Headlines

ಬೀದರ್‌: ಭಾಲ್ಕಿಯಲ್ಲಿ ಭೀಕರ ಅಪಘಾತ, ಬೈಕ್-ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರ ದುರ್ಮರಣ – Kannada News | Bidar Road Accident: Three Youths Killed in Bike Car Collision; Lorry Catches Fire Near Bhalki

ಬೀದರ್, ಏಪ್ರಿಲ್ 30: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಬುಧವಾರ (ಏಪ್ರಿಲ್ 29) ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಮತ್ತು ಕಾರಿನ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿ ಬೆಚ್ಚಿಬೀಳಿಸುವಂತಿದೆ. ಭಾಲ್ಕಿ ತಾಲ್ಲೂಕಿನ ಕಳಸದಾಳ ವ್ಯಾಪ್ತಿಯ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯ ಬಳಿ ದುರ್ಘಟನೆ ಸಂಭವಿಸಿದೆ. ಮೃತರನ್ನು ಕಳಸದಾಳ ಗ್ರಾಮದ ವಿಠ್ಠಲ ಪಾಂಚಾಳ (25), ಮಹೇಶ್ ಬಿರಾದಾರ (25) ಮತ್ತು ಕಾಕನಾಳ ಗ್ರಾಮದ ರಾಜೇಂದ್ರ ಪಾಂಚಾಳ (28) ಎಂದು…

Read More

Vinod Kambli: ವಿನೋದ್ ಕಾಂಬ್ಳಿ ಈಗ ಹೇಗಿದ್ದಾರೆ ನೋಡಿ – Kannada News | Vinod Kambli’s Wankhede appearance during IPL match

ಮುಂಬೈ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕುರಿತಾದ ತೀವ್ರ ಆತಂಕಕಾರಿ ಸುದ್ದಿಗಳ ನಡುವೆಯೇ, ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವಿನೋದ್ ಕಾಂಬ್ಲಿ ಅವರು ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಕಾಂಬ್ಲಿ ಅವರನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಬರಮಾಡಿಕೊಂಡಿದ್ದಾರೆ. ಕಾಂಬ್ಳಿ ಅವರನ್ನು ನೋಡಿದ ತಕ್ಷಣ ನೆರೆದಿದ್ದ ಅಭಿಮಾನಿಗಳು “ಗೆಟ್ ವೆಲ್ ಸೂನ್ ಸರ್” (ಶೀಘ್ರ ಗುಣಮುಖರಾಗಿ ಸರ್) ಎಂದು ಕೂಗಿ ತಮ್ಮ ಪ್ರೀತಿಯನ್ನು…

Read More

ಜೆಪಿ ನಗರದಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ; 12 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು – Kannada News | JP Nagar Incident: Heavy Rain Causes Tree to Fall on Car, Public Outcry Over Official Inaction

ಬೆಂಗಳೂರು, ಏ.30: ಸಿಲಿಕಾನ್​ ಸಿಟಿಯ ಜೆಪಿ ನಗರ 24ನೇ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಕಾರಿನ ಮೇಲೆ ಭಾರೀ ಮಳೆಗೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದರೂ, ಸುಮಾರು 12 ಗಂಟೆಗಳಾದರೂ ಜಿಬಿ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರವು ಕಾರ್ಯಾಚರಣೆ ನಡೆಸಿಲ್ಲ. ಮರ ಬಿದ್ದ ಪರಿಣಾಮವಾಗಿ ರಸ್ತೆಯ ಒಂದು ಬದಿಯ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನಗಳು ಒಂದೇ ರಸ್ತೆಯಲ್ಲಿ ಎರಡೂ ಕಡೆ ಚಲಿಸಬೇಕಾದ ಪರಿಸ್ಥಿತಿ…

Read More

ನೀವು ನನಗೆ ಸಹಾಯ ಮಾಡಿ, ನಾನು ನಿಮಗೆ ಸಹಾಯ ಮಾಡ್ತೇನೆ, ಟ್ರಂಪ್-ಪುಟಿನ್ 90 ನಿಮಿಷಗಳ ರಹಸ್ಯ ಮಾತುಕತೆ – Kannada News | Trump Putin Secret Talk: Ukraine Ceasefire, Iran Tensions and Zelenskyy Discussed

ವಾಷಿಂಗ್ಟನ್, ಏಪ್ರಿಲ್ 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದರು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಮಾತುಕತೆಯಲ್ಲಿ ಉಕ್ರೇನ್ ಸಂಘರ್ಷ ಮತ್ತು ಇರಾನ್ ಉದ್ವಿಗ್ನತೆಯ ಕುರಿತು ಗಂಭೀರ ಚರ್ಚೆಗಳು ನಡೆದಿವೆ. ಇರಾನ್ ಯುದ್ಧ, ಉಕ್ರೇನ್ ಸಂಘರ್ಷ ಮತ್ತು ಇತ್ತೀಚೆಗೆ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಗುಂಡಿನ ದಾಳಿ ಸೇರಿದಂತೆ ಹಲವಾರು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಾಯಿತು. ಜಾಗತಿಕ ಕೋಲಾಹಲದ…

Read More

ಪೋಷಕರೇ ಎಚ್ಚರ! ಮಕ್ಕಳ ಜೀವದ ಜೊತೆ ಆಟವಾಡಬೇಡಿ: ಬೆಂಗಳೂರಿನಲ್ಲಿ ಆರು ಮಕ್ಕಳ ಕಿಕ್ಕಿರಿದ ಸ್ಕೂಟರ್ ಜರ್ನಿ – Kannada News | Parental Negligence: Bengaluru Outraged by 6 Children on One Scooter, Violating Traffic Rules

ಬೆಂಗಳೂರು, ಏ.30: ಪೋಷಕರ ಇಂತಹ ತಪ್ಪಿನಿಂದಲ್ಲೇ ಅಪಘಾತಗಳು ಹೆಚ್ಚಾಗಿರುವುದು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗುತ್ತ ಇರುತ್ತದೆ. ಅದರೂ ಈ ಪೋಷಕರಿಗೆ ಬುದ್ಧಿ ಬರುವುದಿಲ್ಲ. ಸಣ್ಣ ವಯಸ್ಸಿನಲ್ಲೇ ಈ ಎಚ್ಚರಿಕೆ ವಹಿಸಿದರೆ ಯಾವುದೇ ಅಪಾಯಗಳು ಆಗುವುದಿಲ್ಲ. ಇದೀಗ ಎಕ್ಸ್​​ ಖಾತೆಯಲ್ಲಿ ಇಂತಹದೇ ಘಟನೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಅಕ್ರೋಶಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆದ ಈ ಘಟನೆ ಬಗ್ಗೆ ಏಪ್ರಿಲ್ 26ರಂದು 6 ಜನ ಚಿಕ್ಕ ಮಕ್ಕಳು…

Read More

Election Result 2026 Date: ವಿಧಾನಸಭಾ ಚುನಾವಣಾ ಸಮರ 2026: ಮೇ 4ಕ್ಕೆ ಐದು ರಾಜ್ಯಗಳ ಫಲಿತಾಂಶ, ಬೆಳಗ್ಗೆ 8ರಿಂದ ಮತ ಎಣಿಕೆ – Kannada News | Assembly Election Result 2026 Date When and Where to Watch Vidhan Sabha Poll Results Live Counting of Votes

ವಿಧಾನಸಭಾ ಚುನಾವಣಾ ಫಲಿತಾಂಶ Image Credit source: Moneycontrol.com Assembly Election Results 2026 Date and Time : ನವದೆಹಲಿ, ಏಪ್ರಿಲ್ 30: ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಚುನಾವಣಾ ಫಲಿತಾಂಶ(Assembly Election Results) ಮೇ 4ರ ಸೋಮವಾರದಂದು ಹೊರಬೀಳಲಿವೆ. ಅಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆಯು ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಆಯಾ ರಾಜ್ಯಗಳಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ರಾಜ್ಯಗಳ ರಾಜಕೀಯ ಹವಾ…

Read More

ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಬಾಲಕಿ ಬಲಿ ಪಡೆದ ರಣಮಳೆ: ಶಾಪಿಂಗ್​​ಗೆ ಹೋದವಳು ಶವವಾದಳು! – Kannada News | Birthday Celebration Turns Tragic: Girl Dies in Wall Collapse

ಆಸ್ಪತ್ರೆಯ ಕಾಂಪೌಂಡ್ ಕುಸಿದು ಅನಾಹುತ ಬೆಂಗಳೂರು, ಏಪ್ರಿಲ್​​ 30: ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ದುರಂತದಲ್ಲಿ 6 ವರ್ಷದ ಮಗು ಸೇರಿ ಒಟ್ಟು 7 ಮಂದಿ ಬಲಿಯಾಗಿರುವ ಘಟನೆ ನಿನ್ನೆ ಸಂಭವಿಸಿತ್ತು. ಆ ಬೆನ್ನಲ್ಲೇ ಮನಕಲಕುವ ವಿಷಯವೊಂದು ಬಹಿರಂಗಗೊಂಡಿದ್ದು ಮೃತ ಬಾಲಕಿ ಮುಸಾವಿರ್ ಬೇಗಂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದಳು ಎಂಬುದು ಗೊತ್ತಾಗಿದೆ. ತನ್ನ ಬರ್ತ್​​ ಡೇಗಾಗಿ ಬಟ್ಟೆ ಖರೀದಿಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ ಈಕೆ ಅವಘಡದಲ್ಲಿ ದಾರುಣವಾಗಿ ಮೃತಪಟ್ಟಿರೋದು ಕುಟುಂಬಸ್ಥರನ್ನು…

Read More

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಸ್ಥಳ ಪರಿಶೀಲನೆ ಬಳಿಕ ಲೋಕಾಯುಕ್ತ ಶಾಕಿಂಗ್ ಹೇಳಿಕೆ – Kannada News | Bowring Hospital Tragedy: Lokayukta to File Suo Motu Case Against Chief Secretary and Top Officials

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ಸ್ಥಳದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್Image Credit source: tv9 ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ (Bengaluru) ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಅಮಾಯಕರು ಬಲಿಯಾದ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತವು (Lokayukta) ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಘಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ (Suo Motu Case)…

Read More

ಟಿ20 ವಿಶ್ವಕಪ್​ಗೆ ನ್ಯೂಝಿಲೆಂಡ್ ತಂಡ ಪ್ರಕಟ – Kannada News | New Zealand squad for Women’s T20 World Cup 2026

2026ರ ಜೂನ್ 12ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯು 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಹಾಲಿ ಚಾಂಪಿಯನ್ ಆಗಿರುವ ನ್ಯೂಝಿಲೆಂಡ್ ತಂಡವನ್ನು ಈ ಬಾರಿ ಸ್ಟಾರ್ ಆಲ್-ರೌಂಡರ್ ಅಮೆಲಿಯಾ ಕೆರ್ (Amelia Kerr) ಮುನ್ನಡೆಸಲಿದ್ದಾರೆ. ಇನ್ನು ತಂಡದಲ್ಲಿ ಅನುಭವಿ ಆಟಗಾರ್ತಿಯರಾದ ಸೂಝಿ ಬೆಟ್ಸ್, ಸೋಫಿ ಡಿವೈನ್, ಲಿಯಾ ತಹುಹು ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ನೆನ್ಸಿ ಪಟೇಲ್ ಮತ್ತು ಇಸಿ ಶಾರ್ಪ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ…

Read More

‘ಧುರಂಧರ್ 2’ ಬಳಿಕ ರಣವೀರ್ ಸಿಂಗ್ ಮುಂದಿನ ಸಿನಿಮಾ ಇದೇ ನೋಡಿ – Kannada News | Ranveer Singh’s ‘Pralay’ Zombie Film Not Stalled: 300 Crore Budget Confirmed

‘ಧುರಂಧರ್’ ಹಾಗೂ ‘ಧುರಂದರ್ 2’ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಮೂಡಿದೆ. ಅವರ ನಟನೆಯ ‘ಡಾನ್ 3’ ಸಿನಿಮಾ ಸೆಟ್ಟೇರುವುದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಅವರ ‘ಪ್ರಳಯ್’ ಚಿತ್ರದ ಬಗ್ಗೆಯೂ ನಿರೀಕ್ಷೆ ಮೂಡಿದೆ. ಈ ಸಿನಿಮಾ ಹಲವು ಅಡೆತಡೆಗಳನ್ನು ಎದುರಿಸುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಈ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ನಿಗದಿತ ವೇಳಾಪಟ್ಟಿಯಂತೆ ಆಗಸ್ಟ್ 2026ರಲ್ಲಿ ಶೂಟಿಂಗ್ ಆರಂಭಿಸಲಿದೆ ಎಂಬ ಹೊಸ ಮಾಹಿತಿ ಹೊರಬಿದ್ದಿದೆ….

Read More