ಭಾರಿ ಮಳೆಗೆ ಬೆಂಗಳೂರಲ್ಲಿ ಧರೆಗುರುಳಿದ ಮರಗಳು: ಹಲವೆಡೆ ಸಂಚಾರ ಅಸ್ತವ್ಯಸ್ತ, ಆ್ಯಂಬುಲೆನ್ಸ್​​ಗಳ​​ ಸಂಚಾರಕ್ಕೂ ತಡೆ – Kannada News | Bengaluru Traffic Chaos: Heavy Rains and Fallen Trees Halt Commuters

ಬೆಂಗಳೂರು, ಏಪ್ರಿಲ್​​ 29: ನಗರದಲ್ಲಿ ಸುರಿದ ಭಾರೀ ಗಾಳಿ ಮಳೆಯು ಹಲವೆಡೆ ಅವಾಂತರ ಸೃಷ್ಟಿಸಿದೆ. ಬಹುತೇಕ ರಸ್ತೆಗಳಲ್ಲಿ ಮರಗಳು ಮತ್ತು ರೆಂಬೆ-ಕೊಂಬೆಗಳು ಧರೆಗುರುಳಿದ್ದು, ತೀವ್ರ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಸಂಚಾರ ದಟ್ಟಣೆ ಎಷ್ಟರಮಟ್ಟಿಗಿದೆ ಎಂದರೆ, ಆಂಬ್ಯುಲೆನ್ಸ್‌ಗಳು ಕೂಡಾ ಸಿಕ್ಕಿಬಿದ್ದು ಮುಂದೆ ಸಾಗಲು ಕಷ್ಟಪಟ್ಟ ಪ್ರಸಂಗ ನಡೆದಿದೆ. ಜವಾಹರಲಾಲ್ ನೆಹರು ಕಾಂಟೇರಿಯಂ ಕಡೆಗೆ ತೆರಳುವ ಮಾರ್ಗದಲ್ಲಿ ವಾಹನಗಳು ನಿಂತಿದ್ದು, ಶೇಷಾದ್ರಿಪುರದಿಂದ ಬೋರಿಂಗ್ ಆಸ್ಪತ್ರೆಯವರೆಗಿನ ರಸ್ತೆಯಲ್ಲಿ ಅತೀ ಹೆಚ್ಚು ಸಂಚಾರ ದಟ್ಟಣೆ ಕಂಡುಬಂದಿದೆ.  ಮಳೆ ನಿಂತರೂ, ಬಿದ್ದ ಮರಗಳಿಂದಾಗಿ ಸಂಚಾರ ಸಾಮಾನ್ಯ ಸ್ಥಿತಿಗೆ ಬರಲು ಸಮಯ ಹಿಡಿದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಗುಜರಾತ್​ಗೆ ಗುನ್ನ ಇಡಲು ಆರ್​ಸಿಬಿ ರೆಡಿ; ಪಂದ್ಯ ಎಷ್ಟು ಗಂಟೆಗೆ ಆರಂಭ? – Kannada News | GT vs RCB IPL 2026: Ahmedabad Clash, Date, Time, Points Table and Where to Watch

ಐಪಿಎಲ್ 2026 (IPL 2026) ರ 42 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ (RCB vs GT) ನಡುವೆ ನಡೆಯಲಿದೆ. ಈ ಆವೃತ್ತಿಯಲ್ಲಿ ಎರಡೂ ತಂಡಗಳ ಎರಡನೇ ಮುಖಾಮುಖಿ ಇದಾಗಿದೆ. ಇದಕ್ಕೂ ಮೊದಲು ಉಭಯ ತಂಡಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಆರ್​ಸಿಬಿ ಸುಲಭವಾಗಿ ಗೆದ್ದುಕೊಂಡಿತ್ತು. ಇದೀಗ ಆರ್​ಸಿಬಿ ಸತತ ಎರಡನೇ ಪಂದ್ಯವನ್ನು ಗೆಲ್ಲುವ ಇರಾದೆಯಲ್ಲಿದೆ. ಇತ್ತ ಗುಜರಾತ್ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ. ಇನ್ನು ಪಾಯಿಂಟ್ ಪಟ್ಟಿಯ ವಿಚಾರಕ್ಕೆ ಬರುವುದಾದರೆ.. ಆರ್​ಸಿಬಿ ಆರು ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಗುಜರಾತ್ ನಾಲ್ಕು ಗೆಲುವುಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಯಾವಾಗ ನಡೆಯಲಿದೆ?

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಏಪ್ರಿಲ್ 30 ರಂದು ನಡೆಯಲಿದೆ.

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಎಲ್ಲಿ ನಡೆಯಲಿದೆ?

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಎಷ್ಟು ಗಂಟೆಗೆ ಆರಂಭವಾಗಲಿದೆ?

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯ ಸಂಜೆ 7:30 ಕ್ಕೆ ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಗುಜರಾತ್ ಟೈಟಾನ್ಸ್ ಹಾಗೂ ಆರ್​ಸಿಬಿ ನಡುವಿನ ಐಪಿಎಲ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್​ವರ್ಕ್​ನ ವಿವಿದ ಚಾನೆಲ್​ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಹಾಟ್ ಸ್ಟಾರ್​​ನಲ್ಲಿಯೂ ಪಂದ್ಯವನ್ನು ವೀಕ್ಷಿಸಬಹುದಾಗಿದೆ.

ಉಭಯ ತಂಡಗಳು

ಗುಜರಾತ್ ಟೈಟಾನ್ಸ್: ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಜೋಸ್ ಬಟ್ಲರ್, ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅರ್ಷದ್ ಖಾನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ, ಗುರ್ನೂರ್ ಸಿಂಗ್ ಬ್ರಾರ್, ರಶೀದ್ ಖಾನ್, ಮಾನವ್ ಸುತಾರ್, ಸಾಯಿ ಕಿಶೋರ್, ಜಯಂತ್ ಯಾದವ್, ಅಶೋಕ್ ಶರ್ಮಾ, ಜೇಸನ್ ಹೋಲ್ಡರ್, ಟಾಮ್ ಬ್ಯಾಂಟನ್, ಪೃಥ್ವಿ ರಾಜ್, ಲ್ಯೂಕ್ ವುಡ್.

ಆರ್​ಸಿಬಿ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು: ತನಿಖೆಗೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ – Kannada News | Bengaluru CM Orders Probe into Bowring Hospital Wall Collapse: 7 Dead, 7 Injured

ಬೆಂಗಳೂರು, ಏಪ್ರಿಲ್​​ 29:  ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಸಂಭವಿಸಿದ ಕಾಂಪೌಂಡ್ ಗೋಡೆ ಕುಸಿತ ದುರಂತದ ಬಗ್ಗೆ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಮಾತನಾಡಿದ ಸಿದ್ದರಾಮಯ್ಯ, ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಗೋಡೆ ಕುಸಿತದ ಕಾರಣದ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಆಸ್ಪತ್ರೆ ಆವರಣದಲ್ಲಿ ಮಣ್ಣು ಸುರಿಯುವ ಕೆಲಸ ನಡೆಯುತ್ತಿದೆ. ಇದರಿಂದ ಉಂಟಾದ ಒತ್ತಡದಿಂದಾಗಿ ಕಾಂಪೌಂಡ್ ಗೋಡೆ ಕುಸಿದಿರಬಹುದು ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದೆ. ಗೋಡೆಯ ಸ್ಥಿತಿ ಶಿಥಿಲವಾಗಿತ್ತೇ ಅಥವಾ ಭದ್ರತಾ ದೃಷ್ಟಿಯಿಂದ ಸರಿಯಾಗಿತ್ತೇ ಎಂದು ಪರಿಶೀಲಿಸಬೇಕಿತ್ತು. ಈ ಕುರಿತು ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಪ್ರಶ್ನಿಸಲಾಗಿದೆ. ಗೋಡೆ ಶಿಥಿಲವಾಗಿದ್ದರೂ, ಅಲ್ಲಿ ಬೀದಿ ವ್ಯಾಪಾರಗಾರರು ವ್ಯಾಪಾರ ನಡೆಸುತ್ತಿದ್ದುದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಇಂಜಿನಿಯರ್‌ಗಳ ಯಾವುದೇ ತಪ್ಪಿತಸ್ಥತೆ ಕಂಡುಬಂದರೆ, ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

West Bengal Election Exit Poll Results 2026: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಭಾರೀ ಹಿನ್ನಡೆ; ಬಿಜೆಪಿಗೆ 146-175 ಸ್ಥಾನಗಳ ನಿರೀಕ್ಷೆ – Kannada News | West Bengal Assembly Election Exit Poll Results 2026 News and Updates in Kannada Bengal Vidhan Sabha TMC BJP

ಕೊಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳದಲ್ಲಿ (West Bengal Elections) ಈ ಬಾರಿ ಬಿಜೆಪಿ ಮಮತಾ ಬ್ಯಾನರ್ಜಿಯವರ ಕೋಟೆಯನ್ನು ಛಿದ್ರಗೊಳಿಸುವ ಸಾಧ್ಯತೆಯಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಟಿಎಂಸಿ ಸತತ ನಾಲ್ಕನೇ ಅವಧಿಗೆ ಅಧಿಕಾರಕ್ಕೆ ಮರಳುತ್ತದೆ ಎಂದು ಒಂದು ಎಕ್ಸಿಟ್ ಪೋಲ್ ಮಾತ್ರ ಅಭಿಪ್ರಾಯಪಟ್ಟಿದೆ. ಉಳಿದ 3 ಎಕ್ಸಿಟ್ ಪೋಲ್ ಬಿಜೆಪಿಗೆ 146-175 ಸ್ಥಾನಗಳು ಸಿಗುವ ನಿರೀಕ್ಷೆಯಿಟ್ಟಿವೆ. ಪೀಪಲ್ಸ್ ಪಲ್ಸ್ ಎಂಬ ಒಂದು ಸಮೀಕ್ಷಕರು ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದಿದೆ.

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಎರಡನೇ ಹಂತವು ಇಂದು ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು. ಬಂಗಾಳದಲ್ಲಿ ಕಮಲವನ್ನು ಅರಳಿಸಲೇಬೇಕೆಂದು ಹಠ ತೊಟ್ಟಿದ್ದ ಬಿಜೆಪಿ ಪಶ್ಚಿಮ ಬಂಗಾಳದ ಉದ್ದಗಲಕ್ಕೂ ಭರ್ಜರಿ ಪ್ರಚಾರ ನಡೆಸಿತ್ತು. ಅದಕ್ಕೆ ಸೂಕ್ತ ಪ್ರತಿಫಲ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿದಿವೆ. ಇದಾದ ನಂತರ ಚುನಾವಣೋತ್ತರ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಯಿತು. ಆ ಬಗ್ಗೆ ಪೂರ್ತಿ ವಿವರ ಇಲ್ಲಿದೆ.

ಇದನ್ನೂ ಓದಿ:  5 State Assembly Election Exit Poll Results 2026: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಜಯ, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು; ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ

  1. ಮ್ಯಾಟ್ರಿಜ್ ನ್ಯೂಸ್ ಸಮೀಕ್ಷೆಯು ಬಿಜೆಪಿ ಮತ್ತು ಟಿಎಂಸಿ ನಡುವೆ ನಿಕಟ ಸ್ಪರ್ಧೆಯನ್ನು ಸೂಚಿಸುತ್ತದೆ. ಬಿಜೆಪಿ 146-161 ಸ್ಥಾನಗಳನ್ನು ಮತ್ತು ಟಿಎಂಸಿ 130-140 ಸ್ಥಾನಗಳನ್ನು ಗಳಿಸುತ್ತದೆ ಎಂದು ಹೇಳಿದೆ.
  2. ಪೋಲ್ ಡೈರಿಯ ಸಮೀಕ್ಷೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಮುನ್ನಡೆಯನ್ನು ಸೂಚಿಸುತ್ತದೆ. ಬಿಜೆಪಿಗೆ 142-171 ಸ್ಥಾನಗಳನ್ನು ಅಂದಾಜಿಸಲಾಗಿದೆ. ಟಿಎಂಸಿ 99ರಿಂದ 127 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.
  3. ಎಬಿಪಿ ಸಮೀಕ್ಷೆ ಪಶ್ಚಿಮ ಬಂಗಾಳದಲ್ಲಿ ನಿಕಟ ಸ್ಪರ್ಧೆಯನ್ನು ಸೂಚಿಸುತ್ತವೆ. ಟಿಎಂಸಿ 125ರಿಂದ 140 ಸ್ಥಾನಗಳನ್ನು ಗೆಲ್ಲುವ ಅಂದಾಜಿದೆ. ಬಿಜೆಪಿ 146ರಿಂದ 161 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
  4. ಪಿಎಂಎಆರ್‌ಕ್ಯೂ ಸಮೀಕ್ಷೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಲವಾದ ಮುನ್ನಡೆಯನ್ನು ಸೂಚಿಸುತ್ತದೆ. ಬಿಜೆಪಿ 150ರಿಂದ 175 ಸ್ಥಾನಗಳನ್ನು ಪಡೆಯಲಿದೆ. ಟಿಎಂಸಿ 118ರಿಂದ 138 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ 2ರಿಂದ 6 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಹೇಳಿದೆ.
  5. ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆಯು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಸ್ಪಷ್ಟ ಮುನ್ನಡೆಯನ್ನು ಸೂಚಿಸುತ್ತದೆ. ಬಿಜೆಪಿ 150ರಿಂದ 160 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. ಟಿಎಂಸಿ ಮೈತ್ರಿಕೂಟವು 130ರಿಂದ 140 ಸ್ಥಾನಗಳನ್ನು ಗಳಿಸುವ ಅಂದಾಜಿದೆ.
  6. ಪೀಪಲ್ಸ್ ಪಲ್ಸ್ ನಿರ್ಗಮನ ಸಮೀಕ್ಷೆಯು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) 110ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿದೆ. ಬಂಗಾಳದಲ್ಲಿ ಟಿಎಂಸಿ 117ರಿಂದ 187 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಬಿಜೆಪಿ 95ರಿಂದ 110 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ 1ರಿಂದ 3 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:22 pm, Wed, 29 April 26

Source link

ಮಳೆಗೆ ಕಾಂಪೌಂಡ್ ಕುಸಿದು 7 ಜನ ಸಾವು: ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ – Kannada News | Bengaluru: 7 dead in After Rain Triggered Compound Collapse; CM Siddaramaiah Announces 5 Lakh Relief

ಬೆಂಗಳೂರು, ಏಪ್ರಿಲ್​ 29: ಬಿರುಗಾಳಿ, ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಅಬ್ಬರಿಸಿದ ಮಳೆಗೆ ನಗರದ ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಂಡ್ ಕುಸಿದು ಬರೋಬ್ಬರಿ 7 ಜನರು ಮೃತಪಟ್ಟಿದ್ದಾರೆ. ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಎಂ ಸಿದ್ದರಾಮಯ್ಯ (Siddaramaiah) ಮೃತರ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ 7 ಜನರಿಗೆ ಉಚಿತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿಗಳ ಅಜಾಗರೂಕತೆ ಸಾಬೀತಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ, ಅಗತ್ಯವಿದ್ದರೆ ಅಮಾನತುಗೊಳಿಸುವುದಾಗಿಯೂ ಸಿಎಂ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಡ ಕುಟುಂಬಗಳಿಗೆ ದಿನಸಿ ದಾನ ಮಾಡಿದ ಬಿಗ್​ಬಾಸ್ ಜಾನ್ಹವಿ: ವಿಡಿಯೋ – Kannada News | Bigg Boss Jhanvi continued her social service watch video

ಬಿಗ್​ಬಾಸ್ ಕನ್ನಡ ಮಾಜಿ ಸ್ಪರ್ಧಿ ಜಾನ್ಹವಿ (Jhanvi) ಅವರು ಬಿಗ್​​ಬಾಸ್​​ನಿಂದ ಹೊರಗೆ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನು, ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕಾರ್ಯಕ್ರಮಗಳಿಗೆ ಭೇಟಿ, ಮಳಿಗೆ ಉದ್ಘಾಟನೆ ಹೀಗೆ ಹಲವು ಕಾರ್ಯಕ್ರಮಗಳಿಗೆ ತೆರಳುವ ಜಾನ್ಹವಿ, ಬಡ ಜನರಿಗೆ ಸಹಾಯ ಸಹ ಆಗಾಗ್ಗೆ ಮಾಡುತ್ತಿರುತ್ತಾರೆ. ಈ ಹಿಂದೆ ಕೆಲ ಬಡ ಕುಟುಂಬಗಳನ್ನು ಡಿಮಾರ್ಟ್​ಗೆ ಕರೆದೊಯ್ದು ಅವರಿಗೆ ದಿನಸಿ ಕೊಡಿಸಿದ್ದರು. ಈಗ ಖುದ್ದು ತಾವೇ ಕೆಲ ಅಗತ್ಯ ದಿನಸಿ ಖರೀದಿ ಮಾಡಿ ಅದನ್ನು ವಿತರಣೆ ಮಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

MI vs SRH: ಸತತ ಸೋಲುಗಳಿಂದ ಕಂಗೆಟ್ಟು 7 ವರ್ಷಗಳ ಇತಿಹಾಸ ಬದಲಿಸಿದ ಹಾರ್ದಿಕ್ ಪಾಂಡ್ಯ – Kannada News | IPL 2026: Hardik’s Shock Bat First Decision and Rohit’s Absence Amidst MI Struggles

ಐದು ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ 2026 ರ ಐಪಿಎಲ್​ನಲ್ಲಿ (IPL 2026) ಒಂದೇ ಒಂದು ಗೆಲುವು ಸಾಧಿಸುವುದು ಕಷ್ಟಕರವಾದ ಕೆಲಸವಾಗಿದೆ. ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಈ ಆವೃತ್ತಿಯ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದು, ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಸೋತಿದೆ. ಪರಿಣಾಮವಾಗಿ, ತಂಡವು ಗೆಲ್ಲಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿರುವುದರ ಜೊತೆಗೆ, ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ. ಅದರಂತೆ ಸನ್‌ರೈಸರ್ಸ್ ವಿರುದ್ಧದ ಪಂದ್ಯಕ್ಕೆ ಮುಂಬೈ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದರ ಜೊತೆಗೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಏಳು ವರ್ಷಗಳ ಇತಿಹಾಸ ಬದಲಿಸಿದ್ದಾರೆ.

7 ವರ್ಷಗಳ ನಂತರ ಅಚ್ಚರಿಯ ನಿರ್ಧಾರ

ಏಪ್ರಿಲ್ 29 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಾಂಡ್ಯ ಅವರ ಈ ನಿರ್ಧಾರ ಎಲ್ಲರನ್ನು ಅಚ್ಚರಿಗೊಳಿಸಿತು. ಏಕೆಂದರೆ ವಾಂಖೆಡೆ ಮೈದಾನದಲ್ಲಿ ಟಾಸ್ ಗೆದ್ದ ನಾಯಕನೊಬ್ಬ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಬಹಳ ಅಪರೂಪ. ಆದಾಗ್ಯೂ, ಮುಂಬೈ ವಿಷಯದಲ್ಲಿ, ಇದು ಏಳು ವರ್ಷಗಳ ನಂತರ ಸಂಭವಿಸಿದೆ. ಮುಂಬೈ ತಂಡವು ಕೊನೆಯ ಬಾರಿಗೆ ವಾಂಖೆಡೆಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಐಪಿಎಲ್ 2019 ರಲ್ಲಿ.

ಹಾರ್ದಿಕ್ ನಿರ್ಧಾರ ಎಷ್ಟು ಸರಿ ಎಂಬುದು ಪಂದ್ಯದ ನಂತರವೇ ತಿಳಿಯಲಿದೆ. ಮುಂಬೈ ತಂಡವು ತವರಿನಲ್ಲಿ ಸತತ ಮೂರು ಸೋಲುಗಳನ್ನು ಅನುಭವಿಸಿದೆ. ಇಲ್ಲಿ ಕೊನೆಯ ಸೋಲು ಮುಂಬೈಗೆ ಅತ್ಯಂತ ಆಘಾತಕಾರಿ ಮತ್ತು ನಿರಾಶಾದಾಯಕವಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದಿದ್ದ ಹಿಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ 207 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಮುಂಬೈ ಕೇವಲ 104 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಮುಂಬೈ ತಂಡದ ತವರಿನಲ್ಲಿ ಅತ್ಯಂತ ಹೀನಾಯ ಸೋಲಾಗಿತ್ತು.

ರೋಹಿತ್ ಇನ್ನೆಷ್ಟು ಪಂದ್ಯಗಳಿಗೆ ಅಲಭ್ಯ?

ಟಾಸ್ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, ರೋಹಿತ್ ಕಂಬ್ಯಾಕ್ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದರು. ರೋಹಿತ್ ಶರ್ಮಾ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರು ತಂಡಕ್ಕೆ ಮರಳಲು ಕನಿಷ್ಠ ಎರಡು ಪಂದ್ಯಗಳು ಬೇಕಾಗಬಹುದು ಎಂದರು. ಇದರರ್ಥ ರೋಹಿತ್ ಶರ್ಮಾ ಮೇ 10 ರಂದು ಆರ್​ಸಿಬಿ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದರ ನಡುವೆ ಮುಂಬೈ, ಸಿಎಸ್​ಕೆ ಹಾಗೂ ಲಕ್ನೋ ವಿರುದ್ಧ ಪಂದ್ಯಗಳನ್ನಾಡಲಿದೆ. ಆ ಪಂದ್ಯಗಳಲ್ಲಿ ರೋಹಿತ್ ಆಡದಿರುವುದು ಖಚಿತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:12 pm, Wed, 29 April 26

Source link

ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಯಲು ತಕ್ಷಣ ಈ ರೀತಿ ಮಾಡಿ – Kannada News | How to Stop a Nosebleed Fast: Summer First Aid Tips

ಬೇಸಿಗೆ (Summer) ಶುರುವಾದಂತೆ ದೇಹದ ಮೇಲೆ ಬಿಸಿಯ ಪರಿಣಾಮಗಳು ಹೆಚ್ಚಾಗುತ್ತವೆ. ಉಷ್ಣತೆ ಹೆಚ್ಚಾದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತದೆ. ಈ ಸಮಯದಲ್ಲಿ ಕೆಲವರಿಗೆ ಅಚಾನಕ್ ಮೂಗಿನಿಂದ ರಕ್ತ ಬರುವ ಸಮಸ್ಯೆ ಕಂಡುಬರಬಹುದು. ಇದನ್ನು ಸಾಮಾನ್ಯವೆಂದು ಕಡೆಗಣಿಸುವುದು ಸರಿಯಲ್ಲ, ಏಕೆಂದರೆ ಇದು ದೇಹದ ಕೆಲವು ಅಸಮತೋಲನಗಳ ಸೂಚನೆಯಾಗಿರಬಹುದು. ಹೌದು, ವೈದ್ಯರು ಇದನ್ನು ಬಹಳ ಗಂಭೀರ ಸ್ಥಿತಿ ಎಂದು ಪರಿಗಣಿಸಿಸುವುದರಿಂದ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾದರೆ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣವೇನು, ಈ ರೀತಿಯಾದಾಗ ತಕ್ಷಣ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣವೇನು?

ತಜ್ಞರ ಪ್ರಕಾರ, ಹೆಚ್ಚು ಬಿಸಿಲು ಮತ್ತು ಒಣಗಿದ ಗಾಳಿ ಮೂಗಿನ ಒಳಭಾಗದ ನಾಜೂಕಾದ ಪದರವನ್ನು ಒಣಗಿಸುತ್ತದೆ. ಇದರಿಂದ ಒಳಗಿನ ರಕ್ತನಾಳಗಳು ದುರ್ಬಲವಾಗಬಹುದು. ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಶನ್) ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದಲ್ಲದೆ, ಅಲರ್ಜಿ, ಮೂಗನ್ನು ಪದೇಪದೇ ಒರೆಸುವುದು ಅಥವಾ ಗಾಯವೂ ಈ ಸಮಸ್ಯೆಗೆ ಕಾರಣವಾಗಬಹುದು. ಮೂಗಿನಿಂದ ಅಚಾನಕ್ ರಕ್ತ ಬರುವುದು ಪ್ರಮುಖ ಲಕ್ಷಣ. ಇದರ ಮುಂಚೆ ಮೂಗಿನಲ್ಲಿ ಒಣತನ, ಉರಿಯೂತ ಅಥವಾ ಕೆರೆತ ಕಾಣಿಸಬಹುದು. ಕೆಲವರಿಗೆ ತಲೆಭಾರ ಅಥವಾ ಸ್ವಲ್ಪ ತಲೆಸುತ್ತು ಕೂಡ ಕಾಣಿಸಬಹುದು.

ತಕ್ಷಣ ಏನು ಮಾಡಬೇಕು?

ಮೂಗಿನಿಂದ ರಕ್ತ ಬಂದಾಗ ಗಾಬರಿಯಾಗದೆ ತಕ್ಷಣ ಕುಳಿತು ತಲೆಯನ್ನು ಸ್ವಲ್ಪ ಮುಂದೆ ಬಾಗಿಸಬೇಕು. ನಂತರ ಮೂಗಿನ ಭಾಗವನ್ನು ಸೌಮ್ಯವಾಗಿ ಒತ್ತಿ ಕೆಲ ನಿಮಿಷಗಳ ಕಾಲ ಹಿಡಿದಿಡಬೇಕು. ತಲೆಯನ್ನು ಹಿಂದೆ ತಳ್ಳಬಾರದು, ಇದರಿಂದ ರಕ್ತ ಗಂಟಲಿಗೆ ಹೋಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಕಲ್ಲಂಗಡಿ ಹಣ್ಣು ಕಿಡ್ನಿಯನ್ನು ಕ್ಲೀನ್ ಮಾಡುತ್ತದೆಯೇ? ಬೇಸಿಗೆಯಲ್ಲಿ ಈ ಹಣ್ಣಿನ ಸೇವನೆ ಆರೋಗ್ಯಕರವೇ?

ಈ ಸಮಸ್ಯೆಯನ್ನು ಹೇಗೆ ತಡೆಗಟ್ಟಬಹುದು?

ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ರೀತಿಯ ಸಮಸ್ಯೆಯನ್ನು ತಪ್ಪಿಸಲು ದೇಹವನ್ನು ಸದಾ ಹೈಡ್ರೇಟ್ ಆಗಿ ಇಡಬೇಕು. ಸಾಕಷ್ಟು ನೀರು ಕುಡಿಯುವುದು, ನಿಂಬೆ ಶರಬತ್ತು, ಮಜ್ಜಿಗೆ ಮುಂತಾದ ದ್ರವ ರೂಪದ ಆಹಾರಗಳನ್ನು ಸೇವಿಸುವುದು ಉತ್ತಮ. ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಇರದಿರುವುದು, ಹೊರಗೆ ಹೋಗುವಾಗ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಈ ರೀತಿಯ ಸಮಸ್ಯೆಗೆ ಕಡಿವಾಣ ಹಾಕಬಹುದು. ಈ ರೀತಿಯ ಸಮಸ್ಯೆ ಮತ್ತೆ ಮತ್ತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:02 pm, Wed, 29 April 26

Source link

ಬೇಸಿಗೆಯಲ್ಲಿ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣ ಏನ್ ಗೊತ್ತಾ? ತಡೆಯಲು ತಕ್ಷಣ ಈ ರೀತಿ ಮಾಡಿ

ಬೇಸಿಗೆ (Summer) ಶುರುವಾದಂತೆ ದೇಹದ ಮೇಲೆ ಬಿಸಿಯ ಪರಿಣಾಮಗಳು ಹೆಚ್ಚಾಗುತ್ತವೆ. ಉಷ್ಣತೆ ಹೆಚ್ಚಾದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತದೆ. ಈ ಸಮಯದಲ್ಲಿ ಕೆಲವರಿಗೆ ಅಚಾನಕ್ ಮೂಗಿನಿಂದ ರಕ್ತ ಬರುವ ಸಮಸ್ಯೆ ಕಂಡುಬರಬಹುದು. ಇದನ್ನು ಸಾಮಾನ್ಯವೆಂದು ಕಡೆಗಣಿಸುವುದು ಸರಿಯಲ್ಲ, ಏಕೆಂದರೆ ಇದು ದೇಹದ ಕೆಲವು ಅಸಮತೋಲನಗಳ ಸೂಚನೆಯಾಗಿರಬಹುದು. ಹೌದು, ವೈದ್ಯರು ಇದನ್ನು ಬಹಳ ಗಂಭೀರ ಸ್ಥಿತಿ ಎಂದು ಪರಿಗಣಿಸಿಸುವುದರಿಂದ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾದರೆ ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣವೇನು, ಈ ರೀತಿಯಾದಾಗ ತಕ್ಷಣ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣವೇನು?

ತಜ್ಞರ ಪ್ರಕಾರ, ಹೆಚ್ಚು ಬಿಸಿಲು ಮತ್ತು ಒಣಗಿದ ಗಾಳಿ ಮೂಗಿನ ಒಳಭಾಗದ ನಾಜೂಕಾದ ಪದರವನ್ನು ಒಣಗಿಸುತ್ತದೆ. ಇದರಿಂದ ಒಳಗಿನ ರಕ್ತನಾಳಗಳು ದುರ್ಬಲವಾಗಬಹುದು. ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಶನ್) ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದಲ್ಲದೆ, ಅಲರ್ಜಿ, ಮೂಗನ್ನು ಪದೇಪದೇ ಒರೆಸುವುದು ಅಥವಾ ಗಾಯವೂ ಈ ಸಮಸ್ಯೆಗೆ ಕಾರಣವಾಗಬಹುದು. ಮೂಗಿನಿಂದ ಅಚಾನಕ್ ರಕ್ತ ಬರುವುದು ಪ್ರಮುಖ ಲಕ್ಷಣ. ಇದರ ಮುಂಚೆ ಮೂಗಿನಲ್ಲಿ ಒಣತನ, ಉರಿಯೂತ ಅಥವಾ ಕೆರೆತ ಕಾಣಿಸಬಹುದು. ಕೆಲವರಿಗೆ ತಲೆಭಾರ ಅಥವಾ ಸ್ವಲ್ಪ ತಲೆಸುತ್ತು ಕೂಡ ಕಾಣಿಸಬಹುದು.

ತಕ್ಷಣ ಏನು ಮಾಡಬೇಕು?

ಮೂಗಿನಿಂದ ರಕ್ತ ಬಂದಾಗ ಗಾಬರಿಯಾಗದೆ ತಕ್ಷಣ ಕುಳಿತು ತಲೆಯನ್ನು ಸ್ವಲ್ಪ ಮುಂದೆ ಬಾಗಿಸಬೇಕು. ನಂತರ ಮೂಗಿನ ಭಾಗವನ್ನು ಸೌಮ್ಯವಾಗಿ ಒತ್ತಿ ಕೆಲ ನಿಮಿಷಗಳ ಕಾಲ ಹಿಡಿದಿಡಬೇಕು. ತಲೆಯನ್ನು ಹಿಂದೆ ತಳ್ಳಬಾರದು, ಇದರಿಂದ ರಕ್ತ ಗಂಟಲಿಗೆ ಹೋಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: ಕಲ್ಲಂಗಡಿ ಹಣ್ಣು ಕಿಡ್ನಿಯನ್ನು ಕ್ಲೀನ್ ಮಾಡುತ್ತದೆಯೇ? ಬೇಸಿಗೆಯಲ್ಲಿ ಈ ಹಣ್ಣಿನ ಸೇವನೆ ಆರೋಗ್ಯಕರವೇ?

ಈ ಸಮಸ್ಯೆಯನ್ನು ಹೇಗೆ ತಡೆಗಟ್ಟಬಹುದು?

ಸಾಮಾನ್ಯವಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುವ ಈ ರೀತಿಯ ಸಮಸ್ಯೆಯನ್ನು ತಪ್ಪಿಸಲು ದೇಹವನ್ನು ಸದಾ ಹೈಡ್ರೇಟ್ ಆಗಿ ಇಡಬೇಕು. ಸಾಕಷ್ಟು ನೀರು ಕುಡಿಯುವುದು, ನಿಂಬೆ ಶರಬತ್ತು, ಮಜ್ಜಿಗೆ ಮುಂತಾದ ದ್ರವ ರೂಪದ ಆಹಾರಗಳನ್ನು ಸೇವಿಸುವುದು ಉತ್ತಮ. ತೀವ್ರ ಬಿಸಿಲಿನಲ್ಲಿ ಹೆಚ್ಚು ಸಮಯ ಇರದಿರುವುದು, ಹೊರಗೆ ಹೋಗುವಾಗ ತಲೆಯನ್ನು ಮುಚ್ಚಿಕೊಳ್ಳುವುದರಿಂದ ಈ ರೀತಿಯ ಸಮಸ್ಯೆಗೆ ಕಡಿವಾಣ ಹಾಕಬಹುದು. ಈ ರೀತಿಯ ಸಮಸ್ಯೆ ಮತ್ತೆ ಮತ್ತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಂಡುಬಂದರೆ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ? – Kannada News | Pregnant with Cancer: Treatment Options and Safety for Unborn Baby

ಗರ್ಭಾವಸ್ಥೆಯಲ್ಲಿ (Pregnancy) ಮಹಿಳೆಯ ದೇಹದಲ್ಲಿ ಅನೇಕ ಹಾರ್ಮೋನಲ್ ಹಾಗೂ ದೈಹಿಕ ಬದಲಾವಣೆಗಳು ಕಂಡುಬರುತ್ತದೆ. ಇದು ಬಹಳ ಸಾಮಾನ್ಯ ಆದರೆ ಇಂತಹ ಸಮಯದಲ್ಲಿ ಕ್ಯಾನ್ಸರ್ ಪತ್ತೆಯಾದರೆ, ಅದು ತಾಯಿ ಮಾತ್ರವಲ್ಲದೆ ಗರ್ಭದಲ್ಲಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತದೆಯೇ ಎಂಬ ಆತಂಕ ಸಹಜವಾಗಿ ಎಲ್ಲರಲ್ಲಿಯೂ ಇರುತ್ತದೆ. ತಜ್ಞರ ಪ್ರಕಾರ, ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಕಂಡುಬರುವುದು ಅಪರೂಪವಾದರೂ ಕೂಡ ಗಂಭೀರ ಸ್ಥಿತಿಯಾಗಿದೆ ಎನುತ್ತಾರೆ. ಹಾಗಾದರೆ ಅಂತಹ ಸಮಯದಲ್ಲಿ ಮಗುವಿಗೆ ಕ್ಯಾನ್ಸರ್ ಹರಡುತ್ತದೆಯೇ, ಈ ರೀತಿಯಾದಾಗ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಗುವಿಗೆ ಕ್ಯಾನ್ಸರ್ ಹರಡುತ್ತದೆಯೇ?

ವೈದ್ಯರ ಅಭಿಪ್ರಾಯದಂತೆ, ಹೆಚ್ಚಿನ ಸಂದರ್ಭಗಳಲ್ಲಿ ಕ್ಯಾನ್ಸರ್ ನೇರವಾಗಿ ಮಗುವಿಗೆ ಹರಡುವುದಿಲ್ಲ. ಆದರೆ ತಾಯಿಯ ಆರೋಗ್ಯ ಬಹಳ ದುರ್ಬಲವಾಗಿದ್ದರೆ, ಅದರ ಪರಿಣಾಮವಾಗಿ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು. ಗರ್ಭಿಣಿಯ ಆರೋಗ್ಯ ಸ್ಥಿತಿ, ಕ್ಯಾನ್ಸರ್‌ನ ಪ್ರಕಾರ ಮತ್ತು ಅದರ ಹಂತದ ಮೇಲೆ ಪರಿಣಾಮ ಬದಲಾಗುತ್ತದೆ. ಅದರಲ್ಲಿಯೂ ಗರ್ಭಾವಸ್ಥೆಯಲ್ಲಿ ನೀಡುವ ಕೆಲ ಔಷಧಿಗಳು ಮತ್ತು ಥೆರಪಿಗಳು, ವಿಶೇಷವಾಗಿ ಆರಂಭಿಕ ತಿಂಗಳಲ್ಲಿ, ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯರು ಚಿಕಿತ್ಸೆ ನೀಡುವಾಗ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸುತ್ತಾರೆ. ಕೆಲವೊಮ್ಮೆ ಚಿಕಿತ್ಸೆ ಮುಂದೂಡಲಾಗಬಹುದು ಅಥವಾ ಸುರಕ್ಷಿತ ವಿಧಾನಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಮಹಿಳೆಯರೇ… ಗರ್ಭಪಾತದ ನಂತರ, ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ

ವೈದ್ಯಕೀಯ ಮೇಲ್ವಿಚಾರಣೆ ಏಕೆ ಮುಖ್ಯ?

ಗರ್ಭಿಣಿಯ ಆರೋಗ್ಯವನ್ನು ನಿರಂತರವಾಗಿ ಗಮನಿಸುವುದು ಅತ್ಯಂತ ಅಗತ್ಯ. ವೈದ್ಯರು ತಾಯಿಯ ಸ್ಥಿತಿಯನ್ನು ಪರಿಶೀಲಿಸಿ, ಅವಳಿಗೆ ಮತ್ತು ಮಗುವಿಗೆ ಅಪಾಯ ಕಡಿಮೆ ಇರುವಂತಹ ರೀತಿಯಲ್ಲಿ ಚಿಕಿತ್ಸೆ ಯೋಜಿಸುತ್ತಾರೆ. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯ ಸಮಯ ಮತ್ತು ವಿಧಾನ ಅತ್ಯಂತ ಪ್ರಮುಖವಾಗಿವೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪ್ರಾರಂಭಿಸುವುದು ಮತ್ತು ಸುರಕ್ಷಿತ ಆಯ್ಕೆಯನ್ನು ಆರಿಸುವುದು ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಲು ಸಹಕಾರಿ. ಗರ್ಭಾವಸ್ಥೆಯಲ್ಲಿ ಕ್ಯಾನ್ಸರ್ ಇದ್ದರೂ ಎಲ್ಲ ಸಂದರ್ಭಗಳಲ್ಲಿ ಮಗುವಿಗೆ ಅಪಾಯವಾಗುವುದಿಲ್ಲ. ತಜ್ಞರ ಸಲಹೆ, ಸಮಯೋಚಿತ ಚಿಕಿತ್ಸೆ ಮತ್ತು ನಿಯಮಿತ ಪರೀಕ್ಷೆಗಳ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version