DC vs RCB: ಅತಿ ಕಡಿಮೆ ಮೊತ್ತ; ಐಪಿಎಲ್‌ನಲ್ಲಿ ಮುಜುಗರದ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್ – Kannada News | Delhi Capitals’ Humiliating IPL Record: Lowest Powerplay Score Against RCB

ಕೇವಲ ಎರಡೇ ಎರಡು ದಿನಗಳ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಯಾವ ಮೈದಾನದಲ್ಲಿ ರನ್​ಗಳ ಮಳೆ ಹರಿಸಿ ಐಪಿಎಲ್‌ (IPL) ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ್ದ ದಾಖಲೆ ಬರೆದಿತ್ತೋ. ಇದೀಗ ಅದೇ ಮೈದಾನದಲ್ಲಿ ಅತ್ಯಂತ ಹೀನಾಯ ದಾಖಲೆಯೊಂದನ್ನು ಬರೆದಿದೆ. ಏಪ್ರಿಲ್ 25 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಇದೇ ಅರುಣ್ ಜೇಟ್ಲಿ ಮೈದಾನದಲ್ಲಿ ಬರೋಬ್ಬರಿ 264 ರನ್ ಬಾರಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ತಂಡ ಕಲೆಹಾಕಿದ್ದ ಅತ್ಯಧಿಕ ಮೊತ್ತವಾಗಿತ್ತು. ಹೀಗಾಗಿ ಆರ್​ಸಿಬಿ (RCB) ವಿರುದ್ಧದ ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಆರ್​ಸಿಬಿ ವೇಗಿಗಳ ಸಾಂಘಿಕ ದಾಳಿಗೆ ಡೆಲ್ಲಿ ಬ್ಯಾಟರ್​ಗಳ ಬಳಿ ಉತ್ತರವಿಲ್ಲದಂತ್ತಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲ 3 ಓವರ್​ಗಳಲ್ಲಿಯೇ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆ ಸಮಯಕ್ಕೆ ತಂಡ ಕಲೆಹಾಕಿದ್ದು, ಕೇವಲ 7 ರನ್. ಈ 7 ರನ್​ಗಳಲ್ಲಿ ಸ್ಟಬ್ಸ್ ಬಾರಿಸಿದ ಬೌಂಡರಿಯೂ ಸೇರಿತ್ತು. ಅಂದರೆ ಸ್ಟಬ್ಸ್ 5 ರನ್ ಕಲೆಹಾಕಿದನ್ನು ಬಿಟ್ಟರೆ, ಉಳಿದ 4 ಬ್ಯಾಟ್ಸ್‌ಮನ್​ಗಳಲ್ಲಿ ಇಬ್ಬರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ.

13 ರನ್​ಗೆ 6 ವಿಕೆಟ್

ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಸಾಹಿಲ್ ಪರಾಖ್ ಭುವಿ ಎಸೆತದಲ್ಲಿ ಖಾತೆ ತೆರೆಯದೆ ಕ್ಲೀನ್ ಬೌಲ್ಡ್ ಆದರೆ, ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಕೇವಲ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಸಮೀರ್ ರಿಜ್ವಿ ಕೂಡ ಖಾತೆ ತೆರೆಯದೆ ಔಟಾದರು. ಸ್ಟಬ್ಸ್ 5 ರನ್ ಬಾರಿಸಿ ಔಟಾದರೆ, ನಿತೀಶ್ ರಾಣಾ ಅವರ ಇನ್ನಿಂಗ್ಸ್ ಕೂಡ 1 ರನ್​ಗಳಿಗೆ ಅಂತ್ಯವಾಯಿತು. ನಾಯಕ ಅಕ್ಷರ್ ಪಟೇಲ್​ಗೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅಂದರೆ 6 ಬ್ಯಾಟ್ಸ್‌ಮನ್​ಗಳಲ್ಲಿ ಮೂವರಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಡೆಲ್ಲಿ ಪವರ್‌ಪ್ಲೇನಲ್ಲಿ ಕೇವಲ 13 ರನ್ ಬಾರಿಸಿ 6 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ನಾಚಿಕೆಗೇಡಿನ ದಾಖಲೆ ಬರೆಯಿತು.

DC vs RCB IPL 2026 Live Score: ಆರ್​ಸಿಬಿ ಮಾರಕ ದಾಳಿ; 75 ರನ್​ಗೆ ಡೆಲ್ಲಿ ಆಲೌಟ್

ನಾಚಿಕೆಗೇಡಿನ ದಾಖಲೆ ಬರೆದ ಡೆಲ್ಲಿ

ವಾಸ್ತವವಾಗಿ ಪವರ್‌ಪ್ಲೇನಲ್ಲಿ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿದ ತಂಡವೆಂಬ ಬೇಡದ ದಾಖಲೆ ಡೆಲ್ಲಿ ಪಾಲಾಗಿದೆ. ಪವರ್‌ಪ್ಲೇನಲ್ಲಿ ಕೇವಲ 13 ರನ್ ಗಳಿಸಿದ ಡೆಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು. ತಂಡವೊಂದು ಇಷ್ಟು ಕಡಿಮೆ ರನ್ ಗಳಿಸಿ ಪವರ್‌ಪ್ಲೇನಲ್ಲಿ ಐದು ವಿಕೆಟ್‌ಗಳಿಗಿಂತ ಹೆಚ್ಚು ಕಳೆದುಕೊಂಡಿರುವುದು ಇದೇ ಮೊದಲು. ಇದಕ್ಕೂ ಮೊದಲು ಕೊಚ್ಚಿ ಟಸ್ಕರ್ಸ್​ ತಂಡ 2011 ರ ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ 29 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದು, ಇದುವರೆಗಿನ ದಾಖಲೆಯಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೆಚ್ಚು ಯೋಚನೆ ಮಾಡುವವರಿಗೆ ಬಿಪಿ ಬೇಗ ಬರುತ್ತಾ? ಈ ಸಮಸ್ಯೆಯನ್ನು ತಡೆಗಟ್ಟುವುದು ಹೇಗೆ? – Kannada News | Does Overthinking Increase Blood Pressure? Anxiety & Hypertension Link

ಇಂದಿನ ವೇಗದ ಜೀವನಶೈಲಿಯಲ್ಲಿ ಹೆಚ್ಚು ಯೋಚನೆ (ಓವರ್‌ಥಿಂಕಿಂಗ್) ಮತ್ತು ಮಾನಸಿಕ ಒತ್ತಡ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಸಣ್ಣ ವಿಷಯಗಳನ್ನೂ ಹೆಚ್ಚು ಆಲೋಚಿಸುವ ಅಭ್ಯಾಸದಿಂದ ಮನಸ್ಸಿನ ಮೇಲೆ ಒತ್ತಡ ಹೆಚ್ಚುತ್ತದೆ. ತಜ್ಞರ ಪ್ರಕಾರ, ಈ ಅಭ್ಯಾಸವು ಕೇವಲ ಮಾನಸಿಕ ಆರೋಗ್ಯಕ್ಕಷ್ಟೇ ಅಲ್ಲ, ದೈಹಿಕ ಆರೋಗ್ಯಕ್ಕೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಹೌದು, ಇದು ಕೆಲವೊಮ್ಮೆ ಅರಿವಿಗೆ ಬಾರದಿರಬಹುದು. ಹಾಗಾದರೆ ಹೆಚ್ಚು ಯೋಚನೆ ಮಾಡುವುದಕ್ಕೂ ಬಿಪಿ (BP) ಬರುವುದಕ್ಕೂ ಸಂಬಂಧವಿದೆಯೇ ಓವರ್‌ಥಿಂಕ್ ಮಾಡುವುದನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಹೆಚ್ಚು ಯೋಚನೆ ಮತ್ತು ರಕ್ತದೊತ್ತಡಕ್ಕಿರುವ ಸಂಬಂಧ;

ವೈದ್ಯರ ಪ್ರಕಾರ, ವ್ಯಕ್ತಿ ನಿರಂತರವಾಗಿ ಒತ್ತಡ ಮತ್ತು ಚಿಂತೆಗೊಳಗಾದಾಗ ದೇಹದಲ್ಲಿ ಕೆಲವು ಹಾರ್ಮೋನ್‌ಗಳು ಸಕ್ರಿಯವಾಗುತ್ತವೆ. ಇವು ಹೃದಯದ ಬಡಿತವನ್ನು ಹೆಚ್ಚಿಸಿ ರಕ್ತದ ಸಂಚಾರವನ್ನು ಪ್ರಭಾವಿತಗೊಳಿಸುತ್ತದೆ. ಇದರ ಪರಿಣಾಮವಾಗಿ ರಕ್ತದ ಒತ್ತಡ (ಬ್ಲಡ್ ಪ್ರೆಶರ್) ಹೆಚ್ಚುವ ಸಾಧ್ಯತೆ ಇರುತ್ತದೆ. ಈ ಸ್ಥಿತಿ ದೀರ್ಘಕಾಲ ಮುಂದುವರಿದರೆ ಹೃದಯದ ಆರೋಗ್ಯಕ್ಕೂ ಅಪಾಯ ಉಂಟುಮಾಡಬಹುದು. ಆದರೆ ಪ್ರತಿ ವ್ಯಕ್ತಿಯ ದೇಹ ವಿಭಿನ್ನವಾಗಿರುವುದರಿಂದ ಪರಿಣಾಮವೂ ವಿಭಿನ್ನವಾಗಿರುತ್ತದೆ. ಕೆಲವರಿಗೆ ತಕ್ಷಣವೇ ಪರಿಣಾಮ ಕಾಣಿಸದಿದ್ದರೂ, ದೀರ್ಘಕಾಲದ ಒತ್ತಡದಿಂದ ಸಮಸ್ಯೆ ಗಂಭೀರವಾಗಬಹುದು. ಆದ್ದರಿಂದ ಮಾನಸಿಕ ಒತ್ತಡವನ್ನು ನಿಯಂತ್ರಿಸುವುದು ಅತ್ಯಂತ ಅಗತ್ಯ.

ಇದನ್ನೂ ಓದಿ: ಬೇಸಿಗೆಯಲ್ಲಿ ಬಿಪಿ ಸಾಮಾನ್ಯವಾಗಿದ್ದರೂ ಹೃದಯಕ್ಕೆ ಅಪಾಯ: ಮಾಸ್ಕ್ಡ್ ಹೈಪರ್ಟೆನ್ಷನ್ ಬಗ್ಗೆ ವೈದ್ಯರ ಎಚ್ಚರಿಕೆ

ಹೆಚ್ಚು ಯೋಚನೆ ಮಾಡುವುದನ್ನು ಹೇಗೆ ನಿಯಂತ್ರಿಸಬೇಕು?

ತಜ್ಞರು ಸಲಹೆ ನೀಡುವಂತೆ, ದಿನಚರಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡುವುದು ಮುಖ್ಯ. ಧ್ಯಾನ, ಯೋಗ ಮತ್ತು ವ್ಯಾಯಾಮ ಮನಸ್ಸನ್ನು ಶಾಂತಗೊಳಿಸಲು ಸಹಾಯಕ. ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡುವುದು ಒತ್ತಡವನ್ನು ಕಡಿಮೆ ಮಾಡುತ್ತದೆ. ಅದರ ಜೊತೆಗೆ ಸರಿಯಾಗಿ ನಿದ್ರೆ ಮಾಡುವುದು ಬಹಳ ಮುಖ್ಯ. ನಿದ್ರೆ ಕೊರತೆಯಿಂದ ದೇಹ ಮತ್ತು ಮನಸ್ಸು ಎರಡೂ ದಣಿವಿಗೆ ಒಳಗಾಗುತ್ತವೆ. ನಕಾರಾತ್ಮಕ ಚಿಂತನೆಗಳಿಂದ ದೂರವಿದ್ದು, ಹಿತಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಅದರೊಂದಿಗೆ, ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುವುದು ದೊಡ್ಡ ತಪ್ಪು. ಹೆಚ್ಚು ಯೋಚನೆ ದೇಹದ ಮೇಲೂ ಒತ್ತಡ ತರುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ತಜ್ಞರ ಸಲಹೆ ಪಡೆಯುವುದು ಮತ್ತು ಮನಸ್ಸನ್ನು ಸಮತೋಲನದಲ್ಲಿಡುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ಅಶ್ಲೀಲ ಹಾಡಿನ ವಿವಾದ: ಮಹಿಳಾ ಆಯೋಗದ ಮುಂದೆ ಕ್ಷಮೆ ಕೇಳಿದ ಸಂಜಯ್ ದತ್ – Kannada News | Sanjay Dutt apologizes to National Commission for Women over KD Movie song controversy

ಕನ್ನಡದ ಪ್ಯಾನ್-ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ (KD: The Devil) ಬಿಡುಗಡೆಗೂ ಮುನ್ನ ಸಖತ್ ವಿವಾದ ಮಾಡಿಕೊಂಡಿದೆ. ಈ ಸಿನಿಮಾದ ‘ಸರ್ಕೆ ಚುನಾರ್ ತೇರಿ ಸರ್ಕೆ’ ಹಾಡಿನಲ್ಲಿನ ಅಶ್ಲೀಲ ಸಾಹಿತ್ಯದ ಕಾರಣಕ್ಕೆ ಭಾರಿ ಟೀಕೆ ವ್ಯಕ್ತವಾಯಿತು. ಈ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಅವರು ಸೋಮವಾರ (ಏಪ್ರಿಲ್ 27) ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾಗಿ ಕ್ಷಮೆ ಯಾಚಿಸಿದ್ದಾರೆ.

ಸೋಮವಾರ ಮಧ್ಯಾಹ್ನ ತಮ್ಮ ವಕೀಲರೊಂದಿಗೆ ಮಹಿಳಾ ಆಯೋಗದ ಕಚೇರಿಗೆ ಆಗಮಿಸಿದ ಸಂಜಯ್ ದತ್ ಅವರು ಹಾಡಿನ ಸಾಹಿತ್ಯದ ಬಗ್ಗೆ ತಮಗೆ ಮೊದಲೇ ಅರಿವಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ನಟನ ಪರ ವಕೀಲರು ಮಾತನಾಡಿ, ‘ಸಂಜಯ್ ದತ್ ಅವರು ಮಹಿಳೆಯರ ಮತ್ತು ಆಯೋಗದ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಹಾಡನ್ನು ರೆಕಾರ್ಡ್ ಮಾಡುವಾಗ ಅದು ಬೇರೆ ಭಾಷೆಯಲ್ಲಿದ್ದ ಕಾರಣ ಸಾಹಿತ್ಯದ ಅರ್ಥ ತಮಗೆ ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೂ, ಘಟನೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ. ಇದೇ ವೇಳೆ ಅವರು ಸ್ವಯಂಪ್ರೇರಿತರಾಗಿ ಬುಡಕಟ್ಟು ಸಮುದಾಯದ 50 ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.

ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಈ ಹಾಡಿನಲ್ಲಿ ನೋರಾ ಫತೇಹಿ ಮತ್ತು ಸಂಜಯ್ ದತ್ ಕಾಣಿಸಿಕೊಂಡಿದ್ದರು. ಹಾಡಿನ ಆರಂಭಿಕ ಸಾಲುಗಳು ಲೈಂಗಿಕತೆಯನ್ನು ಬಿಂಬಿಸುವ ದ್ವಂದ್ವಾರ್ಥದಿಂದ ಕೂಡಿದ್ದು, ಅತ್ಯಂತ ಅಶ್ಲೀಲವಾಗಿವೆ ಎಂದು ಆಕ್ಷೇಪ ವ್ಯಕ್ತವಾಗಿತ್ತು. ಹಾಡಿನ ನೃತ್ಯ ಸಂಯೋಜನೆಯೂ ಕೂಡ ಆಕ್ಷೇಪಾರ್ಹವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು.

ರಾಷ್ಟ್ರೀಯ ಮಹಿಳಾ ಆಯೋಗವು ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈ ಹಾಡು ಭಾರತೀಯ ನ್ಯಾಯ ಸಂಹಿತೆ, ಐಟಿ ಕಾಯ್ದೆ ಮತ್ತು ಪೋಕ್ಸೋ (POCSO) ಕಾಯ್ದೆಗಳ ನಿಬಂಧನೆಗಳನ್ನು ಉಲ್ಲಂಘಿಸುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಆಯೋಗ ಹೇಳಿತ್ತು.

ಇದನ್ನೂ ಓದಿ: ‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ ನೋಡಿ..

ವಿವಾದ ತಾರಕಕ್ಕೇರುತ್ತಿದ್ದಂತೆ, ಹಾಡನ್ನು ಬಿಡುಗಡೆ ಮಾಡಿದ್ದ ‘ಆನಂದ್ ಆಡಿಯೋ’ ಸಂಸ್ಥೆಯು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಲಿರಿಕಲ್ ವಿಡಿಯೋಗಳನ್ನು ಯೂಟ್ಯೂಬ್‌ನಿಂದ ತೆಗೆದುಹಾಕಿತು. ನಟಿ ನೋರಾ ಫತೇಹಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿ, ‘ನಾನು ಇಂತಹ ಸಾಹಿತ್ಯವನ್ನು ಬೆಂಬಲಿಸುವುದಿಲ್ಲ. ಪ್ರತಿರೋಧದ ನಂತರ ಚಿತ್ರತಂಡ ಹಾಡನ್ನು ತೆಗೆದುಹಾಕಿರುವುದು ಸಮಾಧಾನ ತಂದಿದೆ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಖ್ಯಮಂತ್ರಿ ಹುದ್ದೆಗಾಗಿ 50 ಶಾಸಕರು ದೆಹಲಿಗೆ ತೆರಳಲು ಸಿದ್ಧತೆ: ಹೊಸ ಬಾಂಬ್ ಹಾಕಿದ ಹೆಚ್.ಡಿ. ಕುಮಾರಸ್ವಾಮಿ – Kannada News | HD Kumaraswamy Criticises Congress over Neglected Public Issues

ಕೋಲಾರ, ಏ.27: ಜಿಲ್ಲೆ ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಹುದ್ದೆಗಾಗಿ 40 ರಿಂದ 50 ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂದು ಅವರು ಹೇಳಿದರು. ಆದರೆ, ರಾಜ್ಯದಲ್ಲಿ ಈಗ ಜನ ಎದುರಿಸುತ್ತಿರುವ ಕುಡಿಯುವ ನೀರು ಮತ್ತು ಬಿಸಿಲಿನಂತಹ ಗಂಭೀರ ಸಮಸ್ಯೆಗಳ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು. ಅಳಂದದ ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಒಂದು ರೂಪಾಯಿಯೂ ಇಲ್ಲ, ಪಿಡಿಓಗಳು ಲಭ್ಯರಿಲ್ಲ ಎಂದು ಬಿ.ಆರ್. ಪಾಟೀಲ್ ಹೇಳಿದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎಂದು ಅವರು ವಿವರಿಸಿದರು. ಮಾಲಿಕಲ್ ಮಳೆಯಿಂದ ದ್ರಾಕ್ಷಿ, ಬಾಳೆ ಮತ್ತು ಮಾವು ಬೆಳೆಗಳು ನಾಶವಾಗಿದ್ದರೂ, ಯಾರೊಬ್ಬರೂ ಮುಖ್ಯಮಂತ್ರಿಗಳ ಬಳಿ ಪರಿಹಾರ ಕೇಳಿಲ್ಲ ಎಂದು ಕುಮಾರಸ್ವಾಮಿ ದೂರಿದರು. ಜನಪ್ರತಿನಿಧಿಗಳು ಜನರ ಕಷ್ಟಗಳ ಬಗ್ಗೆ ಚಿಂತಿಸದೆ, ಅಧಿಕಾರದ ಹಿಂದೆ ಓಡುತ್ತಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

DC vs RCB: W,W,W,W,W,W..! ಕೇವಲ 8 ರನ್​ಗೆ 6 ವಿಕೆಟ್ ಕಳೆದುಕೊಂಡ ಡೆಲ್ಲಿ – Kannada News | IPL 2026: Delhi Capitals Collapse! RCB Pace Attack Destroys DC in Powerplay, 6 Wickets Down

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಐಪಿಎಲ್ 2026 ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಕೇವಲ 8 ರನ್​ಗಳಿಗೆ ಪ್ರಮುಖ 6 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಆರ್​ಸಿಬಿ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಹೇಜಲ್‌ವುಡ್ ಅವರ ದಾಳಿಗೆ ತತ್ತರಿಸಿ ಹೋಗಿರುವ ಡೆಲ್ಲಿ ಬ್ಯಾಟರ್​ಗಳಿಗೆ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಡೆಲ್ಲಿ ತಂಡ ಪವರ್‌ಪ್ಲೇನಲ್ಲಿ ಅಂದರೆ ಮೊದಲ 6 ಓವರ್​ಗಳಲ್ಲಿ ಕೇವಲ 13 ರನ್ ಕಲೆಹಾಕಿ ಬರೋಬ್ಬರಿ 6 ವಿಕೆಟ್​ಗಳನ್ನು ಕಳೆದುಕೊಂಡಿದೆ.

Source link

DC vs RCB: ರಾಹುಲ್ ವಿರುದ್ಧ ಸೇಡು ತೀರಿಸಿಕೊಂಡ ಹೇಜಲ್‌ವುಡ್; ವಿಡಿಯೋ – Kannada News | IPL 2026: DC vs RCB Match 39 Delhi’s Dramatic Collapse, Hazlewood Dominates

ಐಪಿಎಲ್ 2026 ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಮೊದಲ 3 ಓವರ್​ಗಳಲ್ಲೇ ಪ್ರಮುಖ 5 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭುವನೇಶ್ವರ್ ಕುಮಾರ್ ಹಾಗೂ ಹೇಜಲ್‌ವುಡ್ ಅವರ ದಾಳಿಗೆ ತತ್ತರಿಸಿ ಹೋಗಿರುವ ಡೆಲ್ಲಿ ಬ್ಯಾಟರ್​ಗಳಿಗೆ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ.

ಅದರಲ್ಲೂ ಇದೇ ಉಭಯ ತಂಡಗಳ ನಡುವೆ ಏಪ್ರಿಲ್ 18 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ದೆಹಲಿ 6 ವಿಕೆಟ್‌ಗಳಿಂದ ಆರ್​​ಸಿಬಿಯನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್, ಆರ್​ಸಿಬಿ ವಿರುದ್ಧ ಗೆಲುವಿನ ಅರ್ಧಶತಕ ಬಾರಿಸಿದ್ದರು. ಅಲ್ಲದೆ ಆ ಪಂದ್ಯದಲ್ಲಿ ಅವರು ಹೇಜಲ್‌ವುಡ್ ವಿರುದ್ಧ ಸರಾಗವಾಗಿ ರನ್ ಕಲೆಹಾಕಿದ್ದರು. ತವರು ಮೈದಾನದ ಲಾಭ ಪಡೆದುಕೊಂಡಿದ್ದ ರಾಹುಲ್ ಹೇಜಲ್‌ವುಡ್ ಬೌಲಿಂಗ್​ನಲ್ಲಿ ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದಿದ್ದರು.

ಹೀಗಾಗಿ ಇಂದಿನ ಪಂದ್ಯದಲ್ಲಿ ರಾಹುಲ್ ಮೇಲೆ ಸೇಡು ತೀರಿಸಿಕೊಳ್ಳುವ ಇರಾದೆಯಲ್ಲಿದ್ದರು. ಅದರಂತೆ ಆರ್​​ಸಿಬಿ ಪರ ಎರಡನೇ ಓವರ್ ಬೌಲಿಂಗ್ ಮಾಡಿದ ಹೇಜಲ್‌ವುಡ್, ಎಸೆದ ಮೊದಲ ಎಸೆತದಲ್ಲೇ ರಾಹುಲ್ ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಹೇಜಲ್‌ವುಡ್ ಎಸೆದ ಶಾರ್ಟ್​ ಬಾಲ್ ಅನ್ನು ಸಿಕ್ಸರ್​ಗಟ್ಟುವ ಯತ್ನದಲ್ಲಿ ರಾಹುಲ್ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿದರು. ಕಳೆದ ಮುಖಾಮುಖಿಯಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ರಾಹುಲ್​, ಈ ಪಂದ್ಯದಲ್ಲಿ ಕೇವಲ 1 ರನ್ ಬಾರಿಸಲಷ್ಟೇ ಶಕ್ತರಾದರು.

ಇನ್ನು ಇದೇ ಓವರ್​ನಲ್ಲಿಯೇ ಹೇಜಲ್​ವುಡ್ ಮತ್ತೊಂದು ವಿಕೆಟ್ ಉರುಳಿಸಿದರು. ರಾಹುಲ್ ವಿಕೆಟ್ ಪತನದ ಬಳಿಕ ಬಂದ ಸಮೀರ್ ರಿಜ್ವಿ ಕೂಡ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್​ಗೆ ಕ್ಯಾಚಿತ್ತು ಖಾತೆ ತೆರೆಯದೆ ನಿರ್ಗಮಿಸಿದರು.

Source link

ಪಂಚಮಸಾಲಿ ಪೀಠದ ‘ಲೆಕ್ಕಾ’ಚಾರ: 18 ವರ್ಷದ ಲೆಕ್ಕ ಕೊಟ್ಟ ಟ್ರಸ್ಟ್‌; ಕಳ್ಳಲೆಕ್ಕ ಎಂದ ಸ್ವಾಮೀಜಿ ಟೀಂ – Kannada News | Harihara Panchamasali Peetha Crisis: Trust that submits 18 year old financial report; Vachanananda Sri Rejects Report

ಟ್ರಸ್ಟಿ ಬಿ.ಸಿ ಉಮಾಪತಿ, ವಚನಾನಂದ ಶ್ರೀImage Credit source: tv9 kannada

ದಾವಣಗೆರೆ, ಏಪ್ರಿಲ್​ 27: ಮಠದಲ್ಲಿ ಅನುದಾನ ಮತ್ತು ಭಕ್ತರ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹರಿಹರದ ಪಂಚಮಸಾಲಿ ಮಠದ (Harihara Panchamasali Peetha) ಆಡಳಿತ ಮಂಡಳಿ ಹಾಗೂ ವಚನಾನಂದ ಶ್ರೀ ಮಧ್ಯೆ ಬಹಿರಂಗ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಬಗ್ಗೆ ಲೆಕ್ಕ ಕೊಡುವಂತೆ ವಚನಾನಂದ ಶ್ರೀ ಪಟ್ಟು ಹಿಡಿದಿದ್ದರು. ಈ ಬೆನ್ನಲ್ಲೇ ಇಂದು ಟ್ರಸ್ಟ್‌ ಸದಸ್ಯರು 2008 ರಿಂದ 2026ವರೆಗಿನ ಲೆಕ್ಕದ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಈ ಲೆಕ್ಕವನ್ನ ನಾವು ಒಪ್ಪುವುದಿಲ್ಲ, ಇದು ಕಳ್ಳ ಲೆಕ್ಕ ಎಂದು ಸ್ವಾಮೀಜಿ ಹಾಗೂ ತಂಡ ಕಿಡಿಕಾರಿದ್ದಾರೆ. ಇನ್ನು ಇದೇ ವೇಳೆ ಮಠದ ಆವರಣ ಅಕ್ಷರಶಃ ರಣಾಂಗಣವಾಗಿತ್ತು. ವಚನಪಠಣ ಆಗಬೇಕಿದ್ದ ಜಾಗದಲ್ಲಿ ಬೈಗುಳ ಕೇಳಿಬಂದವು.

ಪಂಚಮಸಾಲಿ ಸಮುದಾಯ ನಾಡಿನ ದೊಡ್ಡ ಸಮುದಾಯಗಳಲ್ಲೊಂದು. ಇದೇ ಸಮುದಾಯದ ಬೆಳವಣಿಗೆಗೆ ಅಂತಾನೇ ಹರಿಹರದಲ್ಲಿ ಮಠ ಸ್ಥಾಪಿಸಲಾಗಿದೆ. ಆದರೆ ಇದೇ ಮಠದಲ್ಲಿ ಇಂದು ನಡೆದಿದ್ದು ಮಾತ್ರ ಬಿಗ್‌ ಹೈಡ್ರಾಮಾ.

ಇದನ್ನೂ ಓದಿ: ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ?

ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿಯಾಗಿದ್ದ ವಚನಾನಂದ ಶ್ರೀಗಳನ್ನ ಹತ್ತಾರು ಕಾರಣ ನೀಡಿ ಮಠದಿಂದ ಉಚ್ಚಾಟನೆ ಮಾಡಲಾಗಿತ್ತು. ಪಂಚಮಸಾಲಿ ಟ್ರಸ್ಟ್‌ ತೆಗೆದುಕೊಂಡ ಇದೇ ನಿರ್ಧಾರ ಶ್ರೀಗಳ ಪರ ಇರುವ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಉಚ್ಚಾಟನೆ ಮಾಡಿದ್ರೂ ಮಠ ತೊರೆಯದ ಶ್ರೀಗಳು, ಲೆಕ್ಕ ಕೊಡಿ ಅಂತಾ ಅಭಿಯಾನ ಆರಂಭಿಸಿದ್ದರು. ಇದೇ ಅಭಿಯಾನಕ್ಕೆ ಉತ್ತರ ಎಂಬಂತೆ ಮಠದ ಆವರಣದಲ್ಲೇ ಬಹಿರಂಗ ಸಭೆ ನಡೆಸಿದ ಟ್ರಸ್ಟ್‌ ಸದಸ್ಯರು 2008 ರಿಂದ 2026 ರವರೆಗಿನ ಲೆಕ್ಕ ಕೊಟ್ಟಿದ್ದಾರೆ.

18 ವರ್ಷಗಳಲ್ಲಿ 27,61,57,017 ರೂ. ದೇಣಿಗೆ ಸಂಗ್ರಹ

ಕಳೆದ 18 ವರ್ಷಗಳಲ್ಲಿ ಮಠದ ಭಕ್ತರಿಂದ 27 ಕೋಟಿ 61 ಲಕ್ಷದ57 ಸಾವಿರದ17 ರೂಪಾಯಿ ದೇಣಿಗೆ ಸಂಗ್ರಹ ಆಗಿದೆ. ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಅಂತಾ 12 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇನ್ನು ಮರಳು ಮಾರಾಟದಿಂದ 10 ಲಕ್ಷ ರೂಪಾಯಿ ಸಂಗ್ರಹವಾದರೆ, ತುಲಾಭಾರದಿಂದ4.5 ಕೋಟಿ ರೂ ಮೌಲ್ಯದ 174 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 174 ಕೆಜಿ ಬೆಳ್ಳಿಯನ್ನು ಬ್ಯಾಂಕ್ ಲಾಕರ್‌ ಸುರಕ್ಷಿತವಾಗಿ ಇಡಲಾಗಿದೆ ಅಂತಾ ಟ್ರಸ್ಟ್‌ನವರು ಲೆಕ್ಕ ಒಪ್ಪಿಸಿದ್ದಾರೆ.

ಈ ಲೆಕ್ಕವನ್ನ ನಾವು ಒಪುವುದಿಲ್ಲ: ವಚನಾನಂದ ಶ್ರೀಗಳು

ಇನ್ನು ಲೆಕ್ಕ ಕೊಡುತ್ತಿರುವ ವೇಳೆ ಅತ್ತ ಮಠಕ್ಕೆ ಮಾಜಿ ಶಾಸಕರಾದ ಹೆಚ್‌ಎಸ್ ಶಿವಶಂಕರ್‌, ಅರುಣ್ ಪೂಜಾರ್ ಎಂಟ್ರಿ ಆಗಿದ್ರು. ಇಬ್ಬರನ್ನ ಸ್ವಾಗತಿಸಿದ ಸ್ವಾಮೀಜಿ ಪರ ಭಕ್ತರು, ಇದು ಕಳ್ಳ ಲೆಕ್ಕ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದು, ವೇದಿಕೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ತಳ್ಳಾಟ ನೂಕಾಟ ಉಂಟಾಯಿತು. ಈ ಲೆಕ್ಕವನ್ನ ನಾವು ಒಪುವುದಿಲ್ಲ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.

ಗೌರವದಿಂದ ಮಠ ಬಿಟ್ಟು ಹೋಗಿ ಎಂದ ಟ್ರಸ್ಟ್‌: ನೀವೆ ಮಠ ಖಾಲಿ ಮಾಡಿ ಎಂದ ವಚನಾನಂದ ಶ್ರೀ

ಲೆಕ್ಕದ ಗಲಾಟೆ ಒಂದುಕಡೆಯಾದರೆ, ಟ್ರಸ್ಟ್‌ನವರು ಇಂದು ಮನಗೂಳಿ ಶ್ರೀಗಳನ್ನ ಕರೆಸಿ ಲೆಕ್ಕಪತ್ರದ ಕಾರ್ಯಕ್ರಮ ನಡೆಸಿದರು. ಹೀಗಾಗಿ ವಚನಾನಂದ ಶ್ರೀಗಳ ಬದಲಾಗಿ ಬೇರೆಯವರನ್ನ ಪಟ್ಟ ಕಟ್ಟುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಈ ಬಗ್ಗೆಯೂ ಮಾತನಾಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಸಿ ಉಮಾಪತಿ, ಶ್ರೀಗಳಿಗೆ ಗೌರವದಿಂದ ಹೋಗು ಅಂತಾ ಹೇಳಿದ್ದೇವೆ. ಇಲ್ಲದಿದ್ದರೆ ಮುಂದೆ ನೋಡಿಕೊಳ್ತೇವೆ ಎಂದಿದ್ದಾರೆ. ಆದರೆ ವಚನಾನಂದ ಶ್ರೀಗಳು ಮಾತ್ರ ನೀವೆ ಮಠ ಖಾಲಿ ಮಾಡಿ ಅಂತಾ ತಿರುಗೇಟು ಕೊಟ್ಟಿದ್ದಾರೆ.

ಮನಗೂಳಿ ಶ್ರೀಗಳ ಎಂಟ್ರಿ ವೇಳೆ ಬಿಗ್ ಹೈಡ್ರಾಮಾ!

ಸಭೆ ಬಳಿಕ ಮಹಾಂತ ಶ್ರೀಗಳ ಗದ್ದುಗೆ ದರ್ಶನಕ್ಕೆ ಮನಗೂಳಿ ಶ್ರೀಗಳು ಬಂದಿದ್ದರು. ಆಗ ಶ್ರೀಗಳ ಮೇಲೆಯೇ ಭಕ್ತರು ಬಾಟಲ್‌ ಎಸಿದಿದ್ದಾರೆ. ಆಗ ಮತ್ತೊಂದು ಸುತ್ತಿನ ಗಲಾಟೆ ಆಯ್ತು. ಹೀಗೆ ಪಂಚಮಸಾಲಿ ಒಳಜಗಳ ಈಗ ಬೀದಿಗೆ ಬಂದಿದ್ದು, ಇದು ಮತ್ತೆಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡ್ಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಆದಾಯ ಹೆಚ್ಚಿಸಿಕೊಳ್ಳಲು ಬಯಸಿದರೆ ಮೊದಲು ಈ ಅಭ್ಯಾಸಗಳನ್ನು ತ್ಯಜಿಸಿ – Kannada News | Chanakya Niti: Chanakya says that income cannot be increased if you have these habits

ಆದಾಯವನ್ನು (income) ಹೆಚ್ಚಿಸಿಕೊಳ್ಳಬೇಕು, ಶ್ರೀಮಂತಿಕೆಯನ್ನು ಗಳಿಸಬೇಕು ಎಂದು ಪ್ರತಿಯೊಬ್ಬರು ಸಹ ಬಯಸುತ್ತಾರೆ. ಆದರೆ ಆದಾಯವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದೇ ಅನೇಕರಿಗೆ ಗೊತ್ತಿಲ್ಲ. ಒಳ್ಳೆಯ ಜೀವನವನ್ನು ನಡೆಸಲು ಆದಾಯವನ್ನು ಹೆಚ್ಚಿಸಲು ನಮ್ಮ ಆಲೋಚನೆಗಳನ್ನು ಮತ್ತು ಅಭ್ಯಾಸಗಳನ್ನು ಬದಲಾಯಿಸಬೇಕು ಎಂದು ಆಚಾರ್ಯ ಚಾಣಕ್ಯರು. ಕೆಲವು ಕೆಟ್ಟ ಅಭ್ಯಾಸಗಳನ್ನು ಸುಧಾರಿಸದಿದ್ದರೆ, ನೀವು ಲಕ್ಷಾಂತರ ರೂಪಾಯಿಗಳನ್ನು ಗಳಿಸಿದರೂ, ಅದು ಎಂದಿಗೂ ಉಳಿಯುವುದಿಲ್ಲ. ಆದ್ದರಿಂದ, ನಿಮ್ಮ ಆದಾಯವನ್ನು ಹೆಚ್ಚಿಸಲು ಬಯಸಿದರೆ ಮೊದಲು ಈ ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ತ್ಯಜಿಸಲೇಬೇಕು.

ಈ ಅಭ್ಯಾಸಗಳನ್ನು ತ್ಯಜಿಸಿದರೆ ಮಾತ್ರ ನಿಮ್ಮ ಆದಾಯ ಹೆಚ್ಚಾಗುತ್ತದೆ:

ಸಮಯ ವ್ಯರ್ಥ ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಸಮಯವು ನಮ್ಮ ದೊಡ್ಡ ಸಂಪತ್ತು. ಆದ್ದರಿಂದ, ಸಮಯವನ್ನು ಗೌರವಿಸದ ಯಾರಾದರೂ ಜೀವನದಲ್ಲಿ ಎಂದಿಗೂ ದೊಡ್ಡ ಯಶಸ್ಸನ್ನು ಸಾಧಿಸಲು ಅಥವಾ ಹಣ ಗಳಿಸಲು ಸಾಧ್ಯವಿಲ್ಲ. ನೀವು ಯಾವುದೇ ಕೆಲಸ ಮಾಡದ ಸೋಮಾರಿತನದಿಂದ ಸಮಯವನ್ನು ವ್ಯರ್ಥ ಮಾಡುತ್ತಿದ್ದರೆ, ಈ ಅಭ್ಯಾಸವನ್ನು ಸರಿಪಡಿಸುವುದು ಬಹಳ ಮುಖ್ಯ. ನಿಮ್ಮ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸುವುದು ನಿಮ್ಮ ಆದಾಯವನ್ನು ಹೆಚ್ಚಿಸುವ ಮೊದಲ ಹೆಜ್ಜೆ. ನೀವು ಯಾವುದೇ ಕೆಲಸವನ್ನು ಸರಿಯಾದ ಸಮಯದಲ್ಲಿ ಮಾಡಲು ಕಲಿತಾಗ, ನಿಮ್ಮ ಉತ್ಪಾದಕತೆ ಸ್ವಯಂಚಾಲಿತವಾಗಿ ಹೆಚ್ಚಾಗುತ್ತದೆ. ಆದಾಯವೂ ಹೆಚ್ಚಾಗುತ್ತದೆ.

ವ್ಯರ್ಥ ಖರ್ಚು ಮಾಡುವ ಅಭ್ಯಾಸವನ್ನು ಬಿಟ್ಟುಬಿಡಿ: ಆಚಾರ್ಯ ಚಾಣಕ್ಯರ ಪ್ರಕಾರ, ಹಣವನ್ನು ಉಳಿಸುವುದು  ಗಳಿಸುವಷ್ಟೇ ಮುಖ್ಯ. ಕೈಯಲ್ಲಿ ಹಣ ಇದ್ದಾದ ಅದನ್ನು ನಿಷ್ಪ್ರಯೋಜಕ ವಸ್ತುಗಳನ್ನು ಖರೀದಿಸಲು ಖರ್ಚು ಮಾಡಿದರೆ ಹಣವೆಲ್ಲಾ ವ್ಯರ್ಥವಾಗುತ್ತದೆ. ಅದರ ಬದಲು ಗಳಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದನ್ನು ಕಲಿಯಿರಿ. ಇದರಿಂದ ಆದಾಯ ಕೂಡ ಹೆಚ್ಚಾಗುತ್ತದೆ. ಮತ್ತು ನೀವು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ.

ಸೋಮಾರಿತನವನ್ನು ಬಿಟ್ಟುಬಿಡಿ: ನಿಮ್ಮ ಯಶಸ್ಸಿನ ದೊಡ್ಡ ಶತ್ರು ನಿಮ್ಮ ಸ್ವಂತ ಸೋಮಾರಿತನ. ಚಾಣಕ್ಯ ನೀತಿಯ ಪ್ರಕಾರ, ಸೋಮಾರಿತನವನ್ನು ಬಿಟ್ಟು ಪರಿಶ್ರಮದಿಂದ ಕೆಲಸ ಮಾಡುವವರು ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ. ನೀವು ಪ್ರತಿಯೊಂದು ಕೆಲಸವನ್ನು ಮುಂದೂಡುತ್ತಲೇ ಇರುವ ಅಥವಾ ಕಠಿಣ ಪರಿಶ್ರಮದಿಂದ ದೂರ ಸರಿಯುವ ವ್ಯಕ್ತಿಯಾಗಿದ್ದರೆ, ನಿಮ್ಮ ಆದಾಯ ಎಂದಿಗೂ ಹೆಚ್ಚಾಗುವುದಿಲ್ಲ. ನೀವು ಮೊದಲು ನಿಮ್ಮ ದೈನಂದಿನ ದಿನಚರಿಯನ್ನು ಸುಧಾರಿಸಬೇಕು ಮತ್ತು ಕಠಿಣ ಪರಿಶ್ರಮವನ್ನು ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ಆದಾಯವನ್ನು ಹೆಚ್ಚಿಸಲು ಸಾಧ್ಯ.

ಇದನ್ನೂ ಓದಿ: ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ!

ಕೆಟ್ಟ ಸಹವಾಸದಿಂದ ದೂರವಿರಿ: ನೀವು ಯಾವ ರೀತಿಯ ಜನರೊಂದಿಗೆ ಬೆರೆಯುತ್ತೀರಿ ಎಂಬುದು ನಿಮ್ಮ ಆಲೋಚನೆ ಮತ್ತು ನಿಮ್ಮ ಗಳಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಕಠಿಣ ಪರಿಶ್ರಮದಿಂದ ದೂರ ಸರಿಯುವ ಅಥವಾ ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರೊಂದಿಗೆ ಸಹವಾಸ ಮಾಡಿದರೆ, ನೀವು ಕೂಡ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಆದಾಯವನ್ನು ಹೆಚ್ಚಿಸಲು ಬಯಸಿದರೆ ಸಕಾರಾತ್ಮಕ ,ಮನೋಭಾವವನ್ನು ಹೊಂದಿರುವ ಮತ್ತು ಕಷ್ಟಪಟ್ಟು ಕೆಲಸ ಮಾಡಲು ನಿಮ್ಮನ್ನು ಪ್ರೇರೇಪಿಸುವ ಜನರೊಂದಿಗೆ ಇರುವುದು ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುತ್ತಿರುವಾಗಲೇ ಬಂತು ಪ್ರಮೋಷನ್ ಚೀಟಿ: ಮಹತ್ವದ ಹೇಳಿಕೆ ನೀಡಿದ ಸಿಎಂ – Kannada News | Karnataka CM to KAS: Prioritize Public Service, Curb Agents, Ensure Timely Promotions

ಬೆಂಗಳೂರು, ಏ.27: “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ನಿಜವಾದ ಪ್ರಭುಗಳು. ನಾವು ಮತ್ತು ನೀವು ಅವರ ಸೇವೆಗಾಗಿ ಇದ್ದೇವೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಅಧಿಕಾರಿಗಳಿಗೆ ಸಂವಿಧಾನದ ಆಶಯವನ್ನು ನೆನಪಿಸಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವಂತೆ ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ. ಅವರು ಬೆಂಗಳೂರಿನಲ್ಲಿ KAS ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಇದೇ ವೇಳೆ ಅವರು ಅಧಿಕಾರಿಗಳ ಪ್ರಮೋಷನ್ ಬಗ್ಗೆಯೂ ಮಾತನಾಡಿದರು. ನಿಮ್ಮ ಪದೋನ್ನತಿ ಬಗ್ಗೆ ವೇದಿಕೆಯಲ್ಲಿ ಅಧಿಕಾರಿಯೊಬ್ಬರಿ ಚೀಟಿ ನೀಡಿದ್ದಾರೆ. “ನನಗೆ ಪ್ರಮೋಷನ್ ಮಾಡಿ ಎಂಬ ಚೀಟಿ ಬಂದಿದೆ. ಈಗಾಗಲೇ ಎರಡು ಸಭೆಗಳನ್ನು ನಡೆಸಿ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಅರ್ಹ ಅಧಿಕಾರಿಗಳಿಗೆ ಪ್ರಮೋಷನ್ ನೀಡುವ ಪ್ರಕ್ರಿಯೆ ನಡೆಯಲಿದೆ,” ಎಂದು ಭರವಸೆ ನೀಡಿದರು.

ಮಾತು ಮುಂದುವರಿಸಿದ ಅವರು, “ನಾವು ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ರಿನಿವಲ್ ಆಗಬೇಕು. ಆದರೆ ನೀವು 30-35 ವರ್ಷ ಸೇವೆ ಸಲ್ಲಿಸುತ್ತೀರಿ. ನಿವೃತ್ತಿಯಾಗುವವರೆಗೆ ಜನರ ಸೇವೆ ಮಾಡುವ ದೊಡ್ಡ ಅವಕಾಶ ನಿಮಗಿದೆ,” ಎಂದರು.”ನಮಗೆ ಸಂಬಳ ಕೊಡುವುದು ಜನರೇ, ಅವರೇ ಪ್ರಭುಗಳು. ನೆಪ ಹೇಳದೆ ಜನರ ಕೆಲಸ ಮಾಡಿಕೊಡಿ. ಅದರಿಂದ ನಿಮ್ಮ ಜೀವನ ಸಾರ್ಥಕವಾಗುತ್ತದೆ,” ಎಂದು ಕಿವಿಮಾತು ಹೇಳಿದರು.

ಸಮಾಜದ ನಾಡಿಮಿಡಿತ ಅರ್ಥ ಮಾಡಿಕೊಳ್ಳದಿದ್ದರೆ ವ್ಯಕ್ತಿತ್ವ ಬೆಳೆಯಲು ಸಾಧ್ಯವಿಲ್ಲ. “ಓದಿಗಿಂತ ಕಾಮನ್ ಸೆನ್ಸ್ ಬಹಳ ಮುಖ್ಯ. ಸಮಾಜದ ಬಗ್ಗೆ ಅರಿವಿದ್ದರೆ ಮಾತ್ರ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯ,” ಎಂದು ಸಿಎಂ ಅಭಿಪ್ರಾಯಪಟ್ಟರು. ಇನ್ನು ಅಧಿಕಾರಿಗಳ ಜೊತೆ ಮಾತನಾಡಲು ಹಳ್ಳಿಯ ಜನರು ಇಂದಿಗೂ ಹೆದರುತ್ತಾರೆ. ಈ ಭಯದಿಂದಾಗಿ ಅವರು ಮಧ್ಯವರ್ತಿಗಳನ್ನು (Agents) ಕರೆದುಕೊಂಡು ಬರುತ್ತಾರೆ. ಇದನ್ನು ತಪ್ಪಿಸಬೇಕು.

ಇದನ್ನೂ ಓದಿ: ಹೆಚ್ಚು ಮಾತನಾಡಬೇಡಿ, ಸುಮ್ಮನೆ ನಿಮ್ಮ ಕೆಲಸ ಮಾಡಿ: ಪಂಚಮಸಾಲಿ ಪೀಠದ ಲೆಕ್ಕ ಕೊಡುವ ವೇಳೆ ಉಮಾಪತಿಗೆ ಸೋಮಣ್ಣ ಕರೆ

“ಗ್ಯಾರಂಟಿ ಯೋಜನೆಗಳ ಹಣ ನೇರವಾಗಿ ಜನರ ಅಕೌಂಟ್‌ಗೆ ಹೋಗುತ್ತಿರುವುದು ಮಧ್ಯವರ್ತಿಗಳ ಹಾವಳಿ ತಪ್ಪಿಸಲಿಕ್ಕಾಗಿಯೇ. ನಿಮ್ಮ ಕಚೇರಿಗಳಲ್ಲಿ, ಅದರಲ್ಲೂ ಮುಖ್ಯವಾಗಿ ಆರ್‌.ಟಿ.ಒ (RTO) ಕಚೇರಿಗಳಲ್ಲಿ ಏಜೆಂಟ್‌ಗಳಿಗೆ ಅವಕಾಶ ನೀಡಬೇಡಿ,” ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಐಎಎಸ್ ಮತ್ತು ಐಪಿಎಸ್ ವ್ಯವಸ್ಥೆಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ಹಂಚಿಕೊಂಡ ಸಿಎಂ, ಸಮಾಜವಾದಿ ಚಿಂತಕರ ಮಾತುಗಳನ್ನು ಉಲ್ಲೇಖಿಸಿ ಆಡಳಿತದಲ್ಲಿ 33% ಸಿಇಒಗಳನ್ನು ಮಾಡುವ ಪ್ರಸ್ತಾಪದ ಬಗ್ಗೆ ಮಾತನಾಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಕೆಡಿ’ ಸಿನಿಮಾದಲ್ಲಿ ಕಾಲ ಭೈರವನಾಗಲು ಸುದೀಪ್ ಒಪ್ಪಿದ್ದು ಯಾಕೆ? ಸಿಕ್ತು ಉತ್ತರ – Kannada News | This is why Kichcha Sudeep agreed to do cameo in Dhruva Sarja starrer KD movie by Jogi Prem

ನಟ ಕಿಚ್ಚ ಸುದೀಪ್ (Kichcha Sudeep) ಅವರು ‘ಕೆಡಿ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಕಾಲ ಭೈರವ ಎಂಬುದು ಈ ಪಾತ್ರದ ಹೆಸರು. ಸುದೀಪ್ ನಟಿಸಿದ್ದಾರೆ ಎಂಬುದು ಗೊತ್ತಾದ ಕೂಡಲೇ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ. ಧ್ರುವ ಸರ್ಜಾ (Dhruva Sarja) ಅಭಿನಯದ ಈ ಸಿನಿಮಾದಲ್ಲಿ ಅನೇಕ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಅವರಂತಹ ಪ್ಯಾನ್ ಇಂಡಿಯಾ ಸ್ಟಾರ್​ಗಳು ಕೂಡ ‘ಕೆಡಿ’ ಸಿನಿಮಾದ (KD Movie) ಪಾತ್ರವರ್ಗದಲ್ಲಿ ಇದ್ದಾರೆ. ಅಷ್ಟಕ್ಕೂ ಸುದೀಪ್ ಅವರು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ‘ಕೆಡಿ’ ಸಿನಿಮಾ ಮೂಡಿಬಂದಿದೆ. ಸುದೀಪ್ ಅವರು ಪ್ರೇಮ್ ಬಗ್ಗೆ ಮಾತನಾಡಿದರು. ‘ಮೊದಲು ನಾನು ಪ್ರೇಮ್ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಅವರು ಸಿನಿಮಾ ಬಗ್ಗೆ ಅಪಾರ ಉತ್ಸಾಹ, ಪ್ರೀತಿ ಇರುವಂತಹ ನಿರ್ದೇಶಕ. ಆಗುಹೋಗುಗಳ ಮಧ್ಯೆ ಒಂದು ಒಳ್ಳೆಯ ಸಿನಿಮಾವನ್ನು ನೀಡಲು ಅವರು ಪ್ರಯತ್ನಿಸುತ್ತಾರೆ’ ಎಂದು ಸುದೀಪ್ ಮಾತು ಆರಂಭಿಸಿದರು.

‘ಪ್ರೇಮ್ ಅವರ ಪ್ರಯತ್ನವನ್ನು ನಾವು ಈಗ ನೋಡುತ್ತಿರುವುದಲ್ಲ. ಅವರ ಮೊದಲೇ ಸಿನಿಮಾದಿಂದಲೇ ನೋಡಿಕೊಂಡು ಬಂದಿದ್ದೇವೆ. ಇಂದಿನವರೆಗೂ ಅವರು ನನಗೆ ಒಬ್ಬ ವ್ಯಕ್ತಿಯಾಗಿ ಇಷ್ಟ. ವ್ಯಕ್ತಿ ಇಷ್ಟ ಆದಮೇಲೆ ಅವರಿಗಾಗಿ ನಾವು ಏನು ಬೇಕಾದರೂ ಮಾಡುತ್ತೇನೆ. ಹಾಗಿರುವಾಗ ಕಾಲ ಭೈರವ ಪಾತ್ರ ಒಂದು ಸಣ್ಣ ಸಂಗತಿ ಅಷ್ಟೇ. ಅದು ನಾವು ಅವರಿಗೆ ಮಾಡಿದ ಉಪಕಾರ ಅಲ್ಲ. ಅವರು ಸಂಪಾದಿಸಿದ ಪ್ರೀತಿ ಅದು’ ಎಂದು ಸುದೀಪ್ ಹೇಳಿದರು.

‘ಅವರು ನನಗೆ ಧನ್ಯವಾದ ಹೇಳುತ್ತಿದ್ದಾರೆ. ಆದರೆ ನಾನು ಏನೂ ಉಪಕಾರ ಮಾಡಿಲ್ಲ. ಕನ್ನಡ ಚಿತ್ರರಂಗದಲ್ಲಿ ಒಂದು ಅದ್ದೂರಿಯಾದ ಸಿನಿಮಾ ಮೂಡಿಬರುತ್ತಿದೆ. ಅದರಲ್ಲಿ ನಾನು ಕೂಡ ಭಾಗವಾಗಲು ಅವಕಾಶ ಸಿಕ್ಕಿದೆ. ನನ್ನ ಸಹೋದರ ಧ್ರುವ ಸರ್ಜಾ ನಟನೆಯ ಇಷ್ಟು ದೊಡ್ಡ ಸಿನಿಮಾ ಸಿದ್ಧವಾಗುವಾಗ ಅದರಲ್ಲಿ ನಾನು ಕೂಡ ಇರಬೇಕು ಎನಿಸಿತು’ ಎಂದಿದ್ದಾರೆ ಕಿಚ್ಚ ಸುದೀಪ್.

ಇದನ್ನೂ ಓದಿ: ಅಣ್ಣಾವ್ರ ಹುಟ್ಟೂರಲ್ಲಿ ಕಿಚ್ಚ ಸುದೀಪ್​ಗೆ ಗುಡಿ ಕಟ್ಟಿ ನಿತ್ಯ ಆರಾಧನೆ ಮಾಡ್ತಾರೆ ಈ ಅಭಿಮಾನಿ!

‘ನೀವೆಲ್ಲರೂ ಸಿನಿಮಾ ನೋಡಬೇಕು. ಚಿರು ಮತ್ತು ಧ್ರುವ ಅವರನ್ನು ಬಹಳ ವರ್ಷದಿಂದ ನಾನು ನೋಡಿಕೊಂಡು ಬಂದಿದ್ದೇನೆ. ಧ್ರುವ ಜೊತೆ ತೆರೆ ಹಂಚಿಕೊಳ್ಳಲು ನನಗೆ ಅವಕಾಶ ಸಿಕಿದ್ದು ಗ್ರೇಟ್. ಚಿರು ಜೊತೆಯೂ ನಾನು ಕೆಲಸ ಮಾಡಿದ್ದೆ. ಪ್ರೇಮ್ ಇದ್ದರೆ ಆ ಸೆಟ್​​ನಲ್ಲಿ ಅದ್ಭುತವಾದ ಎನರ್ಜಿ ಇರುತ್ತದೆ. ನಾನು ವಿಲನ್ ಸಿನಿಮಾ ಮಾಡಿದಾಗ ಅವರ ಜೊತೆ ಕೆಲಸ ಎಂಜಾಯ್ ಮಾಡಿದ್ದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version