IPL 2026: 30 ಅಥವಾ 40.. ಕೊಹ್ಲಿ ಪ್ರದರ್ಶನದ ಮೇಲೆ ನಿಂತಿದೆ ಆರ್​ಸಿಬಿ ಸೋಲು, ಗೆಲುವು – Kannada News | RCB’s Kohli Dependence: Stats Reveal Why rcb Loses When Virat Falls Early

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026) ರ 42 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ (RCB vs GT) ವಿರುದ್ಧ 4 ವಿಕೆಟ್‌ಗಳ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕಿತು. ಆದರೆ ಅನುಭವಿ ವಿರಾಟ್ ಕೊಹ್ಲಿ (Virat Kohli) 13 ಎಸೆತಗಳಲ್ಲಿ 28 ರನ್‌ಗಳಿಸಿ ಔಟಾದ ಬಳಿಕ ತಂಡದ ಬ್ಯಾಟಿಂಗ್ ಸಂಪೂರ್ಣವಾಗಿ ಕುಸಿಯಿತು. ಇದರ ಪರಿಣಾಮವಾಗಿ ತಂಡವು 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಸುಲಭವಾಗಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಬೇಗನೇ ಔಟಾದಗಲೇ ಆರ್​ಸಿಬಿ ಸೋಲು ಖಚಿತವಾಗಿತ್ತು. ಏಕೆಂದರೆ ಅಂಕಿ ಅಂಶಗಳು ಕೂಡ ಇದನ್ನೇ ಹೇಳಿದ್ದವು.

ಕೊಹ್ಲಿ ಪ್ರದರ್ಶನವೇ ಮುಖ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆರಂಭದಿಂದಲೂ ವಿರಾಟ್ ಕೊಹ್ಲಿಯ ಮೇಲೆ ಅವಲಂಬಿತವಾಗಿದೆ. ಆದರೆ ಕಳೆದ ಎರಡು ಆವೃತ್ತಿಗಳಿಂದ ತಂಡದ ಸೋಲು, ಗೆಲುವು ನಿಶ್ಚಯವಾಗುವುದು ಕೊಹ್ಲಿಯ ಪ್ರದರ್ಶನದ ಮೇಲೆ ಎಂಬಂತ್ತಾಗಿದೆ. ಅಂಕಿ ಅಂಶಗಳು ಕೂಡ ಇದನ್ನೇ ಹೇಳುತ್ತಿದ್ದು, ಕೊಹ್ಲಿ ಕ್ರೀಸ್‌ನಲ್ಲಿ ಉಳಿದು ದೀರ್ಘ ಇನ್ನಿಂಗ್ಸ್ ಆಡಿದಾಗ, ತಂಡವು ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. ಆದರೆ ಕೊಹ್ಲಿ ಬೇಗನೆ ಔಟಾದಾಗ, ಆರ್‌ಸಿಬಿ ಹೆಚ್ಚು ಪಂದ್ಯಗಳನ್ನು ಸೋತಿದೆ.

30 ಎಸೆತ ಅಥವಾ 40 ಕ್ಕೂ ಹೆಚ್ಚು ರನ್

ಕಳೆದ ಆವೃತ್ತಿಯಿಂದ ವಿರಾಟ್ ಕೊಹ್ಲಿ 40 ರನ್‌ಗಳಿಗಿಂತ ಕಡಿಮೆ ರನ್‌ಗಳಿಗೆ ಔಟಾದಾಗಲೆಲ್ಲಾ, ಆರ್‌ಸಿಬಿಯ ಗೆಲುವಿನ ಶೇಕಡಾವಾರು ಕೇವಲ 33.33% ರಷ್ಟಿದೆ. ಆದಾಗ್ಯೂ, ಕೊಹ್ಲಿ 40 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಿದಾಗ, ತಂಡದ ಗೆಲುವಿನ ಶೇಕಡಾವಾರು 92.85% ಕ್ಕೆ ಏರುತ್ತದೆ. ಅದೇ ರೀತಿ, ಕೊಹ್ಲಿ 30 ಅಥವಾ ಅದಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದಾಗ, ಆರ್‌ಸಿಬಿಯ ಗೆಲುವಿನ ಶೇಕಡಾವಾರು 100% ರಷ್ಟಿದೆ. ಆದಾಗ್ಯೂ, ಕೊಹ್ಲಿ 30 ಕ್ಕಿಂತ ಕಡಿಮೆ ಎಸೆತಗಳಿಗೆ ಔಟಾದಾಗ, ತಂಡದ ಗೆಲುವಿನ ಶೇಕಡಾವಾರು ಕೇವಲ 30% ಕ್ಕೆ ಇಳಿಯುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 30 ಎಸೆತಗಳನ್ನು ಅಥವಾ 40 ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ, ಇದರ ಪರಿಣಾಮವಾಗಿ ಆರ್‌ಸಿಬಿ ಹೀನಾಯ ಸೋಲಿಗೆ ಕೊರಳೊಡ್ಡಬೇಕಾಯಿತು.

ಆರ್‌ಸಿಬಿಗೆ ಈಗ ಆತಂಕಕಾರಿ ಅಂಶವೆಂದರೆ ತಂಡದ ಯಶಸ್ಸು ವಿರಾಟ್ ಕೊಹ್ಲಿಯ ಮೇಲೆ ಹೆಚ್ಚು ಅವಲಂಬಿತವಾಗಿರುವುದು. ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡಿದಾಗ ಅಥವಾ ದೀರ್ಘಕಾಲದವರೆಗೆ ಕ್ರೀಸ್‌ನಲ್ಲಿದ್ದಾಗ, ಇತರ ಬ್ಯಾಟ್ಸ್‌ಮನ್‌ಗಳು ಆತ್ಮವಿಶ್ವಾಸವನ್ನು ಗಳಿಸುತ್ತಾರೆ, ಇದು ಸ್ಕೋರಿಂಗ್ ಸುಲಭಗೊಳಿಸುತ್ತದೆ. ಆದರೆ ಅವರು ಬೇಗನೆ ಔಟಾದರೆ, ಇಡೀ ಬ್ಯಾಟಿಂಗ್ ಘಟಕವು ಒತ್ತಡಕ್ಕೆ ಒಳಗಾಗುತ್ತದೆ. ಹೀಗಾಗಿ ತಂಡವು ಶೀಘ್ರದಲ್ಲೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ, ಮತ್ತು ಇತರ ಆಟಗಾರರು ಜವಾಬ್ದಾರಿಯನ್ನು ಹೊರಬೇಕಾಗುತ್ತದೆ, ಇಲ್ಲದಿದ್ದರೆ ಮುಂಬರುವ ಪಂದ್ಯಗಳಲ್ಲಿ ತಂಡವು ಮತ್ತಷ್ಟು ನಷ್ಟಗಳನ್ನು ಎದುರಿಸಬೇಕಾಗುತ್ತದೆ.

GT vs RCB: ಏಷ್ಯಾದಲ್ಲಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ವಿರಾಟ್ ಕೊಹ್ಲಿ

9 ಪಂದ್ಯಗಳಲ್ಲಿ 379 ರನ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸ್ತುತ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದಕ್ಕೆ ವಿರಾಟ್ ಕೊಹ್ಲಿ ಅವರ ಫಾರ್ಮ್ ಪ್ರಮುಖ ಕಾರಣ. ಅವರು ಒಂಬತ್ತು ಪಂದ್ಯಗಳಲ್ಲಿ 54.14 ರ ಸರಾಸರಿಯಲ್ಲಿ 379 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಈ ಆವೃತ್ತಿಯಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ವಿರಾಟ್. ಕೊಹ್ಲಿ ಹೊರತುಪಡಿಸಿ ಆರ್‌ಸಿಬಿಯ ಬೇರೆ ಯಾವುದೇ ಆಟಗಾರ 300 ರನ್‌ಗಳ ಗಡಿಯನ್ನು ತಲುಪಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Fri, 1 May 26

Source link

SSLC ಪರೀಕ್ಷೆ ವೇಳೆ ಕನ್ನಡದಲ್ಲಿಯೇ ವಿದ್ಯಾರ್ಥಿಗಳು ಫೇಲ್​​ ಆಗ್ತಿರೋದೇಕೆ?: ಅಚ್ಚರಿಯ ಮಾಹಿತಿ ಬಹಿರಂಗ – Kannada News | SSLC Kannada Failure: KDA Unveils Reasons, Recommends Reforms

ಬೆಂಗಳೂರು, ಮೇ 01: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡಿದ್ದ ಸುಮಾರು 19,000 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಹೀಗಾಗಿ ಇದಕ್ಕೆ ಕಾರಣಗಳನ್ನು ಅಧ್ಯಯನ ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದ ಸಮಿತಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಕನಿಷ್ಠ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸರ್ಕಾರದ ಉದ್ಯೋಗಗಳಲ್ಲಿ ಶೇ. 25ರಷ್ಟು ಮೀಸಲಾತಿ ನೀಡಬೇಕು ಎಂದು ಸಮಿತಿ ಹೇಳಿದ್ದು, ಇದರಿಂದ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದೆ.

ವಿದ್ಯಾರ್ಥಿಗಳ ಅನುತ್ತೀರ್ಣಕ್ಕೆ ಕಾರಣವೇನು?

ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮಗಳ ನಡುವಿನ ಏಕರೂಪತೆಯ ಕೊರತೆ, ಶಿಕ್ಷಣದ ವಿವಿಧ ಹಂತಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸದಿರುವುದು, ಪ್ರಾಥಮಿಕ ಹಂತದಿಂದಲೇ ಕಲಿಕೆ ಫಲಿತಾಂಶ ಅಳೆಯುವ ಪರೀಕ್ಷೆಗಳ ಕೊರತೆ, ಕನ್ನಡದಲ್ಲಿ ಸಾಧನೆ ಮಾಡುವವರಿಗೆ ಪ್ರೋತ್ಸಾಹ ಸಿಗದಿರುವುದು, ಭಾಷಾ ಕಲಿಕೆಗೆ ಅನುಕೂಲಕರವಲ್ಲದ ಪಠ್ಯಪುಸ್ತಕಗಳೇ ವಿದ್ಯಾರ್ಥಿಗಳ ಅನುತ್ತೀರ್ಣತೆಗೆ ಪ್ರಮುಖ ಕಾರಣಗಳೆಂದು ವರದಿ ಹೇಳಿದೆ.

ಇದನ್ನೂ ಓದಿ: ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ರಾಜ್ಯ ಸರ್ಕಾರದ ‘ಶಿಕ್ಷಣ ಗ್ಯಾರಂಟಿ’ ಅಸ್ತ್ರ!

ಸಮಿತಿಯ ಶಿಫಾರಸುಗಳೇನು?

  • ತ್ರಿ ಭಾಷಾ ನೀತಿ ರದ್ದುಗೊಳಿಸಿ ದ್ವಿಭಾಷಾ ನೀತಿ ಅನುಸರಿಸುವುದು
  • ಪ್ರಾಥಮಿಕ ಹಂತದಿಂದಲೇ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪಾರಂಗತತೆ ಕಲ್ಪಿಸುವುದು
  • ಭಾಷಾ ಪರಿಣತಿ, ತರಬೇತಿ ಹೊಂದಿದ ಶಿಕ್ಷಕರ ನೇಮಕ
  • ಕನ್ನಡದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉನ್ನತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ
  • ವಿಷಯಾಧಾರಿತ ಪಠ್ಯಗಳ ಬದಲು ಭಾಷಾ ಕಲಿಕೆಗೆ ಒತ್ತು ನೀಡುವ ಪಠ್ಯಪುಸ್ತಕ ರಚನೆ

ಡಾ. ನಿರಂಜನಾರಾಧ್ಯ ವಿ.ಪಿ ನೇತೃತ್ವದ ಸಮಿತಿ ಕಳೆದ 10 ವರ್ಷಗಳ ಅಂಕಿ-ಅಂಶಗಳನ್ನು ಪರಿಶೀಲಿಸಿ, ರಾಜ್ಯದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸ್ಥಿತಿಯನ್ನು ಅಧ್ಯಯನ ಮಾಡಿ ಈ ಶಿಫಾರಸುಗಳನ್ನು ನೀಡಿದೆ. ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ‘ಕನ್ನಡದಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿರುವ ಕಾರಣಗಳು ಮತ್ತು ಅಗತ್ಯ ಸುಧಾರಣೆಗಳು’ ಕುರಿತ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಿಕೆ ಮಾಡಿದ್ದಾರೆ ಎಂದು ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಲಿಂಡರ್ ಬೆಲೆ ಏರಿಕೆ ವಿರುದ್ಧ ಸಿಡಿದೆದ್ದ ಹೋಟೆಲ್ ಮಾಲೀಕರ ಸಂಘ: ಗ್ರಾಹಕರ ಸಂಖ್ಯೆ ಇಳಿಕೆ ಆತಂಕ – Kannada News | Hotel Owners’ Association spark on Commercial LPG Cylinder Price Hike, Fear of Declining Customer Numbers

ಬೆಂಗಳೂರು, ಮೇ 01: ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭಗೊಂಡ ಬಳಿಕ 3ನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ (Commercial LPG price hike) ಮಾಡಲಾಗಿದೆ. ಮಾರ್ಚ್‌ನಲ್ಲಿ 144 ರೂ, ಏಪ್ರಿಲ್‌ನಲ್ಲಿ 200 ರೂ ಹಾಗೂ ಇದೀಗ ಮೂರನೇ ಬಾರಿಗೆ 993 ರೂ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಎಲ್ಲೆಡೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತ ರಾಜ್ಯದಲ್ಲಿ ಕೂಡ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯ ಎಫೆಕ್ಟ್ ತಟ್ಟಿದ್ದು, ಹೋಟೆಲ್ ಮಾಲೀಕರಿಂದ ವಿರೋಧ ವ್ಯಕ್ತವಾಗಿದ್ದು, ಮೊದಲಿನ ದರ ಮುಂದುವರೆಸುವಂತೆ ಕೇಂದ್ರಕ್ಕೆ ಆಗ್ರಹಿಸಿದ್ದಾರೆ.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಗೆ ಬೆಂಗಳೂರಿನಲ್ಲಿ ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೆ ಮತ್ತೆ ಈ ರೀತಿ ಬೆಲೆ ಏರಿಕೆ ಮಾಡುತ್ತಿರುವುದು ತಪ್ಪು. ಬ್ಲಾಕ್ ಮಾರ್ಕೆಟ್​ನಲ್ಲಿ ಆಗುತ್ತಿರುವ ಮಾರಾಟಕ್ಕೆ ಮೊದಲು ಬ್ರೇಕ್ ಹಾಕಬೇಕು ಎಂದು ಈಶಾ ದೋಸೆ ಪಾಯಿಂಟ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಹಕರ ಮೇಲೆ ಹೊರೆ ಹಾಕಬೇಕಾದ ಅನಿವಾರ್ಯತೆ

ಭರಣಿ ಕೆಫೆ ಹೋಟೆಲ್ ಮಾಲೀಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.​​ ಸಿಲಿಂಡರ್ ಅಭಾವ ಇನ್ನು ಕೂಡ ಸರಿಯಾಗಿಲ್ಲ. ಇದರ ಮಧ್ಯೆ ಏಕಾಏಕಿ ಈ ರೀತಿ ದರ ಏರಿಕೆ ಮಾಡಿದ್ದು ಸರಿಯಲ್ಲ. ಮತ್ತೆ ಗ್ರಾಹಕರ ಮೇಲೆ ಹೊರೆ ಹಾಕಬೇಕಾದ ಅನಿವಾರ್ಯತೆ ಬರುತ್ತೆ ಎಂದಿದ್ದಾರೆ.

ದರ ಏರಿಕೆ ಮಾಡಿದರೆ ಜನ ಪ್ರಶ್ನಿಸುತ್ತಾರೆ: ಪ್ರಸಾದಂ ಹೋಟೆಲ್ ಮಾಲೀಕ ದೀಪು

ಇನ್ನು ಈ ಬಗ್ಗೆ ಚಿತ್ರದುರ್ಗ ಪ್ರಸಾದಂ ಹೋಟೆಲ್ ಮಾಲೀಕ ದೀಪು ಅವರು ಕಿಡಿಕಾರಿದ್ದಾರೆ. ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ತಿಳಿದು ಆಘಾತ ಆಗಿದೆ. ಏಕಾಏಕಿ ಶೇ.45-50ರಷ್ಟು ದರ ಏರಿಕೆ ಮಾಡಲಾಗಿದೆ. ನಾವು ಉಪಹಾರದ ದರ ಏರಿಸಿದರೆ ಜನ ಪ್ರಶ್ನಿಸುತ್ತಾರೆ. ಹೋಟೆಲ್​ಗೆ ಬರುವ ಗ್ರಾಹಕರ ಸಂಖ್ಯೆ ಕ್ಷೀಣಿಸುತ್ತದೆ. ರಾಜ್ಯಮಟ್ಟದಲ್ಲಿ ಹೋಟೆಲ್ ಮಾಲೀಕರು ಸೇರಿ ಈ ಬಗ್ಗೆ ಚರ್ಚಿಸುತ್ತೇವೆ. ಈ ಮೊದಲಿನ ದರ ಮುಂದುವರೆಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತೇವೆ ಎಂದಿದ್ದಾರೆ.

ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಿಷ್ಟು 

ರಾಜ್ಯ ಹೋಟೆಲ್ ಮಾಲೀಕರ ಸಂಘದ ಉಪಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರತಿಕ್ರಿಯಿಸಿದ್ದು, ಸಿಲಿಂಡರ್ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ ಉದ್ಯಮಿಗಳಿಗೆ ಆರ್ಥಿಕ ಹೊರೆಯಾಗಲಿದೆ. ಬೆಲೆ ಏರಿಕೆಯಿಂದ ಆಹಾರ ಬೆಲೆಗಳ ಏರಿಕೆ ಮಾಡಬೇಕಾದ ಭೀತಿ ಶುರುವಾಗಿದೆ. ಈಗಾಗಲೇ ಹೋಟೆಲ್ ಉದ್ಯಮಿಗಳು ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಯಿಂದ ಮತ್ತಷ್ಟು ಸಮಸ್ಯೆ ಶುರುವಾಗಿದೆ. ಒಮ್ಮೆಲೆ ಈ ರೀತಿಯಾಗಿ ಬೆಲೆ ಏರಿಕೆ ಮಾಡಿದರೆ ಗ್ರಾಹಕರಿಗೂ ಹೊರೆಯಾಗುತ್ತದೆ. ಗ್ಯಾಸ್ ಲಭ್ಯತೆಯೇ ಸಮರ್ಪಕವಾಗಿ ಇಲ್ಲ, ಈಗ ಬೆಲೆ ಏರಿಕೆ ಮಾಡಿರುವುದು ಉದ್ಯಮಿಗಳು ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

CBSE Class 12 Results 2026: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ದಿನಾಂಕದ ಕುರಿತ ವದಂತಿಗಳಿಗೆ ಬ್ರೇಕ್ ಹಾಕಿದ ಮಂಡಳಿ! – Kannada News | CBSE Class 12 Results 2026: Official Date and Clarification on Rumors

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 12ನೇ ತರಗತಿಯ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಪರೀಕ್ಷಾ ನಿಯಂತ್ರಕರು ಸ್ಪಷ್ಟನೆ ನೀಡಿದ್ದಾರೆ. ಫಲಿತಾಂಶ ಪ್ರಕಟಣೆಯ ನಿಖರವಾದ ಸಮಯ ಮತ್ತು ನಿರೀಕ್ಷಿತ ದಿನಾಂಕದ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ಪರೀಕ್ಷಾ ನಿಯಂತ್ರಕರ ಸ್ಪಷ್ಟನೆ ಏನು?

ಇತ್ತೀಚೆಗೆ ಇಂಟರ್ನೆಟ್‌ನಲ್ಲಿ ಫಲಿತಾಂಶದ ದಿನಾಂಕದ ಬಗ್ಗೆ ಅನೇಕ ಸುಳ್ಳು ಸುದ್ದಿಗಳು ಹರಡುತ್ತಿದ್ದವು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತವಲ್ಲದ ಮಾಹಿತಿಯನ್ನು ನಂಬಬಾರದು ಎಂದು ಮನವಿ ಮಾಡಿದ್ದಾರೆ. ಪ್ರಸ್ತುತ ಮೌಲ್ಯಮಾಪನ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಮಂಡಳಿಯು ನಿಗದಿತ ವೇಳಾಪಟ್ಟಿಯ ಪ್ರಕಾರವೇ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶ ಯಾವಾಗ ಪ್ರಕಟವಾಗಬಹುದು?

  • ನಿರೀಕ್ಷಿತ ಸಮಯ: ಪರೀಕ್ಷಾ ನಿಯಂತ್ರಕರ ಪ್ರಕಾರ, ಮೇ ತಿಂಗಳ ಮಧ್ಯಭಾಗದಲ್ಲಿ ಅಥವಾ ಮೂರನೇ ವಾರದಲ್ಲಿ ಫಲಿತಾಂಶ ಹೊರಬರುವ ಸಾಧ್ಯತೆಯಿದೆ.
  • ಅಧಿಕೃತ ಘೋಷಣೆ: ಫಲಿತಾಂಶದ ದಿನಾಂಕವನ್ನು ಘೋಷಿಸುವ ಮುನ್ನ ಮಂಡಳಿಯು ತನ್ನ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮುನ್ಸೂಚನೆ ನೀಡಲಿದೆ.

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ನಂತರ AI ಲೋಕಕ್ಕೆ ಎಂಟ್ರಿ ಕೊಡಬೇಕೇ? ಟಾಪ್ ಕೋರ್ಸ್‌ಗಳ ವಿವರ ಇಲ್ಲಿವೆ

ಫಲಿತಾಂಶ ವೀಕ್ಷಿಸುವುದು ಹೇಗೆ?

ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಈ ಕೆಳಗಿನ ವೇದಿಕೆಗಳಲ್ಲಿ ತಮ್ಮ ಅಂಕಗಳನ್ನು ಪರಿಶೀಲಿಸಬಹುದು:

  • ಅಧಿಕೃತ ವೆಬ್‌ಸೈಟ್‌ಗಳು: results.cbse.nic.in ಮತ್ತು cbse.gov.in
  • ಡಿಜಿಲಾಕರ್ (DigiLocker): ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಡಿಜಿಲಾಕರ್ ಮೂಲಕವೂ ಪಡೆಯಬಹುದು.
  • ಉಮಾಂಗ್ ಆ್ಯಪ್ (UMANG): ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.

ವಿದ್ಯಾರ್ಥಿಗಳಿಗೆ ಸೂಚನೆ:

ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಲಾಗಿನ್ ವಿವರಗಳಾದ ರೋಲ್ ನಂಬರ್, ಸ್ಕೂಲ್ ನಂಬರ್ ಮತ್ತು ಅಡ್ಮಿಟ್ ಕಾರ್ಡ್ ಐಡಿಯನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ. ಯಾವುದೇ ಗೊಂದಲಗಳಿದ್ದಲ್ಲಿ ಅಧಿಕೃತ ವೆಬ್‌ಸೈಟ್ ಮಾತ್ರ ಗಮನಿಸಲು ಮಂಡಳಿ ತಿಳಿಸಿದೆ.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ವಸುದೇವ ಕುಟುಂಬ’ ಧಾರಾವಾಹಿ ಸಂಭಾವನೆ ವಿವಾದ: ವಿವರಿಸಿದ ನಟಿ ಚೈತ್ರಾ – Kannada News | Vasudeva Kutumba serial actress Chaithra allegations against production house

‘ವಸುದೇವ ಕುಟುಂಬ’ ಧಾರಾವಾಹಿ (Serial) ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರ ಆಗುತ್ತಿದ್ದು, ಇದೀಗ ಧಾರಾವಾಹಿ ನಿರ್ಮಾಪಕರ ವಿರುದ್ಧ ಕಲಾವಿದರು ತಿರುಗಿ ಬಿದ್ದಿದ್ದಾರೆ. ಕೋರಮಂಗಲ ಟಾಕೀಸ್ ನಿರ್ಮಾಣ ಸಂಸ್ಥೆಯು ‘ವಸುದೇವ ಕುಟುಂಬ’ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದು, ಕಲಾವಿದರಿಗೆ ಸಂಭಾವನೆ ಕೊಟ್ಟಿಲ್ಲ ಎಂದು ಧಾರಾವಾಹಿ ನಟ-ನಟಿಯರು, ತಂತ್ರಜ್ಞರು ಆಕ್ರೋಶ ಹೊರಹಾಕಿದ್ದಾರೆ. ನಿರ್ಮಾಪಕರನ್ನು ಪ್ರಶ್ನೆ ಮಾಡಿರುವ ಕಲಾವಿದರು ನಿರ್ಮಾಣ ಸಂಸ್ಥೆಯ ವಿರುದ್ಧ ದೂರು ನೀಡಿದ್ದಾರೆ. ‘ವಸುದೇವ ಕುಟುಂಬ’ ಧಾರಾವಾಹಿಯ ಪ್ರಮುಖ ನಟಿಯರಲ್ಲಿ ಒಬ್ಬರಾದ ಚೈತ್ರಾ, ನಿರ್ಮಾಣ ಸಂಸ್ಥೆ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಅನಾವಶ್ಯಕ ಕೊಂಕು ತೆಗೆಯುವವರ ಬಾಯಿ ಮುಚ್ಚಿಸಿದ ‘ಕೆಡಿ’ ಟೀಂ; ‘ಡೆವಿಲ್’ ಹಾದಿಯಲ್ಲಿ ಧ್ರುವ ಸಿನಿಮಾ – Kannada News | KD Teams Silence Negative Reviews: How Kannada Films Disable BookMyShow Ratings

ಯಾವುದೇ ಬಿಗ್ ಬಜೆಟ್ ಚಿತ್ರ ರಿಲೀಸ್ ಆಗುತ್ತದೆ ಎಂದರೆ ಅದಕ್ಕೆ ಕೊಂಕು ತೆಗೆಯುವವರು ಸಂಖ್ಯೆ ದೊಡ್ಡದಿರುತ್ತದೆ. ಈಗಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಇದನ್ನು ತಡೆಯುವುದು ಅಸಾಧ್ಯ. ನಾನಾ ರೀತಿಯ ಪ್ರಯತ್ನಗಳು ನಡೆದು ಕೊನೆಗೆ ಅದು ಸಾಧ್ಯವಾಗದೆ ಕೈ ಬಿಟ್ಟ ಅನೇಕ ಸಿನಿಮಾಗಳಿವೆ. ಆದರೆ, ‘ಡೆವಿಲ್’ ಸಿನಿಮಾ ಈ ಪ್ರಕ್ರಿಯೆಯಲ್ಲಿ ಯಶಸ್ಸು ಕಂಡಿತು. ಈಗ ‘ಕೆಡಿ’ ಸಿನಿಮಾ ಕೂಡ ಇದೇ ಮಾರ್ಗ ಅನುಸರಿಸಿದೆ.

‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಯಿತು. ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪಾಸಿಟಿವ್ ವಿಮರ್ಶೆಗಳು ಸಿಗುತ್ತಿವೆ. ಈ ಮಧ್ಯೆ ಬುಕ್ ಮೈ ಶೋನಲ್ಲಿ ಸಿನಿಮಾಗೆ ರೇಟಿಂಗ್ ಕೊಡುವ ಆಯ್ಕೆಯನ್ನೇ ತೆಗೆಯಲಾಗಿದೆ. ಈ ಮೂಲಕ ‘ಕೆಡಿ’ ಬಗ್ಗೆ ಉದ್ದೇಶಪೂರ್ವಕವಾಗಿ ಕೆಟ್ಟ ವಿಮರ್ಶೆ ಕೊಡಲು ಪ್ಲ್ಯಾನ್ ಮಾಡಿದವರು ಸಂಚು ವಿಫಲವಾಗಿದೆ.

ದರ್ಶನ್ ಅವರು ಜೈಲಿನಲ್ಲಿರುವ ಸಂದರ್ಭದಲ್ಲಿ ‘ಡೆವಿಲ್’ ಚಿತ್ರ ರಿಲೀಸ್ ಆಯಿತು. ಈ ಸಂದರ್ಭದಲ್ಲಿ ಚಿತ್ರಕ್ಕೆ ಕೆಲವರು ಕೆಟ್ಟದನ್ನು ಮಾಡುವ ಭಯ ತಂಡವನ್ನು ಕಾಡಿತ್ತು. ಹೀಗಾಗಿ, ‘ಡೆವಿಲ್’ ಟೀಂ ಕನ್ನಡದ ‘ಐಪ್ಲೆಕ್ಸ್’ ಮೂಲಕ ಕೋರ್ಟ್​​ಗೆ ತೆರಳಿ ಬುಕ್ ಮೈ ಶೋ ರೇಟಿಂಗ್ ಕೊಡದಂತೆ ಆದೇಶ ತಂದಿತ್ತು. ‘ಡೆವಿಲ್’ ಸಿನಿಮಾ ಈ ಪ್ರಯೋಗದಲ್ಲಿ ಯಶಸ್ಸು ಕಾಣುತ್ತಿದ್ದಂತೆ ಅನೇಕರು ಇದೇ ಮಾರ್ಗ ಅನುಸರಿಸಿದರು.

ಸುದೀಪ್ ಅಭಿನಯದ ‘ಮಾರ್ಕ್’, ಅರ್ಜುನ್ ಜನ್ಯ ನಿರ್ದೇಶನದ ‘45’, ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾಗಳು ಇದೇ ತಂತ್ರ ಫಾಲೋ ಮಾಡಿದವು. ಈ ಪ್ರಯೋಗ ಅದೆಷ್ಟು ಯಶಸ್ಸು ಕಂಡಿತು ಎಂದರೆ ತೆಲುಗಿನ ‘ಮನ ಶಂಕರ ವರಪ್ರಸಾದ ಗಾರು’, ‘ಅನಗನಗ ಒಕರಾಜು’, ‘ನಾರಿ ನಾರಿ ನಡುಮ ಮುರಾರಿ’, ‘ಫಂಕಿ’, ‘ಕಪಲ್ ಫ್ರೆಂಡ್ಲಿ’ ಕೂಡ ಇದೇ ತಂತ್ರದ ಮೊರೆ ಹೋದವು. ಈಗ ‘ಕೆಡಿ’ ಸಿನಿಮಾಗೂ ಕೂಡ ಬುಕ್ ಮೈ ಶೋ ರೇಟಿಂಗ್ ಆಫ್ ಮಾಡಿಸಲಾಗಿದೆ. ಇದರ ಹಿಂದೆಯೂ ಐಪ್ಲೆಕ್ಸ್​ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ: ಕಿಚ್ಚನ ಅಭಿಮಾನಿಗಳು ಫುಲ್ ಖುಷ್

ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ಸಿನಿಮಾಗಳನ್ನು ಇದನ್ನೇ ಫಾಲೋ ಮಾಡಬಹುದು. ಇದರಿಂದ ಫ್ಯಾನ್ಸ್ ವಾರ ತಪ್ಪುತ್ತದೆ. ಅನಾವಶ್ಯಕವಾಗಿ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಹರಡುವುದಕ್ಕೂ ತಡೆ ಬಿದ್ದಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿನ ಈ ಆಟೋ ಚಾಲಕನಿಗೆ ಆಟೋವೇ ಮನೆ, ಮೆಟ್ರೋ ನಿಲ್ದಾಣವೇ ಆಸರೆ: ಕಣ್ಣೀರು ತರಿಸುತ್ತೆ ಈ ‘ಮೌನ ಹೋರಾಟಗಾರ’ನ ಕಥೆ! – Kannada News | Homeless in Bengaluru: Auto Driver’s Inspiring Fight with Dignity and Hope

ಬೆಂಗಳೂರು, ಮೇ.1: ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಸ್ವಂತ ಮನೆ ಹೊಂದುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಅವಕಾಶಗಳ ಈ ನಗರದಲ್ಲಿ ಬದುಕಿಗಾಗಿ ಪ್ರತಿದಿನ ನಿಶ್ಶಬ್ದವಾಗಿ ಹೋರಾಡುವ ಅದೆಷ್ಟೋ ಜೀವಗಳಿವೆ. ಇದು ಅಂತಹದ್ದೇ ಒಬ್ಬ ಆಟೋ ಚಾಲಕನ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ಕಥೆ. ಆಟೋ ಓಡಿಸುವುದು ಈತನ ಜೀವನೋಪಾಯದ ದಾರಿ. ಆದರೆ ಹೊರಗಿನ ಜಗತ್ತಿಗೆ ಕಾಣದ ಸತ್ಯವೆಂದರೆ, ಈತನ ಪಾಲಿಗೆ ಆಟೋ ಕೇವಲ ವಾಹನವಲ್ಲ, ಅದುವೇ ಈತನ ಸೂರು. ತಲೆಮರೆಸಿಕೊಳ್ಳಲು ಸ್ವಂತ ಮನೆಯಿಲ್ಲದ ಕಾರಣ, ಈ ಚಾಲಕ ರಾತ್ರಿಯೆಲ್ಲಾ ತನ್ನ ಆಟೋದಲ್ಲಿಯೇ ಮಲಗುತ್ತಾನೆ. ಒಂದು ದಿನ ಪ್ರಯಾಣಿಕರೊಬ್ಬರು ಆತನ ಪರಿಸ್ಥಿತಿಯನ್ನು ಗಮನಿಸಿದರು. ಚಾಲಕನ ಮೊಬೈಲ್ ಬ್ಯಾಟರಿ ಕಡಿಮೆಯಿದ್ದಾಗ, ಆ ಮಹಿಳೆ ತನ್ನ ಮನೆಯ ಬಳಿ ಬಂದು ಫೋನ್ ಚಾರ್ಜ್ ಮಾಡುವಂತೆ ಆತನಿಗೆ ತಿಳಿಸಿದರು. ಆದರೆ ಆತ, “ಬೇಡ ಮೇಡಂ, ಅದು ತುಂಬಾ ಸಮಯ ತೆಗೆದುಕೊಳ್ಳುತ್ತದೆ” ಎಂದು ನಯವಾಗಿಯೇ ನಿರಾಕರಿಸಿದ. ಆ ವೇಳೆ ಮಹಿಳೆಯು, “ಸಂಪೂರ್ಣ ಪರದೆಗಳಿಲ್ಲದ ಈ ಆಟೋದಲ್ಲಿ ಮಳೆಯ ನಡುವೆ ಹೇಗೆ ಮಲಗುತ್ತೀರಿ?” ಎಂದು ಕೇಳಿದರು. ಅದಕ್ಕೆ ಆ ಚಾಲಕ ಸಮಾಧಾನದಿಂದಲೇ ಉತ್ತರಿಸಿದ, “ರಕ್ಷಣೆಗಾಗಿ ಮೆಟ್ರೋ ನಿಲ್ದಾಣದ ಬಳಿ ಆಟೋ ನಿಲ್ಲಿಸುತ್ತೇನೆ ಮೇಡಂ, ಫೋನ್ ಚಾರ್ಜ್ ಮಾಡಲು ಹತ್ತಿರದ ಅಂಗಡಿಯವರಿಗೆ ಕೊಡುತ್ತೇನೆ” ಎಂದು ಹೇಳಿದ, ನಗರದ ಒಂದು ಕಡೆ ಜನರು ಐಷಾರಾಮಿ ಬದುಕು ನಡೆಸುತ್ತಿದ್ದರೆ, ಇನ್ನೊಂದೆಡೆ ಇಂತಹ ಮೌನ ಹೋರಾಟಗಳು ನಡೆಯುತ್ತಿವೆ. ಕಷ್ಟಗಳಿದ್ದರೂ ಈ ಚಾಲಕ ತನ್ನ ಘನತೆ, ಕಠಿಣ ಪರಿಶ್ರಮ ಮತ್ತು ಭರವಸೆಯೊಂದಿಗೆ ಬದುಕುತ್ತಿದ್ದಾನೆ ಎಂದು @Karnataka Portfolio ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸ್ಗೆ ಸೇರಿಸುತ್ತೀರಾ? ಈ ವಿಚಾರ ತಿಳಿದಿರಲಿ – Kannada News | Only 17 percent of Karnataka Engineering Graduates Employable: Report Reveals Staggering Job Crisis

ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸ್ಗೆ ಸೇರಿಸುವ ಪೋಷಕರಿಗೆ ಕಹಿ ಸುದ್ದಿ! Image Credit source: google Gemini

ಬೆಂಗಳೂರು, ಮೇ 01: ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು ಸಿಇಟಿಯಲ್ಲಿ ರ್ಯಾಂಕ್ ಬಂದ ಕೂಡಲೇ ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸಿಗೆ (Engineering) ಸೇರಿಸಿ ಬಿಟ್ಟರೆ ಮುಗಿಯಿತು. ನಾಲ್ಕು ವರ್ಷ ಕಳೆಯುತ್ತಿದ್ದಂತೆ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಸಿಕ್ಕಿಯೇ ಬಿಡುತ್ತದೆ ಎಂಬ ಭಾವನೆ ಬಹುತೇಕ ಪೋಷಕರಲ್ಲಿದೆ. ಆದರೆ, ಇದಕ್ಕೆ ತದ್ವಿರುದ್ಧವಾದ ಮತ್ತು ಆಘಾತಕಾರಿಯಾದ ವಿಚಾರ ಒಂದು ಈಗ ಬಹಿರಂಗವಾಗಿದೆ. ಕರ್ನಾಟಕದ ಇಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ. 17ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂದು ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಪರಿವರ್ತನೆ ಸುಧಾರಣಾ ಸಮಿತಿ ಸಲ್ಲಿಸಿರುವ ವರದಿ ಬಹಿರಂಗಪಡಿಸಿದೆ. ಅಂದರೆ, ರಾಜ್ಯದ ಬರೋಬ್ಬರಿ ಶೇ. 83ರಷ್ಟು ಇಂಜಿನಿಯರಿಂಗ್ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲ್ಯ ಹೊಂದಿಲ್ಲದೆ ನಿರುದ್ಯೋಗಿಗಳಾಗುತ್ತಿದ್ದಾರೆ.

ಉದ್ಯೋಗ ಬಿಕ್ಕಟ್ಟಿಗೆ ಕಾರಣವೇನು?

ಪ್ರೊ. ಸಾದಗೋಪನ್ ನೇತೃತ್ವದ ತಜ್ಞರ ಸಮಿತಿಯು ಉದ್ಯೋಗದ ಈ ಗಂಭೀರ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ. ಕಂಪ್ಯೂಟರ್ ಸೈನ್ಸ್ ಪದವೀಧರರಿಗೆ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಹೆಚ್ಚಿನ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್‌ನಂತಹ ಮೂಲ ಇಂಜಿನಿಯರಿಂಗ್ ವಿಭಾಗಗಳಿಗೆ ದಾಖಲಾತಿ ತೀವ್ರವಾಗಿ ಕುಸಿದಿದೆ. ಒಂದು ಕಾಲದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈಗ ಶಿಕ್ಷಣದ ಗುಣಮಟ್ಟ ಕುಸಿದಿದೆ. ವಿದ್ಯಾರ್ಥಿಗಳಲ್ಲಿ ಇಂದಿನ ಮಾರುಕಟ್ಟೆಗೆ ಬೇಕಾದ ಸ್ಪರ್ಧಾತ್ಮಕ ಕೌಶಲ್ಯಗಳ ಕೊರತೆ ಎದ್ದು ಕಾಣುತ್ತಿದೆ.

ಸೆಮಿಕಂಡಕ್ಟರ್ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರಿ ಬೇಡಿಕೆ

ಆಶ್ಚರ್ಯಕರ ವಿಷಯವೆಂದರೆ, ಕಂಪ್ಯೂಟರ್ ಸೈನ್ಸ್ ಹೊರತುಪಡಿಸಿ ಇತರ ಕ್ಷೇತ್ರಗಳಲ್ಲಿ ತಜ್ಞರ ಭಾರಿ ಕೊರತೆ ಇದೆ. 2027ರ ವೇಳೆಗೆ ಭಾರತದಲ್ಲಿ ಸುಮಾರು 2.50 ರಿಂದ 3 ಲಕ್ಷ ವೃತ್ತಿಪರರ ಅಗತ್ಯವಿದ್ದು, ಕರ್ನಾಟಕದಲ್ಲಿಯೇ 10,000-15,000 ಜನರ ಕೊರತೆ ಎದುರಾಗಲಿದೆ. ಏರೋಸ್ಪೇಸ್ ಮತ್ತು ಡಿಫೆನ್ಸ್ (4,500-8,500), ಎಲೆಕ್ಟ್ರಿಕ್ ವೆಹಿಕಲ್ಸ್ (6,000-11,000) ಮತ್ತು ಕ್ಲೀನ್ ಎನರ್ಜಿ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ ಇದ್ದರೂ, ಇದನ್ನು ಸಿಎಸ್ ಅಥವಾ ಐಟಿ ಪದವೀಧರರಿಂದ ತುಂಬಲು ಸಾಧ್ಯವಿಲ್ಲ.

‘ಕೀರಾ’ (KEERA) ರಚನೆ

ಈ ಶಿಕ್ಷಣ ಬಿಕ್ಕಟ್ಟನ್ನು ಸರಿಪಡಿಸಲು ರಾಜ್ಯ ಸರ್ಕಾರವು ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಸುಧಾರಣಾ ಪ್ರಾಧಿಕಾರ (KEERA) ರಚಿಸಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಕುರಿತು ಶೀಘ್ರವೇ ಪ್ರತ್ಯೇಕ ಕಾಯ್ದೆ ತರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ Engineering Career After PUC: ಪಿಯುಸಿ ನಂತರ ವೃತ್ತಿಜೀವನಕ್ಕೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್, ಯಾವುದು ಉತ್ತಮ?

ಪ್ರಮುಖ ಶಿಫಾರಸುಗಳು

ಖಾಸಗಿ ಕಾಲೇಜುಗಳಲ್ಲಿ ಯಾವುದೇ ಹೊಸ ಕೋರ್ಸ್‌ಗೆ ಆರಂಭದಲ್ಲಿ 60 ಸೀಟುಗಳಿಗೆ ಮಾತ್ರ ಮಿತಿ ಹೇರಲಾಗುವುದು. ಪ್ರತಿ ವರ್ಷ ಸೀಟುಗಳ ಹೆಚ್ಚಳ ಮಾಡಲು ಕಾಲೇಜುಗಳು ಎನ್‌ಬಿಎ (NBA) ಮಾನ್ಯತೆ ಪಡೆಯುವುದು ಕಡ್ಡಾಯ. ಯಾವುದೇ ವಿಭಾಗದಲ್ಲಿ ಗರಿಷ್ಠ ಸೀಟುಗಳ ಸಂಖ್ಯೆ 300 ಮೀರಬಾರದು. ಒಂದು ಸಂಸ್ಥೆಯಲ್ಲಿ ಐದಕ್ಕಿಂತ ಹೆಚ್ಚು ಕಂಪ್ಯೂಟರ್ ಸಂಬಂಧಿತ ವಿಭಾಗಗಳನ್ನು ಆರಂಭಿಸುವಂತಿಲ್ಲ ಮತ್ತು ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 900 ಮೀರಬಾರದು.’ಕೋರ್ + ಎಐ’ (CORE + AI) ಮಾದರಿಯ ಪಠ್ಯಕ್ರಮ ಜಾರಿಗೆ ತರಲು ಸಮಿತಿ ಸೂಚಿಸಿದೆ.

ಹೀಗಾಗಿ, ಪೋಷಕರು ತಮ್ಮ ಮಕ್ಕಳನ್ನು ಕೇವಲ ‘ಕಂಪ್ಯೂಟರ್ ಸೈನ್ಸ್’ ಎಂಬ ವ್ಯಾಮೋಹಕ್ಕೆ ಬಿದ್ದು ಕಾಲೇಜುಗಳಿಗೆ ಸೇರಿಸುವ ಮುನ್ನ, ಮಾರುಕಟ್ಟೆಯ ವಾಸ್ತವತೆ ಮತ್ತು ಕಾಲೇಜಿನ ಗುಣಮಟ್ಟವನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ: ಬಿಯರ್ ಚಿಮ್ಮಿದ ವಿಚಾರಕ್ಕೆ ಗಲಾಟೆ, ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರ ಹುಚ್ಚಾಟ! ವಿಡಿಯೋ ವೈರಲ್ – Kannada News | Hassan Shocker: Drunk Youths Brandish Loaded Gun Over Beer Spill Dispute; 4 Arrested After Viral Video

ಹಾಸನ, ಮೇ 1: ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಲೋಡ್ ಆಗಿದ್ದ ಬಂದೂಕು ಹಿಡಿದು ಯುವಕರು ಹುಚ್ಚಾಟ ನಡೆಸಿದ ಘಟನೆ ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ನಡೆದಿದೆ. ಬಿಯರ್ ಬಾಟಲ್ ಓಪನ್ ಮಾಡಿದಾಗ ಬಿಯರ್ ಮೈಮೇಲೆ ಚಿಮ್ಮಿದ ಎಂಬ ಸಣ್ಣ ವಿಷಯಕ್ಕೆ ಗಲಾಟೆ ಆರಂಭವಾಗಿ, ಅಂತಿಮವಾಗಿ ಬಂದೂಕು ಪ್ರದರ್ಶಿಸುವ ಹಂತಕ್ಕೆ ತಲುಪಿದೆ. ಸಿಂಗೇನಹಳ್ಳಿ ಮತ್ತು ಡಿ.ಎಂ.ಕುರ್ಕೆ ಗ್ರಾಮದ ಯುವಕರ ನಡುವೆ ಈ ಗಲಾಟೆ ನಡೆದಿದೆ. ಮಾತಿನ ಚಕಮಕಿ ಜೋರಾದಾಗ ಸಿಂಗೇನಹಳ್ಳಿ ಗ್ರಾಮದ ರಮೇಶ್ ಎಂಬಾತ ಏರ್ ಗನ್ ತಂದು ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಬಂದೂಕು ಕಿತ್ತುಕೊಳ್ಳಲು ನೂಕಾಟ-ತಳ್ಳಾಟ ನಡೆದಿದ್ದು, ಲೋಡ್ ಆಗಿದ್ದ ಬಂದೂಕಿನಿಂದ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಈ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಘಟನೆಗೆ ಸಂಬಂಧಿಸಿದಂತೆ ರಮೇಶ್, ಮಂಜುನಾಥ್, ಮಧುಸೂದನ್ ಮತ್ತು ದರ್ಶನ್ ಎಂಬುವವರ ವಿರುದ್ಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೂಜಾ ಹೆಗ್ಡೆ ಇಷ್ಟದ ಕನ್ನಡ ನಟ ಯಾರು: ನಟಿಯೇ ಕೊಟ್ಟಿದ್ದಾರೆ ಉತ್ತರ – Kannada News | Pooja Hegde talks about Kantara and Raj B Shetty

ಪೂಜಾ ಹೆಗ್ಡೆ (Pooja Hegde) ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಬಾಲಿವುಡ್​, ತೆಲುಗು, ತಮಿಳು ಸಿನಿಮಾಗಳಲ್ಲಿ ಬಲು ಬೇಡಿಕೆಯ ನಟಿಯಾಗಿರುವ ಪೂಜಾ ಹೆಗ್ಡೆ ಕನ್ನಡದ ಸಿನಿಮಾನಲ್ಲಿ ನಟಿಸಿಲ್ಲ ಆದರೆ ಅವರ ಮೂಲ ಕರ್ನಾಟಕವೇ. ಮಂಗಳೂರಿನ ಮೂಲದ ಈ ಚೆಲುವೆ ಬೆಳೆದಿದ್ದೆಲ್ಲ ಮುಂಬೈನಲ್ಲಿ ಆದರೆ ತಮ್ಮ ಮೂಲವನ್ನು ಮರೆತಿಲ್ಲ. ಇತ್ತೀಚೆಗಷ್ಟೆ ಮಂಗಳೂರಿಗೆ ಬಂದಿದ್ದ ಪೂಜಾ ಹೆಗ್ಡೆ, ದೈವ ಕಾರ್ಯದಲ್ಲಿ ಭಾಗಿ ಆಗಿದ್ದರು. ಜೊತೆಗೆ ತುಳು ನಾಡಿನ ಹಲವು ದೇವಾಲಯಗಳಿಗೆ ಸಹ ಭೇಟಿ ಕೊಟ್ಟು ದರ್ಶನ ಪಡೆದುಕೊಂಡರು.

ತುಳುವನ್ನು ಸುಲಲಿತವಾಗಿ ಮಾತನಾಡಬಲ್ಲ ಪೂಜಾ ಹೆಗ್ಡೆ, ತಮ್ಮ ಈ ಭೇಟಿಯ ಸಂದರ್ಭ ಸ್ಥಳೀಯ ಯೂಟ್ಯೂಬ್ ಚಾನೆಲ್​​ ಒಂದಕ್ಕೆ ಚುಟುಕು ಸಂದರ್ಶನ ನೀಡಿರುವ ನಟಿ ಪೂಜಾ ಹೆಗ್ಡೆ, ಕರ್ನಾಟಕದ ಬಗ್ಗೆ, ಕನ್ನಡ ಚಿತ್ರರಂಗದ ಬಗ್ಗೆ, ತಮ್ಮ ಹಾಗೂ ಕರ್ನಾಟಕದ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಕನ್ನಡ ಚಿತ್ರರಂಗದಲ್ಲಿ ಮೆಚ್ಚಿನ ಯಾರು ಎಂಬುದನ್ನು ಸಹ ನಟಿ ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ.

ಮೊದಲಿಗೆ ‘ಕಾಂತಾರ’ ಸಿನಿಮಾದ ಬಗ್ಗೆ ಮಾತನಾಡಿರುವ ನಟಿ ಪೂಜಾ ಹೆಗ್ಡೆ, ‘ಬಾಲ್ಯದಿಂದಲೂ ಭೂತ, ದೈವಗಳನ್ನು, ಆಚರಣೆಗಳನ್ನು ನೋಡುತ್ತಾ ಬೆಳೆದ ನನಗೆ ಅವುಗಳ ಮಹತ್ವ ಎಲ್ಲವೂ ತಿಳಿದಿತ್ತು. ಆದರೆ ‘ಕಾಂತಾರ’ ಸಿನಿಮಾ ಅದನ್ನು ಇಡೀ ದೇಶಕ್ಕೆ ಪರಿಚಯಿಸಿತು. ಉತ್ತರ ಭಾರತದ ಜನ ಸಹ ಆ ಕತೆಯೊಂದಿಗೆ ಕನೆಕ್ಟ್ ಆದರು. ಅಲ್ಲಿ ಹಲವಾರು ಮಂದಿ ನನ್ನನ್ನು ದೈವದ ಬಗ್ಗೆ ಭೂತದ ಬಗ್ಗೆ ಕೇಳಲು ಆರಂಭಿಸಿದ್ದರು’ ಎಂದಿದ್ದಾರೆ ಪೂಜಾ. ಕನ್ನಡ ಚಿತ್ರರಂಗದಲ್ಲಿ ತಮ್ಮ ನೆಚ್ಚಿನ ನಟ ರಾಜ್ ಬಿ ಶೆಟ್ಟಿ ಎಂದ ಪೂಜಾ, ‘ನನಗೆ ರಾಜ್ ಬಿ ಶೆಟ್ಟಿ ನಟನೆ ಇಷ್ಟವಾಗುತ್ತದೆ. ಅವರು ಬಹಳ ಚೆನ್ನಾಗಿ ನಟಿಸುತ್ತಾರೆ. ‘ಸು ಫ್ರಂ ಸೋ’ ಸಿನಿಮಾ ನೋಡಿದ್ದೇನೆ. ಆ ಸಿನಿಮಾನಲ್ಲಿ ಅವರು ತುಳುವಿನಲ್ಲಿ ಸಹ ಮಾತನಾಡಿದ್ದಾರೆ’ ಎಂದಿದ್ದಾರೆ ಪೂಜಾ ಹೆಗ್ಡೆ.

ಇದನ್ನೂ ಓದಿ:ಗ್ಲಾಮರಸ್ ಅವತಾರದಲ್ಲಿ ನಟಿ ಪೂಜಾ ಹೆಗ್ಡೆ: ವಿಡಿಯೋ ನೋಡಿ

ತುಳು ನಾಡಿನೊಂದಿಗೆ ತಮ್ಮ ನಂಟಿನ ಬಗ್ಗೆ ಮಾತನಾಡಿರುವ ಪೂಜಾ ಹೆಗ್ಡೆ, ‘ನಾನು ಪ್ರತಿ ಬಾರಿ ಬೇಸಿಗೆ ರಜೆ ಕಳೆಯಲು ಇಲ್ಲಿಗೆ ಬರುತ್ತಿದ್ದೆ. ನಮ್ಮ ಕಸಿನ್ಸ್ ಎಲ್ಲರೂ ಆ ಸಮಯದಲ್ಲಿ ಬರುತ್ತಿದ್ದರು. ನಾವೆಲ್ಲ ಆಟ ಆಡುತ್ತಿದ್ದೆವು. ಇಲ್ಲಿ ಬಂದು ನೇರಳೆ ಹಣ್ಣು ತಿನ್ನುತ್ತಿದ್ದ ನೆನಪು ನನಗೆ ಈಗಲೂ ಇದೆ. ಬಹಳ ಅದ್ಭುತ ದಿನಗಳನ್ನು ಇಲ್ಲಿ ಕಳೆದಿದ್ದೇನೆ’ ಎಂದು ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘ಜನ ನಾಯಗನ್’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ದುಲ್ಕರ್ ಸಲ್ಮಾನ್ ಜೊತೆಗೆ ತೆಲುಗು ಸಿನಿಮಾ ಒಂದರಲ್ಲಿ ಪೂಜಾ ನಟಿಸುತ್ತಿದ್ದಾರೆ. ವರುಣ್ ಧವನ್ ಜೊತೆಗೆ ಹಿಂದಿ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸಹ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಒಟ್ಟಾರೆಯಾಗಿ ಪೂಜಾ ಸಖತ್ ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version