‘ಕೆಡಿ’ ಸಿನಿಮಾ ನೋಡಿ ಜನ ಹೇಳಿದ್ದೇನು? ವಿಡಿಯೋ ನೋಡಿ – Kannada News | KD Movie release here is audience reaction after watching movie

ಧ್ರುವ ಸರ್ಜಾ (Dhruva Sarja) ನಟಿಸಿ, ಪ್ರೇಮ್ ನಿರ್ದೇಶಿಸಿರುವ ‘ಕೆಡಿ: ದಿ ಡೆವಿಲ್’ ಸಿನಿಮಾ ಇಂದು (ಏಪ್ರಿಲ್ 30) ಬಿಡುಗಡೆ ಆಗಿದೆ. ಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯವನ್ನು ಈ ಸಿನಿಮಾಕ್ಕಾಗಿ ಧ್ರುವ ಸರ್ಜಾ ಮತ್ತು ಪ್ರೇಮ್ ಹಾಗೂ ಇತರರು ವ್ಯಯಿಸಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಮುಂಚೆ ಹಾಡಿನಿಂದ ಕೆಲ ವಿವಾದಗಳು ಸಹ ಆಗಿದ್ದವು. ಇನ್ನೂ ಕೆಲವು ಕಾರಣಗಳಿಗೆ ಸಿನಿಮಾದ ಮೇಲೆ ಎಲ್ಲರ ಕಣ್ಣಿತ್ತು, ಇದೀಗ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಅನ್ನು ನೋಡಿದ ಜನ ನೀಡಿದ ಅಭಿಪ್ರಾಯ ಏನು? ಇಲ್ಲಿದೆ ನೋಡಿ ವಿಡಿಯೋ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ: ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ – Kannada News | Gangavathi BJP Leader Venkatesh kurubar murder case: death sentence to 6 convicts

ಕೊಪ್ಪಳ, (ಏಪ್ರಿಲ್ 30): ಗಂಗಾವತಿ (Gangavathi) ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ ಅಲಿಯಾಸ್ ಜೆಎನ್ಎನ್ ವೆಂಕಿ ಕೊಲೆ ಪ್ರಕರಣದ (Venkatesh Kurbur Murder Case) ಆರು ಜನ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜೊತೆ ದಂಡ ವಿಧಿಸಲಾಗಿದೆ. ಯಾಗಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಗಂಗಾವತಿ ಒಂದನೇ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ, ಆರು ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ ಇಂದು (ಎಪ್ರಿಲ್ 30) ಆದೇಶ ಹೊರಡಿಸಿದ್ದಾರೆ. ಇದರ ಜೊತೆಗೆ ಆರು ಜನರಿಗೆ ತಲಾ ಮೂರು ಲಕ್ಷ ದಂಡ ವಿಧಿಸಿದ್ದಾರೆ. ರವಿ , ವಿಜಯ್ ಅಲಿಯಾದ್ ಮೈಲಾರಿ, ಧನರಾಜ್, ಭೀಮ್‌ ಅಲಿಯಾದ್ ಭರತ್, ಸಲೀಮ್ ಮಹಮ್ಮದ್ ರಫೀಕ್, ಗಂಗಾಧರ ಗೌಳಿಗೆ ಗಲ್ಲು ಶಿಕ್ಷೆಗೆ ಗುರಿಯಾದವರು.

ಮೊದಲಿಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯ ಫೂಟೇಜ್​ಗಳನ್ನು ಪರಿಶೀಲಿಸಿದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಅಪರಾಧಿಗಳು ಈ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯ ಬಗ್ಗೆಯೂ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ಗಂಗಾವತಿ: ಬಿಜೆಪಿ ಯುವ ಮುಖಂಡ ವೆಂಕಟೇಶ್ ಬರ್ಬರ ಹತ್ಯೆ

ಗಂಗಾವತಿಯ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದ ಮಾರುತಿ ಎಂಬ ಯುವಕನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣದಲ್ಲಿ ವೆಂಕಟೇಶ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅಲ್ಲದೇ ಮಾರುತಿ ಚಿಕಿತ್ಸೆಗೆ ಕೊನೆಯವರೆಗೂ ಬೆಂಬಲವಾಗಿ ನಿಂತಿದ್ದ ಎಂಬ ಕಾರಣಕ್ಕೆ ವೆಂಕಟೇಶನನ್ನು ಕೊಲೆ ಮಾಡಿದ್ದೀರಿ. ಸಭ್ಯ ನಾಗರಿಕ ಸಮಾಜದ ಇಂತಹ ಕೃತ್ಯಗಳನ್ನು ಒಪ್ಪುವುದಿಲ್ಲ. ಅಪರಾಧ ಕೃತ್ಯಗಳ ಹಿನ್ನೆಲೆ ಪರಿಗಣಿಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಕೊಪ್ಪಳ ಎಸ್ಪಿ ಹೇಳಿದ್ದಿಷ್ಟು

ವೆಂಕಟೇಶ ಕುರುಬರ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ ಸಂಬಂಧ
ಕೊಪ್ಪಳ ಎಸ್ಪಿ ರಾಮ್ ಎಲ್ ಅರಸಿದ್ದಿ ಪ್ರತಿಕ್ರಿಯಿಸಿದ್ದು, ವೆಂಕಟೇಶ ಕುರುಬರ ಕೊಲೆ ಕೇಸ್ ನ ಗಂಗಾವತಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಇಂದು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಪ್ರಕಟವಾಗಿದೆ. ಈ ಕೇಸ್ ಸಾಕಷ್ಟು ಚ್ಯಾಲೆಂಜಿಂಗ್ ಆಗಿತ್ತು ಪೊಲೀಸರು ಈ ಕೇಸ್ ಗೆ ನ್ಯಾಯ ಕೊಟ್ಟಿದ್ದಾರೆ. ಇಬ್ಬರು ಜೊತೆಯಲ್ಲೆ ಇದ್ದವರು, ಆದ್ರೆ ನಂತರ ವೈಷಮ್ಯ ಬಂದ ಬೇರೆಯಾಗಿದ್ದರು ಎಂದು ಮಾಹಿತಿ ನೀಡಿದರು.

ಎ1 ಆರೋಪಿ ರವಿ ಮೇಲೆ 17 ಪ್ರಕರಣಗಳು ದಾಖಲಾಗಿದ್ವು, ಗಂಗಾಧರ ಮೇಲೆ 4 ಪ್ರಕರಣಗಳು ಸೇರಿ ಎಲ್ಲರ ಮೇಲೂ ಪ್ರಕರಣಗಳಿವೆ. ಆರೋಪಿ ರವಿ ಮೇಲೆ ಸಾಕಷ್ಟು ಕೇಸ್ ಗಳು ದಾಖಲಾಗಿದ್ವು ಅವರು ನಡೆದುಕೊಂಡ ರೀತಿಯನ್ನ ಕೋರ್ಟ್ ಸೂಕ್ಷ್ಮವಾಗಿ ಗಮನಿಸಿದೆ. ಅವರ ನಡುವಳಿಕೆ ಇದರಲ್ಲಿ ಗೊತ್ತಾಗತ್ತೆ ಎಂದು ಆದೇಶದಲ್ಲಿ ನ್ಯಾಯಾಲಯ ಉಲ್ಲೇಖ ಮಾಡಿದೆ ಎಂದು ಹೇಳಿದರು.

ಪ್ರಕರಣದ ಹಿನ್ನೆಲೆ

ಗಂಗಾವತಿ ನಗರದ ಹೊರ ವಲಯದಲ್ಲಿರುವ ರಾಣಾ ಪ್ರತಾಪ್​ ಸಿಂಗ್ ವೃತ್ತದಲ್ಲಿರುವ ಖಾಸಗಿ ಆಸ್ಪತ್ರೆಯ ಬಳಿ 2025ರ ಅಕ್ಟೋಬರ್ 8ರ ಮಧ್ಯರಾತ್ರಿ ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಅಧ್ಯಕ್ಷ ವೆಂಕಟೇಶ ಕುರುಬರ್ (32) ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು.

ಅ.8ರ ತಡರಾತ್ರಿ ಊಟ ಮುಗಿಸಿಕೊಂಡು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ವೆಂಕಟೇಶ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಹಿಂಬಾಲಿಸಿದ ಯುವಕರ ಗುಂಪು, ದ್ವಿಚಕ್ರ ವಾಹನಕ್ಕೆ ಗುದ್ದಿ ಬೀಳಿಸಿದ್ದರು. ಬಳಿಕ ಕೆಳಕ್ಕೆ ಬಿದ್ದ ವೆಂಕಟೇಶನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮನಬದಂತೆ ಕೊಚ್ಚಿ ಕೊಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವೆಂಕಟೇಶನನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಕೊಲೆ ಕೇಸ್ ಗೆ ಸಂಭಂದಿಸಿದಂತೆ ಗಂಗಾವತಿ ನಗರ ಪೊಲೀಸರು, 12 ಜನರನ್ನು ಬಂಧಿಸಿದ್ದು, ಸುಮಾರು 927 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹಳೆಯ ದ್ವೇಷ ಮತ್ತು ಮಾರುತಿ ಎಂಬ ವ್ಯಕ್ತಿಯ ಚಿಕಿತ್ಸೆಗೆ ನೆರವಾಗಿದ್ದು ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:30 pm, Thu, 30 April 26

Source link

ಬೆಂಗಳೂರಿನಲ್ಲಿ ಮಳೆಯಿಂದ ಸರಣಿ ಅವಾಂತರ: ಇನ್ಮುಂದೆ ಫುಟ್‌ಪಾತ್​ನಲ್ಲಿ ವ್ಯಾಪಾರಕ್ಕೆ ಬ್ರೇಕ್! – Kannada News | Bengaluru Bowring Hospital Wall Collapse: No Business on Footpaths; Says DK Shivakumar

ಪ್ರಾತಿನಿಧಿಕ ಚಿತ್ರ (ಎಐ ಚಿತ್ರ)Image Credit source: tv9 kannada

ಬೆಂಗಳೂರು, ಏಪ್ರಿಲ್​ 30: ಬುಧವಾರ ಸಂಜೆ 1 ಗಂಟೆ ಅಬ್ಬರಿಸಿದ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ (Rain) ಬೆಂಗಳೂರಿನಲ್ಲಿ ಸಾಲು ಸಾಲು ಅವಘಡಗಳನ್ನು ಸೃಷ್ಟಿಸಿದೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಒಂದು ಮಗು ಸೇರಿ 7 ಮಂದಿ ಉಸಿರು ಚೆಲ್ಲಿದ್ದಾರೆ. ವ್ಯಾಪಾರ ಮಾಡ್ತಿದ್ದವರು, ಖರೀದಿ ಮಾಡಲು ಬಂದಿದ್ದವರು ಸಾವಿನ ಮನೆ ಸೇರಿದ್ದಾರೆ. ಈ ಬೆನ್ನಲ್ಲೇ ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಖಡಕ್​ ಸೂಚನೆ ನೀಡಿದ್ದಾರೆ. ​

ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಅವಾಂತರಗಳು ಸೃಷ್ಟಿ ಹಿನ್ನೆಲೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರಸ್ತೆ ಮೇಲೆ ಬಿದ್ದಿರುವ ಮರದ ಕೊಂಬೆ ತೆರವು ಮಾಡಲು ಪೊಲೀಸರಿಗೆ ಈಗಾಗಲೇ ನಿರ್ದೇಶನವನ್ನೂ ನೀಡಿದ್ದೇನೆ. ಈಗಾಗಲೇ ನಗರದಾದ್ಯಂತ ಇರುವ ಸಮಸ್ಯೆ ಪಟ್ಟಿ ಮಾಡಲಾಗಿದೆ. ಎಲ್ಲಾ ಮಾಹಿತಿಯನ್ನ ಈಗ ಕಂಟ್ರೋಲ್ ರೂಂನಲ್ಲಿ ಕಲೆ ಹಾಕಿದ್ದಾರೆ. ಗೋಡೆ ಕುಸಿತ ಕೇಸ್​ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ. ಇನ್ಮುಂದೆ ಫುಟ್‌ಪಾತ್‌ನಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಸೂಚಿಸಿದ್ದೇನೆ ಎಂದರು.

ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ: ಸ್ಥಳ ಪರಿಶೀಲನೆ ಬಳಿಕ ಲೋಕಾಯುಕ್ತ ಶಾಕಿಂಗ್ ಹೇಳಿಕೆ

ಗೋಡೆ ಕುಸಿತ ಕೇಸ್​ನಲ್ಲಿ ಅಧಿಕಾರಿ ನಿರ್ಲಕ್ಷವೂ ಇದೆ ಎನ್ನಲ್ಲ, ಆದರೆ ಇನ್ಮುಂದೆ ಇಂತಹ ಅಪಾಯಕಾರಿ ಕಾಂಪೌಂಡ್ ಗೋಡೆಗಳನ್ನು ಮೊದಲೇ ಗುರುತಿಸಲು ಸೂಚಿಸಿದ್ದೇನೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಫುಟ್‌ಪಾತ್‌ಗಳ ಮೇಲೆ ಇನ್ಮುಂದೆ ಯಾವುದೇ ವ್ಯಾಪಾರವನ್ನು ನಡೆಸುವಂತಿಲ್ಲ. ಮುಖ್ಯವಾಗಿ ವಾಜಪೇಯಿ ಆಸ್ಪತ್ರೆ ಪಕ್ಕದಂತಹ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಮಳೆ ಹಾನಿ ಸಂಬಂಧ ಸಿಎಂ ಸಭೆ ಕರೆದಿದ್ದಾರೆ. ನಾನು ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಬೆಂಗಳೂರು ನಗರದ ಎಲ್ಲೆಲ್ಲಿ ರಸ್ತೆಗೆ ಅಡ್ಡ ಇರುವ ಕೊಂಬೆಗಳ ಬಗ್ಗೆ ಪಟ್ಟಿ ಮಾಡಲು ಸೂಚಿಸಿದ್ದೇನೆ. ಒಣಗಿರುವ ಮರಗಳು ಬಿದ್ದು ಸಂಚಾರಕ್ಕೆ ಸಮಸ್ಯೆ ಆಗಿದೆ. ಹೀಗಾಗಿ ಕೊಂಬೆ ತೆರವು ಮಾಡಿ ಸಂಚಾರಕ್ಕೆ‌ ಅನುವು ಮಾಡಲು ಹೇಳಿದ್ದೇನೆ. ನೀರು ಬ್ಲಾಕ್ ಆಗಿದ್ರೆ ಅದನ್ನು ಕ್ಲೀನ್ ಮಾಡೋಕೆ ಹೇಳಿದ್ದೇನೆ ಎಂದಿದ್ದಾರೆ.

ಮಳೆ‌ ಜಾಸ್ತಿ ಬರಲಿ ಅಂತಾ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ

ಈ ರೀತಿಯ ಗೋಡೆಗಳನ್ನು ಗುರುತು ಮಾಡಲು ತಿಳಿಸಿದ್ದೇನೆ. ಮಳೆ ಜಾಸ್ತಿ ಬಂದಾಗ ನಾವು ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಮಳೆ‌ ಜಾಸ್ತಿ ಬರಲಿ ಅಂತಾ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಮಳೆಯ ಪ್ರಮಾಣ ಕುಸಿಯಲಿದೆ ಅನ್ನೋ ವರದಿಗಳು ಬಂದಿವೆ. ಮಳೆ ಕಡಿಮೆಯಾದರೆ ವಿದ್ಯುತ್‌ಗೂ ಸಮಸ್ಯೆ ಉಂಟಾಗಲಿದೆ. ಡ್ಯಾಂಗಳಿಗೂ ಸಮಸ್ಯೆ ಆಗುತ್ತದೆ. ಶರಾವತಿಯಲ್ಲಿ ಈಗಾಗಲೇ ಆ ರೀತಿ ಕಾಣಿಸುತ್ತಿದೆ. ಮೇ 3ರಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುತ್ತಿದ್ದೇನೆ ಎಂದು ತಿಳಿಸಿದರು.

ನಾಳೆ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ 

ಇನ್ನ ನಗರದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ನಾಳೆ ಬೆಂಗಳೂರು ಸಿಟಿ ರೌಂಡ್ಸ್ ನಡೆಸಲಿದ್ದಾರೆ. ನಾಳೆ ಮಧ್ಯಾಹ್ನ ಸಿಟಿ ರೌಂಡ್ಸ್ ಹಾಕಲಿರುವ ಡಿಕೆ ಶಿವಕುಮಾರ್​, ಮಳೆಯಿಂದಾದ ಸಮಸ್ಯೆ, ಅವಾಂತರಗಳನ್ನು ವೀಕ್ಷಿಸಲಿದ್ದಾರೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಂಜಯ್ ಕಪೂರ್ ಆಸ್ತಿ ವಿವಾದ; ದೆಹಲಿ ಹೈಕೋರ್ಟ್​ನಿಂದ ಕರಿಷ್ಮಾ ಕಪೂರ್ ಮಕ್ಕಳಿಗೆ ಬಿಗ್ ರಿಲೀಫ್ – Kannada News | Big Relief For Karisma Kapoor’s Children In Sunjay Kapur Property Row

ನವದೆಹಲಿ, ಏಪ್ರಿಲ್ 30: ಕಳೆದ ವರ್ಷ ಜೂನ್‌ನಲ್ಲಿ ಲಂಡನ್‌ನಲ್ಲಿ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿಗಳನ್ನು ಫ್ರೀಜ್ ಮಾಡಲಾಗಿದೆ. ಅವರು 30,000 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ. ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ ಕಪೂರ್ ಮತ್ತು ನಟಿ ಕರಿಷ್ಮಾ ಕಪೂರ್ (Karishma Kapoor) ಅವರ ಎರಡನೇ ಮದುವೆಯಿಂದ ಪಡೆದ ಮಕ್ಕಳಾದ ಕಿಯಾನ್ ಕಪೂರ್ ಮತ್ತು ಸಮೈರಾ ಕಪೂರ್ ನಡುವಿನ ಗಲಾಟೆ ತಾರಕಕ್ಕೇರಿತ್ತು. ಇದೀಗ ಕುಟುಂಬ ವಿವಾದದ ನಡುವೆ ಅವರ ಆಸ್ತಿಗಳನ್ನು ಸಂರಕ್ಷಿಸಲು ದೆಹಲಿ ಹೈಕೋರ್ಟ್ ಆದೇಶಿಸಿದೆ. ಇದರಿಂದ ಕರಿಷ್ಮಾ ಕಪೂರ್​ ಮಕ್ಕಳಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಕಿಯಾನ್ ಮತ್ತು ಸಮೈರಾ ಇಬ್ಬರೂ ಪ್ರಿಯಾ ಕಪೂರ್ ಅವರು ಸಂಜಯ್ ಕಪೂರ್ ಅವರ ವಿಲ್ ಅನ್ನು ನಕಲಿ ಮಾಡಿದ್ದಾರೆ ಮತ್ತು ಆಸ್ತಿಗಳ ಅಪೂರ್ಣ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಿಯಾ ಕಪೂರ್ ನ್ಯಾಯಾಲಯಕ್ಕೆ ಸಲ್ಲಿಸಿದ ಪಟ್ಟಿಯಲ್ಲಿ ಸಂಜಯ್ ಕಪೂರ್ ಒಡೆತನದ ಹಲವಾರು ಸ್ಥಿರ ಆಸ್ತಿಗಳು ಮತ್ತು ಹೆಚ್ಚಿನ ಮೌಲ್ಯದ ವರ್ಣಚಿತ್ರಗಳನ್ನು ಸೇರಿಸಲಾಗಿಲ್ಲ ಎಂದು ಮಕ್ಕಳು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಸಂಜಯ್ ಕಪೂರ್ ಸತ್ತ ಮೇಲೆ ಆಸ್ತಿ ವಿವಾದ; ನಮಗೂ ಪಾಲು ಕೊಡಿ ಎಂದು ಕೋರ್ಟ್​ಗೆ ಹೋದ ಕರೀಶ್ಮಾ ಮಕ್ಕಳು

ಪ್ರಿಯಾ ಕಪೂರ್ ಯಾವುದೇ ಆಸ್ತಿಗಳನ್ನು ಮಾರಾಟ ಮಾಡದಂತೆ ಅಥವಾ ವರ್ಗಾಯಿಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧಿಸಿದೆ. ಈ ಪ್ರಕರಣವು ಇತ್ಯರ್ಥವಾಗುವವರೆಗೆ ಎಲ್ಲಾ ಆಸ್ತಿಗಳನ್ನು ಸಂರಕ್ಷಿಸುವಂತೆ ಆದೇಶಿಸಿದೆ. ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ ಅವರ ತಾಯಿ ವಿಲ್‌ನ ಸತ್ಯಾಸತ್ಯತೆ ಮತ್ತು ಸಿಂಧುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಹೇಳಿರುವ ಕೋರ್ಟ್ ಈ ಆದೇಶ ನೀಡಿದೆ.

ಇದನ್ನೂ ಓದಿ: ‘ದೇವರು ಅಷ್ಟೊಂದು ಐಶ್ವರ್ಯ ಕೊಟ್ಟಿದಾನಲ್ಲ’; ಸಂಜಯ್ ಕಪೂರ್ ಆಸ್ತಿ ವಿವಾದದಲ್ಲಿ ಕೋರ್ಟ್ ಅಭಿಪ್ರಾಯ

ಸಂಜಯ್ ಕಪೂರ್ ಅವರ ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಕ್ರಿಪ್ಟೋಕರೆನ್ಸಿ ಹೋಲ್ಡಿಂಗ್‌ಗಳ ಕಾರ್ಯಾಚರಣೆಯನ್ನು ನ್ಯಾಯಾಲಯವು ತಕ್ಷಣ ನಿಲ್ಲಿಸಿದೆ. ಇದರೊಂದಿಗೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಖಾತೆಯ ಹೇಳಿಕೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಸ್ಸು ಓಡಿಸುತ್ತಿರುವಾಗಲೇ ಪ್ರಜ್ಞೆ ತಪ್ಪಿದ ಚಾಲಕಿ: ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ – Kannada News | Students Take Control After Driver Collapses, Avert Bus Crash in Mississippi

ಶಾಲಾ ಬಸ್ ಚಲಾಯಿಸುತ್ತಿರುವಾಗ ಚಾಲಕಿಗೆ ಏಕಾಏಕಿ ಆಸ್ತಮಾ ಅಟ್ಯಾಗಿ ಆಗಿ ಪ್ರಜ್ಞೆ ತಪ್ಪಿದ್ದರು. ಕೂಡಲೇ ವಿದ್ಯಾರ್ಥಿಗಳ ಸಮಯಪ್ರಜ್ಞೆಯಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಾರೆ.  ಬುಧವಾರ ಬೆಳಗ್ಗೆ ಸುಮಾರು 12 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕಿ ಲಿಯಾ ಟೇಲರ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಆಸ್ತಮಾ ಅಟ್ಯಾಕ್ ಆಗಿತ್ತು. ಹ್ಯಾನ್ಕಾಕ್ ಕೌಂಟಿ ಸ್ಕೂಲ್ ಡಿಸ್ಟ್ರಿಕ್ಟ್ ಬಿಡುಗಡೆ ಮಾಡಿದ ಸಿಸಿಟಿವಿ ದೃಶ್ಯಗಳಲ್ಲಿ, ಚಾಲಕಿ ಸ್ಟೀರಿಂಗ್ ಮೇಲೆಯೇ ಕುಸಿದು ಬೀಳುವ ದೃಶ್ಯಗಳು ಸೆರೆಯಾಗಿವೆ.

ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸಲು ಪ್ರಾರಂಭಿಸಿತು.
ಬಸ್ಸಿನ ಮುಂಭಾಗದಲ್ಲಿದ್ದ ವಿದ್ಯಾರ್ಥಿಯೊಬ್ಬರು ತಕ್ಷಣವೇ ಪರಿಸ್ಥಿತಿಯನ್ನು ಅರಿತು ಸ್ಟೀರಿಂಗ್ ವೀಲ್ ಹಿಡಿದು ಬಸ್ ನಿಯಂತ್ರಣಕ್ಕೆ ತಂದರು. ಚಾಲಕಿ ಕ್ಷಣಕಾಲ ಎಚ್ಚರಗೊಂಡರಾದರೂ ಮತ್ತೆ ಪ್ರಜ್ಞೆ ತಪ್ಪಿ ಹಿಂದಕ್ಕೆ ಬಿದ್ದರು. ಜಾಕ್ಸನ್ ಕ್ಯಾಸ್ನೇವ್ ಎಂಬ ಹುಡುಗ ಚಾಲಕನ ಸೀಟಿನತ್ತ ಧಾವಿಸಿ ಬ್ರೇಕ್ ಒತ್ತಿ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದ್ದಾನೆ.

ಮತ್ತೊಬ್ಬ ವಿದ್ಯಾರ್ಥಿ ಚಾಲಕಿಗೆ ತುರ್ತು ಔಷಧಿಯನ್ನು ನೀಡಿದರೆ, ಉಳಿದವರು ತಕ್ಷಣವೇ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯ ಕೋರಿದರು. ಹ್ಯಾನ್‌ಕಾಕ್ ಮಿಡಲ್ ಸ್ಕೂಲ್ ಪ್ರಾಂಶುಪಾಲರಾದ ಮೆಲಿಸ್ಸಾ ಸಾಸಿಯರ್ ಅವರು ವಿದ್ಯಾರ್ಥಿಗಳ ಈ ಸಾಹಸವನ್ನು ಶ್ಲಾಘಿಸಿದ್ದಾರೆ. ಶಾಲೆಯ ಪೆಪ್ ರ್ಯಾಲಿಯಲ್ಲಿ ಮೆಕೆಂಜಿ ಫಿಂಚ್, ಜಾಕ್ಸನ್ ಕ್ಯಾಸ್ನೇವ್, ಡೇರಿಯಸ್ ಕ್ಲಾರ್ಕ್, ಕೇಲೀ ಕ್ಲಾರ್ಕ್ ಮತ್ತು ಡೆಸ್ಟಿನಿ ಕಾರ್ನೆಲಿಯಸ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಅವರ ಧೈರ್ಯದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮತ್ತಷ್ಟು ಓದಿ: ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು?

ವೈದ್ಯಕೀಯ ಚಿಕಿತ್ಸೆಯ ನಂತರ ಚೇತರಿಸಿಕೊಂಡಿರುವ ಲಿಯಾ ಟೇಲರ್, ಆ ವಿದ್ಯಾರ್ಥಿಗಳೇ ನನ್ನ ಜೀವ ಉಳಿಸಿದರು ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಆಸ್ತಮಾ ದಾಳಿಯಂತಹ ತುರ್ತು ಸಂದರ್ಭಗಳಲ್ಲಿ ತ್ವರಿತ ನಿರ್ಧಾರ ಮತ್ತು ಶಾಂತವಾಗಿರುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಒತ್ತಡದ ಪರಿಸ್ಥಿತಿಯಲ್ಲೂ ಶಾಂತವಾಗಿ ತಂಡವಾಗಿ ಕೆಲಸ ಮಾಡಿದ ಈ ವಿದ್ಯಾರ್ಥಿಗಳು ಕೇವಲ ತಮ್ಮ ಜೀವವನ್ನಷ್ಟೇ ಅಲ್ಲದೆ, ತಮ್ಮ ಚಾಲಕಿಯ ಜೀವವನ್ನೂ ಉಳಿಸಿ ನಿಜವಾದ ಹೀರೋಗಳು ಎನಿಸಿಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Vasthu Tips: ಮನೆಯ ಟೆರೇಸ್ ಮೇಲೆ ತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ; ಸಂಕಷ್ಟ ತಪ್ಪಿದ್ದಲ್ಲ – Kannada News | Vastu for Terrace: 7 Items to Remove from Your Home Terrace for Prosperity and Peace

ಮನೆಯ ಟೆರೇಸ್ ಎಂದರೆ ಕೇವಲ ತಂಪಾದ ಗಾಳಿ ಸೇವಿಸುವ ಅಥವಾ ಕಾಫಿ ಕುಡಿಯುವ ಜಾಗವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯ ‘ಶಿರಸ್ಸು’ ಇದ್ದಂತೆ. ಮನೆಯ ಮೇಲ್ಭಾಗ ಅಥವಾ ಟೆರೇಸ್ ಎಷ್ಟು ಸ್ವಚ್ಛವಾಗಿರುತ್ತದೋ, ಆ ಮನೆಯಲ್ಲಿ ಅಷ್ಟೇ ನೆಮ್ಮದಿ ಇರುತ್ತದೆ. ಆದರೆ, ನಮಗೆ ಅರಿವಿಲ್ಲದೆಯೇ ಟೆರೇಸ್ ಮೇಲೆ ನಾವು ಹಾಕುವ ಕಸ ಅಥವಾ ಹಳೆಯ ವಸ್ತುಗಳು ಮನೆಯಲ್ಲಿ ಅಶಾಂತಿ ಮತ್ತು ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು. ನಿಮ್ಮ ಮನೆಯ ಟೆರೇಸ್ ಮೇಲೆ ಈ ಕೆಳಗಿನ ವಸ್ತುಗಳಿದ್ದರೆ, ಅವುಗಳನ್ನು ತಕ್ಷಣವೇ ತೆಗೆದುಹಾಕುವುದು ನಿಮ್ಮ ಕುಟುಂಬದ ಏಳಿಗೆಗೆ ಉತ್ತಮ.

ಮುರಿದ ಪೀಠೋಪಕರಣಗಳು (ಕಸ):

ಮನೆಯ ಒಳಗಿದ್ದರೆ ಅಸಹ್ಯವಾಗಿ ಕಾಣುತ್ತವೆ ಎಂಬ ಕಾರಣಕ್ಕೆ ಮುರಿದ ಕುರ್ಚಿ, ಮೇಜು ಅಥವಾ ಸೋಫಾಗಳನ್ನು ಟೆರೇಸ್ ಮೇಲೆ ಹಾಕುತ್ತೇವೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ ಈ ಮುರಿದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಆಯಸ್ಕಾಂತದಂತೆ ಕೆಲಸ ಮಾಡುತ್ತವೆ. ಇದು ಕುಟುಂಬ ಸದಸ್ಯರಲ್ಲಿ ಅನಗತ್ಯ ಮಾನಸಿಕ ಉದ್ವಿಗ್ನತೆ ಮತ್ತು ಆರ್ಥಿಕ ಹಿನ್ನಡೆಗೆ ದಾರಿ ಮಾಡಿಕೊಡುತ್ತದೆ.

ತುಕ್ಕು ಹಿಡಿದ ಕಬ್ಬಿಣದ ವಸ್ತುಗಳು:

ಟೆರೇಸ್‌ನ ಮೂಲೆಗಳಲ್ಲಿ ಬಿದ್ದಿರುವ ತುಕ್ಕು ಹಿಡಿದ ಹಳೆಯ ಸಲಾಕೆಗಳು ಅಥವಾ ಕಬ್ಬಿಣದ ಉಪಕರಣಗಳು ಅತ್ಯಂತ ಅಪಾಯಕಾರಿ. ಇವು ಶನಿ ಗ್ರಹದ ನಕಾರಾತ್ಮಕ ಪರಿಣಾಮಗಳನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಇದರಿಂದ ಕುಟುಂಬದಲ್ಲಿ ಕಲಹಗಳು ಹೆಚ್ಚಾಗುವುದಲ್ಲದೆ, ಸದಸ್ಯರ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಪೊರಕೆಯನ್ನು ಟೆರೇಸ್ ಮೇಲೆ ಬಿಡುವುದು:

ಅನೇಕರು ಛಾವಣಿಯನ್ನು ಗುಡಿಸಿದ ನಂತರ ಪೊರಕೆಯನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ. ಆದರೆ ನೆನಪಿಡಿ, ಪೊರಕೆಯು ಲಕ್ಷ್ಮಿ ದೇವಿಯ ಸಂಕೇತ. ಅದನ್ನು ಬಿಸಿಲು-ಮಳೆಗೆ ಟೆರೇಸ್ ಮೇಲೆ ಹಾಕುವುದು ದೇವಿಗೆ ಮಾಡುವ ಅವಮಾನ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ವೃತ್ತಿಜೀವನದಲ್ಲಿ ಅಡೆತಡೆಗಳನ್ನು ಉಂಟುಮಾಡಿ, ಅನಗತ್ಯ ಖರ್ಚುಗಳನ್ನು ಹೆಚ್ಚಿಸುತ್ತದೆ.

ಒಡೆದ ಅಥವಾ ನಿರುಪಯುಕ್ತ ನೀರಿನ ಟ್ಯಾಂಕ್:

ಬಳಕೆಯಿಲ್ಲದ ಅಥವಾ ಒಡೆದ ನೀರಿನ ಟ್ಯಾಂಕ್‌ಗಳು ನಕಾರಾತ್ಮಕ ಶಕ್ತಿಯ ತಾಣಗಳಾಗುತ್ತವೆ. ಇದರ ಪ್ರಭಾವದಿಂದ ಮನೆಯ ಸದಸ್ಯರು ನಿದ್ರಾಹೀನತೆ ಮತ್ತು ತೀವ್ರ ಆತಂಕದಂತಹ ಸಮಸ್ಯೆಗಳನ್ನು ಎದುರಿಸಬಹುದು. ಟ್ಯಾಂಕ್ ನಿರುಪಯುಕ್ತವಾಗಿದ್ದರೆ ಅದನ್ನು ಕೂಡಲೇ ವಿಲೇವಾರಿ ಮಾಡುವುದು ಅಥವಾ ದುರಸ್ತಿ ಮಾಡಿಸುವುದು ಒಳ್ಳೆಯದು.

ಇದನ್ನೂ ಓದಿ: ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬಾರದು ಏಕೆ? ವಾಸ್ತು ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಮುಳ್ಳಿನ ಗಿಡಗಳು ಮತ್ತು ಕಳ್ಳಿ ಗಿಡ:

ಟೆರೇಸ್ ಮೇಲೆ ತೋಟಗಾರಿಕೆ ಮಾಡುವುದು ಒಳ್ಳೆಯ ಅಭ್ಯಾಸವಾದರೂ, ವಾಸ್ತು ಪ್ರಕಾರ ಮುಳ್ಳಿನ ಗಿಡಗಳನ್ನು (ಗುಲಾಬಿಯನ್ನು ಹೊರತುಪಡಿಸಿ) ಬೆಳೆಸುವುದು ಸೂಕ್ತವಲ್ಲ. ವಿಶೇಷವಾಗಿ ಕಳ್ಳಿ ಗಿಡಗಳನ್ನು ಇಡುವುದರಿಂದ ಮನೆಯ ಸದಸ್ಯರ ನಡುವಿನ ಸಂಬಂಧಗಳು ಹದಗೆಡಬಹುದು ಮತ್ತು ಸಂಘರ್ಷಗಳು ಹೆಚ್ಚಾಗಬಹುದು.

ಹರಿದ ಬೂಟು ಮತ್ತು ಹಳೆಯ ಬಟ್ಟೆಗಳು:

ಉಪಯೋಗಕ್ಕೆ ಬಾರದ ಹಳೆಯ ಬೂಟು ಮತ್ತು ಹರಿದ ಬಟ್ಟೆಗಳನ್ನು ಟೆರೇಸ್ ಮೇಲೆ ಗುಡ್ಡೆ ಹಾಕುವುದರಿಂದ ಕೆಲಸದ ಸ್ಥಳದಲ್ಲಿ ಗೌರವ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದು ದುರದೃಷ್ಟವನ್ನು ಆಹ್ವಾನಿಸುತ್ತದೆ ಮತ್ತು ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡುತ್ತದೆ.

ಸಲಹೆ: ನಿಮ್ಮ ಮನೆಯ ಟೆರೇಸ್ ಅನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ. ಪ್ರತಿ ಶನಿವಾರ ಟೆರೇಸ್ ಒಮ್ಮೆ ಪರೀಕ್ಷಿಸಿ, ಅಲ್ಲಿ ಅನಗತ್ಯ ವಸ್ತುಗಳು ಶೇಖರಣೆಯಾಗದಂತೆ ನೋಡಿಕೊಂಡರೆ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ನಿಷೇಧಿತ ಇ-ಸಿಗರೇಟ್ ಸೇದಿದ್ದ ರಿಯಾನ್ ಪರಾಗ್​ಗೆ ಭಾರಿ ದಂಡ – Kannada News | Riyan Parag Fined by BCCI for E Cigarette in IPL 2026 Dressing Room | Vaping Ban Violation

ಐಪಿಎಲ್ 2026 (IPL 2026) ರಲ್ಲಿ ಏಪ್ರಿಲ್ 28 ರಂದು ನಡೆದಿದ್ದ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ (Riyan Parag) ಭಾರತದಲ್ಲಿ ನಿಷೇಧಕ್ಕೊಳಪಟ್ಟಿರುವ ಇ-ಸಿಗರೇಟ್ ಅನ್ನು ತಂಡದ ಡ್ರೆಸಿಂಗ್ ಕೋಣೆಯಲ್ಲಿ ಸೇದಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಪಂದ್ಯದ ಸಮಯದಲ್ಲಿ ಪರಾಗ್ ಇ-ಸಿಗರೇಟ್ ಸೇದುತ್ತಿರುವ ವಿಡಿಯೋ ಕ್ಷಣ ಮಾತ್ರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪರಾಗ್​ಗೆ ಬಿಸಿಸಿಐನಿಂದ ಶಿಕ್ಷೆ ಖಚಿತ ಎಂಬ ಸುದ್ದಿಯೂ ಹರಿದಾಡಿತ್ತು. ಅದರಂತೆ ಇದೀಗ, ಐಪಿಎಲ್ ನಿಯಮವನ್ನು ಉಲ್ಲಂಘಿಸಿ ಇ-ಸಿಗರೇಟ್ ಸೇದಿದ್ದ ರಿಯಾನ್ ಪರಾಗ್​ಗೆ ಬಿಸಿಸಿಐ ಭಾರಿ ಮೊತ್ತದ ಹಣವನ್ನು ದಂಡವಾಗಿ ವಿಧಿಸಿದೆ.

ಶೇಕಡಾ 25 ರಷ್ಟು ದಂಡ

ಡ್ರೆಸ್ಸಿಂಗ್ ಕೋಣೆಯಲ್ಲಿ ಇ-ಸಿಗರೇಟ್ ಸೇದಿದ್ದಕ್ಕಾಗಿ ಶಿಕ್ಷೆಯಾಗಿ, ರಿಯಾನ್ ಪರಾಗ್ ಅವರ ಪಂದ್ಯ ಶುಲ್ಕದಲ್ಲಿ ಶೇಕಡಾ 25 ರಷ್ಟು ಮೊತ್ತವನ್ನು ಕಡಿತಗೊಳಿಸಲಾಗಿದೆ. ಇದಲ್ಲದೆ, ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಐಪಿಎಲ್ 2026 ರಲ್ಲಿ ಪರಾಗ್​ಗಿಂತ ಮೊದಲು ಕೆಲವು ತಂಡಗಳ ನಾಯಕರಿಗೆ ದಂಡ ವಿಧಿಸಲಾಗಿದೆ, ಆದರೆ ವೇಪಿಂಗ್ ಅಥವಾ ಇ-ಸಿಗರೇಟ್ ಸೇದಿದ್ದಕ್ಕಾಗಿ ದಂಡ ಕಟ್ಟುತ್ತಿರುವ ಮೊದಲ ನಾಯಕ ರಿಯಾನ್ ಪರಾಗ್. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ರಿಯಾನ್ ಪರಾಗ್ ತಪ್ಪಿತಸ್ಥನೆಂದು ಸಾಬೀತಾಗಿದ್ದು, ಪರಾಗ್ ಕೂಡ ಮ್ಯಾಚ್ ರೆಫರಿ ಅಮಿತ್ ಶರ್ಮಾ ಅವರ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲವೆಂದು ಬಿಸಿಸಿಐ ತಿಳಿಸಿದೆ.

ಭಾರತದಲ್ಲಿ ಇ-ಸಿಗರೇಟ್‌ ನಿಷೇಧ

ಭಾರತದಲ್ಲಿ 2019 ರಿಂದ ವೇಪಿಂಗ್ ಅಥವಾ ಇ-ಸಿಗರೇಟ್‌ಗಳನ್ನು ನಿಷೇಧಿಸಲಾಗಿದೆ. ಹಾಗೆಯೇ ಆಯ್ದ ಪ್ರದೇಶಗಳನ್ನು ಹೊರತುಪಡಿಸಿ ಧೂಮಪಾನ ಮತ್ತು ವೇಪಿಂಗ್ ಮಾಡುವುದನ್ನು ಬಿಸಿಸಿಐ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಆದಾಗ್ಯೂ, ರಿಯಾನ್ ಪರಾಗ್ ಡ್ರೆಸ್ಸಿಂಗ್ ಕೋಣೆಯಲ್ಲಿ ವೇಪಿಂಗ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಪರಿಣಾಮವಾಗಿ, ಈಗ ಅವರಿಗೆ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ. ಆದಾಗ್ಯೂ, ರಿಯಾನ್ ಪರಾಗ್ ಸಿಗರೇಟ್ ಅಥವಾ ಇ-ಸಿಗರೇಟ್ ಸೇದಿದ ಏಕೈಕ ಕ್ರಿಕೆಟಿಗನಲ್ಲ. ಅವರಿಗೂ ಮೊದಲು, 2020 ರಲ್ಲಿ ಆರನ್ ಫಿಂಚ್ ಮತ್ತು SA20 ಲೀಗ್ ಸಮಯದಲ್ಲಿ ಎಬಿ ಡಿವಿಲಿಯರ್ಸ್ ಇ-ಸಿಗರೇಟ್ ಸೇದಿ ಸಿಕ್ಕಿಬಿದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೊತೆ ನೃತ್ಯ ಮಾಡಲು ಪೀಡಿಸಿ, ಮೊಬೈಲ್ ನಂಬರ್‌ಗಾಗಿ ಡಿಮ್ಯಾಂಡ್!: ಬೆಂಗಳೂರು ರೆಸಾರ್ಟ್‌ನಲ್ಲಿ ಮಹಿಳೆಗೆ ಪುರುಷರ ಗುಂಪು ಕಿರುಕುಳ – Kannada News | Bengaluru Resort Incident: Woman Harassed at Office Event, Sparks Outrage Online

ಬೆಂಗಳೂರು ರೆಸಾರ್ಟ್‌ನಲ್ಲಿ ಮಹಿಳೆಗೆ ಪುರುಷರ ಗುಂಪು ಕಿರುಕುಳ

ಬೆಂಗಳೂರು, ಏ,30: ಬೆಂಗಳೂರಿನಲ್ಲಿ ಕಾಮ ಪಿಶಾಚಿಗಳ ಹವಾಳಿ ಹೆಚ್ಚಾಗಿದೆ. ಪ್ರತಿದಿನ ಒಂದಲ್ಲ ಒಂದು ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಬೆಂಗಳೂರಿನ ರೆಸಾರ್ಟ್‌ನಲ್ಲಿ ಅಸಭ್ಯ ವರ್ತನೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ರಜೆಯಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ಪಡೆಯಲು ಮೋಜು, ವಿಶ್ರಾಂತಿ ಮತ್ತು ನಿರಾತಂಕವಾಗಿ ಇರುವ ಎಂದರೆ ಇಂತವರ ಕಾಟ ಹೆಚ್ಚಾಗಿದೆ. ಈ ಬಗ್ಗೆ ಮಹಿಳೆಯೊಬ್ಬರು ತಮ್ಮ ಕೆಟ್ಟ ಅನುಭವದ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆ ತನ್ನ ಕೆಲಸದ ನಿಮಿತ್ತ ನಗರದ ಸಮೀಪವಿರುವ ರೆಸಾರ್ಟ್‌ಗೆ ಹೋಗಿದ್ದರು. ಅದು ಅವರ ಆಫೀಸ್​​​ ಕೆಲಸ ಆಗಿರುವ ಕಾರಣ ಅಲ್ಲಿ ಪುರುಷರು ಕೂಡ ಇದ್ದರು. ಅಲ್ಲಿ ಕುಡಿಯಲು, ತಿನ್ನಲು ಎಲ್ಲವೂ ಇತ್ತು. ಆದರೆ ಈ ಮಹಿಳೆಗೆ ಅಲ್ಲಿ ಅವರ ಜತೆ ಕೆಲಸ ಬಗ್ಗೆ ಚರ್ಚೆ ಮಾಡಲು ಮಾತ್ರ ಇತ್ತು. ಇನ್ನು ಈ ಮಹಿಳೆಯ ಹೆಸರು ತುಷಿಕಾ ಅಗರ್ವಾಲ್ ಎಂದು, ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ

ತುಷಿಕಾ ಅಗರ್ವಾಲ್ ಊಟ ಮಾಡುತ್ತಿರುವ ಪುರುಷರ ಗುಂಪೊಂದು ಕೆಟ್ಟಾಗಿ ನೋಡುತ್ತಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಆ ಪುರುಷರು ನೋಡುತ್ತಿರುವುದನ್ನು ಸರಿಯಾಗಿ ಇವರು ಗಮನಿಸಿದ್ದಾರೆ. 20 ರಿಂದ 30 ಜನರ ಮದ್ಯಪಾನ ಮಾಡಿದ ಪುರುಷರು ನೀವು ನಮ್ಮ ಜತೆಗೆ ಡ್ಯಾನ್ಸ್​​ ಮಾಡುತ್ತೀರಾ ಎಂದು ಕೇಳಿದರು. ಆದರೆ ಇದಕ್ಕೆ ತುಷಿಕಾ ನಿರಾಕರಿಸಿದ್ದಾರೆ. ಆದರೆ ಈ ವಿಷಯವನ್ನು ಅಷ್ಟಕ್ಕೆ ಬಿಡಲಿಲ್ಲ. ಆ ಪುರುಷರಲ್ಲಿ ಒಬ್ಬ ನಂತರ ನೇರವಾಗಿ ಬಂದು ತುಷಿಕಾ ಅವರಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ನೃತ್ಯ ಮಾಡುತ್ತೀರಾ ಎಂದು ಕೇಳಲು ಆರಂಭಿಸಿದ್ದಾನೆ. ಇದಕ್ಕೂ ಕೂಡ ತುಷಿಕಾ ವಿರೋಧಿಸಿದ್ದಾರೆ.

ಇದನ್ನೂ ಓದಿ: ಪೋಷಕರೇ ಎಚ್ಚರ! ಮಕ್ಕಳ ಜೀವದ ಜೊತೆ ಆಟವಾಡಬೇಡಿ: ಬೆಂಗಳೂರಿನಲ್ಲಿ ಆರು ಮಕ್ಕಳ ಕಿಕ್ಕಿರಿದ ಸ್ಕೂಟರ್ ಜರ್ನಿ

ಇಲ್ಲಿದೆ ನೋಡಿ ವಿಡಿಯೋ:

ಇಷ್ಟಕ್ಕೆ ಬಿಡದ ಆ ಪುರುಷರ ಗುಂಪು ತುಷಿಕಾ ಅವರ ಮೊಬೈಲ್​​​ ನಂಬರ್​​​ನ್ನು ಅವರ ಆಫೀಸ್​​ ಸಿಬ್ಬಂದಿಗಳಿಂದ ಕೇಳಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾರೆ. ಆದರೆ ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದಾರೆಯೇ? ಎಂಬ ಬಗ್ಗೆ ಮಾಹಿತಿಯನ್ನು ಈ ವಿಡಿಯೋದಲ್ಲಿ ನೀಡಿಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ. ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರು ಭಾರೀ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಇಂತಹದೇ ಘಟನೆ ನನ್ನ ಜೀವನದಲ್ಲೂ ನಡೆದಿದೆ ಎಂದು ಮತ್ತೊಂದು ಮಹಿಳೆ ಕಮೆಂಟ್ ಮಾಡಿದ್ದಾರೆ. ಒಬ್ಬಂಟಿ ಮಹಿಳೆಯನ್ನು ಇಷ್ಟು ಕೆಟ್ಟ ಮನಸ್ಥಿತಿಯ ಪುರುಷರೊಂದಿಗೆ ಮೀಟಿಂಗ್​ ಮಾಡಲು ಹೇಗೆ ಕಳಿಸುತ್ತಾರೆ ಈ ಕಂಪನಿಯವರು ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಾಕ್ಷಿ ಇದ್ದರೆ ಇಲ್ಲಿ ಹಾಕಿ, ಇಲ್ಲದಿದ್ದರೆ ಇದು ಕಥೆ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ – Kannada News | KD The Devil Kannada Movie Review Ft Dhruva Sarja Sanjay Dutt Jogi Prem

ಕೆಡಿ: ದಿ ಡೆವಿಲ್

A

  • Time – 141 Minutes
  • Released – April 30, 2026
  • Language – Kannada
  • Genre – Action, Drama, Period, Thriller

Cast – ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ರಮೇಶ್ ಅರವಿಂದ್​, ರವಿಚಂದ್ರನ್, ಶಿಲ್ಪಾ ಶೆಟ್ಟಿ, ಯಶ್ ಶೆಟ್ಟಿ ಮುಂತಾದವರು.

Director – ಜೋಗಿ ಪ್ರೇಮ್

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಕೆಡಿ’ ಸಿನಿಮಾ (KD Movie) ಇಂದು (ಏಪ್ರಿಲ್ 30) ರಿಲೀಸ್ ಆಗಿದೆ. ಜೋಗಿ ಪ್ರೇಮ್ ನಿರ್ದೇಶನದ ಮಾಸ್ ಸಿನಿಮಾ ಆದ್ದರಿಂದ ಬಿಡುಗಡೆಗೂ ಮುನ್ನವೇ ಒಂದು ಹೈಪ್ ಸೃಷ್ಟಿ ಆಗಿತ್ತು. ಪಾತ್ರವರ್ಗದಲ್ಲಿ ದೊಡ್ಡ ದೊಡ್ಡ ಕಲಾವಿದರು ಇರುವುದರಿಂದ ಸಹಜವಾಗಿಯೇ ಸ್ಟಾರ್ ಮೆರುಗು ಹೆಚ್ಚಿತ್ತು. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಸಿನಿಮಾ ಆದ್ದರಿಂದ ಅದ್ದೂರಿತನಕ್ಕೆ ಕೊರತೆ ಇಲ್ಲ ಎಂಬ ನಂಬಿಕೆ ಕೂಡ ಪ್ರೇಕ್ಷಕರಿಗೆ ಇತ್ತು. ಹಾಗಾದರೆ, ಅಂದುಕೊಂಡಂತೆಯೇ ‘ಕೆಡಿ’ ಸಿನಿಮಾ ಮೂಡಿಬಂದಿದೆಯಾ? ಈ ವಿಮರ್ಶೆ ಓದಿ..

ನಿರ್ದೇಶಕ ಪ್ರೇಮ್ ಅವರು ಭೂಗತ ಜಗತ್ತು ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಸೇರಿಸಿ ಕಥೆ ಹೆಣೆದರೆ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಈಗ ಅವರು ‘ಕೆಡಿ: ದಿ ಡೆವಿಲ್’ ಸಿನಿಮಾದಲ್ಲೂ ಅದನ್ನೇ ಮಾಡಿದ್ದಾರೆ. ರೆಟ್ರೋ ಕಾಲದ ಒಂದು ಮಾಸ್ ಕಥೆಯನ್ನು ಪ್ರೇಕ್ಷಕರಿಗೆ ತೋರಿಸಿದ್ದಾರೆ. ಅದರ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರು ಇಷ್ಟಪಡುವಂತಹ ಎಮೋಷನಲ್ ಕಥೆಯನ್ನು ಬೆರೆಸಿದ್ದಾರೆ. ಕಥೆ ಹೀಗಿರುವುದರಿಂದ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಪ್ರಯತ್ನ ಆಗಿದೆ.

1975ರ ಕಾಲಘಟ್ಟದಲ್ಲಿ ‘ಕೆಡಿ’ ಸಿನಿಮಾದ ಕಥೆ ನಡೆಯುತ್ತದೆ. ಅಣ್ಣನೇ ಸರ್ವಸ್ವ ಎಂದುಕೊಂಡು ಬದುಕುತ್ತಿರುವ ಕಾಳಿದಾಸ ಅಲಿಯಾಸ್ ಕೆಡಿ ಎಂಬಾತನ ಕಥೆ ಈ ಸಿನಿಮಾದಲ್ಲಿದೆ. ಮನಸ್ಸಿನಲ್ಲಿ ಕಲ್ಮಶವೇ ಇಲ್ಲದ ಆತ ಯಾರ ಮೇಲೂ ಕೈ ಎತ್ತಲ್ಲ. ಆದರೆ ಒಂದು ದಿನ ಅತಿ ಭಯಾನಕವಾದ ರಾಕ್ಷಸನ ರೂಪದಲ್ಲಿ ಭೂಗತ ಲೋಕಕ್ಕೆ ಎಂಟ್ರಿ ನೀಡುತ್ತಾನೆ. ಆ ರೀತಿ ಬದಲಾವಣೆಗೆ ಕಾರಣ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ಕೆಡಿ’ ಸಿನಿಮಾವನ್ನು ಸಿಕ್ಕಾಪಟ್ಟೆ ಅದ್ದೂರಿಯಾಗಿ ಸಿದ್ಧಪಡಿಸಲಾಗಿದೆ. ಬೃಹತ್ ಸೆಟ್​ಗಳಲ್ಲಿಯೇ ಬಹುತೇಕ ಸನ್ನಿವೇಶಗಳ ಶೂಟಿಂಗ್ ನಡೆದಿದೆ. ಕಾಳಿ ಕಥಾನಾಯಕ ಆಗಿದ್ದರೂ ಆತನ ಸುತ್ತಮುತ್ತ ಇರುವ ಎಲ್ಲ ಪಾತ್ರಗಳು ಕೂಡ ಅಷ್ಟೇ ಮಹತ್ವ ಹೊಂದಿವೆ. ಹಾಗಾಗಿ ಎಲ್ಲ ಪಾತ್ರಗಳ ಪರಿಚಯ ಮಾಡಿಕೊಡಲು ಮೊದಲಾರ್ಧದಲ್ಲಿ ಹೆಚ್ಚು ಸಮಯ ಹಿಡಿದಿದೆ. ಹಾಗಾಗಿ ಕಥೆ ವೇಗ ಪಡೆದುಕೊಳ್ಳಲು ಕೊಂಚ ವಿಳಂಬ ಆಯ್ತು ಎನಿಸುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಸಿನಿಮಾ ವೇಗವಾಗಿ ಸಾಗುತ್ತದೆ.

ಧ್ರುವ ಸರ್ಜಾ ಅವರ ಮ್ಯಾನರಿಸಂ ಇಷ್ಟಪಡುವ ಅಭಿಮಾನಿ ವರ್ಗ ಇದೆ. ಅಂಥ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಮನರಂಜನೆ ನೀಡುತ್ತದೆ. ಧ್ರುವ ಅವರ ಎಂಟ್ರಿ ಸಾಮಾನ್ಯವಾಗಿದೆ. ಆದರೆ ಕಥೆ ಮುಂದುವರಿದಂತೆಲ್ಲ ಆ ಪಾತ್ರ ಹೆಚ್ಚು ರಗಡ್ ಆಗುತ್ತದೆ. ಕೈಯಲ್ಲಿ ಮಚ್ಚು ಹಿಡಿದ ಬಳಿಕ ಆ್ಯಕ್ಷನ್ ಮೂಲಕ ಅವರು ಅಬ್ಬರಿಸುತ್ತಾರೆ. ಹೀರೋ ಧ್ರುವ ಸರ್ಜಾ ಮತ್ತು ವಿಲನ್ ಸಂಜಯ್ ದತ್ ನಡುವಿನ ಮುಖಾಮುಖಿಯಿಂದಾಗಿ ಚಿತ್ರದಲ್ಲಿ ಮಾಸ್ ಅಂಶ ಹೆಚ್ಚಿದೆ.

ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರನ್ನು ಅಭಿಮಾನಿಗಳು ಎರಡು ಶೇಡ್​​ನಲ್ಲಿ ನೋಡಬಹುದು. ಒಂದು ಶೇಡ್​ನಲ್ಲಿ ಮುಗ್ಧನಾಗಿ ನಗಿಸುತ್ತಾರೆ. ಇನ್ನೊಂದು ಶೇಡ್​​ನಲ್ಲಿ ರಕ್ತದೋಕುಳಿ ಹರಿಸುತ್ತಾರೆ. ಅವರಿಗೆ ನಟಿ ರೀಷ್ಮಾ ನಾಣಯ್ಯ ಜೋಡಿ ಆಗಿದ್ದಾರೆ. ನಾಯಕಿಯ ಪಾತ್ರ ಆರಂಭದಲ್ಲಿ ಸ್ವಲ್ಪ ಅಸಹಜ ಎನಿಸುತ್ತದೆ. ಕಥೆ ಎಮೋಷನಲ್ ತಿರುವು ಪಡೆದುಕೊಂಡಾಗ ರೀಷ್ಮಾ ಅವರು ಆ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತಾರೆ.

ಇದನ್ನೂ ಓದಿ: ‘ಕೆಡಿ ಬ್ಲಾಕ್​​ಬಸ್ಟರ್​’; ಪ್ರೇಮ್ ನಿರ್ದೇಶನಕ್ಕೆ ಮೆಚ್ಚುಗೆ, ಕಿಚ್ಚನ ಎಂಟ್ರಿಗೆ ಸಿಳ್ಳೆ, ಚಪ್ಪಾಳೆ

ರಮೇಶ್ ಅರವಿಂದ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ಯಶ್ ಶೆಟ್ಟಿ ಮುಂತಾದವರು ನಿಭಾಯಿಸಿರುವ ಪಾತ್ರಗಳು ಕೂಡ ಹೆಚ್ಚು ಹೈಲೈಟ್ ಆಗಿವೆ. ಅಂದಹಾಗೆ, ಈ ಸಿನಿಮಾದಲ್ಲಿ ಪ್ರೇಕ್ಷಕರಿಗೆ ತೋರಿಸಿರುವುದು ಅರ್ಧ ಕಥೆ ಮಾತ್ರ! ಹೌದು, ಕಾಳಿದಾಸನ ಕಥೆ ಇನ್ನೂ ಮುಂದುವರಿಯಲಿದೆ. ಸದ್ಯಕ್ಕೆ ಕಾಲ ಭೈರವನ (ಕಿಚ್ಚ ಸುದೀಪ್) ಎಂಟ್ರಿಯೊಂದಿಗೆ ಮೊದಲ ಪಾರ್ಟ್ ಮುಗಿದಿದೆ. ಮುಂದಿನದ್ದನ್ನು ‘ಕೆಡಿ 2’ ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂಬುದನ್ನು ಕ್ಲೈಮ್ಯಾಕ್ಸ್​​ನಲ್ಲಿ ತಿಳಿಸಲಾಗಿದೆ. ಜೊತೆಗೆ ಒಂದು ಟ್ವಿಸ್ಟ್ ಕೂಡ ಇದೆ.

ಅದ್ದೂರಿಯಾಗಿ ಸಿನಿಮಾವನ್ನು ಕಟ್ಟಿಕೊಡುವಲ್ಲಿ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಹಿಂದೆ ಬಿದ್ದಿಲ್ಲ. 1975ರ ಕಾಲಘಟ್ಟವನ್ನು ಮರುಸೃಷ್ಟಿ ಮಾಡಲು ಲೆಕ್ಕವಿಲ್ಲದಷ್ಟು ಸೆಟ್​ಗಳನ್ನು ಹಾಕಿ, ಲೆಕ್ಕವಿಲ್ಲದಷ್ಟು ಪ್ರಾಪರ್ಟಿಗಳನ್ನು ಬಳಸಲಾಗಿದೆ. ಹಾಡುಗಳು ಸಹ ಶ್ರೀಮಂತಿಕೆಯಿಂದ ಕೂಡಿವೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ವಿಲಿಯಂ ಡೇವಿಡ್, ಕಲಾ ನಿರ್ದೇಶಕ ಮೋಹನ್ ಬಿ. ಕೆರೆ ಮುಂತಾದ ತಂತ್ರಜ್ಞರ ಕೆಲಸ ಪ್ರತಿ ಫ್ರೇಮ್​​ನಲ್ಲೂ ಎದ್ದು ಕಾಣಿಸುತ್ತದೆ. ನೋರಾ ಫತೇಹಿ ನರ್ತಿಸಿದ್ದ ವಿವಾದಾತ್ಮಕ ಸಾಹಿತ್ಯದ ಹಾಡನ್ನು ತೆಗೆದುಹಾಕಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ – Kannada News | Change Your Law Supreme Court pulls up Centre Over minor’s Pregnancy Termination

ನವದೆಹಲಿ, ಏಪ್ರಿಲ್ 30: ಅತ್ಯಾಚಾರಕ್ಕೊಳಗಾದ 15 ವರ್ಷದ ಮಗುವಿನ 31 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಹಿಂದಿನ ಆದೇಶದ ವಿರುದ್ಧ ಸರ್ಕಾರ ಸಲ್ಲಿಸಿದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ತರಾಟೆಗೆ ತೆಗೆದುಕೊಂಡಿತು. ಯಾವುದೇ ಕಾರಣಕ್ಕೂ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಗರ್ಭಧಾರಣೆಯನ್ನು ಹೊರುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅತ್ಯಾಚಾರ ಸಂತ್ರಸ್ತೆ 20 ವಾರಗಳನ್ನು ಮೀರಿದ ಅನಗತ್ಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅನುಮತಿಸಲು ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಅಪ್ರಾಪ್ತ ಬಾಲಕಿ ಸೇರಿದಂತೆ ಅತ್ಯಾಚಾರದಿಂದ ಗರ್ಭಿಣಿಯಾದವರಿಗೆ ಅವರ ದೇಹದ ಮೇಲೆ ಸಂಪೂರ್ಣ ಹಕ್ಕಿರುತ್ತದೆ ಎಂದಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು 15 ವರ್ಷದ ಬಾಲಕಿಯೊಬ್ಬಳು ತನ್ನ 30 ವಾರಗಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಏಮ್ಸ್ ಸಲ್ಲಿಸಿದ ಮನವಿಗೆ ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿತು. ಆ ಬಾಲಕಿಯ ಗರ್ಭಪಾತಕ್ಕೆ ಅನುವು ಮಾಡಿಕೊಡುವ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿರುವ ಆಸ್ಪತ್ರೆಯ ಬಗ್ಗೆ ಕೋರ್ಟ್ ಅಸಮಾಧಾನ ಹೊರಹಾಕಿದೆ.

ಇದನ್ನೂ ಓದಿ: ಸಂಗ್ರಹವಾದ ಹಣದಲ್ಲಿ ಶೇ. 80ರಷ್ಟು ನ್ಯಾಯಾಂಗಕ್ಕೆ ಕೊಡಿ”: ಸಿಎಂ ಸಮ್ಮುಖದಲ್ಲೇ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಸುಪ್ರೀಂ ಕೋರ್ಟ್ ಜಡ್ಜ್

“ಅತ್ಯಾಚಾರ ಇತ್ಯಾದಿಗಳಿಂದಾಗಿ ಗರ್ಭಧಾರಣೆ ಸಂಭವಿಸಿದಾಗ ಗರ್ಭಪಾತಕ್ಕೆ ಸಮಯದ ಮಿತಿ ಇರುವುದಿಲ್ಲ ಎಂದು ದಯವಿಟ್ಟು ನಿಮ್ಮ ಕಾನೂನನ್ನು ತಿದ್ದುಪಡಿ ಮಾಡಿ. ಅಂತಹ ಪ್ರಕರಣದ ವಿಚಾರಣೆಗಳು ಒಂದು ವಾರದೊಳಗೆ ಪೂರ್ಣಗೊಳ್ಳುವಂತೆ ಕಾನೂನನ್ನು ತಿದ್ದುಪಡಿ ಮಾಡಿ. ವಿಚಾರಣೆಯ ಬಾಕಿ ಇರುವ ಆಘಾತವನ್ನು ಆ ಮಗು ಏಕೆ ಅನುಭವಿಸಬೇಕು” ಎಂದು ಸಿಜೆಐ ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

“ಅತ್ಯಾಚಾರದ ನಂತರ ಆಕೆ ಅನುಭವಿಸಿದ ಸಂಕಟವನ್ನು ಯಾವುದೂ ಸರಿದೂಗಿಸಲು ಸಾಧ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಇಂದು ಬೆಳಿಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಖಂಡಿಸುತ್ತಾ ಹೇಳಿದ್ದಾರೆ. “ನಾಗರಿಕರಿಗೆ ಗೌರವ ನೀಡಿ, ಮೇಡಂ. ನಿಮಗೆ ನ್ಯಾಯಾಲಯದ ಆದೇಶ ಪ್ರಶ್ನಿಸಲು ಯಾವುದೇ ಅಧಿಕಾರವಿಲ್ಲ. ಸಂತ್ರಸ್ತೆ ಅಥವಾ ಅವರ ಕುಟುಂಬ ಮಾತ್ರ ಪ್ರಶ್ನಿಸಬಹುದು. ನಾವು ಜನರ ವೈಯಕ್ತಿಕ ಆಯ್ಕೆಗಳನ್ನು ಗೌರವಿಸುತ್ತೇವೆ. ಅದನ್ನು ನೀವು ಸಹ ಗೌರವಿಸಬೇಕು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 3 ತಿಂಗಳ ಮೇಲಿನ ಮಗುವನ್ನು ದತ್ತು ಪಡೆದ ತಾಯಂದಿರಿಗೂ ಹೆರಿಗೆ ರಜೆ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಸುಪ್ರೀಂ ಕೋರ್ಟ್ ಈ ಹಿಂದೆ ಅಪ್ರಾಪ್ತ ವಯಸ್ಕಳ ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಅಂತ್ಯಗೊಳಿಸಲು ಅನುಮತಿ ನೀಡಿತ್ತು. ಗರ್ಭಧಾರಣೆಯನ್ನು ಮುಂದುವರಿಸಲು ಅನುಮತಿ ನೀಡುವುದು ಆಕೆಯ ಘನತೆಯಿಂದ ಬದುಕುವ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಹೇಳಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version