Bank Holidays: ಮಾರ್ಚ್​ನಲ್ಲಿ ಹಬ್ಬಗಳ ಸರಮಾಲೆ; ಬ್ಯಾಂಕುಗಳಿಗೆ 18 ದಿನ ರಜೆ; ಇಲ್ಲಿದೆ ಪಟ್ಟಿ – Kannada News | March month has many festivals, upto 18 days holidays for banks

ನವದೆಹಲಿ, ಫೆಬ್ರುವರಿ 24: ಮಾರ್ಚ್ ತಿಂಗಳಲ್ಲಿ ಹಬ್ಬಗಳ ಸರಮಾಲೆಯೇ ಇದೆ. ಹೋಳಿ, ಯುಗಾದಿ, ರಂಜಾನ್, ಮಹಾವೀರ್ ಜಯಂತಿ, ಶ್ರೀರಾಮ ನವಮಿ ಇತ್ಯಾದಿ ಹಲವು ಹಬ್ಬ ಹರಿದಿನಗಳು ಮಾರ್ಚ್​ನ್ಲಲಿ ಇದೆ. ಆರ್​ಬಿಐ ಕ್ಯಾಲಂಡರ್ ಪ್ರಕಾರ, ಆ ತಿಂಗಳು ಶನಿವಾರ, ಭಾನುವಾರಗಳನ್ನೂ ಒಳಗೊಂಡು ಒಟ್ಟು 18 ರಜಾದಿನಗಳಿವೆ. ಪ್ರದೇಶವಾರು ರಜೆಗಳಲ್ಲಿ ವ್ಯತ್ಯಾಸ ಇದೆ. ಹೋಳಿ ಹಬ್ಬಕ್ಕೆ ಕರ್ನಾಟಕದಲ್ಲಿ ರಜೆ ಇಲ್ಲ. ಆದರೆ, ಉತ್ತರಪ್ರದೇಶದಲ್ಲಿ ಆ ಹಬ್ಬಕ್ಕೆ ಮೂರು ದಿನ ರಜೆ ಇದೆ. ಕರ್ನಾಟಕದಲ್ಲಿ ಶ್ರೀರಾಮನವಮಿಗೆ ರಜೆ ಇರುವುದಿಲ್ಲ, ಆದರೆ, ಮಹಾವೀರ ಜಯಂತಿಗೆ ರಜೆ (Bank Holidays) ಇರುತ್ತದೆ. ಕರ್ನಾಟಕದಲ್ಲಿ ಶನಿವಾರ, ಭಾನುವಾರದ ರಜೆಗಳೂ ಸೇರಿ ಒಟ್ಟು 10 ದಿನಗಳು ಮಾರ್ಚ್​ನಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತವೆ.

2026ರ ಮಾರ್ಚ್​ನಲ್ಲಿ ಬ್ಯಾಂಕ್ ರಜಾದಿಗಳು

  • ಮಾರ್ಚ್ 1: ಭಾನುವಾರದ ರಜೆ
  • ಮಾರ್ಚ್ 2, ಸೋಮವಾರ: ಹೋಳಿ ಹಬ್ಬ (ಉ.ಪ್ರ.ದಲ್ಲಿ ರಜೆ)
  • ಮಾರ್ಚ್ 3, ಮಂಗಳವಾರ: ಹೋಳಿ ಹಬ್ಬ (ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಮಧ್ಯಪ್ರದೇಶ, ಅಸ್ಸಾಂ, ರಾಜಸ್ಥಾನ್, ಉತ್ತರಪ್ರದೇಶ ಮೊದಲಾದ ಹಲವು ರಾಜ್ಯಗಳಲ್ಲಿ ರಜೆ)
  • ಮಾರ್ಚ್ 4, ಬುಧವಾರ: ಹೋಳಿ ಹಬ್ಬ, ಧುಲೇತಿ, ಯಾವೊಸಾಂಗ್ (ಉತ್ತರ ಪ್ರದೇಶ, ದೆಹಲಿ, ಛತ್ರೀಸ್​ಗಡ್, ಜಾರ್ಖಂಡ್ ಮೊದಲಾದ ಹಲವು ರಾಜ್ಯಗಳಲ್ಲಿ ರಜೆ)
  • ಮಾರ್ಚ್ 8: ಭಾನುವಾರದ ರಜೆ
  • ಮಾರ್ಚ್ 13, ಶುಕ್ರವಾರ: ಚಾಪಚಾರ್ ಕುತ್ (ಮಿಝೋರಾಂ, ಜಮ್ಮುವಿನಲ್ಲಿ ರಜೆ)
  • ಮಾರ್ಚ್ 14: ಎರಡನೇ ಶನಿವಾರದ ರಜೆ
  • ಮಾರ್ಚ್ 15: ಭಾನುವಾರದ ರಜೆ
  • ಮಾರ್ಚ್ 17, ಮಂಗಳವಾರ: ಶಬಿ ಖಾದರ್ (ಮಣಿಪುರ್, ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
  • ಮಾರ್ಚ್ 19, ಗುರುವಾರ: ಯುಗಾದಿ, ಗುಧಿ ಪಡವಾ, ಸಜಿಬು ನೊಂಗ್ಮಪಣ್ಬ (ಅನೇಕ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 20, ಶುಕ್ರವಾರ: ಈದ್ ಉಲ್ ಫಿತರ್, ರಂಜಾನ್, ಜಮಾತ್ ಉಲ್ ವಿದಾ ಹಬ್ಬ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 21, ಶನಿವಾರ: ರಂಜಾನ್ ಈದ್, ಖುದುಬ್ ಇ ರಂಜಾನ್ (ಮೇಘಾಲಯ, ಮಧ್ಯಪ್ರದೇಶ, ಹರ್ಯಾಣ, ಉತ್ತರಾಖಂಡ್, ರಾಜಸ್ಥಾನ್, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 22: ಭಾನುವಾರದ ರಜೆ
  • ಮಾರ್ಚ್ 26, ಗುರುವಾರ: ಶ್ರೀರಾಮನವಮಿ ಹಬ್ಬ (ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 27, ಶುಕ್ರವಾರ: ಶ್ರೀರಾಮನವಮಿ (ಗುಜರಾತ್, ಮಧ್ಯಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ರಜೆ)
  • ಮಾರ್ಚ್ 28: ನಾಲ್ಕನೇ ಶನಿವಾರದ ರಜೆ
  • ಮಾರ್ಚ್ 29: ಭಾನುವಾರದ ರಜೆ
  • ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ (ಅನೇಕ ರಾಜ್ಯಗಳಲ್ಲಿ ರಜೆ)

ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?

ಕರ್ನಾಟಕದಲ್ಲಿ ಮಾರ್ಚ್​ನಲ್ಲಿ ಬ್ಯಾಂಕ್ ರಜಾದಿನಗಳು

  • ಮಾರ್ಚ್ 1: ಭಾನುವಾರದ ರಜೆ
  • ಮಾರ್ಚ್ 8: ಭಾನುವಾರದ ರಜೆ
  • ಮಾರ್ಚ್ 14: ಎರಡನೇ ಶನಿವಾರದ ರಜೆ
  • ಮಾರ್ಚ್ 15: ಭಾನುವಾರದ ರಜೆ
  • ಮಾರ್ಚ್ 19, ಗುರುವಾರ: ಯುಗಾದಿ ಹಬ್ಬ
  • ಮಾರ್ಚ್ 20, ಶುಕ್ರವಾರ: ರಂಜಾನ್ ಹಬ್ಬ
  • ಮಾರ್ಚ್ 22: ಭಾನುವಾರದ ರಜೆ
  • ಮಾರ್ಚ್ 28: ನಾಲ್ಕನೇ ಶನಿವಾರದ ರಜೆ
  • ಮಾರ್ಚ್ 29: ಭಾನುವಾರದ ರಜೆ
  • ಮಾರ್ಚ್ 31, ಮಂಗಳವಾರ: ಮಹಾವೀರ ಜಯಂತಿ

ಬ್ಯಾಂಕುಗಳಿಗೆ ರಜೆ ಎಂದರೆ ಕಚೇರಿಯ ಬಾಗಿಲು ಮಾತ್ರ ಬಂದ್ ಆಗಿರುತ್ತದೆ. ಎಟಿಎಂ, ಯುಪಿಐ, ನೆಟ್​ಬ್ಯಾಂಕಿಂಗ್ ಸೇವೆಗಳ ಮೂಲಕ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆಗಳಿಗೆ ನಿರಂತರವಾಗಿ ಅವಕಾಶ ಇರುತ್ತದೆ. ಡಿಮ್ಯಾಂಡ್ ಡ್ರಾಫ್ಟ್ ಇತ್ಯಾದಿ ಕಾರ್ಯಗಳಿಗೆ ಕಚೇರಿಗೆ ಹೋಗಬೇಕಾದವರು ರಜಾದಿನಗಳ ಬಗ್ಗೆ ಗಮನ ಹರಿಸುವುದು ಸರಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

T20 World Cup: 12 ತಂಡಗಳು, 33 ಪಂದ್ಯಗಳು; ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ – Kannada News | ICC Women’s T20 World Cup 2026 Schedule: India Fixtures and Full Dates Revealed

ದಿನಾಂಕ

ಮುಖಾಮುಖಿ

ಸ್ಥಳ

12-06-2026

ಇಂಗ್ಲೆಂಡ್ vs ಶ್ರೀಲಂಕಾ

ಎಡ್ಜ್‌ಬಾಸ್ಟನ್

13-06-2026

ಸ್ಕಾಟ್ಲೆಂಡ್ vs ಐರ್ಲೆಂಡ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

13-06-2026

ಆಸ್ಟ್ರೇಲಿಯಾ vs ದಕ್ಷಿಣ ಆಫ್ರಿಕಾ,

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

13-06-2026

ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್

ಹ್ಯಾಂಪ್‌ಶೈರ್ ಬೌಲ್

14-06-2026

ಬಾಂಗ್ಲಾದೇಶ vs ನೆದರ್ಲ್ಯಾಂಡ್ಸ್

ಎಡ್ಜ್‌ಬಾಸ್ಟನ್

14-06-2026

ಭಾರತ vs. ಪಾಕಿಸ್ತಾನ

ಎಡ್ಜ್‌ಬಾಸ್ಟನ್

16-06-2026

ನ್ಯೂಜಿಲೆಂಡ್ vs ಶ್ರೀಲಂಕಾ

ಹ್ಯಾಂಪ್‌ಶೈರ್ ಬೌಲ್

16-06-2026

ಇಂಗ್ಲೆಂಡ್ vs ಐರ್ಲೆಂಡ್

ಹ್ಯಾಂಪ್‌ಶೈರ್ ಬೌಲ್

17-06-2026

ಆಸ್ಟ್ರೇಲಿಯಾ vs ಬಾಂಗ್ಲಾದೇಶ

ಹೆಡಿಂಗ್ಲೆ

17-06-2026

ಭಾರತ vs ನೆದರ್ಲ್ಯಾಂಡ್ಸ್

ಹೆಡಿಂಗ್ಲೆ

17-06-2026

ದಕ್ಷಿಣ ಆಫ್ರಿಕಾ vs ಪಾಕಿಸ್ತಾನ

ಎಡ್ಜ್‌ಬಾಸ್ಟನ್

18-06-2026

ವೆಸ್ಟ್ ಇಂಡೀಸ್ vs ಸ್ಕಾಟ್ಲೆಂಡ್

ಹೆಡಿಂಗ್ಲೆ

19-06-2026

ನ್ಯೂಜಿಲೆಂಡ್ vs ಐರ್ಲೆಂಡ್

ಹ್ಯಾಂಪ್‌ಶೈರ್ ಬೌಲ್

20-06-2026

ಆಸ್ಟ್ರೇಲಿಯಾ vs ನೆದರ್ಲ್ಯಾಂಡ್ಸ್

ಹ್ಯಾಂಪ್‌ಶೈರ್ ಬೌಲ್

20-06-2026

ಪಾಕಿಸ್ತಾನ vs ಬಾಂಗ್ಲಾದೇಶ

ಹ್ಯಾಂಪ್‌ಶೈರ್ ಬೌಲ್

20-06-2026

ಇಂಗ್ಲೆಂಡ್ vs ಸ್ಕಾಟ್ಲೆಂಡ್

ಹೆಡಿಂಗ್ಲೆ

21-06-2026

ವೆಸ್ಟ್ ಇಂಡೀಸ್ vs ಶ್ರೀಲಂಕಾ

ಬ್ರಿಸ್ಟಲ್ ಕೌಂಟಿ ಮೈದಾನ

21-06-2026

ದಕ್ಷಿಣ ಆಫ್ರಿಕಾ vs ಭಾರತ

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

23-06-2026

ನ್ಯೂಜಿಲೆಂಡ್ vs ಸ್ಕಾಟ್ಲೆಂಡ್

ಬ್ರಿಸ್ಟಲ್ ಕೌಂಟಿ ಮೈದಾನ

23-06-2026

ಶ್ರೀಲಂಕಾ vs ಐರ್ಲೆಂಡ್

ಬ್ರಿಸ್ಟಲ್ ಕೌಂಟಿ ಮೈದಾನ

23-06-2026

ಆಸ್ಟ್ರೇಲಿಯಾ vs. ಪಾಕಿಸ್ತಾನ

ಹೆಡಿಂಗ್ಲೆ

24-06-2026

ಇಂಗ್ಲೆಂಡ್ vs ವೆಸ್ಟ್ ಇಂಡೀಸ್

ಲಾರ್ಡ್ಸ್ ಕ್ರಿಕೆಟ್ ಮೈದಾನ

25-06-2026

ಭಾರತ vs ಬಾಂಗ್ಲಾದೇಶ

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

25-06-2026

ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್

ಬ್ರಿಸ್ಟಲ್ ಕೌಂಟಿ ಮೈದಾನ

26-06-2026

ಶ್ರೀಲಂಕಾ vs ಸ್ಕಾಟ್ಲೆಂಡ್

ಓಲ್ಡ್ ಟ್ರಾಫರ್ಡ್ ಕ್ರಿಕೆಟ್ ಮೈದಾನ

27-06-2026

ಪಾಕಿಸ್ತಾನ vs ನೆದರ್ಲ್ಯಾಂಡ್ಸ್

ಬ್ರಿಸ್ಟಲ್ ಕೌಂಟಿ ಮೈದಾನ

27-06-2026

ವೆಸ್ಟ್ ಇಂಡೀಸ್ vs ಐರ್ಲೆಂಡ್

ಬ್ರಿಸ್ಟಲ್ ಕೌಂಟಿ ಮೈದಾನ

27-06-2026

ಇಂಗ್ಲೆಂಡ್ vs ನ್ಯೂಜಿಲೆಂಡ್

ದಿ ಓವಲ್

28-06-2026

ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ

ಲಾರ್ಡ್ಸ್ ಕ್ರಿಕೆಟ್ ಮೈದಾನ

28-06-2026

ಆಸ್ಟ್ರೇಲಿಯಾ vs ಭಾರತ

ಲಾರ್ಡ್ಸ್ ಕ್ರಿಕೆಟ್ ಮೈದಾನ

30-06-2026

ಸೆಮಿಫೈನಲ್ 1

ದಿ ಓವಲ್

02-07-2026

ಸೆಮಿಫೈನಲ್ 2

ದಿ ಓವಲ್

05-07-2026

ಫೈನಲ್

ಲಾರ್ಡ್ಸ್ ಕ್ರಿಕೆಟ್ ಮೈದಾನ

Source link

ತರಕಾರಿಯಲ್ಲಿ ರಾಸಾಯನಿಕ ಪತ್ತೆಗೆ ಕಾರಣ ರಿವೀಲ್​​: ಪರಿಸರವಾದಿ ಬಿಚ್ಚಿಟ್ರು ಅಸಲಿ ಸತ್ಯ – Kannada News | Environmentalists Blame Polluted Water for Chemical Presence in Karnataka Vegetables

ಚಿಕ್ಕಬಳ್ಳಾಪುರ, ಫೆಬ್ರವರಿ 24: ಚಿಕ್ಕಬಳ್ಳಾಪುರ ಜಿಲ್ಲೆ ಎಂದರೆ ಹೂ, ಹಣ್ಣು ಮತ್ತು ತರಕಾರಿ ಬೆಳೆಗೆ ಖ್ಯಾತಿ. ಇಲ್ಲಿನ ಬೆಳೆಗಳು ತಮಿಳುನಾಡು, ಹೈದರಾಬಾದ್​​ ಮತ್ತು ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಸರಬರಾಜಾಗುತ್ತವೆ. ಆದರೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯು ನೀಡಿರುವ ವರದಿ ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟಿದೆ. ತರಕಾರಿಗಳಲ್ಲಿ ರಾಸಾಯನಿಕ ಪತ್ತೆ ಹಿನ್ನೆಲೆ ಜನ ತರಕಾರಿ ತಿನ್ನಲೂ ಯೋಚಿಸಬೇಕಾದ ಸ್ಥಿತಿ ಬಂದೊದಗಿದೆ. ಈ ಬಗ್ಗೆ ಪರಿಸರವಾದಿ ಆಂಜನೇಯ ರೆಡ್ಡಿ ಟಿವಿ9 ಜೊತೆ ಮಾತನಾಡಿದ್ದು, ಬೆಂಗಳೂರಿನ ಅಕ್ಕಪಕ್ಕದ ಬರಬೀಡಿತ ಜಿಲ್ಲೆಗಳಲ್ಲಿ ತರಕಾರಿ ಬೆಳೆ ಹೆಚ್ಚು. ಆದರೆ, ವರದಿ ಪ್ರಕಾರ ಕಲುಷಿತ ನೀರಿನಿಂದ ಕೃಷಿ ಭೂಮಿಯೂ ಮಲಿನಗೊಳ್ಳುತ್ತೆ. ಅದೇ ಮಣ್ಣಲ್ಲಿ ತರಕಾರಿ ಬೆಳೆಯುವ ಕಾರಣ ಅವು ಮನುಷ್ಯನ ಆರೋಗ್ಯಕ್ಕೆ ಮಾರಕವಾಗುತ್ತಿವೆ. ಈ ಭಾಗದಲ್ಲಿ ಅಂತರ್ಜಲ ಪಾತಾಳಕ್ಕೆ ಹೋಗಿದ್ದು, ಕೆಲವು ಕೊಳವೆ ಬಾವಿಗಳ ನೀರು ಕೃಷಿಗೂ ಅಯೋಗ್ಯ ಎಂಬ ವರದಿ ಇದೆ. ಜೊತೆಗೆ ತ್ಯಾಜ್ಯ ನೀರು ಜಲ ಮೂಲಗಳಿಗೆ ಸೇರುವ ಕಾರಣ ರಾಸಾಯನಿಕಗಳು ಪತ್ತೆಯಾಗ್ತಿವೆ ಎಂದು ಅವರು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದರ್ಶನ್ ಕೇಸ್: ಪೊಲೀಸರ ತನಿಖೆ ಬಗ್ಗೆ ಅನುಮಾನ; ಗೃಹ ಸಚಿವರ ಸ್ಪಷನೆ ಇಲ್ಲಿದೆ.. – Kannada News | G Parameshwara reaction to Renukaswamy case accused lawyer allegations

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಕೇಸ್​​ನಲ್ಲಿ ದರ್ಶನ್ (Darshan) ಅವರು ಪ್ರಮುಖ ಆರೋಪಿ ಆಗಿದ್ದಾರೆ. ಇನ್ನುಳಿದ ಆರೋಪಿಗಳ ಮೊಬೈಲ್ ವಶಕ್ಕೆ ಪಡೆದ ಪೊಲೀಸರ ತನಿಖಾ ಕ್ರಮದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆರೋಪಿಗಳ ಮೊಬೈಲ್ ಅನ್ನು ಬೇರೆ ಎಲ್ಲೋ ಮಹಜರು ಮಾಡಿ, ಅದನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಾಡಿದ್ದು ಎಂದು ಪೊಲೀಸರು ಹೇಳಿದ್ದಾರೆ ಎಂಬುದು ಆರೋಪಿಗಳ ಲಾಯರ್ ವಾದ. ಆ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ. ‘ಆರೋಪಿಗಳ ಪರ ವಕೀಲರು ತಕರಾರು ಮಾಡಲಿ. ನಮ್ಮ ಕೆಲಸ ನಾವು ಮಾಡುತ್ತೇವೆ. ಆರೋಪಿಗಳ ಪರವಾದ ವಕೀಲರು ಮಾಡುವ ಆಪಾದನೆಗಳಿಗೆ ಪೊಲೀಸ್ ಇಲಾಖೆಯವರು ಸರಿಯಾದ ಉತ್ತರ ಕೊಡಬೇಕು, ಕೊಡುತ್ತಾರೆ’ ಎಂದು ಜಿ. ಪರಮೇಶ್ವರ (G Parameshwara) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುನಿರತ್ನಗೆ ಮಹತ್ವದ ಭರವಸೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಏನದು? – Kannada News | Karnataka Politics: BJP MLA Muniratna Seeks DCM DK Shivakumars Help for Constituency Projects

ಬೆಂಗಳೂರು, ಫೆ.24: ಬಿಜೆಪಿ ಶಾಸಕ ಮುನಿರತ್ನ ಅವರು ರಾಜರಾಜೇಶ್ವರಿ ನಗರ (ಆರ್‌ಆರ್ ನಗರ) ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ವಿಶೇಷ ಅಧಿವೇಶನದ ಸಂದರ್ಭದಲ್ಲಿ ತಾವು ಮತ್ತು ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜು ಅವರು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದರು. ಈ ಭೇಟಿಯ ಪ್ರಮುಖ ಉದ್ದೇಶ ಆರ್‌ಆರ್ ನಗರ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಸ್ಥಗಿತಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳ ಕುರಿತು ಮನವಿ ಸಲ್ಲಿಸುವುದಾಗಿತ್ತು. ಮುನಿರತ್ನ ಅವರ ಹೇಳಿಕೆಯ ಪ್ರಕಾರ, ತಮ್ಮ ಕ್ಷೇತ್ರದಲ್ಲಿ ಸೇತುವೆಗಳು, ಜಾಲಹಳ್ಳಿ ಸರ್ಕಲ್, ಶಾಲೆಗಳ ನಿರ್ಮಾಣ, ಆಸ್ಪತ್ರೆ ಮತ್ತು ಈಜುಕೊಳದಂತಹ ಅನೇಕ ಕಾಮಗಾರಿಗಳು ಬಾಕಿ ಉಳಿದಿವೆ. ಈ ಯೋಜನೆಗಳೆಲ್ಲವೂ ಕಳೆದ ಮೂರು ವರ್ಷಗಳಿಂದ ಯಾವುದೇ ಪ್ರಗತಿಯನ್ನು ಕಾಣದೆ ಸ್ಥಗಿತಗೊಂಡಿವೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಡಿ.ಕೆ. ಶಿವಕುಮಾರ್ ಅವರೊಂದಿಗೆ ಅರ್ಧಗಂಟೆ ಸಮಯ ಕೋರಿ, ಇಂದು ಅವರ ಕಚೇರಿಗೆ ಭೇಟಿ ನೀಡಿ ಸ್ಥಗಿತಗೊಂಡಿರುವ ಕಾಮಗಾರಿಗಳ ಸಮಗ್ರ ಪಟ್ಟಿಯನ್ನು ಸಲ್ಲಿಸಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕಾಮಗಾರಿಗಳನ್ನು ಆದಷ್ಟು ಬೇಗ ಪ್ರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಭರವಸೆಯ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದ್ದು, ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುತ್ತವೆ ಎಂದು ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ನನ್ನ ಕ್ಷೇತ್ರದ ಅಭಿವೃದ್ಧಿಯನ್ನು ಬಿಟ್ಟರೆ ಬೇರೆ ಎರಡನೇ ಮಾತು ಯಾವುದು ಇಲ್ಲ. ನನ್ನ ಕಾನ್‌ಸ್ಟಿಟ್ಯುಯೆನ್ಸಿಗೋಸ್ಕರ ನಾನು ಯಾರ ಕಾಲು ಬೇಕಾದರೂ ಹಿಡಿಕೊಳ್ತೀನಿ ಅಂತ ನಾನು ಹಿಂದೆ ಒಂದು ಸಾರಿ ಹೇಳಿದ್ದೆ. ನನ್ನ ಕಾನ್‌ಸ್ಟಿಟ್ಯುಯೆನ್ಸಿಗೋಸ್ಕರ ನಾನು ಎಲ್ಲಿ ಬೇಕಾದರೂ ಬಂದು ಬೇಡಿಕೊಳ್ಳಲು ಸಿದ್ಧನಾಗಿದ್ದೇನೆ,” ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Upskill Your Career: ವೃತ್ತಿಜೀವನದಲ್ಲಿ ಹೊಸ ದಿಕ್ಕು ನೀಡಬಲ್ಲ 5 ಪ್ರಮುಖ ಆನ್‌ಲೈನ್ ಕೋರ್ಸ್‌ಗಳು – Kannada News | Upskill Your Career: 5 Online Courses for Professionals to Boost Growth and Salary

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿ ಮಾತ್ರ ಸಾಕಾಗುವುದಿಲ್ಲ, ನಿರಂತರವಾಗಿ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈಗಾಗಲೇ ಉದ್ಯೋಗದಲ್ಲಿರುವವರಿಗೆ ಕಚೇರಿ ಜವಾಬ್ದಾರಿಗಳು ಮತ್ತು ವೈಯಕ್ತಿಕ ಜೀವನದ ಮಧ್ಯೆ ಸಮತೋಲನ ಸಾಧಿಸುವುದು ಸವಾಲಾಗಿರಬಹುದು. ಇಂತಹ ಸಂದರ್ಭದಲ್ಲಿ, ಆನ್‌ಲೈನ್ ಕೋರ್ಸ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ. ಇವುಗಳು ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದಲ್ಲದೆ, ಬಡ್ತಿ ಮತ್ತು ಉತ್ತಮ ಸಂಬಳದ ಅವಕಾಶಗಳಿಗೂ ದಾರಿ ಮಾಡಿಕೊಡುತ್ತವೆ. ವೃತ್ತಿಪರರಿಗೆ ವೃತ್ತಿಜೀವನದಲ್ಲಿ ಹೊಸ ದಿಕ್ಕು ನೀಡಬಲ್ಲ ಐದು ಪ್ರಮುಖ ಕೋರ್ಸ್‌ಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ:

ಭವಿಷ್ಯದ ತಂತ್ರಜ್ಞಾನವು AI ಮತ್ತು ಯಂತ್ರ ಕಲಿಕೆ (Machine Learning) ಆಧಾರಿತವಾಗಿದೆ. ತಾಂತ್ರಿಕ ಹಿನ್ನೆಲೆಯಿರುವವರಿಗೆ ಇದು ವಿಶೇಷವಾಗಿ ಉಪಯುಕ್ತ. ಈ ಕೋರ್ಸ್‌ಗಳಲ್ಲಿ ಡೇಟಾ ಆಧಾರಿತ ನಿರ್ಧಾರಗಳಿಗಾಗಿ ಕಂಪ್ಯೂಟರ್‌ಗಳನ್ನು ಹೇಗೆ ತರಬೇತಿ ಮಾಡುವುದು ಎಂಬುದನ್ನು ಕಲಿಸಲಾಗುತ್ತದೆ. ಇದು ಸ್ವಲ್ಪ ಮುಂದುವರಿದ ಮಟ್ಟದ ಕೋರ್ಸ್ ಆದರೂ, ಇದನ್ನು ಪೂರ್ಣಗೊಳಿಸಿದವರು ಉತ್ತಮ ವೇತನ ಮತ್ತು ಹೆಚ್ಚಿನ ಅವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ.

ಡಿಜಿಟಲ್ ಮಾರ್ಕೆಟಿಂಗ್:

ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಪ್ರಭಾವ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. SEO, ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್, ಇಮೇಲ್ ಮಾರ್ಕೆಟಿಂಗ್ ಮತ್ತು ವಿಷಯ ತಂತ್ರಗಳ ಬಗ್ಗೆ ಈ ಕೋರ್ಸ್ ತರಬೇತಿ ನೀಡುತ್ತದೆ. ಸೃಜನಶೀಲತೆ ಮತ್ತು ಆನ್‌ಲೈನ್ ಬ್ರ್ಯಾಂಡಿಂಗ್‌ನಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ.

ಪ್ರಾಜೆಕ್ಟ್​​ ಮ್ಯಾನೇಜ್ಮೆಂಟ್:

ತಂಡವನ್ನು ಮುನ್ನಡೆಸಲು ಅಥವಾ ದೊಡ್ಡ ಯೋಜನೆಗಳನ್ನು ನಿರ್ವಹಿಸಲು ಬಯಸುವವರಿಗೆ ಪ್ರಾಜೆಕ್ಟ್​​ ಮ್ಯಾನೇಜ್ಮೆಂಟ್ ಕೋರ್ಸ್ ಅಗತ್ಯ. ಇದು ಸಮಯ ನಿರ್ವಹಣೆ, ಬಜೆಟ್ ಯೋಜನೆ, ಅಪಾಯ ವಿಶ್ಲೇಷಣೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಯಾವುದೇ ಸಂಸ್ಥೆಯಲ್ಲಿ ನಿರ್ವಹಣಾ ಹುದ್ದೆಗಳಿಗೆ ಇದು ಮಹತ್ವದ ಕೌಶಲ್ಯವಾಗಿದೆ.

ಡೇಟಾ ವಿಶ್ಲೇಷಣೆ (Data Analytics):

ಇಂದು ಡೇಟಾ-ಚಾಲಿತ ನಿರ್ಧಾರಗಳ ಯುಗವಾಗಿದೆ. ಕಂಪನಿಗಳು ಡೇಟಾವನ್ನು ಅರ್ಥಮಾಡಿಕೊಂಡು ತಂತ್ರಗಳನ್ನು ರೂಪಿಸುವ ಪರಿಣಿತರನ್ನು ಹುಡುಕುತ್ತಿವೆ. ಡೇಟಾ ಅನಾಲಿಟಿಕ್ಸ್ ಕೋರ್ಸ್‌ಗಳಲ್ಲಿ Python, SQL ಮತ್ತು ಡೇಟಾ ದೃಶ್ಯೀಕರಣ ಉಪಕರಣಗಳನ್ನು ಕಲಿಸಲಾಗುತ್ತದೆ. ಗಣಿತ ಅಥವಾ ಅಂಕಿಅಂಶಗಳಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಉತ್ತಮ ಆಯ್ಕೆ. ಇದನ್ನು ಪೂರ್ಣಗೊಳಿಸಿದ ಬಳಿಕ ವಿವಿಧ ವಲಯಗಳಲ್ಲಿ ಡೇಟಾ ವಿಶ್ಲೇಷಕರಾಗಿ ಉದ್ಯೋಗಾವಕಾಶಗಳಿವೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ವ್ಯವಹಾರ ನಿರ್ವಹಣೆ ಮತ್ತು ನಾಯಕತ್ವ:

ಉನ್ನತ ಹುದ್ದೆಗಳನ್ನು ಗುರಿಯಾಗಿಟ್ಟುಕೊಂಡಿರುವವರಿಗೆ Business Management ಅಥವಾ Leadership ಕೋರ್ಸ್ ಅತ್ಯುತ್ತಮ. ಇದು ವ್ಯವಹಾರ ತಂತ್ರ, ಹಣಕಾಸು ನಿರ್ವಹಣೆ ಮತ್ತು ಪರಿಣಾಮಕಾರಿ ಜನರ ನಿರ್ವಹಣೆಯ ಕುರಿತು ತಿಳುವಳಿಕೆಯನ್ನು ನೀಡುತ್ತದೆ. ಈ ತರಬೇತಿ ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸಿ, ಯಶಸ್ವಿ ನಾಯಕರಾಗಲು ನೆರವಾಗುತ್ತದೆ.

ಆನ್‌ಲೈನ್ ಅಧ್ಯಯನದ ಪ್ರಮುಖ ಪ್ರಯೋಜನಗಳು:

ಆನ್‌ಲೈನ್ ಕೋರ್ಸ್‌ಗಳ ದೊಡ್ಡ ಲಾಭವೆಂದರೆ ಅವುಗಳ ನಮ್ಯತೆ. ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ – ರಾತ್ರಿ ಸಮಯದಲ್ಲಿ ಅಥವಾ ವಾರಾಂತ್ಯಗಳಲ್ಲಿ ಇವುಗಳನ್ನು ಕಲಿಯಬಹುದು. ಹೆಚ್ಚಿನ ಕೋರ್ಸ್‌ಗಳು ಪ್ರಮಾಣಪತ್ರಗಳೊಂದಿಗೆ ಬರುತ್ತವೆ, ಇದು ನಿಮ್ಮ ರೆಸ್ಯೂಮ್ ಅನ್ನು ಬಲಪಡಿಸುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊಬೈಲ್​ನಲ್ಲಿ 3 ಬಾರಿ ತಲಾಖ್ ಹೇಳಿ ಹೆಂಡತಿಗೆ ಹೆದರಿಸಿದ ಗಂಡ; ಕೇರಳದ ವ್ಯಕ್ತಿ ಮೇಲೆ ಕಿರುಕುಳದ ಆರೋಪ – Kannada News | Kerala Man Booked For Pronouncing Triple Talaq Over Phone to Wife

ಕೊಚ್ಚಿ, ಫೆಬ್ರವರಿ 24: ಮೊಬೈಲ್ ಮೂಲಕ ತ್ರಿವಳಿ ತಲಾಖ್ (Triple Talaq) ಹೇಳಿ ಪತ್ನಿಯನ್ನು ಕ್ರೌರ್ಯಕ್ಕೆ ಒಳಪಡಿಸಿದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 85ರ ಅಡಿಯಲ್ಲಿ ಮುವಾಟ್ಟುಪುಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದು ಪತಿ ಅಥವಾ ಅವನ ಸಂಬಂಧಿಕರು ಮಹಿಳೆಯ ಮೇಲೆ ಕ್ರೌರ್ಯ ನಡೆಸುವುದಕ್ಕೆ ಸಂಬಂಧಿಸಿದ್ದಾಗಿದೆ.

ತಲಾಖ್ ಅನ್ನು ಅಮಾನ್ಯ ಮತ್ತು ಕಾನೂನುಬಾಹಿರವೆಂದು ಪರಿಗಣಿಸುವ ಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿಯೂ ಕೇಸ್ ದಾಖಲಿಸಲಾಗಿದೆ. ಇದು ತಲಾಖ್ ಅನ್ನು ಅಮಾನ್ಯ ಮತ್ತು ಕಾನೂನುಬಾಹಿರಗೊಳಿಸುತ್ತದೆ. ತಲಾಖ್ ಉಚ್ಚರಿಸುವುದಕ್ಕೆ ಶಿಕ್ಷೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: Video: ನನ್ಗೇ ತಲಾಖ್ ಕೊಡ್ತೀಯಾ? ಕೋರ್ಟ್​ ಆವರಣದಲ್ಲಿ ಗಂಡನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ ಮುಸ್ಲಿಂ ಮಹಿಳೆ

ಆರೋಪಿಯನ್ನು ಅಲಪ್ಪುಳ ಜಿಲ್ಲೆಯ ಕಾರ್ತಿಕಪ್ಪಲ್ಲಿ ತಾಲೂಕಿನ ಮೂಲದ ಸುಹೈಲ್ ಎಂದು ಗುರುತಿಸಲಾಗಿದೆ. ಈ ದಂಪತಿ ಸೆಪ್ಟೆಂಬರ್ 18, 2016ರಂದು ಮುಸ್ಲಿಂ ಧಾರ್ಮಿಕ ಪದ್ಧತಿಗಳನ್ನು ಅನುಸರಿಸಿ ವಿವಾಹವಾಗಿದ್ದರು. ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಅವರಿಬ್ಬರ ನಡುವೆ ಇತ್ತೀಚೆಗೆ ವೈಮಸ್ಸು ಹೆಚ್ಚಾಗಿತ್ತು.

ಮದುವೆಯ ನಂತರ, ಸುಹೈಲ್ ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಕ್ರಮೇಣ ಸಮಸ್ಯೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದ. ಆ ಮಹಿಳೆಯನ್ನು ಮುವಾಟ್ಟುಪುಳ ಪ್ರದೇಶದಲ್ಲಿ ಬೇರೆಯಾಗಿ ವಾಸಿಸುವಂತೆ ಒತ್ತಾಯಿಸಿದ. ಈ ಅವಧಿಯಲ್ಲಿ ಆಕೆ ಹಾಸ್ಟೆಲ್‌ಗಳು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು.

ಇದನ್ನೂ ಓದಿ: ಕೋಲಾರ: ಮಲ ತಂದೆ ತಾಯಿಗೆ ತಲಾಖ್ ನೀಡಿದ್ದರಿಂದ ಮನನೊಂದು ಮಗ ಆತ್ಮಹತ್ಯೆ

ಮೇ 21, 2025ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿಯು ತನ್ನ ಹೆಂಡತಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದ. ಅಲ್ಲದೆ, ಆಕೆಯ ಕುಟುಂಬದ ಸದಸ್ಯರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಾದ ನಂತರ, ತಲಾಖ್ ಎಂದು ಹೇಳಿ ಆಕೆಗೆ ವಿಚ್ಛೇದನ ನೀಡಿರುವುದಾಗಿ ಎಸ್‌ಎಂಎಸ್ ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.

ನನ್ನ ಗಂಡ ನನ್ನ ಮೇಲೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಈ ಊರಲ್ಲಿ ಚಾಡಿ ಹೇಳಿದ್ರೆ, ವದಂತಿ ಹಬ್ಬಿಸಿದ್ರೆ 5 ಸಾವಿರ ರೂ. ದಂಡ ಫಿಕ್ಸ್!: ಕಾರಣ ಇಲ್ಲಿದೆ – Kannada News | Chhattisgarh Medaki Village Imposes Rupees 5,000 Fine for Spreading Rumours to Maintain Peace

ಬಾಲೋದ್, ಫೆಬ್ರವರಿ 24: ಛತ್ತೀಸ್‌ಗಢದ ಬಾಲೋದ್ ಜಿಲ್ಲೆಯ ಮೆಡಕಿ ಗ್ರಾಮವು ಸುಳ್ಳು ಸುದ್ದಿ ಮತ್ತು ವದಂತಿಗಳ ಹಾವಳಿಯನ್ನು ತಡೆಯಲು ಮಾದರಿ ನಿರ್ಧಾರ ಕೈಗೊಂಡಿದೆ. ಗ್ರಾಮಸಭೆಯಲ್ಲಿ ಫೆಬ್ರವರಿ 19ರಂದು ಕೈಗೊಂಡ ನಿರ್ಣಯದ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ, ಸಾಮಾಜಿಕ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವದಂತಿ ಹಬ್ಬಿಸಿದರೆ 5,000 ರೂ. ದಂಡ ವಿಧಿಸಲಾಗುತ್ತದೆ. ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳಿಗೂ ಈ ನಿಯಮ ಅನ್ವಯಿಸುತ್ತದೆ. ಈ ನಿಯಮ ಜಾರಿಗೆ ಬರಲು ಪ್ರಮುಖ ಕಾರಣವೆಂದರೆ ಸಣ್ಣಪುಟ್ಟ ವಿಚಾರಗಳಿಗೂ ಗಾಳಿಸುದ್ದಿಗಳು ಹಬ್ಬಿ ಗ್ರಾಮದಲ್ಲಿ ದೊಡ್ಡ ಜಗಳಗಳು ನಡೆಯುತ್ತಿರೋದು ಎನ್ನಲಾಗಿದೆ. ವಿಶೇಷವಾಗಿ ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಗ್ರಾಮಸ್ಥರ ನಡುವೆ ವೈಷಮ್ಯ ಸೃಷ್ಟಿಸುತ್ತಿದ್ದವು. ಗ್ರಾಮದ ಹಿರಿಯರು ಮತ್ತು ಪಂಚಾಯತ್ ಸದಸ್ಯರು ಒಟ್ಟಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ನಿರ್ಧಾರಕ್ಕೆ ಬಂದಿದ್ದಾರೆ. ಗ್ರಾಮದ ಪ್ರವೇಶದ್ವಾರ ಹಾಗೂ ಪ್ರಮುಖ ಸ್ಥಳಗಳಲ್ಲಿ ಈ ನಿಯಮದ ಕುರಿತು ಬೋರ್ಡ್‌ಗಳನ್ನು ಹಾಕಲಾಗಿದೆ. ವದಂತಿ ಹಬ್ಬಿಸುವವರ ಬಗ್ಗೆ ಮಾಹಿತಿ ನೀಡಿದವರಿಗೆ 501 ರೂ. ಬಹುಮಾನ ನೀಡಿ, ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುತ್ತದೆ. ದಂಡದಿಂದ ಸಂಗ್ರಹವಾದ ಹಣವನ್ನು ಗ್ರಾಮದ ಅಭಿವೃದ್ಧಿ ಮತ್ತು ಬಡವರ ಸಹಾಯಕ್ಕೆ ಬಳಸಲಾಗುತ್ತದೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೇವರು ಬಂದಂತೆ ನಟಿಸಿ ದಲಿತ ನವದಂಪತಿಯನ್ನು ದೇಗುಲದಿಂದ ಹೊರಗಟ್ಟಿದ ಅರ್ಚಕ – Kannada News | A Man denied temple entry for dalit newlywed couple In Tumakuru, video Goes Viral

ತುಮಕೂರು, (ಫೆಬ್ರವರಿ 24): ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇವರು ಬಂದಂತೆ ನಾಟಕವಾಡಿದ ಗ್ರಾಮಸ್ಥನೊಬ್ಬ ದಲಿತ ನವದಂಪತಿಗಳನ್ನು ದೇವಾಲಯದಿಂದ ಹೊರಗೆ ಕಳಿಸಿರುವ ಘಟನೆ ನಡೆದಿದೆ. ತುಮಕೂರು (Tumakuru) ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅರಸಮ್ಮ ದೇವಾಲಯದಲ್ಲಿ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೊಸದಾಗಿ ಮದುವೆಯಾಗಿದ್ದ ದಂಪತಿ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ದೇವಾಲಯದ ಒಳಗಿದ್ದ ವ್ಯಕ್ತಿಯೊಬ್ಬ ದಂಪತಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಬಳಿಕ ದೇವರು ಬಂದಂತೆ ನಟಿಸಿ ದಲಿತ ಕುಟುಂಬವನ್ನು ಹೊರಕಳಿಸಿದ್ದಾನೆ. ದಲಿತರು ನಿಮಗೆ ಪ್ರವೇಶವಿಲ್ಲ, ಪುಣ್ಯ ಮಾಡಿಸಬೇಕು’ ಎಂದ ಗದರಿ ಹೊರಕಳಿಸಿದ್ದಾನೆ. ದೇವರು ಬಂದಂತೆ ನಟಿಸಿ ನಾಟಕವಾಡಿದ ಆರೋಪಿಯನ್ನು ನಾರಾಯಣಪ್ಪ ಎಂದು ಗುರುತಿಸಲಾಗಿದ್ದು, ಈತ ನವದಂಪತಿಗೆ ‘ನಡೀ ಆಚೆಗೆ’ ಎಂದು ಗದರಿಸಿ ಅವಮಾನ ಮಾಡಿದ್ದಾನೆ.

ಈ ಪ್ರಕರಣದಲ್ಲಿ ತಹಶೀಲ್ದಾರ್ ಮಧ್ಯೆ ಪ್ರವೇಶಿಸಿ ಬಳಿಕ ಗೋಣಿ ತುಮಕೂರು ಗ್ರಾಮದಲ್ಲಿ ಆಯೋಜಿಸಿದ್ದ ಶಾಂತಿ ಸಭೆ ಯಶಸ್ವಿಯಾಗಿದೆ. ​ಜಾತಿಯ ವಿಷಬೀಜ ಬಿಡಿ, ಬಸವಣ್ಣನವರ ತತ್ವ ಪಾಲಿಸಿ ಸೌಹಾರ್ದತೆಯಿಂದ ಇರುವಂತೆ ಗ್ರಾಮಸ್ಥರಿಗೆ ತಹಶೀಲ್ದಾರ್​​ ಸಲಹೆ ನೀಡಿದರು. ಬಳಿಕ ನವಜೋಡಿಯ ಕೈಹಿಡಿದು ದೇಗುಲದೊಳಗೆ ಕರೆದೊಯ್ದ ದೇವರ ದರ್ಶನ ಮಾಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಶಂಖನಾದವು ಕಿವಿಗೆ ಬೀಳುತ್ತಿದ್ದಂತೆ ಗೋಶಾಲೆಯತ್ತ ಓಡೋಡಿ ಬಂದ ಹಸುಗಳು – Kannada News | The cows headed for the cowshed as the conch shell sound fell into their ears.

ಪ್ರಾಣಿಗಳೇ (animals) ಗುಣದಲಿ ಮೇಲು ಎನ್ನುವ ಮಾತಿದೆ. ಹೀಗಾಗಿ ಈ ಪ್ರಾಣಿಗಳು ತನ್ನನ್ನು ಸಾಕಿದ ಮಾಲೀಕರಿಗೆ ವಿಧೇಯವಾಗಿರುತ್ತದೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ವ್ಯಕ್ತಿಯೊಬ್ಬ ಶಂಖ ಊದುತ್ತಿದ್ದಂತೆ ಗೋಶಾಲೆಗೆಯತ್ತ ಹಸು (cow) ಸೇರಿದಂತೆ ಹೋರಿಗಳು ಓಡಿ ಹೋಗಿವೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಈ ದೃಶ್ಯ ನೋಡಿ ಅಚ್ಚರಿ ವ್ಯಕ್ತ ಪಡಿಸಿದ್ದಾರೆ.

ದೀಪಕ್ (Deepak) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹಸುಗಳು ಸೇರಿದಂತೆ ಹೋರಿಗಳು ಮೇಯುತ್ತಿವೆ. ವ್ಯಕ್ತಿಯೊಬ್ಬ ಶಂಖ ಊದುತ್ತಿದ್ದಂತೆ ಹಸು, ಹೋರಿಗಳು ಗೋಶಾಲೆಯತ್ತ ಓಡಿ ಹೋಗುತ್ತಿರುವ ದೃಶ್ಯವನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಶಂಖನಾದಕ್ಕೆ ಇರುವ ಶಕ್ತಿ ಅಂತಹದ್ದು ಎಂದರೆ, ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದಿದ್ದಾರೆ. ಇನ್ನೊಬ್ಬರು, ಸೂಪರ್ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version