ಬೇಸಿಗೆಯಲ್ಲಿ ಮಕ್ಕಳು ಡಿಹೈಡ್ರೇಟ್ ಆಗುವುದನ್ನು ತಡೆಯಲು ಡಾ. ಹರೀಶ್ ನೀಡಿರುವ ಸಲಹೆ ತಪ್ಪದೆ ಪಾಲಿಸಿ – Kannada News | Keep Kids Hydrated in Hot Weather: Expert Advice by Dr. Harish

Keep Kids Hydrated in Hot Weather: Expert Advice by Dr. Harish

ಮಕ್ಕಳು ಹೊರಾಂಗಣದಲ್ಲಿ ಆಟವಾಡುವಾಗ ಸಹಜವಾಗಿಯೇ ಹೆಚ್ಚು ಬೆವರುತ್ತಾರೆ, ಇದರಿಂದ ದೇಹ ಬೇಗ ಡಿಹೈಡ್ರೇಟ್ ಆಗುತ್ತದೆ. ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಅನ್ಯ ದ್ರವ್ಯಗಳ ಸೇವನೆಯಿಂದ ನಷ್ಟವಾದ ದ್ರವಗಳನ್ನು ಸಮರ್ಪಕವಾಗಿ ಮರುಪೂರಣಗೊಳಿಸದಿದ್ದರೆ ಮಕ್ಕಳಲ್ಲಿ ನಿರ್ಜಲೀಕರಣ (Dehydration) ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ ಬಾಯಿ ಒಣಗುವುದು, ಮೂತ್ರ ಪ್ರಮಾಣ ಕಡಿಮೆಯಾಗುವುದು, ದೌರ್ಬಲ್ಯ, ಕಿರಿಕಿರಿ ಮುಂತಾದ ಲಕ್ಷಣಗಳು ಕಾಣಿಸಬಹುದು. ವಿಶೇಷವಾಗಿ ಶಿಶು ಮತ್ತು ಚಿಕ್ಕ ಮಕ್ಕಳಿಗೆ ಬಾಯಾರಿಕೆಯಾಗುವುದನ್ನು ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಡಿಹೈಡ್ರೇಷನ್ ಬೇಗ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ವಿಷಯವಾಗಿ ಪೋಷಕರು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿಯೇ ಯೆಲಹಂಕ ಮಣಿಪಾಲ್ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್ – ಪೀಡಿಯಾಟ್ರಿಕ್ಸ್ ಮತ್ತು ಪೀಡಿಯಾಟ್ರಿಕ್ ನಿಯೋನೇಟಲ್ ಇಂಟೆನ್ಸಿವಿಸ್ಟ್ ಡಾ. ಹರೀಶ್ ಕುಮಾರ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಪೋಷಕರಿಗಾಗಿ ಸರಳ ಸಲಹೆ;

  • ಡಾ. ಹರೀಶ್ ಕುಮಾರ್ ಹೇಳುವ ಪ್ರಕಾರ ಮೊದಲು, ಮಕ್ಕಳಿಗೆ ನೀರು ಯಾವಾಗಲೂ ಸುಲಭವಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಶಾಲೆಯ ಬ್ಯಾಗ್, ಆಟದ ಸ್ಥಳ ಮತ್ತು ಹಾಸಿಗೆಯ ಬಳಿಯಲ್ಲಿ ನೀರಿನ ಬಾಟಲ್ ಇಡಿ. ಬಣ್ಣಬಣ್ಣದ ಬಾಟಲ್‌ಗಳು ಅಥವಾ ಸ್ಟ್ರಾ ಬಳಸಿ ಮಕ್ಕಳಿಗೆ ನೀರು ಕುಡಿಯುವ ಆಸಕ್ತಿ ಹೆಚ್ಚಿಸಿ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ.
  • ಬರಿ ದಾಹವಾದಾಗ ಮಾತ್ರವಲ್ಲ, ಪ್ರತಿ 30– 60 ನಿಮಿಷಗಳಿಗೊಮ್ಮೆ ನೀರು ಕುಡಿಯಲು ಮಕ್ಕಳನ್ನು ಉತ್ತೇಜಿಸಿ. ಜೊತೆಗೆ, ಕಲ್ಲಂಗಡಿ, ಕರಬೂಜ, ಕಿತ್ತಳೆ, ಸೌತೆಕಾಯಿ, ಟೊಮೇಟೊ ಮುಂತಾದ ನೀರಿನಾಂಶ ಹೆಚ್ಚು ಇರುವ ಹಣ್ಣು, ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ.
  • ದೇಹ ಹೈಡ್ರೇಟ್ ಆಗಿರಲು ಎಳನೀರು, ಮಜ್ಜಿಗೆ, ಲಿಂಬು ನೀರು (ಸ್ವಲ್ಪ ಉಪ್ಪಿನೊಂದಿಗೆ) ಮುಂತಾದ ದ್ರವಗಳ ಸೇವನೆಯ ರೂಢಿಮಾಡಿಸಿ. ಸಕ್ಕರೆಪೂರಿತ ಅಥವಾ ಪ್ಯಾಕೇಜ್ ಪಾನೀಯಗಳು, ಸೋಡಾ ಮುಂತಾದವುಗಳ ಸೇವನೆಯನ್ನು ಆದಷ್ಟು ತಪ್ಪಿಸಿ.
  • ತೀವ್ರವಾದ ಬಿಸಿಲಿನ ಸಮಯವಾದ ಮಧ್ಯಾಹ್ನ 11 ರಿಂದ 4 ಗಂಟೆಯ ವರೆಗೆ ಮಕ್ಕಳು ಹೊರಾಂಗಣ ಚಟುವಟಿಕೆಯಲ್ಲಿ ತೊಡಗದಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ಮಕ್ಕಳು ಆದಷ್ಟು ಮನೆಯ ಒಳಗಡೆ ಅಥವಾ ನೆರಳಿನ ಸ್ಥಳಗಳಲ್ಲಿ ಇರುವುದು ಒಳ್ಳೆಯದು.
  • ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ವಾತಾವರಣಕ್ಕೆ ಸೂಕ್ತವಾದ ಬಟ್ಟೆಗಳನ್ನು ಬಳಸಿ, ಉದಾಹರಣೆಗೆ ಸಡಿಲವಾದ, ಹಗುರವಾದ, ಮತ್ತು ಗಾಳಿಯಾಡುವ ಹತ್ತಿ (ಕಾಟನ್) ಬಟ್ಟೆಗಳನ್ನು ಬಳಸಿ.
  • ಮಕ್ಕಳಲ್ಲಿ ಡಿಹೈಡ್ರೇಷನ್ ಲಕ್ಷಣಗಳಾದ ಒಣ ತುಟಿ, ಕಡಿಮೆ ಮೂತ್ರ, ತಲೆಸುತ್ತು ಅಥವಾ ದೌರ್ಬಲ್ಯ ಕಂಡುಬಂದರೆ ತಕ್ಷಣ ದ್ರವರೂಪದ ಆಹಾರಗಳ ಸೇವನೆಯನ್ನು ಹೆಚ್ಚಿಸಿ, ತಂಪಾದ ಸ್ಥಳದಲ್ಲಿ ವಿಶ್ರಾಂತಿ ಕೊಡಿಸಿ. ಶಿಶು ಮತ್ತು ಚಿಕ್ಕ ಮಕ್ಕಳಿಗೆ ವಿಶೇಷ ಕಾಳಜಿ ಅಗತ್ಯ. ತಾಯಿ ಹಾಲು ಅಥವಾ ಫಾರ್ಮುಲಾ ಆಹಾರವನ್ನು ನಿಯಮಿತವಾಗಿ ನೀಡುತ್ತಿರಿ.

ಈ ಸರಳ ಕ್ರಮಗಳಿಂದ ಬೇಸಿಗೆಯಲ್ಲೂ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಲಾ ಕಾರ್ಯಕ್ರಮಗಳಲ್ಲಿ ಅಶ್ಲೀಲ ಹಾಡುಗಳಿಗೆ ಕೋಕ್​​: ಇವಿಷ್ಟೇ ಸಾಂಗ್​​ಗಳಿಗೆ ಮಾತ್ರ ಇನ್ಮುಂದೆ ಅವಕಾಶ – Kannada News | Karnataka Schools Ban Obscene Songs: New Guidelines for Cultural Events

ಬೆಂಗಳೂರು, ಏಪ್ರಿಲ್​​ 28: ಶಾಲಾ ವಾರ್ಷಿಕೋತ್ಸವ ಸೇರಿದಂತೆ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ಶಾಲಾ ಶಿಕ್ಷಣ ಇಲಾಖೆ ನಿಷೇಧಿಸಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ, ರಾಜ್ಯದ ಎಲ್ಲಾ ಶಾಲೆಗಳು (ಖಾಸಗಿ ಶಾಲೆಗಳೂ ಸೇರಿ) ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಅಸಭ್ಯ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸಿದರೆ, ಸಂಬಂಧಿತ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲೆ ನಿರ್ವಹಣೆ ಮಾಡುವವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಯಾವೆಲ್ಲ ಹಾಡುಗಳಿಗೆ ಅವಕಾಶ?

ದೇಶಭಕ್ತಿ, ಪ್ರೇರಣಾದಾಯಕ ಹಾಗೂ ಸಕಾರಾತ್ಮಕ ಸಂದೇಶ ಹೊಂದಿರುವ ಹಾಡುಗಳನ್ನು ಮಕ್ಕಳ ನೃತ್ಯಕ್ಕೆ ಬಳಸಿಕೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ, ಮೌಲ್ಯಗಳನ್ನು ಉತ್ತೇಜಿಸುವ ಗೀತೆಗಳಿಗೆ ಆದ್ಯತೆ ನೀಡಬೇಕು. ಹಾಡುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯ ಶಿಕ್ಷಕರು ಸ್ವತಃ ಮುತುವರ್ಜಿವಹಿಸಬೇಕೆಂದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಮಕ್ಕಳಿಗೆ ಅನರ್ಹವಾಗಿರುವ ಅಶ್ಲೀಲ ಪದಗಳಿರುವ ಹಾಡುಗಳಿಗೆ ನೃತ್ಯ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮಕ್ಕಳ ತಪ್ಪಲ್ಲ, ಶಿಕ್ಷಕರು ಹಾಡಿನ ವಿಷಯವನ್ನು ಪರಿಶೀಲಿಸಿ ನಂತರವೇ ಅನುಮತಿ ನೀಡಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಇಟಿ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಪ್ರಕರಣ; ಕೃಪಾನಿಧಿ ಕಾಲೇಜಿಗೆ ಬಿಗ್​​ ಶಾಕ್​

ಬೆಂಗಳೂರಿನ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಈ ಸುತ್ತೋಲೆ ಹೊರಡಿಸಲಾಗಿದೆ. ಮದ್ಯಪಾನ, ಧೂಮಪಾನ ಇತ್ಯಾದಿ ವಿಷಯಗಳನ್ನು ಒಳಗೊಂಡ ಹಾಡುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಲ್ಲದೆ, ವೇಷಭೂಷಣ ಆಯ್ಕೆಯಲ್ಲೂ ಶಿಕ್ಷಕರು ಗಮನಹರಿಸಬೇಕು. ವಿದ್ಯಾರ್ಥಿಗಳು ಶಿಸ್ತಿನ ಉಡುಪಿನಲ್ಲಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಕೆಲವು ಖಾಸಗಿ ಶಾಲೆಗಳು ಈಗಾಗಲೇ ಈ ನಿಯಮವನ್ನು ಅನುಸರಿಸಿ, ವಾರ್ಷಿಕೋತ್ಸವಗಳಲ್ಲಿ ಚಿತ್ರಗೀತೆಗಳನ್ನು ಬಳಸುವುದನ್ನು ತಪ್ಪಿಸುತ್ತಿವೆ. ಪ್ರತಿ ವರ್ಷ ವಿಭಿನ್ನ ಥೀಮ್‌ಗಳನ್ನು ಆಯ್ಕೆ ಮಾಡುತ್ತೇವೆ. ಚಿಕ್ಕ ಮಕ್ಕಳಿಗೆ ಹೂವು, ಪ್ರಾಣಿ, ಸಂಗೀತದಂತಹ ವಿಷಯಗಳ ಗೀತೆ ಬಳಸುತ್ತೇವೆ. ಹೈಸ್ಕೂಲ್ ವಿದ್ಯಾರ್ಥಿಗಳು ದೇಶಭಕ್ತಿ, ಇತಿಹಾಸ ಮತ್ತು ಜನಪದ ಗೀತೆಗಳಿಗೆ ನೃತ್ಯ ಮಾಡುತ್ತಿದ್ದಾರೆ ಎಂದು ನಗರದ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮನೆಯಲ್ಲಿ ಈ ಒಂದು ಸಸಿ ನೆಟ್ಟರೆ ಹಲ್ಲಿಗಳ ಕಾಟದಿಂದ ಶಾಶ್ವತವಾಗಿ ಮುಕ್ತಿ ಪಡೆಯಬಹುದು – Kannada News | Plant a basil plant at home to get rid of lizards

ಬೇಸಿಗೆಯ ಸಮಯದಲ್ಲಿ ಮನೆಯ ಹೊರಗಡೆ ಹಾವುಗಳ ಕಾಟ ತೀರಾ ಹೆಚ್ಚಾಗುವಂತೆ, ಮನೆಯೊಳಗಡೆ ಹಲ್ಲಿಗಳ (lizards) ಕಾಟ ಹೆಚ್ಚಾಗುತ್ತದೆ. ಈ ಹಲ್ಲಿಗಳು ಮನುಷ್ಯರಿಗೆ ತೊಂದರೆ ನೀಡುವುದಿಲ್ಲ ನಿಜ, ಆದರೆ ಅವುಗಳು ನಾವು ತಿನ್ನುವ ಆಹಾರಕ್ಕೆ ಬಿದ್ದರೆ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ಮನೆಯಲ್ಲಿ ಹಲ್ಲಿಗಳಿದ್ದರೆ ಹೆಚ್ಚಿನವರು ಭಯ ಪಡುತ್ತಾರೆ. ಮತ್ತು ಅವುಗಳ ಹಾವಳಿಯಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅವು ಹಲ್ಲಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಿರುವಾಗ ಮನೆಯೊಳಗಡೆ ಕಿಟಕಿ, ಬಾಗಿಲಿನ ಪಕ್ಕ ತುಳಸಿ ಗಿಡವನ್ನು ಇಡುವ ಮೂಲಕ ಬಲು ಸುಲಭವಾಗಿ ಮನೆಯಿಂದ ಓಡಿಸಬಹುದು. ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.

ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಲ್ಲಿ ನೆಡಿ ತುಳಸಿ ಗಿಡ:

ಧಾರ್ಮಿಕ ಮಹತ್ವವನ್ನು ಹೊಂದಿರುವ ತುಳಸಿ ಗಿಡ, ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಮಾತ್ರವಲ್ಲ, ಹಲ್ಲಿ, ಸೊಳ್ಳೆ, ಕೀಟಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ. ಹೌದು ತುಳಸಿ ಗಿಡಗಳು ಹಲ್ಲಿಗಳು ಇಷ್ಟಪಡದ ಆಹ್ಲಾದಕರ ವಾಸನೆಯನ್ನು ಹೊರಸೂಸುತ್ತವೆ. ಈ ವಾಸನೆ ಹೊಸ ಸೂಸುವ ಜಾಗದಲ್ಲಿ ಹಲ್ಲಿಗಳು ಇರಲು ಇಷ್ಟಪಡುವುದಿಲ್ಲ, ಅಲ್ಲಿಂದ ಓಡಿ ಹೋಗುತ್ತವೆ. ತುಳಸಿ ಗಿಡವನ್ನು ಮನೆಯಲ್ಲಿ ಇಡುವುದರಿಂದ ಹಲ್ಲಿಗಳ ಹಾವಳಿಯೂ ಇರುವುದಿಲ್ಲ, ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯೂ ನೆಲೆಸುತ್ತದೆ.

ಇದನ್ನೂ ಓದಿ: ಬೆಳಗ್ಗೆ ಅಥವಾ ಸಂಜೆ; ಬೇಸಿಗೆಯಲ್ಲಿ ಗಿಡಗಳಿಗೆ ಯಾವ ಸಮಯದಲ್ಲಿ ನೀರು ಹಾಕಬೇಕು?

ತುಳಸಿ ಗಿಡಗಳ ಇತರ ಪ್ರಯೋಜನಗಳು:

  • ಹಲ್ಲಿಗಳ ಹೊರತಾಗಿ, ಬೇಸಿಗೆಯಲ್ಲಿ ಸೊಳ್ಳೆಗಳು, ನೊಣಗಳು ಮತ್ತು ಕೀಟಗಳ ಕಾಟವೂ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ಅಲ್ಲಲ್ಲಿ ಪಾಟ್‌ಗಳಲ್ಲಿ ತುಳಸಿ ಗಿಡಗಳನ್ನು ಇಡುವ ಮೂಲಕ ಕೀಟ ನೊಣಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.
  • ನೀವು ನಿಮ್ಮ ಬಾಲ್ಕನಿ, ಕಿಟಕಿ ಅಥವಾ ಬಾಗಿಲಿನ ಬಳಿ ನೀವು ತುಳಸಿ ಗಿಡವನ್ನು ಇಡಬಹುದು. ಇದು ಹಲ್ಲಿಗಳನ್ನು ದೂರವಿಡುವುದಲ್ಲದೆ, ಸೊಳ್ಳೆಗಳು ಮತ್ತು ಕೀಟಗಳ ಕಾಟದಿಂದಲೂ ಪರಿಹಾರವನ್ನು ನೀಡುತ್ತದೆ.
  • ನೀವು ಪಾಟ್‌ನಲ್ಲಿ ತುಳಸಿ ಗಿಡವನ್ನು ಇಡಲು ಬಯಸದಿದ್ದರೆ, ನಿಮ್ಮ ಮನೆಯ ಪ್ರತಿ ಮೂಲೆಯಲ್ಲೂ ತುಳಸಿ ಎಲೆಗಳನ್ನು ಇಡಬಹುದು.  ಇದಲ್ಲದೆ ನೀವು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ಅದರ ರಸವನ್ನು ಬಾಟಲಿಯಲ್ಲಿ ತುಂಬಿಸಿ ಮನೆಯ ಪ್ರತಿಯೊಂದು ಮೂಲೆಯಲ್ಲೂ ಸಿಂಪಡಿಸುವ ಮೂಲಕವೂ ಹಲ್ಲಿ, ಸೊಳ್ಳೆ, ನೊಣಗಳು ಮನೆ ಪ್ರವೇಶಿಸದಂತೆ ನೋಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ರಾಷ್ಟ್ರೀಯ ಹೆದ್ದಾರಿಯೋ ಅಥವಾ ಕೆಸರು ಗದ್ದೆಯೋ? ಶಿರಸಿ-ಹಾವೇರಿ ರಸ್ತೆಯಲ್ಲಿ ನರಕಯಾತನೆ – Kannada News | Karnataka’s Shame: Sirsi Haveri NH Turns Death Trap, Public Demands Action

ಶಿರಸಿ, ಏ.28: ಕರ್ನಾಟಕದ ಸರ್ಕಾರಿ ಸಾರಿಗೆ ವ್ಯವಸ್ಥೆ ಎಷ್ಟೊಂದು ಕೆಟ್ಟೋಗಿದೆ ಎಂದರೆ ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಸಾರ್ವಜನಿಕರಿಗೆ ಸಿಗುತ್ತಿರುವ ಪ್ರತಿಫಲ ಮಾತ್ರ ಶೂನ್ಯ ಎನ್ನುವುದಕ್ಕೆ ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿಯೇ ಸಾಕ್ಷಿ. ಈ ರಸ್ತೆಯ ಸ್ಥಿತಿ ಎಷ್ಟು ಭೀಕರವಾಗಿದೆಯೆಂದರೆ, ಇದು ಹೆದ್ದಾರಿಯೋ ಅಥವಾ ಆಫ್-ರೋಡ್ ರ‍್ಯಾಲಿ ನಡೆಯುವ ಕೆಸರು ಗದ್ದೆಯೋ ಎಂಬ ಅನುಮಾನ ಮೂಡುತ್ತಿದೆ.

ಇಲ್ಲಿ ವೈರಲ್ ಆಗಿರುವ ದೃಶ್ಯಗಳಲ್ಲಿ ಕೆಎಸ್‌ಆರ್‌ಟಿಸಿ (KSRTC) ಬಸ್‌ವೊಂದು ಕೆಸರಿನಲ್ಲಿ ಸಿಲುಕಿ ಮುಂದೆ ಸಾಗಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ. ಬಲಿಷ್ಠವಾದ ಸರ್ಕಾರಿ ಬಸ್‌ಗಳೇ ಈ ರಸ್ತೆಯಲ್ಲಿ ಸಂಚರಿಸಲು ಅಸಹಾಯಕವಾಗಿರುವಾಗ, ದ್ವಿಚಕ್ರ ವಾಹನಗಳು ಮತ್ತು ಸಣ್ಣ ಕಾರುಗಳ ಪರಿಸ್ಥಿತಿ ಹೇಳತೀರದು. ತುರ್ತು ಚಿಕಿತ್ಸೆಗೆ ತೆರಳುವ ಆಂಬ್ಯುಲೆನ್ಸ್‌ಗಳೂ ಇಲ್ಲಿ ಗಂಟೆಗಟ್ಟಲೆ ಸಿಲುಕಿಕೊಳ್ಳುವ ಭೀತಿ ಎದುರಾಗಿದೆ. ಈ ಬಗ್ಗೆ ಪೋಸ್ಟ್​​ವೊಂದನ್ನು @KarnatakaPortfolio ತನ್ನ ಎಕ್ಸ್​​​ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ: ‘ಸೋಫಾ ಅಳತೆ ಮಾಡಿಕೊಡು ಬಾ’ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ!

ಇಲ್ಲಿದೆ ನೋಡಿ ವಿಡಿಯೋ:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಮಾರ್ಗದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ ಸಾರ್ವಜನಿಕರು ರಸ್ತೆ ತೆರಿಗೆಯನ್ನು ಸರಿಯಾದ ಸಮಯದಲ್ಲಿ ಪಾವತಿಸುತ್ತಿದ್ದರೂ, ಕನಿಷ್ಠ ಗುಣಮಟ್ಟದ ರಸ್ತೆಯನ್ನು ನೀಡಲು ಸರ್ಕಾರ ವಿಫಲವಾಗಿದೆ ಎಂದು ದೂರಿದ್ದಾರೆ. ಹೊಂಡ-ಗುಂಡಿಗಳು ಹಾಗೂ ಕೆಸರಿನಿಂದಾಗಿ ಈ ರಸ್ತೆಯು ಮೃತ್ಯುಪಂಜರವಾಗಿ ಮಾರ್ಪಟ್ಟಿದೆ ಎಂದು ಹಲವು ಜನ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕೇವಲ ನೆಪಗಳನ್ನು ಹೇಳುವುದನ್ನು ಬಿಟ್ಟು ಕೂಡಲೇ ಈ ಹೆದ್ದಾರಿಯ ದುರಸ್ತಿಗೆ ಮುಂದಾಗಬೇಕಿದೆ. ಇಲ್ಲದಿದ್ದರೆ ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳಿತು ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿನ

Published On – 8:26 pm, Tue, 28 April 26

Source link

ನಿಲ್ಲದ ಹೈಡ್ರಾಮಾ; ನ್ಯಾ. ಸ್ವರಣ ಕಾಂತ ಶರ್ಮಾ – ಕೇಜ್ರಿವಾಲ್ ನಡುವೆ ಕೋರ್ಟ್​ನಲ್ಲಿ ಏನೇನಾಯ್ತು? – Kannada News | AAP leaders Arvind Kejriwal and Manish Sisodia refused to appear before the Delhi high court bench of Justice Swarana Kanta Sharma

ನವದೆಹಲಿ, ಏಪ್ರಿಲ್ 28: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ (Delhi excise policy case) ಆರೋಪಿಯಾಗಿರುವ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮಾಜ ಸಚಿವ ಮನೀಶ್ ಸಿಸೋಡಿಯಾ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ವಿರುದ್ಧ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಅವರೆದುರು ವಿಚಾರಣೆಗೆ ಹಾಜರಾಗುವುದಿಲ್ಲ, ತಮ್ಮ ಕೇಸಿಗೆ ಯಾವುದೇ ವಕೀಲರನ್ನು ನೇಮಿಸುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಈ ಕಾನೂನು ಸಮರ ಹೊಸ ತಿರುವು ಪಡೆದುಕೊಂಡಿದೆ. ಆಮ್ ಆದ್ಮಿ ಪಕ್ಷದ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ದೆಹಲಿ ಹೈಕೋರ್ಟ್ ಪೀಠದ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಪ್ರಕರಣದ ವಿಚಾರಣೆಯಿಂದ ನ್ಯಾಯಾಧೀಶರಾದ ಸ್ವರಣ ಕಾಂತ ಶರ್ಮಾ ಹಿಂದೆ ಸರಿಯಬೇಕೆಂದು ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ ನಂತರ ವಿವಾದ ಭುಗಿಲೆದ್ದಿದೆ. ಆದರೆ, ನ್ಯಾಯಾಧೀಶರ ವಿರುದ್ಧದ ಆರೋಪಗಳು ಸಾಕ್ಷ್ಯಗಳಿಂದ ಬೆಂಬಲಿತವಾಗಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೇವಲ ಗ್ರಹಿಕೆಗಳು ಅಥವಾ ಅನುಮಾನಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗದು ಎಂದು ನ್ಯಾಯಾಲಯ ಹೇಳಿದೆ. ಇಂತಹ ಅರ್ಜಿಗಳು ನ್ಯಾಯ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸಬಹುದು ಎಂದು ಎಚ್ಚರಿಸಿದೆ. ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಕೂಡ ದೆಹಲಿ ಅಬಕಾರಿ ನೀತಿ ಪ್ರಕರಣದಿಂದ ಹಿಂದೆ ಸರಿಯಬೇಕೆಂದು ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ. ತಾನು ಯಾವುದೇ ಕಾರಣಕ್ಕೂ ಈ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ; ಕೇಜ್ರಿವಾಲ್, ಸಿಸೋಡಿಯಾ ವಿಚಾರದಲ್ಲಿ ಕಾನೂನು ಏನು ಹೇಳುತ್ತದೆ?

ಕೇಜ್ರಿವಾಲ್ ಎತ್ತಿದ ಆರೋಪಗಳನ್ನು ಹೈಕೋರ್ಟ್ ಪರಿಶೀಲಿಸಿದ್ದು, ಅದರಲ್ಲಿ ಪಕ್ಷಪಾತದ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದೆ. ಕೇಜ್ರಿವಾಲ್ ಮತ್ತು ನಂತರ ಸಿಸೋಡಿಯಾ ಅವರು ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ಮಕ್ಕಳನ್ನು ಕೇಂದ್ರ ಸರ್ಕಾರದ ವಕೀಲರನ್ನಾಗಿ ಸೇರಿಸಲಾಗಿದೆ ಎಂದು ಹೇಳಿಕೊಂಡು ಹಿತಾಸಕ್ತಿ ಸಂಘರ್ಷವನ್ನು ಆರೋಪಿಸಿದ್ದರು. ಕೇಂದ್ರ ಸರ್ಕಾರವು ಸಿಬಿಐ ಮೂಲಕ ಭಾಗಿಯಾಗಿರುವುದರಿಂದ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸುವುದರಿಂದ ಇದು ನ್ಯಾಯಸಮ್ಮತತೆಯ ಬಗ್ಗೆ ಆತಂಕವನ್ನು ಉಂಟುಮಾಡಿದೆ ಎಂದು ಅವರು ವಾದಿಸಿದ್ದರು.

ಆದರೆ, ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ನ್ಯಾಯಾಧೀಶರ ಕುಟುಂಬದ ಸದಸ್ಯರ ಮತ್ತು ಪ್ರಸ್ತುತ ಪ್ರಕರಣದ ನಡುವೆ ಯಾವುದೇ ನೇರ ಸಂಪರ್ಕ ಕಂಡುಬಂದಿಲ್ಲ ಎಂದು ಹೇಳಿದೆ. ನ್ಯಾಯಾಧೀಶರೊಂದಿಗಿನ ಸಂಬಂಧದ ಕಾರಣದಿಂದಾಗಿ ನ್ಯಾಯಾಧೀಶರ ಕುಟುಂಬದ ಸದಸ್ಯರು ಕಾನೂನು ವೃತ್ತಿಯನ್ನು ಮುಂದುವರಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಅಬಕಾರಿ ನೀತಿ ಪ್ರಕರಣ; ಸುಪ್ರೀಂ ಕೋರ್ಟ್​ನಲ್ಲಿ ಇಂದು ಅರವಿಂದ್ ಕೇಜ್ರಿವಾಲ್‌ ಭವಿಷ್ಯ ನಿರ್ಧಾರ

ಆರ್​ಎಸ್​ಎಸ್​​ನ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ನ್ಯಾಯಮೂರ್ತಿ ಶರ್ಮಾ ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಎತ್ತಿದ ಮತ್ತೊಂದು ಆಕ್ಷೇಪಣೆ. ಹೈಕೋರ್ಟ್ ಈ ಆರೋಪವನ್ನು ತಿರಸ್ಕರಿಸಿತು. ನ್ಯಾಯಾಧೀಶರು ಬಹು ಸಂಘಗಳು ಆಯೋಜಿಸುವ ಕಾನೂನು, ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಕ್ರಮಗಳಿಗೆ ನಿಯಮಿತವಾಗಿ ಹಾಜರಾಗುತ್ತಾರೆ ಎಂದು ಸ್ಪಷ್ಟಪಡಿಸಿತು.

ಅಬಕಾರಿ ನೀತಿ ಪ್ರಕರಣದ ವಿವಾದ ಈಗ ರದ್ದಾಗಿರುವ ದೆಹಲಿ ಅಬಕಾರಿ ನೀತಿ 2021-22ರಿಂದ ಹುಟ್ಟಿಕೊಂಡಿದೆ. ಇದನ್ನು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಮಾಡಿದೆ. ಈ ಪ್ರಕರಣವು ಎಎಪಿಯ ಹಿರಿಯ ನಾಯಕರ ಬಂಧನಗಳು, ರಾಜೀನಾಮೆಗಳು ಮತ್ತು ದೀರ್ಘಕಾಲದ ಮೊಕದ್ದಮೆಗಳಿಗೆ ಕಾರಣವಾಗಿದೆ. ವಿಚಾರಣಾ ನ್ಯಾಯಾಲಯವು ಈ ಹಿಂದೆ ಕೇಜ್ರಿವಾಲ್, ಸಿಸೋಡಿಯಾ ಮತ್ತು ಇತರರನ್ನು ಭ್ರಷ್ಟಾಚಾರ ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಸಿಬಿಐ ಆ ನಿರ್ಧಾರವನ್ನು ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ, ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಅವರ ಪೀಠದ ಮುಂದೆ ತಂದಿತು. ಈ ಬಗ್ಗೆಯೂ ಇದೀಗ ಕೇಜ್ರಿವಾಲ್ ಮತ್ತು ಸಿಸೋಡಿಯಾ ತಗಾದೆ ತೆಗೆದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉದ್ಯೋಗ ಖಾತ್ರಿ ಕೆಲಸದ ವೇಳೆ ದುರ್ಘಟನೆ: ಬೆಂಕಿಯಂಥ ಬಿಸಿಲಿಗೆ ಬಲಿಯಾದ್ನಾ ಕಾರ್ಮಿಕ? – Kannada News | Raichur MGNREGA Worker Dies: Heat Stroke Suspected, Negligence Alleged

ರಾಯಚೂರು, ಏಪ್ರಿಲ್​​ 28: ಉದ್ಯೋಗ ಖಾತ್ರಿ ಯೋಜನೆಯ ಕೆಲಸಕ್ಕೆ ತೆರಳಿದ್ದ ಕಾರ್ಮಿಕನೋರ್ವ ಏಕಾಏಕಿ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ರಾಯಚೂರಿನ (Raichur) ಯಾಪಲದಿನ್ನಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಹುಸೇನಪ್ಪ ಮಡಿವಾಳ (49) ಮೃತ ದುರ್ದೈವಿಯಾಗಿದ್ದು, ಕುಸಿದು ಬಿದ್ದ ಈತನನ್ನು ಕೂಡಲೇ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಹುಸೇನಪ್ಪ ಉಸಿರು ಚೆಲ್ಲಿದ್ದಾರೆ. ಘಟನೆ ಬೆನ್ನಲ್ಲೇ ಸುಡು ಬಿಸಿಲಿನಲ್ಲಿ ಕಾರ್ಮಿಕರನ್ನು ದುಡಿಸುತ್ತಿದ್ದ ಪಿಡಿಒ ವಿರುದ್ಧ ಆಕ್ರೋಶ ಕೇಳಿಬಂದಿದೆ.

ಹೀಟ್​​ ಸ್ಟ್ರೋಕ್​​ಗೆ ಬಲಿ?

ಇನ್ನು ಸುಮಾರು 40 ಡಿಗ್ರಿ ಸೆಲ್ಸಿಯಸ್​​ ತಾಪಮಾನದ ನಡುವೆಯೂ ಕಾರ್ಮಿಕರು ಯಾಪಲದಿನ್ನಿ ಗ್ರಾಮದ ಹೊರ ಭಾಗದಲ್ಲಿನ ಒಣಗಿ ಹೋಗಿರುವ ಕೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಹೀಟ್​​ ಸ್ಟ್ರೋಕ್​​ಗೆ ಹುಸೇನಪ್ಪ ಮಡಿವಾಳ ಬಲಿಯಾಗಿದ್ದಾರೆ ಎಂದು ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರು ಹೇಳ್ತಿದ್ದಾರೆ. ಆದರೆ ಹೀಟ್ ಸ್ಟ್ರೋಕ್​​ಗೆ ಬಲಿಯಾಗಿರೋದನ್ನ ಖಚಿತಪಡಿಸಲು ಪರೀಕ್ಷೆಗಳಿಲ್ಲ. ಮರಣೋತ್ತರ ಪರೀಕ್ಷೆಯಲ್ಲೂ ಆ ಅಂಶವನ್ನ ಪತ್ತೆಮಾಡಲು ಆಗಲ್ಲ ಎಂದು ರಿಮ್ಸ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಬಸವರಾಜ್ ಪಾಟೀಲ್ ತಿಳಿಸಿದ್ದಾರೆ. ಬಿಸಿಲಿನ ತಾಪಕ್ಕೆ‌ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವ ಕಾರಣ ಬಿಪಿ ಕಡಿಮೆಯಾಗಿ ಮೃತಪಡುವ ಸಾಧ್ಯತೆ ಇರುತ್ತೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆ! ಮಹಿಳೆಯರನ್ನ ದಂಧೆಗೆ ಇಳಿಸ್ತಿದ್ದ ಕಿಂಗ್ ಪಿನ್ ಸೇರಿ 11 ಜನ ಅರೆಸ್ಟ್

ಪರಿಹಾರಕ್ಕೆ ಆಗ್ರಹ

ಇನ್ನು ಉದ್ಯೋಗ ಖಾತ್ರಿ ಕೆಲಸ ಮಾಡಿಸುವ ವೇಳೆ ಕನಿಷ್ಠ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂಬ ಆರೋಪ ಮೃತನ ಕಡೆಯವರಿಂದ ಕೇಳಿಬಂದಿದೆ. ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ನೆರಳು, ಕುಡಿಯುವ ನೀರು, ORS ವ್ಯವಸ್ಥೆ ಸೇರಿದಂತೆ ಯಾವುದೂ ಇರಲಿಲ್ಲ. ಹೀಗಾಗಿ ಘಟನೆಗೆ ಯಾಪಲದಿನ್ನಿ ಗ್ರಾಮ ಪಂಚಾಯತಿ ಮತ್ತು ಪಿಡಿಒ ನಿರ್ಲಕ್ಷ್ಯ ಕಾರಣವಾಗಿದ್ದು, ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಓರ್ವ ಕಾರ್ಮಿಕನ ಸಾವಾಗಿದ್ದರೂ ಈವರೆಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಯಾರೊಬ್ಬರೂ ಕೂಡ ಮೃತನ ಕುಟುಂಬಸ್ಥರನ್ನು ಸಂಪರ್ಕಿಸಿಲ್ಲ ಎಂದು ಕೂಡ ದೂರಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಕೆರೆಬೇಟೆ’ ಬಳಿಕ ‘ಕಾಮನ್ ಮ್ಯಾನ್’: ಓಂ ಸಾಯಿ ಪ್ರಕಾಶ್ ಜೊತೆ ಗೌರಿ ಶಂಕರ್ ಸಿನಿಮಾ – Kannada News | Common Man Kannada movie ft Gowri Shankar directed by Om Sai Prakash

ನಟ ಗೌರಿ ಶಂಕರ್ (Gowri Shankar) ಅವರು ‘ಕೆರೆಬೇಟೆ’ ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಆ ಬಳಿಕ ಸಣ್ಣ ಬ್ರೇಕ್ ತೆಗೆದುಕೊಂಡ ಅವರು ಈಗ ಹೊಸ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ (Om Sai Prakash) ಜೊತೆ ಗೌರಿ ಶಂಕರ್ ಸಿನಿಮಾ ಮಾಡುತ್ತಿದ್ದಾರೆ. ಇದು ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 106ನೇ ಸಿನಿಮಾ. ಈ ಚಿತ್ರಕ್ಕೆ ‘ಕಾಮನ್ ಮ್ಯಾನ್’ (Common Man) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು.

‘ಕಾಮನ್ ಮ್ಯಾನ್’ ಸಿನಿಮಾದ ಕಥೆ ಏನು ಎಂಬ ಬಗ್ಗೆ ಚಿತ್ರತಂಡದವರು ಮಾಹಿತಿ ನೀಡಿದರು. ಸಾಮಾನ್ಯ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಹೇಗಿರುತ್ತದೆ? ಈ ಎಳೆಯನ್ನು ಇಟ್ಟುಕೊಂಡು ಎನ್. ನರಸಿಂಹಮೂರ್ತಿ ಅವರು ಕಥೆ ಬರೆದು ‘ಸುರಭಿ ಫಿಲ್ಮ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಓಂ ಸಾಯಿ ಪ್ರಕಾಶ್ ಅವರು ಮಾತನಾಡಿದರು. ‘ಜೀವನದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಆಸೆ ಇರುತ್ತೆ. ಈ ಕಥೆಯಲ್ಲಿ ನಾಯಕ ಒಬ್ಬ ಲಾಯರ್. ಅನಿರೀಕ್ಷಿತವಾಗಿ ಅವನು ಮುಖ್ಯಮಂತ್ರಿ ಆಗುತ್ತಾನೆ. ನಂತರ ಅವನು ಏನೇನು ಮಾಡಬಹುದು ಎಂಬುದನ್ನು ಕುತೂಹಲಕರವಾಗಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಕಥೆ ಕೇಳಿದ ಕೂಡಲೇ ಇದು ಶೇಕಡ 100ರಷ್ಟು ಓಪನಿಂಗ್ ತೆಗೆದುಕೊಳ್ಳುತ್ತದೆ ಎನಿಸಿತು. ಇದು ಕಂಟೆಂಟ್ ಸಿನಿಮಾ, ಜಾತ್ರೆ ಸಿನಿಮಾ ಅಲ್ಲ’ ಎಂದು ಅವರು ಹೇಳಿದರು.

ರಂಗಭೂಮಿ ನಂಟು ಹೊಂದಿರುವ ನಿರ್ಮಾಪಕ ಎನ್. ನರಸಿಂಹಮೂರ್ತಿ ಮಾತನಾಡಿ, ‘ಈ ಮೊದಲು ಎರಡು ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ. ಅದರಿಂದ ಸಾಕಷ್ಟು ಪಾಠವನ್ನೂ ಕಲಿತೆ. ಇದು ನನ್ನ ಮೂರನೇ ಸಿನಿಮಾ. ಇಂಥ ನಿರ್ದೇಶಕರ ಜತೆ ಎಷ್ಟು ಸಿನಿಮಾ ಬೇಕಾದರೂ ಮಾಡಬಹುದು‌. ಮಾತಿನ ಭಾಗ 40 ದಿನ ಚಿತ್ರೀಕರಣ ಎಂದಿದ್ದರು. ಆದರೆ 32 ದಿನಕ್ಕೇ ಮುಗಿಸಿದರು. ಚಿತ್ರದಲ್ಲಿ ನಾನು ಒಬ್ಬ ಮುಖ್ಯಮಂತ್ರಿಯ ಪಾತ್ರ ಮಾಡಿದ್ದೇನೆ’ ಎಂದರು.

ಇದನ್ನೂ ಓದಿ: ‘ಕೆರೆಬೇಟೆ 100 ಪರ್ಸೆಂಟ್​ ಚೆನ್ನಾಗಿದೆ’; ಗೆಳೆಯನ ಸಿನಿಮಾ ನೋಡಿ ಮೆಚ್ಚಿದ ಧ್ರುವ ಸರ್ಜಾ

ಓಂ ಸಾಯಿ ಪ್ರಕಾಶ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಗೌರಿ ಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದರು. ‘ರಾಜಹಂಸ, ಕೆರೆಬೇಟೆ ನಂತರ ನನ್ನ ಅಭಿನಯದ 3ನೇ ಚಿತ್ರವಿದು. ನಿರ್ದೇಶಕರು ಹಾಕಿಕೊಂಡ ಪ್ಲಾನ್ ಪ್ರಕಾರವೇ ಸಿನಿಮಾ ಮಾಡಿ ಮುಗಿಸಿದ್ದಾರೆ. ಕೆರೆಬೇಟೆ ಬಳಿಕ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ಬಯಸಿದಂತಹ ಪಾತ್ರವೇ ಹುಡುಕಿಕೊಂಡು ಬಂತು’ ಎಂದು ಗೌರಿ ಶಂಕರ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಸೋಫಾ ಅಳತೆ ಮಾಡಿಕೊಡು ಬಾ’ ಎಂದು ಕರೆದು ಬರ್ಬರವಾಗಿ ಹತ್ಯೆ; ಬಾರ್ ಎದುರೇ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿದ ಆಟೋ ಚಾಲಕ! – Kannada News | Kolar Crime News: Sofa Maker Murdered in Drug Fueled Brawl; Accused Arrested

ಕೋಲಾರ, ಏ.28: ಜಿಲ್ಲೆಯಲ್ಲಿ ಒಂದು ಆರ್ಡರ್​ ಇದೆ ಎಂದು ನಂಬಿಸಿ ಕರೆದೊಯ್ದು ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ನಗರದ ಹೊರವಲಯದಲ್ಲಿ ನಡೆದಿದೆ. ಬೀಡಿ ಕಾಲೋನಿಯ ನಿವಾಸಿ ಸಲ್ಮಾನ್ ಪಾಷಾ (26) ಕೊಲೆಯಾದ ದುರ್ದೈವಿ ಎಂದು ಹೇಳಲಾಗಿದ . ಸೋಫಾ ತಯಾರಿಕೆ ಮತ್ತು ರಿಪೇರಿ ಕೆಲಸ ಮಾಡಿಕೊಂಡಿದ್ದ ಸಲ್ಮಾನ್ ಪಾಷಾ ಮನೆಗೆ ನಿನ್ನೆ ರಾತ್ರಿ 11:30ರ ಸುಮಾರಿಗೆ ಪರಿಚಯಸ್ಥ ಹುಡುಗರು ಬಂದಿದ್ದರು. “ಹೊಸ ಸೋಫಾ ಆರ್ಡರ್ ಬಂದಿದೆ, ಅದರ ಅಳತೆ ತೆಗೆದುಕೊಳ್ಳಲು ಬಾ” ಎಂದು ಹೇಳಿ ಆಟೋದಲ್ಲಿ ಸಲ್ಮಾನ್‌ನನ್ನು ಕರೆದುಕೊಂಡು ಹೋಗಿದ್ದಾರೆ.

ಎಪಿಎಂಸಿ ಮಾರುಕಟ್ಟೆ ಸಮೀಪದ ಮೆಹಬೂಬ್ ಪೆಟ್ರೋಲ್ ಬಂಕ್ ಬಳಿಯಿರುವ ಲಕ್ಷ್ಮೀ ಬಾರ್ ಬಳಿ ಬಂದಾಗ ಎಲ್ಲರೂ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಲ್ಮಾನ್ ಮತ್ತು ಜಮಾಲ್ ಷಾ ನಗರದ ಆಟೋ ಚಾಲಕ ಅಬ್ದುಲ್ ರಶೀದ್ ನಡುವೆ ಗಲಾಟೆ ಶುರುವಾಗಿದೆ. ಗಾಂಜಾ ಮತ್ತು ಮದ್ಯದ ಅಮಲಿನಲ್ಲಿದ್ದ ಅಬ್ದುಲ್ ರಶೀದ್ ಏಕಾಏಕಿ ಸಲ್ಮಾನ್ ಪಾಷಾ ಮೇಲೆ ಕಲ್ಲು ಎತ್ತಿಹಾಕಿ, ನಂತರ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಲ್ಮಾನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ಪೊಲೀಸರು, ಕೊಲೆ ಮಾಡಿ ಅದೇ ಸ್ಥಳದಲ್ಲಿ ಕುಡಿದ ಮತ್ತಿನಲ್ಲಿ ಬಿದ್ದಿದ್ದ ಆರೋಪಿ ಅಬ್ದುಲ್ ರಶೀದ್‌ನನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಎಂ.ಜಿ. ರೋಡ್​ನಲ್ಲಿರುವ ಪ್ರತಿಷ್ಠಿತ ಹೋಟೆಲ್‌ನಲ್ಲಿ ಯುವತಿ ಮೇಲೆ ಹಲ್ಲೆ; ಮ್ಯಾನೇಜರ್ ಮೇಲೆ ಬಟ್ಟೆ ಹರಿಯಲು ಯತ್ನಿಸಿದ ಆರೋಪ

“ಮನೆಗೆ ಆಸರೆಯಾಗಿದ್ದ ಮಗನನ್ನು ಆರ್ಡರ್ ಕೊಡ್ತೀವಿ ಅಂತ ಸುಳ್ಳು ಹೇಳಿ ಕರೆದುಕೊಂಡು ಹೋಗಿ ಕೊಂದಿದ್ದಾರೆ” ಎಂದು ಸಲ್ಮಾನ್ ತಂದೆ ಖಾದರ್ ಪಾಷಾ ಮತ್ತು ತಾಯಿ ಶಕೀಲಾ ಕಣ್ಣೀರಿಡುತ್ತಿದ್ದಾರೆ. ಜಿಲ್ಲೆಯಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಕೃತ್ಯಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

31 ವರ್ಷ ಜೈಲಿನಲ್ಲಿದ್ದ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಈಗ ಹೈಕೋರ್ಟ್ ವಕೀಲ! – Kannada News | After 31 years in jail Rajiv Gandhi assassination convict becomes High Court advocate

ಚೆನ್ನೈ, ಏಪ್ರಿಲ್ 28: ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಎ.ಜಿ. ಪೆರಾರಿವಾಲನ್ ಇದೀಗ ಹೈಕೋರ್ಟ್​ ವಕೀಲರಾಗಿದ್ದಾರೆ. 2022ರಲ್ಲಿ ಶಿಕ್ಷೆಯಿಂದ ವಿನಾಯಿತಿ ಪಡೆದು ಬಿಡುಗಡೆಯಾದ ಪೆರಾರಿವಾಲನ್ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿದರು. 2025ರಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅವರು ಈಗ ವಕೀಲರಾಗಿದ್ದಾರೆ.

ರಾಜೀವ್ ಗಾಂಧಿ ಹತ್ಯೆಯ ಆರೋಪಿಯಾಗಿದ್ದ ಪೆರಾರಿವಾಲನ್ ಅವರನ್ನು 2022ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬಿಡುಗಡೆ ಮಾಡಲಾಯಿತು. ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಅದರ ಅಧಿಕಾರವನ್ನು ಬಳಸಿಕೊಂಡು ಅವರ ದೀರ್ಘಕಾಲದ ಸೆರೆವಾಸವನ್ನು ಉಲ್ಲೇಖಿಸಲಾಯಿತು. ಅವರ ಮರಣದಂಡನೆಯನ್ನು ಈ ಹಿಂದೆ ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. ಅವರ ವಿರುದ್ಧದ ಭಯೋತ್ಪಾದನೆಗೆ ಸಂಬಂಧಿಸಿದ ಆರೋಪಗಳನ್ನು ಹಿಂತೆಗೆದುಕೊಳ್ಳಲಾಗಿತ್ತು.

ಜೈಲಿನಿಂದ ಬಿಡುಗಡೆಯಾದ ನಂತರ ಪೆರಾರಿವಾಲನ್ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಡಿಯಲ್ಲಿ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿಗೆ ಸೇರಿಕೊಂಡರು. 2025ರಲ್ಲಿ ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ಅದೇ ವರ್ಷ ಅಖಿಲ ಭಾರತ ಬಾರ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಇದನ್ನೂ ಓದಿ: ರಾಜೀವ್ ಗಾಂಧಿ ಮೃತದೇಹದ ಒಂದು ಚೂರೂ ಸಿಗಲಿಲ್ಲ; ವಿವಾದಕ್ಕೀಡಾದ ಆಜಂ ಖಾನ್ ಹೇಳಿಕೆ

ಪೆರಾರಿವಾಲನ್ ತಮ್ಮ ಜೀವನದ 31 ವರ್ಷಗಳನ್ನು ಆರೋಪಿ ಮತ್ತು ಅಪರಾಧಿಯಾಗಿ ಕಳೆದಿದ್ದರು. ಅದೇ ಕಾನೂನು ವ್ಯವಸ್ಥೆಯಲ್ಲಿ ಈಗ ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡಲಿದ್ದಾರೆ. ಅವರಿಗೆ 54 ವರ್ಷ. ಸೋಮವಾರ ಕಪ್ಪು ಕೋಟ್ ಧರಿಸಿ, ಅವರು ತಮಿಳುನಾಡು ಮತ್ತು ಪುದುಚೇರಿಯ ಬಾರ್ ಅಸೋಸಿಯೇಷನ್‌ನಲ್ಲಿ ವಕೀಲರಾಗಿ ಸೇರಿಕೊಂಡರು.

1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಾಗ ಪೆರಾರಿವಾಲನ್ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಈ ಹತ್ಯೆಯನ್ನು ಭಯೋತ್ಪಾದಕ ಸಂಘಟನೆ ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (LTTE) ನಡೆಸಿತ್ತು. ಪೆರಾರಿವಾಲನ್ ಅವರನ್ನು ಅವರ ಮನೆಯಿಂದ ವಿಚಾರಣೆಗಾಗಿ ಕರೆದೊಯ್ಯಲಾಗಿತ್ತು. ಮರುದಿನ ಅವರನ್ನು ಕಳುಹಿಸುತ್ತೇವೆ ಎಂದು ಪೊಲೀಸರು ಹೇಳಿದ್ದರು. ಹೀಗಾಗಿ, ಅವರ ಪೋಷಕರೇ ಅವರನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಅವರನ್ನು ಬಿಡುಗಡೆ ಮಾಡಲಿಲ್ಲ. ಕೇಂದ್ರ ತನಿಖಾ ದಳ (ಸಿಬಿಐ) ಅವರನ್ನು ಕಸ್ಟಡಿಯಲ್ಲಿಟ್ಟುಕೊಂಡಿತು. ಅವರ ತಾಯಿಗೆ ಸಹ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ.

ನ್ಯಾಯಾಲಯವನ್ನು ಸಂಪರ್ಕಿಸುವುದರಿಂದ ಅವರ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಭಯಪಟ್ಟ ಅವರ ಕುಟುಂಬವು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಲು ಹೆದರಿತು. ತಮ್ಮ ಮಗನನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ನಂಬಿತ್ತು. ಆದರೆ, ರಾಜೀವ್ ಗಾಂಧಿಯವರ ಹತ್ಯೆಗೆ ಕಾರಣವಾದ ಬಾಂಬ್ ಅನ್ನು ಸ್ಫೋಟಿಸಲು ಬಳಸಲಾದ 9 ವೋಲ್ಟ್ ಬ್ಯಾಟರಿಯನ್ನು ಪೆರಾರಿವಾಲನ್ ಖರೀದಿಸಿ ಕೊಟ್ಟಿದ್ದರು ಎಂಬುದು ಪೆರಾರಿವಾಲನ್ ವಿರುದ್ಧದ ಆರೋಪವಾಗಿತ್ತು. ಈ ಆರೋಪಕ್ಕೆ ಸಾಕ್ಷಿಯಾಗಿ ಅಂಗಡಿಯೊಬ್ಬ ಪೆರಾರಿವಾಲನ್ ತನ್ನ ಅಂಗಡಿಯಿಂದ ಬ್ಯಾಟರಿಯನ್ನು ಖರೀದಿಸಿದ್ದಾರೆ ಎಂದು ಹೇಳಿದ್ದ. ಹೀಗಾಗಿ, ಅವರ ವಿರುದ್ಧ ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳನ್ನು ತಡೆಗಟ್ಟುವಿಕೆ ಕಾಯ್ದೆ (ಟಾಡಾ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: Rajiv Gandhi Assassination Case: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಸಂತನ್ ಸಾವು

1998ರಲ್ಲಿ ಟಾಡಾ ನ್ಯಾಯಾಲಯವು ರಾಜೀವ್ ಗಾಂಧಿ ಹತ್ಯೆಯಲ್ಲಿ ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿರುವ ಪೆರಾರಿವಾಲನ್ ಮತ್ತು ಇತರರನ್ನು ದೋಷಿ ಎಂದು ಘೋಷಿಸಿತು. ಆರಂಭದಲ್ಲಿ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ಈ ತೀರ್ಪನ್ನು 1999ರಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಭಾರತ ಸರ್ಕಾರವು ಅವರ ಕ್ಷಮಾದಾನ ಅರ್ಜಿಯನ್ನು ನಿರ್ಧರಿಸುವಲ್ಲಿ 11 ವರ್ಷಗಳ ವಿಳಂಬದಿಂದಾಗಿ 2014ರಲ್ಲಿ ಸುಪ್ರೀಂ ಕೋರ್ಟ್ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು.

ಪೆರಾರಿವಾಲನ್ ಅವರ ಕುಟುಂಬದ ಹಲವು ವರ್ಷಗಳ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಮೇ 18, 2022ರಂದು ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 31 ವರ್ಷಗಳ ಕಾಲ ಜೈಲಿನಲ್ಲಿ ಕಳೆದ ಪೆರಾರಿವಾಲನ್ ಅವರನ್ನು 142ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಬಳಸಿಕೊಂಡು ಬಿಡುಗಡೆ ಮಾಡಲು ಆದೇಶಿಸಿತು.

ಜೈಲಿನಲ್ಲಿದ್ದರೂ ಪೆರಾರಿವಾಲನ್ ತಮ್ಮ ಶಿಕ್ಷಣವನ್ನು ಮುಂದುವರಿಸಿದ್ದರು. ತಮಿಳುನಾಡು ಮುಕ್ತ ವಿಶ್ವವಿದ್ಯಾಲಯ ನಡೆಸಿದ ಡಿಪ್ಲೊಮಾ ಕೋರ್ಸ್‌ನಲ್ಲಿ ಅಗ್ರಸ್ಥಾನ ಪಡೆದ ನಂತರ ಅವರು ಚಿನ್ನದ ಪದಕವನ್ನು ಪಡೆದರು. ಪ್ಲಸ್ ಟು ಪರೀಕ್ಷೆಯಲ್ಲಿ ಅವರು 1,200ರಲ್ಲಿ 1,096 ಅಂಕಗಳನ್ನು ಗಳಿಸುವ ಮೂಲಕ ಕೈದಿಗಳಲ್ಲಿ ಮೊದಲ ಸ್ಥಾನ ಪಡೆದರು. ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆಯ ಸಮಯದಲ್ಲಿ, ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಪದವಿ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಇದರ ಜೊತೆಗೆ 7 ಹೆಚ್ಚುವರಿ ಡಿಪ್ಲೊಮಾ ಕೋರ್ಸ್‌ಗಳನ್ನು ಪೂರ್ಣಗೊಳಿಸಿದರು. ಮರಣದಂಡನೆಯನ್ನು ಎದುರಿಸುತ್ತಿರುವಾಗ ಅವರು ಅವುಗಳಲ್ಲಿ ಕೆಲವನ್ನು ಪೂರ್ಣಗೊಳಿಸಿದ್ದರು.

2022ರಲ್ಲಿ ಬಿಡುಗಡೆಯಾದ ನಂತರ ಪೆರಾರಿವಾಲನ್ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಕಾನೂನು ಕಾಲೇಜಿಗೆ ಸೇರಿದರು. ಅಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು. ನಂತರ, ಅವರು 2025 ರಲ್ಲಿ ಅಖಿಲ ಭಾರತ ವಕೀಲರ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ನನ್ನ ಮಹತ್ವಾಕಾಂಕ್ಷೆ ಪ್ರಸಿದ್ಧ ಕ್ರಿಮಿನಲ್ ವಕೀಲರಾಗುವುದಲ್ಲ. ಕಾನೂನು ನೆರವು ಇಲ್ಲದೆ ಜೈಲಿನಲ್ಲಿರುವ ಸಾವಿರಾರು ಕೈದಿಗಳಿಗೆ ಧ್ವನಿಯಾಗುವುದು ನನ್ನ ಗುರಿ. ವಿಶೇಷವಾಗಿ ಅಕಾಲಿಕ ಬಿಡುಗಡೆಗಾಗಿ ಕಾಯುತ್ತಿರುವ, ಸಹಾಯವನ್ನು ಪಡೆಯಲು ಸಾಧ್ಯವಾಗದ ಕಾರಣದಿಂದ ನ್ಯಾಯವನ್ನು ಪಡೆಯಲಾಗದ ಬಡ ಜೀವಾವಧಿ ಶಿಕ್ಷೆಗೊಳಗಾದವರಿಗೆ ನ್ಯಾಯ ಕೊಡಿಸುವುದು ನನ್ನ ಉದ್ದೇಶ” ಎಂದು ಪೆರಾರಿವಾಲನ್ ತಮಿಳುನಾಡು ಮತ್ತು ಪುದುಚೇರಿಯ ಬಾರ್ ಅಸೋಸಿಯೇಷನ್‌ಗೆ ವಕೀಲರಾಗಿ ಸೇರ್ಪಡೆಗೊಂಡ ನಂತರ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೂಟಿಂಗ್ ವೇಳೆ ಕೆಟ್ಟದಾಗಿ ಪ್ರ್ಯಾಂಕ್ ಮಾಡಿ ನಟಿಗೆ ಆಘಾತ ಉಂಟುಮಾಡಿದ್ದ ಅಕ್ಷಯ್ ಕುಮಾರ್ – Kannada News | Jacqueline Fernandez reveals traumatizing Prank by Akshay Kumar on Wheel Of Fortune finale

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜನಪ್ರಿಯ ರಿಯಾಲಿಟಿ ಗೇಮ್ ಶೋ ‘ವೀಲ್ ಆಫ್ ಫಾರ್ಚೂನ್’ (Wheel of Fortune) ಏಪ್ರಿಲ್ 27ರಂದು ಮುಕ್ತಾಯವಾಗಿದೆ. ಈ ಫಿನಾಲೆ ಸಂಚಿಕೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಒಂದು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಅವರು ಈ ಹಿಂದೆ ತಮಗೆ ಮಾಡಿದ್ದ ಒಂದು ಕೆಟ್ಟ ಪ್ರ್ಯಾಂಕ್ ಬಗ್ಗೆ ಈಗ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಬಾಯಿ ಬಿಟ್ಟಿದ್ದಾರೆ. ಆ ಪ್ರ್ಯಾಂಕ್​ನಿಂದ ತಮಗೆ ಆಘಾತ ಆಗಿತ್ತು ಎಂದು ಅವರು ಹೇಳಿದ್ದಾರೆ.

‘ಹೌಸ್‌ಫುಲ್’ ಸಿನಿಮಾದ ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು. ‘ಅದು ನನ್ನ ಮೊದಲ ಐಟಂ ಸಾಂಗ್ ಆಗಿತ್ತು. ಸೆಟ್‌ನಲ್ಲಿ ಸಾಕಷ್ಟು ಭದ್ರತಾ ಸಿಬ್ಬಂದಿ ಇದ್ದರು. ಇದನ್ನು ಗಮನಿಸಿದ ಅಕ್ಷಯ್ ನನ್ನ ಬಳಿ ಬಂದು, ನೀನು ಏನೋ ತಪ್ಪು ಮಾಡಿದ್ದೀಯಾ ಅನ್ಸುತ್ತೆ, ನೋಡು ಪೊಲೀಸರು ನಿನ್ನನ್ನೇ ಹುಡುಕಿಕೊಂಡು ಬಂದಿದ್ದಾರೆ. ಶೂಟಿಂಗ್ ಮುಗಿದ ಕೂಡಲೇ ನಿನ್ನನ್ನು ಸ್ಟೇಷನ್‌ಗೆ ಕರೆದೊಯ್ಯುತ್ತಾರೆ ಅಂತ ಗಂಭೀರವಾಗಿ ಸುಳ್ಳು ಹೇಳಿದ್ದರು’ ಎಂದಿದ್ದಾರೆ ಜಾಕ್ವೆಲಿನ್.

ಅಕ್ಷಯ್ ಅವರ ಈ ಮಾತನ್ನು ನಿಜವೆಂದು ನಂಬಿದ್ದ ಜಾಕ್ವೆಲಿನ್, ಇಡೀ ಹಾಡಿನ ಚಿತ್ರೀಕರಣದುದ್ದಕ್ಕೂ ಭಯದಲ್ಲೇ ನಟಿಸಿದ್ದರಂತೆ. ‘ಆ ಪ್ರ್ಯಾಂಕ್ ನನಗೆ ನಿಜಕ್ಕೂ ಆಘಾತ ಉಂಟುಮಾಡಿತ್ತು’ ಎಂದು ಅವರು ನಗುತ್ತಲೇ ನೆನಪಿಸಿಕೊಂಡರು. ಜಾಕ್ವೆಲಿನ್ ಅವರು ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ. ಹಾಗಾಗಿ ಅವರು ಪೊಲೀಸರಿಗೆ ಹೆದರಿರುವ ಸಾಧ್ಯತೆ ಇದೆ.

ರಿಯಾಲಿಟಿ ಶೋನಲ್ಲಿ ಜಾಕ್ವೆಲಿನ್ ಅವರ ಮಾತಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅಕ್ಷಯ್ ಕುಮಾರ್, ‘ನೀವು ಪೊಲೀಸರಿಗೆ ಹೆದರಿದ್ದಲ್ಲ, ಆ ಸಮಯದಲ್ಲಿ ನಿಮ್ಮ ಬಳಿ ಸರಿಯಾದ ವೀಸಾ ಇರಲಿಲ್ಲ. ಅದಕ್ಕೆ ಅಷ್ಟು ಹೆದರಿದ್ದು’ ಎಂದು ಕಾಲೆಳೆದರು. ಬಳಿಕ ಅಕ್ಷಯ್ ಅವರು ತಮ್ಮ ಈ ತಮಾಷೆಗಾಗಿ ಜಾಕ್ವೆಲಿನ್ ಅವರಲ್ಲಿ ಕ್ಷಮೆಯನ್ನೂ ಕೇಳಿದರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಇದೇ ವೇಳೆ ನಟಿ ಭೂಮಿ ಪೆಡ್ನೇಕರ್ ಕೂಡ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಶೂಟಿಂಗ್ ವೇಳೆ ಅಕ್ಷಯ್ ತಮ್ಮನ್ನು ಬೈಕ್‌ನಲ್ಲಿ ಕೂರಿಸಿಕೊಂಡು ವೇಗವಾಗಿ ಹೋಗಿ ಹೇಗೆ ಹೆದರಿಸಿದ್ದರು ಎಂದು ಹಂಚಿಕೊಂಡರು. ಇನ್ನು, ನಿರ್ದೇಶಕಿ ಫರ್ಹಾ ಖಾನ್ ಅವರನ್ನು ಅಕ್ಷಯ್ ಕೆಣಕಿದಾಗ, ‘ನನ್ನ ಜೊತೆ ನೀವು ತೀಸ್ ಮಾರ್ ಖಾನ್ ಮತ್ತು ಜೋಕರ್ ಅಂತಹ ಫ್ಲಾಪ್ ಸಿನಿಮಾಗಳನ್ನು ಮಾಡಿದ್ದೇ ದೊಡ್ಡ ಪ್ರ್ಯಾಂಕ್, ಅದಕ್ಕಿಂತ ದೊಡ್ಡದು ಯಾವುದಿದೆ’ ಎಂದು ತಿರುಗೇಟು ನೀಡಿ ತಮಾಷೆ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version