Headlines

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯ ಗರ್ಭಪಾತದ ಕಾನೂನು ಬದಲಾಯಿಸಿ; ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ – Kannada News | Change Your Law Supreme Court pulls up Centre Over minor’s Pregnancy Termination

ನವದೆಹಲಿ, ಏಪ್ರಿಲ್ 30: ಅತ್ಯಾಚಾರಕ್ಕೊಳಗಾದ 15 ವರ್ಷದ ಮಗುವಿನ 31 ವಾರಗಳ ಗರ್ಭಧಾರಣೆಯನ್ನು ಅಂತ್ಯಗೊಳಿಸುವ ಹಿಂದಿನ ಆದೇಶದ ವಿರುದ್ಧ ಸರ್ಕಾರ ಸಲ್ಲಿಸಿದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಇಂದು ತರಾಟೆಗೆ ತೆಗೆದುಕೊಂಡಿತು. ಯಾವುದೇ ಕಾರಣಕ್ಕೂ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯನ್ನು ಗರ್ಭಧಾರಣೆಯನ್ನು ಹೊರುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅತ್ಯಾಚಾರ ಸಂತ್ರಸ್ತೆ 20 ವಾರಗಳನ್ನು ಮೀರಿದ ಅನಗತ್ಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಅನುಮತಿಸಲು ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ಸುಪ್ರೀಂ…

Read More

ಧಾರವಾಡದಲ್ಲಿ ಬೌದ್ಧ ಸನ್ಯಾಸಿಯ ನಿಗೂಢ ಸಾವು: ಮೃತದೇಹ ಪತ್ತೆ – Kannada News | Dharwad: Mysterious death of Buddhist monk; Dead Body found

ಸನ್ಯಾಸಿ ಥಾಶಿದೊಂಡುImage Credit source: tv9 kannada ಧಾರವಾಡ, ಏಪ್ರಿಲ್​ 30: ಧಾರವಾಡ ಬೈಪಾಸ್ ಬಳಿ ಬೌದ್ಧ ಸನ್ಯಾಸಿಯ (Buddhist monk) ಮೃತದೇಹ (dead body) ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪಟ್ಟಣದ ಟಿಬೆಟಿಯನ್ ಮೂಲದ ಥಾಶಿದೊಂಡು(39) ಮೃತ ಬೌದ್ಧ ಸನ್ಯಾಸಿ. ಮುಖದ ಮೇಲೆ ಗಾಯಗಳಾಗಿದ್ದು, ಬೇರೆಡೆ ಕೊಲೆಗೈದು ಶವ ತಂದು ಎಸೆದುಹೋಗಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹಸೆಮಣೆ ಏರಬೇಕಿದ್ದ ಯುವಕ ಭೀಕರ ಅಪಘಾತದಲ್ಲಿ…

Read More

‘ರಾಕಾ’ ಇತಿಹಾಸ ಸೃಷ್ಟಿಸಲಿದೆ: ವಿಎಫ್​​ಎಕ್ಸ್ ಮೇಲ್ವಿಚಾರಕ ಹೇಳಿದ್ದೇನು? – Kannada News | SFX team supervisor talks about Allu Arjun’s Raaka Movie

ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲಿ ಒಟ್ಟಿಗೆ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗಲೇ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಈಗಾಗಲೇ ಉತ್ತರ ಭಾರತದ ಕೆಲವು ವಿತರಕರು ಸಿನಿಮಾದ ಹಕ್ಕುಗಳಿಗಾಗಿ ನಿರ್ಮಾಣ ಸಂಸ್ಥೆಯನ್ನು ಎಡತಾಕುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆ ಆಗಿತ್ತು. ಇದೀಗ ಸಿನಿಮಾದ ಕುರಿತು ಒಂದು ಆಸಕ್ತಿಕರ ಅಪ್‌ಡೇಟ್ ಹೊರಬಿದ್ದಿದೆ. ‘ರಾಕಾ’ ಸಿನಿಮಾಕ್ಕಾಗಿ ಕೆಲಸ ಮಾಡಿರುವ ಎಸ್‌ಎಫ್‌ಎಕ್ಸ್ (SFX) ಮೇಲ್ವಿಚಾರಕರು, ಸಿನಿಮಾದ…

Read More

Kailash Manasarovar Yatra 2026: ಕೈಲಾಸ ಯಾತ್ರೆಗೆ ನೋಂದಣಿ ಆರಂಭ; 60 ವರ್ಷಗಳ ನಂತರ ಸಂಭವಿಸಿದೆ ಅಪರೂಪದ ‘ದೈವಿಕ ಸಂಯೋಗ’! – Kannada News | Kailash Manasarovar Yatra 2026 Registration Open: ‘Fire Horse Year’ Pilgrimage for Moksha

ಕೈಲಾಸ ಮಾನಸ ಸರೋವರ ಯಾತ್ರೆImage Credit source: Pinterest ಶಿವನ ವಾಸಸ್ಥಾನವೆಂದೇ ನಂಬಲಾದ ಪವಿತ್ರ ಕೈಲಾಸ ಪರ್ವತದ ದರ್ಶನ ಪಡೆಯಲು ಬಯಸುವ ಭಕ್ತರಿಗೆ ಒಂದು ಮಹತ್ವದ ಸುದ್ದಿ ಇಲ್ಲಿದೆ. 2026ರ ಸಾಲಿನ ಕೈಲಾಸ ಮಾನಸ ಸರೋವರ ಯಾತ್ರೆಗೆ ಇಂದಿನಿಂದ ಅಧಿಕೃತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಈ ವರ್ಷದ ಯಾತ್ರೆಯು ಕೇವಲ ಧಾರ್ಮಿಕ ಪ್ರಯಾಣವಷ್ಟೇ ಅಲ್ಲದೆ, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದಲೂ ಅತ್ಯಂತ ವಿಶೇಷವೆನಿಸಿದೆ. 60 ವರ್ಷಗಳ ನಂತರ ಬಂದಿದೆ ‘ಅಗ್ನಿ ಕುದುರೆ ವರ್ಷ’ದ ಶುಭ ಯೋಗ! ಈ ಬಾರಿಯ…

Read More

‘ಎಲ್ಲವನ್ನೂ ತಡೆಯುತ್ತಾ ಹೋದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಹುದು’; ಅರ್ಜುನ್​ ಕಪೂರ್​ಗೆ ಕೋರ್ಟ್ ಕಿವಿಮಾತು – Kannada News | Arjun Kapoor Personality Rights: Delhi HC Cautions on Free Speech vs. AI Deepfakes

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ತಮ್ಮ ತಮ್ಮ ಹೆಸರು, ಫೋಟೋ ಮತ್ತು ಧ್ವನಿಯನ್ನು (Personality Rights) ಅನುಮತಿಯಿಲ್ಲದೆ ಬಳಸುವುದನ್ನು ತಡೆಯಬೇಕು ಎಂದು ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರುತ್ತಿದ್ದಾರೆ. ಎಲ್ಲರಿಗೂ ಕೋರ್ಟ್ ಅನುಮತಿ ನೀಡಿ ಆದೇಶ ಹೊರಡಿಸಿದೆ. ಅರ್ಜುನ್ ಕಪೂರ್ ಇತ್ತೀಚೆಗೆ ಇದೇ ರೀತಿಯ ಅರ್ಜಿಯನ್ನು ದೆಹಲಿ ಹೈಕೋರ್ಟ್​​ಗೆ ಸಲ್ಲಿ ಮಾಡಿದ್ದು, ಕೃತಕ ಬುದ್ಧಿಮತ್ತೆ (AI) ಬಳಸಿ ತಯಾರಿಸಿದ ಅಶ್ಲೀಲ ವಿಡಿಯೋಗಳು ಮತ್ತು ಡೀಪ್‌ಫೇಕ್ ದೃಶ್ಯಗಳ ವಿರುದ್ಧ ಅವರು ರಕ್ಷಣೆ ಕೋರಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್…

Read More

ನಾಯಕತ್ವ ಗಟ್ಟಿಮಾಡಿಕೊಳ್ಳಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್! – Kannada News | Power Tussle In Karnataka Congress: intelligence chief Changed By CM Siddaramaiah fourth Time In History

ಬೆಂಗಳೂರು (ಏಪ್ರಿಲ್.30): ರಾಜ್ಯ ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಕೋಲಾಹಲವನ್ನೇ ಸೃಷ್ಟಿಸಿದೆ. ಸಿಎಂ ಸ್ಥಾನ ಬೇಕೇ ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಈಗಾಗಲೇ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸುತ್ತಲೇ ಬಂದಿದ್ದಾರೆ. ಆದ್ರೆ, ಇದಕ್ಕೆ ಹೈಕಮಾಂಡ್ ತಲೆಕೆಡಿಸಿಕೊಂಡಂತಿಲ್ಲ. ಇನ್ನೊಂದೆಡೆ ಡಿಕೆ ಶಿವಕುಮಾರ್ ಟಕ್ಕರ್ ಕೊಡಲು ಇತ್ತ ಸಿದ್ದರಾಮಯ್ಯ ಹಾಗೂ ತಂಡ ಮೆಗಾ ತಂತ್ರಗಾರಿಗೆ ಮಾಡುತ್ತಿದ್ದು. ಇತಿಹಾಸದಲ್ಲೇ ಮೊದಲು ಬರೋಬ್ಬರಿ ನಾಲ್ಕು ಬಾರಿ ಗುಪ್ತಚರ ಮುಖ್ಯಸ್ಥರ ಬದಲಾವಣೆ ಮಾಡಲಾಗಿದೆ. ಗುಪ್ತಚರ ಮುಖ್ಯಸ್ಥರ…

Read More

ಬಂಧನದ ಮೂಲಕ ನನ್ನನ್ನು ಅವಮಾನಿಸುವ ಅಗತ್ಯವಿಲ್ಲ: ಪವನ್​ ಖೇರಾ – Kannada News | Pawan Khera Bail Plea: SC Reserves Order on Fake Passport and Defamation Case

ನವದೆಹಲಿ, ಏಪ್ರಿಲ್ 30: ಕಾಂಗ್ರೆಸ್ ನಾಯಕ ಪವನ್ ಖೇರಾ(Pawan Khera) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಸಲ್ಲಿಸಿದ ದೂರಿನ ಮೇರೆಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ನ್ಯಾಯಮೂರ್ತಿ ಅತುಲ್ ಚಂದೂರ್ಕರ್ ಅವರ ಪೀಠವು ಈ ವಿಚಾರಣೆ ನಡೆಸಿತು. ಖೇರಾ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ…

Read More

ಬೀದರ್‌: ಭಾಲ್ಕಿಯಲ್ಲಿ ಭೀಕರ ಅಪಘಾತ, ಬೈಕ್-ಕಾರು ಮುಖಾಮುಖಿ ಡಿಕ್ಕಿಯಾಗಿ ಮೂವರು ಯುವಕರ ದುರ್ಮರಣ – Kannada News | Bidar Road Accident: Three Youths Killed in Bike Car Collision; Lorry Catches Fire Near Bhalki

ಬೀದರ್, ಏಪ್ರಿಲ್ 30: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಬುಧವಾರ (ಏಪ್ರಿಲ್ 29) ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಮತ್ತು ಕಾರಿನ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿ ಬೆಚ್ಚಿಬೀಳಿಸುವಂತಿದೆ. ಭಾಲ್ಕಿ ತಾಲ್ಲೂಕಿನ ಕಳಸದಾಳ ವ್ಯಾಪ್ತಿಯ ಮಹಾತ್ಮಾ ಗಾಂಧಿ ಸಕ್ಕರೆ ಕಾರ್ಖಾನೆಯ ಬಳಿ ದುರ್ಘಟನೆ ಸಂಭವಿಸಿದೆ. ಮೃತರನ್ನು ಕಳಸದಾಳ ಗ್ರಾಮದ ವಿಠ್ಠಲ ಪಾಂಚಾಳ (25), ಮಹೇಶ್ ಬಿರಾದಾರ (25) ಮತ್ತು ಕಾಕನಾಳ ಗ್ರಾಮದ ರಾಜೇಂದ್ರ ಪಾಂಚಾಳ (28) ಎಂದು…

Read More

Vinod Kambli: ವಿನೋದ್ ಕಾಂಬ್ಳಿ ಈಗ ಹೇಗಿದ್ದಾರೆ ನೋಡಿ – Kannada News | Vinod Kambli’s Wankhede appearance during IPL match

ಮುಂಬೈ: ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಕುರಿತಾದ ತೀವ್ರ ಆತಂಕಕಾರಿ ಸುದ್ದಿಗಳ ನಡುವೆಯೇ, ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವಿನೋದ್ ಕಾಂಬ್ಲಿ ಅವರು ಬುಧವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಬಂದಿದ್ದ ಕಾಂಬ್ಲಿ ಅವರನ್ನು ಕಂಡ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಬರಮಾಡಿಕೊಂಡಿದ್ದಾರೆ. ಕಾಂಬ್ಳಿ ಅವರನ್ನು ನೋಡಿದ ತಕ್ಷಣ ನೆರೆದಿದ್ದ ಅಭಿಮಾನಿಗಳು “ಗೆಟ್ ವೆಲ್ ಸೂನ್ ಸರ್” (ಶೀಘ್ರ ಗುಣಮುಖರಾಗಿ ಸರ್) ಎಂದು ಕೂಗಿ ತಮ್ಮ ಪ್ರೀತಿಯನ್ನು…

Read More

ಜೆಪಿ ನಗರದಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ; 12 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು – Kannada News | JP Nagar Incident: Heavy Rain Causes Tree to Fall on Car, Public Outcry Over Official Inaction

ಬೆಂಗಳೂರು, ಏ.30: ಸಿಲಿಕಾನ್​ ಸಿಟಿಯ ಜೆಪಿ ನಗರ 24ನೇ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಕಾರಿನ ಮೇಲೆ ಭಾರೀ ಮಳೆಗೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದರೂ, ಸುಮಾರು 12 ಗಂಟೆಗಳಾದರೂ ಜಿಬಿ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರವು ಕಾರ್ಯಾಚರಣೆ ನಡೆಸಿಲ್ಲ. ಮರ ಬಿದ್ದ ಪರಿಣಾಮವಾಗಿ ರಸ್ತೆಯ ಒಂದು ಬದಿಯ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನಗಳು ಒಂದೇ ರಸ್ತೆಯಲ್ಲಿ ಎರಡೂ ಕಡೆ ಚಲಿಸಬೇಕಾದ ಪರಿಸ್ಥಿತಿ…

Read More