‘ದೊಡ್ಡ ಅವಮಾನ’; ಹೀನಾಯ ಸೋಲನ್ನು ಅರಗಿಸಿಕೊಳ್ಳದ ಮಾಜಿ ಆಸೀಸ್ ಆಟಗಾರರು – Kannada News | Historic Defeat: Bangladesh Stuns Australia, Ponting and Hayden Demand Immediate Changes

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ತವರು ನೆಲದಲ್ಲಿ ಎದುರಿಸಿದ ಹೀನಾಯ ಸೋಲು ಕ್ರೀಡಾ ಜಗತ್ತನ್ನು ಬೆಚ್ಚಿಬೀಳಿಸಿದೆ. ಏಕೆಂದರೆ ಕ್ರಿಕೆಟ್ ಜಗತ್ತಿನಲ್ಲಿ ಆಸ್ಟ್ರೇಲಿಯಾ ತಂಡದ ಪ್ರಾಬಲ್ಯ ಪದಗಳಿಗೆ ನಿಲುಕದ್ದು. ಅವರ ಸ್ವಂತ ನೆಲದಲ್ಲಿ ಅವರನ್ನು ಸೋಲಿಸುವುದು ಎಂತಹ ಬಲಿಷ್ಠ ತಂಡಕ್ಕೂ ದುಃಸ್ವಪ್ನ. ಹೀಗಿರುವಾಗ ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧದ ಐತಿಹಾಸಿಕ ಸೋಲು ಆಸೀಸ್ ತಂಡದ ಮಾಜಿ ನಾಯಕರನ್ನು ಮತ್ತು ಆಟಗಾರರನ್ನು ಕೆರಳಿಸಿದೆ. ರಿಕಿ ಪಾಂಟಿಂಗ್ ಮತ್ತು ಮ್ಯಾಥ್ಯೂ ಹೇಡನ್ ಅವರಂತಹ ಮಾಜಿ ಆಟಗಾರರು ಪ್ರಸ್ತುತ ತಂಡದ ಪ್ರದರ್ಶನವನ್ನು ಟೀಕಿಸಿದ್ದು, ಇಡೀ ತಂಡವನ್ನು ಸಂಪೂರ್ಣವಾಗಿ ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ಬಾಂಗ್ಲಾದೇಶ 9 ವಿಕೆಟ್‌ಗಳಿಂದ ಐತಿಹಾಸಿಕ ಗೆಲುವು ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಈ ಗೆಲುವಿನೊಂದಿಗೆ, ಬಾಂಗ್ಲಾದೇಶ ತಂಡವು ಹೊಸ ಇತಿಹಾಸವನ್ನು ಬರೆದಿದ್ದು, ಆಸ್ಟ್ರೇಲಿಯಾದ ನೆಲದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ಮೊದಲ ಗೆಲುವು ಸಾಧಿಸಿದ ಮೊದಲ ಏಷ್ಯನ್ ತಂಡವೆಂಬ ದಾಖಲೆ ಬರೆದಿದೆ. ಬಾಂಗ್ಲಾದೇಶ ಕೇವಲ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಗೆಲುವು ದಾಖಲಿಸಿದೆ. ಇದು ಆಸೀಸ್ ತಂಡದ ಮಾಜಿ ಆಟಗಾರರನ್ನು ಕೆರಳಿಸಿದೆ.

ನಾಚಿಕೆಗೇಡಿನ ವಿಷಯ; ಪಾಂಟಿಂಗ್ ಫೈರ್

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ತವರು ಪ್ರೇಕ್ಷಕರ ಮುಂದೆ ದುರ್ಬಲ ತಂಡಗಳ ವಿರುದ್ಧದ ಸೋಲಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಆಸ್ಟ್ರೇಲಿಯಾ ಕ್ರಿಕೆಟ್‌ಗೆ ‘ದೊಡ್ಡ ಅವಮಾನ’ ಎಂದು ಬಣ್ಣಿಸಿರುವ ಅವರು ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡದ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ ಮತ್ತು ತಂಡದಲ್ಲಿ ತಕ್ಷಣವೇ ಬದಲಾವಣೆಗಳನ್ನು ಮಾಡಬೇಕಾಗಿದೆ. ಆಟಗಾರರನ್ನು ಕೈಬಿಡುವ ಅಭ್ಯಾಸವನ್ನು ನಾನು ಸಾಮಾನ್ಯವಾಗಿ ವಿರೋಧಿಸುತ್ತೇನೆ.

ಏಕೆಂದರೆ ಒಬ್ಬ ನಾಯಕನಾಗಿ, ತಂಡವನ್ನು ಒಂದು ತಂಡವಾಗಿ ಮುನ್ನಡೆಸುವುದು ನನ್ನ ಆದ್ಯತೆಯಾಗಿದೆ. ಪರಿಸ್ಥಿತಿ ಸಂಪೂರ್ಣವಾಗಿ ಕೈ ಮೀರುವವರೆಗೆ ಆಟಗಾರರನ್ನು ಕೈಬಿಡಲು ನಾನು ಬಯಸುವುದಿಲ್ಲ. ಆದರೆ ಡಾರ್ವಿನ್ ಟೆಸ್ಟ್‌ಗೆ ಮುನ್ನ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಮತ್ತು ನಂಬರ್ 3 ಸ್ಥಾನಗಳಲ್ಲಿ ಬದಲಾವಣೆ ಮಾಡುವುದರಿಂದ ಹೆಚ್ಚಿನ ಹಾನಿಯಾಗುತ್ತಿರಲಿಲ್ಲ. ಇತ್ತೀಚಿನ ಸೋಲಿನ ನಂತರ ತಂಡದಲ್ಲಿನ ಬದಲಾವಣೆಯನ್ನು ಇನ್ನು ಮುಂದೆ ಮುಂದೂಡಬಾರದು ಎಂದು ಪಾಂಟಿಂಗ್ ಕ್ರಿಕೆಟ್ ಆಸ್ಟ್ರೇಲಿಯಾಗೆ ಎಚ್ಚರಿಕೆ ನೀಡಿದ್ದಾರೆ.

ಬ್ಯಾಟಿಂಗ್ ಕ್ರಮಾಂಕವನ್ನೇ ಬದಲಾಯಿಸಬೇಕು

ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಕೂಡ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಭರವಸೆ ತೋರಿಸುತ್ತಿರುವ ಯುವ ಆಟಗಾರರಾದ ಸ್ಯಾಮ್ ಕಾನ್ಸ್ಟಸ್ ಮತ್ತು ಮ್ಯಾಟ್ ವ್ರೆನ್‌ಶಾ ಅವರಿಗೆ ಅಂತಿಮ ತಂಡದಲ್ಲಿ ತಕ್ಷಣ ಅವಕಾಶ ನೀಡಬೇಕು. ಪ್ರಸ್ತುತ ಬ್ಯಾಟಿಂಗ್ ಲೈನ್‌ಅಪ್ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಡ್ಯಾಶಿಂಗ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಓಪನರ್ ಆಗಿ ಕಳುಹಿಸುವುದು ಸರಿಯಾದ ನಿರ್ಧಾರವಲ್ಲ. ಅವರು ಐದನೇ ಸ್ಥಾನಕ್ಕೆ ಸೂಕ್ತರು. ಅದೇ ಸಮಯದಲ್ಲಿ, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅವರನ್ನು ಐದನೇ ಸ್ಥಾನದಲ್ಲಿ ಆಡಿಸುವುದು ತನಗೆ ಇಷ್ಟವಿಲ್ಲ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಿಷಬ್ ಶೆಟ್ಟಿಯ ‘ಜೈ ಹನುಮಾನ್’ನಲ್ಲಿ ಕನ್ನಡದ ನಟನಿಗೆ ಶ್ರೀರಾಮನ ಪಾತ್ರ? – Kannada News | Kannada actor to join Rishab Shetty’s Jai Hanuman movie

ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಮೂಲಕ ಭಾರಿ ದೊಡ್ಡ ಹಿಟ್ ಸಿನಿಮಾ ನೀಡಿರುವ ರಿಷಬ್ ಶೆಟ್ಟಿ ಇದೀಗ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ‘ಜೈ ಹನುಮಾನ್’ನಲ್ಲಿ ನಟಿಸುತ್ತಿದ್ದಾರೆ. ರಿಷಬ್ ಅವರದ್ದು ಸಿನಿಮಾನಲ್ಲಿ ಹನುಮಂತನ ಪಾತ್ರ. ಇದು ಸಂಪೂರ್ಣವಾಗಿ ಹನುಮಂತನ ಕುರಿತಾದ ಸಿನಿಮಾನಾ? ಅಥವಾ ಹನುಮಂತನ ಭಕ್ತನ ಕುರಿತಾದ ಫ್ಯಾಂಟಸಿ ಕತೆಯ ಎಂಬ ಬಗ್ಗೆ ಅನುಮಾನವಿದೆ. ಈ ಹಿಂದೆ ಬಿಡುಗಡೆ ಆಗಿರುವ ಪೋಸ್ಟರ್ ಗಮನಿಸಿದರೆ ಹನುಮಂತ ದೇವರ ಕುರಿತಾದ ಸಿನಿಮಾ ಎಂಬ ಅನುಮಾನ ಮೂಡುತ್ತಿದೆ.

ಈ ಸಿನಿಮಾನಲ್ಲಿ ವಮಿಕಾ ಗಬ್ಬಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಸಿನಿಮಾನಲ್ಲಿ ಮತ್ತೊಂದು ಪ್ರಮುಖವಾದ ಪಾತ್ರವಿದೆ. ಅದುವೇ ಶ್ರೀರಾಮನ ಪಾತ್ರ. ಈ ಪಾತ್ರಕ್ಕೆ ತೆಲುಗಿನ ನಟರನ್ನು ಹಾಕಿಕೊಳ್ಳುವ ಉದ್ದೇಶ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ಅವರಿಗೆ ಇತ್ತಂತೆ. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ ಎನ್ನಲಾಗುತ್ತಿದೆ. ಪ್ರಭಾಸ್ ಈಗಾಗಲೇ ಶ್ರೀರಾಮನ ಪಾತ್ರದಲ್ಲಿ ಸೋಲು ಕಂಡಿದ್ದಾರೆ. ಮಹೇಶ್ ಬಾಬು ಪ್ರಸ್ತುತ ‘ಆರ್​​ಆರ್​​ಆರ್’ ಸಿನಿಮಾನಲ್ಲಿ ರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಜೂ ಎನ್​​ಟಿಆರ್ ಅವರನ್ನೂ ಕೇಳಲಾಗಿದ್ದು, ಅವರು ತಮ್ಮ ಮುಂದಿನ ಸಿನಿಮಾನಲ್ಲಿ ಮುರುಗನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಈಗ ರಾಮನ ಪಾತ್ರದಲ್ಲಿ ನಟಿಸಿದರೆ ಆ ಲುಕ್​​ಗೆ ಸಮಸ್ಯೆ ಆಗುವ ಕಾರಣಕ್ಕೆ ಅವರೂ ಸಹ ನೋ ಎಂದಿದ್ದಾರಂತೆ.

ಇದೀಗ ಮೂಲಗಳ ಪ್ರಕಾರ, ಕನ್ನಡದ ಸ್ಟಾರ್ ನಟರೊಬ್ಬರು ‘ಜೈ ಹನುಮಾನ್’ ಸಿನಿಮಾನಲ್ಲಿ ಶ್ರೀರಾಮನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದು ಯಾರು ಎಂಬುದು ಇನ್ನೂ ಖಾತ್ರಿ ಆಗಿಲ್ಲ. ಕೆಲ ನೆಟ್ಟಿಗರು ಊಹಿಸಿರುವಂತೆ ಶಿವರಾಜ್ ಕುಮಾರ್ ಅವರು ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿ ಎಂದಿದ್ದಾರೆ. ಇನ್ನು ಕೆಲವರು ಯಶ್ ಅವರ ಹೆಸರು ಹೇಳಿದ್ದಾರೆ. ಇನ್ನು ಕೆಲವರು ಕೆಲ ಯುವನಟರ ಹೆಸರುಗಳನ್ನು ಸಹ ಹೇಳಿದ್ದಾರೆ.

ಇದನ್ನೂ ಓದಿ:ಪ್ರವಾಸದ ಖುಷಿಯಲ್ಲಿ ಕಾಂತಾರ ಚೆಲುವೆ ಸಪ್ತಮಿ ಗೌಡ

‘ಜೈ ಹನುಮಾನ್’ ಸಿನಿಮಾ ರಿಷಬ್ ಶೆಟ್ಟಿಯ ದೊಡ್ಡ ಬಜೆಟ್​​ನ ಪ್ಯಾನ್ ಇಂಡಿಯಾ ತೆಲುಗು ಸಿನಿಮಾ ಆಗಿದೆ. ಈ ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಸಿನಿಮಾ ಅನ್ನು ಪ್ರಶಾಂತ್ ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಇವರು ‘ಹನು ಮ್ಯಾನ್’ ಹೆಸರಿನ ಫ್ಯಾಂಟಸಿ ಕತೆಯುಳ್ಳ ಸಿನಿಮಾ ಮಾಡಿದ್ದು, ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ಅವರು ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ಮುಹೂರ್ತ ಹಂಪಿಯಲ್ಲಿ ನಡೆದಿತ್ತು. ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲಾಲ್‌ಬಾಗ್​​​ ಫ್ಲವರ್​​ ಶೋಗೆ ಮನಸೋತ ಸಿಟಿ ಮಂದಿ: 9.5 ಲಕ್ಷ ಜನ ಭೇಟಿ; ನಾಳೆ ಕೊನೆ ದಿನ – Kannada News | Lalbagh Flower Show Draws 9.5 Lakh Visitors in Bengaluru; Tomorrow Is the Last Day

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವೆಂದರೆ ಬೆಂಗಳೂರಿಗರಿಗೆ ಮೊದಲು ನೆನಪಾಗುವುದೇ ಸಸ್ಯಕಾಶಿ ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನ. ಬಣ್ಣ ಬಣ್ಣದ ಹೂವುಗಳ ಸೌಂದರ್ಯ, ಗಾಜಿನ ಮನೆಯೊಳಗೆ ಕಂಗೊಳಿಸುತ್ತಿರುವ ಗಂಗ ಸಾಮ್ರಾಜ್ಯದ ಗತವೈಭವದ ಇತಿಹಾಸವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿದೆ. ನಿರೀಕ್ಷೆಗೂ ಮೀರಿದ ಅಭೂತಪೂರ್ವ ಜನಮೆಚ್ಚುಗೆಗೆ ಪಾತ್ರವಾಗಿದೆ.

Source link

ದರ್ಶನ್ ಅಭಿಮಾನಿಗಳಿಗೆ ನಗುತ್ತಲೇ ಬುದ್ಧಿವಾದ ಹೇಳಿದ ವಿಜಯಲಕ್ಷ್ಮಿ ದರ್ಶನ್ – Kannada News | Darshan’s wife Vijayalakshmi Darshan warns fans

ಅಭಿಮಾನಿಗಳೇ ದರ್ಶನ್​​ಗೆ (Darshan) ಕಂಟಕ ಆಗುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿಗೆ ಹೋದಾಗ ಅವರ ಅಭಿಮಾನಿಗಳು ಮಾಡಿದ ಅಬ್ಬರದಿಂದ ದರ್ಶನ್ ಅವರಿಗೆ ನೆಗೆಟಿವ್ ಇಮೇಜು ಪ್ರಾಪ್ತಿಯಾಯ್ತು. ಪೊಲೀಸರು, ಮಾಧ್ಯಮಗಳ ಮೇಲೆ ಸುಖಾ ಸುಮ್ಮನೆ ಟೀಕೆ, ನಿಂದನೆಗಳನ್ನು ದರ್ಶನ್ ಅಭಿಮಾನಿಗಳು ಮಾಡಿದ್ದರು. ಅದನ್ನು ನ್ಯಾಯಾಲಯ ಸಹ ಗಮನಿಸಿತ್ತು. ಇತ್ತೀಚೆಗೆ ಸಿಎಂ ಭಾಷಣದ ವೇಳೆ ಸಹ ದರ್ಶನ್ ಅಭಿಮಾನಿಗಳು ಹುಚ್ಚಾಟ ಮೆರೆದರು. ಅದನ್ನು ಡಿಕೆ ಶಿವಕುಮಾರ್ ಅವರು ಭಾಷಣದಲ್ಲಿಯೇ ಖಂಡಿಸಿದರು. ಇದೀಗ ವಿಜಯಲಕ್ಷ್ಮಿ ಅವರು ಮದುವೆಯೊಂದರಲ್ಲಿ ಭಾಗಿಯಾಗಿದ್ದಾಗಲೂ ಕೆಲವರು ‘ಡಿ ಬಾಸ್’ ಎಂದು ಘೋಷಣೆ ಕೂಗಿದ್ದಾರೆ. ಆಗ ನಗುತ್ತಲೇ ವಿಜಯಲಕ್ಷ್ಮಿ ಅವರು ಬುದ್ಧಿವಾದ ಹೇಳಿದ್ದು, ‘ಹೀಗೆ ಮಾಡುವುದು ಸರಿಯಲ್ಲ, ಇದರಿಂದ ತೊಂದರೆ ಆಗುತ್ತಿದೆ’ ಎಂದು ನಗುತ್ತಲೇ ಎಚ್ಚರಿಕೆ ಕೊಟ್ಟರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ – Kannada News | In 2040, India, Bangla, SL and Nepal together to have lesser extreme poverty volume than in Europe, America

ಆಫ್ರಿಕಾದ ಲೈಬೀರಿಯಾದ ಒಂದು ಸ್ಲಂ ಚಿತ್ರImage Credit source: Getty Images

ನವದೆಹಲಿ, ಆಗಸ್ಟ್ 16: ಭಾರತ ಎಂದರೆ ಬಡವರ ನಾಡು ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ ಮೂಗು ಮುರಿಯುವವರು ಈಗಲೂ ಇದ್ದಾರೆ. ಆದರೆ, ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತದಲ್ಲಿ ಅತೀ ಬಡತನದಲ್ಲಿರುವ ಜನಸಂಖ್ಯೆ ಗಣನೀಯವಾಗಿ ತಗ್ಗಿದೆ. ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶವು ಅಚ್ಚರಿಯ ಸಂಗತಿಯೊಂದನ್ನು ತೋರಿಸಿದೆ. ಅದರ ಪ್ರಕಾರ 2040ರಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಒಳಗೊಂಡ ದಕ್ಷಿಣ ಏಷ್ಯಾದಲ್ಲಿ ಕಡುಬಡವರ ಸಂಖ್ಯೆಯು (People with extreme Poverty) ಉತ್ತರ ಅಮೆರಿಕ ಮತ್ತು ಯೂರೋಪ್​ಗಳಲ್ಲಿರುವ ಕಡುಬಡವರಿಗಿಂತ ಕಡಿಮೆ ಇರಲಿದೆಯಂತೆ.

ವಿಶ್ವಬ್ಯಂಕ್​ನ ಈ ವರದಿಯು ತೊಂಬತ್ತರ ದಶಕದಿಂದ ಒಳಗೊಂಡು, ವಿಶ್ವದ ವಿವಿಧ ಪ್ರದೇಶಗಳಲ್ಲಿ ಬಡುಬಡತನ ಹೇಗೆಲ್ಲಾ ವ್ಯತ್ಯಾಸ ಆಗುತ್ತಾ ಬಂದಿದೆ ಎಂಬುದನ್ನು ತೋರಿಸಿದೆ. ಹಾಗೆಯೇ, 2040ರವರೆಗೂ ಕಡುಬಡತನ ಹೇಗೆ ಬದಲಾಗುತ್ತದೆ ಎನ್ನುವ ಪ್ರೊಜೆಕ್ಷನ್ ಕೂಡ ನೀಡಿದೆ. ಈ ವರದಿಯು ವಿಶ್ವವನ್ನು ಏಳು ಭೂಪ್ರದೇಶಗಳಾಗಿ ವಿಂಗಡಿಸಿದೆ:

  1. ದಕ್ಷಿಣ ಏಷ್ಯಾ: ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ
  2. ಪೂರ್ವ ಏಷ್ಯಾ ಮತ್ತು ಪೆಸಿಫಿಕ್: ಚೀನಾ ಒಳಗೊಂಡು ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶಗಳು
  3. ಸಹಾರಾ ಆಫ್ರಿಕಾ: ಸಹಾರಾ ಮರುಭೂಮಿಯಿಂದ ಈಚೆಗಿನ ಆಫ್ರಿಕನ್ ದೇಶಗಳು. ಬಹುತೇಕ ಆಫ್ರಿಕಾ ಖಂಡ
  4. ಮಧ್ಯಪ್ರಾಚ್ಯ, ಅಫ್ಘನ್, ಪಾಕಿಸ್ತಾನ
  5. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳು: ಮೆಕ್ಸಿಕೋ, ದಕ್ಷಿಣ ಅಮೆರಿಕನ್ ದೇಶಗಳು
  6. ಯೂರೋಪ್ ಮತ್ತು ಮಧ್ಯ ಏಷ್ಯಾ: ಯೂರೋಪಿಯನ್ ದೇಶಗಳು ಹಾಗೂ ರಷ್ಯಾ, ಟರ್ಕಿ, ಕಜಕಸ್ತಾನ್ ಇತ್ಯಾದಿ ದೇಶಗಳು
  7. ನಾರ್ಥ್ ಅಮೆರಿಕ: ಯುಎಸ್​ಎ, ಕೆನಡಾ ದೇಶಗಳು

ಇದನ್ನೂ ಓದಿ: ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್​ಗಳೇ ಗಮನಿಸಿ; ಮಾನಿಟೈಸಿಂಗ್ ನಿಯಮಗಳಲ್ಲಿ ಆಗಿದೆ ಪ್ರಮುಖ ಬದಲಾವಣೆ

1990ರಲ್ಲಿ ವಿವಿಧ ಪ್ರದೇಶಗಳಲ್ಲಿದ್ದ ಕಡುಬಡವರು

  • ದಕ್ಷಿಣ ಏಷ್ಯಾ: 503 ಮಿಲಿಯನ್
  • ಪೂರ್ವ ಏಷ್ಯಾ, ಪೆಸಿಫಿಕ್: 1.22 ಬಿಲಿಯನ್
  • ಸಹಾರಾ ಆಫ್ರಿಕಾ: 321 ಮಿಲಿಯನ್
  • ಮಧ್ಯಪ್ರಾಚ್ಯ, ಉ.ಆಫ್ರಿಕಾ, ಅಫ್ಗನ್, ಪಾಕಿಸ್ತಾನ್: 131 ಮಿಲಿಯನ್
  • ಲ್ಯಾಟಿನ್ ಅಮೆರಿಕ, ಕೆರಿಬಿಯನ್: 91.4 ಮಿಲಿಯನ್
  • ಯೂರೋಪ್, ಸೆಂಟ್ರಲ್ ಏಷ್ಯಾ: 34.2 ಮಿಲಿಯನ್
  • ಉತ್ತರ ಅಮೆರಿಕ: 1.51 ಮಿಲಿಯನ್

2025ರಲ್ಲಿ ಇರುವ ಕಡುಬಡವರು

  • ದಕ್ಷಿಣ ಏಷ್ಯಾ: 52.2 ಮಿಲಿಯನ್
  • ಪೂರ್ವ ಏಷ್ಯಾ, ಪೆಸಿಫಿಕ್: 42.5 ಮಿಲಿಯನ್
  • ಸಹಾರಾ ಆಫ್ರಿಕಾ: 585 ಮಿಲಿಯನ್
  • ಮಧ್ಯಪ್ರಾಚ್ಯ, ಉ.ಆಫ್ರಿಕಾ, ಅಫ್ಗನ್, ಪಾಕಿಸ್ತಾನ್: 121 ಮಿಲಿಯನ್
  • ಲ್ಯಾಟಿನ್ ಅಮೆರಿಕ, ಕೆರಿಬಿಯನ್: 27.4 ಮಿಲಿಯನ್
  • ಯೂರೋಪ್, ಸೆಂಟ್ರಲ್ ಏಷ್ಯಾ: 4.92 ಮಿಲಿಯನ್
  • ಉತ್ತರ ಅಮೆರಿಕ: 3.58 ಮಿಲಿಯನ್

2040ರಲ್ಲಿ ಇರಬಹುದಾದ ಕಡುಬಡವರು

  • ದಕ್ಷಿಣ ಏಷ್ಯಾ: 2.76 ಮಿಲಿಯನ್
  • ಪೂರ್ವ ಏಷ್ಯಾ, ಪೆಸಿಫಿಕ್: 24.1 ಮಿಲಿಯನ್
  • ಸಹಾರಾ ಆಫ್ರಿಕಾ: 673 ಮಿಲಿಯನ್
  • ಮಧ್ಯಪ್ರಾಚ್ಯ, ಉ.ಆಫ್ರಿಕಾ, ಅಫ್ಗನ್, ಪಾಕಿಸ್ತಾನ್: 158 ಮಿಲಿಯನ್
  • ಲ್ಯಾಟಿನ್ ಅಮೆರಿಕ, ಕೆರಿಬಿಯನ್: 24.1 ಮಿಲಿಯನ್
  • ಯೂರೋಪ್, ಸೆಂಟ್ರಲ್ ಏಷ್ಯಾ: 2.89 ಮಿಲಿಯನ್
  • ಉತ್ತರ ಅಮೆರಿಕ: 3.35 ಮಿಲಿಯನ್

2040ರಲ್ಲಿ ದಕ್ಷಿಣ ಏಷ್ಯದಲ್ಲಿ ಕಡುಬಡವರ ಸಂಖ್ಯೆ ಕೇವಲ 27 ಲಕ್ಷ ಇರಲಿದ್ದಾರೆ. ಉತ್ತರ ಅಮೆರಿಕನ್ ದೇಶಗಳಲ್ಲಿ 33 ಲಕ್ಷಕ್ಕೂ ಹೆಚ್ಚು ಕಡುಬಡವರಿರಲಿದ್ದಾರೆ. ಯೂರೋಪ್ ಮತ್ತು ಸೆಂಟ್ರಲ್ ಏಷ್ಯನ್ ದೇಶಗಳಲ್ಲೂ 29 ಲಕ್ಷದಷ್ಟು ಕಡುಬಡವರು ಇರಲಿದ್ದಾರೆ. 1990ರಲ್ಲಿ 50 ಕೋಟಿಗೂ ಅಧಿಕ ಕಡುಬಡವರನ್ನು ಹೊಂದಿದ್ದ ದಕ್ಷಿಣ ಏಷ್ಯಾದಲ್ಲಿ 2040ಕ್ಕೆ ಆ ಸಂಖ್ಯೆ ಕೇವಲ 27 ಲಕ್ಷಕ್ಕೆ ಇಳಿಯುತ್ತಾರೆ ಎನ್ನುವುದು ಸಾಮಾನ್ಯ ಸಂಗತಿಯಲ್ಲ.

ಇದನ್ನೂ ಓದಿ: ಕರ್ನಾಟಕಕ್ಕೆ 2047ಕ್ಕೆ 3 ಟ್ರಿಲಿಯನ್ ಆರ್ಥಿಕತೆ ಗುರಿ; ಉದ್ಯೋಗ ಸಂಕಲ್ಪ, ಉದ್ಯೋಗ ನಿಧಿ, ಶಿಕ್ಷಣದಲ್ಲಿ ಎಐ ಇತ್ಯಾದಿ ಯೋಜನೆ ಪ್ರಕಟ

1990 ರಿಂದ ಭಾರತದಲ್ಲಿ ಭಾರಿ ಸುಧಾರಣೆ

1990ರ ದಶಕದಲ್ಲಿ ದಕ್ಷಿಣ ಏಷ್ಯಾದಲ್ಲಿ ಕೋಟ್ಯಂತರ ಜನರು ತೀವ್ರ ಬಡತನದಲ್ಲಿದ್ದರು (ದಿನಕ್ಕೆ $3 ಕ್ಕಿಂತ ಕಡಿಮೆ ಆದಾಯದಲ್ಲಿ ಜೀವಿಸುವುದು). ಆದರೆ ಕಳೆದ ಮೂರು ದಶಕಗಳ ಶರವೇಗದ ಆರ್ಥಿಕ ಬೆಳವಣಿಗೆ, ಡಿಜಿಟಲೀಕರಣ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಫಲವಾಗಿ ಈ ಸಂಖ್ಯೆ ಸತತವಾಗಿ ಇಳಿಕೆಯಾಗುತ್ತಾ ಬಂದಿದೆ. ಅದರಲ್ಲೂ 2014ರ ಬಳಿಕ ಭಾರತದಲ್ಲಿ ಡಿಜಿಟಲೀಕರಣದ ಅಪಾರ ಬೆಳವಣಿಗೆಯು ಬಡತನ ನಿವಾರಣೆಗೆ ಬಹಳ ಸಹಕಾರಿಯಾಗಿವೆ.

ದಕ್ಷಿಣ ಏಷ್ಯಾದಲ್ಲಿ ತೀವ್ರ ಬಡತನ ತಗ್ಗಲು ಭಾರತ ಕೈಗೊಂಡ ಕಲ್ಯಾಣ ಯೋಜನೆಗಳು, ಆರ್ಥಿಕ ಪ್ರಗತಿ ಮತ್ತು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲಕ್ಕೆತ್ತುವ ಕಾರ್ಯಕ್ರಮಗಳು ಪ್ರಮುಖ ಕಾರಣವಾಗಿವೆ ಎಂದು ವರದಿ ಬೆಟ್ಟುಮಾಡುತ್ತದೆ. ಈ ವಿಶ್ವಬ್ಯಾಂಕ್ ದತ್ತಾಂಶವು ದಕ್ಷಿಣ ಏಷ್ಯಾದ ಆರ್ಥಿಕ ಚೇತರಿಕೆ ಮತ್ತು ಕಳೆದ ಕೆಲವು ದಶಕಗಳಲ್ಲಿ ಕೈಗೊಂಡ ಬಡತನ ನಿರ್ಮೂಲನಾ ಕಾರ್ಯಕ್ರಮಗಳ ಯಶಸ್ಸನ್ನು ಎತ್ತಿಹಿಡಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಗ್​​ಬಾಸ್ ಗೆದ್ದವರಿಗೆ ಸಿಗುವುದೆಷ್ಟು? ಕಟ್ ಆಗುವುದೆಷ್ಟು? ವಿವರಿಸಿದ ಮಾಜಿ ವಿನ್ನರ್ – Kannada News | Bigg Boss former Winner explains how much money did winner get finally

ಬಿಗ್​​ಬಾಸ್ ಶೋ (Bigg Boss Show) ಗೆದ್ದವರಿಗೆ ಲಕ್ಷಾಂತರ ರೂಪಾಯಿ ಬಹುಮಾನ ಸಿಗುತ್ತದೆ. ಒಳ್ಳೆಯ ಕಾರು ಸಿಗುತ್ತದೆ. ಭರ್ಜರಿ ಸಂಭಾವನೆ ಸಿಗುತ್ತದೆ ಎಂದು ವೀಕ್ಷಕರು ನಂಬಿಕೊಂಡಿದ್ದಾರೆ. ಬಿಗ್​ಬಾಸ್ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ಸಿಗುವುದೇನೋ ನಿಜ ಆದರೆ ಅದು ಕೈಗೆ ಬರುವಷ್ಟರಲ್ಲಿ ಸಾಕಷ್ಟು ಹಣ ಕಟ್ ಆಗಿ ಸರ್ಕಾರ ಇನ್ನಿತರೆಗಳ ಪಾಲಾಗಿರುತ್ತದೆ. ಕಾರಿನ ಕತೆಯೂ ಸಹ ಭಿನ್ನ ಏನಲ್ಲ. ಬಿಗ್​​ಬಾಸ್​​ ಗೆದ್ದವರಿಗೆ ಕೊನೆಗೆ ಕೈಗೆ ಬರುವುದೆಷ್ಟು ಎಂಬುದನ್ನು ವಿವರಿಸಿದ್ದಾರೆ ಈ ಹಿಂದೆ ಬಿಗ್​​ಬಾಸ್ ಗೆದ್ದಿರುವ ಸ್ಪರ್ಧಿ.

ಬಿಗ್ ಬಾಸ್ ಕನ್ನಡದ ರೀತಿಯೇ ತೆಲುಗು ಬಿಗ್​​ಬಾಸ್ ಸಹ ಜನಪ್ರಿಯ ಶೋ. ಈಗ ಈ ತೆಲುಗು ಬಿಗ್​​ಬಾಸ್​​ನ ಹತ್ತನೇ ಸೀಸನ್ ಪ್ರಾರಂಭ ಆಗುತ್ತಿದೆ. ಆದರೆ ತೆಲುಗು ಬಿಗ್​​ಬಾಸ್​​ನ ಏಳನೇ ಸೀಸನ್​​ಲಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಯುವ ರೈತ ಪಲ್ಲವಿ ಪ್ರಶಾಂತ್ ಭಾಗಿ ಆಗಿದ್ದರು. ಯಾರೂ ಊಹೆ ಸಹ ಮಾಡದ ರೀತಿ ಆಟವಾಡಿದ್ದ ಪಲ್ಲವಿ ಪ್ರಶಾಂತ್ ಫಿನಾಲೆಯಲ್ಲಿ ಗೆದ್ದು ಚಾಂಪಿಯನ್ ಆದರು. ಪಲ್ಲವಿ ಪ್ರಶಾಂತ್ ಅವರಿಗೆ 35 ಲಕ್ಷ ರೂ ನಗದು, ಒಂದು ಮಾರುತಿ ಬ್ರೆಜಾ ಕಾರು ಹಾಗೂ 15 ಲಕ್ಷ ಮೌಲ್ಯದ ಆಭರಣವನ್ನು ನೀಡಲಾಗಿತ್ತು.

ಪಲ್ಲವಿ ಪ್ರಶಾಂತ್ ತನ್ನ ಬಿಗ್ ಬಾಸ್ ಪ್ರೈಜ್ ಮನಿಯ ಸಂಪೂರ್ಣ ಮೊತ್ತವನ್ನು ರೈತರಿಗೆ ಹಂಚುವುದಾಗಿ ದೊಡ್ಡ ಹೇಳಿಕೆ ನೀಡಿದ್ದರು. ಆದರೆ ಆ ಬಳಿಕ ಹಣ ಕೊಡುವ ವಿಚಾರವನ್ನು ನಿರ್ಲಕ್ಷಿಸಿದರು. ಆದರೆ ಇತ್ತೀಚೆಗೆ ಈ ವಿಷಯದ ಬಗ್ಗೆ ಸ್ಪಂದಿಸಿದ ಪಲ್ಲವಿ ಪ್ರಶಾಂತ್, ಬಿಗ್ ಬಾಸ್ ಆಯೋಜಕರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ. ಪ್ರೈಜ್ ಮನಿ, ಕಾರು ಮತ್ತು ನೆಕ್ಲೇಸ್ ಎಂದು ಹೇಳಿ ತನ್ನನ್ನು ಸಂಪೂರ್ಣವಾಗಿ ಮೋಸಗೊಳಿಸಿದ್ದಾರೆ ಎಂದು ಪಲ್ಲವಿ ಪ್ರಶಾಂತ್ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಕ್ಯೂಟ್ ವಿಡಿಯೋ ಹಂಚಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ರಿಶಾ ಗೌಡ

‘ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ನಾನು ಗೆದ್ದ ಪ್ರೈಜ್ ಮನಿ ನನ್ನ ಕೈಸೇರಲು ಬಹಳ ಸಮಯ ಹಿಡಿಯಿತು. ಕೆಲವರು ವಿಷಯ ತಿಳಿಯದೆ ನನ್ನನ್ನು ಟೀಕಿಸುತ್ತಿದ್ದಾರೆ. ಹಲವು ದಿನಗಳ ಬಳಿಕ ನನಗೆ ಪ್ರೈಜ್ ಮನಿ ಆಗಿರುವ 35 ಲಕ್ಷ ರೂಪಾಯಿ ಬಂತು. ಅದರಲ್ಲಿ 40 ಶೇಕಡಾ ಜಿಎಸ್‌ಟಿ ಕಡಿತ ಮಾಡಲಾಗಿತ್ತು. ಕಾರು ಗಿಫ್ಟ್ ಎಂದು ಹೇಳಿದ್ದರು, ಆದರೆ ಅಲ್ಲಿಗೆ ಹೋದಾಗ 8.5 ಲಕ್ಷ ರೂಪಾಯಿಗಳನ್ನು ಪ್ರೈಜ್ ಮನಿಯಲ್ಲಿ ಕಡಿತಗೊಳಿಸಿದರು. ಹಣ ನೀಡಿದರೆ ಮಾತ್ರ ಕಾರು ತೆಗೆದುಕೊಳ್ಳಿ, ಇಲ್ಲದಿದ್ದರೆ ಅದು ಇಲ್ಲೇ ಇರುತ್ತದೆ ಎಂದು ಹೇಳಿದರು. ಕಾರಿಗೆ ಹಣವನ್ನು ಎಲ್ಲಿಂದ ನೀಡಬೇಕು? ಕೊನೆಗೆ ಪ್ರೈಜ್ ಮನಿಯಿಂದಲೇ ಕಡಿತಗೊಳಿಸುತ್ತೇವೆ ಎಂದು ಹೇಳಿದರು’ ಎಂದು ಅವರು ಹೇಳಿದ್ದಾರೆ.

‘ಇನ್ನು ನೆಕ್ಲೇಸ್ ವಿಷಯಕ್ಕೆ ಬಂದರೆ, ಅದು ತಂಡದ ಉಡುಗೊರೆ ಎಂದರು. ಆದರೆ ಅಲ್ಲಿಗೆ ಹೋದ ಮೇಲೆ 5 ಲಕ್ಷ ರೂಪಾಯಿ ಕಟ್ಟಬೇಕೆಂದು ಹೇಳಿದರು. ಗಿಫ್ಟ್ ಟ್ಯಾಕ್ಸ್ ಹೀಗೆಯೇ ಇರುತ್ತದೆ ಎಂದರು. ಅವರು ಹೇಳಿದದಕ್ಕೂ, ನನಗೆ ಸಿಕ್ಕಿದ್ದಕ್ಕೂ ಬಹಳ ವ್ಯತ್ಯಾಸವಿದೆ. ಇದೇನಿದು ಅಣ್ಣಾ ಎಂದು ಕೇಳಿದರೆ, ‘ರೂಲ್ಸ್ ಆರ್ ರೂಲ್ಸ್’ (ನಿಯಮಗಳೇ ನಿಯಮಗಳು) ಎಂದರು’ ಎಂದು ಅವರು ಹೇಳಿಕೊಂಡಿದ್ದಾರೆ. ಪಲ್ಲವಿ ಪ್ರಶಾಂತ್ ಅವರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನೆಟ್ಟಿಗರು ಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ತೆರಿಗೆ ಕಡಿತ ಮಾಡುವುದು ಸರಿ ಇರಬಹುದು, ಆದರೆ ಗಿಫ್ಟ್ ಎಂದು ಹೇಳಿ ಕಾರು ಮತ್ತು ನೆಕ್ಲೇಸ್‌ಗೆ ಹಣ ಕಟ್ಟಬೇಕೆಂದು ಹೇಳುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಪಲ್ಲವಿ ಪ್ರಶಾಂತ್ ಅವರ ಈ ಆರೋಪಗಳಿಗೆ ಬಿಗ್ ಬಾಸ್ ತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

‘ಅತಿದೊಡ್ಡ ಗೆಲುವು’; ಆಸ್ಟ್ರೇಲಿಯಾವನ್ನು ಮಣಿಸಿದ ಬಳಿಕ ಬಾಂಗ್ಲಾ ನಾಯಕ ಹೇಳಿದ್ದಿದು – Kannada News | Bangladesh Stuns Australia: Shanto Hails Historic Test Win and Fast Bowler Development

ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಬಾಂಗ್ಲಾದೇಶ (Australia vs Bangladesh) ಇತಿಹಾಸ ನಿರ್ಮಿಸಿದೆ. ಡಾರ್ವಿನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ, ಆಸ್ಟ್ರೇಲಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು. ಬಾಂಗ್ಲಾದೇಶದ ಈ ಟೆಸ್ಟ್ ಗೆಲುವು ಐತಿಹಾಸಿಕವಾಗಿದೆ. ಏಕೆಂದರೆ ಆಸ್ಟ್ರೇಲಿಯಾವನ್ನು ಅವರ ತವರು ನೆಲದಲ್ಲಿ ಮೊದಲ ಬಾರಿಗೆ ಸೋಲಿಸಿದ ಸಾಧನೆ ಮಾಡಿದೆ. ಗಮನಾರ್ಹ ವಿಷಯವೆಂದರೆ ಬಾಂಗ್ಲಾದೇಶ, ಆಸ್ಟ್ರೇಲಿಯಾ ತಂಡವನ್ನು ಆಸ್ಟ್ರೇಲಿಯಾದಲ್ಲಿ ಸೋಲಿಸಲು ಕೇವಲ ನಾಲ್ಕು ದಿನಗಳನ್ನು ತೆಗೆದುಕೊಂಡಿತು. ಇದರರ್ಥ ಐದು ದಿನಗಳ ಟೆಸ್ಟ್ ಪಂದ್ಯವು ನಾಲ್ಕನೇ ದಿನದಂದು ಕೊನೆಗೊಂಡಿತು. ಗೆಲುವಿನ ಬಳಿಕ ಮಾತನಾಡಿದ ಬಾಂಗ್ಲಾದೇಶ ನಾಯಕ ನಜ್ಮುಲ್ ಹೊಸೈನ್ ಶಾಂಟೊ (Najmul Hossain Shanto) ಈ ಗೆಲುವನ್ನು ಯಾವುದೇ ಸ್ವರೂಪದಲ್ಲಿ ಬಾಂಗ್ಲಾದೇಶದ ಅತಿದೊಡ್ಡ ಗೆಲುವು ಎಂದು ಬಣ್ಣಿಸಿದ್ದಾರೆ.

ನಾವು ತುಂಬಾ ಶ್ರಮಿಸಿದ್ದೇವೆ

ಗೆಲುವಿನ ನಂತರ ಪ್ರಸಾರಕರೊಂದಿಗೆ ಮಾತನಾಡಿದ ನಾಯಕ ಶಾಂಟೊ, ‘ನನಗೆ ತುಂಬಾ ಸಂತೋಷವಾಗಿದೆ, ನನ್ನ ಬಗ್ಗೆ ಮತ್ತು ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ. ನಾವು ತುಂಬಾ ಶ್ರಮಿಸಿದ್ದೇವೆ. ಯಾವುದೇ ಸ್ವರೂಪದಲ್ಲಿ ಬಾಂಗ್ಲಾದೇಶಕ್ಕೆ ಇದುವರೆಗಿನ ಅತಿದೊಡ್ಡ ಗೆಲುವು ಇದಾಗಿದೆ. ಭವಿಷ್ಯದಲ್ಲಿ ನಾವು ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸುತ್ತೇವೆ ಎಂದಿದ್ದಾರೆ.

ಟೆಸ್ಟ್ ಸ್ವರೂಪಕ್ಕೆ ಪ್ರಾಮುಖ್ಯತೆ

ಇನ್ನು ವೇಗದ ಬೌಲರ್‌ಗಳನ್ನು ಸಜ್ಜುಗೊಳಿಸುವ ಮತ್ತು ಸ್ಪಿನ್ ಅನ್ನು ಅವಲಂಬಿಸದಿರುವ ಬಗ್ಗೆ ಮಾತನಾಡಿದ ಶಾಂಟೊ, ‘ಟೆಸ್ಟ್ ಸ್ವರೂಪದಲ್ಲಿ ಬಾಂಗ್ಲಾದೇಶಕ್ಕೆ ಇದು ದೊಡ್ಡ ಬದಲಾವಣೆಯಾಗಿದೆ. ಐದು ವರ್ಷಗಳ ಹಿಂದೆ, ವೇಗದ ಬೌಲರ್‌ಗಳು ಟೆಸ್ಟ್ ಆಡಲು ಬಯಸುತ್ತಿರಲಿಲ್ಲ. ಆದಾಗ್ಯೂ, ಈಗ ನಾವು ಬಹಳಷ್ಟು ಟೆಸ್ಟ್ ಕ್ರಿಕೆಟ್ ಆಡುತ್ತಿದ್ದೇವೆ ಮತ್ತು ಅವರು ಟೆಸ್ಟ್ ಸ್ವರೂಪಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮುಷ್ಫಿಕರ್ ಮತ್ತು ಮೊಮಿನುಲ್‌ರಂತಹ ಹಿರಿಯ ಆಟಗಾರರು ಬೌಲರ್​ಗಳು ಹೆಚ್ಚು ಟೆಸ್ಟ್ ಕ್ರಿಕೆಟ್ ಆಡಲು ಪ್ರೋತ್ಸಾಹಿಸಿದ್ದಾರೆ ಎಂದಿದ್ದಾರೆ.

ಇದರ ಜತೆಗೆ ಸ್ಮರಣೀಯ ಶತಕ ಬಾರಿಸಿದ ತಂಜಿದ್ ಹಸನ್ ತಮೀಮ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಂಟೊ, ‘ತಂಜಿದ್ ಹಸನ್ ತಮೀಮ್ ಸೀಮಿತ ಓವರ್​ಗಳ ಕ್ರಿಕೆಟ್ ಅನ್ನು ಆಕ್ರಮಣಕಾರಿಯಾಗಿ ಆಡುತ್ತಾರೆ. ಆದರೆ ಈ ಟೆಸ್ಟ್‌ನಲ್ಲಿ, ಅವರು ಶಾಂತವಾಗಿದ್ದರು ಮತ್ತು ಚೆಂಡಿನ ಅರ್ಹತೆಗೆ ಅನುಗುಣವಾಗಿ ತಮ್ಮ ಹೊಡೆತಗಳನ್ನು ಆಡಿದರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ, ಅವರು ಪರಿಣಾಮಕಾರಿಯಾಗಿರಬೇಕೆಂದು ನಾವು ಬಯಸಿದ್ದೇವು. ಅವರು ಅದನ್ನು ಮಾಡಿದರು” ಎಂದಿದ್ದಾರೆ.

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

ಸರಣಿ ಗೆಲ್ಲುವ ಗುರಿ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲಲು ಬಾಂಗ್ಲಾದೇಶಕ್ಕೆ ಈಗ ಒಂದು ಸುವರ್ಣಾವಕಾಶ ಸಿಕ್ಕಿದೆ. ಸರಣಿಯ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 22 ರಂದು ನಡೆಯಲಿದೆ. ಬಾಂಗ್ಲಾ ಟೆಸ್ಟ್ ಸರಣಿಯನ್ನು ಗೆಲ್ಲಬೇಕೆಂದರೆ ಮೊದಲ ಟೆಸ್ಟ್​ನಂತೆ ಎಲ್ಲಾ ರಂಗಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಈ ಬಗ್ಗೆ ಮಾತನಾಡಿರುವ ಶಾಂಟೊ, ‘ಎರಡನೇ ಟೆಸ್ಟ್ ಗೆಲ್ಲಲು, ತಂಡವು ಸತತ ಐದು ದಿನಗಳ ಕಾಲ ಉತ್ತಮವಾಗಿ ಆಡಬೇಕಾಗುತ್ತದೆ. ಅಲ್ಲದೆ ಪ್ರತಿ ಸೆಷನ್​ನಲ್ಲೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:50 pm, Sun, 16 August 26

Source link

ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತಾ? ಸ್ನೇಹಿತನ ಮೇಲೆ ಮನಸೋ ಇಚ್ಛೆ ಹಲ್ಲೆ; ಮಲೆನಾಡನ್ನೇ ಬೆಚ್ಚಿಬೀಳಿಸಿದ ಕೃತ್ಯ – Kannada News | Hosanagara Drunk Attack: Man Critically Injured in Brutal Highway Assault by Friend

ಸ್ನೇಹಿತನಿಂದ ಹಲ್ಲೆImage Credit source: tv9 kannada

ಶಿವಮೊಗ್ಗ, ಆಗಸ್ಟ್ 16: ಅವರಿಬ್ಬರು ಒಂದೇ ಊರಿನವರು. ಕಷ್ಟ-ಸುಖ ಹಂಚಿಕೊಂಡವರು. ಆದರೆ ಮದ್ಯದ ಅಮಲು ತಲೆಗೇರಿದಾಗ ಆ ಸ್ನೇಹ, ಕರುಣೆ ಎಲ್ಲವೂ ಕರಗಿ ಬೂದಿಯಾಗಿದೆ. ಹೊಸನಗರ ತಾಲೂಕಿನ ಗರ್ತಿಕೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಇಬ್ಬರು ಸ್ನೇಹಿತರ (Friend) ನಡುವೆ ನಡೆದ ಕ್ಷುಲ್ಲಕ ಜಗಳ, ಕೊನೆಗೆ ಒಬ್ಬನ ಕ್ರೂರ ಅಟ್ಟಹಾಸ ಹಾಗೂ ಇನ್ನೊಬ್ಬನ ಜೀವನ್ಮರಣದ ಹೋರಾಟಕ್ಕೆ ಕಾರಣವಾಗಿದೆ. ಮಾನವೀಯತೆಯನ್ನೇ ಮರೆತು ನಡುರಸ್ತೆಯಲ್ಲೇ ಸ್ನೇಹಿತನ ಮೇಲೆ ನಡೆದ ದಾಳಿ (Attack) ಇಡೀ ಮಲೆನಾಡನ್ನೇ ಬೆಚ್ಚಿಬೀಳಿಸಿದೆ.

ನಡೆದಿದ್ದೇನು?

ಶನಿವಾರ ರಾತ್ರಿ ಮಂಜುನಾಥ್ ಮತ್ತು ರಾಘವೇಂದ್ರ ಎಂಬ ಸ್ನೇಹಿತರು ಒಟ್ಟಿಗೆ ಮದ್ಯಪಾನ ಮಾಡಿದ್ದಾರೆ. ಬಳಿಕ ರಾಘವೇಂದ್ರನನ್ನು ಸುರಕ್ಷಿತವಾಗಿ ಮನೆಗೆ ಡ್ರಾಪ್ ಮಾಡಲು ಮಂಜುನಾಥ್ ಮುಂದಾಗಿದ್ದಾನೆ. ಈ ವೇಳೆ ರಾಘವೇಂದ್ರ ಫೋನ್‌ನಲ್ಲಿ ಯಾರಿಗೋ ಸಿಟ್ಟಿನಿಂದ ಬೈದಾಡುತ್ತಿದ್ದಾಗ, ‘ರಾತ್ರಿಯಾಗಿದೆ, ಇದೆಲ್ಲ ಬಿಟ್ಟು ಮನೆಗೆ ಹೋಗು’ ಎಂದು ಮಂಜುನಾಥ್ ಸಮಾಧಾನದಿಂದ ಬುದ್ಧಿ ಹೇಳಿದ್ದಾರೆ.

ಬುದ್ಧಿ ಮಾತು ಹೇಳಿದ್ದೇ ತಪ್ಪಾಯ್ತಾ?

ಕೌಟುಂಬಿಕ ಕಲಹದಿಂದ ಹೆಂಡತಿ ಬಿಟ್ಟು ಹೋಗಿದ್ದ ಮಾನಸಿಕ ಒತ್ತಡದಲ್ಲಿದ್ದ ರಾಘವೇಂದ್ರನಿಗೆ, ಕುಡಿದ ಅಮಲಿನಲ್ಲಿ ಈ ಮಾತು ತೀವ್ರ ಸಿಟ್ಟು ತರಿಸಿದೆ. ‘ನನಗೆ ಬುದ್ಧಿ ಹೇಳುವಷ್ಟು ದೊಡ್ಡವನಾದೆಯಾ?’ ಎಂದು ಜಗಳ ತೆಗೆದ ಆತ, ಕ್ಷಣಾರ್ಧದಲ್ಲಿ ರಾಕ್ಷಸನಾಗಿ ಬದಲಾಗಿದ್ದಾನೆ. ಅಲ್ಲಿ ಇದ್ದ ರಾಡ್​ನಿಂದ ಮಂಜುನಾಥ್​​ನ ಎರಡು ಕಾಲಿಗೆ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಆತನ ದೇಹದ ಮೇಲೆ ನಿಂತು ತನ್ನ ಕ್ರೌರ್ಯ ಮೆರೆದಿದ್ದಾನೆ.

ಇದನ್ನೂ ಓದಿ: ರಾತ್ರೋರಾತ್ರಿ ಕೊಟ್ಟಿಗೆಗೆ ನುಗ್ಗಿ ಗೋವುಗಳ ಕಳತನ: ಹಿಡಿಯಲು ಹೋದ ಬಜರಂಗದಳ ಕಾರ್ಯಕರ್ತರ ಹತ್ಯೆಗೆ ಯತ್ನ

ಇನ್ನು ರಾಘವೇಂದ್ರನ ವರ್ತನೆ ನೋಡಿದ ಸ್ಥಳೀಯರು ವಿಚಾರಿಸಿದ್ದಾರೆ. ಯಾವಾಗ ಸ್ಥಳೀಯರು ತರಾಟೆ ತೆಗೆದುಕೊಂಡರೋ ಹೈಡ್ರಾಮಾ ಶುರು ಮಾಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸುತ್ತೇನೆಂದು ಗಾಯಗೊಂಡಿರುವ ಕಾಲು ಹಿಡಿದು ಎಳೆಯುತ್ತಾನೆ. ಈ ಘಟನೆ ನೋಡಿದ ಸ್ಥಳೀಯರು ರಿಪ್ಪನಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ರಾಘವೇಂದ್ರ ಸ್ಥಳದಿಂದ ಪರಾರಿ ಆಗಿದ್ದಾನೆ.

ಸಾವು ಬದುಕಿನ ಮಧ್ಯೆ ಹೋರಾಟ

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಂಜುನಾಥ್‌ನನ್ನು ತಕ್ಷಣ ರಿಪ್ಪನಪೇಟೆ ಆಸ್ಪತ್ರೆಗೆ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಎರಡೂ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿದೆ. ತಲೆಗೂ ಬಲವಾದ ಪೆಟ್ಟು ಬಿದ್ದಿರುವುದರಿಂದ ಸ್ಥಿತಿ ಚಿಂತಾಜನಕವಾಗಿದೆ.

ಆರೋಪಿ ಅರೆಸ್ಟ್​​

ಅತ್ತ ನಡುರಸ್ತೆಯಲ್ಲಿ ನಡೆದ ಈ ಭೀಕರ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರಿಪ್ಪನಪೇಟೆ ಪೊಲೀಸರು, ಪರಾರಿಯಾಗಿದ್ದ ರಾಘವೇಂದ್ರನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಅಪಘಾತದಲ್ಲಿ ಯುವಕ-ಯುವತಿ ದುರ್ಮರಣ: ಆದಿಯೋಗಿ ದರ್ಶನ ಪಡೆದು ಮರಳುತ್ತಿದ್ದವರು ಮಸಣಕ್ಕೆ

ಒಟ್ಟಿನಲ್ಲಿ ಸ್ನೇಹಿತನಿಗೆ ಒಳ್ಳೆಯ ಮನಸ್ಸಿನಿಂದ ಬುದ್ಧಿ ಹೇಳಲು ಹೋದ ಜೀವವೊಂದು ಇಂದು ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಕುಡಿತದ ಅಮಲು ಮತ್ತು ಕ್ಷಣಿಕ ಆಕ್ರೋಶಕ್ಕೆ ವರ್ಷಗಳ ಸ್ನೇಹ ಬಲಿಯಾಗಿದ್ದು, ಮಂಜುನಾಥ್ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾತ್ರಿ ಮಲಗುವ ಒಂದು ಲೋಟ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಏನಾಗುತ್ತೆ ಗೊತ್ತಾ? – Kannada News | Benefits of drinking coriander water

ಕೊತ್ತಂಬರಿ ಬೀಜದ ನೀರು Image Credit source: Getty Images

ಪ್ರತಿಯೊಂದು ಭಾರತೀಯ ಅಡುಗೆಯಲ್ಲೂ ಕೊತ್ತಂಬರಿ ಬೀಜವನ್ನು (coriander seed) ಬಳಕೆ ಮಾಡೇ ಮಾಡುತ್ತೇವೆ. ಅಡುಗೆಯ ರುಚಿಯನ್ನು ಹೆಚ್ಚಿಸುವ ಈ ಪುಟ್ಟ ಬೀಜ ಆರೋಗ್ಯ ವೃದ್ಧಿಗೂ ಸಖತ್ ಪ್ರಯೋಜನಕಾರಿ. ಕೊತ್ತಂಬರಿ ಬೀಜ ಟೆರ್ಪೀನ್‌ಗಳು, ಕ್ವೆರ್ಸೆಟಿನ್ ಮತ್ತು ಟೋಕೋಫೆರಾಲ್‌ಗಳಂತಹ ಸಂಯುಕ್ತಗಳನ್ನು ಹೊಂದಿರುತ್ತವೆ. ಈ ಸಂಯುಕ್ತಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ ಅಲ್ಲದೆ ಇವುಗಳಲ್ಲಿ  ಪೊಟ್ಯಾಸಿಯಮ್, ಆಂಟಿಆಕ್ಸಿಡೆಂಟ್‌ಗಳು, ನಾರು, ಫ್ಲೇವನಾಯ್ಡ್‌ಗಳು, ವಿಟಮಿನ್‌ಗಳು ಸಿ ಮತ್ತು ಕೆ, ಕಬ್ಬಿಣ, ಉತ್ಕರ್ಷಣ ನಿರೋಧಕ ಅಂಶಗಳಿದ್ದು, ಇವೆಲ್ಲವೂ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿರುವ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿ ರಾತ್ರಿ ಮಲಗುವ ಒಂದು ಗಂಟೆಗೆ ಮುನ್ನ ಆ ನೀರನ್ನು ಕುಡಿಯುವುದರಿಂದ ದೇಹಕ್ಕೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಮಲಗುವ ಮುನ್ನ ಕೊತ್ತಂಬರಿ ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳೇನು?

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ರಾತ್ರಿ ಮಲಗುವ ಮುನ್ನ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಹೊಟ್ಟೆಯುಬ್ಬರ, ಮಲಬದ್ಧತೆ ಮತ್ತು ಆಮ್ಲೀಯತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಕೊತ್ತಂಬರಿ ಬೀಜದಲ್ಲಿರುವ ಜೀರ್ಣಕಾರಿ ಗುಣಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತವೆ.

ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ:

ನಿಮ್ಮ ದೇಹವನ್ನು ಹೈಡ್ರೇಟ್ ಆಗಿಡಲು ಬಯಸಿದರೆ, ನೀವು ಪ್ರತಿದಿನ ಕೊತ್ತಂಬರಿ ಬೀಜದ ನೀರನ್ನು ಕುಡಿಯಬಹುದು. ಇದು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮಲಗುವ ಸಮಯಕ್ಕೆ ಸುಮಾರು ಒಂದು ಗಂಟೆ ಮೊದಲು ನೀವು ಸ್ವಲ್ಪ ಪ್ರಮಾಣದ ಕೊತ್ತಂಬರಿ ನೀರನ್ನು ಸೇವಿಸಬಹುದು. ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸಲು ಸಹಕಾರಿ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಡುತ್ತದೆ:

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು, ನೀವು ಪ್ರತಿ ರಾತ್ರಿ ಮಲಗುವ ಒಂದು ಗಂಟೆಗೆ ಮುನ್ನ ಕೊತ್ತಂಬರಿ ನೀರನ್ನು ಸೇವಿಸಬೇಕು. ನಿಮಗೆ ಮಧುಮೇಹವಿದ್ದರೆ ಮತ್ತು  ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿದ ನಂತರವೇ ನೀವು ಕೊತ್ತಂಬರಿ ಬೀಜದ ನೀರನ್ನು ಸೇವನೆ ಮಾಡುವುದು ಉತ್ತಮ.

ದೇಹವನ್ನು ನಿರ್ವಿಷಗೊಳಿಸುತ್ತದೆ:

ಕೊತ್ತಂಬರಿ ನೀರು ದೇಹದಿಂದ ವಿಷವನ್ನು ಹೊರ ಹಾಕಿ ದೇಹವನ್ನು ಸಕ್ರಿಯ ಮತ್ತು ಆರೋಗ್ಯಕರವಾಗಿಡುತ್ತದೆ. ಪ್ರತಿದಿನ ಕೊತ್ತಂಬರಿ ನೀರು ಕುಡಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ. ಇದಲ್ಲದೆ, ಇದು  ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ 15 ನಿಮಿಷಗಳ ಬಾಲಾಸನ ಮಾಡಿ, ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ

ತೂಕ ಇಳಿಸಿಕೊಳ್ಳಲು ಸಹಕಾರಿ:

ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಖಂಡಿತವಾಗಿಯೂ ಕೊತ್ತಂಬರಿ ಬೀಜದ ನೀರನ್ನು ಕುಡಿಯಬಹುದು. ಈ ನೀರು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆಇದು ಅತ್ಯುತ್ತಮ ಆಯ್ಕೆಯಾಗಿದೆ.

ಉತ್ತಮ ನಿದ್ರೆ ಪಡೆಯಲು ಸಹಕಾರಿ:

ಕೊತ್ತಂಬರಿ ಬೀಜಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತವೆ. ಆದ್ದರಿಂದ ಪ್ರತಿರಾತ್ರಿ ಕೊತ್ತಂಬರಿ ಬೀಜದ ನೀರನ್ನು ಕುಡಿಯುವುದರಿಂದ ನಿದ್ರೆಯ ಗುಣಮಟ್ಟವನ್ನು ಸುಧಾರಿಸಬಹುದು.

ಬೆಳಿಗ್ಗೆ ಹಗುರವಾದ ಅನುಭವ:

ಕೊತ್ತಂಬರಿ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಮಲಗುವ ಮುನ್ನ ಕೊತ್ತಂಬರಿ ಬೀಜದ ನೀರನ್ನು ಕುಡಿದರೆ, ಬೆಳಿಗ್ಗೆ ಹೊತ್ತಿಗೆ ನಿಮ್ಮ ಹೊಟ್ಟೆ ತುಂಬಾ ಹಗುರವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವು ಎಟಿಎಂನಲ್ಲಿ ಹಣ ಡ್ರಾ ಮಾತ್ರ ಮಾಡ್ಬಹುದು ಅಂದುಕೊಂಡ್ರಾ? ಈ ಕೆಲ್ಸಗಳನ್ನು ಮಾಡ್ಬಹುದು – Kannada News | ATM: What tasks can be performed at an ATM without visiting the bank?

ಎಟಿಎಂ (ATM) ಯಂತ್ರಗಳು ಕೇವಲ ಹಣ ಪಡೆಯಲು ಹಾಗೂ ಜಮಾ ಮಾಡ್ಬಹುದು ಮಾತ್ರ ಅಂದುಕೊಂಡ್ರಾ, ನೀವು ತಪ್ಪು ತಿಳಿದುಕೊಂಡಿದ್ದೀರಾ. ಎಟಿಎಂನ್ನು ಬ್ಯಾಂಕ್ ಖಾತೆಯ (Bank Account) ಬಾಕಿ ಪರಿಶೀಲನೆ, ಹಣ ವರ್ಗಾವಣೆ, ಬಿಲ್ ಪಾವತಿ ಮತ್ತು ಪಿನ್ ಬದಲಾವಣೆ ಸೇರಿದಂತೆ ಅನೇಕ ಪ್ರಮುಖ ಬ್ಯಾಂಕಿಂಗ್ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಇದು ನಿಮ್ಮ ಈ ಕೆಲಸಗಳನ್ನು ಸುಲಭಗೊಳಿಸುವುದಲ್ಲದೆ ಸಮಯವನ್ನು ಉಳಿಸುತ್ತದೆ.

ಎಟಿಎಂನಲ್ಲಿ ಏನೆಲ್ಲಾ ಕೆಲಸಗಳನ್ನು ಮಾಡ್ಬಹುದು?

ಹಣ ವಿಥ್ ಡ್ರಾ: ನೀವು ದಿನದ 24 ಗಂಟೆಗಳಲ್ಲಿ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ಪಡೆಯಬಹುದು.

ಹಣ ಠೇವಣಿ: ಆಧುನಿಕ ಎಟಿಎಂ ಯಂತ್ರಗಳ ಮೂಲಕ ನೇರವಾಗಿ ಖಾತೆಗೆ ಹಣವನ್ನು ಜಮಾ ಮಾಡಲು ಬಹುದಾಗಿದೆ. ಹಣ ಜಮಾ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ.

ಮಿನಿ ಸ್ಟೇಟ್‌ಮೆಂಟ್: ನಿಮ್ಮ ಕೊನೆಯ ಕೆಲವು ವಹಿವಾಟುಗಳ ಸ್ಟೇಟ್ ಮೆಂಟ್ ಪಡೆಯಲು ಅವಕಾಶವಿದೆ.

ಬ್ಯಾಲೆನ್ಸ್ ಪರಿಶೀಲನೆ: ಖಾತೆಯಲ್ಲಿ ಎಷ್ಟು ನಗದು ಅಥವಾ ಹಣ ಉಳಿದಿದೆ ಎಂಬುದನ್ನು ಎಟಿಎಂ ಬಳಸಿ ಸ್ಕ್ರೀನ್ ಮೇಲೆ ನೋಡಬಹುದು.

ಬಿಲ್ ಪಾವತಿ: ವಿದ್ಯುತ್ ಬಿಲ್, ಮೊಬೈಲ್ ಬಿಲ್ ಮತ್ತು ವಿಮಾ ಪ್ರೀಮಿಯಂ ಪಾವತಿಗಳನ್ನು ನೇರವಾಗಿ ಎಟಿಎಂ ಮೂಲಕ ಮಾಡಬಹುದು.

ಇತರ ಕೆಲಸಗಳು: ಮೊಬೈಲ್ ಬ್ಯಾಂಕಿಂಗ್ ನೋಂದಣಿ ಹಾಗೂ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಅವಕಾಶವಿದೆ.

ಪಿನ್ ಬದಲಾವಣೆ: ನಿಮ್ಮ ಎಟಿಎಂ ಕಾರ್ಡ್‌ನ ಪಿನ್ ಸಂಖ್ಯೆಯನ್ನು ಬದಲಾಯಿಸಬಹುದು.

ಹಣ ವರ್ಗಾವಣೆ: ನಿಮ್ಮ ಖಾತೆಯಿಂದ ಅದೇ ಬ್ಯಾಂಕ್ ಖಾತೆಗೆ ಅಥವಾ ಇತರೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಬಹುದು.

ಇದನ್ನೂ ಓದಿ: ಕ್ರೆಡಿಟ್ ಸ್ಕೋರ್ ಕಡಿಮೆಯಿದ್ರೂ ನೀವು ಬ್ಯಾಂಕ್‌ನಿಂದ ಹೀಗೆ ಸಾಲ ಪಡೆಯಿರಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQs)

ಪ್ರಶ್ನೆ: ಎಟಿಎಂ ಇದರ ಪೂರ್ಣರೂಪವೇನು?

ಉತ್ತರ: ಎಟಿಎಂ ಎಂದರೆ ಸ್ವಯಂಚಾಲಿತ ಟೆಲ್ಲರ್ ಯಂತ್ರ.

ಪ್ರಶ್ನೆ: ಎಟಿಎಂ ಮೂಲಕ ದಿನಕ್ಕೆ ಎಷ್ಟು ಹಣವನ್ನು ಪಡೆಯಬಹುದು?

ಉತ್ತರ: ಎಟಿಎಂಗಳಲ್ಲಿ ದಿನಕ್ಕೆ 20,000 ರೂಯಿಂದ 1,00,000 ರೂವರೆಗೆ ಹಣ ಪಡೆಯಬಹುದು.

ಪ್ರಶ್ನೆ: ಎಟಿಎಂನ ಪ್ರಯೋಜನಗಳೇನು?

ಉತ್ತರ: ಎಟಿಎಂನಿಂದ ನಗದು ಪಡೆಯಲು, ಬ್ಯಾಂಕ್ ಖಾತೆಯ ಬಾಕಿ ಪರಿಶೀಲಿಸಲು, ಹಣ ವರ್ಗಾವಣೆ, ಬಿಲ್ ಪಾವತಿ, ಪಿನ್ ಬದಲಾವಣೆ ಹೀಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:25 pm, Sun, 16 August 26

Source link

Exit mobile version