ನೀವು ವಾಸಮಾಡುವ ಪ್ರದೇಶದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ಯಾ? ಹಾಗಿದ್ರೆ ನಿಮಗೂ ಬರಬಹುದು ಮರೆವಿನ ಕಾಯಿಲೆ – Kannada News | Air Pollution and Alzheimer’s: The Link

ವಾಯು ಮಾಲಿನ್ಯವು ವಿಶ್ವಾದ್ಯಂತ ಹೆಚ್ಚುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಮಾಲಿನ್ಯವು ಶ್ವಾಸಕೋಶದ (Lungs) ಮೇಲೆ ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟ, ಆದರೆ ಇತ್ತೀಚಿನ ಅಧ್ಯಯನವು ಇದು ಅಲ್ಝೈಮರ್ ( Alzheimer’s) ಕಾಯಿಲೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಬಹಿರಂಗಪಡಿಸಿದೆ. ನಿಮಗೆ ತಿಳಿದಿರುವಂತೆ ಇದೊಂದು ಮರೆವಿನ ಕಾಯಿಲೆ ಇದರಲ್ಲಿ ವ್ಯಕ್ತಿಯ ಸ್ಮರಣಶಕ್ತಿ ತುಂಬಾ ದುರ್ಬಲಗೊಂಡು ತಮ್ಮ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಹಾಗಾದರೆ ಮಾಲಿನ್ಯ ಈ ಕಾಯಿಲೆಯ ಅಪಾಯವನ್ನು ಹೇಗೆ ಹೆಚ್ಚಿಸುತ್ತಿದೆ, ಅಧ್ಯಯನದಿಂದ ಸಿಕ್ಕ ಮತ್ತಷ್ಟು ಮಾಹಿತಿಗಳು ಹೇಳುವುದೇನು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ವಾಯು ಮಾಲಿನ್ಯದಿಂದ ಅಲ್ಝೈಮರ್ ಹೇಗೆ ಉಂಟಾಗುತ್ತದೆ?

ಈ ಸಂಶೋಧನೆಯನ್ನು ಎಮೋರಿ ವಿಶ್ವವಿದ್ಯಾಲಯದ ತಂಡ ವೃದ್ಧರ ಮೇಲೆ ನಡೆಸಿದ್ದು ಅಧ್ಯಯನವು ಮಾಲಿನ್ಯದಲ್ಲಿರುವ ಅತ್ಯಂತ ಸಣ್ಣ ಕಣಗಳು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸಿ ರಕ್ತಪ್ರವಾಹವನ್ನು ತಲುಪಬಹುದು ಇದೆ ಕಣಗಳು ಮುಂದೆ ಆಲ್ಝೈಮರ್ನ ಅಪಾಯವನ್ನು ಹೆಚ್ಚಿಸಬಹುದು ಎಂಬುದನ್ನು ಕಂಡುಹಿಡಿದಿದೆ. ಕಲುಷಿತ ಕಣಗಳು ಮೆದುಳನ್ನು ಪ್ರವೇಶಿಸಿ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುವುದರಿಂದ ಈ ರೀತಿಯ ಅಪಾಯ ಹೆಚ್ಚಾಗುತ್ತದೆ. ಅದರಲ್ಲಿಯೂ ವಯಸ್ಸಾದವರಲ್ಲಿ ಇದು ಹೆಚ್ಚಾಗಿ ಕಂಡುಬರಬಹುದು. ಜೊತೆಗೆ ಈ ಹಿಂದೆ ಪಾರ್ಶ್ವವಾಯುವಿಗೆ ಒಳಗಾದವರಿಗೆ ಮಾಲಿನ್ಯದಿಂದಾಗಿ ಆಲ್ಝೈಮರ್ ಬರುವ ಅಪಾಯ ಹೆಚ್ಚಿದ್ದು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಮತ್ತು ಖಿನ್ನತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಅಲ್​ಝೈಮರ್​, ಕ್ಯಾನ್ಸರ್​ ನಿಯಂತ್ರಣಕ್ಕೆ ಅಣಬೆ!

ವಾಯು ಮಾಲಿನ್ಯದಿಂದ ದೇಹವನ್ನು ಸೇರುವ ಕಣಗಳು ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ, ಇದರಿಂದ ನರ ಅಸ್ವಸ್ಥತೆಗಳ ಅಪಾಯ ಹೆಚ್ಚಾಗುತ್ತದೆ, ಮೆದುಳಿನ ಕೋಶಗಳ (ನ್ಯೂರಾನ್‌ಗಳು) ನಡುವಿನ ಸಂವಹನವು ದುರ್ಬಲಗೊಳ್ಳುತ್ತದೆ. ಅಷ್ಟೇಅಲ್ಲ ಇದು ಮೆದುಳಿನಲ್ಲಿ ಟೌ ಪ್ರೋಟೀನ್ ಸಂಗ್ರಹಕ್ಕೂ ಕಾರಣವಾಗುತ್ತದೆ. ಇದು ಮೆದುಳಿನ ಸ್ಮರಣಶಕ್ತಿಗೆ ಸಂಬಂಧಿಸಿದ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ ಕ್ರಮೇಣ ಆಲ್ಝೈಮರ್‌ಗೆ ಕಾರಣವಾಗಬಹುದು. ಹಾಗಾಗಿ ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ವಾಸಿಸುವವರು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಸಂಶೋಧನೆ ಹೇಳುತ್ತದೆ. ಮಾಲಿನ್ಯವು ಶ್ವಾಸಕೋಶದ ಕ್ಯಾನ್ಸರ್ ಮತ್ತು ಆಸ್ತಮಾದಂತಹ ಶ್ವಾಸಕೋಶದ ಕಾಯಿಲೆಗಳನ್ನು ಉಂಟುಮಾಡುವುದಲ್ಲದೆ, ಮೆದುಳಿಗೆ ಹಾನಿ ಮಾಡುತ್ತಿದೆ. ಇದು ಆಲ್ಝೈಮರ್ ಅಪಾಯವನ್ನು ಹೆಚ್ಚಿಸುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಇಟಿ ಅರ್ಜಿ ಸಲ್ಲಿಕೆಗೆ ಫೆ.27ರವರೆಗೆ ಗಡುವು ವಿಸ್ತರಣೆ; ಅಭ್ಯರ್ಥಿಗಳಿಗೆ ಕೆಇಎ ಕೊನೆಯ ಅವಕಾಶ! – Kannada News | Karnataka CET 2026: KEA Extends Application Date to Feb 27 – Don’t Miss Out!

ಬೆಂಗಳೂರು, ಫೆ.21: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳ ಕೋರಿಕೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅರ್ಜಿ ಸಲ್ಲಿಸಲು ಫೆಬ್ರುವರಿ 27 ಕೊನೆಯ ದಿನಾಂಕವಾಗಿದೆ.

ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರ ಪ್ರಕಾರ, ಇದು ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ಕೊನೆಯ ಅವಕಾಶವಾಗಿದೆ. ಈ ದಿನಾಂಕದ ನಂತರ ಯಾವುದೇ ಕಾರಣಕ್ಕೂ ಅವಧಿ ವಿಸ್ತರಣೆ ಇರುವುದಿಲ್ಲ. ಇದುವರೆಗೆ ಒಟ್ಟು 3.18 ಲಕ್ಷ ಅಭ್ಯರ್ಥಿಗಳು ಯಶಸ್ವಿಯಾಗಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿದ್ದಾರೆ.

ಎಕ್ಸ್​​ ಪೋಸ್ಟ್​​ ಇಲ್ಲಿದೆ ನೋಡಿ:

ಪ್ರಮುಖ ದಿನಾಂಕಗಳು:

ಆನ್‌ಲೈನ್ ನೋಂದಣಿ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-02-2026 ರ ರಾತ್ರಿ 11:59 ರವರೆಗೆ.

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 03-03-2026 ರ ಸಂಜೆ 5:30 ರವರೆಗೆ.

ಇದನ್ನೂ ಓದಿ: SSLC, PUC ಪರೀಕ್ಷಾ ವೇಳಾಪಟ್ಟಿ ಪ್ರಕಟ: ಇಲ್ಲಿದೆ ಪರೀಕ್ಷೆ ಶುರುವಾಗುವ ಸಮಯ ವಿವರ

ಅರ್ಜಿ ಸಲ್ಲಿಸಿದವರ ಪೈಕಿ 2.18 ಲಕ್ಷ ಅಭ್ಯರ್ಥಿಗಳ ದಾಖಲೆಗಳನ್ನು ‘ಸ್ಯಾಟ್ಸ್’ (SATS) ಮೂಲಕ ಆನ್‌ಲೈನ್‌ನಲ್ಲಿ ಪರಿಶೀಲಿಸಲಾಗಿದೆ. ಇನ್ನು 1.08 ಲಕ್ಷ ಅಭ್ಯರ್ಥಿಗಳ ದಾಖಲೆಗಳನ್ನು ಕಾಲೇಜು ಹಂತದಲ್ಲಿ ಪರಿಶೀಲನೆ ನಡೆಸಲಾಗಿದೆ. ಅಭ್ಯರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ತಕ್ಷಣವೇ ಕೆಇಎ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ತನ್ನ ಎಕ್ಸ್​​ ಖಾತೆಯಲ್ಲಿ ವಿವರವಾಗಿ ಹಂಚಿಕೊಂಡಿದೆ. ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.in, ಕೆಇಎ ವೆಬ್‌ಸೈಟ್‌ನ ‘UGCET 2026 Online Application’ ಲಿಂಕ್ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಕೆ ವೇಳೆ ತಾಂತ್ರಿಕ ತೊಂದರೆ ಎದುರಾದರೆ 080-23460460 ಸಂಖ್ಯೆಗೆ ಕರೆ ಮಾಡಬಹುದು ಅಥವಾ keaugcet2026@gmail.com ಗೆ ಇಮೇಲ್ ಮಾಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಫೆಬ್ರವರಿ ಕೊನೆಯ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Job Horoscope Feb 22 28, 2026: Career Growth and New Opportunities

ಫೆಬ್ರವರಿ 22ರಿಂದ 28 ರವರೆಗೆ ಕೊನೆಯ ವಾರವಾಗಿದೆ. ಗ್ರಹಗತಿಗಳ ಪರಿವರ್ತನೆಯಿಂದ ಸಂಪತ್ತು, ಅಧಿಕಾರಿಗಳು ಬರಲಿದ್ದು, ಕೆಲವರಿಗೆ ಬರುವ ಸೂಚನೆಯೂ ಸಿಗುವುದು. ಯಾವುದನ್ನೂ ನಿರ್ಲಕ್ಷಿಸದೇ ಪ್ರಾಮಾಣಿಕತೆಯಿಂದ ಇರುವಂತೆ ನೋಡಿಕೊಳ್ಳಿ.

​ಮೇಷ:

ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಮೇಲಧಿಕಾರಿಗಳ ಬೆಂಬಲ ಸಿಗಲಿದ್ದು, ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ದೊರೆಯಲಿದೆ. ಆದರೂ ಸಹೋದ್ಯೋಗಿಗಳ ನಡುವೆ ಸಣ್ಣಪುಟ್ಟ ಪೈಪೋಟಿ ಎದುರಾಗಬಹುದು, ಎಚ್ಚರಿಕೆ ಇರಲಿ.

​ವೃಷಭ:

ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಅಥವಾ ರಫ್ತು-ಆಮದು ವ್ಯವಹಾರದವರಿಗೆ ಈ ವಾರ ಅತ್ಯಂತ ಲಾಭದಾಯಕ. ಕೆಲಸದ ನಿಮಿತ್ತ ದೂರದ ಪ್ರಯಾಣದ ಯೋಗವಿದೆ. ಪದೋನ್ನತಿಯ ಮಾತುಕತೆಗಳು ಸಕಾರಾತ್ಮಕವಾಗಿ ಮುಗಿಯಲಿವೆ.

​ಮಿಥುನ:

ಕೆಲಸದ ಒತ್ತಡ ಹೆಚ್ಚಾಗುವುದರಿಂದ ಮಾನಸಿಕ ಆಯಾಸವಾಗಬಹುದು. ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಸಂದರ್ಶನ ಕರೆಗಳು ಬರುವ ಸಾಧ್ಯತೆಯಿದೆ. ಬುದ್ಧಿವಂತಿಕೆಯಿಂದ ಕಠಿಣ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗುವಿರಿ.

​ಕರ್ಕಾಟಕ:

ವೃತ್ತಿರಂಗದಲ್ಲಿ ಸ್ಥಿರತೆ ಇರಲಿದೆ. ನಿಮ್ಮ ಸೃಜನಶೀಲತೆಗೆ ಸೂಕ್ತ ವೇದಿಕೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಯಿಂದ ಲಾಭ ದೊರೆಯಲಿದೆ. ಕಚೇರಿಯ ರಾಜಕೀಯದಿಂದ ದೂರವಿದ್ದರೆ ನಿಮ್ಮ ಗೌರವ ವೃದ್ಧಿಯಾಗುವುದು.

​ಸಿಂಹ:

ಅಧಿಕಾರ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಮಯವಿದು. ಸರ್ಕಾರಿ ಕೆಲಸಗಳಲ್ಲಿರುವವರಿಗೆ ವರ್ಗಾವಣೆ ಅಥವಾ ಬಡ್ತಿಯ ಸೂಚನೆಗಳಿವೆ. ನಿಮ್ಮ ನಿರ್ಧಾರಗಳು ಸಂಸ್ಥೆಗೆ ಲಾಭ ತರಲಿವೆ. ಕೆಲಸದಲ್ಲಿ ಅತಿಯಾದ ಆತ್ಮವಿಶ್ವಾಸ ಪ್ರದರ್ಶಿಸಬೇಡಿ.

​ಕನ್ಯಾ:

ತಾಂತ್ರಿಕ ಮತ್ತು ಸಂವಹನ ಕ್ಷೇತ್ರದಲ್ಲಿರುವವರಿಗೆ ಈ ವಾರ ಶುಭ ಫಲಗಳಿವೆ. ಹೊಸ ಕೌಶಲ್ಯಗಳನ್ನು ಕಲಿಯಲು ಇದು ಸಕಾಲ. ಕೆಲಸದ ಸ್ಥಳದಲ್ಲಿ ಬಾಕಿ ಉಳಿದಿದ್ದ ಯೋಜನೆಗಳು ಪೂರ್ಣಗೊಳ್ಳಲಿವೆ. ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಇರಲಿ.

​ತುಲಾ:

ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಉದ್ಯೋಗ ಬದಲಾವಣೆಗೆ ಇದು ಪೂರಕ ಸಮಯವಲ್ಲ, ಇದ್ದಲ್ಲಿಯೇ ಉತ್ತಮ ಪ್ರಗತಿ ಕಾಣುವಿರಿ. ನಿಮ್ಮ ಕಾರ್ಯವೈಖರಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು.

​ವೃಶ್ಚಿಕ:

ವೃತ್ತಿಯಲ್ಲಿ ಶತ್ರುಗಳ ಬಾಧೆ ಹೆಚ್ಚಾಗಬಹುದು, ನಿಮ್ಮ ಕೆಲಸದ ಮೇಲೆ ಮಾತ್ರ ಗಮನವಿರಲಿ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ತಡವಾಗಿ ಸಿಗಲಿದೆ. ನ್ಯಾಯಾಲಯದ ಕೆಲಸಗಳಲ್ಲಿ ತೊಡಗಿರುವವರಿಗೆ ಅನುಕೂಲಕರ ವಾತಾವರಣವಿರಲಿದೆ.

​ಧನುಸ್ಸು:

ಕಲಾತ್ಮಕ ಮತ್ತು ಸೃಜನಶೀಲ ವೃತ್ತಿಯಲ್ಲಿರುವವರಿಗೆ ಅಪಾರ ಕೀರ್ತಿ ಬರಲಿದೆ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ದೊರೆಯುವ ಲಕ್ಷಣಗಳಿವೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನವು ನಿಮ್ಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ.

​ಮಕರ:

ಕೆಲಸದ ಸ್ಥಳದಲ್ಲಿ ಹೊಸ ಸವಾಲುಗಳು ಎದುರಾಗಲಿವೆ. ನಿಮ್ಮ ತಾಳ್ಮೆ ಮತ್ತು ಶಿಸ್ತು ನಿಮಗೆ ವಿಜಯ ತಂದುಕೊಡಲಿದೆ. ಸ್ವಂತ ಉದ್ಯಮ ಆರಂಭಿಸುವ ಆಲೋಚನೆ ಇದ್ದರೆ ಈಗ ಕಾರ್ಯರೂಪಕ್ಕೆ ತರಬಹುದು. ಆರ್ಥಿಕ ಲಾಭ ಸುಧಾರಿಸಲಿದೆ.

​ಕುಂಭ:

ಬರವಣಿಗೆ, ಮಾಧ್ಯಮ ಮತ್ತು ಐಟಿ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ನಿಮ್ಮ ಯೋಜನೆಗಳಿಗೆ ಸಹೋದ್ಯೋಗಿಗಳಿಂದ ಉತ್ತಮ ಪ್ರೋತ್ಸಾಹ ದೊರೆಯಲಿದೆ. ಕಿರು ಪ್ರವಾಸಗಳು ಕೆಲಸದ ನಿಮಿತ್ತ ಅನಿವಾರ್ಯವಾಗಬಹುದು.

​ಮೀನ:

ಉದ್ಯೋಗದಲ್ಲಿ ಲಾಭದಾಯಕ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಆದಾಯದ ಮೂಲಗಳು ಹೆಚ್ಚಾಗಲಿವೆ. ನಿಮ್ಮ ಮಾತಿನ ಚತುರತೆಯಿಂದ ಕಠಿಣ ಗ್ರಾಹಕರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗುವಿರಿ. ಸಹೋದ್ಯೋಗಿಗಳೊಂದಿಗೆ ಸೌಹಾರ್ದತೆಯಿಂದ ಇರಿ. ಈ ವಾರದ ಅಂತ್ಯದೊಳಗೆ ನೀವು ಯಾವುದಾದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಈ ವರ್ಣ ರಂಜಿತ ಧ್ವಜವನ್ನು ಬೈಕ್‌ಗಳಲ್ಲಿ ಹಾಕುವುದೇಕೆ ಗೊತ್ತಾ? – Kannada News | Do you know the purpose of putting the Tibetan flag on bikes?

ಟಿಬೆಟಿಯನ್‌ ಪ್ರಾರ್ಥನಾ ಧ್ವಜImage Credit source: Pinterest

ಇತ್ತೀಚಿನ ದಿನಗಳಲ್ಲಿ ಲಡಾಕ್‌ನಂತಹ ಹಿಲ್‌ ಸ್ಟೇಷನ್‌ಗಳಿ ಬೈಕ್‌ ರೈಡ್‌ ಹೋಗುವಂತಹದ್ದು ಟ್ರೆಂಡ್‌ ಆಗಿದೆ. ಯುವ ಜನರಂತೂ ರಜಾ ದಿನಗಳಲ್ಲಿ ಬ್ಯಾಗ್‌ ಪ್ಯಾಕ್‌ ಮಾಡಿ ಈ ರೀತಿ ರೈಡ್‌ಗಳಿಗೆ ಹೋಗುತ್ತಿರುತ್ತಾರೆ. ಹೀಗೆ ದೂರದೂರುಗಳಿಗೆ ರೈಡ್‌ ಹೋಗುವವರು ತಮ್ಮ ಬೈಕ್‌ಗಳಲ್ಲಿ (bikes)ಐದು ಬಣ್ಣಗಳಿಂದ ಕೂಡಿದ ಟಿಬೆಟಿಯನ್ ಫ್ಲ್ಯಾಗ್‌ ಒಂದನ್ನು ನೇತುಹಾಕಿರುತ್ತಾರೆ. ಬಹುಶಃ ನೀವು ಕೂಡ ಇದನ್ನು ಗಮನಿಸಿರುತ್ತೀರಿ ಅಲ್ವಾ. ಸಾಕಷ್ಟು ಮಂದಿ ಇದನ್ನು ಫ್ಯಾಶನ್‌ ಮತ್ತು ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಇದರ ಹಿಂದಿನ ಕಾರಣವೇ ಬೇರೆಯಿದೆ. ಹಾಗಿದ್ರೆ ಈ ಐದು ಬಣ್ಣದ ಧ್ವಜವನ್ನು ಬೈಕ್‌ಗಳಲ್ಲಿ ಹಾಕುವುದೇಕೆ? ಅದರ ಅರ್ಥವೇನು ಎಂಬುದನ್ನು ನೋಡೋಣ ಬನ್ನಿ.

ಬೌದ್ಧ ಸಂಪ್ರದಾಯದ ಸಂಕೇತ ಈ ಧ್ವಜ:

ಬೈಕ್‌ಗಳಲ್ಲಿ ಹಾಕಿರುವಂತಹ ಈ ಫ್ಲ್ಯಾಗ್‌ಗಳನ್ನು ಟಿಬೆಟಿಯನ್‌ ಪ್ರೇಯರ್‌ ಫ್ಲ್ಯಾಗ್‌ ಎಂದು ಕರೆಯಲಾಗುತ್ತದೆ. ಈ ಟಿಬೆಟಿಯನ್ ಧ್ವಜಗಳು ಬೌದ್ಧ ಸಂಪ್ರದಾಯ, ಧಾರ್ಮಿಕ ನಂಬಿಕೆ ಮತ್ತು ಪ್ರಕೃತಿಯ ಮೇಲಿನ ಗೌರವವನ್ನು ಸಂಕೇತಿಸುತ್ತವೆ. ಅಲ್ಲದೆ ಧ್ವಜದ ಐದು ಬಣ್ಣಗಳು ಐದು ಅಂಶಗಳು ಮತ್ತು ಐದು ದಿಕ್ಕುಗಳನ್ನು ಸಂಕೇತಿಸುತ್ತವೆ.  ಟಿಬೆಟ್ ನನ್ಸ್ ಪ್ರಾಜೆಕ್ಟ್ ವೆಬ್‌ಸೈಟ್ ಪ್ರಕಾರ, ಇವು ಟಿಬೆಟಿಯನ್ ಪ್ರಾರ್ಥನಾ ಧ್ವಜಗಳು. ಟಿಬೆಟ್‌ನ ಜನರು ಅವುಗಳನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಈ ಧ್ವಜದಲ್ಲಿ ನೀಲಿ, ಬಿಳಿ, ಕೆಂಪು, ಹಸಿರು ಮತ್ತು ಹಳದಿ ಬಣ್ಣಗಳಿದ್ದು, ಈ ಬಣ್ಣಗಳಲ್ಲಿ ಪ್ರತಿಯೊಂದೂ ವಿಭಿನ್ನ ಅರ್ಥವನ್ನು ಹೊಂದಿದೆ.

ಈ ಧ್ವಜಗಳ ಐದು ಬಣ್ಣಗಳು ಐದು ಅಂಶಗಳನ್ನು ಸಂಕೇತಿಸುತ್ತವೆ. ಮೊದಲ ಬಣ್ಣ ನೀಲಿ, ಇದು ಆಕಾಶ  ಮತ್ತು ಪೂರ್ವ ದಿಕ್ಕನ್ನು ಸಂಕೇತಿಸುತ್ತದೆ. ಬಿಳಿ ಬಣ್ಣ ಗಾಳಿಯನ್ನು ಮತ್ತು ಪಶ್ಚಿಮ ದಿಕ್ಕನ್ನು ಪ್ರತಿನಿಧಿಸುತ್ತದೆ. ಕೆಂಪು ಬಣ್ಣವು ಬೆಂಕಿಯನ್ನು ಮತ್ತು ದಕ್ಷಿಣ ದಿಕ್ಕನ್ನು ಸಹ ಸಂಕೇತಿಸುತ್ತದೆ. ಹಸಿರು ನೀರು ಮತ್ತು ಉತ್ತರ ದಿಕ್ಕಿನೊಂದಿಗೆ ಸಂಬಂಧ ಹೊಂದಿದೆ. ಹಳದಿ ಭೂಮಿ ಮತ್ತು ಅದರ ಕೇಂದ್ರವನ್ನು ಸಂಕೇತಿಸುತ್ತದೆ.

ಟಿಬೆಟಿಯನ್ ಧ್ವಜ ಬೌದ್ಧಧರ್ಮದ ನಂಬಿಕೆಗಳೊಂದಿಗೆ ಸಂಬಂಧ ಹೊಂದಿರುವುದರಿಂದ ಈ ಧ್ವಜಗಳನ್ನು ಶಾಂತಿ ಮತ್ತು ಕರುಣೆಯನ್ನು ಸಹ ಸಂಕೇತಿಸುತ್ತವೆ. ಟಿಬೆಟಿಯನ್ ಸಂಸ್ಕೃತಿಯಲ್ಲಿ ಅವುಗಳನ್ನು ದಾರ್-ಚೋ ಎಂದು ಕರೆಯಲಾಗುತ್ತದೆ. ದಾರ್ ಎಂದರೆ ಜೀವನ, ಸಂಪತ್ತು, ಸಮೃದ್ಧಿ ಮತ್ತು ಆರೋಗ್ಯ, ಆದರೆ ಚೋ ಎಂದರೆ ಎಲ್ಲಾ ಜೀವಿಗಳು. ಈ ಧ್ವಜಗಳು ಗಾಳಿಯಲ್ಲಿ ಹಾರಿದಾಗ, ಅವುಗಳ ಶಕ್ತಿಯು ದೂರದವರೆಗೆ ಹರಡಿ ಎಲ್ಲರಿಗೂ ಯೋಗಕ್ಷೇಮವನ್ನು ಕರುಣಿಸುತ್ತದೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಚುಂಬನದಲ್ಲಿ ಎಷ್ಟು ಪ್ರಕಾರಗಳಿವೆ, ಅವುಗಳ ಅರ್ಥವೇನು ಗೊತ್ತಾ?

ಟಿಬೆಟಿಯನ್‌ ಧ್ವಜದ ಮೇಲೆ ಬರೆದ ಮಂತ್ರಗಳ ಅರ್ಥವೇನು?

ಧ್ವಜದ ಮೇಲೆ ಟಿಬೆಟಿಯನ್ ಅಕ್ಷರ “ಓಂ ಮಣಿ ಪದ್ಮೇ ಹಮ್” ಇದೆ. ಓಂ ಎಂಬುದು ಅತ್ಯಂತ ಪವಿತ್ರ ಪದ, ನಂತರ ಮಣಿ ಎಂದರೆ ರತ್ನ, ಪದ್ಮೇ ಎಂದರೆ ಕಮಲ ಮತ್ತು ಹಮ್ ಎಂದರೆ ಪ್ರಬುದ್ಧ ಆತ್ಮ. ಇದು ಕರುಣೆ, ನೈತಿಕತೆ, ತಾಳ್ಮೆ, ಕಠಿಣ ಪರಿಶ್ರಮ, ತ್ಯಾಗ ಮತ್ತು ಬುದ್ಧಿವಂತಿಕೆಯಂತಹ ಮೌಲ್ಯಗಳ ಸಂಯೋಜನೆಯಾಗಿದೆ. ಧ್ಯಾನದ ಸಮಯದಲ್ಲಿ ಮಂತ್ರವನ್ನು ಪಠಿಸುವುದರಿಂದ ಅಹಂ, ಅಸೂಯೆ, ಅಜ್ಞಾನ, ದುರಾಸೆ ಮತ್ತು ಆಕ್ರಮಣಶೀಲತೆಯನ್ನು ಹೋಗಲಾಡಿಸಬಹುದು ಎಂದು ಹೇಳಲಾಗುತ್ತದೆ.

ಟಿಬೆಟಿಯನ್ ಧ್ವಜವನ್ನು ಬೈಕ್‌ಗಳಲ್ಲಿ ಏಕೆ ಹಾರಿಸಲಾಗುತ್ತದೆ?

ಓಂ ಮಣಿ ಪದ್ಮೇ ಹಮ್ ಎಂಬ ಮಂತ್ರವಿರುವ ಈ ಧ್ವಜಗಳು ಗಾಳಿಯಲ್ಲಿ ಹಾರಾಡಿದಾಗ ಮಂತ್ರದ ಶಕ್ತಿ ಸಕ್ರಿಯವಾಗುತ್ತದೆ. ಇದು ಎಲ್ಲಾ ಅಪಾಯಗಳಿಂದ ನಮ್ಮನ್ನು ರಕ್ಷಿಸುತ್ತದೆ ಮತ್ತು  ಈ ಮಂತ್ರಗಳ ಸಕಾರಾತ್ಮಕತೆಯು ವಾತಾವರಣಕ್ಕೆ ಹರಿಯುತ್ತದೆ ಎಂದು ಎಂದು ನಂಬಲಾಗಿದೆ. ಹಾಗಾಗಿ ಬೈಕ್‌ಗಳಲ್ಲಿ ಈ ಧ್ವಜ ಹಾಕುವುದು. ಟಿಬೆಟಿಯನ್ನರು ಅವುಗಳನ್ನು ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ ಮತ್ತು ಈ ಧ್ವಜಗಳನ್ನು ಕಸದ ಬುಟ್ಟಿಗೆ ಎಸೆಯುವುದನ್ನು ಅಥವಾ ನೆಲದ ಮೇಲೆ ಇಡುವುದನ್ನು ನಿಷೇಧಿಸಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್ – Kannada News | Darshan Convey Happy To Fans After fans did good work on his birthday

ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಪತ್ನಿ ವಿಜಯಲಕ್ಷ್ಮೀ, ಸಹೋದರನಂತೆ ಇರುವ ನಟ ಧನ್ವೀರ್ ಅವರು ಹೊರಗಿನ ಅಪ್​​ಡೇಟ್​​ನ ದರ್ಶನ್​ಗೆ ನೀಡುತ್ತಿದ್ದಾರೆ. ದರ್ಶನ್ ಜನ್ಮದಿನ (ಫೆಬ್ರವರಿ 16) ಪ್ರಯುಕ್ತ ಒಳ್ಳೊಳ್ಳೆಯ ಕೆಲಸಗಳನ್ನು ಅಭಿಮಾನಿಗಳು ಮಾಡಿದ್ದಾರೆ. ಈ ಸಂದರ್ಭದ ವಿಡಿಯೋನ ಕೊಲ್ಯಾಜ್ ಮಾಡಿ ದರ್ಶನ್ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ‘ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ನನ್ನೆಲ್ಲಾ ಸೆಲೆಬ್ರಿಟಿಗಳಿಗೆ ಧನ್ಯವಾದ’ ಎಂದು ದರ್ಶನ್ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೇಶವೇ ನಾಚಿಕೆ ಪಡುವಂತಾಗಿದೆ; ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರ ಟೀಕೆ – Kannada News | No one should demean our country Opposition leaders slam Youth Congress protest at AI Impact Summit

ನವದೆಹಲಿ, ಫೆಬ್ರವರಿ 21: ನವದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ (AI Impact Summit) ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಟಾಪ್‌ಲೆಸ್ ಪ್ರತಿಭಟನೆ ನಡೆಸಿದ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಇಡೀ ಜಗತ್ತಿನ ನಾಯಕರು ಆಗಮಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಕೇಂದ್ರೀಕರಿಸಿದ ಅಂತಾರಾಷ್ಟ್ರೀಯ ಸಭೆಯಲ್ಲಿ ಕಾಂಗ್ರೆಸ್​ ನಾಯಕರ ಇಂತಹ ವರ್ತನೆ ಸೂಕ್ತವಲ್ಲ ಎಂದು ಹಲವಾರು ವಿಪಕ್ಷ ನಾಯಕರು ಟೀಕಿಸಿದ್ದಾರೆ.

ಭಾರತ ಮತ್ತು ವಿದೇಶಗಳಿಂದ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದ ಎಐ ಶೃಂಗಸಭೆಯು ಹೊಸ ತಂತ್ರಜ್ಞಾನಗಳಲ್ಲಿ ಭಾರತದ ಬೆಳೆಯುತ್ತಿರುವ ಸ್ಥಾನಮಾನವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿತ್ತು. ಆದರೆ, ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಿಂದಾಗಿ ದೇಶದ ಇಮೇಜ್ ಹಾಳಾಗಿದೆ. ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಲು ಅದು ಸೂಕ್ತವಾದ ವೇದಿಕೆಯಾಗಿರಲಿಲ್ಲ ಎಂದು ಹಲವು ವಿರೋಧ ಪಕ್ಷದ ನಾಯಕರು ಟೀಕಿಸಿದ್ದಾರೆ.

“ನಿನ್ನೆ ನಡೆದ AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ನಮ್ಮೆಲ್ಲರನ್ನೂ ತಲೆ ತಗ್ಗುವಂತೆ ಮಾಡಿತು. ನಮ್ಮ ರಾಜಕೀಯ ಎಲ್ಲಿಗೆ ಹೋಗುತ್ತಿದೆ! ಯಾರೂ ನಮ್ಮ ದೇಶವನ್ನು ಎಂದಿಗೂ ಕೀಳಾಗಿ ನೋಡಬಾರದು. ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ನಾವು ಯಾವಾಗಲೂ ಜಗತ್ತಿಗೆ ಒಗ್ಗಟ್ಟಿನ ಮುಖವನ್ನು ತೋರಿಸಬೇಕು” ಎಂದು ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ದೇಶವೇ ತಲೆತಗ್ಗಿಸುವ ಕೆಲಸ; ಎಐ ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

ಈ ಘಟನೆಯನ್ನು ಅತ್ಯಂತ ಆಕ್ಷೇಪಾರ್ಹ ಎಂದು ಕರೆದ ಬಿಎಸ್​ಪಿ ನಾಯಕಿ ಮಾಯಾವತಿ, “ನವದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಶೃಂಗಸಭೆಗೆ ಭಾರತ ಮತ್ತು ವಿದೇಶಗಳಿಂದ ಅನೇಕ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸಲಾಗಿತ್ತು. ಇದು ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು. ಕಾಂಗ್ರೆಸ್ ಯುವ ಕಾರ್ಯಕರ್ತರು ಈ ವೇಳೆ ಶೃಂಗಸಭೆಯ ಆವರಣದೊಳಗೆ ಅರೆನಗ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವುದು ಅತ್ಯಂತ ಅಸಭ್ಯ ಮತ್ತು ಖಂಡನೀಯ. ಈ ಶೃಂಗಸಭೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿಲ್ಲದಿದ್ದರೆ ವಿಷಯ ವಿಭಿನ್ನವಾಗಿರುತ್ತಿತ್ತು. ಆದರೆ, ಅಂತಾರಾಷ್ಟ್ರೀಯ ಶೃಂಗಸಭೆಯ ಸಮಯದಲ್ಲಿ ಇಂತಹ ನಡವಳಿಕೆಯು ಕಳವಳಕಾರಿ ವಿಷಯವಾಗಿದೆ. ಇದು ದೇಶದ ಘನತೆ ಮತ್ತು ಇಮೇಜ್‌ಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ” ಎಂದು ಹೇಳಿದ್ದಾರೆ.

“ಯುವ ಕಾಂಗ್ರೆಸ್ ಸದಸ್ಯರು AI ಇಂಪ್ಯಾಕ್ಟ್ ಶೃಂಗಸಭೆಯನ್ನು ರಾಜಕೀಯ ನಾಟಕಗಳಿಗೆ ಬಳಸಿಕೊಳ್ಳುತ್ತಿರುವುದು ಶೋಚನೀಯ. ಪ್ರತಿಭಟನೆಗಳಿಗೆ ಇಂತಹ ಜಾಗತಿಕ ವೇದಿಕೆಯನ್ನು ಬಳಸುವುದರಿಂದ ನಮ್ಮ ಮಹಾನ್ ರಾಷ್ಟ್ರ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿತವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ವ್ಯತ್ಯಾಸ ಸಹಜವಾದರೂ ಎಲ್ಲಿ ಮತ್ತು ಹೇಗೆ ಪ್ರತಿಭಟಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ರಾಜಕೀಯ ಭಿನ್ನಾಭಿಪ್ರಾಯಕ್ಕೆ ಒಂದು ಸಮಯ ಮತ್ತು ಸ್ಥಳ ಎಂಬುದು ಇರುತ್ತದೆ. ಅಂತಾರಾಷ್ಟ್ರೀಯ ಶೃಂಗಸಭೆಯನ್ನು ಇದಕ್ಕಾಗಿ ಬಳಸಿಕೊಳ್ಳುವುದು ಖಂಡಿತವಾಗಿಯೂ ಸರಿಯಲ್ಲ” ಎಂದು ಬಿಆರ್‌ಎಸ್ ಹಿರಿಯ ನಾಯಕ ಕೆ.ಟಿ. ರಾಮರಾವ್ ಹೇಳಿದ್ದಾರೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್​​ನಿಂದ ಅರೆಬೆತ್ತಲೆ ಪ್ರತಿಭಟನೆ; ಬಂಧಿತ 4 ಆರೋಪಿಗಳು 5 ದಿನ ಪೊಲೀಸ್ ವಶಕ್ಕೆ

“ನಿನ್ನೆ ನಡೆದ AI ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ನಿಂದ ಉಂಟಾದ ಅಡಚಣೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ನಿರಾಶೆಗೊಂಡಿದ್ದೇನೆ. ಈ ಜಾಗತಿಕ ವೇದಿಕೆಯು AI ಸೂಪರ್ ಪವರ್ ಆಗಿ ಭಾರತದ ಬೆಳೆಯುತ್ತಿರುವ ನಾಯಕತ್ವವನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಭಾರತವು ಇದಕ್ಕಿಂತ ಉತ್ತಮವಾದುದಕ್ಕೆ ಅರ್ಹವಾಗಿದೆ. ನಾವು ಕ್ಷುಲ್ಲಕ ರಾಜಕೀಯವನ್ನು ಮೀರಿ ನಾವೀನ್ಯತೆ ಮತ್ತು ಶ್ರೇಷ್ಠತೆಯ ಮೂಲಕ ರಾಷ್ಟ್ರ ನಿರ್ಮಾಣದತ್ತ ಗಮನಹರಿಸೋಣ” ಎಂದು ಸಚಿವ ನಾರಾ ಲೋಕೇಶ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಉದ್ಘಾಟಿಸಿದ ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ! – Kannada News | Kolar MLA Rages: Vehmagal Helicopter Unit Inauguration Sparks Local Disregard Controversy

ಕೋಲಾರ, ಫೆಬ್ರವರಿ 21: ಮಂಗಳವಾರ (ಫೆ.17) ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕ ಉದ್ಘಾಟಿಸಲ್ಪಟ್ಟಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿವಾಸಿಗಳನ್ನು ನಿರ್ಲಕ್ಷ್ಯ ಮಾಡಿರುವುದಾಗಿ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತ್ ಸಭೆಯಲ್ಲಿ ಕೈಗಾರಿಕೆಗಳ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ಕಿಡಿಕಾರಿದ್ದಾರೆ.  ಅಲ್ಲದೆ  ಘಟಕಕ್ಕೆ ವಿದ್ಯುತ್ ಪೂರೈಕೆ ನಿಲ್ಲಿಸಬೇಕೆಂದು ಹೇಳಿರುವ ಅವರ ಹೇಳಿಕೆಗಳಿಂದ ವಿವಾದಗಳೆದ್ದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೆಲಿಕಾಪ್ಟರ್ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ವೇಮಗಲ್ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸದೇ ಕಡಗಣನೆ ಮಾಡಲಾಗಿದೆ ಎಂದು ದೂರಿದ ಶಾಸಕ, ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ವಿದ್ಯುತ್ ಪೀಡರ್ ವ್ಯವಸ್ಥೆ ಮಾಡದೇ, ವೇಮಗಲ್‌ನಿಂದಲೇ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆ ಉಂಟಾಗಿದೆ ಎಂದಿದ್ದಾರೆ. ಇದೇ ರೀತಿಯಲ್ಲಿ ಮುಂದುವರಿದರೆ ಕೈಗಾರಿಕೆಗಳಿಗೆ ನೀಡುತ್ತಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಎಚ್ಚರಿಸಿದ್ದಾರೆ. ಸ್ಥಳೀಯ ಯುವಕರಿಗೆ ಕೇವಲ ತಳಮಟ್ಟದ ಕೆಲಸಗಳನ್ನು ನೀಡಿ, ಹೊರಗಿನವರಿಗೆ ಅಧಿಕಾರಿಗಳ ಹುದ್ದೆ ನೀಡುತ್ತಿರುವುದನ್ನೂ ಅವರು ಟೀಕಿಸಿದ್ದಾರೆ. ಈಗ ಅವರ ಈ ಎಲ್ಲಾ ಹೇಳಿಕೆಗಳಿಗೆ ವಿರೋಧ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

‘ಹೌಸ್ ಆಫ್ ಡ್ರಾಗನ್’ ಸೀಸನ್ 3 ಟೀಸರ್ ರಿಲೀಸ್: ಈ ಬಾರಿ ಇನ್ನೂ ರೋಚಕ – Kannada News | House of the Dragon season 3 teaser released, web series releasing in June

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್‌ನ ದೈತ್ಯ ವೆಬ್ ಸರಣಿ ‘ಹೌಸ್ ಆಫ್ ದಿ ಡ್ರ್ಯಾಗನ್’ (House Of the Dragon) ಈಗ ತನ್ನ ಮೂರನೇ ಸೀಸನ್‌ನೊಂದಿಗೆ ಮರಳಲು ಸಜ್ಜಾಗಿದೆ. ಈ ಸರಣಿಯ ಬಗ್ಗೆ ಹೆಚ್ಚು ಗೊತ್ತಿಲ್ಲದವರಿಗಾಗಿ ಹೇಳಬೇಕೆಂದರೆ, ಇದು ಜಗತ್ತಿನ ನಂಬರ್ 1 ವೆಬ್ ಸರಣಿಯಾದ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಪ್ರೀಕ್ವೆಲ್ ಆಗಿದ್ದು, ‘ಗೇಮ್ ಆಫ್ ಥ್ರೋನ್ಸ್’ ಕತೆ ನಡೆಯುವ ಸುಮಾರು 200 ವರ್ಷಗಳ ಹಿಂದೆ ನಡೆದ ಕಥೆ ಆಗಿದೆ. ರಾಜಮನೆತನದ ಆಂತರಿಕ ಕಲಹ, ಬೆಂಕಿ ಉಗುಳುವ ದೈತ್ಯ ಡ್ರ್ಯಾಗನ್‌ಗಳು ಮತ್ತು ಅಧಿಕಾರದ ಹಪಾಹಪಿಯೇ ಈ ಸರಣಿಯ ಜೀವಾಳ. ಇದೀಗ ಈ ವೆಬ್ ಸರಣಿಯ ಮೂರನೇ ಸೀಸನ್​​ನ ಟ್ರೈಲರ್ ಬಿಡುಗಡೆ ಆಗಿದ್ದು, ಬಿಡುಗಡೆ ದಿನಾಂಕದ ಘೋಷಣೆಯೂ ಆಗಿದೆ.

‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ವೆಬ್ ಸರಣಿ ಪ್ರಮುಖವಾಗಿ ‘ಟಾರ್ಗೇರಿಯನ್’ ರಾಜವಂಶದ ಸುತ್ತ ಸುತ್ತುತ್ತದೆ. ಈ ಮನೆತನದವರಿಗೆ ಡ್ರ್ಯಾಗನ್‌ಗಳನ್ನು ನಿಯಂತ್ರಿಸುವ ವಿಶೇಷ ಶಕ್ತಿ ಇರುತ್ತದೆ. ಹಾಗಾಗಿ ಏಳು ಕಿಂಗ್​​ಡಮ್​​​ಗಳಿಗೆ ಅವರೇ ಅಧಿಪತಿಗಳಾಗಿರುತ್ತಾರೆ. ಆದರೆ ಅದೇ ಕುಟುಂಬದ ಕೆಲವರ ನಡುವೆ ಅಧಿಕಾರಕ್ಕಾಗಿ, ಸಿಂಹಾಸನಕ್ಕಾಗಿ ಯುದ್ಧ ಶುರುವಾಗಿದೆ. ಈ ಯುದ್ಧದಲ್ಲಿ ತಂತ್ರ, ಕುತಂತ್ರ, ನಂಬಿಕೆ ದ್ರೋಹ ಎಲ್ಲವೂ ಇವೆ. ಅವೆಲ್ಲವುಗಳ ಕತೆಯನ್ನು ಈ ‘ಹೌಸ್ ಆಫ್​ ದಿ ಡ್ರ್ಯಾಗನ್ಸ್’ ಒಳಗೊಂಡಿದೆ.

ಇದೀಗ ಮೂರನೇ ಸೀಸನ್ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ರಾಣಿ ರೇನಿರಾ ಟಾರ್ಗೇರಿಯನ್ ತನ್ನ ಅಧಿಕಾರವನ್ನು ಮರಳಿ ಪಡೆಯಲು ದೃಢನಿಶ್ಚಯ ಮಾಡಿದಂತೆ ತೋರುತ್ತಿದೆ. ತನ್ನ ಮಗನ ಸಾವು ಮತ್ತು ತನಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ರೇನಿರಾ ಈಗ ಯುದ್ಧಭೂಮಿಗೆ ಧುಮುಕಿದ್ದಾಳೆ. ಟೀಸರ್‌ನಲ್ಲಿ ಕಂಡುಬರುವ ದೃಶ್ಯಗಳು ಯುದ್ಧವು ಎಷ್ಟು ಭೀಕರವಾಗಿರಲಿದೆ ಎಂಬುದರ ಮುನ್ಸೂಚನೆ ನೀಡುತ್ತಿವೆ. ಮಗ-ತಾಯಿಯ ನಡುವೆ, ಪತಿ-ಪತ್ನಿಯ ನಡುವೆಯೇ ಅಪನಂಬಿಕೆ, ಕಿತ್ತಾಟಗಳು ಶುರುವಾಗಿರುವ ಸೂಚನೆಯನ್ನು ಟೀಸರ್ ನೀಡುತ್ತಿದೆ.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾರನ್ನು ಮಹಾನ್ ವ್ಯಕ್ತಿಗೆ ಹೋಲಿಸಿದ ಹಾಲಿವುಡ್ ಸ್ಟಾರ್ ವಿನ್ ಡೀಸೆಲ್

‘ಗೇಮ್ ಆಫ್ ಥ್ರೋನ್ಸ್’ನ ಮತ್ತೊಂದು ಪ್ರೀಕ್ವೆಲ್ ಆಗಿರುವ ‘ನೈಟ್ ಆಫ್ ದಿ ಸೆವೆನ್ ಕಿಂಗ್ಡಮ್ಸ್’ ಈಗಾಗಲೇ ಜಿಯೋ ಹಾಟ್​​ಸ್ಟಾರ್​​ನಲ್ಲಿ ಪ್ರಸಾರ ಆಗುತ್ತಿದೆ. ಇದು ಈ ಸರಣಿಯ ಮೊದಲ ಸೀಸನ್ ಆಗಿದೆ. ಅದು ಮುಗಿದ ಬಳಿಕ ‘ಹೌಸ್ ಆಫ್ ದಿ ಡ್ರ್ಯಾಗನ್ಸ್’ ಮೂರನೇ ಸೀಸನ್ ಪ್ರಸಾರ ಆಗಲಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್​​ನಲ್ಲಿ ನಿರ್ದಿಷ್ಟ ಬಿಡುಗಡೆ ದಿನಾಂಕ ಘೋಷಿಸಿಲ್ಲವಾದರೂ, ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಕಳೆರಡು ಸೀಸನ್​​ಗಳಿಗಿಂತಲೂ ಅದ್ಧೂರಿಯಾಗಿ ಮೂರನೇ ಸೀಸನ್ ಇರುವುದು ಟೀಸರ್​​ ನಿಂದ ಖಾತ್ರಿ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:41 pm, Sat, 21 February 26

Source link

ISRO VSSC Internship 2026: ISRO ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಇಂಟರ್ನ್‌ಶಿಪ್​​​ಗೆ ಅರ್ಜಿ ಆಹ್ವಾನ – Kannada News | ISRO VSSC Internship 2026: Apply Now for Space Research Opportunities!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಆಶ್ರಯದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ(VSSC) ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶವನ್ನು ತಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ವಿವಿಧ ಇಂಟರ್ನ್‌ಶಿಪ್ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಿಟೆಕ್, ಬಿಇ, ಎಂಟೆಕ್, ಎಂಇ, ಎಂಎಸ್ಸಿ, ಇಂಟಿಗ್ರೇಟೆಡ್ ಎಂಎಸ್ಸಿ/ಎಂಟೆಕ್, ಬಿಎಸ್-ಎಂಎಸ್ ಮತ್ತು ಪಿಎಚ್‌ಡಿ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆ ಮತ್ತು ಅಂಕಗಳ ಮಾನದಂಡ:

ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಅಥವಾ 10 ಅಂಕಗಳ ಪ್ರಮಾಣದಲ್ಲಿ 6.32 ಸಿಜಿಪಿಎ ಗಳಿಸಿರಬೇಕು. ಪಿಎಚ್‌ಡಿ ವಿದ್ಯಾರ್ಥಿಗಳು ತಮ್ಮ ಕೋರ್ಸ್‌ವರ್ಕ್ ಅನ್ನು ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ವಿಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಖಾತೆಯನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಮಾರ್ಚ್ 16 ರವರೆಗೆ ಸ್ವೀಕರಿಸಲಾಗುತ್ತದೆ. ಇಂಟರ್ನ್‌ಶಿಪ್ ಅವಧಿ ಕನಿಷ್ಠ 21 ದಿನಗಳಿಂದ ಗರಿಷ್ಠ 45 ದಿನಗಳವರೆಗೆ ಇರಲಿದೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಆಯ್ಕೆ ಅವರ ಅಂಕಗಳ ಆಧಾರದ ಮೇಲೆ ನಡೆಯಲಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲ.

ನೀಡಲಾಗುವ ಕೋರ್ಸ್‌ಗಳು:

ಈ ಇಂಟರ್ನ್‌ಶಿಪ್ ಕಾರ್ಯಕ್ರಮದ ಅಡಿಯಲ್ಲಿ ಏರೋನಾಟಿಕಲ್, ಏರೋಸ್ಪೇಸ್, ಅಪ್ಲೈಡ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್, ಕೆಮಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಮೆಕ್ಯಾನಿಕಲ್, ಮೆಟಲರ್ಜಿಕಲ್ ಮತ್ತು ಮೆಟೀರಿಯಲ್ಸ್, ಪಾಲಿಮರ್ ಸೈನ್ಸ್, ಪ್ರೊಡಕ್ಷನ್ ಎಂಜಿನಿಯರಿಂಗ್ ಹಾಗೂ ಎಂಜಿನಿಯರಿಂಗ್ ಭೌತಶಾಸ್ತ್ರದಲ್ಲಿ ಬಿಇ/ಬಿಟೆಕ್ ಕೋರ್ಸ್‌ಗಳು ಲಭ್ಯವಿವೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಇದಲ್ಲದೆ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಬಿಎಸ್-ಎಂಎಸ್, ಬಿಎಸ್ಸಿ, ಇಂಟಿಗ್ರೇಟೆಡ್ ಎಂಎಸ್ಸಿ, ಎಂಟೆಕ್, ಎಂಇ, ವಾತಾವರಣ ವಿಜ್ಞಾನ, ಹವಾಮಾನಶಾಸ್ತ್ರ, ಸಾಗರಶಾಸ್ತ್ರ, ಬಾಹ್ಯಾಕಾಶ ಭೌತಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ, ಡೇಟಾ ಅನಾಲಿಟಿಕ್ಸ್, ಡೇಟಾ ಸೈನ್ಸ್ ಹಾಗೂ ಪಿಎಚ್‌ಡಿ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗಿದೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ವೃತ್ತಿಜೀವನದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಇದು ಅಮೂಲ್ಯ ಅವಕಾಶ. ಹೆಚ್ಚಿನ ಮಾಹಿತಿಗಾಗಿ ವಿಎಸ್‌ಎಸ್‌ಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾರ್ಗಸೂಚಿಗಳನ್ನು ಗಮನವಿಟ್ಟು ಓದಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿಯನ್ನು ಮದುವೆಯಾಗಲು ಕರೆದೊಯ್ಯುತ್ತಿದ್ದ ವೇಳೆ ಕಾರು ಪಲ್ಟಿ; ದಾರಿ ಮಧ್ಯೆ ಯುವಕನನ್ನು ಬಿಟ್ಟು ಯುವತಿ ಪರಾರಿ – Kannada News | Bengaluru Elopement Tragedy: Car Crash Injures Groom, Bride Flees Hirekeru

ಹಾವೇರಿ, ಫೆ.21: ಪ್ರೀತಿಸಿದ ಹುಡುಗಿಯನ್ನ ಕೈಹಿಡಿಯಲು ಬೆಂಗಳೂರಿನಿಂದ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದ ಯುವಕನ ಮದುವೆ ಕನಸು ರಸ್ತೆ ಮಧ್ಯೆಯೇ ನುಚ್ಚುನೂರಾಗಿದೆ. ಕಾರು ಪಲ್ಟಿಯಾಗಿ ಪ್ರಿಯಕರ ಸೇರಿ ಮೂವರು ಆಸ್ಪತ್ರೆ ಪಾಲಾಗಿದ್ದರೆ, ಯುವತಿ ಮಾತ್ರ ಅಲ್ಲಿಂದ ಪರಾರಿಯಾಗಿ ಬೆಂಗಳೂರು ಸೇರಿಕೊಂಡ ಘಟನೆ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ತಾಂಡಾ ಬಳಿ ನಡೆದಿದೆ. ಗಾಯಾಳು ಯುವಕ ಇರ್ಫಾನ್ ಮತ್ತು ಹಿರೇಕೆರೂರು ಮೂಲದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಅವರಿಬ್ಬರ ನಡುವೆ ಪರಿಚಯವಾಗಿ, ಪ್ರೀತಿ ಅಂಕುರಿಸಿತ್ತು. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

ಯುವತಿ ಇತ್ತೀಚೆಗೆ ಜಾತ್ರೆಗಾಗಿ ಹಿರೇಕೆರೂರಿನ ತನ್ನೂರಿಗೆ ಬಂದಿದ್ದಳು. ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿ ಮದುವೆಯಾಗಲು ಇರ್ಫಾನ್ ಪ್ಲಾನ್ ಮಾಡಿದ್ದ. ಇದಕ್ಕಾಗಿ ತನ್ನ ಸ್ನೇಹಿತರಾದ ಚಂದ್ರು ಮತ್ತು ಗುರುರಾಜ್ ಅವರ ಜೊತೆ ಬಾಡಿಗೆ ಕಾರಿನಲ್ಲಿ ಊರಿಗೆ ಬಂದಿದ್ದ ಇರ್ಫಾನ್, ಯುವತಿಯನ್ನು ಕರೆದುಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದ.

ಇದನ್ನೂ ಓದಿ: ಕದ್ದ ಚಿನ್ನವನ್ನು ಗೋಲ್ಡ್ ಲೋನ್ ಕಂಪನಿಗೆ ಮಾರುವ ವೇಳೆ ರೆಡ್​​​ ಹ್ಯಾಂಡ್​​​ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ

ಯುವತಿಯ ಪೋಷಕರು ಬೆನ್ನಟ್ಟಬಹುದು ಎಂಬ ಭಯದಲ್ಲಿ ಯುವಕರು ವೇಗವಾಗಿ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ. ಚನ್ನಹಳ್ಳಿ ತಾಂಡಾ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನುಜ್ಜುನುಜ್ಜಾಗಿದ್ದು, ಇರ್ಫಾನ್ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯಗಳಾಗಿವೆ. ಕಾರಿನ ಹಿಂಬದಿಯ ಸೀಟಿನಲ್ಲಿದ್ದ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಜನರ ಗುಂಪು ಸೇರುವುದನ್ನು ಕಂಡು ಮರ್ಯಾದೆಗೆ ಅಂಜಿ, ಯುವತಿ ತನ್ನ ಪ್ರಿಯಕರನನ್ನು ಅಲ್ಲಿಯೇ ಬಿಟ್ಟು ಅವರಿವರ ಬಳಿ ಲಿಫ್ಟ್ ಕೇಳಿ ಬೆಂಗಳೂರು ಬಸ್ ಹತ್ತಿ ಮನೆ ಸೇರಿದ್ದಾಳೆ. ಸದ್ಯ ಗಾಯಾಳು ಯುವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಿತ್ರ ಪ್ರೇಮ ಪ್ರಕರಣ ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವರದಿ : ಅಣ್ಣಪ್ಪ ಬಾರ್ಕಿ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version