Daily Devotional: ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ? – Kannada News | Which day is the best to do Fasting for spiritual benefits

ಯಾವ ದಿನ ಉಪವಾಸ ಮಾಡಿದರೆ ಏನು ಫಲ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಉಪವಾಸವು ಅನಾದಿ ಕಾಲದಿಂದಲೂ ಭಗವಂತನ ಕೃಪೆಗೆ ಪಾತ್ರವಾಗಲು ಇರುವ ಒಂದು ದೈಹಿಕ ಶಿಸ್ತು ಮತ್ತು ಭಕ್ತಿಯ ಮಾರ್ಗ. ಇದು ಕೇವಲ ಆಹಾರ ತ್ಯಾಗವಲ್ಲ, ಬದಲಿಗೆ ಉಪ ಎಂದರೆ ಸಮೀಪ ಮತ್ತು ವಾಸ ಎಂದರೆ ಜೀವಿಸುವುದು – ಅಂದರೆ ಭಗವಂತನ ಸನ್ನಿಧಿಯಲ್ಲಿ ಜೀವಿಸುವುದು. ನಮ್ಮ ಆಸೆ ಆಕಾಂಕ್ಷೆಗಳು, ವಿವಾಹ, ವಿದ್ಯಾಭ್ಯಾಸ, ಉದ್ಯೋಗ, ಮನೆ ನಿರ್ಮಾಣ, ಅಥವಾ ಗ್ರಹದೋಷ ನಿವಾರಣೆಗಾಗಿ ಉಪವಾಸ ವ್ರತಗಳನ್ನು ಆಚರಿಸಲಾಗುತ್ತದೆ.

ಸಾಮಾನ್ಯವಾಗಿ ನಾವು ಏಕಾದಶಿ ಮತ್ತು ಹಬ್ಬ ಹರಿದಿನಗಳಲ್ಲಿ ಉಪವಾಸ ಮಾಡುತ್ತೇವೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದ ಪ್ರತಿಯೊಂದು ತಿಥಿಯ ಉಪವಾಸಕ್ಕೂ ತನ್ನದೇ ಆದ ವಿಶೇಷ ಫಲವಿದೆ. ಉದಾಹರಣೆಗೆ, ಶುಕ್ಲ ಪಕ್ಷದ ಉಪವಾಸಗಳು ಬೇಗ ಫಲ ನೀಡಿದರೆ, ಕೃಷ್ಣ ಪಕ್ಷದ ಉಪವಾಸಗಳು ಧೈರ್ಯ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಒದಗಿಸುತ್ತವೆ. ಪ್ರತಿಯೊಂದು ತಿಥಿಯ ಉಪವಾಸದ ವಿಶಿಷ್ಟ ಲಾಭಗಳನ್ನು ತಿಳಿಯುವ ಮೂಲಕ ನಾವು ನಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬಹುದು ಎಂದು ಗುರೂಜಿ ವಿವರಿಸಿದ್ದಾರೆ.

 

 

 

Source link

Horoscope Today: ಇಂದು ಈ ರಾಶಿಯವರು ಅನ್ಯರ ಮಾತಿಗೆ ಹೆಚ್ಚು ಒತ್ತು ಕೊಡಬೇಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 2, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.ರಾಹುಕಾಲವು ಬೆಳಗ್ಗೆ 9:07 ರಿಂದ 10:41 ರವರೆಗೆ ಇದ್ದರೆ, ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಅಥವಾ ಶುಭಕಾಲವು ಮಧ್ಯಾಹ್ನ 1:51 ರಿಂದ 3:25 ರವರೆಗೆ ಇರಲಿದೆ. ಈ ದಿನ ರವಿ ಮೇಷ ರಾಶಿಯಲ್ಲಿ ಮತ್ತು ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸಲಿದ್ದಾರೆ ಎಂದು ಗುರೂಜಿ ವಿವರಿಸಿದ್ದಾರೆ.

 

 

 

Source link

ದೇಶದ ಜನರಿಗೆ ಶೀಘ್ರವೇ ದರ ಏರಿಕೆ ಶಾಕ್​​?: ಪೆಟ್ರೋಲ್​​ ರೇಟ್​​ 5 ರೂ. ಹೆಚ್ಚಳ ಸಾಧ್ಯತೆ – Kannada News | Impending Fuel Price Hike: Petrol, Diesel, and Cylinder Rates to Rise After Elections

ಬೆಂಗಳೂರು, ಮೇ 02: ಪಂಚರಾಜ್ಯ ಚುನಾವಣೆಗಳು ಮುಕ್ತಾಯಗೊಂಡ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕೇಂದ್ರ ಸರ್ಕಾರವು ಇಂಧನ ದರ ಹೆಚ್ಚಳಕ್ಕೆ ಸಿದ್ಧತೆ ನಡೆಸಿದ್ದು, ಈಗಾಗಲೇ ವಾಣಿಜ್ಯ ಸಿಲಿಂಡರ್ ದರವನ್ನು 993 ರೂ. ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ತೈಲ ದರ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುವ ಭೀತಿ ಇದೆ. ಮುಂದಿನ ಐದರಿಂದ ಆರು ದಿನಗಳಲ್ಲಿ ಪೆಟ್ರೋಲ್ ದರ ಏರಿಕೆಯಾಗುವ ನಿರೀಕ್ಷೆಯಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ ಸುಮಾರು 4 ರಿಂದ 5 ರೂ. ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಗೃಹಬಳಕೆ ಸಿಲಿಂಡರ್ ಬೆಲೆ ಕೂಡ 50 ರೂ. ಏರಿಕೆಯಾಗುವ ಲಕ್ಷಣಗಳಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಿನ ಭವಿಷ್ಯ: ಈ ರಾಶಿಯವರು ಇಂದು ಹಳೆಯ ಮಾತನ್ನು ಉಳಿಸಿಕೊಳ್ಳಲಾರರು – Kannada News | Horoscope May 02 Satursday 2026; Dina Rashi Bhavishya Today, Checkout the details here

ಮೇಷ ರಾಶಿ :

ಇಂದು ಭವಿಷ್ಯದ ಬಗ್ಗೆ ಖಿನ್ನತೆ ಎದುರಾದರೆ, ಅನುಭವಿಗಳ ಸಲಹೆ ಪಡೆಯಿರಿ. ವ್ಯಾಪಾರ ಅಥವಾ ಉದ್ಯೋಗದಲ್ಲಿ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ನಿಮ್ಮವರೆದು ಕಠೋರ ಮಾತುಗಳನ್ನು ಆಡುವರಿ. ಸುತ್ತಾಡುವ ಮನಸ್ಸಿರಲಿದೆ. ಕೆಲವು ಹವ್ಯಾಸಗಳು ಚಟವಾಗಿಯೂ ಪರಿವರ್ತನೆ ಆಗಬಹುದು. ಬಿಡುಗಡೆ ಸಿಗದ ಸಮಸ್ಯೆಗಳು ನಿಮ್ಮೆದುರು ಬರಬಹುದು. ನಿಮ್ಮವರ ಮೇಲೆ ತಪ್ಪು ತಿಳಿವಳಿಕೆಯನ್ನು ಹೊಂದಿ ಅವರ ತೇಜೋವಧೆ.

ವೃಷಭ ರಾಶಿ :

ಇಂದಿನ ಕಷ್ಟಗಳು ನಿಮ್ಮನ್ನು ಗಟ್ಟಿ ಗಾಳಿಸುತ್ತವೆ. ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆ ಕೇಳಿದರೆ ಶಾಂತಿ ದೊರೆಯುತ್ತದೆ. ನಿಮ್ಮ ಕ್ರಿಯೆಗಳು ಕೆಲವರ ಮನಸ್ಸಿಗೆ ನೋವು ತರುವ ಸಾಧ್ಯತೆ ಇದೆ. ಎಂತಹ ನೋವಲ್ಲೂ ಉಪಕಾರವನ್ನು ಮರೆಯಲಾರಿರಿ. ಹೊಸತನವನ್ನು ಇಷ್ಟಪಟ್ಟು ನಿಮ್ಮ ಜೀವನಶೈಲಿಯನ್ನು ಬದಲಿಸಿಕೊಳ್ಳುವ ಪ್ರಯತ್ನ. ಕೆಲವರ ಮಾತು ಉತ್ಸಾಹವನ್ನು ಹಾಳು ಮಾಡುವುದು. ನೀವು ಮಾಡುವ ಕೆಲಸವು ಅಶಿಸ್ತಿನಿಂದ ಇರಬಹುದು.

ಮಿಥುನ ರಾಶಿ :

ನಿಮ್ಮ ದೃಢನಿಶ್ಚಯ ಮತ್ತು ಬುದ್ಧಿವಂತಿಕೆಯಿಂದ ಭವಿಷ್ಯಕ್ಕಾಗಿ ಬಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಮುಖ್ಯ ಯೋಜನೆಯಲ್ಲಿ ಮಹಿಳೆಯರಿಗೆ ಅವರ ಪರಿಶ್ರಮಕ್ಕಾಗಿ ಮಾನ್ಯತೆ ನೀಡುವಿರಿ. ವೃತ್ತಿಪರ ಜೀವನದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ. ನಿದ್ರೆಯಿಲ್ಲದೇ ಮನಸ್ಸು ಕಿರಿಕಿರಿಯನ್ನು ಅನುಭವಿಸುವುದು. ತಂದೆಯಿಂದ ಹಣವನ್ನು ಪಡೆದು ನಿಮಗೆ ಬೇಕಾದ ವಸ್ತುಗಳನ್ನು ಪಡೆಯುವಿರಿ.

ಕರ್ಕಾಟಕ ರಾಶಿ :

ಹಣದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಇಂದು ಸೂಕ್ತ ದಿನವಲ್ಲ. ಕೆಲಸದಲ್ಲಿನ ಅನಿರೀಕ್ಷಿತ ತೊಂದರೆಗಳನ್ನು ಧೈರ್ಯ ಮತ್ತು ಸ್ಥಿರತೆಯಿಂದ ಎದುರಿಸಿ. ಸಂಗಾತಿಯ ಭಯದಿಂದ ಎಲ್ಲವನ್ನೂ ಸರಿಯಾಗಿ ಮಾಡುವಿರಿ. ಇದು ನಿಮಗೆ ಭವಿಷ್ಯದ ಸುಧಾರಣೆಗೆ ಸಹಕಾರಿ. ಲಭ್ಯವಿರುವ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದರಿಂದ ಭವಿಷ್ಯದ ಭದ್ರತೆಯನ್ನು ಹೆಚ್ಚಿಸಬಹುದು. ಆಲಸ್ಯದಿಂದ ಹೊರಬರಬೇಕಾದ ಸ್ಥಿತಿಯು ಇದೆ.

ಸಿಂಹ ರಾಶಿ :

ಸ್ಥಿರಾಸ್ತಿಯ ಖರೀದಿಗೆ ಓಡಾಟ ಮಾಡುವಿರಿ. ಇಂದು ನಿಮ್ಮ ಉಜ್ವಲ ಪ್ರೀತಿಯು ನಿಮ್ಮ ಸುತ್ತಲಿರುವವರನ್ನು ಪ್ರೇರೇಪಿಸುತ್ತದೆ. ಆದರೆ ನಿಷ್ಕ್ರಿಯತೆ ಮತ್ತು ಆಯಾಸದಿಂದ ನೀವು ಸ್ವಲ್ಪ ಅಸಹಜವಾಗಿ ಅನುಭವಿಸಬಹುದು. ದಿನದ ಅಂತ್ಯದ ವೇಳೆಗೆ ಸಂತೋಷಕರ ಸುದ್ದಿ ನಿಮಗೆ ಮನಶ್ಶಾಂತಿಯನ್ನು ತರಬಹುದು. ಏಕಾಂತವನ್ನು ಇಷ್ಟಪಡುವವರಿದ್ದೀರಿ. ನಿಮ್ಮ ಆಲೋಚನೆಗೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ.

ಕನ್ಯಾ ರಾಶಿ :

ನಿಮ್ಮ ವಿಶ್ಲೇಷಣಾ ಶಕ್ತಿ ಮತ್ತು ನೈತಿಕತೆಯು ಇಂದು ನಿಮ್ಮ ಸುತ್ತಮುತ್ತಲಿನವರಿಂದ ಮೆಚ್ಚುಗೆ ಪಡೆಯಲಿದೆ. ಧಾರ್ಮಿಕ ವಿಷಯದಲ್ಲಿ ಅಶ್ರದ್ಧೆ ತೋರಿಸುವಿರಿ. ಜನರು ನಿಮ್ಮ ಸಲಹೆಗಳನ್ನು ಕೇಳಲು ಬರಬಹುದು, ನಿಮ್ಮ ಒಳನೋಟಗಳು ಪ್ರಭಾವಶಾಲಿಯಾಗಿರುತ್ತವೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ನೀವು ಯೋಜಿಸಿದ್ದರೂ, ಅದನ್ನು ಮುಂದೂಡಬೇಕಾಗಬಹುದು. ಭೂಮಿಯ ವ್ಯವಹಾರವನ್ನು ಸದ್ಯಕ್ಕೆ ನಿಲ್ಲಿಸುವುದು ಅಥವಾ ಕೆಲವು ದಿನಗಳ ಅನಂತರ ನಡೆಸುವುದು ಯೋಗ್ಯವಿದೆ.

ತುಲಾ ರಾಶಿ :

ನಿಮ್ಮ ಸೃಜನಶೀಲತೆ ಮತ್ತು ಕಷ್ಟಪಟ್ಟು ಮಾಡಿದ ಕೆಲಸವು ಗುರುತಿಸಲ್ಪಡುತ್ತದೆ, ಆದರೆ ಕನಸಿನ ಯೋಜನೆಗಳ ಫಲಿತಾಂಶಕ್ಕೆ ಸಮಯ ಬೇಕಾಗಿದೆ. ಸುಪ್ತ ಪ್ರತಿಭೆಯ ಅನಾವರಣವಾಗಲಿದೆ. ಇಂದು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುವಿರಿ, ಆದರೆ ನಿರಾಸೆಗೊಳ್ಳದೇ ಮುಂದೆ ಸಾಗುವುದು ಮುಖ್ಯ ಹೊಸ ಯೋಜನೆಗಳಿಗೆ ಹೆಚ್ಚು ಖರ್ಚು ಮಾಡಬೇಕಾದರೂ, ಬಜೆಟ್ ನ ಜಾಗರೂಕತೆ ವಹಿಸಿ. ದೀರ್ಘಕಾಲದ ಯಶಸ್ಸಿಗೆ ಗಮನಹರಿಸಿ. ವೈದ್ಯರನ್ನು ಭೇಟಿಯಾಗಿ ಶಾರೀರಿಕ ಸಮಸ್ಯೆಗಳನ್ನು ಅವರಲ್ಲಿ ಹೇಳಿ.

ವೃಶ್ಚಿಕ ರಾಶಿ :

ಅಜ್ಞಾತವಾಸದಿಂದ ಹೊರಬರಲಿದ್ದಾರೆ. ಮಕ್ಕಳು ನಿಮಗೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ವಿಶ್ಲೇಷಣಾ ಮತ್ತು ಅನುಷ್ಠಾನ ಸಾಮರ್ಥ್ಯ ಇಂದು ನಿಮಗೆ ಮಹತ್ತರವಾದ ಸಹಾಯ ಮಾಡಲಿದೆ. ಹಳೆಯ ವಸ್ತುಗಳನ್ನು ಮಾರಾಟ ಮಾಡಲಿದ್ದೀರಿ. ಹಣದ ವಿಚಾರದಲ್ಲಿ ಜಾಗರೂಕರಾಗಿರಿ. ಆಯತಪ್ಪಿ ಬಿದ್ದು ದೊಡ್ಡ ಗಾಯಮಾಡಿಕೊಳ್ಳಲಿದ್ದೀರಿ. ಅನಿರೀಕ್ಷಿತ ಧನವ್ಯಯವು ಆಗಬಹುದು. ವಿದ್ಯಾರ್ಥಿಗಳು ನಿಮ್ಮ ಮುಂದಿನ ವಿಷಯಗಳ ಕುರಿತು ಚರ್ಚೆಗಳನ್ನು ಮಾಡಿ ಮುಂದುವರಿಯಿರಿ.

ಧನು ರಾಶಿ :

ಉದ್ಯೋಗದ ಸ್ಥಳದಲ್ಲಿ ಕೆಲಸವು ವೇಗವಾಗಿ ನಡೆಯಲಿದೆ. ಮನೆಯ ರಿಪೇರಿ ಮಾಡಿಸಲಿದ್ದೀರಿ. ಹಣವನ್ನು ಕೊಟ್ಟು ಕೆಲಸವನ್ನು ಮಾಡಿಸಿಕೊಳ್ಳಬೇಕಾಗುವುದು. ನಿಮ್ಮ ಸಾಮರ್ಥ್ಯವನ್ನು ಇನ್ನೊಬ್ಬರು ಗುರಿತಿಸಲಿದ್ದಾರೆ. ಒಳ್ಳೆಯ ಕೆಲಸವನ್ನು ಮಾಡುವ ಚಿಂತನೆಯನ್ನು ಮಾಡುವಿರಿ. ಎಲ್ಲವೂ ಕ್ಷಣದಲ್ಲಿ ಆಗಬೇಕು ಎನ್ನುವ ಉದ್ವೇಗವವನ್ನು ಬಿಟ್ಟು ಬಿಡಿ. ನಿಮಗೆ ಬೆಲೆ ಕೊಡದೇ ಇರುವುದು ನಿಮಗೆ ಬೇಸರವಾಗುವುದು. ಖುಷಿಪಡುವ ಸಂಗತಿಗಳಿದ್ದರೂ ದುಃಖಿಗಳಾಗುವ ಸಾದ್ಯತೆ ಇದೆ.

ಮಕರ ರಾಶಿ :

ನಿಮ್ಮ ಕಾರ್ಯಕ್ಕೆ ಸಂಬಂಧಿಸಿದ ವ್ಯವಹಾರಕ್ಕೆ ಆಪ್ತರನ್ನು ಜೋಡಿಸಿಕೊಳ್ಳುವಿರಿ. ಇದು ಯಶಸ್ಸಿಗೆ ದಾರಿಮಾಡುತ್ತದೆ. ನಿರಂತರ ಕೆಲಸದಿಂದ ಬಳಲಿದರೂ, ವಿಶ್ರಾಂತಿ ತೆಗೆದುಕೊಂಡು ಸಿದ್ಧರಾಗುವಿರಿ. ಆಧುನಿಕ ಉಪಕರಣಗಳ ಬಳಕೆಯನ್ನು ಹೆಚ್ಚು ಮಾಡುವಿರಿ. ಉದ್ಯೋಗದಲ್ಲಿ ತಡೆಯೊಡ್ಡುವ ಸಮಸ್ಯೆಗಳು ಬಂದರೂ ಚಿಂತೆ ಇರದು. ವಾಹನವನ್ನು ನಿಧಾನವಾಗಿ ಚಲಾಯಿಸಿ. ಬೇರೆಯವರ ತಪ್ಪಿನಿಂದ ನಿಮಗೆ ತೊಂದರೆಗಳು ಆಗಬಹುದು.

ಕುಂಭ ರಾಶಿ :

ಹಳೆಯ ಕಾರ್ಯವು ನಿಮ್ಮ ಉದ್ಯೋಗದಲ್ಲಿ ತಪ್ಪುಗಳಾದಂತೆ ಸಹಾಯ ಮಾಡುತ್ತದೆ. ನಿರೀಕ್ಷಿಸದ ಆರ್ಥಿಕ ಸಹಾಯವು ದೀರ್ಘಕಾಲದ ಯೋಜನೆಗೆ ಅವಕಾಶ ತೆರಯುವುದು. ಅಚ್ಚರಿಯ ಕೆಲವು ಸಂಗತಿಗಳು ನಿಮಗೆ ಕಾದಿರಬಹುದು. ಅಪರಿಚಿತರ ಭೇಟಿಯಿಂದ ಸ್ವಲ್ಪ ಹಿಂದುಳಿಯಿರಿ. ಕ್ರೀಡಾಪಟುಗಳು ತಮ್ಮ ಅವಿರತಶ್ರಮವನ್ನು ನಡೆಸಲಿದ್ದಾರೆ. ತಾಯಿಯಿಂದ ನಿಮಗೆ ಧನವು ಲಾಭವಾಗಬಹುದು.

ಮೀನ ರಾಶಿ :

ನಿಮ್ಮ ಹತ್ತಾರು ಕನಸುಗಳಲ್ಲಿ ಒಂದನ್ನು ಸಾಕಾರ ಮಾಡಿಕೊಳ್ಳಿ. ನಿಮ್ಮ ಪ್ರೀತಿಯನ್ನು ಮುಕ್ತವಾಗಿ ವ್ಯಕ್ತಪಡಿಸುವುದರಿಂದ ಪ್ರೀತಿಯಲ್ಲಿ ಯಶಸ್ಸು. ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯವು ಲಾಭದಾಯಕ. ಕುಟುಂಬ ಸಮಸ್ಯೆಗಳು ನಿಮ್ಮ ಗಮನವನ್ನು ಸೆಳೆಯಬಹುದು. ಇರುವವರನ್ನು ಬಿಟ್ಟು ಇನ್ನೊಬ್ಬರ ನಂಬಿ ಮೋಸಹೋಗಬೇಡಿ. ದಾಯಾದಿ ಕಲಹವು ನ್ಯಾಯಾಲಯದ ವರಗೂ ಹೋಗಬಹುದು. ಪುಣ್ಯಕ್ಷೇತ್ರಗಳ ದರ್ಶನವನ್ನು ಪಡೆಯುವಿರಿ.

ಇಂದಿನ ಪಂಚಾಂಗ: 

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ವ್ಯತಿಪಾತ್, ಕರಣ : ಕೈಲವ, ಸೂರ್ಯೋದಯ – 06 – 03 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:12 – 10:47, ಯಮಗಂಡ ಕಾಲ 13:56 – 15:31, ಗುಳಿಕ ಕಾಲ 06:03 – 07:38

-ಲೋಹಿತ ಹೆಬ್ಬಾರ್ 

Source link

RR vs DC: ನಿಸ್ಸಂಕಾ, ರಾಹುಲ್ ಅರ್ಧಶತಕ; ರಾಜಸ್ಥಾನ್ ವಿರುದ್ಧ ಗೆದ್ದ ಡೆಲ್ಲಿ – Kannada News | IPL 2026: Delhi Capitals Beat Rajasthan Royals in Thrilling Match 43 Chase

ಐಪಿಎಲ್ 2026 ರ 43 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪರಸ್ಪರ ಮುಖಾಮುಖಿಯಾಗಿದ್ದವು. ಇದು ರಾಜಸ್ಥಾನಕ್ಕೆ ಹತ್ತನೇ ಪಂದ್ಯ ಮತ್ತು ದೆಹಲಿಗೆ ಒಂಬತ್ತನೇ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಈ ಆವೃತ್ತಿಯಲ್ಲಿ 4ನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಸಿಎಸ್​ಕೆ ತಂಡವನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ಇತ್ತ 4ನೇ ಸೋಲಿಗೆ ಕೊರಳೊಡ್ಡಿದ ರಾಜಸ್ಥಾನ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ಮೊದಲು ಬ್ಯಾಟಿಂಗ್‌ ಮಾಡಿ ದಾಖಲೆಯ 225 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 20ನೇ ಓವರ್​ನಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು.

Source link

ಧ್ರುವ ಸರ್ಜಾಗೆ ವಿಶ್ ಮಾಡಿ ‘ಕೆಡಿ’ ಚಿತ್ರದ ಬೆಂಬಲಕ್ಕೆ ನಿಂತ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು – Kannada News | Kannada Film Industry celebrities supporting KD movie and Dhruva Sarja

ಏಪ್ರಿಲ್ 30ರಂದು ತೆರೆಕಂಡ ‘ಕೆಡಿ’ ಸಿನಿಮಾ (KD Movie) ಉತ್ತಮ ಓಪನಿಂಗ್ ಪಡೆದುಕೊಂಡಿದೆ. ಧ್ರುವ ಸರ್ಜಾ (Dhruva Sarja) ಅವರ ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್ ಅವರು ಆ್ಯಕ್ಷನ್ ಮತ್ತು ಸೆಂಟಿಮೆಂಟ್ ಬೆರೆತ ಕಥೆಯನ್ನು ತೆರೆಗೆ ತಂದಿದ್ದಾರೆ. ಅದ್ದೂರಿ ಬಜೆಟ್​​ನಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ‘ಕೆಡಿ’ ಸಿನಿಮಾಗೆ ಪ್ರೇಕ್ಷಕರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಸ್ಯಾಂಡಲ್​ವುಡ್ ಮಂದಿ ಖುಷಿ ಆಗಿದ್ದಾರೆ. ಕನ್ನಡ ಚಿತ್ರರಂಗದ ಅನೇಕರು ಈ ಸಿನಿಮಾಗೆ ಶುಭ ಹಾರೈಸಿದ್ದಾರೆ.

ಸಾಮಾನ್ಯವಾಗಿ ಚಿತ್ರರಂಗದಲ್ಲಿ ಎಲ್ಲ ಸೆಲೆಬ್ರಿಟಿಗಳು ತಮ್ಮದಲ್ಲದ ಸಿನಿಮಾಗೆ ಶುಭ ಹಾರೈಸುವುದು ವಿರಳ. ಆದರೆ ‘ಕೆಡಿ’ ಸಿನಿಮಾಗಾಗಿ ಹತ್ತು ಹಲವು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಪೋಸ್ಟ್ ಮಾಡುತ್ತಿದ್ದಾರೆ. ಆ ಮೂಲಕ ಧ್ರುವ ಸರ್ಜಾ ಹಾಗೂ ಇಡೀ ತಂಡದ ಬೆನ್ನು ತಟ್ಟಲಾಗುತ್ತಿದೆ. ಇದರಿಂದ ‘ಕೆಡಿ’ ಬಳಗಕ್ಕೆ ಬಲ ಹೆಚ್ಚಿದಂತಾಗಿದೆ.

ಎಪಿ ಅರ್ಜುನ್, ತರುಣ್ ಸುಧೀರ್, ಡಾರ್ಲಿಂಗ್ ಕೃಷ್ಣ, ಉಗ್ರಂ ಮಂಜು, ಡಾಲಿ ಧನಂಜಯ್, ನವೀನ್ ಶಂಕರ್, ರಾಗಿಣಿ ದ್ವಿವೇದಿ, ದೀಕ್ಷಿತ್ ಶೆಟ್ಟಿ, ಚಂದನ್ ಶೆಟ್ಟಿ, ಚೈತ್ರಾ ಆಚಾರ್, ಜ್ಯೋತಿ ರೈ, ಅಶ್ವಿನಿ ಪುನೀತ್ ರಾಜ್​ಕುಮಾರ್, ಪ್ರಮೋದ್, ತನಿಷಾ ಕುಪ್ಪಂಡ, ಅಮೃತಾ ಅಯ್ಯಂಗಾರ್, ಪೃಥ್ವಿ ಅಂಬಾರ್, ಸಿಂಪಲ್ ಸುನಿ, ಸಂಜನಾ ಆನಂದ್, ರೂಪೇಶ್ ಶೆಟ್ಟಿ, ಯಶ ಶಿವಕುಮಾರ್, ಭಾವನಾ ರಾವ್, ಚೇತನ್ ಕುಮಾರ್, ಸತೀಶ್ ನೀನಾಸಂ, ಚಿಕ್ಕಣ್ಣ ಸೇರಿದಂತೆ ಹಲವರು ಈ ಸಿನಿಮಾಗೆ ವಿಶ್ ಮಾಡಿದ್ದಾರೆ.

‘ಕೆಡಿ’ ಬಿಡುಗಡೆಗೂ ಮುನ್ನವೇ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆದವು. ಪ್ರೇಮ್ ನಿರ್ದೇಶನದ ಸಿನಿಮಾಗಳಲ್ಲಿ ಹಾಡುಗಳಿಗೆ ಹೆಚ್ಚು ಆದ್ಯತೆ ಇರುತ್ತದೆ. ಅದು ‘ಕೆಡಿ’ ವಿಚಾರದಲ್ಲೂ ಮುಂದುವರಿದಿದೆ. ಅರ್ಜುನ್ ಜನ್ಯ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರಮಂದಿರದಲ್ಲಿ ಹಾಡುಗಳನ್ನು ಪ್ರೇಕ್ಷಕರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಇದನ್ನೂ ಓದಿ: KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ

ಮೊದಲ ದಿನ ಈ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿತು. ಮೇ 1ರಂದು ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಜೆ ಇದೆ. ಬಳಿಕ ವೀಕೆಂಡ್ ಬರಲಿದೆ. ಹಾಗಾಗಿ ಸತತವಾಗಿ ಈ ಸಿನಿಮಾಗೆ ನಾಲ್ಕು ದಿನಗಳ ಕಾಲ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಅವಕಾಶ ಸಿಗುತ್ತಿದೆ. ಶೀಘ್ರದಲ್ಲೇ ಈ ಸಿನಿಮಾ ಬೇರೆ ಭಾಷೆಗಳಲ್ಲೂ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ: ರಸ್ತೆಗಳು ಜಲಾವೃತ; ಬೈಕ್‌, ಆಟೋ ಚಾಲಕರು ಪರದಾಟ – Kannada News | Rain Lashes Bengaluru Again: Roads Flooded, Watch Video

ಬೆಂಗಳೂರು, ಮೇ 01: ನಗರದಲ್ಲಿ ಇಂದು ಸುರಿದ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅದರಲ್ಲೂ ಗೊಟ್ಟಿಗೆರೆ, ಪುಟ್ಟೇನಹಳ್ಳಿ, ಬನ್ನೇರುಘಟ್ಟ ರಸ್ತೆ ಮತ್ತು ಬಿಕೆ ಸರ್ಕಲ್ ಸುತ್ತಮುತ್ತಲಿನ ಪ್ರದೇಶಗಳು ತೀವ್ರವಾಗಿ ಜಲಾವೃತಗೊಂಡಿವೆ. ರಸ್ತೆಗಳೆಲ್ಲಾ ಕೆರೆಯಂತಾಗಿ ಪರಿವರ್ತನೆಯಾಗಿದ್ದು, ವಾಹನ ಸವಾರರು ತೀವ್ರ ಪರದಾಡಿದ್ದಾರೆ. ಧಾರಾಕಾರ ಮಳೆಗೆ ಹಲವೆಡೆ ಮನೆಗಳಿಗೂ ನೀರು ನುಗ್ಗಿದೆ. ಬನ್ನೇರುಘಟ್ಟ ರಸ್ತೆಯಂತಹ ಪ್ರಮುಖ ಮಾರ್ಗಗಳಲ್ಲಿ ನೀರು ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ, ದೈನಂದಿನ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ. ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಸೇರಿದಂತೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಚುನಾವಣಾ ಆಯೋಗದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ; ನಾಳೆಯೇ ತುರ್ತು ವಿಚಾರಣೆ – Kannada News | TMC Moves to Supreme Court Against Election Commission order to use central staff hearing tomorrow

ನವದೆಹಲಿ, ಮೇ 1: ಪಶ್ಚಿಮ ಬಂಗಾಳ ಚುನಾವಣೆಯ (West Bengal Elections) ಫಲಿತಾಂಶಕ್ಕೆ ಎರಡು ದಿನಗಳ ಮೊದಲು, ಶನಿವಾರ ತುರ್ತು ವಿಚಾರಣೆ ನಡೆಸಲು ಕೋರಿ ಟಿಎಂಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರಿ ನೌಕರರನ್ನು ಮೇಲ್ವಿಚಾರಕರಾಗಿ ನೇಮಿಸುವುದನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ಕೊಲ್ಕತ್ತಾ ಹೈಕೋರ್ಟ್ ವಜಾಗೊಳಿಸಿದ ನಂತರ ಟಿಎಂಸಿ ಸುಪ್ರೀಂ ಕೋರ್ಟ್ ಮೊರೆಹೋಗಿದೆ. ಶನಿವಾರ ಬೆಳಿಗ್ಗೆ 10.30ಕ್ಕೆ ವಿಚಾರಣೆ ನಡೆಯಲಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಶನಿವಾರ ಈ ವಿಷಯದ ತುರ್ತು ವಿಚಾರಣೆಗೆ ನಿರ್ದೇಶನಗಳನ್ನು ನೀಡಿದ್ದಾರೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠದ ಮುಂದೆ ಅರ್ಜಿಯನ್ನು ಪಟ್ಟಿ ಮಾಡಲಾಗುವುದು.

ಇದನ್ನೂ ಓದಿ: West Bengal Election Exit Poll Results 2026: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಭಾರೀ ಹಿನ್ನಡೆ; ಬಿಜೆಪಿಗೆ 146-175 ಸ್ಥಾನಗಳ ನಿರೀಕ್ಷೆ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮತ ಎಣಿಕೆಗಾಗಿ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ನೌಕರರನ್ನು ನಿಯೋಜಿಸಬೇಕೆಂಬ ಭಾರತದ ಚುನಾವಣಾ ಆಯೋಗದ ನಿರ್ದೇಶನವನ್ನು ಪ್ರಶ್ನಿಸಿ ಟಿಎಂಸಿ ಸಲ್ಲಿಸಿದ್ದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ತಿರಸ್ಕರಿಸಿತ್ತು. ಕೇಂದ್ರ ಸರ್ಕಾರ/ಪಿಎಸ್‌ಯು ನೌಕರರನ್ನು ಮೇಲ್ವಿಚಾರಕರು/ಸಹಾಯಕರಾಗಿ ಪರಿಗಣಿಸಬೇಕೆಂಬ ನಿರ್ಧಾರದ ಸಿಂಧುತ್ವವನ್ನು ಕೊಲ್ಕತ್ತಾ ನ್ಯಾಯಾಲಯ ಎತ್ತಿಹಿಡಿದಿದ್ದು, ರಿಟ್ ಅರ್ಜಿಯನ್ನು ವಜಾಗೊಳಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಾತನಾಗಿ ಬಡ್ತಿ ಪಡೆದ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್ ಹೇಗಿತ್ತು ನೋಡಿ – Kannada News | DK Shivakumar first Reactions after His His daughter Aishwarya gave birth baby girl

ಬೆಂಗಳೂರು, (ಮೇ 01): ಡಿ.ಕೆ. ಶಿವಕುಮಾರ್ ಅವರು ತಮ್ಮ ಜೀವನದಲ್ಲಿ ಅತ್ಯಂತ ಸ್ಮರಣೀಯ ಮತ್ತು ದೊಡ್ಡ ಬಡ್ತಿಯನ್ನು ಪಡೆದುಕೊಂಡಿದ್ದಾರೆ. . ಇದೇನು ರಾಜಕೀಯ ಬಡ್ತಿಯೇ? ಮುಖ್ಯಮಂತ್ರಿ ಸ್ಥಾನ ಸಿಕ್ಕಿತೇ? ಎಂದು ಎಲ್ಲರಿಗೂ ಕುತೂಹಲ ಮೂಡುವುದು ಸಹಜ ಆದ್ರೆ, ಇದು ರಾಜಕೀಯಕ್ಕಿಂತಲೂ ಮಿಗಿಲಾದ, ಭಾವನಾತ್ಮಕವಾದ ಬಡ್ತಿ. ಹೌದು.. ಡಿಸಿಎಂ ಡಿ.ಕೆ ಶಿವಕುಮಾರ್ ತಾತನ ಬಡ್ತಿ ಪಡೆದುಕೊಂಡಿದ್ದಾರೆ. ಎಸ್.ಎಂ ಕೃಷ್ಣ ಮೊಮ್ಮೊಗ ಹಾಗೂ ಡಿ.ಕೆ ಶಿವಕುಮಾರ್ ಪುತ್ರಿ ಐಶ್ವರ್ಯ ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷ ಅಂದ್ರೆ ಕಾರ್ಮಿಕ ದಿನಾಚರಣೆ, ಕರ್ನಾಟಕದ ರಾಜಕೀಯ ಮುತ್ಸದ್ಧಿ ಎಸ್.ಎಂ.ಕೃಷ್ಣ ಜನ್ಮದಿನ ಹಾಗೂ ಶುಭ್ರ ಪೂರ್ಣಿಮೆಯ ದಿನ ಡಿ.ಕೆ.ಶಿವಕುಮಾರ್‌ ತಾತನಾಗಿದ್ದಾರೆ. ಇನ್ನು ಈ ಬಗ್ಗೆ ಮಾಧ್ಯಮದವರು ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ಮುಗುಳ್ನಕ್ಕರು.

ಇದನ್ನೂ ನೋಡಿ: ಅಜ್ಜನಾದ ಡಿಕೆ ಶಿವಕುಮಾರ್, ಮೊಮ್ಮಗಳನ್ನ ನೋಡಲು ಡಿಸಿಎಂ ಆಸ್ಪತ್ರೆಗೆ ದೌಡು

Source link

ಜಮ್ಮುವಿನ ಬಂಟ್ಲಾಬ್‌ನಲ್ಲಿ ಭೀಕರ ಅಪಘಾತ; ಸೇತುವೆ ಕುಸಿದು 7 ಜನ ಸಾವು – Kannada News | Bridge Collapse in Jammu Kashmirs Bantalab 7 Workers Trapped

ಶ್ರೀನಗರ, ಮೇ 1: ಜಮ್ಮುವಿನ ಬಂಟಲಾಬ್‌ನ ಥಾರ್ ಪ್ರದೇಶದಲ್ಲಿ ಇಂದು ಒಂದು ದೊಡ್ಡ ಅಪಘಾತ (Accident) ಸಂಭವಿಸಿದೆ. ಸೇತುವೆಯ ಅಗಲೀಕರಣದ ಸಮಯದಲ್ಲಿ ಕಾರ್ಮಿಕರು ಕೆಳಗೆ ಕೆಲಸ ಮಾಡುತ್ತಿದ್ದಾಗ ಸೇತುವೆ ಕುಸಿದಿದೆ. ಇದರಿಂದ 7 ಕಾರ್ಮಿಕರು ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಇದ್ದಕ್ಕಿದ್ದಂತೆ, ಸೇತುವೆಯ ದೊಡ್ಡ ಭಾಗ ಕುಸಿದು, ಕಾರ್ಮಿಕರು ಅದರ ಕೆಳಗೆ ಸಿಲುಕಿಕೊಂಡರು. 7 ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಮಾಧಿಯಾದರು. ಈ ಘಟನೆಯ ನಂತರ ತಕ್ಷಣವೇ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಎಸ್‌ಡಿಆರ್‌ಎಫ್, ಭಾರತೀಯ ಸೇನೆ ಮತ್ತು ಸ್ಥಳೀಯ ನಿವಾಸಿಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ ಇಬ್ಬರು ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version