ENG vs ITA: ಇಟಲಿ ವಿರುದ್ಧ ಇಂಗ್ಲೆಂಡ್ಗೆ ಪ್ರಯಾಸದ ಗೆಲುವು; ಸೂಪರ್ 8 ಸುತ್ತಿಗೆ ಎಂಟ್ರಿ – Kannada News | T20 World Cup 2026: England Edges Spirited Italy in Thriller; Jacks Shines
2026 ರ ಟಿ20 ವಿಶ್ವಕಪ್ ದಿನ ಕಳೆದಂತೆ ರೋಚಕ ಘಟ್ಟದತ್ತ ಸಾಗುತ್ತಿದೆ. ಈ ಆವೃತ್ತಿಯಲ್ಲಿ ಕೆಲವು ಬಲಿಷ್ಠ ತಂಡಗಳು ನಿರಸ ಪ್ರದರ್ಶನ ನೀಡುತ್ತಿದ್ದರೆ, ಕೆಲವು ದುರ್ಬಲ ತಂಡಗಳು ಗಮನಾರ್ಹ ಪ್ರದರ್ಶನ ನೀಡುತ್ತಿವೆ. ಕಳಪೆ ಪ್ರದರ್ಶನ ನೀಡುತ್ತಿರುವ ಬಲಿಷ್ಠ ತಂಡಗಳ ಪೈಕಿ ಎರಡು ಬಾರಿಯ ಚಾಂಪಿಯನ್ ಇಂಗ್ಲೆಂಡ್ ಕೂಡ ಸೇರಿದೆ. ಆಡಿರುವ 4 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್, ಈ ಮೂರು ಪಂದ್ಯಗಳನ್ನು ಕೂದಲೆಳೆ ಅಂತರದಿಂದ ಗೆದ್ದುಕೊಂಡು ಸೋಲಿನಿಂದ ಪಾರಾಗಿದ್ದು ಮಾತ್ರವಲ್ಲದೆ ಸೂಪರ್ 8 ಸುತ್ತಿಗೆ ಅರ್ಹತೆ…