ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು – Kannada News | Bridge Collapse in Jammu Kashmirs Bantalab 7 Workers Trapped

ಶ್ರೀನಗರ, ಮೇ 1: ಜಮ್ಮುವಿನ ಬಂಟಲಾಬ್‌ನ ಥಾರ್ ಪ್ರದೇಶದಲ್ಲಿ ಇಂದು ಒಂದು ದೊಡ್ಡ ಅಪಘಾತ (Accident) ಸಂಭವಿಸಿದೆ. ಸೇತುವೆಯ ಅಗಲೀಕರಣದ ಸಮಯದಲ್ಲಿ ಕಾರ್ಮಿಕರು ಕೆಳಗೆ ಕೆಲಸ ಮಾಡುತ್ತಿದ್ದಾಗ ಸೇತುವೆ ಕುಸಿದಿದೆ. ಇದರಿಂದ 7 ಕಾರ್ಮಿಕರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಇದ್ದಕ್ಕಿದ್ದಂತೆ, ಸೇತುವೆಯ ದೊಡ್ಡ ಭಾಗ ಕುಸಿದು, ಕಾರ್ಮಿಕರು ಅದರ ಕೆಳಗೆ ಸಿಲುಕಿಕೊಂಡರು. 7 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಮಾಧಿಯಾದರು. ಈ ಘಟನೆಯ ನಂತರ ತಕ್ಷಣವೇ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಎಸ್‌ಡಿಆರ್‌ಎಫ್, ಭಾರತೀಯ ಸೇನೆ ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ ಇಬ್ಬರು ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ​: ಅಂದು ಪೊಲೀಸರ ನಿರ್ಲಕ್ಷ್ಯವೇ ಈಗ ಶಾರೀಕ್ ಬಾಂಬರ್ ಆಗಲು ಕಾರಣವಾಯ್ತಾ? – Kannada News | Mangaluru Cooker Bomb Blast Case: Did police negligence cause Shariq to become a bomber

ಮಂಗಳೂರು, ಮೇ 01: ನಗರದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ (Cooker Bomb Blast Case) ಅಪರಾಧಿ ಮೊಹಮ್ಮದ್ ಶಾರೀಕ್‌ಗೆ ಎನ್‌ಐಎ (NIA) ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಆದರೆ, ಕೇವಲ 10 ವರ್ಷಗಳ ಶಿಕ್ಷೆ ಸಾಕಾಗುವುದಿಲ್ಲ ಎಂದು ಎನ್‌ಐಎ, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದೆ. ಇನ್ನು ಶಾರೀಕ್ ಬಾಂಬರ್ ಆಗಲು ಪೊಲೀಸ್ ನಿರ್ಲಕ್ಷವು ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಜೀವಾವಧಿ ಶಿಕ್ಷೆ ಏಕೆ?

ಅದು 2022 ನವೆಂಬರ್ 19. ಮಂಗಳೂರಿನ ಕಂಕನಾಡಿ ಬಳಿ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟಗೊಂಡಿತ್ತು. ಮೊಹಮ್ಮದ್ ಶಾರೀಕ್ ತೆಗೆದುಕೊಂಡು ಹೋಗುತ್ತಿದ್ದ ಬಾಂಬ್ ಸ್ಫೋಟಗೊಂಡಿತ್ತು. ಬಳಿಕ ಆತ ಅಂದರ್ ಆಗಿದ್ದ. ಎನ್ಐಎ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಸಜೆ ವಿಧಿಸಿದೆ. ಇನ್ನು 6 ವರ್ಷ ಶಿಕ್ಷೆ ಮಾತ್ರ ಬಾಕಿ ಇದ್ದು ಬಿಡುಗಡೆಯಾಗುವ ವೇಳೆಗೆ ಸುಮಾರು 33 ವರ್ಷ ವಯಸ್ಸಾಗಿರುತ್ತದೆ. ಆ ವಯಸ್ಸಿನಲ್ಲಿ ಆತ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದರೆ, ಭಯೋತ್ಪಾದಕ ಸಂಘಟನೆಗಳು ಆತನನ್ನು ಸಂಪರ್ಕಿಸಿ ಮತ್ತೆ ವಿಧ್ವಂಸಕ ಕೃತ್ಯಗಳಿಗೆ ಪ್ರಚೋದಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ತನಿಖೆಯ ವೇಳೆ ಆತ ಈಗಾಗಲೇ ಹಲವು ಭಯೋತ್ಪಾದಕ ಸಂಘಟನೆಗಳ ಸಂಪರ್ಕದಲ್ಲಿದ್ದ ಎಂಬುದು ಬಹಿರಂಗವಾಗಿದೆ. ಹೀಗಾಗಿ, ಸಮಾಜದ ಹಿತದೃಷ್ಟಿಯಿಂದ ಆತನಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಹೈಕೋರ್ಟ್​ಗೆ ಎನ್ಐಎ ಮನವಿ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಪೊಲೀಸ್ ನಿರ್ಲಕ್ಷ್ಯವೇ ಅನಾಹುತಕ್ಕೆ ಮುನ್ನುಡಿಯಾಯಿತೇ?

ಇನ್ನು ಶಾರೀಕ್ ತನ್ನ ಸಹಚರ ಮಾಜ್ ಮುನೀರ್ ಜೊತೆ 2020ರ ನವೆಂಬರ್​ನಲ್ಲಿ ಉಗ್ರ ಪರ ಬರಹವನ್ನು ಮಂಗಳೂರಿನ ಎರಡು ಗೋಡೆಗಳಲ್ಲಿ ಬರೆದಿದ್ದ. ಆ ಕೇಸ್​ನಲ್ಲಿ ಇವರಿಬ್ಬರು ಸೇರಿ ಮೂವರ ಬಂಧನವಾಗಿತ್ತು. ಆದರೆ ಪೊಲೀಸ್ ನಿರ್ಲಕ್ಷತನದಿಂದ ಆ ಕೇಸ್ ಕೋರ್ಟ್​ನಲ್ಲಿ ಹಳ್ಳಹಿಡಿತ್ತು.

ಮಂಗಳೂರು ಬಾಂಬ್ ಸ್ಫೋಟ ತಪ್ಪಿಸಬಹುದಿತ್ತು? 

ಸಾಕ್ಷಿದಾರರು ಮತ್ತು ಪಂಚರನ್ನು ಸರಿಯಾಗಿ ಬಳಸಿಕೊಂಡಿಲ್ಲ. ಆಳವಾದ ತನಿಖೆ ನಡೆಸದೆ ಆತುರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪೊಲೀಸರ ಈ ತನಿಖಾ ವೈಫಲ್ಯದಿಂದ ಆರೋಪಿಗಳಿಗೆ ಬೇಗ ಜಾಮೀನು ಸಿಕ್ಕಿತ್ತು. ಬಿಡುಗಡೆ ಬಳಿಕ ಶಾರೀಕ್ ಮತ್ತು ಮಾಜ್​​ನಿಂದ ಶಿವಮೊಗ್ಗದ ತಂಗಾತೀರದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲಾಗಿತ್ತು. ಬಳಿಕ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಗೋಡೆ ಬರಹ ಕೇಸ್​​ ತನಿಖೆಯನ್ನು ಸಿಬಿಐ ಅಥವಾ ಎನ್ಐಎಗೆ ವಹಿಸಿದ್ದರೆ ಅಥವಾ ಸರಿಯಾಗಿ ತನಿಖೆ ಮಾಡಿದ್ದರೆ ಮಂಗಳೂರು ಬಾಂಬ್ ಸ್ಫೋಟವನ್ನು ತಪ್ಪಿಸಬಹುದಾದ ಸಾಧ್ಯತೆಯಿತ್ತು.

ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಮೊಹಮ್ಮದ್ ಶಾರಿಕ್‌ಗೆ 10 ವರ್ಷ ಕಠಿಣ ಶಿಕ್ಷೆ

ಕೆಲ ಮೂಲಗಳ ಪ್ರಕಾರ ಅಂದಿನ ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಈ ಕೇಸ್ ಹಳ್ಳ ಹಿಡಿಸಲು ಉಗ್ರರಿಂದ ಲಂಚ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಈ ಕೇಸ್ ರಿ ಓಪನ್ ಆಗಿ ಎನ್ಐಎಗೆ ಹೋದರೆ ಸತ್ಯಾಸತ್ಯತೆಗಳು ಹೊರಬೀಳಲಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

RR vs DC: 5 ಸಿಕ್ಸ್, 90 ರನ್! ದಂಡ ಕಟ್ಟಿದ ಬಳಿಕ ಫಾರ್ಮ್​ಗೆ ಮರಳಿದ ರಿಯಾನ್ ಪರಾಗ್ – Kannada News | Riyan Parag’s IPL Comeback: Fiery 90 vs DC after Fine, Finds Form

ಕೆಲವೇ ದಿನಗಳ ಹಿಂದೆ ಐಪಿಎಲ್ ಪಂದ್ಯದ ವೇಳೆ ನಿಷೇಧಿತ ಇ-ಸಿಗರೇಟ್ ಸೇದಿದಕ್ಕೆ ಪಂದ್ಯ ಶುಲ್ಕ ಶೇಕಡಾ 25 ರಷ್ಟು ಮೊತ್ತವನ್ನು ಬಿಸಿಸಿಐಗೆ ದಂಡವಾಗಿ ಪಾವತಿಸಿ, ಇದರ ಜೊತೆಗೆ ಒಂದು ಡಿಮೆರಿಟ್ ಅಂಕವನ್ನು ಪಡೆದಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್, ಈ ಆವೃತ್ತಿಯಲ್ಲಿ ಕೊನೆಗೂ ತಮ್ಮ ಫಾರ್ಮ್​ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ ಪರಾಗ್ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಈ ಆವೃತ್ತಿಯಲ್ಲಿ ಪರಾಗ್ ಬಾರಿಸಿದ ಮೊದಲ ಅರ್ಧಶತಕವಾಗಿತ್ತು.

ವಾಸ್ತವವಾಗಿ ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಬೇಗನೇ ಔಟಾದರು. ಹೀಗಾಗಿ ಬೇಗನೇ ಬ್ಯಾಟಿಂಗ್​ಗೆ ಬಂದ ಪರಾಗ್ ತಂಡದ ಇನ್ನಿಂಗ್ಸ್ ಕಟ್ಟುವುದರ ಜೊತೆಗೆ ಧ್ರುವ್ ಜುರೆಲ್ ಅವರೊಂದಿಗೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು 102 ರನ್‌ಗಳ ಜೊತೆಯಾಟವನ್ನು ಕಲೆಹಾಕಿದರು.

ವೈಭವ್ ಸೂರ್ಯವಂಶಿ ವಿಕೆಟ್ ಪತನದ ನಂತರ ಕ್ರೀಸ್‌ಗೆ ಬಂದ ರಿಯಾನ್ ಪರಾಗ್ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಆಡಲು ಪ್ರಾರಂಭಿಸಿದರು. ಕೈಲ್ ಜೇಮಿಸನ್ ಓವರ್‌ನಲ್ಲಿ ಎರಡು ಸಿಕ್ಸ್ ಮತ್ತು ಒಂದು ಬೌಂಡರಿ ಬಾರಿಸಿದರು. ನಂತರ ಅಕ್ಷರ್ ಪಟೇಲ್ ಓವರ್‌ನಲ್ಲಿ ಪರಾಗ್ ಸತತ ಎರಡು ಸಿಕ್ಸ್‌ಗಳನ್ನು ಬಾರಿಸಿದರು. ತಮ್ಮ ಅರ್ಧಶತಕದ ಬಳಿಕವೂ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್‌ ಮುಂದುವರೆಸಿದ ಪರಾಗ್ 50 ಎಸೆತಗಳಲ್ಲಿ 90 ರನ್ ಬಾರಿಸಿದ್ದರು. ಆದರೆ ಈ ಹಂತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿ ಸ್ಟಾರ್ಕ್​ಗೆ ಬಲಿಯಾದರು. ಪರಾಗ್ ತಮ್ಮ ಇನ್ನಿಂಗ್ಸ್​ನಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್​ಗಳನ್ನು ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕಿಂಗ್’ ಚಿತ್ರದ ಫೋಟೋ ಲೀಕ್ ಆಗಿದ್ದಕ್ಕೆ ನಿರ್ದೇಶಕ ಸಿದ್ದಾರ್ಥ್ ಆನಂದ್ ಗರಂ – Kannada News | King director Siddharth Anand reacts to leaked photos of Shah Rukh Khan Deepika Padukone

ಶಾರುಖ್ ಖಾನ್ (Shah Rukh Khan) ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಕಿಂಗ್’ (King) ಸಿನಿಮಾ ಸದ್ಯ ಚಿತ್ರೀಕರಣದ ಹಂತದಲ್ಲಿದೆ. ಆದರೆ, ಈ ಬಹುನಿರೀಕ್ಷಿತ ಚಿತ್ರದ ಸೆಟ್‌ನಿಂದ ಕೆಲವು ಫೋಟೋಗಳು ಲೀಕ್ ಆಗಿದ್ದು, ನಿರ್ದೇಶಕ ಸಿದ್ದಾರ್ಥ್ ಆನಂದ್ (Siddharth Anand) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರದ ಕುತೂಹಲವನ್ನು ಕಾಪಾಡಿಕೊಳ್ಳುವಂತೆ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸರ್ಪ್ರೈಸ್ ಹಾಳು ಮಾಡಬೇಡಿ ಎಂದು ಅವರು ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

ಸಿನಿಮಾದ ಚಿತ್ರೀಕರಣದ ಫೋಟೋಗಳು ಲೀಕ್ ಆದ ಬೆನ್ನಲ್ಲೇ ಸಿದ್ದಾರ್ಥ್ ಆನಂದ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಎಲ್ಲಾ ಅಭಿಮಾನಿಗಳಲ್ಲಿ ಒಂದು ವಿನಂತಿ. ದಯವಿಟ್ಟು ‘ಕಿಂಗ್’ ಚಿತ್ರದ ಸೆಟ್‌ನಿಂದ ಲೀಕ್ ಆದ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ. ಚಿತ್ರತಂಡವು ಹಗಲು-ರಾತ್ರಿ ಕಷ್ಟಪಟ್ಟು ನಿಮಗಾಗಿ ಒಂದು ಅದ್ಭುತ ಸಿನಿಮಾವನ್ನು ಸಿದ್ಧಪಡಿಸುತ್ತಿದೆ. ಸಿನಿಮಾದ ಸರ್ಪ್ರೈಸ್ ಅನ್ನು ದೊಡ್ಡ ಪರದೆಯ ಮೇಲೆಯೇ ನೋಡಿ ಆನಂದಿಸಿ. ಅಧಿಕೃತವಾಗಿ ನಾವು ದೃಶ್ಯಗಳನ್ನು ಬಿಡುಗಡೆ ಮಾಡುವವರೆಗೆ ಕಾಯಿರಿ’ ಎಂದು ಅವರು ಮನವಿ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಶೂಟಿಂಗ್ ಹಂತದ ಕೆಲವು ಫೋಟೋಗಳು ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಹರಿದಾಡಿದ್ದವು. ಈ ಫೋಟೋಗಳಲ್ಲಿ ಶಾರುಖ್ ಖಾನ್ ಬಿಳಿ ಮತ್ತು ನೀಲಿ ಬಣ್ಣದ ಗೆರೆಗಳ ಶರ್ಟ್ ಧರಿಸಿದ್ದರೆ, ದೀಪಿಕಾ ಪಡುಕೋಣೆ ಕಿತ್ತಳೆ ಬಣ್ಣದ ಸುಂದರ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋ ವೈರಲ್ ಆಗಿರುವುದು ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ.

‘ಕಿಂಗ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಂದೆ-ಮಗಳು ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಒಂದಾಗುತ್ತಿರುವುದು ಈ ಚಿತ್ರದ ವಿಶೇಷತೆ. ಸಿನಿಮಾದಲ್ಲಿ ಶಾರುಖ್ ಒಬ್ಬ ಹಳೆಗಾಲದ ಭೂಗತ ಲೋಕದ ಹಂತಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಸುಹಾನಾ ಅವರಿಗೆ ತರಬೇತಿ ನೀಡುವ ಪಾತ್ರದಲ್ಲಿ ಇರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಜವಾನ್ 2’ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರಾ ಶಾರುಖ್ ಖಾನ್ ಮತ್ತು ಅಟ್ಲಿ?

ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ರಾಣಿ ಮುಖರ್ಜಿ, ಅರ್ಷದ್ ವಾರ್ಸಿ ಮತ್ತು ರಾಘವ್ ಜುಯಲ್ ಅವರಂತಹ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್’ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ 2026ರ ಡಿಸೆಂಬರ್ 24ರಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ನಿದ್ರೆಯ ಕೊರತೆಯೇ ಕ್ಯಾನ್ಸರ್ ಅಪಾಯ ಹೆಚ್ಚಳಕ್ಕೆ ಕಾರಣ; ತಜ್ಞರಿಂದ ಎಚ್ಚರಿಕೆ – Kannada News | Signs of Cancer: Body Symptoms That Need Medical Attention

Signs of Cancer: Body Symptoms That Need Medical AttentionImage Credit source: Getty Images

ಇತ್ತೀಚಿನ ದಿನಗಳಲ್ಲಿ ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ (Cancer) ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ವೈದ್ಯರ ಪ್ರಕಾರ, ಜನರ ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದೇ ಈ ರೀತಿಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತಿವೆ. ವಿಶೇಷವಾಗಿ ಧೂಮಪಾನ ಮತ್ತು ನಿದ್ರೆ ಕೊರತೆ ಪ್ರಮುಖ ಕಾರಣಗಳಾಗಿವೆ. ಅದಲ್ಲದೆ ತಂಬಾಕು ಮತ್ತು ಧೂಮಪಾನವು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. ಇದರಿಂದ ಬಾಯಿ, ಶ್ವಾಸಕೋಶ ಮತ್ತು ಗಂಟಲಿನ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ಇದಲ್ಲದೆ, ಪ್ಯಾಸಿವ್ ಸ್ಮೋಕಿಂಗ್‌ ಮಾಡುವವರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಕ್ಯಾನ್ಸರ್ ಆರಂಭಿಕ ಲಕ್ಷಣಗಳು ಹೇಗಿರುತ್ತವೆ, ದಿನನಿತ್ಯದ ಯಾವ ಅಭ್ಯಾಸಗಳು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇಂದಿನ ದಿನಗಳಲ್ಲಿ ಜನರು ಹೆಚ್ಚು ಪ್ರಾಸೆಸ್ಡ್ ಮತ್ತು ಪ್ಯಾಕೇಜ್ಡ್ ಆಹಾರಗಳನ್ನು ಸೇವಿಸುತ್ತಿದ್ದಾರೆ. ಇವುಗಳಲ್ಲಿ ಇರುವ ಕೆಮಿಕಲ್ಸ್, ಪ್ರಿಸರ್ವೇಟಿವ್ಸ್ ಮತ್ತು ಹೆಚ್ಚಿನ ಸಕ್ಕರೆ ದೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೆಚ್ಚು ಎಣ್ಣೆ ಬಳಸಿ ತಯಾರಿಸಿದ ಅಥವಾ ಸುಟ್ಟ ಆಹಾರ ಪದಾರ್ಥಗಳ ಸೇವನೆಯೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೊರಗಿನಿಂದ ತರಿಸಿಕೊಳ್ಳುವ ಆಹಾರವನ್ನು ಬಿಸಿ ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸುವುದು ಕೂಡ ಹಾನಿಕಾರಕ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಬಹುದು.

ನಿದ್ರೆ ಕೊರತೆ ಮತ್ತು ಒತ್ತಡದ ಪಾತ್ರ

ಸಾಕಷ್ಟು ನಿದ್ರೆ ಆಗದಿದ್ದರೆ ದೇಹದ ಸಹಜ ಸಮತೋಲನ ಹಾಳಾಗುತ್ತದೆ. ರಾತ್ರಿ ತಡವಾಗಿ ಮಲಗುವುದು, ಹೆಚ್ಚು ಸ್ಕ್ರೀನ್ ಬಳಕೆ ಮತ್ತು ಅನಿಯಮಿತ ದಿನಚರಿ ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಜೊತೆಗೆ ನಿರಂತರ ಒತ್ತಡ ಮತ್ತು ವ್ಯಾಯಾಮದ ಕೊರತೆ ಕೂಡ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಇದನ್ನೂ ಓದಿ: ಮೌತ್ ಕಾಂಡೋಮ್‌ ಎಂದರೇನು? ಇದು ಓರಲ್ ಕ್ಯಾನ್ಸರ್‌ನಿಂದ ರಕ್ಷಣೆ ನೀಡುತ್ತದೆಯೇ?

ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು

ತಜ್ಞರ ಪ್ರಕಾರ, ದೀರ್ಘಕಾಲದ ದೌರ್ಬಲ್ಯ, ದೇಹದಲ್ಲಿ ಅನಿರೀಕ್ಷಿತವಾಗಿ ತೂಕ ಇಳಿಕೆಯಾಗುವುದು, ಯಾವುದೇ ಭಾಗದಲ್ಲಿ ಗುಡ್ಡೆ ಕಾಣಿಸಿಕೊಳ್ಳುವುದು ಅಥವಾ ನಿರಂತರ ನೋವು ಇರುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಇವು ಕಾಣಿಸಿದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಜೊತೆಗೆ ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಸಮಯಕ್ಕೆ ತಕ್ಕ ಪರೀಕ್ಷೆ ಮತ್ತು ವೈದ್ಯರ ಸಲಹೆ ಪಡೆಯುವುದು ಆರೋಗ್ಯ ಕಾಪಾಡಲು ಅತ್ಯಂತ ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ನಲ್ಲಿ ಸದ್ಯದ ಪರಿಸ್ಥಿತಿ ಹೇಗಿದೆ? ಯುದ್ಧದ ನೆಲದಿಂದ ವರದಿ ಮಾಡಿದ ಟಿವಿ9 ರಿಪೋರ್ಟರ್ ಸುಮೈರಾ ಖಾನ್ – Kannada News | Tv9 exclusive ground report from iran Reporter sumaira khan in Tehran amid War

ಟೆಹ್ರಾನ್, ಮೇ 1: ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾನ್​ನ ಟೆಹ್ರಾನ್‌ನಲ್ಲಿದ್ದಾರೆ. ಅಲ್ಲಿಂದ ನೆಲದ ವರದಿಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಟಿವಿ9 ತಂಡವು ಬಾಗ್ದಾದ್ ಮೂಲಕ ಬಹಳ ದೂರ ಪ್ರಯಾಣಿಸಿ ಮೆಹ್ರಾನ್ ಗಡಿಯನ್ನು ದಾಟಿ ರಸ್ತೆಯ ಮೂಲಕ ಟೆಹ್ರಾನ್ ತಲುಪಿತು. 40 ದಿನಗಳ ಸಂಘರ್ಷದ ನಡುವೆ ಇರಾನ್‌ನಲ್ಲಿನ (Iran War) ನೆಲದ ಪರಿಸ್ಥಿತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಬಹಳ ಹತ್ತಿರದಿಂದ ಮತ್ತು ಯುದ್ಧಭೂಮಿಯಿಂದಲೇ ತೋರಿಸಲಾಗುತ್ತಿದೆ.

ಟೆಹ್ರಾನ್‌ನಲ್ಲಿ ಸಾಮಾನ್ಯ ಜೀವನ ಎಂದಿನಂತೆ ಮುಂದುವರೆದಿದೆ ಎಂದು ಸುಮೈರಾ ವಿವರಿಸಿದ್ದಾರೆ. ಸುಮೈರಾ ಪ್ರಕಾರ, ಇರಾನ್ ನೆಲದ ವಾಸ್ತವ ಈಗ ಸ್ಪಷ್ಟವಾಗಿದೆ. ಇಲ್ಲಿ ಎಲ್ಲವೂ ಸಾಮಾನ್ಯವೆಂದು ತೋರುತ್ತಿದೆ. ಮೇಲ್ನೋಟಕ್ಕೆ ಶಾಂತಿಯುತವಾಗಿ ಕಂಡುಬಂದರೂ, ಅತಿ ಹೆಚ್ಚು ಕ್ಷಿಪಣಿ ದಾಳಿಗಳು ನಡೆದ ಪ್ರದೇಶ ಇದಾಗಿದೆ ಎಂದು ಸುಮೈರಾ ವಿವರಿಸಿದ್ದಾರೆ. ಮುಂಬರುವ ದಿನಗಳಲ್ಲಿಯೂ ಅವರು ಟೆಹ್ರಾನ್‌ನಿಂದ ನೇರ ವರದಿ ಮಾಡಲಿದ್ದಾರೆ.

ಏಪ್ರಿಲ್ 8ರಿಂದ ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಜಾರಿಯಲ್ಲಿದೆ. ಆದರೂ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಿರಂತರವಾಗಿ ಮಾತಿನ ಚಕಮಕಿ ನಡೆಯುತ್ತಿದೆ. ಅಗತ್ಯ ಬಂದರೆ ಯುದ್ಧ ಪುನರಾರಂಭವಾಗಬಹುದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಸಂಘರ್ಷದಲ್ಲಿ ಇದುವರೆಗೆ 250 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 1,700ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಇರಾನ್​ನ ಯುದ್ಧಭೂಮಿಯಿಂದ ವರದಿ ಮಾಡುತ್ತಿರುವ ಮೊದಲ ಭಾರತೀಯ ಚಾನೆಲ್ ಟಿವಿ9 ಎಂಬುದು ವಿಶೇಷ. ಅದರಲ್ಲೂ ಓರ್ವ ಮಹಿಳಾ ರಿಪೋರ್ಟರ್ ಯುದ್ಧಪೀಡಿತ ಮುಸ್ಲಿಂ ದೇಶದಿಂದ ನೇರ ವರದಿ ಮಾಡುತ್ತಿರುವುದು ಇನ್ನೂ ವಿಶೇಷ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಿಂಕದಕಟ್ಟಿ ಮೃಗಾಲಯದಲ್ಲಿ ಕೂಲ್-ಕೂಲ್ ವಾತಾವರಣ ಸೃಷ್ಟಿ: ಬಿಸಿಲಿನಿಂದ ತತ್ತರಿಸಿದ ಪ್ರಾಣಿಗಳಿಗೆ ವಿಶೇಷ ನಿಗಾ – Kannada News | Gadag Zoo Fights Heatwave: Special Care for Animals in Scorching Summer

ಹುಲಿ, ಸಿಂಹ, ಚಿರತೆ, ಕರಡಿ ಸೇರಿದಂತೆ ವಿವಿಧ ಪ್ರಭೇದದ ಪ್ರಾಣಿಗಳ ಆರೋಗ್ಯದ ಮೇಲೆ ಹಗಲು-ರಾತ್ರಿ ಕಣ್ಗಾವಲು ಇರಿಸಲಾಗಿದ್ದು, ಸಿಬ್ಬಂದಿ ವಿಶೇಷ ನಿಗಾವಹಿಸಿದ್ದಾರೆ. ತಜ್ಞರ ಸಲಹೆ ಮೇರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

Source link

RR vs DC: ಡೆಲ್ಲಿ ವಿರುದ್ಧ ನಡೆಯದ ರಾಜಸ್ಥಾನ್ ಆರಂಭಿಕರ ಅಬ್ಬರ – Kannada News | IPL 2026: Yashasvi Jaiswal, Vaibhav Sooryavanshi Fail as RR Openers Struggle vs DC in Match 43

ಐಪಿಎಲ್ 2026 ರ 43 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಇದು ರಾಜಸ್ಥಾನಕ್ಕೆ ಹತ್ತನೇ ಪಂದ್ಯ ಮತ್ತು ದೆಹಲಿಗೆ ಒಂಬತ್ತನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಅದರಂತೆ ರಾಜಸ್ಥಾನ್ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೇಲೆ ಎಂದಿನಂತೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಈ ಪಂದ್ಯದಲ್ಲಿ ಪರಿಣಾಮಕಾರಿ ಇನ್ನಿಂಗ್ಸ್ ಆಡುವಲ್ಲಿ ಇವರಿಬ್ಬರು ವಿಫಲರಾದರು.

ಈ ಆವೃತ್ತಿಯಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಜೋಡಿ ರಾಜಸ್ಥಾನ್ ತಂಡಕ್ಕೆ ಭಾಗಶಃ ಪಂದ್ಯಗಳಲ್ಲಿ ಉತ್ತಮ ಆರಂಭ ಒದಗಿಸಿಕೊಟ್ಟಿದೆ. ಇದರ ಪರಿಣಾಮವಾಗಿ ರಾಜಸ್ಥಾನ್ ಕೂಡ ಈ ಎಲ್ಲಾ ಭಾಗಶಃ ಪಂದ್ಯಗಳನ್ನು ಗೆದ್ದುಕೊಂಡಿದೆ. ಅಂದರೆ ಇವರಿಬ್ಬರು ಮಿಂಚಿದರೆ ರಾಜಸ್ಥಾನ್ ತಂಡಕ್ಕೆ ಗೆಲುವು ಖಚಿತವಂತ್ತಾಗಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರಿಗೆ ಒಂದಂಕಿ ದಾಟಿ ಹೋಗಲು ಸಾಧ್ಯವಾಗಲಿಲ್ಲ.

ರಾಜಸ್ಥಾನ್ ಪರ ಇನ್ನಿಂಗ್ಸ್ ಆರಂಭಿಸಿದ ಜೈಸ್ವಾಲ್, ಅನುಭವಿ ಮಿಚೆಲ್ ಸ್ಟಾರ್ಕ್​ ಬೌಲ್ ಮಾಡಿದ ಮೊದಲ ಓವರ್​ನ ಮೊದಲ ಎಸೆತವನ್ನೇ ಭರ್ಜರಿ ಸಿಕ್ಸರ್ ಬಾರಿಸಿದರು. ಆ ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಮೂರನೇ ಎಸೆತವನ್ನು ಸ್ಟಾರ್ಕ್​ ಫುಲ್ ಟಾಸ್ ಬೌಲ್ ಮಾಡಿದರು. ಈ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಜೈಸ್ವಾಲ್, ಸ್ಟಾರ್ಕ್​ಗೆ ಕ್ಯಾಚ್ ನೀಡಿ ಔಟಾದರು.

ಇನ್ನಿಂಗ್ಸ್​ನ ಎರಡನೇ ಓವರ್​ನಲ್ಲಿ ಸ್ಟ್ರೈಕ್​ಗೆ ಬಂದ ವೈಭವ್ ಸೂರ್ಯವಂಶಿ, ಕೈಲ್ ಜೇಮಿಸನ್ ಬೌಲ್ ಮಾಡಿದ ಎರಡನೇ ಎಸೆತವನ್ನು ಸೀದಾ ಬೌಂಡರಿಗಟ್ಟಿದರು. ಆದರೆ ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಅಂದರೆ ಇವರಿಬ್ಬರ ವಿಕೆಟ್​ ಕೇವಲ 12 ರನ್​ಗಳಿಗೆ ಪತನವಾಯಿತು. ಜೈಸ್ವಾಲ್ 6 ರನ್ ಬಾರಿಸಿ ಔಟಾದರೆ, ವೈಭವ್ ಇನ್ನಿಂಗ್ಸ್ ಕೇವಲ 4 ರನ್​ಗಳಿಗೆ ಅಂತ್ಯವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಆರ್‌ವಿ ರಸ್ತೆ-ಸಿಲ್ಕ್ ಬೋರ್ಡ್ ನಡುವಿನ ಡಬಲ್‌ ಡೆಕ್ಕರ್‌ ಫ್ಲೈಓವರ್‌ ಹೇಗಿದೆ ನೋಡಿ – Kannada News | DCM dk shivakumar inaugurates double decker flyover between rv road and central silk board

ಬೆಂಗಳೂರು, (ಮೇ 01): ಬೆಂಗಳೂರಿನಲ್ಲಿಂದು ಆರ್‌.ವಿ. ರಸ್ತೆ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ ಡಬಲ್‌ ಡೆಕ್ಕರ್‌ ಫ್ಲೈಓವರ್‌ನಲ್ಲಿ (Bengaluru’s double-decker flyover) ವಾಹನ ಸಂಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶುಕ್ರವಾರ ಚಾಲನೆ ನೀಡಿದರು.

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಹಾಗೂ ಬೆಂಗಳೂರು ದಕ್ಷಿಣ ಭಾಗದ ಪ್ರಮುಖ ಪ್ರದೇಶಗಳಿಗೆ ಓಡಾಡಲು ಈ ಫ್ಲೈಓವರ್‌ ಅನುಕೂಲವಾಗಲಿದೆ. ಇನ್ನು ಬನಶಂಕರಿ ಜಂಕ್ಷನ್‌ನಲ್ಲಿ ಪಾದಚಾರಿಗಳ ಸೈವಾಕ್ ನಿರ್ಮಾಣಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶಂಕುಸ್ಥಾಪನೆ ನೆರವೇರಿಸಿದರು. ಪಾದಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ ಅನುಕೂಲವಾಗಲಿ ಎಂದು ಈ ಸ್ಕೈವಾಕ್‌ ನಿರ್ಮಿಸಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ ಯುದ್ಧಭೂಮಿಯಲ್ಲಿ ಟಿವಿ9; ಟೆಹ್ರಾನ್​ನಿಂದ ನೈಜ ಚಿತ್ರಣ ನೀಡಿದ ವರದಿಗಾರ್ತಿ – Kannada News | TV9 becomes first Indian channel to reach Iran for Ground Reporting from Tehran

ಟೆಹ್ರಾನ್, ಮೇ 1: ಇರಾನ್​ನಲ್ಲಿ ಇನ್ನೂ ಯುದ್ಧದ ಭೀತಿ ಕಡಿಮೆಯಾಗಿಲ್ಲ. ಇರಾನ್​ನಲ್ಲಿನ (Iran War) ಪರಿಸ್ಥಿತಿ ಈಗ ಹೇಗಿದೆ ಎಂಬುದನ್ನು ತಿಳಿಯಲು ಟಿವಿ9 ತಂಡ ಟೆಹ್ರಾನ್​ಗೆ ತೆರಳಿದೆ. ಈ ಮೂಲಕ ಇರಾನ್​ನಿಂದ ನೇರ ವರದಿ ಮಾಡುತ್ತಿರುವ ಮೊದಲ ಭಾರತೀಯ ಚಾನೆಲ್ ಎಂಬ ಹೆಗ್ಗಳಿಕೆಗೆ ಟಿವಿ9 ಪಾತ್ರವಾಗಿದೆ. ಟಿವಿ9 ವರದಿಗಾರ್ತಿ ಸುಮೈರಾ ಖಾನ್ ಇರಾಕ್ ಮೂಲಕ ಟೆಹ್ರಾನ್‌ಗೆ ಆಗಮಿಸಿ ಇರಾನ್​ನಿಂದಲೇ ವರದಿ ಮಾಡುತ್ತಿದ್ದಾರೆ. ರಸ್ತೆ ಮತ್ತು ಕಾಲ್ನಡಿಗೆಯ ಮೂಲಕ ಪ್ರಯಾಣಿಸಿದ ಅವರು ಫ್ರೀಡಂ ಸ್ಕ್ವೇರ್ ಬಳಿಯಿಂದ ಅಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದ್ದಾರೆ.

ಟಿವಿ9 ಭಾರತ್‌ವರ್ಷ್ ವರದಿಗಾರ್ತಿ ಸುಮೈರಾ ಖಾನ್ ಟೆಹ್ರಾನ್‌ನಿಂದ ವರದಿ ಮಾಡುತ್ತಿದ್ದಾರೆ. ಸುಮೈರಾ ಫ್ರೀಡಂ ಸ್ಕ್ವೇರ್‌ನಿಂದ ಟೆಹ್ರಾನ್‌ನಲ್ಲಿನ ವಿನಾಶ ಮತ್ತು ನೆಲದ ಪರಿಸ್ಥಿತಿಗಳ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಟೆಹ್ರಾನ್‌ಗೆ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಅವರು ಮೊದಲು ವಿಮಾನದ ಮೂಲಕ ಇರಾಕ್‌ಗೆ ಪ್ರಯಾಣ ಬೆಳೆಸಿದರು. ನಂತರ ಬಾಗ್ದಾದ್‌ನಿಂದ ಸುದೀರ್ಘವಾದ ಕಾರು ಪ್ರಯಾಣ ಮಾಡಿದರು. ನಂತರ ಸ್ವಲ್ಪ ದೂರ ನಡೆಯಬೇಕಾಯಿತು. ಅನೇಕ ತೊಂದರೆಗಳು ಮತ್ತು ಸವಾಲುಗಳ ಹೊರತಾಗಿಯೂ, ಸುಮೈರಾ ಖಾನ್ ಟೆಹ್ರಾನ್ ತಲುಪಿದರು.

ಸುಮೈರಾ ಅವರು ಫ್ರೀಡಂ ಸ್ಕ್ವೇರ್ ಹಲವಾರು ದಾಳಿಗಳನ್ನು ಕಂಡಿದ್ದರೂ ತಕ್ಷಣ ಅದನ್ನು ಇರಾನ್ ಮರು ನಿರ್ಮಿಸಿದೆ. ದಾಳಿಗಳು ಹೋಟೆಲ್‌ಗಳು ಮತ್ತು ಕಟ್ಟಡಗಳ ಗಾಜಿನ ಕಿಟಕಿಗಳನ್ನು ಸಹ ಹಾನಿಗೊಳಿಸಿವೆ. ಈಗಾಗಲೇ ಅವುಗಳನ್ನು ದುರಸ್ತಿ ಮಾಡಲಾಗಿದೆ. ಟೆಹ್ರಾನ್‌ನಲ್ಲಿ ಸಾಮಾನ್ಯ ಜೀವನ ಎಂದಿನಂತೆ ಮುಂದುವರೆದಿದೆ ಎಂದು ಸುಮೈರಾ ವಿವರಿಸಿದರು. ಸುಮೈರಾ ಇಂಕಿಲಾಬ್ ಬೀದಿಯಲ್ಲಿರುವ ಅಯತೊಲ್ಲಾ ಅಲಿ ಖಮೇನಿ ಅವರ ಫೋಟೋವನ್ನು ಕೂಡ ತೋರಿಸಿದರು. ಈ ಫೋಟೋ ಇರಾನಿನ ಜನರ ಚೈತನ್ಯವನ್ನು ಪ್ರತಿನಿಧಿಸುವುದರಿಂದ ಬಹಳ ಮುಖ್ಯವಾಗಿದೆ. ಅಮೆರಿಕದೊಂದಿಗಿನ ಯುದ್ಧದ ನಡುವೆ ಇರಾನ್ ಬಲವಾಗಿ ನಿಂತಿದೆ ಎಂದು ಈ ಚಿತ್ರ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version