನ್ನೋದಕ್ಕೆ ಪ್ರಿನ್ಸ್ ಡೇವಿಡ್​​ ಸಾವು ಉದಾಹರಣೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:35 pm, Sat, 8 August 26

Source link

ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ: ಈ ಬಗ್ಗೆ ಗೃಹ ಸಚಿವ ಹೇಳಿದ್ದೇನು? – Kannada News | Home Minister Priyank Kharge Talks about illegal immigrants In Bengaluru

ಬೆಂಗಳೂರು, (ಆಗಸ್ಟ್ 08): ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಪತ್ತೆಗೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದಲ್ಲಿ ಡಿಸಿಪಿ ಎಂ.ನಾರಾಯಣ್ ನೇತೃತ್ವದಲ್ಲಿ 23 ಪೊಲೀಸರ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದು, 29 ಸ್ಥಳಗಳಲ್ಲಿ 1909 ಜನರನ್ನ ವಶಕ್ಕೆ ಪಡೆದಿದ್ದಾರೆ. ಈ ಪೈಕಿ 15 ಮಂದಿ ಬಾಂಗ್ಲಾ ವಲಸಿಗರು ಎಂಬುವುದು ದೃಢಪಟ್ಟಿದ್ದು, ಬಾಂಗ್ಲಾದ ಬಾಗೇರಹತ್​​ನ ಖುಲ್ನಾ ಜಿಲ್ಲೆಯವರು ಎಂದು ತಿಳಿದುಬಂದಿದೆ. ಇವರ ಬಳಿ ಪಶ್ಚಿಮ ಬಂಗಾಳ, ಅಸ್ಸಾಂ ಮೂಲದ ಆಧಾರ್ ಕಾರ್ಡ್ ಪತ್ತೆಯಾಗಿದ್ದು, 1,894 ಅಕ್ರಮ ವಲಸಿಗರ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಏನು ಹೇಳಿದ್ದಾರೆ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಸಿಟ್ಟು ತ್ಯಾಗ ಮಾಡಿದ್ರೆ ಮುಂದೆ ಸಿಎಂ ಆಗ್ತೀಯಾ’: ಸಚಿವ ವಿಜಯಾನಂದ ಕಾಶಪ್ಪನವರ್‌ಗೆ ಸಿದ್ದನಕೊಳ್ಳ ಶ್ರೀಗಳ ಸ್ಫೋಟಕ ಭವಿಷ್ಯ – Kannada News | Minister Kashappanavar to be CM? Siddanakolla Swamiji’s Prophecy Shakes Karnataka

ಬಾಗಲಕೋಟೆ, ಆ. 08: ನೂತನವಾಗಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ವಿಜಯಾನಂದ ಕಾಶಪ್ಪನವರ್ ಅವರು ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಪ್ರಸಿದ್ಧ ಸಿದ್ದನಕೊಳ್ಳ ಶ್ರೀಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ವೇಳೆ, ಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವಂತಹ ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ.

“ನಿನ್ನ ಕೋಪವನ್ನು (ಸಿಟ್ಟು) ಸಂಪೂರ್ಣವಾಗಿ ತ್ಯಾಗ ಮಾಡಿದರೆ ನೀನು ಮುಂದೆ ರಾಜ್ಯದ ಮುಖ್ಯಮಂತ್ರಿ ಆಗುತ್ತೀಯಾ” ಎಂದು ಶಿವಕುಮಾರ ಶ್ರೀಗಳು ನೂತನ ಸಚಿವರಿಗೆ ಆಶೀರ್ವದಿಸಿದ್ದಾರೆ. ಸಚಿವ ವಿಜಯಾನಂದ ಕಾಶಪ್ಪನವರ್ ಅವರು ತಮ್ಮ ತಾಯಿ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ್ ಅವರೊಂದಿಗೆ ಮಠಕ್ಕೆ ಆಗಮಿಸಿ, ಸಿದ್ದಪ್ಪಜ್ಜನ ಪವಿತ್ರ ಗದ್ದುಗೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಇಲ್ಲಿದೆ ನೋಡಿ ವಿಡಿಯೋ:

“ಕಳೆದ 2023ರಲ್ಲಿ ನೀನು ಶಾಸಕನಾಗಿ ಸಚಿವನಾಗುತ್ತೀಯಾ ಎಂದು ಭವಿಷ್ಯ ನುಡಿದಿದ್ದೆ. ಸಿದ್ದಪ್ಪಜ್ಜನ ಗದ್ದುಗೆಯ ಮುಂದೆ ನೀನು ಮಾಡಿದ ಪ್ರಾರ್ಥನೆ ಫಲಿಸಿದ್ದು, 2023ರಲ್ಲಿ ನುಡಿದ ಭವಿಷ್ಯ 2026ರಲ್ಲಿ ನಿಜವಾಗಿದೆ” ಎಂದು ಸ್ವಾಮೀಜಿ ನೆನಪಿಸಿಕೊಂಡರು.

ಇದನ್ನೂ ಓದಿ: ‘ಸೋಷಿಯಲ್ ಮೀಡಿಯಾ ವಿಜಿಲಾಂಟಿಸಂ ಸಹಿಸಲ್ಲ’: ಅಕ್ರಮ ವಲಸಿಗರ ವೀಡಿಯೊ ವೈರಲ್ ಮಾಡುವವರಿಗೆ ಪ್ರಿಯಾಂಕ್ ಖರ್ಗೆ ಖಡಕ್ ವಾರ್ನಿಂಗ್

ಸಚಿವರಿಗೆ ಆಶೀರ್ವಚನ ನೀಡಿದ ಸ್ವಾಮೀಜಿ, “ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆ ಅಲ್ಲ ಎನ್ನುವ ನಿನ್ನ ಮಾತು ನನಗೆ ತುಂಬಾ ಇಷ್ಟವಾಯಿತು. ನಿನ್ನಲ್ಲಿರುವ ಸಿಟ್ಟನ್ನು ಬಿಟ್ಟರೆ ಮುಂದೆ ಸಿಎಂ ಆಗ್ತಿಯಾ. ಆದರೆ ಸಿಎಂ ಆಗ್ತಿ ಅಂದರೆ ಮಂದಿ ಸುಮ್ಮನಿರಲ್ಲ, ಎಚ್ಚರಿಕೆಯಿಂದಿರು” ಎಂದು ಮಾರ್ಮಿಕವಾಗಿ ಕಿವಿಮಾತು ಹೇಳಿದರು. ಕಲಾಪೋಷಕ ಮಠವೆಂದೇ ಪ್ರಸಿದ್ಧಿ ಪಡೆದಿರುವ ಸಿದ್ದನಕೊಳ್ಳ ಶ್ರೀಗಳು ನುಡಿದಿರುವ ಈ ಭವಿಷ್ಯ ಇದೀಗ ಉತ್ತರ ಕರ್ನಾಟಕ ಹಾಗೂ ರಾಜ್ಯ ರಾಜಕೀಯ ಅಂಗಳದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:19 pm, Sat, 8 August 26

Source link

IND vs SL: ಎಡಗೈ ವೇಗಿಯ ಮುಂದೆ ಮತ್ತೆ ಸೊನ್ನೆ ಸುತ್ತಿದ ಯಶಸ್ವಿ ಜೈಸ್ವಾಲ್

Source link

Exit mobile version