‘ನಂದ ಗೋಕುಲ’: ತಂದೆ ನಂದನ ನಿಜವಾದ ಆಶಯ ತಿಳಿದು ಬದಲಾದ ಕೇಶವ – Kannada News | Nanda Gokula: Keshav Understands Nanda’s True Intent, Changes Decision

‘ನಂದ ಗೋಕುಲ’ ಧಾರಾವಾಹಿ (Nanda Gokula) ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ ಮತ್ತು ಎಲ್ಲರಿಂದ ಮೆಚ್ಚುಗೆ ಪಡೆದಿದೆ. ಈ ಧಾರಾವಾಹಿಯನ್ನು ಅನೇಕರು ಇಷ್ಟಪಟ್ಟಿದ್ದಾರೆ. ಈಗ ಧಾರಾವಾಹಿಯಲ್ಲಿ ನಂದನ ಅಸಲಿ ಮುಖ ರಿವೀಲ್ ಆಗಿದೆ. ಅಂದರೆ ಆತ ಏನು ಎಂಬುದು ರಿವೀಲ್ ಆಗಿದೆ. ಇದರಿಂದ ಕೇಶವ ತನ್ನ ನಿರ್ಧಾರವನ್ನು ಬದಲಿಸಿದ್ದಾನೆ. ಈ ಎಪಿಸೋಡ್ ಗಮನ ಸೆಳೆಯುವ ರೀತಿಯಲ್ಲಿ ಇದೆ.

ನಂದನು ಮಕ್ಕಳಿಗೆ ಪ್ರೀತಿ ತೋರಿಸುತ್ತಾನೆ ನಿಜ. ಆದರೆ, ಅದೇ ರೀತಿಯಲ್ಲಿ ಆತನಿಗೆ ಮಕ್ಕಳ ಮೇಲೆ ಸಿಟ್ಟು ಕೂಡ ಇದೆ. ಆತ ಪ್ರೀತಿ ತೋರಿಸೋದೇ ಹೀಗೆ. ಇದು ಮನೆಯ ಎಲ್ಲರಿಗೂ ಗೊತ್ತಿದೆ. ಆದರೂ ಕೆಲವು ಘಟನೆ ಕೇಶವನ ಕೋಪಕ್ಕೆ ಕಾರಣ ಆಗಿದೆ. ಆತ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದ. ಆದರೆ, ಈಗ ಆತ ಬದಲಾಗಿದ್ದಾನೆ. ಮನೆ ಬಿಟ್ಟ ಹೋಗುವ ನಿರ್ಧಾರದಿಂದ ಹಿಂದೆ ಬಂದಿದ್ದಾನೆ.

ಕೇಶವ ಹಾಗೂ ಮೀನಾ ಬೆಂಗಳೂರಿಗೆ ತೆರಳಿದ್ದರು. ಈ ವೇಳೆ ಕೆಲವು ಕೆಲಸವನ್ನು ಕೇಶವನಿಗೆ ಹೇಳಲಾಗಿತ್ತು. ಆದರೆ, ಈ ಕೆಲಸವನ್ನು ಅವನು ಮಾಡಲೇ ಇಲ್ಲ. ಇದಕ್ಕೆ ಕಾರಣವೂ ಇದೆ. ಆತನಿಗೆ ಮೀನಾ ಜೊತೆ ಸಮಯ ಕಳೆಯಬೇಕಿತ್ತು. ಹೀಗಾಗಿ, ತಂದೆ ನಂದ ಕೊಟ್ಟ ಕೆಲಸವನ್ನು ಕೇಶವ ಮಾಡಿರಲಿಲ್ಲ. ಇದರಿಂದ ನಂದ ಬೇಸರಗೊಂಡಿದ್ದಾನೆ.

ನಂದನು ಬೇಸರಗೊಂಡ ಬಳಿಕ ಕೇಶವನಿಗೆ ಬಯ್ಯೋಕೆ ಆರಂಭಿಸಿದ. ಈ ಬಯ್ಯುವಿಕೆ ನಂತರ ಮೀನಾ ಮೇಲೂ ಶಿಫ್ಟ್ ಆಯಿತು. ಇದು ಕೇಶವನಿಗೆ ಸಾಕಷ್ಟು ಬೇಸರ ಮೂಡಿಸಿತು. ತನಗೆ ಬಯ್ಯೋದನ್ನು ಆತ ಹೇಗೋ ಸಹಸಿಕೊಳ್ಳುತ್ತಿದ್ದ. ಆದರೆ, ಈಗ ಮೀನಾಗೆ ಬಯ್ಯೋದನ್ನು ನೋಡಿ ಆತ ಸಿಟ್ಟಾಗಿದ್ದಾನೆ.

ನಂದನ ಮಾತಿನಿಂದ ಕೇಶವ ಬೇಸರಗೊಂಡ. ಆತ ಬೇರೆ ಮನೆ ಮಾಡುವ ನಿರ್ಧಾರಕ್ಕೆ ಬಂದ. ನಂತರ ಅಪ್ಪ ಮಾಡೋದು ಒಳ್ಳೆಯದಕ್ಕೆ ಎಂಬ ವಿಷಯ ಅರಿವಾಗಿದೆ. ಹೀಗಾಗಿ, ಬೇರೆ ಮನೆ ಮಾಡಬೇಕು ಎಂಬ ನಿರ್ಧರದಿಂದ ಹಿಂದೆ ಸರಿದಿದ್ದಾನೆ.

ಇದನ್ನೂ ಓದಿ: ನಂದ ಗೋಕುಲ: ಮೀನಾಳ ಒಪ್ಪಿಕೊಂಡ ನಂದ? ಸೊಸೆಗೆ ಆರತಿ ಎತ್ತಿ ಸ್ವಾಗತಿಸಿದ ಮಾವ

‘ನಂದ ಗೋಕುಲ’ ಧಾರಾವಾಹಿ ಕಲರ್ಸ್​​ನ ಟಾಪ್​ ಧಾರಾವಾಹಿಗಳಲ್ಲಿ ಮೊದಲಿದೆ. ಈ ಧಾರಾವಾಹಿ ಟಿಆರ್​​ಪಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡು ಸಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:53 am, Tue, 28 April 26

Source link

ಕರ್ನಾಟಕ ಹವಾಮಾನ ವರದಿ: ಹೀಟ್ ವೇವ್ ಬೆನ್ನಲ್ಲೇ ಆಲಿಕಲ್ಲು ಮಳೆ ಅಬ್ಬರ: ಉತ್ತರ ಒಳನಾಡಿನ ಆರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ! – Kannada News | Karnataka Weather Forecast: Hailstorm in North Karnataka, Thunderstorm elsewhere

ಹೀಟ್ ವೇವ್ ಬೆನ್ನಲ್ಲೇ ಆಲಿಕಲ್ಲು ಮಳೆ ಅಬ್ಬರ

ಬೆಂಗಳೂರು, ಏಪ್ರಿಲ್ 28: ಉಷ್ಣ ಅಲೆಯಿಂದ ಬೇಸತ್ತಿದ್ದ ಕರಾವಳಿಯಲ್ಲಿಂದು ಗುಡುಗು ಸಹಿತ ಮಳೆಯ ಸಾಧ್ಯತೆಯಿದೆ (Karnataka Weather) ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರೊಂದಿಗೆ ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಅಬ್ಬರ ಜೋರಾಗಿಯೇ ಇರಲಿದ್ದು, ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಇನ್ನೂ 2-3 ದಿನಗಳ ಕಾಲ ರಾಜ್ಯದಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಆಲಿಕಲ್ಲು ಮಳೆಯ ಅಲರ್ಟ್​!

ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕಳೆದ ಹಲವು ದಿನಗಳಿಂದ ಹೀಟ್ ವೇವ್ ಅಲರ್ಟ್​ ಇತ್ತು. ಅದರ ಜೊತೆಗೆ ಸಾಧಾರಣ ಮಳೆಯೂ ಅಲ್ಲಲ್ಲಿ ಕಂಡು ಬರುತ್ತಿತ್ತು. ಆದರೆ ಇಂದು ಬಿಸಿ ಬಿಸಿಯಾಗಿದ್ದ ಕಡಲ ನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ.

ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ 40-50 ಕಿ.ಮೀ ವೇಗದ ಗಾಳಿಯ ಜೊತೆಗೆ ಗುಡುಗು ಸಹಿತ ಆಲಿಕಲ್ಲು ಮಳೆ ರಭಸದಿಂದ ಸುರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಉಳಿದಂತೆ ಎಲ್ಲೆಡೆ ಶುಷ್ಕ ಹವಾಮಾನ ಇರಲಿದೆ. ದಕ್ಷಿಣ ಒಳನಾಡಿನ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆ ಸೇರಿದಂತೆ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಮಳೆಯ ಅವಾಂತರ!

ರಾಜ್ಯದಲ್ಲಿ ಬಿಸಿಲ ಬೇಗೆಯ ನಡುವೆಯೇ ವರುಣನ ಅಬ್ಬರ ಜೋರಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ರಾಯಚೂರಿನಲ್ಲಿ ಭಾರೀ ಅವಾಂತರ ಸೃಷ್ಟಿಯಾಗಿದೆ. ಶಿವಮೊಗ್ಗದ ಭದ್ರಾವತಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಗೆ 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ ಬೃಹತ್ ಮರಗಳು ಧರೆಗುರುಳಿವೆ. ಹಲವು ಮನೆಗಳ ಮೇಲ್ಚಾವಣಿ ಹಾರಿಹೋಗಿದ್ದು, ಅಡಕೆ ತೋಟಗಳು ನಾಶವಾಗಿ ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಚಿಕ್ಕಮಗಳೂರಿನ ತರಿಕೆರೆಯಲ್ಲಿ ಮನೆಗಳ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದ್ದರೆ, ರಾಯಚೂರಿನಲ್ಲಿ ಹೆದ್ದಾರಿ ಮೇಲೆ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಬಿಸಿಲು ಮತ್ತು ಮಳೆಯ ಈ ದ್ವಿಮುಖ ಹೊಡೆತಕ್ಕೆ ಜನಸಾಮಾನ್ಯರು ಕಂಗೆಟ್ಟಿದ್ದು, ಸಂತ್ರಸ್ತರು ಸರ್ಕಾರದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ಯುವತಿಯ ಬೆತ್ತಲೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಮನೆ ಮಾಲಕಿ ಸ್ಫೋಟಕ ಹೇಳಿಕೆ – Kannada News | Bengaluru Adugodi Death Mystery: House Owner Reveals Victim Pooja Dutta Often Quarreled With a Male Friend

ಮೃತದೇಹ ಪತ್ತೆಯಾಗಿದ್ದ ಕೊಠಡಿ ಹಾಗೂ ಒಳಚಿತ್ರದಲ್ಲಿ ಪೂಜಾ ದತ್ತಾImage Credit source: tv9

ಬೆಂಗಳೂರು, ಏಪ್ರಿಲ್ 28: ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್‌ನಲ್ಲಿ ಜಾರ್ಖಂಡ್ ಮೂಲದ ಯುವತಿ ಪೂಜಾ ದತ್ತಾ ಅವರ ನಗ್ನ ಮೃತದೇಹ ಪತ್ತೆಯಾದ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಯುವತಿ ಕಳೆದ ಮೂರು ವರ್ಷಗಳಿಂದ ವಾಸವಿದ್ದ ಮನೆಯಲ್ಲೇ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆಯೋ (Suspected Murder Case) ಅಥವಾ ಅನುಮಾನಾಸ್ಪದ ಸಾವೋ (Suspicious Death) ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ (Police Investigation) ನಡೆಸುತ್ತಿದ್ದಾರೆ.

ಮನೆ ಮಾಲೀಕರು ನೀಡಿದ ಮಾಹಿತಿ ಇಲ್ಲಿದೆ

ಮೃತ ಪೂಜಾ ವಾಸವಿದ್ದ ಮನೆಯ ಮಾಲೀಕ ಜಾನಕಮ್ಮ ಅವರು ಈ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ‘ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಳು. ಆಕೆ ಅವಿವಾಹಿತೆಯಾಗಿದ್ದು, ಹೆಚ್ಚಾಗಿ ಹಿಂದಿಯಲ್ಲೇ ಸಂವಹನ ನಡೆಸುತ್ತಿದ್ದಳು. ಆಕೆಯನ್ನು ಭೇಟಿ ಮಾಡಲು ಒಬ್ಬ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅವನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ದುರ್ನಾತ ಬಂದಾಗ ಬೆಳಕಿಗೆ ಬಂದ ಕೃತ್ಯ

ಕಳೆದ ಗುರುವಾರ ದಿನಸಿ ಸಾಮಗ್ರಿ ತರಲು ಕೆಳಗಿಳಿದು ಬಂದಿದ್ದೇ ಪೂಜಾಳನ್ನು ನೋಡಿದ ಕೊನೆಯ ಕ್ಷಣ ಎಂದು ಜಾನಕಮ್ಮ ತಿಳಿಸಿದ್ದಾರೆ. ಏಪ್ರಿಲ್ 27 ರ ಸಂಜೆ ಮನೆಯಿಂದ ತೀವ್ರ ದುರ್ನಾತ ಬರುತ್ತಿದ್ದ ಕಾರಣ, ಪಕ್ಕದ ಮನೆಯ ಯುವಕರು ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಪೊಲೀಸರ ಸಮ್ಮುಖದಲ್ಲಿ ಬಾಗಿಲು ಒಡೆದು ನೋಡಿದಾಗ, ಪೂಜಾ ಬೆತ್ತಲಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆಯಲ್ಲಿ ಬಟ್ಟೆಗಳೆಲ್ಲ ಚೆಲ್ಲಾಪಿಲ್ಲಿಯಾಗಿದ್ದು, ಫ್ಯಾನ್ ಚಾಲನೆಯಲ್ಲೇ ಇತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಠಿತ ಕಂಪನಿಯ ಉದ್ಯೋಗಿ ಪೂಜಾ ದತ್ತ ಅನುಮಾನಾಸ್ಪದ ಸಾವು; ಆಡುಗೋಡಿ ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ!

ಸ್ಥಳಕ್ಕೆ ಧಾವಿಸಿದ ಆಡುಗೋಡಿ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆಗಾಗ ಮನೆಗೆ ಬರುತ್ತಿದ್ದ ಆ ನಿಗೂಢ ಯುವಕ ಯಾರು? ಆತನಿಗೂ ಈ ಸಾವಿಗೂ ಸಂಬಂಧವಿದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಪೂಜಾಳ ಸಾವಿನ ಹಿಂದಿನ ಅಸಲಿ ಸತ್ಯ ಹೊರಬೀಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಂಪ್ ಹತ್ಯೆ ಯತ್ನ: ಶ್ವೇತಭವನದಲ್ಲಿ ಗುಂಡು ಹಾರಿಸಿದ ಶೂಟರ್ ವಿರುದ್ಧ ಅಧಿಕೃತ ದೂರು ದಾಖಲು, ದೋಷಿ ಸಾಬೀತಾದರೆ ಜೀವಾವಧಿ ಶಿಕ್ಷೆ – Kannada News | Trump Assassination Attempt: Cole Allen Charged, Faces Life for White House Dinner Attack

ವಾಷಿಂಗ್ಟನ್,ಏಪ್ರಿಲ್ 28: ಶ್ವೇತಭವನದ ಪತ್ರಿಕಾ ಭೋಜನಕೂಟದ ವೇಳೆ ಗುಂಡಿನ ದಾಳಿ(Firing) ನಡೆಸಿ ಸಂಚಲನ ಮೂಡಿಸಿದ್ದ ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ತೋಮಸ್ ಅಲೆನ್ ವಿರುದ್ಧ ಅಮೆರಿಕದ ಫೆಡರಲ್ ನ್ಯಾಯಾಲಯವು ‘ಅಧ್ಯಕ್ಷರ ಹತ್ಯೆ ಯತ್ನ’ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದೆ. ಈ ಅಪರಾಧಗಳು ಸಾಬೀತಾದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಸೋಮವಾರ ವಾಷಿಂಗ್ಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಅಲೆನ್‌ನನ್ನು ಹಾಜರುಪಡಿಸಲಾಯಿತು. ಹಂಗಾಮಿ ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರ ಪ್ರಕಾರ, ಅಲೆನ್ ಈ ದಾಳಿಗಾಗಿ ವ್ಯವಸ್ಥಿತವಾಗಿ ಸಿದ್ಧತೆ ನಡೆಸಿದ್ದ. ಉನ್ನತ ಶಿಕ್ಷಣ ಪಡೆದ ಅಲೆನ್ ಇಂತಹ ಕೃತ್ಯಕ್ಕೆ ಮುಂದಾಗಿರುವುದು ತನಿಖಾಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.

ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವೀಧರನಾಗಿರುವ ಈತ, ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾನೆ.ಈತ ಒಬ್ಬ ಹವ್ಯಾಸಿ ವಿಡಿಯೋ ಗೇಮ್ ಡೆವಲಪರ್ ಎಂದು ಗುರುತಿಸಿಕೊಳ್ಳುತ್ತಿದ್ದ.

ಮತ್ತಷ್ಟು ಓದಿ: ಟ್ರಂಪ್ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಜಾಗವಿಲ್ಲ: ಪ್ರಧಾನಿ ಮೋದಿ

ದಾಳಿಗೂ ಮುನ್ನ ತನ್ನ ಕುಟುಂಬಕ್ಕೆ ಕಳುಹಿಸಿದ ಪ್ರಣಾಳಿಕೆಯಲ್ಲಿ ತನ್ನನ್ನು ‘ಫ್ರೆಂಡ್ಲಿ ಫೆಡರಲ್ ಅಸಾಸಿನ್’ ಎಂದು ಬಣ್ಣಿಸಿಕೊಂಡಿದ್ದ. ಅಧ್ಯಕ್ಷ ಟ್ರಂಪ್ ಅವರನ್ನು ದುಷ್ಟ ವ್ಯಕ್ತಿ ಎಂದು ಕರೆದಿದ್ದ ಆತ, ಆಡಳಿತದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ.

ಆರೋಪಿಯು ಕ್ಯಾಲಿಫೋರ್ನಿಯಾದಿಂದ ಚಿಕಾಗೋಗೆ ರೈಲಿನಲ್ಲಿ ಪ್ರಯಾಣಿಸಿ, ನಂತರ ವಾಷಿಂಗ್ಟನ್‌ಗೆ ಬಂದಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ಹಿಲ್ಟನ್ ಹೋಟೆಲ್‌ನಲ್ಲಿ ಅತಿಥಿಯಾಗಿ ಚೆಕ್-ಇನ್ ಆಗಿದ್ದನು. ಭದ್ರತಾ ಬ್ಯಾರಿಕೇಡ್‌ಗಳನ್ನು ದಾಟಿ ಓಡಿಬಂದು ಹಲವು ಸುತ್ತು ಗುಂಡು ಹಾರಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಂತಿಮವಾಗಿ ಭದ್ರತಾ ಸಿಬ್ಬಂದಿ ಆತನನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾದರು.

ಅಲೆನ್ ಪರವಾಗಿ ವಕೀಲರು ವಾದ ಮಂಡಿಸಿದ್ದು, ಆತನಿಗೆ ಯಾವುದೇ ಹಳೆಯ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ತಿಳಿಸಿದ್ದಾರೆ. ಆದರೆ, ಆತನ ಪ್ರಣಾಳಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಬರಹಗಳು ಆತನ ಕ್ರೂರ ಉದ್ದೇಶಕ್ಕೆ ಸಾಕ್ಷಿಯಾಗಿವೆ ಎಂದು ಪ್ರಾಸಿಕ್ಯೂಟರ್‌ಗಳು ವಾದಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಕಾ’ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ಇರ್ತಾರೆ ದೀಪಿಕಾ ಪಡಿಯಚ್ಚು – Kannada News | Deepika Padukone Films ‘Raaka’ Action Scenes with Body Double Amid Pregnancy

ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರು ತಾಯಿ ಆಗುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಹೆಣ್ಣು ಮಗುವಿಗೆ ಜನ್ಮನೀಡಿದರು. ಈಗ ಅವರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈಗ ಅವರು ‘ರಾಕಾ’ ಸಿನಿಮಾ ಹಾಗೂ ‘ಕಿಂಗ್’ ಚಿತ್ರಗಳ ಶೂಟ್ ಪೂರ್ಣಗೊಳಿಸಬೇಕಿದೆ. ಈ ಸಿನಿಮಾದಲ್ಲಿ ಬರುವ ಆ್ಯಕ್ಷನ್ ದೃಶ್ಯಗಳಿಗೆ ಬಾಡಿ ಡಬಲ್ ಬಳಕೆ ಮಾಡಲು ತಂಡ ನಿರ್ಧರಿಸಿದೆ.

ಸಾಮಾನ್ಯವಾಗಿ ಪ್ರೆಗ್ನೆಂಟ್ ಆದಾಗ ಮನೆಯಲ್ಲೇ ವಿಶ್ರಾಂತಿ ಪಡೆಯಲು ಎಲ್ಲರೂ ನಿರ್ಧರಿಸುತ್ತಾರೆ. ಆದರೆ, ದೀಪಿಕಾ ಪಡುಕೋಣೆ ಆ ರೀತಿ ಅಲ್ಲ. ಅವರು ಒಪ್ಪಿಕೊಂಡ ಸಿನಿಮಾ ಕೆಲಸಗಳನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ‘ರಾಕಾ’ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳಿವೆ. ಈ ಆ್ಯಕ್ಷನ್ ದೃಶ್ಯಗಳನ್ನು ಅವರಿಂದ ಮಾಡಿಸಲು ತಂಡ ರೆಡಿ ಇಲ್ಲ. ಹೀಗಾಗಿ, ಬಾಡಿ ಡಬಲ್ ಮೊರೆ ಹೋಗಿದೆ.

ಬಾಡಿ ಡಬಲ್ ಚಿತ್ರರಂಗದಲ್ಲಿ ಮೊದಲಿನಿಂದಲೂ ಬಳಕೆಯಲ್ಲಿರುವ ತಂತ್ರ. ರಿಸ್ಕಿ ಆ್ಯಕ್ಷನ್ ದೃಶ್ಯಗಳ ಸಮಯದಲ್ಲಿ ಇದನ್ನು ಬಳಸಲಾಗುತ್ತದೆ. ದೇಹದ ಆಕಾರದಲ್ಲಿ ಹೀರೋ/ಹೀರೋಯಿನ್ ಹೋಲುವ ವ್ಯಕ್ತಿಯನ್ನು ಕರೆತರಲಾಗುತ್ತದೆ. ಇಲ್ಲಿ ಎಲ್ಲಿಯೂ ಮುಖವನ್ನು ತೋರಿಸುವುದಿಲ್ಲ. ರಿಸ್ಕಿ ಸ್ಟಂಟ್​​ಗಳನ್ನು ಕಲಾವಿದರ ಬದಲು ಇವರು ಮಾಡುತ್ತಾರೆ. ಇದರಿಂದ ಸ್ಟಂಟ್ ಮಾಡುವ ವೇಳೆ ಏನಾದರೂ ತೊಂದರೆ ಆದರೆ, ಹೀರೋ/ಹೀರೋಯಿನ್ ಸೇಫ್ ಆಗಿ ಇರುತ್ತಾರೆ. ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಇದರಲ್ಲಿ ಅನೇಕ ದೃಶ್ಯಗಳನ್ನು ಬಾಡಿ ಡಬಲ್ ಮೂಲಕವೇ ಮಾಡಲಾಗಿತ್ತು ಎಂದು ವರದಿ ಆಗಿತ್ತು.

ಇದನ್ನೂ ಓದಿ: ಗರ್ಭಿಣಿ ಆದ ನಂತರವೂ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಿದ ದೀಪಿಕಾ ಪಡುಕೋಣೆ

ಈಗ ಅಟ್ಲಿ ಕೂಡ ಇದೇ ತಂತ್ರದ ಮೊರೆ ಹೋಗಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆ ಅವರು ಕ್ಲೋಸ್​​ಅಪ್ ಶಾಟ್​​ಗಳನ್ನು ಕೊಟ್ಟಿದ್ದಾರೆ. ಸ್ಟಂಟ್ ಮಾಡುವ ದಶ್ಯಗಳಲ್ಲಿ ದೀಪಿಕಾ ಪಡುಕೋಣೆ ಮುಖ ತೋರಿಸುವ ದೃಶ್ಯ ಬಂದರೆ, ವಿಎಫ್​​ಎಕ್ಸ್ ಮೂಲಕ ಎಡಿಟ್ ಮಾಡಲು ನಿರ್ಧರಿಸಲಾಗಿದೆ. ಅಲ್ಲು ಅರ್ಜುನ್ ಅವರು ‘ರಾಕಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಟ್ಲಿ ನಿರ್ದೇಶನ ಇರುವ ಈ ಚಿತ್ರಕ್ಕೆ ತಮಿಳಿನ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today: ಇಂದು ಈ ರಾಶಿಯವರಿಗೆ ಇಂದು ಖರ್ಚು ಹೆಚ್ಚು!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 28, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ಏಕಾದಶಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

ಈ ಶುಭ ದಿನದಂದು ಸೂರ್ಯ ಭಗವಾನರು ಮೇಷ ರಾಶಿಯ ಭರಣಿ ನಕ್ಷತ್ರದಲ್ಲಿ ಸಂಚಾರ ಮಾಡುತ್ತಿದ್ದರೆ, ಚಂದ್ರನು ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ. ಇಂದಿನ ರಾಹುಕಾಲವು ಮಧ್ಯಾಹ್ನ 3:24 ರಿಂದ 4:58 ರವರೆಗೆ ಇದ್ದು, ಸರ್ವಸಿದ್ಧಿ ಸಂಕಲ್ಪ ಕಾಲ ಮತ್ತು ಶುಭಕಾಲವು ಬೆಳಗ್ಗೆ 10:43 ರಿಂದ 12:17 ರವರೆಗೆ ಇರುತ್ತದೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಡಾ. ಗುರೂಜಿ ಶುಭ ಹಾರೈಸಿದ್ದಾರೆ.

 

 

 

Source link

ಖಾತೆದಾರರು ಬಂದ್ರೆ ಮಾತ್ರ ಹಣ ಕೊಡೋದು ಎಂದ ಬ್ಯಾಂಕ್ ಸಿಬ್ಬಂದಿ, ಮೃತ ಸಹೋದರಿಯ ಅಸ್ಥಿಪಂಜರ ಹೊತ್ತು ಬಂದ ವ್ಯಕ್ತಿ – Kannada News | Odisha Man Carries Sister’s Skeleton to Bank for Money: A Tragic Tale of Bank Rules

ಅಸ್ಥಿಪಂಜರ ಹಿಡಿದು ಬ್ಯಾಂಕಿಗೆ ಹೋದ ವ್ಯಕ್ತಿ Image Credit source: NDTV

ಕಿಯೋಂಜಾರ್, ಏಪ್ರಿಲ್ 28:  ವ್ಯಕ್ತಿಯೊಬ್ಬರು ತನ್ನ ಮೃತ ಸಹೋದರಿಯ ಅಸ್ಥಿಪಂಜರ(Skeleton)ವನ್ನೇ ಹೊತ್ತು ಉರಿಯುವ ಬಿಸಿಲಿನಲ್ಲಿ 3 ಕಿಲೋಮೀಟರ್ ನಡೆದು ಬ್ಯಾಂಕಿಗೆ ಹೋಗಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಕಿಯೋಂಜಾರ್ ಜಿಲ್ಲೆಯ ಡಯಾನಾಲಿ ಗ್ರಾಮದ ಜಿತು ಮುಂಡಾ ಅವರ ಸಹೋದರಿ ಕಾಕ್ರಾ ಮುಂಡಾ ಎರಡು ತಿಂಗಳ ಹಿಂದೆ ನಿಧನರಾಗಿದ್ದರು. ಕಾಕ್ರಾ ಅವರ ಪತಿ ಮತ್ತು ಮಗು ಮೊದಲೇ ಮೃತಪಟ್ಟಿದ್ದರಿಂದ, ಜಿತು ಅವರೇ ಏಕೈಕ ಸಂಬಂಧಿಯಾಗಿದ್ದರು. ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪಡೆಯಲು ಜಿತು ಅವರು ಬ್ಯಾಂಕ್ ಮ್ಯಾನೇಜರ್ ಅನ್ನು ಭೇಟಿ ಮಾಡಿದಾಗ, ಖಾತೆದಾರರು ಖುದ್ದಾಗಿ ಬರಬೇಕು ಅಥವಾ ಕಾನೂನುಬದ್ಧ ಉತ್ತರಾಧಿಕಾರಿ ದಾಖಲೆಗಳನ್ನು ನೀಡಬೇಕು ಎಂದು ಬ್ಯಾಂಕ್ ನಿಯಮದ ನೆಪವೊಡ್ಡಿತ್ತು.

ಯಾವುದೇ ಶಿಕ್ಷಣವಿಲ್ಲದ ಮತ್ತು ಬುಡಕಟ್ಟು ಜನಾಂಗದ ಜಿತು ಅವರಿಗೆ ಮರಣ ಪ್ರಮಾಣಪತ್ರ ಪಡೆಯುವ ಅಥವಾ ಉತ್ತರಾಧಿಕಾರ ಪತ್ರದ ಸಂಕೀರ್ಣ ಪ್ರಕ್ರಿಯೆಗಳ ಬಗ್ಗೆ ತಿಳಿದಿರಲಿಲ್ಲ. ಹಣ ಸಿಗದಿದ್ದರೆ ಜೀವನ ನಡೆಸುವುದು ಕಷ್ಟ ಎಂಬ ಭಯದಿಂದ ಜಿತು ಅವರು ಸೋಮವಾರ ನಿರ್ಧಾರವೊಂದನ್ನು ತೆಗೆದುಕೊಂಡರು.

ಬೇರೆ ದಾರಿ ಕಾಣದ ಜಿತು, ಹಳ್ಳಿಯ ಸ್ಮಶಾನಕ್ಕೆ ಹೋಗಿ ಸಹೋದರಿಯ ಅವಶೇಷಗಳನ್ನು ಅಗೆದು ತೆಗೆದಿದ್ದಾರೆ. ಅಸ್ಥಿಪಂಜರವನ್ನು ಬಟ್ಟೆಯಲ್ಲಿ ಸುತ್ತಿ, ಅದನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು 3 ಕಿಲೋಮೀಟರ್ ನಡೆದು ಬ್ಯಾಂಕ್‌ಗೆ ಬಂದಿದ್ದಾರೆ. ಅಸ್ಥಿಪಂಜರವನ್ನು ಬ್ಯಾಂಕ್ ಎದುರು ಇರಿಸಿದಾಗ ಅಲ್ಲಿದ್ದ ಜನರು ಮತ್ತು ಬ್ಯಾಂಕ್ ಸಿಬ್ಬಂದಿ ದಿಗ್ಭ್ರಮೆಗೊಂಡರು. ಈ ದೃಶ್ಯ ಕಂಡ ಗ್ರಾಮಸ್ಥರು ಬ್ಯಾಂಕ್‌ನ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ಓದಿ: ತೆಕ್ಕಲಕೋಟೆ ಉತ್ಖನನದ ವೇಳೆ ಶಿಲಾಯುಗ ಕಾಲದ 3ನೇ ಅಸ್ಥಿಪಂಜರ ಪತ್ತೆ: ಇಲ್ಲಿದೆ ಸಂಪೂರ್ಣ ಮಾಹಿತಿ

ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿ ಜಿತು ಮುಂಡಾ ಅವರನ್ನು ಸಮಾಧಾನಪಡಿಸಿದರು. ಕೇವಲ ದಾಖಲೆಗಳಿಗಾಗಿ ಹಠ ಹಿಡಿಯುವ ಬದಲು, ಸ್ಥಳೀಯ ಸರಪಂಚರ ಮೂಲಕ ಬ್ಯಾಂಕ್ ಪರಿಶೀಲನೆ ನಡೆಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಸದ್ಯ ಪೊಲೀಸರು ಈ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನಿಭಾಯಿಸುವುದಾಗಿ ಭರವಸೆ ನೀಡಿದ್ದಾರೆ ಮತ್ತು ಬ್ಯಾಂಕ್‌ನಿಂದ ಸೂಕ್ತ ವಿವರಣೆ ಕೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಕೇವಲ ಮನೆಯಲ್ಲಿ ಪೂಜೆ ಮಾಡಿದರೆ ಸಾಕಾಗಲ್ಲ, ದೇವಸ್ಥಾನಕ್ಕೂ ಹೋಗಬೇಕು! ಯಾಕೆ ಗೊತ್ತಾ?

ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ದೇವಸ್ಥಾನಕ್ಕೂ ಹೋಗಬೇಕು ಯಾಕೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಅನೇಕರಿಗೆ ಮನೆಯಲ್ಲಿ ಪೂಜೆ ಮಾಡಿದರೆ ಸಾಕಾ ಅಥವಾ ದೇವಾಲಯಕ್ಕೂ ಹೋಗಬೇಕಾ ಎಂಬ ಗೊಂದಲವಿರುತ್ತದೆ. ಮನೆಯಲ್ಲಿ ನಾವು ನಮ್ಮ ತೃಪ್ತಿಗಾಗಿ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತೇವೆ, ಇದು ಆಂತರಿಕ ಆತ್ಮ ಶುದ್ಧಿಗೆ ಸಹಕಾರಿ. ಆದರೆ ದೇವಾಲಯಗಳಲ್ಲಿ ವಿಗ್ರಹಗಳನ್ನು ಶಾಸ್ತ್ರಬದ್ಧವಾಗಿ ಭೂಸ್ಥಾಪನೆ ಮಾಡಿ ಪ್ರತಿಷ್ಠಾಪಿಸಲಾಗಿರುತ್ತದೆ. ಅಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ ಮತ್ತು ಅವು ಪಂಚಭೂತಗಳನ್ನು ನಿಯಂತ್ರಿಸುವ ಶಕ್ತಿ ಕೇಂದ್ರಗಳಾಗಿವೆ.

ದೇವಾಲಯದ ಭೇಟಿ ನಮ್ಮ ದೇಹದ ಹೊರಭಾಗಕ್ಕೆ ವಿಶೇಷ ಪ್ರಭಾವಳಿಯನ್ನು ತರುತ್ತದೆ, ದೈವಾಂಶವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಅಂತರಾತ್ಮವನ್ನು ಶುದ್ಧಿ ಮಾಡಿಕೊಂಡ ನಂತರ ದೇವಸ್ಥಾನಕ್ಕೆ ಹೋಗುವುದು ದೇಹದ ಸಂಪೂರ್ಣ ಶುದ್ಧಿಗೆ ಕಾರಣವಾಗುತ್ತದೆ. ಮನೆ ಪೂಜೆ ಬೇರು ಇದ್ದರೆ, ದೇವಾಲಯವು ಫಲ ನೀಡುವ ವೃಕ್ಷವಿದ್ದಂತೆ. ಹಾಗಾಗಿ, ಮನೆಯ ಪೂಜೆ ಮತ್ತು ದೇವಾಲಯ ಭೇಟಿ ಎರಡೂ ಆಧ್ಯಾತ್ಮಿಕ ಜೀವನಕ್ಕೆ ಅವಶ್ಯಕ, ಒಂದನ್ನು ಬಿಟ್ಟು ಒಂದಿಲ್ಲ.

 

Source link

‘ನನ್ನನ್ನು ಮುಗಿಸ್ತೀನಿ ಅಂತ ಕನಸಲ್ಲೂ ಅಂದ್ಕೋಬೇಡಿ’; ಸುದೀಪ್ ನೇರ ಎಚ್ಚರಿಕೆ – Kannada News | Kiccha Sudeep’s Witty Warning at KD Press Meet: “Don’t Even Dream of Finishing Me!

ಕಿಚ್ಚ ಸುದೀಪ್ ಅವರು (Sudeep) ಯಾವುದೇ ಸುದ್ದಿಗೋಷ್ಠಿಗೆ ತೆರಳಿದರೂ ಅದಕ್ಕೊಂದು ವಿಶೇಷ ಕಳೆ ಬರುತ್ತದೆ. ಅವರು ಆಡುವ ಖಡಕ್ ಮಾತುಗಳನ್ನು ಕೇಳಲು ಫ್ಯಾನ್ಸ್ ಕಾದಿರುತ್ತಾರೆ. ಈಗ ಅವರು ‘ಕೆಡಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ. ಈ ವೇಳೆ ತಮ್ಮನ್ನು ಮುಗಿಸುವ ಆಲೋಚನೆ ಮಾಡಬೇಡಿ ಎಂದು ಗಂಭೀರ ಹಾಗೂ ಹಾಸ್ಯ ಮಿಶ್ರಣದಲ್ಲಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಕಿಚ್ಚ ಸುದೀಪ್ ಅವರು ‘ಕೆಡಿ’ ಸಿನಿಮಾದಲ್ಲಿ ‘ಕಾಲ ಭೈರವ’ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಿಲೀಸ್​​ಗೂ ಮೊದಲು ಸುದೀಪ್ ಅವರನ್ನು ವೇದಿಕೆ ಮೇಲೆ ತರೋದಾಗಿ ಈ ಮೊದಲು ಪ್ರೇಮ್ ಹೇಳಿದ್ದರು. ಅದರಂತೆ, ಸುದೀಪ್ ಅವರನ್ನು ವೇದಿಕೆಗೆ ಕರೆತರುವ ಕೆಲಸ ಆಗಿದೆ. ಆಗ ಅವರಿಗೆ ವಿವಿಧ ರೀತಿಯ ಪ್ರಶ್ನೆಗಳು ಎದುರಾಗಿವೆ.

ಪತ್ರಕರ್ತರೊಬ್ಬರು ‘ಕೊನೆಯ ಪ್ರಶ್ನೆ, ಮುಗಿಸಿಬಿಡ್ತೀನಿ’ ಎಂದು ಹೇಳಿದರು. ಆಗ ಸುದೀಪ್ ಅವರು ‘ಯಾರನ್ನು ಮುಗಿಸುತ್ತೀರಾ? ನನ್ನನ್ನು ಮುಗಿಸ್ತೀನಿ ಅಂತ ಕನಸಲ್ಲೂ ಅಂದ್ಕೋಬೇಡಿ ’ ಎಂದು ಹೇಳಿದರು. ಆಗ ಅಲ್ಲಿದ್ದವರು ಇದಕ್ಕೆ ನಕ್ಕಿದ್ದಾರೆ. ಸುದೀಪ್ ಅವರು ಪ್ರತಿ ಸುದ್ದಿಗೋಷ್ಠಿಯಲ್ಲೂ ಈ ರೀತಿಯಲ್ಲಿ ಫನ್ ಆಗಿ ಮಾತನಾಡುತ್ತಾ ಇರುತ್ತಾರೆ. ಈ ವಿಡಿಯೋಗಳು ವೈರಲ್ ಆಗುತ್ತವೆ. ಬಿಗ್ ಬಾಸ್ ವೇದಿಕೆಯಲ್ಲೂ ಅವರು ಈ ರೀತಿ ಮಾತುಗಳನ್ನು ಆಡುತ್ತಾರೆ. ಇದಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ.

ಇದನ್ನೂ ಓದಿ: ಕೆಡಿ ಸಿನಿಮಾ ಸುದ್ದಿಗೋಷ್ಠಿ: ಎಷ್ಟೇ ಕೇಳಿದರೂ ಆ ವಿಷಯ ಬಾಯಿ ಬಿಡಲಿಲ್ಲ ಕಿಚ್ಚ ಸುದೀಪ್

‘ಕೆಡಿ’ ಸಿನಿಮಾ ಏಪ್ರಿಲ್ 30ರಂದು ರಿಲೀಸ್ ಆಗುತ್ತಿದೆ. ಮೇ 1ರಂದು ಕಾರ್ಮಿಕ ದಿನಾಚರಣೆ ಪ್ರಯುಕ್ತ ಸರ್ಕಾರಿ ರಜೆ ಇದೆ. ಹೀಗಾಗಿ, ಈ ದಿನ ಸಿನಿಮಾಗೆ ಸಹಕಾರಿ ಆಗಲಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ, ಶಿಲ್ಪಾ ಶೆಟ್ಟಿ, ಕಿಚ್ಚ ಸುದೀಪ್, ಸಂಜಯ್ ದತ್, ರವಿಚಂದ್ರನ್, ರಮೇಶ್ ಅರವಿಂದ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ವಿವಾದಗಳ ಮೂಲಕ ಸುದ್ದಿ ಆಗಿದೆ. ಪ್ರೇಮ್ ನಿರ್ದೇಶನದ ಈ ಚಿತ್ರಕ್ಕೆ, ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ. ಈ ಚಿತ್ರದ ಹಾಡು ಹಾಗೂ ಟ್ರೇಲರ್ ವಿವಾದಕ್ಕೆ ಕಾರಣ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಕೆ ಶಿವಕುಮಾರ್ ವಾಪಸಾಗ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಬಣ ದೆಹಲಿಗೆ! ಕಾಂಗ್ರೆಸ್​ನಲ್ಲಿ ಜೋರಾಯ್ತು ಡೆಲ್ಲಿ ಟೂರ್ ಪಾಲಿಟಿಕ್ಸ್ – Kannada News | Karnataka Congress Leadership Row: Siddaramaiah Camp Rushes to Delhi After DK Shivakumar’s Visit

ಬೆಂಗಳೂರು, ಏಪ್ರಿಲ್ 28: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಕಳೆದ ಕೆಲವು ತಿಂಗಳುಗಳಿಂದ ಸದ್ದಿಲ್ಲದೆ ನಡೆಯುತ್ತಿದ್ದ ‘ಕುರ್ಚಿ ಕಿತ್ತಾಟ’ ಈಗ ಮತ್ತೆ ಬಹಿರಂಗಗೊಳ್ಳುವ ಹಾಗೂ ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ದೆಹಲಿ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಆಪ್ತ ಬಣ ದೆಹಲಿಗೆ ದೌಡಾಯಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ದೆಹಲಿಯಲ್ಲಿ ಸಿದ್ದು ಬಣದ ಸಂಚಲನ

ಡಿಕೆಶಿ ಅವರ ಮೂರು ದಿನಗಳ ದೆಹಲಿ ವಾಸ್ತವ್ಯದ ಬೆನ್ನಲ್ಲೇ ಸಚಿವರಾದ ಸತೀಶ್ ಜಾರಕಿಹೊಳಿ, ಹೆಚ್.ಸಿ. ಮಹದೇವಪ್ಪ ಮತ್ತು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೈಕಮಾಂಡ್ ಭೇಟಿಗೆ ತೆರಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಸತೀಶ್ ಜಾರಕಿಹೊಳಿ, ‘ಪಕ್ಷದಲ್ಲಿನ ಗೊಂದಲಗಳನ್ನು ತಕ್ಷಣ ಬಗೆಹರಿಸಿ ಒಂದು ಸ್ಪಷ್ಟತೆ (Clarity) ಕೊಡಿ’ ಎಂದು ಮನವಿ ಮಾಡಿದ್ದಾರೆ. ಇದು ನಾಯಕತ್ವ ಬದಲಾವಣೆಯ ಚರ್ಚೆಗೆ ಹೊಸ ವೇಗ ನೀಡಿದೆ.

ಡಿಕೆಶಿ ಬರ್ತ್‌ಡೇ ಗಿಫ್ಟ್ ನಿರೀಕ್ಷೆ

ಇತ್ತ ‘ಬಂಡೆ’ ಬಣದಲ್ಲಿ ಹೊಸ ಆಶಾಭಾವನೆ ಮೂಡಿದೆ. ಮೇ 15ಕ್ಕೆ ಡಿಕೆ ಶಿವಕುಮಾರ್ ಜನ್ಮದಿನವಿದ್ದು, ಅಷ್ಟರೊಳಗೆ ಹೈಕಮಾಂಡ್‌ನಿಂದ ಶುಭ ಸುದ್ಧಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರ ಬೆಂಬಲಿಗರಿದ್ದಾರೆ. ಶಾಸಕರಾದ ಕುಣಿಗಲ್ ರಂಗನಾಥ್ ಮತ್ತು ಅಶೋಕ್ ಪಟ್ಟಣ್ ಅವರು ಮೇ ಎರಡನೇ ವಾರದಲ್ಲಿ ‘ಸಿಹಿ ಸುದ್ಧಿ’ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದ್ದರೆ ಡಿಕೆಶಿಗೆ ಅವಕಾಶ ಸಿಗಲಿ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಕೂಡ ದಾಳ ಉರುಳಿಸಿದ್ದಾರೆ.

ಹೆಚ್‌ಡಿಕೆ ಹೊಸ ಬಾಂಬ್

ಕಾಂಗ್ರೆಸ್‌ನ ಈ ಆಂತರಿಕ ಕಚ್ಚಾಟದ ನಡುವೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘ಸುಮಾರು 40 ರಿಂದ 50 ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗಲು ಟಿಕೆಟ್ ರೆಡಿ ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಅಸ್ಥಿರತೆಯ ಭೀತಿ ಎದುರಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದ್ದಾರೆ.

ಮೇ 4ರ ರಿಸಲ್ಟ್ ಬಳಿಕ ಹೈಡ್ರಾಮಾ?

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೇ 4ರಂದು ಹೊರಬೀಳಲಿದ್ದು, ಅದರ ನಂತರ ಹೈಕಮಾಂಡ್ ಕರ್ನಾಟಕದ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ವರಿಷ್ಠರು ಮಧ್ಯಪ್ರವೇಶಿಸದಿದ್ದರೆ ಡಿಕೆಶಿ ಅವರ ಮುಂದಿನ ನಡೆ ಏನು ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version