PBKS vs RR Playing XI: ಬಲಿಷ್ಠ ಪಡೆಗಳನ್ನೇ ಕಣಕ್ಕಿಳಿಸಿದ ಕಿಂಗ್ಸ್ ಮತ್ತು ರಾಯಲ್ಸ್ – Kannada News | PBKS vs RR Playing XI Punjab Kings vs Rajasthan Royals Today IPL 2026 match Confirmed playing 11 details with name in Kannada

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡಗಳು ಮುಖಾಮುಖಿಯಾಗಿವೆ. ಮುಲ್ಲನ್​ಪುರ್​ನಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಪಂಜಾಬ್ ಕಿಂಗ್ಸ್ ತಂಡವು ಮೊದಲು ಬ್ಯಾಟ್ ಮಾಡಲಿದೆ. ಇನ್ನು ಈ ಪಂದ್ಯಕ್ಕಾಗಿ ಉಭಯ ತಂಡಗಳಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಈ ಪಂದ್ಯದಲ್ಲಿ ಶಿಮ್ರಾನ್ ಹೆಟ್ಮೆಯರ್ ಬದಲಿಗೆ ರಾಜಸ್ಥಾನ್ ರಾಯಲ್ಸ್ ಪರ ದಸುನ್ ಶಾನಕ ಕಣಕ್ಕಿಳಿದಿದ್ದಾರೆ. ಹಾಗೆಯೇ ರವಿ ಬಿಷ್ಣೋಯ್ ಬದಲಿಗೆ ಯಶ್ ರಾಜ್ ಪೂಂಜಾ ಆಡುತ್ತಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್ ಪರ ಸುರ್ಯಾಂಶ್ ಶೆಡ್ಗೆ ಹಾಗೂ ಲಾಕಿ ಫರ್ಗುಸನ್ ಈ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಅದರಂತೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್  ಈ ಕೆಳಗಿನಂತಿದೆ…

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶಾನಕ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪೂಂಜಾ.

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

ಹೆಡ್ ಟು ಹೆಡ್​:

ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ 2008 ರಿಂದ ಐಪಿಎಲ್​ನಲ್ಲಿ ಕಣಕ್ಕಿಳಿಯುತ್ತಿರುವ ತಂಡಗಳು. ಈ ತಂಡಗಳು ಈವರೆಗೆ 30 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಅತ್ಯಧಿಕ ಪಂದ್ಯಗಳನ್ನು ಗೆದ್ದಿರುವುದು ರಾಜಸ್ಥಾನ್ ರಾಯಲ್ಸ್. ಆರ್​ಆರ್​ ಒಟ್ಟು 17 ಮ್ಯಾಚ್​ಗಳಲ್ಲಿ ಗೆಲುವು ದಾಖಲಿಸಿದರೆ, ಪಂಜಾಬ್ ಕಿಂಗ್ಸ್ ಕೇವಲ 13 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದೆ.

ಇದಾಗ್ಯೂ ಕಳೆದ ಸೀಸನ್​ನಲ್ಲಿನ ಮುಖಾಮುಖಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಮ್ಯಾಚ್​ನಲ್ಲಿ ಜಯ ಸಾಧಿಸಿತ್ತು. ಅಲ್ಲದೆ ಪ್ರಸ್ತುತ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಅಗ್ರಸ್ಥಾನದಲ್ಲಿದ್ದರೆ, ರಾಜಸ್ಥಾನ್ ರಾಯಲ್ಸ್ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಇದನ್ನೂ ಓದಿ: ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​!

ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್​ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಝ್ಮತುಲ್ಲಾ ಒಮರ್​ಝಾಹಿ, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪನ್ನು, ಸೂರ್ಯಾಂಶ್ ಶೆಡ್ಗೆ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಲಾಕಿ ಫರ್ಗುಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

Source link

ಉಮರ್ ಸಂಬಂಧಿತ ಕಾರ್ಯಕ್ರಮಕ್ಕೆ ವಿರೋಧ: BJP ಪ್ರತಿಭಟನೆ ವೇಳೆ ಹೈಡ್ರಾಮಾ; ಪ್ರತಿಭಟನಾ ನಿರತರು ಖಾಕಿ ವಶಕ್ಕೆ – Kannada News | Umar Khalid Book Event in Bengaluru: BJP Protests Amidst Tight Police Security

ಬೆಂಗಳೂರು, ಏಪ್ರಿಲ್​​ 28: ದೊಮ್ಮಲೂರು ಸಮೀಪದ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಉಮರ್ ಖಲೀದ್ ಅಂಡ್ ಹಿಸ್ ವರ್ಲ್ಡ್ ಪುಸ್ತಕ ಸಂಬಂಧ ಕಾರ್ಯಕ್ರಮಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಆರೋಪಿಯಾಗಿರುವ ಉಮರ್ ಖಲೀದ್ ಕುರಿತ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಬಿಜೆಪಿ ಒತ್ತಾಯಿಸಿತ್ತು. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ಕಾರ್ಯಕ್ರಮ ಆರಂಭವಾಗುವ ಒಂದು ಗಂಟೆ ಮುನ್ನವೇ ಪೊಲೀಸರು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.  ನಟ ಪ್ರಕಾಶ್ ರಾಜ್, ಇತಿಹಾಸಕಾರ ರಾಮಚಂದ್ರ ಗುಹ, ಜಾನಕಿ ನಾಯರ್ ಸೇರಿದಂತೆ ಹಲವು ಸಂಪನ್ಮೂಲ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.  ಕಾರ್ಯಕ್ರಮಕ್ಕೆ ಪೂರ್ವ-ನೋಂದಣಿ ಮಾಡಿದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಎಂ.ಜಿ. ರೋಡ್​ನಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿ ಮೇಲೆ ಹಲ್ಲೆ; ಮ್ಯಾನೇಜರ್ ಮೇಲೆ ಬಟ್ಟೆ ಹರಿಯಲು ಯತ್ನಿಸಿದ ಆರೋಪ – Kannada News | Bengaluru Shock: Tandoor Hotel Manager Accused of Misbehavior, Assault on MG Road

ಬೆಂಗಳೂರು, ಏ.28: ಸಿಲಿಕಾನ್ ಸಿಟಿಯ ಹೃದಯಭಾಗ ಎಂ.ಜಿ. ರಸ್ತೆಯಲ್ಲಿರುವ (MG Road) ಪ್ರಖ್ಯಾತ ‘ತಂದೂರ್ ಹೋಟೆಲ್’ನಲ್ಲಿ ಯುವತಿಯೊಬ್ಬಳ ಮೇಲೆ ಮ್ಯಾನೇಜರ್ ಅಸಭ್ಯವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಹೋಟೆಲ್ ಮ್ಯಾನೇಜರ್ ರವಿ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕೀರ್ತಿ ಎಂಬ ಯುವತಿ ನಿನ್ನೆ (ಏ.27) ಮಧ್ಯಾಹ್ನ ಸುಮಾರು 2:30ರ ಸಮಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಊಟಕ್ಕಾಗಿ ತಂದೂರ್ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಗ್ರಾಹಕರು ಮತ್ತು ಹೋಟೆಲ್ ಮ್ಯಾನೇಜರ್ ನಡುವೆ ಗಲಾಟೆ ಸಂಭವಿಸಿದೆ ಎನ್ನಲಾಗಿದೆ.

ಯುವತಿ ಕೀರ್ತಿ ಅವರು ನೀಡಿರುವ ದೂರಿನಲ್ಲಿ ಏನಿದೆ?

ಹೋಟೆಲ್ ಮ್ಯಾನೇಜರ್ ರವಿ ಯುವತಿಯೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ.ಗಲಾಟೆಯ ಸಂದರ್ಭದಲ್ಲಿ ಮ್ಯಾನೇಜರ್ ಯುವತಿಯ ಬಟ್ಟೆ ಹರಿಯಲು ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಸವಾರರೇ ಎಚ್ಚರ! ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ‘ಪಂಕ್ಚರ್ ಮಾಫಿಯಾ’; ಹೆಬ್ಬಾಳ ರಸ್ತೆಯಲ್ಲಿ ಮೊಳೆಗಳ ರಾಶಿ!

ಘಟನೆ ನಡೆದ ಬೆನ್ನಲ್ಲೇ ಕೀರ್ತಿ ಅವರು ಹಲಸೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ಯುವತಿಯ ದೂರಿನ ಅನ್ವಯ ಪೊಲೀಸರು ಮ್ಯಾನೇಜರ್ ರವಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಹೋಟೆಲ್‌ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​! – Kannada News | IPL 2026: DC Fans Celebrate Avoiding RCB’s Infamous Record

ಸೋಲಿನ ಅಂಚಿನಲ್ಲಿದ್ದಾಗಲೂ ಅಭಿಮಾನಿಗಳು ಸಂಭ್ರಮಿಸಲು ಸಾಧ್ಯವೇ? ಸಾಧ್ಯ ಎಂಬುದಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಣ ಪಂದ್ಯ ಸಾಕ್ಷಿ. ಆರ್​ಸಿಬಿ ವಿರುದ್ಧದ ಈ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ತಂಡವು ಕನಿಷ್ಠ 50 ರನ್ ಬಾರಿಸಲಿ ಎಂದು ಕಾತರದಿಂದ ಕಾಯುತ್ತಿದ್ದರು. ಯಾವಾಗ ತಂಡದ ಸ್ಕೋರ್ 49 ದಾಟಿತೋ, ಆಗ ಸ್ಟೇಡಿಯಂನಲ್ಲಿ ಮೊಳಗಿದ ಸಂಭ್ರಮದ ಅಲೆ ಅಷ್ಟಿಷ್ಟಲ್ಲ. ಆ ಅಪರೂಪದ ಕ್ಷಣ ಮತ್ತು ಅದರ ಹಿಂದಿನ ಸ್ವಾರಸ್ಯಕರ ಕಥೆ ಇಲ್ಲಿದೆ.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಆರ್‌ಸಿಬಿ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ ದಿಕ್ಕೆಟ್ಟಿತು. ಪವರ್‌ಪ್ಲೇ ಮುಕ್ತಾಯದ ವೇಳೆಗೆ ಕೇವಲ 13 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ, ಐಪಿಎಲ್ ಇತಿಹಾಸದ ಅತ್ಯಂತ ಕಡಿಮೆ ಮೊತ್ತಕ್ಕೆ ಔಟ್ ಆಗುವ ಭೀತಿಯಲ್ಲಿತ್ತು.

ಐಪಿಎಲ್ ಇತಿಹಾಸದಲ್ಲಿ 49 ರನ್ ಅತ್ಯಂತ ಕಡಿಮೆ ಮೊತ್ತ. ಈ ಹೀನಾಯ ದಾಖಲೆ ಇರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ. 2017ರ ಐಪಿಎಲ್​ ಸೀಸನ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ ಕೇವಲ 49 ರನ್​ಗಳಿಗೆ ಆಲೌಟ್ ಆಗಿದ್ದರು.

ಈ ಹೀನಾಯ ದಾಖಲೆಯನ್ನು ಅಳಿಸಿ ಹಾಕುವ ಅವಕಾಶ ಆರ್​ಸಿಬಿ ಮುಂದಿತ್ತು. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೇವಲ 13 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೀಗಾಗಿ ಎಲ್ಲರೂ ಆರ್​ಸಿಬಿ ತನ್ನ ಅನಗತ್ಯ ದಾಖಲೆಯ ಹಣೆಪಟ್ಟಿಯನ್ನು ಕಳಚಲಿದೆ ಎಂದು ಭಾವಿಸಿದ್ದರು.

ಆದರೆ ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳು ಒಂದು ಬಾರಿ ತಂಡದ ಸ್ಕೋರ್ 49 ದಾಟಲು ಕಾಯುತ್ತಿದ್ದರು. ಹೀಗಾಗಿಯೇ ಪ್ರತಿ ರನ್​ ಬಂದಾಗಲೂ ಹರ್ಷೋದ್ಘಾರ ಮುಗಿಲು ಮುಟ್ಟುತ್ತಿತ್ತು.

49 ಸಂಭ್ರಮ:

ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಸ್ಕೋರ್ 40 ರನ್ ದಾಟುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು “49… 49…” ಎಂದು ಏಕದನಿಯಲ್ಲಿ ಕೂಗಲಾರಂಭಿಸಿದರು. ಡೆಲ್ಲಿ ತಂಡವು 49 ರನ್‌ಗಳನ್ನು ದಾಟಲಿ ಎಂಬುದು ಅವರ ಈ ಸಂಭ್ರಮದ ಹಿಂದಿನ ಉದ್ದೇಶವಾಗಿತ್ತು.

ಅಂತಿಮವಾಗಿ ಕೈಲ್ ಜೇಮಿಸನ್ ಸಿಕ್ಸರ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು. ಇತ್ತ ತಂಡದ ಸ್ಕೋರ್ ಐವತ್ತು ದಾಟುತ್ತಿದ್ದಂತೆ ಇಡೀ ಸ್ಟೇಡಿಯಂ ಕಿಕ್ಕಿರಿದು ಸಂಭ್ರಮಿಸಿತು. ಇದು ತಂಡ ಗೆದ್ದಾಗ ಆಗುವ ಸಂಭ್ರಮಕ್ಕಿಂತಲೂ ಹೆಚ್ಚಾಗಿತ್ತು!

ಅಭಿಮಾನಿಗಳ ಈ ಚೇಷ್ಟೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. “ಆರ್‌ಸಿಬಿ ತನ್ನ 49 ರನ್‌ಗಳ ದಾಖಲೆಯನ್ನು ಉಳಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದಗಳು” ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ಪಂದ್ಯದ ಫಲಿತಾಂಶ:

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 16.3 ಓವರ್​ಗಳಲ್ಲಿ 75 ರನ್ ಬಾರಿಸಿ ಆಲೌಟ್ ಆಗಿತ್ತು. ಈ ಸುಲಭ ಗುರಿಯನ್ನು ಆರ್​ಸಿಬಿ ತಂಡ 6.3 ಓವರ್​ಗಳಲ್ಲಿ ಚೇಸ್ ಮಾಡಿ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ೬ ಎಸೆತಗಳಿಂದ ಭರ್ಜರಿ ದಾಖಲೆ ತಪ್ಪಿಸಿಕೊಂಡ RCB

ಒಟ್ಟಿನಲ್ಲಿ ಈ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳ ಪಾಲಿಗೆ ಇದು ಮರೆಯಬೇಕಾದ ಪಂದ್ಯವಾದರೂ, ಕ್ರೀಡಾಂಗಣದಲ್ಲಿ ಮೊಳಗಿದ ‘49’ರ ಘೋಷಣೆ ಮಾತ್ರ ಐಪಿಎಲ್ ಇತಿಹಾಸದ ತಮಾಷೆಯ ಕ್ಷಣಗಳಲ್ಲಿ ಒಂದಾಗಿ ಉಳಿಯಲಿದೆ.

Published On – 4:52 pm, Tue, 28 April 26

Source link

CRPF Recruitment 2026: 9,175 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC ಮತ್ತು ITI ಪಾಸಾದವರಿಗೆ ಸುವರ್ಣವಕಾಶ – Kannada News | CRPF Recruitment 2026: 9175 Constable/Tradesman Vacancies Announced! Apply Now

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಕಾನ್ಸ್‌ಟೇಬಲ್ (ತಾಂತ್ರಿಕ, ಟ್ರೇಡ್ಸ್‌ಮನ್ ಮತ್ತು ಪಯೋನಿಯರ್) ವಿಭಾಗಗಳಲ್ಲಿ ಒಟ್ಟು 9,175 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಆಂಧ್ರಪ್ರದೇಶಕ್ಕೆ 504 ಮತ್ತು ತೆಲಂಗಾಣಕ್ಕೆ 353 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ದೇಶಾದ್ಯಂತ ಮಹಿಳಾ ಅಭ್ಯರ್ಥಿಗಳಿಗೆ 79 ಹುದ್ದೆಗಳು ಮೀಸಲಿವೆ. ಪಯೋನಿಯರ್ ವಿಭಾಗದ ಹುದ್ದೆಗಳಿಗೆ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಸ್ಪರ್ಧಿಸಬಹುದಾಗಿದೆ.

ಅರ್ಹತೆ ಮತ್ತು ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ಸಂಬಂಧಿತ ಟ್ರೇಡ್‌ನಲ್ಲಿ ITI ಉತ್ತೀರ್ಣರಾಗಿರಬೇಕು. ಚಾಲಕ (Driver) ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10ನೇ ತರಗತಿಯ ಜೊತೆಗೆ ಭಾರೀ ವಾಹನ ಚಾಲನಾ ಪರವಾನಗಿ (HMV License) ಹೊಂದಿರಬೇಕು. ವಯೋಮಿತಿಯು ಸಾಮಾನ್ಯ ಹುದ್ದೆಗಳಿಗೆ 18 ರಿಂದ 23 ವರ್ಷ ಹಾಗೂ ಚಾಲಕ ಹುದ್ದೆಗಳಿಗೆ 21 ರಿಂದ 27 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮದಂತೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:

ಅಭ್ಯರ್ಥಿಗಳ ಆಯ್ಕೆಯು ಬಹುಹಂತಗಳಲ್ಲಿ ನಡೆಯಲಿದೆ. ಮೊದಲಿಗೆ ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಗುಣಮಟ್ಟ ಪರೀಕ್ಷೆ (PST) ನಡೆಸಲಾಗುವುದು. ಇದರಲ್ಲಿ ಅರ್ಹರಾದವರಿಗೆ 100 ಅಂಕಗಳ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT) ಇರಲಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಕಡಿತವಿರುತ್ತದೆ (Negative Marking). ನಂತರ ಅಗತ್ಯವಿರುವ ಹುದ್ದೆಗಳಿಗೆ 50 ಅಂಕಗಳ ಕೌಶಲ್ಯ ಪರೀಕ್ಷೆ (Trade Test), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಮೂಲಕ ಅಂತಿಮ ಆಯ್ಕೆ ಮಾಡಲಾಗುತ್ತದೆ.

ದೈಹಿಕ ಮಾನದಂಡಗಳು:

ದೈಹಿಕ ಗುಣಮಟ್ಟ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳು ಕನಿಷ್ಠ 170 ಸೆಂ.ಮೀ ಎತ್ತರ ಮತ್ತು ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರ ಹೊಂದಿರಬೇಕು (ಎಸ್‌ಟಿ ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ). ದೈಹಿಕ ದಕ್ಷತೆ ಪರೀಕ್ಷೆಯಲ್ಲಿ ಪುರುಷರು 5 ಕಿಲೋಮೀಟರ್ ಓಟವನ್ನು 24 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಮಹಿಳೆಯರಿಗೆ 1.6 ಕಿಲೋಮೀಟರ್ ಓಟದ ಗುರಿ ಇರುತ್ತದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ವೇತನ ಮತ್ತು ಅರ್ಜಿ ಸಲ್ಲಿಕೆ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಹಂತ-3ರ ಅಡಿಯಲ್ಲಿ ಆಕರ್ಷಕ ವೇತನ ನೀಡಲಾಗುತ್ತದೆ. ಆರಂಭಿಕ ಮೂಲ ವೇತನ 21,700 ರೂ. ಆಗಿದ್ದು, ಡಿಎ, ಎಚ್‌ಆರ್‌ಎ ಸೇರಿದಂತೆ ವಿವಿಧ ಭತ್ಯೆಗಳೊಂದಿಗೆ ಮಾಸಿಕ ವೇತನ ಸುಮಾರು 40,000 ರೂ. ಗಳವರೆಗೆ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಮೇ 19, 2026 ರೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕವಿದ್ದು, ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪ್ರಮುಖ ಮಾಹಿತಿ:

  • ಒಟ್ಟು ಹುದ್ದೆಗಳು: 9,175
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 19
  • ವಿದ್ಯಾರ್ಹತೆ: 10ನೇ ತರಗತಿ / ITI
  • ಅಧಿಕೃತ ವೆಬ್‌ಸೈಟ್: www.rect.crpf.gov.in

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಲ್ಮಾ ಪಠಿಸಲು ಒಪ್ಪದ ಸೆಕ್ಯುರಿಟಿಗೆ ಚಾಕುವಿನಿಂದ ಇರಿತ; ಮುಂಬೈನಲ್ಲಿ ಮತ್ತೆ ಉಗ್ರನ ನೆರಳು? – Kannada News | Pahalgam like incident in Mumbai Security guards stabbed for refusing to recite Kalma

ಮುಂಬೈ, ಏಪ್ರಿಲ್ 28: ಮುಂಬೈನ ನಯಾ ನಗರ ಪ್ರದೇಶದಲ್ಲಿ ಅಮೆರಿಕದಿಂದ ಬಂದಿರುವ ವ್ಯಕ್ತಿ ಇಬ್ಬರು ಭದ್ರತಾ ಸಿಬ್ಬಂದಿಗೆ ಇರಿದಿದ್ದಾನೆ. ಚಾಕುವಿನಿಂದ ಇರಿಯುವ ಮುನ್ನ ಆತ ಅವರ ಧರ್ಮವನ್ನು ಕೇಳಿದ್ದಾನೆ. ನೀವು ಯಾವ ಧರ್ಮದವರು ಎಂದು ಕೇಳಿದ ಆತ ಕಲ್ಮಾ ಪಠಿಸಲು ಸೂಚಿಸಿದ್ದಾನೆ. ಸೆಕ್ಯುರಿಟಿ ಕಲ್ಮಾ ಪಠಣ ಮಾಡದೆ ಇದ್ದಾಗ ಅವರಿಗೆ ಇರಿದಿದ್ದಾನೆ. ಇದು ಪಹಲ್ಗಾಮ್​​ನಲ್ಲಿ (Pahalgam Attack) ನಡೆದ ದಾಳಿಯನ್ನು ನೆನಪಿಸುತ್ತಿದೆ.

ಆರೋಪಿ 31 ವರ್ಷದ ಜೈಬ್ ಜುಬೇರ್ ಅನ್ಸಾರಿ ಇಸ್ಲಾಂನ ಮೂಲಭೂತ ಸಿದ್ಧಾಂತಗಳಾದ ‘ಕಲ್ಮಾ’ ಅಥವಾ ‘ಕಲಿಮಾ’ ಪಠಿಸುವಂತೆ ಸೆಕ್ಯುರಿಟಿಗಳಿಗೆ ಒತ್ತಾಯಿಸಿದ್ದ. ಸೆಕ್ಯುರಿಟಿ ಗಾರ್ಡ್‌ಗಳಾದ ರಾಜ್‌ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಮುಸ್ಲಿಂ ಧರ್ಮದವರಲ್ಲ ಎಂದು ಗೊತ್ತಾಗುತ್ತಿದ್ದಂತೆ ಚಾಕುವಿನಿಂದ ಇರಿದಿದ್ದಾನೆ. ವೋಕ್‌ಹಾರ್ಡ್ ಆಸ್ಪತ್ರೆಯ ಹಿಂದೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿದ್ದಾಗ ಅನ್ಸಾರಿ ಅವರಿಬ್ಬರ ಮೇಲೆ ದಾಳಿ ನಡೆಸಿದ್ದಾನೆ. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ದಾಳಿ ನಡೆದಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 17 ಬಾರಿ ತಪ್ಪಿಸಿಕೊಂಡಿದ್ದ ಉಗ್ರ ಸೇರಿ 7 ಭಯೋತ್ಪಾದಕರ ಎನ್​ಕೌಂಟರ್

ಚಾಕು ಇರಿತದಿಂದ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಡೆದ 90 ನಿಮಿಷಗಳ ನಂತರ ಅನ್ಸಾರಿಯನ್ನು ಬಂಧಿಸಲಾಯಿತು. ಪೊಲೀಸರು ಅವನನ್ನು ಪತ್ತೆಹಚ್ಚಲು ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿ ಕಾರ್ಯಾಚರಣೆ ನಡೆಸಿದರು. ಈ ಪ್ರಕರಣವನ್ನು ಎನ್​ಐಎ ತನಿಖೆಗೆ ಒಪ್ಪಿಸುವುದಾಗಿ ಮುಖ್ಯಮಮತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.

ಬಂಧನದ ನಂತರ ಅನ್ಸಾರಿಯನ್ನು ಥಾಣೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮೇ 4ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸ್ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ದಳದ ತಂಡವು ದಾಳಿಯ ತನಿಖೆ ನಡೆಸುತ್ತಿದೆ. ಇದು ಸಾಮಾನ್ಯವಾದ ದಾಳಿಯೇ ಅಥವಾ ದೊಡ್ಡ ಪಿತೂರಿಯ ಭಾಗವೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಈಗ ಅನ್ಸಾರಿಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ಪರಿಶೀಲಿಸುತ್ತಿದ್ದಾರೆ. ಮೂಲಗಳು ಹೇಳುವಂತೆ ಅನ್ಸಾರಿ ಬರೆದುಕೊಂಡ ನೋಟ್​​ಗಳಲ್ಲಿ ‘ISIS’, ‘ಒಂಟಿ ತೋಳ’, ‘ಜಿಹಾದ್’ ಮತ್ತು ‘ಗಾಜಾ’ ಮುಂತಾದ ಪದಗಳನ್ನು ಬರೆಯಲಾಗಿದೆ.

ಇದನ್ನೂ ಓದಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಒಂದು ವರ್ಷ, ಗಾಯಗೊಂಡಿದ್ದ ಸ್ವರ್ಗಕ್ಕೆ ಮರಳಿದ ಚೈತನ್ಯ, ಚೇತರಿಕೆಯ ಹಾದಿ ಹೇಗಿದೆ?

ಅನ್ಸಾರಿ ಹಲವಾರು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದ. ಆತನ ಕುಟುಂಬದ ಸದಸ್ಯರು ಇನ್ನೂ ಆ ದೇಶದಲ್ಲಿ ವಾಸಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಆತನಿಗೆ ಅಲ್ಲಿ ಕೆಲಸ ಸಿಗಲಿಲ್ಲ. ಹೀಗಾಗಿ ಭಾರತಕ್ಕೆ ಮರಳಬೇಕಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೊಂದಲದ ಗೂಡಾದ ಕುಂದಗೋಳ ಜನಸಂಪರ್ಕ ಸಭೆ: ವೇದಿಕೆಯಲ್ಲೇ ಅಧಿಕಾರಿಗಳಿಗೆ ಸಚಿವ ಸಂತೋಷ್​​ ಲಾಡ್​​ ತರಾಟೆ – Kannada News | Farmers’ Outburst at Kundagol Public Meeting Led by Minister Santhosh Lad

ಧಾರವಾಡ, ಏಪ್ರಿಲ್​​ 28: ಕುಂದಗೋಳ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಅಧ್ಯಕ್ಷತೆಯಲ್ಲಿ ನಡೆದ  ಜನಸಂಪರ್ಕ ಸಭೆಯ ಮಧ್ಯೆ, ರೈತರೊಬ್ಬರು ತಮ್ಮ ಸಮಸ್ಯೆಗಳ ಕುರಿತು ಕೂಗಾಡಿದ್ದಾರೆ. ಅಧಿಕಾರಿಗಳು ವೈಯಕ್ತಿಕವಾಗಿ ಅರ್ಜಿಗಳನ್ನು ಸಲ್ಲಿಸುವಂತೆ ಸೂಚಿಸಿದರೂ, ರೈತರು ಸಭೆಯಲ್ಲಿಯೇ ತಮ್ಮ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಕೇಳುವ ಪ್ರಯತ್ನ ಮಾಡಿದ ಪ್ರಸಂಗ ನಡೆದಿದೆ. ಈ ಘಟನೆಯು ಕುಂದಗೋಳದ ಜನಸಂಪರ್ಕ ಸಭೆಯಲ್ಲಿ ಅಲ್ಪ ಕಾಲ ಗೊಂದಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಭೆ ಗೊಂದಲದ ಗೂಡಾದ ಕಾರಣ, ವೇದಿಕೆಯಲ್ಲೇ ಅಧಿಕಾರಿಗಳನ್ನು ಸಚಿವ ಸಂತೋಷ್ ಲಾಡ್ ತರಾಟೆಗೆ ಪಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

PBKS vs RR IPL 2026 Live Score: ಕಿಂಗ್ಸ್​ ಪಡೆಗೆ ರಾಯಲ್ಸ್ ಸವಾಲು

ಇಂಡಿಯನ್ ಪ್ರೀಮಿಯರ್ ಲೀಗ್​ನ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಏಕೆಂದರೆ ಉಭಯ ತಂಡಗಳಲ್ಲಿ ಸ್ಫೋಟಕ ದಾಂಡಿಗರ ದಂಡೇ ಇದ್ದು, ಹೀಗಾಗಿ ಪವರ್​ಪ್ಲೇನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಎದುರು ನೋಡಬಹುದಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಉಭಯ ತಂಡಗಳು ಈವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡ 17 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಇದೇ ವೇಳೆ ಪಂಜಾಬ್ ಕಿಂಗ್ಸ್ ತಂಡ ಗೆದ್ದಿರುವುದು ಕೇವಲ 13 ಪಂದ್ಯಗಳಲ್ಲಿ ಮಾತ್ರ. ಅಂದರೆ ಈ ಹಿಂದಿನ ಅಂಕಿ ಅಂಶಗಳ ಪ್ರಕಾರ ರಾಜಸ್ಥಾನ್ ರಾಯಲ್ಸ್ ತಂಡ ಬಲಿಷ್ಠವಾಗಿದೆ. ಆದರೆ ಕಳೆದ ಸೀಸನ್​ನಿಂದ ಶ್ರೇಯಸ್ ಅಯ್ಯರ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿರುವ ಪಂಜಾಬ್ ಕಿಂಗ್ಸ್  ಬಲಿಷ್ಠ ಪಡೆಯಾಗಿ ಗುರುತಿಸಿಕೊಂಡಿದ್ದು, ಹೀಗಾಗಿ ಆರ್​ಆರ್ ತಂಡಕ್ಕೆ ಈ ಬಾರಿ ಕಠಿಣ ಪೈಪೋಟಿ ಒಡ್ಡುವುದು ಖಚಿತ.

ರಾಜಸ್ಥಾನ್ ರಾಯಲ್ಸ್ ತಂಡ: ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೇನಾ ಮಫಾಕ, ನಾಂಡ್ರೆ ಬರ್ಗರ್, ರವಿ ಬಿಷ್ಣೋಯ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರ್, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ, ಆಡಮ್ ಮಿಲ್ನ್​, ಕುಲದೀಪ್ ಸೇನ್.

ಪಂಜಾಬ್ ಕಿಂಗ್ಸ್ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಪ್ರಭ್​ಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಝ್ಮತುಲ್ಲಾ ಒಮರ್​ಝಾಹಿ, ಮಾರ್ಕೊ ಯಾನ್ಸೆನ್, ಹರ್ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಪ್ಯಾಲಾ ಅವಿನಾಶ್, ಹರ್ನೂರ್ ಪನ್ನು, ಸೂರ್ಯಾಂಶ್ ಶೆಡ್ಗೆ, ಮಿಚೆಲ್ ಓವನ್, ಕ್ಸೇವಿಯರ್ ಬಾರ್ಟ್ಲೆಟ್, ಲಾಕಿ ಫರ್ಗುಸನ್, ವೈಶಾಕ್ ವಿಜಯ್‌ಕುಮಾರ್, ಯಶ್ ಠಾಕೂರ್, ವಿಷ್ಣು ವಿನೋದ್, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ಪ್ರವೀಣ್ ದುಬೆ, ವಿಶಾಲ್ ನಿಶಾದ್.

 

Source link

ಸವಾರರೇ ಎಚ್ಚರ! ಬೆಂಗಳೂರಲ್ಲಿ ಮತ್ತೆ ತಲೆ ಎತ್ತಿದ ‘ಪಂಕ್ಚರ್ ಮಾಫಿಯಾ’; ಹೆಬ್ಬಾಳ ರಸ್ತೆಯಲ್ಲಿ ಮೊಳೆಗಳ ರಾಶಿ! – Kannada News | Bangalore Puncture Mafia: Hebbal Goraguntepalya Drivers Face Extortion, Road Safety Risk

ಬೆಂಗಳೂರು, ಏ.28: ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಈಗ ಹೊಸದೊಂದು ಆತಂಕ ಎದುರಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಹೆಬ್ಬಾಳ (Hebbal) ಮತ್ತು ಗೊರಗುಂಟೆಪಾಳ್ಯ (Goraguntepalya) ನಡುವಿನ ಸಂಚಾರ ಈಗ ಪಂಕ್ಚರ್ ದಂಧೆಕೋರರ ಸಂಚಿನಿಂದಾಗಿ ಪ್ರಾಣಾಪಾಯಕಾರಿಯಾಗುತ್ತಿದೆ. ಈ ಹಿಂದೆ ಪ್ಲೈಓವರ್​​​ಗಳಲ್ಲಿ ಇಂತಹ ಸಂಚುಗಳನ್ನು ಮಾಡಿ. ಹಣ ವಸೂಲಿ ಮಾಡುತ್ತಿದ್ದರು. ಇದೀಗ ನಗರ ಪ್ರದೇಶದಲ್ಲಿ ಪ್ರಮುಖ ರಸ್ತೆಗಳಲ್ಲೂ ಈ ದಂಧೆ ಬಂದಿದೆ. ಈ ಬಗ್ಗೆ ವಿಡಿಯೋವೊಂದನ್ನು @KarnatakaPortfolio ಎಂಬ ಎಕ್ಸ್​​ ಖಾತೆ ಹಂಚಿಕೊಂಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ಕೆಲವು ದಿನಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಸರಣಿ ಪಂಕ್ಚರ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಶಯಗೊಂಡು ಪರಿಶೀಲಿಸಿದಾಗ ರಸ್ತೆಯ ಮೇಲೆ ಉದ್ದೇಶಪೂರ್ವಕವಾಗಿ ನೂರಾರು ಮೊಳೆಗಳನ್ನು ಹರಡಿರುವುದು ಪತ್ತೆಯಾಗಿದೆ. ಇದು ಕೇವಲ ಕಾಕತಾಳೀಯವಲ್ಲ, ಬದಲಾಗಿ ವಾಹನ ಸವಾರರನ್ನು ಸುಲಿಗೆ ಮಾಡಲು ನಡೆಸುತ್ತಿರುವ ವ್ಯವಸ್ಥಿತ ಸಂಚು ಎಂಬುದು ಸ್ಪಷ್ಟವಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಈ ಕೃತ್ಯದ ಹಿಂದೆ ಬಲವಾದ ಅನುಮಾನಗಳು ಸೃಷ್ಟಿಯಾಗಿದೆ. ಮೊಳೆಗಳು ಬಿದ್ದಿರುವ ಜಾಗದ ಕೆಲವೇ ಮೀಟರ್‌ಗಳ ಅಂತರದಲ್ಲಿ ಪಂಕ್ಚರ್ ರಿಪೇರಿ ಅಂಗಡಿಗಳು ಇರುವುದು ಈ ಸಂಶಯಕ್ಕೆ ಪುಷ್ಟಿ ನೀಡಿದೆ. ವಾಹನ ಸವಾರರು ಅಸಹಾಯಕರಾದಾಗ ಅವರಿಂದ ಹೆಚ್ಚಿನ ಹಣ ವಸೂಲಿ ಮಾಡುವ ಉದ್ದೇಶದಿಂದ ಈ ರೀತಿ ಮೊಳೆಗಳನ್ನು ರಸ್ತೆಗೆ ಸುರಿಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಕುಡಿದ ಮತ್ತಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹೋದರರ ಫೈಟ್​​: ಕಲ್ಲಿಂದ ಜಜ್ಜಿ ತಮ್ಮನನ್ನೇ ಕೊಂದ ಅಣ್ಣ!

ವೇಗವಾಗಿ ಚಲಿಸುವ ವಾಹನಗಳ ಟೈರ್ ಏಕಾಏಕಿ ಪಂಕ್ಚರ್ ಆದರೆ ಚಾಲಕನ ನಿಯಂತ್ರಣ ತಪ್ಪಿ ದೊಡ್ಡ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಲಾಭಕ್ಕಾಗಿ ಜನರ ಪ್ರಾಣದ ಜೊತೆ ಆಟವಾಡುತ್ತಿರುವ ಈ ‘ಪಂಕ್ಚರ್ ಮಾಫಿಯಾ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ಬೆಂಗಳೂರಿನಂತಹ ಐಟಿ ಹಬ್‌ನಲ್ಲಿ ಇಂತಹ ಕೀಳುಮಟ್ಟದ ದಂಧೆಗಳು ನಡೆಯುತ್ತಿರುವುದು ನಗರದ ಘನತೆಗೆ ಧಕ್ಕೆ ತರುತ್ತಿದೆ. ಪೊಲೀಸರು ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಇಂತಹ ಕೃತ್ಯಗಳಲ್ಲಿ ತೊಡಗಿರುವವರನ್ನು ಪತ್ತೆಹಚ್ಚಿ ಜೈಲಿ ಹಾಕಬೇಕು ಎಂದು ಎಕ್ಸ್​​ನಲ್ಲಿ ಅಕ್ರೋಶ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಡಿದ ಮತ್ತಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹೋದರರ ಫೈಟ್​​: ಕಲ್ಲಿಂದ ಜಜ್ಜಿ ತಮ್ಮನನ್ನೇ ಕೊಂದ ಅಣ್ಣ! – Kannada News | Tumakuru Tragedy: Elder Brother Murders Younger Sibling in Drunken Brawl

ತುಮಕೂರು, ಏಪ್ರಿಲ್​​ 28: ಕ್ಷುಲ್ಲಕ ವಿಚಾರಕ್ಕೆ ಒಡಹುಟ್ಟಿದವರ ನಡುವೆ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಮಧುಗಿರಿ ತಾಲೂಕಿನ ನಿಟ್ಟರಹಳ್ಳಿ ನಿವಾಸಿ ಗಂಗರಾಜು ಮೃತನಾಗಿದ್ದು, ಕಲ್ಲಿನಿಂದ ಜಜ್ಜಿ ಸಹೋದರನ ಹತ್ಯೆಗೈದ ಆರೋಪಿ ನರಸಿಂಹಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕೋಪದ ಕೈಗೆ ಬುದ್ಧಿಕೊಟ್ಟ ಅಣ್ಣ ಜೈಲು ಸೇರಿದ್ದರೆ, ಮದ್ಯಕ್ಕೆ ದಾಸನಾಗಿದ್ದ ತಮ್ಮ ಇಹಲೋಕವನ್ನೇ ತೊರೆದಿದ್ದಾನೆ. ಭೀಕರ ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದು, ಮೃತ ಗಂಗರಾಜು ಅವಿವಾಹಿತ ಎಂಬುದು ಕೂಡ ಗೊತ್ತಾಗಿದೆ.

ಇನ್ನು ಗಂಗರಾಜು ಸಹೋದರರರಿಗೆ ಅಪ್ಪ-ಅಮ್ಮ ಇರಲಿಲ್ಲ. ಹೀಗಾಗಿ ಅಜ್ಜಿಯ ಆಶ್ರಯದಲ್ಲಿಯೇ ಇವರು ಬೆಳೆದಿದ್ದರು. ಓದು ತಲೆಗೆ ಹತ್ತದಿದ್ದರೂ ಕುಡಿತದ ಚಟ ಮಾತ್ರ ಮೈಗಂಟಿತ್ತು. ಮದುವೆ ಬಳಿಕ ಗಂಗರಾಜು ಅಣ್ಣಂದಿರು ಬೇರೆ ಮನೆ ಮಾಡಿಕೊಂಡು ವಾಸವಿದ್ದರೆ, ಈತ ಮಾತ್ರ ಅಜ್ಜಿಯ ಸೇವೆ ಮಾಡಿಕೊಂಡು ಆಕೆಯ ಜೊತೆಗೇ ಇದ್ದ. ಈ ನಡುವೆ ನಿನ್ನೆ ಸಂಜೆ ವೇಳೆಗೆ ಮನೆಯಲ್ಲಿದ್ದ ಗಂಗರಾಜು ಬಾರ್​​ಗೆ ತೆರಳಿ ಕುಡಿದು ಬಂದಿದ್ದಾನೆ. ಇದೇ ವೇಳೆ ಸಹೋದರ ನರಸಿಂಹಮೂರ್ತಿ ಸಹ ಕುಡಿದ ಮತ್ತಿನಲ್ಲಿ ಪ್ರತ್ಯಕ್ಷನಾಗಿದ್ದಾನೆ. ಈ ವೇಳೆ ಅಣ್ಣ-ತಮ್ಮನ ನಡುವೆ ಹಣದ ವಿಚಾರ ಸಂಬಂಧ ಗಲಾಟೆ ಶುರುವಾಗಿದೆ. ಆ ಜಗಳ ವಿಕೋಪಕ್ಕೆ ತೆರಳಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ನಡುವೆ ಕುಸಿದು ಬಿದ್ದ ಗಂಗರಾಜುವಿನ ಮೇಲೆ ಅಲ್ಲೇ ಇದ್ದ ಕಲ್ಲಿನಿಂದ ನರಸಿಂಹಮೂರ್ತಿ ದಾಳಿ ಮಾಡಿದ್ದಾನೆ. ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಸಹೋದರನ ಕೊಲೆಗೈದಿದ್ದಾನೆ.

ಇದನ್ನೂ ಓದಿ: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯ ಭೀಕರ ಕೊಲೆ; ಸಂಬಂಧಿಕರಿಂದಲೇ ನಡೀತು ಭೀಭತ್ಸ ಕೃತ್ಯ

ಪ್ರಕರಣ ಸಂಬಂಧ ಕೊಡಿಗೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಗಂಗರಾಜುವಿನ ಮತ್ತೋರ್ವ ಸಹೋದರ ನೀಡಿರುವ ದೂರಿನ ಅನ್ವಯ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದಲ್ಲಿ ತಮ್ಮನ ಕೊಂದ ಅಣ್ಣನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತಿದ್ದಾರೆ. ಮೇಲ್ನೋಟಕ್ಕೆ ಕ್ಷುಲ್ಲಕ ವಿಚಾರಕ್ಕೆ ಕೊಲೆ ನಡೆದಿರುವಂತೆ ಕಂಡುಬಂದಿದೆ. ಆದರೆ ಇದರ ಹೊರತಾಗಿ ಸಹೋದರರ ನಡುವೆ ಬೇರೆನಾದರೂ ವಿಚಾರ ಸಂಬಂಧ ಜಗಳ ಸೃಷ್ಟಿಯಾಗಿ ಕೊಲೆ ನಡೆದಿದೆಯಾ ಎಂಬ ಅನುಮಾನ ಸಹ ಮೂಡಿದ್ದು, ಪೊಲೀಸರ ತನಿಖೆಯಿಂದಷ್ಟೇ ಮತ್ತಷ್ಟು ಸಂಗತಿಗಳು ಹೊರಬರಬೇಕಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version