ಆ ಎರಡು ರಾಜ್ಯಗಳಲ್ಲಿ ‘ರಾಕಾ’ಗೆ ಭಾರಿ ಬೇಡಿಕೆ: ಹಕ್ಕು ಮಾರಾಟಕ್ಕೆ ಹರಾಜು ವಿಧಾನ? – Kannada News | Huge demand for Allu Arjun’s Raaka movie in UP and Bihar

ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಭಾರತದಾದ್ಯಂತ ಭಾರಿ ದೊಡ್ಡ ಹಿಟ್ ಆಗಿವೆ. ಅದರಲ್ಲೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಂತೂ ಸಿನಿಮಾ ಸೂಪರ್ ಬ್ಲಾಕ್ ಬಸ್ಟರ್ ಆಗಿವೆ. ಇದೀಗ ಅಲ್ಲು ಅರ್ಜುನ್ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದು, ಅಟ್ಲಿ ನಿರ್ದೇಶನದ ಈ ಸಿನಿಮಾದ ಚಿತ್ರೀಕರಣ ಇನ್ನೂ ಸಾಕಷ್ಟು ಬಾಕಿ ಇದೆ. ಹೀಗಿರುವಾಗಲೇ ಉತ್ತರ ಭಾರತದ ಎರಡು ರಾಜ್ಯಗಳಲ್ಲಿ ‘ರಾಕಾ’ ಸಿನಿಮಾದ ಹಕ್ಕು ಖರೀದಿಗೆ ಪೈಪೋಟಿ ಶುರುವಾಗಿದೆ. ಭಾರಿ ದೊಡ್ಡ ಮೊತ್ತದ ಆಫರ್…

Read More

ಚಪ್ಪರಿಸಿ ತಿನ್ನುತ್ತಿದ್ದ ಪನೀರ್ ಟಿಕ್ಕಾ ರೋಲ್​​ನಲ್ಲಿ ಹಲ್ಲಿ ಕಂಡು ಬೆಚ್ಚಿಬಿದ್ದ ಬೆಂಗಳೂರಿನ ಕ್ಯಾಬ್​​ ಚಾಲಕ – Kannada News | Bengaluru Bakery Shock: Lizard Found in Paneer Tikka Roll, Customer Hospitalized

ಬೆಂಗಳೂರು, ಏಪ್ರಿಲ್​​ 29: ಬೇಕರಿ ತಿಂಡಿಗಳಂದರೆ ಬಹುತೇಕ ಯುವ ಜನತೆಗೆ ಅಚ್ಚುಮೆಚ್ಚು. ಕೆಲವರಿಗಂತೂ ದಿನಕ್ಕೆ ಒಮ್ಮೆಯಾದರೂ ಬೇಕರಿಗೆ ಭೇಟಿ ನೀಡದಿದ್ದರೆ ಸಮಾಧಾನವೇ ಇರೋದಿಲ್ಲ. ಆದರೆ ಬೆಂಗಳೂರಲ್ಲಿ ಜನ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದ್ದು, ಬೇಕರಿಯಲ್ಲಿ ಖರೀದಿಸಿದ ಪನೀರ್ ಟಿಕ್ಕಾ ರೋಲ್‌ನಲ್ಲಿ ಹಲ್ಲಿ ಕಂಡುಬಂದಿರುವ ಘಟನೆ ಮಾಗಡಿ ಮುಖ್ಯ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪ ನಡೆದಿದೆ. ಇದನ್ನು ಸೇವಿಸಿದ್ದ 32 ವರ್ಷದ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾನೆ. ಘಟನೆ ಏನು? ಅಗ್ರಹಾರ ದಾಸರಹಳ್ಳಿಯ ನಿವಾಸಿಯಾಗಿರುವ ಕ್ಯಾಬ್​​ ಚಾಲಕನಿಗೆ ಏಪ್ರಿಲ್ 25ರಂದು…

Read More

ಧಾರಾಕಾರ ಮಳೆಗೆ ಬೆಂಗಳೂರು ತತ್ತರ: ಬಿರುಗಾಳಿಗೆ 50ಕ್ಕೂ ಹೆಚ್ಚು ಮರಗಳು ಧರೆಗೆ; ವಾಹನಗಳು ಜಖಂ

ಬಿಸಿಲಿಗೆ ಬೆಂದಿದ್ದ ಬೆಂದಕಾಳೂರಲ್ಲಿಂದು ಕಂಡು ಕೇಳರಿಯದ ಮಳೆ ಅಬ್ಬರಿಸಿದೆ. ಸಂಜೆ ಅಬ್ಬರಿಸಿದ ಮಳೆಗೆ ಬೆಂಗಳೂರಿನಲ್ಲಿ ನಾನಾ ಅವಾಂತರಗಳು ಸಂಭವಿಸಿವೆ. ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿರುವುದು ಒಂದು ಕಡೆಯಾದರೆ, ನಗರದಲ್ಲಿ 50ಕ್ಕೂ ಹೆಚ್ಚು ಬೃಹತ್ ಮರಗಳೇ ಧರೆಗುರುಳಿವೆ. ವಿಜಯನಗರ, R​.T.ನಗರ, ಶೇಷಾದ್ರಿಪುರಂ, ಜಯನಗರ, ಚಾಮರಾಜಪೇಟೆ, ಜೆಪಿ ನಗರ, ಕಬ್ಬನ್​ಪಾರ್ಕ್​, ಹೈಗ್ರೌಂಡ್ಸ್​​, ಉಪ್ಪಾರಪೇಟೆ, ಹಲಸೂರುಗೇಟ್​, ವಿಲ್ಸನ್​ಗಾರ್ಡನ್​, ಮೈಕೋಲೇಔಟ್, ಸದಾಶಿವನಗರದಲ್ಲಿ​ ಬೃಹತ್ ಮರಗಳು ಧರೆಗುರುಳಿವೆ. ಗುಡುಗು, ಸಿಡಿಲು ಆಲಿಕಲ್ಲು ಮಳೆಗೆ ಬಸವನಗುಡಿಯಲ್ಲಿ ಮರಗಳೇ ಧರೆಗುರುಳಿವೆ. ಇದ್ರಿಂದ ಕಾರು, ಬಸ್, ಲಾರಿ…

Read More

ಈ ರಾಶಿಯವರು ಒಂದು ಪಡೆಯಲು ಮತ್ತೊಂದು ಕಳೆದುಕೊಳ್ಳಬೇಕು: ಮೇ ತಿಂಗಳಲ್ಲಿ ನಿಮ್ಮ ಕೈಹಿಡಿಯುತ್ತಾನೆ ಕುಬೇರ – Kannada News | Kubera Yoga May 2026: Unlock Your Fortune & Overcome Challenges This Month

ಮೇ 2026 ರಲ್ಲಿ ಕುಜನು ಸ್ವಕ್ಷೇತ್ರವಾದ ಮೇಷದಲ್ಲಿ, ರವಿ ವೃಷಭದಲ್ಲಿ, ಬುಧನು ಸ್ವಕ್ಷೇತ್ರ ಮಿಥುನದಲ್ಲಿ, ಶುಕ್ರನೂ ಮಿಥುನದಲ್ಲಿ ಇರಲಿದ್ದು ಸ್ವಕ್ಷೇತ್ರದ ಗ್ರಹಗಳ ಸ್ಥಿತಿ ಹಾಗೂ ಅವರ ದೃಷ್ಟಿಯ ಪರಿಣಾಮ ಎಲ್ಲ ರಾಶಿಗೂ ಆಗಲಿದೆ. ಕುಲದೇವಾತಾರಾಧನೆಯನ್ನು ಏಕಾಗ್ರತೆಯಿಂದ ಪ್ರತಿದಿನ ಮಾಡಿ. ಮೇಷ: ಸಾಹಸದ ಮೇಲೇರಿ ಸವಾರಿ ಮಾಡಲೂಬಹುದು. ಈ ತಿಂಗಳು ನಿಮ್ಮ ವೇಗಕ್ಕೆ ಯಾರೂ ಕಡಿವಾಣ ಹಾಕಲಾಗದು! ವೃತ್ತಿರಂಗದಲ್ಲಿ ನೀವು ರಿಯಲ್ ಹೀರೋ. ಆರ್ಥಿಕವಾಗಿ ಧನಲಕ್ಷ್ಮಿ ಒಲಿಯಲಿದ್ದಾಳೆ, ಆದರೆ ಖರ್ಚಿನ ಮೇಲೆ ಹಿಡಿತವಿರಲಿ. ಪ್ರೀತಿಯ ಹಾದಿಯಲ್ಲಿ ಹೊಸ ಸಂಚಲನ…

Read More

‘ಸರ್ಸೆ ಸೆರಗು’ ಹಾಡು ವಿವಾದ: ಪ್ರೇಮ್ ಪರ ಕಿಚ್ಚ ಸುದೀಪ್ ಬ್ಯಾಟಿಂಗ್ – Kannada News | KD Song controversy Sudeep supports Director Prem

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೆ ಸಿನಿಮಾದ ಟ್ರೈಲರ್ ಸಹ ಬಿಡುಗಡೆ ಆಗಿದೆ. ಚಿತ್ರತಂಡ ಇತ್ತೀಚೆಗಷ್ಟೆ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು, ಸುದ್ದಿಗೋಷ್ಠಿಯಲ್ಲಿ ನಟ ಸುದೀಪ್ ಸಹ ಭಾಗಿ ಆಗಿದ್ದರು. ‘ಕೆಡಿ’ ಸಿನಿಮಾನಲ್ಲಿ ಸುದೀಪ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರು ಸಿನಿಮಾದ ಬಗ್ಗೆ, ತಮ್ಮ ಹಾಗೂ ಪ್ರೇಮ್ ಅವರ ಗೆಳೆತನದ ಬಗ್ಗೆ, ಧ್ರುವ ಸರ್ಜಾ ಬಗ್ಗೆ ಇನ್ನೂ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದರು. ಅದೇ…

Read More

MI vs SRH: ಮುಂಬೈ ಪರ ಅತಿವೇಗದ ಶತಕ ಬಾರಿಸಿದ ರಿಯಾನ್ ರಿಕಲ್ಟನ್ – Kannada News | IPL 2026: Ryan Rickelton Blazes Fastest MI Century vs SRH, Breaks Record!

ಐಪಿಎಲ್ 2026 ರ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಪರ ಆರಂಭಿಕ ರಿಯಾನ್ ರಿಕಲ್ಟನ್ ಸ್ಫೋಟಕ ಶತಕ ಬಾರಿಸುವ ಮೂಲಕ ತಂಡವನ್ನು 200 ರನ್​ಗಳ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 44 ಎಸೆತಗಳನ್ನು ಎದುರಿಸಿದ ರಿಕಲ್ಟನ್ ಎಂಟು ಬೌಂಡರಿ ಮತ್ತು ಏಳು ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಮುಂಬೈ…

Read More

ಪ್ರತಿನಿತ್ಯ ಸಂಗೀತ ಕೇಳುವುದರಿಂದ ಏನೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಗೊತ್ತಾ? – Kannada News | Is it a good habit to listen to music every day?

ಸಂಗೀತ (music) ಕೇಳುವುದರಿಂದ ಮನಸ್ಸಿಗೆ ತೃಪ್ತಿಯಾಗುತ್ತದೆ. ಆದ್ದರಿಂದ ಮನಸ್ಸಿಗೆ ಖುಷಿಯಾದಾಗ, ಬೇಜಾರಾದಾಗ ಹೆಚ್ಚಿನವರು ಸಂಗೀತವನ್ನು ಆಲಿಸುತ್ತಾರೆ. ಅದರಲ್ಲೂ ಕೆಲವರಂತೂ ಪ್ರತಿನಿತ್ಯ ಹಾಡು ಕೇಳುತ್ತಾರೆ. ಹೀಗೆ ಮನಸ್ಸಿನ ಖುಷಿಗೆ, ಮನೋರಂಜನೆಯ ಉದ್ದೇಶದಿಂದ ಆಲಿಸುವ ಸಂಗೀತದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳೂ ಲಭಿಸುತ್ತವೆಯಂತೆ. ಹೌದು ಹಾಡು ಕೇಳುವುದರಿಂದ ನಮಗೆ ಮನರಂಜನೆ ಸಿಗುವುದಲ್ಲದೆ, ಒತ್ತಡ ಕಡಿಮೆಯಾಗಿ ಮನಸ್ಸೂ ಹಗುರವಾಗುತ್ತದೆ. ಹಾಗಿದ್ದರೆ ಒಟ್ಟಾರೆಯಾಗಿ ಸಂಗೀತ ಕೇಳುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ. ಸಂಗೀತ ಕೇಳುವುದರಿಂದ ಲಭಿಸುವ ಪ್ರಯೋಜನಗಳೇನು? ಒತ್ತಡ ಕಡಿಮೆಯಾಗುತ್ತದೆ: ಸಂಗೀತ…

Read More

ಬೆಂಗಳೂರು ಮಳೆಗೆ ಮತ್ತೊಂದು ಬಲಿ: ಬೈಕ್ ಪಾರ್ಕ್ ಮಾಡುವಾಗ ವಿದ್ಯುತ್ ಶಾಕ್ ತಗುಲಿ ಪಿಯುಸಿ ವಿದ್ಯಾರ್ಥಿ ಸಾವು! – Kannada News | Bengaluru Monsoon Mayhem: Rain Claims 8 Lives, Electrocution and Compound Collapse

ಬೆಂಗಳೂರು, ಏ.29: ರಾಜಧಾನಿಯಲ್ಲಿ ಇಂದು ಆರ್ಭಟಿಸಿದ ಮಳೆಯು ಸಾವು-ನೋವುಗಳ ಸರಣಿಯನ್ನೇ ಸೃಷ್ಟಿಸುತ್ತಿದೆ. ಈಗಾಗಲೇ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ರಸ್ತೆ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೊಂದು ಸಾವು ಸಂಭವಿಸಿದೆ. ನಗರದ ಯಾರಬ್ ನಗರದಲ್ಲಿ ವಿದ್ಯುತ್ ಶಾಕ್ ತಗುಲಿ ಸೈಯದ್ ಸೂಫಿಯಾನ್ ಎಂಬ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ ಸೈಯದ್ ಸೂಫಿಯಾನ್, ಸಂಜೆ ಮಳೆ ಸುರಿಯುತ್ತಿದ್ದ ವೇಳೆ ಯಾರಬ್ ನಗರದಲ್ಲಿ ತನ್ನ ಬೈಕ್…

Read More

Tamil Nadu Election Exit Poll Results 2026: ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ – Kannada News | Tamil Nadu Assembly Election Exit Poll Results 2026 News and Updates in Kannada Tamil nadu Vidhan Sabha DMK AIADMK BJP

ಚೆನ್ನೈ, ಏಪ್ರಿಲ್ 29: ಎಕ್ಸಿಟ್ ಪೋಲ್ ಸಮೀಕ್ಷೆಗಳು (Exit Poll) ಡಿಎಂಕೆ ಮೈತ್ರಿಕೂಟ ಗರಿಷ್ಠ 103ರಿಂದ 169 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ. ಇದರೊಂದಿಗೆ, ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಮೈತ್ರಿಕೂಟವು ತಮಿಳುನಾಡಿನಲ್ಲಿ ಮತ್ತೆ ಗೆದ್ದು ಸರ್ಕಾರ ರಚಿಸುವ ಸಾಧ್ಯತೆಯಿದೆ. ಕಳೆದ ಚುನಾವಣೆಯಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ 133 ಸ್ಥಾನಗಳನ್ನು ಗೆದ್ದಿದ್ದವು. ಈ ಮೈತ್ರಿಕೂಟದ ಭಾಗವಾಗಿದ್ದ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿತ್ತು ಮತ್ತು ಇತರ ಮೈತ್ರಿ ಪಕ್ಷಗಳು 8 ಸ್ಥಾನಗಳನ್ನು ಗೆದ್ದಿದ್ದವು. 234 ಸದಸ್ಯರ…

Read More

ನೆಲಮಂಗಲ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ; ಬೆಚ್ಚಿಬಿದ್ದ ಭೋವಿಪಾಳ್ಯ ಗ್ರಾಮಸ್ಥರು! – Kannada News | Coconut Tree Catches Fire in Nelamangala Due to Lightning Strike During Monsoon

ನೆಲಮಂಗಲ, ಏ.29: ತಾಲ್ಲೂಕಿನಾದ್ಯಂತ ಸಂಜೆ ಸುರಿದ ಭಾರಿ ಮಳೆಯ ನಡುವೆ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತಿ ಉರಿದ ಘಟನೆ ಬೂದಿಹಾಲ್‌ನ ಭೋವಿಪಾಳ್ಯದಲ್ಲಿ ನಡೆದಿದೆ. ಬೆಂಕಿ ಉರಿಯುತ್ತಿದ್ದ ದೃಶ್ಯ ಕಂಡು ಗ್ರಾಮಸ್ಥರು ಕೆಲಕಾಲ ಆತಂಕಕ್ಕೊಳಗಾಗಿದ್ದರು. ಬುಧವಾರ ಸಂಜೆ ನೆಲಮಂಗಲ ಸುತ್ತಮುತ್ತ ಗುಡುಗು ಸಹಿತ ಭಾರಿ ಮಳೆ ಸುರಿಯುತ್ತಿತ್ತು. ಈ ವೇಳೆ ಭೋವಿಪಾಳ್ಯ ಗ್ರಾಮದ ತೆಂಗಿನ ಮರವೊಂದಕ್ಕೆ ನೇರವಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದ ರಭಸಕ್ಕೆ ಮರದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು, ಮರವು ಹೊತ್ತಿ ಉರಿಯತೊಡಗಿತು. ವಿಡಿಯೋ ಸುದ್ದಿಗಳನ್ನು…

Read More