ಬೆಂಗಳೂರು ಮಳೆ ಅಬ್ಬರ: ವಿಧಾನಸೌಧಕ್ಕೂ ನುಗ್ಗಿ ನೀರು; ಆರ್. ಅಶೋಕ್ ಕೊಠಡಿ ಜಲಾವೃತ! – Kannada News | Heavy Rain Exposes Vidhana Soudha Waterlogging, Raises Preparedness Concerns
ಬೆಂಗಳೂರು, ಏ.29: ರಾಜ್ಯ ರಾಜಧಾನಿಯಲ್ಲಿ ಕಳೆದ ಹಲವಾರು ದಿನಗಳ ಬಿಸಿಲಿನ ತಾಪಮಾನದ ನಂತರ ಭಾರಿ ಮಳೆ ಸುರಿದಿದೆ. ಈ ಧಾರಾಕಾರ ಮಳೆಯ ಪರಿಣಾಮವಾಗಿ ರಾಜ್ಯದ ಪ್ರಮುಖ ಆಡಳಿತ ಕೇಂದ್ರವಾದ ವಿಧಾನಸೌಧ ಜಲಾವೃತಗೊಂಡಿದೆ. ವಿಧಾನಸೌಧದ ಸುತ್ತಮುತ್ತ ಭಾರೀ ಗಾಳಿ ಸಹಿತ ಆಲಿಕಲ್ಲು ಮಳೆ ದಾಖಲಾಗಿದೆ. ಮಳೆಯ ತೀವ್ರತೆಯಿಂದಾಗಿ ವಿಧಾನಸೌಧದ ಮೂರು ಮಹಡಿಗಳ ಕಾರಿಡಾರ್‌ಗಳಲ್ಲಿ ಸಂಪೂರ್ಣವಾಗಿ ನೀರು ನಿಂತಿದೆ. ಈ ಪರಿಸ್ಥಿತಿಯಿಂದಾಗಿ ಸಾರ್ವಜನಿಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ನೌಕರರು ನೀರಿನಲ್ಲೇ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ವಿರೋಧ ಪಕ್ಷದ ನಾಯಕ…