ಅಪ್ಪನ 45 ಲಕ್ಷ ರೂ. ಹಣಕ್ಕಾಗಿ ಲವರ್ ಜೊತೆ ಸೇರಿ ತಾಯಿಯನ್ನೇ ಕೊಂದ ದತ್ತು ಮಗಳು! – Kannada News | Teenage daughter her lover killed mother to grab dead fathers Rs 45 lakh and job
ರಾಂಚಿ, ಏಪ್ರಿಲ್ 30: ಆ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ, ಹೆಣ್ಣುಮಗುವೊಂದನ್ನು ದತ್ತು ಪಡೆದು, ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿದ್ದರು. ಆದರೆ, ಆ ಮಗಳೇ ತಮ್ಮ ಪಾಲಿಗೆ ಮೃತ್ಯುವಾಗುತ್ತಾಳೆ ಎಂದು ಅವರು ಊಹೆ ಕೂಡ ಮಾಡಿರಲಿಲ್ಲ. ಇದು ಜಾರ್ಖಂಡ್ನಲ್ಲಿ ನಡೆದ ಕತೆ. ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ಪ್ರಿಯಕರ ಮತ್ತು ಅವನ ಮೂವರು ಸ್ನೇಹಿತರೊಂದಿಗೆ ಸೇರಿ ಜಾರ್ಖಂಡ್‌ನ (Jharkhand) ರಾಂಚಿಯಲ್ಲಿ ತನ್ನ ತಾಯಿಯನ್ನು ಕೊಂದಿದ್ದಾಳೆ. ಆ ಹುಡುಗಿಯನ್ನು ಬಂಧಿಸಲಾಗಿದೆ. ಆಕೆಯ ಗೆಳೆಯ ಮತ್ತು ಇನ್ನೊಬ್ಬ ಆರೋಪಿಯನ್ನು ಕೂಡ ಬಂಧಿಸಲಾಗಿದೆ. ಜಾರ್ಖಂಡ್‌ನ ಮನಿಟೋಲಾದ…