ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಸಾವು: ಮೃತದೇಹ ಪತ್ತೆ – Kannada News | Dharwad: Mysterious death of Buddhist monk; Dead Body found

ಸನ್ಯಾಸಿ ಥಾಶಿದೊಂಡುImage Credit source: tv9 kannada

ಧಾರವಾಡ, ಏಪ್ರಿಲ್​ 30: ಧಾರವಾಡ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ (Buddhist monk) ಮೃತದೇಹ (dead body) ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಟಿಬೆಟಿಯನ್ ಮೂಲದ ಥಾಶಿದೊಂಡು(39) ಮೃತ ಬೌದ್ಧ ಸನ್ಯಾಸಿ. ಮುಖದ ಮೇಲೆ ಗಾಯಗಳಾಗಿದ್ದು, ಬೇರೆಡೆ ಕೊಲೆಗೈದು ಶವ ತಂದು ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹಸೆಮಣೆ ಏರಬೇಕಿದ್ದ ಯುವಕ ಭೀಕರ ಅಪಘಾತದಲ್ಲಿ ಸಾವು 

ಹಸೆಮಣೆ ಏರಬೇಕಿದ್ದ ಯುವಕ ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವಂತಹ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಬಳಿ ನಡೆದಿದೆ. ಮರಕ್ಕೆ ಕಾರು ಡಿಕ್ಕಿಯಾಗಿ ಎಲ್‌.ಎನ್.ಮನು(29) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೀದರ್‌: ಭಾಲ್ಕಿಯಲ್ಲಿ ಭೀಕರ ಅಪಘಾತ, ಬೈಕ್-ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರ ದುರ್ಮರಣ

ಎಲ್‌.ಎನ್.ಮನು ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದರ್ಬಾರ್​​ಪೇಟೆ ನಿವಾಸಿ. ಮೇ 10ರಂದು ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಪ್ರೀವೆಡ್ಡಿಂಗ್ ಶೂಟ್​ಗೆ ವಧು ಕರೆತರಲು ತೆರಳಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ​ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಎಲ್‌.ಎನ್.ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ರಜೆಗೆ ಆಗಮಿಸಿದ್ದ ಯೋಧ ಹೃದಯಾಘಾತದಿಂದ ಸಾವು

ರಜೆಗೆ ಸ್ವಗ್ರಾಮಕ್ಕೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ. ಯೋಧ ಮಾರುತಿ ಯಮನಪ್ಪ ದಳವಾಯಿ(38) ಮೃತ ದುರ್ದೈವಿ. ಇವರು ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮಿಲಿಟರಿ/ಝಾನ್ಸಿ/UP/ ಹವಾಲ್ದಾರ್ ಮೆಕ್ಯಾನಿಕಲ್ ಪುನಾ ರೆಜಿಮೆಂಟ್​​ದಲ್ಲಿ ಸೇವೆ ಸಲ್ಲಿಸುತ್ತಿದ್ದರು.‌

ಇದನ್ನೂ ಓದಿ: ಜೆಪಿ ನಗರದಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ; 12 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು

ಸುಮಾರು 10 ದಿನದ ಹಿಂದೆ ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು.‌ ಶನಿವಾರ ರಾತ್ರಿ 11.45 ಗಂಟೆಗೆ ಮನೆಯಲ್ಲಿ ಮಲಗಿಕೊಂಡಾಗ ಹೃದಯಘಾತವಾಗಿ ಆಕಸ್ಮಿಕವಾಗಿ ಮರಣ ಹೊಂದಿರುವುದಾಗಿ ತಿಳಿದುಬಂದಿದೆ. ರವಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಶಾಸಕರ ತಾಯಿ ರತ್ನಾಬಾಯಿ‌ ಚಿಮ್ಮನಕಟ್ಟಿ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.‌

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ರಾಕಾ’ ಇತಿಹಾಸ ಸೃಷ್ಟಿಸಲಿದೆ: ವಿಎಫ್​​ಎಕ್ಸ್ ಮೇಲ್ವಿಚಾರಕ ಹೇಳಿದ್ದೇನು? – Kannada News | SFX team supervisor talks about Allu Arjun’s Raaka Movie

ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗಲೇ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಈಗಾಗಲೇ ಉತ್ತರ ಭಾರತದ ಕೆಲವು ವಿತರಕರು ಸಿನಿಮಾದ ಹಕ್ಕುಗಳಿಗಾಗಿ ನಿರ್ಮಾಣ ಸಂಸ್ಥೆಯನ್ನು ಎಡತಾಕುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಕುರಿತು ಒಂದು ಆಸಕ್ತಿಕರ ಅಪ್‌ಡೇಟ್ ಹೊರಬಿದ್ದಿದೆ. ‘ರಾಕಾ’ ಸಿನಿಮಾಕ್ಕಾಗಿ ಕೆಲಸ ಮಾಡಿರುವ ಎಸ್‌ಎಫ್‌ಎಕ್ಸ್ (SFX) ಮೇಲ್ವಿಚಾರಕರು, ಸಿನಿಮಾದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

‘ರಾಕಾ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದಿರುವ ಎಸ್​​ಎಫ್​​ಎಕ್ಸ್ (ಸ್ಪೆಷಲ್ ಎಫೆಕ್ಸ್ಟ್) ತಂಡದ ಮೇಲ್ವಿಚಾರಕ. ಭಾರತದ ಇನ್ಯಾವ ಸಿನಿಮಾ ಸಹ ಮಾಡಿರದ ಗಳಿಕೆಯನ್ನು ಸಿನಿಮಾ ಮಾಡಲಿದೆ ಎಂದಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಇರುವ ಪ್ಯಾನ್ ಇಂಡಿಯಾ ಕ್ರೇಜ್ ಮತ್ತು ಅಟ್ಲೀ ಅವರ ಮಾಸ್ ದೃಶ್ಯಗಳನ್ನು ಸೆರೆಹಿಡಿಯುವ ಶೈಲಿ ಒಟ್ಟಿಗೆ ಸೇರಿ ಅದ್ಭುತವೇ ಸೃಷ್ಟಿ ಆಗುತ್ತಿದೆ. ಅದು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸುವುದು ಖಚಿತ ಎನ್ನಲಾಗುತ್ತಿದೆ. ಇದುವರೆಗಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕುವಂತಹ ಅದ್ದೂರಿ ಬಿಡುಗಡೆಗೆ ಚಿತ್ರತಂಡ ಈಗಿನಿಂದಲೇ ಯೋಜನೆ ರೂಪಿಸುತ್ತಿದೆ.

ವಿಶಾಲ್ ತ್ಯಾಜಿ ಎಂಬುವರು ‘ರಾಕಾ’ ಸಿನಿಮಾದ ಎಸ್​​ಎಫ್​ಎಕ್ಸ್ ಮೇಲ್ವಿಚಾರಕರಾಗಿದ್ದು, ಸಿನಿಮಾ ತಾಂತ್ರಿಕವಾಗಿ ಭಾರಿ ಶ್ರೀಮಂತವಾಗಿರಲಿದೆ ಎಂದಿದ್ದಾರೆ. ಈ ಸಿನಿಮಾವನ್ನು ಕೇವಲ ಭಾರತೀಯ ಮಟ್ಟಕ್ಕೆ ಸೀಮಿತಗೊಳಿಸದೆ, ಜಾಗತಿಕ ಗುಣಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ಅತ್ಯಾಧುನಿಕ ಸ್ಪೆಷಲ್ ಎಫೆಕ್ಟ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದ್ದು, ಪ್ರೇಕ್ಷಕರಿಗೆ ಇದೊಂದು ವಿಷುಯಲ್ ಟ್ರೀಟ್ ಆಗಲಿದೆ ಎಂದು ಅವರು ವಿವರಿಸಿದ್ದಾರೆ.

ಇದನ್ನೂ ಓದಿ:ಹೈದರಾಬಾದ್‌ನಿಂದ ಮುಂಬೈಗೆ ಶಿಫ್ಟ್ ಆಗ್ತಾರಾ ಅಲ್ಲು ಅರ್ಜುನ್?

ಅಟ್ಲೀ ಅವರು ಈ ಹಿಂದೆ ಶಾರುಖ್ ಖಾನ್ ಅವರ ‘ಜವಾನ್’ ಮೂಲಕ ದೊಡ್ಡ ಯಶಸ್ಸು ಕಂಡಿದ್ದರು. ಈಗ ಅಲ್ಲು ಅರ್ಜುನ್ ಅವರಂತಹ ಸ್ಟೈಲಿಶ್ ಸ್ಟಾರ್ ಜೊತೆ ಕೈಜೋಡಿಸಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ‘ಪುಷ್ಪ’ ಚಿತ್ರದ ನಂತರ ಅಲ್ಲು ಅರ್ಜುನ್ ಅವರ ಮಾರುಕಟ್ಟೆ ಮೌಲ್ಯ ಹತ್ತು ಪಟ್ಟು ಹೆಚ್ಚಾಗಿದ್ದು, ‘ರಾಕಾ’ ಸಿನಿಮಾ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಹಿಟ್ ಆಗುವ ಮುನ್ಸೂಚನೆ ನೀಡುತ್ತಿದೆ.

ಎಸ್​​ಎಫ್​​ಎಕ್ಸ್ ಎಂದರೆ ಪೋಸ್ಟ್ ಪ್ರೊಡಕ್ಷನ್​​ಗೆ ಮುಂಚೆಯೇ ಸೆಟ್​ನಲ್ಲಿ ವಿಶೇಷ ಎಫೆಕ್ಟ್​​ಗಳನ್ನು ಸೃಷ್ಟಿಸುವುದಾಗಿರುತ್ತದೆ. ಬಾಂಬ್ ಬ್ಲಾಸ್ಟ್, ಭಿನ್ನ ರೀತಿಯ ದೃಶ್ಯ ಸಂಯೋಜನೆ, ವಿವಿಧ ಮುಖವಾಡಗಳ ಸೃಷ್ಟಿಸುವುದು, ಚಿತ್ರೀಕರಣಕ್ಕೆ ಬೇಕಾದ ಆಯುಧಗಳು ಮತ್ತು ಅವುಗಳನ್ನು ಹ್ಯಾಂಡಲ್ ಮಾಡುವುದು, ರೋಪಿಂಗ್ ಇನ್ನೂ ಹಲವನ್ನು ಈ ಎಸ್​​ಎಫ್​​ಎಕ್ಸ್ ತಂಡ ನೋಡಿಕೊಳ್ಳುತ್ತದೆ. ವಿಶಾಲ್ ತ್ಯಾಗಿ ಅವರು ಬಾಲಿವುಡ್ ಮಾತ್ರವಲ್ಲದೆ ದಕ್ಷಿಣದ ಹಲವಾರು ಸಿನಿಮಾಗಳಿಗೆ ಸ್ಪೆಷಲ್ ಎಫೆಕ್ಟ್ಸ್​​ಗಳನ್ನು ಮಾಡಿದ್ದಾರೆ. ರಜನೀಕಾಂತ್ ಇನ್ನೂ ಕೆಲವು ಹಿರಿಯ ನಟರ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇದೀಗ ‘ರಾಕಾ’ ಸಿನಿಮಾನಲ್ಲೂ ಇವರೇ ಕೆಲಸ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 2:41 pm, Thu, 30 April 26

Source link

Kailash Manasarovar Yatra 2026: ಕೈಲಾಸ ಯಾತ್ರೆಗೆ ನೋಂದಣಿ ಆರಂಭ; 60 ವರ್ಷಗಳ ನಂತರ ಸಂಭವಿಸಿದೆ ಅಪರೂಪದ ‘ದೈವಿಕ ಸಂಯೋಗ’! – Kannada News | Kailash Manasarovar Yatra 2026 Registration Open: ‘Fire Horse Year’ Pilgrimage for Moksha

ಕೈಲಾಸ ಮಾನಸ ಸರೋವರ ಯಾತ್ರೆImage Credit source: Pinterest

ಶಿವನ ವಾಸಸ್ಥಾನವೆಂದೇ ನಂಬಲಾದ ಪವಿತ್ರ ಕೈಲಾಸ ಪರ್ವತದ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಒಂದು ಮಹತ್ವದ ಸುದ್ದಿ ಇಲ್ಲಿದೆ. 2026ರ ಸಾಲಿನ ಕೈಲಾಸ ಮಾನಸ ಸರೋವರ ಯಾತ್ರೆಗೆ ಇಂದಿನಿಂದ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಈ ವರ್ಷದ ಯಾತ್ರೆಯು ಕೇವಲ ಧಾರ್ಮಿಕ ಪ್ರಯಾಣವಷ್ಟೇ ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಅತ್ಯಂತ ವಿಶೇಷವೆನಿಸಿದೆ.

60 ವರ್ಷಗಳ ನಂತರ ಬಂದಿದೆ ‘ಅಗ್ನಿ ಕುದುರೆ ವರ್ಷ’ದ ಶುಭ ಯೋಗ!

ಈ ಬಾರಿಯ ಯಾತ್ರೆಯು 60 ವರ್ಷಗಳಿಗೊಮ್ಮೆ ಬರುವ ಅಪರೂಪದ ಟಿಬೆಟಿಯನ್ ಮತ್ತು ಹಿಮಾಲಯನ್ ಜ್ಯೋತಿಷ್ಯದ ಸಂಯೋಜನೆಯಲ್ಲಿ ನಡೆಯುತ್ತಿದೆ. ಇದನ್ನು ‘ಅಗ್ನಿ ಕುದುರೆ ವರ್ಷ’ (Fire Horse) ಎಂದು ಕರೆಯಲಾಗುತ್ತಿದ್ದು, ಈ ಅವಧಿಯಲ್ಲಿ ಕೈಲಾಸ ದರ್ಶನ ಮಾಡುವುದು ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ‘ಮೋಕ್ಷದ ಬಾಗಿಲು’ ತೆರೆದಂತೆ ಎಂದು ನಂಬಲಾಗಿದೆ. ಈ ದೈವಿಕ ಸಂಯೋಗದ ಕಾರಣದಿಂದಾಗಿ ಈ ವರ್ಷ ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಯಾತ್ರೆಯ ಪ್ರಮುಖ ವಿವರಗಳು:

ಯಾತ್ರೆಯ ಮೊದಲ ಬ್ಯಾಚ್ ಜೂನ್ ಮೊದಲ ವಾರದಲ್ಲಿ ಹೊರಡಲಿದೆ. ಈ ಬಾರಿ ಉತ್ತರಾಖಂಡ ಮಾರ್ಗದ ಮೂಲಕ 500 ಯಾತ್ರಿಕರಿಗೆ ಅವಕಾಶ ಕಲ್ಪಿಸಲು ಸರ್ಕಾರ ಯೋಜಿಸಿದೆ. ಹಿಮಾಲಯದ ಕಠಿಣ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ಸಚಿವಾಲಯವು (MEA) ಭಕ್ತರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಿದೆ.

ಯಾತ್ರೆಗೆ ಇರುವ ಎರಡು ಪ್ರಮುಖ ಮಾರ್ಗಗಳು:

ವಿದೇಶಾಂಗ ಸಚಿವಾಲಯವು ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಎರಡು ವಿಭಿನ್ನ ಮಾರ್ಗಗಳ ಮೂಲಕ ಯಾತ್ರೆಯನ್ನು ಆಯೋಜಿಸುತ್ತದೆ:

  • ಲಿಪುಲೇಖ್ ಪಾಸ್ (ಉತ್ತರಾಖಂಡ): ಇದು ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ದೆಹಲಿಯಿಂದ ಪ್ರಾರಂಭವಾಗಿ ತನಕ್‌ಪುರ, ಪಿಥೋರಗಢ ಮತ್ತು ಧಾರ್ಚುಲಾ ಮೂಲಕ ಲಿಪುಲೇಖ್ ಪಾಸ್ ತಲುಪುತ್ತದೆ. ಈ ಮಾರ್ಗವು ಈಗ ವಾಹನ ಸಂಚಾರಕ್ಕೆ ಹೆಚ್ಚು ಅನುಕೂಲಕರವಾಗಿದ್ದು, ಕೈಲಾಸ ಪರ್ವತದ ಪವಿತ್ರ ಪ್ರದಕ್ಷಿಣೆಯನ್ನು ಒಳಗೊಂಡಿದೆ.
  • ನಾಥು ಲಾ ಪಾಸ್ (ಸಿಕ್ಕಿಂ): ಈ ಮಾರ್ಗವು ದೆಹಲಿಯಿಂದ ಗ್ಯಾಂಗ್ಟಾಕ್ ಮೂಲಕ ಸಾಗುತ್ತದೆ. ಲಿಪುಲೇಖ್ ಮಾರ್ಗಕ್ಕೆ ಹೋಲಿಸಿದರೆ ಇಲ್ಲಿ ಪಾದಯಾತ್ರೆ (Trekking) ಕಡಿಮೆ ಮತ್ತು ಪ್ರಯಾಣ ಹೆಚ್ಚು ಆರಾಮದಾಯಕವಾಗಿರುತ್ತದೆ.

ಇದನ್ನೂ ಓದಿ: ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು ಏಕೆ? ವಾಸ್ತು ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಅರ್ಹತೆ ಮತ್ತು ಅಗತ್ಯ ದಾಖಲೆಗಳು:

ಯಾತ್ರೆಯಲ್ಲಿ ಭಾಗವಹಿಸಲು ಆಸಕ್ತಿ ಇರುವವರು ಈ ಕೆಳಗಿನ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಕಡ್ಡಾಯ:

  • ವಿದೇಶಾಂಗ ಸಚಿವಾಲಯದ (MEA) ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
  • ಮಾನ್ಯತೆ ಇರುವ ಭಾರತೀಯ ಪಾಸ್‌ಪೋರ್ಟ್ ಅಥವಾ OCI ಕಾರ್ಡ್ ಮತ್ತು ಸರ್ಕಾರಿ ಗುರುತಿನ ಚೀಟಿ.
  • ಹೆಚ್ಚಿನ ಎತ್ತರದಲ್ಲಿ ಪ್ರಯಾಣಿಸಬೇಕಿರುವುದರಿಂದ ನವೀಕರಿಸಿದ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಅತ್ಯಗತ್ಯ.

ಯಾತ್ರಾರ್ಥಿಗಳಿಗೆ ಪ್ರಮುಖ ಸೂಚನೆಗಳು:

ಕೈಲಾಸ ಮಾನಸ ಸರೋವರವು ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿರುವುದರಿಂದ ಆಮ್ಲಜನಕದ ಮಟ್ಟ ಕಡಿಮೆ ಇರುತ್ತದೆ. ಹೀಗಾಗಿ, ಪ್ರಯಾಣಕ್ಕೆ ಕೆಲವು ದಿನಗಳ ಮೊದಲು ದೇಹವನ್ನು ಅಲ್ಲಿನ ವಾತಾವರಣಕ್ಕೆ ಒಗ್ಗಿಸಿಕೊಳ್ಳುವುದು (Acclimatization) ಬಹಳ ಮುಖ್ಯ. ಸಾಮಾನ್ಯವಾಗಿ ಈ ಇಡೀ ಯಾತ್ರೆಯು ಪೂರ್ಣಗೊಳ್ಳಲು ಹವಾಮಾನಕ್ಕೆ ಅನುಗುಣವಾಗಿ 15 ರಿಂದ 20 ದಿನಗಳು ಬೇಕಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಎಲ್ಲವನ್ನೂ ತಡೆಯುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು’; ಅರ್ಜುನ್​ ಕಪೂರ್​ಗೆ ಕೋರ್ಟ್ ಕಿವಿಮಾತು – Kannada News | Arjun Kapoor Personality Rights: Delhi HC Cautions on Free Speech vs. AI Deepfakes

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ತಮ್ಮ ತಮ್ಮ ಹೆಸರು, ಫೋಟೋ ಮತ್ತು ಧ್ವನಿಯನ್ನು (Personality Rights) ಅನುಮತಿಯಿಲ್ಲದೆ ಬಳಸುವುದನ್ನು ತಡೆಯಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಎಲ್ಲರಿಗೂ ಕೋರ್ಟ್ ಅನುಮತಿ ನೀಡಿ ಆದೇಶ ಹೊರಡಿಸಿದೆ. ಅರ್ಜುನ್ ಕಪೂರ್ ಇತ್ತೀಚೆಗೆ ಇದೇ ರೀತಿಯ ಅರ್ಜಿಯನ್ನು ದೆಹಲಿ ಹೈಕೋರ್ಟ್​​ಗೆ ಸಲ್ಲಿ ಮಾಡಿದ್ದು, ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಿದ ಅಶ್ಲೀಲ ವಿಡಿಯೋಗಳು ಮತ್ತು ಡೀಪ್‌ಫೇಕ್ ದೃಶ್ಯಗಳ ವಿರುದ್ಧ ಅವರು ರಕ್ಷಣೆ ಕೋರಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರು ಕೆಲವು ಪ್ರಮುಖ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ‘ಒಬ್ಬ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಇದ್ದಾಗ ಅವರ ಬಗ್ಗೆ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಯಾವುದಾದರೂ ಅಂಶವು ಅವರ ಗೌರವಕ್ಕೆ ಧಕ್ಕೆ ತರುವಂತಿದ್ದರೆ ಅಥವಾ ಮಾನಹಾನಿಕರವಾಗಿದ್ದರೆ ಮಾತ್ರ ಅಂತಹವುಗಳನ್ನು ತೆಗೆದುಹಾಕಲು ಆದೇಶಿಸಬಹುದು’ ಎಂದು ನ್ಯಾಯಾಲಯ ಹೇಳಿದೆ.
ಅರ್ಜುನ್ ಕಪೂರ್ ಪರ ವಾದ ಮಂಡಿಸಿದ ಪ್ರವೀಣ್ ಆನಂದ್ ಅವರು, ‘ನಟನ ಫೋಟೋಗಳನ್ನು ಬಳಸಿ ಅನೇಕರು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಪ್ರಾಣಿಗಳ ಜೊತೆ ನಟನ ಫೋಟೋ ಮಾರ್ಫಿಂಗ್ ಮಾಡುವುದು ಅಥವಾ ಅಶ್ಲೀಲವಾಗಿ ಬಿಂಬಿಸುವುದು ಒಬ್ಬ ಸಾಮಾನ್ಯ ಮನುಷ್ಯನಿಗೂ ಇಷ್ಟವಾಗದ ಸಂಗತಿ’ ಎಂದು ವಾದಿಸಿದರು.

ಇದಕ್ಕೆ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಖಾರವಾಗಿ ಪ್ರತಿಕ್ರಿಯೆ ನೀಡಿದರು.
‘ಸಾಮಾನ್ಯ ಜನರು ವ್ಯಕ್ತಿತ್ವ ಹಕ್ಕುಗಳಿಗಾಗಿ ನ್ಯಾಯಾಲಯಕ್ಕೆ ಬರುವುದಿಲ್ಲ. ಸಾರ್ವಜನಿಕ ಜೀವನದಲ್ಲಿರುವವರ ಬಗ್ಗೆ ಹತ್ತು ಹಲವು ಚರ್ಚೆಗಳು ನಡೆಯುತ್ತವೆ. ಎಲ್ಲವನ್ನೂ ತಡೆಯುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು’ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶೀಘ್ರದಲ್ಲೇ ತನ್ನ ವಿವರವಾದ ಮಧ್ಯಂತರ ಆದೇಶವನ್ನು ಹೊರಡಿಸಲಿದೆ.

ಇದನ್ನೂ ಓದಿ: ‘ಅಂತ್ಯವನ್ನು ಒಪ್ಪಿಕೊಳ್ಳಿ’: ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ ಅರ್ಜುನ್ ಕಪೂರ್ ಮನಸ್ಥಿತಿ

ಹಿಂದೆ ಸುನಿಲ್ ಗವಾಸ್ಕರ್, ಕರಣ್ ಜೋಹರ್ ಮತ್ತು ಅಲ್ಲು ಅರ್ಜುನ್ ಅವರಂತಹ ಪ್ರಮುಖ ವ್ಯಕ್ತಿಗಳಿಗೆ ಇಂತಹ ರಕ್ಷಣೆ ನೀಡಲಾಗಿತ್ತು. ಆದರೆ, ಈಗ ಅರ್ಜುನ್ ಕಪೂರ್ ವಿಷಯದಲ್ಲಿ ಬೇರೆಯದೇ ರೀತಿಯ ಅಭಿಪ್ರಾಯ ಹೊರಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾಯಕತ್ವ ಗಟ್ಟಿಮಾಡಿಕೊಳ್ಳಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್! – Kannada News | Power Tussle In Karnataka Congress: intelligence chief Changed By CM Siddaramaiah fourth Time In History

ಬೆಂಗಳೂರು (ಏಪ್ರಿಲ್.30): ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೋಲಾಹಲವನ್ನೇ ಸೃಷ್ಟಿಸಿದೆ. ಸಿಎಂ ಸ್ಥಾನ ಬೇಕೇ ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಈಗಾಗಲೇ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತಲೇ ಬಂದಿದ್ದಾರೆ. ಆದ್ರೆ, ಇದಕ್ಕೆ ಹೈಕಮಾಂಡ್ ತಲೆಕೆಡಿಸಿಕೊಂಡಂತಿಲ್ಲ. ಇನ್ನೊಂದೆಡೆ ಡಿಕೆ ಶಿವಕುಮಾರ್ ಟಕ್ಕರ್ ಕೊಡಲು ಇತ್ತ ಸಿದ್ದರಾಮಯ್ಯ ಹಾಗೂ ತಂಡ ಮೆಗಾ ತಂತ್ರಗಾರಿಗೆ ಮಾಡುತ್ತಿದ್ದು. ಇತಿಹಾಸದಲ್ಲೇ ಮೊದಲು ಬರೋಬ್ಬರಿ ನಾಲ್ಕು ಬಾರಿ ಗುಪ್ತಚರ ಮುಖ್ಯಸ್ಥರ ಬದಲಾವಣೆ ಮಾಡಲಾಗಿದೆ. ಗುಪ್ತಚರ ಮುಖ್ಯಸ್ಥರ ಬದಲಾವಣೆ ಮೂಲಕ ತಂತ್ರ ಹೆಣೆದಿದ್ದಾರೆ.

ಇದನ್ನೂ ನೋಡಿ: ಡಿಕೆಶಿ ಬಣಕ್ಕೆ ಮೇ ಕ್ರಾಂತಿ ಕನಸು: ದೆಹಲಿಯಲ್ಲಿ ಸಿದ್ದರಾಮಯ್ಯ ಬಣ ಅಹಿಂದ ಕಾರ್ಡ್​ ಪ್ಲೇ!

Source link

ಬಂಧನದ ಮೂಲಕ ನನ್ನನ್ನು ಅವಮಾನಿಸುವ ಅಗತ್ಯವಿಲ್ಲ: ಪವನ್​ ಖೇರಾ – Kannada News | Pawan Khera Bail Plea: SC Reserves Order on Fake Passport and Defamation Case

ನವದೆಹಲಿ, ಏಪ್ರಿಲ್ 30: ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ದೂರಿನ ಮೇರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ಅತುಲ್ ಚಂದೂರ್ಕರ್ ಅವರ ಪೀಠವು ಈ ವಿಚಾರಣೆ ನಡೆಸಿತು.

ಖೇರಾ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ಪ್ರಕರಣವು ಕೇವಲ ಮಾನನಷ್ಟಕ್ಕೆ ಸಂಬಂಧಿಸಿದ್ದು, ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ ಎಂದು ವಾದಿಸಿದರು. ಕಸ್ಟಡಿ ವಿಚಾರಣೆಯ ಮೂಲಕ ಅವಮಾನಿಸುವ ಅಗತ್ಯ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಅಸ್ಸಾಂ ಸಿಎಂ ಅವರು ಖೇರಾ ಅವರಿಗೆ ಜೈಲು ಶಿಕ್ಷೆಯ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಸಿಂಘ್ವಿ, ಖೇರಾ ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಅಸ್ಸಾಂ ರಾಜ್ಯದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖೇರಾ ಅವರು ತೋರಿಸಿರುವ ವಿದೇಶಿ ಪಾಸ್‌ಪೋರ್ಟ್ ದಾಖಲೆಗಳು ನಕಲಿ ಎಂದು ಪ್ರತಿಪಾದಿಸಿದರು. ಈ ನಕಲಿ ದಾಖಲೆಗಳನ್ನು ಸೃಷ್ಟಿಸಿದವರು ಯಾರು ಮತ್ತು ಇದರ ಹಿಂದೆ ವಿದೇಶಿ ಅಂಶಗಳಿವೆಯೇ ಎಂದು ಪತ್ತೆಹಚ್ಚಲು ಕಸ್ಟಡಿ ವಿಚಾರಣೆ ಅತ್ಯಗತ್ಯ ಎಂದು ಅವರು ವಾದಿಸಿದರು. ಅಲ್ಲದೆ, ಎಫ್‌ಐಆರ್ ದಾಖಲಾದಾಗಿನಿಂದ ಖೇರಾ ಅವರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.

ಮತ್ತಷ್ಟು ಓದಿ: ಪವನ್ ಖೇರಾಗೆ ಗುವಾಹಟಿ ಹೈಕೋರ್ಟ್ ಶಾಕ್: ಅಸ್ಸಾಂ ಸಿಎಂ ಪತ್ನಿ ದಾಖಲಿಸಿದ ಕೇಸ್‌ನಲ್ಲಿ ಜಾಮೀನು ನಿರಾಕರಣೆ

ಖೇರಾ ಅವರು ರಿನಿಕಿ ಭುಯಾನ್ ಶರ್ಮಾ ಅವರ ವಿರುದ್ಧ ವಿದೇಶಿ ಪಾಸ್‌ಪೋರ್ಟ್ ಮತ್ತು ಆರ್ಥಿಕ ಹಿತಾಸಕ್ತಿಗಳ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಸ್ಸಾಂನ ಗುವಾಹಟಿ ಅಪರಾಧ ಶಾಖೆಯ ಪೊಲೀಸ್ ಠಾಣೆಯಲ್ಲಿ ವಂಚನೆ, ನಕಲಿ ದಾಖಲೆಗಳ ಬಳಕೆ ಮತ್ತು ಮಾನನಷ್ಟ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿಂದೆ ಗುವಾಹಟಿ ಹೈಕೋರ್ಟ್ ಖೇರಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೀದರ್‌: ಭಾಲ್ಕಿಯಲ್ಲಿ ಭೀಕರ ಅಪಘಾತ, ಬೈಕ್-ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರ ದುರ್ಮರಣ – Kannada News | Bidar Road Accident: Three Youths Killed in Bike Car Collision; Lorry Catches Fire Near Bhalki

ಬೀದರ್, ಏಪ್ರಿಲ್ 30: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಬುಧವಾರ (ಏಪ್ರಿಲ್ 29) ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಮತ್ತು ಕಾರಿನ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿ ಬೆಚ್ಚಿಬೀಳಿಸುವಂತಿದೆ. ಭಾಲ್ಕಿ ತಾಲ್ಲೂಕಿನ ಕಳಸದಾಳ ವ್ಯಾಪ್ತಿಯ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯ ಬಳಿ ದುರ್ಘಟನೆ ಸಂಭವಿಸಿದೆ. ಮೃತರನ್ನು ಕಳಸದಾಳ ಗ್ರಾಮದ ವಿಠ್ಠಲ ಪಾಂಚಾಳ (25), ಮಹೇಶ್ ಬಿರಾದಾರ (25) ಮತ್ತು ಕಾಕನಾಳ ಗ್ರಾಮದ ರಾಜೇಂದ್ರ ಪಾಂಚಾಳ (28) ಎಂದು ಗುರುತಿಸಲಾಗಿದೆ. ವೇಗವಾಗಿ ಬಂದ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟು ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಭಾಲ್ಕಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯುತ್ ತಂತಿ ತಗುಲಿ ಲಾರಿಗೆ ಬೆಂಕಿ

ಇನ್ನೊಂದೆಡೆ, ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿ ಮೇವು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡಿದೆ. ಲಾರಿಯಲ್ಲಿ ತುಂಬಿದ್ದ ಒಣ ಮೇವಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಎಚ್ಚೆತ್ತ ಚಾಲಕ ಮತ್ತು ಸ್ಥಳೀಯರು, ತಕ್ಷಣವೇ ಜೆಸಿಬಿ ಮೂಲಕ ಮೇವನ್ನು ಕೆಳಕ್ಕೆ ತಳ್ಳಿದ್ದಾರೆ. ಇದರಿಂದಾಗಿ ಇಡೀ ಲಾರಿ ಸುಟ್ಟು ಭಸ್ಮವಾಗುವುದು ತಪ್ಪಿದ್ದು, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬೆಂಕಿಯ ಕೆನ್ನಾಲಗೆಗೆ ಲಾರಿಯ ಹಿಂಭಾಗ ಭಾಗಶಃ ಸುಟ್ಟು ಕರಕಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vinod Kambli: ವಿನೋದ್ ಕಾಂಬ್ಳಿ ಈಗ ಹೇಗಿದ್ದಾರೆ ನೋಡಿ – Kannada News | Vinod Kambli’s Wankhede appearance during IPL match

ಮುಂಬೈ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕುರಿತಾದ ತೀವ್ರ ಆತಂಕಕಾರಿ ಸುದ್ದಿಗಳ ನಡುವೆಯೇ, ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವಿನೋದ್ ಕಾಂಬ್ಲಿ ಅವರು ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಕಾಂಬ್ಲಿ ಅವರನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಬರಮಾಡಿಕೊಂಡಿದ್ದಾರೆ.

ಕಾಂಬ್ಳಿ ಅವರನ್ನು ನೋಡಿದ ತಕ್ಷಣ ನೆರೆದಿದ್ದ ಅಭಿಮಾನಿಗಳು “ಗೆಟ್ ವೆಲ್ ಸೂನ್ ಸರ್” (ಶೀಘ್ರ ಗುಣಮುಖರಾಗಿ ಸರ್) ಎಂದು ಕೂಗಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಕಾಂಬ್ಲಿ ಅವರು ನಗುಮೊಗದಿಂದಲೇ ಹೆಬ್ಬೆರಳು ತೋರಿಸಿ (Thumbs Up) ಅಭಿಮಾನಿಗಳ ಹಾರೈಕೆಗೆ ಸ್ಪಂದಿಸಿದರು.

ಆರೋಗ್ಯ ಸ್ಥಿತಿ:

ವಿನೋದ್ ಕಾಂಬ್ಲಿ ಅವರ ದೈಹಿಕ ಸ್ಥಿತಿ ಮೊದಲಿನಂತಿಲ್ಲ ಎಂಬುದು ಈ ಭೇಟಿಯ ವೇಳೆ ಸ್ಪಷ್ಟವಾಯಿತು.  ಅವರು ಇಬ್ಬರ ಸಹಾಯದೊಂದಿಗೆ ಮತ್ತು ವಾಕಿಂಗ್ ಸ್ಟಿಕ್ ಹಿಡಿದು ನಡೆಯುತ್ತಿದ್ದರು.

ವರದಿಗಳ ಪ್ರಕಾರ, ಅವರು ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆ (Brain Clot) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರ ನೆನಪಿನ ಶಕ್ತಿ ಕುಂದುತ್ತಿದ್ದು, ಪಾರ್ಶ್ವವಾಯುವಿನ ಅಪಾಯವೂ ಇದೆ ಎಂದು ಹೇಳಲಾಗಿದೆ.

ಆದರೆ, ಅವರ ಪತ್ನಿ ಆಂಡ್ರಿಯಾ ಇತ್ತೀಚೆಗೆ ಸ್ಪಷ್ಟನೆ ನೀಡಿ, “ದೇವರ ದಯೆಯಿಂದ ಅವರು ಚೆನ್ನಾಗಿದ್ದಾರೆ ಮತ್ತು ಕ್ರಮೇಣ ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಗೆಳೆಯರ ಬೆಂಬಲ:

ಈ ಕಷ್ಟದ ಸಮಯದಲ್ಲಿ ಕಾಂಬ್ಲಿ ಅವರಿಗೆ ಅವರ ಬಾಲ್ಯದ ಗೆಳೆಯ ಸಚಿನ್ ತೆಂಡೂಲ್ಕರ್ ಮತ್ತು ಮಾರ್ಕಸ್ ಕೌಟೊ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಬೆಂಬಲವಾಗಿ ನಿಂತಿದ್ದಾರೆ. ಇವರೆಲ್ಲರೂ ಕಾಂಬ್ಲಿ ಅವರ ಚಿಕಿತ್ಸೆ ಮತ್ತು ಯೋಗಕ್ಷೇಮಕ್ಕಾಗಿ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.

ವಾಂಖೆಡೆ ಸ್ಟೇಡಿಯಂ ಕಾಂಬ್ಲಿ ಅವರಿಗೆ ಅತ್ಯಂತ ಪ್ರಿಯವಾದ ಸ್ಥಳ. ಇದೇ ಮೈದಾನದಲ್ಲಿ ಅವರು 1993ರಲ್ಲಿ ಇಂಗ್ಲೆಂಡ್ ವಿರುದ್ಧ ದ್ವಿಶತಕ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಅದೇ ಮೈದಾನಕ್ಕೆ ಅವರು ಮರಳಿ ಬಂದಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಭಾವುಕತೆ ಮೂಡಿಸಿದೆ.

ಇದನ್ನೂ ಓದಿ: ಗಂಭೀರ ಆರೋಪ: ವೈಭವ್ ಸೂರ್ಯವಂಶಿ ಬ್ಯಾಟ್‌ನಲ್ಲಿ ‘AI ಚಿಪ್’ ಇದೆ! 

ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ವಿನೋದ್ ಕಾಂಬ್ಲಿ ಅವರು ಸಂಪೂರ್ಣವಾಗಿ ಗುಣಮುಖರಾಗಿ ಮತ್ತೆ ಮೊದಲಿನಂತಾಗಲಿ ಎಂಬುದು ಇಡೀ ದೇಶದ ಹಾರೈಕೆಯಾಗಿದೆ.

Source link

ಜೆಪಿ ನಗರದಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ; 12 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು – Kannada News | JP Nagar Incident: Heavy Rain Causes Tree to Fall on Car, Public Outcry Over Official Inaction

ಬೆಂಗಳೂರು, ಏ.30: ಸಿಲಿಕಾನ್​ ಸಿಟಿಯ ಜೆಪಿ ನಗರ 24ನೇ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಕಾರಿನ ಮೇಲೆ ಭಾರೀ ಮಳೆಗೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದರೂ, ಸುಮಾರು 12 ಗಂಟೆಗಳಾದರೂ ಜಿಬಿ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರವು ಕಾರ್ಯಾಚರಣೆ ನಡೆಸಿಲ್ಲ. ಮರ ಬಿದ್ದ ಪರಿಣಾಮವಾಗಿ ರಸ್ತೆಯ ಒಂದು ಬದಿಯ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನಗಳು ಒಂದೇ ರಸ್ತೆಯಲ್ಲಿ ಎರಡೂ ಕಡೆ ಚಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮರ ಬಿದ್ದ ರಭಸಕ್ಕೆ ಕಾರಿನ ಮುಂಭಾಗದ ಗಾಜು ಒಡೆದುಹೋಗಿದ್ದು, ಮರದ ಕೊಂಬೆಗಳು ಸ್ಟೇರಿಂಗ್‌ಗೆ ತಗುಲಿ ಅದು ಮುರಿದುಹೋಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮರದ ಕೊಂಬೆಗಳು ತಗಲಿ ತೊಂದರೆಯಾಗುತ್ತಿದೆ. ಒಂದು BMTC ಬಸ್‌ನ ಸೈಡ್ ಮಿರರ್ ಕೂಡ ಮುರಿದು ಹೋಗಿದೆ. ಇಷ್ಟೆಲ್ಲಾ ಸಮಸ್ಯೆಗಳಾಗುತ್ತಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿನ

Source link

ನೀವು ನನಗೆ ಸಹಾಯ ಮಾಡಿ, ನಾನು ನಿಮಗೆ ಸಹಾಯ ಮಾಡ್ತೇನೆ, ಟ್ರಂಪ್-ಪುಟಿನ್ 90 ನಿಮಿಷಗಳ ರಹಸ್ಯ ಮಾತುಕತೆ – Kannada News | Trump Putin Secret Talk: Ukraine Ceasefire, Iran Tensions and Zelenskyy Discussed

ವಾಷಿಂಗ್ಟನ್, ಏಪ್ರಿಲ್ 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದರು. ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಈ ಮಾತುಕತೆಯಲ್ಲಿ ಉಕ್ರೇನ್ ಸಂಘರ್ಷ ಮತ್ತು ಇರಾನ್ ಉದ್ವಿಗ್ನತೆಯ ಕುರಿತು ಗಂಭೀರ ಚರ್ಚೆಗಳು ನಡೆದಿವೆ.

ಇರಾನ್ ಯುದ್ಧ, ಉಕ್ರೇನ್ ಸಂಘರ್ಷ ಮತ್ತು ಇತ್ತೀಚೆಗೆ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಗುಂಡಿನ ದಾಳಿ ಸೇರಿದಂತೆ ಹಲವಾರು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಾಯಿತು. ಜಾಗತಿಕ ಕೋಲಾಹಲದ ನಡುವೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದೀರ್ಘ ದೂರವಾಣಿ ಸಂಭಾಷಣೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕ್ರೆಮ್ಲಿನ್ ಪ್ರಕಾರ, ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಪರಮಾಣು ಯುದ್ಧವನ್ನು ಕೊನೆಗೊಳಿಸಲು ಪುಟಿನ್ ಈಗ ವೈಯಕ್ತಿಕವಾಗಿ ಮುಂದೆ ಬಂದಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು ಉಕ್ರೇನ್ ಯುದ್ಧದಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸುವಂತೆ ಪುಟಿನ್ ಅವರಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಭಾಷಣ ನಿಲ್ಲಿಸಿ ಬಂಕರ್‌ನತ್ತ ಓಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಮೇ 9 ರಂದು ಆಚರಿಸಲಾಗುವ ‘ವಿಜಯ ದಿನ’ದ ಅಂಗವಾಗಿ ಈ ಕದನ ವಿರಾಮವನ್ನು ಘೋಷಿಸಲು ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಉಷಾಕೋವ್ ತಿಳಿಸಿದ್ದಾರೆ. ರಷ್ಯಾ ಮತ್ತು ಅಮೆರಿಕ ನಡುವಿನ ಐತಿಹಾಸಿಕ ವಿಜಯವನ್ನು ಈ ದಿನ ಗುರುತಿಸುವುದರಿಂದ ಟ್ರಂಪ್ ಕೂಡ ಈ ಪ್ರಸ್ತಾವನೆಯನ್ನು ಬೆಂಬಲಿಸಿದ್ದಾರೆ.

ಐದನೇ ವರ್ಷಕ್ಕೆ ಕಾಲಿಟ್ಟಿರುವ ಉಕ್ರೇನ್ ಸಂಘರ್ಷದ ಕುರಿತು ಉಭಯ ನಾಯಕರು ವಿಸ್ತಾರವಾಗಿ ಚರ್ಚಿಸಿದರು. ಈ ವೇಳೆ ಪುಟಿನ್ ಅವರು, ಮೇ 9 ರಂದು ಆಚರಿಸಲಾಗುವ ‘ವಿಜಯ ದಿನ’ದ (Victory Day) ಅಂಗವಾಗಿ ಕದನ ವಿರಾಮ ಘೋಷಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ಯುದ್ಧಭೂಮಿಯಲ್ಲಿ ರಷ್ಯಾದ ಪಡೆಗಳು ಮೇಲುಗೈ ಸಾಧಿಸಿದ್ದು, ಶತ್ರುಗಳನ್ನು ಹಿಂದಕ್ಕೆ ತಳ್ಳುತ್ತಿವೆ ಎಂದು ಪುಟಿನ್ ವಿವರಿಸಿದ್ದಾರೆ.

ಪರ್ಷಿಯನ್ ಕೊಲ್ಲಿಯ ಪರಿಸ್ಥಿತಿಯ ಕುರಿತು ಚರ್ಚಿಸಿದ ಪುಟಿನ್, ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸುವ ಟ್ರಂಪ್ ಅವರ ನಿರ್ಧಾರವನ್ನು ಶ್ಲಾಘಿಸಿದರು. ಮಾತುಕತೆಗೆ ಅವಕಾಶ ನೀಡುವ ಈ ಕ್ರಮವು ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಮೆರಿಕ ಮತ್ತು ಇಸ್ರೇಲ್ ಮತ್ತೊಮ್ಮೆ ಮಿಲಿಟರಿ ಕ್ರಮ ಕೈಗೊಂಡರೆ ಅದು ಇಡೀ ಅಂತಾರಾಷ್ಟ್ರೀಯ ಸಮುದಾಯಕ್ಕೆ ಹಾನಿಕಾರಕವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಗಮನಾರ್ಹವಾಗಿ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ನಡವಳಿಕೆಯ ಬಗ್ಗೆ ಟ್ರಂಪ್ ಮತ್ತು ಪುಟಿನ್ ಇಬ್ಬರೂ ಒಂದೇ ರೀತಿಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೈವ್ ಆಡಳಿತವು ಯುರೋಪಿಯನ್ನರ ಪ್ರಚೋದನೆಯೊಂದಿಗೆ ಸಂಘರ್ಷವನ್ನು ಹೆಚ್ಚಿಸುವ ನೀತಿಯನ್ನು ಅನುಸರಿಸುತ್ತಿದೆ ಎಂದು ಉಭಯ ನಾಯಕರು ಮೌಲ್ಯಮಾಪನ ಮಾಡಿದ್ದಾರೆ.

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರ ಬಗ್ಗೆ ಇಬ್ಬರೂ ನಾಯಕರು ಒಂದೇ ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಪ್ರಸ್ತುತ ಉಕ್ರೇನಿಯನ್ ಆಡಳಿತವು ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತಿದೆ ಎಂದು ಇಬ್ಬರೂ ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version