ಆಲಿಕಲ್ಲು ಸಹಿತ ಗಾಳಿ ಮಳೆಗೆ ಬೆಚ್ಚಿದ ಬೆಂಗಳೂರು: ವರುಣನ ಅಬ್ಬರಕ್ಕೆ ಸಾಲು ಸಾಲು ಅನಾಹುತ – Kannada News | Heavy Summer Rain in Bengaluru Causes Widespread Waterlogging and Fallen Trees

ಬೆಂಗಳೂರು, ಏಪ್ರಿಲ್ 29: ಭಾರಿ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ನಗರದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಂತಿನಗರ ಸುತ್ತಮುತ್ತಲ ಹಲವು ರಸ್ತೆಗಳು ಜಲಾವೃತಗೊಂಡಿದ್ದು, ನಿಂತಿದ್ದ ವಾಹನಗಳು, ಕಾರುಗಳು ಸಂಪೂರ್ಣವಾಗಿ ಮುಳುಗಿವೆ. ಮಳೆಯ ತೀವ್ರತೆಗೆ ಗಾಳಿಯ ಆರ್ಭಟವೂ ಸೇರಿಕೊಂಡಿದ್ದು, ಒಣಗಿದ ಮರದ ರೆಂಬೆಗಳು ಮತ್ತು ಕೊಂಬೆಗಳು ಗಾಳಿಯಲ್ಲೇ ಹಾರಿ ಬಂದಿವೆ. ಆಲಿಕಲ್ಲು ಸಹಿತ ಭಾರಿ ಮಳೆಯಿಂದಾಗಿ ಕಮಿಷನರ್ ಕಚೇರಿ ಬಳಿ ಸೇರಿದಂತೆ ನಗರದ ಹಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿರುವ ಸಾಧ್ಯತೆ ಇದೆ. ಕಳೆದ ಎರಡು ಮೂರು ತಿಂಗಳಿಂದ 30ರಿಂದ 35 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದ್ದ ತೀವ್ರ ಬಿಸಿಲಿನ ಬೇಗೆಯ ನಂತರ ಈ ಮಳೆಯು ತಂಪೆರೆದಿದ್ದರೂ, ಇದರ ಅನಿರೀಕ್ಷಿತ ಮತ್ತು ತೀವ್ರ ಸ್ವರೂಪವು ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟುಮಾಡಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ – Kannada News | Drishyam 3 movie teaser released, movie to be released on May 21

ಭಾರತೀಯ ಚಿತ್ರರಂಗದ (Movie Industry) ಅತ್ಯಂತ ಯಶಸ್ವಿ ಕ್ರೈಮ್ ಥ್ರಿಲ್ಲರ್ ಸರಣಿಗಳಲ್ಲಿ ಒಂದಾದ ‘ದೃಶ್ಯಂ’ನ ಮೂರನೇ ಭಾಗದ ಟೀಸರ್ ಇಂದು (ಏಪ್ರಿಲ್ 29) ಬಿಡುಗಡೆಯಾಗಿದೆ. ಭಾರಿ ಜನಪ್ರಿಯತೆ ಮತ್ತು ಅಭಿಮಾನಿಗಳನ್ನು ಹೊಂದಿರುವ ‘ದೃಶ್ಯಂ’ ಸರಣಿಯ ಕೊನೆಯ ಭಾಗ ಇದಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸಿನಿಮಾದ ಬಗ್ಗೆ ಭಾರಿ ಕುತೂಹಲ ಇದೆ. ಇದೀಗ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಮೊದಲೆರಡು ಸಿನಿಮಾಗಳಿಗಿಂತಲೂ ಬಹಳ ಭಿನ್ನವಾಗಿ ಈ ಸಿನಿಮಾ ಇರಲಿದೆ ಎಂಬುದನ್ನು ಟೀಸರ್ ಸಾರಿ ಹೇಳುತ್ತಿದೆ.

ಸುಮಾರು 1 ನಿಮಿಷ 50 ಸೆಕೆಂಡ್‌ಗಳ ಈ ಟೀಸರ್ ನಲ್ಲಿ ಈ ಹಿಂದಿನ ಎರಡು ಭಾಗಗಳ ಕ್ಲೈಮ್ಯಾಕ್ಸ್ ದೃಶ್ಯಗಳ ಮೆಲುಕು ಹಾಕುವುದರೊಂದಿಗೆ ಪ್ರಾರಂಭವಾಗುತ್ತದೆ. ತಮ್ಮ ಕುಟುಂಬ ಹೇಗಿತ್ತು, ಆ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಲು ಒಬ್ಬಾತ ಬಂದಿದ್ದು, ಆತನನ್ನು ಬಾರದ ಲೋಕಕ್ಕೆ ಕಳಿಸಿದ್ದು, ಬಳಿಕ ಎದುರಾದ ಸರಣಿ ಸಂಕಟಗಳು, ಎರಡನೇ ಭಾಗದ ಕ್ಲೈಮ್ಯಾಕ್ಸ್​​ನಲ್ಲಿ ಜಾರ್ಜ್ ಕುಟ್ಟಿ, ಯುವಕನ ಕುಟುಂಬದ ಮೇಲೆ ಕಣ್ಣಿಟ್ಟಿರುವುದು ಎಲ್ಲವನ್ನೂ ತೋರಿಸಲಾಗಿದೆ. ಇದೆಲ್ಲವನ್ನೂ ತೋರಿಸಿದ ಬಳಿಕ ಜಾರ್ಜ್ ಕುಟ್ಟಿ ಚರ್ಚ್ ಒಂದರಲ್ಲಿ ಏಸು ಕ್ರಿಸ್ತನ ಮೂರ್ತಿಯೆದುರು ಮಂಡಿಯೂರಿ ಕೂತಿರುವ ದೃಶ್ಯ ತೋರಿಸಲಾಗಿದೆ. ಎಲ್ಲವನ್ನೂ ‘ಕನ್​ಫೆಸ್’ ಮಾಡಿಕೊಳ್ಳುವ ರೀತಿಯಲ್ಲಿ ಜಾರ್ಜ್ ಕುಟ್ಟಿ ಕೂತಿದ್ದಾನೆ.

ಏಸುವಿನ ಎದುರು ಪ್ರಾರ್ಥಿಸುತ್ತಾ, ‘ನಾನೊಬ್ಬ ಸಾಮಾನ್ಯ ಮನುಷ್ಯ, ನನ್ನ ಪ್ರಪಂಚ ಬಹಳ ಚಿಕ್ಕದು, ನನ್ನ ಕುಟುಂಬವನ್ನು ರಕ್ಷಿಸುವ ಈ ಪಯಣದಲ್ಲಿ ನಾನು ಎಷ್ಟೋಂದು ಜನರಿಗೆ ತೊಂದರೆ ಕೊಟ್ಟಿದ್ದೇನೆ’ ಎಂದು ಹೇಳುತ್ತಾ “ನಾನು ಭಯವಾಗುತ್ತಿದೆ, ಈ ಬಾರಿ ನಮ್ಮನ್ನು ಯಾರೋ ಗಮನಿಸುತ್ತಿದ್ದಾರೆ ಎನಿಸುತ್ತಿದೆ’ ಎನ್ನುತ್ತಾನೆ. ಜಾರ್ಜ್ ಕುಟ್ಟಿಯ ಈ ಮಾತುಗಳು ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿವೆ.

ಇದನ್ನೂ ಓದಿ:ಜಪಾನ್​ಗೆ ಲಗ್ಗೆ ಇಡಲು ರೆಡಿಯಾದ ‘ಧುರಂಧರ್’ ಸಿನಿಮಾ; ಹೆಚ್ಚಲಿದೆ ಗಳಿಕೆ

ಈ ಹಿಂದಿನ ಎರಡು ‘ದೃಶ್ಯಂ’ ಸಿನಿಮಾ ನಿರ್ದೇಶಿಸಿರುವ ಜೀತು ಜೋಸೆಫ್ ಅವರೇ ‘ದೃಶ್ಯಂ 3’ ಸಿನಿಮಾವನ್ನೂ ನಿರ್ದೇಶಿಸಿದ್ದಾರೆ. ಈ ಹಿಂದೆ ಸಿನಿಮಾ ನಿರ್ಮಿಸಿದ್ದ ಮೋಹನ್​​ಲಾಲ್ ಅವರ ಆಪ್ತ ಆಂಟೊನಿ ಪೆರಂಬೂರು ಅವರೇ ಈ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ. ಸಿನಿಮಾ ಮೇ 21 ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಲಿದೆ. ಅದೇ ದಿನ ಮೋಹನ್‌ಲಾಲ್ ಅವರ 66ನೇ ಹುಟ್ಟುಹಬ್ಬ ಸಹ ಆಗಿದೆ. ಸಿನಿಮಾನಲ್ಲಿ ಮೋಹನ್​​ಲಾಲ್ ಜೊತೆಗೆ ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ಧಿಕ್ ಇನ್ನೂ ಹಲವರು ನಟಿಸಿದ್ದಾರೆ.

ಮೊದಲ ‘ದೃಶ್ಯಂ’ ಸಿನಿಮಾ ಕನ್ನಡದಲ್ಲಿ ರೀಮೇಕ್ ಆಗಿ ಸೂಪರ್ ಹಿಟ್ ಆಗಿತ್ತು. ಆದರೆ ‘ದೃಶ್ಯಂ 2’ ಸಿನಿಮಾ ರೀಮೇಕ್ ಮಾಡಲಿಲ್ಲ. ಆದರೆ ಹಿಂದಿಯಲ್ಲಿ ಎರಡೂ ಭಾಗಗಳನ್ನು ರೀಮೇಕ್ ಮಾಡಲಾಗಿದ್ದು, ಮೂರನೇ ಭಾಗದ ರೀಮೇಕ್ ಹಕ್ಕುಗಳನ್ನು ಸಹ ಮುಂಗಡವಾಗಿ ಪಡೆದುಕೊಳ್ಳಲಾಗಿದೆ. ‘ದೃಶ್ಯಂ 3’ ಸಿನಿಮಾದ ಬಗ್ಗೆ ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂ ಸಹ ಹೇಳಿಕೆ ಬಿಡುಗಡೆ ಮಾಡಿ, ಸಿನಿಮಾದ ಡಿಜಿಟಲ್ ಹಕ್ಕುಗಳು ತಮ್ಮ ಬಳಿಯೇ ಇದ್ದು, ಯಾರೂ ಸಹ ಕಾನೂನು ಬಾಹಿರವಾಗಿ ಖರೀದಿ ಮಾಡುವುದು ಬೇಡ ಎಂದಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

MI vs SRH Playing XI: SRH ವಿರುದ್ಧ ಟಾಸ್ ಗೆದ್ದ ಮುಂಬೈ ತಂಡದಲ್ಲಿ 4 ಬದಲಾವಣೆ – Kannada News | MI vs SRH Playing XI Mumbai Indians vs Sunrisers Hyderabad Today IPL 2026 match Confirmed playing 11 details with name in Kannada

ಐಪಿಎಲ್ 2026 (IPL 2026) ರ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (MI vs SRH) ನಡುವೆ ನಡೆಯುತ್ತಿದೆ. ಇದು ಮುಂಬೈಗೆ ಎಂಟನೇ ಪಂದ್ಯ ಮತ್ತು ಹೈದರಾಬಾದ್‌ಗೆ ಒಂಬತ್ತನೇ ಪಂದ್ಯವಾಗಿದೆ. ಎರಡೂ ತಂಡಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಮುಂಬೈ ಇದುವರೆಗೆ 7 ಪಂದ್ಯಗಳನ್ನಾಡಿದ್ದು, ಕೇವಲ 2 ಪಂದ್ಯಗಳನ್ನು ಗೆದ್ದಿದೆ. ಅಲ್ಲದೆ ಮುಂಬೈ ತವರು ನೆಲದಲ್ಲಿ ಸತತ 3 ಪಂದ್ಯಗಳನ್ನು ಸೋತಿದೆ. ಆದ್ದರಿಂದ, ಮುಂಬೈ ತವರು ನೆಲದಲ್ಲಿ ಸೋಲಿನ ಸರಣಿಯನ್ನು ಮುರಿಯುವ ಸವಾಲನ್ನು ಎದುರಿಸುತ್ತಿದೆ. ಮತ್ತೊಂದೆಡೆ, ಹೈದರಾಬಾದ್ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಲು ಪ್ರಯತ್ನಿಸಲಿದೆ.

ಟಾಸ್ ಗೆದ್ದ ಮುಂಬೈ

ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಸನ್​ರೈಸರ್ಸ್​ ಹೈದರಾಬಾದ್ ಬೌಲಿಂಗ್ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಉಭಯ ತಂಡಗಳಲ್ಲಿ ಬದಲಾವಣೆಗಳಾಗಿವೆ. ಪ್ಲೇಯಿಂಗ್ 11 ಬಗ್ಗೆ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ಗಾಯದ ಕಾರಣ ಕ್ವಿಂಟನ್ ಡಿ ಕಾಕ್ ಆಡುತ್ತಿಲ್ಲ. ಅವರ ಬದಲಿಗೆ ರಯಾನ್ ರಿಕಲ್ಟನ್ ಆಡಲಿದ್ದಾರೆ ಎಂದರು. ಹಾಗೆಯೇ ರಾಬಿನ್ ಮಿಂಜ್​ಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ ಎಂದರು. ಇತ್ತ ಸನ್​ರೈಸರ್ಸ್​ ತಂಡದಲ್ಲೂ 1 ಬದಲಾವಣೆ ಮಾಡಲಾಗಿದೆ.

ಮುಖಾಮುಖಿ ದಾಖಲೆ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇದುವರೆಗೆ 34 ಪಂದ್ಯಗಳನ್ನು ಆಡಿವೆ. ಈ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸ್ವಲ್ಪ ಮುನ್ನಡೆ ಇದೆ. ಸನ್‌ರೈಸರ್ಸ್ ಹೈದರಾಬಾದ್ 19 ಪಂದ್ಯಗಳನ್ನು ಗೆದ್ದಿದ್ದರೆ, ಮುಂಬೈ ಇಂಡಿಯನ್ಸ್ 15 ಪಂದ್ಯಗಳನ್ನು ಗೆದ್ದಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ಮುಂಬೈ ಇಂಡಿಯನ್ಸ್: ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ರಾಬಿನ್ ಮಿಂಜ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ಎಎಮ್ ಗಜನ್ಫರ್ ಮತ್ತು ಅಶ್ವನಿ ಕುಮಾರ್.

ಇಂಪ್ಯಾಕ್ಟ್ ಪ್ಲೇಯರ್ಸ್​: ಮಯಾಂಕ್ ರಾವತ್, ರಘು ಶರ್ಮಾ, ಶಾರ್ದೂಲ್ ಠಾಕೂರ್, ಕ್ರಿಶ್ ಭಗತ್ ಮತ್ತು ರಾಜ್ ಬಾವಾ.

MI vs SRH IPL 2026 Live Score: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ

ಸನ್​ರೈಸರ್ಸ್​ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷ್ ದುಬೆ, ಸಾಕಿಬ್ ಹುಸೇನ್, ಪ್ರಫುಲ್ ಹಿಂಗೆ ಮತ್ತು ಇಶಾನ್ ಮಾಲಿಂಗ.

ಇಂಪ್ಯಾಕ್ಟ್ ಪ್ಲೇಯರ್ಸ್​: ರವಿಚಂದ್ರನ್ ಸ್ಮರಣ್, ಅನಿಕೇತ್ ವರ್ಮಾ, ಲಿಯಾಮ್ ಲಿವಿಂಗ್ಸ್ಟೋನ್, ಶಿವಂಗ್ ಕುಮಾರ್ ಮತ್ತು ಹರ್ಷಲ್ ಪಟೇಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:21 pm, Wed, 29 April 26

Source link

ಭಾರತದಲ್ಲಿ ಟಿ20 ಲೀಗ್ ಆಡಿದ ಮೂವರು ಅಫ್ಘನ್ ಕ್ರಿಕೆಟಿಗರಿಗೆ ನಿಷೇಧದ ಶಿಕ್ಷೆ – Kannada News | Afghan Cricketers Banned: ACB Action on Legends League Participation Without NOC

ಭಾರತದಲ್ಲಿ ಈ ಹಿಂದೆ ನಡೆದಿದ್ದ ಲೆಜೆಂಡ್ಸ್ ಲೀಗ್​ನಲ್ಲಿ (Legends League) ಭಾಗವಹಿಸಿದ್ದ ಮೂವರು ಅಫ್ಘಾನ್ ಆಟಗಾರರಿಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (Afghan Cricket Board) ನಿಷೇಧದ ಶಿಕ್ಷೆ ವಿಧಿಸಿದೆ ಎಂದು ವರದಿಯಾಗಿದೆ. ಮಂಡಳಿಯಿಂದ ನಿಷೇಧಕ್ಕೊಳಗಾದವರಲ್ಲಿ ಸಮಿಯುಲ್ಲಾ ಶಿನ್ವಾರಿ, ಅಫ್ತಾಬ್ ಅಲಂ ಮತ್ತು ಶಹಜಾದ್ ಮೊಹಮ್ಮದ್ ಸೇರಿದ್ದಾರೆ. ಈ ಮೂವರು ಆಟಗಾರರು ಭಾರತದಲ್ಲಿ ನಡೆದ ಲೆಜೆಂಡ್ಸ್ ಲೀಗ್‌ನಲ್ಲಿ ಅಫ್ಘಾನಿಸ್ತಾನ ಮಂಡಳಿಯ ಅನುಮತಿಯಿಲ್ಲದೆ ಭಾಗವಹಿಸಿದ್ದರು. ಹೀಗಾಗಿ ಇದರ ಪರಿಣಾಮವಾಗಿ ಎಸಿಬಿ ಈ ಮೂವರು ಆಟಗಾರರನ್ನು ನಾಲ್ಕು ತಿಂಗಳ ಕಾಲ ಕ್ರಿಕೆಟ್​ನಿಂದ ನಿಷೇಧಿಸಿದೆ. ಈಗ, ಈ ಮೂವರು ಆಟಗಾರರು ನಾಲ್ಕು ತಿಂಗಳ ಕಾಲ ಯಾವುದೇ ದೇಶೀಯ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಅಫ್ಘನ್ ಕ್ರಿಕೆಟ್ ಮಂಡಳಿಯ ದೊಡ್ಡ ಕ್ರಮ

ಈ ಮೂವರು ಆಟಗಾರರ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತದ ನಡೆದಿದ್ದ ಲೆಜೆಂಡ್ಸ್ ಲೀಗ್ ಅನ್ನು ಐಸಿಸಿಯಾಗಲಿ ಅಥವಾ ಬಿಸಿಸಿಐಯಾಗಲಿ ನಡೆಸುವುದಿಲ್ಲ. ಹೀಗಾಗಿ ಇಂತಹ ಲೀಗ್​ಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಮಂಡಳಿಯ ಅನುಮತಿ ಪಡೆಯದೆ ಈ ಲೀಗ್​ನಲ್ಲಿ ಆಡಿದ್ದ ಈ ಮೂವರು ಕ್ರಿಕೆಟಿಗರಿಗೆ ನಿಷೇಧ ಹೇರಲಾಗಿದೆ ಎಂಬುದನ್ನು ಅಫ್ಘನ್ ಮಂಡಳಿ ಸ್ಪಷ್ಟಪಡಿಸಿದೆ. ಈ ಲೀಗ್‌ನಲ್ಲಿ ಈ ಮೂವರು ಅಫ್ಘನ್ ಕ್ರಿಕೆಟಿಗರು ಮಾತ್ರವಲ್ಲದೆ ಅಸ್ಗರ್ ಅಫ್ಘಾನ್ ಕೂಡ ಆಡಿದ್ದರು. ಆದರೆ ಅವರು ಈಗಾಗಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರಿಂದ ಮಂಡಳಿಯು ಅವರಿಗೆ ಈ ಶಿಕ್ಷೆ ವಿಧಿಸಿಲಿಲ್ಲ.

NOC ನೀಡದ ಮಂಡಳಿ

ವರದಿಗಳ ಪ್ರಕಾರ, ಲೆಜೆಂಡ್ಸ್ ಲೀಗ್ ಪ್ರಾರಂಭವಾಗುವ ಮೊದಲು ಆಟಗಾರನೊಬ್ಬ ಎನ್​ಒಸಿ ಪಡೆಯುವ ಸಲುವಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯನ್ನು ಸಂಪರ್ಕಿಸಿದ್ದರು. ಆದರೆ ಮಂಡಳಿಯ ಸದಸ್ಯರು ಎನ್​ಒಸಿ ನೀಡಲು ಪದೇ ಪದೇ ವಿಳಂಬ ಮಾಡಿದರು. ಆ ನಂತರ ಆಟಗಾರರಿಗೆ ಆಡಲು ಅನುಮತಿ ನಿರಾಕರಿಸಿದರು. ಆದ್ದರಿಂದ, ಆಟಗಾರರಿಗೆ ಲೀಗ್‌ನಲ್ಲಿ ಭಾಗವಹಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಇದಲ್ಲದೆ, ಈ ಆಟಗಾರರು ದೀರ್ಘಕಾಲದವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿದ್ದಾರೆ, ಆದ್ದರಿಂದ ಅವರು ACB ಯಿಂದ ಅನುಮತಿ ಪಡೆಯದೆ ಈ ಲೀಗ್​ನಲ್ಲಿ ಆಡಿದ್ದಾರೆ ಎಂದು ವರದಿಯಾಗಿದೆ.

ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಒಪ್ಪಂದದ ಆಟಗಾರರಿಗೆ ಕೇವಲ ಮೂರು ವಿದೇಶಿ ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಿದೆ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ಅಫ್ಘಾನ್ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ಗಿಂತ ಟಿ20 ಲೀಗ್‌ಗಳಿಗೆ ಆದ್ಯತೆ ನೀಡಿರುವುದು, ಎಸಿಬಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವಾಗಿದೆ. ರಶೀದ್ ಖಾನ್, ನೂರ್ ಅಹ್ಮದ್ ಮತ್ತು ರಹಮಾನುಲ್ಲಾ ಗುರ್ಬಾಜ್‌ರಂತಹ ಆಟಗಾರರು ಈ ನಿರ್ಧಾರದಿಂದ ಹೆಚ್ಚು ತೊಂದರೆ ಅನುಭವಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಮಳೆ ಅವಾಂತರ: ಬನಶಂಕರಿ ಮೆಟ್ರೋ ನಿಲ್ದಾಣಕ್ಕೂ ನುಗ್ಗಿದ ನೀರು – Kannada News | Heavy Rain Batters Bengaluru: Waterlogging at Banashankari Metro Causes Chaos

ಬೆಂಗಳೂರು, ಏ.29: ರಾಜಧಾನಿಯಲ್ಲಿ ಮುಂದುವರಿದಿರುವ ಧಾರಾಕಾರ ಮಳೆಯು ಮೆಟ್ರೋ ನಿಲ್ದಾಣಗಳನ್ನೂ ಬಿಟ್ಟಿಲ್ಲ. ನಗರದ ಜನನಿಬಿಡ ಬನಶಂಕರಿ ಮೆಟ್ರೋ ನಿಲ್ದಾಣದ ಒಳಭಾಗಕ್ಕೆ ಮಳೆ ನೀರು ನುಗ್ಗಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರದಾದ್ಯಂತ ಗುಡುಗು ಸಹಿತ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ಬನಶಂಕರಿ ಮೆಟ್ರೋ ನಿಲ್ದಾಣದ ಒಳಗೆ ನೀರು ಹರಿದು ಬಂದಿದೆ. ನಿಲ್ದಾಣದ ಟಿಕೆಟ್ ಕೌಂಟರ್ ಪ್ರದೇಶ ಸೇರಿದಂತೆ ಪ್ರಯಾಣಿಕರು ಓಡಾಡುವ ಜಾಗಗಳಲ್ಲಿ ಮಳೆ ನೀರು ನಿಂತಿದೆ. ಛಾವಣಿಯಿಂದ ನೀರು ತೊಟ್ಟಿಕ್ಕುತ್ತಿರುವುದರಿಂದ ಮೆಟ್ರೋ ಏರಲು ಬಂದ ಜನರು ಅತ್ತ ಇತ್ತ ಚಲಿಸಲಾಗದೆ ಪರದಾಡುವಂತಾಯಿತು. ಮಳೆ ಹಾನಿಯಿಂದಾಗಿ ಮೆಟ್ರೋ ನಿಲ್ದಾಣದ ಆವರಣದ ಸ್ವಚ್ಛತೆಗೂ ಧಕ್ಕೆಯುಂಟಾಗಿದ್ದು, ಬಿಡುವುವಿಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕರು ಮೆಟ್ರೋ ಸೇವೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs SRH IPL 2026 Live Score: ಟಾಸ್ ಗೆದ್ದ ಮುಂಬೈ ಬ್ಯಾಟಿಂಗ್ ಆಯ್ಕೆ – Kannada News | Mumbai Indians vs Sunrisers Hyderabad IPL 2026 Live Cricket Score MI vs SRH Match on 29th April latest news in Kannada

ಐಪಿಎಲ್ 19 ನೇ ಸೀಸನ್‌ನ 41 ನೇ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯುತ್ತಿದೆ. ಇದು ಮುಂಬೈಗೆ ಎಂಟನೇ ಪಂದ್ಯ ಮತ್ತು ಹೈದರಾಬಾದ್‌ಗೆ ಒಂಬತ್ತನೇ ಪಂದ್ಯ. ಮುಂಬೈ ಇದುವರೆಗೆ 7 ಪಂದ್ಯಗಳಲ್ಲಿ 5 ರಲ್ಲಿ ಸೋತಿದೆ. ಅಲ್ಲದೆ, ವಾಂಖೆಡೆ ಕ್ರೀಡಾಂಗಣದಲ್ಲಿ ಕಳೆದ 3 ಸತತ ಪಂದ್ಯಗಳಲ್ಲಿ ಮುಂಬೈ ಸೋತಿದೆ. ಆದ್ದರಿಂದ, ಮುಂಬೈ ತಂಡವು ಮತ್ತೆ ಗೆಲುವಿನ ಲಯಕ್ಕೆ ಮರಳುವ ಸವಾಲನ್ನು ಎದುರಿಸಲಿದೆ. ಹೈದರಾಬಾದ್ 8 ಪಂದ್ಯಗಳಲ್ಲಿ 5 ರಲ್ಲಿ ಗೆದ್ದಿದೆ. ಆದ್ದರಿಂದ, ಹೈದರಾಬಾದ್ 2 ಅಂಕಗಳನ್ನು ಪಡೆಯುವ ಮೂಲಕ ಪ್ಲೇಆಫ್‌ನತ್ತ 1 ಹೆಜ್ಜೆ ಮುಂದಿಡಲು ಸಿದ್ಧವಾಗಿದೆ.

Source link

ಹಿಜಾಬ್ ಧರಿಸಿದ್ದಕ್ಕೆ CET ಬರೆಯಲು ಅವಕಾಶ ನಿರಾಕರಣೆ: ವಿದ್ಯಾರ್ಥಿನಿಯ ತಂದೆಯಿಂದ ದೂರು – Kannada News | Chikkaballapur CET Exam:Student Barred Over Hijab, Father Files Complaint, Minister Assures Action

ಚಿಕ್ಕಬಳ್ಳಾಪುರ, ಏಪ್ರಿಲ್​​ 29: ಬಿಜಿಎಸ್ ಸೈನ್ಸ್ ಅಕಾಡೆಮಿಯಲ್ಲಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಕಾರಣ, ವಿದ್ಯಾರ್ಥಿನಿಯ ತಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಲಿಖಿತ ದೂರನ್ನು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ, ಘಟನೆಯ ಕುರಿತು ತನಿಖೆ ನಡೆಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ತನಿಖಾ ವರದಿಯನ್ನು ಶೀಘ್ರವಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ಪ್ರಕರಣದ ಕುರಿತು ತನಿಖಾ ತಂಡವು ವಿದ್ಯಾರ್ಥಿನಿ, ಆಕೆಯ ತಂದೆ ಮತ್ತು ಪರೀಕ್ಷಾ ಕೇಂದ್ರದ ಪ್ರಾಂಶುಪಾಲರನ್ನು ವಿಚಾರಣೆಗೊಳಪಡಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

5 State Assembly Election Exit Poll Results 2026: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಜಯ, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು; ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ – Kannada News | 5 State Assembly Election Exit Poll Results 2026 News and Updates in Kannada Kerala, Assam, Puducherry, Tamil Nadu and West Bengal Vidhan Sabha BJP Congress TMC

ನವದೆಹಲಿ, ಏಪ್ರಿಲ್ 29: ಈಗಾಗಲೇ ಅಸ್ಸಾಂ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ (Assermbly Electiopns 2026) ನಡೆದಿದೆ. ಮೇ 4ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 5 ರಾಜ್ಯಗಳ ಚುನಾವಣಾ ಫಲಿತಾಂಶಗಳ ಮೊದಲು ಎಲ್ಲರ ಗಮನವು ಚುನಾವಣೋತ್ತರ ಸಮೀಕ್ಷೆಗಳ (Exit Poll Results) ಮೇಲೆ ಇದೆ. ಇದಿಗ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದ್ದು, ಯಾವ ಸಮೀಕ್ಷೆ ಏನು ಹೇಳುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ಎಕ್ಸಿಟ್ ಪೋಲ್ ಹೊರಬಿದ್ದಿದೆ. ಎಕ್ಸಿಟ್ ಪೋಲ್ ಪ್ರಕಾರ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಗೆಲುವಿನ ನಗು ಬೀರಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ಕಾಂಗ್ರೆಸ್ ಬೆಂಬಲಿತ ಯುಡಿಎಫ್ ಬಹುಮತ ಪಡೆಯಲಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಲಿದೆ. ಪುದುಚೆರಿಯ ಎಕ್ಸಿಟ್ ಪೋಲ್ ಫಲಿತಾಂಶ ಮಾತ್ರ ಹೊರಬೀಳುವುದು ಬಾಕಿ ಇದೆ.

ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9ರಂದು ಮತದಾನ ನಡೆದರೆ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದ ಮೊದಲ ಹಂತದಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಿತು. ಇಂದು ಪಶ್ಚಿಮ ಬಂಗಾಳದ 2ನೇ ಮತ್ತು ಕೊನೆಯ ಹಂತದ ಮತದಾನ ನಡೆದಿದೆ. ನಿಖರವಾದ ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ.

Published On – 6:55 pm, Wed, 29 April 26

Source link

ಬೆಂಗಳೂರಿನಲ್ಲಿ ಆಲಿಕಲ್ಲು ಮಳೆಯ ಅಬ್ಬರ: ಕೇವಲ 30 ನಿಮಿಷಗಳಲ್ಲಿ ನಗರ ಸ್ತಬ್ಧ – Kannada News | Bengaluru Battles Aftermath of Severe Downpour: Widespread Flooding and Fallen Trees Reported

ಬೆಂಗಳೂರು, ಏ.29: ರಾಜ್ಯ ರಾಜಧಾನಿಯಲ್ಲಿ ಕಳೆದ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಗುಡುಗು ಸಹಿತ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯು ನಗರದಲ್ಲಿ ವ್ಯಾಪಕ ಅವಾಂತರಗಳನ್ನು ಸೃಷ್ಟಿಸಿದೆ. ಶಿವಾಜಿನಗರ, ಕೆಆರ್ ಪುರ, ಕೋರಮಂಗಲ, ವಸಂತನಗರ, ಹೆಬ್ಬಾಳ ಮತ್ತು ಯಲಹಂಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಯ ತೀವ್ರತೆಗೆ ನಗರದ ಹಲವೆಡೆ ಮರಗಳು ಮತ್ತು ಮರದ ರೆಂಬೆ ಕೊಂಬೆಗಳು ಧರೆಗೆ ಉರುಳಿವೆ. ಬೆಂಗಳೂರಿನ ಕಮಿಷನರ್ ಕಚೇರಿ ಆವರಣದಲ್ಲಿ ಮರದ ಕೊಂಬೆಗಳು ಮುರಿದು ಬಿದ್ದಿದ್ದು, ಕೆಲವು ವಾಹನಗಳಿಗೆ ಹಾನಿಯಾಗಿದೆ. ಆವರಣದಲ್ಲಿ ನೀರು ತುಂಬಿ ಹೊಳೆಯಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಗ್ಗು ಪ್ರದೇಶದ ರಸ್ತೆಗಳು ಜಲಾವೃತವಾಗಿ ದ್ವಿಚಕ್ರ ವಾಹನ ಸವಾರರ ಸಂಚಾರ ಅಸ್ತವ್ಯಸ್ತಗೊಂಡಿದೆ. ಕ್ರೆಸೆಂಟ್ ರಸ್ತೆ ಮತ್ತು ಶಿವಾನಂದ ಸರ್ಕಲ್‌ನಲ್ಲೂ ಮರಗಳು ಬಿದ್ದಿರುವ ಘಟನೆಗಳು ವರದಿಯಾಗಿವೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Rain Tragedy: ಬೆಂಗಳೂರಿನಲ್ಲಿ ಮಳೆಯಿಂದ ಕಾಂಪೌಂಡ್ ಕುಸಿದು 7 ಜನರ ಸಾವು – Kannada News | Bengaluru Rain Tragedy: 7 Dead After Compound Wall Collapse near Bowring Hospital

ಬೆಂಗಳೂರು, ಏಪ್ರಿಲ್​ 29: ಬೆಂಗಳೂರಿನಲ್ಲಿ ಮಳೆಯಿಂದ ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿರುವಂತಹ ಭೀಕರ ದುರಂತ ನಡೆದಿದೆ. ಬೌರಿಂಗ್ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಕುಸಿದು ಮೂವರು ಮಕ್ಕಳು ಸೇರಿ 7 ಜನರು ದುರ್ಮರಣ ಹೊಂದಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Published On – 6:40 pm, Wed, 29 April 26

Source link

Exit mobile version